Tag: halasuru

  • ಸರ್ಕಾರದ ವಿರುದ್ಧ ಪೋಸ್ಟರ್ ಅಂಟಿಸಿದವರ ಮೇಲೆ ಎಫ್‌ಐಆರ್‌

    ಸರ್ಕಾರದ ವಿರುದ್ಧ ಪೋಸ್ಟರ್ ಅಂಟಿಸಿದವರ ಮೇಲೆ ಎಫ್‌ಐಆರ್‌

    ಬೆಂಗಳೂರು: ರಾಜ್ಯದಲ್ಲಿರುವ ಕಾಂಗ್ರೆಸ್‌ ಸರ್ಕಾರದ (Congress Government) ವಿರುದ್ಧ ಪೋಸ್ಟರ್ (Poster) ಅಂಟಿಸಿ ಅಭಿಯಾನ ನಡೆಸಿದ್ದವರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ.

    ಕಳೆದ ಮೂರು ದಿನದ ಹಿಂದೆ ಜೆಡಿಎಸ್ ಪಕ್ಷದಿಂದ ಸರ್ಕಾರದ ವಿರುದ್ಧ “ಸಾಕಪ್ಪ ಸಾಕು ಕಾಂಗ್ರೆಸ್ ಸರ್ಕಾರ” ಎಂಬ ಹೆಸರಿನಲ್ಲಿ ಪೋಸ್ಟ್‌ ಅಂಟಿಸಿ ಸರ್ಕಾರವನ್ನು ಟೀಕಿಸಲಾಗಿತ್ತು

    ನಗರದ ಮಹಾರಾಣಿ ಕಾಲೇಜು ಬಸ್ ನಿಲ್ದಾಣ, ಕೆ.ಆರ್ ಸರ್ಕಲ್ ಸೇರಿ ವಿವಿಧ ಕಡೆ ಪೋಸ್ಟರ್ ಅಂಟಿಸಿ, ಕ್ಯೂ ಆರ್ ಕೋಡ್ ಸ್ಕ್ಯಾನ್ ಅಳವಡಿಕೆ ಮಾಡಲಾಗಿತ್ತು. ಇದನ್ನೂ ಓದಿ: ಮದುವೆಯಾಗಲು ಬಂದ ಪ್ರೇಮಿಗಳಿಗೆ ಗೂಸಾ – ರಕ್ತ ಸುರಿಯುತ್ತಿದ್ದರೂ ಪ್ರಿಯಕರನತ್ತ ಕೈ ಸನ್ನೆ ಮಾಡಿದ ಯುವತಿ

     

    ಯಾವುದೇ ಅನುಮತಿ ಪಡೆಯದೇ ಪೋಸ್ಟರ್‌ಗಳನ್ನು ಅಂಟಿಸಿದ್ದ ಹಿನ್ನೆಲೆಯಲ್ಲಿ ಹಲಸೂರು ಪೊಲೀಸ್ ಠಾಣೆಯಲ್ಲಿ (Halasuru Police Station) ಈ ಸಂಬಂಧ ಎಫ್ ಐಆರ್ ದಾಖಲಿಸಲಾಗಿದೆ. ಇದನ್ನೂ ಓದಿ: ಯತ್ನಾಳ್ ಬೆನ್ನುಬಿದ್ದು ಪೀಠ ಕಳೆದುಕೊಳ್ತಾರ ಜಯಮೃತ್ಯುಂಜಯ ಶ್ರೀ?

    ಬೆಲೆ ಏರಿಕೆ, ಭ್ರಷ್ಟಾಚಾರ, ಆರೋಪದಲ್ಲಿ ಜೆಡಿಎಸ್ ಪಕ್ಷ “ಸಾಕಪ್ಪ ಸಾಕು ಕಾಂಗ್ರೆಸ್ ಸರ್ಕಾರ” ಹೆಸರಿನಲ್ಲಿ ಅಭಿಯಾನ ನಡೆಸುತ್ತಿದೆ.

  • ಮರ್ಯಾದೆ ಹೋಯ್ತು, ನಾನ್ ಮನೆಗೆ ಬರಲ್ಲ – ಹಲ್ಲೆಗೊಳಗಾಗಿದ್ದ ಸುನೀಲ್ ಫೋನ್ ಸ್ವಿಚ್ ಆಫ್

    ಮರ್ಯಾದೆ ಹೋಯ್ತು, ನಾನ್ ಮನೆಗೆ ಬರಲ್ಲ – ಹಲ್ಲೆಗೊಳಗಾಗಿದ್ದ ಸುನೀಲ್ ಫೋನ್ ಸ್ವಿಚ್ ಆಫ್

    – ಸುನೀಲ್ ವಿರುದ್ಧವೇ ಟ್ರಾಫಿಕ್ ಪೊಲೀಸ್ ದೂರು

    ಬೆಂಗಳೂರು: ಹಲಸೂರು ಟ್ರಾಫಿಕ್ ಪೊಲೀಸರಿಂದ ಡ್ರೈವರ್ ಮೇಲೆ ಹಲ್ಲೆ ಪ್ರಕರಣ ಸಂಬಂಧ ಟೆಂಪೋ ಟ್ರಾವೆಲರ್ ಸುನೀಲ್ ಪೋಷಕರು ಪುಟ್ಟೇನಹಳ್ಳಿ ಠಾಣೆಗೆ ದೂರು ನೀಡಿದ್ದಾರೆ.

    ಹಲ್ಲೆಗೊಳಗಾದ ಬೇಸರದಲ್ಲಿ ಕಳೆದ 3 ದಿನಗಳಿಂದ ಮನೆ ಹೋಗದ ಸುನೀಲ್, ತಾಯಿಗೆ ಕರೆ ಮಾಡಿ ನನ್ನ ಮರ್ಯಾದೆ ಹೋಯ್ತು. ನಾನು ಮನೆಗೆ ಬರಲ್ಲ ಎಂದು ಕಾಲ್ ಕಟ್ ಮಾಡಿದ್ದಾರೆ. ಅಲ್ಲದೆ 3 ದಿನದಿಂದ ಸುನೀಲ್ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿದ್ದು, ಹೆತ್ತವರನ್ನು ಆತಂಕ್ಕೀಡು ಮಾಡಿದೆ.

    ಸುನೀಲ್ ಕಳೆದ ಶುಕ್ರವಾರ ಹಲಸೂರು ಬಳಿ ಟ್ರಾಫಿಕ್ ಎಎಸ್‍ಐ ಮಹಾಸ್ವಾಮಿಯಿಂದ ಹಲ್ಲೆಗೊಳಗಾಗಿದ್ದರು. ಅದೇ ದಿನ ರಾತ್ರಿ ಜೆ.ಪಿ.ನಗರದ ಜರಗನಹಳ್ಳಿಯ ಸುನೀಲ್ ನಿವಾಸಕ್ಕೆ ಬಂದ ಏಳೆಂಟು ಜನರು ಬೆದರಿಕೆ ಹಾಕಿದ್ದಾರೆ. ಮೀಡಿಯಾ ಮುಂದೆ ಹೋದರೆ ನಿಮ್ಮನ್ನು ಸುಮ್ನೆ ಬಿಡಲ್ಲವೆಂದು ಧಮ್ಕಿ ಹಾಕಿದ್ದರು. ಒಂದು ವೇಳೆ ನನ್ನ ಮಗನಿಗೆ ಏನಾದ್ರೂ ಆದರೆ ಪೊಲೀಸರೇ ಕಾರಣ ಎಂದು ಸುನೀಲ್ ತಾಯಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಏನಿದು ಪ್ರಕರಣ..?
    ಟೆಂಪೋ ಟ್ರಾವೆಲರ್ ಚಾಲಕನಾಗಿರುವ ಸುನೀಲ್ ಅವರು ಶುಕ್ರವಾರ ಬಿಬಿಎಂಪಿ ಕಡೆಯಿಂದ ಟೌನ್ ಹಾಲ್ ಬಳಿ ಯೂಟರ್ನ್ ತೆಗೆದುಕೊಂಡರು ಎಂಬ ಕಾರಣಕ್ಕೆ ಟ್ರಾಫಿಕ್ ಪೊಲೀಸರೊಬ್ಬರು ಥಳಿಸಿದ್ದರು. ಅಲ್ಲದೆ ಅವಾಚ್ಯ ಶಬ್ದಳಿಂದ ನಿಂದಿಸಿದ್ದರು.

    ಟ್ರಾಫಿಕ್ ಪೊಲೀಸ್ ಹಲ್ಲೆ ಹಾಗೂ ನಿಂದಿಸಿರುವುದನ್ನು ಸುನೀಲ್ ತಮ್ಮ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾರೀ ಚರ್ಚೆಗೀಡಾಗಿತ್ತು. ಟ್ರಾಫಿಕ್ ಪೊಲೀಸಪ್ಪನ ದೌರ್ಜನ್ಯವನ್ನು ಕಂಡ ಜಾಲತಾಣಿಗರು ಆಕ್ರೋಶ ವ್ಯಕ್ತಪಡಿಸಿದ್ದರು.

    ಯೂಟರ್ನ್ ತೆಗೆದುಕೊಂಡ ಎಂಬ ಕಾರಣಕ್ಕೆ ಟೆಂಪೋ ಏರಿ ಚಾಲಕ ಸುನೀಲ್ ಪಕ್ಕ ಕುಳೀತ ಪೇದೆ ಮೊದಲಿಗೆ ವಾಹನವನ್ನು ರಸ್ತೆ ಬದಿಯಲ್ಲಿ ನಿಲ್ಲಿಸುವಂತೆ ಹೇಳಿದ್ದಾರೆ. ಈ ವೇಳೆ ಚಾಲಕ ಇಲ್ಲಿ ವಾಹನಗಳಿವೆ ಮುಂದೆ ನಿಲ್ಲಿಸುತ್ತೇನೆ ಎಂದಿದ್ದಾರೆ. ಇದರಿಂದ ಸಿಟ್ಟಿಗೆದ್ದ ಪೊಲೀಸ್, ತಾನೇ ವಾಹನದ ಸ್ಟೇರಿಂಗ್ ವ್ಹೀಲ್ ಹಿಡಿದು ಪಕ್ಕಕ್ಕೆ ಎಳೆಯು ಪ್ರಯತ್ನ ಮಾಡುವುದನ್ನು ನಾವು ವಿಡಿಯೋದಲ್ಲಿ ಕಾಣಬಹುದಾಗಿದೆ. ವೀಡಿಯೋ ವೈರಲ್ ಆದ ಬೆನ್ನಲ್ಲೇ ಸುನೀಲ್ ವಿರುದ್ಧವೇ ಟ್ರಾಫಿಕ್ ಪೊಲೀಸ್ ಎಫ್‍ಐಆರ್ ದಾಖಲು ಮಾಡಿದ್ದಾರೆ.

  • ಬೆಂಗ್ಳೂರಲ್ಲೊಂದು ಚಾಕ್ಲೇಟ್ ಜಂಕ್ಷನ್- ಸಿಹಿ ಪ್ರಿಯರಿಗೆ ಹಬ್ಬವೋ ಹಬ್ಬ

    ಬೆಂಗ್ಳೂರಲ್ಲೊಂದು ಚಾಕ್ಲೇಟ್ ಜಂಕ್ಷನ್- ಸಿಹಿ ಪ್ರಿಯರಿಗೆ ಹಬ್ಬವೋ ಹಬ್ಬ

    ಬೆಂಗಳೂರು: ಚಾಕ್ಲೇಟ್ ಅಂದ್ರೆ ಯಾರಿಗೆ ತಾನೇ ಇಷ್ಟ ಆಗಲ್ಲ. ಹಾಲು ಹಲ್ಲಿನ ಕಂದನಿಂದ ಹಿಡಿದು ಹಲ್ಲು ಬಿದ್ದ ಅಜ್ಜಿವರೆಗೂ ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ. ಹೀಗಾಗಿಯೇ ಕ್ರಿಸ್ ಮಸ್ ಹಾಗೂ ಹೊಸ ವರ್ಷಕ್ಕೆ ವೆರೈಟಿ ವೆರೈಟಿ ಚಾಕ್ಲೇಟ್ ಗಳು ಸಿಲಿಕಾನ್ ಸಿಟಿಗೆ ಲಗ್ಗೆಯಿಟ್ಟಿವೆ.

    ಹೌದು. ಹಲಸೂರು ಹತ್ತಿರದ ಚಾಕಲೇಟ್ ಜಂಕ್ಷನ್‍ನಲ್ಲಿ ಪ್ಲೇನ್ ಚಾಕ್ಲೆಟ್, ಆರೆಂಜ್ ಫ್ಲೇವರ್, ನೆಟ್ಸ್, ಬಟರ್ ಸ್ಕಾಚ್, ಡಾರ್ಕ್, ಕಾಫಿ ಸೇರಿ 70 ಬಗೆಯ ಚಾಕ್ಲೇಟ್ಸ್ ಗಳನ್ನು ಕಾಣಬಹುದಾಗಿದೆ.

    ಚಾಕ್ಲೇಟ್ ನಿಂದ ತಯಾರಾಗಿರೋ ಸಾಂತಾಕ್ಲಾಸ್ ಕಲರ್ ಪುಲ್ ಆಗಿ ಮಿಂಚುತ್ತಿದೆ. ತೊಟ್ಟಿಲ ಬುಟ್ಟಿಯಲ್ಲಿ ಅರಳಿನಿಂತ ಜೋಡಿಗಳು, ಅಲ್ಲಲ್ಲಿ ಕಂಡು ಬರೋ ಪುಟ್ ಪುಟಾಣಿ ಗೊಂಬೆಗಳು, ಕಣ್ ಮಿಟುಕಿಸುತ್ತಿರೋ ಪಪ್ಪಿಸ್. ಇವೆಲ್ಲವೂ ಒಂದಕ್ಕಿಂತ ಒಂದು ಡಿಫರೆಂಟ್ ಆಗಿದ್ದು ಟೇಸ್ಟೂ ಕೂಡ ಬೊಂಬಾಟ್ ಆಗಿದೆ.

    ಕ್ರಿಸ್ ಮಸ್ ಹಬ್ಬ ಆರಂಭವಾಗುತ್ತಿದೆ. ಹೀಗಾಗಿ 100 ರೂ. ನಿಂದ 1,700 ರೂ. ವರೆಗಿನ ಎಲ್ಲಾ ವಿಧದ ಚಾಕ್ಲೇಟ್ ಗಳು ಲಭ್ಯವಿದೆ. ಕ್ರಿಸ್ ಕೇಕ್ ಕೂಡ ಮಾಡಿದ್ದೇವೆ ಅಂತ ಮಾಲೀಕರಾದ ಅನುಪಮಾ ಅಮರನಾಥ್ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ತಿಳಿಸಿದ್ದಾರೆ.

    ಈ ಬಾರಿ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಸ್ಪೆಷಲ್ ಆಗಿ ಸಂತಾಕ್ಲಾಸ್, ಟೆಡ್ಡಿ ಬಿಯರ್, ಪಪ್ಪಿಸ್, ಜೀಸೆಸ್ ಚಾಕ್ಲೇಟ್ ತಯಾರಿಸಲಾಗಿದೆ. ಹಾಗೇ ಚಾಕ್ಲೇಟ್ ಫೋಟೋ ಪ್ರೇಮ್‍ಗಳು ಕಣ್ಣಿಗೆ ಮುದ ನೀಡ್ತಿವೆ. ಭರ್ಜರಿ ವ್ಯಾಪಾರ ನಡೆಯುತ್ತಿದೆ ಅಂತ ಗ್ರಾಹಕಿ ಪುಷ್ಪಾ ತಿಳಿಸಿದ್ದಾರೆ.

    ಒಟ್ಟಿನಲ್ಲಿ ಚಾಕ್ಲೇಟ್ ಕರಾಮತ್ತೆ ಹಾಗೆ. ಡಿಸೈನೂ ಡಿಫೆರೆಂಟ್, ಟೆಸ್ಟೂ ಬೊಂಬಾಟ್ ಆಗಿರುತ್ತದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv