Tag: Hacker Sriki

  • ಬಿಟ್‌ ಕಾಯಿನ್‌ ಹಗರಣ – ಕಿಂಗ್‌ಪಿನ್‌ ಶ್ರೀಕಿ ಸೇರಿ 3 ಆರೋಪಿಗಳಿಗೆ ಜಾಮೀನು

    ಬಿಟ್‌ ಕಾಯಿನ್‌ ಹಗರಣ – ಕಿಂಗ್‌ಪಿನ್‌ ಶ್ರೀಕಿ ಸೇರಿ 3 ಆರೋಪಿಗಳಿಗೆ ಜಾಮೀನು

    ತುಮಕೂರು: ಬಿಟ್‌ ಕಾಯಿನ್‌ ಕಳವು ಆರೋಪ ಪ್ರಕರಣದಲ್ಲಿ ಆರೋಪಿ ಶ್ರೀಕಿ ಸೇರಿದಂತೆ ಮೂವರಿಗೆ ತುಮಕೂರು ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

    ಶ್ರೀಕಿ ಜೊತೆಗೆ ರಮೇಶ್, ರಬೀನ್ ಖಂಡೇಲ್ ವಾಲಗೆ ಜಾಮೀನು ಸಿಕ್ಕಿದೆ. ಈ ಮೂವರು ಆರೊಪಿಗಳು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ 1ನೇ ಹೆಚ್ಚುವರಿ ಹಿರಿಯ ಸಿವಿಲ್ ಹಾಗೂ ಜೆಎಂಎಫ್‌ಸಿ ಕೋರ್ಟ್‌ನಿಂದ ಜಾಮೀನು ಸಿಕ್ಕಿದೆ.

    ನ್ಯಾಯಾಧೀಶ ಎನ್.ಸುಬ್ರಹ್ಮಣ್ಯ ಅವರು ಆರೋಪಿಗಳಿಗೆ ಜಾಮೀನು ನೀಡಿ ಆದೇಶಿಸಿದ್ದಾರೆ. ಶ್ರೀಕಿಯಿಂದ 50 ಸಾವಿರ ಮೊತ್ತದ ಬಾಂಡ್ ಹಾಗೂ ಓರ್ವ ವ್ಯಕ್ತಿ ಶೂರಿಟಿ ಪಡೆಯಲಾಗಿದೆ. ರಾಬೀನ್ ಖಂಡೇಲ್ ವಾಲ ಬಳಿ 25 ಸಾವಿರ ಮೌಲ್ಯದ ಬಾಂಡ್ ಹಾಗೂ ಓರ್ವ ವ್ಯಕ್ತಿಯ ಶೂರಿಟಿ ಪಡೆಯಲಾಗಿದೆ. ತನಿಖೆ ನಡೆಸಿ 60 ದಿನದೊಳಗೆ ಪೊಲೀಸರು ಚಾರ್ಜ್‌ಶೀಟ್‌ ಸಲ್ಲಿಸಿದ್ದಾರೆ.

    ಚಾರ್ಜ್‌ಶೀಟ್‌ ಸಲ್ಲಿಸಲು ವಿಳಂಬವಾದ ಹಿನ್ನೆಲೆ ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಜಾಮೀನು ಮಂಜೂರು ಮಾಡಲಾಗಿದೆ. ತುಮಕೂರು ಉದ್ಯಮಿಯೊಬ್ಬರಿಗೆ ಆನ್‌ಲೈನ್ ವಂಚಿಸಿದ ಹಿನ್ನೆಲೆಯಲ್ಲಿ ಎಫ್‌ಐಆರ್‌ ದಾಖಲಾಗಿತ್ತು.

  • ಹ್ಯಾಕರ್ ಶ್ರೀಕಿ ಪೊಲೀಸರಿಗಿಂತ ಬಹಳ ಬುದ್ಧಿವಂತ: ಗೃಹ ಸಚಿವ

    ಹ್ಯಾಕರ್ ಶ್ರೀಕಿ ಪೊಲೀಸರಿಗಿಂತ ಬಹಳ ಬುದ್ಧಿವಂತ: ಗೃಹ ಸಚಿವ

    ಚಿಕ್ಕಬಳ್ಳಾಪುರ: ಬಿಟ್ ಕಾಯಿನ್ ಹಗರಣದಲ್ಲಿ ಆರೋಪಿತನಾಗಿದ್ದ ಹ್ಯಾಕರ್ ಶ್ರೀಕಿ ಪೊಲೀಸರಗಿಂತ ಬಹಳ ಬುದ್ಧಿವಂತ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅಭಿಪ್ರಾಯಪಟ್ಟಿದ್ದಾರೆ.

    ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಂತರ ಉತ್ತಮ ಕೆಲಸ ಮಾಡಿದ ಸಿಬ್ಬಂದಿಗೆ ಪ್ರಶಸ್ತಿ ಪ್ರದಾನ ಮಾಡುವ ವೇಳೆ ಮಾತನಾಡಿದ ಅವರು, ಶ್ರೀಕಿ ಅರೆಸ್ಟ್ ಆಗೋವರೆಗೂ ಅಂತ ತುಂಬಾ ಬುದ್ಧಿವಂತ ಎಂಬುದು ನಮಗೆ ಗೊತ್ತಿರಲಿಲ್ಲ. ಈ ವಿಚಾರ ಆತ ಆರೆಸ್ಟ್‌ ಆದ ನಂತರವೇ ತಿಳಿಯಿತು. ಆದರೆ ಬುದ್ಧಿವಂತಿಕೆಯಲ್ಲಿ ಆತನಿಗಿಂತ ನಮ್ಮ ಪೊಲೀಸರು ಮುಂದೆ ಇರಬೇಕು. ಅಂತಹ ತಂತ್ರಜ್ಞರು ಪೊಲೀಸ್ ಇಲಾಖೆಗೆ ಅಗತ್ಯ ಎಂದು ಹೇಳಿದ್ದಾರೆ. ಇದನ್ನೂ ಓದಿ: ಪೋಕರ್ ವೆಬ್‍ಸೈಟ್ ಹ್ಯಾಕ್ – ಕೋಟ್ಯಂತರ ಹಣ ಮಾಡಿದ್ದ ಕುಖ್ಯಾತ ಹ್ಯಾಕರ್ ಅರೆಸ್ಟ್

    ಈ ವೇಳೆ ನಮ್ಮ ಇಲಾಖೆಯಲ್ಲಿ ಯಾರಾದರೂ ಅಂತಹವರು ಇದ್ದಾರಾ ಅಂತ ಕೇಂದ್ರ ವಲಯ ಐಜಿಪಿಯನ್ನು ಕೇಳಿದರು. ಅಂತಹವರು ಇಲಾಖೆಯಲ್ಲಿ ಇಲ್ಲ, ಹೊರಗೆ ಇದ್ದಾರೆ ಎಂದು ಐಜಿಪಿ ಉತ್ತರಿಸಿದರು. ನಂತರ ಮಾತನಾಡಿದ ಸಚಿವರು, ಪೊಲೀಸ್ ಇಲಾಖೆಯಲ್ಲಿ ಅಂತಹ ನಿಪುಣರ ಅವಶ್ಯಕತೆ ಇದೆ. ಅಂತಹವರನ್ನು ತಯಾರು ಮಾಡಬೇಕು ಎಂದು ತಿಳಿಸಿದ್ದಾರೆ.

    ಶ್ರೀಕೃಷ್ಣ (ಶ್ರೀಕಿ) ಬೆಂಗಳೂರಿನ ನಿವಾಸಿಯಾಗಿದ್ದು, 2014 ರಿಂದ 2017ರವರೆಗೆ ಈತ ನೆದರ್‌ಲ್ಯಾಂಡ್‌ ಆಮ್‌ಸ್ಟರ್‌ಡ್ಯಾಮ್ ಕಂಪ್ಯೂಟರ್ ಸೈನ್ಸ್‌ನಲ್ಲಿ ಬಿಎಸ್‍ಸಿ ಪದವಿ ಪಡೆದ ಬಳಿಕ ವೆಬ್‍ಸೈಟ್ ಹ್ಯಾಕ್ ಮಾಡಲು ಆರಂಭಿಸಿದ್ದ. ಆರಂಭದಲ್ಲಿ ಸಣ್ಣ ಪಟ್ಟ ವೆಬ್‍ಸೈಟ್‍ಗಳನ್ನು ಹ್ಯಾಕ್ ಮಾಡಿ ಅನುಭವ ಪಡೆದ ಬಳಿಕ ದೊಡ್ಡ ವೆಬ್‍ಸೈಟ್‍ಗಳನ್ನು ಹ್ಯಾಕ್ ಮಾಡಿ ಇದನ್ನೇ ಉದ್ಯೋಗ ಮಾಡಿಕೊಂಡಿದ್ದ. ಇದನ್ನೂ ಓದಿ: ಹ್ಯಾಕಿಂಗ್‌ ಮಾಡಲು ಏಕಾಗ್ರತೆ ಬೇಕು, ಅದಕ್ಕಾಗಿ ಭಗವದ್ಗೀತೆ ಓದುತ್ತೇನೆ – ಹ್ಯಾಕರ್‌ ಶ್ರೀಕಿ

    ವೆಬ್‍ಸೈಟ್‍ಗಳನ್ನು ಹ್ಯಾಕ್ ಮಾಡಿದ ಬಳಿಕ ಆತ ಬಿಟ್‍ಕಾಯಿನ್ ಬಳಸಿ ಹಣವನ್ನು ಪಡೆಯುತ್ತಿದ್ದ. ಈ ಎಲ್ಲ ಕೆಲಸಕ್ಕೆ ಡಾರ್ಕ್ ವೆಬ್ ಬಳಕೆ ಮಾಡುತ್ತಿದ್ದ. ಡಾರ್ಕ್ ವೆಬ್ ಬಳಕೆ ಮಾಡುತ್ತಿದ್ದ ಕಾರಣ ಈತನ ಮಾಹಿತಿಗಳು ಸಿಗುತ್ತಿರಲಿಲ್ಲ. ಬಿಟ್ ಕಾಯಿನ್ ಮೂಲಕ ಡ್ರಗ್ಸ್ ತರಿಸಿಕೊಂಡು ಬೇಕಾದ ವ್ಯಕ್ತಿಗಳಿಗೆ ನೀಡುತ್ತಿದ್ದ. ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀಕಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು.

  • ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಜೈಲಿನಿಂದ ಬಿಡುಗಡೆ

    ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಜೈಲಿನಿಂದ ಬಿಡುಗಡೆ

    – ನನಗೆ ಏನೂ ಗೊತ್ತಿಲ್ಲ ನನ್ನ ಪಾಡಿಗೆ ಬಿಟ್ಬಿಡಿ
    – ಚಪ್ಪಲಿ ಇಲ್ದೇ ಏಕಾಂಗಿಯಾಗಿ ಹೊರಟ ಶ್ರೀಕಿ

    ಬೆಂಗಳೂರು: ಖಾಸಗಿ ಹೋಟೆಲ್ ನಲ್ಲಿ ನಡೆದ ಗಲಾಟೆ, ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಜಾಮೀನು ಪಡೆದು ಹೊರ ಬಂದ ಬಳಿಕ ನನಗೆ ಏನೂ ಗೊತ್ತಿಲ್ಲ ನನ್ನ ಪಾಡಿಗೆ ನನ್ನ ಬಿಟ್ಟು ಬಿಡಿ ಎಂದು ಹೇಳಿಕೆ ನೀಡಿದ್ದಾನೆ.

    ಜೈಲಿನಿಂದ ಹೊರ ಬಂದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಶ್ರೀಕಿ, ನಾನ್ ಹೇಳೋಕೆ ಏನು ಇಲ್ಲ. ಸುಮ್ಮನೆ ನನ್ನ ಹೆಸರು ತರುತ್ತಿದ್ದಾರೆ. ನಂಗೇನು ಗೊತ್ತಿಲ್ಲ. ನಾನ್ ಹೋಗಬೇಕು ನನ್ನ ಬಿಟ್ಟುಬಿಡಿ. ಬಿಟ್ ಕಾಯಿನ್ ಬಗ್ಗೆ ನಂಗೆ ಏನು ಇಲ್ಲ ಎಂದು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ನನಗೆ ಏನು ಗೊತ್ತಿಲ್ಲ ಎಂದಿದ್ದಾನೆ.ಇದನ್ನೂ ಓದಿ: ಹ್ಯಾಕರ್ ಶ್ರೀಕಿಯಿಂದ 9 ಕೋಟಿ ಮೌಲ್ಯದ 31 ಬಿಟ್ ಕಾಯಿನ್ ಜಪ್ತಿ

    ನಾನು ಏನು ಮಾಡಿಲ್ಲ ಮಾಧ್ಯಮದವರೇ ಎಲ್ಲವನ್ನೂ ಸೃಷ್ಟಿ ಮಾಡುತ್ತಿದ್ದಾರೆ. ನನಗೆ ಜಾಮೀನು ಯಾರು ನೀಡಿದ್ದಾರೆ ನನಗೆ ಗೊತ್ತಿಲ್ಲ. ಪೋಲಿಸರು ಹಣ ಸೀಜ್ ಮಾಡಿರುವುದು ಸುಳ್ಳು. ನಾನು ಹೆಬ್ಬಾಳದ ಆಸ್ಪತ್ರೆಗೆ ತೆರಳುತ್ತಿದ್ದೇನೆ. ನಮ್ಮ ಅಪ್ಪ ಆಸ್ಪತ್ರೆಯಲ್ಲಿ ಇದ್ದಾರೆ. ಎಂದು ಬಾಡಿಗೆ ಆಟೋದಲ್ಲಿ ಶ್ರೀಕಿ ಹೊರಟು ಹೋಗಿದ್ದಾನೆ. ಇದನ್ನೂ ಓದಿ: ಕುಖ್ಯಾತ ಹ್ಯಾಕರ್ ಶ್ರೀಕಿ ಬಂಧನ

    ಖಾಸಗಿ ಹೋಟೆಲ್‍ನಲ್ಲಿ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೋಟೆಲ್ ಸಿಬ್ಬಂದಿ ಜೀವನ್ ಭೀಮಾನಗರ ಪೊಲೀಸರಿಗೆ ದೂರು ನೀಡಿದ್ದ ಹಿನ್ನೆಲೆ ಶ್ರೀಕಿ ಮತ್ತು ಆತನ ಸ್ನೇಹಿತ ವಿಷ್ಣುವನ್ನು ಬಂಧಿಸಲಾಗಿತ್ತು. ಬಳಿಕ ಶ್ರೀಕಿಯನ್ನು ನ್ಯಾಯಾಂಗ ಬಂಧನಕ್ಕೆ ಪೊಲೀಸರು ಒಪ್ಪಿಸಿದ್ದರು. ವಿಷ್ಣುವನ್ನು ಕಷ್ಟಡಿಗೆ ತೆಗೆದುಕೊಂಡು ಪೊಲೀಸರು ವಿಚಾರಣೆ ನಡೆಸುತ್ತಿರುವ ಬೆನ್ನಲ್ಲೆ ಪರಪ್ಪನ ಅಗ್ರಹಾರದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಶ್ರೀಕಿಗೆ ನಿನ್ನೆ ಸಂಜೆ ನ್ಯಾಯಾಲಯ ಜಾಮೀನು ನೀಡಿತ್ತು. ಇಂದು ಮಧ್ಯಾಹ್ನ ಜಾಮೀನು ಪ್ರತಿ ಜೈಲಧಿಕಾರಿಗಳ ಕೈ ತಲುಪಿರುವ ಹಿನ್ನೆಲೆ, ಬಿಡುಗಡೆ ಗೊಳಿಸಿದ್ದಾರೆ.

  • ಕುಖ್ಯಾತ ಹ್ಯಾಕರ್ ಶ್ರೀಕಿ ಬಂಧನ

    ಕುಖ್ಯಾತ ಹ್ಯಾಕರ್ ಶ್ರೀಕಿ ಬಂಧನ

    ಬೆಂಗಳೂರು: ರಾಜ್ಯದಲ್ಲಿ ಬಿಟ್ ಕಾಯಿನ್ ವಿಚಾರ ಚರ್ಚೆಯಲ್ಲಿರುವಾಗಲೇ ಕುಖ್ಯಾತ ಹ್ಯಾಕರ್ ಶ್ರೀಕಿಯನ್ನು ಪೊಲೀಸರು ಬಂಧಿಸಿದ್ದಾರೆ. ಹೋಟೆಲ್ ಸೆಕ್ಯೂರಿಟಿ ಮೇಲೆ ಹಲ್ಲೆ ಮಾಡಿದ ಆರೋಪದ ಮೇಲೆ ಜೀವನಭೀಮಾನಗರ ಪೊಲೀಸರು ನಿನ್ನೆ ಮಧ್ಯಾಹ್ನ ಶ್ರೀಕಿ ಮತ್ತು ಸ್ನೇಹಿತ ವಿಷ್ಣು ಭಟ್‍ನನ್ನು ಬಂಧಿಸಿದ್ದಾರೆ.

    ನಿನ್ನೆ ತಡರಾತ್ರಿವರೆಗೆ ಶ್ರೀಕಿ ವಿಚಾರಣೆ ನಡೆಸಿದ್ದು, ಆತನ 2 ಮೊಬೈಲನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದ್ದಾರೆ. ಜೊತೆಗೆ ಶ್ರೀಕಿಯ ನಾಲ್ಕು ಲ್ಯಾಪ್ ಟ್ಯಾಪ್‍ಗಳನ್ನು ಸಹ ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಪ್ರಸ್ತುತ ಇವರ ವಿರುದ್ಧ ಐಪಿಸಿ ಸೆಕ್ಷನ್ 504, 348, 323 ಅಡಿ ಪ್ರಕರಣ ದಾಖಲಾಗಿದ್ದು, ಇಂದು ನ್ಯಾಯಾಧೀಶರ ಮುಂದೆ ಆರೋಪಿಗಳನ್ನು ಪೊಲೀಸರು ಹಾಜರು ಪಡಿಸಲಿದ್ದಾರೆ. ಇದನ್ನೂ ಓದಿ: ಪಂಚಮಸಾಲಿ ಮೂರನೇ ಪೀಠ ಅಸ್ತಿತ್ವಕ್ಕೆ..?

    ಪ್ರಾಥಮಿಕ ತನಿಖೆಯಲ್ಲಿ ವಿಷ್ಣು ಭಟ್ ಹಲ್ಲೆ ಮಾಡಿರೋದು ಸಾಬೀತು ಆಗಿದ್ದು, ಹಲ್ಲೆ ವೇಳೆ ಶ್ರೀಕಿ ವಿಷ್ಣು ಜೊತೆಗಿದ್ದ, ಆದ್ರೆ ಹಲ್ಲೆ ಮಾಡಿಲ್ಲ ಅನ್ನೋ ಮಾಹಿತಿ ಕೂಡ ಪೊಲೀಸರಿಗೆ ಲಭ್ಯವಾಗಿದೆ. ಪ್ರಸ್ತುತ ವಿಷ್ಣು ಭಟ್ ಮತ್ತು ಶ್ರೀಕಿ ಮೆಡಿಕಲ್ ಚೆಕಪ್ ಮಾಡಿಸಿರೋ ಪೊಲೀಸರು ಮೆಡಿಕಲ್ ರಿಪೋರ್ಟ್ ಗಾಗಿ ಕಾಯುತ್ತಿದ್ದಾರೆ.

    ಮೆಡಿಕಲ್ ನಲ್ಲಿ ಮಾದಕ ವಸ್ತು ಸೇವನೆ ಪಕ್ಕಾ ಆದ್ರೆ ಎನ್‍ಡಿಪಿಎಸ್ ಕೇಸ್ ದಾಖಲು ಮಾಡುವ ಸಿದ್ಧತೆಯಲ್ಲಿ ಪೊಲೀಸರು ಇದ್ದಾರೆ. ಬಿಟ್ ಕಾಯಿನ್ ವಿಚಾರದಲ್ಲಿ ರಾಜಕೀಯ ವಲಯದಲ್ಲಿ ಹ್ಯಾಕರ್ ಶ್ರೀಕಿ ಹೆಸರು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.