Tag: halagali

  • ಹಲಗಲಿ ಚಿತ್ರದ ಫಸ್ಟ್ ರೋರ್ ರಿಲೀಸ್ – ವಾರಿಯರ್ ಪಾತ್ರದಲ್ಲಿ ಧನಂಜಯ್

    ಹಲಗಲಿ ಚಿತ್ರದ ಫಸ್ಟ್ ರೋರ್ ರಿಲೀಸ್ – ವಾರಿಯರ್ ಪಾತ್ರದಲ್ಲಿ ಧನಂಜಯ್

    ಕನ್ನಡದ ಐತಿಹಾಸಿಕ ಸಿನಿಮಾ `ಹಲಗಲಿ’ (Halagali) ಚಿತ್ರಕ್ಕೆ ಡಾಲಿ ಧನಂಜಯ (Daali Dhananjaya) ಹೈಲೆಟ್. ಅವರಿಗೆ ನಾಯಕಿಯಾಗಿ ಕಾಂತಾರ ಖ್ಯಾತಿಯ ಸಪ್ತಮಿ ಗೌಡ ಕಾಣಿಸಿಕೊಂಡಿದ್ದಾರೆ. ಸುಕೇಶ್ ಡಿಕೆ (Suresh DK) ನಿರ್ದೇಶನದ ಯುವ ಉದ್ಯಮಿ ಕಲ್ಯಾಣ್ ಚಕ್ರವರ್ತಿ ಧೂಳಿಪಾಳ್ಳ ನಿರ್ಮಾಣದ ಬಹು ತಾರಾಗಣದ ಅದ್ಧೂರಿ ಬಜೆಟ್ ಚಿತ್ರ ‘ಹಲಗಲಿ’ ಈಗಾಗಲೇ ಸಾಕಷ್ಟು ಸದ್ದು ಮಾಡಿದೆ. ಇದು ಸ್ವಾತಂತ್ರ್ಯ ವೀರರ ಕಥೆ.

    ಎರಡು ಭಾಗಗಳಲ್ಲಿ, ಮೂಡಿ ಬರಲಿರುವ ಈ ಸಿನಿಮಾ ಕೋಟಿ ವೆಚ್ಚದಲ್ಲಿ ತಯಾರಾಗುತ್ತಿದೆ ಎಂಬುದು ವಿಶೇಷ. ಐದು ಭಾಷೆಯಲ್ಲಿ ಅದ್ಧೂರಿಯಾಗಿ ಚಿತ್ರೀಕರಣವಾಗುತ್ತಿರುವ ಕನ್ನಡದ ಐತಿಹಾಸಿಕ ಸಿನಿಮಾದ ಫಸ್ಟ್ ರೋರ್ ಸಖತ್ ಆಗಿದೆ. ಕನ್ನಡ ಸೇರಿ ಐದು ಭಾಷೆಯಲ್ಲಿ ಮೂಡಿ ಬರುತ್ತಿರುವ ಕನ್ನಡ ನಾಡಿನ ಸ್ವಾತಂತ್ರ್ಯ ಪೂರ್ವದ ವೀರರ ಕಥೆ ಇದಾಗಿದ್ದು, ವಿಶೇಷ ಸ್ಥಳಗಳಲ್ಲಿ ಶೂಟಿಂಗ್ ನಡೆಯುತ್ತಿದೆ. ಇದನ್ನೂ ಓದಿ: ದರ್ಶನ್ ಜೈಲಿಗೆ ಹೋಗಿದ್ದು ಬೇಸರ ತಂದಿದೆ, ಅಕ್ಕಪಕ್ಕದವ್ರ ಸಹವಾಸ ಬಿಡ್ಬೇಕು – ರಮ್ಯಾ ಸಾಫ್ಟ್ ಕಾರ್ನರ್

    daali dhananjaya

    ನಟ ಡಾಲಿ ಧನಂಜಯ ಅವರ ವೃತ್ತಿ ಪಯಣದಲ್ಲಿ ಮತ್ತೊಂದು ಮೈಲುಗಲ್ಲಿನ ಚಿತ್ರವಿದು ಅನ್ನೋದು ವಿಶೇಷ. ಇಲ್ಲಿವರೆಗೂ ಅವರನ್ನು ತೆರೆ ಮೇಲೆ ವಿಭಿನ್ನ ಪಾತ್ರಗಳಲ್ಲಿ ನೋಡಿ ಮೆಚ್ಚಿದ್ದ ಪ್ರೇಕ್ಷಕರು, ಈಗ ವಾರಿಯರ್ ಪಾತ್ರದಲ್ಲಿ ನೋಡಲಿದ್ದಾರೆ. ಇವರ ಕೈಗೆ ಬಿಲ್ಲು, ಬಾಣ, ಮದ್ದು- ಗುಂಡುಗಳನ್ನು ಕೊಟ್ಟು ಯುದ್ಧದ ಅಖಾಡಕ್ಕೆ ಇಳಿಸಿರುವುದು ಕನ್ನಡ ನಾಡಿನ ಇತಿಹಾಸ ಪುಟಗಳಲ್ಲಿ ಅಚ್ಚಳಿಯದೆ ದಾಖಲಾಗಿರುವ ಒಂದು ರೋಚಕ ಇತಿಹಾಸ. ಇದನ್ನೂ ಓದಿ: ದರ್ಶನ್ ಮತ್ತೆ ಜೈಲಿಗೆ; ಚಿತ್ರರಂಗಕ್ಕೆ ದೊಡ್ಡ ನಷ್ಟ ಎಂದ ನಟಿ ಉಮಾಶ್ರೀ

    ಹಲಗಲಿ. ಬ್ರಿಟಿಷರ ವಿರುದ್ಧ ಮೊದಲ ಗೆರಿಲ್ಲಾ ವಾರ್ ಮಾಡಿದ ನಮ್ಮದೇ ರಾಜ್ಯದ ಹಲಗಲಿಯ ಊರಿನ ಬೇಡರ ಕುರಿತು ನಾವು ಓದಿರುವ ಮತ್ತು ಕೇಳಿರುವ ಸಂಗತಿಗಳು ಬಹು ರೋಚಕ. ಕನ್ನಡ ನಾಡಿನ ಈ ವೀರರ ಆಚಾರ- ವಿಚಾರ ಹಾಗೂ ಅವರ ಹೋರಾಟದ ಹೆಜ್ಜೆ ಗುರುತುಗಳನ್ನು ತೆರೆ ಮೇಲೆ ತರುವುದಕ್ಕೆ ಹೊರಟಿದ್ದಾರೆ ನಿರ್ದೇಶಕ ಸುಕೇಶ್ ಡಿ ಕೆ. ಇದನ್ನೂ ಓದಿ: ನಟ ದರ್ಶನ್‌ ಜಾಮೀನು ರದ್ದು – ಸುಪ್ರೀಂ ಕೋರ್ಟ್‌ ತೀರ್ಪಿನಲ್ಲೇನಿದೆ?

    Halagali

    ಇಂಥದ್ದೊಂದು ಬಹು ದೊಡ್ಡ ಬಜೆಟ್ ಚಿತ್ರಕ್ಕೆ ಬಂಡವಾಳ ಹೂಡುವ ಮೂಲಕ ನಿರ್ಮಾಪಕರಾಗಿರುವುದು ಯುವ ಉದ್ಯಮಿ ಬಳ್ಳಾರಿಯ ಕಲ್ಯಾಣ್ ಚಕ್ರವರ್ತಿ ಧೂಳಿಪಾಳ್ಳ. ತಮ್ಮ ದುಹರ ಮೂವೀಸ್ ಬ್ಯಾನರ್ ನಲ್ಲಿ ಚಿತ್ರ ನಿರ್ಮಿಸುತ್ತಿದ್ದಾರೆ. ಇವರು ಈಗಾಗಲೇ ತೆಲಗಿನಲ್ಲಿ ರಚಯತ ಚಿತ್ರವನ್ನು ನಿರ್ಮಿಸಿ, 20ಕ್ಕೂ ಹೆಚ್ಚು ಚಿತ್ರಗಳನ್ನು ಕನ್ನಡ ಹಾಗೂ ತೆಲುಗಿನಲ್ಲಿ ವಿತರಣೆ ಮಾಡಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲಿ ಮೂಡಿ ಬರಲಿರುವ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಹೆಚ್ಚಿದೆ. ಇದನ್ನೂ ಓದಿ: ದೇವರ ಮೇಲೆ ನಂಬಿಕೆ ಇಡಬೇಕು – ಜೈಲು ಸೇರುವ ಮುನ್ನ ಪವಿತ್ರಾ ಮತ್ತೊಂದು ಪೋಸ್ಟ್

    ಚಿತ್ರಕ್ಕಾಗಿ ಬಹುದೊಡ್ಡ ತಾಂತ್ರಿಕ ತಂಡ ಕೆಲಸ ಮಾಡುತ್ತಿದೆ. ಕನ್ನಡದ ವಾಸುಕಿ ವೈಭವ್ ಸಂಗೀತ ಇದೆ. ವಿಶೇಷ ಎಂದರೆ ಕೆಜಿಎಫ್ ಚಿತ್ರಕ್ಕೆ ಸಾಹಸ ಸಂಯೋಜನೆ ಮಾಡಿದ್ದ ವಿಕ್ರಮ್ ಮೋರ್ ಅವರೇ ಹಲಗಲಿ ಚಿತ್ರಕ್ಕೆ ಸಾಹಸ ನಿರ್ದೇಶಕ. ಚಿತ್ರಕ್ಕಾಗಿ ನಾಲ್ಕೈದು ಬೃಹತ್ ಹಳ್ಳಿಯ ಸೆಟ್ ಗಳನ್ನು ಹಾಕಿರುವುದು ಮತ್ತೊಂದು ವಿಶೇಷ., ಹಲಗಲಿ ಗ್ರಾಮವನ್ನೇ ಮರುಸೃಷ್ಟಿಯ ಸೆಟ್ ಅನ್ನೇ ವಿಶೇಷವಾಗಿ ನಿರ್ಮಿಸಲಾಗಿದೆ.

  • ಡಾಲಿ ಚಿತ್ರಕ್ಕೆ ಕಾಂತಾರ ಬೆಡಗಿ ನಾಯಕಿ: ‘ಹಲಗಲಿ’ ಟೀಮ್ ಸೇರಿಕೊಂಡ ಸಪ್ತಮಿ

    ಡಾಲಿ ಚಿತ್ರಕ್ಕೆ ಕಾಂತಾರ ಬೆಡಗಿ ನಾಯಕಿ: ‘ಹಲಗಲಿ’ ಟೀಮ್ ಸೇರಿಕೊಂಡ ಸಪ್ತಮಿ

    ನ್ನಡದ ಐತಿಹಾಸಿಕ ಸಿನಿಮಾ ಹಲಗಲಿ ಚಿತ್ರಕ್ಕೆ ಡಾಲಿ ಧನಂಜಯ ಹೈಲೆಟ್ ಅನ್ನೋದು ಎಲ್ಲರಿಗೂ ಗೊತ್ತು. ಈಗ ಆ ಚಿತ್ರಕ್ಕೆ ನಾಯಕಿಯಾಗಿ ಕಾಂತಾರ ಖ್ಯಾತಿಯ ಸಪ್ತಮಿ ಗೌಡ ಅವರು ಆಯ್ಕೆಯಾಗಿದ್ದಾರೆ. ಸುಕೇಶ್ ಡಿ ಕೆ ನಿರ್ದೇಶನದ ಯುವ ಉದ್ಯಮಿ ಕಲ್ಯಾಣ್ ಚಕ್ರವರ್ತಿ ಧೂಳಿಪಾಳ್ಳ ನಿರ್ಮಾಣದ ಬಹು ತಾರಾಗಣದ ಅದ್ಧೂರಿ ಬಜೆಟ್ ಚಿತ್ರ ‘ಹಲಗಲಿ’ ಈಗಾಗಲೇ ಸಾಕಷ್ಟು ಸದ್ದು ಮಾಡಿದ್ದು, ಚಿತ್ರೀಕರಣಕ್ಕೆ ಅಣಿಯಾಗುತ್ತಿದೆ.

    ಎರಡು ಭಾಗಗಳಲ್ಲಿ, ಮೂಡಿ ಬರಲಿರುವ  ಈ ಸಿನಿಮಾ  ಕೋಟಿ ವೆಚ್ಚದಲ್ಲಿ ತಯಾರಾಗುತ್ತಿದೆ ಎಂಬುದು ವಿಶೇಷ. ಐದು ಭಾಷೆಯಲ್ಲಿ ಅದ್ದೂರಿಯಾಗಿ ಸೆಟ್ಟೇರಿರುವ ಕನ್ನಡದ ಐತಿಹಾಸಿಕ ಸಿನಿಮಾದಲ್ಲಿ ಕನ್ನಡ ಸೇರಿದಂತೆ ಬಹುಭಾಷಾ ನಟರೂ ಇರಲಿದ್ದಾರೆ. ಕನ್ನಡ ಸೇರಿ ಐದು ಭಾಷೆಯಲ್ಲಿ ಮೂಡಿ ಬರುತ್ತಿರುವ ಕನ್ನಡ ನಾಡಿನ ಸ್ವಾತಂತ್ರ್ಯ ಪೂರ್ವದ ವೀರರ ಕಥೆ ಇದಾಗಿದ್ದು, ಸಿನಿಮಾಗೆ ಬೇಕಾದ ಎಲ್ಲಾ ತಯಾರಿ ಮಾಡಿಕೊಂಡು ಚಿತ್ರೀಕರಣಕ್ಕೆ ಹೊರಡುವ ಉತ್ಸಾಹದಲ್ಲಿದೆ ಚಿತ್ರತಂಡ.

    ನಟ ಡಾಲಿ ಧನಂಜಯ ಅವರ ವೃತ್ತಿ ಪಯಣದಲ್ಲಿ ಮತ್ತೊಂದು ಮೈಲುಗಲ್ಲಿನ ಚಿತ್ರವಿದು.  ಇಲ್ಲಿವರೆಗೂ ಅವರನ್ನು ತೆರೆ ಮೇಲೆ ವಿಭಿನ್ನ ಪಾತ್ರಗಳಲ್ಲಿ  ನೋಡಿ ಮೆಚ್ಚಿದ್ದ ಪ್ರೇಕ್ಷಕರು, ಈಗ ವಾರಿಯರ್ ಪಾತ್ರದಲ್ಲಿ ನೋಡಲಿದ್ದಾರೆ. ಇವರ ಕೈಗೆ ಬಿಲ್ಲು, ಬಾಣ, ಮದ್ದು- ಗುಂಡುಗಳನ್ನು ಕೊಟ್ಟು ಯುದ್ಧದ ಅಖಾಡಕ್ಕೆ ಇಳಿಸಿರುವುದು ಕನ್ನಡ ನಾಡಿನ ಇತಿಹಾಸ ಪುಟಗಳಲ್ಲಿ ಅಚ್ಚಳಿಯದೆ ದಾಖಲಾಗಿರುವ ಒಂದು ರೋಚಕ ಇತಿಹಾಸ.

    ಹಲಗಲಿ. ಬ್ರಿಟಿಷರ ವಿರುದ್ಧ ಮೊದಲ ಗೆರಿಲ್ಲಾ ವಾರ್ ಮಾಡಿದ ನಮ್ಮದೇ ರಾಜ್ಯದ ಹಲಗಲಿಯ ಊರಿನ ಬೇಡರ ಕುರಿತು ನಾವು ಓದಿರುವ ಮತ್ತು ಕೇಳಿರುವ ಸಂಗತಿಗಳು ಬಹು ರೋಚಕ. ಕನ್ನಡ ನಾಡಿನ ಈ ವೀರರ ಆಚಾರ- ವಿಚಾರ ಹಾಗೂ ಅವರ ಹೋರಾಟದ ಹೆಜ್ಜೆ ಗುರುತುಗಳನ್ನು ತೆರೆ ಮೇಲೆ ತರುವುದಕ್ಕೆ ಹೊರಟಿದ್ದಾರೆ ನಿರ್ದೇಶಕ ಸುಕೇಶ್ ಡಿ ಕೆ. ಇಂಥದ್ದೊಂದು ಬಹು ದೊಡ್ಡ ಬಜೆಟ್ ಚಿತ್ರಕ್ಕೆ ಬಂಡವಾಳ ಹೂಡುವ ಮೂಲಕ ನಿರ್ಮಾಪಕರಾಗಿರುವುದು ಯುವ ಉದ್ಯಮಿ ಬಳ್ಳಾರಿಯ ಕಲ್ಯಾಣ್ ಚಕ್ರವರ್ತಿ ಧೂಳಿಪಾಳ್ಳ. ತಮ್ನ ದುಹರ ಮೂವೀಸ್ ಬ್ಯಾನರ್ ನಲ್ಲಿ ಚಿತ್ರ ನಿರ್ಮಿಸುತ್ತಿದ್ದಾರೆ. ಇವರು ಈಗಾಗಲೇ ತೆಲಗಿನಲ್ಲಿ ರಚಯತ ಚಿತ್ರವನ್ನು ನಿರ್ಮಿಸಿ, 20ಕ್ಕೂ ಹೆಚ್ಚು ಚಿತ್ರಗಳನ್ನು ಕನ್ನಡ ಹಾಗೂ ತೆಲುಗಿನಲ್ಲಿ ವಿತರಣೆ ಮಾಡಿದ್ದಾರೆ.

     

    ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲಿ ಮೂಡಿ ಬರಲಿರುವ ಅದ್ಧೂರಿ ಬಜೆಟ್ ನ ಈ ಚಿತ್ರಕ್ಕೆ ಚಾಲನೆಯೂ ಸಿಕ್ಕಿದೆ. ಚಿತ್ರಕ್ಕಾಗಿ ಬಹುದೊಡ್ಡ ತಾಂತ್ರಿಕ ತಂಡ ಕೆಲಸ ಮಾಡುತ್ತಿದೆ. ಕನ್ನಡದ ವಾಸುಕಿ ವೈಭವ್ ಸಂಗೀತ ಇದೆ. ವಿಶೇಷ ಎಂದರೆ ಕೆಜಿಎಫ್ ಚಿತ್ರಕ್ಕೆ ಸಾಹಸ ಸಂಯೋಜನೆ ಮಾಡಿದ್ದ ವಿಕ್ರಂ ಮೊರ್ ಅವರೇ  ಹಲಗಲಿ ವೀರರು ಚಿತ್ರಕ್ಕೆ ಸಾಹಸ ನಿರ್ದೇಶಕ. ಚಿತ್ರಕ್ಕಾಗಿ ನಾಲ್ಕೈದು ಬೃಹತ್ ಹಳ್ಳಿಯ ಸೆಟ್ ಗಳನ್ನು ಹಾಕುತ್ತಿದ್ದು,  ಹಲಗಲಿ ಊರಿನ ಸೆಟ್ ಅನ್ನೇ ವಿಶೇಷವಾಗಿ ನಿರ್ಮಿಸಲಾಗುತ್ತಿರುವುದು ವಿಶೇಷ.

  • ಡಾರ್ಲಿಂಗ್ ಜಾಗಕ್ಕೆ ಬಂದ ನಟ ರಾಕ್ಷಸ: ಹಲಗಲಿ ಚಿತ್ರಕ್ಕೆ ಧನಂಜಯ್ ಹೀರೋ

    ಡಾರ್ಲಿಂಗ್ ಜಾಗಕ್ಕೆ ಬಂದ ನಟ ರಾಕ್ಷಸ: ಹಲಗಲಿ ಚಿತ್ರಕ್ಕೆ ಧನಂಜಯ್ ಹೀರೋ

    ಹುಕೋಟಿ ವೆಚ್ಚದಲ್ಲಿ ನಿರ್ಮಾಣ ಆಗುತ್ತಿರುವ ಹಲಗಲಿ (Halagali) ಚಿತ್ರಕ್ಕೆ ಡಾಲಿ ಧನಂಜಯ್ (Dhananjay) ನಾಯಕನಾಗಿ ಎಂಟ್ರಿ ಆಗಿದ್ದಾರೆ. ಆ ಮೂಲಕ ಡಾಲಿ ಮತ್ತೊಂದು ಐತಿಹಾಸಿಕ ಚಿತ್ರದಲ್ಲಿ ನಟಿಸಲು ಸಜ್ಜಾಗಿದ್ದಾರೆ. ಸುಕೇಶ್ ಡಿ ಕೆ ನಿರ್ದೇಶನದ ಈ ಚಿತ್ರವು 80 ಕೋಟಿ ವೆಚ್ಚದಲ್ಲಿ ಎರಡು ಭಾಗಗಳಲ್ಲಿ ಮೂಡಿ ಬರುತ್ತಿದೆ. ಕನ್ನಡದ ಜತೆಗೆ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಬರಲಿರುವ ಈ ಚಿತ್ರಕ್ಕೆ ಮೈಸೂರಿನ ಲಲಿತ್ ಮಹಲ್ ನಲ್ಲಿ ಪೂಜೆ ಮಾಡುವ ಮೂಲಕ ಅದ್ಧೂರಿ ಚಾಲನೆ ನೀಡಲಾಗಿದೆ.

    ಕನ್ನಡ ನಾಡಿನ ಸ್ವಾತಂತ್ರ್ಯ ಪೂರ್ವದ ವೀರರ ಕಥೆಯನ್ನು ಒಳಗೊಂಡ ಈ ಚಿತ್ರದಲ್ಲಿ ಡಾಲಿ ಧನಂಜಯ್ ಅವರು ವಾರಿಯರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಬ್ರಿಟಿಷರ ವಿರುದ್ಧ ಮೊದಲ ಗೆರಿಲ್ಲಾ ಯುದ್ಧ ಮಾಡಿದ ಕನ್ನಡ ನೆಲದ ಹಲಗಲಿಯ ಊರಿನ ಬೇಡರ ಕುರಿತ ಸಿನಿಮಾ ಇದಾಗಿದೆ. ಈ ವೀರರ ಆಚಾರ- ವಿಚಾರ ಹಾಗೂ ಅವರ ಹೋರಾಟದ ಹೆಜ್ಜೆ ಗುರುತುಗಳನ್ನು ಹಲಗಲಿ ಚಿತ್ರದ ಮೂಲಕ ತೆರೆ ಮೇಲೆ ತರಲಾಗುತ್ತಿದೆ. ಇಂಥದ್ದೊಂದು ಬಹು ದೊಡ್ಡ ಬಜೆಟ್ ಚಿತ್ರಕ್ಕೆ ಬಂಡವಾಳ ಹೂಡುವ ಮೂಲಕ ನಿರ್ಮಾಪಕರಾಗಿರುವುದು ಯುವ ಉದ್ಯಮಿ ಬಳ್ಳಾರಿಯ ಕಲ್ಯಾಣ್ ಚಕ್ರವರ್ತಿ ಧೂಳಿಪಾಳ್ಳ. ತಮ್ಮ ದುಹರ ಮೂವೀಸ್ ಬ್ಯಾನರ್ ನಲ್ಲಿ ಚಿತ್ರ ನಿರ್ಮಿಸುತ್ತಿದ್ದಾರೆ. ಇವರು ಈಗಾಗಲೇ ತೆಲಗಿನಲ್ಲಿ ರಚಯತ ಚಿತ್ರವನ್ನು ನಿರ್ಮಿಸಿ, 20ಕ್ಕೂ ಹೆಚ್ಚು ಚಿತ್ರಗಳನ್ನು ಕನ್ನಡ ಹಾಗೂ ತೆಲುಗಿನಲ್ಲಿ ವಿತರಣೆ ಮಾಡಿದ್ದಾರೆ.

    ಚಿತ್ರಕ್ಕಾಗಿ ಬಹುದೊಡ್ಡ ತಾಂತ್ರಿಕ ತಂಡ ಕೆಲಸ ಮಾಡುತ್ತಿದೆ. ಅತ್ಯುತ್ತಮ ಛಾಯಾಗ್ರಾಹಕ ವಿಭಾಗದಲ್ಲಿ ನಂದಿ ಪ್ರಶಸ್ತಿ ಪುರಸ್ಕೃತ ಸಾಯಿ ಶ್ರೀರಾಮ್ ಕ್ಯಾಮೆರಾ, ವಾಸುಕಿ ವೈಭವ್ ಸಂಗೀತ ಇದೆ. ವಿಶೇಷ ಎಂದರೆ ಕೆಜಿಎಫ್ ಚಿತ್ರಕ್ಕೆ ಸಾಹಸ ಸಂಯೋಜನೆ ಮಾಡಿದ್ದ ವಿಕ್ರಮ್ ಮೋರ್ ಅವರೇ  ಹಲಗಲಿ ಚಿತ್ರಕ್ಕೂ ಸಾಹಸ ನಿರ್ದೇಶನ ಮಾಡಲಿದ್ದಾರೆ. ಅಂದಹಾಗೆ ಈ ಚಿತ್ರಕ್ಕೆ ಈ ಮೊದಲು ಡಾರ್ಲಿಂಗ್ ಕೃಷ್ಣ ಅವರು ಹೀರೋ ಎಂದು ಸುದ್ದಿ ಆಗಿತ್ತು. ಆದರೆ, ಡಾರ್ಲಿಂಗ್ ಕೃಷ್ಣ ಅವರ ಡೇಟ್ಸ್ ಸಮಸ್ಯೆಯಿಂದ ಅವರು ಈ ಚಿತ್ರದಲ್ಲಿ ನಟಿಸಲು ಆಗುತ್ತಿಲ್ಲ. ಅಲ್ಲದೆ ಐತಿಹಾಸಿಕ, ಬಹುಭಾಷೆಯ ಚಿತ್ರಕ್ಕೆ ಡಾಲಿ ಧನಂಜಯ್ ಅವರೇ ಸೂಕ್ತ ಎನಿಸಿ ಈಗ ಡಾರ್ಲಿಂಗ್ ಜಾಗಕ್ಕೆ ಡಾಲಿ ಆಗಮನ ಆಗಿದೆ. ಚಿತ್ರದಲ್ಲಿ ಹೆಸರಾಂತ ಬಹು ಭಾಷೆಯ ಕಲಾವಿದರು ಕಾಣಿಸಿಕೊಳ್ಳುತ್ತಿದ್ದಾರೆ.

    ಐತಿಹಾಸಿಕ ಕತೆಗಳು ಅಂದರೆ ನನಗೆ ಇಷ್ಟ. ಹಲಗಲಿ ಕತೆ ಕೇಳಿದಾಗ ತುಂಬಾ ಇಷ್ಟವಾಯಿತು. ನಮ್ಮ ನಾಡಿಗಾಗಿ ಹೋರಾಡಿದವರ ಕತೆಯನ್ನು ಸಿನಿಮಾ ಮಾಡುತ್ತಿದ್ದು, ಆ ಚಿತ್ರದಲ್ಲಿ ನಾನು ಹೀರೋ ಆಗುತ್ತಿರುವುದು ಖುಷಿ ಕೊಟ್ಟಿದೆ. ನಿರ್ದೇಶಕ ಸುಕೇಶ್ ಡಿ ಕೆ ಹಾಗೂ ನಿರ್ಮಾಪಕ ಕಲ್ಯಾಣ್ ಚಕ್ರವರ್ತಿ ಧೂಳಪಾಳ್ಳ ಅವರು ತುಂಬಾ ದೊಡ್ಡ ಕನಸು ಕಟ್ಟಿಕೊಂಡು ಈ ಚಿತ್ರವನ್ನು ಐದು ಭಾಷೆಯಲ್ಲಿ ಮಾಡುತ್ತಿದ್ದಾರೆ. ನಾನು ಈ ಚಿತ್ರಕ್ಕೆ ಹೀರೋ ಆಗುತ್ತಿರುವುದು ಹೆಮ್ಮೆ ಅನಿಸುತ್ತಿದೆ ಅಂತಾರೆ ಧನಂಜಯ್.

     

    ದೊಡ್ಡ ಮಟ್ಟದಲ್ಲಿ ಮೂಡಿ ಬರುತ್ತಿರುವ ಸಿನಿಮಾ ಹಲಗಲಿ. ಈಗಾಗಲೇ ಮುಹೂರ್ತ ಕೂಡ ಮಾಡಿದ್ದೇವೆ. ಐದು ಭಾಷೆಗಳಲ್ಲಿ ಬರುತ್ತಿದೆ. ಪೂರ್ವ ತಯಾರಿಗಳು ಮುಗಿದಿವೆ. ಡಾರ್ಲಿಂಗ್ ಕೃಷ್ಣ ಅವರ ಮೂರು-ನಾಲ್ಕು ಚಿತ್ರಗಳಲ್ಲಿ ಬ್ಯುಸಿ ಆಗಿದ್ದಾರೆ. ಹೀಗಾಗಿ ಅವರಿಗೆ ಕಾಯಲು ಆಗುತ್ತಿಲ್ಲ. ಅಲ್ಲದೆ ನಮ್ಮ ಕತೆಗೆ ಡಾಲಿ ಧನಂಜಯ್ ಅವರು ಸೂಕ್ತ ಎನಿಸಿದ್ದು, ಅವರೇ ಹೀರೋ ಆಗಿ ಮಾಡುತ್ತಿದ್ದಾರೆ. ಸದ್ಯದಲ್ಲೇ ರೆಗ್ಯೂಲರ್ ಶೂಟಿಂಗ್ ಶುರುವಾಗಲಿದೆ ಅನ್ನುವುದು ನಿರ್ಮಾಪಕ  ಕಲ್ಯಾಣ್ ಚಕ್ರವರ್ತಿ ಧೂಳಪಾಳ್ಳ ಮಾತು.

  • ಐತಿಹಾಸಿಕ ‘ಹಲಗಲಿ’ ಸಿನಿಮಾದಲ್ಲಿ ಡಾಲಿ

    ಐತಿಹಾಸಿಕ ‘ಹಲಗಲಿ’ ಸಿನಿಮಾದಲ್ಲಿ ಡಾಲಿ

    ನ್ನಡ ಚಿತ್ರರಂಗದ ಬಿಗ್ ಬಜೆಟ್ ‘ಹಲಗಲಿ’ (Halagali) ಸಿನಿಮಾ ಬಗ್ಗೆ ಇದೀಗ ಹೊಸ ಅಪ್‌ಡೇಟ್‌ವೊಂದು ಸಿಕ್ಕಿದೆ. ಡೇಟ್ಸ್ ಹೊಂದಾಣಿಕೆ ಆಗದ ಕಾರಣ ಡಾರ್ಲಿಂಗ್ ಕೃಷ್ಣ ಈ ಚಿತ್ರದಿಂದ ಹೊರನಡೆದಿದ್ದರು. ಈ ಬೆನ್ನಲ್ಲೇ ಚಿತ್ರದ ಲೀಡ್ ಪಾತ್ರಕ್ಕೆ ನಟರಾಕ್ಷಸ ಡಾಲಿ ಎಂಟ್ರಿ ಕೊಡುವ ಬಗ್ಗೆ ಸುದ್ದಿ ಹಬ್ಬಿದೆ.

    ನಟ ಕಮ್ ನಿರ್ಮಾಪಕ ಡಾಲಿ ಧನಂಜಯ್ ಕನ್ನಡದ ಜೊತೆ ಪರಭಾಷಾ ಸಿನಿಮಾಗಳಲ್ಲೂ ಬ್ಯುಸಿಯಾಗಿದ್ದಾರೆ. ತಮ್ಮದೇ ನಿರ್ಮಾಣ ಸಂಸ್ಥೆ ಮೂಲಕ ಹೊಸ ಪ್ರತಿಭೆಗಳಿಗೆ ಡಾಲಿ ಅವಕಾಶ ನೀಡುತ್ತಿದ್ದಾರೆ. ಇದನ್ನೂ ಓದಿ:ಚಂದ್ರಕಾಂತ್, ಪವಿತ್ರಾ ಮದುವೆ ರೂಮರ್ಸ್ ಬಗ್ಗೆ ಸ್ಪಷ್ಟನೆ ನೀಡಿದ ಪುತ್ರ

    ‘ಹಲಗಲಿ’ ಸಿನಿಮಾ ಅತೀ ದೊಡ್ಡ ಪ್ರಾಜೆಕ್ಟ್ ಆಗಿದ್ದು, ಡಾಲಿ ಈ ಸಿನಿಮಾಗೆ ಎಂಟ್ರಿ ಕೊಡುವ ಬಗ್ಗೆ ಸುದ್ದಿ ಹಬ್ಬಿದೆ. ಸಿನಿಮಾ ಕಥೆ ಮತ್ತು ಪಾತ್ರದ ಬಗ್ಗೆ ಡಾಲಿ ಮಾತನಾಡಿ ಚಿತ್ರತಂಡ ಮಾತುಕತೆ ನಡೆಸಿದೆ. ಶೀಘ್ರದಲ್ಲೇ ಶೂಟಿಂಗ್‌ಗೆ ನಡೆಯಲಿದೆ ಎನ್ನಲಾಗಿದೆ. ಅಧಿಕೃತ ಮಾಹಿತಿ ಚಿತ್ರತಂಡದಿಂದ ಹೊರಬರಬೇಕಿದೆ.

    ಸ್ವಾತಂತ್ರ್ಯ ಸಂಗ್ರಾಮದಲ್ಲಿ ಗೆರಿಲ್ಲಾ ವಾರ್ ಮಾಡುವ ಮೂಲಕ ಬ್ರಿಟಿಷರಿಗೆ ಸಿಂಹಸ್ವಪ್ನರಾಗಿದ್ದ ಹಲಗಲಿ ಬೇಡರ ಕಥೆಯನ್ನು ಸಿನಿಮಾ ನಿರ್ದೇಶಕ ಸುಕೇಶ್ ಡಿ.ಕೆ. ಮಾಡುತ್ತಿದ್ದಾರೆ. ಇದೊಂದು ಐತಿಹಾಸಿಕ ಸಿನಿಮಾವಾಗಿದ್ದರಿಂದ ಮತ್ತು ಆ ಕಾಲ ಘಟ್ಟವನ್ನು ಕಟ್ಟಿ ಕೊಡಬೇಕಾಗಿದ್ದರಿಂದ ಬರೋಬ್ಬರಿ 80 ಕೋಟಿ ರೂಪಾಯಿಯನ್ನು ಈ ಸಿನಿಮಾಗಾಗಿ ಖರ್ಚು ಮಾಡುತ್ತಿದ್ದಾರೆ ನಿರ್ಮಾಪಕ ಕಲ್ಯಾಣ್ ಚಕ್ರವರ್ತಿ ಧೂಳಿಪಳ್ಯ. ಇದೊಂದು ಅಪರೂಪದ ಕಥನವಾಗಿದ್ದರಿಂದ ಸರ್ವ ರೀತಿಯಲ್ಲೂ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.