Tag: haircut

  • ಬದಲಾಯಿತು ಲುಕ್ – ತಲೆ ಕೂದಲು, ಗಡ್ಡ ಟ್ರೀಮ್ ಮಾಡಿದ ರಾಹುಲ್ ಗಾಂಧಿ

    ಬದಲಾಯಿತು ಲುಕ್ – ತಲೆ ಕೂದಲು, ಗಡ್ಡ ಟ್ರೀಮ್ ಮಾಡಿದ ರಾಹುಲ್ ಗಾಂಧಿ

    ನವದೆಹಲಿ: ಉದ್ದ ತಲೆ ಕೂದಲು (Haircut) ಮತ್ತು ಗಡ್ಡ (Beard) ಬಿಡುವ ಮೂಲಕ ಭಾರತ್ ಜೋಡೊ ಯಾತ್ರೆಯಲ್ಲಿ ಎಲ್ಲರ ಗಮನ ಸೆಳೆದಿದ್ದ ಕಾಂಗ್ರೆಸ್ ನಾಯಕ, ಸಂಸದ ರಾಹುಲ್ ಗಾಂಧಿ (Rahul Gandhi) ತಮ್ಮ ಲುಕ್ ಬದಲಿಸಿದ್ದಾರೆ. ಕೇಂಬ್ರಿಡ್ಜ್ (Cambridge) ವಿಶ್ವವಿದ್ಯಾಲಯದಲ್ಲಿ ಉಪನ್ಯಾಸ ನೀಡಲು ಲಂಡನ್‌ಗೆ ತೆರಳಿರುವ ಅವರು ಹೊಸ ಶೈಲಿಯಲ್ಲಿ ಕಾಣಿಸಿಕೊಂಡಿದ್ದಾರೆ.

    ಭಾರತ್ ಜೋಡೊ ಯಾತ್ರೆ ಬಳಿಕವೂ ಗಡ್ಡ, ಕೂದಲಿನ ಮೂಲಕ ಹೊಸ ಟ್ರೆಂಡ್ ಹುಟ್ಟು ಹಾಕಿದ್ದ ರಾಹುಲ್ ಗಾಂಧಿ ಲಂಡನ್‌ಗೆ ತೆರಳುವ ಮುನ್ನ ಕತ್ತರಿ ಹಾಕಿದ್ದಾರೆ. ಕಟ್ಟಿಂಗ್ ಜೊತೆಗೆ ಗಡ್ಡವನ್ನು ಟ್ರೀಮ್ ಮಾಡಿದ್ದು ಮತ್ತದೇ ಅವರ ಹ್ಯಾಂಡಸಮ್ ಲುಕ್‌ಗೆ ಮರಳಿದ್ದಾರೆ.

    ರಾಹುಲ್ ಗಾಂಧಿ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ವಿಸಿಟಿಂಗ್ ಫೆಲೋ ಭಾಗಿಯಾಗಿದ್ದು ‘Learning to listen in the 21st century’ ಕುರಿತು ಉಪನ್ಯಾಸ ನೀಡಿದ್ದಾರೆ. ಭಾರತ್ ಜೋಡೋ ಯಾತ್ರೆ, ಎರಡು ವಿಭಿನ್ನ ಸಿದ್ಧಾಂತಗಳು ಮತ್ತು ಜಾಗತಿಕ ಸಂಭಾಷಣೆ ಕಡ್ಡಾಯ ಎನ್ನುವ ಮೂರು ವಿಷಯಗಳ ಮೇಲೆ ಅವರು ಉಪನ್ಯಾಸವನ್ನು ಕೇಂದ್ರಿಕರಿಸಿ ಮಾತನಾಡಿದ್ದಾರೆ. ಇದನ್ನೂ ಓದಿ: ಮುಷ್ಕರದಿಂದ ಜನರಿಗೆ ತೊಂದರೆಯಾದರೆ ನೌಕರರಿಗೆ ಒಳ್ಳೆಯದಾಗುವುದಿಲ್ಲ- ಈಶ್ವರಪ್ಪ

    ಒಂದು ವಾರದ ಇಂಗ್ಲೆಂಡ್ ಪ್ರವಾಸದಲ್ಲಿರುವ ರಾಹುಲ್ ಗಾಂಧಿ ಮತ್ತು ಮಾ. 5ರಂದು ಲಂಡನ್‌ನಲ್ಲಿರುವ ಭಾರತೀಯ ವಲಸಿಗರೊಂದಿಗೆ ಸಂವಾದ ನಡೆಸಲಿದ್ದಾರೆ. ಬಳಿಕ ಲಂಡನ್‌ನಲ್ಲಿರುವ ಭಾರತೀಯ ಸಾಗರೋತ್ತರ ಕಾಂಗ್ರೆಸ್ (ಐಒಸಿ) ಸದಸ್ಯರನ್ನು ಭೇಟಿಯಾಗಲಿದ್ದಾರೆ. ತದನಂತರ ಅವರು ವ್ಯಾಪಾರ ಸಮುದಾಯದ ಸದಸ್ಯರೊಂದಿಗೆ ಸರಣಿ ಸಂವಾದ ನಡೆಸಲು ನಿರ್ಧರಿಸಿದ್ದಾರೆ ಎಂದು ಪಕ್ಷದ ಮೂಲಗಳು ಹೇಳಿವೆ. ಇದನ್ನೂ ಓದಿ: ಎಎಪಿಗೆ ಗುಡ್‌ಬೈ; ನಿವೃತ್ತ ಐಪಿಎಸ್‌ ಅಧಿಕಾರಿ ಭಾಸ್ಕರ್‌ ರಾವ್‌ ಬಿಜೆಪಿ ಸೇರ್ಪಡೆ

  • ಹೊಸ ಹೇರ್‌ಸ್ಟೈಲ್‌ನಲ್ಲಿ ಮಿಂಚಿದ ಕೊಹ್ಲಿ – T20 ವಿಶ್ವಕಪ್‍ಗೆ ನ್ಯೂಲುಕ್

    ಹೊಸ ಹೇರ್‌ಸ್ಟೈಲ್‌ನಲ್ಲಿ ಮಿಂಚಿದ ಕೊಹ್ಲಿ – T20 ವಿಶ್ವಕಪ್‍ಗೆ ನ್ಯೂಲುಕ್

    ಮುಂಬೈ: ಟೀಂ ಇಂಡಿಯಾದ (Team India) ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಆಸ್ಟ್ರೇಲಿಯಾ (Australia) ಸರಣಿಗೂ ಮುನ್ನ ಮಾಡಿಕೊಂಡಿರುವ ಹೊಸ ಹೇರ್‌ಸ್ಟೈಲ್ (HairStyle)  ಸಖತ್ ಸದ್ದು ಮಾಡುತ್ತಿದೆ.

    ಹೌದು ಕ್ರಿಕೆಟಿಗರು ಒಂದು ಸರಣಿಯ ಬಳಿಕ ಇನ್ನೊಂದು ಸರಣಿಗೂ ಮುನ್ನ ತಮ್ಮ ಹೊಸಲುಕ್‍ಗಳ ಮೂಲಕ ಅಭಿಮಾನಿಗಳ ಗಮನಸೆಳೆಯುವುದು ಸಾಮಾನ್ಯ. ಈ ಹಿಂದೆ ಕೂಡ ಇಂತಹ ಹಲವು ಟ್ರೆಂಡಿ ಆಟಗಾರರನ್ನು ಟೀಂ ಇಂಡಿಯಾ ಕಂಡಿದೆ. ಇದೀಗ ತಂಡದಲ್ಲಿರುವ ಕೊಹ್ಲಿ ತಮ್ಮ ವಿಭಿನ್ನ ಲುಕ್‍ಗಳ ಮೂಲಕ ಆಗಾಗ ಸುದ್ದಿಯಾಗುತ್ತಾರೆ. ಕೊಹ್ಲಿ ತವರಿನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಗಾಗಿ ಇದೀಗ ಮೊಹಾಲಿಯಲ್ಲಿ ತಂಡ ಸೇರಿಕೊಂಡಿದ್ದಾರೆ. ಈ ವೇಳೆ ಅವರ ಹೊಸ ಕೇಶವಿನ್ಯಾಸ ಗಮನಸೆಳೆದಿದೆ. ಇದನ್ನೂ ಓದಿ: ಶಮಿಗೆ ಕೊರೊನಾ: T20 ಸರಣಿಯಿಂದ ಔಟ್ – 3 ವರ್ಷಗಳ ಬಳಿಕ ಉಮೇಶ್ ಯಾದವ್ ಕಂಬ್ಯಾಕ್?

     

    View this post on Instagram

     

    A post shared by Rashid Salmani (@rashidtheartist)

    ಹೇರ್ ಸ್ಟೈಲಿಸ್ಟ್ ರಶೀದ್ ಸಲ್ಮಾನಿ ತಮ್ಮ ಇನ್‌ಸ್ಟಾಗ್ರಾಮ್‌ ಪೇಜ್‍ನಲ್ಲಿ ವಿರಾಟ್ ಕೊಹ್ಲಿ ಜೊತೆ ಇರುವ ವೀಡಿಯೋವನ್ನು ಫೋಸ್ಟ್ ಮಾಡಿದ್ದಾರೆ. ಸಲ್ಮಾನಿ ಅವರು “ಕಿಂಗ್ ಕೊಹ್ಲಿಯ ಹೊಸ ನೋಟ” ಎಂದು ಬರೆದಿರುವ ಹೊಸ ಕೇಶವಿನ್ಯಾಸದ ಒಂದೆರಡು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಆ ಬಳಿಕ ಈ ಫೋಟೋಗಳು ವೈರಲ್ ಆಗ ತೊಡಗಿದೆ. ಅಭಿಮಾನಿಗಳು ಕೊಹ್ಲಿಯ ಹೊಸ ಕೇಶವಿನ್ಯಾಸಕ್ಕೆ ಫಿದಾ ಆಗಿದ್ದಾರೆ. ಜೊತೆಗೆ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‍ನಲ್ಲೂ ಇದೇ ಲುಕ್‍ನಲ್ಲಿ ಕೊಹ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಇದನ್ನೂ ಓದಿ: ಕೊಹ್ಲಿಯನ್ನು ಆರಂಭಿಕನನ್ನಾಗಿ ಆಡಿಸಿ ತಲೆ ಇಲ್ಲದ ಕೆಲಸ ಮಾಡ್ಬೇಡಿ- ಗಂಭೀರ್ ಗರಂ

    ಏಷ್ಯಾಕಪ್‍ಗೂ (Asia Cup 2022) ಮುನ್ನ ರನ್ ಬರ ಅನುಭವಿಸುತ್ತಿದ್ದ ಕೊಹ್ಲಿ ಏಷ್ಯಾಕಪ್‍ನಲ್ಲಿ ಭರ್ಜರಿ ಶತಕ ಸಿಡಿಸಿ ಕಂಬ್ಯಾಕ್ ಮಾಡಿದ್ದಾರೆ. ಟಿ20 ಕ್ರಿಕೆಟ್‍ನಲ್ಲಿ ಚೊಚ್ಚಲ ಶತಕ ಸಿಡಿಸಿದ ಕೊಹ್ಲಿ ಈ ಶತಕದೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‍ನಲ್ಲಿ 2 ವರ್ಷ, 9 ತಿಂಗಳು, 16 ದಿನಗಳ ಬಳಿಕ ಶತಕ ಸಿಡಿಸಿದರು. 1,021 ದಿನಗಳ ಬಳಿಕ ಕೊಹ್ಲಿ ಬ್ಯಾಟ್‍ನಿಂದ ಶತಕದ ವೈಭವ ಕಂಡುಬಂದಿದ್ದು, ಈ ಶತಕ ಕೊಹ್ಲಿಯ 71ನೇ ಅಂತಾರಾಷ್ಟ್ರೀಯ ಶತಕವಾಗಿ ರಾರಾಜಿಸಿದೆ. ಇದೀಗ ಆಸ್ಟ್ರೇಲಿಯಾ ವಿರುದ್ಧವು ಘರ್ಜಿಸಲು ಕೊಹ್ಲಿ ಪ್ಲಾನ್ ಮಾಡಿಕೊಂಡಿದ್ದಾರೆ. ಸೆಪ್ಟೆಂಬರ್ 20 ರಿಂದ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿ ಆರಂಭವಾಗಲಿದೆ.

    Live Tv
    [brid partner=56869869 player=32851 video=960834 autoplay=true]

  • ಮಹಿಳೆಯರ ಅಂದ ಹೆಚ್ಚಿಸುವ ಟಾಪ್ 5 ಟ್ರೆಂಡಿ ಹೇರ್‌ಕಟ್‍ಗಳು

    ಮಹಿಳೆಯರ ಅಂದ ಹೆಚ್ಚಿಸುವ ಟಾಪ್ 5 ಟ್ರೆಂಡಿ ಹೇರ್‌ಕಟ್‍ಗಳು

    ಹಿಳೆಯರು ಸ್ಟೈಲಿಶ್ ಆಗಿ ಕಾಣಿಸಲು ತುಂಬಾ ಪ್ರಯತ್ನ ಪಡುತ್ತಾರೆ. ಆದರೆ ಮಹಿಳೆಯರಿಗೆ ಅಂದವನ್ನು ಹೆಚ್ಚಿಸುವುದೇ ಕೂದಲು. ಒಬ್ಬರಿಗೆ ಒಂದೊಂದು ರೀತಿಯ ಹೇರ್‌ಕಟ್‍ ಸೂಟ್ ಆಗುತ್ತದೆ. ಅದಕ್ಕಾಗಿಯೇ ಮಹಿಳೆಯರಿಗಾಗಿಯೇ ವಿಶೇಷ ಹೇರ್‌ಕಟ್‍ ಮಾಡಿಸುವುದು ಹೇಗೆ, ಯಾವ ಸ್ಟೈಲ್ ಹೇರ್‌ಕಟ್‍ ಮಾಡಿಸಿದರೇ ಸುಂದರವಾಗಿ ಕಾಣಿಸುತ್ತಾರೆ ಎಂಬುವುದರ ಬಗ್ಗೆ ಕೆಲವೊಂದು ಟಿಪ್ಸ್‌ಗಳನ್ನು ನಾವು ಇಂದು ನಿಮಗೆ ಹೇಳಿಕೊಡುತ್ತೇವೆ. ಈ ವರ್ಷದ ಕೂಲ್ ಆ್ಯಂಡ್ ಟ್ರೆಂಡಿ ಸ್ಟೈಲ್‍ನ ಟಾಪ್ 5 ಹೇರ್‌ಕಟ್‍ ಬಗ್ಗೆ ನಿಮಗೆ ತಿಳಿಸುತ್ತಿದ್ದೇವೆ. ಈ ಕೆಳಗಿನವುಗಳಲ್ಲಿ ನಿಮಗೆ ಸೂಟ್ ಆಗುವಂತಹ ಹೇರ್‌ಕಟ್‍ ಅನ್ನು ನೀವು ಮಾಡಿಸಿಕೊಳ್ಳಬಹುದಾಗಿದೆ.

    ಶಾರ್ಟ್ ಹೇರ್‌ಕಟ್‍
    13 Feminine Short Haircuts For Wavy Hair: Trending Right Now

    ಶಾರ್ಟ್ ಹೇರ್ ಇರುವವರು ನನ್ನ ಕೊದಲಿಗೆ ಯಾವ ರೀತಿಯ ಹೇರ್‍ಕಟ್ ಮಾಡಿಸಿಕೊಳ್ಳಬೇಕೆಂದು ಯೋಚಿಸುತ್ತಿದ್ದರೆ, ಶಾರ್ಟ್ ಹೇರ್‍ಕಟ್ ಮಾಡಿಸಿಕೊಳ್ಳಿ. ಇದೊಂದು ಟ್ರೆಂಡಿ ಹೇರ್ ಸ್ಟೈಲ್ ಆಗಿದ್ದು, ನೀವು ಯಾವುದೇ ರೀತಿಯ ಡ್ರೆಸ್ ಧರಿಸಿದರೂ ಸೂಟ್ ಆಗುತ್ತದೆ.

    ಮೀಡಿಯಂ ಹೇರ್‌ಕಟ್‍
    ಕೆಲವರಿಗೆ ಹೇರ್ ತುಂಬಾ ಉದ್ದವಿರುವುದರಿಂದ ಇಷ್ಟವಿಲ್ಲದೇ ಹೋದರೆ, ಈ ಹೇರ್‍ಕಟ್ ಮಾಡಿಸಿಕೊಳ್ಳುವುದು ಉತ್ತಮ. ಏಕೆಂದರೆ ಇದು ನಿಮಗೆ ತುಂಬಾ ಹೇರ್‍ಕಟ್ ಮಾಡಿಕೊಂಡಿದ್ದೇವೆ ಎಂಬ ಫೀಲ್ ನೀಡುವುದಿಲ್ಲ. ಅಲ್ಲದೇ ಈ ಹೇರ್‍ಕಟ್ ನೀವು ಸುಂದರವಾಗಿ ಕಾಣಿಸಿಕೊಳ್ಳಲು ಸಹಾಯಕವಾಗಿದೆ.

    ಲಾಗ್ ಹೇರ್‌ಕಟ್‍


    ಎಷ್ಟೋ ಜನ ಹೆಣ್ಣು ಮಕ್ಕಳಿಗೆ ಲಾಗ್ ಹೇರ್ ಸ್ಟೈಲ್ ತುಂಬಾ ಇಷ್ಟ. ಅದರಲ್ಲಿಯೂ ಕೂದಲು ಚೆನ್ನಾಗಿ ಬೆಳೆದರೆ ಸಾಕಾಪ್ಪ ಎನ್ನುತ್ತಾರೆ. ಲಾಗ್‍ಹೇರ್ ಇದ್ದವರೂ ಈ ರೀತಿಯ ಸ್ಟೈಲಿಶ್ ಹೇರ್‍ಕಟ್ ಮಾಡಿಸಿಕೊಂಡರೆ ನೋಡುವುದಕ್ಕೆ ತುಂಬಾ ಟ್ರೆಂಡಿ ಹಾಗೂ ಕ್ಲಾಸಿಕ್ ಲುಕ್ ನೀಡುತ್ತದೆ.

    ಲೇಯರ್ಡ್ ಹೇರ್‌ಕಟ್‍

    ಈ ಹೇರ್‌ಕಟ್ ಉದ್ದ ಮುಖ ಇರುವವರಿಗೆ ಸಖತ್ ಆಗಿ ಕಾಣಿಸುತ್ತದೆ. ಲೇಯರ್ ಇರುವುದರಿಂದ ಈ ಹೇರ್ ಸ್ಟೈಲ್ ನೋಡುಗರಿಗೆ ತುಂಬಾ ಆಕರ್ಷಣಿಯವಾಗಿ ಕಾಣಿಸುತ್ತದೆ.

    ಬಾಬ್  ಹೇರ್‌ಕಟ್‍

    ಟಾಮ್ ಬಾಯ್ ಆಗಿರುವ ಹುಡುಗಿಯರು ಈ ರೀತಿಯ ಹೇರ್‌ಕಟ್ ಇಷ್ಟ ಪಡುತ್ತಾರೆ. ಇತ್ತೀಚೆಗೆ ಇದು ತುಂಬಾ ಟ್ರೆಂಡಿಯಾಗಿದ್ದು, ಆಲ್‍ಮೋಸ್ಟ್ ಕಾಲೇಜ್ ಹುಡುಗಿಯರು ಈ ಶೈಲಿಯ ಹೇರ್ ಸ್ಟೈಲ್ ಅನ್ನು ಇಷ್ಟಪಡುತ್ತಾರೆ.

    Live Tv
    [brid partner=56869869 player=32851 video=960834 autoplay=true]

  • ನಿಮ್ಮ ಫೇಸ್‌ಕಟ್‌ಗೆ ಸರಿಯಾದ ಹೇರ್‌ಸ್ಟೈಲ್ ಇರಲಿ

    ನಿಮ್ಮ ಫೇಸ್‌ಕಟ್‌ಗೆ ಸರಿಯಾದ ಹೇರ್‌ಸ್ಟೈಲ್ ಇರಲಿ

    ನೀವು ಕೂದಲು ಕತ್ತರಿಸಲು ನಿರ್ಧರಿಸಿದಾಗ ಮೊದಲು ಯೋಚಿಸುವುದೇ ಚೆನ್ನಾಗಿ ಕಾಣಿಸಬೇಕು ಎಂದು. ಆದರೆ ನಿಮ್ಮ ಮೂದಲು ಕತ್ತರಿಸುವುದಕ್ಕೂ ಮೊದಲು ಗಮನಹರಿಸಬೇಕಿರುವುದು, ಹೇರ್‌ಕಟ್ ನಿಮ್ಮ ಮುಖಕ್ಕೆ ಹೊಂದುತ್ತದೆಯೇ ಇಲ್ಲವೇ ಎಂಬುದು.

    ಹೇರ್ ಸ್ಟೈಲಿಸ್ಟ್‌ಗಳು ನಿಮ್ಮ ಹೇರ್ ಕಟ್ ಮಾಡುವಾಗ ಹಲವು ಆಯ್ಕೆಗಳನ್ನು ನೀಡುತ್ತಾರೆ. ಯಾವುದೋ ಟ್ರೆಂಡಿ ಎನ್ನುವುದಕ್ಕಿಂತ ಮುಖದ ಆಕಾರಕ್ಕೆ ಹೊಂದುವ ಶೇಪ್ ಕೊಡಿಸುವುದೇ ಉತ್ತಮ ಅಲ್ವಾ? ನಿಮ್ಮ ಮುಖದ ಆಕಾರ ಹೇಗೆಯೇ ಇರಲಿ. ಆದರೆ ಕೂದಲು ಕತ್ತರಿಸಿದ ಬಳಿಕ ಅದರ ಫಲಿತಾಂಶ ಆಕರ್ಷಕವಾಗಿರಬೇಕು ಹಾಗೂ ಮುಖ ಆದಷ್ಟು ಸ್ಲಿಮ್ ಆಗಿ ಕಾಣಿಸಬೇಕು ಎಂದೇ ಹೆಚ್ಚಿನವರು ಭಾವಿಸುತ್ತಾರೆ.

    ಯಾವುದೋ ಹೇರ್ ಕಟ್ ಮಾಡಿಸುವುದಕ್ಕಿಂತಲೂ ಮೊದಲು ಸ್ವಲ್ಪ ಯೋಚಿಸಿ. ಕೆಲವರ ಸಲಹೆ ತಿಳಿದು ಬಳಿಕ ನಿಮ್ಮ ಕೂದಲು ಕತ್ತರಿಸಲು ಮುಂದಾಗಿ. ನಿಮ್ಮ ಮುಖದ ಶೇಪ್‌ಗೆ ಅನುಗುಣವಾಗಿ ಯಾವ ರೀತಿ ಹೇರ್‌ಸ್ಟೈಲ್ ಮಾಡಬಹುದೆಂಬ ಕೆಲವು ಟಿಪ್ಸ್ ಇಲ್ಲಿವೆ.

    ಬ್ಯಾಂಗ್ಸ್:
    ಎತ್ತರದ ಹಣೆ ಅಥವಾ ಅಗಲವಾದ ಕೆನ್ನೆ ಹೊಂದಿರುವವರಿಗೆ ಬ್ಯಾಂಗ್ಸ್ ಅತ್ಯುತ್ತಮ ಆಯ್ಕೆ. ಹಣೆಯ ವಿಶಾಲ ಭಾಗವನ್ನು ಮುಚ್ಚಲು ಹುಬ್ಬಿನವರೆಗಿನ ಬ್ಯಾಂಗ್ಸ್ ಸಹಾಯ ಮಾಡಿದರೆ, ಕೆನ್ನೆಯ ವಿಶಾಲ ಭಾಗವನ್ನು ಮರೆಮಾಚಲು ಕಿವಿವರೆಗಿನ ಉದ್ದದ ಬ್ಯಾಂಗ್ಸ್ ಸಹಾಯ ಮಾಡುತ್ತದೆ. ಇಲ್ಲಿವರೆಗೂ ನೀವು ಬ್ಯಾಂಗ್ಸ್ ಕಟ್ ಟ್ರೈ ಮಾಡಿಲ್ಲವೆಂದರೆ ಮಾರುಕಟ್ಟೆಗಳಲ್ಲಿ ನಕಲಿ ಬ್ಯಾಂಗ್ಸ್‌ಗಳು ಲಭ್ಯವಿರುತ್ತವೆ. ಅವುಗಳನ್ನು ಒಮ್ಮೆ ಟ್ರೈ ಮಾಡಿ. ನಿಮ್ಮ ಫೇಸ್ ಕಟ್‌ಗೆ ಸೂಟ್ ಆಗುತ್ತೋ ಇಲ್ಲವೋ ಎಂಬುದನ್ನು ಖಾತ್ರಿಪಡಿಸಿ, ಕೊನೆಗೆ ಕತ್ತರಿಸುವ ಬಗ್ಗೆ ನಿರ್ಧಾರ ಮಾಡಿ. ಇದನ್ನೂ ಓದಿ: ಇಂಡಿಯನ್ ಸ್ಕಿನ್ ಟೋನ್‌ಗೆ ಈ ಬಣ್ಣದ ಲಿಪ್‌ಸ್ಟಿಕ್‌ಗಳು ಬೆಸ್ಟ್

    ಬಾಬ್:
    ಎತ್ತರದ ಕೆನ್ನೆ ಮೂಳೆ ಹಾಗೂ ಮೊನಚಾದ ಗಲ್ಲವನ್ನು ನೀವು ಹೊಂದಿದ್ದರೆ, ಭುಜದ ವರೆಗೆ ಬರುವ ಬಾಬ್ ಕಟ್ ನಿಮಗೆ ಬೆಸ್ಟ್. ಈ ಮುಖದ ಆಕರ ನಿಮ್ಮ ಭುಜದ ವರೆಗೆ ಬರುವ ಕೂದಲಿನೊಂದಿಗೆ ಜೋಡಿಸಿದರೆ, ಉತ್ತಮವಾಗಿ ಕಾಣಿಸುತ್ತದೆ. ಮುಖ್ಯವಾಗಿ ನೀವು ಜನರ ಗಮನವನ್ನು ನಿಮ್ಮ ಗಲ್ಲದ ಕಡೆಗೆ ಸೆಳೆಯಲು ಬಯಸುವುದಿಲ್ಲ ಎಂದಾದಲ್ಲಿ ಈ ಕಟ್ ನಿಮಗೆ ಸೂಕ್ತ. ಇದನ್ನೂ ಓದಿ: ಮದುವೆ ಸಮಾರಂಭಗಳಿಗೆ ವಿಭಿನ್ನ ಶೈಲಿಯ ಪೇಟ-ಪರಂಪರೆಯ ಕಿರೀಟ

    ದುಂಡು ಮುಖಕ್ಕೆ ಈ ಕಟ್ ಬೆಸ್ಟ್:
    ನೀವು ದುಂಡು ಮುಖ ಹೊಂದಿದ್ದೀರಾ? ನಿಮ್ಮ ಮುಖವನ್ನು ಉದ್ದವಾಗಿ ಕಾಣಿಸುವಂತೆ ಮಾಡಲು, ದುಂಡು ಮುಖದ ಅಗಲವನ್ನು ಕಡಿಮೆ ಮಾಡುವುದು ಅಗತ್ಯ. ಇದಕ್ಕಾಗಿ ಉದ್ದವಾದ ಬಾಬ್ ಕಟ್ ಸೂಕ್ತ. ಈ ಕಟ್ ನಿಮ್ಮ ಮುಖವನ್ನು ಸ್ಲಿಮ್ ಆಗಿ ಕಾಣಿಸುವಂತೆ ಮಾಡುತ್ತದೆ. ಕೂದಲ ಕೊನೆಯಲ್ಲಿ ಕೊಂಚ ಕರ್ಲ್ ಇದ್ದಲ್ಲಿ ಪರ್ಫೆಕ್ಟ್ ಲುಕ್ ನಿಮ್ಮದಾಗುತ್ತದೆ. ಏಕೆಂದರೆ ಕೂದಲ ಕೆಳಭಾಗದ ವಕ್ರತೆ ನಿಮ್ಮ ಕೆನ್ನೆಯ ಅಗಲವನ್ನು ಮರೆಮಾಚಲು ಸಹಾಯ ಮಾಡುತ್ತದೆ.

    ನೀವು ಯಾವುದೇ ಮುಖದ ಆಕಾರವನ್ನು ಹೊಂದಿದ್ದರೂ ಕೊನೆಯದಾಗಿ ಕೂದಲು ಕತ್ತರಿಸುವಾಗ ಅದಕ್ಕೆ ಹೊಂದುವಂತಹ ಆಕಾರದಲ್ಲಿ ಕತ್ತರಿಸುವುದೇ ಸೂಕ್ತ. ನಿಮ್ಮ ಮುಖಕ್ಕೆ ಹೊಂದಿಕೊಳ್ಳುವ ಹೇರ್ ಕಟ್‌ಗಳು ನಿಮ್ಮಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುವಲ್ಲಿ ಸಹಾಯ ಮಾಡುತ್ತದೆ. ಆದ್ದರಿಂದ ನಿಮ್ಮ ಕೂದಲ ವಿನ್ಯಾಸದ ಬಳಿಕ ಅದನ್ನು ಹೆಮ್ಮೆಯಿಂದ ಇರಿಸಿಕೊಳ್ಳಿ.

  • ತಲೆಗೆ ನೀರಿನ ಬದಲು ಎಂಜಲು ಉಗಿದ ಕೇಶವಿನ್ಯಾಸಕಾರ!

    ತಲೆಗೆ ನೀರಿನ ಬದಲು ಎಂಜಲು ಉಗಿದ ಕೇಶವಿನ್ಯಾಸಕಾರ!

    ಲಕ್ನೋ: ಕೇಶ ವಿನ್ಯಾಸಕಾರನೋರ್ವ ಮಹಿಳೆಯ ತಲೆಗೆ ನೀರು ಸಿಂಪಡಿಸುವ ಬದಲು ಎಂಜಲು ಉಗಿದ ಘಟನೆ ಉತ್ತರಪ್ರದೇಶದ ಮಜಾಫ್ಪರನಗರದಲ್ಲಿ ನಡೆದಿದೆ.

    ಕೇಶ ವಿನ್ಯಾಸಕಾರ ಜಾವೇದ್ ಹಬೀಬ್, ಪೂಜಾ ಎನ್ನುವವರ ತಲೆಗೆ ಎಂಜಲು ಉಗಿದಿದ್ದಾರೆ. ಈ ಘಟನೆ ವಿವಾವದ ಸ್ವರೂಪ ಪಡೆದುಕೊಂಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಕೇಶ ವಿನ್ಯಾಸಕಾರನ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ರಾಷ್ಟ್ರೀಯ ಮಹಿಳಾ ಆಯೋಗ, ಹಬೀಬ್ ಕೃತ್ಯವನ್ನು ಖಂಡಿಸಿವೆ. ಈ ವಿಚಾರವಾಗಿ ಕಠಿಣ ಕ್ರಮವನ್ನು ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದೆ. ಇದನ್ನೂ ಓದಿ: ಹೂಸು ಮಾರಿ ವಾರಕ್ಕೆ 38 ಲಕ್ಷ ಸಂಪಾದನೆ ಮಾಡ್ತಿದ್ದಾಕೆ ಆಸ್ಪತ್ರೆಗೆ ದಾಖಲು

    ನಡೆದಿದ್ದೇನು?: ದೇಶದ್ಯಂತ 850 ಸಲೂನ್ ಹೊಂದಿದ್ದ ಜಾವೇದ್ ಹಬೀಬ್, ಇತ್ತೀಚೆಗೆ ಮುಜಾಫ್ಪರನಗರದಲ್ಲಿ ಕೇಶವಿನ್ಯಾಸದ ಕಾರ್ಯಗಾರ ನಡೆಸಿದ್ದ. ಈ ವೇಳೆ ಪೂಜಾ ಅವರಿಗೆ ಕೇಶವಿನ್ಯಾಸ ಮಾಡುವಾಗ ನೀರು ಇಲ್ಲದಿದ್ದರೆ, ಎಂಜಲು ಬಳಸಿ ಎಂದು ಹೇಳಿ ಉಗಿಯಲಾಗಿದೆ. ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಇದನ್ನೂ ಓದಿ: ನನ್ನ ಹೆಸರು Kovid, ಆದ್ರೆ ನಾನು ವೈರಸ್ ಅಲ್ಲ: ಬೆಂಗಳೂರು ಉದ್ಯಮಿ

     

     

  • ಶುಭಾ ಪೂಂಜಾ ನ್ಯೂ ಹೇರ್ ಸ್ಟೈಲ್‍ಗೆ ದಿವ್ಯಾ ಕಾಮೆಂಟ್

    ಶುಭಾ ಪೂಂಜಾ ನ್ಯೂ ಹೇರ್ ಸ್ಟೈಲ್‍ಗೆ ದಿವ್ಯಾ ಕಾಮೆಂಟ್

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಶುಭಾ ಪೂಂಜಾ ಡಿಸೆಂಬರ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ ಎನ್ನುವ ಸುದ್ದಿಯೊಂದು ಹರಿದಾಡುತ್ತಿತ್ತು. ಆದರೆ ಇದೇ ಬೆನ್ನಲ್ಲೆ ಮತ್ತೊಂದು ವಿಚಾರವಾಗಿ ಸುದ್ದಿಯಾಗಿದ್ದಾರೆ.

    ಹೊಸ ಹೇರ್ ಕಟ್ ಮಾಡಿಸಿದ್ದೇನೆ ಎಂದು ಬರೆದುಕೊಂಡು ತಮ್ಮ ಕ್ಯೂಟ್ ಆಗಿರುವ ಫೋಟೋ ಮತ್ತು ಬಾರ್ಬಿ ಹೇರ್ ಸ್ಟೈಲ್ ಮಾಡಿಕೊಂಡಿರುವ ಖುಷಿಯಲ್ಲಿ ಕುಣಿದುಕುಪ್ಪಳಿಸಿರುವ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಅಭಿಮಾನಿಗಳು ಶುಭಾ ಅವರ ಹೊಸ ಲುಕ್‍ಗೆ ಮೆಚ್ಚುಗೆ ಸೂಚಿಸುತ್ತಿದ್ದಾರೆ. ದಿವ್ಯಾ ಉರುಡುಗ ಕ್ಯೂಟಿ ಎಂದು ಬರೆದು ಕಾಮೆಂಟ್ ಮಾಡಿದ್ದಾರೆ. ಇದನ್ನೂ ಓದಿ:  ಡಿಸೆಂಬರ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ ಶುಭಾ ಪೂಂಜಾ!

     

    View this post on Instagram

     

    A post shared by shubha Poonja . (@shubhapoonja)

    ಶುಭಾ ಪೂಂಜಾ ಅವರ ಹೊಸ ಹೇರ್ ಸ್ಟೈಲ್ ಫೋಟೋವನ್ನು ನಟಿ ನಿತ್ಯಾ ಶೆಟ್ಟಿ ಅವರು ಕ್ಲಿಕ್ ಮಾಡಿದ್ದಾರೆ. ಶುಭಾ, ನಿತ್ಯಾ ಇಬ್ಬರು ಜೊತೆಯಾಗಿ ಮಧ್ಯಾಹ್ನದ ಊಟವನ್ನು ಮಾಡುತ್ತಾ ಕೆಲವು ಸಮಯ ಜೊತೆಯಾಗಿ ಕಳೆದಿದ್ದಾರೆ. ಈ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಶುಭಾ ಹಂಚಿಕೊಂಡಿದ್ದಾರೆ. ಗೀತಾ ಭಾರತೀ ಭಟ್, ದಿವ್ಯಾ ಸುರೇಶ್, ದಿವ್ಯಾ ಉರುಡುಗ ಕ್ಯೂಟ್ ಎಂದು ಕಾಮೆಂಟ್ ಮಾಡಿದ್ದಾರೆ. ಇದನ್ನೂ ಓದಿ: ಮಂಜು ಪಾವಗಡ ಜೊತೆ ಶುಭಾ ಮತ್ತೊಮ್ಮೆ ಟ್ರಿಪ್

     

    View this post on Instagram

     

    A post shared by shubha Poonja . (@shubhapoonja)

    ಶುಭಾ ಪೂಂಜಾ ಅವರು ತಮ್ಮ ಗೆಳೆಯ ಸುಮಂತ್ ಮಹಾಬಲ ಜೊತೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇವರಿಬ್ಬರು ಕಳೆದ ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದಾರೆ. ಕಳೆದ ವರ್ಷವೇ ಇವರ ಮದುವೆ ನಡೆಯಬೇಕಾಗಿತ್ತು. ಆದರೆ ಶುಭಾ ನನಗೆ ಈಗ ಮದುವೆ ಬೇಡ, ನಾನು ಬಿಗ್ ಬಾಸ್ ಶೋಗೆ ಸ್ಪರ್ಧಿಯಾಗಿ ಹೋಗಬೇಕು ಎಂದು ಹಠಕ್ಕೆ ಬಿದ್ದು ಕೊನೆಗೆ ಸ್ಪರ್ಧಿಯಾಗಿ ತೆರಳಿದ್ದರು ಎಂದು ಇತ್ತೀಚೆಗೆ ಶುಭಾ ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

  • ಚಿಕ್ಕತಿರುಪತಿಯಲ್ಲಿ ಮಗನ ಕೇಶಮುಂಡನ ಮಾಡಿಸಿದ ನಟಿ ಮಯೂರಿ

    ಚಿಕ್ಕತಿರುಪತಿಯಲ್ಲಿ ಮಗನ ಕೇಶಮುಂಡನ ಮಾಡಿಸಿದ ನಟಿ ಮಯೂರಿ

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಮಯೂರಿ ಕ್ಯಾತರಿ ತಮ್ಮ ಮಗ ಆರವ್ ತಲೆ ಕೂದಲು ತೆಗೆಸಿದ್ದಾರೆ. ಈ ಫೋಟೋವನ್ನು ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

    ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಶ್ರೀ ಪ್ರಸನ್ನ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ಆರವ್‍ಗೆ ಕೇಶಮುಂಡನ ಮಾಡಿದ್ದಾರೆ. ಗೋವಿಂದಾ ಗೋವಿಂದಾ ಎಂದು ಬರೆದುಕೊಂಡು ಆರವ್ ಕೂದಲು ತೆಗೆಸಿದ ನಂತರದಲ್ಲಿ ಕ್ಲಿಕ್ಕಿಸಿಕೊಂಡಿರುವ ಮುದ್ದಾದ ಫೋಟೋವನ್ನು ಹಂಚಿಕೊಂಡಿದ್ದಾರೆ. ದಂಪತಿ ಮುಗುವನ್ನು ಇತ್ತಿಕೊಂಡು ದೇವಸ್ಥಾನದ ಎದುರು ನಿಂತು ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಅಭಿಮಾನಿಗಳು ಕಾಮೆಂಟ್ ಮಾಡುವ ಮೂಲಕವಾಗಿ ಮುದ್ದಾದ ಆರವ್ ಫೋಟೋಗೆ ಮೆಚ್ಚುಗೆಯನ್ನು ಸೂಚಿಸುತ್ತಿದ್ದಾರೆ.  ಇದನ್ನೂ ಓದಿ: ನಾನು ತಾಯಿಯಾಗಿದ್ದು ನನ್ನ ಬದುಕಿನ ಅತೀ ಸಂಭ್ರಮದ ಕ್ಷಣ: ಮಯೂರಿ

     

    View this post on Instagram

     

    A post shared by mayuri (@mayurikyatari)

    2020 ಜೂನ್ 12ರಂದು ತಮ್ಮ ಬಹುಕಾಲದ ಗೆಳೆಯ ಅರುಣ್ ಜೊತೆಗೆ ಮಯೂರಿ ದಾಂಪತ್ಯಜೀವನಕ್ಕೆ ಕಾಲಿಟ್ಟಿದ್ದರು. ನಂತರ ತಾಯಿ ಆಗುತ್ತಿರುವ ವಿಚಾರ, ಸಿಮಂತ  ಫೋಟೋಗಳು ಹಾಗೂ ಬೇಬಿ ಬಂಪ್ ಫೋಟೋಗಳನ್ನು ಮಯೂರಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಮಗ ಹುಟ್ಟಿದ ವಿಷಯವನ್ನು ಸೋಶಿಯಲ್ ಮೀಡಿಯಾದಲ್ಲಿ ಭಾವನಾತ್ಮಕವಾಗಿ ಬರೆದುಕೊಂಡಿದ್ದರು. ಹೀಗೆ ಮಗನಿಗಾಗಿ ಸ್ಟಾರ್‍ಬಾಯ್ ಎನ್ನುವ ಹೆಸರಿನಲ್ಲಿ ಸೋಶಿಯಲ್ ಮೀಡಿಯಾ ಖಾತೆಯನ್ನು ತೆರೆದು ಮಗನ ಕೆಲವು ಮುದ್ದಾದ ವೀಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಮಗನಿಗೆ ಕೇಶಮುಂಡನ ಮಾಡಿಸುವ ಮೂಲಕವಾಗಿ ಸುದ್ದಿಯಾಗಿದ್ದಾರೆ. ಇದನ್ನೂ ಓದಿ: ನಾವು ನಿಮ್ಮನ್ನು ಹತ್ಯೆ ಮಾಡುತ್ತೇವೆ – ಗಂಭೀರ್‌ಗೆ ಐಸಿಸ್ ಕಾಶ್ಮೀರದಿಂದ ಜೀವ ಬೆದರಿಕೆ

  • ಶಿಲ್ಪಾ ಶೆಟ್ಟಿ ಹೊಸ ಹೇರ್ ಸ್ಟೈಲ್- ಟ್ರೋಲಿಗರಿಗೆ ಆಹಾರವಾಯ್ತಾ ನ್ಯೂಲುಕ್?

    ಶಿಲ್ಪಾ ಶೆಟ್ಟಿ ಹೊಸ ಹೇರ್ ಸ್ಟೈಲ್- ಟ್ರೋಲಿಗರಿಗೆ ಆಹಾರವಾಯ್ತಾ ನ್ಯೂಲುಕ್?

    ಮುಂಬೈ: ಬಾಲಿವುಡ್ ನಟಿ, ಮಂಗಳೂರು ಬೆಡಗಿ ಶಿಲ್ಪಾ ಶೆಟ್ಟಿ ಅವರು ಹೊಸ ಹೇರ್ ಸ್ಟೈಲ್ ಮೂಲಕವಾಗಿ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸುದ್ದಿಯಲ್ಲಿದ್ದಾರೆ.

    ಶಿಲ್ಪಾ ಶೆಟ್ಟಿ ಅವರು ತಲೆಕೂದಲಿನ ಅಂಡರ್‌ಕಟ್ ಹೇರ್ ಸ್ಟೈಲ್ ಮಾಡಿಸಿಕೊಂಡಿದ್ದಾರೆ. ಬಜ್ ಕಟ್‍ನಲ್ಲಿ ಒಂದು ವಿಧವಾದ ಈ ಅಂಡರ್‍ಕಟ್ ಮಾಡಿಸಿಕೊಂಡಿರುವ ನಟಿ ತಮ್ಮ ಹೇರ್ ಸ್ಟೈಲ್ ಕುರಿತಾಗಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ತಮ್ಮ ಫಿಟ್ನೆಸ್ ವೀಡಿಯೋ ಜೊತೆಗೆ ನಟಿ ಶಿಲ್ಪಾ ಶೆಟ್ಟಿ ಅವರು ಹೊಸ ಹೇರ್ ಕಟ್ ಮಾಡಿಸಿಕೊಂಡ ವಿಷಯವನ್ನೂ ಹಂಚಿಕೊಂಡಿದ್ದಾರೆ. ನಟಿಯ ಹೇರ್ ಕಟ್ ನೋಡಿದ ಅಭಿಮಾನಿಗಳು ಕೆಲವರು ಮೆಚ್ಚಿಕೊಂಡಿದ್ದಾರೆ, ಇನ್ನು ಕೆಲವರು ಚೆನ್ನಾಗಿಲ್ಲ ಎಂದು ಹೇಳುತ್ತಿದ್ದಾರೆ. ಇದನ್ನೂ ಓದಿ: ಮೊದಲ ಡೋಸ್ ಪಡೆಯುವಾಗ ಇದ್ದ ಉತ್ಸಾಹ 2ನೇ ಡೋಸ್‍ಗೆ ಠುಸ್

    ಅಂಡರ್‌ಕಟ್ ಎಂದರೆ ತಲೆಯ ಹಿಂಭಾಗದಲ್ಲಿರುವ ನೀಳವಾದ ಕೂದಲನ್ನು ತುಂಬಾ ಚಿಕ್ಕದಾಗಿ ಕತ್ತರಿಸುವುದು. ಈ ಹೇರ್ ಸ್ಟೈಲ್ ಆಗಾಗ ಟ್ರೆಂಡ್ ಆಗುತ್ತಿರುತ್ತದೆ. ಸಾಕಷ್ಟು ಮಂದಿ ಈ ಹೇರ್ ಕಟ್ ಅನ್ನು ಮಾಡಿಕೊಳ್ಳುತ್ತಿರುತ್ತಾರೆ. ಆದರೆ ಶಿಲ್ಪಾ ಶೆಟ್ಟಿಯಂತಹ ನಟಿ ಈ ರೀತಿಯ ಹೇರ್ ಕಟ್ ಮಾಡಿಸಿಕೊಂಡಿರುವುದು ನಿಜಕ್ಕೂ ಆಶ್ಚರ್ಯ ಮೂಡಿಸಿದೆ.

    ಪತಿ ರಾಜ್ ಕುಂದ್ರಾ ಅವರಿಗೆ ಜಾಮೀನು ಸಿಗುವ ಮುನ್ನವೇ ರಿಯಾಲಿಟಿ ಡ್ಯಾನ್ಸ್ ಶೋಗೆ ಮರಳಿದ್ದ ಶಿಲ್ಪಾ ಶೆಟ್ಟಿ, ಮತ್ತೆ ತಮ್ಮ ಸಹಜ ಜೀವನಕ್ಕೆ ಮರಳಿದ್ದಾರೆ. ಫೋಟೋಶೂಟ್? ಹಾಗೂ ಹೊಸ ಪ್ರಾಜೆಕ್ಟಟ್‍ಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಈ ಶಿಲ್ಪಾ ಶೆಟ್ಟಿಯ ಹೇರ್ ಸ್ಟೈಲ್ ವಿಚಾರವಾಗಿ ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ.

  • ಹೇರ್ ಕಟ್ ಎಡವಟ್ಟು-ಮಾಡೆಲ್‍ಗೆ 2ಕೋಟಿ ಪರಿಹಾರ ನೀಡುವಂತೆ ಆದೇಶ

    ಹೇರ್ ಕಟ್ ಎಡವಟ್ಟು-ಮಾಡೆಲ್‍ಗೆ 2ಕೋಟಿ ಪರಿಹಾರ ನೀಡುವಂತೆ ಆದೇಶ

    ನವದೆಹಲಿ: ಹೇರ್ ಕಟ್ ಮಾಡುವಾಗ ಎಡವಟ್ಟು ಮಾಡಿರುವುದಕ್ಕೆ ಮಾಡೆಲ್ ಗೆ 2 ಕೋಟಿ ಪರಿಹಾರ ನೀಡುವಂತೆ ಹೋಟೆಲ್ ಒಂದಕ್ಕೆ NCDRC (National Consumer Disputes Redressal Commission)ಆದೇಶ ನೀಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ.

    ಖ್ಯಾತ ರೂಪದರ್ಶಿಯಾಗಬೇಕು ಎಂಬ ಆಸೆಯಿಂದ ಹೇರ್ ಕಟ್ ಮಾಡಿಸಿಕೊಳ್ಳಲು ಹೋಗಿದ್ದ ಮಹಿಳೆಗೆ ತಪೊದಾ ಹೇರ್ ಕಟ್ ಮತ್ತು ಚಿಕಿತ್ಸೆ ಮಾಡಿದ್ದಕ್ಕಾಗಿ 2 ಕೋಟಿ ರೂಪಾಯಿ ಪರಿಹಾರ ನೀಡುವಂತೆ ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆ (NCDRC) ದೆಹಲಿ ಮೂಲದ ಸಲೂನ್ ಒಂದಕ್ಕೆ ಆದೇಶ ನೀಡಿದೆ. ಇದನ್ನೂ ಓದಿ:  ಸೆ.27ರ ಭಾರತ್ ಬಂದ್‍ಗೆ ಪಾಪ್ಯುಲರ್ ಫ್ರಂಟ್‍ನಿಂದ ಸಂಪೂರ್ಣ ಬೆಂಬಲ

    ರೂಪದರ್ಶಿ ಆಶ್ನಾ ರಾಯ್ ತಮ್ಮ ನೀಳ ಕೇಶದ ಕಾರಣದಿಂದಾಗಿ ಹಲವಾರು ಕಂಪೆನಿಗಳ ಕೇಶ ಉತ್ಪನ್ನಗಳ ಜಾಹೀರಾತುಗಳಲ್ಲಿ ರೂಪದರ್ಶಿಯಾಗಿ ಕಾಣಿಸಿಕೊಳ್ಳುತ್ತಿದ್ದರು. ಐಷಾರಾಮಿ ಹೋಟೆಲ್‍ನಲ್ಲಿ ಇರುವ ಸಲೂನ್‍ಗೆ ಅವರು ಕೇಶವಿನ್ಯಾಸಕ್ಕಾಗಿ ಭೇಟಿಕೊಟ್ಟಿದ್ದರು. ಈ ವೇಳೆ ಅವರ ಕೂದಲು ಹಾಳಾದ್ದರಿಂದ ಜಾಹೀರಾತುಗಳು ತಪ್ಪಿಹೋಗುವ ಸಂದರ್ಭ ಎದುರಾಗಿದೆ. ಹೀಗಾಗಿ 2018 ರಲ್ಲಿ ಕಂಪೆನಿಯ ವಿರುದ್ಧ  NCDRCಗೆ ಅವರು ದೂರು ನೀಡಿದ್ದರು.

    ಈ ಕುರಿತಾಗಿ ವಿಚಾರಣೆ ನಡೆಸಿದ ಎನ್‍ಸಿಡಿಆರ್  ಅಧ್ಯಕ್ಷ ಆರ್.ಕೆ ಅಗರ್‍ವಾಲ್ ಮತ್ತು ಡಾ.ಎಂ ಕಂಠೀಕರ್ ಅವರಿದ್ದ ಪೀಠ ತಪ್ಪಾದ ಹೇರ್ ಕಟ್ ನಿಂದ ರೂಪದರ್ಶಿಯಾಗಬೇಕು ಎಂಬ ಅವರ ಕನಸು ನಾಶವಾಗಿದೆ. ಇದರಿಂದ ಮಾನಸಿಕವಾಗಿ ಅವರು ನೊಂದಿದ್ದಾರೆ. ಹೀಗಾಗಿ ಪರಿಹಾರ ನೀಡುವಂತೆ ಆದೇಶಿಸಿದೆ.

  • ದಲಿತರಿಗೆ ಕ್ಷೌರ ಮಾಡಲ್ಲ – ಮನನೊಂದು ಆತ್ಮಹತ್ಯೆಗೆ ಯತ್ನಿಸಿದ ಯುವಕರು

    ದಲಿತರಿಗೆ ಕ್ಷೌರ ಮಾಡಲ್ಲ – ಮನನೊಂದು ಆತ್ಮಹತ್ಯೆಗೆ ಯತ್ನಿಸಿದ ಯುವಕರು

    ಕೊಪ್ಪಳ: ದಲಿತರಿಗೆ ಕ್ಷೌರ ಮಾಡುವುದಿಲ್ಲ ಎಂದು ಕ್ಷೌರಿಕರು ಹೇಳಿದ್ದಕ್ಕೆ ಮನನೊಂದು ಯುವಕರು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ.

    ಯಲಬುರ್ಗಾ ತಾಲೂಕಿನ ಹೊಸಳ್ಳಿಯಲ್ಲಿ ದಲಿತರಿಗೆ ಕ್ಷೌರ ಮಾಡಲು ನಿರಾಕರಿಸಿ ಕ್ಷೌರಿಕರು ಜಗಳ ಮಾಡಿದ್ದಾರೆ. ಇದರಿಂದ ನೊಂದ ದಲಿತ ಯುವಕರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ಸಂಬಂಧ 16 ಜನರ ಮೇಲೆ ಪ್ರಕರಣ ದಾಖಲಿಸಲಾಗಿದೆ.

    ಹೊಸಳ್ಳಿಯಲ್ಲಿ ಜೂ. 6 ರಂದು ಗ್ರಾಮದ ಸಣ್ಣ ಹನುಮಂತ ಹಾಗೂ ಬಸವರಾಜ ಎಂಬವರು ಕ್ಷೌರ ಮಾಡಿಸಲು ಹೋಗಿದ್ದರು. ಆಗ ಕ್ಷೌರಿಕರು ದಲಿತರಿಗೆ ಕ್ಷೌರ ಮಾಡಲು ನಿರಾಕರಣೆ ಮಾಡಿದ್ದಾರೆ. ನಮಗೆ ಯಾಕೆ ಕ್ಷೌರ ಮಾಡುವುದಿಲ್ಲ ಎಂದು ದಲಿತರು ಪ್ರಶ್ನಿಸಿದ್ದು ನಂತರ ಎಂದು ವಾಗ್ವಾದ ನಡೆದಿದೆ. ಇದನ್ನು ಓದಿ: ಹಿಂದೂ ಧಾರ್ಮಿಕ ದತ್ತಿಯಿಂದ ಮಸೀದಿ, ಮದರಸಾಗಳಿಗೆ ತಸ್ತಿಕ್ ಭತ್ತೆ ನೀಡಲು ನಿರ್ಧಾರ- ವಿಹೆಚ್‍ಪಿ ವಿರೋಧ

    ಇದೇ ಸಂದರ್ಭದಲ್ಲಿ ಸ್ಥಳೀಯ ಸವರ್ಣೀಯರು ಸೇರಿಕೊಂಡು ಕ್ಷೌರ ಮಾಡಿಸಿಕೊಳ್ಳಲು ಬಂದವರ ಮೇಲೆ ಹಲ್ಲೆ, ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಗಲಾಟೆಯ ನಂತರ ಇಬ್ಬರು ಯುವಕರು ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತಕ್ಷಣ ಅವರನ್ನು ಯಲಬುರ್ಗಾ ಆಸ್ಪತ್ರೆಗೆ ಸೇರಿಸಲಾಗಿದೆ.

    ಈ ಘಟನೆಯ ಬಳಿಕ ಇಬ್ಬರು ಕ್ಷೌರಿಕರು ಹಾಗೂ ಸ್ಥಳೀಯ 14 ಜನರ ಮೇಲೆ ಯಲಬುರ್ಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಕೊಪ್ಪಳ ಡಿವೈಎಸ್‍ಪಿ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಇದನ್ನು ಓದಿ: ವೆಂಟಿಲೇಟರ್ ಕದ್ದು ಪರಾರಿಯಾದ ಖತರ್ನಾಕ್ ಕಳ್ಳರು