ಬೆಂಗಳೂರು: ಬಣ್ಣ ಬೆರೆಸುವ ಪೇಯಿಂಟ್ ಮಿಕ್ಸರ್‌ಗೆ (Paint Mixer) ಕೂದಲು (Hair) ಸಿಲುಕಿ ಮಹಿಳೆ (Woman) ದಾರುಣವಾಗಿ ಸಾವನ್ನಪ್ಪಿದ ಘಟನೆ ನೆಲಗದರನಹಳ್ಳಿಯ ಕಾರ್ಖಾನೆಯೊಂದರಲ್ಲಿ (Factory) ನಡೆದಿದೆ.
ಶ್ವೇತಾ (34) ಸಾವನ್ನಪ್ಪಿದ ಮಹಿಳೆ. ಗಂಡ ಮತ್ತು ಮಗನ ಜೊತೆ ಶ್ವೇತಾ ಮಲ್ಲತ್ತಹಳ್ಳಿಯಲ್ಲಿ ವಾಸವಾಗಿದ್ದರು. ಕಾರ್ಖಾನೆಯಲ್ಲಿ ಕೆಲಸ ಮಾಡುವ ವೇಳೆ ಬಣ್ಣ ಬೆರೆಸುವ ಮಿಕ್ಸರ್‌ಗೆ ಜಡೆ ಸಿಲುಕಿ ಘಟನೆ ನಡೆದಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ರೌಡಿಶೀಟರ್ ಬರ್ಬರ ಹತ್ಯೆ
ಬಣ್ಣ ಗಟ್ಟಿಯಾಗುತ್ತಿದ್ದರಿಂದ ಪರಿಶೀಲಿಸಲು ಮಿಕ್ಸರ್ ಬಳಿ ಬಂದು ಬಗ್ಗಿದಾಗ ಈ ಅವಘಡ ಸಂಭವಿಸಿದೆ. ಜಡೆ ಸಿಲುಕಿದಾಗ ಮಹಿಳೆ ಕೂಗಿಕೊಂಡರೂ ಮಿಕ್ಸರ್ ಶಬ್ದದಿಂದಾಗಿ ಯಾರಿಗೂ ಕೇಳಿಸಿಲ್ಲ. ಬಳಿಕ ಉಳಿದ ಕೆಲಸಗಾರರು ಮಿಕ್ಸರ್ ಬಳಿ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಈ ಕುರಿತು ಪೀಣ್ಯ (Peenya) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಹನಿಟ್ರ್ಯಾಪ್ – ನಾಪತ್ತೆಯಾಗಿದ್ದ ನಿವೃತ್ತ ಯೋಧನ ಮೃತದೇಹ ಪಂಪಿನ ಕೆರೆಯಲ್ಲಿ ಪತ್ತೆ
ಲಕ್ನೋ: ವಿದ್ಯಾರ್ಥಿಗಳು (Students) ಶಿಸ್ತಿನಿಂದಿರಲು ಅವರ ಕೂದಲನ್ನು (Hair) ತಾನೇ ಕತ್ತರಿಸಿದ ಶಿಕ್ಷಕಿಯನ್ನು (Teacher) ಶಾಲೆಯಿಂದ ವಜಾಗೊಳಿಸಿರುವ ಘಟನೆ ನೋಯ್ಡಾದ (Noida) ಖಾಸಗಿ ಶಾಲೆಯೊಂದರಲ್ಲಿ ನಡೆದಿದೆ.
ಸೆಕ್ಟರ್ 168ರಲ್ಲಿರುವ ಶಾಲೆಯೊಂದರಲ್ಲಿ ಈ ಘಟನೆ ನಡೆದಿದೆ. ಶಾಲೆಯ ಶಿಸ್ತು ಪ್ರಭಾರಿ ಸುಷ್ಮಾ ಕಳೆದ ಹಲವು ದಿನಗಳಿಂದ ವಿದ್ಯಾರ್ಥಿಗಳಿಗೆ ತಮ್ಮ ಕೂದಲನ್ನು ಟ್ರಿಮ್ ಮಾಡಿಕೊಂಡು ಬರುವಂತೆ ಹೇಳಿದ್ದರು. ಆದರೆ ಯಾರೂ ಶಿಕ್ಷಕಿಯ ಮಾತು ಕೇಳದ ಹಿನ್ನೆಲೆ ಬುಧವಾರ ಶಿಕ್ಷಕಿಯೇ ಸುಮಾರು 15 ವಿದ್ಯಾರ್ಥಿಗಳ ಕೂದಲನ್ನು ಕತ್ತರಿಸಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ರಾಯಚೂರಿನಲ್ಲಿ ಮಳೆಯಿಲ್ಲದೆ ಒಣಗುತ್ತಿರೋ ಬೆಳೆ- ಜಾನುವಾರು ಬಿಟ್ಟು ಬೆಳೆ ತಿನ್ನಿಸಿದ ರೈತರು
ಗಾಂಧಿನಗರ: ಮೊರ್ಬಿ (Morbi) ಮೂಲದ ವ್ಯಾಪಾರಿಯೊಬ್ಬರ ಬಳಿಯಿಂದ ಬರೋಬ್ಬರಿ 2 ಲಕ್ಷ ಮೌಲ್ಯದ 40 ಕೆ.ಜಿ ಕೂದಲನ್ನು ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಕರಣ ಸಂಬಂಧ ಇನ್ನೂ ಐವರಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. ಬಂಧಿತನನ್ನು ಪುರುಷೋತ್ತಮ್ ಪಾರ್ಮರ್ ಎಂದು ಗುರುತಿಸಲಾಗಿದೆ. ಘಟನೆ ಸಂಬಂಧ ಪೊಲೀಸರು ಒಟ್ಟು ಆರು ಮಂದಿಯ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ರಾಜ್‍ಕೋಟ್ ಹಾಗೂ ಮೊರ್ಬಿಯ ಕ್ಷೌರದ ಅಂಗಡಿಗಳಿಂದ ಸುಮಾರು 2 ಲಕ್ಷ ರೂ. ಮೌಲ್ಯದ 40 ಕೆ.ಜಿ ಕೂದಲನ್ನು (Hair Robbery) ಕೋಲ್ಕತ್ತಾಗೆ ಮಾರಾಟ ಮಾಡಲೆಂದು ತೆಗೆದುಕೊಂಡು ಹೋಗುತ್ತಿದ್ದರು. ಹೀಗಾಗಿ ಕೂದಲನ್ನು ಪ್ಲಾಸ್ಟಿಕ್ ಬ್ಯಾಗ್‍ನಲ್ಲಿ ತುಂಬಿಕೊಂಡು ಗೆಳಯನ ಜೊತೆ ಬೈಕ್ ನಲ್ಲಿ ಮೊರ್ಬಿ ರಸ್ತೆಯಲ್ಲಿ ಸಿಂಗ್ ಹೊರಟಿದ್ದರು. ಹೀಗೆ ಹೋಗುತ್ತಿದ್ದ ಸಂದರ್ಭದಲ್ಲಿ ರಸ್ತೆ ಮಧ್ಯೆ ಬೈಕ್ ಮುಂದೆ ಆಟೋ ಬಂದು ನಿಂತಿದೆ. ಅಲ್ಲದೆ ಅದರಲ್ಲಿಂದ ಇಳಿದ ಮೂವರು ನೇರವಾಗಿ ಇವರ ಬಳಿ ಬಂದು ಮಾತಿನ ಚಕಮಕಿ ನಡೆಸಿದ್ದಾರೆ. ಇದೇ ವೇಳೆ ಆಟೋದಿಂದ ಮತ್ತೆ ಇಬ್ಬರು ಇಳಿದು ಬಂದು ಬೈಕ್ ನಲ್ಲಿದ್ದ ಗೆಳೆಯನ ಕೊರಳ ಪಟ್ಟಿ ಹಿಡಿದು ಕ್ಯಾತೆ ತೆಗೆದಿದ್ದಾರೆ. ಅಲ್ಲದೆ ಬೈಕಿನಲ್ಲಿದ್ದ ಕೂದಲನ್ನು ತೆಗೆದುಕೊಂಡು ಅಲ್ಲಿಂದ ಪರಾರಿಯಾಗಿದ್ದಾರೆ.
ಇತ್ತ ಜಗಳ ನಡೆಯುತ್ತಿದ್ದಂತೆಯೇ ಸಿಂಗ್ ಕಂಟ್ರೋಲ್ ರೂಂಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಆಟೋದ ನಂಬರ್ ಕೂಡ ಪೊಲೀಸರಿಗೆ ನೀಡಿದರು.
ಒಟ್ಟಿನಲ್ಲಿ ದೋಡೆ ಪ್ರಕರಣ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದ್ದು, ಪಾರ್ಮರ್ ಜೊತೆ ಕೈಜೋಡಿಸಿದ ಉಳಿದ ಐವರಿಗಾಗಿ ಹುಡುಕಾಟ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ವಾಡಿಕೆಗಿಂತ ಅಧಿಕವಾಗಿಯೇ ಚಳಿ ಬೀಳುತ್ತಿದೆ. ಈ ವೇಳೆ ತ್ವಚ್ಛೆ ಜತೆಗೆ ಕೂದಲಿನ ಬಗ್ಗೆ ಹೆಚ್ಚು ಕಾಳಜಿಯನ್ನು ವಹಿಸುವುದು ಅವಶ್ಯವಾಗಿದೆ. ಈ ಸಂದರ್ಭದಲ್ಲಿ ಸ್ಪ್ಲಿಟ್ ಹೇರ್‌ಗಳು (Split Hair) ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಕೂದಲು ಸೀಳುವಿಕೆಯಿಂದ ಉದುರುವುದು ಹೆಚ್ಚಾಗುತ್ತಿದೆ. ಇದರಿಂದಾಗಿ ಕೂದಲಿನ ಸೀಳುವಿಕೆಯನ್ನು ತಡೆಗಟ್ಟಲು ಕೆಲವು ಮುಂಜಾಗ್ರತೆಯನ್ನು ತೆಗೆದುಕೊಳ್ಳುವುದು ಅವಶ್ಯವಾಗಿದೆ.
ಕೂದಲನ್ನು ಆಗಾಗ ಕಟ್ ಮಾಡಿ: ಕೂದಲನ್ನು ಆಗಾಗಾ ಕತ್ತರಿಸುವುದರಿಂದ ಕೂದಲು ಸೀಳುವಿಕೆಯನ್ನು ತಡೆಯಬಹುದು. ಇದು ಸುಲಭದ ಮಾರ್ಗವಾಗಿದೆ. ಅಷ್ಟೇ ಅಲ್ಲದೇ ಉತ್ತಮ ಕೂದಲಿನ (Hair) ಆರೋಗ್ಯವನ್ನು (Health) ಕಾಪಾಡಿಕೊಳ್ಳಲು ಪ್ರತಿ 2-3 ತಿಂಗಳಿಗೊಮ್ಮೆ ನಿಮ್ಮ ಕೂದಲನ್ನು ಕತ್ತರಿಸಬೇಕು.
ಬಿಸಿ ನೀರಿನಲ್ಲಿ ಕೂದಲ ಸ್ನಾನ ಬೇಡ: ಬಿಸಿ ನೀರಿನಲ್ಲಿ ತಲೆ ಸ್ನಾನ ಮಾಡಲು ಜನರು ಇಷ್ಟಪಡುತ್ತಾರೆ. ಹೀಗಾಗಿ ಇದು ಕೂದಲು ಸೀಳಲು ಹಾಗೂ ಉದುರಲು ಕಾರಣವಾಗುತ್ತದೆ. ಇದನ್ನು ತಪ್ಪಿಸಲು ಆದಷ್ಟು ತಣ್ಣನೆಯ ನೀರು ಅಥವಾ ಉಗುರು ಬೆಚ್ಚಗಿನಿಯ ನೀರಿನನ್ನು ಬಳಸಬೇಕು.
ಆಯಿಲ್ ಮಸಾಜ್: ಚರ್ಮದ ಆರೈಕೆಯನ್ನು ಯಾವ ರೀತಿಯಾಗಿ ಮಾಡಿಕೊಳ್ಳುತ್ತಿರೋ ಅದೇ ರೀತಿ ಕೂದಲಿನ ಆರೈಕೆಯನ್ನು ಮಾಡಿಕೊಳ್ಳುವುದು ಮುಖ್ಯವಾಗಿರುತ್ತದೆ. ವಾರಕೊಮ್ಮೆಯಾದರೂ ಕೂದಲಿಗೆ ಆಯಿಲ್ ಹಾಕಿ ಮಸಾಜ್ ಮಾಡುವುದರಿಂದ ಕೂದಲು ಕವಲೊಡೆಯುವುದು ತಪ್ಪುತ್ತದೆ. ಜೊತೆಗೆ ಇದರಿಂದಾಗಿ ಕೂದಲಿನ ಅಂದವು ಹೆಚ್ಚುತ್ತದೆ. ಇದನ್ನೂ ಓದಿ: ಆರೋಗ್ಯ ಹೆಚ್ಚಿಸುವ ಬೆಟ್ಟದ ನೆಲ್ಲಿಕಾಯಿ
ಕೂದಲನ್ನು ಮೃದುವಾಗಿ ಬಾಚಿ: ಸಾಮಾನ್ಯವಾಗಿ ಕೂದಲನ್ನು ಬಾಚುವಾಗ ಅದರ ಕಡೆ ಹೆಚ್ಚಿನವರು ಗಮನ ನೀಡುವುದೇ ಇಲ್ಲ. ಇದರಿಂದಾಗಿ ಕೂದಲು ಅತಿ ಬೇಗ ಉದುರಲು ಪ್ರಾರಂಭವಾಗುವುದರ ಜೊತೆಗೆ ಕವಲೊಡೆಯುತ್ತದೆ. ಇದರಿಂದಾಗಿ ನೀವು ಕೂದಲನ್ನು ಬಾಚುವ ಮುನ್ನ ಬಾಚಣಿಕೆಯನ್ನು ಸರಿಯಾದ ರೀತಿಯಲ್ಲಿ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಇದರಿಂದ ಕೂದಲಿನ ಉದುರುವಿಕೆಯು ಕಡಿಮೆ ಆಗುತ್ತದೆ.
ಒದ್ದೆ ಕೂದಲನ್ನು ಹಾಗೇ ಬಿಡಬೇಡಿ: ತಲೆ ಸ್ನಾನ ಮಾಡಿದ ಬಳಿಕ ಕೂದಲನ್ನು ಹಾಗೇ ಬಾಚಿ ಕಟ್ಟಬೇಡಿ, ಇದರಿಂದ ಕೂದಲಿಗೆ ಹೆಚ್ಚು ಹಾನಿಯಾಗುತ್ತದೆ. ಹೀಗಾಗಿ ಮೃದು ಟವಲ್ ಅಥವಾ ಹೇರ್ ಡ್ರೈಯರ್‍ನ ಬಳಸಿ ಕೂದಲನ್ನು ಒಣಗಿಸಿ. ರಾತ್ರಿ ತಲೆಸ್ನಾನ ಮಾಡುವ ಅಭ್ಯಾಸವಿದ್ದರೆ ಒದ್ದೆ ಕೂದಲಿನಲ್ಲಿ ಮಲಗಬೇಡಿ. ಇದರಿಂದ ಸ್ಪ್ಲಿಟ್ ಕೂದಲು ಹೆಚ್ಚಾಗಬಹುದು. ಇದನ್ನೂ ಓದಿ: ಸಾಮಾನ್ಯ ನೆಗಡಿಗೆ ಇಲ್ಲಿದೆ ಸುಲಭ ಪರಿಹಾರಗಳು
Live Tv
[brid partner=56869869 player=32851 video=960834 autoplay=true]
ಹಿಂದಿ ಕಿರುತೆರೆ ಖ್ಯಾತ ನಟಿ ತುನಿಷಾ ಶರ್ಮಾ ಬಾಯ್ ಫ್ರೆಂಡ್ ಶಿಜಾನ್ ನ ಉದ್ದನೆಯ ತಲೆಗೂದಲಿಗೆ ಕತ್ತರಿ ಹಾಕದಂತೆ ಜೈಲು ಅಧಿಕಾರಿಗಳಿಗೆ ಕೋರ್ಟ್ ನಿರ್ದೇಶನ ನೀಡಿದೆ. ಶರ್ಮಾ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಜಾನ್ ಸದ್ಯ ಜೈಲಿನಲ್ಲಿ ಇದ್ದಾನೆ. ಜೈಲಿನಲ್ಲಿರುವ ಆತನ ಉದ್ದ ಕೂದಲನ್ನು ನಿಯಮದ ಪ್ರಕಾರ ಕತ್ತರಿಸಲು ಜೈಲು ಅಧಿಕಾರಿಗಳು ಮುಂದಾಗಿದ್ದರು. ಕೂದಲು ಕತ್ತರಿಸದಂತೆ ಆತನ ಪರ ವಕೀಲರು ಕೋರ್ಟಿಗೆ ಮೊರೆ ಹೋಗಿದ್ದರು. ಶಿಜಾನ್ ಧಾರಾವಾಹಿವೊಂದರಲ್ಲಿ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಆ ಪಾತ್ರಕ್ಕಾಗಿ ಉದ್ದನೆಯ ಕೂದಲು ಬಿಟ್ಟಿದ್ದರಿಂದ, ಅದನ್ನು ಹಾಗೆಯೇ ಉಳಿಸಿಕೊಳ್ಳಲು ಜೈಲು ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ವಕೀಲರು ಕೇಳಿದ್ದರು.
ಈ ಕುರಿತು ನ್ಯಾಯಾಲಯವು ಜೈಲಾಧಿಕಾರಿಗಳ ಪ್ರತಿಕ್ರಿಯೆ ಕೇಳಿತ್ತು. ಜೈಲು ಅಧಿಕಾರಿಗಳು ಕೂಡ ನ್ಯಾಯಾಲಯಕ್ಕೆ ಮಾಹಿತಿ ಕೊಟ್ಟಿದ್ದು ಜೈಲಿನ ನಿಯಮಗಳ ಪ್ರಕಾರ ಕೇವಲ ಸಿಖ್ ಖೈದಿಗಳಿಗೆ ಮಾತ್ರ ಉದ್ದನೆಯ ಕೂದಲು ಬಿಡಲು ಅವಕಾಶವಿದೆ. ಉಳಿದಂತೆ ಮುಸ್ಲಿಂ ಧರ್ಮದ ಖೈದಿಗಳಿಗೆ ಉದ್ದನೆಯ ಗಡ್ಡ, ಹಿಂದೂ ಧರ್ಮದ ಖೈದಿಗಳಿಗೆ ಸಣ್ಣ ಜುಟ್ಟು ಬಿಡಲು ಅನುಮತಿ ಕೊಡಲಾಗುವುದು. ಹಾಗಾಗಿ ಶಿಜಾನ್ ಅವರ ಉದ್ದ ಕೂದಲಿಗೆ ಕತ್ತರಿ ಹಾಕುವುದು ಅನಿವಾರ್ಯ ಎಂದು ತಿಳಿಸಿತ್ತು. ಇದನ್ನೂ ಓದಿ: ಸಿದ್-ಕಿಯಾರಾ ಮದುವೆ, ತೆರೆಮರೆಯಲ್ಲಿ ಭರ್ಜರಿ ತಯಾರಿ
ತನ್ನ ತುನಿಷಾ ಸಾವಿನ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ತನ್ನ ಮಗಳ ಸಾವಿಗೆ ಆಕೆಯ ಪ್ರಿಯಕರ ಶಿಜಾನ್ ಮತ್ತು ಆಕೆಯ ಕುಟುಂಬವೇ ಕಾರಣ. ನನ್ನ ಮಗಳನ್ನು ಅವರು ಮತಾಂತರ ಮಾಡಲು ಯತ್ನಿಸಿದ್ದರು. ಈ ಸಾವಿನ ಹೊಣೆಯನ್ನು ಅವರೇ ಹೊರಬೇಕು ಎಂದು ತುನಿಷಾ ಶರ್ಮಾ ಅವರ ತಾಯಿಯು ಆರೋಪ ಮಾಡಿದ್ದರು. ಈ ಆರೋಪಕ್ಕೆ ಶಿಜಾನ್ ಕುಟುಂಬ ಉತ್ತರ ನೀಡಿದ್ದು, ತುನಿಷಾ ನಮ್ಮ ಕುಟುಂಬದ ಜೊತೆ ಅನ್ಯೋನ್ಯವಾಗಿದ್ದರು. ಅವರ ತಾಯಿಯೇ ಸರಿ ಇರಲಿಲ್ಲ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿರುವ ತುನಿಷಾ ಬಾಯ್ ಫ್ರೆಂಡ್ ಶಿಜಾನ್ ಕುಟುಂಬ, ‘ಅವರ ತಾಯಿಗೆ ದುಡ್ಡಿನ ಹಪಾಹಪಿ ಇತ್ತು. ಹಾಗಾಗಿ ಮಗಳನ್ನು ಕೆಟ್ಟದ್ದಾಗಿ ನಡೆಸಿಕೊಂಡರು. ತುನಿಷಾ ತಾಯಿ ಮತ್ತು ಆಕೆಯ ಚಿಕ್ಕಪ್ಪ ಆ ಹುಡುಗಿಗೆ ತುಂಬಾ ತೊಂದರೆ ಕೊಟ್ಟಿದ್ದಾರೆ. ಫೋನ್ ವೈಯರ್ ನಿಂದ ಸಾಯಿಸಲು ಪ್ರಯತ್ನಿಸಿದ್ದರು. ಈಗ ಸುಖಾಸುಮ್ಮನೆ ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
Live Tv
[brid partner=56869869 player=32851 video=960834 autoplay=true]
ಹಿಂದಿ ಕಿರುತೆರೆಯ ಖ್ಯಾತ ನಟಿ ತುನಿಷಾ ಶರ್ಮಾ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಬಂಧನವಾಗಿರುವ ಆಕೆಯ ಬಾಯ್ ಫ್ರೆಂಡ್, ನಟನೂ ಆಗಿರುವ ಶಿಜಾನ್ ಸದ್ಯ ಜೈಲಿನಲ್ಲಿ ಇದ್ದಾನೆ. ಜೈಲಿನಲ್ಲಿರುವ ಆತನ ಉದ್ದ ಕೂದಲನ್ನು ನಿಯಮದ ಪ್ರಕಾರ ಕತ್ತರಿಸಲು ಜೈಲು ಅಧಿಕಾರಿಗಳು ಮುಂದಾಗಿದ್ದರು. ಕೂದಲು ಕತ್ತರಿಸದಂತೆ ಆತನ ಪರ ವಕೀಲರು ಕೋರ್ಟಿಗೆ ಮೊರೆ ಹೋಗಿದ್ದರು. ಶಿಜಾನ್ ಧಾರಾವಾಹಿಯಲ್ಲಿ ಪ್ರಮುಖ ಪಾತ್ರ ಮಾಡುತ್ತಿರುವುದರಿಂದ, ಪಾತ್ರಕ್ಕಾಗಿ ಉದ್ದನೆಯ ಕೂದಲು ಬಿಟ್ಟಿದ್ದರಿಂದ, ಅದನ್ನು ಹಾಗೆಯೇ ಉಳಿಸಿಕೊಳ್ಳಲು ಜೈಲು ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಕೇಳಿದ್ದರು.
ಈ ಕುರಿತು ನ್ಯಾಯಾಲಯವು ಜೈಲಾಧಿಕಾರಿಗಳ ಪ್ರತಿಕ್ರಿಯೆ ಕೇಳಿತ್ತು. ಜೈಲು ಅಧಿಕಾರಿಗಳು ಕೂಡ ನ್ಯಾಯಾಲಯಕ್ಕೆ ಮಾಹಿತಿ ಕೊಟ್ಟಿದ್ದು ಜೈಲಿನ ನಿಯಮಗಳ ಪ್ರಕಾರ ಕೇವಲ ಸಿಖ್ ಖೈದಿಗಳಿಗೆ ಮಾತ್ರ ಉದ್ದನೆಯ ಕೂದಲು ಬಿಡಲು ಅವಕಾಶವಿದೆ. ಉಳಿದಂತೆ ಮುಸ್ಲಿಂ ಧರ್ಮದ ಖೈದಿಗಳಿಗೆ ಉದ್ದನೆಯ ಗಡ್ಡ, ಹಿಂದೂ ಧರ್ಮದ ಖೈದಿಗಳಿಗೆ ಸಣ್ಣ ಜುಟ್ಟು ಬಿಡಲು ಅನುಮತಿ ಕೊಡಲಾಗುವುದು. ಹಾಗಾಗಿ ಶಿಜಾನ್ ಅವರ ಉದ್ದ ಕೂದಲಿಗೆ ಕತ್ತರಿ ಹಾಕುವುದು ಅನಿವಾರ್ಯ ಎಂದು ತಿಳಿಸಿದೆ. ಈ ಮೂಲಕ ಕೂದಲು ಕತ್ತರಿಸಲಾಗುವುದು ಎಂದು ಹೇಳಿದ್ದಾರೆ. ಇದನ್ನೂ ಓದಿ: ನಾನಿಲ್ಲಿ ಗೆದ್ದಿರುವಂಥದ್ದು ನಿಮ್ಮಿಂದ, ನೀವು ನನ್ನನ್ನು ಗೆಲ್ಲಿಸಿದ್ದೀರಿ: ರೂಪೇಶ್ ಶೆಟ್ಟಿ
ತನ್ನ ತುನಿಷಾ ಸಾವಿನ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ತನ್ನ ಮಗಳ ಸಾವಿಗೆ ಆಕೆಯ ಪ್ರಿಯಕರ ಶಿಜಾನ್ ಮತ್ತು ಆಕೆಯ ಕುಟುಂಬವೇ ಕಾರಣ. ನನ್ನ ಮಗಳನ್ನು ಅವರು ಮತಾಂತರ ಮಾಡಲು ಯತ್ನಿಸಿದ್ದರು. ಈ ಸಾವಿನ ಹೊಣೆಯನ್ನು ಅವರೇ ಹೊರಬೇಕು ಎಂದು ತುನಿಷಾ ಶರ್ಮಾ ಅವರ ತಾಯಿಯು ಆರೋಪ ಮಾಡಿದ್ದರು. ಈ ಆರೋಪಕ್ಕೆ ಶಿಜಾನ್ ಕುಟುಂಬ ಉತ್ತರ ನೀಡಿದ್ದು, ತುನಿಷಾ ನಮ್ಮ ಕುಟುಂಬದ ಜೊತೆ ಅನ್ಯೋನ್ಯವಾಗಿದ್ದರು. ಅವರ ತಾಯಿಯೇ ಸರಿ ಇರಲಿಲ್ಲ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿರುವ ತುನಿಷಾ ಬಾಯ್ ಫ್ರೆಂಡ್ ಶಿಜಾನ್ ಕುಟುಂಬ, ‘ಅವರ ತಾಯಿಗೆ ದುಡ್ಡಿನ ಹಪಾಹಪಿ ಇತ್ತು. ಹಾಗಾಗಿ ಮಗಳನ್ನು ಕೆಟ್ಟದ್ದಾಗಿ ನಡೆಸಿಕೊಂಡರು. ತುನಿಷಾ ತಾಯಿ ಮತ್ತು ಆಕೆಯ ಚಿಕ್ಕಪ್ಪ ಆ ಹುಡುಗಿಗೆ ತುಂಬಾ ತೊಂದರೆ ಕೊಟ್ಟಿದ್ದಾರೆ. ಫೋನ್ ವೈಯರ್ ನಿಂದ ಸಾಯಿಸಲು ಪ್ರಯತ್ನಿಸಿದ್ದರು. ಈಗ ಸುಖಾಸುಮ್ಮನೆ ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
Live Tv
[brid partner=56869869 player=32851 video=960834 autoplay=true]
ಲಕ್ನೋ: ಊಟದಲ್ಲಿ ಕೂದಲು ಸಿಕ್ಕಿದ್ದಕ್ಕೆ ವ್ಯಕ್ತಿಯೊಬ್ಬ ತನ್ನ ಹೆಂಡತಿಗೆ (Wife) ಚಿತ್ರಹಿಂಸೆ ನೀಡಿ ಮೃಗೀಯವಾಗಿ ವರ್ತಿಸಿರುವ ಘಟನೆ ಉತ್ತರಪ್ರದೇಶದ (UttarPradesh) ಪಿಲಿಭಿತ್‌ನಲ್ಲಿ ನಡೆದಿದೆ.
ಊಟ ಮಾಡುತ್ತಿದ್ದ ವೇಳೆ ಆಹಾರದಲ್ಲಿ (Food) ಕೂದಲು ಸಿಕ್ಕಿದ್ದರಿಂದ ಕೋಪಕೊಂಡ ಪತಿ, ತನ್ನ ಪತ್ನಿ ಮೇಲೆ ಹಲ್ಲೆ ನಡೆಸಿದ್ದಾನೆ. ಆಕೆಯ ಕೈಕಾಲು ಕಟ್ಟಿ ಬಲವಂತವಾಗಿ ಲೈಂಗಿಕ ಸಂಭೋಗ ನಡೆಸಲು ಯತ್ನಿಸಿದ್ದಾನೆ. ಅದು ಸಾಧ್ಯವಾಗದಿದ್ದರಿಂದ ಆಕೆಯ ತಲೆ ಬೋಳಿಸಿದ್ದಾನೆ. ಪಿಲಿಭಿತ್‌ನ ಗಜ್ರೌಲಾ ಪೊಲೀಸ್ ಠಾಣೆ (Police Station) ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪತಿ ವಿರುದ್ಧ ಸಂತ್ರಸ್ತ ಮಹಿಳೆ ದೂರು ನೀಡಿದ್ದಾಳೆ. ಇದನ್ನೂ ಓದಿ: ಕಿರುಕುಳ ವಿರೋಧಿಸಿದ್ದಕ್ಕೆ ತಾಯಿ ಮಗುವನ್ನು ಹೊರದೂಡಿದ ಕ್ಯಾಬ್ ಚಾಲಕ- ಮಗು ಸಾವು
ಪತಿಯ ಪೋಷಕರೂ ಸಾಥ್:
ಸೈಕೋನಂತೆ ವರ್ತಿಸಿ ಪತ್ನಿಗೆ ಚಿತ್ರಹಿಂಸೆ ನೀಡುವಾಗ ಪತಿಗೆ ಆತನ ಪೋಷಕರೂ ಸಾಥ್ ನೀಡಿದ್ದಾರೆ. ಮನಬಂದಂತೆ ಥಳಿಸುತ್ತಿದ್ದರೂ, ನನ್ನ ಅತ್ತೆ-ಮಾವ ಸಹಾಯಕ್ಕೆ ಬರಲಿಲ್ಲ. ಮೃಗೀಯವಾಗಿ ವರ್ತಿಸುತ್ತಿರುವುದನ್ನು ಕಂಡು ಅತ್ತೆ-ಮಾವ ಮಜಾ ತೆಗೆದುಕೊಳ್ಳುತ್ತಿದ್ದರು. ನನ್ನನ್ನು ರಕ್ಷಿಸದೆ ನನ್ನ ಗಂಡನಿಗೆ ಸಾಥ್ ನೀಡಿದರು ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.
ಬಳಿಕ ಘಟನೆಯ ಕುರಿತು ಮಹಿಳೆ ತನ್ನ ಪೋಷಕರಿಗೆ ದೂರವಾಣಿ ಕರೆ ಮೂಲಕ ತಿಳಿಸಿದ್ದಾಳೆ. ತಕ್ಷಣವೇ ಸಮಸ್ಯೆಯನ್ನು ಬಗೆಹರಿಸಿ ಸಮಾಧಾನ ಪಡಿಸಲು ಬಂದ ಪತ್ನಿಯ ಪೋಷಕರ ಮೇಲೂ ಹಲ್ಲೆಗೆ ಯತ್ನಿಸಿದ್ದಾನೆ. ತನ್ನ ಪತಿ ವರದಕ್ಷಿಣೆಗೆ ಒತ್ತಾಯಿಸಿದ್ದಾನೆ ಎಂದೂ ಆಕೆ ಹೇಳಿಕೊಂಡಿದ್ದಾಳೆ. ಇದನ್ನೂ ಓದಿ: ಪತ್ನಿಯನ್ನ ಗೆಳೆಯರೊಂದಿಗೆ ಮಲಗಿಸಿ ವೀಡಿಯೋ ಚಿತ್ರೀಕರಣ- ಬೆಂಗ್ಳೂರಲ್ಲೊಬ್ಬ ಸೈಕೋಪಾತ್ ಪತಿ!
ಸದ್ಯ ಸಂತ್ರಸ್ತ ಮಹಿಳೆಯ ದೂರಿನ ಮೇರೆಗೆ ಆರೋಪಿ ಪತಿ, ಅತ್ತೆ ಮತ್ತು ಮಾವನ ವಿರುದ್ಧ ಪೊಲೀಸರು ಪ್ರಕರಣ (FIR) ದಾಖಲಿಸಿ, ಆರೋಪಿ ಪತಿಯನ್ನ ಬಂಧಿಸಿದ್ದಾರೆ. ಸಂತ್ರಸ್ತ ಮಹಿಳೆಯನ್ನು ತವರು ಮನೆಗೆ ಕಳುಹಿಸಿಕೊಡಲಾಗಿದೆ.
Live Tv
[brid partner=56869869 player=32851 video=960834 autoplay=true]
ನವದೆಹಲಿ: ಬೋಳು ತಲೆಯಿದ್ದವರು (Bald Hair) ಕೂದಲನ್ನು (Hair) ಬೆಳೆಸಲು ಔಷಧಿಗಳ ಮೊರೆ ಹೋಗುವುದು ಸಾಮಾನ್ಯ. ಇತ್ತೀಚಿನ ದಿನಗಳಲ್ಲಿ ಜನರು ಕೂದಲ ಕಸಿ (Hair Transplant) ಮಾಡಿಸುವಲ್ಲಿಗೆ ವಾಲುತ್ತಿದ್ದಾರೆ. ಆದರೆ ಕೂದಲ ಕಸಿ ಮಾಡಿಸಿಕೊಳ್ಳಲು ಹೋದವರೊಬ್ಬರು ವೈದ್ಯರ (Doctors) ಯಡವಟ್ಟಿನಿಂದ ಜೀವವನ್ನೇ ಕಳೆದುಕೊಂಡಿರುವ ಆಘಾತಕಾರಿ ಘಟನೆಯೊಂದು ನಡೆದಿದೆ.
ರಶೀದ್ ತಮ್ಮ ಮನೆಯಲ್ಲಿ ಒಬ್ಬರೇ ದುಡಿಯುತ್ತಿದ್ದ ವ್ಯಕ್ತಿಯಾಗಿದ್ದು, ತಮ್ಮ ತಾಯಿ ಹಾಗೂ ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ. ಕೂದಲ ಶಸ್ತ್ರಚಿಕಿತ್ಸೆಯ ಬಳಿಕ ನನ್ನ ಮಗ ತುಂಬಾ ನೋವಿನಿಂದ ಬಳಲುತ್ತಿದ್ದ ಆತನ ಮೈಮೇಲೆ ಗುಳ್ಳೆಗಳಾಗಿದ್ದವು ಎಂದು ರಶೀದ್ ತಾಯಿ ಆಸಿಯಾ ಬೇಗಂ ತಿಳಿಸಿದ್ದಾರೆ. ಇದನ್ನೂ ಓದಿ: ಮಗಳನ್ನು ಕೋಚಿಂಗ್ ಸೆಂಟರ್‌ಗೆ ಕರೆದೊಯ್ಯುತ್ತಿದ್ದ ವ್ಯಕ್ತಿ ರಾಜಸ್ಥಾನದ ಗ್ಯಾಂಗ್‌ವಾರ್‌ಗೆ ಬಲಿ
ಘಟನೆಯ ಬಳಿಕ ರಶೀದ್ ಕುಟುಂಬದ ಸದಸ್ಯರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಶಸ್ತ್ರಚಿಕಿತ್ಸೆ ನಡೆಸಿದ ಇಬ್ಬರು ವೈದ್ಯರು ಸೇರಿದಂತೆ ಒಟ್ಟು ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
Live Tv
[brid partner=56869869 player=32851 video=960834 autoplay=true]
ನವದೆಹಲಿ: ನಿವೃತ್ತ ಶಿಕ್ಷಕರೊಬ್ಬರು ಕಿವಿಯಲ್ಲಿ (Ear) ಉದ್ದನೆಯ ಕೂದಲನ್ನು (Hair) ಬೆಳೆಸಿ ಗಿನ್ನಿಸ್ ವಿಶ್ವ ದಾಖಲೆಯನ್ನು (Guinness World Record) ಬರೆದಿದ್ದಾರೆ.
ನಿವೃತ್ತ ಶಿಕ್ಷಕರಾದ ಆಂಟೋನಿ ವಿಕ್ಟರ್ ಎನ್ನುವವರು ಈ ದಾಖಲೆಗೆ ಪಾತ್ರರಾದವರು. ಆಂಟೋನಿ ತನ್ನ ಹೊರಗಿನ ಕಿವಿಗಳ ಮಧ್ಯಭಾಗದಿಂದ ಕೂದಲನ್ನು 18.1 ಸೆ.ಮೀ (7.12 ಇಂಚು) ಅಳತೆಯ ಉದ್ದದಲ್ಲಿ ಬೆಳೆಸಿದ್ದಾರೆ. ಅವರು 2007ರಿಂದ ಕಿವಿಯಲ್ಲಿ ಕೂದಲನ್ನು ಬೆಳೆಸಲು ಪ್ರಾರಂಭಿಸಿದ್ದು, ಇದೀಗ ವಿಶ್ವದಾಖಲೆಯನ್ನು ಬರೆದಿದ್ದಾರೆ. ಈ ಬಗ್ಗೆ ದಿ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಇನ್‍ಸ್ಟಾಗ್ರಾಮ್ ಖಾತೆ ಈ ವಿಷಯವನ್ನು ಹಂಚಿಕೊಂಡಿದೆ.
ಇನ್‍ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಏನಿದೆ?: ಕಿವಿಯ ಕೂದಲಿನ ಶಿಕ್ಷಕರೆಂದು ಜನರು ಆಂಟೋನಿ ಅವರನ್ನು ಕರೆಯುತ್ತಾರೆ. ಆಂಟೋನಿ ಅವರ ಕಿವಿಯಲ್ಲಿರುವ ಉದ್ದನೆಯ ಕೂದಲು ದಾಖಲೆಯಾಗಿದೆ. ಭಾರತದ (India) ಆಂಟೋನಿ ವಿಕ್ಟರ್ ನಿವೃತ್ತ ಶಾಲಾ ಮುಖ್ಯೋಧ್ಯಾಯರು. (School Headmaster) ಇವರು 2007ರಿಂದ ತಮ್ಮ ಕಿವಿಯ ಮಧ್ಯಭಾಗದಿಂದ ಕೂದಲನ್ನು ಬಿಡಲು ಪ್ರಾರಂಭಿಸಿದ್ದಾರೆ. ಇದೀಗ ಈ ಕೂದಲು 18.1 ಸೆ.ಮೀ. (7.12) ಬೆಳೆದಿದೆ ಎಂದು ತಿಳಿಸಿದೆ. ಇದನ್ನೂ ಓದಿ: ಸುನಂದಾ ಕೇಸ್‌ನಲ್ಲಿ ತರೂರ್‌ಗೆ ಕ್ಲೀನ್ ಚಿಟ್ – ಹೈಕೋರ್ಟ್ ಮೊರೆ ಹೋದ ದೆಹಲಿ ಪೊಲೀಸ್
ದಿ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಹಾಕಿರುವ ಈ ಪೋಸ್ಟ್‌ಗೆ ವಿಚಿತ್ರ ರೀತಿಯ ಕಾಮೆಂಟ್‍ಗಳು ಬಂದಿದ್ದು, ಬಳಕೆದಾರನೊಬ್ಬ ಇದು, ದಾಖಲೆಯಲ್ಲ, ಹೆಚ್ಚಿನ ಪುರುಷರಿಗೆ ಇದು ಕಾಮನ್ ಆಗಿದೆ ಎಂದಿದ್ದಾರೆ. ಮತ್ತೊಬ್ಬ ನೆಟ್ಟಿಗ ಕಾಮೆಂಟ್ ಮಾಡಿದ್ದು, ಮೂಗಿನ ಉದ್ದನೆಯ ಕೂದಲಿನ ಬಗ್ಗೆ ಮುಂದಿನ ದಾಖಲೆ ಎಂದು ತಮಾಷೆ ಮಾಡಿದ್ದಾನೆ. ಇನ್ನೊಬ್ಬ ಕಾಮೆಂಟ್ ಮಾಡಿದ್ದು, ನನ್ನ ಹಳ್ಳಿಗರು ಈ ದಾಖಲೆಯನ್ನು ಮುರಿಯಲು ಬರುತ್ತಿದ್ದಾರೆ ಎಂದು ತಿಳಿಸಿದ್ದಾನೆ. ಇದನ್ನೂ ಓದಿ:ಕರ್ತವ್ಯ ನಿರತ ಪೊಲೀಸ್ ಮುಖ್ಯಪೇದೆ ಹೃದಯಾಘಾತದಿಂದ ಸಾವು
Live Tv
[brid partner=56869869 player=32851 video=960834 autoplay=true]
ಬೀಜಿಂಗ್: ಮದ್ಯಪಾನ, ಧೂಮಪಾನ ಹೀಗೆ ಅನೇಕ ರೀತಿಯ ಚಟಗಳನ್ನು ಬೆಳೆಸಿಕೊಂಡಿದ್ದವರನ್ನು ನೋಡಿರುವುದು ಸಾಮಾನ್ಯ. ಆದರೆ ಇಲ್ಲೊಬ್ಬಳು ಚೀನಾದ (China) ಬಾಲಕಿ ತನ್ನ ಕೂದಲನ್ನು (Hair) ತಿನ್ನುವ ವಿಚಿತ್ರ ಚಟವನ್ನು ಹೊಂದಿದ್ದಳು ಎಂಬ ವಿಷಯ ಇದೀಗ ಬೆಳಕಿಗೆ ಬಂದಿದೆ.
ಚೀನಾದ ಶಾಂಕ್ಸಿ ಪ್ರಾಂತ್ಯದ ಪಿಕಾ (14) ಎಂಬ ಯುವತಿಗೆ (Girl) ಕೂದಲನ್ನು ಅಗೆಯುವ ಚಟವಿತ್ತು. ಅವಳು ಹೀಗೆ ಅಗೆಯುತ್ತಾ ಅಗೆಯುತ್ತಾ ತನ್ನ ತಲೆಯಲ್ಲಿದ್ದ ಬರೊಬ್ಬರಿ 3 ಕೆಜಿ ಕೂದಲನ್ನು ತಿಂದಿದ್ದಾಳೆ. ಇದರ ಪರಿಣಾಮವಾಗಿ ಆಕೆಯ ತಲೆ ಬೋಳಾಗಿದೆ. ಆದರೆ ಪಿಕಾ ತಂದೆ- ತಾಯಿ ಕೆಲಸದ ಹಿನ್ನೆಲೆಯಲ್ಲಿ ದೂರದ ಊರಿನಲ್ಲಿ ವಾಸಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಆಕೆ ಅಜ್ಜಿಯ ಜೊತೆ ಇದ್ದಳು. ಅಜ್ಜಿಗೆ ವಯಸ್ಸಾಗಿದ್ದರಿಂದ ಪಿಕಾಳಿಗೆ ತುಂಬಾ ಗಂಭೀರವಾಗುವವರೆಗೂ ಅಸ್ವಸ್ಥತೆಯನ್ನು ಗಮನಿಸಲಿಲ್ಲ.
ಪಿಕಾಳಿಗೆ ದಿನ ಕಳೆದಂತೆ ಆಹಾರವನ್ನು ಸೇವಿಸಲು ಸಾಧ್ಯವಾಗದಷ್ಟು ಅಸ್ವಸ್ಥಳಾಗಿದ್ದಳು. ಈ ಹಿನ್ನೆಲೆಯಲ್ಲಿ ಆಕೆಯನ್ನು ಪೋಷಕರು ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರಿಗೆ ಮೊದಲಿಗೆ ಕಾರಣ ತಿಳಿದಿರಲಿಲ್ಲ. ಇದರಿಂದಾಗಿ ಪಿಕಾಗೆ ಸ್ಕ್ಯಾನ್ ಮಾಡಲು ತಿಳಿಸಿದ್ದಾರೆ. ನಂತರ ಸ್ಕ್ಯಾನಿಂಗ್ ರಿಪೋರ್ಟ್‍ನಲ್ಲಿ ಕಂಡು ಬಂದಿದ್ದ ಕೂದಲನ್ನು ನೋಡಿ ದಂಗಾಗಿದ್ದಾರೆ. ಕೂದಲು ಹೊಟ್ಟೆಯ ತುಂಬೆಲ್ಲಾ ಇದ್ದು, ಕರುಳು ಕೂಡ ಬ್ಲಾಕ್ ಆಗಿತ್ತು.
ಈ ಹಿನ್ನೆಲೆಯಲ್ಲಿ ವೈದ್ಯರು ತಕ್ಷಣ ಶಸ್ತ್ರ ಚಿಕಿತ್ಸೆ ಮಾಡಿಕೊಳ್ಳಲು ಸಲಹೆ ನೀಡಿದ್ದಾರೆ. ವೈದ್ಯರ ಸಲಹೆ ಮೇರೆಗೆ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಪಿಕಾ ಒಪ್ಪಿಕೊಂಡಳು. ಅದಾದ ಬಳಿಕ ವೈದ್ಯರು (Doctor) ಸತತ 2 ಗಂಟೆಗಳ ಕಾಲ ಶಸ್ತ್ರ ಚಿಕಿತ್ಸೆ ಮಾಡಿ, ಆಕೆಯ ಹೊಟ್ಟೆಯಲ್ಲಿದ್ದ 3 ಕೆ.ಜಿ ತೂಕದ ಕೂದಲಿನ ಉಂಡೆಯನ್ನು ತೆಗೆದಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನದಲ್ಲಿ ಆತ್ಮಹತ್ಯಾ ಸ್ಫೋಟ – ಪೊಲೀಸ್, ಮಗು ಸಾವು, 24 ಮಂದಿಗೆ ಗಾಯ
ಈ ಬಗ್ಗೆ ವೈದ್ಯರು ಮಾತನಾಡಿ, ಆಕೆ ಕೆಲವು ವರ್ಷಗಳಿಂದ ಮಾನಸಿಕ ಸಮಸ್ಯೆಗಳನ್ನು ಅನುಭವಿಸುತ್ತಿದ್ದಳು. ಈ ಹಿನ್ನೆಲೆಯಲ್ಲಿ ಕೂದಲನ್ನು ತಿನ್ನುವ ಚಟವನ್ನು ಬೆಳಸಿಕೊಂಡಳು ಎಂದು ತಿಳಿಸಿದರು. ಇದನ್ನೂ ಓದಿ: 25 ದಿನದ ಬಳಿಕ KRS ಬೃಂದಾವನ ಪ್ರವಾಸಿಗರಿಗೆ ಓಪನ್
Live Tv
[brid partner=56869869 player=32851 video=960834 autoplay=true]