ಬಾರ್ಬಡೋಸ್‌ನಲ್ಲಿನ ಟಿ20 ವಿಶ್ವಕಪ್ ಗೆಲುವಿನ ಬಳಿಕ ಟೀಂ ಇಂಡಿಯಾ ಆಟಗಾರರು ಇಂದು ತಾಯ್ನಾಡು ಭಾರತಕ್ಕೆ ಮರಳಿದ್ದಾರೆ. ಇಂದು ಬೆಳಗ್ಗೆ ದೆಹಲಿಗೆ ಬಂದಿಳಿದ ಟೀಂ, ಮೊದಲು ಪ್ರಧಾನಿಯನ್ನು ಭೇಟಿ ಮಾಡಿದೆ. ಈ ವೇಳೆ ಬಾಟ್ಸ್‌ಮನ್ ಯಶಸ್ವಿ ಜೈಸ್ವಾಲ್ (Yashasvi Jaiswal) ಅವರ ಲುಕ್ ಎಲ್ಲರ ಗಮನ ಸೆಳೆದಿದೆ.
ಹೌದು. ಜೈಸ್ವಾಲ್ ಅವರು ಹೊಸ ಹೇರ್‌ಸ್ಟೈಲ್‌ನಲ್ಲಿ ಇಂದು ಕಾಣಿಸಿಕೊಂಡಿದ್ದರು. ಹೀಗಾಗಿ ಅವರ ಫೋಟೋಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಅಲ್ಲದೇ ಅವರ ಫೋಟೋ ಇಟ್ಟುಕೊಂಡು ಹಲವು ಮೀಮ್ಸ್‌ಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಇದನ್ನೂ ಓದಿ: ಟೀಂ ಇಂಡಿಯಾ ಆಟಗಾರರು ಆಗಮಿಸಿದ ವಿಮಾನಕ್ಕೆ ವಾಟರ್ ಸೆಲ್ಯೂಟ್
ʼತಾಯಿ ನಿಮ್ಮ ಕೂದಲನ್ನು ಬಾಚಿದಾಗʼ ಎಂದು ಪುಟ್ಟ ಮಗು ಹಾಗೂ ಜೈಸ್ವಾಲ್ ಫೋಟೋ ಕೊಲಾಜ್ ಮಾಡಿ ಹರಿಬಿಡಲಾಗಿದೆ. ಇನ್ನೂ ಕೆಲವರು ಪೋಷಕರು ಶಿಕ್ಷಕರ ಸಭೆಯಲ್ಲಿ ಭಾಗವಹಿಸಲು ಹೋಗುವಾಗ ಮಕ್ಕಳ ಮುಖದಂತೆ ಜೈಸ್ವಾಲ್ ಮುಖ ಇಲ್ಲಿ ಮುಗ್ಧತೆಯನ್ನು ತೋರಿಸುತ್ತದೆ ಎಂದಿದ್ದಾರೆ. ಹೀಗೆ ಹಲವಾರು ಮೀಮ್ಸ್‌ಗಳು ಬರುತ್ತಿವೆ.
ಭಾರತ ತಂಡದ ನಾಯಕ ರೋಹಿತ್ ಶರ್ಮಾ ನೇತೃತ್ವದ ತಂಡ ಇಂದು ಬೆಳಗ್ಗೆ ದೆಹಲಿಯ ಲೋಕ ಕಲ್ಯಾಣ ಮಾರ್ಗದಲ್ಲಿರುವ ಪ್ರಧಾನಿ ನರೇಂದ್ರ ಮೋದಿ (PM Narendra Modi)ಅವರ ನಿವಾಸಕ್ಕೆ ಭೇಟಿ ನೀಡಿದರು. ಪ್ರಧಾನಿ ನರೇಂದ್ರ ಮೋದಿಯಿಂದ ಹ್ಯಾಂಡ್‌ಶೇಕ್ ಮತ್ತು ಅಪ್ಪುಗೆಯೊಂದಿಗೆ ಅದ್ಧೂರಿ ಸ್ವಾಗತ ಪಡೆದ ಟೀಂ ಇಂಡಿಯಾ ಆಟಗಾರರು ಮಾತುಕತೆ ನಡೆಸಿದರು. ಟಿ20 ವಿಶ್ವಕಪ್ ಟ್ರೋಫಿಯೊಂದಿಗೆ ಟೀಂ ಫೋಟೋ ಕ್ಲಿಕ್ಕಿಸಿಕೊಂಡರು. ಭಾರತ ತಂಡದ ಆಟಗಾರರಿಗೆ ಪ್ರಧಾನಿ ನರೇಂದ್ರ ಮೋದಿ ಸನ್ಮಾನಿಸಿ ಅಭಿನಂದಿಸಿದರು.
ಬಳಿಕ ವಿಶೇಷ ವಿಮಾನದ ಮೂಲಕ ಮುಂಬೈಗೆ ಟೀಂ ಬಂದಿಳಿಯಿತು. ಏರ್ ಇಂಡಿಯಾದ ವಿಮಾನ ಮುಂಬೈ ತಲುಪುತ್ತಿದ್ದಂತೆ ವಿಶೇಷ ರೀತಿಯಲ್ಲಿ ವಾಟರ್ ಜೆಟ್‌ಗಳ ಮೂಲಕ ಆಟಗಾರರಿಗೆ ಭರ್ಜರಿ ಸ್ವಾಗತ ಕೋರಲಾಗಿಯಿತು. ಈ ನಡುವೆ ವಿಜಯಯಾತ್ರೆಗೆ ಸಿದ್ಧತೆ ಮಾಡಿಕೊಂಡಿದ್ದು, ‘ಮುಂಬೈನ ನಾರೀಮನ್ ಪಾಯಿಂಟ್‌ನಿಂದ ರೋಡ್ ಶೋ ನಡೆಯಲಿದೆ.
ಕಲಬುರಗಿ: ರಾಜ್ಯದಲ್ಲಿ ಕಾಂಗ್ರೆಸ್ (Congress) ಆಡಳಿತಕ್ಕೆ ಬಂದು ಒಂದು ವರ್ಷ ಮುಗಿದಿದ್ದು, ಒಂದರ್ಥದಲ್ಲಿ ಸರ್ಕಾರದ ಹನಿಮೂನ್ ಪೀರಿಯೆಡ್ ಮುಗಿದಿದೆ. ಆದರೆ ಅಭಿವೃದ್ಧಿ ಕೆಲಸಗಳು ಮಾತ್ರ ಶೂನ್ಯವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ (BY Vijayendra) ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಯಾವೊಬ್ಬ ಸಚಿವರು ಸಹ ಇಲ್ಲಿಯವರೆಗೆ ಒಂದು ಗುದ್ದಲಿ ಪೂಜೆ ಸಹ ನೆರವೇರಿಸಿಲ್ಲ. ಒಂದಾದರೂ ಹೊಸ ಅಭಿವೃದ್ಧಿಯ ಯೋಜನೆ ಕೂಡ ತರಲಿಲ್ಲ ಎಂದು ಹೇಳಿದರು. ಕೇಂದ್ರ ಸರ್ಕಾರದಿಂದ ಬರ ಪರಿಹಾರ ಬಂದರೂ ರಾಜ್ಯದ ರೈತರಿಗೆ ಹಣ ನೀಡುತ್ತಿಲ್ಲ. ತಾಂತ್ರಿಕ ದೋಷವಿದೆ ಎಂದು ಹೇಳುವ ಮೂಲಕ ರೈತರಿಗೆ ಅನ್ಯಾಯ ಮಾಡುತ್ತಿದ್ದು, ರೈತರಿಗೆ ಈ ಸರ್ಕಾರ ಪರಿಹಾರ ಹಾಗೂ ಬೆಳೆ ವಿಮೆಯ ಹಣವು ಸಹ ನೀಡಿಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ಮಿಜೋರಾಂನಲ್ಲಿ ಭಾರೀ ಮಳೆ- ಕಲ್ಲುಕ್ವಾರಿ ಕುಸಿದು 10 ಮಂದಿ ದುರ್ಮರಣ, ಹಲವರು ನಾಪತ್ತೆ
ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿನ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟು ಹೋಗಿದ್ದು, ಮಟ್ಕಾ ಗೆ ಸಂಬಂಧಿಸಿದ ಘಟನೆಯಲ್ಲಿ ಚನ್ನಗಿರಿಯಲ್ಲಿ (Channagiri) ಪೋಲಿಸರಿಗೆ ಪೋಲಿಸರೇ ರಕ್ಷಣೆ ಕೊಡುವ ಪರಿಸ್ಥಿತಿ ಬಂದಿದೆ. ಸಾವಿರಾರು ಜನರು ಪೋಲಿಸ್ ಠಾಣೆಗೆ ನುಗ್ಗಿ ಪೋಲಿಸರ ಮೇಲೆ ಹಲ್ಲೆ ನಡೆಸಿದ್ದು, ಇವೆಲ್ಲವೂ ನೋಡಿದರೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಎಲ್ಲಿಗೆ ಬಂದು ಮುಟ್ಟಿದೆ ಎಂಬುದು ಅರಿವಾಗುತ್ತದೆ. ರಾಜ್ಯದಲ್ಲಿ ಗೃಹ ಸಚಿವರು ಇದ್ದಾರೆಯೇ ಎಂಬುದು ಅನುಮಾನವಾಗಿದೆ ಎಂದು ಹರಿಹಾಯ್ದರು. ಇದನ್ನೂ ಓದಿ: ಮಾಜಿ ಮ್ಯಾನೇಜರ್ ಹತ್ಯೆ ಪ್ರಕರಣ – ಸ್ವಯಂ ಘೋಷಿತ ದೇವಮಾನವ ರಾಮ್ ರಹೀಮ್ ಸಿಂಗ್‌ಗೆ ರಿಲೀಫ್
ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 85 ಕೋಟಿ ರೂ. ಹಗರಣ ನಡೆದಿದೆ. ಓರ್ವ ಎಂಜಿನಿಯರ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಎಲ್ಲಿ ಹೋಯಿತು ನಿಮ್ಮ ಭ್ರಷ್ಟಚಾರ ತಡೆ ನಿಲುವು. ಭ್ರಷ್ಟಾಚಾರದ ಪಿತಾಮಹ ಯಾರಾದರೂ ಇದ್ದರೆ ಅದು ಕಾಂಗ್ರೆಸ್ ಪಕ್ಷ. ಡೆತ್‌ನೋಟ್‌ನಲ್ಲಿ ಕೆಲ ಉನ್ನತ ಅಧಿಕಾರಿಗಳ ಹೆಸರು ಹೇಳಲಾಗಿದೆ. ಈ ಘಟನೆ ಸಂಬಂಧ ಸಚಿವರನ್ನು ಮಂತ್ರಿ ಮಂಡಲದಿಂದ ಕೈಬಿಡಬೇಕು. ಸಿಟ್ಟಿಂಗ್ ಹೈಕೋರ್ಟ್ ಜಡ್ಜ್ರಿಂದ ಉನ್ನತಮಟ್ಟದ ತನಿಖೆ ನಡೆಸಲೇಬೇಕು. ಇದರಲ್ಲಿ ಸಚಿವ ನಾಗೇಂದ್ರ ಭಾಗಿ ಆಗಿದ್ದಾರೆ. ಮಂತ್ರಿ ನಾಗೇಂದ್ರರನ್ನು ಕೈಬಿಡದಿದ್ದರೆ ರಾಜ್ಯದಲ್ಲಿ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಇದನ್ನೂ ಓದಿ: ಕೈ ಶಾಸಕ ರಾಜು ಕಾಗೆ ಎದುರಿನಲ್ಲೇ ಆಪ್ತನಿಂದ ಮಾಧ್ಯಮ ಪ್ರತಿನಿಧಿಗಳಿಗೆ ಧಮ್ಕಿ
ಮಧು ಬಂಗಾರಪ್ಪ ಕಟ್ಟಿಂಗ್‌ಗೆ ಬಿಜೆಪಿ ಯುವ ಮೋರ್ಚಾದಿಂದ ದೇಣಿಗೆ ಹಣ:
ಮಧು ಬಂಗಾರಪ್ಪ (Madhu Bangarappa) ಓರ್ವ ಶಿಕ್ಷಣ ಸಚಿವನಾಗಿ ಎಲ್ಲರಿಗೂ ಮಾದರಿಯಾಗಿರಬೇಕು. ಮಧು ಬಂಗಾರಪ್ಪ ಕೇಶವಿನ್ಯಾಸದ (Hair Style) ಬಗ್ಗೆ ಶಿಕ್ಷಕರು ದಾವಣಗೆರೆಯಲ್ಲಿ ಹೇಳಿದ್ದನ್ನು ನಾನು ಹೇಳಿದ್ದೇನೆ. ಶಿಕ್ಷಕರು ಹೇಳಿರೋ ಮಾತನ್ನು ನಾನು ಮಧು ಬಂಗಾರಪ್ಪಗೆ ಹೇಳಿದ್ದೇನೆ ಎಂದರು. ಇದನ್ನೂ ಓದಿ: ಆರೋಗ್ಯ ಸಮಸ್ಯೆ ಹಿನ್ನೆಲೆ ಜಾಮೀನು ವಿಸ್ತರಣೆ ಕೋರಿ ಕೇಜ್ರಿವಾಲ್ ಅರ್ಜಿ; ತುರ್ತು ವಿಚಾರಣೆಗೆ ನಿರಾಕರಿಸಿದ ಸುಪ್ರೀಂ
ಹೆಬ್ಬುಲಿ (Hebbuli) ಹೇರ್‌ಕಟ್. ಇದೊಂದು ಹೊಸ ಆವಿಷ್ಕಾರ. ಹೆಬ್ಬುಲಿ ಸಿನಿಮಾದ ಫಸ್ಟ್ ಲುಕ್‌ನಲ್ಲಿ ಕಿಚ್ಚ ಸುದೀಪ್ (Sudeep) ವಿಭಿನ್ನ ರೀತಿಯ ಹೇರ್‌ಕಟ್ ಮಾಡಿಸ್ಕೊಂಡು ಗಮನ ಸೆಳೆಯುತ್ತಾರೆ. ಅಲ್ಲಿಯವರೆಗೂ ಅದು ಕರ್ನಾಟಕದಲ್ಲಿ ಚಾಲ್ತಿ ಇರಲಿಲ್ಲ. ಯಾವ ಮಟ್ಟಕ್ಕೆ ಈ ಸ್ಟೈಲ್ ಫೇಮಸ್ ಆಯ್ತು ಅಂದ್ರೆ ಬಳಿಕ ಕಾಲೇಜು ವಿದ್ಯಾರ್ಥಿಗಳು, ಮಕ್ಕಳು ಇದೇ ಥರ ಹೆರ್‌ಕಟ್ ಮಾಡಿಸಿಕೊಳ್ಳಲು ಮುಗಿಬಿದ್ರು. ಹೆಬ್ಬುಲಿ ಸಿನಿಮಾ ರಿಲೀಸ್ ಆಗಿ 5 ವರ್ಷ ಕಳೆದೋದ್ರೂ ಟ್ರೆಂಡ್ ಮುಗಿದಿಲ್ಲ.
ಅಂದಹಾಗೆ ಇದೀಗ ಹೆಬ್ಬುಲಿ ಹೇರ್‌ಕಟ್ ಮೇಲೆ ಜಿಗುಪ್ಸೆಗೊಂಡಿದ್ದು ಬಾಗಲಕೋಟೆ (Bagalkote) ಜಿಲ್ಲೆಯ ಜಮಖಂಡಿ ತಾಲೂಕಿನ ಹಳ್ಳಿಯೊಂದರ ಮೇಷ್ಟ್ರು. ಹಲವು ವರ್ಷಗಳಿಂದ ಹೆಬ್ಬುಲಿ ಸ್ಟೈಲ್ (Hair Style) ಹೇರ್‌ಕಟ್ ಮಾಡಿಸ್ಕೊಂಡು ಮಕ್ಕಳು ಶಾಲೆಗೆ ಬರ್ತಿದ್ರಂತೆ. ಹೆಡ್‌ಮಾಸ್ಟರ್‌ಗೆ ಇದೇ ಚಿಂತೆ. ಓದೋ ಟೈಮಲ್ಲಿ ಮಕ್ಕಳಿಗೆ ಇಂಥಹ ಸ್ಟೈಲ್ ಎಲ್ಲಾ ಬೇಕಾ? ಒಬ್ರು ಈ ಥರ ಹೇರ್‌ಕಟ್ ಮಾಡಿಸ್ಕೊಂಡ್ರು ಅಂತ ಇನ್ನೊಬ್ರು ಮತ್ತೊಬ್ರು ಹೀಗೆ ಮಕ್ಕಳು ಬರೀ ಸ್ಟೈಲ್ ಬಗ್ಗೆನೇ ಗಮನ ಕೊಡ್ತಾ ಓದಿನ ಬಗ್ಗೆ ಆಸಕ್ತಿ ಕಳೆದುಕೊಳ್ತಾ ಇದ್ರಂತೆ. ಇದರಿಂದ ಬೇಸರಗೊಂಡ ಹೆಡ್‌ಮಾಸ್ಟರ್ ಶಾಲೆಯ ಹತ್ತಿರದ ಎಲ್ಲಾ ಸಲೂನ್‌ಗಳಿಗೆ ಪಾಠ ಮಾಡಿದ್ದಾರೆ. ಇದನ್ನೂ ಓದಿ:ಬಿಕಿನಿಯಲ್ಲಿ ಅನನ್ಯಾ ಮಿಂಚಿಂಗ್, ಬಾಯ್‌ಫ್ರೆಂಡ್ ಎಲ್ಲಿ ಎಂದು ಕಾಲೆಳೆದ ನೆಟ್ಟಿಗರು
ವಿದ್ಯಾರ್ಥಿಗಳಿಗೆ ಹೆಬ್ಬುಲಿ ಹೇರ್‌ಕಟ್ ಮಾಡಿಸಿಕೊಳ್ಳದಂತೆ ಎಷ್ಟೇ ಪಾಠ ಹೇಳಿದ್ರೂ ಕೇಳಲಿಲ್ಲ. ಇದೇ ಕಾರಣಕ್ಕೆ ಶಾಲೆಯಿಂದ ನೋಟೀಸ್ ಜಾರಿ ಮಾಡಿದ್ದಾರೆ. ಇದರಲ್ಲಿ ಹೆಬ್ಬುಲಿ ಹೇರ್‌ಕಟ್‌ನಿಂದ ಆಗ್ತಿರೋ ತೊಂದರೆ ಬಗ್ಗೆ ಹೆಡ್‌ಮಾಸ್ಟರು ಕ್ಲಾರಿಫಿಕೇಶನ್ ಕೊಟ್ಟಿದ್ದಾರೆ. ಹೀಗಾಗಿ ಸಲೂನ್‌ಗೆ ಬಂದು ಕೇಳಿದ್ರೂ ಹೆಬ್ಬುಲಿ ಹೇರ್‌ಕಟ್ ಮಾಡಬೇಡಿ ಎಂದು ನೋಟೀಸ್‌ನಲ್ಲಿ ಹೇಳಿದ್ದಾರೆ.
ಇದು ತಮಾಶೆ ಅನ್ನಿಸಿದ್ರೂ ಇದ್ರಿಂದ ಅನುಕೂಲ ಹೆಚ್ಚು. ಹಳ್ಳಿಯಲ್ಲಿ ಬಡ ಮಕ್ಕಳು ಹೇರ್ ಸ್ಟೈಲ್ ಮೋಹಕ್ಕೆ ಬಿದ್ದು ಬಡ ತಂದೆ ತಾಯಿಗಳಿಗೆ ತೊಂದರೆ ಕೊಡುತ್ತಾರೆ. ಅದನ್ನು ಮಾಡಿಸದೇ ಇದ್ದರೆ ಶಾಲೆಯ ವಾತಾವರಣ ಎರಡೂ ಚೆನ್ನಾಗಿರುತ್ತೆ. ಹೀಗಾಗಿ 5 ವರ್ಷ ಕಳೆದ್ರೂ ಹೆಡ್‌ಮಾಸ್ಟರ್ ಮಾತು ಕೇಳದ ಮಕ್ಕಳ ಈ ಆಸೆಯನ್ನ ಬೇರಿಂದಲೇ ಕಿತ್ತೆಸೆಯಲು ಈ ಪ್ಲ್ಯಾನ್ ಮಾಡಿದ್ದಾರೆ ಆ ಮೇಷ್ಟ್ರು.
ದಶಕಗಳ ಕಾಲದಿಂದ ವಿಮಾನ ಸೇವೆ ಒದಗಿಸುತ್ತಿರುವ ಏರ್ ಇಂಡಿಯಾ ತನ್ನ ಸಿಬ್ಬಂದಿ ವಸ್ತ್ರಸಂಹಿತೆ ಅಂತಾರಾಷ್ಟ್ರೀಯ ಮಾನದಂಡಕ್ಕೆ ಅನುಗುಣವಾಗಿಲ್ಲ ಎಂಬ ಕಾರಣಕ್ಕೆ ಅದನ್ನು ಬದಲಾಯಿಸಲು ತೀರ್ಮಾನಿಸಿದೆ. ತಲೆಯಲ್ಲಿ ಹೆಚ್ಚು ಕೂದಲು ಉದುರಿ ತಲೆ ಬೋಳು-ಬೋಳಾಗಿ ಕಾಣುವ ಸಿಬ್ಬಂದಿ ಪೂರ್ಣವಾಗಿ ತಮ್ಮ ತಲೆಕೂದಲನ್ನು ಪ್ರತಿನಿತ್ಯ ಶೇವ್ ಮಾಡಬೇಕು. ಅಲ್ಲದೇ ಗುಂಪಿನಲ್ಲಿದ್ದಾಗ ಅಸಭ್ಯ ವರ್ತನೆ ನಿಲ್ಲಿಸಬೇಕು ಎಂದು ಸೂಚಿಸಿದೆ. ಇದನ್ನೂ ಓದಿ: ವೈಷ್ಣವಿ ಜೊತೆಗಿನ ವಿದ್ಯಾಭರಣ್ ಫೋಟೋ ವೈರಲ್ ಬೆನ್ನಲ್ಲೇ ‘ರಹಸ್ಯ’ ನಟಿ ಗಂಭೀರ ಆರೋಪ!
ಮಹಿಳಾ ಸಿಬ್ಬಂದಿ ಕೇವಲ ಚಿನ್ನ (Gold) ಮತ್ತು ವಜ್ರದ ವೃತ್ತಾಕಾರದ ಕಿವಿ ಓಲೆಗಳನ್ನು ಮಾತ್ರ ಧರಿಸಬೇಕು. 0.5 ಸೆಂ.ಮೀ. ಅಗಲದ ಬಿಂದಿ ಮತ್ತು 1 ಸೆಂ.ಮೀ. ಗಿಂತ ಹೆಚ್ಚು ಅಗಲವಿಲ್ಲದ ಉಂಗುರ ಧರಿಸಬೇಕು. 1 ಕೈಗೆ 1 ಉಂಗುರ ಮಾತ್ರ ಧರಿಸಬೇಕು. ಡಿಸೈನ್‌ಗಳಿಲ್ಲದ 1 ಬಳೆ ಮಾತ್ರ ಧರಿಸಬೇಕು ಎಂದು ತನ್ನ ಸಿಬ್ಬಂದಿಗೆ ಸೂಚಿಸಿದೆ.
Live Tv
[brid partner=56869869 player=32851 video=960834 autoplay=true]
ಅಂದವಾಗಿ ಕಾಣಿಸಬೇಕು ಎಂಬ ಆಸೆ ಯಾರಿಗೆ ತಾನೇ ಇಲ್ಲ? ಜನ ಸಮೂಹದ ನಡುವೆ ಇತರರ ಗಮನ ಸೆಳೆಯಬೇಕು ಎಂಬ ಹಂಬಲ ಎಲ್ಲರಿಗೂ ಇರುತ್ತೆ. ಆದರೆ ಒಳ್ಳೆಯ ಬಟ್ಟೆ, ಆಕ್ಸಸರೀಸ್ ಕೊಳ್ಳುವ ಬಜೆಟ್ ಎಲ್ಲರಲ್ಲೂ ಇರುತ್ತೆ ಎನ್ನಲಾಗುವುದಿಲ್ಲ.
ನಿಮ್ಮ ಬಳಿ ಇರುವಂತಹ ಬಟ್ಟೆ ಹಾಗೂ ಆಕ್ಸಸರಿಗಳಲ್ಲೇ ಹೇಗೆ ಚೆನ್ನಾಗಿ ಕಾಣಿಸಬಹುದು ಎಂಬುದರ ಬಗ್ಗೆ ಕೆಲವು ಟಿಪ್ಸ್ ಇಲ್ಲಿದೆ. ಈ ಟಿಪ್ಸ್‌ಗಳು ಕೇವಲ ಹುಡುಗಿಯರಿಗೆ ಅಥವಾ ಹುಡುಗರಿಗೆ ಎನ್ನುವಂತಹ ಬೇಧವಿಲ್ಲ. ಹಲವು ಟಿಪ್ಸ್‌ಗಳು ಇಬ್ಬರಿಗೂ ಅನ್ವಯವಾಗುವಂತಿದೆ.
ನಿಮ್ಮ ಬಟ್ಟೆ ಫಿಟ್ ಆಗಿರಲಿ:
ನೀವು ಧರಿಸುವಂತಹ ಬಟ್ಟೆ ಯಾವುದೇ ಇರಲಿ. ಅದು ನಿಮಗೆ ಚೆನ್ನಾಗಿ ಕಾಣಿಸಬೇಕು ಎಂದರೆ ನಿಮ್ಮ ಸೈಜ್‌ಗೆ ಫಿಟ್ ಆಗಿರುವುದು ಮುಖ್ಯ. ನೀವು ಹೊಸ ಬಟ್ಟೆ ಕೊಂಡಿದ್ದೀರಿ ಎಂದಾದಲ್ಲಿ ಹೆಚ್ಚಿನ ಸಂದರ್ಭದಲ್ಲಿ ಅವು ನಿಮ್ಮ ಪರ್ಫೆಕ್ಟ್ ಸೈಜ್‌ನಲ್ಲಿ ಇರುವುದಿಲ್ಲ. ಹೀಗಿರುವಾಗ ಅದನ್ನು ನಿಮ್ಮ ಸೈಜ್‌ಗೆ ಸ್ಟಿಚ್ ಮಾಡಿಸಿಕೊಳ್ಳಿ. ನಿಮ್ಮ ಹತ್ತಿರದ ಟೈಲರ್‌ಗಳು ಖಂಡಿತಾ ಅದನ್ನು ಕಡಿಮೆ ಬೆಲೆಗೆ ಸ್ಟಿಚ್ ಮಾಡಿಸಿ ಕೊಡುತ್ತಾರೆ. ಇದನ್ನೂ ಓದಿ: ಮಹಿಳೆಯರಿಗೆ ಸೂಟ್ ಆಗುವಂತಹ 5 ಬೆಸ್ಟ್ ಆರ್ಟಿಫಿಶಿಯಲ್ ಫ್ಲವರ್ ಹೇರ್ ಸ್ಟೈಲ್‍ಗಳು
ಕೆಲವೊಮ್ಮೆ ನಿಮ್ಮ ಹಳೆಯ ಬಟ್ಟೆಗಳು ಲೂಸ್ ಅಥವಾ ಟೈಟ್ ಆಗಿರುವಾಗಲೂ ಟೈಲರ್ ಬಳಿ ಹೋಗಿ ಅದನ್ನು ಸರಿಪಡಿಸಿಕೊಳ್ಳುವುದು ಉತ್ತಮ. ಈ ರೀತಿ ನೀವು ನಿಮ್ಮ ಬಟ್ಟೆಗಳನ್ನು ನಿಮ್ಮ ಸೈಜ್‌ಗೆ ಫಿಟ್ ಮಾಡಿಸಿಕೊಳ್ಳುವುದರಿಂದ ನಿಮಗೆ ಸ್ಟ್ಯಾಂಡರ್ಡ್ ಲುಕ್ ಬರುವುದು ಖಂಡಿತಾ.
ಈ ಚಿಕ್ಕ ಪುಟ್ಟ ವಸ್ತುಗಳ ಮೇಲೆ ಜನರ ಗಮನ ಹರಿಯುತ್ತಲೇ ಇರುತ್ತದೆ. ಹೀಗಾಗಿ ಅವುಗಳನ್ನು ನೀಟ್ ಆಗಿ ಧರಿಸುವುದೂ ಮುಖ್ಯವಾಗುತ್ತದೆ. ಆದರೆ ಯಾವುದೇ ಕಾರಣಕ್ಕೂ ಹರಿದ ಅಥವಾ ಕಿತ್ತು ಹೋಗಿರುವ ಆಕ್ಸಸರಿಗಳನ್ನು ಎಂದಿಗೂ ಧರಿಸಬೇಡಿ. ನಿಮ್ಮ ಬಟ್ಟೆ ಚೆನ್ನಾಗಿದ್ದರೂ ಹಾಳಾಗಿರುವ ಆಕ್ಸಸರಿ ನಿಮ್ಮ ಇಡೀ ಲುಕ್ಕನ್ನು ಹಾಳು ಮಾಡುವ ಸಾಧ್ಯತೆ ಇರುತ್ತದೆ.
ಹೆಚ್ಚಿನವರು ತಮ್ಮ ಗಮನವನ್ನು ಇತರರು ಧರಿಸುವ ಪಾದರಕ್ಷೆಗಳ ಮೇಲೆ ಹರಿಸುತ್ತಾರೆ ಎನ್ನುವುದು ಫ್ಯಾಕ್ಟ್. ಹೀಗಾಗಿ ಅವುಗಳನ್ನು ಕ್ಲೀನ್ ಹಾಗೂ ನೀಟ್ ಆಗಿ ಧರಿಸಬೇಕಾಗುತ್ತದೆ. ಶೂ ಆಗಿದ್ದಲ್ಲಿ ಅದನ್ನು ಪಾಲಿಶ್ ಮಾಡಿ ಧರಿಸಿ. ಬಟ್ಟೆಯ ಚಪ್ಪಲಿಗಳಾಗಿದ್ದರೆ ಇಂತಿಷ್ಟು ದಿನಗಳಿಗೊಮ್ಮೆ ಸ್ವಚ್ಛಗೊಳಿಸಿ ಧರಿಸಿ. ಇದರೊಂದಿಗೆ ಅವುಗಳನ್ನು ಸರಿಯಾದ ರೀತಿಯಲ್ಲಿ ತೊಡಿ. ಚಪ್ಪಲಿಗಳ ಬೆಲ್ಟ್ ಅರ್ಧ ಹಾಕಿಕೊಳ್ಳುವುದು ಅಥವಾ ಶೂಗಳ ಲೇಸ್ ಬೇಕಾ ಬಿಟ್ಟಿ ಗಂಟು ಹಾಕಿಕೊಳ್ಳುವುದು ಎಂದಿಗೂ ಮಾಡಬೇಡಿ.
ಕೇಶ ವಿನ್ಯಾಸ:
ನೀವು ತೊಟ್ಟಿರುವ ಉಡುಗೆಗೆ ಸರಿಯಾಗಿ ಮ್ಯಾಚ್ ಆಗುವಂತಹ ಕೇಶವಿನ್ಯಾಸ ಮಾಡಿಕೊಳ್ಳುವುದು ಅಗತ್ಯ. ಇದರಲ್ಲಿ ಮುಖ್ಯವಾಗಿ ಹುಡುಗಿಯರು ಚೂಡಿದಾರ್ ಗಳಂತಹ ಎತ್ನಿಕ್ ಬಟ್ಟೆಗಳಿಗೆ ಪೋನಿ ಟೇಲ್ ಗಳಂತಹ ವೆಸ್ಟರ್ನ್ ಫ್ಯಾಶನ್ ಮಾಡಿಲು ಎಂದಿಗೂ ಹೋಗದಿರಿ. ಇದು ನಿಮ್ಮ ಲುಕ್ ಅನ್ನು ಸಂಪೂರ್ಣವಾಗಿ ಹಾಳುಗೆಡವುತ್ತದೆ. ಯಾವ ರೀತಿಯ ಬಟ್ಟೆಗಳಿಗೆ ಯಾವ ರೀತಿಯ ಕೇಶವಿನ್ಯಾಸ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಜ್ಞಾನ ಇರುವುದು ಪ್ರತಿಯೊಬ್ಬರಿಗೂ ಮುಖ್ಯ. ಇದನ್ನೂ ಓದಿ: ಪಡ್ಡೆಗಳ ನಿದ್ದೆಗೆ ಕಿಚ್ಚು ಹತ್ತಿಸುವ ಸನ್ನಿ ಲಿಯೋನ್- Video Viral
ಸಂದರ್ಭಕ್ಕೆ ತಕ್ಕಂತೆ ಬಟ್ಟೆ:
ನೀವು ಎಲ್ಲಿಗಾದರೂ ಹೋಗುತ್ತಿರುವಾಗ ಯಾವ ರೀತಿಯ ಬಟ್ಟೆಗಳನ್ನು ಧರಿಸಬೇಕು ಎಂಬುದರ ಬಗ್ಗೆ ಜ್ಞಾನ ನಿಮಗೆ ಇರಲಿ. ಸಾಂಪ್ರದಾಯಿಕ ಕಾರ್ಯಕ್ರಮಕ್ಕೆ ಸಾಂಪ್ರದಾಯಿಕ ಉಡಗೆ, ಮಾಡರ್ನ್ ಈವೆಂಟ್‌ಗಳಿಗೆ ಮಾಡರ್ನ್ ಉಡುಗೆ ಧರಿಸುವುದರ ಬಗ್ಗೆ ತಿಳಿದಿರಲಿ. ಇವುಗಳ ಬಗ್ಗೆ ಎಂದಗೂ ಗೊಂದಲ ಬೇಡ. ನೀವು ಇನ್ನೊಬ್ಬರ ಗಮನ ಸೆಳೆಯಬೇಕು ಎಂಬ ಕಾರಣಕ್ಕೆ ಮಿಸ್ ಮ್ಯಾಚ್ ಉಡುಗೆ ತೊಡುವುದು ಖಂಡಿತಾ ಸರಿಯಲ್ಲ. ಇದರಿಂದ ಇತರರು ನಿಮ್ಮ ಉಡುಗೆಯ ಬಗ್ಗೆ ಆಡಿಕೊಳ್ಳುವಂತಹ ಸಾಧ್ಯತೆ ಇರುತ್ತದೆ.
ಬಿಗ್‍ಬಾಸ್ ಸೀಸನ್-8ರ ಗ್ರಾಂಡ್ ಫಿನಾಲೆಗೆ ಇನ್ನೇನು ಕೌಂಟ್‍ಡೌನ್ ಸ್ಟಾರ್ಟ್ ಆಗಿದೆ. ಹೀಗಾಗಿ ಮನೆಯ ಸ್ಪರ್ಧಿಗಳು ಫಿನಾಲೆಯಲ್ಲಿ ಮಿಂಚಲು ಬಿಗ್‍ಬಾಸ್, ಸೆಲೆಬ್ರೆಟಿಗಳಿಗೆ ಸ್ಟೈಲಿಶ್ ಆಗಿ ಹೇರ್ ಕಟ್ ಮಾಡುವ ತಂಡವನ್ನು ಬಿಗ್‍ಬಾಸ್ ಮನೆಗೆ ಕಳುಹಿಸಿದ್ದರು.
ಮೊದಲಿಗೆ ಹೇರ್ ಸ್ಟೈಲಿಶ್‍ರನ್ನು ನೋಡಿ ದೊಡ್ಮನೆ ಮಂದಿ ಫುಲ್ ಶಾಕ್ ಆಗುತ್ತಾರೆ. ನಂತರ ಎಲ್ಲರೂ ಒಬ್ಬೊಬ್ಬರೇ ಹೇರ್ ಸ್ಟೈಲ್, ಫೇಶಿಯಲ್ ಮುಂತಾದವುಗಳನ್ನು ಮಾಡಿಸಿಕೊಂಡಿದ್ದಾರೆ.
ಮಂಜು, ಅರವಿಂದ್, ಪ್ರಶಾಂತ್ ಹೇರ್ ಕಟ್ ಹಾಗೂ ಹೇರ್ ಸ್ಟೈಲ್ ಮಾಡಿಸಿಕೊಂಡರೆ, ದಿವ್ಯಾ ಉರುಡುಗ ವೈಷ್ಣವಿ ಹೇರ್ ಕಟ್, ಫೇಶಿಯಲ್, ಪೆಡಿಕ್ಯೂರ್ ಮಾಡಿಸಿಕೊಂಡಿಸಿಕೊಂಡಿದ್ದಾರೆ. ಇದೇ ವೇಳೆ ಒಬ್ಬ ಹೇರ್ ಸ್ಟೈಲಿಶ್ ಆಗಿ ನನಗೆ ನಾನೇ ಹೇರ್ ಕಟ್ ಮಾಡಿಕೊಳ್ಳುವುದ ಬಹಳ ಕಷ್ಟ, ಆದರೆ ನೀವು ನಿಮಗೆ ಹೇರ್ ಸ್ಟೈಲ್ ಮಾಡಿಕೊಳ್ಳುತ್ತೀರಾ ಎಂದಾಗ, ಅರವಿಂದ್ ನಾನು ವಿದೇಶ ಪ್ರಯಾಣ ಮಾಡುವಾಗ ಅಲ್ಲಿ ಒಂದು ಹೇರ್ ಕಟ್‍ಗೆ 25 ಡಾಲರ್ಸ್ ತೆಗೆದುಕೊಳ್ಳುತ್ತಾರೆ. ಹಾಗಾಗಿ ನಾನು ಆ ಡಾಲರ್‍ನನ್ನು ಉಳಿಸುವುದಕ್ಕೆ ನನಗೆ ನಾನೇ 2010ರಿಂದ ಹೇರ್ ಸ್ಟೈಲ್ ಮಾಡಿಕೊಳ್ಳಲು ಆರಂಭಿಸಿದೆ.
ಈ ಮಧ್ಯೆ ಮಂಜು ಮನೆಗೆ ಬಂದ ಹೇರ್ ಸ್ಟೈಲಿಶ್‍ಗಳಿಗೆ ಮನೆಗೆ ಬಂದವರಿಗೆ ಊಟ ಮಾಡಿಕೊಂಡು ಹೋಗಿ, ಚಿಕನ್ ತಿನ್ನುತ್ತೀರಾ ಮಟನ್ ತಿನ್ನುತ್ತೀರಾ ಎಂದು ಕೇಳುತ್ತಾ, ಬಳಿಕ ಬರೀ ಎಗ್‍ರೈಸ್ ಮಾಡಿದ್ದೇವೆ ಅದನ್ನೇ ಎರಡು ಸ್ಪೂನ್ ತಿಂದುಕೊಂಡು ಹೋಗಿ ಎಂದು ಹಾಸ್ಯ ಮಾಡಿದ್ದಾರೆ.
ಒಟ್ಟಾರೆ ಬಿಗ್‍ಬಾಸ್ ಗ್ರಾಂಡ್ ಫಿನಾಲೆಗೆ ಮನೆಮಂದಿಯೆಲ್ಲಾ ಟಿಪ್‍ಟಾಪ್ ಆಗಿ ಕಾಣಲು ಭರ್ಜರಿಯಾಗಿ ತಯಾರಿಯಾಗುತ್ತಿದ್ದಾರೆ.
ಬಿಗ್‍ಬಾಸ್ ಸೆಕೆಂಡ್ ಇನ್ನಿಂಗ್ಸ್‌ನ ಕೊನೆಯ ಭಾನುವಾರ ಸಂಚಿಕೆಯಲ್ಲಿ ಸುದೀಪ್, ದಿವ್ಯಾ ಉರುಡುಗಗೆ ಹೇರ್ ಕಟ್ ಮಾಡುವಂತೆ ಅರವಿಂದ್‍ರವರಿಗೆ ಟಾಸ್ಕ್ ನೀಡಿದ್ದಾರೆ.
ಪ್ರತಿವಾರ ಬಿಗ್‍ಬಾಸ್ ಮನೆಯಲ್ಲಿ ಯೆಸ್ ಆರ್ ನೋ ರೌಂಡ್ಸ್ ನಡೆಯುತ್ತದೆ. ಅದರಂತೆ ಈ ವಾರ ಯೆಸ್ ಆರ್ ನೋ ಆಟದ ವೇಳೆ ಸುದೀಪ್, ಈ ಸೀಸನ್‍ನಲ್ಲಿ ಬೆಸ್ಟ್ ಹೇರ್ ಕಟ್ ಮಾಡುವವರು ಅರವಿಂದ್ ಎಂದು ಹೇಳಿದ್ದಾರೆ. ಈ ವೇಳೆ ಮನೆಯ ಸ್ಪರ್ಧಿಗಳೆಲ್ಲಾ ಯೆಸ್ ಎಂದು ಉತ್ತರಿಸಿದ್ದಾರೆ.
ಆಗ ದಿವ್ಯಾ ಉರುಡುಗ ರಾಜೀವ್‍ಗೆ ಈ ಹಿಂದೆ ಹೇರ್ ಕಟ್ ಮಾಡಿದ್ದನ್ನು ನೋಡಿದ್ದೇನೆ, ಮಂಜುಗೆ ಕೂಡ ಹೇರ್ ಕಟ್ ಹಾಳಾಗಿದ್ದಾಗ ಸರಿಮಾಡಿದ್ದನ್ನು ನೋಡಿದ್ದೇನೆ, ಇತ್ತೀಚೆಗೆ ಶುಭಾ, ಮಂಜುಗೆ ಹೇರ್ ಕಟ್ ಮಾಡಿದಾಗ, ಅಕಸ್ಮತ್ ಹೇರ್ ಹಾಳಾದರೆ ನೀನಿದ್ಯಾ ಅಲ್ವಾ ಎಂದು ಅರವಿಂದ್‍ಗೆ ಹೇಳಿದ್ದರು. ಅಲ್ಲದೇ ಅರವಿಂದ್ ಅವರಿಗೆ ಅವರೇ ಹೇರ್ ಕಟ್ ಮಾಡಿಕೊಳ್ಳುತ್ತಾರೆ ಹಾಗಾಗಿ ಇರುವವರಲ್ಲಿ ಬೆಸ್ಟ್ ಹೇರ್ ಕಟ್ ಮಾಡುವವರು ಅರವಿಂದ್ ಅಂತ ದಿವ್ಯಾ ಉರುಡುಗ ಹೇಳಿದ್ದಾರೆ.
ಈ ವೇಳೆ ಸುದೀಪ್ ಅರವಿಂದ್‍ರವರು ಉಳಿದುಕೊಂಡರೆ ದಿವ್ಯಾ ಉರುಡುಗಗೆ ಏಕೆ ಒಂದು ಒಳ್ಳೆ ಹೇರ್ ಸ್ಟೈಲ್ ಮಾಡಬಾರದು. ಜಡೆ ಹಾಕುವುದಂತೂ ಅವರು ನಿಮಗೆ ಹೇಳಿ ಕೊಟ್ಟಿದ್ದಾಯ್ತು ಸರಿ, ಅರವಿಂದ್‍ರವರು ದಿವ್ಯಾ ಉರುಡುಗಗೆ ಹೇರ್ ಸ್ಟೈಲ್ ಮಾಡುವುದನ್ನು ಎಷ್ಟು ಜನ ಒಪ್ಪಿಕೊಳ್ಳುತ್ತೀರಾ ಎಂದಾಗ ಮನೆಯ ಎಲ್ಲಾ ಸ್ಪರ್ಧಿಗಳು ಯೆಸ್ ಬೋರ್ಡ್ ತೋರಿಸುವ ಮೂಲಕ ಒಪ್ಪಿಕೊಂಡಿದ್ದಾರೆ.
ಆಗ ದಿವ್ಯಾ ಉರುಡುಗ ಅಯ್ಯೋ ಬೇಡ ಸರ್, ನನ್ನ ಕೂದಲನ್ನು ಬಹಳ ಕಷ್ಟಪಟ್ಟು ಉದ್ದ ಬೆಳೆಸಿದ್ದೇನೆ. ಉದ್ದ ಕೂದಲು ಎಂದರೆ ನನಗೆ ಬಹಳ ಇಷ್ಟ ಎಂದು ಕೇಳಿಕೊಂಡಿದ್ದಾರೆ. ಆದರೂ ಸುದೀಪ್ ನಿಮಗೆ ಹೇರ್ ಸ್ಟೈಲ್ ಮಾಡಲು ಏನೇನು ಬೇಕು ಎಲ್ಲವನ್ನು ಕಳುಹಿಸಿಕೊಡುತ್ತೇವೆ. ಮುಂದಿನ ವಾರ ನಾನು ಇಲ್ಲಿಗೆ ಬರುವಷ್ಟರಲ್ಲಿ ದಿವ್ಯಾ ಉರುಡುಗಗೆ ಒಂದು ಒಳ್ಳೆಯ ಹೇರ್ ಸ್ಟೈಲ್ ಕೊಡಿ. ಇದು ನಾನು ನೀಡುತ್ತಿರುವ ಟಾಸ್ಕ್ ಎಂದಿದ್ದಾರೆ. ಇದನ್ನೂ ಓದಿ: ರಾತ್ರಿ ಹೊತ್ತು ದಿವ್ಯಾ, ಅರವಿಂದ್ ಪಿಸುಗುಸು – ನಿದ್ರೆ ಇಲ್ಲದೇ ಮನೆಮಂದಿ ಒದ್ದಾಟ
ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ, ಕ್ಯಾಪ್ಟನ್ ಕೂಲ್ ಎಂ.ಎಸ್.ಧೋನಿ ಆಗಾಗ ಹೇರ್ ಸ್ಟೈಲ್ ಬದಲಿಸುತ್ತಲೇ ಇರುತ್ತಾರೆ. ಈ ಹಿಂದೆ ಉದ್ದನೆ ಕೂದಲು ಬಿಟ್ಟುಕೊಂಡು ಟ್ರೆಂಡ್ ಸೃಷ್ಟಿಸಿದ್ದರು. ಇದೀಗ ಇದ್ದಕ್ಕಿದ್ದಂತೆ ಡ್ಯಾಶಿಂಗ್ ಲುಕ್‍ನಲ್ಲಿ ಕಾಣಿಸಿಕೊಂಡಿದ್ದಾರೆ.
ಧೋನಿ ಸಾಮಾಜಿಕ ಜಾಲತಾಣಗಳಲ್ಲಿ ಅಷ್ಟೇನು ಆಕ್ಟಿವ್ ಆಗಿಲ್ಲ. ಆದರೆ ಕೇಶ ವಿನ್ಯಾಸಕ ಆಲಿಮ್ ಹಕೀಮ್ ಅವರು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಧೋನಿಯವರ ಈ ಡ್ಯಾಶಿಂಗ್ ಲುಕ್‍ನ್ನು ಹಂಚಿಕೊಂಡಿದ್ದು, ಈ ಹೊಸ ಲುಕ್‍ನ ಫೋಟೋಗಳು ಸಖತ್ ವೈರಲ್ ಆಗುತ್ತಿವೆ. ನೆಚ್ಚಿನ ಕ್ರಿಕೆಟಿಗನ ಹೇರ್ ಸ್ಟೈಲ್ ಕಂಡು ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ.
ಅಂದಹಾಗೆ ಈ ಕೇಶ ವಿನ್ಯಾಸಕ್ಕೆ The Uber Cool Fox-Hawk Cut ಎಂದು ಹೆಸರಿಡಲಾಗಿದೆ. ಧೋನಿಯವರು ಹೊಸ ಫಂಕಿ ಹೇರ್ ಸ್ಟೈಲ್ ಹಾಗೂ ಗಡ್ಡದ ಫೋಟೋಗಳಿಗೆ ಪೋಸ್ ನಿಡಿದ್ದಾರೆ. ಬಾಲಿವುಡ್ ನಟ ಸುನಿಲ್ ಶೆಟ್ಟಿ ಸಹ ಆಲಿಮ್ ಹಕೀಮ್ ಅವರ ಪೋಸ್ಟ್ ಗೆ ಕಮೆಂಟ್ ಮಾಡಿದ್ದಾರೆ.
ಈ ಫೋಟೋ ಕಂಡು ಫುಲ್ ಫಿದಾ ಆಗಿರುವ ಅಭಿಮಾನಿಗಳು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಧೋನಿ ಅವರು 25ರ ಯುವಕನಂತೆ ಕಾಣುತ್ತಿದ್ದಾರೆ ಎಂದು ಹೇಳಿದ್ದಾರೆ. ನಿಜವಾಗಿಯೂ ಇವರಿಗೆ 40 ವರ್ಷಗಳು ಆದರೆ 25 ವರ್ಷಗಳಂತೆ ಕಾಣುತ್ತಿದ್ದಾರೆ ಎಂದು ಅಭಿಮಾನಿ ಕಮೆಂಟ್ ಮಾಡಿದ್ದಾರೆ.
2020ರ ಆಗಸ್ಟ್ ನಲ್ಲಿ ಧೋನಿ ಅಂತರಾಷ್ಟ್ರೀಯ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿದ್ದು, ಐಪಿಎಲ್‍ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕನಾಗಿ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಇದೀಗ ಐಪಿಎಲ್‍ನ 14ನೇ ಆವೃತ್ತಿಗೆ ಸಿದ್ಧವಾಗುತ್ತಿದ್ದು, ಯುಎಇನಲ್ಲಿ ಪಂದ್ಯಗಳು ನಡೆಯಲಿವೆ.
ಸಾಮಾನ್ಯವಾಗಿ ಹುಡುಗಿಯರು ತಲೆಕೂದಲಿನ ಮೇಲೆ ಹೆಚ್ಚು ಕಾಳಜಿ ವಹಿಸುತ್ತಾರೆ. ಏಕೆಂದರೆ ಹುಡುಗಿಯರ ಸೌಂದರ್ಯವನ್ನು ಹೆಚ್ಚಿಸುವುದೇ ತಲೆಕೂದಲು. ಕೂದಲನ್ನು ಹೆಚ್ಚಾಗಿ ಬೆಳೆಸಲು ಅದನ್ನು ಶೈನ್‍ಗೊಳಿಸಲು ವಿವಿಧ ರೀತಿಯ ಟಿಪ್ಸ್ ಗಳನ್ನು ಅನುಸರಿಸುತ್ತಾರೆ. ಅಲ್ಲದೆ ಯಾವುದೇ ಸಮಾರಂಭಗಳಿಗೆ ಹೋಗುವಾಗ ನೈಲ್ ಪಾಲಿಶ್‍ನಿಂದ ಹಿಡಿದು ಡ್ರೆಸ್, ಜ್ಯೂವೆಲರಿ, ಮೇಕಪ್ ಎಲ್ಲದರ ಮೇಲೂ ನಿಗಾವಹಿಸುತ್ತಾರೆ. ಆದರೆ ಎಷ್ಟೋ ಹುಡುಗಿಯರಿಗೆ ಯಾವ ಸೀಸನ್‍ನಲ್ಲಿ ಯಾವ ಹೇರ್ ಕಟ್ ಮಾಡಿಸಬೇಕು, ಯಾವ ಸಮಾರಂಭಗಳಿಗೆ ಹೇಗೆ ಕೇಶ ವಿನ್ಯಾಸಗೊಳಿಸಬೇಕು ಎಂಬುವುದೇ ತಿಳಿದಿರುವುದಿಲ್ಲ. ಅಂತಹವರಿಗೆ ಯಾವ ರೀತಿಯ ಹೇರ್ ಸ್ಟೈಲ್ ಮಾಡಬೇಕು ಎಂಬ ಕುರಿತಂತೆ ಕೆಲವೊಂದಷ್ಟು ಟಿಪ್ಸ್ ಈ ಕೆಳಗಿನಂತಿದೆ.
ಬ್ಯಾಂಗ್ಸ್ ಆನ್ ಫೋರ್ ಹೆಡ್:
ಈ ಹೇರ್ ಸ್ಟೈಲ್ ಹದಿಹರೆಯದ ಹುಡುಗಿಯರಿಗೆ ಹೇಳಿ ಮಾಡಿಸಿದಂತಿದ್ದು, ಸುಲಭವಾಗಿ ಮೈನ್‍ಟೆನ್ ಮಾಡಬಹುದಾದ ಹೇರ್ ಸ್ಟೈಲ್ ಆಗಿದೆ. ಅಲ್ಲದೆ ಮಾಡರ್ನ್ ಡ್ರೆಸ್‍ಗೆ ಈ ಹೇರ್ ಕಟ್ ಸ್ಟೈಲಿಶ್ ಲುಕ್ ನೀಡುತ್ತದೆ. ಇದೊಂದು ಟ್ರೆಂಡಿ ಹೇರ್ ಕಟ್ ಆಗಿದ್ದು, ನಿಮ್ಮ ಕೂದಲು ಮೃದುವಾಗಿ ನೇರವಾಗಿದ್ದರೆ ಬಹಳ ಚೆನ್ನಾಗಿ ಕಾಣಿಸುತ್ತದೆ. ಬೇಸಿಗೆ ಸಮಯದಲ್ಲಿ ಬ್ಯಾಂಗ್ಸ್ ಹೇರ್ ಸ್ಟೈಲ್‍ನನ್ನು ನೀವು ಟ್ರೈ ಮಾಡಬಹುದು.
ಲಾಗ್ ಲೆಂಥ್ ಲೂಸ್:
ಇತ್ತೀಚೆಗೆ ಲಾಗ್ ಲೆಂಥ್ ಲೂಸ್ ಹೇರ್ ಸ್ಟೈಲ್ ಟ್ರೆಂಡಿ ಹಾಗೂ ಸ್ಟೈಲಿಷ್ ಹೇರ್ ಕಟ್ ಆಗಿದ್ದು, ಇದು ಹುಡುಗಿಯರಿಗೆ ಕ್ಲಾಸಿಕ್ ಲುಕ್ ನೀಡುತ್ತದೆ. ಸುಮಾರು 30 ವರ್ಷದ ವಯೋಮಿತಿಯವರು ಈ ಹೇರ್ ಸ್ಟೈಲನ್ನು ಟ್ರೈ ಮಾಡಬಹುದು. ಸಾಂಪ್ರದಾಯಿಕ ಉಡುಪಿಗೆ ಈ ಹೇರ್ ಸ್ಟೈಲ್ ಬಹಳ ಸೂಟ್ ಆಗುತ್ತದೆ. ಹಬ್ಬ, ಸಮಾರಂಭಗಳಲ್ಲಿ ಈ ಹೇರ್ ಸ್ಟೈಲ್ ಮಾಡುವುದರಿಂದ ನೀವು ಎಲ್ಲರ ಮಧ್ಯೆ ಎದ್ದು ಕಾಣಿಸುತ್ತೀರಾ. ಗುಂಡು ಮುಖದ ಆಕಾರ ಹೊಂದಿರುವವರಿಗೆ ಈ ಹೇರ್ ಸ್ಟೈಲ್ ಚೆನ್ನಾಗಿ ಕಾಣಿಸುತ್ತದೆ ಹಾಗೂ ಚಳಿಗಾಲದಲ್ಲಿ ಈ ಹೇರ್ ಸ್ಟೈಲ್ ಟ್ರೈ ಮಾಡುವುದು ಉತ್ತಮ.
ಮೆಸ್ಸಿ ಬನ್:
ಸಾಮಾನ್ಯ ಹಾಗೂ ಉದ್ದದ ಕೂದಲು ಹೊಂದಿರುವ ಹುಡುಗಿಯರಿಗೆ ಈ ಹೇರ್ ಸ್ಟೇಲ್ ಮಾಡಬಹುದು. ಎಲ್ಲಾ ಕೂದಲನ್ನು ಸೇರಿಸಿ ಪಿನ್ ಅಥವಾ ಎಲೆಸ್ಟಿಕ್ ಬ್ಯಾಂಡ್ ಮೂಲಕ ಕೇವಲ 3-4 ನಿಮಿಷಗಳಲ್ಲಿ ಈ ಹೇರ್ ಸ್ಟೈಲ್‍ನನ್ನು ವಿನ್ಯಾಸಗೊಳಿಸಬಹುದು. ಮದುವೆ ಸಮಾರಂಭಗಳಲ್ಲಿ ಈ ಹೇರ್ ಸ್ಟೈಲ್ ಕ್ಲಾಸಿ ಲುಕ್ ನೀಡುತ್ತದೆ. ಬೇಸಿಗೆ ಸಮಯದಲ್ಲಿ ಮೆಸ್ಸಿ ಬನ್ ಹಾಕಿಕೊಳ್ಳುವುದರಿಂದ ಹೆಚ್ಚು ಉಪಯೋಗವಾಗುತ್ತದೆ.
ಐರಾನ್ಡ್ ಕಲ್ರ್ಸ್:
ಐರಾನ್ಡ್ ಕಲ್ರ್ಸ್ ಹೇರ್ ಸ್ಟೈಲ್‍ನನ್ನು ಸುಲಭವಾಗಿ ಮೈಂಟೇನ್ ಮಾಡಬಹುದು. ಟ್ವಿಸ್ಟ್ ರೋಲರ್ ಬಳಸುವ ಮೂಲಕ ಕೇಶ ವಿನ್ಯಾಸಗೊಳಿಸಲಾಗುತ್ತದೆ. ಉದ್ದ ಕೂದಲು ಹೊಂದಿರುವವರಿಗೆ ಈ ಹೇರ್ ಸ್ಟೈಲ್ ಸುಂದರವಾಗಿ ಕಾಣಿಸುತ್ತದೆ. ಪಾರ್ಟಿ, ಡಿನ್ನರ್‍ಗಳಿಗೆ ಹೋಗುವಾಗ ಮೊಣಕಾಲುದ್ದ ಡ್ರೆಸ್ ಧರಿಸಿದಾಗ ಈ ಹೇರ್ ಸ್ಟೈಲ್ ಸಖತ್ ಸ್ಟೈಲಿಶ್ ಲುಕ್ ನೀಡುತ್ತದೆ.
ಇಂಡಿಯನ್ ಲೇಯರ್ ಹೇರ್ ಸ್ಟೈಲ್:
ಸಮ ಹಾಗೂ ಉದ್ದ ಕೂದಲು ಹೊಂದಿರುವವರಿಗೆ ಈ ಸಿಂಪಲ್ ಹೇರ್ ಕಟ್ ಬಹಳ ಸುಂದರವಾಗಿ ಕಾಣಿಸುತ್ತದೆ. ಲೇಯರ್ ಹೇರ್ ಸ್ಟೈಲ್‍ನನ್ನು ನೀವು ಯಾವ ಸೀಸನ್‍ನಲ್ಲಿ ಬೇಕಾದರೂ ಟ್ರೈ ಮಾಡಬಹುದು. ಸಾರಿ ಮತ್ತು ಸಾಂಪ್ರದಾಯಿಕ ಉಡುಪಿಗೆ ಈ ಹೇರ್ ಕಟ್ ಬಹಳ ಸೂಟ್ ಆಗುತ್ತದೆ.
ಬೆಂಗಳೂರು: ಪವರ್‍ಸ್ಟಾರ್ ಪುನೀತ್ ರಾಜ್‍ಕುಮಾರ್ ತಮ್ಮ ಹೇರ್ ಸ್ಟೈಲ್ ಬದಲಿಸಿಕೊಂಡು ಕಾಶ್ಮೀರ ಕಣಿವೆ ಬೀದಿ ಬೀದಿಯಲ್ಲಿ ಓಡಾಡುತ್ತಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಪುನೀತ್ ರಾಜ್‍ಕುಮಾರ್ ಕಳೆದ ಕೆಲವು ದಿನಗಳಿಂದ ಕಾಶ್ಮೀರದಲ್ಲಿದ್ದಾರೆ. ಕಾಶ್ಮೀರದ ಗಲ್ಲಿಗಳಲ್ಲಿ ಸುತ್ತಾಡುತ್ತಾ ಅಲ್ಲಿನ ಜನರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. ಜೇಮ್ಸ್ ಚಿತ್ರೀಕರಣ ನಿಮಿತ್ತ ಕಾಶ್ಮೀರದಲ್ಲಿರುವ ಪುನೀತ್ ಅವರ ಫೋಟೋಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ಜೇಮ್ಸ್ ಚಿತ್ರೀಕರಣ ಕಾಶ್ಮೀರದಲ್ಲಿ ಭರದಿಂದ ಸಾಗುತ್ತಿದ್ದು, ಚಿತ್ರತಂಡದೊಂದಿಗೆ ಪುನೀತ್ ರಾಜ್‍ಕುಮಾರ್ ಕಾಶ್ಮೀರದಲ್ಲಿ ಬಿಡುಬಿಟ್ಟಿದ್ದಾರೆ. ಜೇಮ್ಸ್ ಚಿತ್ರಕ್ಕಾಗಿ ಪುನೀತ್ ತಮ್ಮ ಹೇರ್ ಸ್ಟೈಲ್ ಬದಲಿಸಿಕೊಂಡಿದ್ದಾರೆ. ಹೊಸ ಹೇರ್ ಸ್ಟೈಲ್ ನಲ್ಲಿ ಪುನೀತ್ ನೋಡಿದ ಅಭಿಮಾನಿಗಳು ಫಿದಾ ಆಗಿದ್ದಾರೆ. ನೆಟ್ಟಿಗರು ಪುನೀತ್ ಹೇರ್ ಸ್ಟೈಲ್‍ಗೆ ಮೆಚ್ಚುಗೆ ಸೂಚಿಸಿ ಕಮೆಂಟ್ ಮಾಡುತ್ತಿದ್ದಾರೆ.
ಸಿನಿಮಾ ಪಾತ್ರಕ್ಕೆ ಹೊಂದಿಕೊಳ್ಳುವಂತೆ ಹೇರ್ ಸ್ಟೈಲ್ , ಉಡುಪು, ದೇಹವನ್ನು ಪುನೀತ್ ಬದಲಿಸಿಕೊಳ್ಳುತ್ತಾರೆ. ಯುವರತ್ನ ಸಿನಿಮಾಕ್ಕಾಗಿ ಗಡ್ಡವನ್ನು ಬಿಟ್ಟಿದ್ದರು. ಇದೀಗ ಹೇರ್ ಸ್ಟೈಲ್ ಬದಲಿಸಿಕೊಂಡು ಮೋಡಿ ಮಾಡುತ್ತಿದ್ದಾರೆ. ಜೇಮ್ಸ್ ಸ್ಟಾರ್ ಈ ಹೊಸ ಲುಕ್ ಅಭಿಮಾನಿಗಳಿಗೆ ಸಖತ್ ಇಷ್ಟವಾಗಿದೆ.
ಕಳೆದ ಒಂದುವಾರದಿಂದ ಕಾಶ್ಮೀರ ಕಣಿವೆಯಲ್ಲಿರುವ ಜೇಮ್ಸ್ ಚಿತ್ರತಂಡ ಆ್ಯಕ್ಷನ್ ಸೀಕ್ವೆನ್ಸ್ ಹಾಗೂ ಹಾಡಿನ ಚಿತ್ರೀಕರಣವನ್ನು ಮಾಡುತ್ತಿದೆ. ಚಿತ್ರೀಕರಣದ ಬಿಡುವಿನ ವೇಳೆಯಲ್ಲಿ ಪುನೀತ್ ಸುತ್ತಮುತ್ತಲಿನ ಪ್ರದೇಶವನ್ನು ಸುತ್ತಾಡುತ್ತಾ ಜನರೊಂದಿಗೆ ಬೆರೆಯುತ್ತಿದ್ದಾರೆ. ಅಲ್ಲಿನ ಜನರೊಂದಿಗೆ ಮಾತನಾಡುತ್ತಾ ಸೆಲ್ಫಿ ತೆಗೆಯುತ್ತಾ ಎಂಜಾಯ್ ಮಾಡುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಕೆಲವು ಫೋಟೋಗಳಲ್ಲಿ ಪವರ್ ಸ್ಟಾರ್‍ನ ಹೊಸ ಲುಕ್‍ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
ಪುನೀತ್ ರಾಜ್‍ಕುಮಾರ್ ಅಭಿನಯದ ಸಿನಿಮಾ ಯುವರತ್ನ ಏ.1ರಂದು ರಿಲೀಸ್ ಆಗಲಿದೆ. ಚಿತ್ರತಂಡ ಸಿನಿಮಾದ ಪ್ರಚಾರದಲ್ಲಿ ನಿರತವಾಗಿದೆ. ಪುನೀತ್ ರಾಜ್‍ಕುಮಾರ್ ಸಾಮಾಜಿಕ ಜಾಲತಾಣದಲ್ಲಿ ಯುವರತ್ನ ಸಿನಿಮಾದ ಪ್ರಮೋಷನ್ ಮಾಡುತ್ತಿದ್ದಾರೆ. ಜತೆಗೆ ಜೇಮ್ಸ್ ಸಿನಿಮಾದ ಚೀತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.