ಮನೆಗೆ ಅನಿರೀಕ್ಷಿತವಾಗಿ ಅತಿಥಿಗಳು ಬಂದಾಗ ತ್ವರಿತವಾಗಿ ಏನಾದರೂ ಸಿಹಿ ಮಾಡಬೇಕಾಗುತ್ತದೆ. ಈ ಸಮಯದಲ್ಲಿ ನಿಮ್ಮ ಸಹಾಯಕ್ಕೆ ಬರುವ ಬ್ರೆಡ್ ಹಲ್ವಾ (Bread Halwa) ರೆಸಿಪಿಯನ್ನು ನಾವಿಂದು ಹೇಳಿಕೊಡುತ್ತೇವೆ. ಮನೆಯಲ್ಲಿ ಉಳಿದ ಬ್ರೆಡ್ ಸ್ಲೈಸ್ ಬಳಸಿ, ಸಿಂಪಲ್ ಆಗಿ ಮಾಡಬಹುದಾದ ಈ ಸಿಹಿಯನ್ನು ನಿಮ್ಮ ಕ್ವಿಕ್ ರೆಸಿಪಿ ಲಿಸ್ಟ್‌ಗೆ ಖಂಡಿತವಾಗಿಯೂ ಸೇರಿಸಿಕೊಳ್ಳಿ.
ಬೇಕಾಗುವ ಪದಾರ್ಥಗಳು:
ಬ್ರೆಡ್ ಸ್ಲೈಸ್ – 5
ತುಪ್ಪ – 4 ಟೀಸ್ಪೂನ್
ಬಿಸಿ ಹಾಲು – 1 ಕಪ್
ಸಕ್ಕರೆ – ಮುಕ್ಕಾಲು ಕಪ್
ಕೇಸರಿ ಎಳೆಗಳು – ಅರ್ಧ ಟೀಸ್ಪೂನ್
ಏಲಕ್ಕಿ ಪುಡಿ – 1 ಟೀಸ್ಪೂನ್
ಒಣ ಹಣ್ಣುಗಳು (ಗೋಡಂಬಿ, ಬಾದಾಮಿ, ಒಣದ್ರಾಕ್ಷಿ) – ಕೆಲವು ಇದನ್ನೂ ಓದಿ: ಬೆಳಗ್ಗಿನ ತಿಂಡಿಗೆ ಮಾಡಿ ರುಚಿಕರವಾದ ಬೆಲ್ಲದ ಪರೋಟ
ಮಾಡುವ ವಿಧಾನ:
* ಮೊದಲಿಗೆ ಕೇಸರಿ ಎಳೆಗಗಳನ್ನು 2-3 ಟೀಸ್ಪೂನ್ ಬಿಸಿ ಹಾಲಿನಲ್ಲಿ ನೆನೆಸಿ ಪಕ್ಕಕ್ಕಿಡಿ.
* ಮಿಕ್ಸರ್ ಜಾರ್‌ಗೆ ಬ್ರೆಡ್‌ಗಳನ್ನು ಹಾಕಿ, ಕ್ರಂಬ್ಸ್ ತಯಾರಿಸಿ.
* ಈಗ ಕಡಾಯಿಯಲ್ಲಿ 1 ಟೀಸ್ಪೂನ್ ತುಪ್ಪ ಬಿಸಿ ಮಾಡಿ, ಅದರಲ್ಲಿ ಒಣ ಹಣ್ಣುಗಳನ್ನು ಹಾಕಿ, ಹುರಿದುಕೊಳ್ಳಿ. ತಿಳಿ ಗೋಲ್ಡನ್ ಬ್ರೌನ್ ಬಣ್ಣ ಬಂದ ಬಳಿಕ ಅದನ್ನು ತುಪ್ಪದಿಂದ ತೆಗೆದು ಪಕ್ಕಕ್ಕಿಡಿ.
* ಈಗ ಅದೇ ಕಡಾಯಿಗೆ 2 ಟೀಸ್ಪೂನ್ ತುಪ್ಪ ಹಾಕಿ, ಬ್ರೆಡ್ ಕ್ರಂಬ್ಸ್ ಸೇರಿಸಿ 5-6 ನಿಮಿಷ ಹುರಿಯಿರಿ.
* ಬ್ರೆಡ್ ಕ್ರಂಬ್ಸ್ ಗೋಲ್ಡನ್ ಬ್ರೌನ್ ಬಣ್ಣ ಬಂದ ಬಳಿಕ ಅದಕ್ಕೆ 1 ಕಪ್ ಬಿಸಿ ಹಾಲನ್ನು ಹಾಕಿ, ಗಂಟಿಲ್ಲದಂತೆ ಮಿಶ್ರಣ ಮಾಡಿ.
* ಬ್ರೆಡ್ ಕ್ರಂಬ್ಸ್ ಹಾಲನ್ನು ಸಂಪೂರ್ಣವಾಗಿ ಹೀರಿಕೊಂಡ ಬಳಿಕ ಸಕ್ಕರೆಯನ್ನು ಸೇರಿಸಿ, ಮಿಶ್ರಣ ಮಾಡಿ.
* ಸಕ್ಕರೆ ಸಂಪೂರ್ಣವಾಗಿ ಕರಗಿದ ಬಳಿಕ ಹುರಿದ ಒಣ ಹಣ್ಣುಗಳು, ಏಲಕ್ಕಿ ಪುಡಿ, ಹಾಗೂ ನೆನೆಸಿಟ್ಟ ಕೇಸರಿಯನ್ನು ಸೇರಿಸಿ, ಮಿಶ್ರಣ ಮಾಡಿ.
* ಈಗ ಉಳಿದ ತುಪ್ಪವನ್ನು ಸೇರಿಸಿ, ಎಲ್ಲವನ್ನು ಚೆನ್ನಾಗಿ ಮಿಶ್ರಣ ಮಾಡಿ.
* ತುಪ್ಪ ಹಲ್ವಾದಿಂದ ಬೇರ್ಪಡಲು ಪ್ರಾರಂಭಿಸಿದಾಗ ಉರಿಯನ್ನು ಆಫ್ ಮಾಡಿ.
* ಇದೀಗ ಬ್ರೆಡ್ ಹಲ್ವಾ ತಯಾರಾಗಿದ್ದು, ಬಿಸಿಬಿಸಿಯಾಗಿ ಅಥವಾ ತಣ್ಣಗಾದ ಬಳಿಕ ಅತಿಥಿಗಳಿಗೆ ಸವಿಯಲು ನೀಡಿ. ಇದನ್ನೂ ಓದಿ: ಗೋವಾ ಶೈಲಿಯ ಸಿಹಿಯಾದ ಸೂರ್ನೊಲಿ ದೋಸೆ ಟ್ರೈ ಮಾಡಿದ್ದೀರಾ?
Live Tv
[brid partner=56869869 player=32851 video=960834 autoplay=true]
ಮನೆಗೆ ನೆಂಟರು ಒಂದಿಷ್ಟು ಜನ ಬಂದಾಗ ಬೇಗನೆ ಸಿಹಿ ಮಾಡುವುದು ಗೃಹಿಣಿಯರಿಗೆ ಸವಾಲು. ಇಂತಹ ಸಮಯದಲ್ಲಿ ಫಟಾಫಟ್ ಅಂತ ಮಾಡಬಹುದು ಈ ಕಸ್ಟರ್ಡ್ ಪೌಡರ್ ಹಲ್ವಾ (Custard Powder Halwa). ಕಸ್ಟರ್ಡ್ ಪೌಡರ್, ಸಕ್ಕರೆ, ತುಪ್ಪದಿಂದ ತಯಾರಿಸಲಾಗುವ ಸಿಹಿಯನ್ನು ಮಾಡುವುದು ಹೇಗೆಂದು ಕಲಿತುಕೊಳ್ಳಿ. ಕಸ್ಟರ್ಡ್ ಪೌಡರ್ ಹಲ್ವಾ ಮಾಡುವ ಸುಲಭ ವಿಧಾನ ಇಲ್ಲಿದೆ.
ಬೇಕಾಗುವ ಪದಾರ್ಥಗಳು:
ಸಕ್ಕರೆ – 1 ಕಪ್
ಕಸ್ಟರ್ಡ್ ಪೌಡರ್ – ಅರ್ಧ ಕಪ್ (ನಿಮ್ಮ ಆಯ್ಕೆಯ ಯಾವ ಫ್ಲೇವರ್ ಕೂಡಾ ಬಳಸಬಹುದು)
ನೀರು – 1 ಕಪ್
ತುಪ್ಪ – 2 ಟೀಸ್ಪೂನ್
ಕೇಸರಿ ದ್ರಾವಣ – 1 ಟೀಸ್ಪೂನ್
ಕತ್ತರಿಸಿದ ಗೋಡಂಬಿ – 5 ಇದನ್ನೂ ಓದಿ: ಕಾಜು ಬರ್ಫಿ ಮಾಡುವ ಸುಲಭ ವಿಧಾನ
ಮಾಡುವ ವಿಧಾನ:
* ಮೊದಲಿಗೆ ದೊಡ್ಡ ಬಟ್ಟಲಿನಲ್ಲಿ ಸಕ್ಕರೆ ಮತ್ತು ಕಸ್ಟರ್ಡ್ ಪೌಡರ್ ತೆಗೆದುಕೊಳ್ಳಿ.
* ಅದಕ್ಕೆ 1 ಕಪ್ ನೀರಿನ್ನು ಸೇರಿಸಿ, ಚೆನ್ನಾಗಿ ಮಿಕ್ಸ್ ಮಾಡಿ.
* ಸಕ್ಕರೆ ಸಂಪೂರ್ಣವಾಗಿ ಕರಗಿ, ಯಾವುದೇ ಉಂಡೆಗಳಿಲ್ಲ ಎಂಬುದನ್ನು ಖಚಿತಪಡಿಸಿಕೊಂಡ ಬಳಿಕ ಪಕ್ಕಕ್ಕೆ ಇರಿಸಿ.
* ಈಗ ಒಂದು ಕಡಾಯಿಯಲ್ಲಿ ತುಪ್ಪವನ್ನು ಬಿಸಿ ಮಾಡಿ, ಗೊಂಡಂಬಿಯನ್ನು ಹುರಿಯಿರಿ.
* ಈಗ ಸಕ್ಕರೆ ಹಾಗೂ ಕಸ್ಟರ್ಡ್ ಪೌಡರ್‌ನ ಮಿಶ್ರಣವನ್ನು ಸುರಿದು, ಮಧ್ಯಮ ಉರಿಯಲ್ಲಿ ಮಿಶ್ರಣ ಮಾಡಿ.
* ಈಗ ಅದಕ್ಕೆ ಕೇಸರಿ ದ್ರಾವಣವನ್ನು ಹಾಕಿ, ಮಿಶ್ರಣ ದಪ್ಪವಾಗುವವರೆಗೆ ನಿರಂತರವಾಗಿ ಮಿಕ್ಸ್ ಮಾಡಿ.
* ಈಗ ಟ್ರೇ ಅಥವಾ ಬಟ್ಟಲಿಗೆ ತುಪ್ಪವನ್ನು ಗ್ರೀಸ್ ಮಾಡಿ, ಅದಕ್ಕೆ ಮಿಶ್ರಣವನ್ನು ಸುರಿಯಿರಿ.
* ಅದನ್ನು ತಣ್ಣಗಾಗಲು 30 ನಿಮಿಷಗಳವರೆಗೆ ಬಿಡಿ.
* ಇದೀಗ ಕಸ್ಟರ್ಡ್ ಪೌಡರ್ ಹಲ್ವಾ ತಯಾರಾಗಿದ್ದು, ಗೋಡಂಬಿಯಿಂದ ಅಲಂಕರಿಸಿ, ಸವಿಯಿರಿ. ಇದನ್ನೂ ಓದಿ: ಹಬ್ಬಕ್ಕೆ ಮಾಡಿ ಸಿಹಿಯಾದ ಹಯಗ್ರೀವ
Live Tv
[brid partner=56869869 player=32851 video=960834 autoplay=true]
ಎಲ್ಲೇ ಹೋದರೂ ಕೈಗೆ ಸಿಗುವ ಹಣ್ಣುಗಳಲ್ಲೊಂದು ಆಪಲ್. ಫ್ರೂಟ್ ಸಲಾಡ್ ಮಾಡಲು ಹೆಚ್ಚಾಗಿ ಆಪಲ್‌ಗಳನ್ನು ಬಳಸಿರುತ್ತೇವೆ. ಆದರೆ ಆಪಲ್‌ನಿಂದಲೂ ಹಲ್ವಾ ಮಾಡಬಹುದು ಎಂಬುದು ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ. ಎಷ್ಟು ಕುತೂಹಲಕಾರಿ ರೆಸಿಪಿಯೋ ಅಷ್ಟೇ ಟೇಸ್ಟಿಯಾಗಿರುವ ಆಪಲ್ ಹಲ್ವಾವನ್ನು ನೀವು ಕೂಡಾ ಒಮ್ಮೆ ಟ್ರೈ ಮಾಡಿ ನೋಡಿ.
ಬೇಕಾಗುವ ಪದಾರ್ಥಗಳು:
* ಆಪಲ್ – 4
* ತುಪ್ಪ – 2 ಟೀಸ್ಪೂನ್
* ಗೋಡಂಬಿ – 8
* ಸಕ್ಕರೆ – 4 ಕಪ್
* ಕೇಸರಿ – 4 ಟೀಸ್ಪೂನ್
* ವೆನಿಲ್ಲಾ ಸಾರ – 1 ಟೀಸ್ಪೂನ್
* ದಾಲ್ಚಿನಿ ಪೌಡರ್ – 4 ಟೀಸ್ಪೂನ್
ಮಾಡುವ ವಿಧಾನ:
* ಮೊದಲಿಗೆ ಆಪಲ್‌ಗಳನ್ನು ಕತ್ತರಿಸಿಕೊಂಡು ನಂತರ ತುರಿಯಿರಿ. ಬೇಕೆಂದರೆ ಮೆದುವಾಗಿ ಪೇಸ್ಟ್ನಂತೆ ರುಬ್ಬಿಕೊಳ್ಳಬಹುದು.
* ದೊಡ್ಡ ಕಡಾಯಿಯಲ್ಲಿ ತುಪ್ಪ ಬಿಸಿ ಮಾಡಿ ಗೋಡಂಬಿಯನ್ನು ಹುರಿದುಕೊಳ್ಳಿ. ಗೋಲ್ಡನ್ ಬ್ರೌನ್ ಬಣ್ಣಕ್ಕೆ ತಿರುಗುತ್ತಿದ್ದಂತೆ ಗೋಡಂಬಿಯನ್ನು ಮಾತ್ರವೇ ತೆಗೆದು ಪಕ್ಕಕ್ಕೆ ಇರಿಸಿ.
* ಕಡಾಯಿಯಲ್ಲಿ ಉಳಿದ ತುಪ್ಪಕ್ಕೆ ತುರಿದ ಆಪಲ್‌ಅನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಅದರ ರಸ ಬಿಡುಗಡೆಯಾಗುವವರೆಗೂ ಕೈಯಾಡಿಸುತ್ತಿರಿ.
* ಆಪಲ್ ಮೃದುವಾದ ಬಳಿಕ ಅದಕ್ಕೆ ಸಕ್ಕರೆ, ಕೇಸರಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಕೈ ಆಡಿಸಿ ಸಕ್ಕರೆಯನ್ನು ಕರಗಿಸಿ.
* ಮಿಶ್ರಣ ದಪ್ಪವಾದ ಬಳಿಕ ವೆನಿಲ್ಲಾ ಸಾರ, ದಾಲ್ಚಿನಿ ಪೌಡರ್ ಹಾಗೂ ಹುರಿದ ಗೋಡಂಬಿ ಸೇರಿಸಿ ಬೇಯಿಸಿ.
* ಆಪಲ್ ಹಲ್ವಾ ಇದೀಗ ತಯಾರಾಗಿದ್ದು, ಗೋಡಂಬಿಯಿಂದ ಅಲಂಕರಿಸಿ ಸವಿಯಿರಿ.
Live Tv
[brid partner=56869869 player=32851 video=960834 autoplay=true]
ಕ್ಯಾರೆಟ್ ನಮ್ಮ ಆರೋಗ್ಯಕ್ಕೆ ಮತ್ತು ತ್ವಚೆಗೆ ತುಂಬಾ ಒಳ್ಳೆಯದು. ಕ್ಯಾರೆಟ್ ಜ್ಯೂಸ್ ಮತ್ತು ಹಸಿ ಕ್ಯಾರೆಟ್ ಅನ್ನು ಜನರು ತುಂಬಾ ಇಷ್ಟಪಟ್ಟು ಕುಡಿತ್ತಾರೆ ಮತ್ತು ತಿನ್ನುತ್ತಾರೆ. ಅದರಂತೆ ನಿಮಗೆ ಜನಪ್ರಿಯಾವಾದ ʼಕ್ಯಾರೆಟ್ ಹಲ್ವಾʼ ಮಾಡುವ ಸೂಪರ್ ವಿಧಾನವನ್ನು ಹೇಳಿಕೊಡುತ್ತಿದ್ದೇವೆ. ಈ ರೆಸಿಪಿಯನ್ನು ನೀವು ನಿಮ್ಮ ಮನೆಯಲ್ಲಿ ಟ್ರೈ ಮಾಡಿರುತ್ತಿರಾ ಆದರೆ ಇಂದು ನಾವು ಹೇಳಿಕೊಡುವ ರೀತಿ ಮಾಡಿದ್ರೆ ನಿಮಗೆ ಇನ್ನೂ ಹೆಚ್ಚು ಇಷ್ಟವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಟ್ರೈ ಮಾಡಿ .
ಬೇಕಾಗಿರುವ ಪದಾರ್ಥಗಳು:
* ಕ್ಯಾರೆಟ್ – 1 ಕೆಜಿ
* ತುಪ್ಪ – ಅರ್ಧ ಕಪ್
* ಕಟ್ ಮಾಡಿದ ಗೋಡಂಬಿ – 10
* ಕಟ್ ಮಾಡಿದ ಬಾದಾಮಿ – 10
* ಹಾಲು – 3 ಕಪ್
* ಸಕ್ಕರೆ – ಅರ್ಧ ಕಪ್
* ಖೋವಾ – 2 ಟೀಸ್ಪೂನ್
* ಏಲಕ್ಕಿ ಪುಡಿ – ಅರ್ಧ ಟೀಸ್ಪೂನ್
* ಒಣ ದ್ರಾಕ್ಷಿ – 2 ಟೀಸ್ಪೂನ್
ಮಾಡುವ ವಿಧಾನ:
* ಮೊದಲನೆಯದಾಗಿ, ಕ್ಯಾರೆಟ್ ಸಿಪ್ಪೆ ತೆಗೆದು ನುಣ್ಣಗೆ ತುರಿಯಿರಿ. ಪಕ್ಕಕ್ಕೆ ಇರಿಸಿ.
* ದೊಡ್ಡ ಬಾಣಲೆಯಲ್ಲಿ ಕಡಿಮೆ ಶಾಖದಲ್ಲಿ ಅರ್ಧ ಕಪ್ ತುಪ್ಪ ಮತ್ತು ಗೋಡಂಬಿ, ಬಾದಾಮಿ, ಒಣ ದ್ರಾಕ್ಷಿಯನ್ನು ಗೋಲ್ಡನ್ ಬ್ರೌನ್ ಬರುವವರೆಗೂ ಫ್ರೈ ಮಾಡಿ. ಪಕ್ಕಕ್ಕೆ ಇರಿಸಿ.
* ಅದೇ ಬಾಣಲಿಯಲ್ಲಿ ಕ್ಯಾರೆಟ್ ಸೇರಿಸಿ ಚೆನ್ನಾಗಿ 5 ನಿಮಿಷಗಳ ಕಾಲ ಫ್ರೈ ಮಾಡಿ
* ಈಗ 3 ಕಪ್ ಹಾಲು ಸುರಿಯಿರಿ ಮತ್ತು ಚೆನ್ನಾಗಿ ಬೆರೆಸಿ. 10 ನಿಮಿಷಗಳ ಕಾಲ ಕುದಿಸಿ. ಕ್ಯಾರೆಟ್ ಚೆನ್ನಾಗಿ ಬೇಯಿಸಿ ಹಾಲು ಕಡಿಮೆಯಾಗುವವರೆಗೆ ಕುದಿಸಿ.
* ಹಾಲು ಸಂಪೂರ್ಣವಾಗಿ ಕಡಿಮೆಯಾದ ಮೇಲೆ ಸಕ್ಕರೆ ಸೇರಿಸಿ. ಚೆನ್ನಾಗಿ ಮಿಶ್ರಣ ಮಾಡಿ ಮತ್ತು ಸಕ್ಕರೆ ಕರಗುವವರೆಗೆ ಬೇಯಿಸಿ.
* ಅದಕ್ಕೆ ಕೋವಾ ಹಾಕಿ ಹುರಿಯಿರಿ ನಂತರ ಗ್ಯಾಸ್ ಆಫ್ ಮಾಡಿ ಏಲಕ್ಕಿ ಪುಡಿ ಮತ್ತು ಗೋಡಂಬಿ, ಬಾದಾಮಿಯಿಂದ ಅಲಂಕಾರಿಸಿ.
– ಕ್ಯಾರೆಟ್ ಹಲ್ವಾವನ್ನು ತಣ್ಣಗೆ ಮಾಡಿಯೂ ಆನಂದಿಸಬಹುದು ಅಥವಾ ಬಿಸಿಯಾಗಿರುವಗಾಲು ಸವಿಯ ಬಹುದು.
Live Tv
[brid partner=56869869 player=32851 video=960834 autoplay=true]
ಹಲ್ವಾ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಮಕ್ಕಳಂತೂ ಸಿಹಿಯನ್ನು ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ. ದಿನಾ ಬಾಳೆಹಣ್ಣು, ಕ್ಯಾರೆಟ್, ಗೋಧಿ ಹಿಟ್ಟಿನ ಹಲ್ವಾ ಮಾಡಿ ಬೇಜಾರಾಗಿರುತ್ತೆ. ಅದಕ್ಕೆ ಈ ಬಾರಿ ಅತ್ಯಂತ ಸುಲಭ ಹಾಗೂ ರುಚಿ ರುಚಿಯಾದ ಹೆಸರುಬೇಳೆ ಹಲ್ವಾ ಮಾಡಿ ಸವಿಯಿರಿ.
ಬೇಕಾಗುವ ಸಾಮಗ್ರಿಗಳು:
* ಹೆಸರು ಬೇಳೆ- 1 ಕಪ್
* ತುಪ್ಪ- ಅರ್ಧ ಕಪ್
* ಹಾಲು- 1 ಕಪ್
* ಸಕ್ಕರೆ- 1 ಕಪ್
* ಏಲಕ್ಕಿ ಪುಡಿ- 1 ಟೀ ಸ್ಪೂನ್
* ಡ್ರೈಫ್ರೂಟ್ಸ್
ಮಾಡುವ ವಿಧಾನ:
* ಮೊದಲು ಹೆಸರು ಬೇಳೆಯನ್ನು ತೊಳೆದುಕೊಂಡು ನೀರನ್ನು ಬಸಿದಿಟ್ಟುಕೊಳ್ಳಿ. ಇತ್ತ ಸ್ಟೌವ್‍ನಲ್ಲಿ ಪ್ಯಾನ್ ಇಟ್ಟು ಅದಕ್ಕೆ 1 ಚಮಚ ತುಪ್ಪ ಹಾಕಿ. ಈ ತುಪ್ಪ ಸ್ವಲ್ಪ ಬಿಸಿಯಾಗ್ತಿದ್ದಂತೆ ಅದಕ್ಕೆ ಹೆಸರುಬೇಳೆ ಹಾಕಿ. ನಂತರ ಇದನ್ನು 5-6 ನಿಮಿಷ ಸಣ್ಣ ಉರಿಯಲ್ಲಿ ಹುರಿದುಕೊಳ್ಳಿ. ಇದು ಗರಿಗರಿಯಾದ ಬಳಿಕ ತಣಿಯಲು ಬಿಡಿ.
* ಪೂರ್ತಿ ತಣಿದ ಬಳಿಕ ಮಿಕ್ಸಿ ಜಾರಿಗೆ ಹುರಿದಿಟ್ಟ ಹೆಸರುಬೇಳೆಯನ್ನು ಹಾಕಿ ಸ್ವಲ್ಪ ತರಿತರಿಯಾಗಿ ಪುಡಿ ಮಾಡಿಕೊಳ್ಳಿ. ನಂತರ ಮತ್ತೆ ಅದೇ ಪ್ಯಾನಿಗೆ 2 ಚಮಚ ತುಪ್ಪ ಹಾಕಿ ಅದಕ್ಕೆ ಪುಡಿ ಮಾಡಿಟ್ಟ ಹೆಸರು ಬೇಳೆ ಸೇರಿಸಿ ಮತ್ತೆ 2 ರಿಂದ 3 ನಿಮಿಷ ಸಣ್ಣ ಉರಿಯಲ್ಲಿ ಉರಿದುಕೊಳ್ಳಿ. ಇದನ್ನೂ ಓದಿ: ಶಿವನ ನೈವೇದ್ಯಕ್ಕೆ ಮಾಡಿ ‘ಪಾಲ್ ಪಾಯಸ’
* ಅದಕ್ಕೆ 1 ಕಪ್ ಹಾಲು ಬೆರೆಸಿ ಚೆನ್ನಾಗಿ ಮಿಕ್ಸ್ ಮಾಡಿ. ಗಂಟಾಗಲು ಬಿಡಬೇಡಿ. ಹೆಸರು ಬೇಳೆ ಪುಡಿ ಹಾಲನ್ನು ಪೂರ್ತಿಯಾಗಿ ಹೀರಿಕೊಂಡ ಬಳಿಕ ಅದಕ್ಕೆ ಉಳಿದ ತುಪ್ಪವನ್ನು ಬೆರೆಸಿ ಮತ್ತೆ ಪುನಃ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಈಗ 1 ಕಪ್ ಸಕ್ಕರೆ ಬೆರೆಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಪ್ಯಾನ್ ಬದಿಯಲ್ಲಿ ತುಪ್ಪ ಬಿಡಲು ಶುರುವಾದಾಗ ಕಾಲು ಚಮಚ ಏಲಕ್ಕಿ ಪುಡಿ ಮಿಕ್ಸ್ ಮಾಡಿಕೊಳ್ಳಿ. ಕೊನೆಗೆ ಡ್ರೈಫ್ರೂಟ್ಸ್ ಹಾಕಿ ಚೆನ್ನಾಗಿ ಕಲಸಿ. ಈಗ ಮೂಂಗು ದಾಲ್ ಹಲ್ವಾ ಅಥವಾ ಹೆಸೆರುಬೇಳೆ ಹಲ್ವಾ ಸವಿಯಲು ಸಿದ್ಧ.
ರುಚಿಯಾದ ಹಾಗೂ ಸಿಹಿಯಾದನ್ನು ಏನಾದರೂ ಮಾಡಿ ತಿಂದರೆ ಚೆನ್ನಾಗಿರುತ್ತದೆ. ಹೀಗಾಗಿ ನೀವು ಇಂದು ಸುಲಭವಾಗಿ ಮತ್ತು ರುಚಿಯಾಗಿ ಫಟಾ ಫಟ್ ಅಂತ ಬೂದುಗುಂಬಳಕಾಯಿ ಹಲ್ವಾ ಮಾಡಬಹುದು.
ಬೇಕಾಗುವ ಸಾಮಗ್ರಿಗಳು:
* ಬೂದು ಕುಂಬಳಕಾಯಿ- 2 ಕಪ್
* ತುಪ್ಪ- ಅರ್ಧ ಕಪ್
* ಸಕ್ಕರೆ- 3 ಕಪ್
* ಒಣ ದ್ರಾಕ್ಷಿ, ಗೋಡಂಬಿ- ಸ್ವಲ್ಪ
* ಏಲಕ್ಕಿ -2
* ಹಾಲು- ಅರ್ಧ ಕಪ್
* ಕೇಸರಿ- ಸ್ವಲ್ಪ
ಮಾಡುವ ವಿಧಾನ:
* ಕೆಸರಿಯ ದಳಗಳನ್ನು ಹಾಲಿನಲ್ಲಿ ಸೇರಿಸಿ ಮತ್ತು ಸ್ವಲ್ಪ ಹೊತ್ತು ಅದನ್ನು ಹಾಲಿನಲ್ಲಿ ನೆನೆಯಲು ಬಿಡಿ.
* ಬೂದಗುಂಬಳ ಕಾಯಿಯನ್ನು ಕತ್ತರಿಸಿ ತುರಿದುಕೊಳ್ಳಿ.
* ಒಂದು ಬಾಣಲೆಗೆ ತುರಿದ ಬೂದುಗುಂಬಳ ಕಾಯಿಯನ್ನು ಸೇರಿಸಿ, ಬೂದಗುಂಬಳಕಾಯಿಯಲ್ಲಿ ಹೆಚ್ಚಿನ ನೀರಿನ ಅಂಶ ಇರುತ್ತದೆ. ಆ ನೀರು ಒಣಗುವವರೆಗೂ ಅದನ್ನು ಚೆನ್ನಾಗಿ ಹುರಿಯಿರಿ. ತದನಂತರದಲ್ಲಿ ಇದಕ್ಕೆ ಸಕ್ಕರೆಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಇದನ್ನೂ ಓದಿ: ಸೂಪರ್ ಕೂಲ್ ದ್ರಾಕ್ಷಿ ಹಣ್ಣಿನ ಲಸ್ಸಿ ಮಾಡುವ ಸರಳ ವಿಧಾನ ನಿಮಗಾಗಿ
* ಈ ಮಿಶ್ರಣಕ್ಕೆ ತುಪ್ಪ, ಗೋಡಂಬಿ, ದ್ರಾಕ್ಷಿ ಸೇರಿಸಿ. ಇವುಗಳನ್ನು ಕಂದುಬಣ್ಣ ಆಗುವವರೆಗೂ ಹುರಿಯಿರಿ. ನಂತರದಲ್ಲಿ ಅದನ್ನು ಹಲ್ವಾಕ್ಕೆ ಹಾಕಿ ಮಿಶ್ರಣ ಮಾಡಿ. ಈಗ ಇನ್ನೂ ಸ್ವಲ್ಪ ತುಪ್ಪ ಜೊತೆಗೆ ಏಲಕ್ಕಿ ಪುಡಿಯನ್ನು ಸೇರಿಸಿ. ಎಲ್ಲಾ ಪದಾರ್ಥಗಳನ್ನು ಚೆನ್ನಾಗಿ ಮಿಶ್ರಣ ಮಾಡಿದರೆ ಹಲ್ವಾ ಸವಿಯಲು ಸಿದ್ಧವಾಗುತ್ತದೆ.
2017- 18ನೇ ಸಾಲಿನ ಬಜೆಟ್‍ನ್ನು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಬುಧವಾರ ಸಂಸತ್ತಿನಲ್ಲಿ ಮಂಡಿಸಲಿದ್ದಾರೆ. ಪ್ರತಿವರ್ಷಫೆಬ್ರವರಿ ಕೊನೆಯಲ್ಲಿ ಬಜೆಟ್ ಮಂಡನೆ ಆಗುತಿತ್ತು. ಈ ಬಾರಿ ಮುಂಚಿತವಾಗಿಯೇ ಬಜೆಟ್ ಮಂಡನೆಯಾಗುತ್ತಿದೆ. ಹೀಗಾಗಿ ಇಲ್ಲಿ ಹಣಕಾಸು ಬಜೆಟ್ ಸಿದ್ಧತೆ ಹೇಗೆ ನಡೆಯುತ್ತದೆ ಎಂಬುವುದರ ಬಗ್ಗೆ ಮಾಹಿತಿಯನ್ನು ನೀಡಲಾಗಿದೆ.
5 ತಿಂಗಳಿನಿಂದ ಸಿದ್ಧತೆ: ಬಜೆಟ್ ಮಂಡನೆಗೆ 5 ತಿಂಗಳು ಇರುವಂತೆಯೇ ಸಿದ್ಧತೆಗಳು ಆರಂಭವಾಗುತ್ತದೆ. ಸೆಪ್ಟೆಂಬರ್‍ನಲ್ಲಿ ಹಣಕಾಸು ಸಚಿವಾಲಯ ಕೇಂದ್ರ ಸರ್ಕಾರದ ಸಚಿವಾಲಯಗಳಿಗೆ ಟಿಪ್ಪಣಿಯೊಂದನ್ನು ಕಳುಹಿಸಿ ಖರ್ಚು ವೆಚ್ಚಗಳ ವಿವರ ಪಡೆದುಕೊಳ್ಳುತ್ತದೆ. ಇದರೊಂದಿಗೆ ಮುಮದಿನ ವರ್ಷದ ಹಣಕಾಸು ಲೆಕ್ಕಾಚಾರದ ಅಂದಾಜನ್ನೂ ಪಡೆದುಕೊಳ್ಳುತ್ತದೆ.
ನಿರಂತರ ಸಭೆ: ಅಕ್ಟೋಬರ್ ಮತ್ತು ನವೆಂಬರ್ ತಿಂಗಳಿನಲ್ಲಿ ಖರ್ಚುವೆಚ್ಚಗಳ ಕಾರ್ಯದರ್ಶಿ, ಕೆಲವು ಇಲಾಖೆಗಳ ಹಣಕಾಸು ಸಲಹೆಗಾರರ ಜತೆ ಸಭೆಗಳನ್ನು ನಡೆಸಿ ಇಲಾಖಾವಾರು ವೆಚ್ಚಗಳ ಪರಿಶೀಲನೆ ನಡೆಸಲಾಗುತ್ತದೆ. ಇದೇ ಸಂದರ್ಭದಲ್ಲಿ ಮುಂದಿನ ವರ್ಷದ ಪ್ರಸ್ತಾವನೆಯ ಕುರಿತಂತೆಯೂ ಚರ್ಚೆ ನಡೆಸಲಾಗುತ್ತದೆ. ಹೀಗೆ ಸಿಕ್ಕ ಖರ್ಚು ವೆಚ್ಚದ ವಿವರಗಳನ್ನು ಹಣಕಾಸು ಸಚಿವ ಅರುಣ್ ಜೇಟ್ಲಿ ನೇತೃತ್ವದ ತಂಡಕ್ಕೆ ಒಪ್ಪಿಸಲಾಗುತ್ತದೆ. ಬಳಿಕ ಆದಾಯ, ಹೊಸ ಪ್ರಸ್ತಾವನೆ, ಸುಂಕ ಏರಿಕೆಯ ಮೂಲಕ ಹೆಚ್ಚಿನ ನಿಧಿ ಸಂಗ್ರಹಣೆ, ಹಣದ ಕೊರತೆ ಮತ್ತು ಇನ್ನಿತರ ಅಂಕಿ ಸಂಖ್ಯೆಗಳ ಕುರಿತಂತೆ ತಂಡದ ಸದಸ್ಯರು ಚರ್ಚೆ ನಡೆಸುತ್ತಾರೆ. ಈ ಸಭೆಗೆ ಕೇಂದ್ರೀಯ ನೇರ ತೆರಿಗೆ ಮಂಡಳಿ ಮತ್ತು ಕೇಂದ್ರೀಯ ನೇರ ಅಬಕಾರಿ ತೆರಿಗೆ ಮಂಡಳಿ ಈ ಎರಡೂ ಸಂಸ್ಥೆಗಳನ್ನೂ ಸಭೆಗೆ ಕರೆಯಲಾತ್ತದೆ.
ಆರ್ಥಿಕ ಸಮೀಕ್ಷೆ ಆರಂಭ: ಬಜೆಟ್‍ನ ಪ್ರಧಾನ ತಂಡ ಚರ್ಚೆ ನಡೆಸಿದ ವಿಷಯದ ಮೇಲೆ ಬಜೆಟ್ ಪ್ರಸ್ತಾವನೆಗಳ ಒಂದು ನೀಲ ನಕ್ಷೆಯನ್ನು ರೆಡಿ ಮಾಡಲಾಗುತ್ತದೆ. ಆದರೆ ಗೌಪ್ಯತೆ ಕಾಪಾಡುವ ನಿಟ್ಟಿನಲ್ಲಿ ಈ ನೀಲ ನಕ್ಷೆಯ ಪ್ರತಿಗಳನ್ನು ಹಿರಿಯ ಅಧಿಕಾರಿಗಳು ನಾಶಪಡಿಸುತ್ತಾರೆ. ಬಳಿಕ ನವೆಂಬರ್ ಅಂತ್ಯಕ್ಕಾಗುವಾಗ ಕೆಲ ಪ್ರಮುಖ ಸಿಬ್ಬಂದಿಗಳಿಗೆ ಮಾತ್ರ ಹಣಕಾಸು ಸಚಿವಾಲಯದ ಕಚೇರಿಯ ಒಳಗಡೆ ಪ್ರವೇಶಿಸಲು ಅವಕಾಶ ನೀಡಲಾಗುತ್ತದೆ. ಮಾತ್ರವಲ್ಲದೇ ಕಚೇರಿಯ ಸುತ್ತ ಗುಪ್ತಚರ ಸಂಸ್ಥೆಗೆ ಒಪ್ಪಿಸಲಾಗುತ್ತದೆ. ಈ ವೇಳೆ ಮುಖ್ಯ ಆರ್ಥಿಕ ಸಲಹೆಗಾರರ ಮೇಲುಸ್ತುವಾರಿಯಲ್ಲಿ ಸಮೀಕ್ಷೆಯ ಕಾರ್ಯವನ್ನು ನಡೆಸಲಾಗುತ್ತದೆ. ಈ ಮೂಲಕ ಬಜೆಟ್ ಪ್ರಕ್ರಿಯೆಗೆ ಅಧಿಕೃತ ಚಾಲನೆ ದೊರೆಯುತ್ತದೆ.
ಅಂಕಿ ಅಂಶ ತಯಾರಿ: ಹಣಕಾಸು ಸಚಿವಾಲಯ, ನೀತಿ ಆಯೋಗ ಮತ್ತು ಇತರೆ ಸಚಿವಾಲಯಗಳ ಅಧಿಕಾರಿಗಳು ಸಭೆ ನಡೆಸಿ ಬಜೆಟ್ ಅಂಕಿ ಅಂಶಗಳನ್ನು ತಯಾರಿಸುತ್ತಾರೆ. ಖರ್ಚುಗಳನ್ನು ಆಧಾರಿಸಿ ಹಣಕಾಸು ಸಚಿವಾಲಯವು ಕೆಲವೊಂದು ಮಾರ್ಗಸೂಚಿಯನ್ನು ಪ್ರಕಟಿಸುತ್ತದೆ. ಇದಕ್ಕೆ ಅನುಗುಣವಾಗಿ ವಿವಿಧ ಸಚಿವಾಲಯಗಳು ಬೇಡಿಕೆಯನ್ನು ಸಲ್ಲಿಸುತ್ತವೆ. ಹಣಕಾಸು ಸಚಿವಾಲಯದ ಅಧೀನದಲ್ಲಿರುವ ಆರ್ಥಿಕ ವ್ಯವಹಾರಗಳ ಇಲಾಖೆಯ ಬಜೆಟ್ ವಿಭಾಗವು ಇದನ್ನು ಸಿದ್ಧಪಡಿಸುತ್ತದೆ.
2017ರ ಬಜೆಟ್ ನ್ನು ತಯಾರಿಸಿದ ತಂಡದ ಜೊತೆ ಹಣಕಾಸು ಸಚಿವ ಅರುಣ್ ಜೇಟ್ಲಿ
ಪ್ರಧಾನಿ ಎಂಟ್ರಿ: ಈ ಎಲ್ಲಾ ಪ್ರಕ್ರಿಯೆಗಳು ಮುಗಿದ ಬಳಿಕ ಪ್ರಧಾನಿ ಬಜೆಟ್‍ನಲ್ಲಿ ತಮ್ಮನ್ನೂ ತೊಡಗಿಸಿಕೊಳ್ಳುತ್ತಾರೆ. ಹಣಕಾಸು ಸ್ಥಿತಿಗತಿ, ಹೊಸ ಯೋಜನೆಗಳು, ಖರ್ಚುವೆಚ್ಚಗಳಿಗೆ ನೀಡಬೇಕಾದ ಆದ್ಯತೆ, ಹೆಚ್ಚುವರಿ ಆದಾಯ ಕ್ರಮಗಳು ಹೀಗೆ ಬಜೆಟ್‍ನ ರೂಪುರೇಷೆಗಳ ಕುರಿತಂತೆ ಹಣಕಾಸು ಸಚಿವಾಲಯದ ಜತೆ ಪ್ರಧಾನಿ ಚರ್ಚೆ ನಡೆಸುತ್ತಾರೆ. ಪ್ರಧಾನಿ ಮತ್ತು ಹಣಕಾಸು ಸಚಿವರ ಮಧ್ಯೆ ಬಜೆಟ್ ಕುರಿತಂತೆ ಹಲವು ಸುತ್ತಿನ ಮಾತುಕತೆಗಳು ನಡೆಯುತ್ತವೆ.
ಕರಡು ಬಜೆಟ್ ಮುದ್ರಣ: ಇನ್ನು ಬಜೆಟ್‍ಗೆ ಕೆಲವೇ ವಾರಗಳು ಬಾಕಿಯಿರುವ ವೇಳೆಯಲ್ಲಿ ಕಡತಗಳನ್ನು ಸಂಗ್ರಹ ಮಾಡಲಾಗುತ್ತದೆ. ಇಲ್ಲಿಯವರೆಗೆ ಫೆಬ್ರವರಿ ತಿಂಗಳ ಮೊದಲ ವಾರದಲ್ಲಿ ವಿವಿಧ ಸಚಿವಾಲಯಗಳು ನೀಡಿದ ಅಂಕಿ-ಅಂಶಗಳನ್ನು ಆಧರಿಸಿ ರೂಪಿಸಿದ ಕರಡು ಬಜೆಟ್ ಪ್ರತಿಯನ್ನು ಹಣಕಾಸು ಸಚಿವಾಲಯದಲ್ಲಿರುವ ಮುದ್ರಣಾಲಯಕ್ಕೆ ಕಳುಹಿಸಲಾಗುತ್ತಿತ್ತು. ಆದ್ರೆ ಈ ಬಾರಿ ಫೆಬ್ರವರಿ ಮೊದಲ ವಾರದಲ್ಲೇ ಬಜೆಟ್ ಮಂಡನೆಯಾಗುವುದರಿಂದ ಜನವರಿ ತಿಂಗಳಲ್ಲೇ ಮುದ್ರಣಕ್ಕೆ ಕಳುಹಿಸಲಾಗಿತ್ತು.
ಸಿಬ್ಬಂದಿಗೆ ಗೃಹಬಂಧನ!: ಬಜೆಟ್ ಪ್ರತಿ ಮುದ್ರಣಕ್ಕೆ ಕಳುಹಿಸುವ ಮೊದಲು ಹಲ್ವಾ ಕಾಯಿಸುವ ಸಂಪ್ರದಾಯವಿದೆ. ಹಣಕಾಸು ಸಚಿವರು ನಾರ್ತ್ ಬ್ಲಾಕ್‍ನಲ್ಲಿರುವ ಕಚೇರಿಯಲ್ಲಿ ದೊಡ್ಡ ಕಡಾಯಿಯಲ್ಲಿ ಹಲ್ವಾ ಕಾಯಿಸುತ್ತಾರೆ. ಕೆಲವು ತಿಂಗಳಿನಿಂದ ಬಜೆಟ್ ತಯಾರಿಸಿದ ಸಿಬ್ಬಂದಿ ಸಂಭ್ರಮದಿಂದ ಪಾಲ್ಗೊಳ್ಳುತ್ತಾರೆ. ಬಜೆಟ್ ಅಧಿವೇಶನಕ್ಕೆ ಅಂದಾಜು ಹತ್ತು ದಿನ ಮೊದಲು ಈ ಕಾರ್ಯಕ್ರಮ ನಡೆಯುತ್ತದೆ.
ಬಜೆಟ್ ಮುದ್ರಣದ ವೇಳೆ ಮುದ್ರಣಾಲಯದಲ್ಲಿ ಕಾರ್ಯನಿರ್ವಹಿಸಿರುವ ಸಿಬ್ಬಂದಿಗೆ ಗೃಹ ಬಂಧನ ವಿಧಿಸಲಾಗುತ್ತದೆ. ಹಣಕಾಸು ಸಚಿವಾಲಯ ಅಧಿಕಾರಿಗಳು, ಹಣಕಾಸು ಮಸೂದೆ ಮತ್ತು ಕಾರ್ಯಸೂಚಿ ಮಸೂದೆಯನ್ನು ಸಿದ್ಧಪಡಿಸಿದ ಕಾನೂನು ಸಚಿವಾಲಯದ ಸಿಬ್ಬಂದಿಯ ಫೋನ್, ಇಮೇಲ್ ವ್ಯವಹಾರ ಬಂದ್ ಆಗುತ್ತದೆ. ಹಿರಿಯ ಅಧಿಕಾರಿಗಳಿಗೆ ಮಾತ್ರ ಮನೆಗೆ ತೆರಳು ಅನುಮತಿ ನೀಡಲಾಗುತ್ತದೆ. ಬಜೆಟ್ ಮಂಡನೆಯಾದ ಬಳಿಕವಷ್ಟೇ ಸಿಬ್ಬಂದಿ ಮನೆಗೆ ತೆರಳುತ್ತಾರೆ.
ಬಜೆಟ್ ಮಂಡನೆ ಹೇಗೆ?: ಬಜೆಟ್‍ನ ದಿನದಂದು ಹಣಕಾಸು ಸಚಿವರು ಮೊದಲು ರಾಷ್ಟ್ರಪತಿ ಅವರನ್ನು ಭೇಟಿ ಮಾಡಿ ಬಜೆಟ್‍ಗೆ ಅವರಿಂದ ಸಹಿ ಪಡೆದುಕೊಳ್ಳುತ್ತಾರೆ. ಬಳಿಕ ಸಂಪುಟ ಸಭೆ ನಡೆಸಲಾಗುತ್ತದೆ. ಈ ವೇಳೆ ಹಣಕಾಸು ಸಚಿವರು ಬಜೆಟ್ ನಲ್ಲಿರುವ ಅಂಶಗಳ ಕುರಿತಂತೆ ಸಂಕ್ಷಿಪ್ತ ಮಾಹಿತಿ ನೀಡುತ್ತಾರೆ. ಆದರೆ, ತೆರಿಗೆ ಪ್ರಸ್ತಾವನೆಗಳ ಕುರಿತಂತೆ ಯಾವುದೇ ಮಾಹಿತಿಯನ್ನು ನೀಡುವುದಿಲ್ಲ. 11 ಗಂಟೆಗೆ ಬಜೆಟ್ ಮಂಡಿಸಲಾಗುತ್ತೆ. ಇದಕ್ಕೆ ಕೆಲವೇ ನಿಮಿಷಗಳಷ್ಟೇ ಬಾಕಿ ಇರುವಂತೆ ಪ್ರಧಾನಿ ಅವರು ಹಣಕಾಸು ಸಚಿವರನ್ನು ಲೋಕಸಭೆಗೆ ಕರೆತಂದು ಆಸನದಲ್ಲಿ ಕೂರಿಸುತ್ತಾರೆ. ಬಳಿಕ ಸ್ಪೀಕರ್ ಅವರಿಂದ ಅನುಮತಿ ಪಡೆದು ಹಣಕಾಸು ಸಚಿವರು ಬಜೆಟ್ ಪ್ರತಿಯನ್ನು ಓದಲು ಆರಂಭಿಸುತ್ತಾರೆ.
ಈ ಬಾರಿ 1 ತಿಂಗಳು ಮೊದಲೇ ಯಾಕೆ?: ಇಲ್ಲಿಯವರೆಗೆ ಫೆಬ್ರವರಿ ಕೊನೆಯ ದಿನಾಂಕದಂದು ಬಜೆಟ್ ಮಂಡನೆಯಾಗುತಿತ್ತು. ಆದರೆ ಈ ಬಜೆಟ್‍ಗೆ ಮಾರ್ಚ್ 31ರೊಳಗೆ ಸಂಸತ್ತಿನ ಅನುಮೋದನೆ ಸಿಗುತ್ತಿರಲಿಲ್ಲ. ಹೀಗಾಗಿ ಅಲ್ಲಿಯವರೆಗೆ ಎರಡು ತಿಂಗಳ ಅವಧಿಗೆ ಲೇಖಾನುದಾನಕ್ಕೆ ಒಪ್ಪಿಗೆ ಪಡೆಯಬೇಕಿತ್ತು. ಇದಾದ ಬಳಿಕ ಅನುಮೋದನೆ ಪಡೆದು ಪೂರ್ಣ ಪ್ರಮಾಣದಲ್ಲಿ ಬಜೆಟ್ ಅನುಷ್ಠಾನ ಮಾಡುವ ವೇಳೆ ಮೂರು, ನಾಲ್ಕು ತಿಂಗಳು ಕಳೆದು ಹೋಗುತಿತ್ತು. ಈ ಲೇಖಾನುದಾನ ಪಡೆಯುವುದನ್ನು ತಪ್ಪಿಸಲು ಮತ್ತು ಏಪ್ರಿಲ್‍ನಿಂದ ಆರಂಭವಾಗುವ ಹಣಕಾಸು ವರ್ಷದಿಂದಲೇ ಬಜೆಟ್ ಅನುಷ್ಠಾನಗೊಳಿಸಲು ಕೇಂದ್ರ ಸರ್ಕಾರ ಈ ಬಾರಿ ಜನವರಿ 31ರಿಂದ ಬಜೆಟ್ ಅಧಿವೇಶನ ನಡೆಸಲು ಮುಂದಾಗಿದೆ. ಈ ವರ್ಷದಿಂದ ರೈಲ್ವೇ ಬಜೆಟ್ ಪ್ರತ್ಯೇಕವಾಗಿ ಮಂಡನೆಯಾಗುವುದಿಲ್ಲ. ಹಣಕಾಸು ಬಜೆಟ್ ನಲ್ಲೇ ರೈಲ್ವೇ ಬಜೆಟ್ ವಿಲೀನವಾಗಲಿದೆ. ಪ್ರತ್ಯೇಕ ರೈಲ್ವೆ ಬಜೆಟ್ ಮಂಡಿಸುವ 92 ವರ್ಷಗಳ ಪದ್ಧತಿ ಈ ಹಣಕಾಸು ವರ್ಷದಲ್ಲಿ ಕೊನೆಯಾಗಲಿದೆ.