Tag: Hail

  • ಚಾಮರಾಜನಗರ ಜಿಲ್ಲೆಯಲ್ಲಿ ಆಲಿಕಲ್ಲು ಸಹಿತ ಭಾರೀ ಮಳೆ

    ಚಾಮರಾಜನಗರ ಜಿಲ್ಲೆಯಲ್ಲಿ ಆಲಿಕಲ್ಲು ಸಹಿತ ಭಾರೀ ಮಳೆ

    ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನನಲ್ಲಿ ಆಲಿಕಲ್ಲು ಸಹಿತ ಭಾರೀ ಮಳೆಯಾಗಿದೆ

    ಇಂದು ಸಂಜೆ ಪಿ.ಜಿ.ಪಾಳ್ಯ ಸುತ್ತಮುತ್ತ ಗುಡುಗು ಸಹಿತ ಭಾರೀ ಆಲಿಕಲ್ಲು ಮಳೆ ಬಿದ್ದಿದೆ. ಒಂದು ಗಂಟೆಗೂ ಹೆಚ್ಚು ಕಾಲ ಮಳೆ ಸುರಿದಿದ್ದು, ಬಿರುಗಾಳಿ ಸಹಿತ ವರುಣನ ಆರ್ಭಟ ಜೋರಾಗಿದೆ. ಇದನ್ನೂ ಓದಿ: ಹೆಬ್ಬಾಳದಲ್ಲಿ ಸರಣಿ ಅಪಘಾತ – ಬಿಬಿಎಂಪಿ ಕಸದ ಲಾರಿಗೆ ಬಾಲಕಿ ಬಲಿ

    ಪಿಜಿಪಾಳ್ಯ, ಬಸವನಗುಡಿ, ಚಿಕ್ಕರಂಗಶೆಟ್ಟಿದೊಡ್ಡಿ, ಒಡೆಯರಪಾಳ್ಯ ಮೊದಲಾದ ಗ್ರಾಮಗಳಲ್ಲಿ ಮಳೆಯಾಗಿದೆ. ಇದನ್ನೂ ಓದಿ: ಕಷ್ಟಪಟ್ಟು ಮಾಡುವ ಸಿನಿಮಾ ಬಗ್ಗೆ ಅಪಪ್ರಚಾರ ಮಾಡಬೇಡಿ ಎಂದು ಆಲಿಯಾ ಗರಂ

  • ಚಿಕ್ಕಬಳ್ಳಾಪುರದಲ್ಲಿ ಭಾರೀ ಮಳೆ- ಬಿದ್ದವು ಬೃಹತ್ ಗಾತ್ರದ ಆಲಿಕಲ್ಲು

    ಚಿಕ್ಕಬಳ್ಳಾಪುರದಲ್ಲಿ ಭಾರೀ ಮಳೆ- ಬಿದ್ದವು ಬೃಹತ್ ಗಾತ್ರದ ಆಲಿಕಲ್ಲು

    – ಹತ್ತಾರು ಪಾಲಿ ಹೌಸ್, ಬೆಳೆಗಳು ಸಂಪೂರ್ಣ ನಾಶ

    ಚಿಕ್ಕಬಳ್ಳಾಪುರ: ಜಿಲ್ಲಾ ಭಾರೀ ಮಳೆ ಸುರಿದಿದ್ದು, ಇದರ ಜೊತೆಗೆ ಬೃಹತ್ ಗಾತ್ರದ ಆಲಿಕಲ್ಲುಗಳು ಸಹ ಬಿದ್ದಿವೆ. ಇದರಿಂದಾಗಿ ಪಾಲಿ ಹೌಸ್ ಹಾಗೂ ಬೆಳೆಗಳು ಸಂಪೂರ್ಣ ನಾಶವಾಗಿದ್ದು, ರೈತರು ಕಂಗಾಲಾಗಿದ್ದಾರೆ.

    ಆಲಿಕಲ್ಲು ಮಳೆಗೆ ಕೋಟ್ಯಂತರ ರೂಪಾಯಿ ನಷ್ಟವಾಗಿರುವ ಘಟನೆ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಬಶೆಟ್ಟಿಹಳ್ಳಿ ಗ್ರಾಮದ ಬಳಿ ನಡೆದಿದೆ. ಬಶೆಟ್ಟಿಹಳ್ಳಿ ಗ್ರಾಮ ಹಾಗೂ ಗೌಡಗೆರೆ ಗ್ರಾಮ ವ್ಯಾಪ್ತಿಯಲ್ಲಿ ಬಿದ್ದ ಆಲಿಕಲ್ಲು ಮಳೆಗೆ ಹತ್ತಾರು ಪಾಲಿ ಹೌಸ್ ಗಳು, ತರಕಾರಿ ಬೆಳೆಗಳು, ದ್ರಾಕ್ಷಿ ಸೇರಿದಂತೆ ಹಲವು ಬೆಳೆಗಳು ನಾಶವಾಗಿವೆ. ಒಂದೊಂದು ಆಲಿಕಲ್ಲು ಸುಮಾರು 10 ರಿಂದ 20 ಕೆಜಿ ತೂಕದ್ದಾಗಿವೆ.

    ಇಷ್ಟು ದೊಡ್ಡ ಗಾತ್ರದ ಆಲಿಕಲ್ಲು ಕಂಡು ರೈತರು ನಿಬ್ಬೆರಗಾಗಿದ್ದಾರೆ. ರೈತ ರಘು ಅವರಿಗೆ ಸೇರಿದ ತೋಟದ ಮನೆಯ ಶೀಟುಗಳು ಗಾಳಿಗೆ ಕಿತ್ತು ಹೋಗಿವೆ. ಪಾಲಿ ಹೌಸ್ ಸೇರಿದಂತೆ ಹಾಗಲಕಾಯಿ, ನರ್ಸರಿ ಸಂಪೂರ್ಣ ಹಾಳಾಗಿದ್ದು, ಸುಮಾರು 10 ರಿಂದ 15 ಲಕ್ಷ ರೂ. ನಷ್ಟ ಆಗಿದೆ. ರೈತರು ಕಣ್ಣೀರಿಡುವಂತಾಗಿದೆ, ಸುತ್ತ ಮುತ್ತಲ ರೈತರ ಬಹುತೇಕ ಪಾಲಿಹೌಸ್ ಗಳು ಹರಿದು ಹಾಳಾಗಿದ್ದು, ಕೋಟ್ಯಂತರ ರೂಪಾಯಿ ನಷ್ಟ ಸಂಭವಿಸಿದೆ. ಮತ್ತೊಂದೆಡೆ ಚಿಂತಾಮಣಿ ತಾಲೂಕಿನ ಸೋಮಯಾಜಲಹಳ್ಳಿಯಲ್ಲಿ ಸಿಡಿಲು ಬಡಿದು ಮನೆ ಕುಸಿದಿದ್ದು, 7 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

  • ಮಲೆನಾಡಲ್ಲಿ ಮಳೆ ಅಬ್ಬರ- ಬೃಹತ್ ಗಾತ್ರದ ಆಲಿಕಲ್ಲು ಪತ್ತೆ

    ಮಲೆನಾಡಲ್ಲಿ ಮಳೆ ಅಬ್ಬರ- ಬೃಹತ್ ಗಾತ್ರದ ಆಲಿಕಲ್ಲು ಪತ್ತೆ

    ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಿನ ಮಲೆನಾಡು ಭಾಗದಲ್ಲಿ ಮಳೆ ಅಬ್ಬರ ಮುಂದುವರಿದಿದೆ. ಭಾನುವಾರ ಜಿಲ್ಲೆಯ ಮೂಡಿಗೆರೆ ಹಾಗೂ ಶೃಂಗೇರಿ ಭಾಗದಲ್ಲಿ ಧಾರಾಕಾರ ಮಳೆಯಾಗಿದರೆ ಕೊಪ್ಪ ಹಾಗೂ ಎನ್.ಆರ್.ಪುರದಲ್ಲಿ ಸಾಧಾರಣ ಮಳೆಯಾಗಿದೆ.

    ಮೂಡಿಗೆರೆ ತಾಲೂಕಿನ ಕಳಸ ಭಾಗದಲ್ಲಿ ಧಾರಾಕಾರ ಮಳೆಯಾಗಿದ್ದು, ಆಲಿಕಲ್ಲು ಸಮೇತ ವರುಣ ಅಬ್ಬರಿಸಿದ್ದಾನೆ. ಬೃಹತ್ ಗಾತ್ರದ ಆಲಿಕಲ್ಲನ್ನು ಹಿಡಿದು ಯುವಕರು ಫೋಟೋ ಕ್ಲಿಕ್ಕಿಸಿಕೊಂಡು ಖುಷಿ ಪಟ್ಟಿದ್ದಾರೆ. ಇತ್ತ ಶೃಂಗೇರಿಯ ಸುತ್ತಮುತ್ತಲೂ ಭಾರೀ ಮಳೆಯಾಗಿದೆ.

    ಮಳೆ ದೇವರೆಂದೇ ಖ್ಯಾತಿಯಾಗಿರುವ ಕಿಗ್ಗಾದ ಋಷ್ಯಶೃಂಗ ದೇವಾಲಯ ಸುತ್ತಮುತ್ತಲೂ ವರುಣನ ಅಬ್ಬರ ಮುಂದುವರಿದಿದೆ. ಕೊಪ್ಪ ತಾಲೂಕಿನ ತೆಂಗಿನಮನೆ, ಕಲ್ಕೆರೆ, ಜಯಪುರ ಸುತ್ತವೂ ಧಾರಾಕಾರ ಮಳೆಯಾಗಿದೆ. ಶೃಂಗೇರಿಯ ಮೆಣಸೆ ಬಳಿ ಭಾರೀ ಮಳೆ ಗಾಳಿಗೆ ಮರ ಧರೆಗುರುಳಿದೆ. ಭಾರೀ ಗಾಳಿಗೆ ವಿದ್ಯುತ್ ತಂತಿ ಮೇಲೆ ಮರ ಬಿದ್ದಿದ್ದು, ಲೈಟ್ ಕಂಬ ಕೂಡ ಮುರಿದು ಧರೆಗುರುಳಿದೆ.

    ದಿನಬಿಟ್ಟು ದಿನ ಸುರಿಯುತ್ತಿರುವ ಭಾರೀ ಮಳೆಗೆ ಮಲೆನಾಡಿಗರು ಕಂಗಾಲಾಗಿದ್ದಾರೆ. ಕಳೆದ ವರ್ಷದಂತೆ ಈ ವರ್ಷವೂ ನಮ್ಮ ಬದುಕು ನೀರಲ್ಲಿ ತೊಯ್ದು ಹೋಗುತ್ತೇನೋ ಎಂದು ಆತಂಕಕ್ಕೀಡಾಗಿದ್ದಾರೆ.