Tag: Hamas Attack

  • ರಾತ್ರೋರಾತ್ರಿ ದಾಳಿ ನಡೆಸಿ ಹಮಾಸ್‌ ಕಮಾಂಡರ್‌ ಹತ್ಯೆ; 36 ಮಂದಿ ಬಂಧಿಸಿದ ಇಸ್ರೇಲ್‌ ರಕ್ಷಣಾ ಪಡೆ

    ರಾತ್ರೋರಾತ್ರಿ ದಾಳಿ ನಡೆಸಿ ಹಮಾಸ್‌ ಕಮಾಂಡರ್‌ ಹತ್ಯೆ; 36 ಮಂದಿ ಬಂಧಿಸಿದ ಇಸ್ರೇಲ್‌ ರಕ್ಷಣಾ ಪಡೆ

    ಟೆಲ್‌ ಅವಿವ್‌: ಇಸ್ರೇಲ್‌ ರಕ್ಷಣಾ ಪಡೆಗಳು (ಐಡಿಎಫ್‌) ರಾತ್ರೋರಾತ್ರಿ ನಡೆಸಿದ ವೈಮಾನಿಕ ದಾಳಿಯಲ್ಲಿ ಹಮಾಸ್‌ನ (Hamas Commander ವೆಸ್ಟರ್ನ್ ಖಾನ್ ಯೂನಿಸ್ ಬೆಟಾಲಿಯನ್‌ನ ಕಮಾಂಡರ್ ಮಾಧತ್ ಮುಬ್ಶರ್ ಎಂಬಾತನನ್ನು ಹತ್ಯೆ ಮಾಡಲಾಗಿದೆ.

    ಇಸ್ರೇಲ್ (Israel) ರಕ್ಷಣಾ ಪಡೆಗಳು ದೃಢಪಡಿಸಿದಂತೆ ಸತತ ಎರಡನೇ ರಾತ್ರಿ ಗಾಜಾದೊಳಗೆ ಉದ್ದೇಶಿತ ದಾಳಿಗಳನ್ನು ನಡೆಸಿವೆ. ಹಮಾಸ್ ವಿರುದ್ಧದ ಸಂಘರ್ಷದಲ್ಲಿ ಮುಂದಿನ ಹಂತದ ಸಿದ್ಧತೆಗಳನ್ನು ರಕ್ಷಣಾ ಪಡೆಗಳು ಮಾಡಿಕೊಳ್ಳುತ್ತಿವೆ. ಇದನ್ನೂ ಓದಿ:

    IDF ಕಳೆದ ದಿನದಲ್ಲಿ ಗಾಜಾ ಪಟ್ಟಿಯಲ್ಲಿ (Gaza) ಹಮಾಸ್‌ ಬಂಡುಕೋರರ 250 ಕ್ಕೂ ಹೆಚ್ಚು ಅಡಗುತಾಣಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ. ‘ಹಮಾಸ್‌ನ ವೆಸ್ಟರ್ನ್ ಖಾನ್ ಯೂನಿಸ್ ಬೆಟಾಲಿಯನ್ ಕಮಾಂಡರ್ ಮಧತ್ ಮುಬಾಶರ್ ಹತ್ಯೆ ಮಾಡಲಾಗಿದೆ. ಇದಲ್ಲದೆ, IDF 250 ಕ್ಕೂ ಹೆಚ್ಚು ಹಮಾಸ್ ಅಡಗುದಾಣಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ ಎಂದು ಸೋಷಿಯಲ್‌ ಮೀಡಿಯಾ ಎಕ್ಸ್‌ ಖಾತೆಯಲ್ಲಿ ಐಡಿಎಫ್‌ ಪೋಸ್ಟ್‌ ಹಾಕಿದೆ.

    ಹಮಾಸ್ ಸುರಂಗಗಳು, ಕಮಾಂಡ್ ಸೆಂಟರ್‌ಗಳು, ರಾಕೆಟ್ ಉಡಾವಣಾ ಸ್ಥಾನಗಳು ಮತ್ತು ಡಜನ್‌ಗಟ್ಟಲೇ ಕಾರ್ಯಕರ್ತರನ್ನು ಗುರಿಯಾಗಿಸಿ ದಾಳಿ ನಡೆಸಲಾಗುತ್ತಿದೆ. ಜೆನಿನ್ ನಿರಾಶ್ರಿತರ ಶಿಬಿರದಲ್ಲಿ ರಾತ್ರೋರಾತ್ರಿ ನಡೆದ ಘರ್ಷಣೆಯ ಸಂದರ್ಭದಲ್ಲಿ ಪ್ಯಾಲೆಸ್ತೀನಿಯನ್ ಇಸ್ಲಾಮಿಕ್ ಜಿಹಾದ್‌ನ ಜೆನಿನ್ ವಿಭಾಗದಲ್ಲಿ ಫೀಲ್ಡ್ ಕಮಾಂಡರ್ ಆಗಿದ್ದ ಐಸರ್ ಮೊಹಮ್ಮದ್ ಅಲ್-ಅಮೆರ್‌ನ ಹತ್ಯೆಯನ್ನು IDF ದೃಢಪಡಿಸಿದೆ.

    ತಮ್ಮ ಪಡೆಗಳ ಮೇಲೆ ಗುಂಡು ಹಾರಿಸುತ್ತಿದ್ದ ಮತ್ತು ಸ್ಫೋಟಕ ಸಾಧನಗಳನ್ನು ಎಸೆಯುವ ಗಲಭೆಕೋರರೊಂದಿಗೆ ವ್ಯವಹರಿಸುತ್ತಿರುವ ಪ್ಯಾಲೆಸ್ತೀನಿಯರ ಮೇಲೂ ಗುಂಡು ಹಾರಿಸಲಾಗಿದೆ ಎಂದು IDF ಸ್ಪಷ್ಟಪಡಿಸಿದೆ. ವೆಸ್ಟ್ ಬ್ಯಾಂಕ್‌ನಾದ್ಯಂತ ರಾತ್ರಿಯ ದಾಳಿಗಳಲ್ಲಿ, ಐಡಿಎಫ್ ಪಡೆಗಳು ಹಮಾಸ್ ಭಯೋತ್ಪಾದಕ ಗುಂಪಿನ 17 ಸದಸ್ಯರನ್ನು ಮತ್ತು 19 ಇತರ ವಾಂಟೆಡ್ ಪ್ಯಾಲೆಸ್ತೀನಿಯರನ್ನು ಬಂಧಿಸಿವೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪ್ಯಾಲೆಸ್ತೀನಿಯರಿಗೆ 2.5 ಕೋಟಿ ರೂ. ನೆರವು ಘೋಷಿಸಿದ ಮಲಾಲ

    ಪ್ಯಾಲೆಸ್ತೀನಿಯರಿಗೆ 2.5 ಕೋಟಿ ರೂ. ನೆರವು ಘೋಷಿಸಿದ ಮಲಾಲ

    ಟೆಲ್ ಅವಿವ್: ನೊಬೆಲ್ ಶಾಂತಿ ಪ್ರಶಸ್ತಿ ವಿಜೇತೆ ಮಲಾಲಾ ಯೂಸುಫ್ ಜಾಯ್ (Malala Yousafzai) ಅವರು ಪ್ಯಾಲೆಸ್ತೀನಿಯನ್ನರಿಗೆ (Palestine) ಸಹಾಯ ಮಾಡುವ ಮೂರು ದತ್ತಿಗಳಿಗೆ 3,00,000 ಡಾಲರ್ (ಸುಮಾರು 2.5 ಕೋಟಿ) ನೆರವು (Assistance) ನೀಡುವುದಾಗಿ ಘೋಷಿಸಿದ್ದಾರೆ.

    ಮಂಗಳವಾರ ಗಾಜಾದಲ್ಲಿ (Gaza) ಆಸ್ಪತ್ರೆಯೊಂದರ ಮೇಲೆ ನಡೆದ ಬಾಂಬ್ ದಾಳಿಯಲ್ಲಿ ಸುಮಾರು 500 ಜನರು ಸಾವನ್ನಪ್ಪಿದ ಘಟನೆಯನ್ನು ಕಂಡು ತಾನು ಗಾಬರಿಗೊಂಡಿದ್ದೇನೆ ಎಂದು ಯೂಸುಫ್ ಜಾಯ್ ಹೇಳಿದರು ಮತ್ತು ಸಾಮೂಹಿಕ ಶಿಕ್ಷೆ ಇದಕ್ಕೆ ಉತ್ತರವಲ್ಲ ಎಂದರು. ಇದನ್ನೂ ಓದಿ: ಓಮನ್‌ನ ಐತಿಹಾಸಿಕ ಶಿವ ದೇವಾಲಯಕ್ಕೆ ಕೇಂದ್ರ ಸಚಿವ ಮುರಳೀಧರನ್ ಭೇಟಿ

    ಗಾಜಾದ ಅಲ್-ಅಹ್ಲಿ ಆಸ್ಪತ್ರೆಯ ಮೇಲೆ ನಡೆದ ಬಾಂಬ್ ದಾಳಿಯನ್ನು ನೋಡಿ ನಾನು ಗಾಬರಿಗೊಂಡಿದ್ದೇನೆ ಮತ್ತು ಅದನ್ನು ನಿಸ್ಸಂದಿಗ್ಧವಾಗಿ ಖಂಡಿಸುತ್ತೇನೆ ಎಂದು ಯೂಸುಫ್ ಜಾಯ್ ವೀಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ. ಗಾಜಾಕ್ಕೆ ಮಾನವೀಯ ನೆರವನ್ನು ಅನುಮತಿಸಲು ಮತ್ತು ಕದನ ವಿರಾಮದ ಕರೆಯನ್ನು ಪುನರುಚ್ಚರಿಸಲು ನಾನು ಇಸ್ರೇಲಿ ಸರ್ಕಾರವನ್ನು ಒತ್ತಾಯಿಸುತ್ತೇನೆ. ಇದನ್ನೂ ಓದಿ: ಬೈಡನ್ ನಿರ್ಗಮನದ ಬಳಿಕ ಹಮಾಸ್ ದಾಳಿ ತೀವ್ರ – ಇಂದು ಇಸ್ರೇಲ್‌ಗೆ ರಿಷಿ ಸುನಾಕ್ ಭೇಟಿ

    ದಾಳಿಯಲ್ಲಿರುವ ಪ್ಯಾಲೆಸ್ತೀನಿಯನ್ ಜನರಿಗೆ ಸಹಾಯ ಮಾಡುವ ಮೂರು ದತ್ತಿಗಳಿಗೆ ನಾನು 3,00,000 ಡಾಲರ್ ಅನ್ನು ನಿರ್ದೇಶಿಸುತ್ತಿದ್ದೇನೆ. ನೊಬೆಲ್ ಪ್ರಶಸ್ತಿ ವಿಜೇತರು ತಕ್ಷಣದ ಕದನ ವಿರಾಮ ಮತ್ತು ಶಾಶ್ವತ ಶಾಂತಿಗಾಗಿ ಶ್ರಮಿಸಬೇಕು ಎಂದು ಸರ್ಕಾರಗಳಿಗೆ ಕರೆ ನೀಡಿದರು. ಇದನ್ನೂ ಓದಿ: ದೇಶ ತೊರೆಯಿರಿ – ಅಫ್ಘಾನ್‌ ಪ್ರಜೆಗಳಿಗೆ ಪಾಕ್‌ ದಿಢೀರ್‌ ಎಚ್ಚರಿಕೆ ನೀಡಿದ್ದು ಯಾಕೆ?

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಇಸ್ರೇಲ್‌ ಮೇಲೆ ಹಮಾಸ್‌ ಉಗ್ರರ ದಾಳಿ ಖಂಡಿಸಿದ ಮೊದಲ ಮುಸ್ಲಿಂ ರಾಷ್ಟ್ರ

    ಇಸ್ರೇಲ್‌ ಮೇಲೆ ಹಮಾಸ್‌ ಉಗ್ರರ ದಾಳಿ ಖಂಡಿಸಿದ ಮೊದಲ ಮುಸ್ಲಿಂ ರಾಷ್ಟ್ರ

    ಟೆಲ್‌ ಅವಿವ್‌: ಇಸ್ರೇಲಿಗಳ (Israel) ಮೇಲೆ ಹಮಾಸ್‌ ಬಂಡುಕೋರರು (Hamas) ನಡೆಸುತ್ತಿರುವ ದಾಳಿಯನ್ನು ಯುಎಇ (ಸಂಯುಕ್ತ ಅರಬ್‌ ಒಕ್ಕೂಟ) ಖಂಡಿಸಿದೆ. ಹಮಾಸ್‌ ದಾಳಿಯನ್ನು ಖಂಡಿಸಿದ ಮೊದಲ ಮುಸ್ಲಿಂ ರಾಷ್ಟ್ರವಾಗಿದೆ.

    ಜನಸಂಖ್ಯಾ ಕೇಂದ್ರಗಳ ಮೇಲೆ ಸಾವಿರಾರು ರಾಕೆಟ್‌ಗಳ ಹಾರಾಟ ಸೇರಿದಂತೆ ಗಾಜಾ ಪಟ್ಟಿಯ ಸಮೀಪವಿರುವ ಇಸ್ರೇಲಿ ಪಟ್ಟಣಗಳು ಮತ್ತು ಹಳ್ಳಿಗಳ ಮೇಲೆ ಹಮಾಸ್‌ನ ದಾಳಿಗಳು ಗಂಭೀರ ಸ್ವರೂಪದ್ದಾಗಿವೆ. ಇಸ್ರೇಲಿ ನಾಗರಿಕರನ್ನು ಅವರ ಮನೆಗಳಿಂದ ಒತ್ತೆಯಾಳುಗಳಾಗಿ ಅಪಹರಿಸಿರುವುದು ಕಳವಳಕಾರಿಯಾಗಿದೆ. ಎರಡೂ ಕಡೆಯ ನಾಗರಿಕರು ಅಂತಾರಾಷ್ಟ್ರೀಯ ಮಾನವೀಯ ಕಾನೂನಿನ ಅಡಿಯಲ್ಲಿ ಸಂಪೂರ್ಣ ರಕ್ಷಣೆ ಹೊಂದಿರಬೇಕು. ಎಂದಿಗೂ ಯಾರೂ ಸಂಘರ್ಷಕ್ಕೆ ಗುರಿಯಾಗಬಾರದು ಎಂದು ದಾಳಿಗೆ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿ ಯುಎಇ ವಿದೇಶಾಂಗ ಸಚಿವಾಲಯ ಖಂಡನೆ ವ್ಯಕ್ತಪಡಿಸಿದೆ. ಇದನ್ನೂ ಓದಿ: ಯುವತಿ ಅಪಹರಿಸಿ ಒತ್ತೆಯಾಳಾಗಿರಿಸಿಕೊಂಡ ಹಮಾಸ್ ಉಗ್ರರು

    ದಾಳಿಯ ಬಲಿಪಶುಗಳ ಕುಟುಂಬಗಳಿಗೆ ಯುಎಇ ತನ್ನ ಸಂತಾಪ ವ್ಯಕ್ತಪಡಿಸುತ್ತದೆ. ಎರಡೂ ಕಡೆಯ ಈ ಮುಖಾಮುಖಿಯನ್ನು ತಡೆಗಟ್ಟಲು ರಾಜತಾಂತ್ರಿಕ ಪ್ರಯತ್ನಗಳ ಅಗತ್ಯವಿದೆ. ಹಿಂಸಾಚಾರದಿಂದ ಆಗಿರುವ ಜೀವಹಾನಿಗೆ ತೀವ್ರವಾಗಿ ದುಃಖಿಸುತ್ತದೆ. ನಾಗರಿಕ ಜೀವನ ಮತ್ತು ಸೌಲಭ್ಯಗಳ ಮೇಲೆ ಪರಿಣಾಮ ಬೀರುತ್ತಿರುವ ಹಿಂಸಾಚಾರ ಕೊನೆಗಾಣಿಸಬೇಕು ಎಂದು ಎರಡೂ ಕಡೆಯವರಿಗೆ ಯುಎಇ ಸಲಹೆ ನೀಡಿದೆ.

    ಎಲ್ಲಾ ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ಪಾಲುದಾರರೊಂದಿಗೆ ಯುಎಇ ನಿಕಟ ಸಂಪರ್ಕದಲ್ಲಿದೆ. ಪರಿಸ್ಥಿತಿಯನ್ನು ತ್ವರಿತವಾಗಿ ತಗ್ಗಿಸಿ ಶಾಂತಿ ಪುನಃಸ್ಥಾಪಿಸಲು, ಪ್ಯಾಲೆಸ್ಟೀನಿಯನ್ನರು ಮತ್ತು ಇಸ್ರೇಲಿಗಳು ಶಾಂತಿ ಮಾತುಕತೆಗೆ ಮರಳಬೇಕು. ಪ್ರತಿಯೊಬ್ಬರೂ ಶಾಂತಿ ಮತ್ತು ಘನತೆಯಿಂದ ಬದುಕಲು ಅರ್ಹರು ಎಂದು ಒತ್ತಿ ಹೇಳಿದೆ. ಇದನ್ನೂ ಓದಿ: ಯುದ್ಧ ನಾವು ಆರಂಭಿಸಿಲ್ಲ ಆದ್ರೆ ಮುಗಿಸುತ್ತೇವೆ – ಇಸ್ರೇಲ್‌ ಪ್ರಧಾನಿ ಬೆಂಜಮಿನ್ ನೆತನ್ಯಾಹು ಗುಡುಗು

    ಅಕ್ಟೋಬರ್ 7 ರಂದು ಹಮಾಸ್ ಬಂಡುಕೋರರು ಇಸ್ರೇಲ್ ಮೇಲೆ ಹಠಾತ್‌ ದಾಳಿ ನಡೆಸಿದರು. ದೇಶದ ದಕ್ಷಿಣ ಮತ್ತು ಮಧ್ಯ ಭಾಗಗಳಿಗೆ ರಾಕೆಟ್‌ಗಳ ಸುರಿಮಳೆ ಸುರಿಸಿ 700 ಕ್ಕೂ ಹೆಚ್ಚು ಜನರನ್ನು ಹತ್ಯೆ ಮಾಡಲಾಯಿತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪ್ಯಾಲೆಸ್ತೀನ್‌ನಲ್ಲಿರುವ ಭಯೋತ್ಪಾದಕರಿಗೆ ಕಾಂಗ್ರೆಸ್‌ ಬೆಂಬಲ: ಬೊಮ್ಮಾಯಿ ಆರೋಪ

    ಪ್ಯಾಲೆಸ್ತೀನ್‌ನಲ್ಲಿರುವ ಭಯೋತ್ಪಾದಕರಿಗೆ ಕಾಂಗ್ರೆಸ್‌ ಬೆಂಬಲ: ಬೊಮ್ಮಾಯಿ ಆರೋಪ

    ಹುಬ್ಬಳ್ಳಿ: ಪ್ಯಾಲೆಸ್ತೀನ್‌ನಲ್ಲಿರುವ ಭಯೋತ್ಪಾದಕರಿಗೆ (Paletine Terrorists) ಕಾಂಗ್ರೆಸ್ ಬೆಂಬಲ ನೀಡುತ್ತಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಎಲ್ಲಾ ಭಯೋತ್ಪಾದಕರು ಒಂದೇ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಕಿಡಿಕಾರಿದರು.

    ಹುಬ್ಬಳ್ಳಿಯಲ್ಲಿ (Hubballi) ಮಾತನಾಡಿದ ಬೊಮ್ಮಾಯಿ ಅವರು, ಅಮಾಯಕರು, ಹೆಣ್ಣುಮಕ್ಕಳು, ಮಕ್ಕಳ ಮೇಲೆ ಬಾಂಬ್ ದಾಳಿ ಮಾಡಲಾಗುತ್ತಿದೆ. ಇದನ್ನು ಯಾವುದೇ ಸಮಾಜ ಹಾಗೂ ಸಮುದಾಯ ಒಪ್ಪಲು ಸಾಧ್ಯವಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಇಸ್ರೇಲ್-ಪ್ಯಾಲೆಸ್ತೀನ್ ಯುದ್ಧ; 60 ಕ್ಕೂ ಹೆಚ್ಚು ವಿದೇಶಿ ಪ್ರಜೆಗಳು ಸಾವು – ಯಾವ ದೇಶದ ಎಷ್ಟು ಮಂದಿ?

    ಇದೊಂದು ಅಂತಾರಾಷ್ಟ್ರೀಯ ವಿಚಾರ. ಇಸ್ರೇಲ್ ಹಾಗೂ ಪ್ಯಾಲೆಸ್ತೀನ್ ನಡುವೆ ಬಹಳ ವರ್ಷದ ಸಂಘರ್ಷ ಇದೆ.‌ ಪ್ಯಾಲೆಸ್ತೀನ್ ಹಮಾಸ್ ಉಗ್ರವಾದಿಗಳು ಪ್ಯಾಲೆಸ್ತೀನ್ ನಾಗರಿಕರಲ್ಲ. ಅದನ್ನು ಕಾಂಗ್ರೆಸ್ ಮರೆಮಾಚಲು ಪ್ರಯತ್ನಿಸುತ್ತಿದೆ. ಕಾಂಗ್ರೆಸ್ (Congress) ಮತ್ತೆ ತುಷ್ಟೀಕರಣದ ರಾಜಕಾರಣಕ್ಕೆ ಇಳಿಯುತ್ತಿದೆ. ಇದು ದೊಡ್ಡ ದುರಂತ ಎಂದು ಅಸಮಾಧಾನ ಹೊರಹಾಕಿದರು.

    ಹಿಂದಿನ ಕಾಂಗ್ರೆಸ್ ಸರ್ಕಾರ ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಮಾಡಬಹುದಿತ್ತು. ಚುನಾವಣೆ ಬಂತು ಅಂತ ಆ ಸಮಯದಲ್ಲಿ ಮಾಡಲಿಲ್ಲ. ಈಗ ಈ ಬಗ್ಗೆ ಮಾತನಾಡುತ್ತಾರೆ. ಅದು ಜಾತಿಗಣತಿ ಹೌದೋ ಅಲ್ಲೋ ಅನ್ನೋದರ ಬಗ್ಗೆ ಸ್ಪಷ್ಟತೆ ಇಲ್ಲ. ಈ ಬಗ್ಗೆ ಸ್ಪಷ್ಟತೆಯನ್ನು ನೀಡಬೇಕು ಎಂದರು. ಇದನ್ನೂ ಓದಿ: ಲಂಡನ್‌ನಲ್ಲಿ ಇಸ್ರೇಲ್‌, ಪ್ಯಾಲಿಸ್ತೀನ್‌ ಪರ ಪ್ರತಿಭಟನಾಕಾರರ ನಡುವೆ ಘರ್ಷಣೆ

    160 ಕೋಟಿ ಖರ್ಚು ಮಾಡಿ ಜಾತಿ ಸಮೀಕ್ಷೆ ಮಾಡಿದ್ದು, ಅದು ಯಾವ ಜಾತಿ ಸಮೀಕ್ಷೆ ಎನ್ನುವ ಸ್ಪಷ್ಟತೆ ಇಲ್ಲ. ಅದರ ಬಗ್ಗೆ ಸ್ಪಷ್ಟತೆಯನ್ನು ಸರ್ಕಾರ ಮೊದಲು ಕೊಡಲಿ. ವರದಿ ಆಧಾರದ ಮೇಲೆ ಸಾಧಕ-ಬಾಧಕಗಳ ಕುರಿತು ಚರ್ಚಿಸೋಣ ಅಂತ ಕಾಂಗ್ರೆಸ್ಸಿನ ನಾಯಕರು ಹೇಳಿದ್ದಾರೆ. ಈ ಸಮೀಕ್ಷೆಯ ಫಲಶ್ರುತಿ ಸಮಾಜದ ಮೇಲೆ ಯಾವ ಪರಿಣಾಮ ಬೀರುತ್ತೆ? ಅದರ ಫಲಿತಾಂಶ ಏನಾಗುತ್ತೆ? ಕೆಲವರ್ಗದಲ್ಲಿ ಅಸಮಾಧಾನ ಉಂಟಾಗುತ್ತಾ? ಈ ಬಗ್ಗೆ ಮೊದಲು ಚರ್ಚೆಯಾಗಲಿ ಎಂದು ತಾಕೀತು ಮಾಡಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಇಸ್ರೇಲ್-ಪ್ಯಾಲೆಸ್ತೀನ್ ಯುದ್ಧ; 60 ಕ್ಕೂ ಹೆಚ್ಚು ವಿದೇಶಿ ಪ್ರಜೆಗಳು ಸಾವು – ಯಾವ ದೇಶದ ಎಷ್ಟು ಮಂದಿ?

    ಇಸ್ರೇಲ್-ಪ್ಯಾಲೆಸ್ತೀನ್ ಯುದ್ಧ; 60 ಕ್ಕೂ ಹೆಚ್ಚು ವಿದೇಶಿ ಪ್ರಜೆಗಳು ಸಾವು – ಯಾವ ದೇಶದ ಎಷ್ಟು ಮಂದಿ?

    ಟೆಲ್‌ ಅವಿವ್‌: ಇಸ್ರೇಲ್‌-ಪ್ಯಾಲೆಸ್ತೀನ್‌ (Israel-Palestine) ನಡುವಿನ ಯುದ್ಧದಲ್ಲಿ 60 ಕ್ಕೂ ಹೆಚ್ಚು ಪ್ರಜೆಗಳು ಸಾವನ್ನಪ್ಪಿದ್ದಾರೆ. ಯಾವ ದೇಶದ ಎಷ್ಟು ಮಂದಿ ಮೃತಪಟ್ಟಿದ್ದಾರೆ ಮತ್ತು ಕಾಣೆಯಾಗಿದ್ದಾರೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

    ಯುದ್ಧದಲ್ಲಿ ಈವರೆಗೆ ಅಮೇರಿಕಾದ 9 ಮಂದಿ ಸಾವಿಗೀಡಾಗಿದ್ದಾರೆ. ಕೆನಡಾ – 1 (ಇಬ್ಬರು ಕಾಣೆ), ಗ್ರೇಟ್ ಬ್ರಿಟನ್ – 10 ಕ್ಕೂ ಹೆಚ್ಚು ಮಂದಿ ಸಾವು ಅಥವಾ ಕಾಣೆಯಾಗಿದ್ದಾರೆ. ಫ್ರಾನ್ಸ್ – 1 ಸಾವು (ಹಲವಾರು ಕಾಣೆ), ಥೈಲ್ಯಾಂಡ್ – 12 ಸಾವು (11 ಕಾಣೆ), ನೇಪಾಳ – 10 ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಲಂಡನ್‌ನಲ್ಲಿ ಇಸ್ರೇಲ್‌, ಪ್ಯಾಲಿಸ್ತೀನ್‌ ಪರ ಪ್ರತಿಭಟನಾಕಾರರ ನಡುವೆ ಘರ್ಷಣೆ

    ಜರ್ಮನಿ – ದೃಢೀಕರಿಸದ/ಕಾಣೆಯಾದ ಸಾವಿನ ಸಂಖ್ಯೆ, ರಷ್ಯಾ – 1, ಕಾಂಬೋಡಿಯಾ – 1, ಚೀನಾ – ಸಾವು/ಹಾನಿಗಳ ಸಂಖ್ಯೆಯನ್ನು ದೃಢೀಕರಿಸಲಾಗಿಲ್ಲ. ಬ್ರೆಜಿಲ್ – 3 ಮಂದಿ ಗಾಯಗೊಂಡಿದ್ದಾರೆ. ಪರಾಗ್ವೆ – 2 ಸಾವು ಅಥವಾ ಕಾಣೆ, ಉಕ್ರೇನ್ – ಇಬ್ಬರು ಮೃತಪಟ್ಟಿದ್ದಾರೆ.

    ಮೆಕ್ಸಿಕೋದ ಇಬ್ಬರು ಕೈದಿಗಳು, ಐರ್ಲೆಂಡ್‌ನ ಒಬ್ಬರು ಗಾಯಗೊಂಡಿದ್ದಾರೆ. ತಾಂಜಾನಿಯಾದ ಇಬ್ಬರು ಗಾಯಗೊಂಡಿದ್ದಾರೆ. ಇದನ್ನೂ ಓದಿ: ಗಾಜಾ ಸೀಜ್‌ಗೆ ಇಸ್ರೇಲ್ ಆದೇಶದ ಬೆನ್ನಲ್ಲೇ ಒತ್ತೆಯಾಳುಗಳನ್ನು ಕೊಲ್ಲುವ ಬೆದರಿಕೆ ಹಾಕಿದ ಹಮಾಸ್

    ಅಕ್ಟೋಬರ್ 7 ರಂದು ಹಮಾಸ್ (Hamas) ಬಂಡುಕೋರರು ಇಸ್ರೇಲ್ ಮೇಲೆ ಹಠಾತ್‌ ದಾಳಿ ನಡೆಸಿದರು. ದೇಶದ ದಕ್ಷಿಣ ಮತ್ತು ಮಧ್ಯ ಭಾಗಗಳಿಗೆ ರಾಕೆಟ್‌ಗಳ ಸುರಿಮಳೆ ಸುರಿಸಿ 700 ಕ್ಕೂ ಹೆಚ್ಚು ಜನರನ್ನು ಹತ್ಯೆ ಮಾಡಲಾಯಿತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಲಂಡನ್‌ನಲ್ಲಿ ಇಸ್ರೇಲ್‌, ಪ್ಯಾಲೆಸ್ತೀನ್‌ ಪರ ಪ್ರತಿಭಟನಾಕಾರರ ನಡುವೆ ಘರ್ಷಣೆ

    ಲಂಡನ್‌ನಲ್ಲಿ ಇಸ್ರೇಲ್‌, ಪ್ಯಾಲೆಸ್ತೀನ್‌ ಪರ ಪ್ರತಿಭಟನಾಕಾರರ ನಡುವೆ ಘರ್ಷಣೆ

    – ‘ಇಸ್ರೇಲ್ ಭಯೋತ್ಪಾದಕ ರಾಷ್ಟ್ರ.. ಅಲ್ಲಾಹು ಅಕ್ಬರ್‌’ ಎಂದು ಕೂಗಿದ ಪ್ಯಾಲಿಸ್ತೀನ್‌ ಪರವಾದಿಗಳು

    ಲಂಡನ್‌: ಇಸ್ರೇಲ್-ಹಮಾಸ್ (Israel-Hamas Clash) ಸಂಘರ್ಷದ ವಿರುದ್ಧ ಪ್ರತಿಭಟನಾ ರ‍್ಯಾಲಿ ನಡೆಸುತ್ತಿದ್ದ ಸಂದರ್ಭದಲ್ಲಿ ಪ್ಯಾಲೆಸ್ತೀನ್ ಮತ್ತು ಇಸ್ರೇಲಿ ಪರ ಪ್ರತಿಭಟನಾಕಾರರ ಗುಂಪುಗಳು ಲಂಡನ್‌ನ ಹೈಸ್ಟ್ರೀಟ್ ಕೆನ್ಸಿಂಗ್ಟನ್ ಟ್ಯೂಬ್ ಸ್ಟೇಷನ್‌ನಲ್ಲಿ ಪರಸ್ಪರ ಘರ್ಷಣೆಗೆ ಇಳಿದ ಘಟನೆ ನಡೆದಿದೆ.

    ಇಸ್ರೇಲ್‌ನಲ್ಲಿ (Israel) ಯುದ್ಧ ನಡೆಯುತ್ತಿದ್ದರೆ, ಇತ್ತ ಲಂಡನ್‌ನಲ್ಲಿ (London) ಎರಡೂ ಕಡೆಯ ಜನರು ಘರ್ಷಣೆಗಿಳಿದಿದ್ದರು. ಇಸ್ರೇಲಿ-ಪ್ಯಾಲೇಸ್ಟಿನಿಯನ್ ಪ್ರತಿಭಟನಾಕಾರರ ನಡುವಿನ ಉದ್ವಿಗ್ನತೆಯನ್ನು ತಡೆಯಲು ಪೊಲೀಸ್ ಅಧಿಕಾರಿಗಳು ಹರಸಾಹಸ ಪಟ್ಟರು. ಇದನ್ನೂ ಓದಿ: ಗಾಜಾ ಸೀಜ್‌ಗೆ ಇಸ್ರೇಲ್ ಆದೇಶದ ಬೆನ್ನಲ್ಲೇ ಒತ್ತೆಯಾಳುಗಳನ್ನು ಕೊಲ್ಲುವ ಬೆದರಿಕೆ ಹಾಕಿದ ಹಮಾಸ್

    ಇಸ್ರೇಲಿ ರಾಯಭಾರ ಕಚೇರಿಯ ಹೊರಗೆ ನಡೆಯುತ್ತಿರುವ ಪ್ಯಾಲೆಸ್ತೀನ್ ಪರವಾದ ರ‍್ಯಾಲಿ ವೇಳೆ ಮುಖಾಮುಖಿಯಾದ ಪ್ರತಿಭಟನಾಕಾರರನ್ನು ಪೊಲೀಸ್ ಅಧಿಕಾರಿಗಳು ಪ್ರಯತ್ನಿಸುತ್ತಿರುವ ದೃಶ್ಯಗಳ ವೀಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ.

    ಸೋಮವಾರ ಸಂಜೆ ಸುಮಾರು 6 ಗಂಟೆ ಸುಮಾರಿಗೆ ಈ ಘಟನೆ ನಡೆಯಿತು. ಇಸ್ರೇಲಿ ರಾಯಭಾರ ಕಚೇರಿಯ ಮುಂದೆ ಪ್ಯಾಲೆಸ್ತೀನ್ ಪರ ಪ್ರತಿಭಟನೆಗೆ ಸಾವಿರಾರು ಜನರು ಜಮಾಯಿಸಿದರು. ಕೆಲವು ಪ್ರತಿಭಟನಾಕಾರರು ಧ್ವಜಗಳನ್ನು ಹಿಡಿದು ಘೋಷಣೆ ಕೂಗಿದರು. ‘ಇಸ್ರೇಲ್ ಭಯೋತ್ಪಾದಕ ರಾಷ್ಟ್ರ’ ಹಾಗೂ ‘ಅಲ್ಲಾಹು ಅಕ್ಬರ್‌’ ಎಂದು ಪ್ರತಿಭಟನಾಕಾರರು ಘೋಷಣೆ ಕೂಗಿದರು. ಕೆಲವರು ರಾಯಭಾರಿ ಕಚೇರಿಯತ್ತ ಪಟಾಕಿ ಸಿಡಿಸಿದರು. ಇದನ್ನೂ ಓದಿ: ಹಮಾಸ್ ವಿರುದ್ಧ ಫೀಲ್ಡ್‌ಗಿಳಿದ ಇಸ್ರೇಲ್‍ನ ಮಾಜಿ ಪ್ರಧಾನಿ

    ಅಕ್ಟೋಬರ್ 7 ರಂದು ಹಮಾಸ್ ಬಂಡುಕೋರರು ಇಸ್ರೇಲ್ ಮೇಲೆ ಹಠಾತ್‌ ದಾಳಿ ನಡೆಸಿದರು. ದೇಶದ ದಕ್ಷಿಣ ಮತ್ತು ಮಧ್ಯ ಭಾಗಗಳಿಗೆ ರಾಕೆಟ್‌ಗಳ ಸುರಿಮಳೆ ಸುರಿಸಿ 700 ಕ್ಕೂ ಹೆಚ್ಚು ಜನರನ್ನು ಹತ್ಯೆ ಮಾಡಲಾಯಿತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಯುದ್ಧಪೀಡಿತ ಇಸ್ರೇಲ್‌ನಲ್ಲಿ ಸಿಲುಕಿರೋ 20 ಕ್ಕೂ ಹೆಚ್ಚು ಕನ್ನಡಿಗರು

    ಯುದ್ಧಪೀಡಿತ ಇಸ್ರೇಲ್‌ನಲ್ಲಿ ಸಿಲುಕಿರೋ 20 ಕ್ಕೂ ಹೆಚ್ಚು ಕನ್ನಡಿಗರು

    ಹಾಸನ: ಯುದ್ಧಪೀಡಿತ ಇಸ್ರೇಲ್‌ನಲ್ಲಿ (Israel) ಹಾಸನ (Hassan) ಜಿಲ್ಲೆಯ 20 ಕ್ಕೂ ಹೆಚ್ಚು ಕನ್ನಡಿಗರು ಸಿಲುಕಿಕೊಂಡಿದ್ದಾರೆ. ಸಕಲೇಶಪುರ ತಾಲ್ಲೂಕಿನ ನವೀನ್‌ ಕುಟುಂಬದವರು, ನಾವು ಸುರಕ್ಷಿತವಾಗಿದ್ದೇವೆ ಎಂಬ ಸಂದೇಶವನ್ನು ತಮ್ಮ ಕುಟುಂಬಸ್ಥರಿಗೆ ರವಾನಿಸಿದ್ದಾರೆ.

    ಚನ್ನರಾಯಪಟ್ಟಣ ತಾಲ್ಲೂಕಿನ ಡಿಂಕ, ಸಕಲೇಶಪುರ ತಾಲ್ಲೂಕಿನ ಲಕ್ಕುಂದ, ಅಂಕಿಹಳ್ಳಿ, ಬೆಳಗೊಡು ಗ್ರಾಮದವರು ಇಸ್ರೇಲ್‌ನಲ್ಲಿ ನೆಲೆಸಿದ್ದಾರೆ. ಜಾನ್ಸನ್, ನವೀನ್, ಡೀನಾ ಡಿಸೋಜಾ, ಎಲಿಜಾ ಪಿಂಟೋ, ಅಂತೋನಿ ಡಿಸೋಜಾ ಇವರು ಚನ್ನರಾಯಪಟ್ಟಣ ಮೂಲದವರು. ಕೃಷ್ಣೇಗೌಡ ಅವರು ಸಕಲೇಶಪುರ ತಾಲ್ಲೂಕಿನವರು. ಇದನ್ನೂ ಓದಿ: ಕಳೆದ 14 ವರ್ಷಗಳಿಂದ ಇದ್ದು, ಭಯ ಇಲ್ಲ: ಇಸ್ರೇಲಿನಲ್ಲಿದ್ದ ಕನ್ನಡಿಗನ ಮಾತು

    ಇವರೆಲ್ಲ ಇಸ್ರೇಲ್‌ನಲ್ಲಿ ನರ್ಸಿಂಗ್ ಹಾಗೂ ಇತರೆ ಉದ್ಯೋಗ ಮಾಡಿಕೊಂಡಿದ್ದಾರೆ. ಜೆರುಸಲೇಮ್, ತಲ್ಹಿವಿಯಲ್ಲಿ ನೆಲೆಸಿದ್ದಾರೆ. ಚನ್ನರಾಯಪಟ್ಟಣ ತಾಲ್ಲೂಕಿನ ಡಿಂಕ ಗ್ರಾಮದ ಕೃಷ್ಣೇಗೌಡ ಸುಮಾರು 20 ವರ್ಷಗಳಿಂದ ಇಸ್ರೇಲ್‌ನಲ್ಲಿ ನೆಲೆಸಿದ್ದಾರೆ. ಹೋಟೆಲ್‌ನಲ್ಲಿ ಕೆಲಸ ಮಾಡಿಕೊಂಡಿದ್ದಾರೆ.

    ತನ್ನ ಸಹೋದರ ಮಹದೇವ ಅವರ ಜೊತೆ ನಿನ್ನೆ ಫೋನ್‌ನಲ್ಲಿ ಕೃಷ್ಣೇಗೌಡ ಮಾತನಾಡಿದ್ದಾರೆ. ಯುದ್ಧ ನಡೆಯುತ್ತಿದೆ, ರಾಕೆಟ್‌ಗಳ ದಾಳಿ ಮಾಡುತ್ತಿರುವುದು ಕಾಣುತ್ತಿದೆ. ನಾನು ಸುರಕ್ಷಿತವಾಗಿದ್ದೇನೆ. ಒಂದು ವಾರ ಕಾಯುತ್ತೇನೆ ಎಂದು ಕೃಷ್ಣೇಗೌಡ ತಿಳಿಸಿದ್ದಾರೆ. ಇವರು ಆಗಾಗ್ಗೆ ಹುಟ್ಟೂರು ಡಿಂಕ ಗ್ರಾಮಕ್ಕೆ ಬಂದು ಹೋಗುತ್ತಿದ್ದರು. ಇವರ ಪೋಷಕರು ಡಿಂಕ ಗ್ರಾಮದಲ್ಲಿದ್ದಾರೆ. ಇದನ್ನೂ ಓದಿ: ಇಸ್ರೇಲ್‌-ಹಮಾಸ್ ಉಗ್ರರ ನಡುವೆ ವಾರ್‌; ತೈಲ ಬೆಲೆ ಏರಿಕೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಇಸ್ರೇಲ್‌-ಹಮಾಸ್ ಉಗ್ರರ ನಡುವೆ ವಾರ್‌; ತೈಲ ಬೆಲೆ ಏರಿಕೆ

    ಇಸ್ರೇಲ್‌-ಹಮಾಸ್ ಉಗ್ರರ ನಡುವೆ ವಾರ್‌; ತೈಲ ಬೆಲೆ ಏರಿಕೆ

    ಟೆಲ್‌ ಅವಿವ್‌: ಹಮಾಸ್ (Hamas) ಬಂಡುಕೋರರು ಮತ್ತು ಇಸ್ರೇಲ್‌ (Israel) ನಡುವಿನ ಮಿಲಿಟರಿ ಘರ್ಷಣೆಗಳು ಮಧ್ಯಪ್ರಾಚ್ಯದಾದ್ಯಂತ ರಾಜಕೀಯ ಅನಿಶ್ಚಿತತೆ ಸೃಷ್ಟಿಸಿದೆ. ಉತ್ಪನ್ನಗಳ ಸರಬರಾಜಿನಲ್ಲಿ ಸಮಸ್ಯೆ ಎದುರಾಗಿದ್ದು, ತೈಲ ಬೆಲೆಯಲ್ಲಿ (Oil Price) ಹೆಚ್ಚಳವಾಗಿದೆ.

    ಇಸ್ರೇಲ್ ಮತ್ತು ಗಾಜಾದಲ್ಲಿನ ಪರಿಸ್ಥಿತಿಯು ಮಧ್ಯಪ್ರಾಚ್ಯದ ಉತ್ಪಾದನೆಗಳಿಗೆ ಅಡ್ಡಿಪಡಿಸಿದೆ. ಹೀಗಾಗಿ ತೈಲ ಬೆಲೆಗಳು ಸೋಮವಾರ 4% ರಷ್ಟು ಜಿಗಿತ ಕಂಡಿದೆ. ತೈಲ ಬೆಲೆಯು ಬ್ಯಾರಲ್‌ಗೆ 249.67 ರೂ. ಏರಿಕೆಯಾಗಿದೆ. ಇದನ್ನೂ ಓದಿ: ಇಸ್ರೇಲ್-ಹಮಾಸ್ ಭೀಕರ ಸಂಘರ್ಷ – 1,100 ಸಾವು, ಸಂಗೀತ ಉತ್ಸವದಲ್ಲಿ 260 ಶವ ಪತ್ತೆ

    US ತೈಲದ ಮಾನದಂಡವಾದ ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೇಟ್ (WTI), ಒಂದು ಬ್ಯಾರೆಲ್‌ಗೆ 86 ಡಾಲರ್‌ ಅಂದರೆ 7,157 ರೂ. ಗಿಂತ ಹೆಚ್ಚಾಗಿದೆ. ಏಷ್ಯಾದ ಆರಂಭಿಕ ವಹಿವಾಟಿನಲ್ಲಿ ಬ್ರೆಂಟ್ ಕಚ್ಚಾ ತೈಲದ ಬೆಲೆ ಕೂಡ ಏರಿತು.

    ಇಸ್ರೇಲ್ ಮತ್ತು ಪ್ಯಾಲೇಸ್ಟಿನಿಯನ್ ಪ್ರದೇಶಗಳು ತೈಲ ಉತ್ಪಾದಕರಲ್ಲ. ಆದರೆ ಮಧ್ಯಪ್ರಾಚ್ಯ ಪ್ರದೇಶವು ಜಾಗತಿಕ ಪೂರೈಕೆಯ ಸುಮಾರು ಮೂರನೇ ಒಂದು ಭಾಗವನ್ನು ಹೊಂದಿದೆ. ಇರಾನ್ ಮತ್ತು ಸೌದಿ ಅರೇಬಿಯಾದಂತಹ ಹತ್ತಿರದ ಪ್ರಮುಖ ತೈಲ ಉತ್ಪಾದಕ ರಾಷ್ಟ್ರಗಳಿಗೆ ಯುದ್ಧದ ಪರಿಣಾಮ ತಟ್ಟಲಿದ್ದು, ತೈಲದ ಮೇಲಿನ ದರ ಹೆಚ್ಚಾಗಿದೆ. ಇದನ್ನೂ ಓದಿ: ಇಸ್ರೇಲ್ ಮೇಲೆ ದಾಳಿ – ಹಮಾಸ್ ಉಗ್ರರ ಅಟ್ಟಹಾಸಕ್ಕೆ 1 ಸಾವಿರ ಮಂದಿ ಬಲಿ

    ಗಲ್ಫ್ ಪ್ರದೇಶದಲ್ಲಿನ ಪ್ರಮುಖ ತೈಲ ರಫ್ತುದಾರರಿಗೆ ಹಾರ್ಮುಜ್ ಜಲಸಂಧಿಯು ನಿರ್ಣಾಯಕವಾಗಿದೆ. ಅವರ ಆರ್ಥಿಕತೆಯು ತೈಲ ಮತ್ತು ಅನಿಲ ಉತ್ಪಾದನೆ ಕೇಂದ್ರೀಕರಿಸಲ್ಪಟ್ಟಿದೆ. ರಷ್ಯಾ-ಉಕ್ರೇನ್‌ ಯುದ್ಧದಲ್ಲೂ ತೈಲ ಬೆಲೆ ಏರಿಕೆಯಾಗಿತ್ತು. 2022 ರ ಫೆಬ್ರವರಿಯಲ್ಲಿ ಉಕ್ರೇನ್ ಮೇಲೆ ರಷ್ಯಾ ಆಕ್ರಮಣದ ನಂತರ ತೈಲ ಬೆಲೆಗಳು ಗಗನಕ್ಕೇರಿತ್ತು. ಕಳೆದ ವರ್ಷ ಜೂನ್‌ನಲ್ಲಿ ಬ್ಯಾರೆಲ್‌ಗೆ 9,988 ರೂ.ಗೆ ತಲುಪಿತ್ತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಇಸ್ರೇಲ್ ಮೇಲೆ ಹಮಾಸ್ ಉಗ್ರರ ದಾಳಿ – 300ಕ್ಕೂ ಹೆಚ್ಚು ಜನ ಸಾವು

    ಇಸ್ರೇಲ್ ಮೇಲೆ ಹಮಾಸ್ ಉಗ್ರರ ದಾಳಿ – 300ಕ್ಕೂ ಹೆಚ್ಚು ಜನ ಸಾವು

    ಟೆಲ್ ಅವಿವ್: ಇಸ್ರೇಲ್ (Israel) ಮೇಲೆ ಹಮಾಸ್ ಉಗ್ರರು ನಡೆಸಿದ ದಾಳಿಯಲ್ಲಿ (Hamas Attack) 300ಕ್ಕೂ ಹೆಚ್ಚು ಜನ ಸಾವಿಗೀಡಾಗಿದ್ದಾರೆ. ಇಸ್ರೇಲ್ ಸೇನೆ ನಡೆಸಿದ ಪ್ರತಿ ದಾಳಿಯಲ್ಲಿ 230ಕ್ಕೂ ಹೆಚ್ಚು ಜನ ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ.

    ಉಗ್ರರ ದಾಳಿಯ ಬೆನ್ನಲ್ಲೇ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕರಾಳ ದಿನ ಎಂದು ಘೋಷಿಸಿದ್ದಾರೆ. ಬಳಿಕ ಉಗ್ರರ ಮೇಲೆ ಯುದ್ಧ ಘೋಷಿಸಲಾಗಿದ್ದು, ದೇಶದಲ್ಲಿ ತರ್ತು ಪರಿಸ್ಥಿತಿ ಜಾರಿ ಮಾಡಲಾಗಿದೆ. ಅಲ್ಲದೇ ಉಗ್ರರ ವಿರುದ್ಧ ಪ್ರತಿಕಾರ ತೀರಿಸಿಕೊಳ್ಳುವುದಾಗಿ ಅವರು ಹೇಳಿದ್ದಾರೆ. ಇದನ್ನೂ ಓದಿ: ಇಸ್ರೇಲ್, ಪ್ಯಾಲೆಸ್ಟೈನ್‌ ಮಧ್ಯೆ ಕಾದಾಟ ಯಾಕೆ? 6 ದಿನ ನಡೆದ ಯುದ್ಧದಲ್ಲಿ ಏನಾಯ್ತು? – ಇಲ್ಲಿದೆ ಪೂರ್ಣ ಮಾಹಿತಿ

    ಹಮಾಸ್ ಉಗ್ರರು 5ಂಕ್ಕೂ ಹೆಚ್ಚು ಇಸ್ರೇಲ್ ಸೈನಿಕರನ್ನು ಒತ್ತೆಯಾಳಾಗಿ ಇಟ್ಟುಕೊಂಡಿದೆ. ಅಲ್ಲದೇ ದೇಶದ ಒಳಗೆ ನುಗ್ಗಿ ಪ್ರಮುಖ ನಗರಗಳ ಮೇಲೆ ದಾಳಿ ನಡೆಸಿ ಸಾರ್ವಜನಿಕರ ಕಗ್ಗೊಲೆ ಮಾಡುತ್ತಿದ್ದಾರೆ. ಅವರ ವಿರುದ್ಧ ಸೇನೆ ಹೋರಾಡುತ್ತಿದೆ ಎಂದು ಸೇನಾ ವಕ್ತಾರ ರಿಚರ್ಡ್ ಹೆಚ್ಟ್ ಹೇಳಿದ್ದಾರೆ.

    ಯುದ್ಧ ಘೋಷಣೆಯ ಬಳಿಕ ಇಸ್ರೇಲ್‍ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ತನ್ನ ನಾಗರಿಕರನ್ನು ಜಾಗರೂಕರಾಗಿರುವಂತೆ ಎಚ್ಚರಿಸಿದೆ. ಸ್ಥಳೀಯ ಅಧಿಕಾರಿಗಳ ಸಲಹೆಯಂತೆ ಸುರಕ್ಷತಾ ಕ್ರಮಗಳನ್ನು ಅನುಸರಿಸುವಂತೆ ಸೂಚಿಸಿದೆ. ಅನಗತ್ಯವಾಗಿ ಮನೆಯಿಂದ ಹೊರಗೆ ಬರದಿರುವಂತೆ ಸಲಹೆ ನೀಡಲಾಗಿದೆ.

    ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಇಸ್ರೇಲ್‍ಗೆ ಬೆಂಬಲ ಸೂಚಿಸಿದ್ದಾರೆ. ಈ ಬಗ್ಗೆ ಸಭೆ ಕರೆದು ಇದು ಇಸ್ರೇಲ್ ಮೇಲಿನ ಅತಿ ದೊಡ್ಡ ಆಕ್ರಮಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    ಹಮಾಸ್ ಉಗ್ರರ ನಾಯಕ ಒಸಾಮಾ ಹಮ್ದಾನ್ ಪ್ರತಿಕ್ರಿಯಿಸಿ, ಇಸ್ರೇಲ್‍ನ ಬೇಡಿಕೆಗಳನ್ನು ಒಪ್ಪಿಕೊಳ್ಳುವುದು ಶಾಂತಿಯನ್ನು ತರುವುದಿಲ್ಲ ಎಂದು ಅರಬ್ ರಾಷ್ಟ್ರಗಳು ಅರಿತುಕೊಳ್ಳಬೇಕು. ಪ್ಯಾಲೆಸ್ಟೈನ್‍ನ (Palestine) ಸ್ಥಿರತೆ ಮತ್ತು ಶಾಂತಿಯನ್ನು ತರಲು ಇಸ್ರೇಲ್ ಆಕ್ರಮಣವನ್ನು ಕೊನೆಗೊಳಿಸುವುದು ಆರಂಭಿಕ ಹಂತವಾಗಿರಬೇಕು ಎಂದು ಹೇಳಿಕೊಂಡಿದ್ದಾನೆ. ಇದನ್ನೂ ಓದಿ: ಕಷ್ಟದ ಸಮಯದಲ್ಲಿ ಇಸ್ರೇಲ್ ಪರ ಒಗ್ಗಟ್ಟಿನಿಂದ ನಿಲ್ಲುತ್ತೇವೆ: ನರೇಂದ್ರ ಮೋದಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]