Tag: hair

  • ನಿಮ್ಮ ಕೂದಲ ಸೌಂದರ್ಯ ಕಾಪಾಡಿಕೊಳ್ಳಲು ಈ ರೀತಿ ಮಾಡಿ

    ನಿಮ್ಮ ಕೂದಲ ಸೌಂದರ್ಯ ಕಾಪಾಡಿಕೊಳ್ಳಲು ಈ ರೀತಿ ಮಾಡಿ

    ಕೂದಲು ಸೌಂದರ್ಯದ ಸಂಕೇತ. ಆದರೆ ಇಂದಿನ ಯುಗದಲ್ಲಿ ಕೂದಲನ್ನು ಚೆನ್ನಾಗಿ ಇಟ್ಟುಕೊಳ್ಳುವುದು ಒಂದು ಸವಾಲಾಗಿದೆ. ಇಂದಿನ ಯುಗದಲ್ಲಿ ಮಾಲಿನ್ಯ, ಟೆನ್ಶನ್, ನಿಯಮಿತವಾಗಿ ಆಹಾರ ಸೇವಿಸದೇ ಇರುವುದು ಈ ಎಲ್ಲಾ ಕಾರಣದಿಂದಾಗಿ ನಿಮ್ಮ ಕೂದಲು ಉದುರುವುದು ಹೆಚ್ಚಾಗಬಹುದು. ನಿಮ್ಮ ಕೂದಲಿನ ಅಂದಕ್ಕೆ ಒಂದಿಷ್ಟು ಟಿಪ್ಸ್‍ಗಳನ್ನು ನೀಡುತ್ತೇವೆ. ಇದನ್ನು ನಿಯಮಿತವಾಗಿ ಪಾಲಿಸಿ ಕೂದಲಿನ ಆರೋಗ್ಯ ಕಾಪಾಡಿಕೊಳ್ಳಿ.

    ಆರೋಗ್ಯಕರ ಆಹಾರವನ್ನು ಸೇವಿಸಿ:
    ಪ್ರತಿನಿತ್ಯ ಆರೋಗ್ಯಕರ ಆಹಾರವನ್ನು ಸೇವಿಸಿಸುವುದರಿಂದ ಪೌಷ್ಟಿಕಾಂಶದ ಕೊರತೆಗಳು, ಹಾರ್ಮೋನ್‍ಗಳ ಅಸಮತೋಲನ, ಥೈರಾಯ್ಡ್, ರಕ್ತ ಹೀನತೆ ಮತ್ತು ಇತರ ಸಮಸ್ಯೆ ನಿವಾರಣೆಗೆ ಸಹಾಯ ಮಾಡುತ್ತದೆ. ವಿಟಮಿನ್-ಸಮೃದ್ಧ ಆಹಾರವು ಪೌಷ್ಟಿಕಾಂಶದ ಅಂತರವನ್ನು ತುಂಬಲು ನಿಮಗೆ ಸಹಾಯ ಮಾಡುತ್ತದೆ. ಜೊತೆಗೆ ನೀವು ಆರೋಗ್ಯಕರ ಕೂದಲನ್ನು ಹೊಂದಲು ಸಹಾಯವಾಗುತ್ತದೆ. ನಿಮ್ಮ ದೇಹದ ಆರೋಗ್ಯವನ್ನು ನೀವು ನಿರ್ಲಕ್ಷಿಸುವುದರಿಂದ ನಿಮ್ಮ ಕೂದಲು ಉದುರುವುದು ಹೆಚ್ಚುತ್ತದೆ. ಇದರಿಂದಾಗಿ ಸಾಧ್ಯವಾದಷ್ಟು ನಿಮ್ಮ ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳಿ. ಇದನ್ನೂ ಓದಿ: ನಾಲಿಗೆಗೆ ಕಹಿ ನೀಡುವ ಬೇವು ಆರೋಗ್ಯಕ್ಕೆ ಒಳ್ಳೆಯದು

    ಅಂದಗೊಳಿಸುವತ್ತ ಗಮನ ಕೊಡಿ:
    ನಿಯಮಿತವಾಗಿ ಹೇರ್ ಕಟ್ ಮಾಡಿಸಿ. ಜೊತೆಗೆ ಸ್ಪ್ಲಿಟ್ ಹೇರ್‌ಗಳನ್ನು ತೆಗೆಯಬೇಕು. ನಿಮ್ಮ ಕೂದಲಿಗೆ ಅಗಲವಾದ ಹಲ್ಲಿನ ಬಾಚಣಿಗೆಗಳನ್ನು ಬಳಸಿ. ಸ್ಕಾರ್ಫ್, ಕ್ಯಾಪ್‍ಗಳು ಅಥವಾ ಛತ್ರಿಗಳಿಂದ ನಿಮ್ಮ ಕೂದಲನ್ನು ಸೂರ್ಯನಿಂದ ರಕ್ಷಿಸಿ. ನಿಮ್ಮ ಕೂದಲನ್ನು ಸೌಮ್ಯವಾದ ಶ್ಯಾಂಪೂವಿನಿಂದ ತೊಳೆಯಬೇಕು. ತಲೆ ಸ್ನಾನ ಮಾಡುವಾಗ ತುಂಬಾ ಬಿಸಿಯಾದ ನೀರನ್ನು ಬಳಸಬಾರದು. ಜೊತೆಗೆ ನೈಸರ್ಗಿಕವಾಗಿ ಮತ್ತು ನಿಧಾನವಾಗಿ ಒಣಗಿಸಬೇಕು. ಇದನ್ನೂ ಓದಿ: ಸರ್ವ ರೋಗಕ್ಕೂ ದಾಸವಾಳದಲ್ಲಿದೆ ಮದ್ದು

    ಕೂದಲ ಸಂರಕ್ಷಣೆ ಸಾಂಪ್ರದಾಯಿಕ ಕೆಲವು ಟಿಪ್ಸ್:
    ತಾಯಂದಿರು ಮತ್ತು ಅಜ್ಜಿಯರು ಕೂದಲಿನ ಸಂರಕ್ಷಣೆಗೆ ಬಳಸುತ್ತಿದ್ದ ಕೆಲ ಟಿಪ್ಸ್‍ಗಳನ್ನು ನೀವೂ ಅಳವಡಿಸಿಕೊಳ್ಳಿ. ಪ್ರತಿನಿತ್ಯ ನಿಮ್ಮ ಕೂದಲಿಗೆ ಎಣ್ಣೆಯ ಮಸಾಜ್ ಮಾಡುವುದು, ವಾರಕ್ಕೊಮ್ಮೆ ಬೇವು ಅಥವಾ ಕರಿಬೇವಿನ ಎಲೆಗಳ ಹೇರ್ ಮಾಸ್ಕ್‍ಗಳನ್ನು ಬಳಸಬೇಕು. ಆವಕಾಡೊ, ಮೊಸರು, ಬಾಳೆಹಣ್ಣುಗಳನ್ನು ಬಳಸುವುದು. ಮೆಂತೆ, ಜೇನುತುಪ್ಪ, ಶಿಗೆಕಾಯಿ, ಮೊಟ್ಟೆ, ನೆಲ್ಲಿ ಕಾಯಿಗಳನ್ನು ತಲೆಗೆ ಬಳಸುವುದರಿಂದ ನಿಮ್ಮ ಕೂದಲಿನಲ್ಲಿ ಸಾಕಷ್ಟು ಬದಲಾವಣೆಗಳನ್ನು ಕಾಣುತ್ತೀರಿ. ಇದನ್ನೂ ಓದಿ: ದೇಹದ ತೂಕ ಮುಜುಗರ ಉಂಟುಮಾಡುತ್ತಿದೆಯಾ? ರಾಮಬಾಣದಂತಿವೆ ಈ ಮನೆಮದ್ದುಗಳು

    ನಿಮ್ಮ ಕೂದಲಿಗೆ ಸರಿಹೊಂದುವ ಶ್ಯಾಂಪು, ಕಂಡಿಷನರ್ ಬಳಸಿ:
    ಕೂದಲಿಗೆ ನೈಸರ್ಗಿಕ ಸೌಂದರ್ಯವನ್ನು ಕಳೆದುಕೊಳ್ಳದ ಶ್ಯಾಂಪುಗಳು ಮತ್ತು ಕಂಡಿಷನರ್‍ಗಳನ್ನು ಆರಿಸಿ. ನಿಮ್ಮ ಕೂದಲನ್ನು ತೊಳೆಯುವಾಗ ಮತ್ತು ಕಂಡೀಷನಿಂಗ್ ಬಳಸುವಾಗ ಉತ್ತಮ ಉತ್ಪನ್ನಗಳಿಗಾಗಿ ನಿಮ್ಮ ಕೇಶ ವಿನ್ಯಾಸಕರನ್ನು ಸಂಪರ್ಕಿಸಿ ಮತ್ತು ಅವುಗಳನ್ನು ಮಿತವಾಗಿ ಬಳಸಿ. ನಿಮ್ಮ ಕೂದಲಿಗೆ ಹೊಂದಾಣಿಕೆಯಾಗದ ಶ್ಯಾಪೂ ಮತ್ತು ಕಂಡೀಶನರ್‌ಗಳನ್ನು ಬಳಸುವುದರಿಂದ ಕೂದಲಿನ ಬೆಳವಣಿಗೆಯನ್ನು ನಿಧಾನಗೊಳಿಸುತ್ತದೆ ಮತ್ತು ಕೂದಲಿನ ಹೊಳಪನ್ನು ಮಂದಗೊಳಿಸುತ್ತದೆ. ಇದನ್ನೂ ಓದಿ: ಡಾರ್ಕ್ ಸರ್ಕಲ್‍ಗೆ ಇಲ್ಲಿದೆ ಪರಿಹಾರ

    ನಿಮ್ಮ ಒತ್ತಡವನ್ನು ನಿರ್ವಹಿಸಿ:
    ಕೂದಲಿನ ಬೆಳವಣಿಗೆಯ ಮೇಲೆ ಪರಿಣಾಮ ಬೀರುವ ಮತ್ತೊಂದು ಅಂಶವೆಂದರೆ ಒತ್ತಡವಾಗಿದೆ. ಇದರಿಂದಾಗಿ ಧ್ಯಾನ, ವ್ಯಾಯಾಮ ಮತ್ತು ಪ್ರಾಣಾಯಾಮಗಳನ್ನು ನಿಯಮಿತವಾಗಿ ಮಾಡಿ. ನೀವು ಸಂತೋಷದಿಂದ ಇದ್ದರೆ ನಿಮ್ಮ ಒಟ್ಟಾರೆ ಆರೋಗ್ಯ ಸುಧಾರಿಸುತ್ತದೆ. ನಿಯಮಿತ ವ್ಯಾಯಾಮವು ಸುಧಾರಿತ ರಕ್ತ ಪರಿಚಲನೆ, ಸುಧಾರಿತ ಮನಸ್ಥಿತಿ, ಹೆಚ್ಚಿದ ಶಕ್ತಿ ಮತ್ತು ಸುಧಾರಿತ ನಿದ್ರೆ ಸೇರಿದಂತೆ ಹಲವಾರು ಪ್ರಯೋಜನಗಳನ್ನು ಹೊಂದಿದೆ. ಈ ಎಲ್ಲಾ ಅಂಶಗಳು ನಿಮ್ಮ ಕೂದಲಿನ ಆರೋಗ್ಯಕ್ಕೆ ಕೊಡುಗೆ ನೀಡುತ್ತವೆ. ಇದನ್ನೂ ಓದಿ: ಬೇಸಿಗೆಯಲ್ಲಿ ನಿಮ್ಮ ತ್ವಚೆಯ ರಕ್ಷಣೆಗೆ ಇಲ್ಲಿದೆ ಸರಳ ಉಪಾಯ

  • ಕೂದಲಿನಿಂದ 126 ಕೋಟಿ, ಲಡ್ಡು ಪ್ರಸಾದದಿಂದ 365 ಕೋಟಿ – ಟಿಟಿಡಿ ನಿರೀಕ್ಷಿತ ಆದಾಯ

    ಅಮರಾವತಿ: ದೇಶದ ಶ್ರೀಮಂತ ದೇವಾಲಯಗಳಲ್ಲಿ ಒಂದಾಗಿರುವ ಆಂಧ್ರಪ್ರದೇಶದ ತಿರುಪತಿಯಲ್ಲಿರುವ ತಿರುಮಲ ತಿರುಪತಿ ದೇವಸ್ಥಾನ(ಟಿಟಿಡಿ) ಗುರುವಾರ ತನ್ನ 2022-23ನೇ ಸಾಲಿನ ಬಜೆಟ್ ಮಂಡಿಸಿದೆ.

    ತಿರುಮಲದ ಪುರಾತನ ವೆಂಕಟೇಶ್ವರ ದೇವಾಲಯದ ಆಡಳಿತ ಮಂಡಳಿ 2022-23ರ ವಾರ್ಷಿಕ ಬಜೆಟ್‌ನಲ್ಲಿ 3,096.40 ಕೋಟಿ ರೂ. ಆದಾಯವನ್ನು ಅಂದಾಜಿಸಿದೆ.

    ಮುಂದಿನ 12 ತಿಂಗಳ ಹಣಕಾಸು ಯೋಜನೆಯನ್ನು ಬಜೆಟ್ ಸಭೆಯಲ್ಲಿ ಪರಿಶೀಲಿಸಿದ ಬಳಿಕ ಟಿಟಿಡಿ ಮಂಡಳಿಯ ಅಧ್ಯಕ್ಷ ವೈ.ವಿ. ಸುಬ್ಬಾ ರೆಡ್ಡಿ ಹಾಗೂ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಸ್. ಜವಾಹರ ರೆಡ್ಡಿ ವಾರ್ಷಿಕ ಬಜೆಟ್ ಬಗ್ಗೆ ಮಾಧ್ಯಮಕ್ಕೆ ತಿಳಿಸಿದ್ದಾರೆ. ಇದನ್ನೂ ಓದಿ: 290 ಗ್ರಾಂ ತೂಕದ ಸ್ಟ್ರಾಬೆರಿ ಬೆಳೆದು ವಿಶ್ವ ದಾಖಲೆ

    ದೇವಾಲಯದ ವಾರ್ಷಿಕ ಆದಾಯದಲ್ಲಿ ಸುಮಾರು 1,000 ಕೋಟಿ ರೂ. ಹುಂಡಿಯಲ್ಲಿ (ದಾನ-ಪಾತ್ರೆ) ಭಕ್ತರಿಂದ ಬರುತ್ತದೆ ಎಂದು ಅಂದಾಜಿಸಲಾಗಿದೆ. ರಾಷ್ಟ್ರೀಕೃತ ಹಾಗೂ ಖಾಸಗಿ ಬ್ಯಾಂಕ್‌ಗಳಲ್ಲಿನ ಠೇವಣಿ ಮೇಲಿನ ಬಡ್ಡಿ ಸುಮಾರು 668.5 ಕೋಟಿ ರೂ., ವಿವಿಧ ರೀತಿಯ ಟಿಕೆಟ್‌ಗಳ ಮಾರಾಟದಿಂದ 362 ಕೋಟಿ ರೂ. ಸಂಗ್ರಹವಾಗಬಹುದು ಎಂದು ಅಂದಾಜಿಸಲಾಗಿದೆ.

    ಲಡ್ಡು ಪ್ರಸಾದ ಮಾರಾಟದಿಂದ 365 ಕೋಟಿ ರೂ., ವಸತಿ ಹಾಗೂ ಮದುವೆ ಮಂಟಪದ ಬಾಡಿಗೆಯಿಂದ 95 ಕೋಟಿ ರೂ., ಭಕ್ತರು ಅರ್ಪಿಸುವ ಕೂದಲು ಮಾರಾಟದಿಂದ 126 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಇದರೊಂದಿಗೆ ಮಂಡಳಿಯ ವಿವಿಧ ಸೇವೆಗಳ ವೆಚ್ಚವನ್ನು 1,360 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಇದನ್ನೂ ಓದಿ: ಡೆಲ್ಲಿ To ಲಂಡನ್ ಬಸ್ ಟೂರ್ – 70 ದಿನಗಳಲ್ಲಿ 18 ದೇಶ ಸುತ್ತುವ ಅವಕಾಶ

    ಭಕ್ತರು ತಿರುಪತಿ ಬಾಲಾಜಿ ದೇವಸ್ಥಾನಕ್ಕೆ ಬಂದು ತಮ್ಮ ಕೂದಲನ್ನು ದಾನ ಮಾಡಿದರೆ ಲಕ್ಷ್ಮಿ ದೇವಿಯ ಆಶೀರ್ವಾದ ಪಡೆಯುತ್ತಾರೆ ಹಾಗೂ ಅವರ ಎಲ್ಲಾ ತೊಂದರೆಗಳು ದೂರವಾಗುತ್ತದೆ ಎಂಬುದು ಜನಪ್ರಿಯ ನಂಬಿಕೆ. ಲಕ್ಷ್ಮಿ ದೇವಿ ಇಲ್ಲಿ ಎಲ್ಲಾ ಪಾಪಗಳನ್ನು ಹಾಗೂ ದುಷ್ಟತನವನ್ನು ತೊರೆಯುವ ವ್ಯಕ್ತಿಯ ಎಲ್ಲಾ ದುಃಖಗಳನ್ನು ದೂರ ಮಾಡುತ್ತಾಳೆ ಎಂದು ನಂಬಲಾಗುತ್ತದೆ.

    ಈ ನಂಬಿಕೆಯನ್ನು ಪೂರ್ಣಗೊಳಿಸಲು ಜನರು ಎಲ್ಲಾ ದುಷ್ಟತನ ಹಾಗೂ ಪಾಪವನ್ನು ತಮ್ಮ ಕೂದಲ ರೂಪದಲ್ಲಿ ಬಿಡುತ್ತಾರೆ. ಪ್ರತಿದಿನ ಸುಮಾರು 20 ಸಾವಿರ ಭಕ್ತರು ತಿರುಪತಿ ದೇವಸ್ಥಾನಕ್ಕೆ ಕೇಶ ದಾನಕ್ಕೆ ಹೋಗುತ್ತಾರೆ. ಈ ಕೆಲಸಕ್ಕಾಗಿ ಸುಮಾರು 600 ಕ್ಷೌರಿಕರನ್ನು ದೇವಾಲಯದ ಆವರಣದಲ್ಲಿ ಇರಿಸಲಾಗಿದೆ.

  • ಕೂದಲು ರಫ್ತಿಗೆ ನಿರ್ಬಂಧ ಹೇರಿದ ಕೇಂದ್ರ ಸರ್ಕಾರ

    ಕೂದಲು ರಫ್ತಿಗೆ ನಿರ್ಬಂಧ ಹೇರಿದ ಕೇಂದ್ರ ಸರ್ಕಾರ

    ನವದೆಹಲಿ: ಭಾರತದಿಂದ ಬೇರೆ ದೇಶಗಳಿಗೆ ಕೂದಲು ರಫ್ತು ಮಾಡುವುದಕ್ಕೆ ವಿದೇಶಿ ವ್ಯವಹಾರಗಳ ಮಹಾ ನಿರ್ದೇಶನಾಲಯ(ಡಿಜಿಎಫ್‍ಟಿ)ಕೆಲವು ನಿರ್ಬಂಧ ಹೇರಿದೆ.

    ಪರವಾನಗಿ ಇರುವವರು ಅಥವಾ ಡಿಜಿಎಫ್‍ಟಿಯಿಂದ ಅನುಮತಿ ಪಡೆದವರು ಮಾತ್ರವೇ ಕೂದಲು ರಪ್ತು ಮಾಡಬಹುದು. ಕೂದಲಿನ ಕಳ್ಳಸಾಗಣೆಯನ್ನು ತಪ್ಪಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಾಗಿದೆ. ರಫ್ತುದಾರರು ಭಾರತದ ಹೊರಗೆ ಕೂದಲಿನ ಸಾಗಣೆಯನ್ನು ಕಳುಹಿಸಲು ವಿದೇಶಿ ವ್ಯಾಪಾರದ ಮಹಾನಿರ್ದೇಶನಾಲಯದಿಂದ ಅನುಮತಿ ಅಥವಾ ಪರವಾನಗಿಯನ್ನು ಪಡೆಯಬೇಕಾಗುತ್ತದೆ ಎಂದು ಡಿಜಿಎಫ್‍ಟಿ ತಿಳಿಸಿದೆ.

    ದೇಶದಲ್ಲಿ ಪಶ್ಚಿಮ ಬಂಗಾಳ, ಆಂಧ್ರಪ್ರದೇಶ, ತೆಲಂಗಾಣ ಮತ್ತು ತಮಿಳನಾಡು ಅತಿ ಹೆಚ್ಚು ಕೂದಲು ರಪ್ತು ಮಡುವ ರಾಜ್ಯಗಳಾಗಿವೆ. ಭಾರತ ಈ ಆರ್ತೀಕ ವರ್ಷದ ಏಪ್ರಿಲ್-ನವೆಂಬರ್ ಅವಧಿಯಲ್ಲಿ 1 ಸಾವಿರ ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಕೂದಲು ರಫ್ತು ಮಾಡಿದೆ.

    ಕೂದಲು ರಫ್ತುದಾರರು ಈ ಕ್ರಮವನ್ನು ಸ್ವಾಗತಿಸಿದ್ದಾರೆ.  ಮ್ಯಾನ್ಮಾರ್ ಮತ್ತು ಚೀನಾದಂತಹ ದೇಶಗಳಿಗೆ ಕಚ್ಚಾ ಮಾನವ ಕೂದಲನ್ನು ಕಳ್ಳಸಾಗಣೆ ಮಾಡುವ ವಿಚಿತ್ರ ಸವಾಲನ್ನು ಎದುರಿಸುತ್ತಿದೆ ಆರೋಪಿಸಿದ್ದಾರೆ. ಇದು ಸ್ಥಳೀಯ ಕೈಗಾರಿಕೆಗಳು ಮತ್ತು ರಫ್ತುಗಳಿಗೆ ಹಾನಿಯನ್ನುಂಟುಮಾಡುತ್ತಿದೆ. ಈಗ ಈ ನಿರ್ಬಂಧದಿಂದ, ನಿಜವಾದ ರಫ್ತುದಾರರು ಮಾತ್ರ ಉತ್ಪನ್ನವನ್ನು ರಫ್ತು ಮಾಡಲು ಸಾಧ್ಯವಾಗುತ್ತದೆ. ಇದು ತಮ್ಮ ಬಹುಕಾಲದ ಬೇಡಿಕೆಯಾಗಿದೆ ಎಂದು ಮಾನವ ಕೂದಲು ಮತ್ತು ಕೂದಲಿನ ಉತ್ಪನ್ನಗಳ ತಯಾರಕರು ಮತ್ತು ರಫ್ತುದಾರರ ಸಂಘ ಆಫ್ ಇಂಡಿಯಾ ಸುನೀಲ್ ಎಮಾನಿ ಹೇಳಿದ್ದಾರೆ.

  • ಕೂದಲ ರಕ್ಷಣೆಗಾಗಿ ಮನೆಯಲ್ಲೇ ತಯಾರಿಸಿ ಮದ್ದು

    ಕೂದಲ ರಕ್ಷಣೆಗಾಗಿ ಮನೆಯಲ್ಲೇ ತಯಾರಿಸಿ ಮದ್ದು

    ಕೂದಲು ತುಂಬಾ ಉದ್ದವಾಗಿ ಇರಬೇಕು, ದಪ್ಪವಾಗಿ ಅಂತೆಲ್ಲ ಆಸೆ ಇರುತ್ತದೆ. ನಮ್ಮ ಸುಂದರ ಕೂದಲಿಗೆ ಮನೆಯಲ್ಲಿಯೇ ಕೆಲ ಎಣ್ಣೆಗಳನ್ನು ತಯಾರಿಸಬಹುದು. ಕೂದಲಿಗೆ ಎಣ್ಣೆ ಹಾಕುವುದು ಎಲ್ಲಾ ಸತ್ತ ಕೂದಲಿನ ಕೋಶಗಳನ್ನು ಪುನಶ್ಚೇತನಗೊಳಿಸಲು ಸಹಾಯ ಮಾಡುತ್ತದೆ. ಎಣ್ಣೆಯನ್ನು ಹಚ್ಚುವುದರಿಂದ ಕೂದಲನ್ನು ಬೇರುಗಳಿಂದ ತುದಿಯವರೆಗೆ ಬಲಪಡಿಸುತ್ತದೆ. ಆದ್ದರಿಂದ ಎಣ್ಣೆಗೆ ನೈಸರ್ಗಿಕ ಪದಾರ್ಥಗಳನ್ನು ಸೇರಿಸಿ ಕೂದಲ ಆರೋಗ್ಯವನ್ನು ಹೆಚ್ಚಿಸುವುದು ಹೇಗೆಂದು ನೋಡೋಣ.

    ಈರುಳ್ಳಿ ಎಣ್ಣೆ: ಈರುಳ್ಳಿ ಮತ್ತು ಕರಿಬೇವಿನ ಎಲೆಗಳನ್ನು ತೆಗೆದಿಟ್ಟುಕೊಳ್ಳಿ. ಈ ಎರಡನ್ನೂ ಚೆನ್ನಾಗಿ ಪೇಸ್ಟ್ ಮಾಡಿ. ಕಡಿಮೆ ಉರಿಯಲ್ಲಿ, ಕೊಬ್ಬರಿ ಎಣ್ಣೆಗೆ ಈ ಪೇಸ್ಟ್ ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ. 5-10 ನಿಮಿಷಗಳ ನಂತರ, ಉರಿ ಹೆಚ್ಚಿಸಿ. ಈ ಮಿಶ್ರಣವನ್ನು ಕುದಿಯಲು ಬಿಡಿ. ಈ ಮಿಶ್ರಣವನ್ನು ತಣ್ಣಗಾಗಲು ಪಕ್ಕಕ್ಕೆ ಇರಿಸಿ ಮತ್ತು ರಾತ್ರಿಯಿಡೀ ಬಿಡಿ. ಮರುದಿನ, ಎಣ್ಣೆಯನ್ನು ಸೋಸಿ, ಸೂಕ್ತವಾದ ಡಬ್ಬಿಯಲ್ಲಿ ಸಂಗ್ರಹಿ ನಿಮ್ಮ ಕೂದಲಿಗೆ ಹಚ್ಚುತ್ತಾ ಬನ್ನಿ. ಇದನ್ನೂ ಓದಿ: ಖರ್ಜೂರ ತಿಂದು ಆರೋಗ್ಯವಾಗಿರಿ – ಪ್ರತಿದಿನ ಒಂದೊಂದು ತಿಂದರೂ ನೀವು ಗಟ್ಟಿಯಾಗ್ತೀರಿ

    ದಾಸವಾಳ ಎಣ್ಣೆ: ದಾಸವಾಳ ಹೂವು ಮತ್ತು ಎಲೆಗಳನ್ನು ತೆಗೆದುಕೊಂಡು ರುಬ್ಬಿಕೊಳ್ಳಿ. ನಂತರ ಕೊಬ್ಬರಿ ಎಣ್ಣೆಯನ್ನು ತೆಗೆದುಕೊಂಡು ಚನ್ನಾಗಿ ಕಾಯಿಸಿ, ಎಣ್ಣೆ ಕಾದ ನಂತರ ರುಬ್ಬಿಕೊಂಡ ಮಿಶ್ರಣವನ್ನು ಹಾಕಿ ಮತ್ತೆ ಚನ್ನಾಗಿ ಕುದಿಸಿದರೆ ದಾಸವಾಳದ ಎಣ್ಣೆ ರೆಡಿ. ಇದನ್ನೂ ಓದಿ: ಚಳಿಗಾಲದಲ್ಲಿ ಈ ತರಕಾರಿ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಿ

    ನೆಲ್ಲಿಕಾಯಿ ಎಣ್ಣೆ: ಒಣಗಿದ ನೆಲ್ಲಿಕಾಯಿ ತೆಗೆದುಕೊಂಡು ತೆಂಗಿನ ಎಣ್ಣೆಯಲ್ಲಿ ಹಾಕಿ ಕುದಿಸಿ, ನಂತರ ಸೋಸಿಕೊಳ್ಳಿ. ಈ ಎಣ್ಣೆಯನ್ನು ನಿಯಮಿತವಾಗಿ ಬಳಸುವುದು ಹೆಚ್ಚು ಪ್ರಯೋಜನಕಾರಿ. ಇದನ್ನೂ ಓದಿ: ತ್ವಚೆಯ ಅಂದಕ್ಕೆ ಮನೆಮದ್ದು – ಇಲ್ಲಿದೆ ಟಿಪ್ಸ್‌

    ಪುದೀನಾ ಎಣ್ಣೆ: ಕೆಲವು ಪುದೀನಾ ಎಲೆಗಳನ್ನು ಪುಡಿಮಾಡಿ. ಬಾದಾಮಿ ಎಣ್ಣೆಯೊಂದಿಗೆ ಪಾತ್ರೆಯಲ್ಲಿ ಪುಡಿಮಾಡಿದ ಎಲೆಗಳನ್ನು ಹಾಕಿ, ಎರಡು ಮೂರು ದಿನಗಳವರೆಗೆ ಸೂರ್ಯನ ಕೆಳಗೆ ಬಿಡಿ. ಎಣ್ಣೆಯನ್ನು ಸೋಸಿಕೊಳ್ಳಿ ಮತ್ತು ಬಳಸಿ.

  • 12,000 ಕೆಜಿ ತೂಕದ ಬಸ್ಸನ್ನು ಕೂದಲಿನಿಂದ ಎಳೆದ ಭಾರತೀಯ ಮಹಿಳೆ- Video Viral

    12,000 ಕೆಜಿ ತೂಕದ ಬಸ್ಸನ್ನು ಕೂದಲಿನಿಂದ ಎಳೆದ ಭಾರತೀಯ ಮಹಿಳೆ- Video Viral

    ಭಾರತೀಯ ಮಹಿಳೆಯೊಬ್ಬಳು 12,000 ಕೆಜಿ ತೂಕದ ಬಸ್ಸನ್ನು ಕೂದಲಿನ ಸಹಾಯದಿಂದ ಎಳೆದುಕೊಂಡು ಗಿನ್ನಿಸ್ ದಾಖಲೆ ನಿರ್ಮಿಸಿದ್ದರು. ಈ ವೀಡಿಯೋ ಇದೀಗ ವೈರಲ್‌ ಆಗಿದೆ.

    ಆಶಾ ರಾಣಿ ಗಿನ್ನಿಸ್ ದಾಖಲೆಗೆ ಪಾತ್ರವಾದ ಮಹಿಳೆಯಾಗಿದ್ದಾರೆ. ಇವರ ಹೆಸರು ಭಾರತದಲ್ಲಿ ಅಷ್ಟೋಂದು ಜನಪ್ರಿಯವಾಗಿಲ್ಲದಿರಬಹುದು. ಆದರೆ ಶಕ್ತಿ ಮತ್ತು ಸಾಹಸ ಪ್ರದರ್ಶನದಲ್ಲಿ ಇವರು ಉತ್ತಮವಾದ ಹೆಸರನ್ನು ಮಾಡಿದ್ದಾರೆ. ಇವರು 2016ರಲ್ಲಿ ಗಿನ್ನಿಸ್ ರೆಕಾರ್ಡ್ ಮಾಡಿದ್ದರು. ತನ್ನ ಕೂದಲಿನಿಂದ 12,000 ತೂಕದ ಬಸ್ ಎಳೆದುಕೊಂಡು ಗಿನ್ನಿಸ್ ದಾಖಲೆ ಮಾಡಿರುವ ಇವರ ಹೆಸರಿನಲ್ಲಿ ಅನೇಕ ದಖಲೆಗಳು ಇವೆ. ಆದರೆ ಈ ವೀಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: ಕೊರೊನಾ ಸೋಂಕಿತರು 7 ದಿನದಲ್ಲಿ ರಿಕವರಿ ಹೊಂದಿದ್ರೂ, 14 ದಿನ ಕ್ವಾರಂಟೈನ್ ಕಡ್ಡಾಯ: WHO

    ಆಶಾ ರಾಣಿ 2016 ರಲ್ಲಿ 12,216 ಕೆಜಿ ತೂಕದ ಡಬಲ್ ಡೆಕ್ಕರ್ ಬಸ್ ಅನ್ನು ತನ್ನ ಕೂದಲನ್ನು ಬಳಸಿ ಎಳೆದಿದ್ದರು. ಇದು ಗಿನ್ನೆಸ್ ವಿಶ್ವ ದಾಖಲೆಯನ್ನು ನಿರ್ಮಿಸಿತ್ತು.  ಆಶಾ ಐರನ್ ಕ್ವೀನ್ ಎನ್ನುವ ಖ್ಯಾತಿಗೆ ಪಾತ್ರರಾಗಿದ್ದರು. ಇದನ್ನೂ ಓದಿ: ದಿನದಲ್ಲಿ 50 ಸಾವಿರಕ್ಕೂ ಹೆಚ್ಚು ಕೋವಿಡ್-19 ಕೇಸ್!

    ವೈರಲ್ ವೀಡಿಯೋದಲ್ಲಿ ಏನಿದೆ?: ಆಶಾ ರಾಣಿ, ಕೆಂಪು ಮತ್ತು ಬೂದು ಬಣ್ಣದ ಡಬಲ್ ಡೆಕ್ಕರ್ ಬಸ್‍ನ್ನು ಹಗ್ಗದ ಸಹಾಯದಿಂದ ಅವರ ತಲೆ ಕೂದಲಿಗೆ ಬಿಗಿಯಾಗಿ ಕಟ್ಟಲಾಗಿತ್ತು. ಹಿಮ್ಮುಖವಾಗಿ ನಿಂತು ಹಿಂದೆ ಹೆಜ್ಜೆ ಹಾಕುತ್ತಿದ್ದಂತೆ, ಬಸ್ ನಿಧಾನವಾಗಿ ಮುಂದಕ್ಕೆ ಚಲಿಸುತ್ತದೆ, ನಂತರ ಅವರ ಈ ಶಕ್ತಿ ಪ್ರದರ್ಶನ ಗಿನ್ನಸ್ ರೆಕಾರ್ಡ್‍ನಲ್ಲಿ ದಾಖಲಾಗಿರುವುದುನ್ನು ನಾವು ಈ ವೈರಲ್ ವೀಡಿಯೋದಲ್ಲಿ ನೋಡಬಹುದಾಗಿದೆ.

    ಆಶಾ ರಾಣಿ ಅವರ ಹೆಸರಿನಲ್ಲಿ ಹಲವು ದಾಖಲೆಗಳಿವೆ. 2014ರಲ್ಲಿ  Eye Socketನಿಂದ 15.15 ಕೆಜಿ ತೂಕವನ್ನು ಎತ್ತಿ  ಗಿನ್ನಿಸ್ ರೆಕಾರ್ಡ್ ಮಾಡಿದ್ದರು. 2 ವರ್ಷಗಳ ಹಿಂದೆ ತನ್ನ ಕಿವಿಗಳನ್ನು ಬಳಸಿ 1,700 ಕೆಜಿ ತೂಕದ ವ್ಯಾನ್ ಎಳೆದಿದ್ದರು. ಹಲ್ಲಿಗಳ ಸಹಾಯದಿಂದ ವಾಹನವನ್ನು ಕೇವಲ 22.16 ಸೆಕೆಂಡ್‍ಗಳಲ್ಲಿ 25 ಮೀಟರ್ ಎಳೆದುಕೊಂಡು ಹೋಗುವ ಮೂಲವಾಗಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು.

  • ಕೂದಲು ಉದುರುವ ಸಮಸ್ಯೆಗೆ ಕರಿಬೇವಿನ ಎಲೆಗಳಲ್ಲಿದೆ ಪರಿಹಾರ

    ಕೂದಲು ಉದುರುವ ಸಮಸ್ಯೆಗೆ ಕರಿಬೇವಿನ ಎಲೆಗಳಲ್ಲಿದೆ ಪರಿಹಾರ

    ಕೂದಲು ಉದುರುವಿಕೆಗೆ ಹಲವು ಕಾರಣಗಳಿವೆ. ಆದರೆ ನಾವು ಅಂಗಡಿಯಲ್ಲಿ ಸಿಗುವ ಎಲ್ಲಾ ಶಾಂಪೂ, ಹೇರ್ ಆಯಿಲ್‍ಗಳನ್ನು ಬಳಸಿರುತ್ತೇವೆ. ಆದರೆ ಕೆಲವು ಬಾರಿ ನಾವು ನಮ್ಮ ಮನೆಯಲ್ಲಿ ಇರುವ ಮನೆ ಮದ್ದುಗಳನ್ನು ಬಳಸುವುದರಿಂದ ಈ ಸಮಸ್ಯೆಗಳಿಗೆ ಶಾಶ್ವತವಾದ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ. ಕೂದಲು ಉದುರುವ ಸಮಸ್ಯೆಗೆ ಪರಿಹಾರ ನಿಮ್ಮ ಮನೆಯ ಹಿತ್ತಲಿನಲ್ಲೇ ಇದೆ.

    ಕೂದಲು ಉದುರುವಿಕೆ ತಡೆಯಲು ಹಲವಾರು ಶಾಂಪೂ ಹಾಗೂ ಇತರ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದರ ಪ್ರಭಾವ ಮಾತ್ರ ತಾತ್ಕಾಲಿಕ. ಇದನ್ನು ನಾವು ದೀರ್ಘಕಾಲದ ತನಕ ಬಳಸಿದರೆ ಅದರಿಂದ ಬೇರೆ ರೀತಿಯ ಅಡ್ಡಪರಿಣಾಮಗಳು ಬರಬಹುದು. ಹೀಗಾಗಿ ಕೆಲವೊಂದು ಮನೆಮದ್ದುಗಳನ್ನು ಬಳಸಿಕೊಂಡರೆ ತುಂಬಾ ಒಳ್ಳೆಯದು.

    * ಒಂದು ಕಪ್ ತೆಂಗಿನ ಎಣ್ಣೆಯಲ್ಲಿ ಒಂದು ಹಿಡಿ ಕರಿಬೇವಿನ ಎಲೆಗಳನ್ನು ಕುದಿಸಿ. ನಂತರ ಇದನ್ನು ಫಿಲ್ಟರ್ ಮಾಡಿ, ಕೂದಲಿನ ಬೇರುಗಳಿಗೆ ವಾರಕ್ಕೆ ಎರಡು ಬಾರಿ ಮಸಾಜ್ ಮಾಡಿ. ನಂತರ ನಿಮ್ಮ ತಲೆಯನ್ನು ಶಾಂಪೂ ಬಳಸಿ ತೊಳೆಯಿರಿ. ವಾರಕ್ಕೆ ಎರಡು ಬಾರಿ ಇದನ್ನು ಮಾಡಿ.

    * ಕರಿಬೇವಿನ ಎಲೆಗಳು, ನೆಲ್ಲಿಕಾಯಿ ಮಿಕ್ಸಿಯಲ್ಲಿ ಪುಡಿ ಮಾಡಿ ನಿಮ್ಮ ಕೂದಲಿಗೆ ಹಚ್ಚಿ. ನಂತರ 1 ಗಂಟೆಯ ನಂತರ ತಲೆ ತೊಳೆಯಿರಿ.

    * ಕರಿಬೇವಿನ ಎಲೆಗಳನ್ನು ನುಣ್ಣಗೆ ರುಬ್ಬಿಕೊಳ್ಳಿ. ಇದನ್ನು ಒಂದು ಕಪ್ ಮೊಸರಿನೊಂದಿಗೆ ಬೆರೆಸಿ ಕೂದಲಿಗೆ ಹಚ್ಚಿ. ನಂತರ ಒಂದು ಗಂಟೆ ನೆನೆಸಿ ಮತ್ತು ತೊಳೆಯಿರಿ. ಹೀಗೆ ಮಾಡುವುದರಿಂದ ಕೂದಲು ಉದುರುವುದನ್ನು ತಡೆಯುವುದಲ್ಲದೆ ತಲೆಹೊಟ್ಟು ಕೂಡ ತಡೆಯಬಹುದು.

    * ಎರಡು ಚಮಚ ಮೆಂತ್ಯೆ ಕಾಳುಗಳನ್ನು ತೆಗೆದುಕೊಂಡು ಅದನ್ನು ಹುಡಿ ಮಾಡಿಕೊಳ್ಳಿ. 10-15 ಕರಿಬೇವಿನ ಎಲೆಗಳನ್ನು ತೆಗೆದುಕೊಳ್ಳಿ. ಎರಡು ಚಮಚ ನೆಲ್ಲಿಕಾಯಿ ಹುಡಿ ಹಾಕಿ ಮಿಶ್ರಣ ಮಾಡಿ. ಈ ಎಲ್ಲವನ್ನು ಸರಿಯಾಗಿ ಮಿಶ್ರಣ ಮಾಡಿ ಮತ್ತು ಇದನ್ನು ದಪ್ಪಗಿನ ಪೇಸ್ಟ್ ಮಾಡಿಕೊಳ್ಳಿ. ತಲೆಬುರುಡೆ ಮತ್ತು ಕೂದಲಿಗೆ ಪೇಸ್ಟ್ ಬಳಸಿಕೊಳ್ಳಿ. 30 ನಿಮಿಷ ಕಾಲ ಹಾಗೆ ಬಿಡಿ ಮತ್ತು ಇದರ ಬಳಿಕ ಕೂದಲು ತೊಳೆಯಿರಿ.

    * ಎರಡು ಕಪ್ ನೀರು ಬಳಸಿಕೊಳ್ಳಿ ಮತ್ತು 10-15 ಕರಿಬೇವಿನ ಎಲೆಗಳನ್ನು ಹಾಕಿ ಕುದಿಸಿ. ಸ್ವಲ್ಪ ಸಮಯ ಇದನ್ನು ಸರಿಯಾಗಿ ಕುದಿಸಿ. ಶಾಂಪೂ ಹಾಕಿಕೊಂಡು ಕೂದಲು ತೊಳೆದ ಬಳಿಕ ಈ ನೀರಿನಿಂದ ಮತ್ತೆ ಕೂದಲು ತೊಳೆಯಿರಿ.

  • ಬರ್ತ್‍ಡೇ ಕ್ಯಾಂಡಲ್ ಊದುವಾಗ ಕೂದಲಿಗೆ ಬೆಂಕಿ – ಕಿರುಚಾಡಿದ ಟಿವಿ ಸ್ಟಾರ್

    ಬರ್ತ್‍ಡೇ ಕ್ಯಾಂಡಲ್ ಊದುವಾಗ ಕೂದಲಿಗೆ ಬೆಂಕಿ – ಕಿರುಚಾಡಿದ ಟಿವಿ ಸ್ಟಾರ್

    ವಾಷಿಂಗ್ಟನ್: ಹುಟ್ಟುಹಬ್ಬದ ಸಮಾರಂಭದಲ್ಲಿ ಬರ್ತ್‍ಡೇ ಕ್ಯಾಂಡಲ್ ಊದುವಾಗ ಅಮೇರಿಕ ಸ್ಟಾರ್ ನಟಿ ನಿಕೋಲ್ ರಿಚಿ ಕೂದಲಿಗೆ ಬೆಂಕಿ ಹೊತ್ತಿ ಕಿರುಚಾಡಿದ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    birthday candle

    ಸಾಮಾನ್ಯವಾಗಿ ಬರ್ತ್‍ಡೇ ದಿನ ಪ್ರತಿಯಬ್ಬರು ತಮ್ಮ ಪ್ರೀತಿ ಪಾತ್ರರೊಂದಿಗೆ ಇರಲು ಇಚ್ಛಿಸುತ್ತಾರೆ. ಅದರಲ್ಲಿಯೂ ಕೇಕ್, ಮೇಣದ ಬತ್ತಿ, ಬರ್ತ್‍ಡೇ ಕ್ಯಾಪ್ ಇವೆಲ್ಲವೂ ಸದಾ ನೆನಪಿನಲ್ಲಿ ಉಳಿಯುತ್ತದೆ. ಆದರೆ ಅಮೇರಿಕದ ಟಿವಿ ಸ್ಟಾರ್ ನಿಕೋಲ್ ರಿಚಿಯವರ 40ನೇ ವರ್ಷದ ಹುಟ್ಟುಹಬ್ಬದ ದಿನದಂದು ನಡೆದಿದ್ದೇ ಬೇರೆಯಾಗಿದೆ. ಸದ್ಯ ಈ ವೀಡಿಯೋವನ್ನು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ಬರ್ತ್‍ಡೇ ಸಮಾರಂಭದಲ್ಲಿ ನಿಕೋಲ್ ರಿಚಿ ಮಾತ್ರವಲ್ಲ ಪಾರ್ಟಿಗೆ ಆಗಮಿಸಿದ್ದವರು ಕೂಡ ಈ ಘಟನೆಯನ್ನು ಸದಾ ನೆನಪಿನಲ್ಲಿಟ್ಟುಕೊಂಡಿರುತ್ತಾರೆ. ಇದನ್ನೂ ಓದಿ: ಮೂಲೆಗುಂಪಾಗಿರೋ ಕಾಂಗ್ರೆಸ್ ಟಾಂಗಾ, ಸೈಕಲ್ ಓಡಿಸೋದಕ್ಕೆ ಮಾತ್ರ ಸೀಮಿತ: ಆರ್. ಅಶೋಕ್

    ಸೆಪ್ಟೆಂಬರ್ 21ರಂದು 40ನೇ ವಸಂತಕ್ಕೆ ಕಾಲಿಟ್ಟ ರಿಚಿ, ಕುಟುಂಬ ಮತ್ತು ಸ್ನೇಹಿತರೊಂದಿಗೆ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ವೇಳೆ ಕಪ್ಪು ಬಣ್ಣದ ಆಫ್ ಶೋಲ್ಡರ್ ಟಾಪ್ ಧರಿಸಿ, ಕೇಕ್ ಮೇಲೆ ನಿಲ್ಲಿಸಿದ್ದ ಕ್ಯಾಂಡಲ್‍ನನ್ನು ಊದಲು ಮುಂದಕ್ಕೆ ವಾಲಿದಾಗ ರಿಚಿ ಗುಂಗುರು ಕೂದಲು ಕ್ಯಾಂಡಲ್‍ಗೆ ತಾಗಿ ಬೆಂಕಿ ಹೊತ್ತಿಕೊಳ್ಳುತ್ತದೆ. ಈ ವೇಳೆ ಗಾಬರಿಗೊಂಡ ರಿಚಿ ಕಿರುಚಾಡುತ್ತಾ ಕೂದಲನ್ನು ಹೊಡೆದುಕೊಳ್ಳುತ್ತಾರೆ. ಆಗ ಇತರರು ಕೂಡ ಆಕೆಗೆ ಸಹಾಯ ಮಾಡುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ.

    ಸದ್ಯ ಹುಟ್ಟುಹಬ್ಬದ ದಿನದಂದು ತಮ್ಮ ಅನುಯಾಯಿಗಳೊಂದಿಗೆ ನಡೆದ ಈ ಅಹಿತಕರವಾದ ಘಟನೆಯನ್ನು ರಿಚಿಯವರು ಹಂಚಿಕೊಂಡಿದ್ದಾರೆ. ವೈರಲ್ ಆಗುತ್ತಿರುವ ಈ ವೀಡಿಯೋ, ಇಲ್ಲಿಯವರೆಗೂ 2.8 ಮಿಲಿಯನ್‌ಗೂ  ಅಧಿಕ ಮಂದಿ ವೀಕ್ಷಿಸಿದ್ದು, ಕೆಲವರು  ಅದೃಷ್ಟವಶಾತ್ ಒಳ್ಳೆಯದಾಯಿತು ಎಂದರೆ, ಮತ್ತಷ್ಟು ಮಂದಿ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದಾರೆ. ಇದನ್ನೂ ಓದಿ: ನಾನು ಸಾಮಾನ್ಯ ಮುನುಷ್ಯ, ನನಗೆ ಸೆಕ್ಯೂರಿಟಿ ಬೇಡವೆಂದ: ಪಂಜಾಬ್ ಸಿಎಂ

  • 99 ದಿನಗಳಲ್ಲಿ ಮುಡಿ ಕೂದಲಿನಿಂದ ಮಲೆ ಮಾದಪ್ಪನಿಗೆ ಬಂದ ಅದಾಯ 1.49 ಕೋಟಿ ರೂ.

    99 ದಿನಗಳಲ್ಲಿ ಮುಡಿ ಕೂದಲಿನಿಂದ ಮಲೆ ಮಾದಪ್ಪನಿಗೆ ಬಂದ ಅದಾಯ 1.49 ಕೋಟಿ ರೂ.

    ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟದಲ್ಲಿ ಹರಕೆ ಕೂದಲಿನ ಬಿಡ್ ನಡೆದಿದ್ದು, ಪ್ರತಿ ಕೆ.ಜಿ.ಗೆ 15,535 ರೂ. ನಂತೆ 4,595 ಕೆ.ಜಿ. ತುಂಡು ಕೂದಲು, 951 ಕೆ.ಜಿ. ಉದ್ದದ ಕೂದಲು ಮಾರಾಟವಾಗಿದ್ದು, ಇದರಿಂದ ಬರೋಬ್ಬರಿ 1,49,40,391 ರೂ. ಆದಾಯ ಬಂದಿದೆ.

    ನಾಡಿನ ಪ್ರಮುಖ ದೇಗುಲಗಳಲ್ಲಿ ಒಂದಾದ ಜಿಲ್ಲೆಯ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಹರಕೆ ಕೂದಲಿನ ಬಿಡ್ ನಡೆದಿದ್ದು, ಪ್ರತಿ ಕೆಜಿಗೆ 15,535 ರೂ. ನಂತೆ 4,595 ಕೆಜಿ ತುಂಡು ಕೂದಲು, 951 ಕೆ.ಜಿ. ಉದ್ದ ಕೂದಲು ಮಾರಾಟವಾಗಿದ್ದು, ಬರೋಬ್ಬರಿ 1,49,40,391 ರೂ. ಆದಾಯ ಬಂದಿದೆ. ಹುಂಡಿಯಲ್ಲಿ ಸಂಗ್ರಹವಾಗುತ್ತಿದ್ದ ಹಣದಿಂದ ಗಮನ ಸೆಳೆಯುತ್ತಿದ್ದ ಮಲೆ ಮಾದಪ್ಪ ಈಗ ಮತ್ತಷ್ಟು ಶ್ರೀಮಂತನಾಗಿದ್ದು, ಹರಕೆ ಕೂದಲಿನ ಹರಾಜಿನಿಂದ ಬರೋಬ್ಬರಿ 1.49 ಕೋಟಿ ರೂ. ಸಂಗ್ರಹವಾಗಿದೆ. ಇದನ್ನೂ ಓದಿ: ನಿನ್ನ ವಾಹನದಿಂದ ಬೆಳೆ ಉಳಿಸು- ಗಣಪತಿಗೆ ಜೀವಂತ ಇಲಿ ನೀಡಿ ಬೇಡಿಕೊಂಡ ರೈತ

    ಈ ಕುರಿತು ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಮಾಹಿತಿ ನೀಡಿ, ಕಳೆದ ವರ್ಷಕ್ಕಿಂತ ಈ ವರ್ಷ ಪ್ರತಿ ಕೆ.ಜಿ.ಗೆ 8,135 ರೂ. ಹೆಚ್ಚಿನ ಲಾಭ ಬಂದಿದ್ದು, ಒಟ್ಟು ಹಣ 1.49 ಕೋಟಿ ರೂ. ಸಂಗ್ರಹವಾಗಿರುವುದು ಸಾರ್ವಕಾಲಿಕ ದಾಖಲೆಯಾಗಿದೆ. ಈ ಮುಡಿ ಕೂದಲು 99 ದಿನಗಳಲ್ಲಿ ಸಂಗ್ರಹವಾಗಿತ್ತು ಎಂದು ತಿಳಿಸಿದ್ದಾರೆ.

  • ಚರ್ಮದ ಕಾಂತಿ ಹೆಚ್ಚಿಸಲು ಕುಡಿಯಿರಿ ದಾಸವಾಳ ಚಹಾ

    ಚರ್ಮದ ಕಾಂತಿ ಹೆಚ್ಚಿಸಲು ಕುಡಿಯಿರಿ ದಾಸವಾಳ ಚಹಾ

    ದೇಹ ಸೌಂದರ್ಯಕ್ಕಾಗಿ ಎಷ್ಟೋ ಜನ ತುಂಬ ಪ್ರಯತ್ನ ಪಡುತ್ತಿರುರತ್ತಾರೆ. ನಾವು ಎಲ್ಲರ ಮುಂದೆ ಚೆನ್ನಾಗಿ ಕಾಣಿಸಿಕೊಳ್ಳಬೇಕು ಎಂಬುದು ಪ್ರತಿಯೊಬ್ಬರ ಆಸೆಯಾಗಿರುತ್ತೆ. ಆದರೆ ಏನೋ ಮಾಡಲು ಹೋಗಿ, ಏನೋ ಮಾಡಿಕೊಂಡು ಇರುವ ಸೌಂದರ್ಯವನ್ನು ಹಾಳು ಮಾಡಿಕೊಳ್ಳುವವರು ತುಂಬಾ ಜನ ಇದ್ದಾರೆ. ಅಂತವರಿಗೆ ನೈಸರ್ಗಿಕವಾಗಿ ಹೇಗೆ ನಮ್ಮ ದೇಹದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು ಎಂಬುವುದಕ್ಕೆ ಮಾಹಿತಿ ಈ ಕೆಳಗಿನಂತಿದೆ.

    ದಾಸವಾಳದಿಂದ ತಯಾರಿಸಿದ ಚಹಾವನ್ನು ಸೇವಿಸುವುದರಿಂದ ಚರ್ಮದ ಕಾಂತಿ ಹೆಚ್ಚುವುದು, ಅಧಿಕ ರಕ್ತದೊತ್ತಡ ನಿಯಂತ್ರಣ, ತೂಕ ನಷ್ಟ ಮತ್ತು ಕೂದಲು ಬೆಳವಣಿಗೆಗೆ ಇದು ಸಹಾಯಕವಾಗಿದೆ.

    ದಾಸವಾಳದ ಚಹಾದಿಂದಾಗುವ ಸೌಂದರ್ಯ ಪ್ರಯೋಜನಗಳು:
    1. ಹೊಸ ಚರ್ಮದ ಬೆಳವಣಿಗೆಗೆ ಸಹಾಯಕ: ದಾಸವಾಳದಲ್ಲಿ ವಿಟಮಿನ್ ಸಿ ಸಮೃದ್ಧವಾಗಿರುವುದರಿಂದ ಈ ಚಹಾ ಕುಡಿಯುವುದರಿಂದ ದೇಹದಲ್ಲಿ ಹಾಳಾದ ಚರ್ಮ ಬೆಳವಣಿಗೆಗೆ ಸಹಾಯಕವಾಗಿದೆ. ನಿಮ್ಮ ಚರ್ಮವನ್ನು ಆರೋಗ್ಯಕರ, ತಾರುಣ್ಯ ಮತ್ತು ಹೊಳೆಯುವಂತೆ ಮಾಡಲು ಉಪಯುಕ್ತವಾಗುತ್ತದೆ.

    2. ನಿಮ್ಮ ಚರ್ಮವನ್ನು ಹೈಡ್ರೇಟ್ ಮಾಡುತ್ತದೆ.

    3. ಉರಿಯೂತವನ್ನು ಸರಾಗಗೊಳಿಸುತ್ತದೆ: ಕಪ್ಪು ಕಲೆಗಳು, ಚರ್ಮ ಸುಕ್ಕಾಗಿರುವುದನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನಮ್ಮ ಚರ್ಮದ ಮೇಲೆ ಉಂಟಾಗುವ ಹಾನಿಕಾರಕ ಪರಿಣಾಮಗಳನ್ನು ನಿಯಂತ್ರಿಸಲು ಸಹ ಇದು ಸಹಾಯ ಮಾಡುತ್ತದೆ. ಇದನ್ನೂ ಓದಿ: ಮಾನ್ಸೂನ್ ವೇಳೆ ಧರಿಸಬಹುದಾದ 7 ಶೈಲಿಯ ಡ್ರೆಸ್‍ಗಳು

    4. ಕೂದಲು ಬೇರುಗಳನ್ನು ಬಲಪಡಿಸುತ್ತದೆ: ದಾಸವಾಳದಿಂದ ಮಾಡಿದ ಚಹಾದ ಮತ್ತೊಂದು ಅದ್ಭುತ ಪ್ರಯೋಜನವೆಂದರೆ ಇದು ಅಮೈನೋ ಆಮ್ಲಗಳನ್ನು ಹೊಂದಿರುತ್ತದೆ, ಇದು ಕೂದಲಿನ ಉತ್ತಮ ಬೆಳವಣಿಗೆಗೆ ಪ್ರಮುಖ ಪೋಷಕಾಂಶಗಳಾಗಿವೆ. ಆದ್ದರಿಂದ, ದಾಸವಾಳದ ಚಹಾವನ್ನು ಕುಡಿಯುವುದರಿಂದ ನಿಮ್ಮ ಕೂದಲು ದಪ್ಪ, ಹೊಳೆಯುವಂತೆ ಮತ್ತು ನಿಮ್ಮ ಕೂದಲಿನ ಬೇರುಗಳನ್ನು ಬಲಪಡಿಸುತ್ತದೆ.

    5. ಕೂದಲಿನ ಗುಣಮಟ್ಟವನ್ನು ಉತ್ತಮಗೊಳಿಸುತ್ತದೆ: ನೀವು ದಾಸವಾಳದ ಚಹಾವನ್ನು ಕ್ಲೆನ್ಸರ್ ಆಗಿ ಬಳಸಿದರೆ, ತಲೆಹೊಟ್ಟು ನಿವಾರಣೆಯಾಗಲು ಸಹಾಯಕವಾಗುತ್ತದೆ. ಇದನ್ನೂ ಓದಿ:ಫ್ಯಾಬಿಯನ್ ಅಲೆನ್ ಫ್ಯಾಬುಲಸ್ ಕ್ಯಾಚ್ – ಫಿಂಚ್‍ಗೆ ಪಂಚ್

    
    
  • ಕೂದಲುದುರುವಿಕೆ ತಡೆಯಲು ಮನೆಯಲ್ಲಿಯೇ ಸುಲಭವಾಗಿ ತಯಾರಿಸಿ ಈರುಳ್ಳಿ ಎಣ್ಣೆ

    ಕೂದಲುದುರುವಿಕೆ ತಡೆಯಲು ಮನೆಯಲ್ಲಿಯೇ ಸುಲಭವಾಗಿ ತಯಾರಿಸಿ ಈರುಳ್ಳಿ ಎಣ್ಣೆ

    ಪ್ರತಿಯೊಬ್ಬ ಮಹಿಳೆ ಹಾಗೂ ಪುರುಷರಲ್ಲಿ ಕೂದಲಿಗೆ ಸಂಬಂಧಿಸಿದಂತೆ ಒಂದಲ್ಲ ಒಂದು ರೀತಿಯ ಸಮಸ್ಯೆಗಳು ಇದ್ದೇ ಇರುತ್ತದೆ. ಈ ಎಲ್ಲಾ ಸಮಸ್ಯೆಗಳ ಪರಿಹಾರಕ್ಕೆ ಮನೆ ಮದ್ದು ಈರುಳ್ಳಿ.

    ಹೌದು. ಈರುಳ್ಳಿ ನಿಮ್ಮ ಕಣ್ಣಲ್ಲಿ ನೀರು ತರಿಸಬಹುದು, ಆದರೆ ಇದು ತಲೆ ತುಂಬಾ ಕೂದಲು ಬೆಳೆಯಲು ಸಹಾಯ ಮಾಡುತ್ತದೆ. ಈರುಳ್ಳಿಗೆ ನಿಮ್ಮ ತಲೆಗೂದಲು ಉದುರುವಿಕೆಯನ್ನು ತಡೆಗಟ್ಟುವ ಶಕ್ತಿಯಿದೆ. ಹೀಗಾಗಿ ಮನೆಯಲ್ಲಿಯೇ ಸುಲಭವಾಗಿ ಈರುಳ್ಳಿ ಎಣ್ಣೆಯನ್ನು ತಯಾರಿಸಿ ಕೂದಲಿಗೆ ಹಚ್ಚಿ. ಇದರಿಂದ ನಿಮ್ಮ ಕೂದಲು ದಟ್ಟವಾಗಿ ಹಾಗೂ ಉದ್ದವಾಗಿ ಬೆಳೆಯುತ್ತದೆ.

    ಬೇಕಾಗುವ ಸಾಮಗ್ರಿಗಳು:
    ಕೊಬ್ಬರಿ ಎಣ್ಣೆ- 200 ಮಿ.ಲೀ
    ಬೇವಿನ ಎಲೆಗಳು- 1 ಕಪ್
    ಈರುಳ್ಳಿ- ಅರ್ಧ ಕಪ್

    ಮಾಡುವ ವಿಧಾನ
    * ಮೊದಲು ಕರಿಬೇವಿನ ಎಲೆ ಹಾಗೂ ಈರುಳ್ಳಿಯನ್ನು ನೀರು ಬಳಸದೆ ರುಬ್ಬಿಕೊಳ್ಳಿ.

    * ಇತ್ತ ಒಂದು ಪಾತ್ರೆಗೆ ತೆಂಗಿನ ಎಣ್ಣೆಯನ್ನು ಹಾಕಿ ನಂತರ ರುಬ್ಬಿದ ಈರುಳ್ಳಿ ಹಾಗೂ ಕರಿಬೇವಿನ ಮಿಶ್ರಣವನ್ನು ಕಡಿಮೆ ಉರಿಯಲ್ಲಿ ಬಿಸಿ ಮಾಡಿ. ಎಣ್ಣೆ ಸ್ವಲ್ಪ ಕಡು ಕಪ್ಪು ಬಣ್ಣಕ್ಕೆ ತಿರುಗುತ್ತಿದ್ದಂತೆಯೇ ಉರಿ ನಿಲ್ಲಿಸಿ ರಾತ್ರಿ ಇಡೀ ಹಾಗೆಯೇ ಇಟ್ಟುಬಿಡಿ.

    * ಬೆಳಗ್ಗೆ ಇದನ್ನು ಸೋಸಿ ಎಣ್ಣೆ ಮತ್ತು ಮಿಶ್ರಣವನ್ನು ಬೇರ್ಪಡಿಸಿ. ಇದು ಸ್ವಲ್ಪ ದಪ್ಪವಾಗಿರುತ್ತದೆ. ಹೀಗಾಗಿ ಜರಡಿ ಮೂಲಕ ಹಾದುಹೋಗಲು ಕೆಲ ಸಮಯ ತೆಗೆದುಕೊಳ್ಳುತ್ತದೆ.

    * ಹೀಗೆ ತೆಗೆದ ಎಣ್ಣೆಯನ್ನು ಒಂದು ಬಾಟ್ಲಿಯಲ್ಲಿ ಸಂಗ್ರಹಿಸಿಟ್ಟುಕೊಳ್ಳಿ. ವಾರದಲ್ಲಿ ಒಂದು ಸಲ ಹಚ್ಚಿದರೆ ನಿಮ್ಮ ಕೂದಲು ಸೊಂಪಾಗಿ ಹಾಗೂ ಉದ್ದವಾಗಿ ಬೆಳೆಯುವುದರಲ್ಲಿ ಎರಡು ಮಾತಿಲ್ಲ.