Tag: HAL

  • HALಗೆ ಈಗ ಮತ್ತೊಮ್ಮೆ ತನ್ನ ಸಾಮರ್ಥ್ಯ ತೋರಿಸುವ ಸಮಯ ಬಂದಿದೆ: ದ್ರೌಪದಿ ಮುರ್ಮು

    HALಗೆ ಈಗ ಮತ್ತೊಮ್ಮೆ ತನ್ನ ಸಾಮರ್ಥ್ಯ ತೋರಿಸುವ ಸಮಯ ಬಂದಿದೆ: ದ್ರೌಪದಿ ಮುರ್ಮು

    ಬೆಂಗಳೂರು: ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ (HAL)ಗೆ ಈಗ ಮತ್ತೊಮ್ಮೆ ತನ್ನ ಸಾಮರ್ಥ್ಯ ತೋರಿಸುವ ಸಮಯ ಬಂದಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು (Draupadi Murmu) ತಿಳಿಸಿದರು.

    ಬೆಂಗಳೂರಿನಲ್ಲಿ (Bengaluru) ಇಸ್ರೋ (Isro) ಮತ್ತು ಎಚ್‌ಎಎಲ್ ಸಹಯೋದಲ್ಲಿ ನಿರ್ಮಾಣವಾದ 208 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ ಏಕೀಕೃತ ಕ್ರಯೋಜನಿಕ್ ಇಂಜಿನ್ ಉತ್ಪಾದಕ ವಿಭಾಗ ಉದ್ಘಾಟಿಸಿದ ಅವರು, ಕ್ರಯೋಜನಿಕ್ ಇಂಜಿನ್ ಬಾಹ್ಯಾಕಾಶ ಉಪಗ್ರಹ ವಾಹಕಗಳಿಗೆ ಅತ್ಯಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಎಚ್‌ಎಎಲ್ 1993 ರಿಂದಲೂ ಇಸ್ರೋದ ಬಾಹ್ಯಾಕಾಶ ಸಂಶೋಧನೆಗಳಿಗೆ ಒತ್ತಾಸೆಯಾಗಿ ನಿಂತಿದೆ. ಅತ್ಯಾಧುನಿಕ ತಂತ್ರಜ್ಞಾನದಡಿ ಕ್ರಯೋಜನಿಕ್ ಇಂಜಿನ್ ಉತ್ಪಾದನೆ ಕಾರ್ಯವು ಒಂದು ದೊಡ್ಡ ಮೈಲಿಗಲ್ಲಾಗಿದೆ. ಕ್ರಯೋಜನಿಕ್ ಇಂಜಿನ್ ಉತ್ಪಾದಿಸುತ್ತಿರುವ ಜಗತ್ತಿನ ಆರು ದೇಶಗಳಲ್ಲಿ ಭಾರತವೂ ಒಂದಾಗಿದೆ ಎಂದು ಹೇಳಿದರು.

    ದೇಶದ ಸೇವೆ ಮಾಡುವಲ್ಲಿ ಎಚ್‌ಎಎಲ್‌ನ ಪಾತ್ರ ದೊಡ್ಡದು. ಡಾ. ಎಪಿಜೆ ಅಬ್ದುಲ್ ಕಲಾಂ ಮಿಸೈಲ್ ಮ್ಯಾನ್ ಎಂದೇ ಖ್ಯಾತಿ ಪಡೆದಿದ್ದರು. ವಿಜ್ಞಾನ, ತಂತ್ರಜ್ಞಾನ ಕ್ಷೇತ್ರದಲ್ಲಿ ಅವರ ಕೊಡುಗೆ ಅಜರಾಮರವಾಗಿದೆ. ಇಂಥ ವಿಜ್ಞಾನಿಗಳ ಸೇವೆಯೇ ನಮ್ಮನ್ನು ಹಲವು ಅಪಾಯಗಳಿಂದ ಕಾಪಾಡುತ್ತಿದೆ ಎಂದರು.

    ಭಾರತ ಕೋವಿಡ್‌ನ ವಿಷಮ ಸಂದರ್ಭ ದಾಟಿ ಬಂದಿದೆ. ದೇಶಾದ್ಯಂತ ದೊಡ್ಡ ಲಸಿಕಾ ಅಭಿಯಾನ ನಡೆಯಿತು. ಕೊವಿಡ್ ಲಸಿಕೆ ತಯಾರಿಸುವ ಮೂಲಕ ವಿಜ್ಞಾನಿಗಳು ದೇಶದ ಜನರ ಪ್ರಾಣರಕ್ಷಕರಾಗಿದ್ದಾರೆ. ವಿಜ್ಞಾನಿಗಳು, ವೈದ್ಯರು, ನರ್ಸ್‌ಗಳು ಕೋವಿಡ್ ನಿಯಂತ್ರಣಕ್ಕೆ ಕೊಟ್ಟ ಕೊಡುಗೆ ಸಣ್ಣದಲ್ಲ ಎಂದು ಭಾರತದ ವಿಜ್ಞಾನಿಗಳನ್ನು ಕೊಂಡಾಡಿದರು. ಇದನ್ನೂ ಓದಿ:  2024 ಸಂಕ್ರಾಂತಿ ವೇಳೆಗೆ ಅಯೋಧ್ಯೆಯಲ್ಲಿ ಬಾಲ ರಾಮನ ಪ್ರತಿಷ್ಠಾಪನೆ: ಗೋಪಾಲ್ ಜೀ

    ಇದೇ ವೇಳೆ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ವಿಜ್ಞಾನದ ಅಂತಿಮ ಗುರಿ ಮಾನವನ, ಜೀವಿ ಸಂಕುಲದ ಹಿತ ಕಾಪಾಡವುದೇ ಆಗಿದೆ. ಬಾಹ್ಯಾಕಾಶ ಸಂಶೋಧನೆಯಲ್ಲಿ ಭಾರತ ಶತಮಾನಗಳಿಂದ ಹೆಜ್ಜೆ ಗುರುತು ಉಳಿಸಿಕೊಂಡು ಬಂದಿದೆ. ಕ್ರಯೋಜನಿಕ್ ಇಂಜಿನ್ ಉತ್ಪಾದನೆ ಬಗ್ಗೆ ಕಳೆದ ನಾಲ್ಕೈದು ದಶಕಗಳಿಂದಲೂ ಚರ್ಚೆ ನಡೆಯುತ್ತಿದೆ. ಕ್ರಯೋಜನಿಕ್ ಇಂಜಿನ್ ಉತ್ಪಾದಿಸುವ ಜಗತ್ತಿನ ಕೆಲವೇ ದೇಶಗಳಲ್ಲಿ ಭಾರತವೂ ಒಂದಾಗಿದ್ದು, ನಮ್ಮ ರಾಜ್ಯ ಕ್ರಯೋಜನಿಕ್ ಇಂಜಿನ್ ಉತ್ಪಾದಿಸುತ್ತಿರುವುದು ಹೆಮ್ಮೆ ತಂದಿದೆ ಎಂದು ಸಂತಸ ವ್ಯಕ್ತಪಡಿಸಿದರು.

    ಎಚ್‌ಎಎಲ್ ವಿಜ್ಞಾನಿಗಳಿಗೆ ಇದರ ಯಶಸ್ಸು ಸಲ್ಲಲಿದೆ. ಬೆಂಗಳೂರು ಭಾರತ ಬಾಹ್ಯಾಕಾಶ ನಗರ ಅಂದರೆ ತಪ್ಪಿಲ್ಲ. 25% ಏರೋಸ್ಪೇಸ್ ಬಿಡಿಭಾಗಗಳು ಬೆಂಗಳೂರಿನಲ್ಲಿ ಉತ್ಪಾದಿಸಲಾಗುತ್ತದೆ. ಮುಂದಿನ ದಿನಗಳಲ್ಲಿ ಇಸ್ರೋದಿಂದ ಹೈಬ್ರಿಡ್ ಇಂಜಿನ್ ಉತ್ಪಾದಿಸುವ ಗುರಿ ಇಟ್ಟುಕೊಂಡಿದೆ. ಹೈಬ್ರಿಡ್ ಇಂಜಿನ್ ಅನ್ನು ಬೆಂಗಳೂರಿನಲ್ಲೇ ಉತ್ಪಾದಿಸುವ ನಿರೀಕ್ಷೆ ಇಟ್ಟುಕೊಂಡಿದ್ದೇವೆ ಎಂದರು.

    ಕೋವಿಡ್ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ 200 ಆರ್‌ಟಿಪಿಸಿಆರ್ ಲ್ಯಾಬ್ ತೆರೆಯಲಾಗಿದೆ. ರಾಜ್ಯದಲ್ಲಿ ಆರ್ ಅಂಡ್ ಡಿ ನೀತಿ ಜಾರಿಗೊಳಿಸಲಾಗಿದೆ. ರಕ್ಷಣಾ ಸಂಶೋಧನೆಗೆ ಈ ನೀತಿ ಪೂರಕವಾಗಲಿದೆ ಎಂದು ತಿಳಿಸಿದರು. ಇದನ್ನೂ ಓದಿ: SIMI ಸಂಘಟನೆ ಹುಟ್ಟಿಕೊಂಡಿದ್ದೇ ವಿಜಯಪುರದಿಂದ: ಯತ್ನಾಳ್

    Live Tv
    [brid partner=56869869 player=32851 video=960834 autoplay=true]

  • ಮಲೇಷ್ಯಾಗೆ 18 ತೇಜಸ್‌ ವಿಮಾನ – ಅಮೆರಿಕ ಸೇರಿದಂತೆ 6 ರಾಷ್ಟ್ರಗಳಿಂದ ಖರೀದಿಗೆ ಆಸಕ್ತಿ

    ಮಲೇಷ್ಯಾಗೆ 18 ತೇಜಸ್‌ ವಿಮಾನ – ಅಮೆರಿಕ ಸೇರಿದಂತೆ 6 ರಾಷ್ಟ್ರಗಳಿಂದ ಖರೀದಿಗೆ ಆಸಕ್ತಿ

    ನವದೆಹಲಿ: ಭಾರತವು ಮಲೇಷ್ಯಾಕ್ಕೆ 18 ತರಬೇತಿ ʼತೇಜಸ್‌ʼ ಲಘು ಯುದ್ಧ ವಿಮಾನ (ಎಲ್‌ಸಿಎ) ಮಾರಾಟ ಮಾಡಲು ಮುಂದಾಗಿದೆ.

    ಅರ್ಜೆಂಟೀನಾ, ಆಸ್ಟ್ರೇಲಿಯಾ, ಈಜಿಪ್ಟ್, ಅಮೆರಿಕ, ಇಂಡೋನೇಷ್ಯಾ ಮತ್ತು ಫಿಲಿಪೈನ್ಸ್ ಕೂಡ ಸಿಂಗಲ್‌ ಎಂಜಿನ್‌ ಹೊಂದಿರುವ ಯುದ್ಧ ವಿಮಾನವನ್ನು ಖರೀದಿಸಲು ಆಸಕ್ತಿ ತೋರಿಸಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

    ಕಳೆದ ವರ್ಷ ಸರ್ಕಾರಿ ಸ್ವಾಮ್ಯದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ಗೆ 83 ತೇಜಸ್‌ ವಿಮಾನ ನಿರ್ಮಾಣ ಸಂಬಂಧ 6 ಶತಕೋಟಿ ಡಾಲರ್‌ ಮೌಲ್ಯದ ಗುತ್ತಿಗೆಯನ್ನು ನೀಡಿತ್ತು. 2023ಕ್ಕೆ ಎಚ್‌ಎಎಲ್‌ ವಿಮಾನವನ್ನು ವಿತರಿಸಲಿದೆ.

    1983ರಲ್ಲಿ ಅನುಮೋದನೆಗೊಂಡ ನಾಲ್ಕು ದಶಕಗಳ ನಂತರ ಈಗ ಎಚ್‌ಎಎಲ್‌ ಎಲ್‌ಸಿಎ ತೇಜಸ್‌ ವಿಮಾನವನ್ನು ಮಾರಾಟ ಮಾಡುತ್ತಿದೆ.

    ವಿದೇಶಿ ರಕ್ಷಣಾ ಸಾಧನಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಮೋದಿ ಸರ್ಕಾರ ಜೆಟ್‌ ವಿಮಾನಗಳನ್ನು ರಫ್ತು ಮಾಡಲು ರಾಜತಾಂತ್ರಿಕ ಪ್ರಯತ್ನಗಳನ್ನು ಮಾಡುತ್ತಿದೆ. ಈ ಹಿಂದೆ ವಿನ್ಯಾಸ ಮತ್ತು ತೂಕದ ಕಾರಣ ನೀಡಿ ಭಾರತೀಯ ನೌಕಾಪಡೆ ತೇಜಸ್‌ ವಿಮಾನವನ್ನು ತಿರಸ್ಕರಿಸಿತ್ತು. ಬಳಿಕ ತಾಂತ್ರಿಕತೆ, ಏವಿಯಾನಿಕ್ಸ್‌ಗಳಲ್ಲಿ ಬದಲಾವಣೆ ಮಾಡಿದ್ದು ಈಗ ವಿದೇಶಕ್ಕೆ ಮಾರಾಟ ಮಾಡಲು ಮುಂದಾಗುತ್ತಿರುವುದು ವಿಶೇಷ.

    ಕಳೆದ ವರ್ಷ ಅಕ್ಟೋಬರ್‌ನಲ್ಲಿ 18 ಜೆಟ್‌ ಖರೀದಿ ಸಂಬಂಧ ರಾಯಲ್ ಮಲೇಷಿಯನ್ ಏರ್ ಪ್ರಸ್ತಾವನೆಗೆ ಸಂಬಂಧಿಸಿದಂತೆ ಲೋಕಸಭೆಯಲ್ಲಿ ಕೇಳಲಾದ ಲಿಖಿತ ಪ್ರಶ್ನೆಗೆ ರಕ್ಷಣ ಇಲಾಖೆ ಪ್ರತಿಕ್ರಿಯಿಸಿದ್ದು, ತೇಜಸ್‌ನ ವಿಮಾನಗಳನ್ನು ಮಾರಾಟ ಮಾಡಲು ಮುಂದಾಗಿದೆ ಎಂದು ತಿಳಿಸಿದೆ. ಇದನ್ನೂ ಓದಿ: ಮಿಗ್ 29 ಬದಲಿಸಲು ಮಲೇಷ್ಯಾದ ಮೊದಲ ಆಯ್ಕೆ ಭಾರತದ ತೇಜಸ್ ಯಾಕೆ? 

    ರಕ್ಷಣಾ ಖಾತೆಯ ರಾಜ್ಯ ಸಚಿವ ಅಜಯ್‌ ಭಟ್‌, ಅರ್ಜೆಂಟೀನಾ, ಆಸ್ಟ್ರೇಲಿಯಾ, ಈಜಿಪ್ಟ್, ಯುಎಸ್‌ಎ, ಇಂಡೋನೇಷ್ಯಾ ಮತ್ತು ಫಿಲಿಪೈನ್ಸ್ ಎಲ್‌ಸಿಎ ಖರೀದಿಸಲು ಆಸಕ್ತಿ ತೋರಿಸಿದೆ ಎಂದು ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

    ದೇಶವು ಫೈಟರ್ ಜೆಟ್ ತಯಾರಿಸುವ ಕೆಲಸ ಮಾಡುತ್ತಿದೆ ಎಂದ ಅವರು ರಾಷ್ಟ್ರೀಯ ಭದ್ರತೆಯ ಕಾಳಜಿಯನ್ನು ಉಲ್ಲೇಖಿಸಿ ಟೈಮ್‌ಲೈನ್ ನೀಡಲು ನಿರಾಕರಿಸಿದರು.

    ತನ್ನದೇ ಆದ ಯುದ್ಧ ವಿಮಾನಗಳನ್ನು ನಿರ್ಮಿಸುವ ಭಾರತದ ನಡೆಯನ್ನು ಬೆಂಬಲಿಸುವುದಾಗಿ ಬ್ರಿಟನ್ ಏಪ್ರಿಲ್‌ನಲ್ಲಿ ಹೇಳಿತ್ತು. ಭಾರತದ ವಾಯುಸೇನೆಯಲ್ಲಿ ಪ್ರಸ್ತುತ ರಷ್ಯಾ, ಬ್ರಿಟಿಷ್ ಮತ್ತು ಫ್ರೆಂಚ್ ಯುದ್ಧ ವಿಮಾನಗಳಿವೆ.

    ಕಾರ್ಯನಿರ್ವಹಿಸುತ್ತಿರುವಾಗಲೇ ಪತನ ಹೊಂದುತ್ತಿರುವ ಕಾರಣ ʼಹಾರುವ ಶವಪೆಟ್ಟಿಗೆʼ ಎಂದೇ ಕುಖ್ಯಾತಿ ಪಡೆದಿರುವ ರಷ್ಯಾದಿಂದ ಖರೀದಿಸಲಾಗಿರುವ ಎಲ್ಲ ಮಿಗ್‌ ವಿಮಾನಗಳಿಗೆ 2025ರ ವೇಳೆಗೆ ನಿವೃತ್ತಿ ಹೇಳಲು ವಾಯುಸೇನೆ ಮುಂದಾಗಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಯುದ್ಧ ವಿಮಾನ ತೇಜಸ್‍ನಲ್ಲಿ ರಾಜನಾಥ್ ಸಿಂಗ್ ಹಾರಾಟ

    ಭಾರತದ ಸಿಂಗಲ್ ಎಂಜಿನ್ ಫೈಟರ್ ಜೆಟ್ ತೇಜಸ್ ಮಲೇಷ್ಯಾದ ಮೊದಲ ಆದ್ಯತೆಯಾಗಿದ್ದು, ಅದು ತನ್ನ ಹಳೆಯ ಮಿಗ್-29 ಅನ್ನು ಬದಲಿಸಲು ಯೋಜಿಸುತ್ತಿದೆ ಎಂದು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್(ಹೆಚ್‌ಎಎಲ್)ನ ಅಧ್ಯಕ್ಷ ಆರ್. ಮಾಧವನ್ ಕಳೆದ ತಿಂಗಳು ತಿಳಿಸಿದ್ದರು.

    Live Tv
    [brid partner=56869869 player=32851 video=960834 autoplay=true]

  • ಅಳಿಯನಿಗೆ ಬೆಂಜ್ ಕಾರು, ಡೈಮಂಡ್ ರಿಂಗ್ – ಎರಡನೇ ಮದ್ವೆಯ ಮೊದಲ ರಾತ್ರಿಯೇ ಕಿರಿಕ್

    ಅಳಿಯನಿಗೆ ಬೆಂಜ್ ಕಾರು, ಡೈಮಂಡ್ ರಿಂಗ್ – ಎರಡನೇ ಮದ್ವೆಯ ಮೊದಲ ರಾತ್ರಿಯೇ ಕಿರಿಕ್

    ಬೆಂಗಳೂರು: ಮದುವೆ ಆದ ದಿನವೇ ಪತ್ನಿಗೆ ಪತಿರಾಯ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿಯ ಮನೆಯವರು ಅಳಿಯನಿಗೆ ಬೆಂಜ್ ಕಾರು ಹಾಗೂ ಡೈಮಂಡ್ ರಿಂಗ್ ಉಡುಗೊರೆಯಾಗಿ ನೀಡಿದ್ದರು ಎಂಬ ಮಾಹಿತಿ ಬಹಿರಂಗವಾಗಿದೆ.

    ಹೌದು. ಭರತ್ ರೆಡ್ಡಿ ಹಾಗೂ ಯುವತಿಯ ನಿಶ್ಚಿರ್ತಾ ಹಾಗೂ ಮದುವೆ ಸೇರಿ ಬರೋಬ್ಬರಿ 6 ಕೋಟಿ ಖರ್ಚು ಮಾಡಲಾಗಿತ್ತು. ಜೊತೆಗೆ 5 ಕೆ.ಜಿ ಚಿನ್ನ, 1 ಕೋಟಿ ಮೌಲ್ಯದ ಮರ್ಸಿಡಿಸ್ ಬೆಂಜ್ ಇ ಕ್ಲಾಸ್ ಕಾರು, ಬರೊಬ್ಬರಿ 30 ಲಕ್ಷ ಮೌಲ್ಯದ ವಜ್ರದ ಒಡವೆ, ಒಂದು ಕೆ.ಜಿಯ ಚಿನ್ನದ ಸರ, ಹತ್ತು ಲಕ್ಷ ಬೆಲೆಯ ಡೈಮೆಂಡ್ ರಿಂಗ್, ಒಂದು ಕೆಜಿ ತೂಕದ ಬ್ರೇಸ್ ಲೈಟ್, ಎರಡು ಲಕ್ಷ ಮೌಲ್ಯದ ಕಪಲ್ ರಿಂಗ್ ಕೂಡ ನೀಡಲಾಗಿತ್ತು. ಇಷ್ಟಾದ್ರೂ ಮದುವೆಯಾಗಿ ಒಂದು ತಿಂಗಳಲ್ಲೇ ದಾಂಪತ್ಯದಲ್ಲಿ ಬಿರುಕು ಮೂಡಿದೆ.

    ನಡೆದಿದ್ದೇನು?:
    2020ರ ಅಕ್ಟೋಬರ್ 29ರಂದು ಭರತ್ ಎಂಬಾತನ ಜೊತೆಗೆ ಯುವತಿಯ ಮದುವೆಯಾಗಿದೆ. ಮೊದಲ ರಾತ್ರಿಯೇ ಪತಿ ಕಂಠಪೂರ್ತಿ ಕುಡಿದುಕೊಂಡು ಬಂದಿದ್ದ. ಮದ್ಯದ ಅಮಲಿನಲ್ಲಿ ತೇಲುತ್ತಿದ್ದ ಪತಿಯನ್ನು ನೋಡಿದ ಪತ್ನಿ ಅಂತರ ಕಾಯ್ದುಕೊಂಡಿದ್ದಳು. ಈ ವಿಚಾರ ತಿಳಿದ ಪತಿ ಮನೆಯವರು ಸೊಸೆಗೆ ದೆವ್ವ ಬಂದಿದೆ ಅಂತ ಕಿರುಕುಳ ನೀಡಲು ಆರಂಭಿಸಿದ್ದಾರೆ.

    ಮಂಚದ ಕೆಳಗೆ ನಿಂಬೆಹಣ್ಣು ಇಡುವುದು. ಮಾಟಮಂತ್ರ ಮಾಡಿಸುವವರ ಕೈಯಲ್ಲಿ ಛಾಟಿಯಿಂದ ಹೊಡೆಸುವುದು. ತಲೆ ಮೇಲೆ ನಿಂಬೆ ಹಣ್ಣು ಕೊಯ್ಯುವುದು, ಮುಖಕ್ಕೆ ಬೂದಿ ಹಾಕುವುದು, ಬೂದಿಯನ್ನು ಅನ್ನದಲ್ಲಿ ಮಿಕ್ಸ್ ಮಾಡಿ ತಿನ್ನಿಸುವುದು ಮಾಡಿದ್ದಾರೆ. ಇವೆಲ್ಲದಕ್ಕೆ ವಿರೋಧಿಸಿದ್ರೆ ಕಬ್ಬಿಣದ ರಾಡ್ ನಿಂದ ಹಲ್ಲೆ ಮಾಡುವುದು. ಇಷ್ಟು ಮಾತ್ರವಲ್ಲದೆ ನಿನ್ನ ಇಲ್ಲೇ ಸಾಯಿಸುತ್ತೇವೆ ಅಂತ ಊಟ ನೀಡದೇ ಪತಿ ಕುಟುಂಬಸ್ಥರು ಯುವತಿಗೆ ಕಿರುಕುಳ ನೀಡುತ್ತಿದ್ದರು.

    ಪತಿ ಮನೆಯವರ ಕಿರುಕುಳದಿಂದ ಬೇಸತ್ತ ನವವಿವಾಹಿತೆ ಹೆಚ್‍ಎಎಲ್ ಪೊಲೀಸ್ ಠಾಣೆಗೆ ತೆರಳಿ ಪತಿ ವಿರುದ್ಧ ದೂರು ನೀಡಿದ್ದಾಳೆ. ಯುವತಿಯ ದೂರು ಸ್ವೀಕರಿಸಿರುವ ಪೊಲೀಸರು ಆರೋಪಿ ಭರತ್ ರೆಡ್ಡಿಯನ್ನು ಬಂಧಿಸಿದ್ದಾರೆ. ತನಿಖೆಯ ವೇಳೆ ಈತನಿಗೆ ಈಗಾಗಲೇ ಮದುವೆಯಾಗಿದ್ದು, ಮೊದಲ ಮದುವೆ ಮುಚ್ಟಿಟ್ಟು 2ನೇ ಮದುವೆಯಾಗಿರುವುದು ಬಯಲಾಗಿದೆ.

    https://www.youtube.com/watch?v=JSjN4uGZWGI&ab_channel=PublicTV%7C%E0%B2%AA%E0%B2%AC%E0%B3%8D%E0%B2%B2%E0%B2%BF%E0%B2%95%E0%B3%8D%E0%B2%9F%E0%B2%BF%E0%B2%B5%E0%B2%BF

  • ಪಾಕ್‍ಗೆ ಯುದ್ಧ ವಿಮಾನಗಳ ವಿವರ ಕಳುಹಿಸುತ್ತಿದ್ದ ಹೆಚ್‍ಎಎಲ್ ಉದ್ಯೋಗಿ ಅರೆಸ್ಟ್

    ಪಾಕ್‍ಗೆ ಯುದ್ಧ ವಿಮಾನಗಳ ವಿವರ ಕಳುಹಿಸುತ್ತಿದ್ದ ಹೆಚ್‍ಎಎಲ್ ಉದ್ಯೋಗಿ ಅರೆಸ್ಟ್

    ಮುಂಬೈ: ಪಾಕಿಸ್ತಾನ ಗುಪ್ತಚರ ಇಲಾಖೆ (ಐಎಸ್‍ಐ)ಗೆ ಯುದ್ಧ ವಿಮಾನಗಳ ವಿವರಗಳನ್ನು ಕದ್ದು ಕಳುಹಿಸುತ್ತಿದ್ದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‍ಎಎಲ್)ನ ಉದ್ಯೋಗಿಯನ್ನು ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ ಇಂದು ಬಂಧಿಸಿದೆ.

    ಬಂಧಿತ ಹೆಚ್‍ಎಎಲ್ ಉದ್ಯೋಗಿಯನ್ನು 41 ವರ್ಷದ ದೀಪಕ್ ಶಿರ್ಸತ್ ಎಂದು ಗುರುತಿಸಲಾಗಿದೆ. ಈತ ಮುಂಬೈ ನಾಸಿಕ್ ಬಳಿಯ ಓಜರ್ ವಿಮಾನ ಘಟಕದಲ್ಲಿ ಕೆಲಸ ಮಾಡುತ್ತಿದ್ದ. ಬಂಧಿತನಿಂದ ಮೂರು ಮೊಬೈಲ್ ಫೋನುಗಳು ಮತ್ತು ಐದು ಸಿಮ್‍ಗಳು ಮತ್ತು ಎರಡು ಮೆಮೊರಿ ಕಾರ್ಡ್ ಗಳನ್ನು ವಶಕ್ಕೆ ಪಡೆಯಲಾಗಿದೆ.

    ಈ ವಿಚಾರವಾಗಿ ಮಾತನಾಡಿರುವ ಡಿಸಿಪಿ ವಿನಯ್ ರಾಥೋಡ್, ರಾಜ್ಯ ಭಯೋತ್ಪಾದನಾ ನಿಗ್ರಹ ದಳದ (ಎಟಿಎಸ್)ಯ ನಾಸಿಕ್ ಘಟಕವು, ಐಎಸ್‍ಐ ಜೊತೆ ನಿರಂತರ ಸಂಪರ್ಕದಲ್ಲಿದ್ದ ವ್ಯಕ್ತಿಯನ್ನು ಇಂದು ಬಂಧಿಸಿದೆ. ದೀಪಕ್ ಶಿರ್ಸತ್ ಎಂದು ಗುರುತಿಸಲ್ಪಟ್ಟ ಈ ವ್ಯಕ್ತಿ ಭಾರತೀಯ ಯುದ್ಧ ವಿಮಾನ ಮತ್ತು ಅವುಗಳ ಉತ್ಪಾದನಾ ಘಟಕದ ಬಗ್ಗೆ ಗೌಪ್ಯ ಮಾಹಿತಿಯನ್ನು ಪಾಕಿಸ್ತಾನದ ಗುಪ್ತಚರ ಸಂಸ್ಥೆ (ಐಎಸ್‍ಐ)ಗೆ ವಾಟ್ಸಪ್ ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಒದಗಿಸುತ್ತಿದ್ದ ಎಂದು ತಿಳಿಸಿದ್ದಾರೆ.

    ಈತ ಓಜರ್ ವಿಮಾನ ಘಟಕದಲ್ಲಿ ನಿಷೇಧಿತ ಜಾಗದಲ್ಲಿ ಓಡಾಡಿ ಅಲ್ಲಿನ ಫೋಟೋಗಳನ್ನು ತೆಗೆದು ಪಾಕಿಸ್ತಾನಕ್ಕೆ ಕಳುಹಿಸುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಓಜರ್ ಘಟಕ ಮಿಗ್-21 ಎಫ್‍ಎಲ್ ವಿಮಾನ ಮತ್ತು ಕೆ-13 ಕ್ಷಿಪಣಿಗಳ ತಯಾರಿಕೆಗಾಗಿ 1964ರಲ್ಲಿ ಸ್ಥಾಪನೆಯಾಗಿತ್ತು. ಈ ವಿಭಾಗವು ಮಿಗ್-21 ಎಂ, ಮಿಗ್-21 ಬೈಸನ್ ಮಿಗ್-27 ಎಂ ಮತ್ತು ಅತ್ಯಾಧುನಿಕ ಸುಕೋಯ್-30 ಎಂಕೆಐ ಫೈಟರ್ ಜೆಟ್‍ಗಳ ರಿಪೇರಿ ಸಹ ಮಾಡುತ್ತಿದೆ.

  • ಹೆಚ್‍ಎಎಲ್ ಸಾಮರ್ಥ್ಯ ಪ್ರದರ್ಶನಕ್ಕೆ ವೇದಿಕೆ ಸಿದ್ಧ- ಫೆಬ್ರವರಿ 5ರಿಂದ ಡಿಫೆನ್ಸ್ ಎಕ್ಸ್ ಪೋ

    ಹೆಚ್‍ಎಎಲ್ ಸಾಮರ್ಥ್ಯ ಪ್ರದರ್ಶನಕ್ಕೆ ವೇದಿಕೆ ಸಿದ್ಧ- ಫೆಬ್ರವರಿ 5ರಿಂದ ಡಿಫೆನ್ಸ್ ಎಕ್ಸ್ ಪೋ

    ಬೆಂಗಳೂರು: ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ ರಕ್ಷಣಾ ಸಚಿವಾಲಯದ ಸಹಭಾಗಿತ್ವದೊಂದಿಗೆ ಫೆಬ್ರವರಿ 5ರಿಂದ 9ರವರೆಗೆ 11ನೇ ಡಿಫೆನ್ಸ್ ಎಕ್ಸ್ ಪೋ ಹಮ್ಮಿಕೊಳ್ಳಲಾಗಿದೆ.

    ಈ ಪ್ರದರ್ಶನದಲ್ಲಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಹೆಚ್‍ಎಎಲ್) ತನ್ನ ಸಾಮರ್ಥ್ಯವನ್ನು ಸಾಬೀತು ಮಾಡಲಿದೆ. ಜೊತೆಗೆ ಹೆಚ್‍ಎಎಲ್‍ನಲ್ಲಿ ತಯಾರಿಸಿದ ಲಘು ಯುದ್ಧ ವಿಮಾನ, ಯುದ್ಧದ ಹೆಲಿಕಾಪ್ಟರ್, ಯುದ್ಧ ವಿಮಾನಗಳಿಗೆ ಅಳವಡಿಸುವ ಬಿಡಿಭಾಗಳು ಸೇರಿದಂತೆ ಅನೇಕ ವಸ್ತುಗಳನ್ನು ಪ್ರದರ್ಶನಗೊಳ್ಳಲಿವೆ.

    ಈ ಬಾರಿಯ ಪ್ರಮುಖ ಆಕರ್ಷಣೆಯೆಂದರೆ ಸುಖೋಯ್-30 ಎಂಕೆಐನ ಕಾಕ್‍ಪಿಟ್ ಜೊತೆಗೆ ಎಎಲ್‍ಹೆಚ್ ಎಂಕೆ 5 ರುದ್ರ, ಎಲ್‍ಸಿಹೆಚ್, ತೇಜಸ್, ಡಿಓ-228 ಸಿವಿಲ್ ಸೇರಿದಂತೆ ಅನೇಕ ಲಘು ಹಾಗೂ ಭಾರದ ಯುದ್ಧ ಹೆಲಿಕಾಪ್ಟರ್‌ಗಳು ತಮ್ಮ ಸಾಮರ್ಥ್ಯವನ್ನು ವಿಶ್ವದ ಮುಂದೆ ಪ್ರದರ್ಶಿಸಲಿವೆ.

  • ಯುದ್ಧ ವಿಮಾನ ತೇಜಸ್‍ನಲ್ಲಿ ರಾಜನಾಥ್ ಸಿಂಗ್ ಹಾರಾಟ

    ಯುದ್ಧ ವಿಮಾನ ತೇಜಸ್‍ನಲ್ಲಿ ರಾಜನಾಥ್ ಸಿಂಗ್ ಹಾರಾಟ

    ಬೆಂಗಳೂರು: ದೇಶೀಯ ನಿರ್ಮಿತ ಹಗುರ ಯುದ್ಧ ವಿಮಾನ ತೇಜಸ್‍ನಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇದೇ ಮೊದಲ ಬಾರಿಗೆ ಹಾರಾಟ ನಡಸಿದ್ದಾರೆ.

    ಎಚ್‍ಎಎಲ್ ವಿಮಾನ ನಿಲ್ದಾಣಕ್ಕೆ ಬಂದ ರಾಜನಾಥ್ ಸಿಂಗ್ ಅವರು ಯುದ್ಧ ವಿಮಾನದ ಪೈಲಟ್ ಧಿರಿಸಿನಲ್ಲಿ ತೇಜಸ್‍ನ ಕೋ-ಪೈಲಟ್ ಸ್ಥಾನದಲ್ಲಿ ಕುಳಿತರು. ಹಾರಾಟಕ್ಕೂ ಮುನ್ನ ಸಂತಸದಿಂದ ಜನರತ್ತ ಕೈ ಬೀಸಿದರು. ಹಲವು ಪರೀಕ್ಷೆಗಳಲ್ಲಿ ಯಶಸ್ವಿಯಾಗಿರುವ ಶಸ್ತ್ರ ಸಜ್ಜಿತ ತೇಜಸ್ ವಾಯುಪಡೆ ಕಾರ್ಯಾಚರಣೆಗಳಲ್ಲಿ ಸೇರ್ಪಡೆಯಾಗಲು ಸಜ್ಜಾಗಿದೆ. ಇತ್ತೀಚಿಗಷ್ಟೆ ಈ ವಿಮಾನವು ‘ಅರೆಸ್ಟ್ ಲ್ಯಾಂಡಿಂಗ್’ ಪರೀಕ್ಷೆಯಲ್ಲಿ ಯಶಸ್ವಿಯಾಗಿದೆ.

    ಯುದ್ಧ ವಿಮಾನ ತೇಜಸ್ ನಲ್ಲಿ ಹಾರಾಟ ನಡೆಸಿದ ಮೊದಲ ರಕ್ಷಣಾ ಸಚಿವ ಎಂಬ ಹೆಗ್ಗಳಿಕೆಗೆ ರಾಜನಾಥ್ ಸಿಂಗ್ ಪಾತ್ರರಾದರು. ಎರಡು ಆಸನಗಳ ಸಾಮರ್ಥ್ಯ ಹೊಂದಿರುವ ತೇಜಸ್ ನಲ್ಲಿ ರಾಜನಾಥ್ ಸಿಂಗ್ ಅವರಿಗೆ ಏರ್ ವೈಸ್ ಮಾರ್ಷಲ್, ಪ್ರೊಜೆಕ್ಟ್ ಡೈರೆಕ್ಟರ್ ಎನ್.ತಿವಾರಿ ಸಾಥ್ ನೀಡಿದರು.

    2018 ಜೂನ್ ನಲ್ಲಿ 18 ತೇಜಸ್ ಯುದ್ಧವಿಮಾನಗಳು ಭಾರತೀಯ ವಾಯುಸೇನೆಗೆ ಸೇರ್ಪಡೆಗೊಂಡಿವೆ. 2013ರಲ್ಲಿ ತೇಜಸ್ ಯುದ್ಧ ವಿಮಾನಗಳಿಗೆ ಪರೀಕ್ಷಾರ್ಥವಾಗಿ ಹಾರಾಟ ನಡೆಸಲು ಅನುಮತಿ ನೀಡಲಾಗಿತ್ತು. ಭಾರತೀಯ ವಾಯುಸೇನೆ ಸದ್ಯ ಎರಡು ಸ್ಕಾಡ್ರನ್ ಗಳ 18 ಯುದ್ಧ ವಿಮಾನಗಳನ್ನು ಹೊಂದಿದ್ದು, ಹೆಚ್ಚು ಸ್ಕಾಡ್ರನ್ ವುಳ್ಳ ಮಾರ್ಕ್-1 ವರ್ಷನ್ ನ 83 ಯುದ್ಧ ವಿಮಾನಗಳನ್ನ ಹೊಂದುವ ಮೂಲಕ ಐಎಎಫ್ ತನ್ನ ಬಲವನ್ನು ಹೆಚ್ಚಿಸಿಕೊಳ್ಳಲಿದೆ. 83 ತೇಜಸ್ ಯುದ್ಧ ವಿಮಾನಗಳ ತಯಾರಿಕೆಗೆ 50 ಸಾವಿರ ಕೋಟಿ ರೂ. ವೆಚ್ಚವಾಗಲಿದೆ.

    2019ರ ಏರೋ ಇಂಡಿಯಾ ವೈಮಾನಿಕ ಪ್ರದರ್ಶನದಲ್ಲಿ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ತೇಜಸ್ ನಲ್ಲಿ ಹಾರಾಟ ನಡೆಸಿದ್ದರು.

  • ಮೊಬೈಲ್‍ನಲ್ಲಿ ಯಾವಾಗ್ಲೂ ಬ್ಯುಸಿ: ರೊಚ್ಚಿಗೆದ್ದು ಪತ್ನಿಯನ್ನೇ ಕೊಂದ ಟೆಕ್ಕಿ

    ಮೊಬೈಲ್‍ನಲ್ಲಿ ಯಾವಾಗ್ಲೂ ಬ್ಯುಸಿ: ರೊಚ್ಚಿಗೆದ್ದು ಪತ್ನಿಯನ್ನೇ ಕೊಂದ ಟೆಕ್ಕಿ

    ಬೆಂಗಳೂರು: ಪತ್ನಿ ಯಾವಾಗಲೂ ಮೊಬೈಲ್‍ನಲ್ಲೇ ಇರುತ್ತಾಳೆ. ಅವಳಿಗೆ ಬೇರೊಬ್ಬನ ಜೊತೆ ಅಕ್ರಮ ಸಂಬಂಧವಿದೆ ಎಂದು ಶಂಕಿಸಿ ಪತ್ನಿಯನ್ನು ಕೊಲೆ ಮಾಡಿದ್ದ ಟೆಕ್ಕಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಶ್ರೀನಿವಾಸ ರೆಡ್ಡಿ (32) ಬಂಧಿತ ಆರೋಪಿ. ವೆಂಗಮ್ಮ(20) ಪತಿಯಿಂದಲೇ ಕೊಲೆಯಾದ ದುರ್ದೈವಿ. ಬೆಂಗಳೂರಿನ ಎಚ್‍ಎಎಲ್ ಬಳಿ ಮಾ.9 ರಂದು ಕೊಲೆ ನಡೆದಿತ್ತು. ಪತ್ನಿಯ ನಡತೆ ಶಂಕಿಸಿ ದಿಂಬಿನಿಂದ ಉಸಿರುಗಟ್ಟಿಸಿ ಪತ್ನಿಯನ್ನು ಶ್ರೀನಿವಾಸ ಕೊಲೆಗೈದಿದ್ದನು.

    ಪತಿ ಪತ್ನಿ ಇಬ್ಬರು ಪ್ರತಿಷ್ಠಿತ ಕಂಪೆನಿಯೊಂದರಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಆಗಿದ್ದರು. ಆದ್ರೆ ಪತ್ನಿ ಸದಾ ಯಾರೊಂದಿಗೋ ಮೊಬೈಲ್‍ನಲ್ಲಿ ಚಾಟ್ ಮಾಡುತ್ತಿದ್ದಳು. ಕಾಲ್‍ನಲ್ಲಿ ಬ್ಯುಸಿ ಇರುತ್ತಿದ್ದಳು. ಬೇಕಂತಲೇ ಮಕ್ಕಳು ಬೇಡ ಎಂದು ಹೇಳುತ್ತಿದ್ದಳು. ಅದಕ್ಕೆ ನಾನು ಪತ್ನಿಯನ್ನು ಕೊಂದೆ ಎಂದು ಆರೋಪಿ ಹೇಳಿದ್ದಾನೆ.

    ಮಾ.9ರಂದು ಆರೋಪಿ ಜ್ಯೂಸ್‍ನಲ್ಲಿ ನಿದ್ರೆ ಮಾತ್ರೆ ಬೆರೆಸಿ ಪತ್ನಿ ಕುಡಿಸಿದ್ದನು. ಬಳಿಕ ಅದನ್ನು ಕುಡಿದು ಪತ್ನಿ ನಿದ್ರೆಗೆ ಜಾರಿದಾಗ ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ನಂತರ ಈ ವಿಷಯ ಯಾರಿಗೂ ತಿಳಿಬಾರದು ಅಂತ ವಾಟರ್ ಹೀಟರ್‍ನಿಂದ ಶಾಕ್ ಹೊಡೆದು ಪತ್ನಿ ಸತ್ತಳು ಎಂದು ಆರೋಪಿ ಎಲ್ಲರ ಬಳಿ ಹೇಳಿದ್ದನು. ಅಲ್ಲದೆ ಯಾರಿಗೂ ತಿಳಿಯದಂತೆ ಆರೋಪಿ ನೆಲ್ಲೂರಿಗೆ ಶವ ಸಾಗಿಸಿದ್ದಾಗ ಅಲ್ಲಿನ ಪೊಲೀಸರು ಬೆಂಗಳೂರು ಎಚ್‍ಎಎಲ್ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ.

    ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಹಾಗೆಯೇ ಆತನ ವಿರುದ್ಧ ಬೆಂಗಳೂರು ಎಚ್‍ಎಎಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • 18 ವರ್ಷ ಕಳೆದರೂ ಸಿತಾರಾ ವಿಮಾನ ಪೂರೈಸದ ಎಚ್‍ಎಎಲ್

    18 ವರ್ಷ ಕಳೆದರೂ ಸಿತಾರಾ ವಿಮಾನ ಪೂರೈಸದ ಎಚ್‍ಎಎಲ್

    ನವದೆಹಲಿ: ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‍ಎಎಲ್) ಕಳೆದ 18 ವರ್ಷಗಳಿಂದ ಒಂದೇ ಒಂದು ಸಿತಾರಾ ವಿಮಾನವನ್ನು ಪೂರೈಕೆ ಮಾಡದ ಕಾರಣ ಭಾರತೀಯ ವಾಯುಪಡೆಯಲ್ಲಿ ತರಬೇತಿ ವಿಮಾನಗಳ ಕೊರತೆ ಎದುರಾಗಿದೆ.

    ರಕ್ಷಣಾ ಸಚಿವಾಲಯವು ವಿಮಾನಗಳನ್ನು ಪೂರೈಸುವಂತೆ ಎಚ್‍ಎಎಲ್ ಜೊತೆಗೆ 1999ರಲ್ಲಿ ಒಪ್ಪಂದ ಮಾಡಿಕೊಂಡಿತ್ತು. ಆದರೆ ಒಪ್ಪಂದ ಮಾಡಿಕೊಂಡು 18 ವರ್ಷಗಳಾದರೂ ಒಂದೇ ಒಂದು ವಿಮಾನವನ್ನು ಎಚ್‍ಎಎಲ್ ಪೂರೈಸಿಲ್ಲ. ಈ ವಿಚಾರ ಭಾರೀ ಚರ್ಚೆಯಾಗುತ್ತಿರುವ ಬೆನ್ನಲ್ಲೆ ಒಪ್ಪಂದವನ್ನು ರದ್ದುಗೊಳಿಸಲು ರಕ್ಷಣಾ ಸಚಿವಾಲಯ ಚಿಂತನೆ ನಡೆಸಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ಒಪ್ಪಂದಲ್ಲಿ ಏನಿತ್ತು?:
    ರಕ್ಷಣಾ ಸಚಿವಾಲಯದ 1999ರ ಒಪ್ಪಂದದ ಪ್ರಕಾರ ‘ಸಿತಾರ ಇಂಟರ್ ಮೀಡಿಯೇಟ್ ಜೆಟ್ ಟ್ರೈನರ್’ ವಿಮಾನಗಳ ವಿನ್ಯಾಸ ಮತ್ತು ಅಭಿವೃದ್ಧಿಯನ್ನು ಎಚ್‍ಎಎಲ್ ಮಾಡಬೇಕಿತ್ತು. ಜೊತೆಗೆ 2005ರಲ್ಲಿ 12 ವಿಮಾನಗಳನ್ನು ಹಾಗೂ 2010ರಲ್ಲಿ 73 ವಿಮಾನಗಳನ್ನು ವಾಯುಪಡೆಗೆ ನೀಡಬೇಕಿತ್ತು. ಆದರೆ ಎಚ್‍ಎಎಲ್, ಸಿತಾರ ಇಂಟರ್ ಮೀಡಿಯೇಟ್ ಜೆಟ್ ಟ್ರೈನರ್ ವಿಮಾನಗಳ ವಿನ್ಯಾಸವನ್ನೇ ಪೂರ್ಣಗೊಳಿಸಿಲ್ಲ ಎಂದು ರಕ್ಷಣಾ ಸಚಿವಾಲಯವು ಸಂಸದೀಯ ಸಮಿತಿಗೆ ಮಾಹಿತಿ ನೀಡಿದೆ.

    ಎಚ್‍ಎಎಲ್ ವಿನ್ಯಾಸಗೊಳಿಸಿದ್ದ ವಿಮಾನದಲ್ಲಿ ಕೆಲವು ತಾಂತ್ರಿಕ ದೋಷಗಳಿದ್ದವು. ತರಬೇತಿ ಪಡೆಯುವ ಪೈಲಟ್‍ಗಳು ಸಮಸ್ಯೆಯನ್ನು ನಿಭಾಯಿಸಲು ಸಾಧ್ಯವಿಲ್ಲ. ಹೀಗಾಗಿ ಅದರಲ್ಲಿ ಕಾಣಿಸಿಕೊಂಡ ಸಮಸ್ಯೆಗಳನ್ನು ಸರಿಪಡಿಸುವಂತೆ ತಜ್ಞರ ತಂಡವು ಎಚ್‍ಎಲ್‍ಗೆ ಸಲಹೆ ನೀಡಿತ್ತು. ಆದರೂ ವಿಮಾನದ ನ್ಯೂನತೆಗಳನ್ನು ಸರಿಪಡಿಸಲು ಎಚ್‍ಎಎಲ್ ವಿಫಲವಾಗಿದೆ ಎಂದು ವರದಿ ತಿಳಿಸಿದೆ.

    ವಿಮಾನ ತಯಾರಿಕಾ ಖಾಸಗಿ ಸಂಸ್ಥೆಯೊಂದರ ಸಹಾಯ ಪಡೆದರೂ ಕೂಡ ಸಿತಾರಾ ವಿಮಾನಗಳ ದೋಷ ಸರಿಪಡಿಸುವಲ್ಲಿ ಎಚ್‍ಎಎಲ್ ವಿಫಲವಾಗಿದೆ. ಇದರಿಂದಾಗಿ ಒಪ್ಪಂದವನ್ನು ರದ್ದುಗೊಳಿಸುವ ಚಿಂತನೆಯನ್ನು ರಕ್ಷಣಾ ಸಚಿವಾಲಯ ನಡೆಸಿದೆ. ಇತ್ತ ವಾಯುಪಡೆಗೆ ಅಗತ್ಯವಿರುವ ತರಬೇತಿ ವಿಮಾನಗಳನ್ನು ವಿದೇಶಿ ಕಂಪನೆಗಳಿಂದ ತರೆಸಿಕೊಳ್ಳುವ ವಿಚಾರವಾಗಿಯೂ ಚರ್ಚೆ ನಡೆಯುತ್ತಿದೆ ಎನ್ನಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸುಪ್ರೀಂ ಕೋರ್ಟ್ ತೀರ್ಪು ದೌರ್ಭಾಗ್ಯ: HAL ನಿವೃತ್ತ ಅಧಿಕಾರಿ ಅನಂತ ಪದ್ಮನಾಭ

    ಸುಪ್ರೀಂ ಕೋರ್ಟ್ ತೀರ್ಪು ದೌರ್ಭಾಗ್ಯ: HAL ನಿವೃತ್ತ ಅಧಿಕಾರಿ ಅನಂತ ಪದ್ಮನಾಭ

    ಬೆಂಗಳೂರು: ರಫೇಲ್ ಡೀಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪು ಸರಿಯಲ್ಲ ಎಂದು ಎಚ್‍ಎಎಲ್ ನ ನಿವೃತ್ತ ಅಧಿಕಾರಿ ಅನಂತ ಪದ್ಮನಾಭ ಹೇಳಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ತೀರ್ಪು ದೌರ್ಭಾಗ್ಯವಾಗಿದೆ. ಸುಪ್ರೀಂ ಕೊಟ್ಟ ತೀರ್ಪನ್ನು ಗೌರವಿಸಲೇಬೇಕಿದೆ. ಆದ್ರೆ ಯಾಕೆ ಈ ತಪ್ಪು ನಿರ್ಧಾರ ಬಂತು ಅಂತ ಹೇಳಲು ಆಗುತ್ತಿಲ್ಲ. ಅನಿಲ್ ಅಂಬಾನಿ ಅವರ ಕಂಪನಿ ಕೆಲವೇ ದಿವಸಗಳ ಮೊದಲು ರಿಜಿಸ್ಟರ್ ಆಗಿದೆ. ಒಂದು ಕಾರ್ ಸರ್ವಿಸ್ ಗೆ ಬಿಡಬೇಕಿದ್ದರೂ ಅನುಭವ ಏನಿದೆ? ಕೆಲಸ ಏನು ಮಾಡ್ತಿದ್ದಾನೆ ಅಂತ ನೋಡಿ ಕೊಡುತ್ತೇವೆ. ಆದ್ರೆ ಇಲ್ಲಿ ಇಂತಹ ದೊಡ್ಡ ಡೀಲನ್ನು ಏನೂ ಗೊತ್ತಿಲ್ಲದೇ ಇರುವವರು, ಒಂದು ಶೆಡ್ ಹಾಕಿಕೊಂಡಿರುವವನಿಗೆ ಕೊಟ್ಟಿರುವುದು ಬಹಳ ತಪ್ಪು ಅಂತ ಹೇಳಿದರು.

    ಇಂತಹ ದೊಡ್ಡ ಕಂಪನಿ ಎಚ್‍ಎಎಲ್ ಇದೂವರೆಗೂ ಏನೂ ರಕ್ಷಣಾ ಇಲಾಖೆಗೆ ಬೇಕಾದಂತಹ ಹೆಲಿಕಾಪ್ಟರ್, ವಿಮಾನ ನೀಡಿದೆ. ನಾವು ನಿಧಾನ ಅಂಥ ಹೇಳಬಹುದು. ಕೆಲಸದ ಸಮಯ ಹೆಚ್ಚು ಅಂತಾನೂ ಹೇಳಬಹುದು. ಅದಕ್ಕೆಲ್ಲ ಏನು ಉಪಾಯ, ಸುಧಾರಣೆ ಎಂಬುದು ನಮಗೆ ಗೊತ್ತಿದೆ. ಹಿಂದೆ ಜಾಗ್ವಾರ್ ಏರ್ ಕ್ರಾಫ್ಟ್ ಬಂದಾಗ ಕೂಡ ನಮ್ಮದು ಕೆಲಸದ ಸಮಯ ಜಾಸ್ತಿಯಾಗುತ್ತದೆ ಅನ್ನೋ ಮಾತುಗಳು ಕೇಳಿಬಂದಿತ್ತು. ಬಳಿಕ ನಾವು ಅದನ್ನು ಸುಧಾರಣೆ ಮಾಡಿದ್ವಿ. ಇದೀಗ ಈ ತೀರ್ಪು ಸಮಾಧಾನಕರವಾಗಿಲ್ಲ. ಈ ತೀರ್ಪನ್ನು ನಾವು ಒಪ್ಪಲ್ಲ. ಮುಂದಿನ ಹೋರಾಟವನ್ನು ಮಾಡೇ ಮಾಡ್ತೀವಿ ಅಂತ ತಿಳಿಸಿದ್ರು.

    126 ವಿಮಾನ ಬೇಕು ಎಂದು ವಾಯುಸೇನೆ ಮಾಡಿತ್ತು. ತೀರ್ಮಾನ ತೆಗೆದುಕೊಂಡಿದ್ದಿದ್ದು ಅವರು. ಅದನ್ನು ಪ್ರಧಾನಿ ಅವರು ಒಂದೇ ಬಾರಿ ಹೋಗಿ 36 ವಿಮಾನ ಖರೀದಿ ಅಂತ ಮಾಡಿಬಿಟ್ಟರು. 2.86 ಬಿಲಿಯನ್ ಡಾಲರ್ ಖರೀದಿ ಒಪ್ಪಂದ 8. 2 ಬಿಲಿಯನ್ ಡಾಲರ್ ಹೋಗಿ ಮತ್ತೆ ವಾಪಸ್ 7.8 ಬಿಲಿಯನ್ ಡಾಲರ್ ಗೆ ಬಂದಿದೆ. ನನ್ನ ಅಭಿಪ್ರಾಯದಲ್ಲಿ 20 ಸಾವಿರ ಕೋಟಿ ನಮಗೆ ನಷ್ಟ ಆಗುತ್ತಿದೆ. ಹೀಗಾಗಿ ಈ ತೀರ್ಪು ಸರಿಯಿಲ್ಲ ಅನ್ನೋದಕ್ಕೆ ನಾನು ಬದ್ಧನಾಗಿದ್ದೇನೆ ಎಂದು ತಿಳಿಸಿದರು.

    ಸುಪ್ರೀಂ ಕೋರ್ಟ್ ಹೇಳಿದ್ದು ಏನು?
    ರಫೇಲ್ ಖರೀದಿ ವ್ಯವಹಾರಗಳನ್ನು ನಿಯಮದಡಿಯಲ್ಲಿಯೇ ಮಾಡಲಾಗಿದೆ. ಯುದ್ಧ ವಿಮಾನ ಖರೀದಿಯಲ್ಲಿ ಯಾವುದೇ ರೀತಿಯ ಅವ್ಯವಹಾರ ಕಂಡುಬಂದಿಲ್ಲ. ಈ ಕಾರಣಕ್ಕೆ ತನಿಖೆ ನಡೆಸಲು ಆದೇಶ ನೀಡುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಆದೇಶದಲ್ಲಿ ತಿಳಿಸಿದೆ.

    ರಫೇಲ್ ಯುದ್ದ ವಿಮಾನ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ವಕೀಲ ಎಂ.ಎಲ್ ಶರ್ಮಾ, ವಿನೀತಾ ದಾಂಡ, ಆಪ್ ನಾಯಕ ಸಂಜಯ್ ಸಿಂಗ್ ಮಾಜಿ ಕೇಂದ್ರ ಸಚಿವ ಯಶವಂತ ಸಿನ್ಹಾ, ಅರುಣ್ ಶೌರಿ ಹಾಗೂ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅರ್ಜಿ ಸಲ್ಲಿಸಿದ್ದರು. ರಫೇಲ್ ಒಪ್ಪಂದವನ್ನು ರದ್ದುಗೊಳಿಸಿ ಸುಪ್ರೀಂಕೋರ್ಟ್ ಮೇಲುಸ್ತುವಾರಿಯಲ್ಲಿ ಸಿಬಿಐ ತನಿಖೆ ನಡೆಸಬೇಕು ಎಂದು ವಕೀಲರು ಆಗ್ರಹಿಸಿದ್ದರು. ಈ ಅರ್ಜಿಗಳನ್ನು ಒಟ್ಟಾಗಿಸಿದ್ದ ಮುಖ್ಯ.ನ್ಯಾ ರಂಜನ್ ಗೋಗಯ್ ನೇತೃತ್ವದ ತ್ರಿ ಸದಸ್ಯ ಪೀಠ ಸುದೀರ್ಘ ವಿಚಾರಣೆ ನಡೆಸಿತ್ತು. ನವೆಂಬರ್ 14 ರಂದು ವಿಚಾರಣೆ ಅಂತ್ಯಗೊಳಿಸಿದ್ದ ಸುಪ್ರೀಂಕೋರ್ಟ್ ಇಂದು ಈ ಅರ್ಜಿಯನ್ನು ವಜಾಗೊಳಿಸಿದೆ.

    ಇದು ಶಾಸಕಾಂಗದ ವ್ಯಾಪ್ತಿಗೆ ಬರೋದ್ರಿಂದ ಇದು ದೇಶದ ಹಿತಾಶಕ್ತಿ ಹಾಗೂ ಭದ್ರತೆಗಾಗಿ ನಡೆದ ಒಪ್ಪಂದವಾಗಿದೆ. ಈ ಅಂಶಗಳು ಬಹಿರಂಗವಾದ್ರೆ ವಿರೋಧಿ ರಾಷ್ಟ್ರಗಳಿಗೆ ಜೆಟ್ ವಿಮಾನದಲ್ಲಿ ಬಳಸಿರುವ ತಂತ್ರಜ್ಞಾನಗಳ ಮಾಹಿತಿ ಸೋರಿಕೆಯಾಗುತ್ತದೆ ಅನ್ನೋ ಆತಂಕವನ್ನು ಸುಪ್ರೀಂನಲ್ಲಿ ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ಅವರು ವ್ಯಕ್ತಪಡಿಸಿದ್ದರು. ಈ ಅಂಶವನ್ನು ಇದೀಗ ಪರಿಗಣಿಸಿ ಮಾಹಿತಿ ಬಹಿರಂಗ ಮಾಡುವುದು ಬೇಡ ಜೊತೆಗೆ ತನಿಖೆಯೂ ಬೇಡ ಅನ್ನೋ ಅಭಿಪ್ರಾಯವನ್ನು ಸುಪ್ರೀಂ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರಕ್ಕೆ ಇದೊಂದು ದೊಡ್ಡ ಮಟ್ಟದ ಗೆಲುವಾಗಿದೆ. ಈ ಮೂಲಕ ಕಾಂಗ್ರೆಸ್ಸಿಗೆ ಹಿನ್ನಡೆಯಾಗಿದೆ.

    ಯುಪಿಎ ಒಪ್ಪಂದ ಏನಿತ್ತು?
    ಯುಪಿಎ ಸರ್ಕಾರದ ಅವಧಿಯಲ್ಲಿ 2012ರಲ್ಲಿ ಫ್ರಾನ್ಸ್’ನ ಡಸಾಲ್ಟ್ ಏವಿಯೇಶನ್ ಸಂಸ್ಥೆಯೊಂದಿಗೆ 126 ಮಧ್ಯಮ ಶ್ರೇಣಿಯ ಬಹುಮುಖಿ ಯುದ್ಧ ವಿಮಾನಗಳ(ಎಂಎಂಆರ್’ಸಿಎ-ಮೀಡಿಯಂ ಮಲ್ಟಿ ರೋಲ್ ಕಾಂಬಾಟ್ ಏರ್’ಕ್ರಾಫ್ಟ್) ಖರೀದಿಗೆ ಒಪ್ಪಂದ ಮಾಡಿಕೊಟ್ಟಿತ್ತು. ಮಾತುಕತೆಯ ನಿಯಮಗಳ ಪ್ರಕಾರ ಡಸಾಲ್ಟ್ ಏವಿಯೇಶನ್ ಸಂಸ್ಥೆಯು 18 ರಫೇಲ್ ಜೆಟ್‍ಗಳನ್ನು ಹಾರಾಡಲು ಸನ್ನದ್ಧವಾಗಿರುವ ಸ್ಥಿತಿಯಲ್ಲಿ ಭಾರತಕ್ಕೆ ಪೂರೈಸಬೇಕು ಹಾಗೂ ಭಾರತದ ಎಚ್‍ಎಎಲ್‍ನೊಂದಿಗೆ ಉಳಿದ 108 ಯುದ್ಧ ವಿಮಾನಗಳನ್ನು ಭಾರತದಲ್ಲಿಯೇ ತಯಾರಿಸಬೇಕೆನ್ನುವ ಷರತ್ತನ್ನು ಹಾಕಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಅಂಬಿ ಪಾರ್ಥಿವ ಶರೀರ ವೀಕ್ಷಣೆಗೆ ನಲಪಾಡ್‍ಗೆ ಅವಕಾಶ ನೀಡಿ ಮುಜುಗರಕ್ಕೆ ಒಳಗಾದ ಪೊಲೀಸರು

    ಅಂಬಿ ಪಾರ್ಥಿವ ಶರೀರ ವೀಕ್ಷಣೆಗೆ ನಲಪಾಡ್‍ಗೆ ಅವಕಾಶ ನೀಡಿ ಮುಜುಗರಕ್ಕೆ ಒಳಗಾದ ಪೊಲೀಸರು

    ಬೆಂಗಳೂರು: ನಟ ಅಂಬರೀಶ್ ಪಾರ್ಥಿವ ಶರೀರವನ್ನು ಎಚ್‍ಎಎಲ್ ನಲ್ಲಿ ವೀಕ್ಷಿಸಲು ವಿದ್ವತ್ ಮೇಲಿನ ಹಲ್ಲೆ ಪ್ರಕರಣದ ಆರೋಪಿಯಾಗಿರುವ ನಲಪಾಡ್‍ಗೆ ಅವಕಾಶ ಕೊಟ್ಟು ಬೆಂಗಳೂರು ಪೊಲೀಸರು ಈಗ ಮುಜುಗರಕ್ಕೆ ಒಳಗಾಗಿದ್ದಾರೆ.

    ಸೋಮವಾರ ಬೆಳಗ್ಗೆ ಮಂಡ್ಯದ ವಿಶ್ವೇಶ್ವರಯ್ಯ ಸ್ಟೇಡಿಯಂನಿಂದ ವಾಯುಸೇನೆಯ ಹೆಲಿಕಾಪ್ಟರ್ ನಲ್ಲಿ ಅಂಬಿ ಪಾರ್ಥಿವ ಶರೀರವನ್ನು ಎಚ್‍ಎಎಲ್ ವಿಮಾನ ನಿಲ್ದಾಣಕ್ಕೆ ತರಲಾಗಿತ್ತು. ಈ ಸಂದರ್ಭದಲ್ಲಿ ನಲಪಾಡ್ ಎಚ್‍ಎಎಲ್ ಪ್ರವೇಶಿಸಿದ್ದಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಗರಂ ಆಗಿದ್ದಾರೆ ಎಂದು ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ.

    ಕಾನೂನು ಪ್ರಕಾರ ನಲಪಾಡ್ ಒಳ ಪ್ರವೇಶಿಸಲು ಅವಕಾಶ ಇಲ್ಲ. ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದ್ದು, ಕೊಲೆ ಯತ್ನದ ಆರೋಪಿಯನ್ನು ಎಚ್‍ಎಎಲ್ ಒಳಗಡೆ ಬಿಟ್ಟಿದ್ದು ಭದ್ರತಾ ವೈಫಲ್ಯ. ಈ ಹಿನ್ನೆಲೆಯಲ್ಲಿ ಹಿರಿಯ ಅಧಿಕಾರಿಗಳು ಗರಂ ಆಗಿದ್ದು, ಸ್ಥಳದಲ್ಲಿದ್ದ ಕಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಸೂಚನೆ ನೀಡಿದ್ದಾರೆ.

     ನಲಪಾಡ್‍ ಎಚ್‍ಎಎಲ್ ಪ್ರವೇಶಿಸಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾದ ಹಿನ್ನೆಲೆಯಲ್ಲಿ ಹಿರಿಯ ಅಧಿಕಾರಿಗಳು ಕೇಳಿದ್ದಕ್ಕೆ ಕುಟುಂಬದ ಸದಸ್ಯರ ಜೊತೆ ಒಳಗಡೆ ಹೋಗಿದ್ದಾರೆ ಪೊಲೀಸರು ಹಾರಿಕೆಯ ಉತ್ತರ ನೀಡಿದ್ದರು. ವಿಐಪಿಗಳಿಗೆ ಮತ್ತು ಕುಟುಂಬಸ್ಥರಿಗೆ ಮಾತ್ರ ಅವಕಾಶ ನೀಡಿದ್ದರೂ ನಲಪಾಡ್ ಪ್ರವೇಶಿಸಿದ್ದು ಹೇಗೆ ಉತ್ತರ ನೀಡುವಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಈಗ ಸೂಚಿಸಿದ್ದಾರೆ. ಕೆಲವು ಪೊಲೀಸ್ ಅಧಿಕಾರಿಗಳ ಮುಂದೆಯೇ ನಲಪಾಡ್ ಎಚ್‍ಎಎಲ್ ಒಳಗಡೆ ಹೋಗಿದ್ದು ಭಾರೀ ಚರ್ಚೆಗೆ ಗ್ರಾಸವಾಗಿದೆ.

    ನಲಪಾಡ್ ಮೇಲೆ ಯಾವೆಲ್ಲ ಕೇಸ್ ಹಾಕಲಾಗಿದೆ?
    ಐಪಿಸಿ ಸೆಕ್ಷನ್ 307(ಕೊಲೆ ಯತ್ನ), 341(ಅಕ್ರಮ ಬಂಧನ), 504(ಅವ್ಯಾಚ್ಯ ಶಬ್ಧಗಳಿಂದ ನಿಂದನೆ), 143, 144- 146, 147, 149 (ಅಕ್ರಮ ಗುಂಪುಗಾರಿಕೆ), 326(ಗಂಭೀರ ಗಾಯ), 506 ಬಿ (ಪ್ರಾಣಬೆದರಿಕೆ) ಕೇಸ್ ಹಾಕಲಾಗಿದೆ.