Tag: Haladi Srinivasa Shetty

  • ನನ್ನದು ಮೌನ ವೃತ, ಪ್ರತಿಭಟಿಸಿ ಸಚಿವನಾಗೋದು ಧರ್ಮವಲ್ಲ: ಹಾಲಾಡಿ

    ನನ್ನದು ಮೌನ ವೃತ, ಪ್ರತಿಭಟಿಸಿ ಸಚಿವನಾಗೋದು ಧರ್ಮವಲ್ಲ: ಹಾಲಾಡಿ

    ಉಡುಪಿ: ಮಂತ್ರಿ ಮಂಡಲ ವಿಸ್ತರಣೆ ಕುರಿತಾಗಿ ನಾನೇನು ಪ್ರತಿಕ್ರಿಯೆ ನೀಡುವುದಿಲ್ಲ. ನಾನು ಮೌನವ್ರತಕ್ಕೆ ಜಾರಿದ್ದೇನೆ ಎಂದು ಹಾಲಾಡಿ ಶ್ರೀನಿವಾಸ ಶೆಟ್ಟಿ ಪಬ್ಲಿಕ್ ಟಿವಿಗೆ ಹೇಳಿದರು.

    ಕುಂದಾಪುರದ ವಾಜಪೇಯಿ ಖ್ಯಾತಿಯ, ಐದು ಬಾರಿ ನಿರಂತರವಾಗಿ ಗೆದ್ದ, ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಗೆ ಈ ಬಾರಿಯಾದರೂ ಸಚಿವ ಸ್ಥಾನ ಕೊಡಿ ಎಂಬ ಕೂಗು ಈ ಬಾರಿ ಜೋರಾಗಿತ್ತು. ಹಾಲಾಡಿ ಬೆಂಬಲಿಗರು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಶುರು ಮಾಡಿದ್ದರು. ಬೆಂಗಳೂರಿನಲ್ಲಿ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಮನೆಯ ಮುಂದೆ ಜನಾಗ್ರಹ ಆಂದೋಲನ ನಡೆಸಿದರು. ಸಚಿವ ಸ್ಥಾನದಿಂದ ಹಾಲಾಡಿ ಶ್ರೀನಿವಾಸ ಶೆಟ್ಟಿ ವಂಚಿತರಾದ ವಿಚಾರಕ್ಕೆ ಸಂಬಂಧಿಸಿದಂತೆ ಫೋನ್ ಮೂಲಕ ಪ್ರತಿಕ್ರಿಯೆ ನೀಡಿದರು. ಇದನ್ನೂ ಓದಿ: Exclusive: ಉಸಿರಿರೋತನಕ ಕೇಳಿ ಸಚಿವ ಸ್ಥಾನ ಪಡೆಯಲ್ಲ- ಕುಂದಾಪುರದ ವಾಜಪೇಯಿ ಹಾಲಾಡಿ ನೇರ ನುಡಿ

    ನಾನು ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ಕೊಡಲ್ಲ. ನನ್ನದು ಏನಿದ್ದರೂ ಮೌನ ವೃತ. ಆಸೆಯೇ ದುಃಖಕ್ಕೆ ಕಾರಣ ಎಂದು ಬುದ್ಧ ಹೇಳಿದ್ದಾನೆ. ನಾನು ಬರುವಾಗ ಏನನ್ನೂ ತಂದಿಲ್ಲ. ನಾನು ಹೋಗುವಾಗ ಬರಿಗೈಲಿ ಹೋಗುವವನು. ಅಲೆಗ್ಸಾಂಡರ್ ಕಥೆ ನಿಮಗೆ ಗೊತ್ತಲ್ವಾ? ನನ್ನ ಪರವಾಗಿ ಪ್ರತಿಭಟನೆ ಮಾಡೋದು ಧರ್ಮವಲ್ಲ. ಸಮಾಜದ ಒಳಿತಿಗಾಗಿ ಮಾತ್ರ ಪ್ರತಿಭಟನೆ ಮಾಡಬೇಕು. ಸರ್ಕಾರ ದುರಾಡಳಿತದ ಮಾತ್ರ ಪ್ರತಿಭಟನೆ ಮಾಡಬೇಕು. ಇವತ್ತು ನಾನು ಯಾವುದೇ ಪ್ರತಿಕ್ರಿಯೆ ನೀಡಲ್ಲ. ಮುಂದಿನ ನಿರ್ಧಾರಗಳನ್ನು ಪರಮಾತ್ಮನೇ ಬಲ್ಲ. ಒಂದು ಬಾರಿ ನನ್ನನ್ನು ಪ್ರಮೋಶನ್ ಗೆ ಕರೆದು ಡಿಮೋಶನ್ ಮಾಡಿದ್ರು ಎಂದು ಹಳೆಯ ನೋವನ್ನು ಮತ್ತೆ ಕೆದಕಿಕೊಂಡರು.

  • ಬಿಜೆಪಿ ವಿರುದ್ಧ ತಿರುಗಿ ಬಿದ್ದ ಶಾಸಕ ಹಾಲಾಡಿ ಅಭಿಮಾನಿಗಳು

    ಬಿಜೆಪಿ ವಿರುದ್ಧ ತಿರುಗಿ ಬಿದ್ದ ಶಾಸಕ ಹಾಲಾಡಿ ಅಭಿಮಾನಿಗಳು

    ಉಡುಪಿ: ಜಿಲ್ಲೆಯ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಗೆ ಸಚಿವ ಸ್ಥಾನ ನೀಡದ್ದಕ್ಕೆ ಹಾಲಾಡಿ ಬೆಂಬಲಿಗರ ಆಕ್ರೋಶ ಜೋರಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಹೈಕಮಾಂಡ್ ಮತ್ತು ಪಕ್ಷದ ವರಿಷ್ಟರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಸ್ವಾಭಿಮಾನಕ್ಕೆ ಬೆಲೆ ಇಲ್ಲದಂತಾಗಿದೆ. ಐದು ಬಾರಿ ಜನರಿಂದ ಗೆದ್ದವರಿಗೆ ಈವರೆಗೆ ಯಾವ ಸ್ಥಾನ ಮಾನವನ್ನು ಕೊಟ್ಟಿಲ್ಲ ಎಂದು ಅಸಮಾಧಾನ ಹೊರ ಹಾಕಿದ್ದಾರೆ. ಕರಾವಳಿಯ ಬಂಟ ಸಮುದಾಯಕ್ಕೆ ಬಿಜೆಪಿ ಪ್ರಾಶಸ್ತ್ಯ ನೀಡುತ್ತಿಲ್ಲ ಎಂಬ ಪೋಸ್ಟ್‍ಗಳು ವಾಟ್ಸಾಪ್, ಫೇಸ್‍ಬುಕ್‍ನಲ್ಲಿ ಹರಿದಾಡುತ್ತಿದೆ. ಸಂಪುಟ ವಿಸ್ತರಣೆ ಕಾರ್ಯಕ್ರಮಕ್ಕೂ ಹಾಲಾಡಿಗೆ ಬುಲಾವ್ ನೀಡಿಲ್ಲ. ಸೌಜನ್ಯಕ್ಕೂ ಪಕ್ಷದ ಹಿರಿಯರು, ನಾಯಕರು ಮಾತನಾಡಿಸಿಲ್ಲ ಎಂದು ಶ್ರೀನಿವಾಸ ಶೆಟ್ಟಿ ಬೆಂಬಲಿಗರು ಅಸಮಾಧಾನ ಹೊರಹಾಕಿದ್ದಾರೆ.

    ಕುಂದಾಪುರದ ಬಿಜೆಪಿ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಕಾಡೂರು ಮಾತನಾಡಿ, ಯಡಿಯೂರಪ್ಪ ಸಂಪುಟ ವಿಸ್ತರಣೆ ಮಾಡಿದ್ದು, ಕೋಟ ಶ್ರೀನಿವಾಸ ಪೂಜಾರಿ ಸಚಿವರಾಗಿದ್ದು ಖುಷಿಯಾಗಿದೆ. ಆದರೆ ಐದು ಬಾರಿ ಶಾಸಕರಾಗಿ ಗೆದ್ದ ಹಾಲಾಡಿ ಶ್ರೀನಿವಾಸ ಶೆಟ್ಟಿಗೆ ಕಳೆದ ಬಾರಿ ಸಚಿವ ಸ್ಥಾನ ಕೈ ತಪ್ಪಿತ್ತು. ಈ ಬಾರಿಯ ಮೊದಲ ಪಟ್ಟಿಯಲ್ಲೂ ಹೆಸರಿಲ್ಲ. ಕ್ಷೇತ್ರದ ಜನ ಹಾಲಾಡಿಯವರು ಈ ಬಾರಿಯಾದರೂ ಸಚಿವರಾಗುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದೇವು. 2ನೇ ಪಟ್ಟಿಯಲ್ಲಿ ಶ್ರೀನಿವಾಸ ಶೆಟ್ಟಿಯವರಿಗೆ ಸೂಕ್ತ ಸ್ಥಾನಮಾನ ಸಿಗಬೇಕು. ಪಕ್ಷದ ಆಂತರಿಕ ಸಭೆಯಲ್ಲಿ ಈ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ಹೇಳಿದರು.

  • ಜಾತಿ ರಾಜಕಾರಣ, ಲಾಬಿ, ಗುಂಪುಗಾರಿಕೆ ಮಾಡಿ ಗೊತ್ತಿಲ್ಲ- ಹಾಲಾಡಿ ಶ್ರೀನಿವಾಸ ಶೆಟ್ಟಿ

    ಜಾತಿ ರಾಜಕಾರಣ, ಲಾಬಿ, ಗುಂಪುಗಾರಿಕೆ ಮಾಡಿ ಗೊತ್ತಿಲ್ಲ- ಹಾಲಾಡಿ ಶ್ರೀನಿವಾಸ ಶೆಟ್ಟಿ

    ಉಡುಪಿ: ಕುಂದಾಪುರದ ವಾಜಪೇಯಿ ಖ್ಯಾತಿಯ ಬಿಜೆಪಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯ ಸಚಿವ ಸ್ಥಾನ ಕೈತಪ್ಪಿದೆ. ಸತತ ಐದು ಬಾರಿ ಗೆದ್ದಿರುವ ಹಾಲಾಡಿ ಶ್ರೀನಿವಾಸ ಶೆಟ್ಟಿಗೆ ಈ ಬಾರಿ ಸಚಿವ ಸ್ಥಾನ ಸಿಕ್ಕೇ ಸಿಗುತ್ತದೆ ಎಂದು ಹೇಳಲಾಗಿತ್ತು. ಆದರೆ ಇವತ್ತು ಸಚಿವರ ಪಟ್ಟಿಯಲ್ಲಿ ಹಾಲಾಡಿ ಹೆಸರು ಕಳೆದ ಬಾರಿಯಂತೆ ಈ ಬಾರಿಯೂ ಮಿಸ್ಸಾಗಿದೆ.

    ಸಚಿವ ಸ್ಥಾನ ಕೈತಪ್ಪಿದ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಹಾಲಾಡಿ, ಪ್ರಮಾಣವಚನಕ್ಕೆ ನನಗೆ ಆಹ್ವಾನ ಇರಲಿಲ್ಲ. ಲಾಬಿ ಮಾಡಿ ಸಚಿವ ಸ್ಥಾನ ಪಡೆಯೋದು ಗೊತ್ತಿಲ್ಲ. ಗುಂಪುಗಾರಿಕೆ, ವಾಮಮಾರ್ಗ ಮಾಡಲ್ಲ. ಜಾತಿ ರಾಜಕಾರಣ ಮಾಡಿ ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ. ಹಾಲಾಡಿಯವರ ಈ ಹೇಳಿಕೆ ನೂತನ ಸಚಿವ ಕೋಟ ಶ್ರೀನಿವಾಸ ಪೂಜಾರಿಗೆ ಟಾಂಗ್ ಕೊಟ್ಟಂತಿತ್ತು.

    ಎಲ್ಲಾ ಚುನಾವಣೆಗಳಲ್ಲೂ ಬಿಜೆಪಿ ಗೆಲುವಿಗೆ ಶ್ರಮಿಸಿದ್ದೇನೆ. ಬಿಜೆಪಿಗೆ ಪಕ್ಷನಿಷ್ಠೆ ತೋರಿದ್ದೇನೆ. ಒಂದು ಅವಧಿ ಪಕ್ಷೇತರನಾಗಿದ್ದಾಗ ಬಿಜೆಪಿ ಬೆಂಬಲಿಸಿದ್ದೇನೆ. ಪಕ್ಷೇತರನಾಗಿ ಗೆದ್ದಾಗ ಜಿಲ್ಲಾ ಪಂಚಾಯತ್, ಗ್ರಾಮ, ತಾಲೂಕು ಪಂಚಾಯತ್ ಸದಸ್ಯರೆಲ್ಲರೂ ಬಿಜೆಪಿಗೆ ಬೆಂಬಲಿಸಿದ್ದಾರೆ ಎಂದು ಹೇಳಿದರು. ಸಚಿವ ಸ್ಥಾನ ಯಾಕೆ ಸಿಗಲಿಲ್ಲವೆಂದು ನನಗೆ ಗೊತ್ತಿಲ್ಲ. ಮಾಧ್ಯಮದವರು ಬಿಜೆಪಿಯ ಪ್ರಮುಖರನ್ನೇ ಕೇಳಿ ತಮ್ಮ ಅಸಮಧಾನವನ್ನು ಹೊರ ಹಾಕಿದರು.

    ಸಚಿವ ಸ್ಥಾನ ವಂಚಿತರು ಸಭೆಗೆ ಕರೆದಿದ್ದರು. ಬೆಂಗಳೂರಿಗೆ ನನ್ನನ್ನು ಸಭೆಗೆ ಬರುವಂತೆ ಕರೆ ಮಾಡಿದ್ದರು. ನಾನು ಎಲ್ಲೂ ಹೋಗಿಲ್ಲ, ಕ್ಷೇತ್ರದಲ್ಲೇ ಇದ್ದೇನೆ ಎಂದು ಹೇಳಿದರು.

    ಸಿಎಂ ಬಿಎಸ್ ಯಡಿಯೂರಪ್ಪ ಆಪ್ತರಾಗಿರುವ ಹಾಲಾಡಿಯನ್ನು, ಮನನೊಂದು ಪಕ್ಷೇತರನಾಗಿದ್ದಾಗ ಯಡಿಯೂರಪ್ಪನವರೇ ಬಿಜೆಪಿಗೆ ಮತ್ತೆ ಕರೆತಂದು ಟಿಕೆಟ್ ಕೊಟ್ಟಿದ್ದರು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಬಂಟ ಸಮುದಾಯದ ಪ್ರಭಾವಿ ನಾಯಕನಾಗಿರುವ ಹಾಲಾಡಿಗೆ ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಬೆಂಬಲಿಗರು ಕೂಡ ಬೇಸರ ವ್ಯಕ್ತಪಡಿಸಿದ್ದಾರೆ. ಸದ್ಯ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸದ ಹಾಲಾಡಿ, ಕಾರ್ಯಕರ್ತರ ಜೊತೆ ಚರ್ಚೆ ಮಾಡುವುದಾಗಿ ಹೇಳಿದ್ದಾರೆ.

  • ವಿಧಾನಸೌಧದೊಳಗೆ ಸದಾ ನಿದ್ದೆ ಮಾಡ್ತಿದ್ರೆ ಯಾರ್ ಬಂದ್ ಹೋದ್ರೂ ಗೊತ್ತಾಗಲ್ಲ- ಶ್ರೀನಿವಾಸ ಪೂಜಾರಿ

    ವಿಧಾನಸೌಧದೊಳಗೆ ಸದಾ ನಿದ್ದೆ ಮಾಡ್ತಿದ್ರೆ ಯಾರ್ ಬಂದ್ ಹೋದ್ರೂ ಗೊತ್ತಾಗಲ್ಲ- ಶ್ರೀನಿವಾಸ ಪೂಜಾರಿ

    ಉಡುಪಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅನಾಗರಿಕ. ನಾಗರೀಕತೆ ಇದ್ದವರ ರೀತಿಯಲ್ಲಿ ಅವರು ಮಾತನಾಡುವುದಿಲ್ಲ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ವಾಗ್ದಾಳಿ ನಡೆಸಿದ್ದಾರೆ.

    ಶಿವಮೊಗ್ಗ ಲೋಕಸಭಾ ಕ್ಷೇತ್ರ ಉಪಚುನಾವಣೆ ಸಂದರ್ಭದಲ್ಲಿ ಕುಂದಾಪುರ ಶಾಸಕ ಹಾಲಾಡಿ ಯಾವಾನೋ ನೋಡೇ ಇಲ್ಲ. ಹಾಲಾಡಿ ಶ್ರೀನಿವಾಸ ಶೆಟ್ಟಿ ನನಗೆ ಗೊತ್ತೇ ಇಲ್ಲ ಎಂದಿದ್ದರು. ಈ ವಿಚಾರಕ್ಕೆ ಸಂಬಂಧಪಟ್ಟಂತೆ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿದ್ದು, ಹಾಲಾಡಿ ಶ್ರೀನಿವಾಸ ಶೆಟ್ಟಿ 5 ಬಾರಿ ಶಾಸಕರಾಗಿದ್ದಾರೆ. ಹಾಲಾಡಿಯವರ ಮುಖವನ್ನೇ ನೋಡಿಲ್ಲಾಂತ ಸಿದ್ದರಾಮಯ್ಯ ಹೇಳ್ತಾರೆ. ವಿಧಾನಸೌಧಗೊಳಗೆ ನೀವು ಸದಾ ನಿದ್ದೆ ಮಾಡುತ್ತಿದ್ರಾ? ಯಾರು ಬಂದ್ರೂ ಯಾರು ಹೋದ್ರೂ ನಿಮಗೆ ಗೊತ್ತಾಗಲ್ಲ. ಎಚ್ಚರ ಇದ್ದವರಿಗೆ ಎಲ್ಲವೂ ಗೊತ್ತಾಗುತ್ತದೆ ಅಂತ ಛಾಟಿ ಬೀಸಿದ್ರು.

    ಸಿದ್ದರಾಮಯ್ಯ ಖಾಯಂ ನಿದ್ರೆಯಲ್ಲೇ ಇದ್ದವರು. ನೀವು ನಿದ್ದೆಯಿಂದ ಎದ್ದಾಗ ಕಾಲ ಮಿಂಚಿ ಹೋಗಿದೆ. ಹಾಲಾಡಿ ಶ್ರೀನಿವಾಸ ಶೆಟ್ಟಿಗೆ ಏಕವಚನ ಬಳಸಿದ್ದೀರಿ. ಸಿದ್ದರಾಮಯ್ಯ ಪದಬಳಕೆ ಅವರ ಅನಾಗರೀಕತೆ ತೋರಿಸುತ್ತದೆ. ಅವರಿಗೆ ನಾಗರೀಕತೆ ಇಲ್ಲ ಎಂದು ಶ್ರೀನಿವಾಸ ಪೂಜಾರಿ ಸಿದ್ದರಾಮಯ್ಯಗೆ ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ: ಯಾವನೋ ಶ್ರೀನಿವಾಸ ಶೆಟ್ಟಿ ಅಂದ ಸಿದ್ದರಾಮಯ್ಯಗೆ ಹಾಲಾಡಿ ತಿರುಗೇಟು

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಕುಂದಾಪುರ ಶಾಸಕ ಶ್ರೀನಿವಾಸ ಶೆಟ್ಟಿ

    ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಕುಂದಾಪುರ ಶಾಸಕ ಶ್ರೀನಿವಾಸ ಶೆಟ್ಟಿ

    ಉಡುಪಿ: ಕುಂದಾಪುರದ ಪಕ್ಷೇತರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಬಿಜೆಪಿಗೆ ಸೇರಲು ನಿರ್ಧರಿಸಿದ್ದಾರೆ. ಬಿಜೆಪಿಯಿಂದ ನನಗೆ ಆಹ್ವಾನ ಬಂದಿದೆ ಪಕ್ಷೇತರ ಶಾಸಕತ್ವದ ತಾಂತ್ರಿಕ ಸಮಸ್ಯೆ ಕಳೆದ ಕೂಡಲೇ ಬಿಜೆಪಿಗೆ ಸೇರ್ಪಡೆಯಾಗುತ್ತೇನೆ ಎಂದು ಖಚಿತ ಪಡಿಸಿದ್ದಾರೆ.

    ಈ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಶಾಸಕ ಹಾಲಾಡಿ, ಬಿಜೆಪಿ ಸೇರಿಸಿಕೊಳ್ಳುವಂತೆ ನಾನು ಯಾರ ಮನೆ ಬಾಗಿಲು ತಟ್ಟಲು ಹೋಗಿಲ್ಲ ಅವಕಾಶ ಬಂದಿದೆ ಅದ್ದರಿಂದ ಸೇರುತ್ತಿದ್ದೇನೆ. ಸದ್ಯ ನಾನು ಪಕ್ಷೇತರ ಶಾಸಕನಾಗಿದ್ದು, ಯಾವುದೇ ಆಸೆ- ಆಮಿಷಗಳಿಗೆ ಒಳಗಾಗಿ ಪಕ್ಷ ಸೇರ್ಪಡೆಯಾದರೆ ಅನರ್ಹ ಆಗಬಹುದು. ಆದರೆ ನಾನು ಯಾವುದೇ ಬೇಡಿಕೆ ಇಟ್ಟು ಬಿಜೆಪಿ ಪಕ್ಷಕ್ಕೆ ಬರುತ್ತಿಲ್ಲ. ಚುನಾವಣೆ ನೀತಿ ಸಂಹಿತೆ ಘೋಷಣೆ ಮಾಡಿದ ಕೂಡಲೇ ನಾನು ಬಿಜೆಪಿ ಪಕ್ಷ ಸೇರುತ್ತೇನೆ ಎಂದು ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಘೋಷಣೆ ಮಾಡಿದ್ದಾರೆ.

    ಜನರ ಅಭಿಪ್ರಾಯ ಪಡೆದು ಈ ನಿರ್ಧಾರಕ್ಕೆ ಬಂದಿದ್ದೇನೆ. ಅಗತ್ಯವಿರುವ ಸರ್ಕಾರಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತೇನೆ. ವಾಟ್ಸಪ್ ನಲ್ಲಿ ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ನಮ್ಮ ಪಕ್ಷದಲ್ಲಿ ಬಣ ರಾಜಕೀಯ ಇಲ್ಲ. ನಮ್ಮಲ್ಲಿ ಯಾವುದೇ ಗೊಂದಲಗಳಿಲ್ಲ. ಕ್ಷೇತ್ರದಲ್ಲಿ ನನ್ನ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅದರಲ್ಲಿ ಕೆಲವು ತುಂಟ ಹುಡುಗರು ಇದ್ದಾರೆ ಗೊಂದಲ ಬಗ್ಗೆ ಅವರನ್ನೇ ಕೇಳಬೇಕು. ಬಣ ರಾಜಕೀಯ ಬಗ್ಗೆ ಅವರೇ ಉತ್ತರ ಕೊಡಲಿ. ಎಲ್ಲಾ ಪಕ್ಷದಲ್ಲೂ ಸಣ್ಣ ಪುಟ್ಟ ಗುಂಪುಗಾರಿಕೆ ಇದ್ದೇ ಇರುತ್ತದೆ ಎಂದು ಒಪ್ಪಿಕೊಂಡರು.

    ವಿಧಾನಸಭೆ ಯಲ್ಲಿ ಹಲವು ಬಾರಿ ವಾರಾಹಿ ಯೋಜನೆ, ಸಕ್ಕರೆ ಕಾರ್ಖಾನೆ, ಬಸವ ಯೋಜನೆ ಇತ್ಯಾದಿಗಳ ಬಗ್ಗೆ ಧ್ವನಿ ಎತ್ತಿದ್ದೇನೆ. ಈ ಕುರಿತು ದಾಖಲೆಗಳನ್ನು ನೀಡಲು ಸಿದ್ಧ. ಕ್ಷೇತ್ರದಲ್ಲಿ ನನ್ನ ಮೇಲೆ ಕಣ್ಣಿಗೆ ಕಾಣುವ ಕೆಲಸವಾಗಿಲ್ಲ ಅನ್ನುವ ಆರೋಪವಿದೆ. ಈ ಆರೋಪದ ಬಗ್ಗೆ ಜನರೇ ಉತ್ತರ ನೀಡಬೇಕು. ಕ್ಷೇತ್ರದಲ್ಲಿ ಒಳ್ಳೆಯ ಅಧಿಕಾರಿಗಳು ಇದ್ದಾಗ ಉತ್ತಮ ಕೆಲಸವಾಗುತ್ತದೆ. ಇದನ್ನು ಪಂಚಾಯತ್ ನವರು ಹೇಳಬೇಕು ಎಂದರು.

    ಕೇಂದ್ರದ ನೋಟ್ ಬ್ಯಾನ್ ಒಳ್ಳೆಯ ನಿರ್ಧಾರ. ಜಿಎಸ್ ಟಿ ಬಗ್ಗೆ ವಿಮರ್ಶೆಗಳು ನಡೆಯುತ್ತಲೇ ಇದೆ. ಶುಕ್ರವಾರವಷ್ಟೇ 172 ವಸ್ತುಗಳಿಗೆ ಜಿಎಸ್‍ಟಿ ಇಳಿಸಲಾಗಿದೆ. ಈ ನಿರ್ಧಾರಗಳಿಂದ ದೇಶಕ್ಕೆ ಮುಂದೆ ಒಳ್ಳೆಯದಾಗುತ್ತದೆ ಎಂದರು.