Tag: Haldi Ceremony

  • ಹಳದಿ ಶಾಸ್ತ್ರ ಸಂಭ್ರಮದಲ್ಲಿ ಮಿಂದೆದ್ದ ಡಾಲಿ ಧನಂಜಯ್‌, ಧನ್ಯತಾ ಜೋಡಿ

    ಹಳದಿ ಶಾಸ್ತ್ರ ಸಂಭ್ರಮದಲ್ಲಿ ಮಿಂದೆದ್ದ ಡಾಲಿ ಧನಂಜಯ್‌, ಧನ್ಯತಾ ಜೋಡಿ

    – ಇಂದು, ನಾಳೆ ಮೈಸೂರಲ್ಲಿ ನಟ ಡಾಲಿ ವಿವಾಹ ಕಾರ್ಯಕ್ರಮ

    ಮೈಸೂರು: ನಟ ಡಾಲಿ ಧನಂಜಯ್‌ (Daali Dhananjay) ಮನೆಯಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ. ಧನಂಜಯ್‌ ಮತ್ತು ಡಾಕ್ಟರ್‌ ಧನ್ಯತಾ (Dhanyatha) ಜೋಡಿ ಹಳದಿ ಶಾಸ್ತ್ರದ ಸಂಭ್ರಮದಲ್ಲಿ ಮಿಂದೆದ್ದಿದ್ದಾರೆ.

    ನಟನ ಹಳದಿ ಶಾಸ್ತ್ರ ಸಮಾರಂಭಕ್ಕೆ ಹಿರಿಯ ನಟ, ಮಾಜಿ ಸಚಿವ ಬಿ.ಸಿ.ಪಾಟೀಲ್‌ ಮತ್ತು ಕುಟುಂಬದವರು ಆಗಮಿಸಿ ಶುಭಕೋರಿದ್ದಾರೆ.

    ಜರ್ಮನಿಯ ರಂಗ ನಿರ್ದೇಶಕ ಕ್ರಿಸ್ಟೆನ್‌ ಭಾಗವಹಿಸಿದ್ದು ಕೂಡ ವಿಶೇಷವಾಗಿತ್ತು. ಹಳದಿ ಶಾಸ್ತ್ರ ಸಮಾರಂಭದಲ್ಲಿ ಧನಂಜಯ್‌ ಮತ್ತು ಧನ್ಯತಾ ಜೋಡಿ ಕುಟುಂಬಸ್ಥರು, ಆಪ್ತರು, ಸ್ನೇಹಿತರು ಪಾಲ್ಗೊಂಡು ಶುಭಹಾರೈಸಿದ್ದಾರೆ.

    ಇಂದು ಮೈಸೂರಿನ ವಸ್ತುಪ್ರದರ್ಶನ ಮೈದಾನದಲ್ಲಿ ನಟ ಮತ್ತು ಡಾಕ್ಟರ್‌ ಜೋಡಿ ಆರತಕ್ಷತೆ ನಡೆಯಲಿದೆ. ಇಂದು ಬೆಳಗ್ಗೆಯಿಂದಲೇ ಶಾಸ್ತ್ರಗಳು ನಡೆಯಲಿವೆ. ಸಂಜೆ 6 ಗಂಟೆಯ ನಂತರ ಆರತಕ್ಷತೆ ಕಾರ್ಯಕ್ರಮ ಇರಲಿದೆ.

    ನಾಳೆ ಬೆಳಗ್ಗೆ ಧಾರಾ ಮುಹೂರ್ತ ನಡೆಯಲಿದೆ. ಆರತಕ್ಷತೆಗೆ ಸ್ಯಾಂಡಲ್‌ವುಡ್ ತಾರೆಯರು, ರಾಜಕೀಯ ರಂಗದ ಗಣ್ಯರು ಹಾಗೂ ಅಭಿಮಾನಿಗಳು ಭಾಗವಹಿಸಲಿದ್ದಾರೆ.

  • ಠಾಣೆಯಲ್ಲೇ ಅರಿಶಿನ ಶಾಸ್ತ್ರ ಮಾಡಿಕೊಂಡ ಪೊಲೀಸ್

    ಠಾಣೆಯಲ್ಲೇ ಅರಿಶಿನ ಶಾಸ್ತ್ರ ಮಾಡಿಕೊಂಡ ಪೊಲೀಸ್

    ಜೈಪುರ್: ರಜೆ ಸಿಗದ ಹಿನ್ನೆಲೆಯಲ್ಲಿ ಮಹಿಳಾ ಪೊಲೀಸ್ ಪೇದೆಯೊಬ್ಬರು ಠಾಣೆಯಲ್ಲೇ ಅರಿಶಿನ ಶಾಸ್ತ್ರವನ್ನು ಆಚರಿಸಿಕೊಂಡು ಸುದ್ದಿಯಾಗಿದ್ದಾರೆ.

    ಮದುವೆಯ ಮುಂಚಿನ ಶಾಸ್ತ್ರವಾದ ಅರಿಶಿನ ಹಚ್ಚುವ ಕಾರ್ಯಕ್ರಮಕ್ಕೆ ರಜೆ ಸಿಗದ ಹಿನ್ನೆಲೆಯಲ್ಲಿ ಪೊಲೀಸ್ ಸ್ಟೇಷನ್ ಎದುರೆ ಅರಿಶಿಣ ಹಚ್ಚಿಸಿಕೊಂಡಿದ್ದಾರೆ. ರಾಜಸ್ಥಾನದ ದುಂಗರ್‌ಪುರ್‌ ಕೊಟ್ವಾಲಿ ಪೊಲೀಸ್ ಸ್ಟೇಷನ್‍ನಲ್ಲಿ ಸೇವೆ ಸಲ್ಲಿಸುತ್ತಿರುವ ಮಹಿಳಾ ಪೇದೆಗೆ ಮದುವೆ ಕಾರ್ಯಕ್ರಮಗಳಿಗೆ ರಜೆ ಸಿಕ್ಕಿಲ್ಲ. ಕೊರೊನಾ ಇರುವ ಕಾರಣದಿಂದಾಗಿ ಪೊಲೀಸ್ ಇಲಾಖೆ ರಜೆ ನೀಡಿಲು ನಿರಾಕರಿಸಿದೆ.

    ಈ ಹಿನ್ನೆಲೆಯಲ್ಲಿ ಪೊಲೀಸ್ ಸ್ಟೇಷನ್ ಬಳಿಯೇ ಸಹೋದ್ಯೋಗಿಗಳು ಪೊಲೀಸ್ ಪೇದೆಗೆ ಅರಿಶಿನ ಹಚ್ಚುವ ಶಾಸ್ತ್ರವನ್ನು ಆಚರಿಸಿದ್ದಾರೆ. ಈ ಶಾಸ್ತ್ರದ ಕೆಲವು ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಪೊಲೀಸ್ ಪೇದೆ ಮದುವೆ ಶಾಸ್ತ್ರಗಳ ಮಧ್ಯೆಯು ಕರ್ತವ್ಯದಲ್ಲಿ ಭಾಗಿಯಾಗಿರುವುದಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

  • ಗಾಜನೂರಿನ ಮನೆಯಲ್ಲಿ ರಾಜ್ ಮೊಮ್ಮಗನ ಅರಿಶಿಣ ಶಾಸ್ತ್ರ

    ಗಾಜನೂರಿನ ಮನೆಯಲ್ಲಿ ರಾಜ್ ಮೊಮ್ಮಗನ ಅರಿಶಿಣ ಶಾಸ್ತ್ರ

    ಚಾಮರಾಜನಗರ: ನಟ ರಾಘವೇಂದ್ರ ರಾಜ್‍ಕುಮಾರ್ ಅವರ ಎರಡನೇ ಪುತ್ರ ಯುವರಾಜ್ ಅವರ ಅರಿಶಿಣ ಶಾಸ್ತ್ರ ಗಾಜನೂರಿನ ನಿವಾಸದಲ್ಲಿ ಇಂದು ನಡೆದಿದೆ.

    ಮೇ 26ರಂದು ಯುವ ರಾಜ್‍ಕುಮಾರ್ ಅವರ ಮದುವೆ ನಿಗದಿಯಾಗಿದ್ದು, ಇಂದು ಗಾಜನೂರಿನ ಮನೆಯಲ್ಲಿ ಅರಿಶಿಣದ ಶಾಸ್ತ್ರ ನಡೆಯಿತು. ಅರಿಶಿಣದ ಶಾಸ್ತ್ರದಲ್ಲಿ ರಾಜ್‍ಕುಮಾರ್ ಕುಟುಂಬಸ್ಥರು ಭಾಗಿಯಾಗಿದ್ದು, ಮದುವೆ ಸಂಭ್ರಮ ಮನೆ ಮಾಡಿದೆ.

    ಯುವರಾಜ್‍ಕುಮಾರ್ ತಮ್ಮ ಗೆಳತಿ ಶ್ರೀದೇವಿ ಜೊತೆ ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್‍ನಲ್ಲಿ ಅದ್ಧೂರಿಯಾಗಿ ಮದುವೆ ಆಗಲಿದ್ದಾರೆ. ಈ ಮದುವೆಗೆ ಎಲ್ಲಾ ತಯಾರಿ ನಡೆಯುತ್ತಿದೆ. ಅದೇ ದಿನ ಆರತಕ್ಷತೆ ಕಾರ್ಯಕ್ರಮ ಕೂಡ ಹಮ್ಮಿಕೊಂಡಿದ್ದಾರೆ. ಈಗಾಗಲೇ ಸಿನಿಮಾರಂಗದ ಗಣ್ಯರಿಗೆ ಆಹ್ವಾನ ಪತ್ರಿಕೆ ನೀಡುತ್ತಿದ್ದು, ಮದುವೆ ತಯಾರಿಯಲ್ಲಿ ದೊಡ್ಮನೆ ಮಂದಿ ಸಾಕಷ್ಟು ಬ್ಯುಸಿಯಾಗಿದ್ದಾರೆ.

    ಕಳೆದ ವರ್ಷ ಜುಲೈ ತಿಂಗಳಿನಲ್ಲಿ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಯುವ ರಾಜ್‍ಕುಮಾರ್ ಹಾಗೂ ಶ್ರೀದೇವಿ ಉಂಗುರ ಬದಲಾಯಿಸಿಕೊಂಡಿದ್ದರು. ಖಾಸಗಿ ಹೊಟೇಲ್‍ನಲ್ಲಿ ನಡೆದ ಸಮಾರಂಭದಲ್ಲಿ ಈ ಜೋಡಿ ಎಂಗೇಜ್ ಆಗಿದ್ದರು. ಯುವ ರಾಜ್‍ಕುಮಾರ್ ಹಾಗೂ ಶ್ರೀದೇವಿ ಉಂಗುರ ಬದಲಾವಣೆ ವೇಳೆ ರಾಜ್ ಕುಟುಂಬ ಸದಸ್ಯರು ಹಾಜರಾಗಿದ್ದು, ನವ ಜೋಡಿಗೆ ಶುಭ ಹಾರೈಸಿದ್ದರು.

    ಈ ಹಿಂದೆ ಯುವ ಅವರ ಹೆಸರು ಗುರು ರಾಜ್‍ಕುಮಾರ್ ಆಗಿದ್ದು, ಈಗ ಯುವ ರಾಜ್‍ಕುಮಾರ್ ಎಂದು ಹೆಸರು ಬದಲಾಯಿಸಿಕೊಂಡಿದ್ದಾರೆ. ಯುವ ರಾಜ್‍ಕುಮಾರ್ ಇದುವರೆಗೂ ಯಾವ ಸಿನಿಮಾದಲ್ಲೂ ಹೀರೋ ಆಗಿ ಕಾಣಿಸಿಕೊಂಡಿಲ್ಲ. ಆದರೆ ತಮ್ಮ ಹೋಮ್ ಬ್ಯಾನರ್ ನಲ್ಲಿ ಬರುವ ಚಿತ್ರಗಳ ತೆರೆ ಹಿಂದೆ ಕೆಲಸ ಮಾಡಿದ್ದಾರೆ. ಸದ್ಯ ಯುವ ಮದುವೆ ಆದ ನಂತರ ಹೀರೋ ಆಗಿ ಕಾಣಿಸಿಕೊಳ್ಳಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ.