Tag: Hair Dryers

  • ಯುವತಿಯರಿಗಾಗಿ ಬಂತು 23.75 ಕ್ಯಾರೆಟ್ ಚಿನ್ನದ ಹೇರ್ ಡ್ರೈಯರ್

    ಯುವತಿಯರಿಗಾಗಿ ಬಂತು 23.75 ಕ್ಯಾರೆಟ್ ಚಿನ್ನದ ಹೇರ್ ಡ್ರೈಯರ್

    ನವದೆಹಲಿ: ಯುವತಿಯರಿಗಾಗಿ ಡೈಸನ್ ಸೂಪರ್ ಸೋನಿಕ್ ಕಂಪೆನಿಯವರು 23.75 ಕ್ಯಾರೆಟ್ ಚಿನ್ನದ ಹೇರ್ ಡ್ರೈಯರ್ ಅನ್ನು ಬಿಡುಗಡೆ ಮಾಡಿದ್ದಾರೆ.

    ಡೈಸನ್ ಸೂಪರ್ ಸೋನಿಕ್ ಕಂಪೆನಿಯು 23.75 ಕ್ಯಾರೆಟ್ ಚಿನ್ನವನ್ನು ಬಳಸಿ ವಿನ್ಯಾಸಗೊಳಿಸಿದ್ದು, ಈ ಹೇರ್ ಡ್ರೈಯರ್ ಗೆ 37,900 ರೂ. ದರವನ್ನು ನಿಗದಿ ಮಾಡಿದೆ.

    ಚಿನ್ನ ಎಂಬುದು ವಿಶ್ವದ ಅತ್ಯಂತ ದುಬಾರಿ ವಸ್ತುಗಳಲ್ಲಿ ಒಂದು. ಶತಮಾನಗಳಿಂದ ಶಿಲ್ಪ, ಹಲವು ವಿನ್ಯಾಸಗಳಿಗೆ ಚಿನ್ನವನ್ನು ಬಳಸಲಾಗುತ್ತದೆ. ಇದರ ಬಣ್ಣದಿಂದಲೇ ಹೆಚ್ಚಿನವರು ಆಕರ್ಷಿಸಲ್ಪಡುತ್ತಾರೆ. ಇದೀಗ ಚಿನ್ನದಿಂದ ಹೇರ್ ಡ್ರೈಯರ್ ಅನ್ನು ವಿನ್ಯಾಸಗೊಳಿಸಿರುವುದು ನಮಗೆ ಹೆಮ್ಮೆಯ ವಿಷಯವಾಗಿದೆ. ಇದನ್ನು ವಿನ್ಯಾಸಗೊಳಿಸಲು ನಾವು ಪಟ್ಟ ಶ್ರಮ ಸಾರ್ಥಕವಾಗಿದೆ ಎಂದು ಚಿನ್ನದ ಹೇರ್ ಡ್ರೈಯರ್ ವಿನ್ಯಾಸಗೊಳಿಸಿದ ಜೇಮ್ಸ್ ಹೇಳಿದ್ದಾರೆ.

    ಹೇರ್ ಡೈಯರ್ ಅನ್ನು ವಿನ್ಯಾಸಗೊಳಿಸಲು ವಿನ್ಯಾಸ ಎಂಜಿನಿಯರ್ ಗಳು ಮೊದಲಿಗೆ ಚಿನ್ನವನ್ನು ಲೇಪಿಸುವುದು ಹೇಗೆ ಎನ್ನುವುದನ್ನು ಕಲಿತುಕೊಂಡೆವು. ಬಳಿಕ ನಮ್ಮ ತಂಡ ಹೇರ್ ಡ್ರೈಯರ್ ಕೆಲಸವನ್ನು ಪೂರ್ಣಗೊಳಿಸಿತು. ಕೂದಲಿಗೆ ಯಾವುದೇ ಅಪಾಯವಾಗಬಾರದ ಕಾರಣ ಬಹಳ ಎಚ್ಚರಿಕೆಯಿಂದ ಈ ಸವಾಲನ್ನು ಪೂರ್ಣಗೊಳಿಸಿದೆವು ಎಂದು ತಿಳಿಸಿದ್ದಾರೆ.

    ಹೇರ್ ಡ್ರೈಯರ್ ನೀಲಿ ಬಣ್ಣ ಮತ್ತು ಚಿನ್ನದ ಬಣ್ಣವನ್ನು ಒಳಗೊಂಡಿದ್ದು ಹೊಸ ವಿನ್ಯಾಸವಾದ್ದರಿಂದ ಜೇಮ್ಸ್ ಡೈಸನ್ ಆನ್ ಲೈನ್‍ಲ್ಲಿ ಬುಕ್ ಮಾಡಿ ಖರೀದಿಸಬಹುದು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publict