Tag: Hacking

  • ನಿಮ್ಮ ಕೈಯಲ್ಲಿರೋ ಸ್ಮಾರ್ಟ್‌ಫೋನ್‌ ಹ್ಯಾಕ್‌ ಮಾಡಿ ಸ್ಫೋಟಿಲು ಸಾಧ್ಯವೇ? ಹ್ಯಾಕಿಂಗ್‌ ತಪ್ಪಿಸಲು ಏನು ಮಾಡ್ಬೇಕು?

    ನಿಮ್ಮ ಕೈಯಲ್ಲಿರೋ ಸ್ಮಾರ್ಟ್‌ಫೋನ್‌ ಹ್ಯಾಕ್‌ ಮಾಡಿ ಸ್ಫೋಟಿಲು ಸಾಧ್ಯವೇ? ಹ್ಯಾಕಿಂಗ್‌ ತಪ್ಪಿಸಲು ಏನು ಮಾಡ್ಬೇಕು?

    ಇಡೀ ಭೂಮಿ ಈ ಮೊದಲು ವೆಪನ್‌ ವಾರ್‌, ಆ ನಂತರ ಬಯೋ ವಾರ್‌ ನೋಡಿತ್ತು. ಈಗ ಸೈಬರ್‌ ವಾರ್‌ ಶುರುವಾಗಿದೆ. ಇತ್ತೀಚೆಗಷ್ಟೇ ಲೆಬನಾನ್‌, ಸಿರಿಯಾ ದೇಶಗಳಲ್ಲಿ ಸಂಭವಿಸಿದ ಪೇಜರ್‌ (Pager), ವಾಕಿಟಾಕಿ, ಸೋಲಾರ್‌ ಪ್ಯಾನಲ್‌ನಂತಹ ಉಪಕರಣಗಳ ಸ್ಫೋಟ ವಿಶ್ವದಾದ್ಯಂತ ಎಚ್ಚರಿಕೆ ಸಂದೇಶ ರವಾನಿಸಿದೆ. ನಾವು ಬಳಸುವ ಎಲೆಕ್ಟ್ರಾನಿಕ್ ಡಿವೈಸ್‌, ಅದರಲ್ಲೂ ವಿಶೇಷವಾಗಿ ಮೊಬೈಲ್‌ ಫೋನ್‌ನಂತಹ ಸಂವಹನ ಸಾಧನಗಳು ಎಷ್ಟು ಸೇಫ್ ಎಂಬ ಪ್ರಶ್ನೆ ಹುಟ್ಟುಹಾಕಿದೆ? ಒಂದು ಮಿಸೈಲ್‌ ಸ್ಫೋಟಗೊಳಿಸಿದಾಗ ಆಗುವ ಹಾನಿಗಿಂತ ಸ್ಮಾರ್ಟ್‌ಫೋನ್‌ನಿಂದ ಆಗುವ ಹಾನಿಯೇ ಹೆಚ್ಚಿರುತ್ತದೆ. ಅದಕ್ಕಾಗಿಯೇ ಈ ಯುಗವನ್ನು ʻಇನ್‌ಫರ್ಮೇಶನ್‌ ಏಜ್‌ʼ (Information Age) ಎಂದು ಕರೆದಿದ್ದಾರೆ.

    ಪೇಜರ್‌ ಸ್ಫೋಟ ಸಂಭವಿಸಿದ ಬಳಿಕ ನಮ್ಮ ಸ್ಮಾರ್ಟ್‌ಫೋನ್‌ಗಳನ್ನು ಹ್ಯಾಕ್‌ (Smart Phone Hacking) ಮಾಡಿ ಸ್ಫೋಟಿಸಬಹುದು ಎಂಬ ವದಂತಿಗಳು ಎದ್ದಿವೆ. ಹ್ಯಾಕ್ ಮಾಡಿ ಸ್ಫೋಟಿಸಲು ಸಾಧ್ಯವೇ? ನಮ್ಮ ಶತ್ರುರಾಷ್ಟ್ರಗಳು ಹೀಗೆ ಮಾಡಿದರೆ ನಮ್ಮ ಗತಿಯೇನು? ಎಂಬ ಚರ್ಚೆಗಳು ಹುಟ್ಟಿಕೊಂಡಿವೆ. ಈ ಬಗ್ಗೆ ತಿಳಿಯುವ ಕುತೂಹಲ ನಿಮಗಿದ್ದರೆ ಮುಂದೆ ಓದಿ…..

    ಸದ್ಯಕ್ಕಿರುವ ತಂತ್ರಜ್ಞಾನದಲ್ಲಿ ನಮ್ಮ ಸ್ಮಾರ್ಟ್‌ಫೋನ್‌ಗಳನ್ನು ಹ್ಯಾಕ್‌ ಮಾಡಲು ಸಾಧ್ಯವಿಲ್ಲ ಎಂದು ಕೆಲವರ ವಾದ, ಆದ್ರೆ ಕ್ಷಣಕ್ಕೊಮ್ಮೆ ಕಸದಂತೆ ಬರುವ ಲಿಂಕ್‌ಗಳನ್ನು ಕ್ಲಿಕ್‌ ಮಾಡಿ ಹಣ ಕಳೆದುಕೊಂಡವರನ್ನು ನೋಡಿದಾಗ ಹ್ಯಾಕಿಂಗ್‌ ಇದೇ ಎಂಬ ಅನುಭವವೂ ಆಗುತ್ತದೆ. ಹಾಗಾಗಿಯೇ ನಾವು ಬಳಸುತ್ತಿರುವ ಸ್ಮಾರ್ಟ್ ಫೋನ್‌ಗಳು ಹಾಗೂ ಅವುಗಳನ್ನು ಬಳಸುವ ನಾವುಗಳು ಸಹ ಮುಂದೆ ಒಂದು ದಿನ ನಮ್ಮ ಶತ್ರು ರಾಷ್ಟ್ರದ ತಂತ್ರಜ್ಞರ ವಿಕೃತಿಗೆ ಬಲಿಯಾಗಲಿದ್ದೇವೆಯೇ ಎಂಬಿತ್ಯಾದಿ ಆತಂಕಗಳು ಮೂಡಿದೆ. ಇದಕ್ಕೆ ವಿಜ್ಞಾನಿಗಳು, ತಂತ್ರಜ್ಞರ ವಾದ ಏನಿದೆ? ಎಂಬುದನ್ನು ಮುಂದೆ ನೋಡಿ…

    ಸಾಮಾನ್ಯವಾಗಿ ಪೇಜರ್‌ಗಳಲ್ಲಿ ಬಳಕೆಯಾಗುವುದು ಲೀಥಿಯಂ ಅಯಾನ್ ಬ್ಯಾಟರಿಗಳು (Lithium Ion Battery), ಕಡಿಮೆ ಅವಧಿಯಲ್ಲಿ ಬೇಗನೇ ಚಾರ್ಜ್ ಆಗುವಂಥವು. ಹೆಚ್ಚು ಕಾಲ ಚಾರ್ಚ್ ಅನ್ನು ಹಿಡಿದಿಟ್ಟುಕೊಳ್ಳುವಂಥ ಸಾಮರ್ಥ್ಯವಿರುವ ಈ ಬ್ಯಾಟರಿಗಳನ್ನು ಪೇಜ‌ರ್‌ಗಳಲ್ಲಿ ಮಾತ್ರವಲ್ಲ ಇತ್ತೀಚಿನ ವರ್ಷಗಳಲ್ಲಿ ಬಂದಿರುವ ಎಲ್ಲಾ ಬ್ಯಾಟರಿ ಆಧಾರಿತ ಎಲೆಕ್ಟ್ರಾನಿಕ್ ಉಪಕರಣಗಳಲ್ಲಿ ಬಳಸಲಾಗುತ್ತಿದೆ. ಬ್ಯಾಟರಿಗಳ ಇತಿಹಾಸದಲ್ಲೇ ಇವು ಈಗ ಅತ್ಯಂತ ಸುಧಾರಿತ ಬ್ಯಾಟರಿಗಳು. ಇವೇ ಬ್ಯಾಟರಿಗಳು ನಮ್ಮ ಸ್ಮಾರ್ಟ್ ಫೋನಿನಲ್ಲೂ ಇವೆ. ಪೇಜರ್‌ಗಳಿಗಿಂತ ಸ್ಮಾರ್ಟ್‌ಫೋನ್‌ಗಳು ಹೆಚ್ಚು ಸಂಖ್ಯೆಯಲ್ಲಿ ಬಳಕೆಯಲ್ಲಿವೆ ಹಾಗೂ ಅವು ರೇಡಿಯೋ ತರಂಗಗಳನ್ನು ಮೀರಿದ ಮೊಬೈಲ್ ನೆಟ್‌ವರ್ಕ್‌ ತರಂಗಗಳನ್ನು ಬಳಸುವುದರಿಂದ ಅವು ಹೆಚ್ಚು ಸಕ್ರಿಯವಾಗಬಲ್ಲದು. ಆದರೆ, ಇದಕ್ಕೂ ಹ್ಯಾಕರ್‌ಗಳ ಕಾಟ ಈಗಾಗಲೇ ಆರಂಭವಾಗಿದೆ. ಆದರೆ, ಆ ಹ್ಯಾಕ‌ರ್‌ಗಳು ಕೇವಲ ನಿಮ್ಮ ಮಾಹಿತಿ ಕದಿಯಲು (ಪೆಗಾಸಸ್ ಹಗರಣ) ಮತ್ತು ಹಣ ಕದಿಯಲು ಬಳಸುತ್ತಿದ್ದಾರೆ. ಕೆಲವು ದೇಶಗಳಲ್ಲಿ ಮೊಬೈಲ್ ಫೋನ್ ನಲ್ಲಿರುವ ಕ್ಯಾಮೆರಾಗಳನ್ನೇ ಸಿಸಿಟಿವಿ ಕ್ಯಾಮೆರಾಗಳಂತೆ ಅನ್ಯ ದೇಶದ ಹ್ಯಾಕ‌ರ್ ಗಳು ಬಳಸಿದ್ದೂ ಉಂಟು. 2018ರಲ್ಲಿ ಭಾರೀ ಸದ್ದು ಮಾಡಿದ್ದ ʻಇರುಂಬುತಿರೈʼ ತಮಿಳು ಚಿತ್ರ ಇದಕ್ಕೆ ಕನ್ನಡಿ ಹಿಡಿದಿತ್ತು.

    ಹ್ಯಾಕರ್‌ಗಳ ವಿಚಾರ ಪಕ್ಕಕ್ಕಿಟ್ಟು ಯೋಚಿಸಿದರೂ ಮೊಬೈಲ್ ಫೋನ್‌ಗಳು ಸಹಜ ಬಳಕೆಯಲ್ಲಿದ್ದಾಗಲೇ ಹೀಟ್ ಆಗಿ ಸ್ಫೋಟಗೊಂಡಿರುವ ಉದಾಹರಣೆಗಳೂ ಇವೆ. ಈಗ ನಮ್ಮ ಮುಂದಿನ ಪ್ರಶ್ನೆಯೇನೆಂದರೆ, ವೈರಸ್ ಮೂಲಕ ನಮ್ಮ ಮೊಬೈಲ್ ಸ್ಫೋಟಗೊಳಿಸಲು ಸಾಧ್ಯವೇ ಎಂಬುದು. ಇದಕ್ಕೆ ಉತ್ತರ ಹೌದು, ಈಗಲ್ಲದಿದ್ದರೂ ಮುಂದೊಂದು ದಿನ ಅದು ಸಾಧ್ಯವಾಗಬಹುದು ಎನ್ನುತ್ತಾರೆ ಕೆಲವರು.

    ಜ್ಯೂಸ್‌-ಜಾಕಿಂಗ್‌ ಅಂದ್ರೆ ಏನು?

    ಕೆಲ ದಿನಗಳ ತಿಂಗಳುಗಳ ಹಿಂದೆ ಭಾರತ ಸರ್ಕಾರ ಸಾರ್ವಜನಿಕರ ಡೇಟಾ ಕದಿಯುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿತ್ತು. ಜ್ಯೂಸ್‌ ಜಾಕಿಂಗ್‌ ದಂಧೆ ಹುಟ್ಟಿಕೊಡ್ಡಿಂದು ಅದರಿಂದ ಪಾರಾಗಲು ಕೆಲವು ಮಾರ್ಗಸೂಚಿಗಳನ್ನು ಪ್ರಕಟಿಸಿತ್ತು. ಜ್ಯೂಸ್‌ ಜಾಕಿಂಗ್‌ ಅಂದರೆ ಇದು ಸೈಬರ್‌ ದಾಳಿಯ ಒಂದು ತಂತ್ರ. ವೈರಸ್‌ ಇರುವ ಯುಎಸ್‌ಬಿ ಸ್ಟೇಷನ್‌ಗಳಲ್ಲಿ ಚಾರ್ಜಿಂಗ್‌ ಉಪಕರಣ ಬಳಸುವುದರಿಂದ, ಬಳಕೆದಾರರು ʻಜ್ಯೂಸ್‌-ಜಾಂಕಿಂಗ್‌ʼ ಎನ್ನುವ ಸೈಬರ್‌ ದಾಳಿಗೆ ತುತ್ತಾಗುವ ಸಾಧ್ಯತೆ ಇದೆ. ಸೈಬರ್‌ ಖದೀಮರು ಬಳಕೆದಾರರ ದತ್ತಾಂಶಗಳನ್ನು (ಡೇಟಾ) ಕದಿಯಲು ಅಥವಾ ತಮ್ಮ ಉಪಕರಣಗಳಿಗೆ ಸಂಪರ್ಕಿಸಿರುವ ಮಾಲ್‌ವೇರ್‌ಗಳನ್ನು (ವೈರಸ್‌) ಬಳಕೆದಾರರ ಸಾಧನಗಳಲ್ಲಿ ಇನ್‌ಸ್ಟಾಲ್‌ ಮಾಡಲು ಈ ಚಾರ್ಜಿಂಗ್‌ ಸ್ಟೇಷನ್‌ಗಳನ್ನು ಬಳಸುತ್ತಾರೆ. ಈ ಬಗ್ಗೆ ಬಳಕೆದಾರರಿಗೆ ಸಣ್ಣ ಅನುಮಾನವೂ ಬಾರದಂತೆ ನೋಡಿಕೊಳ್ಳುತ್ತಾರೆ. ಈ ರೀತಿ ಸ್ಟೇಷನ್‌ಗಳಲ್ಲಿ ಮೊಬೈಲ್‌ಗಳನ್ನು ಚಾರ್ಜ್‌ಗೆ ಹಾಕಿದಾಗ ಸೈಬರ್‌ ಕಳ್ಳರು ಮೊಬೈಲ್‌ಗಳಿಂದ ಸುಲಭವಾಗಿ ಡೇಟಾಗಳನ್ನ ಎಗರಿಸುತ್ತಾರೆ. ಅಥವಾ ಸಂಪರ್ಕಿತ ಉಪಕರಣಗಳಲ್ಲಿ ಮಾಲ್‌ವೇರ್‌ ಅಥವಾ ransomware ಅನುಷ್ಟಾನಗೊಳಿಸುತ್ತಾರೆ. ಇದರಿಂದ ನಿಮ್ಮ ಪಾಸ್‌ವರ್ಡ್‌ ಲಾಕ್‌ ಓಪನ್‌ ಮಾಡಬಹುದು. ಬಳಿಕ ಡೇಟಾಗಳನ್ನ ಅಪಾಯಕಾರಿ ಕೃತ್ಯಗಳಿಗೆ ಬಳಸುವ ಸಾಧ್ಯತೆಗಳೂ ಇರುತ್ತವೆ ಎಂದೂ ಸಹ ಹೇಳಲಾಗಿದೆ. ಈ ಬಗ್ಗೆ ಸರ್ಕಾರ ಎಚ್ಚರಿಕೆ ನೀಡಿತ್ತು. ಅನಗತ್ಯ ವೈರಸ್‌ ಇನ್‌ಸ್ಟಾಲ್‌ ಮಾಡುವ ಮೂಲಕ ಬ್ಯಾಟರಿ ಓವರ್‌ ಹೀಟ್‌ ಆದ್ರೆ ಮಾತ್ರ ಸ್ಫೋಟಿಸಬಹುದೇ ಹೊರತು, ಸ್ಫೋಟಕವನ್ನು ಬಳಸಿ ಮಾಡಲು ಸಾಧ್ಯವಿಲ್ಲ ಎಂದು ವರದಿಗಳು ಹೇಳಿವೆ.

    ಸುರಕ್ಷಿತವಾಗುವುದು ಹೇಗೆ?

    * ಎಲೆಕ್ಟ್ರಿಕಲ್ ವಾಲ್ ಔಟ್‌ಲೆಟ್‌ಗಳಿಗೆ (ಗೋಡೆಗಳಿಗೆ ಅಳವಡಿಸಿದ ಪ್ಲಗ್‌ ಪಾಯಿಂಟ್‌) ಗಳಿಂದ ಚಾರ್ಜ್‌ ಮಾಡುವುದಕ್ಕೆ ಆದ್ಯತೆ ನೀಡಿ.
    * ಇಲ್ಲದಿದ್ದರೆ ವೈಯಕ್ತಿಕ ಕೇಬಲ್‌ ಅಥವಾ ಪವರ್‌ ಬ್ಯಾಂಕ್‌ಗಳನ್ನು ಜೊತೆಯಲ್ಲೇ ಕೊಂಡು ಹೋಗಿ.
    * ನಿಮ್ಮ ಮೊಬೈಲ್‌ ಅನ್ನು ಲಾಕ್‌ ಮಾಡಿ ಮತ್ತು ಅಪರಿಚಿತ ಸಾಧನಗಳೊಂದಿಗೆ ಪೇರಿಂಗ್‌ ಮಾಡಲಾಗದಂತೆ ಆಯ್ಕೆಯಲ್ಲಿ ಡಿಸೆಬಲ್‌ ಮಾಡಿ
    * ಚಾರ್ಜ್‌ ಮಾಡುವ ಸಂದರ್ಭದಲ್ಲಿ ನಿಮ್ಮ ಮೊಬೈಲ್‌ ಸ್ವಿಚ್‌ ಆಫ್‌ ಆಗಿರುವಂತೆ ನೋಡಿಕೊಳ್ಳಿ.
    * ಒಂದು ವೇಳೆ ಸೈಬರ್‌ ವಂಚನೆಯ ಪ್ರಕರಣಗಳು ಬೆಳಕಿಗೆ ಬಂದಾಗ ಅಂತಗ ಘಟನೆಗಳನ್ನು www.cybercrime.gov.in ವೆಬ್‌ಸೈಟ್‌ ಮೂಲಕ ದೂರು ನೀಡಿ, ಅಥವಾ ಸಹಾಯವಾಣಿ 1930ಗೆ ಕರೆ ಮಾಡಿ.

    ಕುತಂತ್ರಾಂಶಗಳಿವೆ ಎಚ್ಚರಿಕೆ

    ನಿಮ್ಮ ಕಂಪ್ಯೂಟರ್ ಹಾಗೂ ಮೊಬೈಲಿನಲ್ಲಿ ಉತ್ತಮ ಆಂಟಿವೈರಸ್ ಹಾಕಿಕೊಳ್ಳಿ. ನಮ್ಮ ಕೆಲಸದಲ್ಲಿ ಸಹಾಯಮಾಡಲು ತಂತ್ರಾಂಶಗಳು (ಸಾಫ್ಟ್‌ವೇರ್) ಇರುವ ಹಾಗೆ ನಮಗೆ ತೊಂದರೆ ಕೊಡುವ ವೈರಸ್, ವರ್ಮ್ ಮುಂತಾದ ಕುತಂತ್ರಾಂಶಗಳು (ಮಾಲ್‌ವೇರ್) ಕೂಡ ಇವೆ. ಇವುಗಳಿಂದ ಪಾರಾಗಲು ನಿಮ್ಮ ಕಂಪ್ಯೂಟರ್ ಹಾಗೂ ಮೊಬೈಲಿನಲ್ಲಿ ಉತ್ತಮ ಆಂಟಿವೈರಸ್ ಹಾಕಿಕೊಳ್ಳಿ. ಯಾರೋ ಹೇಳಿದರೆಂದು ಸಿಕ್ಕಸಿಕ್ಕ ಆಪ್‌ಗಳನ್ನು, ತಂತ್ರಾಂಶಗಳನ್ನು ಡೌನ್‌ಲೋಡ್ ಮಾಡಬೇಡಿ. ಹಾಗೆಯೇ ಅಪರಿಚಿತರಿಂದ ಬರುವ ಮೆಸೇಜ್ ಅಥವಾ ಇಮೇಲ್‌ನಲ್ಲಿರುವ ಕೊಂಡಿಗಳ ಮೇಲೂ ಕ್ಲಿಕ್ ಮಾಡಬೇಡಿ, ಅದರಿಂದಲೂ ವೈರಸ್ ಬರಬಹುದು!

    ಪಬ್ಲಿಕ್‌ ವೈಫೈ ಬಳಸುವ ಮುನ್ನ ಎಚ್ಚರ!

    ಸಾರ್ವಜನಿಕ ಸ್ಥಳಗಳಲ್ಲಿ ವೈ-ಫೈ ಸೌಲಭ್ಯ ಒದಗಿಸುವ ಅಭ್ಯಾಸ ಇದೀಗ ವ್ಯಾಪಕವಾಗುತ್ತಿದೆ. ಇಂತಹ ಸಂಪರ್ಕಗಳನ್ನು ಯಾರುಬೇಕಾದರೂ ಉಪಯೋಗಿಸಬಹುದಾದ್ದರಿಂದ ಅಲ್ಲಿ ಕುತಂತ್ರಿಗಳಿರುವ ಸಾಧ್ಯತೆ ಖಂಡಿತಾ ಇರುತ್ತದೆ. ಹಾಗಾಗಿ ಅಲ್ಲಿ ಹಣಕಾಸು ವ್ಯವಹಾರ, ಖಾಸಗಿ ಮಾಹಿತಿಯ ರವಾನೆ ಮುಂತಾದವನ್ನು ಮಾಡದಿರುವುದು ಒಳ್ಳೆಯದು. ಇನ್ನು ನಮ್ಮ ಮನೆಗಳಲ್ಲಿ ವೈ-ಫೈ ಸಂಪರ್ಕ ಇರುತ್ತದಲ್ಲ, ಅದನ್ನು ಸದೃಢ ಪಾಸ್‌ವರ್ಡ್ ಮೂಲಕ ಸುರಕ್ಷಿತಗೊಳಿಸಿಕೊಳ್ಳುವುದು ಅತ್ಯಗತ್ಯ. ಹಾಗೆಯೇ ಬೇರೆಯವರಿಂದ ಅದರ ದುರುಪಯೋಗ ಆಗದಂತೆ ನೋಡಿಕೊಳ್ಳಲು ನಮ್ಮ ಪಾಸ್‌ವರ್ಡ್ ಅನ್ನು ಜೋಪಾನ ಮಾಡಿಕೊಳ್ಳುವುದೂ ಅನಿವಾರ್ಯ.

  • ಇವಿಎಂ ಹ್ಯಾಕ್ ಮಾಡಬಹುದು – ಭಾರತದಲ್ಲಿ ಕಿಚ್ಚು ಹೊತ್ತಿಸಿದ ಮಸ್ಕ್!

    ಇವಿಎಂ ಹ್ಯಾಕ್ ಮಾಡಬಹುದು – ಭಾರತದಲ್ಲಿ ಕಿಚ್ಚು ಹೊತ್ತಿಸಿದ ಮಸ್ಕ್!

    – ನಿಮಗೆ ಟ್ಯೂಷನ್ ತೆಗೆದುಕೊಳ್ತೇವೆ ಅಂತ ಬಿಜೆಪಿ ತಿರುಗೇಟು

    ನವದೆಹಲಿ: ಚುನಾವಣೆಗಳಲ್ಲಿ ಬಳಸುವ ಇವಿಎಂ ಯಂತ್ರಗಳ ಬಗ್ಗೆ ಟೆಸ್ಲಾ ಕಂಪನಿ ಸಿಇಒ ಎಲಾನ್ ಮಸ್ಕ್ (Elon Musk) ಅನುಮಾನ ವ್ಯಕ್ತಪಡಿಸಿದ್ದಾರೆ. ಹ್ಯಾಕರ್‌ಗಳು ಕೃತಕ ಬುದ್ಧಿಮತ್ತೆ ಬಳಸಿಕೊಂಡು ಇವಿಎಂಗಳನ್ನು ಹ್ಯಾಕ್ (Hacking) ಮಾಡಬಹುದು. ಹಾಗಾಗಿ, ಇವಿಎಂಗಳನ್ನು ಚುನಾವಣೆಯಲ್ಲಿ ಬಳಸಬಾರದು ಎಂದು ಮಸ್ಕ್ ಹೇಳಿದ್ದಾರೆ.

    ಮಸ್ಕ್ ಹೇಳಿಕೆಗೆ ಬಿಜೆಪಿ ನಾಯಕ, ಕೇಂದ್ರದ ಮಾಜಿ ಸಚಿವ ರಾಜೀವ್ ಚಂದ್ರಶೇಖರ್ (Rajeev Chandrasekhar) ತಿರುಗೇಟು ನೀಡಿದ್ದಾರೆ. ಸುರಕ್ಷಿತವಾಗಿರುವ ಡಿಜಿಟಲ್ ಹಾರ್ಡ್ವೇರ್ ಅನ್ನು ಯಾರೂ ತಯಾರಿಸಲು ಆಗುವುದಿಲ್ಲ. ಇವಿಎಂಗೆ (EVM) ಇಂಟರ್‌ನೆಟ್, ಬ್ಲೂಟೂತ್, ವೈಫೈ ಸಂಪರ್ಕ ಕೂಡ ಇಲ್ಲ. ಹ್ಯಾಕ್ ಮಾಡಲು ಆಗುವುದಿಲ್ಲ. ಭಾರತದಲ್ಲಿ ಇದು ಸಾಬೀತಾಗಿದೆ. ನಾವು ಈ ಕುರಿತು ಒಂದು ಟ್ಯುಟೋರಿಯಲ್ ತೆರೆಯೋಣ ಎಂದು ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಗುಜರಾತ್‌ ಗಲಭೆ, ಬಾಬ್ರಿ ಮಸೀದಿ ಧ್ವಂಸದ ಬಗ್ಗೆ ಶಾಲೆಗಳಲ್ಲಿ ಬೋಧಿಸುವ ಅಗತ್ಯವಿಲ್ಲ: NCERT ನಿರ್ದೇಶಕ

    ಮಸ್ಕ್ ಹೇಳಿಕೆಗೆ ದನಿಗೂಡಿಸಿದ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ (Rahul Gandhi), ಭಾರತದಲ್ಲಿನ ಇವಿಎಂಗಳು ಕಪ್ಪು ಪೆಟ್ಟಿಗೆಗಳಾಗಿವೆ. ಅವುಗಳನ್ನು ಪರಿಶೀಲಿಸಲು ಯಾರಿಗೂ ಅನುಮತಿಯಿಲ್ಲ ಅಂತ ಮುಂಬೈನಲ್ಲಿ 48 ಮತಗಳ ಅಂತರದಿಂದ ಸೋತ ಕಾಂಗ್ರೆಸ್‌ನ ಅಭ್ಯರ್ಥಿ ಉದಾಹರಣೆ ನೀಡಿದ್ದಾರೆ.

    ಸಮಾಜವಾದಿ ಪಕ್ಷ, ಉದ್ಧವ್ ಠಾಕ್ರೆ ಬಣದ ಶಿವಸೇನೆ, ಡಿಎಂಕೆ ಪಕ್ಷಗಳು ಕೂಡ ಮಸ್ಕ್ ಟ್ವೀಟ್ ಅನ್ನು ರೀಟ್ವೀಟ್ ಮಾಡಿವೆ. ಇವಿಎಂಗಳನ್ನು ತಿದ್ದುವ, ತಿರುಚುವ, ರಿಗ್ಗಿಂಗ್ ಮಾಡುವ ಸಾಧ್ಯತೆ ಇದೆ ಅಂತ ಕಳವಳ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ದಕ್ಷಿಣದ ರಾಜ್ಯಗಳ ಪೈಕಿ ಕರ್ನಾಟಕದಲ್ಲೇ ದರ ಕಡಿಮೆ – ತೈಲ ದರ ಏರಿಕೆಗೆ ಸಿಎಂ ಸಮರ್ಥನೆ!

  • ಹೆಚ್ಚುತ್ತಿದೆ ಸೈಬರ್ ಕ್ರೈಮ್, ಎಚ್ಚರಿಕೆ ಇರಲಿ – ಯಾವ ರೀತಿ ಅಪರಾಧ ಎಸಗುತ್ತಾರೆ?

    ಹೆಚ್ಚುತ್ತಿದೆ ಸೈಬರ್ ಕ್ರೈಮ್, ಎಚ್ಚರಿಕೆ ಇರಲಿ – ಯಾವ ರೀತಿ ಅಪರಾಧ ಎಸಗುತ್ತಾರೆ?

    ತಂತ್ರಜ್ಞಾನ ಕ್ಷೇತ್ರ ಮುಂದುವರಿದಂತೆ ಅದರಿಂದ ಅನುಕೂಲತೆಗಳು ಹುಟ್ಟಿಕೊಳ್ಳುತ್ತಿವೆ. ಎಲ್ಲಾ ವ್ಯವಹಾರಗಳೂ ಡಿಜಿಟಲೀಕರಣಗೊಳ್ಳುತ್ತಿರುವ ಈ ಸಮಯದಲ್ಲಿ ಕಿಡಿಗೇಡಿಗಳು ತಂತ್ರಜ್ಞಾನ ಕ್ಷೇತ್ರದಲ್ಲೂ ತಮ್ಮ ಕೈಚಳಕ ತೋರಿಸುತ್ತಿದ್ದಾರೆ. ಮನೆ ದರೋಡೆ, ಕಳ್ಳತನಕ್ಕಿಂತ ಹೆಚ್ಚಾಗಿ ಸೈಬರ್ ಮೂಲಕವೇ ಈಗ ಹೆಚ್ಚಿನ ವಂಚನೆಗಳು ನಡೆಯುತ್ತಿದೆ. ಅಲ್ಲದೇ ಇನ್ನೂ ಅನೇಕ ರೀತಿಯ ಅಪರಾಧಗಳು ಇಂಟರ್‌ನೆಟ್ (Internet) ಮುಖಾಂತರವೇ ನಡೆಯುತ್ತಿದ್ದು ಮುಂದಿನ ದಿನಗಳಲ್ಲಿ ಇದು ಹೆಚ್ಚಾಗುವ ಆತಂಕ ಕೂಡ ಇದೆ.

    ಕಳೆದ 2021-2022 ರ ಅವಧಿಯಲ್ಲಿ ಭಾರತದಲ್ಲಿ 8,84,863 ಸೈಬರ್ ಕ್ರೈಮ್‌ (Cybercrime )ಪ್ರಕರಣಗಳು ನಡೆದಿದ್ದು, 1,376 ಮಕ್ಕಳ ವಿರುದ್ಧದ ಸೈಬರ್ ಕ್ರೈಮ್ ಪ್ರಕರಣಗಳು ನಡೆದಿವೆ. 2023ರಲ್ಲಿ ಪ್ರತಿ ಗಂಟೆಗೆ 97 ಸೈಬರ್ ಅಪರಾಧಗಳು ಜರಗುತ್ತಿವೆ. ಅಂದರೆ ದಿನಕ್ಕೆ 2,328 ಪ್ರಕರಣಗಳು ನಡೆಯುತ್ತಿದ್ದು, ಅದರಲ್ಲಿ ಕೋಲ್ಕತ್ತಾ, ತೆಲಂಗಾಣ ಹಾಗೂ ಕರ್ನಾಟಕ ಮುಂಚೂಣಿಯಲ್ಲಿವೆ. ಇದನ್ನೂ ಓದಿ: ಹಿರಿಯ ವಕೀಲ ಮುಕುಲ್ ರೋಹಟಗಿ ಭೇಟಿಯಾದ ಡಿಸಿಎಂ

    ರಾಜ್ಯದಲ್ಲಿ ಸೈಬರ್ ಕ್ರೈಮ್‍ಗಳನ್ನು ತಡೆಗಟ್ಟುವ ಉದ್ದೇಶದಿಂದ 2001ರಲ್ಲೇ ಬೆಂಗಳೂರಿನ ಸಿಐಡಿ ಕಚೇರಿಯಲ್ಲಿ ಸೈಬರ್ ಪೊಲೀಸ್ ಘಟಕವನ್ನು ಸ್ಥಾಪಿಸಲಾಗಿದೆ. ಅಲ್ಲದೇ ರಾಜ್ಯದ ಇತರ ಜಿಲ್ಲೆಗಳಲ್ಲೂ ಜನರಿಗೆ ಎದುರಾಗುವ ಸಮಸ್ಯೆಗಳನ್ನು ಅರಿತು ಜಿಲ್ಲಾ ಕೇಂದ್ರಗಳಲ್ಲೂ ಸೈಬರ್ ಪೊಲೀಸ್ ಘಟಕಗಳನ್ನು ಸ್ಥಾಪಿಸಲಾಗಿದೆ. ಅಲ್ಲದೇ ದೇಶಾದ್ಯಂತ ಸೈಬರ್ ಅಪರಾಧಗಳ ತಡೆಗೆ ಜಾಗೃತಿ ಮೂಡಿಸುವ ಕೆಲಸಗಳನ್ನು ಸರ್ಕಾರ ಮಾಡಿದೆ. ಈ ರೀತಿಯಾಗಿ ಸೈಬರ್ ಕ್ರೈಮ್ ತಡೆಯಲು ಕ್ರಮ ಕೈಗೊಂಡರು ಸಹ ಸಾರ್ವಜನಿಕರು ತಿಳುವಳಿಕೆಯ ಕೊರತೆಯಿಂದ ಸೈಬರ್ ಸುಲಿಗೆಗೆ ಒಳಗಾಗುತ್ತಿದ್ದಾರೆ.

    ನಕಲಿ ಸಂದೇಶಗಳು
    ವ್ಯಕ್ತಿಗೆ ಇ-ಮೇಲ್ ಅಥವಾ ಎಸ್‍ಎಂಎಸ್ ಕಳುಹಿಸಿ ನಿಮಗೆ ನಮ್ಮ ಸಂಸ್ಥೆಯಿಂದ ಉಡುಗೊರೆ ನೀಡುತ್ತೇವೆ. ಅದರ ಕೊರಿಯರ್ ವೆಚ್ಚವನ್ನು ನೀವೇ ನೀಡಬೇಕು ಎಂದು ಹಣ ವಸೂಲಿ ಮಾಡುವುದು. ಆನ್‍ಲೈನ್ ಮೂಲಕ ಹಣ ಪಾವತಿಸಿದ ಮೇಲೆ ಖಾತೆಗೆ ಕನ್ನ ಹಾಕುವುದು. ಇಂತಹ ಜಾಲದಲ್ಲಿ ಅನೇಕ ಅಮಾಯಕರು ಸಿಕ್ಕಿ ಹಣ ಕಳೆದುಕೊಳ್ಳುತ್ತಿದ್ದಾರೆ. ಕೆಲವು ಪ್ರಕರಣಗಳಲ್ಲಿ ಆರೋಪಿಗಳು ಪತ್ತೆಯಾದರೆ, ಇನ್ನೂ ಕೆಲವು ಪ್ರಕರಣಗಳಲ್ಲಿ ಆರೋಪಿಗಳ ಪತ್ತೆ ಕಠಿಣವಾಗಿರುತ್ತದೆ.

    ಸಾಲದ ವಂಚನೆ
    ಸಾಲದ ಬಗ್ಗೆ ಹುಡುಕಾಟದಲ್ಲಿರುವವರನ್ನು ಕಡಿಮೆ ಬಡ್ಡಿ ದರದಲ್ಲಿ ಭಾರೀ ಮೊತ್ತದ ಸಾಲ ಕೊಡಿಸುವುದಾಗಿ ವಂಚಕರು ಆಮಿಷವೊಡ್ಡುತ್ತಾರೆ. ಬಳಿಕ ಮೊಬೈಲ್ ಅಥವಾ ಇಮೇಲ್‍ಗಳ ಮೂಲಕ ಬ್ಯಾಂಕ್ ಹಾಗೂ ದಾಖಲೆಗಳ ವಿವರ ಪಡೆದು ವಂಚಿಸುತ್ತಾರೆ. ಇಲ್ಲವೇ ಒಟಿಪಿ ಕಳುಹಿಸಿ ತಿಳಿಸುವಂತೆ ಹೇಳಿ ಈ ಮೂಲಕ ಈಗಾಗಲೇ ಬ್ಯಾಂಕ್‍ನಲ್ಲಿ ಇರುವ ಹಣವನ್ನು ದೋಚುತ್ತಾರೆ.

    ಒಟಿಪಿ ವಂಚನೆಗಳು
    ವಂಚಕರು ಕರೆ ಮಾಡಿ ಬ್ಯಾಂಕ್‍ನಿಂದ ಕರೆ ಮಾಡುತ್ತಿರುವುದಾಗಿ ತಿಳಿಸಿ, ಈ ವೇಳೆ ಮೊಬೈಲ್‍ಗೆ ಬಂದಿರುವ ಒಟಿಪಿಯನ್ನು (OTP) ತಿಳಿಸುವಂತೆ ಸೂಚಿಸುತ್ತಾರೆ. ಈ ವೇಳೆ ಒಟಿಪಿ ಹಂಚಿಕೊಂಡರೆ ಖಾತೆಯಲ್ಲಿರುವ ಹಣ ಕ್ಷಣಾರ್ಧದಲ್ಲಿ ವಂಚಕರ ಜೇಬು ಸೇರಲಿದೆ. ಇಂಥ ಕರೆಗಳು ಬಂದಾಗ ಯಾರಿಗೂ ಒಟಿಪಿ, ಎಟಿಎಂ ಪಿನ್ ನಂಬರ್‍ಗಳನ್ನು ತಿಳಿಸಬಾರದು. ಯಾವುದೇ ಬ್ಯಾಂಕ್ ತನ್ನ ಖಾತೆದಾರರಿಗೆ ಸಿವಿವಿ, ಒಟಿಪಿ, ಎಟಿಎಂ ಪಿನ್ ಇವ್ಯಾವುದನ್ನೂ ಕೇಳುವುದಿಲ್ಲ. ಆ ರೀತಿ ಕೇಳಿ ಕರೆ ಬಂದರೆ ಅದು ವಂಚನೆಯ ಕರೆ ಎಂದು ತಿಳಿಯಬೇಕು.

    ಆನ್‍ಲೈನ್ ಜಾಹಿರಾತುಗಳ ವಂಚನೆ
    ಇದರಲ್ಲಿ ವಂಚಕರು ಅಸ್ತಿತ್ವದಲ್ಲೇ ಇರದ ವಾಹನ, ಆಸ್ತಿ ಮಾರಾಟಕ್ಕಿದೆ ಎಂದು ವೆಬ್‍ಸೈಟ್‍ನಲ್ಲಿ ಪ್ರಕಟಿಸಿ ಗ್ರಾಹಕರಿಂದ ಹಣ ಪಡೆದು ವಂಚನೆ ನಡೆಸುತ್ತಾರೆ. ಅಲ್ಲದೇ ಜಾಹಿರಾತನ್ನು ವಿಶ್ವಾಸಾರ್ಹ ಎಂದು ನಂಬಿಸಿ ಹಣ ಕೂಡ ಪಡೆಯುವಲ್ಲಿ ಯಶಸ್ವಿಯಾಗುತ್ತಾರೆ. ಬಳಿಕ ನಾಪತ್ತೆಯಾಗುತ್ತಾರೆ. ಇದಾದ ಮೇಲೆ ಯಾವ ಪ್ರತಿಕ್ರಿಯೆಯೂ ಇಲ್ಲದ ಬಳಿಕ ಗ್ರಾಹಕನಿಗೆ ವಂಚನೆಗೊಳಗಾಗಿರುವುದು ತಿಳಿಯುತ್ತದೆ.

    ಕ್ರಿಪ್ಟೋ ಕರೆನ್ಸಿ ವಂಚನೆ
    ಇದರಲ್ಲಿ ಬಿಟ್ ಕಾಯಿನ್ ರೂಪದಲ್ಲಿ ಹಣ ದ್ವಿಗುಣಗೊಳಿಸುವುದಾಗಿ ಆಮಿಷವೊಡ್ಡಲಾಗುತ್ತದೆ. ಭಾರತೀಯ ರಿಸರ್ವ್ ಬ್ಯಾಂಕ್ ಯಾರಿಗೂ ಯಾವುದೇ ಸಂಸ್ಥೆಗೂ ವರ್ಚುವಲ್ ಕರೆನ್ಸಿಯ ರೂಪದಲ್ಲಿ ಹಣ ದ್ವಿಗುಣಗೊಳಿಸುವ ವ್ಯವಹಾರಕ್ಕೆ ಲೈಸೆನ್ಸ್ ನೀಡಿಲ್ಲ.

    ಹನಿಟ್ರ್ಯಾಪ್/ ಬ್ಲಾಕ್‍ಮೇಲ್ ಪ್ರಕರಣ
    ಇತ್ತೀಚೆಗೆ ನಗ್ನ ಚಿತ್ರಗಳನ್ನು ಬಳಸಿ ಕಿಡಿಗೇಡಿಗಳು ವ್ಯುಕ್ತಿಗಳನ್ನು ಬ್ಲಾಕ್‍ಮೇಲ್ ಮಾಡಿ ವಂಚಿಸುವ ಹೆಚ್ಚಿನ ಪ್ರಕರಣಗಳು ನಡೆಯುತ್ತಿವೆ. ಡೇಟಿಂಗ್ ಆಪ್‍ಗಳ ಮೂಲಕ ಮಹಿಳೆಯರಿಂದ ವ್ಯಕ್ತಿಗಳಿಗೆ ವಿಡಿಯೋ ಕರೆ ಮಾಡಿ ಅದನ್ನು ಬೇಕಾದಂತೆ ತಿರುಚಿ ಹಣಕ್ಕೆ ಬೇಡಿಕೆ ಇಡುವ ಎಷ್ಟೋ ಪ್ರಕರಣಗಳು ವರದಿಯಾಗಿವೆ.

    ಹ್ಯಾಕಿಂಗ್
    ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳನ್ನು ಹ್ಯಾಕ್ (Hacking) ಮಾಡುವ ಪ್ರಕರಣಗಳು ಹೆಚ್ಚಾಗುತ್ತಿವೆ. ಹ್ಯಾಕ್ ಮಾಡಿ ಕಿಡಿಗೇಡಿಗಳು ತಮ್ಮ ದುರುದ್ದೇಶಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಆ ಸಾಮಾಜಿಕ ಜಾಲತಾಣದ ಸಂಪರ್ಕದಲ್ಲಿರುವವರಿಂದ ಹಣಕ್ಕೆ ಬೇಡಿಕೆ ಇಡುವುದು, ಅಲ್ಲದೇ ನಿಗದಿತ ದುರುದ್ದೇಶಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅಲ್ಲದೇ ನಕಲಿ ಖಾತೆಗಳನ್ನು ಸೃಷ್ಟಿಸಿ ಕಿಡಿಗೇಡಿಗಳು ಇದೇ ರೀತಿಯಾಗಿ ಬಳಕೆ ಮಾಡಿಕೊಳ್ಳುತ್ತಾರೆ.

    ಆನ್‍ಲೈನ್ ವಂಚನೆಯಾಗದಂತೆ ಸುರಕ್ಷಿತವಾಗಿ ಇಂಟರ್‌ನೆಟ್ ಬಳಕೆ ಮಾಡುವುದು ಈ ದಿನಗಳಲ್ಲಿ ಸವಾಲಾಗಿದೆ. ಆದರೂ ಸೂಕ್ತ ಮುನ್ನೆಚ್ಚರಿಕೆಯಿಂದಾಗಿ ಸೈಬರ್ ವಂಚನೆಯಿಂದ ಪಾರಾಗಲು ಅವಕಾಶವಿದೆ. ಇಂಟರ್‌ನೆಟ್ ಸಂಬಂಧಿತ ವ್ಯವಹಾರಗಳ ಪಾಸ್‍ವರ್ಡ್ ಯಾರಿಗೂ ನೀಡದಿರುವುದು, ಹಾಗೂ ಕ್ಲಿಷ್ಟಕರವಾದ ಪಾಸ್‍ವರ್ಡ್ ಇಟ್ಟುಕೊಳ್ಳುವುದು. ಸಾಮಾಜಿಕ ಜಾಲತಾಣಗಳಲ್ಲಿ ಅಪರಿಚಿತರೊಂದಿಗೆ ವ್ಯವಹರಿಸದಿರುವುದು, ಆಧಿಕೃತವಲ್ಲದ ಆಪ್‍ಗಳನ್ನು ಡೌನ್‍ಲೋಡ್ ಮಾಡದೇ ಇರುವುದು ಸೈಬರ್ ವಂಚನೆಗೆ ಒಳಗಾಗದಂತೆ ಇರುವ ಮಾರ್ಗಗಳು.

    ಇದಾಗಿಯೂ ವಂಚನೆಗೆ ಒಳಗಾದರೆ ಸೈಬರ್ ಕ್ರೈಮ್ ದೂರು ದಾಖಲಿಸಿ ಪರಿಹಾರ ಪಡೆಯಲು ಅವಕಾಶ ಇದೆ. ಆದರೆ ಪ್ರಪಂಚದ ಯಾವುದೋ ಮೂಲೆಯಲ್ಲಿಂದ ನಿಮಗೆ ಅನ್ಯಾಯವಾಗಿದ್ದರೆ ಅದಕ್ಕೆ ನ್ಯಾಯ ಒದಗಿಸಲು ಸಾಧ್ಯವೇ? ಇದರಿಂದ ಸೈಬರ್ ವಿಚಾರದಲ್ಲಿ ಜಾಗ್ರತೆ ವಹಿಸುವುದೊಂದೆ ಮೊದಲ ಪರಿಹಾರವಾಗಿ ಕಾಣುತ್ತದೆ.

    ಪಿಂಕ್ ವಾಟ್ಸಾಪ್ ಬಳಕೆ ಸೈಬರ್ ವಂಚನೆಗೆ ಆಹ್ವಾನ ಕೊಟ್ಟಂತೆ ಎಂದು ಆಂಡ್ರಾಯ್ಡ್ ಬಳಕೆದಾರರಿಗೆ ಮುಂಬೈ ಪೊಲೀಸರು ಇತ್ತೀಚೆಗೆ ಎಚ್ಚರಿಕೆ ನಿಡಿರುವುದನ್ನು ನಾವಿಲ್ಲಿ ಗಮನಿಸಬಹುದು. ಅಲ್ಲದೇ ಪ್ರಕರಣವೊಂದರ ತನಿಖೆ ವೇಳೆ ಫೇಸ್‍ಬುಕ್ ಖಾತೆಗಳನ್ನು ಹ್ಯಾಕ್ ಮಾಡಿ ಅವಹೇಳನಕಾರಿ ಮತ್ತು ನಿಂದನಾತ್ಮಕ ಬರಹಗಳನ್ನು ಬಿತ್ತರಿಸುವ ದೊಡ್ಡ ಜಾಲವೇ ಕೆಲಸ ಮಾಡುತ್ತಿರುವಂತಿದೆ ಎಂದು ಕರ್ನಾಟಕ ಹೈಕೋರ್ಟ್ ಶಂಕೆ ವ್ಯಕ್ತಪಡಿಸಿದ್ದು ಇಲ್ಲಿ ಗಮನಾರ್ಹ ವಿಚಾರವಾಗಿದೆ. ಇದನ್ನೂ ಓದಿ: ಅನ್ನಭಾಗ್ಯದ ದುಡ್ಡಿಗಾಗಿ ಬ್ಯಾಂಕ್ ಖಾತೆ ಜೊತೆ ಆಧಾರ್ ಲಿಂಕ್ ಕಡ್ಡಾಯ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹ್ಯಾಕಿಂಗ್‌ ಮಾಡಲು ಏಕಾಗ್ರತೆ ಬೇಕು, ಅದಕ್ಕಾಗಿ ಭಗವದ್ಗೀತೆ ಓದುತ್ತೇನೆ –  ಹ್ಯಾಕರ್‌ ಶ್ರೀಕಿ

    ಹ್ಯಾಕಿಂಗ್‌ ಮಾಡಲು ಏಕಾಗ್ರತೆ ಬೇಕು, ಅದಕ್ಕಾಗಿ ಭಗವದ್ಗೀತೆ ಓದುತ್ತೇನೆ – ಹ್ಯಾಕರ್‌ ಶ್ರೀಕಿ

    – ಭಗವದ್ಗೀತೆ ಪುಸ್ತಕದೊಂದಿಗೆ ಸಿಸಿಬಿ ಕಚೇರಿಗೆ ಆಗಮನ
    – ಮುಂದೆ ಚೀನಿ ವೆಬ್‌ಸೈಟ್‌ ಹ್ಯಾಕ್‌ ಮಾಡುತ್ತೇನೆ

    ಬೆಂಗಳೂರು: “ಹ್ಯಾಕಿಂಗ್‌ ಮಾಡಲು ಏಕಾಗ್ರತೆ ಬೇಕು. ಏಕಾಗ್ರತೆಗಾಗಿ ನಾನು ಭಗವದ್ಗೀತೆ ಓದುತ್ತೇನೆ. ಭಗವದ್ಗೀತೆಯಿಂದ ಮನಸ್ಸು ಏಕಾಗ್ರತೆಗೊಳ್ಳುತ್ತದೆ. ಬಳಿಕ ನಾನು ವೆಬ್‌ಸೈಟ್‌ಗಳನ್ನು ಹ್ಯಾಕ್‌ ಮಾಡುತ್ತೇನೆ” ಇದು ಡ್ರಗ್ಸ್‌ ಪ್ರಕರಣದಲ್ಲಿ ಬಂಧನಗೊಂಡಿರುವ ಅಂತಾರಾಷ್ಟ್ರೀಯ ಹ್ಯಾಕರ್‌ ಶ್ರೀಕೃಷ್ಣ ಪೊಲೀಸ್‌ ವಿಚಾರಣೆಯ ವೇಳೆ ತಿಳಿಸಿದ ತನ್ನ ಏಕಾಗ್ರತೆಯ ರಹಸ್ಯ.

    ನ.17 ರಂದು ಬೆಂಗಳೂರಿನ ಜಯನಗರದ ನಿವಾಸಿ ಶ್ರೀಕೃಷ್ಣ ಅಲಿಯಾಸ್ ಶ್ರೀಕಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ವಿಚಾರಣೆಯ ವೇಳೆ 25 ವರ್ಷದ ಶ್ರೀಕೃಷ್ಣ ಆಧ್ಯಾತ್ಮ ಮತ್ತು ಧ್ಯಾನದ ಬಗ್ಗೆ ಜಾಸ್ತಿ ಮಾತನಾಡಿದ್ದಾನೆ ಎಂಬ ವಿಚಾರ ಪೊಲೀಸ್‌ ಮೂಲಗಳಿಂದ ತಿಳಿದು ಬಂದಿದೆ.

    ಭಗವದ್ಗೀತೆ ಬೇಕೇಬೇಕು:
    ಸದ್ಯ ಪೊಲೀಸ್‌ ಕಸ್ಟಡಿಯಲ್ಲಿ ಇರುವ ಶ್ರೀಕೃಷ್ಣ ಠಾಣೆಯಲ್ಲೂ ಪ್ರತಿ ದಿನ ತಪ್ಪದೇ ಭಗವದ್ಗೀತೆಯನ್ನು ಓದುತ್ತಿದ್ದಾನೆ. ರಾತ್ರಿ ಭಗವದ್ಗೀತೆ ಪುಸ್ತಕ ಓದುವುದರ ಜೊತೆಗೆ ಇಂದು ಸಿಸಿಬಿ ಪೊಲೀಸರ ಕಚೇರಿಗೆ ವಿಚಾರಣೆಗೆ ಹಾಜರಾಗಲು ಕರೆ ತಂದಾಗಲೂ ಕೈಯಲ್ಲಿ ಭಗವದ್ಗೀತೆ ಪುಸ್ತಕವನ್ನು ಹಿಡಿದುಕೊಂಡೇ ಬಂದಿದ್ದ.

    ಭಗವದ್ಗೀತೆ ಪುಸ್ತಕವನ್ನು ಯಾಕೆ ಓದುತ್ತಿದ್ದಿ ಎಂದು ಪ್ರಶ್ನಿದ್ದಕ್ಕೆ, ಹ್ಯಾಕಿಂಗ್‌ ಮಾಡಲು ಮನಸ್ಸಿಗೆ ಏಕಾಗ್ರತೆ ಬೇಕು. ಭಗದ್ಗೀತೆ ಓದಿದ ಬಳಿಕ ಏಕಾಗ್ರತೆ ಸಿಕ್ಕಿ ನಾನು ವೆಬ್‌ಸೈಟ್‌ ಹ್ಯಾಕ್‌ ಮಾಡುತ್ತಿದ್ದೆ ಎಂದು ತಿಳಿಸಿದ್ದಾನೆ. ಭಗವದ್ಗೀತೆ ಅಲ್ಲದೇ ಸ್ವಾಮಿ ವಿವೇಕಾನಂದ, ಓಶೋ ಸೇರಿದಂತೆ ಆಧ್ಯಾತ್ಮ ಚಿಂತಕರ ಜೀವನ ಚರಿತ್ರೆಯ ಪುಸ್ತಕವನ್ನು ಶ್ರೀಕೃಷ್ಣ ಓದಿದ್ದಾನೆ.

    ಆಧ್ಯಾತ್ಮದ ಬಗ್ಗೆ ಎಷ್ಟು ಒಲವು ಹೊಂದಿದ್ದಾನೆ ಎಂದರೆ ಪ್ರತಿ ಗಂಟೆಗೆ ಭಗವದ್ಗೀತೆ ಓದಿ ಬಳಿಕ ಧ್ಯಾನ ಮಾಡುತ್ತಿದ್ದಾನೆ. ವಿಚಾರಣೆಯ ಸಂದರ್ಭದಲ್ಲೂ ಶ್ರೀಕಿ ಭಗವದ್ಗೀತೆಯಲ್ಲಿ ಬರುವ ಕೃಷ್ಣನ  ಉಪದೇಶವನ್ನು ಹೇಳುತ್ತಿದ್ದಾನೆ. ಇದನ್ನೂ ಓದಿ: ಪೋಕರ್ ವೆಬ್‍ಸೈಟ್‌, ಸರ್ಕಾರಿ ಟೆಂಡರ್‌ ವೆಬ್‌ಸೈಟ್‌ ಹ್ಯಾಕ್ – ಕೋಟ್ಯಂತರ ಹಣ ಮಾಡಿದ್ದ ಕುಖ್ಯಾತ ಹ್ಯಾಕರ್ ಶ್ರೀಕೃಷ್ಣ ಅರೆಸ್ಟ್

    ಹ್ಯಾಕಿಂಗ್‌ ನಿಲ್ಲಿಸಲ್ಲ:
    ಸದ್ಯ ಉದ್ಯೋಗ ಇಲ್ಲ ಮುಂದೇನು ಎಂದು ಅಧಿಕಾರಿಗಳು ಪ್ರಶ್ನಿದ್ದಕ್ಕೆ, ಜಾಮೀನು ಪಡೆದು ಜೈಲಿನಿಂದ ಹೊರ ಬಂದರೂ ಹ್ಯಾಕಿಂಗ್‌ ಮಾಡುವುದನ್ನು ನಿಲ್ಲಿಸಲ್ಲ. ನಾನು ಯಾವುದೇ ಉದ್ಯೋಗ ಮಾಡುವುದಿಲ್ಲ. ಸ್ಥಳೀಯ ವೆಬ್ ಸೈಟ್‌ಗಳನ್ನು ಇನ್ನು ಮುಂದೆ ಹ್ಯಾಕ್ ಮಾಡುವುದಿಲ್ಲ. ಬದಲಾಗಿ ಚೀನಾ ಮತ್ತು ವಿದೇಶದ ಆನ್ ಲೈನ್ ಗೇಮಿಂಗ್‌ ವೆಬ್‌ಸೈಟ್‌ಗಳನ್ನು ಹ್ಯಾಕ್ ಮಾಡುತ್ತೇನೆ. ಈ ಕೆಲಸ ಬಿಟ್ಟು ನನಗೆ ಬೇರೆ ಏನೂ ಬರುವುದಿಲ್ಲ ಎಂದು ನೇರವಾಗಿಯೇ ಉತ್ತರ ನೀಡಿದ್ದಾನೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

    ಹ್ಯಾಕಿಂಗ್‌ ಹೇಗೆ?
    ಹ್ಯಾಕರ್ ಶ್ರೀಕಿ ವೆಬ್‌ಸೈಟ್‌ ಹ್ಯಾಕ್‌ ಮಾಡಲು Hak5 WIFI pineapple ಡಿವೈಸ್‌ ಬಳಸುತ್ತಿದ್ದ. ಈ ಸಾಧನದ ಮೂಲಕ ವೆಬ್‌ಸೈಟ್‌ ಕೋಡ್‌ನಲ್ಲಿ ಬಗ್‌ ಪತ್ತೆ ಮಾಡಿ ಸರ್ವರ್‌ ಹ್ಯಾಕ್‌ ಮಾಡುತ್ತಿದ್ದ. ನಂತರ ವೆಬ್‌ಸೈಟ್‌ ಅನ್ನು ತನಗೆ ಹೇಗೇ ಬೇಕೋ ಹಾಗೆ ಕೆಲಸ ಮಾಡುವಂತೆ ಬದಲಾವಣೆ ಮಾಡುತ್ತಿದ್ದ. ಈ ಮಾದರಿಯಲ್ಲಿ ಪೋಕರ್‌ ವೆಬ್‌ಸೈಟ್‌ ಅನ್ನು ಶ್ರೀಕಿ ಹ್ಯಾಕ್‌ ಮಾಡಿದ್ದ.

  • ಪ್ರಧಾನಿ ಮೋದಿ ವೆಬ್‍ಸೈಟ್ ಅಕೌಂಟ್ ಹ್ಯಾಕ್

    ಪ್ರಧಾನಿ ಮೋದಿ ವೆಬ್‍ಸೈಟ್ ಅಕೌಂಟ್ ಹ್ಯಾಕ್

    ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಪರ್ಸನಲ್ ವೆಬ್‍ಸೈಟ್ ನ (@narendramodi_in) ಟ್ವಿಟ್ಟರ್ ಖಾತೆ ಹ್ಯಾಕ್ ಮಾಡಲಾಗಿದೆ. ಬುಧವಾರ ರಾತ್ರಿ ಹ್ಯಾಕರ್ಸ್ ಈ ಟ್ವಿಟ್ಟರ್ ಖಾತೆಯನ್ನ ಮಾಡಿದ್ದಾರೆ. ಬರಾಕ್ ಒಬಮಾ, ಎಲೆನ್ ಮಸ್ಕ್ ಅವರ ಖಾತೆಗಳ ರೀತಿಯಲ್ಲಿ ಮೋದಿಯವರ ವೆಬ್‍ಸೈಟ್ ಹ್ಯಾಕ್ ಮಾಡಲಾಗಿದೆ.

     narendramodi.in ಟ್ವಿಟ್ಟರ್ ಅಕೌಂಟ್‍ನಲ್ಲಿ ವೆಬ್‍ಸೈಟ್ ಗೆ ಸಂಬಂಧಿಸಿದ ಮಾಹಿತಿ ಮತ್ತು ನಮೋ ಆ್ಯಪ್ ಗೆ ಕುರಿತ ಅಪಡೇಟ್ ನೀಡಲಾಗುತ್ತಿತ್ತು. ಅಕೌಂಟ್ ಹ್ಯಾಕ್ ಕುರಿತು ಪ್ರತಿಕ್ರಿಯಿಸಿರುವ ಟ್ವಟ್ಟರ್, ನರೇಂದ್ರ ಮೋದಿಯವರ ವೆಬ್‍ಸೈಟ್ ಖಾತೆಯಲ್ಲಿ ಉಂಟಾದ ಸಮಸ್ಯೆ ಗಮನಕ್ಕೆ ಬಂದಿದೆ. ಸಮಸ್ಯೆ ಬಗೆಹರಿಸುವ ಕಾರ್ಯ ನಡೆಯುತ್ತಿದೆ. ಈ ಸಂಬಂಧ ತನಿಖೆ ನಡೆಸಲಾಗುವುದು ಎಂದು ಹೇಳಿದೆ.

    ಬುಧವಾರ ರಾತ್ರಿ ಸುಮಾರು ಮೂರು ಗಂಟೆಗೆ ನರೇಂದ್ರ ಮೋದಿಯವರ ಖಾತೆಯಿಂದ ಒಂದು ಟ್ವೀಟ್ ಮಾಡಲಾಗಿತ್ತು. ಈ ಖಾತೆಯನ್ನ ಜಾನ್ ವಿಕ್ (hckindia@tutanota.com) ಮೂಲಕ ಹ್ಯಾಕ್ ಮಾಡಲಾಗಿದೆ. ನಾವು ಪೇಟಿಎಂ ಮಾಲ್ ಹ್ಯಾಕ್ ಮಾಡಿಲ್ಲ. ಮಗದೊಂದು ಟ್ವೀಟ್ ನಲ್ಲಿ ಕ್ರಿಪ್ಟೋ ಕರೆನ್ಸಿಯಲ್ಲಿ ನ್ಯಾಶನಲ್ ರಿಲೀಫ್ ಫಂಡ್‍ಗೆ ಹಣ ಹಾಕುವಂತೆ ಹೇಳಲಾಗಿದೆ. ಆದ್ರೆ ಈ ಟ್ವೀಟ್ ಕೆಲವೇ ಕ್ಷಣಗಳಲ್ಲಿ ಡಿಲೀಟ್ ಮಾಡಲಾಗಿದೆ. ಹ್ಯಾಕ್ ಬಳಿಕ ಅರ್ಧಗಂಟೆಯಲ್ಲಿ ಸಮಸ್ಯೆ ಪರಿಹರಿಸಲಾಗಿದೆ.