Tag: hakravarthy chandrachud

  • ವೈಯಕ್ತಿಕ ವಿಷಯ ಇಟ್ಟುಕೊಂಡು ರಘು, ಚಕ್ರವರ್ತಿ ಕಿತ್ತಾಟ

    ವೈಯಕ್ತಿಕ ವಿಷಯ ಇಟ್ಟುಕೊಂಡು ರಘು, ಚಕ್ರವರ್ತಿ ಕಿತ್ತಾಟ

    ಬಿಗ್‍ಬಾಸ್ ಮನೆಯಲ್ಲಿ ದಿನಕ್ಕೊಂದು ವಿಶೇಷ ಸುದ್ದಿಗಳಿರುತ್ತವೆ. ಜಗಳ, ಗಾಸಿಪ್, ಡ್ರಾಮಾ, ಗುಸು ಗುಸು ಇರುತ್ತವೆ. ವೈಲ್ಡ್‍ಕಾರ್ಡ್ ಮೂಲಕವಾಗಿ ಎಂಟ್ರಿಕೊಟ್ಟ ಚಕ್ರವರ್ತಿ ಚಂದ್ರಚೂಡ್ ಮೊದಲಿನಿಂದಲೂ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಾಗುತ್ತಿದ್ದಾರೆ. ಇದೀಗ ಆಟದ ವಿಚಾರವಾಗಿ ರಘು ಮತ್ತು ಚಕ್ರವರ್ತಿ ನಡುವೆ ಡೊಡ್ಡ ಜಗಳವೇ ಆಗಿದೆ.

    ಚಕ್ರವರ್ತಿ ಚಂದ್ರಚೂಡ್ ಹಾಗೂ ರಘು ಗೌಡ ಅವರು ವೈಯಕ್ತಿಕ ವಿಷಯ ಇಟ್ಟುಕೊಂಡು ಜಗಳ ಆಡಿದ್ದಾರೆ. ರಘು ಮಾತು ಕೇಳಿ ಕೋಪಗೊಂಡ ಚಕ್ರವರ್ತಿ ಅವರು ಇನ್ಮುಂದೆ ಯಾರಿಗೂ ಸಹಾಯ ಮಾಡೋದಿಲ್ಲ ಎಂದಿದ್ದಾರೆ.

    ಬಿಗ್‍ಬಾಸ್ ನೀಡಿರುವ ಟಾಸ್ಕ್‍ನಲ್ಲಿ ಯಾರು ಏಜೆಂಟ್ ಅಂತ ದೊಡ್ಡ ಚರ್ಚೆ ನಡೆಯುತ್ತಿದೆ. ಅದರ ಜೊತೆಗೆ ಆಟವನ್ನು ಗೆಲ್ಲಬೇಕು. ಇಲ್ಲಿ ಆಟ ಗೆಲ್ಲಿಸುವವರೂ ಇದ್ದಾರೆ, ಸೋಲಿಸುವವರೂ ಇದ್ದಾರೆ. ಆ ವೇಳೆ ಚಕ್ರವರ್ತಿ ಚಂದ್ರಚೂಡ್ ಅವರು ಏಜೆಂಟ್ ಆಗಿ ಆಟ ಹಾಳು ಮಾಡಿದ್ದಾರೆ ಎಂಬ ಆರೋಪವನ್ನು ರಘು ಮಾಡಿದ್ದಾರೆ. ಈ ವಿಚಾರವಾಗಿ ಇಬ್ಬರ ನಡುವೆ ಜಗಳವಾಗಿದೆ.

    ಚಕ್ರವರ್ತಿ ಅವರು ಸೈಕಲಾಜಿಕಲ್ ಆಗಿ ಆಟ ಆಡಿದ್ದಾರೆ ಅಂತ ರಘು ಆರೋಪ ಮಾಡಿದ್ದಾರೆ. ರಘು ಮಾತ್ರ ಯಾರಿಗೂ ಸಪೋರ್ಟ್ ಮಾಡಲಿಲ್ಲ ಅಂತ ಚಕ್ರವರ್ತಿ ಹೇಳಿದ್ದಾರೆ. ವೈಷ್ಣವಿಯಂತೆ ಚಕ್ರವರ್ತಿ ಅವರಿಗೆ ಫಿಟ್‍ನೆಸ್ ಇದೆ ಅಂತ ರಘು ನಂಬಿದ್ದೇನು. ಆದರೂ ಆಟ ಆಡಲಿಲ್ಲ ಹೀಗಾಗಿ ಚಕ್ರವರ್ತಿ ಅವರೇ ಏಜೆಂಟ್ ಅಂತ ರಘು ಹೇಳಿದ್ದಾರೆ.

    ನಾನು ಸಹಾಯ ಮಾಡಿದ್ದು ತಪ್ಪೇ? ಎಷ್ಟು ನೀಚ ಆಟ ಆಡ್ತಿದ್ದೀಯಾ? ವೈಯಕ್ತಿಕವಾಗಿ ಯಾಕೆ ವಿಷಯ ತರುತ್ತಿದೀಯಾ? ಸೈಕಾಲಜಿ, ಕೌನ್ಸಿಲಿಂಗ್ ಮಾಡಿದ್ದು ವೈಯಕ್ತಿಕವಾದ ವಿಷಯ. ವೈಯಕ್ತಿಕವಾಗಿ ಸಹಾಯ ಮಾಡಿದ್ದಕ್ಕೆ, ಆಟದಲ್ಲಿ ಸಹಾಯ ಮಾಡಿದ್ದಕ್ಕೆ ಮೋಸ ಅಂದರೆ ನಾನು ಏನು ಮಾಡೋಕೆ ಆಗಲ್ಲ ಎಂದು ಚಕ್ರವರ್ತಿ ಹೇಳಿದ್ದಾರೆ. ಈ ವೇಳೆ ಅಲ್ಲಿಯೇ ಇದ್ದ ಅರವಿಂದ್ ಮತ್ತು ವಿಶ್ವನಾಥ್ ಮಧ್ಯಪ್ರವೇಶಿಸಿ ಸುಮ್ಮನಾಗಿಸಲು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ.

    ವೈಯಕ್ತಿಕವಾಗಿ ವಿಷಯ ಎತ್ತಬೇಡಿ, ಪರ್ಸನಲ್ ಮ್ಯಾಟರ್ ಎತ್ತಬೇಡಿ, ಸರಿ ಅಲ್ಲ, ನಾನು ಪರ್ಸನಲ್ ಮ್ಯಾಟರ್ ಎತ್ತಿದ್ದು ತಪ್ಪು. ನೀವು ಏಜೆಂಟ್ ಅಲ್ಲ ಅಂತ ನಿರೂಪಿಸಿ ಅಂತ ರಘು ಗೌಡ ಹೇಳಿದ್ದಾರೆ. ನನ್ನ ಜೀವನದಲ್ಲಿ ನಾನು ಯಾರಿಗೂ ಸಹಾಯ ಮಾಡಲ್ಲ. ಇದು ನಾನು ಕಲಿತ ಪಾಠ ಅಂತ ಚಕ್ರವರ್ತಿ ಚಂದ್ರಚೂಡ್ ಹೇಳಿದ್ದಾರೆ.

    ಬಿಗ್‍ಬಾಸ್‍ಮನೆಯ ಸ್ಪರ್ಧಿಗಳು ಒಂದಲ್ಲಾ ಒಂದು ವಿಚಾರ ಸುದ್ದಿಯಾಗುತ್ತಲೇ ಇರುತ್ತಾರೆ. ಸಣ್ಣ ಪುಟ್ಟ ವಿಚಾರಗಳನ್ನು ಡೊಡ್ಡದಾಗಿ ಮಾಡುಕೊಂಡು ಅವರಿಗೆ ಅನ್ನಿಸಿದ ಮಾತುಗಳನ್ನಾಡುತ್ತಾ ಸುದ್ದಿಯಾಗುವ ಒಂಟಿಮನೆಯ ಸ್ಪರ್ಧಿಗಳ ಹಿಂದೆ ನಿಂತು ಆಟ ಆಡುಸುತ್ತಿರುವವರು ಬಿಗ್‍ಬಾಸ್.