Tag: Halal-Certified Products

  • ಹಲಾಲ್‌ ಉತ್ಪನ್ನ ನಿಷೇಧಿಸುವ ನಿರ್ಧಾರ ತೆಗೆದುಕೊಂಡಿಲ್ಲ – ಅಮಿತ್‌ ಶಾ

    ಹಲಾಲ್‌ ಉತ್ಪನ್ನ ನಿಷೇಧಿಸುವ ನಿರ್ಧಾರ ತೆಗೆದುಕೊಂಡಿಲ್ಲ – ಅಮಿತ್‌ ಶಾ

    ಹೈದರಾಬಾದ್‌: ಉತ್ತರ ಪ್ರದೇಶ (Uttar Pradesh) ಸರ್ಕಾರವು ಹಲಾಲ್ (Halal) ಟ್ಯಾಗ್ ಹೊಂದಿರುವ ಆಹಾರ ಉತ್ಪನ್ನಗಳನ್ನು ನಿಷೇಧಿಸಿದೆ. ಈ ಬೆನ್ನಲ್ಲೇ ಕೇಂದ್ರ ಗೃಹಸಚಿವ ಅಮಿತ್‌ ಶಾ (Amit Shah) ಅವರು, ಹಲಾಲ್‌ ಪ್ರಮಾಣೀಕೃತ ಉತ್ಪನ್ನಗಳ ಮಾರಾಟವನ್ನು ನಿಷೇಧಿಸುವ ಯಾವುದೇ ನಿರ್ಧಾರ ಸರ್ಕಾರ ತೆಗೆದುಕೊಂಡಿಲ್ಲ ಎಂದು ಹೇಳಿದ್ದಾರೆ.

    ಹೈದರಾಬಾದ್‌ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಲಾಲ್‌ ಉತ್ಪನ್ನಗಳ ಮಾರಾಟ ನಿಷೇಧಿಸುವ ಯಾವುದೇ ನಿರ್ಧಾರವನ್ನು ಸರ್ಕಾರ ತೆದುಕೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ವೀರಯೋಧ ಕ್ಯಾ.ಪ್ರಾಂಜಲ್‌ ಅಂತಿಮ ಯಾತ್ರೆ – ತ್ರಿವರ್ಣ ಧ್ವಜ ಹಿಡಿದು ಜನರಿಂದ ಸೆಲ್ಯೂಟ್‌

    meat ban

    ಇದೇ ವೇಳೆ ತೆಲಂಗಾಣ ಚುನಾವಣಾ (Telangana Elections) ಪ್ರಚಾರದ ಕುರಿತು ಮಾತನಾಡಿ, ತೆಲಂಗಾಣ ಜನರ ಮತವು ಕೇವಲ ಶಾಸಕರ ಭವಿಷ್ಯ ನಿರ್ಧರಿಸುವುದಿಲ್ಲ. ದೇಧಸ ಭವಿಷ್ಯವನ್ನು ನಿರ್ಧರಿಸುತ್ತದೆ. ಪ್ರತಿಯೊಂದು ಪಕ್ಷಗಳ ಕೆಲಸಗಳನ್ನು ವಿವರಿಸಿಯೇ ನಾವು ಮತ ಕೇಳುತ್ತಿದ್ದೇವೆ ಎಂದ ಅವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಮತ ನೀಡುವಂತೆ ಮನವಿ ಮಾಡಿದರು. ಇದನ್ನೂ ಓದಿ: ಮುಂದುವರಿದ ರೆಡ್ಡಿ ಸಹೋದರರ ಮುನಿಸು – ಸಹೋದರನ ಪುತ್ರನ ಮದುವೆಗೆ ಜನಾರ್ದನ ರೆಡ್ಡಿ ಗೈರು

    ಬಿಆರ್‌ಎಸ್ ತುಷ್ಟೀಕರಣ ರಾಜಕಾರಣ ಮಾಡುತ್ತಿದೆ. ಸಂವಿಧಾನವು ಯಾರಿಗೂ ವಿಶೇಷ ಕೊಡುಗೆ ನೀಡಲು ಅವಕಾಶ ನೀಡುವುದಿಲ್ಲ. ಧಾರ್ಮಿಕ ಮೀಸಲಾತಿಯನ್ನು ಕೆಸಿಆರ್ ನೀಡಿದ್ದಾರೆ. ಇದು ಸಂವಿಧಾನಕ್ಕೆ ವಿರುದ್ಧವಾಗಿದೆ. ನಾವು ಮತ್ತೆ ಅಧಿಕಾರಕ್ಕೆ ಬಂದರೆ ಮುಸ್ಲಿಮರಿಗೆ ಇರುವ 4% ಮೀಸಲಾತಿಯನ್ನೂ ನಿಷೇಧಿಸುತ್ತೇವೆ. ಅದನ್ನು ಪರಿಶಿಷ್ಟ ಜಾತಿ ಮತ್ತು ಇತರ ಹಿಂದುಳಿದ ವರ್ಗದ ಜನರಿಗೆ ನೀಡುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: Bengaluru HAL – ತೇಜಸ್‌ ಫೈಟರ್‌ಜೆಟ್‌ನಲ್ಲಿ ಹಾರಾಟ ನಡೆಸಿ ಗಮನ ಸೆಳೆದ ಮೋದಿ

  • ಉತ್ತರ ಪ್ರದೇಶದಲ್ಲಿ ‘ಹಲಾಲ್‌’ ಟ್ಯಾಗ್‌ ಹೊಂದಿರುವ ಆಹಾರ ಉತ್ಪನ್ನ ನಿಷೇಧ

    ಉತ್ತರ ಪ್ರದೇಶದಲ್ಲಿ ‘ಹಲಾಲ್‌’ ಟ್ಯಾಗ್‌ ಹೊಂದಿರುವ ಆಹಾರ ಉತ್ಪನ್ನ ನಿಷೇಧ

    ಲಕ್ನೋ: ಉತ್ತರ ಪ್ರದೇಶ (Uttar Pradesh) ಸರ್ಕಾರ ಹಲಾಲ್ (Halal) ಟ್ಯಾಗ್ ಹೊಂದಿರುವ ಆಹಾರ ಉತ್ಪನ್ನಗಳನ್ನು ನಿಷೇಧಿಸಿದೆ. ತಕ್ಷಣದಿಂದ ಜಾರಿಗೆ ಬರುವಂತೆ ಉತ್ಪನ್ನಗಳ ತಯಾರಿಕೆ, ಸಂಗ್ರಹಣೆ, ವಿತರಣೆ ಮತ್ತು ಮಾರಾಟದ ಮೇಲೆ ನಿಷೇಧ ಹೇರಲಾಗಿದೆ ಎಂದು ಆಹಾರ ಆಯುಕ್ತರ ಕಚೇರಿ ಆದೇಶದಲ್ಲಿ ತಿಳಿಸಿದೆ.

    ರಫ್ತಿಗೆ ಉದ್ದೇಶಿಸಿರುವ ಆಹಾರ ಪದಾರ್ಥಗಳಿಗೆ ನಿಷೇಧದಿಂದ ವಿನಾಯಿತಿ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದೆ. ಆಹಾರ ಉತ್ಪನ್ನಗಳ ಹಲಾಲ್ ಪ್ರಮಾಣೀಕರಣವು ಒಂದು ಸಮಾನಾಂತರ ವ್ಯವಸ್ಥೆಯಾಗಿದ್ದು, ಅದು ಆಹಾರ ಪದಾರ್ಥಗಳ ಗುಣಮಟ್ಟಕ್ಕೆ ಸಂಬಂಧಿಸಿದಂತೆ ಗೊಂದಲವನ್ನು ಸೃಷ್ಟಿಸುತ್ತದೆ. ಆಹಾರ ಕಾನೂನು, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯಿದೆಯ ಸೆಕ್ಷನ್ 89 ರ ಅಡಿಯಲ್ಲಿ ಸಮರ್ಥನೀಯವಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಇದನ್ನೂ ಓದಿ: ಚುನಾವಣೆ ಗೆಲ್ಲಲು ಬಾಬಾನ ಕೈಯಿಂದ ಚಪ್ಪಲಿ ಏಟು ತಿಂದ ಕೈ ಅಭ್ಯರ್ಥಿ

    ಆಹಾರ ಪದಾರ್ಥಗಳ ಗುಣಮಟ್ಟವನ್ನು ನಿರ್ಧರಿಸುವ ಹಕ್ಕು ಈ ಕಾಯಿದೆಯ ಸೆಕ್ಷನ್ 29 ರಲ್ಲಿ ನೀಡಲಾದ ಅಧಿಕಾರಿಗಳು ಮತ್ತು ಸಂಸ್ಥೆಗಳಿಗೆ ಮಾತ್ರ ಇರುತ್ತದೆ. ಅವರು ಕಾಯಿದೆಯ ನಿಬಂಧನೆಗಳ ಪ್ರಕಾರ ಸಂಬಂಧಿತ ಮಾನದಂಡಗಳನ್ನು ಪರಿಶೀಲಿಸುತ್ತಾರೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

    “ನಕಲಿ” ಹಲಾಲ್ ಪ್ರಮಾಣಪತ್ರಗಳನ್ನು ಒದಗಿಸುವ ಮೂಲಕ ಮಾರಾಟ ಹೆಚ್ಚಿಸುವುದು, ಜನರ ಧಾರ್ಮಿಕ ಭಾವನೆಗಳನ್ನು ಬಳಸಿಕೊಳ್ಳುವ ಆರೋಪದ ಮೇಲೆ ಕಂಪನಿಯೊಂದರ ಮತ್ತು ಇತರ ಕೆಲವು ಸಂಸ್ಥೆಗಳ ವಿರುದ್ಧ ಪೊಲೀಸ್ ಪ್ರಕರಣವನ್ನು ದಾಖಲಿಸಿದ ನಂತರ ಈ ಆದೇಶ ಹೊರಡಿಸಲಾಗಿದೆ. ಇದನ್ನೂ ಓದಿ: ಟೀಂ ಇಂಡಿಯಾ ಪ್ರಾಕ್ಟೀಸ್ ಜೆರ್ಸಿ, ಮೆಟ್ರೋ ಸ್ಟೇಷನ್‍ಗೂ ಕೇಸರಿ ಬಣ್ಣ- ಕೇಂದ್ರದ ವಿರುದ್ಧ ದೀದಿ ವಾಗ್ದಾಳಿ

    ಹಲಾಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಚೆನ್ನೈ, ಜಮಿಯತ್ ಉಲಮಾ-ಇ-ಹಿಂದ್ ಹಲಾಲ್ ಟ್ರಸ್ಟ್ ದೆಹಲಿ, ಹಲಾಲ್ ಕೌನ್ಸಿಲ್ ಆಫ್ ಇಂಡಿಯಾ ಮುಂಬೈ, ಜಮಿಯತ್ ಉಲಮಾ ಮಹಾರಾಷ್ಟ್ರ ಮತ್ತು ಇತರ ಸಂಸ್ಥೆಗಳಿಗೆ ಹಲಾಲ್ ಪ್ರಮಾಣಪತ್ರಗಳನ್ನು ನೀಡುವ ಮೂಲಕ ಮಾರಾಟವನ್ನು ಹೆಚ್ಚಿಸಲು ಧಾರ್ಮಿಕ ಭಾವನೆಗಳನ್ನು ದುರ್ಬಳಕೆ ಮಾಡಿಕೊಂಡ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ. ನಿರ್ದಿಷ್ಟ ಧರ್ಮದ ಗ್ರಾಹಕರು ಎಂದು ಯುಪಿ ಸರ್ಕಾರ ಹೇಳಿಕೆಯಲ್ಲಿ ತಿಳಿಸಿದೆ.

    ಈ ಕಂಪನಿಗಳು ಹಣಕಾಸಿನ ಲಾಭಕ್ಕಾಗಿ ವಿವಿಧ ಕಂಪನಿಗಳಿಗೆ ನಕಲಿ ಹಲಾಲ್ ಪ್ರಮಾಣಪತ್ರಗಳನ್ನು ನೀಡಿದ್ದು, ಸಾಮಾಜಿಕ ದ್ವೇಷ ಮಾತ್ರವಲ್ಲದೆ ಸಾರ್ವಜನಿಕ ನಂಬಿಕೆಯನ್ನು ಉಲ್ಲಂಘಿಸುತ್ತಿವೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಆದರೆ ಈ ಆರೋಪಗಳನ್ನು ಜಮಿಯತ್ ಉಲಮಾ-ಇ-ಹಿಂದ್ ಹಲಾಲ್ ಟ್ರಸ್ಟ್ ತಳ್ಳಿಹಾಕಿದೆ. ಇದು ಆಧಾರರಹಿತ ಆರೋಪ ಎಂದು ಟ್ರಸ್ಟ್‌ ತಿಳಿಸಿದೆ. ಇದನ್ನೂ ಓದಿ: ಫ್ಯಾಶನ್ ಬಳೆ ತೊಟ್ಟಿದ್ದಕ್ಕೆ ಪತ್ನಿಗೆ ಬೆಲ್ಟ್‌ನಲ್ಲಿ ಥಳಿಸಿದ ಪತಿ!