Tag: halashree

  • ಚೈತ್ರಾ ಕುಂದಾಪುರ ವಂಚನೆ ಪ್ರಕರಣ- ಹಾಲಶ್ರೀ ಮಠದಲ್ಲಿ ಮಹಜರು

    ಚೈತ್ರಾ ಕುಂದಾಪುರ ವಂಚನೆ ಪ್ರಕರಣ- ಹಾಲಶ್ರೀ ಮಠದಲ್ಲಿ ಮಹಜರು

    ವಿಜಯನಗರ: ರಾಜ್ಯದಲ್ಲಿ ಚೈತ್ರಾ ಕುಂದಾಪುರ (Chaitra Kundapur) 5 ಕೋಟಿ ರೂ. ವಂಚನೆ ಪ್ರಕರಣ ಹೆಚ್ಚು ಸದ್ದು ಮಾಡುತ್ತಿದೆ. ಪ್ರಕರಣದ ಎ3 ಆರೋಪಿ ಹಾಲಶ್ರೀ ಸ್ವಾಮೀಜಿಯನ್ನು (Halashree Swamiji) ಅರೆಸ್ಟ್ ಮಾಡಿದ ಸಿಸಿಬಿ ಪೊಲೀಸರು (CCB Police) ಬುಧವಾರ ರಾತ್ರಿ ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಹಿರೇಗಡಗಲಿ ಮಠದಲ್ಲಿ ಮಹಜರು ನಡೆಸಿದ್ದಾರೆ.

    ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮಿಗಳ ಮಹಾಸಂಸ್ಥಾನ ಮಠದಲ್ಲಿ 2 ಗಂಟೆಗೂ ಹೆಚ್ಚು ಕಾಲ ಮಹಜರು ನಡೆಸಿದರು. ಮಠಕ್ಕೆ ಎಂಟ್ರಿಯಾಗುತ್ತಿದ್ದಂತೆ ತೆಂಗಿನಕಾಯಿ ಒಡೆದು ಸ್ವಾಗತ ಮಾಡಿದರು. ಮಠದ ಒಳಗೆ ಹೋಗುತ್ತಿದ್ದಂತೆ ಅಭಿನವ ಹಾಲಶ್ರೀ ಸ್ವಾಮೀಜಿಯನ್ನೊಬ್ಬರನ್ನೇ ರೂಂ ನೊಳಗೆ ಕರೆದುಕೊಂಡು ಹೋಗಿ ಮಹಜರು ಮಾಡಿದ್ದಾರೆ.

    ಹಾಲಶ್ರೀ ಇರುತ್ತಿದ್ದ ರೂಂನೊಳಗೆ ಸಿಸಿಬಿ ಪೊಲೀಸರು ಕುಟುಂಬಸ್ಥರನ್ನು ಒಳಗಡೆ ಬಿಡದೆ ಹಾಲಶ್ರೀ ಜೊತೆಗೆ ಮಹಜರು ನಡೆಸಿದರು. ಹಾಲಶ್ರೀ ಜೊತೆಗೆ ಕುಟುಂಬಸ್ಥರು ಮಾತನಾಡಲು ಅವಕಾಶ ಕೇಳಿದರು. ಒಳಗಡೆ ಅವಕಾಶ ಇಲ್ಲ, ಹೊರಗಡೆ ಬಂದಾಗಲೇ ಮಾತನಾಡಲು ಹೇಳಿದರು. ಆದರೆ ಕುಟುಂಬಸ್ಥರ ಜೊತೆಗೆ ಮಾತನಾಡಲು ಹಾಲಶ್ರೀ ಮುಜುಗರಗೊಂಡು, ಕುಟುಂಬಸ್ಥರು ಏನೇ ಕೇಳಿದರೂ ಉತ್ತರಿಸಲಿಲ್ಲ. ಇದನ್ನೂ ಓದಿ: ಬಟ್ಟೆ ಅಂಗಡಿ ಹೆಸ್ರಲ್ಲಿ ವಂಚನೆ ಆರೋಪ- ಚೈತ್ರಾ ವಿಚಾರಣೆಗೆ ಒಪ್ಪಿಸುವಂತೆ ಕೋಟ ಪೊಲೀಸರ ಮನವಿ

    ಊಟ ಮಾಡಿ ಹೋಗಿ ಎಂದು ಮನವಿ ಮಾಡಿದಾಗ, ಇಲ್ಲ ಅವರ ಊಟ ಆಗಿದೆ. ನಾವು ಯಾರೂ ಊಟ ಮಾಡಲ್ಲ ನಮ್ಮ ಊಟ ಆಗಿದೆ ಎಂದು ಹೇಳಿ ಹಾಲಶ್ರೀ ಯನ್ನು ಮಹಜರು ಮಾಡಿ ಕರೆದುಕೊಂಡು ಹೋದರು. ಮಹಜರು ವೇಳೆ ಏನೆಲ್ಲಾ ಮಾಡಿದರು ಎಂಬುವುದರ ಬಗ್ಗೆ ಕುಟುಂಬಸ್ಥರಿಗೆ ಸುಳಿವು ಸಹ ಸಿಸಿಬಿ ಪೊಲೀಸರು ಬಿಟ್ಟುಕೊಟ್ಟಿಲ್ಲ. ಪತ್ನಿ, ತಂದೆ ಹಾಗೂ ಚಿಕ್ಕಪ್ಪಂದಿರು ಏನೇ ಕೇಳಿದರೂ, ಹಾಲಶ್ರೀ ಉತ್ತರಿಸದೆ ಕೈ ಸನ್ನೆ ಮಾಡಿದರೆ ಹೊರತು, ಮಾತನಾಡಿಲ್ಲ. ಹಾಕಿಕೊಂಡಿದ್ದ ಮಾಸ್ಕ್ ಸಹ ಕುಟುಂಬಸ್ಥರ ಮುಂದೆ ತೆಗೆಯದೆ ಹಾಗೆಯೇ ಸಿಸಿಬಿ ಪೊಲೀಸರ ಜೊತೆಗೆ ತೆರಳಿದರು. ಇದನ್ನೂ ಓದಿ: ಮಗಳ ಅಪಹರಣ ಕೇಸನ್ನು ಹಿಂಪಡೆಯುವಂತೆ ಹಲ್ಲೆಗೈದು ಮಹಿಳೆಗೆ ಒತ್ತಡ ಹೇರಿದ ಪೊಲೀಸ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಈಗಾಗ್ಲೇ 50 ಲಕ್ಷ ಕೊಟ್ಟಿದ್ದು, ಉಳಿದ ಹಣವನ್ನೂ ವಾಪಸ್ ಮಾಡ್ತೀನಿ: ಹಾಲಶ್ರೀ ಹೈಡ್ರಾಮಾ

    ಈಗಾಗ್ಲೇ 50 ಲಕ್ಷ ಕೊಟ್ಟಿದ್ದು, ಉಳಿದ ಹಣವನ್ನೂ ವಾಪಸ್ ಮಾಡ್ತೀನಿ: ಹಾಲಶ್ರೀ ಹೈಡ್ರಾಮಾ

    ಬೆಂಗಳೂರು: ಚೈತ್ರಾ ಕುಂದಾಪುರ ಟಿಕೆಟ್ ಡೀಲ್ ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿ ಹಾಲಶ್ರೀ (Halashree) ಇಂದು ಸಿಸಿಬಿ ಅಧಿಕಾರಿಗಳ ಮುಂದೆ ಹೈಡ್ರಾಮಾ ಮಾಡಿದ್ದಾರೆ.

    ಗೋವಿಂದ ಬಾಬು ಪೂಜಾರಿಗೆ (Govinda Babu Poojary) ನಾನು ಈಗಾಗಲೇ 50 ಲಕ್ಷ ಕೊಟ್ಟಿದ್ದು, ಉಳಿದ ಹಣವನ್ನೂ ವಾಪಸ್ ಮಾಡ್ತೀನಿ ಎಂದು ಹೇಳಿದ್ದಾರೆ. ಗೋವಿಂದಬಾಬುರನ್ನು ಪರಿಚಯ ಮಾಡಿಸಿದರು. ಅವರು ನನಗೆ ಹಣ ಕೊಟ್ಟಿದ್ದಾರೆ. ಟಿಕೆಟ್ ಕೊಡಿಸ್ತೀನಿ ಅಂತ ನಾನು ಹಣ ಪಡೆದಿಲ್ಲ. ನನಗೆ ಕೊಟ್ಟಿರೋ ಹಣ ವಾಪಸ್ ಕೊಟ್ಟು ಬಿಡ್ತೀನಿ ಎಂದು ವಿಚಾರಣೆ ವೇಳೆ ನಾಟಕ ಶುರುಮಾಡಿದ್ದಾರೆ.

    ಈಗಾಗಲೇ 50 ಲಕ್ಷ ಹಣವನ್ನು ಗೋವಿಂದ ಬಾಬು ಅವರಿಗೆ ವಾಪಸ್ ಕೊಟ್ಟಿದ್ದೀನಿ. ದೂರು ಕೊಡುವ ಹಿಂದಿನ ದಿನವೂ ಹಣ ಕೊಡ್ತೀನಿ ಅಂತ ಹೇಳಿದ್ದೆ. ನನ್ನ ಹಣಕ್ಕೆ ಮಾತ್ರ ನಾನು ಜವಾಬ್ದಾರಿ, ಬೇರೆಯವರ ಹಣ ಗೊತ್ತಿಲ್ಲ. ಟಿಕೆಟ್ (BJP Ticekt) ವಿಚಾರವೂ ನನಗೆ ಗೊತ್ತಿಲ್ಲ ಎಂದು ಹೇಳುವ ಮೂಲಕ ನುಣುಚಿಕೊಳ್ಳುವ ಪ್ರಯತ್ನವನ್ನು ಹಾಲಶ್ರೀ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇದನ್ನೂ ಓದಿ: ಅಭಿನವ ಹಾಲಶ್ರೀ ನೇತೃತ್ವದಲ್ಲಿ ಗೋವಿಂದ್ ಬಾಬು ಪೂಜಾರಿ ಬಯೋಪಿಕ್

    ವಂಚನೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಹಾಲಶ್ರೀ ನಾಪತ್ತೆಯಾಗಿದ್ದರು. ಒಡಿಶಾದಲ್ಲಿ ಮಾರುವೇಷದಲ್ಲಿ ತಲೆಮರೆಸಿಕೊಂಡಿದ್ದ ಹಾಲಶ್ರೀಯನ್ನು ರೈಲ್ವೆ ಪೊಲೀಸರ ನೆರವಿನಿಂದ ಬಂಧಿಸಿ ಬೆಂಗಳೂರಿಗೆ ವಾಪಸ್ ಕರೆತರಲಾಗಿತ್ತು. ಸಿಸಿಬಿ ಪೊಲೀಸರು (CCB Police) ಇಂದು 19ನೇ ಎಸಿಎಂಎಂ ನ್ಯಾಯಾಲಯಕ್ಕೆ ಆರೋಪಿಯನ್ನು ಹಾಜರು ಪಡಿಸಿದರು.

    ಆರೋಪಿಯನ್ನು 14 ದಿನ ಪೊಲೀಸ್ ಕಸ್ಟಡಿಗೆ ನೀಡಬೇಕು ಎಂದು ಸಿಸಿಬಿ, ನ್ಯಾಯಾಲಯಕ್ಕೆ ಮನವಿ ಮಾಡಿತ್ತು. ಈ ವೇಳೆ ಹಾಲಶ್ರೀ ಪರ ವಕೀಲ ಅರುಣ್ ಶ್ಯಾಂ ಕೂಡ ಹಾಜರಿದ್ದರು. ಪೊಲೀಸ್ ಕಸ್ಟಡಿಗೆ ಆಕ್ಷೇಪ ವ್ಯಕ್ತಪಡಿಸಿ, ಜಾಮೀನು ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದರು. ಆರೋಪಿಗೆ ಜಾಮೀನು ನೀಡದಂತೆ ಪಬ್ಲಿಕ್ ಪ್ರಾಸಿಕ್ಯೂಟರ್ ವಕೀಲರು ಆಕ್ಷೇಪಿಸಿದರು. ತನಿಖೆ ನಡೆಯುವ ಮಧ್ಯೆ ಜಾಮೀನು ನೀಡಬಾರದು. ಸಾಕ್ಷಿ ನಾಶವಾಗುತ್ತದೆ ಎಂದು ವಾದ ಮಂಡಿಸಿದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ ಆರೋಪಿಯನ್ನು 10 ದಿನ ಪೊಲೀಸ್ ಕಸ್ಟಡಿಗೆ ವಹಿಸಿ ಆದೇಶ ಹೊರಡಿಸಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕೊನೆ ಕ್ಷಣದಲ್ಲೂ ಪಾರಾಗೋಕೆ ಹಾಲಶ್ರೀ ಯತ್ನ- ಮೈಸೂರಿನ ರಾಜಕಾರಣಿ ಬಳಿ ರಾಜಿ ಪಂಚಾಯ್ತಿಗೆ ಮೊರೆ

    ಕೊನೆ ಕ್ಷಣದಲ್ಲೂ ಪಾರಾಗೋಕೆ ಹಾಲಶ್ರೀ ಯತ್ನ- ಮೈಸೂರಿನ ರಾಜಕಾರಣಿ ಬಳಿ ರಾಜಿ ಪಂಚಾಯ್ತಿಗೆ ಮೊರೆ

    – ಅತ್ತ ಬಳ್ಳಾರಿಯಲ್ಲಿ ಆಸ್ತಿ ಖರೀದಿ

    ಮೈಸೂರು: ಉದ್ಯಮಿ ಗೋವಿಂದ ಪೂಜಾರಿಗೆ (Govind Babu Poojary) ಐದು ಕೋಟಿ ವಂಚನೆ ಮಾಡಿದ ಕೇಸ್‍ನಲ್ಲಿ ಎ-3 ಹಾಲಶ್ರೀ (Halashree) ಬಂಧನವಾಗಿದೆ. ಕೊನೆ ಕ್ಷಣದಲ್ಲೂ ಪಾರಾಗೋಕೆ ಹಾಲಾಶ್ರೀ ಯತ್ನಿಸಿದ್ರು ಎನ್ನಲಾಗ್ತಿದೆ.

    ಓರ್ವ ರಾಜಕಾರಣಿ ಮೂಲಕ ರಾಜಿ ಪಂಚಾಯ್ತಿ ಯತ್ನ ನಡೆಸಲು ಮುಂದಾಗಿದ್ರು ಎನ್ನಲಾಗ್ತಿದೆ. ಸೆಪ್ಟೆಂಬರ್ 8ರಂದು ವಂಚನೆ ಕೇಸು ದಾಖಲಾಗಿದೆ. ಸೆಪ್ಟೆಂಬರ್ ಹತ್ತರಂದು ಸ್ವಾಮೀಜಿ ಕೂಡ್ಲಿಗಿ ಗ್ರಾಮ ಒಂದರ ಧಾರ್ಮಿಕ ಕಾರ್ಯಕ್ರಮ ಮುಗಿಸಿ ನೇರವಾಗಿ ಮೈಸೂರಿಗೆ ಹೋಗಿದ್ರು. ಸ್ನೇಹಿತರ ಜೊತೆಯಲ್ಲಿ ಇದ್ದ ಸ್ವಾಮೀಜಿ ಮೈಸೂರಿನ (Mysuru) ಪ್ರಭಾವಿ ರಾಜಕಾರಣಿಯನ್ನು ಭೇಟಿ ಮಾಡಿ ಪ್ರಕರಣದಲ್ಲಿ ತಮ್ಮ ತಪ್ಪು ಇಲ್ಲಾ ಎನ್ನುವ ವಿಚಾರ ತಿಳಿಸಲು ಯತ್ನಿಸಿದ್ರಂತೆ.

    ಆ ಪ್ರಭಾವಿ ರಾಜಕಾರಣಿಯನ್ನು ಭೇಟಿ ಮಾಡುವ ಮೊದಲೇ ಚೈತ್ರಾ & ಗ್ಯಾಂಗ್ (Chaitra Kundapura) ಬಂಧನವಾಗಿದೆ. ಈ ಸುದ್ದಿ ತಿಳಿದ ಕೂಡಲೇ ಮೈಸೂರಿನಲ್ಲಿ ತಮ್ಮ ಕಾರ್ ಚಾಲಕನನ್ನು ಬಿಟ್ಟು ಅಲ್ಲಿಂದ ಮತ್ತೆ ಪರಾರಿಯಾಗುತ್ತಾರೆ. ಒಟ್ಟಿನಲ್ಲಿ ಸದ್ಯ ಕೋಟಿ ಕೋಟಿ ವಂಚನೆ ಕೇಸ್‍ನಲ್ಲಿ ಅಭಿನವ ಹಾಲಶ್ರೀ ತಗ್ಲಾಕಿಕೊಂಡಿದ್ದಾರೆ. ಉದ್ಯಮಿ ಗೋವಿಂದ ಪೂಜಾರಿಯಿಂದ 1.5 ಕೊಟಿ ಹಣ ಪಡೆದಿದ್ದ ಹಾಲಶ್ರೀ ಏನು ಮಾಡಿದ್ರು ಅನ್ನೋದೇ ಕುತೂಹಲ ಮೂಡಿದೆ. ಒಂದು ಕಡೆ ಸ್ವಾಮೀಜಿ ಬಂದ ಹಣದಿಂದ ಸಾಕಷ್ಟು ಆಸ್ತಿ ಖರೀದಿ ಮಾಡಿದ್ರು ಎನ್ನಲಾಗ್ತಿದೆ. ಇದನ್ನೂ ಓದಿ: ಮಧ್ಯರಾತ್ರಿವರೆಗೂ ಟೆಕ್ನಿಕಲ್ ಸೆಲ್‍ನಲ್ಲಿ ಹಾಲಶ್ರೀ ವಿಚಾರಣೆ- ಇಂದು ಕೋರ್ಟ್ ಮುಂದೆ ಹಾಜರು

    ಚಂದ್ರಪ್ಪ ಎಂಬವರ ಪತ್ನಿ ಹೆಸರಲ್ಲಿ ಇರುವ ಪೆಟ್ರೋಲ್ ಬಂಕ್‍ಗೆ ಸುಮಾರು 40 ಲಕ್ಷ ಹಣ ಹೂಡಿಕೆ ಮಾಡಿದ್ದಾರೆ ಎನ್ನಲಾಗ್ತಿದೆ. ಚಂದ್ರಪ್ಪ ಅನ್ನೋರು ಪೆಟ್ರೋಲ್ ಬಂಕ್ ಆರಂಭಕ್ಕೆ ಅನುಮತಿ ಇದ್ದರೂ ಅವರು ಬಳಿ ಹಣದ ಕೊರತೆ ಉಂಟಾಗಿದೆ. ಹೀಗಾಗಿ ಇದರ ಲಾಭ ಪಡೆದ ಹಾಲಶ್ರೀ, ಚಂದ್ರಪ್ಪಗೆ ಸುಮಾರು 40ಲಕ್ಷ ಹಣ ನೀಡಿ, ಲೀಜ್ ರೀತಿಯಲ್ಲಿ ಪೆಟ್ರೋಲ್ ಬಂಕ್ ನಡೆಸುತಿದ್ದಾರಂತೆ. ಆದ್ರೆ ಉಳಿದ ಹಣ ಯಾವುದಕ್ಕೆ ವಿನಿಯೋಗ ಆಗಿದೆ..? ಯಾರಿಗಾದ್ರೂ ಕೊಟ್ಟಿದ್ದಾರಾ ಅಂತ ವಿಚಾರಣೆಯಿಂದ ತಿಳಿದು ಬರಬೇಕಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬರ್ಮುಡಾ, ಟೀ ಶರ್ಟ್‍ನಲ್ಲಿ ಸಿಕ್ಕಿಬಿದ್ದ ಹಾಲಶ್ರೀ!

    ಬರ್ಮುಡಾ, ಟೀ ಶರ್ಟ್‍ನಲ್ಲಿ ಸಿಕ್ಕಿಬಿದ್ದ ಹಾಲಶ್ರೀ!

    ಬೆಂಗಳೂರು: ಉದ್ಯಮಿ ಗೋವಿಂದ ಬಾಬು ಪೂಜಾರಿಗೆ ವಂಚಿಸಿ ತಲೆಮರೆಸಿಕೊಂಡಿದ್ದ ಚೈತ್ರಾ ಕುಂದಾಪುರ (Chaitra Kundapura) ಗ್ಯಾಂಗ್‍ನ ಎ3 ಆರೋಪಿ ಹಾಲಶ್ರೀ (Halashree) ಬಂಧನದ ವೇಳೆ ಖಾವಿ ತೊರೆದು ಬರ್ಮುಡಾ ಹಾಗೂ ಟೀ ಶರ್ಟ್ ಧರಿಸಿದ್ದರು.

    ಸಿಸಿಬಿ (CCB) ಪ್ರಕರಣ ದಾಖಲಿಸಿದಾಗಿನಿಂದ ಸ್ವಾಮೀಜಿ ನಾಪತ್ತೆಯಾಗಿದ್ದರು. ಅಲ್ಲದೇ ಸಿಸಿಬಿ ಕುಣಿಕೆಯಿಂದ ಜಾರಿಕೊಳ್ಳಲು ಭಾರೀ ಪ್ಲಾನ್ ಮಾಡಿದ್ದು ಬೆಳಕಿಗೆ ಬಂದಿದೆ. ಹಾಲಶ್ರೀ ಜನರಿಗೆ ತಿಳಿಯದಂತೆ ಸಾಮಾನ್ಯರ ವೇಷದಲ್ಲಿ ರೈಲಿನಲ್ಲಿ ಸಂಚರಿಸುತ್ತಿದ್ದರು. ಕಾರು ಬಳಸಿದರೆ ಸುಲಭವಾಗಿ ಸಿಕ್ಕಿ ಹಾಕಿಕೊಳ್ಳುವ ಭಯದಲ್ಲಿ ಸಂಚಾರಕ್ಕೆ ರೈಲನ್ನು ಆಯ್ಕೆ ಮಾಡಿಕೊಂಡು ಕಾಶಿಗೆ ತೆರಳಲು ತಯಾರಿ ನಡೆಸಿದ್ದರು. ಇದನ್ನೂ ಓದಿ: ವೇಷ ಬದಲಿಸಿ ರೈಲಿನಲ್ಲಿ ಪ್ರಯಾಣ- ಹಾಲಶ್ರೀ ಸಿಕ್ಕಿಬಿದ್ದಿದ್ದು ಹೇಗೆ?

    ಮೈಸೂರು, ಹೈದ್ರಾಬಾದ್, ಪುರಿ ಗಂಜಮ್, ಕಟಕ್ ಮಾರ್ಗವಾಗಿ ಕಾಶಿಗೆ ತೆರಳಲು ಪ್ಲಾನ್ ಆಗಿತ್ತು. ಆದರೆ ಒಡಿಶಾದ (Odisha) ಕಟಕ್‍ನಲ್ಲಿ ಸಿಸಿಬಿ ಖೆಡ್ಡಾಕ್ಕೆ ಸ್ವಾಮೀಜಿ ಬಿದ್ದಿದ್ದಾರೆ. ಒಡಿಶಾ ಪೊಲೀಸರ ಸಹಾಯದಿಂದ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆಯೇ ಸಿಸಿಬಿ ಬಂಧಿಸಿದೆ. ಆರೋಪಿ ಜೊತೆಯಲ್ಲಿದ್ದ ಮತ್ತೋರ್ವ ವ್ಯಕ್ತಿಯನ್ನು ಸಹ ಅಧಿಕಾರಿಗಳು ಬಂಧಿಸಿದ್ದಾರೆ.

    ಹಾಲಶ್ರೀ ಪೊಲೀಸರ ಕಣ್ಣು ತಪ್ಪಿಸಲು ಒಂದು ಕಡೆಯಿಂದ ಮತ್ತೊಂದು ಕಡೆಗೆ ರೈಲಿನಲ್ಲೇ ಪ್ರಯಾಣ ಮಾಡುತ್ತಿದ್ದರು. ಅಲ್ಲದೇ ನಾಲ್ಕು ಬೇಸಿಕ್ ಫೋನ್‍ಗಳು ಹಾಗೂ 4 ಸಿಮ್‍ಗಳ ಬಳಕೆ ಮಾಡುತ್ತಿದ್ದರು ಎಂಬ ವಿಚಾರ ಸಹ ಬೆಳಕಿಗೆ ಬಂದಿದೆ.

    ಪ್ರಕರಣದ ಎ1 ಆರೋಪಿ ಚೈತ್ರಾ ಸಾಂತ್ವಾನ ಕೇಂದ್ರದಿಂದ ಸಿಸಿಬಿ ಕಚೇರಿಗೆ ಬರುವಾಗ ಸ್ವಾಮೀಜಿ ಅರೆಸ್ಟ್ ಆದರೆ ಎಲ್ಲಾ ದೊಡ್ಡ ದೊಡ್ಡವರ ಹೆಸರು ಹೊರ ಬರುತ್ತದೆ ಎಂದು ಹೇಳಿದ್ದಳು. ಈ ವಿಚಾರ ಈಗ ಪ್ರಕರಣದಲ್ಲಿ ಸ್ಫೋಟಕ ತಿರುವು ಪಡೆಯುವ ಸಾಧ್ಯತೆ ಇದೆ. ಇದನ್ನೂ ಓದಿ: ತಲೆಮರೆಸಿಕೊಂಡಿದ್ದ ಹಾಲಶ್ರೀ ಒಡಿಸ್ಸಾದಲ್ಲಿ ಅರೆಸ್ಟ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವೇಷ ಬದಲಿಸಿ ರೈಲಿನಲ್ಲಿ ಪ್ರಯಾಣ- ಹಾಲಶ್ರೀ ಸಿಕ್ಕಿಬಿದ್ದಿದ್ದು ಹೇಗೆ?

    ವೇಷ ಬದಲಿಸಿ ರೈಲಿನಲ್ಲಿ ಪ್ರಯಾಣ- ಹಾಲಶ್ರೀ ಸಿಕ್ಕಿಬಿದ್ದಿದ್ದು ಹೇಗೆ?

    – ಚೈತ್ರಾ ಕಲರ್ ಕಲರ್ ಕತೆಗೆ ಸಿಗಲಿದೆಯಾ ಕ್ಲೈಮ್ಯಾಕ್ಸ್?

    ಬೆಂಗಳೂರು: ಉದ್ಯಮಿ ಗೋವಿಂದ ಬಾಬು ಅವರಿಗೆ ಕೋಟಿ ಕೋಟಿ ವಂಚಿಸಿ ತಲೆಮರೆಸಿಕೊಂಡಿದ್ದ ಹಾಲಶ್ರೀಯನ್ನು (Halashree) ಕೊನೆಗೂ ಬಂಧಿಸಲಾಗಿದೆ. ಸಿಸಿಬಿ (CCB) ಪ್ರಕರಣ ದಾಖಲಿಸಿದಾಗಿನಿಂದ ಆರೋಪಿ ನಾಪತ್ತೆಯಾಗಿದ್ದು, ಸಿಸಿಬಿ ಕುಣಿಕೆಯಿಂದ ಜಾರಿಕೊಳ್ಳಲು ಭಾರೀ ಪ್ಲಾನ್ ಮಾಡಿದ್ದು ಬೆಳಕಿಗೆ ಬಂದಿದೆ.

    ಹಾಲಶ್ರೀ ಜನರಿಗೆ ತಿಳಿಯದಂತೆ ಸಾಮಾನ್ಯರ ವೇಷದಲ್ಲಿ ರೈಲಿನಲ್ಲಿ ಸಂಚರಿಸುತ್ತಿದ್ದರು. ಕಾರು ಬಳಸಿದರೆ ಸುಲಭವಾಗಿ ಸಿಕ್ಕಿ ಹಾಕಿಕೊಳ್ಳುವ ಭಯದಲ್ಲಿ ಸಂಚಾರಕ್ಕೆ ರೈಲನ್ನೇ ಆಯ್ಕೆ ಮಾಡಿಕೊಂಡು ಈಶಾನ್ಯ ರಾಜ್ಯಕ್ಕೆ ತೆರಳುವ ಸಂಚು ರೂಪಿಸಿರುವುದು ಬಯಲಾಗಿದೆ. ಈ ಮೂಲಕ ಕಾಶಿಗೆ ತೆರಳಲು ತಯಾರಿ ನಡೆಸಿರುವುದು ತಿಳಿದು ಬಂದಿದೆ. ಇದನ್ನೂ ಓದಿ: ತಲೆಮರೆಸಿಕೊಂಡಿದ್ದ ಹಾಲಶ್ರೀ ಒಡಿಸ್ಸಾದಲ್ಲಿ ಅರೆಸ್ಟ್

    ಮೈಸೂರು, ಹೈದ್ರಾಬಾದ್, ಪುರಿ ಗಂಜಮ್, ಕಟಕ್ ಮಾರ್ಗವಾಗಿ ಕಾಶಿಗೆ ತೆರಳಲು ಪ್ಲಾನ್ ಆಗಿತ್ತು. ಆದರೆ ಒಡಿಸ್ಸಾದ (Odisha) ಕಟಕ್‍ನಲ್ಲಿ ಸಿಸಿಬಿ ಖೆಡ್ಡಾಕ್ಕೆ ಸ್ವಾಮೀಜಿ ಬಿದ್ದಿದ್ದಾರೆ. ಒಡಿಸ್ಸಾ ಪೊಲೀಸರ ಸಹಾಯದಿಂದ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆಯೇ ಸಿಸಿಬಿ ಬಂಧಿಸಿದೆ. ಆರೋಪಿ ಜೊತೆಯಲ್ಲಿದ್ದ ಮತ್ತೋರ್ವ ವ್ಯಕ್ತಿಯನ್ನು ಅಧಿಕಾರಿಗಳು ಬಂಧಿಸಿದ್ದಾರೆ.

    ಹಾಲಶ್ರೀ ಪೊಲೀಸರ ಕಣ್ಣು ತಪ್ಪಿಸಲು ಒಂದು ಕಡೆಯಿಂದ ಮತ್ತೊಂದು ಕಡೆಗೆ ರೈಲಿನಲ್ಲೇ ಪ್ರಯಾಣ ಮಾಡುತ್ತಿದ್ದರು. ಅಲ್ಲದೇ ನಾಲ್ಕು ಬೇಸಿಕ್ ಫೋನ್‍ಗಳು ಹಾಗೂ 4 ಸಿಮ್‍ಗಳ ಬಳಕೆ ಮಾಡುತ್ತಿದ್ದರು ಎಂಬ ವಿಚಾರ ಸಹ ಬೆಳಕಿಗೆ ಬಂದಿದೆ.

    ಇನ್ನೂ ಪ್ರಕರಣದ ಎ1 ಆರೋಪಿ ಚೈತ್ರಾ (Chaitra Kundapura) ಸಾಂತ್ವಾನ ಕೇಂದ್ರದಿಂದ ಸಿಸಿಬಿ ಕಚೇರಿಗೆ ಬರುವಾಗ ಸ್ವಾಮೀಜಿ ಅರೆಸ್ಟ್ ಆದರೆ ಎಲ್ಲಾ ದೊಡ್ಡ ದೊಡ್ಡವರ ಹೆಸರು ಹೊರ ಬರುತ್ತದೆ ಎಂದು ಹಾಕಿದ್ದ ಬಾಂಬ್ ಈಗ ಸಿಡಿಯಲಿದೆಯೇ? ಎಂಬ ಕುತೂಹಲಕ್ಕೆ ದಾರಿ ಮಾಡಿ ಕೊಟ್ಟಿದೆ. ಸ್ವಾಮೀಜಿ ಈಗ ಯಾರ ಯಾರ ಹೆಸರು ಬಾಯಿ ಬಿಡಲಿದ್ದಾರೆ? ಯಾರೆಲ್ಲ ಪ್ರಕರಣದ ಹಿಂದೆ ಇದ್ದಾರೆ? ಎಂಬ ವಿಚಾರ ಇನ್ನಷ್ಟೇ ಹೊರಬರಬೇಕಿದೆ. ಇದನ್ನೂ ಓದಿ: ಕೋಟಿ ಕೋಟಿ ವಂಚನೆ ಪ್ರಕರಣ – ಹಾಲಶ್ರೀ ನಿರೀಕ್ಷಣಾ ಜಾಮೀನು ಅರ್ಜಿಗೆ ಸಿಸಿಬಿ ಆಕ್ಷೇಪಣೆ ಸಾಧ್ಯತೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ತಲೆಮರೆಸಿಕೊಂಡಿದ್ದ ಹಾಲಶ್ರೀ ಒಡಿಸ್ಸಾದಲ್ಲಿ ಅರೆಸ್ಟ್

    ತಲೆಮರೆಸಿಕೊಂಡಿದ್ದ ಹಾಲಶ್ರೀ ಒಡಿಸ್ಸಾದಲ್ಲಿ ಅರೆಸ್ಟ್

    ಭುವನೇಶ್ವರ್: ಉದ್ಯಮಿ ಗೋವಿಂದ ಬಾಬು ಪೂಜಾರಿಗೆ ವಂಚಿಸಿ  (Fraud case) ತಲೆಮರೆಸಿಕೊಂಡಿದ್ದ ಚೈತ್ರಾ ಕುಂದಾಪುರ (Chaitra Kundapura) ಗ್ಯಾಂಗ್‍ನ ಎ3 ಆರೋಪಿ ಅಭಿನವ ಹಾಲಶ್ರೀಯನ್ನು (Halashree)‌ ಸಿಸಿಬಿ ಒಡಿಸ್ಸಾದಲ್ಲಿ ಬಂಧಿಸಿದೆ.

    ಪ್ರಕರಣ ದಾಖಲಾದಾಗಿನಿಂದ ತಲೆ ಮರೆಸಿಕೊಂಡಿದ್ದ ಆರೋಪಿ ಇದೀಗ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದು, ಬೆಂಗಳೂರಿಗೆ ಕರೆತರಲಾಗುತ್ತಿದೆ. ಆರೋಪಿ ಬಂಧನಕ್ಕೆ ಸಿಸಿಬಿ ಅಧಿಕಾರಿಗಳು ತೀವ್ರ ಹುಡುಕಾಟ ನಡೆಸುತ್ತಿದ್ದರು. ಹೈದರಾಬಾದ್‍ನಲ್ಲಿ ಅಡಗಿದ್ದ ಮಾಹಿತಿ ಮೇರೆಗೆ ಅಲ್ಲಿಗೂ ಅಧಿಕಾರಿಗಳ ತಂಡವನ್ನು ಕಳುಹಿಸಲಾಗಿತ್ತು. ಅಲ್ಲದೇ ಸ್ವಾಮೀಜಿ ಆಪ್ತರ ತೀವ್ರ ವಿಚಾರಣೆ ಕೂಡ ನಡೆಸಲಾಗಿತ್ತು. ಇದೀಗ ಒಡಿಸ್ಸಾದ ಹೋಟೆಲ್ ಒಂದರಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ಇದನ್ನೂ ಓದಿ: ಕೋಟಿ ಕೋಟಿ ವಂಚನೆ ಪ್ರಕರಣ – ಹಾಲಶ್ರೀ ನಿರೀಕ್ಷಣಾ ಜಾಮೀನು ಅರ್ಜಿಗೆ ಸಿಸಿಬಿ ಆಕ್ಷೇಪಣೆ ಸಾಧ್ಯತೆ

    ಆರೋಪಿ ಹಾಲಶ್ರೀ ಫೋನ್ ಬಳಸದೆ ಪದೇ ಪದೇ ಇರುವ ಸ್ಥಳ ಬದಲಾಯಿಸುತ್ತಿದ್ದು, ಬಂಧನಕ್ಕೆ ಸ್ವಲ್ಪ ಕಷ್ಟವಾಗಿತ್ತು. ಆದರೆ ಇದೀಗ ಆರೋಪಿ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿರುವುದು ಖಚಿತವಾಗಿದೆ. ಸ್ವಾಮೀಜಿಗಾಗಿ ಪ್ರತ್ಯೇಕವಾಗಿ ಎರಡು ತಂಡಗಳು ಕಾರ್ಯಚರಣೆ ನಡೆಸುತ್ತಿದ್ದವು. ಇದನ್ನೂ ಓದಿ: ಚೈತ್ರಾ ಕುಂದಾಪುರ ಡೀಲ್ ಕೇಸ್- RSS ಕದ ತಟ್ಟಿದ್ದ ಗೋವಿಂದ ಪೂಜಾರಿ!

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹೈದರಾಬಾದ್‍ನಲ್ಲಿ ಹಾಲಶ್ರೀ ಅಡಗಿರುವ ಶಂಕೆ – ಬಂಧನಕ್ಕೆ ತೆರಳಿದ ಸಿಸಿಬಿ ಟೀಂ

    ಹೈದರಾಬಾದ್‍ನಲ್ಲಿ ಹಾಲಶ್ರೀ ಅಡಗಿರುವ ಶಂಕೆ – ಬಂಧನಕ್ಕೆ ತೆರಳಿದ ಸಿಸಿಬಿ ಟೀಂ

    ಬೆಂಗಳೂರು: ಉದ್ಯಮಿ ಗೋವಿಂದ ಬಾಬು ಅವರಿಗೆ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಕೋಟಿ ಕೋಟಿ ವಂಚಿಸಿ ಅರೆಸ್ಟ್ ಆಗಿರುವ ಚೈತ್ರಾ ಕುಂದಾಪುರ (Chaitra Kundapur) ಗ್ಯಾಂಗ್‍ನ ತಲೆಮರೆಸಿಕೊಂಡಿರುವ ಆರೋಪಿ ಅಭಿನವ ಹಾಲಶ್ರೀ (Halashree) ಬಂಧನಕ್ಕೆ ಸಿಸಿಬಿ ತೀವ್ರ ಹುಡುಕಾಟ ಆರಂಭಿಸಿದೆ. ಆರೋಪಿ ಹೈದರಾಬಾದ್‍ನಲ್ಲಿ (Hyderabad) ಅಡಗಿರುವ ಶಂಕೆ ಇದ್ದು ಬಂಧನಕ್ಕೆ ಸಿಸಿಬಿ (CCB) ಅಧಿಕಾರಿಗಳು ಅಲ್ಲಿಗೆ ತೆರಳಿದ್ದಾರೆ.

    ತಲೆಮರೆಸಿಕೊಂಡಿರುವ ಹಾಲಶ್ರೀ ಪ್ರಕರಣದ ಮೂರನೇ ಆರೋಪಿ ಆಗಿದ್ದು, ಚೈತ್ರಾ ಬಂಧನದ ಬಳಿಕ ಯಾವುದೇ ಸುಳಿವಿಲ್ಲದಂತೆ ನಾಪತ್ತೆಯಾಗಿದ್ದರು. ಪ್ರಕರಣದಲ್ಲಿ ಸ್ವಾಮೀಜಿಯ ಕಾರು ಚಾಲಕ ನಿಂಗರಾಜ್‍ನನ್ನು ಸಿಸಿಬಿ ಅಧಿಕಾರಿಗಳು ವಶಕ್ಕೆ ಪಡೆದು ಹಾಲಶ್ರೀ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ. ಆರೋಪಿ ಅಡಗಿರುವ ಸುಳಿವಿಗಾಗಿ ಚಾಲಕನನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ. ಇದನ್ನೂ ಓದಿ: ಅಂದರ್‌ಗೂ ಮುನ್ನ ಬಚಾವ್ ಆಗಲು ಕಾರನ್ನೇ ಮುಚ್ಚಿಟ್ಟಿದ್ದ ಚೈತ್ರಾ ಕುಂದಾಪುರ!

    ಇನ್ನೂ ಸ್ವಾಮೀಜಿ ಮೈಸೂರಿನಲ್ಲಿ ಕಾರು ಬಿಟ್ಟು ಬಳಿಕ ಅಲ್ಲಿಂದ ಪರಾರಿಯಾಗಿದ್ದರು. ಪೊಲೀಸರ ಕಣ್ಣು ತಪ್ಪಿಸಲು ಕಾರಿನ ನಂಬರ್ ಪ್ಲೇಟ್ ತೆಗೆದು ಪ್ರಯಾಣಿಸಿದ್ದರು ಎಂದು ತಿಳಿದು ಬಂದಿದೆ. ಅಲ್ಲದೇ ಸ್ವಾಮೀಜಿಗಳ ಬಳಿ ನಾಲ್ಕು ಸಿಮ್‍ಗಳಿವೆ ಎನ್ನಲಾಗಿದೆ.

    ಸ್ವಾಮೀಜಿ ಆಗಾಗ ಸ್ಥಳ ಬದಲಾಯಿಸುತ್ತಿದ್ದು ಬಂಧನಕ್ಕೆ ಕಷ್ಟವಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಮಹಿಳಾ ಸಂಘಟನೆಯಲ್ಲಿ ಹೆಂಡತಿ ಬ್ಯುಸಿ – ಬೇಸತ್ತ ಪತಿಯಿಂದ ಪತ್ನಿ, ಅತ್ತೆಯ ಭೀಕರ ಹತ್ಯೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಚೈತ್ರಾ ಕುಂದಾಪುರ ಡೀಲ್ ಕೇಸ್- ಹಾಲಶ್ರೀ ಕಾರು ಚಾಲಕನ ವಿಚಾರಣೆ

    ಚೈತ್ರಾ ಕುಂದಾಪುರ ಡೀಲ್ ಕೇಸ್- ಹಾಲಶ್ರೀ ಕಾರು ಚಾಲಕನ ವಿಚಾರಣೆ

    – ಆಪ್ತನ ಮನೆಯಲ್ಲಿ ಕಾರು ಇಟ್ಟು ಶ್ರೀ ಎಸ್ಕೇಪ್

    ಬೆಂಗಳೂರು/ಮೈಸೂರು: ಚೈತ್ರಾ ಕುಂದಾಪುರ (Chaitra Kundapura) ಡೀಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಪತ್ತೆಯಾಗಿರುವ ಅಭಿನವ ಹಾಲಶ್ರೀ (Abhinava Halashree) ಕಾರು ಚಾಲಕನನ್ನು ಸಿಸಿಬಿ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.

    ಅಭಿನವ ಹಾಲಶ್ರೀಗಾಗಿ ಸಿಸಿಬಿ ಪೊಲೀಸರ ಹುಡುಕಾಟ ನಡೆಸಲಾಗುತ್ತಿದ್ದು, ಕಾರು ಚಾಲಕನ ವಿಚಾರಣೆಗೊಳಪಡಿಸುವ ಮೂಲಕ ಸ್ವಾಮೀಜಿ ಪತ್ತೆಗೆ ಪ್ರಯತ್ನ ಮಾಡಲಾಗತ್ತಿದೆ. ಸ್ವಾಮೀಜಿ ಬಳಕೆ ಮಾಡುತ್ತಿದ್ದ ಇನ್ನೋವಾ ಕಾರು (Innova Car) ಹಾಗೂ ಚಾಲಕ ನಿಂಗರಾಜುನನ್ನು ಸಿಸಿಬಿ ಪೊಲೀಸರು ಮೈಸೂರಿನಲ್ಲಿ ವಶಕ್ಕೆ ಪಡೆದಿದ್ದಾರೆ. ಸ್ವಾಮೀಜಿಯನ್ನ ಕೊನೆಯದಾಗಿ ಎಲ್ಲಿ ಡ್ರಾಪ್ ಮಾಡಲಾಯಿತು. ಬೇರೆ ಯಾವ ಕಾರಿನಲ್ಲಿ ಹೋದ್ರು. ಎಲ್ಲಿಗೆ ಹೋದ್ರು, ಎಲ್ಲಿ ಆಶ್ರಯ ಪಡೆದಿದ್ದಾರೆ ಅಂತಾ ಮಾಹಿತಿ ಕಲೆ ಹಾಕಲಾಗಿದೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭಿಸಿದೆ. ಇದನ್ನೂ ಓದಿ: ಚೈತ್ರಾ ಕುಂದಾಪುರ ಪ್ರಕರಣದ ಶ್ರೀಕಾಂತ್ ಮನೆ ಜಾಲಾಡಿದ ಸಿಸಿಬಿ- ಬಾಕ್ಸ್‌ನಲ್ಲಿಟ್ಟಿದ್ದ 41 ಲಕ್ಷ ಪತ್ತೆ

    ಸ್ವಾಮೀಜಿ ಎಸ್ಕೇಪ್ ಆಗುವ ವೇಳೆ ನಾಲ್ಕು ಸಿಮ್ ಕಾರ್ಡ್ ಹಾಗೂ ನಾಲ್ಕು ಬೇಸಿಕ್ ಮೊಬೈಲ್ ಖರೀದಿಸಿ ಮೈಸೂರಿನಿಂದ ಎಸ್ಕೇಪ್ ಆಗಿದ್ದಾರೆ. ಮೈಸೂರಿನಲ್ಲಿ ತಮ್ಮ ಕಾರನ್ನ ನಿಲ್ಲಿಸಿ ನಾಪತ್ತೆಯಾಗಿದ್ದಾರೆ. ಎಸ್ಕೇಪ್ ಆಗುವ ವೇಳೆ ಕಾರಿನ ನಂಬರ್ ಪ್ಲೇಟ್ ತೆಗೆದಿದ್ದಾರೆ. ನಂಬರ್ ಪ್ಲೇಟ್ ತೆಗೆದು ಕಾರನ್ನು ಆಪ್ತನ ಮನೆಯಲ್ಲಿ ನಿಲ್ಲಿಸಿ ಎಸ್ಕೇಪ್ ಆಗಿದ್ದಾರೆ ಎನ್ನಲಾಗಿದೆ.