Tag: Hair Style

  • ಲಾಕ್‍ಡೌನ್ ಬಳಿಕ ಧೋನಿ ಪ್ಲಾನ್ ರಿವೀಲ್ ಮಾಡಿದ ಸಾಕ್ಷಿ..!

    ಲಾಕ್‍ಡೌನ್ ಬಳಿಕ ಧೋನಿ ಪ್ಲಾನ್ ರಿವೀಲ್ ಮಾಡಿದ ಸಾಕ್ಷಿ..!

    ಮುಂಬೈ: ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ನಿವೃತ್ತಿಯ ಕುರಿತು ಭಾರೀ ಚರ್ಚೆ ನಡೆಯುತ್ತಿದೆ. ಕಳೆದ ಬುಧವಾರ ‘#DhoniRetires’ ಹ್ಯಾಶ್ ಟ್ಯಾಗ್ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗುವ ಮೂಲಕ ಭಾರೀ ಚರ್ಚೆಗೆ ಕಾರಣವಾಗಿತ್ತು. ಮರುದಿನ ಧೋನಿ ಪತ್ನಿ ಇದಕ್ಕೆ ಕೌಂಟರ್ ನೀಡುವ ಹಿನ್ನೆಲೆಯಲ್ಲಿ ‘#DhoniNeverRetire’ ಎಂದು ಟ್ಯಾಗ್ ಮಾಡಿ ಟ್ರೆಂಡ್ ಮಾಡಿದ್ದರು. ಆದರೆ ಧೋನಿ ನಿವೃತ್ತಿ ಕುರಿತು ಹಲವು ಆಟಗಾರು ತಮ್ಮ ಪ್ರತಿಕ್ರಿಯೆ ನೀಡಿದ್ದು, ವಿದಾಯದ ಪಂದ್ಯವನ್ನಾದರೂ ಆಡಲು ಅನುಮತಿ ನೀಡಬೇಕು ಎಂದು ಹೇಳಿದ್ದರು. ಆದರೆ ಇಂತಹ ಯಾವುದೇ ಸುದ್ದಿಗಳಿಗೆ ಇದುವರೆಗೂ ಧೋನಿ ಪ್ರತಿಕ್ರಿಯೆ ನೀಡಿಲ್ಲ.

    ಲಾಕ್‍ಡೌನ್ ಮುಕ್ತಾಯದ ಬಳಿಕ ಧೋನಿ ಪ್ಲಾನ್ ಏನು ಎಂಬ ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತಿದೆ. ಈ ಕುರಿತು ಸಾಕ್ಷಿ ಧೋನಿ ಪ್ರತಿಕ್ರಿಯೆ ನೀಡಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ಇನ್‍ಸ್ಟಾ ಲೈವ್‍ನಲ್ಲಿ ಈ ಕುರಿತು ಮಾತನಾಡಿದ್ದಾರೆ. ಲಾಕ್‍ಡೌನ್ ಬಳಿಕ ಕ್ರಿಕೆಟ್ ಪಂದ್ಯಗಳಿದ್ದರೆ ಧೋನಿ ಆಡುತ್ತಾರೆ. ಒಂದೊಮ್ಮೆ ಮ್ಯಾಚ್ ಇಲ್ಲದಿದ್ದರೆ ನಾನು, ಧೋನಿ ಇಬ್ಬರೂ ಹಿಮ ಬೆಟ್ಟಗಳಲ್ಲಿ ವಿಹಾರ ನಡೆಸಬೇಕೆಂಬ ಯೋಜನೆ ಮಾಡಿದ್ದಾಗಿ ತಿಳಿಸಿದ್ದಾರೆ.

    ಉತ್ತರಖಂಡದ ಸಣ್ಣ ಹಳ್ಳಿಯೊಂದಕ್ಕೆ ಭೇಟಿ ನೀಡಲು ಪ್ಲಾನ್ ಮಾಡಿದ್ದೇವೆ. ಆ ಪ್ರದೇಶದಲ್ಲಿ ಹಿಮ ಹೆಚ್ಚಾಗಿರುತ್ತದೆ. ಧೋನಿಗೆ ಹಿಮ ಎಂದರೇ ಬಹಳ ಇಷ್ಟ. ಆದ್ದರಿಂದ ಕೆಲ ದಿನಗಳ ಸಮಯವನ್ನು ಅಲ್ಲಿಯೇ ಕಳೆಯುತ್ತೇವೆ. ಧೋನಿ ಡ್ರೈವಿಂಗ್ ಎಂದರೂ ಬಹಳ ಇಷ್ಟ. ರಸ್ತೆ ಮಾರ್ಗದಲ್ಲೇ ಪ್ರವಾಸ ಕೈಗೊಳ್ಳುತ್ತೇವೆ. ಇಂದಿಗೂ ಧೋನಿ ರಾಂಚಿ ಕ್ರೀಡಾಂಗಣಕ್ಕೆ ತರಬೇತಿಗೆ ತೆರಳುವ ವೇಳೆ ಸೆಲ್ಫ್ ಡ್ರೈವಿಂಗ್ ಮಾಡಿಕೊಂಡು ಹೋಗುತ್ತಾರೆ ಎಂದು ಸಾಕ್ಷಿ ತಿಳಿಸಿದ್ದಾರೆ.

     

    View this post on Instagram

     

    Holiday mode ! ❄️

    A post shared by Sakshi Singh Dhoni (@sakshisingh_r) on

    ಇದೇ ವೇಳೆ ಧೋನಿ ನಿವೃತ್ತಿ ಬಗ್ಗೆ ಮಾತನಾಡಿದ ಸಾಕ್ಷಿ, ಅಂದು ನನಗೆ ಸ್ನೇಹಿತೆಯೊಬ್ಬರು ಫೋನ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗುತ್ತಿರುವ ಬಗ್ಗೆ ಕೇಳಿದ್ದರು. ಅಂದು ಮಧ್ಯಾಹ್ನದಿಂದಲೇ #DhoniRetires ಟ್ರೆಂಡ್ ಆಗುತ್ತಿತ್ತು. ಪರಿಣಾಮ ನನಗೆ ಏನಾಗುತ್ತೆ ಎಂಬುದು ಅರ್ಥವಾಗಲಿಲ್ಲ. ಆ ಬಳಿಕ ಈ ಬಗ್ಗೆ ಸ್ಪಷ್ಟನೆ ನೀಡಿ ಟ್ವೀಟ್ ಮಾಡಿದ್ದೆ. ಯಾರು ಏನು ಹೇಳಿದರೂ ನಾನು ಮಾಡಬೇಕು ಎಂದುಕೊಂಡಿದ್ದನ್ನು ಮಾಡಿದ್ದೇನೆ. ಅಷ್ಟಕ್ಕೆ ನನ್ನ ಕೆಲಸ ಮುಕ್ತಾಯವಾಗಿತ್ತು ಎಂದು ವಿವರಿಸಿದ್ದಾರೆ.

    ಇದೇ ಸಂದರ್ಭದಲ್ಲಿ ಧೋನಿಗೆ ಹೇರ್ ಸ್ಟೈಲ್ ಕುರಿತು ಮಾತನಾಡಿರುವ ಸಾಕ್ಷಿ, ಅದೃಷ್ಟ ಎಂಬಂತೆ ಧೋನಿ ಲಾಂಗ್ ಹೇರ್ ಸ್ಟೈಲ್ ವೇಳೆ ಅವರನ್ನು ನಾನು ನೋಡಿರಲಿಲ್ಲ. ಆರೆಂಜ್ ಬಣ್ಣದ ಹೇರ್ ಸ್ಟೈಲ್ ನೋಡಿದ್ದರೆ ಮತ್ತೆ ಅವರನ್ನು ಕಣ್ಣೆತ್ತಿ ನೋಡುತ್ತಿರಲಿಲ್ಲ. ದೈಹಿಕ ಸೌಂದರ್ಯದ ಬಗ್ಗೆ ಎಲ್ಲರಿಗೂ ಅವರದ್ದೇ ಅಭಿಪ್ರಾಯವಿರುತ್ತದೆ ಎಂದು ಸಾಕ್ಷಿ ಹೇಳಿದ್ದಾರೆ.

  • ಹೇರ್ ಸ್ಟೈಲ್ ಚೆನ್ನಾಗಿಲ್ಲವೆಂದು ಬೈದ ತಾಯಿ – ಮನನೊಂದು ಮಗ ಆತ್ಮಹತ್ಯೆ

    ಹೇರ್ ಸ್ಟೈಲ್ ಚೆನ್ನಾಗಿಲ್ಲವೆಂದು ಬೈದ ತಾಯಿ – ಮನನೊಂದು ಮಗ ಆತ್ಮಹತ್ಯೆ

    – ಮನೆಯಲ್ಲಿ ಯಾರು ಇಲ್ಲದ ವೇಳೆ ನೇಣಿಗೆ ಶರಣು

    ಚೆನ್ನೈ: ಹೇರ್ ಸ್ಟೈಲ್ ಚೆನ್ನಾಗಿಲ್ಲ ಎಂದು ತಾಯಿ ಬೈದಿದ್ದಕ್ಕೆ ಮನನೊಂದು ಮಗ ಆತ್ಮಹತ್ಯೆಗೆ ಶರಣಾದ ಘಟನೆ ತಮಿಳುನಾಡಿನ ವಲಸರವಕ್ಕಂ ಪ್ರದೇಶದಲ್ಲಿ ನಡೆದಿದೆ.

    ವಲಸರವಕ್ಕಂನ ನಿವಾಸಿ ಶ್ರೀನಿವಾಸನ್(16) ಆತ್ಮಹತ್ಯೆಗೆ ಶರಣಾಗಿದ್ದಾನೆ. ದ್ವಿತೀಯ ಪಿಯುಸಿ ವಿದ್ಯಾರ್ಥಿಯಾಗಿದ್ದ ಶ್ರೀನಿವಾಸನ್ ಕಳೆದ ಮೂರು ತಿಂಗಳುಗಳಿಂದ ಕಟಿಂಗ್ ಮಾಡಿಸದೆ ಹೊಸ ಹೇರ್ ಸ್ಟೈಲ್‍ಗಾಗಿ ಕೂದಲು ಬೆಳೆಸುತ್ತಿದ್ದನು. ಆದರೆ ಮಗನ ಅವತಾರ ಮಾತ್ರ ತಾಯಿಗೆ ಕಿಂಚಿತ್ತು ಇಷ್ಟವಿರಲಿಲ್ಲ. ಹೀಗಾಗಿ ಯಾವಾಗಲೂ ಹೇರ್ ಸ್ಟೈಲ್ ವಿಚಾರಕ್ಕೆ ಶ್ರೀನಿವಾಸನ್‍ಗೆ ತಾಯಿ ಬೈಯ್ಯುತ್ತಿದ್ದರು.

    ಭಾನುವಾರ ಕೂಡ ಹೇರ್ ಸ್ಟೈಲ್ ವಿಚಾರಕ್ಕೆ ತಾಯಿ ಮಗನ ನಡುವೆ ಜಗಳ ನಡೆದಿತ್ತು. ಈ ವೇಳೆ ತಂದೆ ಮಧ್ಯ ಪ್ರವೇಶಿಸಿ ಜಗಳ ನಿಲ್ಲಿಸಲು ಪ್ರಯತ್ನಿಸಿದರೂ ಜಗಳ ಮಾತ್ರ ನಿಲ್ಲಲಿಲ್ಲ. ಅಲ್ಲದೇ ತಾಯಿ ಬೈದರಲ್ಲ ಎಂದು ಶ್ರೀನಿವಾಸನ್ ಮನನೊಂದಿದ್ದನು. ಬೇಸರದಲ್ಲಿದ್ದ ಶ್ರೀನಿವಾಸನ್ ಮನೆಯಲ್ಲಿ ಯಾರೂ ಇಲ್ಲದ ವೇಳೆ ತನ್ನ ರೂಮ್‍ನಲ್ಲಿ ನೇಣಿಗೆ ಶರಣಾಗಿದ್ದಾನೆ.

    ಈಗಾಗಲೇ ಶ್ರೀನಿವಾಸನ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಜೊತೆಗೆ ತನಿಖೆ ಕೂಡ ಮುಂದುವರಿಸಿದ್ದಾರೆ.

  • ವಿಚಿತ್ರವಾಗಿ ಹೇರ್ ಕಟ್ಟಿಂಗ್- ಯುವಕನಿಗೆ ದಂಡ ಹಾಕಿದ ಮುಸ್ಲಿಂ ಮುಖಂಡರು

    ವಿಚಿತ್ರವಾಗಿ ಹೇರ್ ಕಟ್ಟಿಂಗ್- ಯುವಕನಿಗೆ ದಂಡ ಹಾಕಿದ ಮುಸ್ಲಿಂ ಮುಖಂಡರು

    ಮಡಿಕೇರಿ: ವಿಚಿತ್ರವಾಗಿ ಕೂದಲು ಕತ್ತರಿಸಿದ್ದಕ್ಕೆ ಮುಸ್ಲಿಂ ಮುಖಂಡರು ಕೊಡಗಿನ ಯುವಕನಿಗೆ ದಂಡ ಹಾಕಿದ್ದಾರೆ.

    ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಬೇಟೋಳಿ ಅಂಚೆ ಗುಂಡಿಕೆರೆ ಗ್ರಾಮದ ‘ಶಾಫಿ ಮುಸ್ಲಿಂ ಜಮಾಯತ್’ ಕೆಲವು ತಿಂಗಳಿಂದ ಗ್ರಾಮದ ಯುವಕರಿಗೆ ‘ಪರಿವರ್ತನೆಯ ಪಾಠ’ ಮಾಡುತ್ತಿದೆ. ಗ್ರಾಮದ ಬಹುತೇಕ ಯುವಕರಲ್ಲಿ ಶಿಸ್ತು ತಂದ ಹೆಗ್ಗಳಿಕೆಗೆ ಪಾತ್ರವಾಗಿದೆ.

    ಈ ಶಾಲೆಯ ಮೂವರು ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಹೊರ ರಾಜ್ಯದಲ್ಲಿ ಕೆಲಸ ಮಾಡುತ್ತಿದ್ದ ನಿಜಾಂ ಎಂಬ ಯುವಕ ವಿಚಿತ್ರವಾಗಿ ಕೇಶ ವಿನ್ಯಾಸ ಮಾಡಿಸಿಕೊಂಡು ಗ್ರಾಮದಲ್ಲಿ ಓಡಾಡುತ್ತಿದ್ದ. ಅದನ್ನು ಗಮನಿಸಿದ ಜಮಾಯತ್ ಸದಸ್ಯರು, ಆ ಯುವಕ ಹಾಗೂ ಅವರ ಪೋಷಕರನ್ನು ಕರೆಸಿ ಬುದ್ಧಿಮಾತು ಹೇಳಿದ್ದರು. ಅದಕ್ಕೂ ಕ್ಯಾರೆ ಎನ್ನದಿದ್ದಾಗ ದಂಡ ಪ್ರಯೋಗದ ಅಸ್ತ್ರ ಬಳಸಿದ್ದರು.

    ಜೂನ್ 21ರಂದು ದಂಡದ ಆದೇಶ ಹೊರಡಿಸಿದ್ದು, ಅದರಲ್ಲಿ `ನೀವು ಜಮಾಯತ್‍ನ ಸದಸ್ಯರಾಗಿದ್ದು ನಮ್ಮ ತೀರ್ಮಾನದ ವಿರುದ್ಧವಾಗಿ ತಲೆ ಕೂದಲು ಬೆಳೆಸಿರುವ ಕಾರಣಕ್ಕೆ 5,000 ದಂಡ ವಿಧಿಸಲಾಗಿದೆ. ದಂಡ ಪಾವತಿಸದಿದ್ದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಪತ್ರದಲ್ಲಿ ಎಚ್ಚರಿಕೆ ನೀಡಲಾಗಿತ್ತು.

    ಪತ್ರದಿಂದ ಹೆದರಿದ ನಿಜಾಂ ಸೇರಿದಂತೆ ಮೂವರು ಯುವಕರು ಭಾನುವಾರ ನಡೆದ ಆಡಳಿತ ಮಂಡಳಿ ಸಭೆಯ ಸ್ಥಳಕ್ಕೆ ಕೂದಲು ತೆಗೆಸಿ ಶಿಸ್ತಿನಿಂದ ಬಂದಿದ್ದರು ಎಂದು ಜಮಾಯತ್ ಸದಸ್ಯರು ತಿಳಿಸಿದರು. ಗುಂಡಿಗೆರೆ ಜಿಲ್ಲೆಯಲ್ಲಿ ಮಾದರಿ ಗ್ರಾಮ. ಎಲ್ಲ ಧರ್ಮದ ಜನರೂ ಇಲ್ಲಿ ನೆಲೆಸಿದ್ದಾರೆ. ಸೌಹಾರ್ದ ಮೂಡಿಸುವ ಉದ್ದೇಶದಿಂದ ಕೆಲವು ನಿಯಮಗಳನ್ನು ಪಾಲಿಸಲಾಗುತ್ತಿದೆ. ಅದಕ್ಕೆ ತಕ್ಕ ಪ್ರತಿಫಲವೂ ಸಿಕ್ಕಿದೆ. ಮಾದರಿ ಜಮಾಯತ್ ಆಗಿಯೂ ರೂಪುಗೊಂಡಿದೆ.

  • ಬೆಂಗ್ಳೂರಲ್ಲಿ ಟ್ರೆಂಡಿಂಗ್ ಆಯ್ತು ಅಭಿನಂದನ್ ಮೀಸೆ, ಹೇರ್ ಸ್ಟೈಲ್..!

    ಬೆಂಗ್ಳೂರಲ್ಲಿ ಟ್ರೆಂಡಿಂಗ್ ಆಯ್ತು ಅಭಿನಂದನ್ ಮೀಸೆ, ಹೇರ್ ಸ್ಟೈಲ್..!

    – ಕೊರಮಂಗಲ ಸೆಲೂನ್ ನಿಂದ ಸಖತ್ ಆಫರ್

    ಬೆಂಗಳೂರು: ಪಾಕ್ ಕಪಿಮುಷ್ಠಿಯಿಂದ ಬಿಡುಗಡೆಗೊಂಡು ತಾಯ್ನಾಡು ಭಾರತಕ್ಕೆ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರು ವಾಪಸ್ ಆಗಿದ್ದಾರೆ. ಈ ಮಧ್ಯೆ ವೀರಪುತ್ರನ ಮೀಸೆ ಹಾಗೂ ಹೇರ್ ಕಟ್ ಸಖತ್ ಟ್ರೆಂಡಿಂಗ್ ಆಗಿದೆ. ಬೆಂಗಳೂರಿನಲ್ಲಿ ಕೂಡ ಅಭಿ ಮೀಸೆ ಸ್ಟೈಲ್ ಸಖತ್ ಹವಾ ಸೃಷ್ಟಿ ಮಾಡಿದೆ.

    ಯುವ ಸಮೂಹ ಅಭಿನಂದನ್ ಸ್ಟೈಲ್ ಗೆ ಸಖತ್ ಫಿದಾ ಆಗಿದೆ. ನಗರದ ಬಹುತೇಕ ಸೆಲೂನ್ ನಲ್ಲಿ ಈ ಸ್ಟೈಲ್ ಗೆ ಭಾರೀ ಬೇಡಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೋರಮಂಗಲ ನಾನೇಶ್ ಹೇರ್ ಸಲೂನ್ ನಿಂದ್ ಸಖತ್ ಆಫರ್ ನೀಡಲಾಗಿದೆ.

    ಅಭಿನಂದನ್ ರೀತಿ ಸ್ಟೈಲ್ ಮಾಡುವವರಿಗೆ ಉಚಿತವಾಗಿ ಹೇರ್ ಸ್ಟೈಲ್ ಮಾಡಲಾಗುತ್ತಿದೆ. ಹೀಗಾಗಿ ಅಭಿನಂದನ್ ಅಭಿಮಾನಿಗಳು ಸಾಕಷ್ಟು ಸಂಖ್ಯೆಯಲ್ಲಿ ಅಭಿನಂದನ್ ಅಭಿಮಾನಿಗಳು ಆಗಮಿಸುತ್ತಿದ್ದಾರೆ. ಹೀಗಾಗಿ ಸೆಲೂನ್ ಮಾಲೀಕರು ಕೂಡ ವೀರ ಯೋಧನಿಗೆ ಗೌರವ ಸಲ್ಲಿಸಲು ಉಚಿತವಾಗಿ ಹೇರ್ ಆಂಡ್ ಮೀಸೆ ಸ್ಟೈಲ್ ಮಾಡುತ್ತಿದ್ದಾರೆ.

    ಮಾರ್ಚ್ 1ರ ಶುಕ್ರವಾರದಂದು ವೈರಿ ರಾಷ್ಟ್ರದಿಂದ ಬರುವ ವೇಳೆ ಮುಖದಲ್ಲಿ ಅದೇ ಮಂದಹಾಸ, ಅದೇ ಹುರಿ ಮೀಸೆ, ಅದೇ ಮಾನಸಿಕ ದೃಢತೆಯೊಂದಿಗೆ ಅಭಿನಂದನ್ ತಾಯ್ನಾಡಿಗೆ ಕಾಲಿಟ್ಟಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸ್ವಾತಂತ್ರ್ಯಕ್ಕಾಗಿ ಬಲಿದಾನ ಮಾಡಿದ ಮಹಾನ್ ವ್ಯಕ್ತಿಗಳು ಕ್ಷೌರಿಕನ ಕಲಾ ಕುಂಚದಲ್ಲಿ

    ಸ್ವಾತಂತ್ರ್ಯಕ್ಕಾಗಿ ಬಲಿದಾನ ಮಾಡಿದ ಮಹಾನ್ ವ್ಯಕ್ತಿಗಳು ಕ್ಷೌರಿಕನ ಕಲಾ ಕುಂಚದಲ್ಲಿ

    ಬೆಂಗಳೂರು: ಒಮ್ಮೆ ಉಪ್ಪಿ ಸ್ಟೈಲ್, ಮತ್ತೊಮ್ಮೆ ಕೆಂಪೇಗೌಡ ಸ್ಟೈಲ್, ಮಗದೊಮ್ಮೆ ಗಜಿನಿ ಸ್ಟೈಲ್ ಹೀಗೆ ಟ್ರೆಂಡ್ ಗೆ ತಕ್ಕ ಹಾಗೆ ತೆರೆ ಮೇಲೆ ಮಿಂಚಿ ಮರೆಯಾಗುವ ಹೀರೋಗಳ ಹೇರ್ ಸ್ಟೈಲ್ ಕಾಪಿ ಮಾಡೋರ ಮಧ್ಯೆ ದೇಶದ ಸ್ವಾತಂತ್ರ್ಯಕ್ಕಾಗಿ ಬಲಿದಾನ ಮಾಡಿದ ಮಹಾನ್ ವ್ಯಕ್ತಿಗಳು ಕ್ಷೌರಿಕನ ಕಲಾ ಕುಂಚದಲ್ಲಿ ಜೀವ ತಳೆದಿದ್ದಾರೆ.

    ನಾಗರಾಜ್ ಮತ್ತು ರಾಮು ಅವರು ತಲೆ ಕೂದಲಿಗೆ ಕೇಸರಿ, ಬಿಳಿ, ಹಸಿರು ಬಣ್ಣದ ಚಿತ್ತಾರ ಹಾಗು ಶಿರದಲ್ಲಿ ಸ್ವಾತಂತ್ರ್ಯ ಹೋರಾಟಗಾರರಾದ ಭಗತ್ ಸಿಂಗ್ ಹಾಗೂ ಸುಭಾಷ್ ಚಂದ್ರ ಬೋಸ್ ಅವರ ಚಿತ್ರವನ್ನು ದೇಶ ಪ್ರೇಮದ ಸಂಕೇತವಾಗಿ ತಮ್ಮ ಶಿರದ ಮೇಲೆ ಬಿಡಿಸಿಕೊಂಡಿದ್ದಾರೆ. ಈ ಮೂಲಕ ಇವರು ಸ್ವಾತಂತ್ರ್ಯ ದಿನ ಆಚರಿಸಿದ್ದಾರೆ.

    ಅಭಿ ಬಾಗಲಗುಂಟೆ ಸ್ಪಿನ್ ಸ್ಪಾನಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಹಿಂದೆ ಗಾಂಧೀಜಿ ಫೋಟೋವನ್ನು ಕಟಿಂಗ್ ಮೂಲಕ ಮೂಡಿಸಿದ್ದರು. ಇದೀಗ ಸುಮಾರು ಆರು ಗಂಟೆ ಸಮಯ ತೆಗೆದುಕೊಂಡು ಫ್ರೀಡಂ ಕಟಿಂಗ್ ಮಾಡಿದ್ದಾರೆ ಎಂದು ಸ್ಪಿನ್ ಸ್ಪಾ ಮಾಲೀಕ ನವೀನ್ ಹೇಳಿದ್ದಾರೆ. ಈ ಫ್ರೀಡಂ ಹೇರ್ ಸ್ಟೈಲ್ ಗೆ ಹಲವರು ಫಿದಾ ಆಗಿದ್ದು, ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸಮ್ಮರ್ ಗೆ  ಗ್ಲಾಮರ್ ಲುಕ್ ಕೊಡುವ 5 ವಿವಿಧ ಹೇರ್ ಸ್ಟೈಲ್ ಗಳು!

    ಸಮ್ಮರ್ ಗೆ ಗ್ಲಾಮರ್ ಲುಕ್ ಕೊಡುವ 5 ವಿವಿಧ ಹೇರ್ ಸ್ಟೈಲ್ ಗಳು!

    ಬೆಂಗಳೂರು: ಬೇಸಿಗೆಯಲ್ಲಿ ಕೂದಲು ಬಿಟ್ಟುಕೊಂಡರೆ ಕಿರಿಕಿರಿಯಾಗುತ್ತದೆ. ಹೀಗಾಗಿ ಉರಿಬಿಸಿಲಿಗೆ ಹೊರಹೋಗುವಾಗ ಸಖತ್ ಗ್ಲಾಮರ್ ಆಗಿ ಕಾಣಲು ಹೊಸ ಹೊಸ ಹೇರ್ ಸ್ಟೈಲ್ ಗಳನ್ನ ನೀವು ಟ್ರೈ ಮಾಡಬಹುದು. ಹೀಗಾಗಿ ಯುವತಿಯರ ಕೂದಲ ವಿನ್ಯಾಸವನ್ನು ಇನ್ನಷ್ಟು ಆಕರ್ಷಕಗೊಳಿಸಲು ಇಲ್ಲಿ 5 ಟಿಪ್ಸ್ ನೀಡಲಾಗಿದೆ.

    1. ಬ್ರೈಡೆಡ್ ಪೋನಿಟೇಲ್: ಈ ಲುಕ್ ನಿಮ್ಮ ಕಾಲೇಜ್, ಆಫೀಸ್ ಮತ್ತು ಶಾಪಿಂಗ್ ಗೆ ಹೋಗುವಾಗ ಟ್ರೈ ಮಾಡಬಹುದು. ಎರಡೂ ಕಡೆಯಿಂದ ಸಣ್ಣದಾದ ಜಡೆಯನ್ನ ಹೆಣೆದು ಒಂದು ಪೋನಿಟೇಲ್ ಹಾಕಿದರೆ ಸಾಕು. ತುಂಬಾ ಸೊಗಸಾಗಿ ಕಾಣುವ ಈ ಹೇರ್ ಸ್ಟೈಲ್ ಬೋಲ್ಡ್ ಮತ್ತು ಯಂಗ್ ಲುಕ್ ಕೊಡುತ್ತದೆ.

    2. ಕ್ಲಾಸಿಕ್ ನೀಟ್ ಆಂಡ್ ಸ್ಟ್ರೈಟ್ ಪೋನಿಟೇಲ್: ಉದ್ದವಾದ ಕೂದಲಿರುವವರು ಈ ರೀತಿಯ ಪೋನಿಟೇಲ್ ಅನ್ನು ಬಳಸಿದರೆ ಎಷ್ಟು ಚೆಂದವಾಗಿ ಕಾಣಿಸುತ್ತಾರೆ. ಸ್ಟ್ರೈಟ್ ಹೇರ್‍ನವರು ಈ ಹೇರ್ ಸ್ಟೈಲ್ ಮಾಡಿದರೆ ಸಖತ್ ಹಾಟ್ ಆಗಿ ಕಾಣಿಸುತ್ತಾರೆ.

    3. ಫಾಲಿಂಗ್ ಡೌನ್ ಅಪ್‍ಡು: ಈ ಲುಕ್ ಎಲ್ಲಾ ಪಾರ್ಟಿಗಳು, ಮದುವೆಯ ಸಮಾರಂಭಗಳು ಮತ್ತು ಇನ್ನಿತರ ಕಾರ್ಯಕ್ರಮಗಳಿಗೆ ಟ್ರೆಡೀಶನಲ್ ಲುಕ್ ನೀಡುತ್ತದೆ.

    4. ಟಾಸ್ಲೆಡ್ ಪಿಕ್ಸಿ ಹೇರ್ ಸ್ಟೈಲ್: ಕೂದಲು ಕಮ್ಮಿ ಇರುವ ಯುವತಿಯರು ಮತ್ತು ಹೇರ್ ಸ್ಟೈಲ್ ಮಾಡೋಕೆ ಸಮಯ ಇಲ್ಲ ಎಂದು ಗೊಣಗುವವರಿಗೆ ಈ ಹೇರ್ ಸ್ಟೈಲ್ ಸುಲಭ ಮತ್ತು ಅಂದವಾಗಿ ಕಾಣುವಲ್ಲಿ ಎರಡು ಮಾತಿಲ್ಲ.

    5. ಶಾರ್ಟ್ ಬಾಬ್ ಕಟ್: ಚಿಕ್ಕ ಮಕ್ಕಳು ಸೇರಿದಂತೆ ಹದಿಹರೆಯದ ಯುವತಿಯರು, ಮಹಿಳೆಯರು ಮತ್ತು ವಯಸ್ಸಾದ ವೃದ್ಧೆಯರಿಗೂ ಈ ಹೇರ್ ಸ್ಟೈಲ್ ಎಂದೆಂದಿಗೂ ಅಚ್ಚು ಮೆಚ್ಚು. ಈ ಲುಕ್ ನಿಮ್ಮ ಬಾಲ್ಯದ ನೆನಪನ್ನು ಮರುಕಳಿಸುತ್ತದೆ.

  • ಹಾರ್ದಿಕ್ ಪಾಂಡ್ಯ ಹೊಸ ಹೇರ್ ಸ್ಟೈಲ್ ನೋಡಿ!

    ಹಾರ್ದಿಕ್ ಪಾಂಡ್ಯ ಹೊಸ ಹೇರ್ ಸ್ಟೈಲ್ ನೋಡಿ!

    ಮುಂಬೈ: ಟೀಂ ಇಂಡಿಯಾದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರು ಶ್ರೀಲಂಕಾ ಪ್ರವಾಸ ತೆರಳುವುದಕ್ಕೂ ನ್ನ ಇದೀಗ ತಮ್ಮ ನೂತನ ಕೇಶ ವಿನ್ಯಾಸದ ಮೂಲಕ ಗಮನ ಸೆಳೆದಿದ್ದಾರೆ.

    ಹೌದು, ಕಳೆದ ಚಾಂಪಿಯನ್ಸ್ ಕ್ರಿಕೆಟ್ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ನೀಡಿ ಪಾಂಡ್ಯ ಸುದ್ದಿಯಲ್ಲಿದ್ದರು. ಈಗ ಮತ್ತೆ ನೂತನ ಕೇಶ ವಿನ್ಯಾಸದ ಮೂಲಕ ಸದಾ ಸುದ್ದಿಯಲ್ಲಿದ್ದಾರೆ. ಹಾಗೆ ಇವರ ಜೊತೆ ರೋಹಿತ್ ಶರ್ಮ ಹಾಗೂ ಅಜಿಂಕ್ಯ ರಹಾನೆ ಕೂಡಾ ಕೇಶ ವಿನ್ಯಾಸವನ್ನು ಬದಲಾಯಿಸಿಕೊಂಡಿದ್ದಾರೆ.

    ಪಾಂಡ್ಯ ಅವರ ತೆಲೆಗೆ ಕತ್ತರಿ ಹಾಕಿದ್ದು ಆಲೀಮ್ ಹಕೀಂ. ಈ ಹೇರ್ ಸ್ಟೈಲ್ ನನಗೆ ತುಂಬಾ ಇಷ್ಟ ಆಯ್ತು ಎಂದು ಅವರ ಪ್ರತಿಭೆಯನ್ನು ಗುರುತಿಸಿ ಇನ್‍ಸ್ಟಾಗ್ರಾಮ್ ನಲ್ಲಿ ಫೋಟೋ ಹಾಕಿದ್ದಾರೆ. ಈ ಚಿತ್ರಗಳು ಕೂಡಾ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    https://www.instagram.com/p/BWnZgDshFjj/?taken-by=hardikpandya93