Tag: hair

  • ಕೂದಲು ಉದುರುತ್ತಿದೆ ಎಂದು ಮನನೊಂದ ಯುವಕ ಡೆತ್‍ನೋಟ್ ಬರೆದು ಆತ್ಮಹತ್ಯೆ

    ಕೂದಲು ಉದುರುತ್ತಿದೆ ಎಂದು ಮನನೊಂದ ಯುವಕ ಡೆತ್‍ನೋಟ್ ಬರೆದು ಆತ್ಮಹತ್ಯೆ

    ತಿರುವನಂತಪುರಂ: ಕೂದಲು (Hair) ಉದುರುವ ಸಮಸ್ಯೆಯಿಂದ ಮನನೊಂದ ಯುವಕನೊಬ್ಬ (Youth) ಆತ್ಮಹತ್ಯೆ ಮಾಡಿಕೊಂಡ ಘಟನೆ ಕೇರಳದ (Kerala) ಕೋಝಿಕ್ಕೋಡ್ ಜಿಲ್ಲೆಯಲ್ಲಿ ನಡೆದಿದೆ.

    ಕೇರಳದ ಕೋಯಿಕ್ಕೋಡ್ ಜಿಲ್ಲೆಯ ಅಥೋಲಿ ಗ್ರಾಮದ ನಿವಾಸಿ ಪ್ರಶಾಂತ್ (29) ಆತ್ಮಹತ್ಯೆಗೆ ಶರಣಾದ ಯುವಕ. ಪ್ರಶಾಂತ್ ವೆಹಿಕಲ್ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದ. ಆದರೆ ಪ್ರಶಾಂತ್‍ಗೆ ಹುಬ್ಬು ಸೇರಿದಂತೆ ತಲೆಕೂದಲು ಉದುರುತ್ತಿತ್ತು. ಇದರಿಂದಾಗಿ 2014ರಿಂದ ಕೂದಲು ಉದುರುವಿಕೆಗೆ ಚಿಕಿತ್ಸೆ ಪಡೆಯುತ್ತಿದ್ದು, ವೈದ್ಯರು ಸೂಚಿಸಿದ ಮಾತ್ರೆಗಳನ್ನು ಸೇವಿಸಿದರೂ ತಲೆ ಕೂದಲು ಉದುರುವುದು ನಿಂತಿರಲಿಲ್ಲ. ಆದರೆ ಅದ್ಯಾವುದು ಪ್ರಯೋಜನವಾಗಿರಲಿಲ್ಲ. ಅಷ್ಟೇ ಅಲ್ಲದೇ ಕೂದಲು ಇಲ್ಲ ಎಂದು ಅನೇಕರು ಆತನನ್ನು ಮದುವೆಯಾಗಲು ತಿರಸ್ಕರಿಸಿದ್ದರು. ಈ ಹಿನ್ನೆಲೆಯಲ್ಲಿ ಮನನೊಂದ ಪ್ರಶಾಂತ ಆತ್ಮಹತ್ಯೆಗೆ ಶರಣಾಗಿದ್ದಾನೆ.

    crime

    ಇದೆಲ್ಲದರಿಂದ ಆತ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದ. ಪ್ರಶಾಂತ್ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಡೆತ್ ನೋಟ್ ಬರೆದಿದ್ದು, ಕೂದಲು ಉದುರುವ ಸಮಸ್ಯೆಯಿಂದ ಮನೆಯಿಂದ ಹೊರಬರಲು ಸಾಧ್ಯವಾಗುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನ ಸಾವಿಗೆ ಕೂದಲು ಉದುರುವ ಸಮಸ್ಯೆ ಹಾಗೂ ಚಿಕಿತ್ಸೆ ನೀಡಿದ ವೈದ್ಯರೇ ಕಾರಣ ಎಂದು ಬರೆದಿದ್ದಾನೆ. ಇದನ್ನೂ ಓದಿ: ಟ್ವಿಟ್ಟರ್‌ ಖಾತೆ ಬ್ಲಾಕ್‌ ಆದೇಶ ರದ್ದು – ಕೆಜಿಎಫ್‌ ಹಾಡು ಬಳಸಿದ್ದ ಕಾಂಗ್ರೆಸ್‌ಗೆ ಬಿಗ್‌ ರಿಲೀಫ್‌

    POLICE JEEP

    ಘಟನೆಗೆ ಸಂಬಂಧಿಸಿ ಪ್ರಶಾಂತ್ ಕುಟುಂಬಸ್ಥರು ವೈದ್ಯರ ವಿರುದ್ಧ ದೂರು ದಾಖಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಕಾಪಿ ಹೊಡೆದು ಸಿಕ್ಕಿಬಿದ್ದ ವಿದ್ಯಾರ್ಥಿ- 14ನೇ ಮಹಡಿಯಿಂದ ಹಾರಿ ಆತ್ಮಹತ್ಯೆ

    Live Tv
    [brid partner=56869869 player=32851 video=960834 autoplay=true]

  • ಒಂದೇ ಜಡೆ ಹಾಕಿದ್ದಕ್ಕೆ ವಿದ್ಯಾರ್ಥಿನಿಯನ್ನು ಕ್ಲಾಸ್‍ನಲ್ಲಿ ಕೂಡಿ ಹಾಕಿ ಕೂದಲು ಕತ್ತರಿಸಿದ್ರು!

    ಒಂದೇ ಜಡೆ ಹಾಕಿದ್ದಕ್ಕೆ ವಿದ್ಯಾರ್ಥಿನಿಯನ್ನು ಕ್ಲಾಸ್‍ನಲ್ಲಿ ಕೂಡಿ ಹಾಕಿ ಕೂದಲು ಕತ್ತರಿಸಿದ್ರು!

    ಲಕ್ನೋ: ಶಾಲೆಯೊಂದರಲ್ಲಿ ವಿದ್ಯಾರ್ಥಿನಿಯೊಬ್ಬಳನ್ನು (Student) ಮುಖ್ಯ ಶಿಕ್ಷಕ (Principal) ತರಗತಿಯೊಂದರಲ್ಲಿ (Class) ಲಾಕ್ ಮಾಡಿ ಅವಳ ಇಚ್ಛೆಗೆ ವಿರುದ್ಧವಾಗಿ ಕೂದಲನ್ನು (Hair) ಕತ್ತರಿಸಿದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

    ಉತ್ತರಪ್ರದೇಶದ ಫರೂಕಾಬಾದ್ ಜಿಲ್ಲೆಯ ನವಾಬ್ ಗಂಜ್ ಪ್ರದೇಶದ ಶಾಲೆಯಲ್ಲಿ ಈ ಘಟನೆ ನಡೆದಿದೆ. ಎಲ್ಲಾ ವಿದ್ಯಾರ್ಥಿನಿಯರು 2 ಜಡೆಯನ್ನು ಹಾಕಿಕೊಂಡು ಶಾಲೆಗೆ ಬರಬೇಕು ಎಂಬ ನಿಯಮವಿತ್ತು. ಆದರೆ 9ನೇ ತರಗತಿಯ ವಿದ್ಯಾರ್ಥಿನಿಯು ಒಂದೇ ಜಡೆಯನ್ನು ಹಾಕಿಕೊಂಡು ಹೋಗಿದ್ದರಿಂದ ಮುಖ್ಯಶಿಕ್ಷಕ ಕೋಪಗೊಂಡಿದ್ದಾರೆ. ಅದಾದ ಬಳಿಕ ಆಕೆಯನ್ನು ಕೊಠಡಿಯೊಂದರಲ್ಲಿ ಬಂಧಿಸಿ ಶಿಕ್ಷೆಯಾಗಿ ಆಕೆಯ ಕೂದಲನ್ನು ಕತ್ತರಿಸಿದ್ದಾರೆ.

    ಮುಖ್ಯಶಿಕ್ಷಕ ಈ ರೀತಿ ವಿದ್ಯಾರ್ಥಿನಿಯ ಕೂದಲನ್ನು ಕತ್ತರಿಸಿರುವುದು ಇದೇ ಮೊದಲಲ್ಲ. ಹಿಂದೆಯೂ ಇತರ ವಿದ್ಯಾರ್ಥಿನಿಯರ ಕೂದಲನ್ನು ಕತ್ತರಿಸಿದ್ದ ಎನ್ನುವ ಆರೋಪ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಕಾಲ್ತುಳಿತಕ್ಕೆ 130 ಮಂದಿಯ ಸಾವಾಗಿದ್ದ ಇಂಡೋನೇಷ್ಯಾದ ಸ್ಟೇಡಿಯಂ ನೆಲೆಸಮಕ್ಕೆ ನಿರ್ಧಾರ

    ಘಟನೆಗೆ ಸಂಬಂಧಿಸಿ ಮುಖ್ಯಶಿಕ್ಷಕರ ವಿರುದ್ಧ ವಿದ್ಯಾರ್ಥಿನಿ ಫರೂಕಾಬಾದ್ ಪೊಲೀಸರಿಗೆ ದೂರು ನೀಡಿದ್ದಾಳೆ. ಅಷ್ಟೇ ಅಲ್ಲದೇ ಮುಖ್ಯಶಿಕ್ಷಕನ ದುಷ್ಕೃತ್ಯಕ್ಕೆ ಶಿಕ್ಷೆಯಾಗದಿದ್ದರೇ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವಿದ್ಯಾರ್ಥಿನಿ ಎಚ್ಚರಿಸಿದ್ದಾಳೆ.

    ಘಟನೆಗೆ ಸಂಬಂಧಿಸಿ ಮುಖ್ಯ ಶಿಕ್ಷಕರ ವಿರುದ್ಧ  ಪೋಕ್ಸೋ ಕಾಯ್ದೆ ಮತ್ತು ಐಪಿಸಿಯ ಇತರ ಸೆಕ್ಷನ್‍ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಪೊಲೀಸ್ ಇನ್ಸ್‌ಪೆಕ್ಟರ್ ಮಾತನಾಡಿ, ಸದ್ಯಕ್ಕೆ ಮುಖ್ಯ ಶಿಕ್ಷಕ ತಲೆಮರೆಸಿಕೊಂಡಿದ್ದು, ಅವರಿಗಾಗಿ ಶೋಧಕಾರ್ಯ ನಡೆಯುತ್ತಿದೆ. ಘಟನೆಗೆ ಸಂಬಂಧಿಸಿ ಸದ್ಯದಲ್ಲೇ ಆತನನ್ನು ಬಂಧಿಸಿ ವಿಚಾರಣೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ತೀವ್ರ ಸ್ವರೂಪ ಪಡೆದ ಸುರತ್ಕಲ್ ಟೋಲ್ ಗೇಟ್ ವಿರೋಧಿ ಹೋರಾಟ- ನೂರಾರು ಹೋರಾಟಗಾರರ ಬಂಧನ

    Live Tv
    [brid partner=56869869 player=32851 video=960834 autoplay=true]

  • ಹಿಜಬ್ ವಿರೋಧ ಬೆಂಬಲಿಸಿ ಕೂದಲು ಕತ್ತರಿಸಿಕೊಂಡ ಊರ್ವಶಿ ರೌಟೇಲಾ

    ಹಿಜಬ್ ವಿರೋಧ ಬೆಂಬಲಿಸಿ ಕೂದಲು ಕತ್ತರಿಸಿಕೊಂಡ ಊರ್ವಶಿ ರೌಟೇಲಾ

    ಗತ್ತಿನಾದ್ಯಂತ ಈಗ ಹಿಜಬ್ (Hijab) ವಿರೋಧದದ್ದೇ ಸದ್ದು. ಅದರಲ್ಲೂ ಇರಾನ್ ಮಹಿಳೆಯರು ಹಿಜಬ್ ವಿರೋಧಿಸಿ ಭಾರೀ ಪ್ರತಿಭಟನೆ ನಡೆಸುತ್ತಿದ್ದಾರೆ. ಇರಾನ್ ಮಹಿಳೆಯರ ಈ ಹೋರಾಟಕ್ಕೆ ವಿಶ್ವದ ನಾನಾ ಕಡೆಯ ಮಹಿಳೆಯರು ಕೂಡ ತಮ್ಮದೇ ಆದ ರೀತಿಯಲ್ಲಿ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಹಾಗೆಯೇ ಬಾಲಿವುಡ್ ನಟಿ ಊರ್ವಶಿ ರೌಟೇಲಾ (Urvashi Rautela) ಕೂಡ ವಿಭಿನ್ನ ರೀತಿಯಲ್ಲೇ ಆ ಮಹಿಳೆಯರ ಪರ ನಿಂತಿದ್ದಾರೆ.

    ಹಿಜಬ್ ವಿರುದ್ಧದ ಹೋರಾಟ ಇರಾನ್ ನಲ್ಲಿ ದಿನದಿಂದ ದಿನಕ್ಕೆ ಕಾವು ಪಡೆದುಕೊಳ್ಳುತ್ತಿದೆ. ಮಹಿಳೆಯರಿಗೆ ಸ್ವತಂತ್ರವಾಗಿ ಬದುಕಲು ಬಿಡಿ, ಹಿಜಬ್ ನಾವು ಧರಿಸುವುದಿಲ್ಲ. ನಮ್ಮ ಬಟ್ಟೆ ನಮ್ಮ ಹಕ್ಕು ಎನ್ನುತ್ತಾ ಸತತ ಒಂದು ತಿಂಗಳಿಂದ ಇರಾನ್ ಮಹಿಳೆಯರು ಬೀದಿಗೆ ಇಳಿದು ಹೋರಾಟ ಮಾಡುತ್ತಿದ್ದಾರೆ. ಈ ಬೆಳವಣಿಗೆಯ ಕುರಿತು ಬಾಲಿವುಡ್ ನಟ ಊರ್ವಶಿ ಕೂಡ ತಮ್ಮದೇ ಆದ ರೀತಿಯಲ್ಲಿ ಅಭಿಪ್ರಾಯವನ್ನು ವ್ಯಕ್ತ ಪಡಿಸಿದ್ದಾರೆ. ಇದನ್ನೂ ಓದಿ: ‘ಬಿಗ್ ಬಾಸ್ ಸೀಸನ್ 9’ರ ಮೊದಲ ಮಹಿಳಾ ಕ್ಯಾಪ್ಟನ್ ಆಗಿ ದೀಪಿಕಾ ದಾಸ್ ಆಯ್ಕೆ

    ಈ ಕುರಿತು ಅವರು ಸೋಷಿಯಲ್ ಮೀಡಿಯಾದಲ್ಲಿ ಬೆರೆದುಕೊಂಡಿದ್ದು, ‘ಹಿಜಬ್ ಕುರಿತಾಗಿ ಹಲವು ಹತ್ಯೆಗಳು ನಡೆದಿವು. ಮಹ್ಸಾ ಅಮಿನಿ ಹತ್ಯೆಯ ನಂತರ ಹಿಜಬ್ ವಿರುದ್ಧದ ಹೋರಾಟ ಶುರುವಾಯಿತು. ಅಲ್ಲದೇ, ಅನೇಕರಿಗೆ ತೊಂದರೆ ನೀಡಿದರು. ಕೂದಲನ್ನು ಕತ್ತರಿಸಿಕೊಳ್ಳುವ ಮೂಲಕ ಹಿಜಬ್ ವಿರೋಧಿಸುವೆ. ಮಹಿಳೆಯರು ಹೇಗೆ ನಡೆದುಕೊಳ್ಳಬೇಕು ಎನ್ನುವುದನ್ನು ಯಾರೂ ಹೇಳಬೇಕಿಲ್ಲ. ತಮಗಿಷ್ಟ ಬಂದಂತೆ ಅವರನ್ನು ಬದುಕಲು ಬಿಡಿ’ ಎಂದು ಊರ್ವಶಿ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

    ಕೂದಲು (Hair) ಮಹಿಳೆಯರಿಗೆ ಸೌಂದರ್ಯದ ಸಂಕೇತ. ಹಾಗಾಗಿ ಅದನ್ನೇ ಬಳಸಿಕೊಂಡು ಆ ಹೋರಾಟಕ್ಕೆ ಬೆಂಬಲ ಸೂಚಿಸಿದ್ದೇನೆ ಎಂದೂ ಬರೆದುಕೊಂಡಿರುವ ಊರ್ವಶಿ, ಇರಾನ್ ನಲ್ಲಿ ಹೋರಾಟ ಮಾಡುತ್ತಿರುವ ಮಹಿಳೆಯರಿಗೆ ಜಯ ಸಿಗಲಿ ಎಂದು ಹಾರೈಸಿದ್ದಾರೆ. ಇಂತಹ ವಿಷಯಗಳಿಗೆ ಜಗತ್ತಿನ ಹೆಣ್ಣು ಮಕ್ಕಳು ಒಂದಾಗಬೇಕು ಎಂದೂ ಅವರು ಕರೆ ನೀಡಿದ್ದಾರೆ. ಊರ್ವಶಿಯ ನಡೆಗೆ ಕೆಲವರು ಬೆಂಬಲ ಸೂಚಿಸಿದ್ದರೆ, ಇನ್ನೂ ಕೆಲವರು ಕಾಲೆಳೆದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬಲವಂತವಾಗಿ ಮಂಗಳಮುಖಿಯ ಮುಂದೆಲೆ ಕತ್ತರಿಸಿ ಹಲ್ಲೆ – ಇಬ್ಬರು ಅರೆಸ್ಟ್

    ಬಲವಂತವಾಗಿ ಮಂಗಳಮುಖಿಯ ಮುಂದೆಲೆ ಕತ್ತರಿಸಿ ಹಲ್ಲೆ – ಇಬ್ಬರು ಅರೆಸ್ಟ್

    ಚೆನ್ನೈ: ಬಲವಂತವಾಗಿ ಮಂಗಳಮುಖಿ (Transgender) ಮುಂದೆಲೆಯನ್ನು ಕತ್ತರಿಸಿ ಆಕೆಯ ಮೇಲೆ ಇಬ್ಬರು ವ್ಯಕ್ತಿಗಳು ಹಲ್ಲೆ ನಡೆಸಿರುವ ಘಟನೆ ತಮಿಳುನಾಡಿನಲ್ಲಿ (Tamilnadu) ನಡೆದಿದೆ. ಮಂಗಳಮುಖಿಯ ಕೂದಲನ್ನು ಕತ್ತರಿಸಿದ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ, ಇದೀಗ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

    ಮಂಗಳಮುಖಿ ಹಕ್ಕುಗಳ ಕಾರ್ಯಕರ್ತೆ ಗ್ರೇಸ್ ಬಾನು (Transgender Rights Activist Grace Banu) ಅವರು ಹಂಚಿಕೊಂಡಿರುವ 19 ಸೆಕೆಂಡುಗಳ ಈ ವೀಡಿಯೋದಲ್ಲಿ, ವ್ಯಕ್ತಿಯೋರ್ವ ರೇಜರ್ ಮೂಲಕ ಕೂದಲನ್ನು ಕತ್ತರಿಸಿ, ಆಕೆಯ ಪಕ್ಕ ಕುಳಿತಿದ್ದ ಮತ್ತೊಬ್ಬ ಮಂಗಳಮುಖಿಯನ್ನು ನಿಂದಿಸಿದ್ದಾನೆ. ಗಂಡಸರಿಂದ ಹಣ ಕೀಳುತ್ತೀರಾ. ಅವರ ಬಳಿ ಹಣ ಇಲ್ಲದಿದ್ದರೆ ಏನು ಮಾಡಬೇಕು? ಈಗ ಮುಗಿತು. ನೀನು ತುಂಬಾ ಚೆನ್ನಾಗಿ ಕಾಣುತ್ತಿದ್ದೀಯಾ, ಬ್ಯೂಟಿಫುಲ್ ಎಂದು ಕೂದಲು ಕತ್ತರಿಸಿ ಲೇವಡಿ ಮಾಡಿದ್ದಾನೆ. ಮತ್ತೋರ್ವ ಈ ಕೃತ್ಯವನ್ನು ತನ್ನ ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾನೆ. ವೀಡಿಯೋದಲ್ಲಿ ಮಂಗಳಮುಖಿಯ ಒಂದು ಕಣ್ಣು ಊದಿಕೊಂಡಿರುವುದನ್ನು ಕಾಣಬಹುದಾಗಿದೆ. ಇದನ್ನೂ ಓದಿ: ಕನ್ನಡದ ಹೆಸರಲ್ಲಿ ರೋಲ್ ಕಾಲ್: ಪ್ರೂವ್ ಮಾಡಿದರೆ ನೇಣಿಗೇರುವೆ ಎಂದ ರೂಪೇಶ್ ರಾಜಣ್ಣ

    ಈ ವೀಡಿಯೋ ಜೊತೆಗೆ ಇಂತಹ ಹಿಂಸಾಚಾರ ಯಾವಾಗ ಕೊನೆಗೊಳ್ಳುತ್ತದೆ ಎಂದು ಗ್ರೇಸ್ ಬಾನು ಅವರು ಟ್ವೀಟ್ ಮಾಡಿದ್ದಾರೆ. ಇದೀಗ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಅವರನ್ನು ನೋವಾ ಮತ್ತು ವಿಜಯ್ ಎಂದು ಗುರುತಿಸಲಾಗಿದೆ. ಇಬ್ಬರು ಆರೋಪಿಗಳು ಮಂಗಳಮುಖಿಯರಿಗೆ ಪರಿಚಯಸ್ಥರು ಎಂದು ಹೇಳಲಾಗುತ್ತಿದ್ದು, ಅವರಲ್ಲಿ ಓರ್ವ ಮಹಿಳೆ ಆರೋಪಿಯೊಂದಿಗೆ ಸಂಬಂಧ ಹೊಂದಿದ್ದಳು. ಆದರೆ ಕಾರಣಾಂತರದಿಂದ ನಂತರ ಬೇರೆಯಾಗಿದ್ದರು ಎಂದು ತಿಳಿದುಬಂದಿದೆ. ಇದೀಗ ಈ ಘಟನೆ ಸಂಬಂಧ ಪೊಲೀಸ್ ಸೂಪರಿಂಟೆಂಡೆಂಟ್, ಟುಟಿಕೋರಿನ್ ಎಲ್ ಬಾಲಾಜಿ ಸರವಣನ್ ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಡಿಫರೆಂಟ್ ಕೇಶ ವಿನ್ಯಾಸಕ್ಕೆ ಯುವಕರ ಕ್ಯೂ!

    ಡಿಫರೆಂಟ್ ಕೇಶ ವಿನ್ಯಾಸಕ್ಕೆ ಯುವಕರ ಕ್ಯೂ!

    ಬೆಂಗಳೂರು: ಪ್ರತಿಭೆ ಯಾರಪ್ಪನ ಸ್ವತ್ತಲ್ಲ ಎಂಬುದಕ್ಕೆ ಈ ಯುವಕನೇ ಸಾಕ್ಷಿ. ಒಂದು ಸಲ ಫೋಟೋ ನೋಡಿದ್ರೆ ಸಾಕು, ಥೇಟ್ ಆ ಚಿತ್ರದಲ್ಲಿರುವಂತೆ ಭಾವಚಿತ್ರವನ್ನ ಮೂಡಿಸ್ತಾರೆ.

    ಹೌದು. ಜಕ್ಕೂರಿನ ಸ್ಪಿನ್ ಹೈ ಟೆಕ್ ಸಲೂನ್‍ನಲ್ಲಿ ಕೆಲಸ ಮಾಡುವ ರಮೇಶ್, ತಲೆಯ ಹಿಂಭಾಗದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಸುಭಾಷ್ ಚಂದ್ರಬೋಸ್‍ರ ಭಾವಚಿತ್ರ ಬಿಡಿಸಿ ತನ್ನ ಕಲೆಯನ್ನ ವ್ಯಕ್ತಪಡಿಸಿದ್ದಾರೆ. ಇದೀಗ ಈ ಭಾವಚಿತ್ರಕ್ಕೆ ಇದೀಗಾ ಫುಲ್ ಡಿಮ್ಯಾಂಡ್ ಶುರುವಾಗಿದ್ದು, ನಮ್ಮ ಮಕ್ಕಳಿಗೂ ಈ ರೀತಿಯ ಕೇಶವಿನ್ಯಾಸ ಮಾಡಿ ಅಂತ ಸಾಕಷ್ಟು ಗ್ರಾಹಕರು ಬರ್ತಿದ್ದಾರಂತೆ.

    ಅಂದಹಾಗೆ 75ನೇ ಸ್ವಾತಂತ್ರ್ಯೋತ್ಸವದ ವಿಶೇಷಕ್ಕೆ ಈ ಕೇಶವಿನ್ಯಾಸ ಮಾಡಿರುವ ರಮೇಶ್, ಈ ವಿನ್ಯಾಸಕ್ಕಾಗಿಯೇ 1 ರಿಂದ ಒಂದೂವರೆ ಗಂಟೆ ಸಮಯ ತಗೆದುಕೊಂಡಿದ್ದಾರೆ. ಒಂದೇ ಒಂದು ಸಲ ಫೋಟೋ ನೋಡಿ, ಅದರಂತೆಯೇ ಥೇಟ್, ಕೇಶ ವಿನ್ಯಾಸ ಮಾಡಿ ತನ್ನ ಕಲೆಯನ್ನ ತೋರಿಸಿದ್ದಾರೆ. ಇದನ್ನೂ ಓದಿ: ಶ್ರೀಲಂಕಾ ತಲುಪಿರುವ ಹಡಗು ಯಾವುದೇ ದೇಶಗಳಿಗೂ ತೊಂದರೆ ಕೊಡಲ್ಲ: ಚೀನಾ

    ಈ ಸಂಬಂಧ ಸಲೂನ್‍ನ ಸಹದ್ಯೋಗಿ ಐಶ್ವರ್ಯಾ ಮಾತನಾಡಿ, ರಮೇಶ್ 6 ವರ್ಷದಿಂದ ವೃತ್ತಿ ಮಾಡ್ತಿದ್ದಾರೆ. ಅಮೃತ ಮಹೋತ್ಸವಕ್ಕೆ 10ಕ್ಕೂ ಹೆಚ್ಚು ಗ್ರಾಹಕರಿಗೆ ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರಗಳನ್ನ ಕೇಶವಿನ್ಯಾಸ ಮಾಡಿದ್ದಾರೆ. ಈ ಹಿಂದೆ ಭಗತ್ ಸಿಂಗ್, ಮಹಾತ್ಮ ಗಾಂಧಿ ಸೇರಿ ಕೆಲ ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರಗಳನ್ನ ಮೂಡಿಸಿದ್ದರು. ನಮ್ಮ ಕಂಪನಿಯ ಸಹೋದ್ಯೋಗಿ ತನ್ನ ಕಲೆಯನ್ನ ರಾಷ್ಟ್ರಭಕ್ತರ ಭಾವಚಿತ್ರಗಳನ್ನ ಮೂಡಿಸುವ ಮೂಲಕ ವ್ಯಕ್ತಪಡಿಸ್ತಿರೋದು ಖುಷಿಯಾಗುತ್ತೆ ಎಂದರು.

    ಒಟ್ಟಿನಲ್ಲಿ ಪ್ರತಿಯೊಬ್ಬರಲ್ಲೂ ಒಂದಲ್ಲ ಒಂದು ಕಲೆಯಿರುತ್ತೆ. ರಮೇಶ್ ಕೂಡ ತನ್ನ ವೃತ್ತಿಯಲ್ಲಿ ತನ್ನ ಪ್ರತಿಭೆಯನ್ನ ತೋರಿಸಿದ್ದು, ಮುಂದಿನ ದಿನಗಳಲ್ಲಿ ಪುನೀತ್, ವಿಷ್ಣುವರ್ಧನ್, ಅಂಬರೀಶ್‍ರ ಭಾವಚಿತ್ರಗಳನ್ನ ಬಿಡಿಸುವ ಸಿದ್ಧತೆಯಲ್ಲಿದ್ದಾರೆ. ಅದೇನೆ ಆಗ್ಲಿ, ತನ್ನ ದೇಶಭಕ್ತಿ, ರಾಷ್ಟ್ರಪ್ರೇಮವನ್ನ ತನ್ನ ಕಲೆಯ ಮೂಲಕ ತೋರಿಸಿದ್ದು ಮಾತ್ರ ವಿಶೇಷ.

    Live Tv
    [brid partner=56869869 player=32851 video=960834 autoplay=true]

  • ಗುರುದ್ವಾರದ ಮಾಜಿ ಗ್ರಂಥಿ ಮೇಲೆ ಹಲ್ಲೆಗೈದು, ಕೂದಲು ಕಟ್ ಮಾಡಿದ ಕಿಡಿಗೇಡಿಗಳು

    ಗುರುದ್ವಾರದ ಮಾಜಿ ಗ್ರಂಥಿ ಮೇಲೆ ಹಲ್ಲೆಗೈದು, ಕೂದಲು ಕಟ್ ಮಾಡಿದ ಕಿಡಿಗೇಡಿಗಳು

    ಜೈಪುರ: ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿ ಗುರುದ್ವಾರದ ಮಾಜಿ ಗ್ರಂಥಿ ಮೇಲೆ ಅಪರಿಚಿತ ದುಷ್ಕರ್ಮಿಗಳು ಥಳಿಸಿ ಅವರ ಕೂದಲನ್ನು ಕತ್ತರಿಸಿದ್ದಾರೆ ಎಂದು ಪೊಲೀಸರು ಶುಕ್ರವಾರ ತಿಳಿಸಿದರು.

    ‘ಗ್ರಂಥಿ’ ಎಂದರೆ ಗುರುದ್ವಾರವೊಂದರಲ್ಲಿ ಸಿಖ್ಖರ ಪವಿತ್ರ ಗ್ರಂಥ ‘ಶ್ರೀ ಗುರು ಗ್ರಂಥ ಸಾಹಿಬ್’ನ ವಿಧ್ಯುಕ್ತ ಓದುವವರು. ಗುರುವಾರ ರಾತ್ರಿ ಗುರುಬಕ್ಷ್ ಸಿಂಗ್ ಮೋಟಾರ್ ಸೈಕಲ್‍ನಲ್ಲಿ ಅಲವಾಡ ಗ್ರಾಮಕ್ಕೆ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಪೊಲೀಸರು ಮಾಹಿತಿ ಕೊಟ್ಟರು. ಇದನ್ನೂ ಓದಿ: ಬ್ಲ್ಯಾಕ್ ಏಲಿಯನ್‍ನಂತೆ ಬದಲಾದ ಇವನನ್ನು ನೋಡಿದವರು ಕೆಲಸವನ್ನೆ ಕೊಡುತ್ತಿಲ್ಲ – ಓದಿ ವಿಚಿತ್ರ ಕಥೆ 

    ನಡೆದಿದ್ದೇನು?
    ಸಹಾಯ ಕೇಳುವ ನೆಪದಲ್ಲಿ ಆರೋಪಿಗಳು ಗುರುಬಕ್ಷ್ ಸಿಂಗ್ ಅವರನ್ನು ತಡೆದಿದ್ದಾರೆ. ಈ ವೇಳೆ ಅವರ ಕಣ್ಣಿಗೆ ಮೆಣಸಿನ ಪುಡಿ ಎರಚಿದ್ದಾರೆ. ನಂತರ ಆರೋಪಿಗಳು ಗುರುಬಕ್ಷ್ ಸಿಂಗ್ ಅವರನ್ನು ಥಳಿಸಿ ಕೂದಲು ಕತ್ತರಿಸಿದ್ದಾರೆ.

    ಅಲ್ವಾರ್‌ನ ಪೊಲೀಸ್ ವರಿಷ್ಠಾಧಿಕಾರಿ ತೇಜಸ್ವನಿ ಗೌತಮ್ ಅವರು ಈ ಕುರಿತು ಮಾತನಾಡಿದ್ದು, ಅಲವಾಡ ಗ್ರಾಮದಲ್ಲಿ ಸಿಖ್ಖರು ಮತ್ತು ಮಿಯೋ ಮುಸ್ಲಿಮರ ನಡುವಿನ ಹಳೆ ದ್ವೇಷದ ಕಾರಣದಿಂದ ಈ ಕೃತ್ಯ ನಡೆದಿದೆ. ಪ್ರೇಮ ಸಂಬಂಧಗಳ ಆರೋಪದ ಮೇಲೆ ಸಿಂಗ್ ಅವರನ್ನು ಗುರಿಯಾಗಿಸಲಾಗಿದೆ ಎಂದು ತೋರುತ್ತದೆ ಎಂದು ಅನುಮಾನ ವ್ಯಕ್ತಪಡಿಸಿದರು. ಇದನ್ನೂ ಓದಿ: ಯಡಿಯೂರಪ್ಪಗೆ ಬಹಳ ವಯಸ್ಸೇನು ಆಗಿಲ್ಲ – ದೈಹಿಕ, ಮಾನಸಿಕವಾಗಿ ಸದೃಢರಾಗಿದ್ದಾರೆ: ಸುಧಾಕರ್ 

    ಈ ಕುರಿತು ರಾಮಗಢ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದರು.

    Live Tv
    [brid partner=56869869 player=32851 video=960834 autoplay=true]

  • ತಲೆಗೂದಲು ಉದುರುವ ಸಮಸ್ಯೆಯಿಂದ ಬೇಸತ್ತು ಯುವತಿ ಆತ್ಮಹತ್ಯೆ

    ತಲೆಗೂದಲು ಉದುರುವ ಸಮಸ್ಯೆಯಿಂದ ಬೇಸತ್ತು ಯುವತಿ ಆತ್ಮಹತ್ಯೆ

    ಮೈಸೂರು: ತಲೆಕೂದಲು ಉದುರುವ ಸಮಸ್ಯೆಯಿಂದ ಬೇಸತ್ತು ಯುವತಿಯೊಬ್ಬಳು ಆತ್ಮಹತ್ಯೆಗೆ ಶರಣಾದ ಗಟನೆ ಅರಮನೆ ನಗರಿ ಮೈಸೂರಿನಲ್ಲಿ ನಡೆದಿದೆ.

    ಕಾವ್ಯಶ್ರೀ(22) ಮೃತ ಯುವತಿ. ಈ ಘಟನೆ ಮೈಸೂರಿನ ರಾಘವೇಂದ್ರ ನಗರ ಬಡಾವಣೆಯಲ್ಲಿ ನಡೆದಿದೆ. ಕಳೆದ ಹಲವು ದಿನಗಳಿಂದ ಪತ್ಮಂಡೆ ಸಮಸ್ಯೆಯಿಂದ ಬಳಲುತ್ತಿದ್ದ ಕಾವ್ಯಶ್ರೀಗೆ ಕೂದಲು ಉದುರುತ್ತಿತ್ತು. ಸಾಕಷ್ಟು ಚಿಕಿತ್ಸೆ ಪಡೆದರೂ ಪರಿಹಾರ ದೊರೆತಿರಲಿಲ್ಲ. ಇದರಿಂದ ಬೇಸತ್ತ ಆಕೆ ಸಾವಿನ ದಾರಿ ಹಿಡಿದಿದ್ದಾಳೆ.

    ಕೂದಲು ಸಂಪೂರ್ಣವಾಗಿ ಕಳೆದುಕೊಂಡ ಹಿನ್ನೆಲೆ ಮನನೊಂದು ಕಾವ್ಯಶ್ರೀ ತನ್ನ ಮನೆಯಲ್ಲೇ ನೇಣಿಗೆ ಶರಣಾಗಿದ್ದಾಳೆ. ಈ ಸಂಬಂಧ ನಜರಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಶಿಂಧೆಯನ್ನು ಶಿವಸೇನೆಯಿಂದ ವಜಾಗೊಳಿಸಿದ ಠಾಕ್ರೆ

    Live Tv

  • ಕ್ಯೂಟ್ ಆಗಿ ಕಾಣಿಸಲು ಬಳಸಿ ಈ ಹೇರ್ ಆ್ಯಕ್ಸಸರೀಸ್

    ಕ್ಯೂಟ್ ಆಗಿ ಕಾಣಿಸಲು ಬಳಸಿ ಈ ಹೇರ್ ಆ್ಯಕ್ಸಸರೀಸ್

    ಕೂದಲಿನ ವಿಷಯಕ್ಕೆ ಬಂದಾಗ ನೀವು ಕ್ಯೂಟ್ ಅಥವಾ ಆಕರ್ಷಕವಾಗಿ ಕಾಣಿಸಲು ಹೆಚ್ಚಿನ ಆ್ಯಕ್ಸಸರಿ ಆಯ್ಕೆಯನ್ನು ಹೊಂದಿರಬೇಕಾಗುತ್ತದೆ. ಪ್ರತಿ ಹುಡುಗಿಯರೂ ಹೊಂದಬೇಕಾದ ಕೆಲವು ಮುದ್ದಾದ ಕೂದಲಿನ ಆ್ಯಕ್ಸಸರೀಸ್ ಪಟ್ಟಿ ಇಲ್ಲಿವೆ.

    ಕೂದಲಿನ ಆ್ಯಕ್ಸಸರೀಸ್ ಯಾವಾಗಲಾದರೋ ಬಳಸಿದರೇನೇ ಚಂದ. ನಿಮ್ಮ ದಿನನಿತ್ಯದ ನೋಟಕ್ಕಿಂತಲೂ ಯಾವಾಗಲಾದರೂ ಒಮ್ಮೆ ಬಳಸಿದಾಗ ನಿಮ್ಮ ಸಂಪೂರ್ಣ ಲುಕ್ ಬದಲಾದಂತೆ ಹಾಗೂ ಮುದ್ದಾಗಿ ಕಾಣಿಸುವಂತೆ ಮಾಡುತ್ತದೆ. ನಿಮ್ಮ ಡೈಲಿ ಲುಕ್‌ಗಿಂತಲೂ ಭಿನ್ನವಾಗಿ ಕಾಣಿಸಲು ಕೂದಲಿನ ಪರಿಕರಗಳು ಉಪಯುಕ್ತ. ಕೂದಲಿನ ಆ್ಯಕ್ಸಸರೀಸ್ ಯಾವುದೇ ಸಮಯದಲ್ಲೂ ನಿಮ್ಮ ನೋಟವನ್ನು ಕಂಡಿತಾ ಹೆಚ್ಚಿಸುತ್ತದೆ. ನೀವು ಭಿನ್ನವಾಗಿ ಕಾಣಿಸಬೇಕೆಂದರೆ ಹೊಂದಿರಲೇ ಬೇಕಾದ ಕೆಲವು ಕ್ಯೂಟ್ ಕ್ಯೂಟ್ ಆ್ಯಕ್ಸಸರಿಗಳನ್ನು ನೋಡೋಣ.

    ಬಕೆಟ್ ಹ್ಯಾಟ್:
    ಮೀನುಗಾರರು ಬಳಸುವ ಟೋಪಿಯಂತೆ ಕಾಣಿಸುತ್ತಾದರೂ ಟ್ರೆಂಡಿಯಾಗಿರುವ, ಹಲವು ವಿನ್ಯಾಸಗಳಲ್ಲಿ ಬರುವ ಬಕೆಟ್ ಹ್ಯಾಟ್ ನಿಮ್ಮ ದೈನಂದಿನ ಲುಕ್‌ಗಿಂತಲೂ ವಿಭಿನ್ನವಾಗಿ ಕಾಣಿಸುವಂತೆ ಮಾಡುತ್ತದೆ. ಇವು 90ರ ದಶಕದ ಫ್ಯಾಶನ್ ಆಗಿದ್ದರೂ ಓಲ್ಡ್ ಈಸ್ ಗೋಲ್ಡ್ ಎಂಬಂತೆ ಆಕರ್ಷಕ ನೋಟವನ್ನು ಪಡೆಯಲು ಸಾಧ್ಯವಿದೆ. ಟೋಪಿ ಮೊದಲ ಬಾರಿ ಬಳಸುವಾಗ ಚೆನ್ನಾಗಿ ಕಾಣಿಸಲ್ಲ ಎನಿಸಿದರೂ ಒಮ್ಮೆ ಟ್ರೈ ಮಾಡಿ ನೋಡಿ. ಇದನ್ನೂ ಓದಿ: ನಿಮ್ಮ ಫೇಸ್‌ಕಟ್‌ಗೆ ಸರಿಯಾದ ಹೇರ್‌ಸ್ಟೈಲ್ ಇರಲಿ

    ಹೆಡ್‌ಬ್ಯಾಂಡ್:
    ಹೆಡ್‌ಬ್ಯಾಂಡ್‌ಗಳು ಇತ್ತೀಚೆಗೆ ಹೆಚ್ಚಿನ ಜನಪ್ರಿಯತೆ ಹೊಂದಿದೆ. ಹೆಚ್ಚಾಗಿ ಹೆಡ್ ಬ್ಯಾಂಡ್‌ಗಳನ್ನು ತಲೆಯ ಕೂದಲು ಮುಖಕ್ಕೆ ಬರಬಾರದು ಎಂಬ ಕಾರಣಕ್ಕೆ ಬಳಸುತ್ತಾರೆ. ಇದೀಗ ಮಾರುಕಟ್ಟೆಗಳಲ್ಲಿ ವಿಭಿನ್ನ ಶೈಲಿಯ ಹೆಡ್ ಬ್ಯಾಂಡ್‌ಗಳು ಲಭ್ಯವಿದೆ. ಕೇವಲ ಕೂದಲು ಮುಖಕ್ಕೆ ಬೀಳಬಾರದು ಎಂದು ಬಳಸುವುದಕ್ಕಿಂತಲೂ ಟ್ರೆಂಡಿ ಎಂಬ ಕಾರಣಕ್ಕೂ ಬಳಸಬಹುದು. ಇವು ನಿಮ್ಮನ್ನು ಮಕ್ಕಳಂತೆ ಮುದ್ದಾಗಿ ಕಾಣಿಸುವಂತೆ ಮಾಡಲು ಸಹಾಯ ಮಾಡುತ್ತದೆ.

    ಸ್ಕಾರ್ಫ್:
    ಅತ್ಯಂತ ಬ್ಯುಸಿ ಲೈಫ್ ಅಥವಾ ಜನನಿಬಿಡ ಪ್ರದೇಶಗಳಲ್ಲಿ ದಿನ ಕಳೆಯುತ್ತಿದ್ದಿರಿ ಎಂದಾದರೆ ಪೋನಿ ಟೇಲ್ ಹೇರ್ ಸ್ಟೈಲ್ ಯಾವಾಗಲೂ ಆಯ್ಕೆ ಮಾಡಬಹುದಾದ ಸುಲಭದ ಕೇಶ ವಿನ್ಯಾಸ. ಆದರೆ ಪ್ರತೀ ದಿನ ಪೋನಿ ಟೇಲ್ ಹಾಕಿಕೊಳ್ಳುತ್ತಿದ್ದೀರಿ ಎಂದರೆ ಅದಕ್ಕೆ ಸ್ವಲ್ಪ ಸೊಬಗು ನೀಡಲು ಸ್ಕಾರ್ಫ್ ಕಟ್ಟಿಕೊಳ್ಳಬಹುದು. ಪೋನಿ ಟೇಲ್ ಸುಲಭ ಹಾಗೂ ತಕ್ಷಣವೇ ಕಟ್ಟಿಕೊಳ್ಳಬಹುದು ಹಾಗೂ ಅದು ನಿಮ್ಮನ್ನು ಎಂತಹ ಸ್ಥಳಗಳಲ್ಲೂ ಕಂಫರ್ಟೇಬಲ್ ಆಗಿ ಇರಿಸುತ್ತದೆ. ಅದರ ಮೇಲೆಯೇ ಒಂದು ಸಣ್ಣ ಸ್ಕಾರ್ಫ್ ಮೂಲಕ ಗಂಟು ಹಾಕಿದರೆ, ದಿನನಿತ್ಯದ ಲುಕ್‌ಗಿಂತಲೂ ಭಿನ್ನವಾಗಿ ತೊರುತ್ತೀರಿ. ಇದನ್ನೂ ಓದಿ: ಇಂಡಿಯನ್ ಸ್ಕಿನ್ ಟೋನ್‌ಗೆ ಈ ಬಣ್ಣದ ಲಿಪ್‌ಸ್ಟಿಕ್‌ಗಳು ಬೆಸ್ಟ್

    ಹೇರ್ ಪಿನ್:
    ನೀವು 90ರ ದಶಕದ ಫ್ಯಾಶನ್ ಅನ್ನು ಮತ್ತೆ ಟ್ರೈ ಮಾಡಲು ಬಯಸಿದರೆ ಹೇರ್ ಪಿನ್‌ಗಳು ಹೆಚ್ಚು ಸಹಾಯಕವಾಗಿವೆ. ನಿಮ್ಮ ಮುದ್ದಾದ ಡ್ರೆಸ್‌ಗಳಿಗೆ ಮ್ಯಾಚ್ ಮಾಡಿಕೊಂಡು, ಭಿನ್ನ ವಿಭಿನ್ನ ಶೈಲಿಯ ಹೂವಿನ, ಚಿಟ್ಟೆಯ ಅಥವಾ ಇನ್ನಿತರ ಡಿಸೈನ್‌ನಲ್ಲಿ ಹೇರ್ ಪಿನ್‌ಗಳನ್ನು ಆಯ್ದುಕೊಳ್ಳಬಹುದು.

    ಹೂವಿನ ಕಿರೀಟ:
    ಪುಟ್ಟ ಪುಟ್ಟ ಗಾತ್ರದ, ಬಣ್ಣ ಬಣ್ಣದ ಹೂವುಗಳಿರುವ ಬಳ್ಳಿಯ ಕಿರೀಟ ಅಪರೂಪದ ನೋಟಕ್ಕೆ ಮೆರುಗು ನೀಡುತ್ತದೆ. ತಿಳಿ ಬಣ್ಣದ ಫ್ರಾಕ್ ಅಥವಾ ಯಾವುದೇ ಹಗುರ ಬಟ್ಟೆಗಳೊಂದಿಗೆ ವಿಶೇಷ ಪ್ರವಾಸದ ಸಂದರ್ಭ ಮ್ಯಾಚ್ ಮಾಡಿಕೊಂಡು ಹೋಗಬಹುದು.

    Live Tv

  • ಕೇಶರಾಶಿಗಾಗಿ ದೊಡ್ಡಾಲದ ಮರದ ಚಿಗುರು, ಬೇರಿಗೇ ಕನ್ನ!

    ಕೇಶರಾಶಿಗಾಗಿ ದೊಡ್ಡಾಲದ ಮರದ ಚಿಗುರು, ಬೇರಿಗೇ ಕನ್ನ!

    ಬೆಂಗಳೂರು: ಕೂದಲು ಚೆನ್ನಾಗಿ ಬರಲಿ ಅಂತಾ ದೊಡ್ಡಲಾದಮರದ ಬೇರುಗಳಿಗೆ ಕನ್ನ ಹಾಕುತ್ತಿರೋ ವಿಚಾರವೊಂದು ಬೆಳಕಿಗೆ ಬಂದಿದೆ. ವಿಶೇಷ ಏನಪ್ಪ ಅಂದ್ರೆ ಕೂದಲು ಚೆನ್ನಾಗಿ ಬರೋದು ಇರಲಿ ಇರೋ ಬರೋ ಕೂದ್ಲೆಲ್ಲ ಉದುರಿ ಬೊಕ್ಕತನ ಸಮಸ್ಯೆ ಎದುರಾಗುತ್ತಿದೆಯಂತೆ. ಇದಕ್ಕೆ ಕಾರಣ ಮುನೇಶ್ವರನ ಮಹಿಮೆಯಂತೆ.

    ಬೆಂಗಳೂರಿನ ಕೇತೋಹಳ್ಳಿಯಲ್ಲಿರುವ ಐತಿಹಾಸಿಕ ಪ್ರಸಿದ್ಧ ದೊಡ್ಡಲಾದಮರದ ಮುನೇಶ್ವರನ ಸನ್ನಿಧಾನದಲ್ಲಿ ವಿಚಿತ್ರ ವಿಸ್ಮಯ ನಡೆಯುತ್ತಿದೆಯಂತೆ. ಆಲದ ಮರದ ಎಳೆಯ ಬೇರುಗಳನ್ನು ಕೊಬ್ಬರಿ ಎಣ್ಣೆ ಜೊತೆ ಮಿಕ್ಸ್ ಮಾಡಿ ತಲೆಗೂದಲಿಗೆ ಹಂಚಿಕೊಂಡ್ರೇ, ಕೂದಲು ಉದ್ದ ಬೆಳೆಯುತ್ತೆ ಅಂತಾ ಬಹುತೇಕ ಜನ ಇದಕ್ಕಾಗಿಯೇ ಇಲ್ಲಿಗೆ ಬಂದು ಎಳೆಬೇರಿಗೆ ಕನ್ನ ಹಾಕ್ತಾರಂತೆ.

    ಹೀಗೆ ತಲೆಕೂದಲಿಗೆ ಹಚ್ಚಿಕೊಂಡವರಿಗೆ ಬಹುತೇಕರಿಗೆ ಐದಾರು ದಿನದಲ್ಲಿ ಇರೋ ಬರೋ ಕೂದಲು ಉದುರೋಗುವ ಸಮಸ್ಯೆ ಎದುರಾಗುತ್ತಿದೆಯಂತೆ. ಇದಕ್ಕೆ ಕಾರಣ ಇಲ್ಲಿನ ಮುನೇಶ್ವರ ಅನ್ನೋದು ಸ್ಥಳೀಯರ ಹಾಗೂ ಅರ್ಚಕರ ನಂಬಿಕೆ. ಹೀಗಾಗಿಯೇ ಇಲ್ಲಿ ಆಲದ ಮರದ ಬೇರು ಕದ್ದವರು ಬಹುತೇಕರು ದೇವರಿಗೆ ವಾಪಾಸು ಬಂದು ತಪ್ಪುಕಾಣಿಕೆ ಹಾಕಿದ್ದಾರಂತೆ. ಇದನ್ನೂ ಓದಿ: ರಾಮನಗರದಲ್ಲಿ ಮೌಢ್ಯತೆ ಇನ್ನೂ ಜೀವಂತ- ಹಸಿ ಬಾಣಂತಿ, ಮಗು ಗ್ರಾಮದಿಂದ ಹೊರಕ್ಕೆ

    ಈ ಆಲದ ಮರದ ಕೆಲ ಭಾಗ ಕೆಳಗೆ ಬಿದ್ರೂ ಜನ ಅದನ್ನು ಒಲೆ ಉರಿಸೋಕೆ ಕೂಡ ಈ ಹಿಂದಿನಿಂದಲೂ ಬಳಕೆ ಮಾಡುತ್ತಿಲ್ಲವಂತೆ. ಅಷ್ಟೊಂದು ನಂಬಿಕೆ ಜನರ ಪಾಲಿಗೆ ಇದೆ. ಆದರೆ ಬರೋ ಜನ್ರಿಗೆ ಮುನೇಶ್ವರ ಪವಾಡ ಗೊತ್ತಾಗಲ್ಲ ಅನ್ನುವ ಕಾರಣಕ್ಕೆ ಈಗ ಬೇರನ್ನು ಕಾಪಾಡೋಕೆ ಅಂತಾನೆ ಗಾರ್ಡ್‍ಗಳನ್ನು ಕೂಡ ಪ್ರತ್ಯೇಕವಾಗಿ ನೇಮಕ ಮಾಡಲಾಗಿದೆ. ಅಸಲಿಗೆ ಈ ಎಳೆಯ ಬೇರನ್ನು ಚಿವುಟೋದ್ರಿಂದ ದೊಡ್ಡಲಾದಮರ ವಿಸ್ತಾರವಾಗಿ ಬೆಳೆಯೋದಕ್ಕೂ ಕೂಡ ಕಷ್ಟವಾಗುತ್ತೆ. ಮುನೇಶ್ವರನ ಕೋಪದ ಭಯಕ್ಕಾದ್ರೂ ಬೇರು ಕಿತ್ತುಹಾಕುವುದು ಜನ ಕಡಿಮೆ ಮಾಡುವಂತಾಗಲಿ.

  • ನಿಮ್ಮ ಫೇಸ್‌ಕಟ್‌ಗೆ ಸರಿಯಾದ ಹೇರ್‌ಸ್ಟೈಲ್ ಇರಲಿ

    ನಿಮ್ಮ ಫೇಸ್‌ಕಟ್‌ಗೆ ಸರಿಯಾದ ಹೇರ್‌ಸ್ಟೈಲ್ ಇರಲಿ

    ನೀವು ಕೂದಲು ಕತ್ತರಿಸಲು ನಿರ್ಧರಿಸಿದಾಗ ಮೊದಲು ಯೋಚಿಸುವುದೇ ಚೆನ್ನಾಗಿ ಕಾಣಿಸಬೇಕು ಎಂದು. ಆದರೆ ನಿಮ್ಮ ಮೂದಲು ಕತ್ತರಿಸುವುದಕ್ಕೂ ಮೊದಲು ಗಮನಹರಿಸಬೇಕಿರುವುದು, ಹೇರ್‌ಕಟ್ ನಿಮ್ಮ ಮುಖಕ್ಕೆ ಹೊಂದುತ್ತದೆಯೇ ಇಲ್ಲವೇ ಎಂಬುದು.

    ಹೇರ್ ಸ್ಟೈಲಿಸ್ಟ್‌ಗಳು ನಿಮ್ಮ ಹೇರ್ ಕಟ್ ಮಾಡುವಾಗ ಹಲವು ಆಯ್ಕೆಗಳನ್ನು ನೀಡುತ್ತಾರೆ. ಯಾವುದೋ ಟ್ರೆಂಡಿ ಎನ್ನುವುದಕ್ಕಿಂತ ಮುಖದ ಆಕಾರಕ್ಕೆ ಹೊಂದುವ ಶೇಪ್ ಕೊಡಿಸುವುದೇ ಉತ್ತಮ ಅಲ್ವಾ? ನಿಮ್ಮ ಮುಖದ ಆಕಾರ ಹೇಗೆಯೇ ಇರಲಿ. ಆದರೆ ಕೂದಲು ಕತ್ತರಿಸಿದ ಬಳಿಕ ಅದರ ಫಲಿತಾಂಶ ಆಕರ್ಷಕವಾಗಿರಬೇಕು ಹಾಗೂ ಮುಖ ಆದಷ್ಟು ಸ್ಲಿಮ್ ಆಗಿ ಕಾಣಿಸಬೇಕು ಎಂದೇ ಹೆಚ್ಚಿನವರು ಭಾವಿಸುತ್ತಾರೆ.

    ಯಾವುದೋ ಹೇರ್ ಕಟ್ ಮಾಡಿಸುವುದಕ್ಕಿಂತಲೂ ಮೊದಲು ಸ್ವಲ್ಪ ಯೋಚಿಸಿ. ಕೆಲವರ ಸಲಹೆ ತಿಳಿದು ಬಳಿಕ ನಿಮ್ಮ ಕೂದಲು ಕತ್ತರಿಸಲು ಮುಂದಾಗಿ. ನಿಮ್ಮ ಮುಖದ ಶೇಪ್‌ಗೆ ಅನುಗುಣವಾಗಿ ಯಾವ ರೀತಿ ಹೇರ್‌ಸ್ಟೈಲ್ ಮಾಡಬಹುದೆಂಬ ಕೆಲವು ಟಿಪ್ಸ್ ಇಲ್ಲಿವೆ.

    ಬ್ಯಾಂಗ್ಸ್:
    ಎತ್ತರದ ಹಣೆ ಅಥವಾ ಅಗಲವಾದ ಕೆನ್ನೆ ಹೊಂದಿರುವವರಿಗೆ ಬ್ಯಾಂಗ್ಸ್ ಅತ್ಯುತ್ತಮ ಆಯ್ಕೆ. ಹಣೆಯ ವಿಶಾಲ ಭಾಗವನ್ನು ಮುಚ್ಚಲು ಹುಬ್ಬಿನವರೆಗಿನ ಬ್ಯಾಂಗ್ಸ್ ಸಹಾಯ ಮಾಡಿದರೆ, ಕೆನ್ನೆಯ ವಿಶಾಲ ಭಾಗವನ್ನು ಮರೆಮಾಚಲು ಕಿವಿವರೆಗಿನ ಉದ್ದದ ಬ್ಯಾಂಗ್ಸ್ ಸಹಾಯ ಮಾಡುತ್ತದೆ. ಇಲ್ಲಿವರೆಗೂ ನೀವು ಬ್ಯಾಂಗ್ಸ್ ಕಟ್ ಟ್ರೈ ಮಾಡಿಲ್ಲವೆಂದರೆ ಮಾರುಕಟ್ಟೆಗಳಲ್ಲಿ ನಕಲಿ ಬ್ಯಾಂಗ್ಸ್‌ಗಳು ಲಭ್ಯವಿರುತ್ತವೆ. ಅವುಗಳನ್ನು ಒಮ್ಮೆ ಟ್ರೈ ಮಾಡಿ. ನಿಮ್ಮ ಫೇಸ್ ಕಟ್‌ಗೆ ಸೂಟ್ ಆಗುತ್ತೋ ಇಲ್ಲವೋ ಎಂಬುದನ್ನು ಖಾತ್ರಿಪಡಿಸಿ, ಕೊನೆಗೆ ಕತ್ತರಿಸುವ ಬಗ್ಗೆ ನಿರ್ಧಾರ ಮಾಡಿ. ಇದನ್ನೂ ಓದಿ: ಇಂಡಿಯನ್ ಸ್ಕಿನ್ ಟೋನ್‌ಗೆ ಈ ಬಣ್ಣದ ಲಿಪ್‌ಸ್ಟಿಕ್‌ಗಳು ಬೆಸ್ಟ್

    ಬಾಬ್:
    ಎತ್ತರದ ಕೆನ್ನೆ ಮೂಳೆ ಹಾಗೂ ಮೊನಚಾದ ಗಲ್ಲವನ್ನು ನೀವು ಹೊಂದಿದ್ದರೆ, ಭುಜದ ವರೆಗೆ ಬರುವ ಬಾಬ್ ಕಟ್ ನಿಮಗೆ ಬೆಸ್ಟ್. ಈ ಮುಖದ ಆಕರ ನಿಮ್ಮ ಭುಜದ ವರೆಗೆ ಬರುವ ಕೂದಲಿನೊಂದಿಗೆ ಜೋಡಿಸಿದರೆ, ಉತ್ತಮವಾಗಿ ಕಾಣಿಸುತ್ತದೆ. ಮುಖ್ಯವಾಗಿ ನೀವು ಜನರ ಗಮನವನ್ನು ನಿಮ್ಮ ಗಲ್ಲದ ಕಡೆಗೆ ಸೆಳೆಯಲು ಬಯಸುವುದಿಲ್ಲ ಎಂದಾದಲ್ಲಿ ಈ ಕಟ್ ನಿಮಗೆ ಸೂಕ್ತ. ಇದನ್ನೂ ಓದಿ: ಮದುವೆ ಸಮಾರಂಭಗಳಿಗೆ ವಿಭಿನ್ನ ಶೈಲಿಯ ಪೇಟ-ಪರಂಪರೆಯ ಕಿರೀಟ

    ದುಂಡು ಮುಖಕ್ಕೆ ಈ ಕಟ್ ಬೆಸ್ಟ್:
    ನೀವು ದುಂಡು ಮುಖ ಹೊಂದಿದ್ದೀರಾ? ನಿಮ್ಮ ಮುಖವನ್ನು ಉದ್ದವಾಗಿ ಕಾಣಿಸುವಂತೆ ಮಾಡಲು, ದುಂಡು ಮುಖದ ಅಗಲವನ್ನು ಕಡಿಮೆ ಮಾಡುವುದು ಅಗತ್ಯ. ಇದಕ್ಕಾಗಿ ಉದ್ದವಾದ ಬಾಬ್ ಕಟ್ ಸೂಕ್ತ. ಈ ಕಟ್ ನಿಮ್ಮ ಮುಖವನ್ನು ಸ್ಲಿಮ್ ಆಗಿ ಕಾಣಿಸುವಂತೆ ಮಾಡುತ್ತದೆ. ಕೂದಲ ಕೊನೆಯಲ್ಲಿ ಕೊಂಚ ಕರ್ಲ್ ಇದ್ದಲ್ಲಿ ಪರ್ಫೆಕ್ಟ್ ಲುಕ್ ನಿಮ್ಮದಾಗುತ್ತದೆ. ಏಕೆಂದರೆ ಕೂದಲ ಕೆಳಭಾಗದ ವಕ್ರತೆ ನಿಮ್ಮ ಕೆನ್ನೆಯ ಅಗಲವನ್ನು ಮರೆಮಾಚಲು ಸಹಾಯ ಮಾಡುತ್ತದೆ.

    ನೀವು ಯಾವುದೇ ಮುಖದ ಆಕಾರವನ್ನು ಹೊಂದಿದ್ದರೂ ಕೊನೆಯದಾಗಿ ಕೂದಲು ಕತ್ತರಿಸುವಾಗ ಅದಕ್ಕೆ ಹೊಂದುವಂತಹ ಆಕಾರದಲ್ಲಿ ಕತ್ತರಿಸುವುದೇ ಸೂಕ್ತ. ನಿಮ್ಮ ಮುಖಕ್ಕೆ ಹೊಂದಿಕೊಳ್ಳುವ ಹೇರ್ ಕಟ್‌ಗಳು ನಿಮ್ಮಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುವಲ್ಲಿ ಸಹಾಯ ಮಾಡುತ್ತದೆ. ಆದ್ದರಿಂದ ನಿಮ್ಮ ಕೂದಲ ವಿನ್ಯಾಸದ ಬಳಿಕ ಅದನ್ನು ಹೆಮ್ಮೆಯಿಂದ ಇರಿಸಿಕೊಳ್ಳಿ.