Tag: Hamilton

  • ಗುಂಡು ತಗುಲಿ ಕೆನಡಾದಲ್ಲಿ ಭಾರತೀಯ ವಿದ್ಯಾರ್ಥಿನಿ ಸಾವು

    ಗುಂಡು ತಗುಲಿ ಕೆನಡಾದಲ್ಲಿ ಭಾರತೀಯ ವಿದ್ಯಾರ್ಥಿನಿ ಸಾವು

    ಹ್ಯಾಮಿಲ್ಟನ್: ಕೆನಡಾದ (Canada) ಒಂಟಾರಿಯೊ ಪ್ರಾಂತ್ಯದ ಹ್ಯಾಮಿಲ್ಟನ್‌ನಲ್ಲಿ (Hamilton) ನಡೆದ ಗುಂಡಿನ ದಾಳಿಯಲ್ಲಿ ಭಾರತೀಯ ವಿದ್ಯಾರ್ಥಿನಿ (Indian Student) ದಾರುಣವಾಗಿ ಸಾವನ್ನಪ್ಪಿದ್ದಾಳೆ. ಈ ಘಟನೆಯಲ್ಲಿ ವಿದ್ಯಾರ್ಥಿನಿ ಆಕಸ್ಮಿಕವಾಗಿ ಗುಂಡಿಗೆ ಗುರಿಯಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

    ಹ್ಯಾಮಿಲ್ಟನ್‌ನ ಕಿಂಗ್ ಸ್ಟ್ರೀಟ್‌ನಲ್ಲಿ ಗುರುವಾರ ರಾತ್ರಿ ಸಂಭವಿಸಿದ ಈ ಗುಂಡಿನ ದಾಳಿಯಲ್ಲಿ ಮೊಹಾಕ್ ಕಾಲೇಜಿನಲ್ಲಿ ಓದಿತ್ತಿದ್ದ 22 ವರ್ಷದ ಭಾರತೀಯ ವಿದ್ಯಾರ್ಥಿನಿ ಹರ್ಸಿಮ್ರತ್ ರಾಂಧವಾಗೆ (Harsimrat Randhawa) ಗುಂಡು ತಗುಲಿದೆ. ಗಾಯಗೊಂಡ ವಿದ್ಯಾರ್ಥಿಯನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ. ಇದನ್ನೂ ಓದಿ: ಜನಿವಾರ ಕತ್ತರಿಸಿದ್ದು ಬಹಳ ದೊಡ್ಡ ತಪ್ಪು: ಪರಮೇಶ್ವರ್

    ಪ್ರಾಥಮಿಕ ತನಿಖೆಯಲ್ಲಿ ಕಪ್ಪು ಬಣ್ಣದ ಕಾರಿನ ಪ್ರಯಾಣಿಕನೊಬ್ಬ ಬಿಳಿ ಸೆಡಾನ್ ಕಾರಿನಲ್ಲಿದ್ದವರ ಮೇಲೆ ಗುಂಡು ಹಾರಿಸಿದ್ದಾನೆ ಎಂದು ತಿಳಿದುಬಂದಿದೆ. ಬಳಿಕ ಎರಡೂ ವಾಹನಗಳು ಸ್ಥಳದಿಂದ ಹೊರಟುಹೋಯಿತು ಎಂದು ತಿಳಿದು ಬಂದಿದೆ. ಪೊಲೀಸರ ಪ್ರಕಾರ, ಈ ಗುಂಡಿನ ದಾಳಿಯು ಉದ್ದೇಶಿತ ಗುರಿಯಾಗಿರಲಿಲ್ಲ. ಘಟನೆಯ ಬಗ್ಗೆ ತನಿಖೆ ಆರಂಭವಾಗಿದ್ದು, ಶಂಕಿತರನ್ನು ಗುರುತಿಸಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲು ತಂಡವೊಂದು ಕಾರ್ಯನಿರ್ವಹಿಸುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಮಹಾ ಕುಂಭಮೇಳಕ್ಕೆ ಟೆಂಟ್‌ ಸಾಮಗ್ರಿ ಪೂರೈಸುತ್ತಿದ್ದ ಕಂಪನಿಯ ಗೊಡೋನ್​ನಲ್ಲಿ ಅಗ್ನಿ ದುರಂತ

    ಕೆನಡಾದ ಭಾರತೀಯ ದೂತಾವಾಸವು ಈ ಘಟನೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಮೃತ ವಿದ್ಯಾರ್ಥಿನಿಯ ಕುಟುಂಬಕ್ಕೆ ಸಂಪರ್ಕ ಸಾಧಿಸಿ ಸೂಕ್ತ ಸಹಾಯವನ್ನು ಒದಗಿಸುವುದಾಗಿ ತಿಳಿಸಿದೆ. ಈ ಘಟನೆಯಿಂದಾಗಿ ಕೆನಡಾದ ಭಾರತೀಯ ವಿದ್ಯಾರ್ಥಿ ಸಮುದಾಯದಲ್ಲಿ ಆತಂಕ ಮೂಡಿದ್ದು, ಸ್ಥಳೀಯ ಆಡಳಿತ ಭದ್ರತೆಯನ್ನು ಇನ್ನಷ್ಟು ಬಿಗಿಗೊಳಿಸುವ ಭರವಸೆ ನೀಡಿದೆ. ಇದನ್ನೂ ಓದಿ: ಬಿರುಗಾಳಿ ಸಹಿತ ಮಳೆ – ರೇಷ್ಮೆ ಗೂಡಿಗೆ ಸಿಡಿಲು ಬಡಿದು ರೈತ ಸಾವು

  • ಹಾಲಿವುಡ್ ಸ್ಟಂಟ್ ಡೈರೆಕ್ಟರ್ ಜೊತೆ ಯಶ್: ಹೊಸ ಲುಕ್ ವೈರಲ್

    ಹಾಲಿವುಡ್ ಸ್ಟಂಟ್ ಡೈರೆಕ್ಟರ್ ಜೊತೆ ಯಶ್: ಹೊಸ ಲುಕ್ ವೈರಲ್

    ರಾಕಿಂಗ್ ಸ್ಟಾರ್ ಯಶ್ ಅಚ್ಚರಿ ಮೇಲೆ ಅಚ್ಚರಿಯ ಸುದ್ದಿಗಳನ್ನು ಕೊಡುತ್ತಿದ್ದಾರೆ. ಅವರ ಹೊಸ ಸಿನಿಮಾ ಶುರುವಾಗುವ ಮುಂಚೆ ಹಾಲಿವುಡ್ ನ ಹಲವಾರು ನಿರ್ದೇಶಕರನ್ನು ಮತ್ತು ತಂತ್ರಜ್ಞರನ್ನು ಭೇಟಿ ಮಾಡುತ್ತಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ಲಂಡನ್ ನಲ್ಲಿ ಹಾಲಿವುಡ್ ನ ಖ್ಯಾತ ಸ್ಟಂಟ್ ಡೈರೆಕ್ಟರ್ ಜೆ.ಜೆ.ಪೆರ್ರಿ (JJ Perry) ಭೇಟಿ ಮಾಡಿದ್ದರು. ಆ ಫೋಟೋ ಮತ್ತು ಯಶ್ ಲುಕ್ ವೈರಲ್ ಆಗಿದೆ.

    `ಕೆಜಿಎಫ್ 2′(Kgf 2 Film) ಚಿತ್ರದ ಸಕ್ಸಸ್ ನಂತರ ಯಶ್ (Yash) ಮುಂದಿನ ಚಿತ್ರಕ್ಕಾಗಿ ಭರ್ಜರಿ ತಯಾರಿ ಮಾಡ್ತಿದ್ದಾರೆ. ಅದಕ್ಕಾಗಿ ಅಮೆರಿಕಾದಲ್ಲಿ ಸದ್ಯ ಯಶ್ ನೆಲೆಸಿದ್ದಾರೆ. ಹಾಲಿವುಡ್ ನಿರ್ದೇಶಕ ಜೆಜೆ ಪೆರ್ರಿ ಜೊತೆ ಕಾಣಿಸಿಕೊಂಡಿದ್ದ ಯಶ್, ನಂತರ ಕಾರ್ ರೇಸರ್ ಲೇವಿಸ್ ಹ್ಯಾಮಿಲ್ಟನ್ (Lewis Hamilton) ಅವರನ್ನ ಭೇಟಿ ಮಾಡಿದ್ದರು. ಇದನ್ನೂ ಓದಿ:ನಮಗೇ ನೀರಿಲ್ಲ, ತಮಿಳುನಾಡಿಗೆ ನೀರು ಬಿಡೋದು ಹೇಗೆ? ರಾಗಿಣಿ ದ್ವಿವೇದಿ ಪ್ರತಿಕ್ರಿಯೆ

    ನ್ಯಾಷನಲ್ ಸ್ಟಾರ್ ಆಗಿ ದಶದಿಕ್ಕುಗಳಲ್ಲೂ ಯಶ್ ಮಿಂಚ್ತಿದ್ದಾರೆ. `ಕೆಜಿಎಫ್ 2′ ಸೂಪರ್ ಸಕ್ಸಸ್ ನಂತರ ಯಶ್ ಮುಂದಿನ ನಡೆ ಮೇಲೆ ಎಲ್ಲರಿಗೂ ಕಣ್ಣಿದೆ. ಯಶ್ ಮುಂದಿನ ಪ್ರಾಜೆಕ್ಟ್ ಅಪ್‌ಡೇಟ್‌ಗಾಗಿ ಫ್ಯಾನ್ಸ್ ಕಾಯ್ತಿದ್ದಾರೆ. ಇತ್ತೀಚೆಗೆ ಹಾಲಿವುಡ್ ನಿರ್ದೇಶಕರನ್ನ ಭೇಟಿ ಮಾಡಿದ್ದ ಯಶ್ ಈಗ ಫಾರ್ಮುಲಾ ಕಾರು ರೇಸರ್ ಲೇವಿಸ್ ಹ್ಯಾಮಿಲ್ಟನ್ ಜೊತೆ ಕಾಣಿಸಿಕೊಂಡಿದ್ದಾರೆ. ಈ ಫೋಟೋ ಇದೀಗ ಸಖತ್ ವೈರಲ್ ಆಗುತ್ತಿದೆ.

    ಹ್ಯಾಮಿಲ್ಟನ್ ಅವರನ್ನ ಯಶ್ ಅಮೆರಿಕದ ಲಾಸ್ ಏಂಜಲ್ಸ್‌ನಲ್ಲಿ ಭೇಟಿ ಮಾಡಿದ್ದಾರೆ. ಜಗತ್ತಿನ ಅತ್ತುತ್ತಮ ಕಾರ್ ರೇಸರ್‌ನಲ್ಲಿ ಹ್ಯಾಮಿಲ್ಟನ್ ಕೂಡ ಒಬ್ಬರು. ಹಾಗಾಗಿ ಇವರಿಬ್ಬರ ಭೇಟಿ ಇದೀಗ ನೆಟ್ಟಿಗರ ಕುತೂಹಲಕ್ಕೆ ಕಾರಣವಾಗಿದೆ. ಯಶ್ ಮುಂದಿನ ಚಿತ್ರದಲ್ಲಿ ಕಾರ್ ರೇಸರ್ ಆಗಿ ಕಾಣಿಸಿಕೊಳ್ಳಲಿದ್ದಾರಾ ಎಂಬುದು ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ.

     

    ಹಾಲಿವುಡ್ ನಿರ್ದೇಶಕ ಜೆಜೆ ಪೆರ್ರಿ ಡೈರೆಕ್ಷನ್‌ನಲ್ಲಿ ಯಶ್ ಕಾರ್ ರೇಸರ್ ಆಗಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಅದಕ್ಕಾಗಿ ಯಶ್ ಕಾರ್ ರೇಸಿಂಗ್ ತರಬೇತಿ ಪಡೆಯುತ್ತಿದ್ದಾರಾ ಎಂಬುದು ಯಶ್ ಅಭಿಮಾನಿಗಳ ಅಚ್ಚರಿ. ಎಲ್ಲದಕ್ಕೂ ಉತ್ತರ ರಾಕಿಭಾಯ್ ಕಡೆಯಿಂದಲೇ ಅಧಿಕೃತ ಅಪ್‌ಡೇಟ್ ಬರುವವರೆಗೂ ಕಾದುನೋಡಬೇಕಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕೊನೆಗೂ ತಂಡವನ್ನು ಗೆಲ್ಲಿಸಿದ ರಾಸ್ ಟೇಲರ್- 24 ವೈಡ್ ಎಸೆದ ಟೀಂ ಇಂಡಿಯಾ

    ಕೊನೆಗೂ ತಂಡವನ್ನು ಗೆಲ್ಲಿಸಿದ ರಾಸ್ ಟೇಲರ್- 24 ವೈಡ್ ಎಸೆದ ಟೀಂ ಇಂಡಿಯಾ

    – ನ್ಯೂಜಿಲೆಂಡಿಗೆ 4 ವಿಕೆಟ್‍ಗಳ ಜಯ
    – 73 ಎಸೆತಗಳಲ್ಲಿ ಟೇಲರ್ ಶತಕ

    ಹ್ಯಾಮಿಲ್ಟನ್: ಕ್ಲೀನ್‍ಸ್ವಿಪ್ ಮೂಲಕ ಟಿ20 ಸರಣಿ ಗೆದ್ದು ಬೀಗಿದ್ದ ಭಾರತವನ್ನು ಮೊದಲ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ಸೋಲಿಸಿದೆ. 4 ವಿಕೆಟ್‍ಗಳ ಜಯ ಪಡೆದ ನ್ಯೂಜಿಲೆಂಡ್ 3 ಏಕದಿನ ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

    ಹ್ಯಾಮಿಲ್ಟನ್‍ನಲ್ಲಿ ಬುಧವಾರ ನಡೆದ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ನೀಡಿದ್ದ 347 ರನ್‍ಗಳ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್ 11 ಎಸೆತಗಳು ಬಾಕಿ ಇರುವಂತೆ 4 ವಿಕೆಟ್‍ಗಳಿಂದ ಗೆದ್ದು ಬೀಗಿದೆ.

    ನ್ಯೂಜಿಲೆಂಡ್ ಪರ ರಾಸ್ ಟೇಲರ್ ಔಟಾಗದೆ 109 ರನ್ (84 ಎಸೆತ, 10 ಬೌಂಡರಿ, 4 ಸಿಕ್ಸರ್), ಹೆನ್ರಿ ನಿಕೋಲ್ಸ್ 78 ರನ್ (82 ಎಸೆತ, 11 ಬೌಂಡರಿ), ಟಾಮ್ ಲಾಥಮ್ 69 ರನ್ (48 ಎಸೆತ, 8 ಬೌಂಡರಿ, 2 ಸಿಕ್ಸರ್) ಹಾಗೂ ಮಿಂಚಿ  ಸ್ಯಾಂಟ್ನರ್ ಔಟಾಗದೆ 12 ರನ್ (9 ಎಸೆತ, 1 ಬೌಂಡರಿ, 1 ಸಿಕ್ಸ್) ಸಿಡಿಸಿದರು.

    ಭಾರತದ ನೀಡಿದ್ದ 347 ರನ್‍ಗಳ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್‍ನ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಮಾರ್ಟಿನ್ ಗಪ್ಟಿಲ್ ಹಾಗೂ ಹೆನ್ರಿ ನಿಕೋಲ್ಸ್ ಉತ್ತಮ ಅಡಿಪಾಯ ಹಾಕಿಕೊಟ್ಟರು. ಮೊದಲ ವಿಕೆಟ್‍ಗೆ ಈ ಜೋಡಿಯು 85 ರನ್ ಜೊತೆಯಾಟದ ಕೊಡುಗೆ ನೀಡಿತು. ಮಾರ್ಟಿನ್ ಗಪ್ಟಿಲ್ 32 ರನ್ (41 ಎಸೆತ, ಬೌಂಡರಿ) ಸಿಡಿಸಿ ಶಾರ್ದೂಲ್ ಠಾಕೂರ್ ಗೆ ವಿಕೆಟ್ ಒಪ್ಪಿಸಿದರು. ಈ ಬೆನ್ನಲ್ಲೇ ಮೈದಾಕ್ಕಿಳಿದ ಟಾಮ್ ಬ್ಲುಂಡೆಲ್ 9 ರನ್ ಗಳಿಸಿ ವಿಕೆಟ್ ಒಪ್ಪಿಸಿ ಪೆವಿಲಿಯನ್‍ಗೆ ತರೆಳಿದರು.

    ವಿಕೆಟ್ ಕಾಯ್ದುಕೊಂಡು ಬ್ಯಾಟಿಂಗ್ ಮುಂದುವರಿಸಿದ ಹೆನ್ರಿ ನಿಕೋಲ್ಸ್ ಗೆ ರಾಸ್ ಟೇಲರ್ ಸಾಥ್ ನೀಡಿದರು. ಈ ಜೋಡಿ 3ನೇ ವಿಕೆಟ್‍ಗೆ 62 ರನ್ ಜೊತೆಯಾಟದ ಕೊಡುಗೆ ನೀಡಿದರು. ಆದರೆ 78 ರನ್ ಗಳಿಸಿದ್ದ ಹೆನ್ರಿ ನಿಕೋಲ್ಸ್ ಇನ್ನಿಂಗ್ಸ್ ನ 29ನೇ ಓವರಿನಲ್ಲಿ ಒಂಟಿ ರನ್ ಕದಿಯಲು ಹೋಗಿ ವಿರಾಟ್ ಕೊಹ್ಲಿ ಅವರಿಂದ ರನೌಟ್ ಆದರು. ಬಳಿಕ ಮೈದಾಕ್ಕಿಳಿದ ಟಾಂಮ್ ಲಾಥಮ್ ರಾಸ್ ಟೇಲರ್ ಜೋಡಿ ಭರ್ಜರಿ ಬ್ಯಾಟಿಂಗ್ ಮಾಡಿ 138 ರನ್ ಗಳಿಸಿ ತಂಡವನ್ನು ಗೆಲುವಿ ದಡಕ್ಕೆ ಸಮೀಪಿಸಿತು.

    ನಾಲ್ಕನೇ ವಿಕೆಟ್‍ಗೆ ನ್ಯೂಜಿಲೆಂಡ್ 309 ರನ್ ಪೇರಿಸಿತ್ತು. ಆದರೆ ರಾಸ್ ಟೇಲರ್‍ಗೆ ಸಾಥ್ ನೀಡಲು ವಿಫಲರಾದ ಜೇಮ್ಸ್ ನೀಶಮ್ 9 ರನ್ ಹಾಗೂ ಕಾಲಿನ್ ಡಿ ಗ್ರ್ಯಾಂಡ್‍ಹೋಮ್ 1 ರನ್‍ಗೆ ವಿಕೆಟ್ ಒಪ್ಪಿಸಿದರು. ಇನ್ನಿಂಗ್ಸ್ 47ನೇ ಮುಕ್ತಾಯಕ್ಕೆ ನ್ಯೂಜಿಲೆಂಡ್ 334 ರನ್ ಪೇರಿಸಿತ್ತು. ಕೊನೆಯ 18 ಎಸೆತಗಳಲ್ಲಿ 14 ಅಗತ್ಯವಿತ್ತು. ಆಗ ರಾಸ್ ಟೇಲರ್ ಒಂಟಿ ರನ್ ತೆಗೆದರೆ, ಮಿಚೆಲ್‌ ಸ್ಯಾಂಟ್ನರ್ ಸಿಕ್ಸ್, ಬೌಂಡರಿ ಹಾಗೂ ಒಂಟಿ ರನ್ ಗಳಿಸಿದರು. ಪಂದ್ಯದ ಕೊನೆಯವರೆಗೂ ರಾಸ್ ಟೇಲರ್ ಔಟಾಗದೆ ಇದ್ದಿದ್ದು ಗೆಲುವಿಗೆ ಕಾರಣವಾಯಿತು. ಕಳೆದ ಟಿ20 ಪಂದ್ಯದಲ್ಲಿ ರಾಸ್ ಟೇಲರ್ ವಿಕೆಟ್ ಬಳಿಕ ಎಲ್ಲಾ ಆಟಗಾರರು ಬಹುಬೇಗ ವಿಕೆಟ್ ಪೆವಿಲಿಯನ್ ತೆರಳಿದ್ದು ಸೂಪರ್ ಓವರ್ ಹಾಗೂ ಸೋಲಿಗೆ ಕಾರಣವಾಗಿತ್ತು.

    ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ್ದ ಭಾರತ ಶ್ರೇಯಸ್ ಅಯ್ಯರ್ ರನ್ 103 (107 ಎಸೆತ, 11 ಬೌಂಡರಿ, ಸಿಕ್ಸ್), ಕೆ.ಎಲ್.ರಾಹುಲ್ ಔಟಾಗದೆ 88 ರನ್ (64 ಎಸೆತ, 3 ಬೌಂಡರಿ, 6 ಸಿಕ್ಸರ್), ವಿರಾಟ್ ಕೊಹ್ಲಿ 51 ರನ್ (63 ಎಸೆತ, 6 ಬೌಂಡರಿ) ಹಾಗೂ ಕೇದಾರ್ ಜಾದವ್ ಔಟಾಗದೆ 26 ರನ್ (15 ಎಸೆತ, 3 ಬೌಂಡರಿ, ಸಿಕ್ಸ್) ಸೇರಿ 4 ವಿಕೆಟ್‍ಗೆ 347 ರನ್ ಪೇರಿಸಿತ್ತು.

    ಇತರೇ ರನ್: ನ್ಯೂಜಿಲೆಂಡ್ ಬೌಲರ್ ಗಳು ಇತರೇ ರೂಪದಲ್ಲಿ 27 ರನ್(7 ಲೆಗ್ ಬೈ, 1 ನೋಬಾಲ್, 19 ವೈಡ್) ನೀಡಿದ್ದರೆ ಭಾರತ 29 ರನ್(4 ಲೆಗ್ ಬೈ, 1 ನೋಬಾಲ್, 24 ವೈಡ್) ನೀಡಿತ್ತು.

    ನ್ಯೂಜಿಲೆಂಡ್ ರನ್ ಏರಿದ್ದು ಹೇಗೆ?
    50 ರನ್- 59 ಎಸೆತ
    100 ರನ್- 107 ಎಸೆತ
    150 ರನ್- 153 ಎಸೆತ
    200 ರನ್- 222 ಎಸೆತ
    250 ರನ್- 239 ಎಸೆತ
    300 ರನ್- 243 ಎಸೆತ

  • ಟೀಂ ಇಂಡಿಯಾದಲ್ಲಿ ಕನ್ನಡಿಗರ ಕಮಾಲ್

    ಟೀಂ ಇಂಡಿಯಾದಲ್ಲಿ ಕನ್ನಡಿಗರ ಕಮಾಲ್

    ನ್ಯೂಜಿಲೆಂಡ್: ಟೀಂ ಇಂಡಿಯಾದಲ್ಲಿ ಕನ್ನಡಿಗರು ಕಮಾಲ್ ಮಾಡಲು ಸಿದ್ಧರಾಗಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೆ ಮೂವರು ಕನ್ನಡಿಗರು ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಬ್ಯಾಟ್ಸ್‌ಮನ್‌ಗಳಾದ ಕೆ.ಎಲ್.ರಾಹುಲ್, ಮನೀಶ್ ಪಾಂಡೆ ಬಳಿಕ ಈಗ ಮಯಾಂಕ್ ಅಗರ್ವಾಲ್ ತಂಡ ಸೇರಿಕೊಂಡಿದ್ದಾರೆ.

    ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾದ ಕ್ಯಾಪನ್ನು ಮಯಾಂಕ್ ಅಗರ್ವಾಲ್ ತೊಡಲಿದ್ದಾರೆ. ಈ ಮೂಲಕ ಏಕದಿನ ಕ್ರಿಕೆಟ್‍ಗೆ ಪಾದಾರ್ಪಣೆ ಮಾಡಲಿದ್ದಾರೆ. ಈಗಾಗಲೇ ಟೆಸ್ಟ್‍ನಲ್ಲಿ ಕೊಟ್ಟ ಅವಕಾಶವನ್ನು ಚೆನ್ನಾಗಿಯೇ ಬಳಸಿಕೊಂಡಿರುವ ಮಯಾಂಕ್ ಅಗರ್ವಾಲ್ ಏಕದಿನ ಕ್ರಿಕೆಟ್‍ನಲ್ಲಿ ಕಿವೀಸ್ ನಾಡಲ್ಲೂ ಸ್ಫೋಟಕ ಬ್ಯಾಟಿಂಗ್‍ಗೆ ಸನ್ನದ್ಧರಾಗಿದ್ದಾರೆ.

    ನ್ಯೂಜಿಲೆಂಡ್ ವಿರುದ್ಧ ನಡೆದ ಟಿ20 ಸರಣಿಯಲ್ಲಿ ಕನ್ನಡಿಗರಾದ ಕೆ.ಎಲ್.ರಾಹುಲ್ ಹಾಗೂ ಮನೀಶ್ ಪಾಂಡೆ ಸಖತ್ ಮಿಂಚಿದ್ದಾರೆ. ಕೆ.ಎಲ್.ರಾಹುಲ್ 5 ಪಂದ್ಯಗಳಲ್ಲೂ ಬ್ಯಾಟಿಂಗ್ ಹಾಗೂ ಕೀಪಿಂಗ್‍ನಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕ ಸರಣಿ ಶ್ರೇಷ್ಠ ಪ್ರಶಸ್ತಿಯನ್ನೂ ಮುಡಿಗೇರಿಸಿಕೊಂಡಿದ್ದರು.

    ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಂಡ ಮನೀಶ್ ಪಾಂಡೆ ಸಹ ಮಿಡಲ್ ಆರ್ಡರ್‍ನಲ್ಲಿ ತಂಡಕ್ಕೆ ನೆರವಾಗಿ, ಪಂದ್ಯದ ಗೆಲುವಿನ ಕಾರಣಿಕರ್ತರಾದರು. ಇದರೊಂದಿಗೆ ತಂಡದಲ್ಲಿ ಕೆ.ಎಲ್.ರಾಹುಲ್, ಮನೀಶ್ ಪಾಂಡೆ ಸ್ಥಾನವನ್ನು ಭದ್ರ ಮಾಡಿಕೊಂಡಿದ್ದಾರೆ. ಮಯಾಂಕ್ ಅಗರ್ವಾಲ್ ಸಹ ಬುಧವಾರದ ಪಂದ್ಯದಲ್ಲಿ ಮಿಂಚಿದರೆ 11 ರ ಬಳಗದಲ್ಲಿ ನೆಲೆಯುರಲಿದ್ದಾರೆ.

    ಒಟ್ಟಿನಲ್ಲಿ ಮೂವರು ಕನ್ನಡಿಗರು ಬುಧವಾರದ ಪಂದ್ಯದಲ್ಲಿ ಅವಕಾಶಗಿಟ್ಟಿಸಿಕೊಂಡರೆ ಇತಿಹಾಸ ಮರುಕಳುಹಿಸಲಿದೆ. ದಶಕದ ಹಿಂದೆ ಭಾರತ ತಂಡದಲ್ಲಿ ಕನ್ನಡಿಗ ಆಟಗಾರರೇ ಹೆಚ್ಚಿದ್ದರು. ಮಾಜಿ ಕ್ರಿಕೆಟಿಗರಾದ ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ, ಜಾವಗಲ್ ಶ್ರೀನಾಥ್, ವೆಂಕಟೇಶ್ ಪ್ರಸಾದ್ ಒಟ್ಟಿಗೆ ಕಣಕ್ಕಿಳಿದಿದ್ದು ಇದೀಗ ಇತಿಹಾಸ.

  • ಸೇಡು ತೀರಿಸಿಕೊಳ್ಳಲು ಕಿವೀಸ್ ರಣತಂತ್ರ- 5ನೇ ಕ್ರಮಾಂಕದಲ್ಲಿ ರಾಹುಲ್ ಬ್ಯಾಟಿಂಗ್

    ಸೇಡು ತೀರಿಸಿಕೊಳ್ಳಲು ಕಿವೀಸ್ ರಣತಂತ್ರ- 5ನೇ ಕ್ರಮಾಂಕದಲ್ಲಿ ರಾಹುಲ್ ಬ್ಯಾಟಿಂಗ್

    ಹ್ಯಾಮಿಲ್ಟನ್: ಟಿ20 ಸರಣಿ ಸೋಲಿನಿಂದ ಕಂಗೆಟ್ಟಿರುವ ನ್ಯೂಜಿಲೆಂಡ್ ಪಡೆಗೆ ಈಗ ಸೇಡು ತೀರಿಸಿಕೊಳ್ಳುವ ತವಕ. ಚುಟುಕು ಕ್ರಿಕೆಟ್‍ನಲ್ಲಿ ಹೋದ ಮಾನ ಉಳಿಸಿಕೊಳ್ಳಲು ಕಿವೀಸ್ ಏಕದಿನ ಕ್ರಿಕೆಟ್‍ನಲ್ಲಿ ಭಾರತವನ್ನು ಮಣಿಸಲು ರಣತಂತ್ರ ರೂಪಿಸಿದೆ. ಆದರೆ ಸಂಪೂರ್ಣ ಯುವ ಪಡೆಯನ್ನ ಹೊಂದಿರುವ ಟೀಂ ಇಂಡಿಯಾ ಗೆಲುವಿನ ನಾಗಲೋಟವನ್ನು ಮುಂದುವರಿಸಲು ಸನ್ನದ್ಧವಾಗಿದೆ.

    ನ್ಯೂಜಿಲೆಂಡ್‍ನ ಹ್ಯಾಮಿಲ್ಟನ್‍ನಲ್ಲಿ ಬುಧವಾರ ಬೆಳಗ್ಗೆ 7:30ಕ್ಕೆ ಪಂದ್ಯ ಆರಂಭವಾಗಲಿದ್ದು, ಈಗಾಗಲೇ ಉಭಯ ತಂಡಗಳು ಅಭ್ಯಾಸ ನಡೆಸಿವೆ. ಆದರೆ ಎರಡು ತಂಡಗಳಿಗೂ ಗಾಯಳುಗಳ ಸಮಸ್ಯೆ ಕಾಡುತ್ತಿದೆ. ಟೀಂ ಇಂಡಿಯಾದಲ್ಲಿ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ಹೊರಗುಳಿದಿದ್ದರೆ ನ್ಯೂಜಿಲೆಂಡ್ ತಂಡದಲ್ಲಿ ನಾಯಕ ಕೇನ್ ವಿಲಿಯಮ್ಸನ್, ವೇಗಿ ಟ್ರೆಂಟ್ ಬೌಲ್ಟ್ ಕಣಕ್ಕಿಳಿಯುತ್ತಿಲ್ಲ. ಗಾಯಾಳುಗಳ ಅನುಪಸ್ಥಿತಿ ತಂಡಗಳಿಗೆ ಕಾಡಲಿದೆ. ಇದನ್ನೂ ಓದಿ: ಕೀಪಿಂಗ್ ಆಯ್ತು, ಈಗ ಟೀಂ ಇಂಡಿಯಾ ಕ್ಯಾಪ್ಟನ್ ಜವಾಬ್ದಾರಿ ಹೊತ್ತ ಕನ್ನಡಿಗ ರಾಹುಲ್

    ರೋಹಿತ್ ಶರ್ಮಾ, ಶಿಖರ್ ಧವನ್ ಅನುಪಸ್ಥಿತಿಯಲ್ಲಿ ಯುವ ಆಟಗಾರರಿಗೆ ಅವಕಾಶ ಸಿಕ್ಕಿದೆ. ಕನ್ನಡಿಗ ಮಯಾಂಕ್ ಅಗರ್ವಾಲ್, ಪೃಥ್ವಿ ಶಾಗೆ ಚಾನ್ಸ್ ದೊರಕಿದೆ. ಮಯಾಂಕ್, ಪೃಥ್ವಿ ಶಾ ಏಕದಿನ ಕ್ರಿಕೆಟ್‍ಗೆ ಪಾದಾರ್ಪಣೆ ಮಾಡಲಿದ್ದಾರೆ. ಇಬ್ಬರು ಓಪನಿಂಗ್ ಬ್ಯಾಟ್ಸ್‍ಮನ್ ಆಗಿ ಕಣಕ್ಕಿಳಿಯಲಿದ್ದಾರೆ. ಕನ್ನಡಿಗ ಕೆ.ಎಲ್.ರಾಹುಲ್ 5ನೇ ಸ್ಥಾನದಲ್ಲಿ ಬ್ಯಾಟ್ ಬೀಸಲಿದ್ದಾರೆ ಎಂದು ನಾಯಕ ವಿರಾಟ್ ಕೊಹ್ಲಿ ತಿಳಿಸಿದ್ದಾರೆ. ಇನ್ನುಳಿದಂತೆ ತಂಡದಲ್ಲಿ ಯಾವುದೇ ಬದಲಾವಣೆ ಇಲ್ಲ. ಇದನ್ನೂ ಓದಿ: ಪಾಕಿಸ್ತಾನ 172/10, ಭಾರತ 176/0- ಯುವಪಡೆಯ ಆಟಕ್ಕೆ ಪಾಕ್ ಔಟ್, ಫೈನಲಿಗೆ ಟೀಂ ಇಂಡಿಯಾ

    ನ್ಯೂಜಿಲೆಂಡ್ ವಿರುದ್ಧ ಭಾರತ 3 ಏಕದಿನ ಪಂದ್ಯವನ್ನಾಡಲಿದೆ. ಭಾರತಕ್ಕೆ ಟಿ-20 ಸರಣಿ ಗೆಲುವು ಆತ್ಮವಿಶ್ವಾಸವನ್ನು ಹೆಚ್ಚಿಸಿದರೆ, ನ್ಯೂಜಿಲೆಂಡ್ ಪಡೆಗೆ ಬಿಟ್ಟುಬಿಡದಂತೆ ಕಾಡುತ್ತಿದೆ. ಬುಧವಾರದ ಪಂದ್ಯದಲ್ಲಿ ಗೆದ್ದು ಫಿನಿಕ್ಸ್ ನಂತೆ ಎದ್ದು ಬರಲು ರಣತಂತ್ರ ಹೆಣೆದಿದೆ. ಹ್ಯಾಮಿಲ್ಟನ್ ಪಿಚ್ ಬ್ಯಾಟ್ಸ್‍ಮನ್‍ಗಳಿಗೆ ಹೆಚ್ಚು ಸಹಕಾರಿಯಾಗಲಿದ್ದು, ಭಾರೀ ಜಿದ್ದಾಜಿದ್ದಿಯನ್ನ ನಿರೀಕ್ಷಿಸಬಹುದಾಗಿದೆ. ಇದನ್ನೂ ಓದಿ: ಮಿಂಚಿನ ವೇಗದಲ್ಲಿ ರನೌಟ್ ಮಾಡಿದ ರಾಹುಲ್- ವಿಡಿಯೋ

  • ಕೊಹ್ಲಿ 25 ರನ್ ಗಳಿಸಿದ್ರೆ ಧೋನಿ ದಾಖಲೆ ಉಡೀಸ್

    ಕೊಹ್ಲಿ 25 ರನ್ ಗಳಿಸಿದ್ರೆ ಧೋನಿ ದಾಖಲೆ ಉಡೀಸ್

    ಹ್ಯಾಮಿಲ್ಟನ್: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ದಾಖಲೆಗಳ ಸನಿಹದಲ್ಲಿದ್ದು, ನ್ಯೂಜಿಲೆಂಡ್ ವಿರುದ್ಧದ ಮೊದಲ ಎರಡು ಟಿ20 ಪಂದ್ಯಗಳಲ್ಲಿ 56 (45+11) ರನ್ ಗಳಿಸಿದ್ದು, 3ನೇ ಟಿ20 ಪಂದ್ಯದಲ್ಲಿ 25 ರನ್ ಗಳಿಸಿದರೆ ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಅವರ ದಾಖಲೆಯನ್ನು ಮುರಿಯಲಿದ್ದಾರೆ.

    ಅಂತರ್ ರಾಷ್ಟ್ರೀಯ ಕ್ರಿಕೆಟ್ ಟಿ20 ಮಾದರಿಯಲ್ಲಿ ಧೋನಿ 1,112 ರನ್ ಗಳಿಸಿದ್ದು, ಈ ದಾಖಲೆ ಬ್ರೇಕ್ ಮಾಡಲು ಕೊಹ್ಲಿಗೆ ಕೇವಲ 25 ರನ್ ಗಳ ಅಗತ್ಯವಿದೆ. ಭಾರತದ ಪರ ನಾಯಕನಾಗಿ ಅತಿಹೆಚ್ಚು ಟಿ20 ಮಾದರಿಯಲ್ಲಿ ಅತಿಹೆಚ್ಚು ರನ್ ಗಳಿಸಿದ ದಾಖಲೆ ಧೋನಿ ಹೆಸರಿನಲ್ಲಿದೆ. ನಾಳೆಯ ಪಂದ್ಯದಲ್ಲಿ ಈ ದಾಖಲೆ ಮುರಿಯುವ ಸಾಧ್ಯತೆ ಇದೆ. ವಿಶ್ವ ಕ್ರಿಕೆಟ್‍ನಲ್ಲಿ ಟಿ20 ಮಾದರಿಯಲ್ಲಿ ಹೆಚ್ಚು ರನ್ ಗಳಿಸಿದ ಪಟ್ಟಿಯಲ್ಲಿ ಡುಪ್ಲೆಸಿಸ್ 1,273 ರನ್‍ಗಳೊಂದಿಗೆ ಮೊದಲ ಸ್ಥಾನದಲ್ಲಿದ್ದು, ಕೇನ್ ವಿಲಿಯಮ್ಸ್ 1,148 ರನ್ ಗಳೊಂದಿಗೆ 2ನೇ ಸ್ಥಾನ ಪಡೆದಿದ್ದಾರೆ.

    ಉಳಿದಂತೆ ಅಂತರ್ ರಾಷ್ಟ್ರೀಯ ಟಿ20 ಮಾದರಿಯಲ್ಲಿ ಅತಿ ಹೆಚ್ಚು 50ಪ್ಲಸ್ ರನ್ ಗಳಿಸಿದ ಆಟಗಾರ ಪಟ್ಟಿಯಲ್ಲಿ ನಾಯಕ ವಿರಾಟ್ ಕೊಹ್ಲಿ, ಡುಪ್ಲೆಸಿಸ್‍ರೊಂದಿಗೆ 2ನೇ ಸ್ಥಾನದಲ್ಲಿದ್ದಾರೆ. ನಾಳಿನ ಪಂದ್ಯದಲ್ಲಿ ಕೊಹ್ಲಿ ಮತ್ತೊಂದು ಅರ್ಧ ಶತಕ ಗಳಿಸಿದರೆ ಕೇನ್ ವಿಲಿಯಮ್ಸನ್ ರೊಂದಿಗೆ ಮೊದಲ ಸ್ಥಾನ ಪಡೆಯುತ್ತಾರೆ. ಇದುವರೆಗೂ ಕೇನ್ ವಿಲಿಯಮ್ಸನ್ 8 ಬಾರಿ 50 ಪ್ಲಸ್ ರನ್ ಗಳಿಸಿದ್ದಾರೆ.

    ಇತ್ತ ಅಂತರ್ ರಾಷ್ಟ್ರೀಯ ಟಿ20 ಮಾದರಿಯ ಕ್ರಿಕೆಟ್‍ನಲ್ಲಿ 50 ಸಿಕ್ಸರ್ ಸಿಡಿಸಿದ ನಾಯಕರ ಪಟ್ಟಿಯಲ್ಲಿ ಸ್ಥಾನ ಪಡೆಯಲು ಕೊಹ್ಲಿಗೆ 7 ಸಿಕ್ಸರ್ ಗಳ ಅಗತ್ಯವಿದೆ. ಇದುವರೆಗೂ ಈ ಸಾಧನೆಯನ್ನು ಇಂಗ್ಲೆಂಡ್ ತಂಡದ ನಾಯಕ ಇಯಾನ್ ಮಾರ್ಗನ್ ಮಾತ್ರ ಮಾಡಿದ್ದಾರೆ. ಕೊಹ್ಲಿ 7 ಸಿಕ್ಸರ್ ಹೊಡೆದರೆ ಈ ಸಾಧನೆ ಮಾಡಿದ 2ನೇ ಆಟಗಾರ ಎಂಬ ಹೆಗ್ಗಳಿಕೆಯನ್ನು ಪಡೆಯುತ್ತಾರೆ.

  • ಧೋನಿಯ ನಡೆಗೆ ಅಭಿಮಾನಿಗಳ ಮೆಚ್ಚುಗೆ – ವಿಡಿಯೋ ನೋಡಿ

    ಧೋನಿಯ ನಡೆಗೆ ಅಭಿಮಾನಿಗಳ ಮೆಚ್ಚುಗೆ – ವಿಡಿಯೋ ನೋಡಿ

    ಹ್ಯಾಮಿಲ್ಟನ್: ನ್ಯೂಜಿಲೆಂಡ್ ವಿರುದ್ಧದ 3ನೇ ಟಿ20 ಪಂದ್ಯದ ವೇಳೆ ಅಭಿಮಾನಿಯೊಬ್ಬ ಭದ್ರತೆಯನ್ನು ಮೀರಿ ಮೈದಾನ ಪ್ರವೇಶಿಸಿ ಧೋನಿ ಕಾಲಿಗೆ ಬಿದ್ದಿದ್ದಾರೆ. ಆದರೆ ಈ ವೇಳೆ ಅಭಿಮಾನಿಯ ಕೈಯಲ್ಲಿದ್ದ ತ್ರಿವರ್ಣ ಧ್ವಜ  ನೆಲಕ್ಕೆ ತಾಗುವ ಮುನ್ನವೇ ಧೋನಿ ಎಚ್ಚೆತ್ತು ಧ್ವಜ ತೆಗೆದುಕೊಂಡಿದ್ದಾರೆ.

    ನ್ಯೂಜಿಲೆಂಡ್ ತಂಡ ಬ್ಯಾಟಿಂಗ್ ಆಡುತ್ತಿದ್ದ ವೇಳೆ ಘಟನೆ ನಡೆದಿದ್ದು, ಅಭಿಮಾನಿಯಿಂದ ಪಡೆದ ಬಾವುಟವನ್ನು ಧೋನಿ ಭದ್ರತಾ ಸಿಬ್ಬಂದಿಗೆ ನೀಡಿದ ಬಳಿಕ ಆಟ ಮುಂದುವರಿಸಿದ್ದರು. ಧೋನಿ ಅವರು ತ್ರಿವರ್ಣ ಧ್ವಜಕ್ಕೆ ನೀಡಿದ ಗೌರವಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಈ ಹಿಂದೆಯೂ ಹಲವು ಪಂದ್ಯಗಳ ವೇಳೆ ಅಭಿಮಾನಿಗಳು ಭದ್ರತ ಪಡೆಗಳ ಕಣ್ತಪಿಸಿ ಬಂದು ಧೋನಿಯ ಕಾಲಿಗೆ ಬಿದ್ದಿದ್ದನ್ನ ಇಲ್ಲಿ ನೆನೆಯ ಬಹುದಾಗಿದೆ. ಆದರೆ ಪಂದ್ಯದಲ್ಲಿ ತಮ್ಮ ವಿಕೆಟ್ ಕೀಪಿಂಗ್ ಮೂಲಕ ಗಮನ ಸೆಳೆದ ಧೋನಿ ಬ್ಯಾಟಿಂಗ್ ನಲ್ಲಿ ನಿರಾಸೆ ಮೂಡಿಸಿದರು. ಪಂದ್ಯದಲ್ಲಿ 4 ರನ್‍ಗಳ ರೋಚಕ ಸೋಲುಂಡ ಟೀಂ ಇಂಡಿಯಾ ಸರಣಿ ಗೆಲುವು ಪಡೆಯಲು ವಿಫಲವಾಗಿತ್ತು. ಈ ಮೂಲಕ ಬರೋಬ್ಬರಿ 30 ತಿಂಗಳ ಬಳಿಕ ಟಿ20 ಟೂರ್ನಿಯನ್ನು ಕೈಚೆಲ್ಲಿತು.

    https://twitter.com/madhavanand22/status/1094571840268161025?

    https://twitter.com/Iam_Jaimsd/status/1094550157889130496?

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮನ್ರೋ ಫಿಫ್ಟಿ – ಟೀಂ ಇಂಡಿಯಾ ಐತಿಹಾಸಿಕ ಗೆಲುವಿಗೆ 213 ರನ್ ಗುರಿ

    ಮನ್ರೋ ಫಿಫ್ಟಿ – ಟೀಂ ಇಂಡಿಯಾ ಐತಿಹಾಸಿಕ ಗೆಲುವಿಗೆ 213 ರನ್ ಗುರಿ

    ಹ್ಯಾಮಿಲ್ಟನ್: ನ್ಯೂಜಿಲೆಂಡ್ ನೆಲದಲ್ಲಿ ಮೊದಲ ಟಿ20 ಸರಣಿಯ ಗೆಲುವು ಪಡೆಯುವ ಉದ್ದೇಶ ಹೊಂದಿರುವ ಟೀಂ ಇಂಡಿಯಾಗೆ ಅಂತಿಮ ಟಿ20 ಪಂದ್ಯದಲ್ಲಿ ಕಿವೀಸ್ ಪಡೆ 213 ರನ್ ಗುರಿಯನ್ನು ನೀಡಿದೆ.

    ನ್ಯೂಜಿಲೆಂಡ್ ತಂಡದ ಮನ್ರೋ (72 ರನ್, 40 ಎಸೆತ) ಹಾಗೂ ಸಿಫಿರ್ಟ್ (43 ರನ್, 25 ಎಸೆತ) ಬಿರುಸಿನ ಬ್ಯಾಟಿಂಗ್ ನೆರವಿನಿಂದ 20 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 212 ರನ್‍ಗಳ ಸವಾಲಿನ ಮೊತ್ತ ಗಳಿಸಿತು.

    ಕಿವೀಸ್ ಪರ ಭರ್ಜರಿ ಆರಂಭ ನೀಡಿದ ಸಿಫರ್ಟ್, ಮನ್ರೋ ಜೋಡಿ ಮೊದಲ ವಿಕೆಟ್‍ಗೆ 80 ರನ್ ಗಳ ಜೊತೆಯಾಟ ನೀಡಿತು. ಈ ಇಬ್ಬರ ಜೋಡಿಯನ್ನು ಮುರಿಯಲು ಕುಲ್ದೀಪ್ ಯಾದವ್ ಯಶಸ್ವಿಯಾದರು. ಬಳಿಕ ಮನ್ರೋರನ್ನು ಕೂಡಿಕೊಂಡ ನಾಯಕ ವಿಲಿಮ್ಸನ್ ರನ್ ಗಳಿಕೆ ಮತ್ತಷ್ಟು ವೇಗ ಕೊಟ್ಟರು. 10 ಓವರ್ ಗಳ ಅಂತ್ಯಕ್ಕೆ ಕಿವೀಸ್ 110 ರನ್ ಗಳಿಸಿದರೆ, 15 ಓವರ್ ಗಳ ಅಂತ್ಯಕ್ಕೆ ಈ ಮೊತ್ತ 151 ರನ್ ಗಳಿಗೆ ತಲುಪಿತ್ತು. ಈ ಹಂತದಲ್ಲಿ ಖಲೀಲ್ ಅಹ್ಮದ್ ಹಾಗೂ ಕುಲ್ದೀಪ್ ಯಾದವ್ ವಿಲಿಯಮ್ಸನ್, ಮನ್ರೋ ವಿಕೆಟ್ ಪಡೆಯಲು ಯಶಸ್ವಿಯಾಗಿದ್ದರು.

    ಅಂತಿಮ 5 ಓವರ್ ಗಳಲ್ಲೂ ನ್ಯೂಜಿಲೆಂಡ್ ಬ್ಯಾಟ್ಸ್ ಮನ್‍ಗಳ ವೇಗಕ್ಕೆ ಕಡಿವಾಣ ಹಾಕಲು ತಿಣುಕಾಡಿದ ಟೀಂ ಇಂಡಿಯಾ ಬೌಲರ್ ಗಳು ದುಬಾರಿಯಾಗಿ ಪರಿಣಮಿಸಿದರು. ನ್ಯೂಜಿಲೆಂಡ್ ಇನ್ನಿಂಗ್ಸ್ ನ ಅಂತಿಮ 5 ಓವರ್ ಗಳಲ್ಲಿ 61 ರನ್ ಹರಿದು ಬಂತು. ಡ್ಯಾರೆಲ್ ಮಿಚೆಲ್ 11 ಎಸೆತಗಳಲ್ಲಿ 19 ರನ್ ಮತ್ತು ರಾಸ್ ಟೇಲರ್ 7 ಎಸೆತಗಳಲ್ಲಿ 14 ರನ್ ಗಳಿಸಿ ಅಜೇಯರಾಗಿ ಉಳಿದರು. ಇದರೊಂದಿಗೆ ನ್ಯೂಜಿಲೆಂಡ್ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 212 ರನ್ ಗಳಿಸಿತು. ಟೀಂ ಇಂಡಿಯಾ ಪರ ಕುಲ್ದೀಪ್ ಯಾದವ್ 26 ರನ್ ನೀಡಿ 2 ವಿಕೆಟ್ ಪಡೆದರೆ, ಖಲೀಲ್ ಅಹ್ಮದ್, ಭುವನೇಶ್ವರ್ ಕುಮಾರ್ ತಲಾ 1 ವಿಕೆಟ್ ಪಡೆದರು.

    ಪಂದ್ಯದಲ್ಲಿ ಟೀಂ ಇಂಡಿಯಾ ಗುರಿ ಬೆನ್ನತ್ತಲೂ ಯಶ್ವಿಯಾದರೆ ನ್ಯೂಜಿಲೆಂಡ್ ನೆಲದಲ್ಲಿ ಮೊದಲ ಟಿ20 ಗೆದ್ದ ಸರಣಿ ಗೆದ್ದ ಹೆಗ್ಗಳಿಕೆ ಪಡೆಯಲಿದ್ದು, ಭಾರತ ಬ್ಯಾಟ್ಸ್ ಮನ್ ಗಳ ಪ್ರದರ್ಶನ ನಿರ್ಣಯಕವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಹಿಳಾ ಕ್ರಿಕೆಟ್‍ನಲ್ಲಿ ಮಿಥಾಲಿ ರಾಜ್ ವಿಶ್ವದಾಖಲೆ

    ಮಹಿಳಾ ಕ್ರಿಕೆಟ್‍ನಲ್ಲಿ ಮಿಥಾಲಿ ರಾಜ್ ವಿಶ್ವದಾಖಲೆ

    ಹ್ಯಾಮಿಲ್ಟನ್: ಟೀಂ ಇಂಡಿಯಾ ನಾಯಕಿ ಮಿಥಾಲಿ ರಾಜ್ ನ್ಯೂಜಿಲೆಂಡ್ ವಿರುದ್ಧ ಏಕದಿನ ಕ್ರಿಕೆಟ್ ಪಂದ್ಯವನ್ನು ಆಡುವ ಮೂಲಕ 200 ಏಕದಿನ ಪಂದ್ಯಗಳನ್ನು ಆಡಿರುವ ವಿಶ್ವದ ಮೊದಲ ಮಹಿಳಾ ಆಟಗಾರ್ತಿ ಎಂಬ ಹೆಗ್ಗಳಿಕೆಯನ್ನು ಪಡೆದರು.

    ತಮ್ಮ 200ನೇ ಏಕದಿನ ಪಂದ್ಯದಲ್ಲಿ 28 ಎಸೆತಗಳನ್ನು ಎದುರಿಸಿದ ಮಿಥಾಲಿ ರಾಜ್ ಕೇವಲ 9 ರನ್ ಗಳಿಸಿ ಐತಿಹಾಸಿಕ ಪಂದ್ಯದಲ್ಲಿ ನಿರಾಸೆ ಮೂಡಿಸಿದರು. ಆದರೆ ನ್ಯೂಜಿಲೆಂಡ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಅಜೇಯ 63 ರನ್ ಸಿಡಿಸಿದ್ದ ಮಿಥಾಲಿ ರಾಜ್ 3 ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಪಡೆಯಲು ಕಾರಣರಾಗಿದ್ದರು. ಅಂತಿಮ ಪಂದ್ಯದಲ್ಲಿ ಮಿಥಾಲಿ ರಾಜ್ 11 ರನ್ ಗಳಿಸಿದ್ದರೆ ನ್ಯೂಜಿಲೆಂಡ್ ವಿರುದ್ಧ 1 ಸಾವಿರ ರನ್ ಪೂರೈಸುತ್ತಿದ್ದರು. ಆದರೆ ಈ ಅವಕಾಶವನ್ನು ಕೈ ಚೆಲ್ಲಿದರು. ಇದರೊಂದಿಗೆ ತಂಡ 3ನೇ ಏಕದಿನ ಪಂದ್ಯದಲ್ಲಿ 8 ವಿಕೆಟ್ ಸೋಲು ಪಡೆಯಿತು. ಸರಣಿಯನ್ನ 2-1 ಅಂತರದಲ್ಲಿ ತನ್ನದಾಗಿಸಿಕೊಂಡಿದೆ.

    ಉಳಿದಂತೆ 1999 ರಲ್ಲಿ ಏಕದಿನ ಕ್ರಿಕೆಟ್‍ಗೆ ಪಾದಾರ್ಪಣೆ ಮಾಡಿದ್ದ ಮಿಥಾಲಿ ರಾಜ್ ಬಳಿಕ ಭಾರತ ಆಡಿರುವ 263 ಏಕದಿನಗಳ ಪಂದ್ಯಗಳ ಪೈಕಿ 200 ಪಂದ್ಯಗಳಲ್ಲಿ ತಂಡವನ್ನು ಪ್ರತಿನಿಧಿಸಿದ್ದಾರೆ. 36 ವರ್ಷದ ಮಿಥಾಲಿ ರಾಜ್ 51.33 ಸರಸಾರಿಯಲ್ಲಿ 6,622 ರನ್ ಗಳಿಸಿದ್ದು, 7 ಶತಕ ಹಾಗೂ 52 ಅರ್ಧ ಶತಕಗಳನ್ನು ಸಿಡಿಸಿದ್ದಾರೆ. ಅಲ್ಲದೇ 10 ಟೆಸ್ಟ್ ಹಾಗೂ 85 ಟಿ20 ಪಂದ್ಯಗಳನ್ನು ಆಡಿದ್ದಾರೆ.

    ಮಹಿಳಾ ಕ್ರಿಕೆಟ್ ಇತಿಹಾಸದಲ್ಲಿ ಮಿಥಾಲಿ ರಾಜ್ ಹೆಚ್ಚಿನ ಸಮಯ ಅಂತರಾಷ್ಟ್ರಿಯ ಕ್ರಿಕೆಟ್ ವೃತ್ತಿ ಜೀವನ ಹೊಂದಿರುವ ಆಟಗಾರ್ತಿಯಾಗಿದ್ದಾರೆ. ಪುರುಷರ ಕ್ರಿಕೆಟ್‍ಗೆ ಹೋಲಿಕೆ ಮಾಡಿದರೆ ಸಚಿನ್, ಜಯಸೂರ್ಯ, ಜಾವೇದ್ ಮಿಯಾಂದಾದ್ ಅವರ ನಂತರದ ನಾಲ್ಕನೇ ಸ್ಥಾನವನ್ನು ಮಿಥಾಲಿ ರಾಜ್ ಪಡೆದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಬೌಲರ್‍ ಗೆ ಹೆಲ್ಮೆಟ್ – ನ್ಯೂಜಿಲೆಂಡ್ ದೇಶಿ ಕ್ರಿಕೆಟ್ ನಲ್ಲಿ ವಿನೂತನ ಪ್ರಯೋಗ

    ಬೌಲರ್‍ ಗೆ ಹೆಲ್ಮೆಟ್ – ನ್ಯೂಜಿಲೆಂಡ್ ದೇಶಿ ಕ್ರಿಕೆಟ್ ನಲ್ಲಿ ವಿನೂತನ ಪ್ರಯೋಗ

    ಹ್ಯಾಮಿಲ್ಟನ್: ಕ್ರಿಕೆಟ್ ಮೈದಾನದಲ್ಲಿ ಬ್ಯಾಟ್ಸ್ ಮನ್ ಗಳು ಹಾಗೂ ವಿಕೆಟ್ ಕೀಪರ್ ಗಳು ಹೆಲ್ಮೆಟ್ ಧರಿಸಿ ಆಟವಾಡುವುದು ಸಾಮಾನ್ಯ. ಆದರೆ ನ್ಯೂಜಿಲೆಂಡ್ ನಲ್ಲಿ ಬೌಲರ್ ಒಬ್ಬರು ಹೆಲ್ಮೆಟ್ ಧರಿಸಿ ಬೌಲ್ ಮಾಡಿ ಸುದ್ದಿಯಾಗಿದ್ದಾರೆ.

    ಹೌದು, ನ್ಯೂಜಿಲೆಂಡ್ ನ ದೇಶಿಯ ಸೂಪರ್ ಸ್ಮಾಶ್ ಟಿ20 ಟೂರ್ನಿಯ ನಾರ್ಥನ್ ಡಿಸ್ಟ್ರಿಕ್ಟ್ಸ್ ಹಾಗೂ ಒಟಾಗೊ ತಂಡದ ನಡುವಿನ ಪಂದ್ಯದಲ್ಲಿ ವೇಗದ ಬೌಲರ್ ವಾರೆನ್ ಬಾರ್ನೆಸ್ ಹೆಲ್ಮೆಟ್ ಧರಿಸಿ ಬೌಲ್ ಮಾಡಿದರು. ಈ ಮೂಲಕ ದೇಶಿಯ ಟಿ20 ಮಾದರಿಯಲ್ಲಿ ಹೆಲ್ಮೆಟ್ ಧರಿಸಿ ಬೌಲ್ ಮಾಡಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

    ಹೆಲ್ಮೆಟ್ ಧರಿಸಲು ಕಾರಣವೇನು?
    ಶನಿವಾರ ನಡೆದ ದೇಶಿಯ ಟೂರ್ನಿಯ ಪಂದ್ಯದಲ್ಲಿ ಆಡಿದ ಉದಯೋನ್ಮುಖ ಆಟಗಾರರಾದ ವಾರೆನ್ ಅವರು ವಿಶಿಷ್ಟ ಬೌಲಿಂಗ್ ಶೈಲಿಯನ್ನು ಹೊಂದಿದ್ದಾರೆ. ಬೌಲ್ ಮಾಡುವ ವೇಳೆ ಅವರ ತಲೆ ನೆಲದತ್ತ ಬಾಗಿರುತ್ತದೆ. ಈ ಸಂದರ್ಭದಲ್ಲಿ ಬ್ಯಾಟ್ಸ್ ಮನ್ ನೇರವಾಗಿ ಹೊಡೆದರೆ ಬಾಲ್ ವಾರೆನ್ ಅವರ ತಲೆಗೆ ಬಡಿಯುವ ಸಾಧ್ಯತೆ ಹೆಚ್ಚಿರುತ್ತದೆ. ಈ ಕಾರಣಕ್ಕೆ ಯಾವುದೇ ರೀತಿಯ ಅಪಾಯ ಆಗದೇ ಇರಲು ವಾರೆನ್ ಹೆಲ್ಮೆಟ್ ಧರಿಸಿ ಬೌಲ್ ಮಾಡುತ್ತಿದ್ದಾರೆ.

    ಹೆಲ್ಮೆಟ್ ವಿನ್ಯಾಸ ಹೇಗಿದೆ?
    ಬಾಕ್ಸಿಂಗ್ ವೇಳೆ ಆಟಗಾರರು ಧರಿಸುವ ಹೆಲ್ಮೆಟ್ ವಿನ್ಯಾಸದಿಂದ ಪ್ರೇರಿತವಾಗಿ ತಲೆಯನ್ನು ಸಂಪೂರ್ಣವಾಗಿ ರಕ್ಷಣೆ ಮಾಡುವಂತಹ ವಿನ್ಯಾಸವನ್ನು ರೂಪಿಸಲಾಗಿದೆ. ಅಷ್ಟೇ ಅಲ್ಲದೇ ಮುಖದ ಭಾಗಕ್ಕೂ ರಕ್ಷಣೆ ನೀಡುವ ಪಾರದರ್ಶಕ ಪಟ್ಟಿಯನ್ನು ಅಳವಡಿಸಲಾಗಿದೆ.

    ಕ್ರಿಕೆಟ್ ಇತಿಹಾಸದಲ್ಲಿ ಇಂತಹ ವಿಶೇಷ ಪ್ರಯೋಗ ಇದೇ ಮೊದಲ ಬಾರಿ ನಡೆದಿದ್ದು, ಈ ಪ್ರಯೋಗ ವಿಶ್ವ ಕ್ರಿಕೆಟ್‍ನ ಹಲವು ಆಟಗಾರರು ಹಾಗೂ ಅಭಿಮಾನಿಗಳ ಗಮನ ಸೆಳೆದಿದೆ. ಅಲ್ಲದೇ ಭಾರಿ ಚರ್ಚೆಗೂ ಕಾರಣವಾಗಿದ್ದು, ಕ್ರಿಕೆಟ್ ವಲಯದಿಂದ ವಿಭಿನ್ನ ಅಭಿಪ್ರಾಯಗಳು ಕೇಳಿ ಬರುತ್ತಿವೆ.

    ಹೆಲ್ಮೆಟ್ ಧರಿಸಲು ಪ್ರೇರಣೆ ಏನು?
    ಇಂಗ್ಲೇಡ್ ದೇಶಿಯ ಪಂದ್ಯದ ವೇಳೆ ಯುವ ಬೌಲರ್ ಲ್ಯುಕ್ ಫ್ಲೆಚರ್ ಗೆ ಚೆಂಡು ಬಡಿದು ಗಂಭೀರವಾದ ಗಾಯವಾಗಿತ್ತು. ತಲೆಗೆ ಬಡಿದ ಕಾರಣ ಫ್ಲೆಚರ್ ಅಲ್ಲೇ ಕುಸಿದು ಬಿದ್ದಿದ್ದರು. ಈ ಘಟನೆಯನ್ನು ನೋಡಿ ವಾರೆನ್ ಬಾರ್ನೆಸ್ ಕೋಚ್ ಜೊತೆ ಸೇರಿ ಈ ಹೆಲ್ಮೆಟ್ ವಿನ್ಯಾಸಗೊಳಿಸಿದ್ದಾರೆ.

    ಇತ್ತೀಚಿನ ದಿನಗಳಲ್ಲಿ ಆನ್ ಫೀಲ್ಡ್ ನಲ್ಲಿರುವ ಅಂಪೈರ್ ಗಳು ಸಹ ಹೆಲ್ಮೆಟ್ ಧರಿಸಿ ಕಾರ್ಯನಿರ್ವಹಿಸುವ ಹಲವು ಘಟನೆಗಳು ನಡೆದಿದ್ದು, ಎಲ್ಲವೂ ಆಟಗಾರರ ಜೀವದ ರಕ್ಷಣೆ ಮಾಡುವ ಉದ್ದೇಶವನ್ನು ಒಳಗೊಂಡಿದೆ.