Tag: Hair Stylist

  • ಧೋನಿ ರಕ್ಷಣೆಗೆ ನಿಂತ ಕೇಶ ವಿನ್ಯಾಸಕಿ- ವಿಡಿಯೋ ವೈರಲ್

    ಧೋನಿ ರಕ್ಷಣೆಗೆ ನಿಂತ ಕೇಶ ವಿನ್ಯಾಸಕಿ- ವಿಡಿಯೋ ವೈರಲ್

    ಮುಂಬೈ: ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ರಕ್ಷಣೆಗೆ ಕೇಶ ವಿನ್ಯಾಸಕಿಯೊಬ್ಬರು ನಿಂತ ಪ್ರಸಂಗವೊಂದು ಮುಂಬೈನಲ್ಲಿ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಜಾಹೀರಾತು ಚಿತ್ರೀಕರಣಕ್ಕಾಗಿ ಎಂ.ಎಸ್.ಧೋನಿ ಬುಧವಾರ ಮುಂಬೈಗೆ ಆಗಮಿಸಿದ್ದರು. ನಗರದಲ್ಲಿ ಧೋನಿ ಅವರನ್ನು ನೋಡಿದ ಅಭಿಮಾನಿಗಳು ರಸ್ತೆಯಲ್ಲಿ ನಿಂತು ಧೋನಿ… ಧೋನಿ ಎಂದು ಘೋಷಣೆ ಕೂಗಿದರು. ಈ ವೇಳೆ ಕೆಲವರು ಧೋನಿ ಸಮೀಪಕ್ಕೆ ಬಂದು ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಯತ್ನಿಸಿದರು. ಆಗ ಕೇಶ ವಿನ್ಯಾಸಕಿ ಸಪ್ನಾ ಭಾವನಾನಿ ಧೋನಿ ರಕ್ಷಣೆಗೆ ನಿಂತರು.

    ಸಪ್ನಾ ಅವರು, ತಮ್ಮ ಮುಂದೆ ಬಂದ ಜನರನ್ನು ಪಕ್ಕಕ್ಕೆ ಸರಿಸಿ ಧೋನಿ ಅವರಿಗೆ ದಾರಿ ಮಾಡಿಕೊಟ್ಟರು. ಈ ವಿಡಿಯೋವನ್ನು ಸಪ್ನಾ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸುಮಾರು ವರ್ಷಗಳಿಂದ ಸಪ್ನಾ ಧೋನಿ ಅವರ ಕೇಶ ವಿನ್ಯಾಸಕಿಯಾಗಿದ್ದಾರೆ.

    2019ರ ವಿಶ್ವಕಪ್ ಟೂರ್ನಿ ಬಳಿಕ ಕ್ರಿಕೆಟ್‍ನಿಂದ ವಿರಾಮ ತೆಗೆದುಕೊಂಡ ಎಂ.ಎಸ್.ಧೋನಿ, ಐಪಿಎಲ್ ಮೂಲಕ ಕ್ರಿಕೆಟ್‍ಗೆ ಎಂಟ್ರಿ ಕೊಡಲಿದ್ದಾರೆ. ಮಾರ್ಚ್ 29ರಿಂದ ಪ್ರಾರಂಭವಾಗುವ ಇಂಡಿಯನ್ ಪ್ರೀಮಿಯರ್ ಲೀಗ್‍ನ 13ನೇ ಆವೃತ್ತಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸಲು ಎಂಎಸ್ ಧೋನಿ ಮುಂದಿನ ತಿಂಗಳು ಮತ್ತೆ ಮೈದಾನಕ್ಕೆ ಬರಲಿದ್ದಾರೆ.

    https://www.instagram.com/p/B8t2f9MB_3P/?utm_source=ig_embed

    ಐಪಿಎಲ್‍ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸುವ ಧೋನಿ, ತಂಡಕ್ಕೆ ಮೂರು ಬಾರಿ ಪ್ರಶಸ್ತಿ ಗೆದ್ದುಕೊಟ್ಟಿದ್ದಾರೆ. ಕಳೆದ ಬಾರಿಯೂ ಸೂಪರ್ ಕಿಂಗ್ಸ್ ಫೈನಲ್ ತಲುಪಿತ್ತಾದರೂ ನಾಲ್ಕು ಬಾರಿಯ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಎದುರು ನಿರಾಸೆ ಅನುಭವಿಸಿತ್ತು.

  • ತನ್ನ ಹೇರ್‌ಸ್ಟೈಲಿಸ್ಟ್ ಸಹೋದರಿ ಮದ್ವೆಗೆ ಬಾಲಿವುಡ್ ಬಾದ್‍ಶಾ ಸರ್ಪ್ರೈಸ್ ಭೇಟಿ

    ತನ್ನ ಹೇರ್‌ಸ್ಟೈಲಿಸ್ಟ್ ಸಹೋದರಿ ಮದ್ವೆಗೆ ಬಾಲಿವುಡ್ ಬಾದ್‍ಶಾ ಸರ್ಪ್ರೈಸ್ ಭೇಟಿ

    ಮುಂಬೈ: ಬಾಲಿವುಡ್ ಬಾದ್‍ಶಾ ಶಾರೂಕ್ ಖಾನ್ ತನ್ನ ಕೇಶವಿನ್ಯಾಸಕನ ಸಹೋದರಿಯ ಮದುವೆಗೆ ಆಗಮಿಸುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ.

    ಇತ್ತೀಚೆಗೆ ಶಾರೂಕ್ ಖಾನ್ ಇನ್‍ಸ್ಟಾಗ್ರಾಂ ಫ್ಯಾನ್ ಪೇಜ್‍ಗಳಲ್ಲಿ ಒಂದು ವಿಡಿಯೋ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಶಾರೂಕ್ ಬ್ಲಾಕ್ ಸೂಟ್ ಧರಿಸಿ ಮದುವೆಯಲ್ಲಿ ಭಾಗವಹಿಸಿದ್ದಾರೆ. ಶಾರೂಖ್ ಹಿಂದುಗಡೆ ಗೇಟ್ ಮೂಲಕ ನೇರವಾಗಿ ವೇದಿಕೆ ಮೇಲೆ ಹೋಗಿ ವಧು-ವರನನ್ನು ತಬ್ಬಿಕೊಂಡು ಶುಭಾಶಯ ತಿಳಿಸಿದ್ದಾರೆ.

    ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಶಾರೂಕ್ ಅಭಿಮಾನಿಗಳು ಈ ವಿಡಿಯೋ ನೋಡಿ ಸಂತಸಪಡುತ್ತಿದ್ದಾರೆ. ಈ ವಿಡಿಯೋ ನೋಡಿ ಕೆಲವರು ನಿಮಗೆ ತುಂಬಾ ದೊಡ್ಡ ಹೃದಯ. ನೀವು ನನಗೆ ಸ್ಫೂರ್ತಿ ಎಂದು ಕಮೆಂಟ್ ಮಾಡುವ ಮೂಲಕ ಶಾರೂಕ್ ಸರಳತೆಯನ್ನು ಹೊಗಳಿದ್ದಾರೆ.

    ಶಾರೂಕ್ ಅಭಿಮಾನಿಗಳು ಈ ವಿಡಿಯೋವನ್ನು ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ ತಕ್ಷಣ ಸಾಕಷ್ಟು ಕಮೆಂಟ್‍ಗಳು ಬರುತ್ತಿತ್ತು. ಈ ವಿಡಿಯೋಗೆ ಇದುವರೆಗೂ 31 ಸಾವಿರಕ್ಕೂ ಹೆಚ್ಚು ವ್ಯೂ ಬಂದಿದ್ದು, 5 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದೆ.

    ಶಾರೂಕ್ ಖಾನ್ ಕೊನೆಯದಾಗಿ ‘ಝೀರೋ’ ಚಿತ್ರದಲ್ಲಿ ನಟಿಸಿದ್ದರು. ಈ ಚಿತ್ರದ ಬಾಕ್ಸ್ ಆಫೀಸ್‍ನಲ್ಲಿ ಅಷ್ಟು ಸದ್ದು ಮಾಡಲಿಲ್ಲ. ಈ ಚಿತ್ರ ಸೋಲು ಕಂಡಿದ್ದಕ್ಕೆ ಶಾರೂಕ್ ಖಾನ್ ಜೂನ್ ತಿಂಗಳಿನವರೆಗೂ ಯಾವುದೇ ಚಿತ್ರವನ್ನು ಸಹಿ ಮಾಡಲ್ಲ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದರು.

  • ಸೀರಿಯಲ್ ಶೂಟಿಂಗ್ ಸ್ಪಾಟ್ ನಲ್ಲಿ ಹೇರ್ ಸ್ಟೈಲಿಸ್ಟ್ ಮೇಲೆ ಹಲ್ಲೆ!

    ಸೀರಿಯಲ್ ಶೂಟಿಂಗ್ ಸ್ಪಾಟ್ ನಲ್ಲಿ ಹೇರ್ ಸ್ಟೈಲಿಸ್ಟ್ ಮೇಲೆ ಹಲ್ಲೆ!

    ಬೆಂಗಳೂರು: ಖಾಸಗಿ ವಾಹಿನಿಯ ಪತ್ತೆದಾರಿ ಪ್ರತಿಭಾ ಸೀರಿಯಲ್ ಶೂಟಿಂಗ್ ಸ್ಪಾಟ್ ನಲ್ಲಿ ಮಹಿಳೆಯೊಬ್ಬಳು ಹೇರ್ ಸ್ಟೈಲಿಸ್ಟ್ ಮೇಲೆ ಹಲ್ಲೆ ನಡೆಸಿದ್ದಾರೆ.

    ಸುರೇಶ್ ಹೈರ್ ಸ್ಟೈಲಿಸ್ಟ್ ಆಗಿದ್ದು, ಅವರ ಮೇಲೆ ಮನೆಯ ಒಡತಿ ಹಲ್ಲೆ ನಡೆಸಿದ್ದಾರೆ. ಹಲವು ದಿನದಿಂದ ಕನಕಪುರ ರಸ್ತೆಯಲ್ಲಿ ಪತ್ತೆಧಾರಿ ಪ್ರತಿಭಾ ಧಾರಾವಾಹಿ ಶೂಟಿಂಗ್ ನಡೆಯುತ್ತಿತ್ತು. ಮನೆಯನ್ನು ಬಾಡಿಗೆ ಪಡೆದುಕೊಂಡು ಶೂಟಿಂಗ್ ನಡೆಸಲಾಗುತ್ತಿತ್ತು.

    ಈ ಸಂದರ್ಭದಲ್ಲಿ ಏಕಾಏಕಿ ಮನೆಯ ಒಡತಿ ಮಮತಾ ಕ್ಯಾತೆ ತೆಗೆದಿದ್ದಾರೆ ಅಂತ ಎನ್ನಲಾಗಿದೆ. ಚಪ್ಪಲಿ ಹೊರಗೆ ಬಿಟ್ಟು ಬರುವಂತೆ ಹೇಳಿ ಅವಾಜ್ ಹಾಕಿ, ನಂತರ ಮಮತಾ ಹೇರ್ ಸ್ಟೈಲಿಸ್ಟ್ ಸುರೇಶ್ ಮೇಲೆ ಹಲ್ಲೆ ನಡೆಸಿರುವ ದೃಶ್ಯಗಳು ಮೊಬೈಲ್‍ನಲ್ಲಿ ಸೆರೆಯಾಗಿವೆ.

    ಮಮತಾ ಸೀರಿಯಲ್ ಸೆಟ್ ನಲ್ಲಿರುವವರ ಮೇಲೆ ಅವಾಚ್ಯ ಶಬ್ದದಿಂದ ನಿಂದಿಸಿದ್ದು, ಮಮತಾ ದೌರ್ಜನ್ಯವನ್ನು ಖಂಡಿಸಿ ಸೀರಿಯಲ್ ತಂಡ ಶೂಟಿಂಗ್ ನಿಲ್ಲಿಸಿದ್ದಾರೆ. ಅಲ್ಲದೇ ಹಲ್ಲೆಗೆ ಆಕ್ರೋಶ ವ್ಯಕ್ತಪಡಿಸಿ ಕ್ಷಮೆ ಕೇಳುವಂತೆ ಆಗ್ರಹಿಸಿದ್ದಾರೆ.