ನ್ಯಾಷನಲ್ ಕ್ರಶ್ ನಟಿ ರಶ್ಮಿಕಾ ಮಂದಣ್ಣ ಏನೇ ಮಾಡಿದ್ರೂ ಅದು ಟ್ರೆಂಡ್ ಆಗುತ್ತೆ. ನಟಿ ರಶ್ಮಿಕಾ ನಯಾ ಹೇರ್‌ಸ್ಟೈಲ್‌ನಲ್ಲಿ ಮಾಡಿಸಿರುವ ಫೋಟೋಶೂಟ್ ಹಲ್‌ಚಲ್ ಮಾಡ್ತಿದೆ. ರಶ್ಮಿಕಾ ಈ ಲುಕ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಆದ್ರೆ ಇದು ಯಾವುದೇ ಸಿನಿಮಾಗಾಗಿ ಅಲ್ಲ, ಬದಲಾಗಿ ಮ್ಯಾಗಜಿನ್‌ವೊಂದಕ್ಕೆ ರಶ್ಮಿಕಾ ಮಾಡಿಸಿರುವ ಫೋಟೋಶೂಟ್.
ಹೌದು, `ಡರ್ಟಿ ಕಟ್ 25′ ಎನ್ನುವ ಮ್ಯಾಗಜಿನ್‌ನ ಮುಖಪುಟಕ್ಕೆ ನಟಿ ರಶ್ಮಿಕಾ ಮಾಡಿಸಿರುವ ಫೋಟೋಶೂಟ್ ಸದ್ಯ ಟ್ರೆಂಡಿಂಗ್‌ನಲ್ಲಿದೆ. ರಶ್ಮಿಕಾ ಗುರುತೇ ಸಿಗದಷ್ಟು ಮಟ್ಟಿಗೆ ಆ ಫೋಟೋಶೂಟ್‌ನಲ್ಲಿ ಕಾಣಿಸುತ್ತಿದ್ದಾರೆ. ಈ ಹಿಂದೆಂದೂ ಕಾಣಿಸಿಕೊಳ್ಳದ ಲುಕ್‌ನಲ್ಲಿ ರಶ್ಮಿಕಾ ಮಂದಣ್ಣ ಗಮನ ಸೆಳೆಯುತ್ತಿದ್ದಾರೆ. ಭಾರತೀಯ ಚಿತ್ರರಂಗದಲ್ಲಿ ನಟಿ ರಶ್ಮಿಕಾ ಮಂದಣ್ಣ ಬಗೆ ಬಗೆಯ ಸಿನಿಮಾಗಳನ್ನ ಮಾಡುತ್ತಿದ್ದಾರೆ.
ರಶ್ಮಿಕಾ ಮಂದಣ್ಣ ನಟನೆಯ ಬಾಲಿವುಡ್‌ನ ಸಿಕಂದರ್ ಸಿನಿಮಾ ಸೋಲು ದೊಡ್ಡ ಹೊಡೆತವನ್ನೇ ಕೊಟ್ಟಿದೆ. ರಶ್ಮಿಕಾ ಇದೀಗ ಮಹಿಳಾ ಪ್ರಧಾನ ಸಿನಿಮಾಗಳನ್ನ ಮಾಡುವ ಛಲ ತೊಟ್ಟಿದ್ದಾರೆ. ಈಗಾಗಲೇ ಮೈಸಾ ಸಿನಿಮಾದ ಫಸ್ಟ್‌ಲುಕ್ ರಿಲೀಸ್ ಆಗಿದೆ. ರಕ್ತಸಿಕ್ತ ಅವತಾರದಲ್ಲಿ ರಶ್ಮಿಕಾ ಲುಕ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.
`ಡರ್ಟಿ ಕಟ್ 25′ ಮ್ಯಾಗಜಿನ್‌ನ ಮುಖಪುಟಕ್ಕೆ ರಶ್ಮಿಕಾ ಮಾಡಿಸಿರೋ ಹೊಸ ಫೋಟೋಶೂಟ್ ಸದ್ಯ ಸಖತ್ ಸೆನ್ಸೇಷನ್ ಕ್ರಿಯೇಟ್ ಮಾಡಿದೆ. ಮುಂದಿನ ದಿನಗಳಲ್ಲಿ ರಶ್ಮಿಕಾ ಯಾವ ರೀತಿಯ ಸಿನಿಮಾಗಳ ಆಯ್ಕೆ ಮಾಡಿಕೊಳ್ಳುತ್ತಾರೋ ಕಾದು ನೋಡಬೇಕಿದೆ.
ಬೆಂಗಳೂರು: ವಿಜಯೇಂದ್ರ (BY Vijayendra) ತಲೆಯಲ್ಲಿ ಕಂಟೆಂಟ್ ಇಲ್ಲ. ವಿಚಾರಗಳ ಮೇಲೆ ಮಾತನಾಡೋಕೆ ಆಗಲ್ಲ. ಅವರ ತಲೆಯಲ್ಲಿರೋದೆಲ್ಲ ಮುಗಿದು ಹೋಗಿದೆ. ಅದಕ್ಕೆ ವೈಯುಕ್ತಿಕ ವಿಷಯ ಮಾತನಾಡುತ್ತಿದ್ದಾರೆ ಎಂದು ಶಾಸಕ ಪ್ರದೀಪ್ ಈಶ್ವರ್ (Pradeep Eshwar) ವಾಗ್ದಾಳಿ ನಡೆಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಇಶ್ಯೂ ಬಿಟ್ಟಿದ್ದಾರೆ. ವೈಯಕ್ತಿಕ ವಿಚಾರಗಳನ್ನು ಮಾತನಾಡುತ್ತಾರೆ. ಮಧುಬಂಗಾರಪ್ಪ (Madhu Bangarappa) ಹೇರ್‌ಸ್ಟೈಲ್ ಬಗ್ಗೆ ಮಾತನಾಡುತ್ತಾರೆ. ನಾನು ನಾಲ್ಕು ಪ್ರಶ್ನೆ ಕೇಳುತ್ತೇನೆ. ಹೇರ್‌ಸ್ಟೈಲ್ (Hairstyle) ಬಗ್ಗೆ ಮಾತನಾಡುತ್ತೀರಲ್ಲ ಸರಿನಾ? ನಿಮಗೆ ಜ್ಞಾನದ ಕೊರತೆ ಇರಬಹುದು. ಇಲ್ಲ ನಿಮಗೆ ಸಲಹೆ ಕೊಡುವುದು ತಪ್ಪಿರಬಹುದು. ಶಿವಮೊಗ್ಗ ಎಂದರೆ ಬಂಗಾರಪ್ಪ, ಯಡಿಯೂರಪ್ಪ ಇಬ್ಬರ ಹೆಸರು ಮುಖ್ಯ. ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆ ತಂದಿದ್ದಾರೆ. ಮಕ್ಕಳಿಗೆ ಮೂರು ಅವಕಾಶ ಕೊಟ್ಟಿದ್ದಾರೆ. ಆ ವಿಚಾರಗಳ ಬಗ್ಗೆ ನೀವು ಮಾತನಾಡಿ. ಅದು ಬಿಟ್ಟು ಹೇರ್‌ಸ್ಟೈಲ್ ಬಗ್ಗೆ ಮಾತನಾಡುತ್ತೀರಲ್ಲ ಎಂದು ಹರಿಹಾಯ್ದರು. ಇದನ್ನೂ ಓದಿ: ಎಂಎಲ್‌ಸಿ ಆಯ್ಕೆಗೆ ಹೈ ಪವರ್ ಕಮಿಟಿ ನೇಮಿಸಿ ಸಲಹೆ ಪಡೆಯಬೇಕಿತ್ತು: ಪರಮೇಶ್ವರ್
ಈಶ್ವರಪ್ಪ ಬಿಜೆಪಿ ಪಕ್ಷವನ್ನು ಕಟ್ಟಿದವರು, ಯಡಿಯೂರಪ್ಪ ಜೊತೆ ಪಕ್ಷ ಕಟ್ಟಿದವರು. ಅವರನ್ನು ಕರ್ನಾಟಕದ ಅಡ್ವಾಣಿ ಎಂದು ಕರೆಯುತ್ತಿದ್ದರು. ಅಂಥವರನ್ನೇ ನೀವು ಅದ್ವಾನ ಮಾಡಿಬಿಟ್ರಲ್ಲಾ? ಅವರನ್ನು ಯಾಕೆ ಮೂಲೆ ಗುಂಪು ಮಾಡಿದ್ರಿ? ಯತ್ನಾಳ್ ಅವರನ್ನೂ ಮೂಲೆ ಗುಂಪು ಮಾಡಿದ್ರಿ. ನೀವೊಬ್ಬ ರಾಜ್ಯಾಧ್ಯಕ್ಷರು. ಪ್ರತಿದಿನ ಪತ್ರಿಕೆ ಓದಿ. ನಾಲ್ಕು ವಿಚಾರಗಳು ನಿಮಗೆ ಗೊತ್ತಾಗುತ್ತದೆ. ಅದರ ಬಗ್ಗೆ ನೀವು ಮಾತನಾಡಿ. ಅದನ್ನು ಬಿಟ್ಟು ವೈಯಕ್ತಿಕವಾಗಿ ಮಾತನಾಡುತ್ತೀರಲ್ಲ. ಬಿಎಸ್‌ವೈ ಪಕ್ಕಕ್ಕಿಟ್ಟು ನಿಮ್ಮನ್ನು ಯೋಚಿಸಿ. ನೀವು ಅಧ್ಯಕ್ಷರಾಗೋಕೆ ಸಮರ್ಥರೇ? ಶಿಸ್ತಿನ ಪಕ್ಷ ಅಂತ ನೀವು ಹೇಳ್ತೀರಲ್ಲ. ಬಿಜೆಪಿ (BJP) ಶಿಸ್ತಿನ ಪಕ್ಷವಲ್ಲ, ಕಾಂಗ್ರೆಸ್ (Congress) ಶಿಸ್ತಿನ ಪಕ್ಷ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಬಸವಕಲ್ಯಾಣ ತೆಗೆದು ಎಲ್ಲಾ ಬಸ್‌ಗಳ ಮೇಲೆ ಕ್ರೈಸ್ತ ಕಲ್ಯಾಣ ಅಂತಾ ಮಾಡುತ್ತೇನೆ: ಯಾದಗಿರಿಯಲ್ಲಿ ವ್ಯಕ್ತಿ ಕಿರಿಕ್
ನಮ್ಮಲ್ಲಿ ಯಾರಾದ್ರೂ ಅನಗತ್ಯ ಮಾತನಾಡಿದರೆ ಕಿತ್ತು ಬಿಸಾಕುತ್ತೇವೆ. ಆದರೆ ಈಶ್ವರಪ್ಪ ಮಾತನಾಡುತ್ತಿದ್ದಾರೆ. ಯತ್ನಾಳ್ ಮಾತನಾಡುತ್ತಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಂಡ್ರಾ? ಅಧ್ಯಕ್ಷರಾಗಿ ಕ್ರಮ ಜರುಗಿಸೋಕೆ ಆಗುತ್ತಾ? ನೀವು ವಿಚಾರಗಳ ಬಗ್ಗೆ ಮಾತನಾಡಿ. ನಾವು ಅದರ ಬಗ್ಗೆ ಕಿತ್ತಾಡೋಣ. ಅದು ಬಿಟ್ಟು ಕಟ್ಟಿಂಗ್ ಬಗ್ಗೆ ಮಾತನಾಡ್ತೀರಲ್ಲ. ಈಶ್ವರಪ್ಪನವರು ಹಿಂದುಳಿದ ವರ್ಗದವರು. ಅಂಥವರನ್ನೂ ನೀವು ಮೂಲೆ ಗುಂಪು ಮಾಡಿದ್ರಿ. ಇದರ ಬಗ್ಗೆ ನೀವು ಮಾತನಾಡಿ ಎಂದರು. ಇದನ್ನೂ ಓದಿ: ಪ್ರಜ್ವಲ್ ಸಲೂನ್‌ಗೆ ಹೋಗಿ ಕ್ಲೀನ್ ಆಗಿ ಬಂದಿದ್ದಾರೆ, ಇದಕ್ಕೆ ಅಮಿತ್ ಶಾ ಡೈರೆಕ್ಟರ್: ಪ್ರಿಯಾಂಕ್ ಖರ್ಗೆ ವಾಗ್ದಾಳಿ
ಮುಂಬೈ: ಟೀಂ ಇಂಡಿಯಾದ ಮಾಜಿ ನಾಯಕ ಎಂ.ಎಸ್ ಧೋನಿ (MS Dhoni) ಕಳೆದ ಒಂದೂವರೆ ದಶಕಗಳ ಕ್ರಿಕೆಟ್ ಬದುಕಿನಲ್ಲಿ ಹಲವು ಬಾರಿ ತಮ್ಮ ಹೇರ್‌ಸ್ಟೈಲ್ ಮೂಲಕವೇ ಗಮನ ಸೆಳೆದಿದ್ದಾರೆ. ಅದರಲ್ಲೂ ಟೀಂ ಇಂಡಿಯಾ (Team India) ಪ್ರವೇಶಿಸಿದ್ದ ಆರಂಭದ ದಿನಗಳಲ್ಲಿ ಹೇರ್‌ಸ್ಟೈಲ್‌ನಿಂದಲೇ ಮಹಿ ಎಲ್ಲರ ಫೇವ್‌ರೆಟ್ ಆಗಿದ್ದರು.
ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದಾಗಿನಿಂದ ಹಿಡಿದು 2007ರ ಐಸಿಸಿ ಟಿ20 ವಿಶ್ವಕಪ್ ಗೆಲ್ಲುವವರೆಗೆ ಮಹಿಯ ಉದ್ದದ ಹೇರ್‌ಸ್ಟೈಲ್ (HairStyle) ಅಭಿಮಾನಿಗಳ ಮನಗೆದ್ದಿತ್ತು. ಒಮ್ಮೆ ಭಾರತ ತಂಡವು ಪಾಕಿಸ್ತಾನ ಪ್ರವಾಸ ಮಾಡಿದ್ದಾಗ ಪಾಕಿಸ್ತಾನದ ಪ್ರಧಾನಿಯಾಗಿದ್ದ ಪರ್ವೇಜ್ ಮುಷರಫ್ ಕೂಡಾ ಧೋನಿ ಹೇರ್‌ಸ್ಟೈಲ್ ಗುಣಗಾನ ಮಾಡಿದ್ದರು. ಇದೀಗ ಧೋನಿ ಕ್ರಿಕೆಟ್ ವೃತ್ತಿಬದುಕಿನ ಸಂಧ್ಯಾಕಾಲದಲ್ಲಿದ್ದು, ಮತ್ತೊಮ್ಮೆ ಧೋನಿಯನ್ನು ಹೊಸ ಹೇರ್‌ಸ್ಟೈಲ್ ಲುಕ್‌ನಲ್ಲಿ ಕಣ್ತುಂಬಿಕೊಳ್ಳುವ ಅವಕಾಶ ಅಭಿಮಾನಿಗಳಿಗೆ ಸಿಕ್ಕಿದೆ. ಇದನ್ನೂ ಓದಿ: Asian Games 2023: ಕೊನೇ ಪ್ರಯತ್ನದಲ್ಲಿ ಗುಂಡು ಎಸೆದು ಚಿನ್ನ ಗೆದ್ದ ಗಂಡುಗಲಿ – ಭಾರತಕ್ಕೆ ಒಂದೇ ದಿನ 15 ಪದಕ
ಹೌದು. ಪ್ರಖ್ಯಾತ ಕೇಶ ವಿನ್ಯಾಸಕಾರನಾಗಿರುವ ಅಲಿಮ್ ಹಕೀಂ, ಇದೀಗ ಧೋನಿಗೆ ಮತ್ತೊಮ್ಮೆ ಹೊಸ ಹೇರ್‌ಸ್ಟೈಲ್ ಮಾಡಿದ್ದಾರೆ. ಧೋನಿ ಸಹ ಹೊಸ ಲುಕ್‌ನಲ್ಲಿ ಫೋಟೋ ಶೂಟ್ ಮಾಡಿಸಿದ್ದಾರೆ. ಇದನ್ನು ಜಾಲತಾಣದಲ್ಲಿ ಹಂಚಿಕೊಂಡಿದ್ದು, ಭಾರೀ ಸದ್ದು ಮಾಡುತ್ತಿವೆ. ಅಭಿಮಾನಿಗಳಂತೂ ಯಾರಿದೂ ಹೊಸ ಹೀರೋ ಎಂದು ಜೈಕಾರ ಹಾಕುತ್ತಿದ್ದಾರೆ.
2024ರ ಐಪಿಎಲ್‌ನಲ್ಲೂ ಆಡ್ತಾರಾ ಕೂಲ್ ಕ್ಯಾಪ್ಟನ್?
2023ರ ಐಪಿಎಲ್ ಟೂರ್ನಿಯಲ್ಲಿ ಎಂ.ಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವು 5ನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿತು. ಚೊಚ್ಚಲ ಆವೃತ್ತಿಯಲ್ಲೇ ಚಾಂಪಿಯನ್ ಆಗಿ ಹೊರಹೊಮ್ಮಿದ್ದ ಗುಜರಾತ್ ಟೈಟಾನ್ಸ್ ತಂಡವನ್ನು ಸದೆಬಡಿದು ಚಾಂಪಿಯನ್ ಪಟ್ಟಕ್ಕೇರಿತ್ತು. ಈ ಸಂದರ್ಭದಲ್ಲಿ ಮಹಿ ಐಪಿಎಲ್ ವೃತ್ತಿ ಬದುಕಿಗೂ ವಿದಾಯ ಹೇಳುವ ಸಾಧ್ಯತೆಗಳಿತ್ತು. ಆದ್ರೆ ಟ್ರೋಫಿ ಗೆದ್ದ ಬಳಿಕ ಮತ್ತೆ ಮಹಿ 2024ರ ಐಪಿಎಲ್‌ನಲ್ಲೂ ಆಡುವುದಾಗಿ ಘೋಷಣೆ ಮಾಡಿದ್ದಾರೆ. ಇದನ್ನೂ ಓದಿ: Asian Games 2023: 5000 ಮೀ. ಓಟದಲ್ಲಿ ಪಾರುಲ್ ಪ್ರಚಂಡ ಗೆಲುವು – ವನಿತೆಯರ ಬಂಗಾರದ ಬೇಟೆ
ಗಾಂಧಿನಗರ: ಬೆಂಕಿ ಹೇರ್‌ಕಟ್ಟಿಂಗ್ (Fire Haircut) ಮಾಡಿಸಿಕೊಳ್ಳಲು ಹೋಗಿ ನಿಜವಾಗಿಯೂ ಬೆಂಕಿ ಹೊತ್ತಿಕೊಂಡು, 18 ವರ್ಷದ ಹುಡುಗನೊಬ್ಬ ತಲೆ ಸುಟ್ಟುಕೊಂಡು ಆಸ್ಪತ್ರೆ (Hospital) ಸೇರಿರುವ ಘಟನೆ ಗುಜರಾತಿನ ವಲ್ಸಾದ್ ಜಿಲ್ಲೆಯ ವಾಪಿ ಪಟ್ಟಣದ ಸಲೂನ್‌ನಲ್ಲಿ ನಡೆದಿದೆ.
ಈ ಕಟ್ಟಿಂಗ್ ಮಾಡುವಾಗ 18 ವರ್ಷದ ಯುವಕನ ತಲೆಗೆ ನಿಜವಾಗಿಯೂ ಬೆಂಕಿ (Fire) ತಗುಲಿದೆ. ಬಳಿಕ ವ್ಯಕ್ತಿಯ ಕುತ್ತಿಗೆ, ಎದೆಯ ಭಾಗಕ್ಕೆ ತೀವ್ರವಾಗಿ ಬೆಂಕಿ ಹೊತ್ತಿಕೊಂಡಿದ್ದು, ಸುಟ್ಟ ಗಾಯಗಳಾಗಿವೆ. ತಕ್ಷಣ ಯುವಕನನ್ನು ವಲ್ಸಾದ ಸರ್ಕಾರಿ ಆಸ್ಪತ್ರೆಗೆ (Government Hospital) ದಾಖಲಿಸಲಾಯಿತು. ಹೆಚ್ಚುವರಿ ಚಿಕಿತ್ಸೆಗಾಗಿ ಅಲ್ಲಿಂದ ಅವರನ್ನು ಸೂರತ್‌ನ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ವಾಪಿ ಪಟ್ಟಣದ ಪೊಲೀಸ್ (Police) ಅಧಿಕಾರಿ ತಿಳಿಸಿದ್ದಾರೆ. ಇದನ್ನೂ ಓದಿ: ವಿಧಾನಸಭೆ ಚುನಾವಣೆ – ನವೆಂಬರ್ ಅಂತ್ಯಕ್ಕೆ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ?
ಮಾಹಿತಿ ಪ್ರಕಾರ, ಬೆಂಕಿ ಕ್ಷೌರಕ್ಕಾಗಿ ತಲೆಯ ಮೇಲೆ ಕೆಲವು ರೀತಿಯ ರಾಸಾಯನಿಗಳನ್ನು (chemical) ಸಿಂಪಡಿಸಿದ್ದ, ಹಾಗಾಗಿ ತಲೆಗೆ ಬೆಂಕಿ ಹೊತ್ತಿಸಿದ ತಕ್ಷಣ ಅದು ಕುತ್ತಿಗೆ ಹಾಗೂ ಎದೆಯ ಭಾಗಕ್ಕೂ ವ್ಯಾಪಿಸಿದೆ.
ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವ ಪೊಲೀಸರು, ಬೆಂಕಿ ಕ್ಷೌರಕ್ಕೆ ಯಾವ ರಾಸಾಯನಿಕ ಬಳಸಲಾಗಿದೆ ಎಂಬುದನ್ನು ಕಂಡುಹಿಡಿಯಲು ತನಿಖೆ ನಡೆಸುತ್ತಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.
Live Tv
[brid partner=56869869 player=32851 video=960834 autoplay=true]
ಹಲವಾರು ವರ್ಷಗಳಿಂದಲೂ ಬಾಬಿ ಪಿನ್‌ಗಳು (Bobby Pin) ಬಳಕೆಯಲ್ಲಿದೆ. ಅದರಲ್ಲಿಯೂ ಕಡಿಮೆ ಬೆಲೆಗೆ ಸಿಗುವ ಈ ಕಪ್ಪು ಬಣ್ಣದ ಪಿನ್ ನಿಮ್ಮಕೂದಲು ಅಂಟಿಕೊಳ್ಳದೇ ಇರುವಂತೆ ಮತ್ತು ದೊಡ್ಡದಾದ ಬನ್‌ಗಳನ್ನು ಧರಿಸಲು ಸಹಾಯಕರವಾಗಿದೆ. ಸಾಮಾನ್ಯವಾಗಿ ಕೇಶ ವಿನ್ಯಾಸಕರು ತಮ್ಮ ಮಾಡೆಲ್‌ಗಳಿಗೆ(Models) ಹೇರ್‌ಸ್ಟೈಲ್ ಮಾಡಲು ಟ್ರೆಂಡಿಯಸ್ಟ್ ಹೇರ್ ಆಕ್ಸೆಸರೀಸ್(Hair Accessories) ಬಳಸಲು ಇಷ್ಟಪಡುತ್ತಾರೆ. ಅವುಗಳಲ್ಲಿ ಅವುಗಳಲ್ಲಿ ಬಾಬಿ ಪಿನ್‌ಗಳು ಕೂಡ ಒಂದು.
ಬಾಬಿ ಪಿನ್‌ಗಳಲ್ಲಿ ಈಗ ಹಲವಾರು ಶೈಲಿಯ ವಿವಿಧ ಸೈಜ್, ಡಿಸೈನ್ ಮತ್ತು ಕಲರ್‌ಗಳು ಲಭ್ಯವಿದೆ. ಇದು ಕೂದಲನ್ನು ಸುರಕ್ಷಿತವಾಗಿ ಇರಿಸುವುದರ ಜೊತೆಗೆ ಸುಂದರವಾಗಿ ಕಾಣಿಸಲು ಸಹಾಯಕವಾಗಿದೆ. ಬಾಬಿ ಪಿನ್‌ಗಳ ಡಿಸೈನ್ ಕುರಿತಂತೆ ಒಂದಷ್ಟು ಮಾಹಿತಿ ಈ ಕೆಳಗಿನಂತಿದೆ. ಇದನ್ನೂ ಓದಿ: ತಾಲಿಬಾನ್ ತರಬೇತಿ ವೇಳೆ ಹೆಲಿಕಾಪ್ಟರ್ ಪತನ – ಮೂವರು ಸಾವು
ಲವ್ ಟ್ರಯಾಂಗಲ್ ಬಾಬಿ ಪಿನ್ ವಿನ್ಯಾಸ
ನಿಮ್ಮ ಮನೆ ಕೆಲಸ ಅಥವಾ ಗಂಡನ ಅಗತ್ಯತೆಗಳನ್ನು ಪೂರೈಸುವುದರಲ್ಲಿಯೇ ಬೆಳಗ್ಗಿನಿಂದ ರಾತ್ರಿವರೆಗೂ ನೀವು ಸುಸ್ತಾಗಿ ಹೋಗಿರುತ್ತೀರಾ. ಈ ನಡುವೆ ನಿಮಗೂ ಕೊಂಚ ಬಿಡುವು ಮಾಡಿಕೊಳ್ಳಬೇಕಾಗುತ್ತದೆ. ಹಲವಾರು ಡಿಸೈನ್‌ಗಳ ಟ್ರಯಾಂಗಲ್ ಬಾಬಿ ಪಿನ್ (Triangle Bobby Pin) ನಿಮ್ಮ ಲುಕ್ ಚೇಂಜ್ ಮಾಡುವುದರ ಜೊತೆಗೆ ಕೂದಲನ್ನು ಸುರಕ್ಷಿತವಾಗಿರಿಸುತ್ತದೆ. ಇದನ್ನು ನೀವು ಎಲ್ಲಿ ಬೇಕೂ ಅಲ್ಲಿ ಸಿಕ್ಕಿಸಿಕೊಳ್ಳಬಹುದಾಗಿದೆ.
ಬ್ರೈಡ್ ಎನ್ಸೆಂಬಲ್ ಬಾಬಿ ಪಿನ್‌ಗಳು (Bride’s Ensemble Bobby Pin)
ಮದುವೆ ವೇಳೆ ಎಲ್ಲದರಲ್ಲಿಯೂ ಪರ್ಫೆಕ್ಟ್ ಬಯಸುವ ನೀವು ನಿಮ್ಮ ಕೂದಲಿಗೆ ಧರಿಸುವ ಹೇರ್ ಪಿನ್ ಚೆನ್ನಾಗಿ ಕಾಣಿಸಬೇಕು ಎಂದು ಬಯಸಿದರೆ, ಸಖತ್ ಕ್ಯೂಟ್ ಆಗಿರುವ ಬಿಳಿ ಮುತ್ತಿನ ಬಾಬಿ ಪಿನ್‌ಗಳನ್ನುಧರಿಸುವುದರ ಬಗ್ಗೆ ಯೋಚಿಸಿ. ಇದು ನೋಡಲು ಚಿಕ್ಕದಾಗಿದ್ದು, ನಿಮಗೆ ಟ್ರೆಂಡಿ ಲುಕ್ ನೀಡುತ್ತದೆ.
ಜೆಮ್ಸ್‌ಸ್ಟೋನ್ ಬಾಬಿ ಪಿನ್‌ಗಳು (Gemstone Bobby Pin)
ವರ್ಣರಂಜಿತ, ಟ್ರೆಂಡಿ ಮತ್ತು ತುಂಬಾ ದಪ್ಪದಾಗಿರುವ ರತ್ನದ ಬಾಬಿ ಪಿನ್‌ಗಳು ನೀವು ಯಾವ ಡ್ರೆಸ್ ಜೊತೆ ಧರಿಸಿದರು ಮ್ಯಾಚ್ ಆಗುತ್ತದೆ. ಫರ್ಮಲ್ಸ್‌ನಿಂದ ಹಿಡಿದು ದಿನ ನಿತ್ಯ ಧರಿಸುವ ಉಡುಪುಗಳವರೆಗೂ ಇದು ನಿಮಗೆ ಬೆಸ್ಟ್ ಲುಕ್ ನೀಡುತ್ತದೆ.
ಪೀಕಾಕ್ ಬಾಬಿ ಪಿನ್‌ಗಳು (peacock bobby pin)
ನವಿಲುಗರಿಯಿಂದ ವಿನ್ಯಾಸಗೊಳಿಸಿರುವ ಈ ಬಾಬಿ ಪಿನ್‌ಗಳು ಪಾರ್ಟಿ ವೇಳೆ ಧರಿಸಲು ಉತ್ತಮವಾಗಿರುತ್ತದೆ. ಅಲ್ಲದೇ ಟ್ರೆಡಿಷನಲ್ ಡ್ರೆಸ್‌ಗಳ ಜೊತೆಗೆ ಕೂಡ ಧರಿಸಬಹುದಾಗಿದೆ. ಇದನ್ನೂ ಓದಿ: ಚಿಕ್ಕಬಳ್ಳಾಪುರ, ರಾಯಚೂರಲ್ಲಿ ಟ್ರ್ಯಾಕ್ಟರ್ ಹೆಸರಲ್ಲಿ ರೈತರಿಗೆ ಮೋಸ
Live Tv
[brid partner=56869869 player=32851 video=960834 autoplay=true]
ಕೂದಲಿನ ವಿಷಯಕ್ಕೆ ಬಂದಾಗ ನೀವು ಕ್ಯೂಟ್ ಅಥವಾ ಆಕರ್ಷಕವಾಗಿ ಕಾಣಿಸಲು ಹೆಚ್ಚಿನ ಆ್ಯಕ್ಸಸರಿ ಆಯ್ಕೆಯನ್ನು ಹೊಂದಿರಬೇಕಾಗುತ್ತದೆ. ಪ್ರತಿ ಹುಡುಗಿಯರೂ ಹೊಂದಬೇಕಾದ ಕೆಲವು ಮುದ್ದಾದ ಕೂದಲಿನ ಆ್ಯಕ್ಸಸರೀಸ್ ಪಟ್ಟಿ ಇಲ್ಲಿವೆ.
ಕೂದಲಿನ ಆ್ಯಕ್ಸಸರೀಸ್ ಯಾವಾಗಲಾದರೋ ಬಳಸಿದರೇನೇ ಚಂದ. ನಿಮ್ಮ ದಿನನಿತ್ಯದ ನೋಟಕ್ಕಿಂತಲೂ ಯಾವಾಗಲಾದರೂ ಒಮ್ಮೆ ಬಳಸಿದಾಗ ನಿಮ್ಮ ಸಂಪೂರ್ಣ ಲುಕ್ ಬದಲಾದಂತೆ ಹಾಗೂ ಮುದ್ದಾಗಿ ಕಾಣಿಸುವಂತೆ ಮಾಡುತ್ತದೆ. ನಿಮ್ಮ ಡೈಲಿ ಲುಕ್‌ಗಿಂತಲೂ ಭಿನ್ನವಾಗಿ ಕಾಣಿಸಲು ಕೂದಲಿನ ಪರಿಕರಗಳು ಉಪಯುಕ್ತ. ಕೂದಲಿನ ಆ್ಯಕ್ಸಸರೀಸ್ ಯಾವುದೇ ಸಮಯದಲ್ಲೂ ನಿಮ್ಮ ನೋಟವನ್ನು ಕಂಡಿತಾ ಹೆಚ್ಚಿಸುತ್ತದೆ. ನೀವು ಭಿನ್ನವಾಗಿ ಕಾಣಿಸಬೇಕೆಂದರೆ ಹೊಂದಿರಲೇ ಬೇಕಾದ ಕೆಲವು ಕ್ಯೂಟ್ ಕ್ಯೂಟ್ ಆ್ಯಕ್ಸಸರಿಗಳನ್ನು ನೋಡೋಣ.
ಬಕೆಟ್ ಹ್ಯಾಟ್:
ಮೀನುಗಾರರು ಬಳಸುವ ಟೋಪಿಯಂತೆ ಕಾಣಿಸುತ್ತಾದರೂ ಟ್ರೆಂಡಿಯಾಗಿರುವ, ಹಲವು ವಿನ್ಯಾಸಗಳಲ್ಲಿ ಬರುವ ಬಕೆಟ್ ಹ್ಯಾಟ್ ನಿಮ್ಮ ದೈನಂದಿನ ಲುಕ್‌ಗಿಂತಲೂ ವಿಭಿನ್ನವಾಗಿ ಕಾಣಿಸುವಂತೆ ಮಾಡುತ್ತದೆ. ಇವು 90ರ ದಶಕದ ಫ್ಯಾಶನ್ ಆಗಿದ್ದರೂ ಓಲ್ಡ್ ಈಸ್ ಗೋಲ್ಡ್ ಎಂಬಂತೆ ಆಕರ್ಷಕ ನೋಟವನ್ನು ಪಡೆಯಲು ಸಾಧ್ಯವಿದೆ. ಟೋಪಿ ಮೊದಲ ಬಾರಿ ಬಳಸುವಾಗ ಚೆನ್ನಾಗಿ ಕಾಣಿಸಲ್ಲ ಎನಿಸಿದರೂ ಒಮ್ಮೆ ಟ್ರೈ ಮಾಡಿ ನೋಡಿ. ಇದನ್ನೂ ಓದಿ: ನಿಮ್ಮ ಫೇಸ್‌ಕಟ್‌ಗೆ ಸರಿಯಾದ ಹೇರ್‌ಸ್ಟೈಲ್ ಇರಲಿ
ಹೆಡ್‌ಬ್ಯಾಂಡ್:
ಹೆಡ್‌ಬ್ಯಾಂಡ್‌ಗಳು ಇತ್ತೀಚೆಗೆ ಹೆಚ್ಚಿನ ಜನಪ್ರಿಯತೆ ಹೊಂದಿದೆ. ಹೆಚ್ಚಾಗಿ ಹೆಡ್ ಬ್ಯಾಂಡ್‌ಗಳನ್ನು ತಲೆಯ ಕೂದಲು ಮುಖಕ್ಕೆ ಬರಬಾರದು ಎಂಬ ಕಾರಣಕ್ಕೆ ಬಳಸುತ್ತಾರೆ. ಇದೀಗ ಮಾರುಕಟ್ಟೆಗಳಲ್ಲಿ ವಿಭಿನ್ನ ಶೈಲಿಯ ಹೆಡ್ ಬ್ಯಾಂಡ್‌ಗಳು ಲಭ್ಯವಿದೆ. ಕೇವಲ ಕೂದಲು ಮುಖಕ್ಕೆ ಬೀಳಬಾರದು ಎಂದು ಬಳಸುವುದಕ್ಕಿಂತಲೂ ಟ್ರೆಂಡಿ ಎಂಬ ಕಾರಣಕ್ಕೂ ಬಳಸಬಹುದು. ಇವು ನಿಮ್ಮನ್ನು ಮಕ್ಕಳಂತೆ ಮುದ್ದಾಗಿ ಕಾಣಿಸುವಂತೆ ಮಾಡಲು ಸಹಾಯ ಮಾಡುತ್ತದೆ.
ಸ್ಕಾರ್ಫ್:
ಅತ್ಯಂತ ಬ್ಯುಸಿ ಲೈಫ್ ಅಥವಾ ಜನನಿಬಿಡ ಪ್ರದೇಶಗಳಲ್ಲಿ ದಿನ ಕಳೆಯುತ್ತಿದ್ದಿರಿ ಎಂದಾದರೆ ಪೋನಿ ಟೇಲ್ ಹೇರ್ ಸ್ಟೈಲ್ ಯಾವಾಗಲೂ ಆಯ್ಕೆ ಮಾಡಬಹುದಾದ ಸುಲಭದ ಕೇಶ ವಿನ್ಯಾಸ. ಆದರೆ ಪ್ರತೀ ದಿನ ಪೋನಿ ಟೇಲ್ ಹಾಕಿಕೊಳ್ಳುತ್ತಿದ್ದೀರಿ ಎಂದರೆ ಅದಕ್ಕೆ ಸ್ವಲ್ಪ ಸೊಬಗು ನೀಡಲು ಸ್ಕಾರ್ಫ್ ಕಟ್ಟಿಕೊಳ್ಳಬಹುದು. ಪೋನಿ ಟೇಲ್ ಸುಲಭ ಹಾಗೂ ತಕ್ಷಣವೇ ಕಟ್ಟಿಕೊಳ್ಳಬಹುದು ಹಾಗೂ ಅದು ನಿಮ್ಮನ್ನು ಎಂತಹ ಸ್ಥಳಗಳಲ್ಲೂ ಕಂಫರ್ಟೇಬಲ್ ಆಗಿ ಇರಿಸುತ್ತದೆ. ಅದರ ಮೇಲೆಯೇ ಒಂದು ಸಣ್ಣ ಸ್ಕಾರ್ಫ್ ಮೂಲಕ ಗಂಟು ಹಾಕಿದರೆ, ದಿನನಿತ್ಯದ ಲುಕ್‌ಗಿಂತಲೂ ಭಿನ್ನವಾಗಿ ತೊರುತ್ತೀರಿ. ಇದನ್ನೂ ಓದಿ: ಇಂಡಿಯನ್ ಸ್ಕಿನ್ ಟೋನ್‌ಗೆ ಈ ಬಣ್ಣದ ಲಿಪ್‌ಸ್ಟಿಕ್‌ಗಳು ಬೆಸ್ಟ್
ಹೇರ್ ಪಿನ್:
ನೀವು 90ರ ದಶಕದ ಫ್ಯಾಶನ್ ಅನ್ನು ಮತ್ತೆ ಟ್ರೈ ಮಾಡಲು ಬಯಸಿದರೆ ಹೇರ್ ಪಿನ್‌ಗಳು ಹೆಚ್ಚು ಸಹಾಯಕವಾಗಿವೆ. ನಿಮ್ಮ ಮುದ್ದಾದ ಡ್ರೆಸ್‌ಗಳಿಗೆ ಮ್ಯಾಚ್ ಮಾಡಿಕೊಂಡು, ಭಿನ್ನ ವಿಭಿನ್ನ ಶೈಲಿಯ ಹೂವಿನ, ಚಿಟ್ಟೆಯ ಅಥವಾ ಇನ್ನಿತರ ಡಿಸೈನ್‌ನಲ್ಲಿ ಹೇರ್ ಪಿನ್‌ಗಳನ್ನು ಆಯ್ದುಕೊಳ್ಳಬಹುದು.
ಹೂವಿನ ಕಿರೀಟ:
ಪುಟ್ಟ ಪುಟ್ಟ ಗಾತ್ರದ, ಬಣ್ಣ ಬಣ್ಣದ ಹೂವುಗಳಿರುವ ಬಳ್ಳಿಯ ಕಿರೀಟ ಅಪರೂಪದ ನೋಟಕ್ಕೆ ಮೆರುಗು ನೀಡುತ್ತದೆ. ತಿಳಿ ಬಣ್ಣದ ಫ್ರಾಕ್ ಅಥವಾ ಯಾವುದೇ ಹಗುರ ಬಟ್ಟೆಗಳೊಂದಿಗೆ ವಿಶೇಷ ಪ್ರವಾಸದ ಸಂದರ್ಭ ಮ್ಯಾಚ್ ಮಾಡಿಕೊಂಡು ಹೋಗಬಹುದು.
ನೀವು ಕೂದಲು ಕತ್ತರಿಸಲು ನಿರ್ಧರಿಸಿದಾಗ ಮೊದಲು ಯೋಚಿಸುವುದೇ ಚೆನ್ನಾಗಿ ಕಾಣಿಸಬೇಕು ಎಂದು. ಆದರೆ ನಿಮ್ಮ ಮೂದಲು ಕತ್ತರಿಸುವುದಕ್ಕೂ ಮೊದಲು ಗಮನಹರಿಸಬೇಕಿರುವುದು, ಹೇರ್‌ಕಟ್ ನಿಮ್ಮ ಮುಖಕ್ಕೆ ಹೊಂದುತ್ತದೆಯೇ ಇಲ್ಲವೇ ಎಂಬುದು.
ಹೇರ್ ಸ್ಟೈಲಿಸ್ಟ್‌ಗಳು ನಿಮ್ಮ ಹೇರ್ ಕಟ್ ಮಾಡುವಾಗ ಹಲವು ಆಯ್ಕೆಗಳನ್ನು ನೀಡುತ್ತಾರೆ. ಯಾವುದೋ ಟ್ರೆಂಡಿ ಎನ್ನುವುದಕ್ಕಿಂತ ಮುಖದ ಆಕಾರಕ್ಕೆ ಹೊಂದುವ ಶೇಪ್ ಕೊಡಿಸುವುದೇ ಉತ್ತಮ ಅಲ್ವಾ? ನಿಮ್ಮ ಮುಖದ ಆಕಾರ ಹೇಗೆಯೇ ಇರಲಿ. ಆದರೆ ಕೂದಲು ಕತ್ತರಿಸಿದ ಬಳಿಕ ಅದರ ಫಲಿತಾಂಶ ಆಕರ್ಷಕವಾಗಿರಬೇಕು ಹಾಗೂ ಮುಖ ಆದಷ್ಟು ಸ್ಲಿಮ್ ಆಗಿ ಕಾಣಿಸಬೇಕು ಎಂದೇ ಹೆಚ್ಚಿನವರು ಭಾವಿಸುತ್ತಾರೆ.
ಯಾವುದೋ ಹೇರ್ ಕಟ್ ಮಾಡಿಸುವುದಕ್ಕಿಂತಲೂ ಮೊದಲು ಸ್ವಲ್ಪ ಯೋಚಿಸಿ. ಕೆಲವರ ಸಲಹೆ ತಿಳಿದು ಬಳಿಕ ನಿಮ್ಮ ಕೂದಲು ಕತ್ತರಿಸಲು ಮುಂದಾಗಿ. ನಿಮ್ಮ ಮುಖದ ಶೇಪ್‌ಗೆ ಅನುಗುಣವಾಗಿ ಯಾವ ರೀತಿ ಹೇರ್‌ಸ್ಟೈಲ್ ಮಾಡಬಹುದೆಂಬ ಕೆಲವು ಟಿಪ್ಸ್ ಇಲ್ಲಿವೆ.
ಬ್ಯಾಂಗ್ಸ್:
ಎತ್ತರದ ಹಣೆ ಅಥವಾ ಅಗಲವಾದ ಕೆನ್ನೆ ಹೊಂದಿರುವವರಿಗೆ ಬ್ಯಾಂಗ್ಸ್ ಅತ್ಯುತ್ತಮ ಆಯ್ಕೆ. ಹಣೆಯ ವಿಶಾಲ ಭಾಗವನ್ನು ಮುಚ್ಚಲು ಹುಬ್ಬಿನವರೆಗಿನ ಬ್ಯಾಂಗ್ಸ್ ಸಹಾಯ ಮಾಡಿದರೆ, ಕೆನ್ನೆಯ ವಿಶಾಲ ಭಾಗವನ್ನು ಮರೆಮಾಚಲು ಕಿವಿವರೆಗಿನ ಉದ್ದದ ಬ್ಯಾಂಗ್ಸ್ ಸಹಾಯ ಮಾಡುತ್ತದೆ. ಇಲ್ಲಿವರೆಗೂ ನೀವು ಬ್ಯಾಂಗ್ಸ್ ಕಟ್ ಟ್ರೈ ಮಾಡಿಲ್ಲವೆಂದರೆ ಮಾರುಕಟ್ಟೆಗಳಲ್ಲಿ ನಕಲಿ ಬ್ಯಾಂಗ್ಸ್‌ಗಳು ಲಭ್ಯವಿರುತ್ತವೆ. ಅವುಗಳನ್ನು ಒಮ್ಮೆ ಟ್ರೈ ಮಾಡಿ. ನಿಮ್ಮ ಫೇಸ್ ಕಟ್‌ಗೆ ಸೂಟ್ ಆಗುತ್ತೋ ಇಲ್ಲವೋ ಎಂಬುದನ್ನು ಖಾತ್ರಿಪಡಿಸಿ, ಕೊನೆಗೆ ಕತ್ತರಿಸುವ ಬಗ್ಗೆ ನಿರ್ಧಾರ ಮಾಡಿ. ಇದನ್ನೂ ಓದಿ: ಇಂಡಿಯನ್ ಸ್ಕಿನ್ ಟೋನ್‌ಗೆ ಈ ಬಣ್ಣದ ಲಿಪ್‌ಸ್ಟಿಕ್‌ಗಳು ಬೆಸ್ಟ್
ಬಾಬ್:
ಎತ್ತರದ ಕೆನ್ನೆ ಮೂಳೆ ಹಾಗೂ ಮೊನಚಾದ ಗಲ್ಲವನ್ನು ನೀವು ಹೊಂದಿದ್ದರೆ, ಭುಜದ ವರೆಗೆ ಬರುವ ಬಾಬ್ ಕಟ್ ನಿಮಗೆ ಬೆಸ್ಟ್. ಈ ಮುಖದ ಆಕರ ನಿಮ್ಮ ಭುಜದ ವರೆಗೆ ಬರುವ ಕೂದಲಿನೊಂದಿಗೆ ಜೋಡಿಸಿದರೆ, ಉತ್ತಮವಾಗಿ ಕಾಣಿಸುತ್ತದೆ. ಮುಖ್ಯವಾಗಿ ನೀವು ಜನರ ಗಮನವನ್ನು ನಿಮ್ಮ ಗಲ್ಲದ ಕಡೆಗೆ ಸೆಳೆಯಲು ಬಯಸುವುದಿಲ್ಲ ಎಂದಾದಲ್ಲಿ ಈ ಕಟ್ ನಿಮಗೆ ಸೂಕ್ತ. ಇದನ್ನೂ ಓದಿ: ಮದುವೆ ಸಮಾರಂಭಗಳಿಗೆ ವಿಭಿನ್ನ ಶೈಲಿಯ ಪೇಟ-ಪರಂಪರೆಯ ಕಿರೀಟ
ದುಂಡು ಮುಖಕ್ಕೆ ಈ ಕಟ್ ಬೆಸ್ಟ್:
ನೀವು ದುಂಡು ಮುಖ ಹೊಂದಿದ್ದೀರಾ? ನಿಮ್ಮ ಮುಖವನ್ನು ಉದ್ದವಾಗಿ ಕಾಣಿಸುವಂತೆ ಮಾಡಲು, ದುಂಡು ಮುಖದ ಅಗಲವನ್ನು ಕಡಿಮೆ ಮಾಡುವುದು ಅಗತ್ಯ. ಇದಕ್ಕಾಗಿ ಉದ್ದವಾದ ಬಾಬ್ ಕಟ್ ಸೂಕ್ತ. ಈ ಕಟ್ ನಿಮ್ಮ ಮುಖವನ್ನು ಸ್ಲಿಮ್ ಆಗಿ ಕಾಣಿಸುವಂತೆ ಮಾಡುತ್ತದೆ. ಕೂದಲ ಕೊನೆಯಲ್ಲಿ ಕೊಂಚ ಕರ್ಲ್ ಇದ್ದಲ್ಲಿ ಪರ್ಫೆಕ್ಟ್ ಲುಕ್ ನಿಮ್ಮದಾಗುತ್ತದೆ. ಏಕೆಂದರೆ ಕೂದಲ ಕೆಳಭಾಗದ ವಕ್ರತೆ ನಿಮ್ಮ ಕೆನ್ನೆಯ ಅಗಲವನ್ನು ಮರೆಮಾಚಲು ಸಹಾಯ ಮಾಡುತ್ತದೆ.
ನೀವು ಯಾವುದೇ ಮುಖದ ಆಕಾರವನ್ನು ಹೊಂದಿದ್ದರೂ ಕೊನೆಯದಾಗಿ ಕೂದಲು ಕತ್ತರಿಸುವಾಗ ಅದಕ್ಕೆ ಹೊಂದುವಂತಹ ಆಕಾರದಲ್ಲಿ ಕತ್ತರಿಸುವುದೇ ಸೂಕ್ತ. ನಿಮ್ಮ ಮುಖಕ್ಕೆ ಹೊಂದಿಕೊಳ್ಳುವ ಹೇರ್ ಕಟ್‌ಗಳು ನಿಮ್ಮಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುವಲ್ಲಿ ಸಹಾಯ ಮಾಡುತ್ತದೆ. ಆದ್ದರಿಂದ ನಿಮ್ಮ ಕೂದಲ ವಿನ್ಯಾಸದ ಬಳಿಕ ಅದನ್ನು ಹೆಮ್ಮೆಯಿಂದ ಇರಿಸಿಕೊಳ್ಳಿ.
ಬದಲಾದ ಹವಮಾನದಿಂದಾಗಿ ಹುಡುಗರ ಹೇರ್‌ಸ್ಟೈಲ್ ಹಾಳಾಗುತ್ತದೆ. ಕೆಲವೊಂದು ಕ್ರಮಗಳನ್ನು ಅನುಸರಿಸಿದಲ್ಲಿ ನಾನಾ ಬಗೆಯ ಹೇರ್‌ಸ್ಟೈಲ್ ಮ್ಯಾನೇಜ್ ಮಾಡಬಹುದು. ಹಾಗೆಯೇ ಸೀಸನ್‍ನ ಸಂತಸಕ್ಕೆ ಸಾಥ್ ನೀಡುವ ಹುಡುಗರ ನಾನಾ ಬಗೆಯ ಹೇರ್‌ಸ್ಟೈಲ್ ಕಾಳಜಿ ಬಗ್ಗೆ ಇಲ್ಲಿದೆ ಸರಳ ಮಾಹಿತಿ.
ಜೆಲ್ ಕಡಿಮೆ ಬಳಸಿ
ಚಳಿಗಾಲದಲ್ಲಿ ಸಾಧ್ಯವಾದಷ್ಟು ಕೂದಲಿಗೆ ಕಡಿಮೆ ಹೇರ್‌ಜೆಲ್ ಬಳಸಿ. ಇದು ಕೂದಲನ್ನು ಮತ್ತಷ್ಟು ಒರಟಾಗಿಸುವುದನ್ನು ತಡೆಯುತ್ತದೆ. ಅನಿವಾರ್ಯತೆ ಎನಿಸಿದಾಗ ಮಾತ್ರ ಬಳಸಿ. ಪ್ರತಿನಿತ್ಯ ಬಳಸುವುದನ್ನು ಕಡಿಮೆ ಮಾಡಿ. ಎಕ್ಸ್‌ಪೈರಿ ಡೇಟ್ ನೋಡಿಕೊಂಡು ಬಳಸಿದರೆ ಉತ್ತಮ.
ವಾರಕ್ಕೊಮ್ಮೆ ತಲೆಗೆ ಎಣ್ಣೆ ಹಚ್ಚಿ
ಹುಡುಗರೂ ಕೂಡ ಕೂದಲ ಬಗ್ಗೆ ಕಾಳಜಿ ವಹಿಸಿದಾಗ ಮಾತ್ರ, ಅವರಿಗೆ ಬೇಕಾದ ಹೇರ್‌ಸ್ಟೈಲ್‌ಲನ್ನು ಮಾಡಿಕೊಳ್ಳಬಹುದು. ವಾರಕ್ಕೊಮ್ಮೆ ಕೊಬ್ಬರಿ ಅಥವಾ ಹರಳೆಣ್ಣೆಯನ್ನು ಸಮ ಪ್ರಮಾಣದಲ್ಲಿ ಮಿಶ್ರಣ ಮಾಡಿಕೊಂಡು ಹಚ್ಚಿಕೊಂಡರೆ ದೇಹ ಕೂಡ ತಂಪಾಗುತ್ತದೆ. ಕೂದಲು ಆರೋಗ್ಯಯುತವಾಗಿರುತ್ತದೆ.
ಹೆಲ್ಮೆಟ್ ಧರಿಸಿದಾಗ
ಪ್ರತಿನಿತ್ಯ ಹೆಲ್ಮೆಟ್ ಧರಿಸುವುದರಿಂದ ಯಾವುದೇ ಹೇರ್‌ಸ್ಟೈಲ್ ಮಾಡಿಕೊಂಡರೂ ಹಾಳಾಗಿ ಹೋಗುತ್ತದೆ. ಆದ್ದರಿಂದ ಹುಡುಗರು ಮನೆಯಿಂದ ಹೊರಡುವಾಗ ಜೊತೆಯಲ್ಲಿ ಕಾಟನ್ ಕ್ಲಾತನ್ನು ತಲೆಯ ಸುತ್ತ ಕಟ್ಟಿ. ನಂತರ ಹೆಲ್ಮೆಟ್ ವೇರ್ ಮಾಡಿ. ನೀವು ಸ್ಥಳವನ್ನು ತಲುಪಿದ ನಂತರ ಕ್ಲಾತ್ ತೆಗೆಯಿರಿ. ಸಾಧ್ಯವಾದಲ್ಲಿ ಬಾಚಿ ಕೊಳ್ಳಿ.
ಧ್ಯಾನ ಮಾಡಿ
ಇಂದಿನ ಬಿಝಿ ಲೈಫ್‍ನಲ್ಲಿ ಪದೇ ಪದೇ ಟೆನ್ಷನ್ ತೆಗೆದುಕೊಳ್ಳುವುದರಿಂದ ಕೂದಲು ಉದುರಿ, ಮಧ್ಯ ವಯಸ್ಸಿನಲ್ಲಿಯೇ ಬೋಳಾಗುತ್ತದೆ. ಆದ್ದರಿಂದ ಬೆಳಗ್ಗೆ ಕನಿಷ್ಟ 20 ನಿಮಿಷವಾದರೂ ಧ್ಯಾನ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ. ಇದರಿಂದ ನರಗಳು ಬಲಿಷ್ಟಗೊಳ್ಳುವುದರಿಂದ ಆರೋಗ್ಯ, ಆಯಸ್ಸು, ಸೌಂದರ್ಯ ಎಲ್ಲ ವೃದ್ಧಿಸುತ್ತದೆ. ಕೂದಲು ಕೂಡ ಉದುರುವುದು ನಿಲ್ಲುತ್ತದೆ.
ದಾಸವಾಳ ಬಳಕೆ
ದಾಸವಾಳದ ಬಳಕೆಯಿಂದ ಕೂದಲು ಉದುರುವುದು ಕಡಿಮೆಯಾಗುತ್ತದೆ. ಜೊತೆಗೆ ಉದ್ದ ಹಾಗೂ ಕಾಂತಿಯತವಾಗಿ ಬೆಳೆಯುತ್ತದೆ. 15 ದಿನಕ್ಕೊಮ್ಮೆಯಾದರೂ ದಾಸವಾಳವನ್ನು ತಲೆಗೆ ಹಚ್ಚಿಕೊಂಡಾಗ ನಮಗೆ ಬೇಕಾದ ರೀತಿಯಲ್ಲಿ ಸೆಟ್ ಮಾಡಿಕೊಳ್ಳಲು ಸುಲಭವಾಗುತ್ತದೆ. ಇದೇ ಕಾರಣಕ್ಕಾಗಿ ದಾಸವಾಳವನ್ನು ಆಯುರ್ವೇದ ಶಾಂಪೂ ಅಥವಾ ಕೂದಲಿಗೆ ಉಪಯೋಗಿಸುವ ಎಣ್ಣೆಯಲ್ಲಿ ಪ್ರಮುಖವಾಗಿ ಬಳಸಲಾಗುತ್ತದೆ.
ಟೋಕಿಯೋ: ಹುಡುಗಿಯರಿಗೆ ಹೆಚ್ಚು ಸುಲಭ ಹಾಗೂ ಆರಾಮ ಎನಿಸುವ ಕೇಶವಿನ್ಯಾಸವೆಂದರೆ ಪೋನಿಟೇಲ್. ನೀಳವಾದ ಕೂದಲಿದ್ದೂ ಪೋನಿಟೇಲ್ ಹಾಕದಿರುವ ಮಹಿಳೆ ಇರಲು ಸಾಧ್ಯವೇ ಇಲ್ಲ. ಹೀಗಿರುವಾಗ ಜಪಾನ್ ದೇಶದ ಶಾಲೆಗಳಲ್ಲಿ ಪೋನಿಟೇಲ್ ಹೇರ್ ಸ್ಟೈಅನ್ನು ಬ್ಯಾನ್ ಮಾಡಲಾಗಿದೆ. ಇದಕ್ಕೆ ಕಾರಣ ಇಲ್ಲಿದೆ.
ಮಹಿಳೆಯರ ಕತ್ತಿನ ಭಾಗ ಪುರುಷರಿಗೆ ಹೆಚ್ಚಿನ ಲೈಂಗಿಕ ಪ್ರಚೋದನೆ ನೀಡುತ್ತದೆ. ಮಹಿಳೆಯರು ಪೋನಿಟೇಲ್ ಹಾಕಿಕೊಂಡಲ್ಲಿ ಕತ್ತು ಸಂಪೂರ್ಣವಾಗಿ ಕಾಣಿಸಿಕೊಳ್ಳುತ್ತದೆ ಎಂಬ ಕಾರಣಕ್ಕೆ ಜಪಾನ್‌ನ ಶಾಲೆಗಳಲ್ಲಿ ಮಕ್ಕಳು ಪೋನಿಟೇಲ್ ಹೇರ್ ಸ್ಟೈಲ್ ಮಾಡಿಕೊಳ್ಳದಂತೆ ನಿರ್ಬಂಧ ಹೇರಲಾಗಿದೆ. ಇದನ್ನೂ ಓದಿ: ಭಾರತದ ರಫೇಲ್ ಯುದ್ಧ ವಿಮಾನ ಎದುರಿಸಲು ಚೀನಾದ ಜೆ-10ಸಿ ಫೈಟರ್ ಜೆಟ್ ಖರೀದಿಸಿದ ಪಾಕಿಸ್ತಾನ
ಈ ಹಿಂದೆ ಜಪಾನ್‌ನ ಪುಕುವೋಕಾ ಪ್ರದೇಶದಲ್ಲಿ ಒಂದು ಸಮೀಕ್ಷೆ ನಡೆಸಲಾಗಿತ್ತು. ಹುಡುಗಿಯರ ಕತ್ತು ಹುಡುಗರಿಗೆ ಹೆಚ್ಚು ಲೈಂಗಿಕ ಪ್ರಚೋದನೆ ನೀಡುತ್ತದೆ ಎಂಬ ವಿಚಾರ ಸಮೀಕ್ಷೆಯ ಮುಖಾಂತರ ಕಂಡುಕೊಳ್ಳಲಾಗಿತ್ತು. ಬಳಿಕ ಅಲ್ಲಿನ ಕೆಲವು ಶಾಲೆಗಳಲ್ಲಿ ಪೋನಿಟೇಲ್ ಅನ್ನು ನಿರ್ಬಂಧಿಸಲಾಗಿತ್ತು. ಅದರೊಂದಿಗೆ ಲಂಗದ ಉದ್ದ, ಸಾಕ್ಸ್ಗಳ ಬಗ್ಗೆಯೂ ನಿಯಮಗಳನ್ನು ಮಾಡಲಾಗಿತ್ತು.
ಬೆಂಗಳೂರು: ಕಿಚ್ಚ ಸುದೀಪ್ ಅವರ ಹುಟ್ಟು ಹಬ್ಬ ಹತ್ತಿರವಾಗುತ್ತಿರುವ ಹಿನ್ನೆಲೆ ಅವರ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಕಾಮನ್ ಡಿಪಿ ಹಂಚಿಕೊಳ್ಳಲು ಪ್ರಾರಂಭಿಸಿದ್ದಾರೆ. ಈ ನಡುವೆ ಸುದೀಪ್ ಅವರ ಹೊಸ ಹೇರ್ ಸ್ಟೈಲ್ ಸಖತ್ ವೈರಲ್ ಆಗುತ್ತಿದೆ.
ಕಿಚ್ಚ ಸುದೀಪ್ ಅವರು ದೊಡ್ಡ ಅಭಿಮಾನಿ ಬಳಗ ಹೊಂದಿದ್ದಾರೆ. ಅವರು ಸಿನಿಮೇತರ ವಿಚಾರಕ್ಕೂ ಆಗಾಗ ಸುದ್ದಿಯಾಗುತ್ತಿರುತ್ತಾರೆ. ಈಗ ಸುದೀಪ್ ಅವರು ಹೊಸ ಕೇಶ ವಿನ್ಯಾಸ ಮಾಡಿಸಿದ್ದಾರೆ. ಈ ಫೋಟೋ ಹಾಗೂ ವೀಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದೆ. ಇದನ್ನೂ ಓದಿ: ಹುಟ್ಟುಹಬ್ಬಕ್ಕೆ ಮೊದಲೇ ಕಿಚ್ಚನಿಗೆ ಸರ್ಪ್ರೈಸ್ ನೀಡಿದ ಕ್ರಿಕೆಟ್ ತಾರೆ ಅನಿಲ್ ಕುಂಬ್ಳೆ
ಕೋಟಿಗೊಬ್ಬ 3 ಹಾಗೂ ವಿಕ್ರಾಂತ್ ರೋಣ ಸಿನಿಮಾ ಕೆಲಸಗಳಲ್ಲಿ ಸುದೀಪ್ ಬ್ಯುಸಿ ಇದ್ದಾರೆ. ಎರಡೂ ಚಿತ್ರಗಳ ಬಹುತೇಕ ಪೂರ್ಣಗೊಂಡಿವೆ. ಕೊರೊನಾ ಕಾರಣದಿಂದ ಸಿನಿಮಾ ರಿಲೀಸ್ ದಿನಾಂಕ ಮುಂದೂಡಲ್ಪಟ್ಟಿದೆ. ಎರಡೂ ಸಿನಿಮಾಗಳಿಗಾಗಿ ಅಭಿಮಾನಿಗಳು ಕಾದು ಕೂತಿದ್ದಾರೆ. ಅಂದಹಾಗೆ ಹೊಸ ಹೇರ್ ಸ್ಟೈಲ್ ಯಾವ ಚಿತ್ರಕ್ಕಾಗಿ ಎಂಬುದು ಇನ್ನಷ್ಟೇ ತಿಳಿದು ಬರಬೇಕಿದೆ. ಇದನ್ನೂ ಓದಿ: ಸಲಾರ್ ಸಿನಿಮಾದಲ್ಲಿ ಜಗಪತಿ ಬಾಬು ಖಡಕ್ ಲುಕ್ ಧಗ ಧಗ!
ಸೆಪ್ಟೆಂಬರ್ 2ರಂದು ಅಭಿನಯಚಕ್ರವರ್ತಿಯ ಹುಟ್ಟುಹಬ್ಬ. ಈ ಹಿನ್ನೆಲೆಯಲ್ಲಿ ಹುಟ್ಟುಹಬ್ಬಕ್ಕೆ 10 ದಿನ ಮೊದಲೇ ಸಿದ್ಧವಾಗಿರುವ ಫೋಟೋ ಕೆಲವು ದಿನಗಳ ಹಿಂದೆ ವೈರಲ್ ಆಗಿತ್ತು. ಇದೀಗ ಅವರ ಹೊಸ ಹೇರ್ ಸ್ಟೈಲ್ ವೈರಲ್ ಆಗುತ್ತಿದ್ದಂತೆ ಅಭಿಮಾನಿಗಳು ಕಿಚ್ಚನ ಹೇರ್ ಸ್ಟೈಲ್‍ಗೆ ಫಿದಾ ಆಗಿದ್ದಾರೆ.