Tag: hairstyle

  • ಜಾವೇದ್ ಹಬೀಬ್ ಬಿಜೆಪಿ ಸೇರಿದ್ಮೇಲೆ ಬದಲಾಯ್ತು ನಾಯಕರ ಹೇರ್ ಸ್ಟೈಲ್!

    ಜಾವೇದ್ ಹಬೀಬ್ ಬಿಜೆಪಿ ಸೇರಿದ್ಮೇಲೆ ಬದಲಾಯ್ತು ನಾಯಕರ ಹೇರ್ ಸ್ಟೈಲ್!

    – ಸಾಮಾಜಿಕ ಜಾಲತಾಣದಲ್ಲಿ ನಾಯಕರ ಟ್ರೋಲ್

    ನವದೆಹಲಿ: ಖ್ಯಾತ ಹೇರ್ ಸ್ಟೈಲಿಸ್ಟ್ ಜಾವೇದ್ ಹಬೀಬ್ ಅವರು ಸೋಮವಾರದಂದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಆದ್ದರಿಂದ ನೆಟ್ಟಿಗರು ಹೇರ್ ಸ್ಟೈಲಿಸ್ಟ್ ಪಕ್ಷ ಸೇರಿದ ಮೇಲೆ ನಾಯಕರ ಹೇರ್ ಸ್ಟೈಲ್ ಬದಲಾಗಿದೆ ಎಂದು ಬಿಜೆಪಿ ನಾಯಕರ ಫೋಟೋಗಳನ್ನು ವಿವಿಧ ರೀತಿ ಎಡಿಟ್ ಮಾಡಿ ಬೇಜಾನ್ ಕಾಲೆಳೆಯುತ್ತಿದ್ದಾರೆ.

    ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ನಾಯಕರು ವಿವಿಧ ಹೇರ್ ಸ್ಟೈಲ್ ಮಾಡಿಕೊಂಡಿರುವ ಹಾಗೆ ಫೋಟೋಗಳನ್ನು ಎಡಿಟ್ ಮಾಡಿ ಟ್ರೋಲ್ ಮಾಡಲಾಗುತ್ತಿದೆ. ಅದರಲ್ಲೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಕೂಲ್ ಹೇರ್ ಸ್ಟೈಲ್ ಎಡಿಟ್ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

    ಮೋದಿ, ಅಮಿತ್ ಶಾ, ಯುಪಿ ಸಿಎಂ ಯೋಗಿ ಆಧಿತ್ಯನಾಥ್ ಸೇರಿದಂತೆ ಹಲವು ಬಿಜೆಪಿ ನಾಯಕರ ಫೊಟೋಗಳಿಗೆ ವಿವಿಧ ಹೇರ್ ಸ್ಟೈಲ್ ಮಾಡಿಕೊಂಡಿರುವ ರೀತಿ ಎಡಿಟ್ ಮಾಡಿ ಕಮಲ ನಾಯಕರಿಗೆ ನೆಟ್ಟಿಗರು ಸ್ಮಾರ್ಟ್ ಲುಕ್ ನೀಡಿದ್ದಾರೆ.

    ಜಾವೇದ್ ಹಬೀಬ್ ಅವರು ಭಾರತದಲ್ಲೇ ಖ್ಯಾತ ಹೇರ್ ಸ್ಟೈಲಿಸ್ಟ್ ಆಗಿದ್ದು, ದೇಶದಲ್ಲಿ 100 ನಗರಗಳಲ್ಲಿ 800ಕ್ಕೂ ಅಧಿಕ ಬ್ಯೂಟಿ ಹಾಗೂ ಹೇರ್ ಸಲೂನ್‍ಗಳನ್ನು ನಡೆಸುತ್ತಿದ್ದಾರೆ. ಅಲ್ಲದೇ ಸೋಮವಾರದಂದು ಬಿಜೆಪಿಗೆ ಸೇರಿ, ಮೋದಿ ಅವರು ಆರಂಭಿಸಿದ್ದ `ಮೈ ಭಿ ಚೌಕಿದಾರ್’ ಅಭಿಯಾನಕ್ಕೆ ಕೈಜೋಡಿಸಿದ್ದಾರೆ.

  • ಹೇರ್‌ಸ್ಟೈಲ್‌ನಲ್ಲೇ `ರಾಕಿ ಭಾಯ್’ ಗೆ ಸಲಾಂ..!

    ಹೇರ್‌ಸ್ಟೈಲ್‌ನಲ್ಲೇ `ರಾಕಿ ಭಾಯ್’ ಗೆ ಸಲಾಂ..!

    ಬೆಂಗಳೂರು: ಭಾರತೀಯ ಸಿನಿಮಾ ರಂಗದಲ್ಲಿ ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕೆಜಿಎಫ್’ ಹವಾ ಸಕತ್ ಸೌಂಡ್ ಮಾಡುತ್ತಿದೆ. ಇನ್ನೊಂದು ಕಡೆ ಯಶ್ ಕೆಜಿಎಫ್ ಹೇರ್‌ಸ್ಟೈಲ್‌ ಈಗ ಟ್ರೆಂಡ್ ಆಗಿದೆ.

    ಬೆಂಗಳೂರಿನ ಆರ್.ಟಿ.ನಗರದ ಸ್ಪಿನ್ ಹೇರ್ ಸೆಲೂನ್‍ನಲ್ಲಿ ಅಭಿಲಾಷ್ ಅನ್ನೋರು ಕೆಜಿಎಫ್ ಹೇರ್‌ಸ್ಟೈಲ್‌ ಮಾಡಿ ಕಿಂಗ್ ಅನಿಸಿಕೊಂಡಿದ್ದಾರೆ. ಇದೀಗ ಈ ಸ್ಟೈಲ್ ಟ್ರೆಂಡಿಯಾಗಿದ್ದು, ಯಶ್ ಅಭಿಮಾನಿಗಳು ಡಿಫರೆಂಟ್ ಸ್ಟೈಲ್ ಮಾಡಿಕೊಂಡು ಖುಷಿ ಪಡುತ್ತಿದ್ದಾರೆ.

    ಹುಡುಗಿಯರು ಕೂಡ ತಮ್ಮ ಮೋಟು ಕೂದಲು, ಉದ್ದಗೂದಲಿಗೆ ಕತ್ತರಿ ಹಾಕಿಸಿಕೊಂಡು ಯಶ್ ಗಾಗಿ ರಾಕಿಂಗ್ ಸ್ಟಾರ್ ಅಂತ ಸ್ಟಾರ್ ಸಿಂಬಲ್ ಹೇರ್‌ಸ್ಟೈಲ್‌ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇರ್ ಸ್ಟೈಲ್ ಮಾಡಿದ ಅಭಿಲಾಷ್ ಹೇಳಿದ್ದಾರೆ.

    ಕನ್ನಡ ಚಿತ್ರರಂಗದಲ್ಲೇ ಹವಾ ಎಬ್ಬಿಸುತ್ತಿರುವ ಕೆಜಿಎಫ್ ಸಿನಿಮಾ ಶುಕ್ರವಾರ ಬರೋಬ್ಬರಿ 2000ಕ್ಕೂ ಅಧಿಕ ಚಿತ್ರ ಮಂದಿರಗಳಲ್ಲಿ ತೆರೆಕಂಡಿದ್ದು, ಎಲ್ಲೆಡೆ ಸದ್ದು ಮಾಡುತ್ತಿದೆ. ಬಿಡುಗಡೆಯಾದ ಮೊದಲ ದಿನವೇ ಬರೋಬ್ಬರಿ ಸುಮಾರು 30 ಕೋಟಿ ಹಣವನ್ನು ಗಲ್ಲಾ ಪೆಟ್ಟಿಯಲ್ಲಿ ತುಂಬಿಸಿಕೊಂಡಿತ್ತು. ಕೆಜಿಎಫ್ ಸಿನಿಮಾ ಪಂಚಭಾಷೆಗಳಲ್ಲಿ ಬಿಡುಗಡೆಗೊಂಡಿದ್ದು, ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪುನೀತ್ ಹೊಸ ಹೇರ್ ಸ್ಟೈಲ್ ಫೋಟೋ ವೈರಲ್ – ಸಾಮಾಜಿಕ ಜಾಲತಾಣದಲ್ಲಿ ಪರ, ವಿರೋಧ ಚರ್ಚೆ

    ಪುನೀತ್ ಹೊಸ ಹೇರ್ ಸ್ಟೈಲ್ ಫೋಟೋ ವೈರಲ್ – ಸಾಮಾಜಿಕ ಜಾಲತಾಣದಲ್ಲಿ ಪರ, ವಿರೋಧ ಚರ್ಚೆ

    ಬೆಂಗಳೂರು: ಪುನೀತ್ ರಾಜ್ ಕುಮಾರ್ ಅವರ ಹೊಸ ಹೇರ್ ಸ್ಟೈಲ್ ಫೋಟೋ ಇದೀಗ ಹೆಚ್ಚು ವೈರಲ್ ಆಗಿದ್ದು, ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಜನರಿಂದ ಪರ ವಿರೋಧ ಅಭಿಪ್ರಾಯ ವ್ಯಕ್ತವಾಗಿದೆ.

    ಪುನೀತ್ ರಾಜ್ ಕುಮಾರ್ ಅವರು ಕನ್ನಡದ ಹೆಮ್ಮೆಯ ಸಾಂಸ್ಕೃತಿಕ ರಾಯಭಾರಿಯಾಗಿದ್ದು, ಡಾ.ರಾಜ್ ಹಾದಿಯಲ್ಲಿ ಸಾಗುವ ಭರವಸೆ ಮೂಡಿಸಿದ್ದರು. ಆದರೆ ಪುನೀತ್ ಅವರಿಗೆ ಇಂತಹ ಹೇರ್ ಸ್ಟೈಲ್ ಬೇಕಾ? ಹೇರ್ ಸ್ಟೈಲ್ ಎಂನ್ನುವುದು ವೈಯಕ್ತಿಕ ವಿಚಾರವಾದರೂ ಪುನೀತ್ ಅವರಲ್ಲಿ ರಾಜ್ ಇದ್ದಾರೆ ಎಂಬುದನ್ನು ನಾವು ಗಮನಿಸಿದ್ದೇವೆ. ಸಿನಿಮಾ ನಟನೆಯಲ್ಲಿ ಇದೆಲ್ಲಾ ಓಕೆ. ಆದರೆ ನಿಜ ಜೀವನದಲ್ಲಿ ಬೇಕೇ ಎಂದು ಪ್ರಶ್ನಿಸಿ ಪುನೀತ್ ಹೇರ್ ಸ್ಟೈಲ್ ಬಗ್ಗೆ ಪರ-ವಿರೋಧದ ಚರ್ಚೆ ನಡೆಯುತ್ತಿದೆ.

    ಈ ಕುರಿತು ಫೇಸ್ ಬುಕ್ ಖಾತೆಯಲ್ಲಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಆಕ್ಷೇಪ ವ್ಯಕ್ತಪಡಿಸಿ ತಮ್ಮ ಅಭಿಪ್ರಾಯವನ್ನು ಬರೆದುಕೊಂಡಿದೆ. “ನಮ್ಮೆಲ್ಲರ ಹೆಮ್ಮೆಯ ಸಾಂಸ್ಕೃತಿಕ ರಾಯಭಾರಿ ಡಾ|| ರಾಜ್ ರ ಹಾದಿಯಲ್ಲಿ ಸಾಗುವ ಭರವಸೆ ಮೂಡಿಸಿದ್ದ, ರಾಜ್ ರ ಹೆಸರನ್ನು ಚಿರಸ್ಥಾಯಿ ಮಾಡುವ ತಾಕತ್ತುಳ್ಳ ಪುನೀತ್ ಗೆ ಇಂತಹ ಹೇರ್ ಸ್ಟೈಲ್ ಬೇಕಾ? ಸುದೀಪ್ ರನ್ನು ಅನುಸರಿಸಿದ ಯುವಕರ ದಂಡು ಅರ್ಧ ಕತ್ತರಿಸಿ ಇನ್ನರ್ಧ ಹಾಗೆ ಬಿಟ್ಟಿದ್ದರು. ಇದೀಗ ಪುನೀತ್ ಅವರ ಸರದಿ. ಹೇರ್ ಸ್ಟೈಲ್ ವಯಕ್ತಿಕ ವಿಚಾರವೇ ಅಗಿದ್ದರೂ ನಿಮ್ಮಲ್ಲೊಬ್ಬ ರಾಜ್ ಇದ್ದಾರೆ ಎಂಬುದನ್ನು ನಾವು ಗಮನಿಸಿದ್ದೇವೆ. ಸ್ಟಾರ್ ವಾರ್ ಬಿಟ್ಟು ನೈಜ ನಾಯಕನಾಗುವ ಎಲ್ಲಾ ಅರ್ಹತೆ ನಿಮಗಿದೆ. ಸಿನಿಮಾ, ನಟನೆಯಲ್ಲಿ ಓಕೆ. ನಿಮ್ಮ ನಿಜ ಜೀವನದಲ್ಲಿ ಇದೆಲ್ಲಾ ಬೇಕೆ” ಎಂದು ಪ್ರಶ್ನಿಸಿದ್ದಾರೆ.

  • ವರಮಹಾಲಕ್ಷ್ಮಿ ಹಬ್ಬಕ್ಕಾಗಿ ಇಲ್ಲಿದೆ 6 ಸಿಂಪಲ್ ಹೇರ್‍ಸ್ಟೈಲ್ಸ್

    ವರಮಹಾಲಕ್ಷ್ಮಿ ಹಬ್ಬಕ್ಕಾಗಿ ಇಲ್ಲಿದೆ 6 ಸಿಂಪಲ್ ಹೇರ್‍ಸ್ಟೈಲ್ಸ್

    ರಮಹಾಲಕ್ಷ್ಮೀ ಹಬ್ಬ ಬಂತು. ಹೆಣ್ಣುಮಕ್ಕಳಿಗಂತೂ ಸೀರೆ ಉಟ್ಟು ಚೆಂದವಾಗಿ ಅಲಂಕಾರ ಮಾಡ್ಕೊಂಡು ಓಡಾಡೋದೇ ಒಂದು ಸಂಭ್ರಮ. ಹಬ್ಬಕ್ಕೆ ಸಿಂಗರಿಸಿಕೊಳ್ಳುವಾಗ ಲೂಸ್ ಹೇರ್ ಇರಬೇಕಾ? ಜಡೆ ಹಾಕಬೇಕಾ ಅಥವಾ ಡಿಫರೆಂಟ್ ಹೇರ್‍ಸ್ಟೈಲ್ ಮಾಡ್ಕೋಬೇಕಾ ಅನ್ನೋದೇ ದೊಡ್ಡ ಕನ್‍ಫ್ಯೂಷನ್. ಡೋಂಟ್ ವರಿ, ಅದಕ್ಕಾಗಿ ಇಲ್ಲಿದೆ 6 ಸಿಂಪಲ್ ಹೇರ್‍ಸ್ಟೈಲ್ಸ್. ನಿಮಗೆ ಯಾವುದು ಇಷ್ಟವಾಗುತ್ತದೋ ಆ ಹೇರ್‍ಸ್ಟೈಲ್ ಮಾಡಿಕೊಂಡು ಹಬ್ಬಕ್ಕೆ ಮಿಂಚಿಬಿಡಿ.

    1. ಸಿಂಪಲ್ ಫಿಶ್‍ಟೇಲ್ ಜಡೆ


    ಇದನ್ನು ಹೇಳಿಕೊಡಬೇಕಿಲ್ಲ. ಕಾಲೇಜು ಹುಡುಗೀರು ಈಗ ಫಿಶ್‍ಟೇಲ್ ಹಾಕೋದು ತುಂಬಾನೆ ಕಾಮನ್. ಉದ್ದ ಕೂದಲಿದ್ರೆ ಫಿಶ್ ಟೇಲ್ ಜಡೆ ಮತ್ತಷ್ಟು ಚೆನ್ನಾಗಿ ಕಾಣುತ್ತೆ. ನಿಮ್ಮ ಮುಖಕ್ಕೆ ಒಪ್ಪುವಂತೆ ಸೈಡಿಗೆ ಬೈತಲೆ ತೆಗದುಕೊಳ್ಳಿ ಅಥವಾ ಬಫ್ ಹಾಕಿ ಹಿಂದಕ್ಕೆ ಬಾಚಿಕೊಳ್ಳಿ. ಮುಂಗುರುಳಿಗಾಗಿ ಸ್ವಲ್ಪ ಕೂದಲನ್ನ ಹಾಗೇ ಬಿಡಿ. ನಂತರ ಬಲಕ್ಕೆ ಅಥವಾ ಎಡಕ್ಕೆ ಜಡೆ ಹೆಣೆದುಕೊಳ್ಳಿ. ರಬ್ಬರ್ ಬ್ಯಾಂಡ್ ಹಾಕಿದ ನಂತರ ಜಡೆಯ ಪ್ರತಿ ಹೆಣೆಯನ್ನ ಹಿಡಿದೆಳೆದು ಅಗಲವಾಗಿಸಿ. ಮುಂದೆ ಬಿಟ್ಟಿರುವ ಕೂದಲನ್ನ ಕರ್ಲ್ ಮಾಡಿ ಅಥವಾ ಸಣ್ಣಗೆ ಹೆಣೆದು ಸೈಡಿಗೆ ಪಿನ್ ಮಾಡಿ. ಜಡೆಯ ಮೊದಲ ಹೆಣೆಯ ಬಳಿ ಚಿಕ್ಕ ರೋಸ್ ಮುಡಿದುಕೊಳ್ಳಿ ಅಥವಾ ಹೇರ್ ಆಕ್ಸಸರಿ ಬಳಸಿ ಸ್ಟೈಲ್ ಮಾಡಿಕೊಳ್ಳಿ.

    2. ಫ್ರೆಂಚ್ ನಾಟ್

    ಇದು ಎಂಥವರಿಗೂ ಸೂಟ್ ಆಗುವಂತಹ ಹೇರ್‍ಸ್ಟೈಲ್. ಡೀಪ್ ನೆಕ್ ಬ್ಲೌಸ್ ಅಥವಾ ಹೈ ನೆಕ್‍ಬ್ಲೌಸ್ ಯಾವುದೇ ಧರಿಸಿದ್ರೂ ಫ್ರೆಂಚ್ ನಾಟ್ ಹೇರ್‍ಸ್ಟೈಲ್ ಮಾಡಿಕೊಂಡ್ರೆ ತುಂಬಾ ಚೆನ್ನಾಗಿ ಕಾಣುತ್ತದೆ. ಫ್ರೆಂಚ್ ನಾಟ್ ಹಾಕೋದನ್ನ ಹೇಗೆ ಅಂತ ಈ ವಿಡಿಯೋದಲ್ಲಿ ನೋಡಿ.

    https://www.youtube.com/watch?v=8vg07qjX5qU

    3. ಟ್ವಿಸ್ಟ್


    ಬನ್ ಅಥವಾ ಜಡೆ ಹಾಕಿಕೊಳ್ಳೊದು ಇಷ್ಟವಿಲ್ಲ ಎಂದಾದ್ರೆ ಲೂಸ್ ಹೇರ್‍ಗೆ ಒಂದು ಟ್ವಿಸ್ಟ್ ಕೊಡಿ. ಕೂದಲನ್ನ ಬ್ಲೋ ಡ್ರೈ ಮಾಡಿ ಅಥವಾ ಸ್ಟ್ರೇಟ್ನಿಂಗ್ ಮಾಡಿ ನಂತರ ಈ ಹೇರ್‍ಸ್ಟೈಲ್‍ಗಳನ್ನ ಮಾಡಿಕೊಳ್ಳೋದು ಸೂಕ್ತ. ಇದು ನಿಮಗೆ ಯಂಗ್ ಲುಕ್ ನೀಡುತ್ತದೆ. ಮೇಲ್ಭಾಗದಲ್ಲಿ ಟ್ವಿಸ್ಟ್ ಮಾಡಿ ಸ್ಟೈಲ್ ಮಾಡಿ ಕೂದಲ ತುದಿಯಲ್ಲಿ ಕರ್ಲ್ಸ್  ಮಾಡಿಕೊಳ್ಳಿ.

    4. ಲೋ ಬನ್

    ತುಂಬಾ ಕ್ಲಾಸಿ ಲುಕ್ ಬೇಕಾದಲ್ಲಿ ಈ ಹೇರ್‍ಸ್ಟೈಲ್ ಖಂಡಿತ ಟ್ರೈ ಮಾಡಿ. ಇದಕ್ಕೆ ನಿಮ್ಮ ಕೂದಲನ್ನ ನೀಟಾಗಿ ಬಾಚೋದು ತುಂಬಾ ಮುಖ್ಯ. ನಿಮ್ಮದು ಗುಂಗುರು ಕೂದಲಾದ್ರೆ ಸ್ಟ್ರೇಟ್ನಿಂಗ್ ಮಾಡಿಕೊಂಡು ನಂತರ ಈ ಹೇರ್‍ಸ್ಟೈಲ್ ಮಾಡಿಕೊಳ್ಳಿ.

    5. ಸಖತ್ ಸಿಂಪಲ್

    ಮೆಸ್ಸಿ ಬನ್ ನಂತಹ ಲುಕ್ ಬೇಕಾದ್ರೆ ಈ ಹೇರ್‍ಸ್ಟೈಲ್ ಹೇಳಿಮಾಡಿಸಿದ್ದು. ತುಂಬಾ ಸಿಂಪಲ್ ಆಗಿರೋ ಈ ಹೇರ್‍ಸ್ಟೈಲ್ ಮಾಡೋದು ಹೇಗೆ ಅಂತ ಈ ವಿಡಿಯೋದಲ್ಲಿ ನೋಡಿ. ಹೇರ್‍ಸೈಲ್ ಮಾಡಿಕೊಂಡ ನಂತರ ಚೆಂದದ ಹೇರ್ ಆಕ್ಸೆಸರಿ ಅಥವಾ ಕೃತಕ ಹೂ ಬಳಸಿದ್ರೆ ಇದರ ಅಂದ ಇಮ್ಮಡಿಗೊಳ್ಳುತ್ತೆ.

    6. ಟ್ರೆಡಿಷನಲ್ ಲುಕ್

    ಹಬ್ಬದ ದಿನ ಹೂ ಮುಡಿದುಕೊಂಡು ಸಾಂಪ್ರದಾಯಿಕವಾಗಿ ಕಾಣ್ಬೇಕು ಅನ್ನೋದಾದ್ರೆ ಸಿಂಪಲ್ ಆಗಿ ಒಂದು ಬನ್ ಹಾಕಿಕೊಂಡು ಮಲ್ಲಿಗೆ ದಿಂಡಿನಿಂದ ಸಿಂಗರಿಸಿಕೊಳ್ಳಿ. ರೋಸ್‍ಪೆಟಲ್ ಅಥವಾ ಮೊಗ್ಗು ಬಳಸಿ ಮಾಡೋ ದಿಂಡುಗಳು ಈಗಿನ ಟ್ರೆಂಡ್, ಅದನ್ನ ಟ್ರೈ ಮಾಡಿ.

    ಈ ಎಲ್ಲಾ ಹೇರ್‍ಸ್ಟೈಲ್‍ಗಳನ್ನ ನೀವು ಹಬ್ಬಕ್ಕೆ ಮಾತ್ರವಲ್ಲದೆ ಮದುವೆ ಅಥವಾ ಇನ್ನಿತರ ಸಮಾರಂಭಗಳಿಗೂ ಟ್ರೈ ಮಾಡಬಹುದು.