Tag: Hamas Chief

  • ತಲೆ ಸೀಳಿದ ಬುಲೆಟ್‌, ಬೆರಳು ಕಟ್‌; ಭೀಕರ ಹತ್ಯೆಯಾದ ಹಮಾಸ್‌ ಮುಖ್ಯಸ್ಥನ ದೇಹ ಸ್ಥಿತಿ ಹೇಗಿತ್ತು?

    ತಲೆ ಸೀಳಿದ ಬುಲೆಟ್‌, ಬೆರಳು ಕಟ್‌; ಭೀಕರ ಹತ್ಯೆಯಾದ ಹಮಾಸ್‌ ಮುಖ್ಯಸ್ಥನ ದೇಹ ಸ್ಥಿತಿ ಹೇಗಿತ್ತು?

    ಜೆರುಸಲೇಂ: ಇಸ್ರೇಲಿ ಮಿಲಿಟರಿಯಿಂದ ಹತ್ಯೆಯಾದ ಹಮಾಸ್‌ ಮುಖ್ಯಸ್ಥ ಯಾಹ್ಯಾ ಸಿನ್ವಾರ್‌ ದೇಹ ಯಾವ ಸ್ಥಿತಿಯಲ್ಲಿತ್ತು ಎಂಬ ವಿವರ ಹೊರಬಿದ್ದಿದೆ.

    ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವಾರ್ ದಕ್ಷಿಣ ಗಾಜಾದಲ್ಲಿ ಗುಪ್ತಚರ ಆಧಾರಿತ ದಾಳಿಯಲ್ಲಿ ಹತ್ಯೆಯಾದ. ಸಿನ್ವಾರ್ ಪ್ಯಾಲೇಸ್ಟಿನಿಯನ್ ಗುಂಪಿನ ಹಮಾಸ್‌ನ ಪಾಲಿಟ್‌ಬ್ಯೂರೋ ಮುಖ್ಯಸ್ಥನಾಗಿದ್ದ. ಇಸ್ರೇಲ್ ಗ್ರೌಂಡ್ ಫೋರ್ಸಸ್ (IDF) ನ 828 ಬ್ರಿಗೇಡ್ ರಾಫಾದ ಟೆಲ್ ಅಲ್-ಸುಲ್ತಾನ್ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಅಲ್ಲಿ ಸ್ಕ್ಯಾನ್ ಮಾಡುವಾಗ ಹಮಾಸ್ ಮುಖ್ಯಸ್ಥನ ದೇಹ ಪತ್ತೆಯಾಯಿತು. ಕಾರ್ಯಾಚರಣೆಯಲ್ಲಿ ಆತ ಹತ್ಯೆಯಾಗಿರುವುದನ್ನು ದೃಢಪಡಿಸಲಾಯಿತು. ಇದನ್ನೂ ಓದಿ: ಇಸ್ರೇಲ್‌ನಲ್ಲಿದ್ದ ವೈದ್ಯಕೀಯ ದಾಖಲೆಗಳಿಂದ ಹಮಾಸ್ ನಾಯಕ ಸಿನ್ವಾರ್‌ ಗುರುತು ಪತ್ತೆ!

    ಇಸ್ರೇಲ್ ನ್ಯಾಷನಲ್ ಸೆಂಟರ್ ಆಫ್ ಫೊರೆನ್ಸಿಕ್ ಮೆಡಿಸಿನ್‌ನ ಮುಖ್ಯ ರೋಗಶಾಸ್ತ್ರಜ್ಞ ಚೆನ್ ಕುಗೆಲ್, ಸಿನ್ವಾರ್ ಇಲ್ಲಿ ಕೈದಿಯಾಗಿ ಸೇವೆ ಸಲ್ಲಿಸುತ್ತಿದ್ದ ಅವಧಿಯಲ್ಲಿ ಹೊಂದಿದ್ದ ಪ್ರೊಫೈಲ್‌ನೊಂದಿಗೆ ಮೃತದೇಹವನ್ನು ಹೋಲಿಕೆ ಮಾಡಿದೆವು. ಡಿಎನ್‌ಎ ಮೂಲಕ ಸಿನ್ವಾರ್‌ನನ್ನು ಗುರುತಿಸಲಾಗಿದೆ ಎಂದು ತಿಳಿಸಿದ್ದಾರೆ.

    ಇಸ್ರೇಲಿ ಸೈನಿಕರು ನಡೆಸಿದ ಕಾರ್ಯಾಚರಣೆಯಲ್ಲಿ, ಬುಲೆಟ್‌ ಸಿನ್ವಾರ್‌ ತಲೆಯನ್ನು ಹೊಕ್ಕಿದೆ. ಅಲ್ಲದೇ ಆತನ ಬೆರಳು ಸಹ ಕಟ್‌ ಆಗಿದೆ. ಭೀಕರ ಸ್ಥಿತಿಯಲ್ಲಿ ಸಿನ್ವಾರ್‌ ಹತ್ಯೆಯಾಗಿದ್ದಾನೆ. ಇದಕ್ಕೆ ಸಂಬಂಧಿಸಿದ ಫೋಟೋ ಮತ್ತು ವೀಡಿಯೋಗಳನ್ನು ಬಿಡುಗಡೆ ಮಾಡಲಾಗಿದೆ. ಇದನ್ನೂ ಓದಿ: ಹಮಾಸ್‌ ಈ ಕೆಲಸ ಮಾಡಿದ್ರೆ ನಾಳೆಯೇ ಯುದ್ಧ ಕೊನೆಗೊಳ್ಳುತ್ತದೆ – ಇಸ್ರೇಲ್‌ ಪ್ರಧಾನಿ ಎಚ್ಚರಿಕೆ

    ದಾಳಿ ಆರಂಭದಲ್ಲಿ ಸಿನ್ವಾರ್‌ ಗಂಭೀರ ಗಾಯಗೊಂಡಿದ್ದ. ಆತನ ತಲೆಗೆ ಗುಂಡೇಟು ಬಿದ್ದಾಗ ಮೃತಪಟ್ಟಿದ್ದಾನೆ. ಸಿನ್ವಾರ್‌ ಮುಖಕ್ಕೆ ಗಂಭೀರ ಗಾಯಗಳಾಗಿರುವುದನ್ನು ವೀಡಿಯೋಗಳು ತೋರಿಸಿವೆ. ಭೀಕರ ದಾಳಿಗೆ ಆತನ ತಲೆಬುರುಡೆ ಭಾಗವು ಸೀಳಿಹೋಗಿದೆ.

  • ಹಮಾಸ್ ಮುಖ್ಯಸ್ಥನ ಕೊನೆ ಕ್ಷಣಗಳ ಡ್ರೋನ್ ದೃಶ್ಯ ಬಿಡುಗಡೆ ಮಾಡಿದ ಇಸ್ರೇಲ್

    ಹಮಾಸ್ ಮುಖ್ಯಸ್ಥನ ಕೊನೆ ಕ್ಷಣಗಳ ಡ್ರೋನ್ ದೃಶ್ಯ ಬಿಡುಗಡೆ ಮಾಡಿದ ಇಸ್ರೇಲ್

    ಜೆರುಸಲೇಂ: ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವಾರ್‌ನ (Yahya Sinwar) ‘ಕೊನೆಯ ಕ್ಷಣಗಳು’ ಎಂದು ಹೇಳಿದ ಡ್ರೋನ್ ದೃಶ್ಯಗಳನ್ನು ಇಸ್ರೇಲ್ ರಕ್ಷಣಾ ಪಡೆಗಳು ಬಿಡುಗಡೆ ಮಾಡಿದೆ.

    ಹಾನಿಗೊಳಗಾದ ಮತ್ತು ಶಿಥಿಲಗೊಂಡ ಮನೆಯೊಳಗೆ ಸಿನ್ವಾರ್ ಮಂಚದ ಮೇಲೆ ಕುಳಿತಿರುವುದನ್ನು ವೀಡಿಯೋ ತೋರಿಸಿದೆ. ಆತನ ಅಂತಿಮ ಕ್ಷಣಗಳಲ್ಲಿ, ಡ್ರೋನ್‌ಗೆ ವಸ್ತುವನ್ನು ಎಸೆಯುವುದನ್ನು ವೀಡಿಯೋದಲ್ಲಿ ಕಾಣಬಹುದು.‌ ಇದನ್ನೂ ಓದಿ: ಇಸ್ರೇಲ್‌, ಜಗತ್ತಿಗೆ ಇದು ಒಳ್ಳೆಯ ದಿನ: ಹಮಾಸ್‌ ಮುಖ್ಯಸ್ಥನ ಹತ್ಯೆಗೆ ಅಮೆರಿಕ ಸಂತಸ

    ಇಸ್ರೇಲ್ (Israel) ಗುರುವಾರ ಗಾಜಾ ಕಾರ್ಯಾಚರಣೆಯಲ್ಲಿ 62 ವಯಸ್ಸಿನ ಸಿನ್ವಾರ್‌ನನ್ನು ಹತ್ಯೆ ಮಾಡಿತು. ‘ಎಲಿಮಿನೇಟೆಡ್: ಯಾಹ್ಯಾ ಸಿನ್ವಾರ್’ ಎಂದು ಐಡಿಎಫ್‌ (ಇಸ್ರೇಲಿ ಮಿಲಿಟರಿ) ಸೋಷಿಯಲ್‌ ಮೀಡಿಯಾ ಪೋಸ್ಟ್‌ ಹಾಕಿದೆ.

    ಅಕ್ಟೋಬರ್ 7 ರ ಹತ್ಯಾಕಾಂಡ ಮತ್ತು ದುಷ್ಕೃತ್ಯಗಳಿಗೆ ಕಾರಣವಾದ ಕೊಲೆಗಾರ ಯಾಹ್ಯಾ ಸಿನ್ವಾರ್ ಅನ್ನು ಐಡಿಎಫ್ (ಇಸ್ರೇಲಿ ಮಿಲಿಟರಿ) ಸೈನಿಕರು ನಿರ್ಮೂಲನೆ ಮಾಡಿದರು ಎಂದು ವಿದೇಶಾಂಗ ಸಚಿವ ಇಸ್ರೇಲ್ ಕಾಟ್ಜ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಹಮಾಸ್​​ ಮುಖ್ಯಸ್ಥ ​ಹತ್ಯೆ – ನಮ್ಮ ಮಿಲಿಟರಿಗೆ ಸಿಕ್ಕಿದ ಜಯ ಎಂದ ಇಸ್ರೇಲ್‌

    ಹತ್ಯೆಯಾದ ಸಿನ್ವಾರ್ ಅ.7 ರ ದಾಳಿಯ ಮಾಸ್ಟರ್ ಮೈಂಡ್ ಎಂದು ಹೇಳಲಾಗಿದೆ. ಇದು ಇಸ್ರೇಲಿ ಇತಿಹಾಸದಲ್ಲಿ ಅತ್ಯಂತ ಕರಾಳ ದಿನ ಎನ್ನಲಾಗಿದೆ. ದಾಳಿಯು 1,206 ಜನರ ಸಾವಿಗೆ ಕಾರಣವಾಯಿತು.

  • ಇಸ್ರೇಲ್‌, ಜಗತ್ತಿಗೆ ಇದು ಒಳ್ಳೆಯ ದಿನ: ಹಮಾಸ್‌ ಮುಖ್ಯಸ್ಥನ ಹತ್ಯೆಗೆ ಅಮೆರಿಕ ಸಂತಸ

    ಇಸ್ರೇಲ್‌, ಜಗತ್ತಿಗೆ ಇದು ಒಳ್ಳೆಯ ದಿನ: ಹಮಾಸ್‌ ಮುಖ್ಯಸ್ಥನ ಹತ್ಯೆಗೆ ಅಮೆರಿಕ ಸಂತಸ

    ವಾಷಿಂಗ್ಟನ್: ಕಳೆದ ವರ್ಷ ಅಕ್ಟೋಬರ್ 7 ರ ದಾಳಿಯ ಹಿಂದಿನ ಮಾಸ್ಟರ್ ಮೈಂಡ್ ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವಾರ್ ಹತ್ಯೆಗೆ ಅಮೆರಿಕ ಸಂತಸ ವ್ಯಕ್ತಪಡಿಸಿದೆ. ‘ಇದು ಇಸ್ರೇಲ್‌ ಮತ್ತು ಜಗತ್ತಿಗೆ ಒಳ್ಳೆಯ ದಿನ’ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್ (Joe Biden) ಪ್ರತಿಕ್ರಿಯಿಸಿದ್ದಾರೆ.

    ಹಮಾಸ್ ನಾಯಕರನ್ನು ಬೆನ್ನಟ್ಟಲು ಅಮೆರಿಕದ ಗುಪ್ತಚರವು ಇಸ್ರೇಲ್ ರಕ್ಷಣಾ ಪಡೆಗಳಿಗೆ ಸಹಾಯ ಮಾಡಿದೆ ಎಂದು ಅಧ್ಯಕ್ಷ ಬೈಡೆನ್ ಉಲ್ಲೇಖಿಸಿದ್ದಾರೆ. ಭಯೋತ್ಪಾದಕರನ್ನು ನಿರ್ಮೂಲನೆ ಮಾಡಲು ಇಸ್ರೇಲ್‌ಗೆ ಎಲ್ಲ ಹಕ್ಕು ಇದೆ ಎಂದು ಅವರು ಪುನರುಚ್ಚರಿಸಿದ್ದಾರೆ. ಇದನ್ನೂ ಓದಿ: ಹಮಾಸ್​​ ಮುಖ್ಯಸ್ಥ ​ಹತ್ಯೆ – ನಮ್ಮ ಮಿಲಿಟರಿಗೆ ಸಿಕ್ಕಿದ ಜಯ ಎಂದ ಇಸ್ರೇಲ್‌

    ಕಳೆದ ವರ್ಷ ಅಕ್ಟೋಬರ್ 7 ರಂದು ಇಸ್ರೇಲ್ ಮೇಲಿನ ಹಮಾಸ್ ದಾಳಿಯ ಮಾಸ್ಟರ್‌ಮೈಂಡ್‌ನ ಹತ್ಯೆಯು, ಜಗತ್ತಿನಲ್ಲಿ ಎಲ್ಲಿಯೂ ಯಾವುದೇ ಭಯೋತ್ಪಾದಕರು ಎಷ್ಟು ಸಮಯ ತೆಗೆದುಕೊಂಡರೂ ನ್ಯಾಯದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಮತ್ತೊಮ್ಮೆ ಸಾಬೀತುಪಡಿಸಿದೆ ಎಂದು ಯುಎಸ್ ಅಧ್ಯಕ್ಷ ತಿಳಿಸಿದ್ದಾರೆ.

    ನನ್ನ ಇಸ್ರೇಲಿ ಸ್ನೇಹಿತರಿಗೆ, ಇದು ನಿಸ್ಸಂದೇಹವಾಗಿ ಪರಿಹಾರ ಮತ್ತು ನೆನಪಿನ ದಿನವಾಗಿದೆ. 2011 ರಲ್ಲಿ ಒಸಾಮಾ ಬಿನ್ ಲಾಡೆನ್ ಅನ್ನು ಕೊಲ್ಲಲು ಅಧ್ಯಕ್ಷ ಒಬಾಮಾ ಅವರು ದಾಳಿಗೆ ಆದೇಶಿಸಿದ ನಂತರ ಯುನೈಟೆಡ್ ಸ್ಟೇಟ್ಸ್‌ನಾದ್ಯಂತ ಸಾಕ್ಷಿಯಾದ ದೃಶ್ಯಗಳಂತೆಯೇ ಇದೆ ಎಂದು ಬಣ್ಣಿಸಿದ್ದಾರೆ. ಇದನ್ನೂ ಓದಿ: ಭಾರತದಲ್ಲಿರುವ ಶೇಖ್ ಹಸೀನಾ ವಿರುದ್ಧ ಅರೆಸ್ಟ್‌ ವಾರೆಂಟ್‌ ಜಾರಿ

    ಕಳೆದ ವರ್ಷ ಅಕ್ಟೋಬರ್ 7 ರಂದು ಇಸ್ರೇಲ್‌ (Isreal) ಮೇಲೆ ನಡೆಸಿದ ದಾಳಿಯ ಮಾಸ್ಟರ್ ಮೈಂಡ್ ಹಮಾಸ್ ಉಗ್ರ ಸಂಘಟನೆಯ ನಾಯಕ (Hamas Leader) ಯಾಹ್ಯಾ ಸಿನ್ವಾರ್ (Yahya Sinwar) ಇಸ್ರೇಲ್‌ ನಡೆಸಿದ ದಾಳಿಗೆ ಬಲಿಯಾಗಿದ್ದಾನೆ.