Tag: HalalCut

  • ಸಹೃದಯದಿಂದ ಬದುಕುವವರಿಗೇಕೆ `ಧರ್ಮ’ಸಂಕಟ? – ಆಂಜನೇಯನ ಪೂಜಿಸುವ ಮುಸ್ಲಿಂ ಬಂಧು ಹೇಳಿದ್ದಿಷ್ಟು

    ಸಹೃದಯದಿಂದ ಬದುಕುವವರಿಗೇಕೆ `ಧರ್ಮ’ಸಂಕಟ? – ಆಂಜನೇಯನ ಪೂಜಿಸುವ ಮುಸ್ಲಿಂ ಬಂಧು ಹೇಳಿದ್ದಿಷ್ಟು

    ಕೊಪ್ಪಳ: ಹಲಾಲ್ ಕಟ್, ಝಟ್ಕಾ ಕಟ್, ಆಜ್ಹಾನ್, ಹಿಜಬ್ ಮೊದಲಾದ ವಿವಾದ ನಡುವೆ ತನ್ನ ಮನೆಯಲ್ಲಿ ಸದಾ ಹಿಂದೂ ದೇವರನ್ನೇ ಪೂಜಿಸಿ, ಆರಾಧಿಸುತ್ತಿರುವ ವ್ಯಕ್ತಿಯೊಬ್ಬರು ಸಮಾಜಕ್ಕೆ ಮಾದರಿಯಾಗಿದ್ದಾರೆ. ಕಳೆದ 20 ವರ್ಷಗಳಿಂದಲೂ ಹಿಂದೂ ದೇವರನ್ನೇ ಪೂಜಿಸುತ್ತಾ ಏಕತೆ ಬೆಸೆಯುವುದಕ್ಕೆ ಮುಂದಾಗಿದ್ದಾರೆ.

    ಆಟೋ ಚಾಲಕನಾಗಿರುವ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ತಳಕಲ್ ನಿವಾಸಿ ಸಂಶುದ್ದೀನ್ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಸಿಮೆಂಟ್ ದೇಣಿಗೆ ನೀಡಿದ್ದರು. ಇದೀಗ ತನ್ನ ಮನೆಯಲ್ಲಿ ಆಂಜನೇಯ, ಗವಿಸಿದ್ಧೇಶ್ವರ ಸೇರಿದಂತೆ ಮೊದಲಾದ ಹಿಂದೂ ದೇವತೆಗಳನ್ನು ಪೂಜೆ ಮಾಡುತ್ತಿದ್ದು, ಹಿಂದೂ ಹಬ್ಬಗಳನ್ನೂ ಆಚರಣೆ ಮಾಡುತ್ತಾ ಸೌಹಾರ್ಧತೆಯ ಸಂದೇಶ ಸಾರಿದ್ದಾರೆ. ಇದನ್ನೂ ಓದಿ: ಕೋಮುದ್ವೇಷ ಕಕ್ಕುವುದು, ನನ್ನ ಹೆಸರು ಎಳೆದು ತರುವುದು ಸಿಟಿ ರವಿಗೆ ಮಾನಸಿಕ ರೋಗವಾಗಿದೆ: ಸಿದ್ದರಾಮಯ್ಯ

    hanuman

    ಈ ಕುರಿತು ಮಾತನಾಡಿರುವ ಅವರು, ಯಾರೋ ನಾಲ್ಕು ಜನ ಮಾಡುವ ಕೆಲಸದಿಂದ ಸಮಾಜಕ್ಕೆ ಕೆಟ್ಟ ಹೆಸರು ಬರುತ್ತದೆ. ನಾವೆಲ್ಲರೂ ಹಿಂದೂ- ಮುಸ್ಲಿಮರು ಅಣ್ಣ ತಮ್ಮ ಎನ್ನುವಂತೆ ಬದುಕುತ್ತಿದ್ದೇವೆ. ನಮ್ಮ ಮನೆಯಲ್ಲೂ ಹಿಂದೂ ಹಬ್ಬಗಳನ್ನು ಆಚರಿಸುತ್ತೇವೆ. ನಮ್ಮ ಹಬ್ಬಕ್ಕೆ ಅವರು ಬರುತ್ತಾರೆ, ನಾವು ಅವರ ಹಬ್ಬಗಳಿಗೆ ಹೋಗಿ ಸಿಹಿ ತಿಂದು ಬರುತ್ತೇವೆ. ಆದರೆ ಇಂದಿನ ಸ್ಥಿತಿಯನ್ನು ಕಂಡು ಮನಸ್ಸಿಗೆ ನೋವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮೋದಿ ನೇತೃತ್ವದಲ್ಲಿ ಬಿಜೆಪಿಯು ಬಡವರ, ದಲಿತರ ಪಕ್ಷವಾಗಿ ಮಾರ್ಪಟ್ಟಿದೆ: ಜೆಪಿ ನಡ್ಡಾ

    ನಾವು ಆಂಜನೇಯನನ್ನು ಜನ್ಮಕೊಟ್ಟ ದೇವರೆಂದು ಆರಾಧಿಸುತ್ತೇವೆ. ಕುಲದೇವರಿಗಿಂತಲೂ ಆಂಜನೇಯ ಶ್ರೇಷ್ಠ ಎಂದು ಹೇಳುತ್ತೇವೆ. ಆದರಿಂದು ಸಣ್ಣ-ಸಣ್ಣ ಮಕ್ಕಳೂ ಧರ್ಮ ಸಂಕಟಕ್ಕೆ ಸಿಲುಕುತ್ತಿದ್ದಾರೆ. ಅವರ ಮನಸ್ಸಿನಲ್ಲೂ ಅದೇ ಚಿಂತನೆಗಳು ಬೆಳೆಯುತ್ತಿದ್ದು, ಇದು ಮುಂದೆ ದೇಶಕ್ಕೆ ಮಾರಕವಾಗಲಿದೆ. ಸಹೃದಯದಿಂದ ಬದುಕುವವರಿಗೆ `ಧರ್ಮ’ಸಂಕಟ ಏಕೆ ಬೇಕು? ಇದೆಲ್ಲವನ್ನೂ ಇಲ್ಲಿಗೆ ನಿಲ್ಲಿಸೋಣ ಎಂದು ಮನವಿ ಮಾಡಿದ್ದಾರೆ.

  • ಹಲಾಲ್ ಕಟ್ ಮಾಂಸ ಖರೀದಿ ಉತ್ತೇಜಿಸಲು ಅಭಿಯಾನ: ದೇವನೂರ ಮಹಾದೇವ ನೇತೃತ್ವ

    ಹಲಾಲ್ ಕಟ್ ಮಾಂಸ ಖರೀದಿ ಉತ್ತೇಜಿಸಲು ಅಭಿಯಾನ: ದೇವನೂರ ಮಹಾದೇವ ನೇತೃತ್ವ

    ಮೈಸೂರು: ಹೊಸತೊಡಕು ಹಿನ್ನೆಲೆಯಲ್ಲಿ ಮಾಂಸ ಖರೀದಿ ಜೋರಾಗಿ ನಡೆಯುತ್ತಿದೆ. ಈ ನಡುವೆ ಮುಸ್ಲಿಂ ಬಾಂಧವರ ನಡುವೆ ಸಾಮರಸ್ಯ ಸಾರಿ, ಹಲಾಲ್ ಕಟ್ ಮಾಂಸ ಖರೀದಿಗೆ ಉತ್ತೇಜನ ನೀಡಲು ಪ್ರಗತಿಪರರು ವಿಶೇಷ ಅಭಿಯಾನವನ್ನೇ ಆರಂಭಿಸಿದ್ದಾರೆ. ಮಾಂಸದ ಅಂಗಡಿಗಳಲ್ಲೂ ಬೇವು-ಬೆಲ್ಲ ಹಂಚಿ ಸಂಭ್ರಮಿಸುತ್ತಿದ್ದಾರೆ.

    ಮೈಸೂರಿನಲ್ಲಿ ಸಕಲೆಂಟು ಜಾತಿ ಸಹಬಾಳ್ವೆ ಸಂಘ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ದಲಿತ ಸಂಘರ್ಷ ಸಮಿತಿ ಸೇರಿದಂತೆ ಪ್ರತಿಪರ ಸಂಘಟನೆಗಳಿಂದ ಮೈಸೂರಿನ ಉದಯಗಿರಿ ರಸ್ತೆಯಲ್ಲಿರುವ ಮುಸ್ಲಿಂ ಅಂಗಡಿಯಲ್ಲಿ ಶಾಂತಿ ಸೌಹಾರ್ದತೆ, ಸಹಬಾಳ್ವೆಯ ಸಂದೇಶ ಸಾರುವ ಕಾರಣಕ್ಕಾಗಿ ಮಾಂಸ ಖರೀದಿಸುವ ಅಭಿಯಾನವೂ ನಡೆದಿದೆ. ಇದನ್ನೂ ಓದಿ: ಜಟ್ಕಾ ಕಟ್ ಮಟನ್ ಅಂಗಡಿಗಳ ಮುಂದೆ ಕೇಸರಿ ಧ್ವಜ

    DEVANURA MAHADEVA

    ಸಾಹಿತಿ ದೇವನೂರ ಮಹಾದೇವ, ಸಮಾಜವಾದಿ ಪ.ಮಲ್ಲೇಶ್, ಬಡಗಲಪುರ ನಾಗೇಂದ್ರ, ಗುರುಪ್ರಸಾದ್ ಕೆರಗೋಡು, ಆಲಗೂಡು ಶಿವಕುಮಾರ್, ಶಂಭುಲಿಂಗಸ್ವಾಮಿ, ಪಿ.ಮರಂಕಯ್ಯ, ಬಸವರಾಜು, ಕಲ್ಲಹಳ್ಳಿ ಕುಮಾರ ಅವರು ಅಜೀಜ್ ಸೇಠ್ ಮುಖ್ಯ ರಸ್ತೆಯಲ್ಲಿನ ಸೈಯ್ಯದ್ ರಿಜ್ವಾನ್ ಅವರ ಕರ್ನಾಟಕ ಮಟನ್ ಅಂಡ್ ಚಿಕನ್ ಸ್ಟಾಲ್‌ನಲ್ಲಿ ಸಾಮೂಹಿಕವಾಗಿ ಹಲಾಲ್ ಕಟ್ ಮಾಂಸವನ್ನು ಖರೀದಿಸಿದ್ದಾರೆ.