Tag: Haiti

  • ಹೈಟಿಯಲ್ಲಿ ಪ್ರಬಲ ಭೂಕಂಪಕ್ಕೆ 304 ಬಲಿ

    ಹೈಟಿಯಲ್ಲಿ ಪ್ರಬಲ ಭೂಕಂಪಕ್ಕೆ 304 ಬಲಿ

    ಪೋರ್ಟ್-ಔ-ಪ್ರಿನ್ಸ್: ಕೆರೆಬಿಯನ್ ರಾಷ್ಟ್ರ ಹೈಟಿಯಲ್ಲಿ ಸಂಭವಿಸಿದ ಭೀಕರ ಭೂಕಂಪದಲ್ಲಿ 304ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ.

    ರಿಕ್ಟರ್ ಮಾಪಕದಲ್ಲಿ 7.2ರಷ್ಟು ತೀವ್ರತೆ ದಾಖಲಾಗಿದ್ದು, ನೋಡನೋಡುತ್ತಿದ್ದಂತೆಯೇ ನೂರಾರು ಕಟ್ಟಡಗಳು ಸಂಪೂರ್ಣ ನೆಲಸಮವಾಗಿವೆ. ಹೈಟಿ ರಾಜಧಾನಿ ಪೋರ್ಟ್-ಔ-ಪ್ರಿನ್ಸ್ ನಿಂದ 160 ಕಿಲೋಮೀಟರ್ ದೂರದಲ್ಲಿ ಭೂಕಂಪ ಸಂಭವಿಸಿದೆ.

    ಭೂಕಂಪವಾಗ್ತಿದ್ದಂತೆಯೇ ಎಲ್ಲರೂ ತಮ್ಮ ತಮ್ಮ ಮನೆಗಳನ್ನ ಬಿಟ್ಟು ಹೊರಗೆ ಓಡೋಡಿ ಬಂದಿದ್ದಾರೆ. ಆದರೆ ಮನೆಯಲ್ಲೇ ಇದ್ದವರು ಅವಶೇಷಗಳಡಿ ಸಿಲುಕಿ ಸಾವು-ಬದುಕಿನ ನಡುವೆ ಹೋರಾಟ ಮಾಡ್ತಿದ್ದಾರೆ.

    ನೂರಾರು ಮಂದಿ ಭೂಕಂಪಕ್ಕೆ ಸಿಲುಕಿ ಕಣ್ಮರೆಯಾಗಿದ್ದಾರೆ. ಸದ್ಯ ಅವಶೇಷಗಳಡಿ ಸಿಲುಕಿದವರ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಇನ್ನು ಭೂಕಂಪದಿಂದ ಹೈಟಿಯಲ್ಲಿ ತರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದೆ. ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಕೂಡಲೇ ಸೂಕ್ತ ಪರಿಹಾರ ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

  • ಜೈಲಾಧಿಕಾರಿಯನ್ನು ಕೊಲೆಗೈದು 100 ಕೈದಿಗಳು ಪರಾರಿ

    ಜೈಲಾಧಿಕಾರಿಯನ್ನು ಕೊಲೆಗೈದು 100 ಕೈದಿಗಳು ಪರಾರಿ

    ಹೈಟಿ : ಜೈಲಾಧಿಕಾರಿಗಳನ್ನು ಕೊಲೆಮಾಡಿ 100ಕ್ಕೂ ಹೆಚ್ಚು ಮಂದಿ ಕೈದಿಗಳು ಪರಾರಿ ಆಗಿರುವ ಘಟನೆ ಹೈಟಿ ಪ್ರದೇಶದ ಕ್ರೋಯಿಕ್ಸ್-ಡೇಸ್-ಬಾಕಿಟ್ಸ್ ಪ್ರದೇಶದಲ್ಲಿ ನಡೆದಿದೆ.

    ಜೈಲಿನ ಕಂಬಿಯನ್ನು ಮುರಿದು ಕೈದಿಗಳು ಪರಾರಿಯಾಗಿದ್ದಾರೆ. ಜೈಲಿನಲ್ಲಿ ಸೆರೆಯಿರುವ ಕೈದಿಗಳು ಅಥವಾ ಹೊರಗಿನವರಿಂದ ಈ ಕೃತ್ಯ ನಡೆದಿದೆಯಾ ಎನ್ನುವ ಕುರಿತಾಗಿ ಮಾಹಿತಿ ಇಲ್ಲ. ಕಂಬಿಗಳನ್ನು ಮುರಿದು ಹಲವಾರು ಕೈದಿಗಳು ಪರಾರಿಯಾಗಿದ್ದಾರೆ. ಕೈದಿಗಳು ತಪ್ಪಿಸಿಕೊಂಡು ಹೋಗುವ ವೇಳೆ ಸ್ಥಳದಲ್ಲಿ ಅಧಿಕಾರಿಗಳು, ಸಿಬ್ಬಂದಿ ಸೇರಿದಂತೆ 8 ಮಂದಿ ಸಾವನ್ನಪ್ಪಿ ಹಲವರು ಗಾಯಗೊಂಡಿದ್ದಾರೆ.

    ಸಶಸ್ತ್ರಗಳಳೊಂದಿಗೆ ಗುಂಪೊಂದು ಜೈಲಿನೊಳಗೆ ನುಗ್ಗಿದೆ. ಈ ವೇಳೆ ಜೈಲಿನ ಸಿಬ್ಬಂದಿ ಮತ್ತು ಅಧಿಕಾರಿಗಳ ಮೇಲೆ ಗುಂಡು ಹಾರಿಸಿದ್ದಾರೆ. ನಂತರ ಜೈಲಿನ ಒಳಗೆ ಗುಂಡಿನ ಶಬ್ಧ ಕೇಳಿದೆ. ಈ ವೇಳೆ ಕೈದಿಗಳು ಪರಾರಿಯಾಗಿದ್ದಾರೆ ಎಂದು ಸ್ಥಳೀಯರು ಹೇಳಿದ್ದಾರೆ.

    2012ರಲ್ಲಿ ನಿರ್ಮಾಣವಾಗಿರವ ಈ ಜೈಲಿನಲ್ಲಿ ಕೈದಿಗಳು ಪರಾರಿಯಾಗುತ್ತಿರುವುದು ಇದೇ ಮೊದಲೇನು ಅಲ್ಲ. 2014 ರಲ್ಲಿ 300 ಮಂದಿ ಕೈದಿಗಳು ತಪ್ಪಿಸಿಕೊಂಡಿದ್ದರು. ಇಲ್ಲಿ ಬಂಧಿಯಾಗಿರವ ಕೈದಿಗಳ ಸ್ಥಿತಿ ಶೋಚನಿಯವಾಗಿದ್ದು, ಅವರಿಗೆ ಯಾವುದೇ ಸೌಕರ್ಯಗಳು ಇಲ್ಲ, ಹೀಗಾಗಿ ಕೈದಿಗಳು ಪರಾರಿಯಾಗಿರಬಹುದು ಎಂದು ವರದಿಯಾಗಿದೆ.