Tag: hackers

  • ಉಪೇಂದ್ರ ದಂಪತಿ ಫೋನ್ ಹ್ಯಾಕ್ – ಸೈಬರ್ ವಂಚಕರು ದೋಚಿದ್ದೆಷ್ಟು ಹಣ?

    ಉಪೇಂದ್ರ ದಂಪತಿ ಫೋನ್ ಹ್ಯಾಕ್ – ಸೈಬರ್ ವಂಚಕರು ದೋಚಿದ್ದೆಷ್ಟು ಹಣ?

    ನಟ ಉಪೇಂದ್ರ (Actor Darshan) ಹಾಗೂ ಪ್ರಿಯಾಂಕ ಉಪೇಂದ್ರ (Priyank Upendra) ಅವರಿಗೆ ಸೈಬರ್ ವಂಚಕರಿಂದ ಸಂಕಷ್ಟ ಎದುರಾಗಿದೆ. ಪ್ರಿಯಾಂಕ ಉಪೇಂದ್ರ ಅವರು ಆನ್‌ಲೈನ್ ವಸ್ತುಗಳನ್ನ ಆರ್ಡರ್ ಮಾಡಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡ ಡಿಜಿಟಲ್ ವಂಚಕರು ಪ್ರಿಯಾಂಕ ಅವರಿಗೆ ಕರೆಮಾಡಿ ಕೋಡ್ ನಂಬರ್ ಕಳಿಸಿದ್ದಾರೆ. ಈ ಕೋಡ್ ಡಯಲ್ ಮಾಡಿ ಎಂದು ಹೇಳಿದ್ದಾರೆ. ಡಿಜಿಟಲ್ ಧೂತರು ಹೇಳಿದಂತೆ ಮಾಡಿದ ಪ್ರಿಯಾಂಕ ಫೋನ್ ಹ್ಯಾಕ್ ಆಗಿದೆ. ಬಳಿಕ ಪ್ರಿಯಾಂಕ ಅವರ ಫೋನ್ ನಂಬರ್ ಬಳಸಿ ವಂಚಕರು ಹಲವರಿಗೆ ಹಣವನ್ನು ಕಳುಹಿಸುವಂತೆ ಹೇಳಿದ್ದಾರೆ.

    ಕೆಲವರು ಅನುಮಾನಗೊಂಡು ಹಣ ಕಳುಹಿಸಿಲ್ಲ, ಇನ್ನು ಕೆಲವರು, ಆಪ್ತರು ಹಣದ ತುರ್ತಿರಬಹುದು ಎಂದು ಹಣ ವರ್ಗಾವಣೆ ಮಾಡಿದ್ದಾರೆ. ಉಪೇಂದ್ರ ಅವರ ಮಗ ಆಯುಷ್ ಸೇರಿ ಮೂವರು ತಲಾ 55000 ರೂ.ಗಳಂತೆ ಹಣವನ್ನ ಪ್ರಿಯಾಂಕ ಉಪೇಂದ್ರ ಅವರೇ ಎಂದುಕೊಂಡು ಕಳುಹಿಸಿ ಮೋಸ ಹೋಗಿದ್ದಾರೆ. ಒಟ್ಟು 1,65,000 ಹಣವನ್ನು ಹ್ಯಾಕರ್‌ಗಳು ಎಗರಿಸಿದ್ದಾರೆ.ಇದನ್ನೂ ಓದಿ: ಸ್ಯಾಂಡಲ್‌ವುಡ್‌ನ ಬುದ್ಧಿವಂತನಿಗೂ ಹ್ಯಾಕರ್‌ ಕಾಟ – ವಿಡಿಯೋ ಹಂಚಿಕೊಂಡ ಉಪ್ಪಿ ದಂಪತಿ

    ಬುದ್ಧಿವಂತ ನಟ, ನಿರ್ದೇಶಕ ಉಪೇಂದ್ರ ಕುಟುಂಬಕ್ಕೆ ಡಿಜಿಟಲ್ ಧೂತರು ಬೆಳಗ್ಗೆ ಬೆಳಗ್ಗೆನೇ ಸಂಕಷ್ಟ ತಂದೊಡ್ಡಿದ್ದಾರೆ. ಈ ಸಂಬಂಧ ಸದಾಶಿವನಗರ ಪೊಲೀಸ್ ಠಾಣೆ ಮೆಟ್ಟಿಲೇರಿದ ಉಪೇಂದ್ರ ದಂಪತಿ ದೂರು ದಾಖಲಿಸಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ಹಣ ಎಗರಿಸಿದ ಕಿರಾತಕರ ಪತ್ತೆಗಾಗಿ ಬಲೆ ಬೀಸಿದ್ದಾರೆ. ಈ ರೀತಿಯ ಪರಿಚಿತರಿಂದ ಸಂದೇಶಗಳು, ಫೋನ್‌ಕಾಲ್‌ಗಳು ಬಂದಾಗ ಎಚ್ಚರಿಕೆ ವಹಿಸಿ ಎಂದು ಸಂದೇಶ ನೀಡಿದೆ ಉಪೇಂದ್ರ ಕುಟುಂಬ.

     

  • ಸೈಬರ್ ಅಟ್ಯಾಕ್‌ಗಳನ್ನು ಕಡಿಮೆ ಮಾಡಲು ಆಪಲ್ ತರುತ್ತಿದೆ ಹೊಸ ಲಾಕ್‌ಡೌನ್ ಮೋಡ್

    ಸೈಬರ್ ಅಟ್ಯಾಕ್‌ಗಳನ್ನು ಕಡಿಮೆ ಮಾಡಲು ಆಪಲ್ ತರುತ್ತಿದೆ ಹೊಸ ಲಾಕ್‌ಡೌನ್ ಮೋಡ್

    ವಾಷಿಂಗ್ಟನ್: ಆಪಲ್ ಕಂಪನಿ ತನ್ನ ಐಫೋನ್, ಐ ಪ್ಯಾಡ್, ಹಾಗೂ ಮ್ಯಾಕ್ ಸಾಧನಗಳಿಗಾಗಿ ಹೊಸ ಭದ್ರತಾ ಫೀಚರ್‌ಅನ್ನು ಹೊರತರುತ್ತಿದೆ. ಇದು ಮುಖ್ಯವಾಗಿ ಉನ್ನತ ಪ್ರೊಫೈಲ್ ಬಳಕೆದಾರರ ಮೇಲಿನ ಉದ್ದೇಶಿತ ಸೈಬರ್ ಅಟ್ಯಾಕ್‌ಗಳನ್ನು ತಡೆಯಲು ವಿನ್ಯಾಸಗೊಳಿಸಲಾಗಿದೆ.

    ಲಾಕ್‌ಡೌನ್ ಮೋಡ್ ಹೆಸರಿನ ಹೊಸ ಐಚ್ಛಿಕ(ಆಪ್ಶನಲ್) ಫೀಚರ್, ಕೆಲವು ಉನ್ನತ ವ್ಯಕ್ತಿಗಳು ತಮ್ಮ ಆಪಲ್ ಡಿವೈಸ್‌ಗಳಲ್ಲಿ ಬಳಸಬಹುದಾಗಿದ್ದು, ಇದು ಸೈಬರ್ ಅಟ್ಯಾಕ್‌ಗಳಿಂದ ರಕ್ಷಣೆ ನೀಡುತ್ತದೆ ಎಂದು ಕಂಪನಿ ತಿಳಿಸಿದೆ. ಇದು ಬಳಕೆದಾರರ ಸಾಧನಗಳನ್ನು ಹ್ಯಾಕ್ ಮಾಡುವುದನ್ನು ಕಡಿಮೆಗೊಳಿಸುತ್ತದೆ ಎಂದು ಹೇಳಿದೆ. ಇದನ್ನೂ ಓದಿ: ಆರ್ಥಿಕ ಹಿಂಜರಿತ ಭೀತಿ – ಅಂತಾರಾಷ್ಟ್ರೀಯ ತೈಲಬೆಲೆ ಭಾರೀ ಇಳಿಕೆ

    ಕಳೆದ ಹಲವು ವರ್ಷಗಳಿಂದ ಉನ್ನತ ವ್ಯಕ್ತಿಗಳ ಡಿವೈಸ್‌ಗಳನ್ನು ಹ್ಯಾಕ್ ಮಾಡಿರುವಂತಹ ಹಲವು ಪ್ರಕರಣಗಳು ವರದಿಯಾಗಿವೆ. ಮುಖ್ಯವಾಗಿ ಕಂಪನಿ ಸ್ಪೈವೇರ್ ನಂತಹ ದಾಳಿಯನ್ನು ಕಡಿಮೆ ಮಾಡುವ ಉದ್ದೇಶದಿಂದ ಹೊಸ ಫೀಚರ್ ಅನ್ನು ಹೊರತಂದಿದೆ ಎಂದು ತಿಳಿಸಿದೆ.

    ಪ್ರಪಂಚದಾದ್ಯಂತ ಸುಮಾರು 150 ದೇಶಗಳಲ್ಲಿ ಕೆಲವು ಪ್ರಭಾವಿ ವ್ಯಕ್ತಿಗಳನ್ನು ಗುರಿಪಡಿಸಿಕೊಂಡು ಸೈಬರ್ ದಾಳಿಗಳು ನಡೆಯುತ್ತವೆ. ಇದಕ್ಕಾಗಿ ಲಾಕ್‌ಡೌನ್ ಮೋಡ್ ಫೀಚರ್ ಅನ್ನು ತರಲಾಗಿದ್ದು, ಇದನ್ನು ಬಳಕೆದಾರರಿಗೆ ತಿಳಿಸುವ ವ್ಯವಸ್ಥೆಯನ್ನು ಮಾಡಲಾಗುತ್ತಿದೆ ಎಂದು ಹೇಳಿದೆ. ಇದನ್ನೂ ಓದಿ: ಇಡಿ ದಾಳಿ ಬೆನ್ನಲ್ಲೇ ದೇಶ ತೊರೆದ ವಿವೋ ನಿರ್ದೇಶಕರು 

    ವರದಿಗಳ ಪ್ರಕಾರ ಲಾಕ್‌ಡೌನ್ ಮೋಡ್, ಆಪಲ್ ಡಿವೈಸ್‌ಗಳಲ್ಲಿ ಮೆಸೇಜಿಂಗ್ ಆಪ್‌ಗಳ ಅಟ್ಯಾಚ್‌ಮೆಂಟ್‌ಗಳನ್ನು ಬ್ಲಾಕ್ ಮಾಡುತ್ತದೆ. ಇವು ಹ್ಯಾಕರ್‌ಗಳಿಗೆ ಡಿವೈಸ್‌ಗಳನ್ನು ಹ್ಯಾಕ್‌ಮಾಡಲು ಲಭ್ಯವಿರುವ ಸುಲಭದ ಹಾಗೂ ಮುಖ್ಯವಾದ ವಿಧಾನವಾಗಿದೆ.

    ಆಪಲ್ ಮುಂಬರುವ ಐಒಎಸ್ 16, ಐಪ್ಯಾಡ್ ಐಎಸ್ 16 ಹಾಗೂ ಮ್ಯಾಕ್ ಒಎಸ್‌ಗಳಲ್ಲಿ ನವೀಕರಣದ ಭಾಗವಾಗಿ ಲಾಕ್‌ಡೌನ್ ಮೋಡ್‌ಅನ್ನು ಬಿಡುಗಡೆ ಮಾಡಲು ಯೋಜಿಸಿದೆ. ಈ ಫೀಚರ್ ಸದ್ಯ ಬೀಟಾ ಆವೃತ್ತಿಯಲ್ಲಿ ಪರೀಕ್ಷೆ ನಡೆಯುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಯುಪಿ ಸರ್ಕಾರದ ಟ್ವಿಟ್ಟರ್ ಖಾತೆ ಹ್ಯಾಕ್

    ಯುಪಿ ಸರ್ಕಾರದ ಟ್ವಿಟ್ಟರ್ ಖಾತೆ ಹ್ಯಾಕ್

    ಲಕ್ನೋ: ಉತ್ತರ ಪ್ರದೇಶ ಸರ್ಕಾರದ ಅಧಿಕೃತ ಟ್ವಿಟ್ಟರ್ ಖಾತೆಯನ್ನು ಸೋಮವಾರ ಹ್ಯಾಕ್ ಮಾಡಲಾಗಿದೆ.

    ಶನಿವಾರ ಮುಖ್ಯಮಂತ್ರಿ ಕಚೇರಿಯ ಟ್ವಿಟ್ಟರ್ ಖಾತೆಯನ್ನು ಹ್ಯಾಕ್ ಮಾಡಿದ ಎರಡು ದಿನಗಳ ನಂತರ ಟ್ವಿಟ್ಟರ್ ಖಾತೆಯಿಂದ ಮುಖ್ಯಮಂತ್ರಿಗಳ ಡಿಸ್‍ಪ್ಲೇ ಚಿತ್ರವನ್ನು ಹ್ಯಾಕರ್‌ಗಳು ತೆಗೆದುಹಾಕಿದ್ದರು.

    ಸೋಮವಾರ ಉತ್ತರ ಪ್ರದೇಶ ಸರ್ಕಾರದ ಅಧಿಕೃತ ಖಾತೆಯಿಂದ ವಿಚಿತ್ರ ಟ್ವೀಟ್‍ಗಳನ್ನು ಪೋಸ್ಟ್ ಮಾಡಲಾಗಿದೆ. ಸ್ವಲ್ಪ ಸಮಯದ ನಂತರ ಟ್ವೀಟ್‍ಗಳನ್ನು ಅಳಿಸಲಾಗಿದೆ. ನಂತರದ ಟ್ವೀಟ್‍ಗಳಲ್ಲಿ, ಹಲವಾರು ಅಸಂಬಂಧ ಖಾತೆಗಳನ್ನು ಟ್ಯಾಗ್ ಮಾಡಲಾಗಿದೆ. ಇದನ್ನೂ ಓದಿ: ಸತೀಶ್ ಜಾರಕಿಹೊಳಿ ಹೆಸರಿನಲ್ಲಿ ಅಶ್ಲೀಲ ವೀಡಿಯೋ ಪೋಸ್ಟ್: ದೂರು ದಾಖಲು

    ಯುಪಿ ಸಿಎಂಒ ಅಧಿಕೃತ ಟ್ವಿಟ್ಟರ್ ಅನ್ನು ಹ್ಯಾಕರ್‌ಗಳು ತೆಗೆದುಕೊಂಡ ನಂತರ, ಖಾತೆಯಿಂದ 400-500 ಕ್ಕೂ ಹೆಚ್ಚು ಟ್ವೀಟ್‍ಗಳನ್ನು ಮಾಡಲಾಗಿದೆ. ಇದನ್ನೂ ಓದಿ: ಕೋವಿಡ್ ಉಲ್ಬಣದಿಂದ ದೆಹಲಿಯಲ್ಲಿ ಶಾಲೆಗಳು ಬಂದ್? – ತಜ್ಞರ ಸಮಿತಿಯ ಸಲಹೆಗಳೇನು?

    POLICE JEEP

    ಈ ಸಂಬಂಧ ಲಕ್ನೋದ ಸೈಬರ್ ಪೊಲೀಸ್ ಠಾಣೆಯಲ್ಲಿ ಐಟಿ ಕಾಯ್ದೆಯ ಸಂಬಂಧಿತ ಸೆಕ್ಷನ್‍ಗಳ ಅಡಿಯಲ್ಲಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ.

  • ಭಾರತೀಯ ವ್ಯವಹಾರಗಳ ಮೇಲೆ ಚೀನಾ ಹ್ಯಾಕರ್ಸ್ ಗುರಿ!

    ಭಾರತೀಯ ವ್ಯವಹಾರಗಳ ಮೇಲೆ ಚೀನಾ ಹ್ಯಾಕರ್ಸ್ ಗುರಿ!

    -ಮುಂದಿನ ಹತ್ತು ದಿನಗಳು ಹುಷಾರ್!

    ನವದೆಹಲಿ: ಲಡಾಕ್ ಗಡಿಯಲ್ಲಿನ ಉದ್ವಿಗ್ನತೆ ಕಡಿಮೆಯಾಗ್ತಿಲ್ಲ. ಮಾತುಕತೆ ನಡುವೆ ಯುದ್ಧ ಸಿದ್ದತೆಗಳು ನಡೆದಿದ್ದು ಗಾಲ್ವಾನ್ ಗಡಿಯಲ್ಲಿ ಕದನ ಕಾರ್ಮೋಡ ಕವಿದಿದೆ. ಡ್ರ್ಯಾಗನ್ ದೇಶ ದಾಳಿಯ ಆತಂಕ ನಡುವೆ ಈಗ ಭಾರತದಲ್ಲಿ ಚೀನಾ ಮತ್ತೊಂದು ಕೃತ್ಯ ಎಸೆಸಲು ಪ್ಲ್ಯಾನ್ ನಡೆಯುತ್ತಿದೆ ಎನ್ನಲಾಗುತ್ತಿದೆ.

    ಜೂನ್ 15ರಂದು ಗಾಲ್ವಾನ್ ಗಡಿ ಪ್ರದೇಶದಲ್ಲಿ ಚೀನಾ ಮತ್ತು ಭಾರತೀಯ ಸೈನಿಕರ ನಡುವೆ ಸಂಘರ್ಷ ಏರ್ಪಟ್ಟ ಮೇಲೆ ಚೀನಾ ವಿರುದ್ಧ ಆಕ್ರೋಶ ಹೆಚ್ಚಾಗಿದೆ. ಎಲ್ಲೆಡೆ ಚೀನಾ ವಸ್ತುಗಳು ಮತ್ತು ಸಾಫ್ಟ್ ವೇರ್ ಮೊಬೈಲ್ ಆ್ಯಪ್ ಗಳನ್ನು ಬೈಕಾಟ್ ಮಾಡುವ ಮಾತುಗಳು ಕೇಳಿ ಬರ್ತಿದೆ. ಇದಕ್ಕಾಗಿ ಅಭಿಯಾನ ಆರಂಭವಾಗಿದ್ದು ಕೇಂದ್ರ ಸರ್ಕಾರದಿಂದ ಕಾಮನ್ ಮ್ಯಾನ್‍ವರೆಗೂ ಈ ಬಾರಿ ನಿಶ್ಚಿತ ನಿರ್ಧಾರ ಮಾಡಿದ್ದಾರೆ. ಭಾರತೀಯರ ಈ ದಿಟ್ಟ ನಿರ್ಧಾರದಿಂದ ಚೀನಾ ಸಾಫ್ಟ್‍ವೇರ್ ವಲಯ ತೀವ್ರ ಆಕ್ರೋಶಗೊಂಡಿದೆ. ಇದೇ ಸೇಡಿಟ್ಟುಕೊಂಡಿರುವ ಚೀನಾ ಹ್ಯಾಕರ್ಸ್ ಭಾರತೀಯ ವ್ಯವಹಾರಗಳನ್ನು ಟಾರ್ಗೇಟ್ ಮಾಡಲು ನಿರ್ಧರಿಸಿದ್ದಾರೆ ಎಂಬ ಸುದ್ದಿಗಳು ಬಿತ್ತರವಾಗಿವೆ.

    ಎಚ್ಚರ ಎಚ್ಚರ: ಮುಂದಿನ ಹತ್ತು ದಿನಗಳಲ್ಲಿ ಭಾರತೀಯ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳ ವ್ಯವಹಾರಗಳ ಮೇಲೆ ಹ್ಯಾಕರ್ಸ್ ಕಣ್ಣಿಟ್ಟಿದ್ದು ವೆಬ್‍ಸೈಟ್‍ಗಳನ್ನು ಹ್ಯಾಕ್ ಮಾಡುವ ಸಾಧ್ಯತೆ ಇದೆ. ಸೂಕ್ಷ್ಮ ಡಾಟಾ ಕದಿಯುವುದು, ಸೇವೆಗಳಿಗೆ ತೊಡಕುಂಟು ಮಾಡುವ ಪ್ರಯತ್ನ ನಡೆಯಲಿದೆಯಂತೆ. ಇದಕ್ಕಾಗಿ ತಯಾರಿ ನಡೆಯುತ್ತಿದ್ದು ಈ ಸಂಬಂಧ ಡಾರ್ಕ್ ವೆಬ್‍ನಲ್ಲಿ ನಡೆದ ಸಂಭಾಷಣೆ ಬಹಿರಂಗವಾಗಿದೆ. ಸಿಂಗಾಪುರ ಮೂಲದ ಸೈಬರ್ ಭದ್ರತಾ ಸಂಸ್ಥೆ ಸೈಫಿರ್ಮಾ ಇಂತದೊಂದು ಎಚ್ಚರಿಕೆ ನೀಡಿದೆ. ಈ ಸಂಸ್ಥೆ ಪ್ರಕಾರ ದೂರಸಂಪರ್ಕ, ಫಾರ್ಮಾ, ಸ್ಮಾರ್ಟ್‍ಫೋನ್ ಮತ್ತು ನಿರ್ಮಾಣ ಉದ್ಯಮಗಳಲ್ಲಿ ಭಾರತೀಯ ಸರ್ಕಾರಿ ವೆಬ್‍ಸೈಟ್‍ಗಳು ಮತ್ತು ಕಾರ್ಪೊರೇಟ್‍ಗಳನ್ನು ಗುರಿಯಾಗಿಸುವ ದುರುದ್ದೇಶ ಹೊಂದಿದೆ ಎನ್ನಲಾಗಿದೆ.

    ಅತಿ ಹೆಚ್ಚು ಚೀನಾ ಮೊಬೈಲ್: ಮಾರುಕಟ್ಟೆ ಸಂಶೋಧನಾ ಸಂಸ್ಥೆ ಐಡಿಸಿ ನಡೆಸಿದ ಸರ್ವೇ ಪ್ರಕಾರ, ಮಾರ್ಚ್ 2020ರ ಮೊದಲ ತ್ರೈಮಾಸಿಕದಲ್ಲಿ ಭಾರತಕ್ಕೆ ರವಾನೆಯಾದ 3.25 ಕೋಟಿ ಸ್ಮಾರ್ಟ್ ಫೋನ್‍ಗಳಲ್ಲಿ ಸುಮಾರು 76 ಪ್ರತಿಶತವು ಚೀನಾದ ಬ್ರಾಂಡ್‍ಗಳಾಗಿವೆ. ಅದೇ ಐಡಿಸಿ ದತ್ತಾಂಶವು ಭಾರತದ ಐದು ಉನ್ನತ ಸ್ಮಾರ್ಟ್ ಫೋನ್ ಬ್ರಾಂಡ್‍ಗಳಲ್ಲಿ ನಾಲ್ಕು ಚೀನಾದವು ಎಂದು ತೋರಿಸಿದೆ. ಚೀನಾದ ಬ್ರಾಂಡ್ ಶಿಯೋಮಿ ಭಾರತದಲ್ಲಿ ಅತಿ ಹೆಚ್ಚು ಮಾರುಕಟ್ಟೆ ಪಾಲನ್ನು ಹೊಂದಿದ್ದು, ನಂತರದ ಸ್ಥಾನದಲ್ಲಿ ವಿವೊ ಇದೆ. ಮೂರನೆಯ ಸ್ಥಾನದಲ್ಲಿ ಚೀನಾದ್ದು ಅಲ್ಲದ ಸ್ಯಾಮ್‍ಸಂಗ್ ಇದ್ದರೆ ನಂತರದ ಸ್ಥಾನದಲ್ಲಿ ಮತ್ತೆ ಚೀನಾದ ರಿಯಲ್‍ಮೆ ಮತ್ತು ಒಪ್ಪೊ ಸ್ಥಾನ ಪಡೆದಿವೆ. ಭಾರತ ತಂತ್ರಜ್ಞಾನದಲ್ಲಿ ಚೀನಾವನ್ನು ಹೆಚ್ಚು ಅವಲಂಬಿಸಿದ್ದು ಇದನ್ನೇ ಹ್ಯಾಕರ್ಸ್ ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಿದೆ.

  • ಎಸ್‍ಬಿಐ ಎಟಿಎಂ ವಿತ್ ಡ್ರಾವಲ್ ಲಿಮಿಟ್ ಹಿಂದಿರುವ ಅಸಲಿ ಸತ್ಯ ಏನು? ಸೈಬರ್ ತಜ್ಞರು ಹೇಳ್ತಾರೆ ಓದಿ

    ಎಸ್‍ಬಿಐ ಎಟಿಎಂ ವಿತ್ ಡ್ರಾವಲ್ ಲಿಮಿಟ್ ಹಿಂದಿರುವ ಅಸಲಿ ಸತ್ಯ ಏನು? ಸೈಬರ್ ತಜ್ಞರು ಹೇಳ್ತಾರೆ ಓದಿ

    ಬೆಂಗಳೂರು: ಎಸ್‍ಬಿಐ ಸೇರಿದಂತೆ ಇತರೆ ಬ್ಯಾಂಕುಗಳು ಎಟಿಎಂ ವಿತ್ ಡ್ರಾವನ್ನು ಕಡಿಮೆಗೊಳಿಸಲು ಹೊರಟಿರುವ ನೂತನ ನಿಯಮ ಹಾಸ್ಯಸ್ಪದವಾಗಿದೆ ಎಂದು ಸೈಬರ್ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

    ಹೌದು, ದೇಶದಲ್ಲಿ ಎಟಿಎಂ ವಂಚನೆ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿರುವುದಿಂದ, ಭಾರತದ ಅತಿದೊಡ್ಡ ಬ್ಯಾಂಕಿಂಗ್ ಸಂಸ್ಥೆಯಾದ ಎಸ್‍ಬಿಐ ಸೇರಿದಂತೆ ಹಲವು ಬ್ಯಾಂಕ್‍ಗಳು ಗ್ರಾಹಕರಿಗೆ ನೀಡಿದ್ದ ಎಟಿಎಂ ವಿತ್‍ಡ್ರಾ ಲಿಮಿಟ್‍ನ್ನು ಕಡಿತಗೊಳಿಸಲು ಮುಂದಾಗಿವೆ. ಆದರೆ ಇದಕ್ಕೆ ಸೈಬರ್ ತಜ್ಞರು ವಿತ್‍ಡ್ರಾ ಮಿತಿ ಕಡಿಮೆಗೊಳಿಸಿದರೆ ಸೈಬರ್ ವಂಚಕರಿಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ. ಬ್ಯಾಂಕುಗಳು ಜಾರಿಗೆ ತರಲು ಹೊರಟಿರುವ ವಿತ್‍ಡ್ರಾ ಲಿಮಿಟ್ ಹಾಸ್ಯಾಸ್ಪದ ಸಂಗತಿ ಎಂದು ಸೈಬರ್ ತಜ್ಞ ಹರ್ಷ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಎಟಿಎಂ ಚೋರರ ಪ್ರಕರಣಗಳು ದಿನೇ ದಿನೇ ದಾಖಲಾಗುತ್ತಿದ್ದರಿಂದ, ಆರ್‌ಬಿಐ ಕೂಡ 2019ರ ಮಾರ್ಚ್ ಒಳಗಡೆ ಎಟಿಎಂಗಳಲ್ಲಿ ಸೈಬರ್ ಸೆಕ್ಯೂರಿಟಿ ಹಾಗೂ ಆಂಟಿ ಸ್ಕಿಮ್ಮಿಂಗ್ ಡಿವೈಸ್ ಅಳವಡಿಸುವಂತೆ ನಿರ್ದೇಶನ ನೀಡಿತ್ತು. ಆದರೆ ಇದುವರೆಗೂ ದೇಶದ ಬಹುತೇಕ ಎಟಿಎಂಗಳಲ್ಲಿ ಆಂಟಿ ಸ್ಕಿಮ್ಮಿಂಗ್ ಡಿವೈಸ್‍ಗಳನ್ನು ಬ್ಯಾಂಕುಗಳು ಸ್ಥಾಪಿಸಿಲ್ಲ. ಇದನ್ನು ಮಾಡದ ಬ್ಯಾಂಕುಗಳು ಎಟಿಎಂ ವಂಚನೆ ಕೇಸ್ ಕಡಿಮೆ ಮಾಡಲು ಎಟಿಎಂ ವಿತ್ ಡ್ರಾ ಲಿಮಿಟ್ಸ್ ಕಡಿಮೆ ಮಾಡಿದ್ದೇವೆ ಎಂದು ಹೇಳುತ್ತಿವೆ ಎಂದಿದ್ದಾರೆ.

    ಎಟಿಎಂಗೆ ಕನ್ನ ಹಾಕುವ ಡಿಜಿಟಲ್ ಹ್ಯಾಕರ್ಸ್‍ಗಳು ಎಟಿಎಂ ಮೆಷಿನ್ ನೊಳಗೆ ಗ್ರಾಹಕರು ಕಾರ್ಡನ್ನು ಹಾಕಿದ ತಕ್ಷಣ ಮಾಹಿತಿಗಳನ್ನು ರವಾನಿಸಿಕೊಳ್ಳುವ ತಂತ್ರಜ್ಞಾನ ಹೊಂದಿದ್ದು, ನೇರವಾಗಿ ಬ್ಯಾಂಕ್ ಖಾತೆಯನ್ನು ಹ್ಯಾಕ್ ಮಾಡುತ್ತಾರೆ. ಈ ವಿತ್ ಡ್ರಾ ಲಿಮಿಟ್ ಕಡಿತದಿಂದ ಎಟಿಎಂ ಹ್ಯಾಕರ್ಸ್ ಮೇಲೆ ಯಾವುದೇ ಪರಿಣಾಮ ಬೀರಲ್ಲ ಎಂದು ಹರ್ಷ ಹೇಳಿದ್ದಾರೆ.

    ಆಕ್ಟೋಬರ್ 31 ರಿಂದ 40 ಸಾವಿರದಿಂದ 20 ಸಾವಿರಕ್ಕೆ ಎಟಿಎಂ ವಿತ್ ಡ್ರಾ ಲಿಮಿಟ್ಸ್ ಕಡಿತಗೊಳಿಸಲು ಎಸ್‍ಬಿಐ ಮುಂದಾಗಿದೆ ಎನ್ನಲಾಗಿದೆ. ಎಟಿಎಂ ವಂಚನೆಗಳನ್ನು ಕಡಿಮೆ ಮಾಡಿ ಡಿಜಿಟಲ್ ವ್ಯವಹಾರವನ್ನು ಹೆಚ್ಚಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಎಟಿಎಂ ವಿತ್‍ ಡ್ರಾ ಮಿತಿ ಕಡಿತಗೊಳಿಸಲು ಎಸ್‍ಬಿಐ ಚಿಂತನೆ: ಎಷ್ಟಿತ್ತು? ಎಷ್ಟಾಗುತ್ತೆ?

    ಏನಿದು ಸ್ಕಿಮ್ಮಿಂಗ್ ಮಷಿನ್?
    ಕಳ್ಳರು ಎಟಿಎಂ ಮಷಿನ್ ಮೇಲೆ ಹಿಡನ್ ಕ್ಯಾಮೆರಾ ಫಿಕ್ಸ್ ಮಾಡುತ್ತಾರೆ. ಕಾರ್ಡ್ ಸ್ಪೈಪ್ ಮಾಡುವ ಜಾಗದಲ್ಲಿ ಸಣ್ಣದೊಂದು ಕಾರ್ಡ್ ಹಾಕ್ತಾರೆ. ಗ್ರಾಹಕರು ಸ್ಪೈಪ್ ಮಾಡಿದ ಕೂಡಲೇ ಕಾರ್ಡ್‍ನಲ್ಲಿದ್ದ ಮ್ಯಾಗ್ನೆಟ್ಟಿಂಗ್ ಸ್ಟ್ರೇಬ್ಸ್ ಹ್ಯಾಕ್ ಆಗುತ್ತೆ. ಬಳಿಕ ಹಿಡನ್ ಕ್ಯಾಮೆರಾದಿಂದ ಪಾಸ್‍ವರ್ಡ್‍ನ್ನು ಕ್ಯಾಪ್ಚರ್ ಮಾಡ್ತಾರೆ. ಬಳಿಕ ನಕಲಿ ಕಾರ್ಡ್ ತಯಾರಿಸಿ ಹಣ ಡ್ರಾ ಮಾಡುತ್ತಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕಾಸ್ಮೋಸ್ ಬ್ಯಾಂಕಿನಿಂದ 94 ಕೋಟಿ ರೂ. ಎಗರಿಸಿದ ಹ್ಯಾಕರ್ಸ್!

    ಕಾಸ್ಮೋಸ್ ಬ್ಯಾಂಕಿನಿಂದ 94 ಕೋಟಿ ರೂ. ಎಗರಿಸಿದ ಹ್ಯಾಕರ್ಸ್!

    ಮುಂಬೈ: ಮಹಾರಾಷ್ಟ್ರ ರಾಜ್ಯದ ಪುಣೆಯಲ್ಲಿರುವ ಕಾಸ್ಮೋಸ್ ಸಹಕಾರಿ ಬ್ಯಾಂಕಿನ ಎಟಿಎಂ ಸ್ವಿಚ್ ಸರ್ವರ್ ಹ್ಯಾಕ್ ಮಾಡುವ ಮೂಲಕ 94 ಕೋಟಿ ರೂ. ಹಣವನ್ನು ಎಗರಿಸಲಾಗಿದೆ.

    ದೇಶದ ಹೊರಗಡೆ ಒಟ್ಟು 12 ಸಾವಿರ ಬಾರಿ ವಹಿವಾಟು ಮಾಡುವ ಮೂಲಕ ಒಟ್ಟು 78 ಕೋಟಿ ರೂ. ಪಡೆದಿದ್ದು, ಭಾರತದಲ್ಲಿ 2,800 ಬಾರಿ ವಹಿವಾಟಿನಿಂದ 80 ಲಕ್ಷ ರೂ. ಹಣವನ್ನು ಕದ್ದಿದ್ದಾರೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ವಿಸ್ಟ್ ಸಿಕ್ಕಿದ್ದು, ಒಂದು ವಹಿವಾಟಿನಲ್ಲಿ 12 ಕೋಟಿ ರೂ.ವನ್ನು ಹಾಂಕಾಂಗ್‍ನಲ್ಲಿರುವ ಹಾನ್ಸೆಂಗ್ ಬ್ಯಾಂಕಿಗೆ ವರ್ಗಾವಣೆ ಮಾಡಲಾಗಿದೆ. ಫಲಾನುಭವಿ ಖಾತೆಯು ಎಎಲ್‍ಎಂ ಕಂಪೆನಿ ಎಂದು ಪತ್ತೆಯಾಗಿದೆ. ಒಟ್ಟು ಮೂರು ಹಂತದಲ್ಲಿ ಹ್ಯಾಕರ್ಸ್ ಹಣ ಪಡೆದುಕೊಂಡಿದ್ದು, 94 ಕೋಟಿ ರೂ. ದೋಚಿದ್ದಾರೆ.

    ಕೆನಡಾದಿಂದ ಕೃತ್ಯ ನಡೆದಿದೆ ಎಂದು ಶಂಕಿಸಲಾಗಿದ್ದು, ಈ ಸಂಬಂಧ ಆರ್‌ಬಿಐ ಮತ್ತು ಆದಾಯ ತೆರಿಗೆ ಅಧಿಕಾರಿಗಳ ತಂಡ ತನಿಖೆ ಆರಂಭಿಸಿದೆ ಎಂದು ಕಾಸ್ಮೋಸ್ ಬ್ಯಾಂಕ್ ಅಧ್ಯಕ್ಷ ಮಿಲಿಂದ್ ಕಾಳೆ ಹೇಳಿದ್ದಾರೆ.

    ಇತ್ತ ಪ್ರಕರಣದ ಕುರಿತು ಪುಣೆಯ ಸೈಬರ್ ಕ್ರೈಂ ಸೆಲ್‍ನಲ್ಲಿ ದೂರು ದಾಖಲಾಗಿದೆ. ಮಾಲ್ವೇರ್ ಕಳುಹಿಸಿ ಸರ್ವರ್ ಹ್ಯಾಕ್ ಮಾಡಿ ದಾಳಿ ಮಾಡಲಾಗಿದೆ ಎಂದು ಪುಣೆಯ ಸೈಬರ್ ಕ್ರೈಂ ಸೆಲ್ ಕೇಂದ್ರ ಕಚೇರಿ ಡಿಸಿಪಿ ಜ್ಯೋತಿ ಪ್ರಿಯಾ ಸಿಂಗ್ ಸ್ಪಷ್ಟನೆ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಪಿಯು ವಿದ್ಯಾರ್ಥಿಗಳಿಗೆ ಶಾಕಿಂಗ್ ನ್ಯೂಸ್!

    ಪಿಯು ವಿದ್ಯಾರ್ಥಿಗಳಿಗೆ ಶಾಕಿಂಗ್ ನ್ಯೂಸ್!

    ಬೆಂಗಳೂರು: ರಾಜ್ಯದ ಎಲ್ಲಾ ಪಿಯು ವಿದ್ಯಾರ್ಥಿಗಳಿಗೆ ಶಾಕಿಂಗ್ ನ್ಯೂಸ್. ಆನ್ ಲೈನ್ ನಲ್ಲಿ ಮಾರ್ಕ್ಸ್  ಕಾರ್ಡ್ ಸಿಗುವಂತೆ ಮಾಡಿದ್ದ ಪಿಯು ಮಂಡಳಿ, ಅನ್ ಸೇಫ್ ಟೆಕ್ನಾಲಜಿ ಮೊರೆ ಹೋಗಿದೆ. ಇದರಿಂದಾಗಿ ಲಕ್ಷಾಂತರ ಮಕ್ಕಳ ಭವಿಷ್ಟ ಆತಂಕಕ್ಕೆ ಸಿಲುಕಿದೆ.

    ಇತ್ತೀಚೆಗಷ್ಟೆ ರಾಜ್ಯ ಪಿಯು ಮಂಡಳಿ ವಿದ್ಯಾರ್ಥಿಗಳ ಮಾರ್ಕ್ಸ್ ಕಾರ್ಡ್ ಆನ್ ಲೈನ್ ನಲ್ಲಿ ಸಿಗುವಂತೆ ಮಾಡಿದೆ. ಡಿಜಿ ಲಾಕರ್ ಎಂಬ ನೂತನ ಟೆಕ್ನಾಲಜಿ ಬಳಸುವ ಮೂಲಕ ವಿಭಿನ್ನ ಪ್ರಯತ್ನಕ್ಕೆ ಮುಂದಾಗಿದೆ. ಆದರೆ ಇಲ್ಲಿ ಯಾವ ಮಾರ್ಕ್ಸ್ ಕಾರ್ಡ್ ಕೂಡ ಸೇಫ್ ಆಗಿಲ್ಲ ಎಂಬ ಆತಂಕಕಾರಿ ಸುದ್ದಿ ಹೊರಬಿದ್ದಿದೆ.

    ಡಿಜಿ ಲಾಕರ್ ಕೇಂದ್ರೀಕೃತ ಸರ್ವರ್ ಮೂಲಕ ಕಾರ್ಯ ನಿರ್ವಹಿಸುತ್ತಿದ್ದು, ಯಾವುದೇ ಹ್ಯಾಕರ್ ಬೇಕಾದರು ಸರಳವಾಗಿ ಇದನ್ನು ಕ್ರಾಕ್ ಮಾಡಬಹುದು. ನ್ಯಾಶನಲ್ ಅಕಾಡಿಮೆಕ್ ಡೆಪಾಸಿಟರಿ (ನ್ಯಾಡ್) ಎಂಬ ಸಂಟ್ರಲೈಸಡ್ ಸರ್ವರ್ ಈ ಹಿಂದೆ ಹ್ಯಾಕ್ ಮಾಡಲಾಗಿತ್ತು. ಅದೇ ರೀತಿಯ ತಂತ್ರಜ್ಞಾನವನ್ನು ಡಿಜಿಲಾಕರ್ ಬಳಸುತ್ತಿದೆ. ಹಾಗಾಗಿ ಡಿಜಿಲಾಕರ್ ನಲ್ಲಿ ಅಂಕಪಟ್ಟಿ ಸೇವ್ ಮಾಡಿ ಆನ್ ಲೈನ್ ನಲ್ಲಿ ಲಭ್ಯವಾಗುವಂತೆ ಮಾಡುವ ಪಿಯು ಮಂಡಳಿ ವಿದ್ಯಾರ್ಥಿಗಳ ಭವಿಷ್ಯವನ್ನು ಆತಂತಕ್ಕೆ ಸಿಲುಕಿಸಿದೆ.

    ಪಿಯು ಮಂಡಳಿ ನಿರ್ದೇಶಕಿ ಸಿ.ಶಿಖಾ ಅವರು ಕಳೆದ ತಿಂಗಳಷ್ಟೆ ಈ ತಂತ್ರಜ್ಞಾನದ ಬಳಕೆಗೆ ಹಸಿರು ನಿಶಾನೆ ತೋರಿಸಿದ್ದಾರೆ. ಇವರು ಆತುರದಲ್ಲಿ ನಿರ್ಣಯ ಕೈಗೊಂಡಂತಿದೆ. ಈ ರೀತಿ ಕೇಂದ್ರೀಕೃತ ಸರ್ವರ್ ಬಳಸುದರಿಂದ ದಾಖಲೆಗಳನ್ನು ತಿರುಚುವ ಸಾಧ್ಯತೆ ಇದೆ. ಜೊತೆಗೆ ತಿದ್ದುಪಡಿ ಮಾಡುವ ಸಾಧ್ಯತೆ ಹೆಚ್ಚಾಗಿದೆ ಎಂದು ಐಟಿ ಪರಿಣಿತ ಮಧಸೂಧನ್ ಹೇಳಿದ್ದಾರೆ.

    ಸೆಂಟ್ರಲೈಸಡ್ ಸರ್ವರ್ ಬಳಸದೆ ಆನ್ ಲೈನ್ ನಲ್ಲಿ ಡಾಕ್ಯೂಮೆಂಟ್ ಸೇವ್ ಮಾಡುವುದಕ್ಕೆ ಬೇರ ಅವಕಾಶವಿದ್ದು, ಸದ್ಯಕ್ಕೆ ಹ್ಯಾಕರ್ ಗಳ ಹಾವಳಿ ಹೆಚ್ಚಾಗಿದೆ. ಇದರಿಂದ ಮುಕ್ತಿ ಪಡೆಯಲು ಬ್ಲಾಕ್ ಚೈನ್ ಟೆಕ್ನಾಲಜಿ ಬಳಸಬೇಕಾಗುತ್ತದೆ.

    ಏನಿದು ಬ್ಲಾಕ್ ಚೈನ್ ಟೆಕ್ನಾಲಜಿ?
    ಇಲ್ಲಿ ದಾಖಲೆಗಳು ಲಿಂಕ್ ಮೂಲಕ ಸೇವ್ ಮಾಡಲಾಗುತ್ತದೆ. ಲಕ್ಷಗಟ್ಟಲೆ ಕಂಪ್ಯೂಟರ್ ಬಳಕೆದಾರರು ಈ ಡೇಟಾ ಅನ್ನು ನಿರ್ವಹಿಸುತ್ತಾರೆ. ಇಲ್ಲಿ ಯಾವುದೇ ಮಾರ್ಕ್ಸ್ ಕಾರ್ಡ್ ನ ಡೇಟಾ ಬದಲಾವಣೆ ಮಾಡಲು ಸಾಧ್ಯವಿಲ್ಲ. ಜೊತೆಗೆ ಯಾವುದೇ ಮೂರನೇ ವ್ಯಕ್ತಿ ಸರ್ವರ್ ಬಳಕೆ ಮಾಡುವುದಿಲ್ಲ. ಓಪನ್ ಸೋರ್ಸ್ ಡೇಟಾ ಮೈಂಟೈನೆನ್ಸ್ ತಂತ್ರಜ್ಞಾನದ ಮೂಲಕ ಮಾಹಿತಿಯನ್ನು ಕ್ರೋಢಿಕರಿಸಲಾಗುತ್ತದೆ.

    ಹ್ಯಾಕರ್ಸ್ ನಿಂದ ನಿಮ್ಮ ದಾಖಲೆಗಳನ್ನು ರಕ್ಷಿಸಿಕೊಳ್ಳಬೇಕಿದಾರೆ ಬ್ಲಾಕ್ ಚೈನ್ ತಂತ್ರಜ್ಞಾನದ ಬಳಸಬಹುದಾಗಿದೆ. ಇದರಲ್ಲಿ ಯಾರೂ ಕೂಡ ಹ್ಯಾಕ್ ಮಾಡಿ ದಾಖಲೆಗಳನ್ನು ತಿದ್ದುಪಡಿ ಮಾಡಲು ಸಾಧ್ಯವಿಲ್ಲ. ಅಲ್ಲದೆ ಇಲ್ಲಿ ಮಾಹಿತಿ ನಿರ್ವಹಣೆ ಮಾಡಲು ಲಕ್ಷಾಂತರ ಕಂಪ್ಯೂಟರ್ ಪರಿಣಿತರು ಕಾರ್ಯ ನಿರ್ವಹಿಸುತ್ತಾರೆ. ಯಾವುದೇ ಮೂರನೇ ವ್ಯಕ್ತಿಯ ಸರ್ವರ್ ಸೇವೆಗೆ ಇಲ್ಲಿ ಅವಕಾಶವಿರುವುದಿಲ್ಲ. ಹಾಗಾಗಿ ಇದು ಅತಿ ಸುರಕ್ಷಿತ ತಂತ್ರಜ್ಞಾನ ಎಂದು ಐಟಿ ಪರಿಣಿತ ರಜತ್ ತಿಳಿಸಿದ್ದಾರೆ.

    ಡಿಜಿಲಾಕರ್ ಹಾಗೂ ನ್ಯಾಡ್ ಬಳಸಿದ್ರೆ ಎದುರಾಗೋ ತೊಂದರೆಗಳೇನು?

    * ಇವುಗಳಲ್ಲಿ ಸೆಂಟ್ರಲೈಸ್ಡ್ ಸರ್ವರ್ ಮೂಲಕ ಎಲ್ಲಾ ಮಾಹಿತಿ ಕ್ರೋಢೀಕರಿಸಲಾಗುತ್ತದೆ.
    * ಥರ್ಡ್ ಪಾರ್ಟಿ ಸರ್ವರ್ ಬಳಕೆ ಮಾಡುವುದರಿಂದ ಬಳಕೆದಾರರಿಗೆ ಆತಂಕವಿರುತ್ತದೆ.
    * ಹ್ಯಾಕರ್ಸ್ ಸಹಾಯದಿಂದ ಸರ್ವರ್ ಹ್ಯಾಕ್ ಮಾಡಬಹುದು.
    * ಮೇಲಿನ ಸಂಸ್ಥೆಗಳಲ್ಲಿನ ಸಿಬ್ಬಂದಿಗಳ ಸಹಾಯದಿಂದ ಡೇಟಾ ಬದಲಾಯಿಸಬಹುದು.
    * ಮಾರ್ಕ್ಸ್ ಕಾರ್ಡ್ ಗಳನ್ನು ದುರುಪಯೋಗ ಪಡೆಸಿಕೊಳ್ಳಬಹುದು.

    ಪಿಯು ನಿರ್ದೇಶಕರು ಎಷ್ಟೇ ಒಳ್ಳೆಯ ಉದ್ದೇಶದಿಂದ ಡಿಜಿಲಾಕರ್ ನಂತ ಸೇವೆ ವಿದ್ಯಾರ್ಥಿಗಳಿಗೆ ನೀಡಿದರು ಹ್ಯಾಕರ್ಸ್ ಗಳ ಹಾವಳಿ ವಿದ್ಯಾರ್ಥಿಗಳನ್ನು ಕಾಡುತ್ತಿದೆ.

  • ಮಹಿಳೆಯರಿಬ್ಬರ ಬ್ಯಾಂಕ್ ಅಕೌಂಟ್ ಹ್ಯಾಕ್-30 ಲಕ್ಷ ರೂ. ಡ್ರಾ ಮಾಡ್ಕೊಂಡ ಹ್ಯಾಕರ್ಸ್

    ಮಹಿಳೆಯರಿಬ್ಬರ ಬ್ಯಾಂಕ್ ಅಕೌಂಟ್ ಹ್ಯಾಕ್-30 ಲಕ್ಷ ರೂ. ಡ್ರಾ ಮಾಡ್ಕೊಂಡ ಹ್ಯಾಕರ್ಸ್

    ಧಾರವಾಡ: ಮಹಿಳೆಯರಿಬ್ಬರ ಬ್ಯಾಂಕ್ ಖಾತೆ ಹ್ಯಾಕ್ ಮಾಡಿ 30 ಲಕ್ಷ ರೂ. ಡ್ರಾ ಮಾಡಿಕೊಂಡ ಘಟನೆ ನಗರದಲ್ಲಿ ನಡೆದಿದೆ.

    ನಗರದ ಶೆಟ್ಟರ್ ಕಾಲೋನಿಯ ನಿವಾಸಿ ಎಂ.ಬಿ. ಅಳಗವಾಡಿ ಮತ್ತು ಸನ್ಮತಿ ನಗರದ ಸುಧಾ ಕೊಡಲಾಯ್ ಎಂಬವರ ಖಾತೆಯಿಂದ ಹಣ ಡ್ರಾ ಮಾಡಲಾಗಿದೆ. ಎರಡೂ ಕೂಡ ಸೇವಿಂಗ್ಸ್ ಖಾತೆಗಳಾಗಿದ್ದು, ಎಂ.ಬಿ.ಅಳಗವಾಡಿ ಖಾತೆಯಿಂದ ಬರೋಬ್ಬರಿ 16 ಲಕ್ಷ ರೂ. ಮತ್ತು ಸುಧಾ ಅವರ ಖಾತೆಯಿಂದ 13 ಲಕ್ಷ ರೂ. ಹಣವನ್ನು ಡ್ರಾ ಮಾಡಲಾಗಿದೆ.

    ನಗರದ ಕಾರ್ಪೋರೇಷನ್ ಸರ್ಕಲ್ ಬಳಿಯ ಎಸ್‍ಬಿಐ ಶಾಖೆಯಲ್ಲಿಯ ಎರಡೂ ಖಾತೆಗಳಿಂದ ಹ್ಯಾಕರ್ಸ್ ಗಳು ಹಂತ ಹಂತವಾಗಿ ಹಣ ಡ್ರಾ ಮಾಡಿಕೊಂಡಿದ್ದಾರೆ. ಎರಡು ತಿಂಗಳ ಅವಧಿಯಲ್ಲಿ ಹಣ ಡ್ರಾ ಮಾಡಿದ್ದು, ಶನಿವಾರ ಪಾಸ್‍ಬುಕ್ ಎಂಟ್ರಿ ಮಾಡಿಸುವಾಗ ಪ್ರಕರಣ ಬೆಳಕಿಗೆ ಬಂದಿದೆ.

    ಘಟನೆ ಸಂಬಂಧ ಧಾರವಾಡ ಶಹರಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಸ್ವಾತಂತ್ರೋತ್ಸವದ ದಿನವೇ ಪಾಕಿಸ್ತಾನದ ಸರ್ಕಾರಿ ವೆಬ್‍ಸೈಟ್‍ಗಳನ್ನ ಹ್ಯಾಕ್ ಮಾಡಿದ ಭಾರತೀಯ ಹ್ಯಾಕರ್ಸ್

    ಸ್ವಾತಂತ್ರೋತ್ಸವದ ದಿನವೇ ಪಾಕಿಸ್ತಾನದ ಸರ್ಕಾರಿ ವೆಬ್‍ಸೈಟ್‍ಗಳನ್ನ ಹ್ಯಾಕ್ ಮಾಡಿದ ಭಾರತೀಯ ಹ್ಯಾಕರ್ಸ್

     

    ನವದೆಹಲಿ: ಪಾಕಿಸ್ತಾನದ ಸ್ವಾತಂತ್ರ್ಯ ದಿನಾಚರಣೆಯಾದ ಆಗಸ್ಟ್ 14ರಂದು ಅಂದ್ರೆ ನಿನ್ನೆ ಭಾರತೀಯ ಹ್ಯಾಕರ್‍ಗಳು ಪಾಕಿಸ್ತಾನದ ವೆಬ್‍ಸೈಟ್‍ಗಳನ್ನ ಹ್ಯಾಕ್ ಮಾಡಿದ್ದಾರೆ. ಪ್ರಮುಖ ಸರ್ಕಾರಿ ತಾಣಗಳನ್ನೂ ಸೇರಿದಂತೆ ಸುಮಾರು 500 ವೆಬ್‍ಸೈಟ್‍ಗಳನ್ನ ಹ್ಯಾಕ್ ಮಾಡಲಾಗಿದ್ದು, ಭಾರತದ ಪರವಾದ ಸಾಲುಗಳನ್ನ ಹಾಕಿದ್ದಾರೆ.

    ಪಾಕಿಸ್ತಾನದ ಕೆಲವು ಪ್ರಮುಖ ಸಚಿವಾಲಯದ ವೆಬ್‍ಸೈಟ್‍ಗಳನ್ನ ಹ್ಯಾಕ್ ಮಾಡಲಾಗಿದೆ. ರಕ್ಷಣಾ ಸಚಿವಾಲಯ, ಹವಾಮಾನ ಬದಲಾವಣೆ ಸಚಿವಾಲಯ, ಜಲ ಮತ್ತು ವಿದ್ಯುತ್ ಸಚಿವಾಲಯ, ಮಾಹಿತಿ ತಂತ್ರಜ್ಞಾನ ಸಚಿವಾಲಯ ಸರಿದಂತೆ ಇತರೆ ಸಚಿವಾಲಯಗಳ ವೆಬ್‍ಸೈಟ್‍ಗಳು ಹ್ಯಾಕ್ ಆಗಿವೆ.

    ಇನ್ನೂ ಕಾರ್ಯನಿರತವಾಗದ ಕೆಲವು ವೆಬ್‍ಸೈಟ್‍ಗಳಲ್ಲಿ “ವೆಬ್‍ಸೈಟ್ ಅಂಡರ್ ಮೇಂಟೆನೆನ್ಸ್” ಎಂಬ ಸಂದೇಶವಿದೆ. ಲುಲು ಸೆಕ್ ಇಂಡಿಯಾ ಎಂಬ ಗುಂಪು ಈ ಹ್ಯಾಕಿಂಗ್ ಮಾಡಿರುವುದಾಗಿ ಇಲ್ಲಿನ ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಧಿಕಾರಿಯೊಬ್ಬರು ಹೇಳಿದ್ದಾರೆ.

    ಪಾಕಿಸ್ತಾನದ ಸರ್ಕಾರಿ ವೆಬ್‍ಸೈಟ್‍ಗಳ ಮೇಲೆ ಭಾರತೀಯ ಹ್ಯಾಕರ್‍ಗಳು ಸೈಬರ್ ದಾಳಿ ಮಾಡಿರುವುದು ಇದೇ ಮೊದಲೇನಲ್ಲ. 2016ರ ಅಕ್ಟೋಬರ್‍ನಲ್ಲಿ ಪ್ರಮುಖ ಸರ್ಕಾರಿ ನೆಟ್‍ವರ್ಕ್‍ಗಳ ಮೇಲೆ ಭಾರತೀಯ ಹ್ಯಾಕರ್‍ಗಳು ದಾಳಿ ಮಾಡಿ ಅವರ ಕಂಪ್ಯೂಟರ್ ಮತ್ತು ಮಾಹಿತಿಗಳನ್ನ ಲಾಕ್ ಮಾಡಿದ್ದರು. ಪಾಕಿಸ್ತಾನಿ ಹ್ಯಾಕರ್‍ಗಳೂ ಕೂಡ ಭಾರತೀಯ ಶೈಕ್ಷಣಿಕ ಸಂಸ್ಥೆಗಳ ಹಲವಾರು ವೆಬ್‍ಸೈಟ್‍ಗಳನ್ನ ಇದೇ ವರ್ಷ ಹ್ಯಾಕ್ ಮಾಡಿದ್ದರು.

    https://twitter.com/dhunnaaditya/status/897106349602910208