Tag: Haircut Coronavirus

  • ಕೊರೊನಾ ಎಫೆಕ್ಟ್ – ವಿರಾಟ್‍ಗೆ ಅನುಷ್ಕಾ ಹೇರ್ ಕಟಿಂಗ್

    ಕೊರೊನಾ ಎಫೆಕ್ಟ್ – ವಿರಾಟ್‍ಗೆ ಅನುಷ್ಕಾ ಹೇರ್ ಕಟಿಂಗ್

    ನವದೆಹಲಿ: ಕೊರೊನಾ ಎಫೆಕ್ಟ್‌ನಿಂದಾಗಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಪತ್ನಿ, ನಟಿ ಅನುಷ್ಕಾ ಶರ್ಮಾ ಹೇರ್ ಕಟಿಂಗ್ ಮಾಡಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ಅವರು ಕೊರೊನಾ ವೈರಸ್‍ನಿಂದಾಗಿ ದೇಶಾದ್ಯಂತ ಏಪ್ರಿಲ್ 14ರವರೆಗೆ ಲಾಕ್‍ಡೌನ್ ಘೋಷಿಸಿದ್ದಾರೆ. ಹೀಗಾಗಿ ಸಿನಿಮಾ ಸೆಲೆಬ್ರಿಟಿಗಳು, ಸ್ಟಾರ್ ಆಟಗಾರರು, ಕ್ರೀಡಾಪಟುಗಳು ಮನೆಯಲ್ಲೇ ಕಾಲ ಕಳೆಯುತ್ತಿದ್ದಾರೆ. ಈ ಪೈಕಿ ಕೆಲವರು ಕುಟುಂಬದಸ್ಥರ ಜೊತೆಗಿರುವ ಕೆಲವು ಸುಂದರ ಕ್ಷಣಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿದ್ದಾರೆ.

    ಕ್ಯೂಟ್ ಕಪಲ್ ವಿರುಷ್ಕಾ ಈ ಹಿಂದೆ ವಿಡಿಯೋ ಮೂಲಕ ಕೊರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸಿದ್ದರು. ಇಂದು ಅನುಷ್ಕಾ ಶರ್ಮಾ ಪತಿ ವಿರಾಟ್ ಅವರಿಗೆ ಹೇರ್ ಕಟಿಂಗ್ ಮಾಡುತ್ತಿರುವ ವಿಡಿಯೋವನ್ನು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿದ್ದಾರೆ.

    https://www.instagram.com/p/B-Q8gWZpYPw/

    ಈ ವಿಡಿಯೋದಲ್ಲಿ ಅನುಷ್ಕಾ ಕತ್ತರಿ ಹಿಡಿದು ವಿರಾಟ್ ಅವರ ಹೇರ್ ಕಟಿಂಗ್ ಮಾಡುತ್ತಾರೆ. ಬಳಿಕ ವಿರಾಟ್, ಪತ್ನಿ ಅನುಷ್ಕಾ ಅದ್ಭುತವಾಗಿ ಹೇರ್ ಕಟಿಂಗ್ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಅನುಷ್ಕಾ ಅವರು ಪೋಸ್ಟ್ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು ಪೋಸ್ಟ್ ಮಾಡಿದ ಒಂದು ಗಂಟೆಯಲ್ಲಿ 10 ಲಕ್ಷಕ್ಕೂ ಅಧಿನ ಜನರು ವೀಕ್ಷಿಸಿದ್ದು, ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಈ ವಿಡಿಯೋವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಟ್ವಿಟ್ ಮಾಡಿ, ಕ್ವಾರೆಂಟೈನ್ ಸಂದರ್ಭದಲ್ಲಿಯೂ ಚೆನ್ನಾಗಿ ಕಾಣುವುದಕ್ಕೆ ಒಂದು ಸಲಹೆ ಎಂದು ಬರೆದು ಟ್ವೀಟ್ ಮಾಡಿದೆ