Tag: hair colour

  • ಬಿಳಿಕೂದಲಿನಲ್ಲಿಯೇ ಹಸೆಮಣೆಯೇರಿದ ನಟನ ಮಗಳು

    ಬಿಳಿಕೂದಲಿನಲ್ಲಿಯೇ ಹಸೆಮಣೆಯೇರಿದ ನಟನ ಮಗಳು

    ನವದೆಹಲಿ: ಹೇರ್ ಡೈ ಮಾಡದೇ ವಧು ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಫೋಟೋ ಸಖತ್ ವೈರಲ್ ಆಗುತ್ತಿದೆ.

    ಹಿಂದಿ ಧಾರಾವಾಹಿ ತಾರಕ್ ಮೆಹ್ತಾ ನಟ ದಿಲೀಪ್ ಜೋಶಿಯವರ ಮಗಳು ನಿಯತಿ, ಮದುವೆ ಮಂಟಪದಲ್ಲಿ ಸಹಜವಾಗಿ ತಲೆಯಲ್ಲಿರುವ ಬಿಳಿ ಕೂದಲಿನೊಂದಿಗೇ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಹಿಂದಿ ಕಿರುತೆರೆ ನಟ ದಿಲೀಪ್ ಜೋಶಿಯವರು ಸುಂದರವಾಗಿ ರೆಡಿಯಾದ ತಮ್ಮ ಮಗಳು ನಿಯತಿ ಜೊತೆ ಮದುವೆ ಮನೆಯಲ್ಲಿ ಕ್ಲಿಕ್ಕಿಸಿಕೊಂಡಿರುವ ಫೋಟೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ವಧುವಿನ ಈ ನಡೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದನ್ನೂ ಓದಿ: ಪತ್ನಿ ಜೊತೆಗೆ ರೋಮ್ಯಾಂಟಿಕ್ ಆಗಿ ಸ್ಟೆಪ್ಸ್ ಹಾಕಿದ ನಿಖಿಲ್

    ನಿಯತಿ, ಯಶೋವರ್ಧನ್ ಮಿಶ್ರಾ ಅವರನ್ನು ವಿವಾಹವಾಗಿದ್ದಾರೆ. ನಾಸಿಕ್‍ನಲ್ಲಿ ಗುಜರಾತಿ ಸಂಪ್ರದಾಯದಂತೆ ಮದುವೆ ನಡೆಯಿತು. ಈ ಮದುವೆಯಲ್ಲಿ ಅದ್ಧೂರಿ ಮದುವೆ ಮಂಟಪ, ಆಸನದ ವ್ಯವಸ್ಥೆ, ಊಟೋಪಚಾರಕ್ಕಿಂತ ಮದುವೆಗೆ ಬಂದ ಜನರ ಗಮನ ಸೆಳೆದಿದ್ದು, ಮದುಮಗಳು ರೆಡಿಯಾದ ರೀತಿ. ಮದುವೆಗಾಗಿ ಹೇರ್ ಕಲರಿಂಗ್ ಮಾಡಿ ಸಿದ್ಧಗೊಂಡರೆ, ಮದುಮಗಳು ಬಿಳಿ ಕೂದಲಿನಲ್ಲಿ ಕಾಣಿಸಿಕೊಳ್ಳುವ ಮೂಲಕವಾಗಿ ಎಲ್ಲರ ಗಮನ ಸೆಳೆದಿದ್ದಾರೆ. ನಿಮ್ಮ ಸೌಂದರ್ಯದ ಬಗ್ಗೆ ನಿಮಗಿರುವ ಆತ್ಮವಿಶ್ವಾಸ. ಬಿಳಿ ಕೂದಲಿನಲ್ಲೇ ನೀವು ಮದುಮಗಳಾಗಿ ಸಿದ್ಧಗೊಂಡಿರುವ ರೀತಿ ಮೆಚ್ಚುವಂತದ್ದು ಎಂದು ಸೋಶಿಯಲ್ ಮೀಡಿಯಾದಲ್ಲಿ ಫೋಟೋಗೆ ಕಾಮೆಂಟ್ ಮಾಡಿದ್ದಾರೆ. ಇದನ್ನೂ ಓದಿ: ಮೊದಲ ಪದಗಳನ್ನು ಕಲಿಯುತ್ತಿರುವ ರಾಯನ್ – ಫುಲ್ ಖುಷ್ ಆದ ಮೇಘನಾ

     

    View this post on Instagram

     

    A post shared by Dilip Joshi (@maakasamdilipjoshi)

    ಮದುವೆ ಕುರಿತಾಗಿ ಪ್ರತಿಯೊಬ್ಬರಿಗೂ ಒಂದಲ್ಲಾ ಒಂದು ಕನಸು ಇರುತ್ತದೆ. ಸೀರೆ ಡಿಸೈನ್‍ಗೆ ಪ್ರತ್ಯೇಕ ಬೊಟಿಕ್, ಮೇಕಪ್‍ಗೆ ಹೆಸರಾಂತ ಬ್ಯೂಟಿಷಿಯನ್, ಮೇಕಪ್ ಆರ್ಟಿ‌ಸ್ಟ್‌ಗಳನ್ನು ಮೊದಲೇ ಬುಕ್ ಮಾಡಿಕೊಳ್ಳುತ್ತಾರೆ. ಇವತ್ತಿನ ದಿನಗಳ ಮದುವೆಗಳನ್ನು ನೋಡಿದರೆ ಅದ್ಧೂರಿ ಮಂಟಪ, ಮದುಮಗಳ ಝಗಮಗಿಸುವ ಲೆಹಂಗಾ, ಸೀರೆ, ಹೆವಿ ಮೇಕಪ್, ಆಭರಣ ಲಕ್ಷಾಂತರ ರೂ. ಖರ್ಚು ಮಾಡುತ್ತಾರೆ. ಆದರೆ ನಿಯತಿ ಎಲ್ಲರೂ ಹುಬ್ಬೇರುವಂತೆ ಹಸೆಮಣೆಯೇರಿದ್ದಾಳೆ.