Tag: H Viswanath

  • ಬಿಎಸ್‍ವೈಗಾದ ನಿಯಮವೇ ಅನರ್ಹರಿಗೂ ಅನ್ವಯ – ಬಿಜೆಪಿ ಹೈಕಮಾಂಡ್ ಸಂದೇಶ

    ಬಿಎಸ್‍ವೈಗಾದ ನಿಯಮವೇ ಅನರ್ಹರಿಗೂ ಅನ್ವಯ – ಬಿಜೆಪಿ ಹೈಕಮಾಂಡ್ ಸಂದೇಶ

    ಬೆಂಗಳೂರು: ಸಿಎಂ ಯಡಿಯೂರಪ್ಪಗೆ ಅನ್ವಯವಾದ ನಿಯಮವೇ ಅನರ್ಹ ಶಾಸಕರಿಗೂ ಅನ್ವಯ ಆಗುತ್ತದೆ ಎಂದು ಹೇಳುವ ಮೂಲಕ ಬಿಜೆಪಿ ಹೈಕಮಾಂಡ್ ಅನರ್ಹ ಶಾಸಕರಿಗೆ ಶಾಕ್ ನೀಡಿದೆ.

    ಫಾದರ್ ಕಮ್ ಸನ್ಸ್ ಪಾಲಿಟಿಕ್ಸ್ ಗೆ ಬ್ರೇಕ್ ಹಾಕಿರುವ ಬಿಜೆಪಿ ಹೈಕಮಾಂಡ್ ಕಳೆದ ವಿಧಾನಸಭಾ ಚುನಾವಣೆಯಲ್ಲಿ ವರುಣಾ ಕ್ಷೇತ್ರದಲ್ಲಿ ಬಿಎಸ್‍ವೈ ಪುತ್ರ ವಿಜಯೇಂದ್ರಗೆ ಟಿಕೆಟ್ ನಿರಾಕರಿಸಿದ್ದನ್ನೇ ಪ್ರಸ್ತಾಪಿಸಿ ಅನರ್ಹರಿಗೂ ಇದೇ ನಿಯಮ ಅನ್ವಯ ಆಗುತ್ತದೆ ಎಂದು ತಿಳಿಸಿದೆ.

    ಈ ನಿಯಮದ ಪ್ರಕಾರ ಈ ಉಪಚುನಾವಣೆಯಲ್ಲಿ ಅಪ್ಪನಿಗೆ ಮಾತ್ರ ಬಿಜೆಪಿಯಿಂದ ಟಿಕೆಟ್ ಸಿಗಲಿದ್ದು, ಅಪ್ಪನ ಹೆಸರಿನಲ್ಲಿ ಮಗನಿಗೆ ಟಿಕೆಟ್ ನೀಡಲು ಸಾಧ್ಯವಿಲ್ಲ ಎಂದು ಹೈಕಮಾಂಡ್ ಖಡಕ್ ಸೂಚನೆ ನೀಡಿದೆ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ. ಈ ನಿಯಮದಿಂದ ಮಗನನ್ನು ಹುಣುಸೂರು ಕ್ಷೇತ್ರದಲ್ಲಿ ನಿಲ್ಲಿಸಬೇಕು ಎಂದುಕೊಂಡಿದ್ದ ಅನರ್ಹ ಶಾಸಕ ಹೆಚ್ ವಿಶ್ವನಾಥ್‍ಗೆ ಬಿಗ್ ಶಾಕ್ ಆಗಿದೆ.

    ಈ ವಿಚಾರವಾಗಿ ಮೈಸೂರು ದಸರಾ ಉದ್ಘಾಟನೆಗೆ ಹೋಗಿದ್ದಾಗ ವಿಶ್ವನಾಥ್ ಜತೆ ಸಿಎಂ ಬಿಎಸ್‍ವೈ ಮಾತನಾಡಿದ್ದು, ಚುನಾವಣೆಗೆ ನಿಂತರೆ ನೀವು ನಿಲ್ಲಬೇಕು ವಿಶ್ವನಾಥ್, ಇಲ್ಲದಿದ್ದರೆ ವಿಧಾನ ಪರಿಷತ್ ಸದಸ್ಯರಗಲು ರೆಡಿಯಾಗಿ. ಆದರೆ ಬಿಜೆಪಿಯಿಂದ ಮಕ್ಕಳಿಗೆ ಟಿಕೆಟ್ ನೀಡುವುದಿಲ್ಲ ಎಂದು ನೇರವಾಗಿ ಹೇಳಿದ್ದಾರೆ. ಹೈಕಮಾಂಡ್ ಹೇಳಿರುವ ಈ ನಿಯಮಕ್ಕೆ ವಿಶ್ವನಾಥ್, ನಾನೇ ಸ್ಪರ್ಧೆ ಮಾಡುತ್ತೇನೆ ಎಂದು ಹೇಳಿದ್ದಾರೆ ಎನ್ನಲಾಗಿದೆ.

    ಅನರ್ಹರ ಪ್ರಕರಣ ಈಗ ಸುಪ್ರೀಂ ಕೋರ್ಟಿನಲ್ಲಿ. ಒಂದು ವೇಳೆ ಪರವಾಗಿ ತೀರ್ಪು ಬಂದರೆ ಸ್ಪರ್ಧೆಗೆ ಯಾವುದೇ ಸಮಸ್ಯೆ ಇಲ್ಲ. ಆದರೆ ವಿರುದ್ಧ ತೀರ್ಪು ಬಂದರೆ ಈ ಕ್ಷೇತ್ರದಲ್ಲಿ ಯಾರು ಸ್ಪರ್ಧೆ ಮಾಡುತ್ತಾರೆ ಎನ್ನುವ ಕುತೂಹಲ ಹೆಚ್ಚಾಗಿದೆ.

  • ನೀವು ಸೆಕ್ಸ್ ಫಿಲಂ ಹೀರೋ, ಹೀರೋಯಿನ್ ಜೊತೆ ಮಾತಾಡಿದ್ದಕ್ಕೆ ದಾಖಲೆ ಇದೆ: ಸಾರಾ ಮಹೇಶ್

    ನೀವು ಸೆಕ್ಸ್ ಫಿಲಂ ಹೀರೋ, ಹೀರೋಯಿನ್ ಜೊತೆ ಮಾತಾಡಿದ್ದಕ್ಕೆ ದಾಖಲೆ ಇದೆ: ಸಾರಾ ಮಹೇಶ್

    ಮೈಸೂರು: ಯಾವ ಹೀರೋಯಿನ್ ಜೊತೆ ಯಾವ ರೀತಿ ಮಾತನಾಡಿದ್ದೀರಿ ಅನ್ನೋ ದಾಖಲೆ ಇದೆ ಎಂದು ಮಾಜಿ ಸಚಿವ ಸಾರಾ ಮಹೇಶ್ ಅವರು ಅನರ್ಹ ಶಾಸಕ ಹೆಚ್ ವಿಶ್ವನಾಥ್ ವಿರುದ್ಧ ಹೊಸ ಬಾಂಬ್ ಸಿಡಿಸಿದ್ದಾರೆ.

    ಇಂದು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವಿಶ್ವನಾಥ್ ಅತೃಪ್ತ ಪ್ರೇತಾತ್ಮ. ತಾನು ಮಾಡಿದ ತಪ್ಪನ್ನು ಬೇರೆಯವರ ಮೇಲೆ ಹಾಕುವ ಪ್ರಯತ್ನ ಮಾಡುತ್ತಿದ್ದಾರೆ. ವೈಯಕ್ತಿಕವಾಗಿ ನನ್ನ ತೇಜೋವಧೆ ಮಾಡುತ್ತಿದ್ದಾರೆ. ವಿಶ್ವನಾಥ್ ಬಾಯಿ ಬಿಟ್ಟರೆ ಸುಳ್ಳು ಹೇಳುತ್ತಾರೆ. ಬನ್ನಿ ಚಾಮುಂಡಿ ಬೆಟ್ಟಕ್ಕೆ, ನಾನು ಯಾವುದೇ ಆಸೆ, ಆಮಿಷಗಳಿಗೂ ಬಲಿಯಾಗಿಲ್ಲ. ನನಗೆ ಮಂತ್ರಿ ಸ್ಥಾನ ಬೇಡ ಎಂದು ಚಾಮುಂಡಿ ದೇವಿ ಮುಂದೆ ಪ್ರಮಾಣ ಮಾಡಿ ಹೇಳಿ ಎಂದು ಸವಾಲ್ ಹಾಕಿದರು.

    ಯಾವ ಹೀರೋಯಿನ್ ಜೊತೆ ಹೇಗೆ ಮಾತಾಡಿದ್ದೀರಿ ಅನ್ನೋ ದಾಖಲೆ ಇದೆ. ನಿಮ್ಮಂಥ ಜೀವನ ನಾನು ಮಾಡಿದರೆ ಇಷ್ಟೊತ್ತಿಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೆ. ನೀವು ಸೆಕ್ಸ್ ಫಿಲಂ ಹೀರೋ. ನೀವು ಬ್ಲೂ ಬಾಯ್. ಯಾವ ಪುಣ್ಯಾತ್ಮ ನಿಮಗೆ ಹಳ್ಳಿ ಹಕ್ಕಿ ಎಂದು ಹೆಸರಿಟ್ಟನೋ. ಚಳಿಗಾಲದಲ್ಲಿ ಒಂದು ಗೂಡು, ಮಳೆಗಾಲದಲ್ಲಿ ಒಂದು ಗೂಡು, ಬೇಸಿಗೆ ಕಾಲದಲ್ಲಿ ಒಂದು ಗೂಡು ಹುಡುಕಿ ಕೊಳ್ಳುತ್ತೀರಾ ಎಂದು ಗುಡುಗಿದರು. ಇದನ್ನು ಓದಿ: ‘ಹೇ ಅಯೋಗ್ಯ’, ನನ್ನ ಬಗ್ಗೆ ಮಾತನಾಡೋ ಮುನ್ನ ಎಚ್ಚರಿಕೆ ಇರಲಿ: ಹೆಚ್. ವಿಶ್ವನಾಥ್

    25 ಲಕ್ಷ ದುಡ್ಡು ಪಡೆದಿದ್ದೇನೆ ಈ ವರ್ಗಾವಣೆ ಮಾಡಿ ಕೊಡಿ ಎಂದು ಅವತ್ತು ಕೇಳಿದರಲ್ಲ. ಅದನ್ನು ನಾನು ಮಾಡಿಸಿ ಕೊಡಲಿಲ್ಲ ಎಂದು ಹೀಗೆ ಮಾತನಾಡುತ್ತಿದ್ದೀರಾ? ನೀವು ವಕೀಲರಾಗಿದ್ದಾಗ ಒಬ್ಬ ವಿಧವೆ ನಿಮ್ಮ ಬಳಿ ನ್ಯಾಯ ಕೇಳೋಕೆ ಬಂದ ಅವರ ಕಥೆ ಏನಾಯ್ತು ಎಂದು ಹೇಳಬೇಕಾ? 1994 ರಲ್ಲಿ ಕೆಆರ್ ನಗರದ ಹಳ್ಳಿಗಳಿಗೆ ನೀವು ಹೋದಾಗ ಮನೆ ಬಾಗಿಲು ಯಾಕೆ ಹಾಕಿ ಕೊಳ್ಳುತ್ತಿದ್ದರು ಅನ್ನೋದು ಹೇಳಬೇಕಾ? ಎಂದು ವಿಶ್ವನಾಥ್ ಅವರನ್ನು ಪ್ರಶ್ನೆ ಮಾಡಿದರು.

    ನಾನು ನಿಮಗಿಂತ ಏಕವಚನದಲ್ಲಿ ಮಾತಾಡಬಲ್ಲೆ. ಆದರೆ ನಮ್ಮ ತಂದೆ ಸಂಸ್ಕಾರ ಕಲಿಸಿದ್ದಾರೆ ಅದಕ್ಕೆ ಮಾತಾಡಲ್ಲ. ಚಾಮುಂಡಿ ಬೆಟ್ಟದಲ್ಲಿ ಪ್ರಮಾಣ ಮಾಡಿ ಸಾಕು ನಾನು ರಾಜಕೀಯ ಜೀವನದಿಂದ ನಿವೃತ್ತಿ ಪಡೆಯುತ್ತೇನೆ. ನಾನಾ ಅಯೋಗ್ಯ ನೀವಾ ಅಂತಾ ತೀರ್ಮಾನವಾಗಲಿ. ಚಡ್ಡಿ ಒಗೆದರೆ ಪರವಾಗಿಲ್ಲ. ಆದರೆ ಕಂಡ ಕಂಡ ಕಡೆ ಅದನ್ನು ಬಿಚ್ಚಬಾರದು. ನಿಮ್ಮ ಯೋಗ್ಯತೆ ಮೈಸೂರು ಮತ್ತು ಮಡಿಕೇರಿ ಜನರಿಗೆ ಗೊತ್ತಿದೆ. ಕೊಚ್ಚೆ ಗುಂಡಿ ನೀವು, ನಿಮ್ಮ ಬಗ್ಗೆ ಮಾತನಾಡಿದರೆ ನಮ್ಮ ಬಾಯಿ ಹೊಲಸಾಗುತ್ತೆ. ನನ್ನ ವೈಯಕ್ತಿಕ ಜೀವನದಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲ ಎಂದು ಕಿಡಿಕಾರಿದರು.

    ನಾನು ಜನರ ಮನೆಗೆ ಹೋದರೆ ನನ್ನ ಅಣ್ಣ ಬಂದ, ತಮ್ಮ ಬಂದ, ಮಗ ಬಂದಾ ಎಂದು ಮನೆಯೊಳಗೆ ಕರೆಯುತ್ತಾರೆ. ನೀವು ಹೋದರೆ ಜನ ಎಲ್ಲಿ ನಿಮ್ಮನ್ನು ಕೂರಿಸುತ್ತಾರೆ ಎಂದು ಗೊತ್ತಿದೆ. ಅನರ್ಹ ಆದ ಮೇಲೆ ಹೆಚ್ ವಿಶ್ವನಾಥ್ ಹೋಗಿ ಹುಚ್ಚು ವಿಶ್ವನಾಥ್ ಆಗಿದ್ದಾರೆ. ಅವರಿಗೆ ಮೊದಲು ಚಿಕಿತ್ಸೆ ಕೊಡಿಸಬೇಕು. 9 ದಿವಸದ ನವರಾತ್ರಿಯಲ್ಲಿ ಚಾಮುಂಡಿ ಬೆಟ್ಟಕ್ಕೆ ಬನ್ನಿ ಇಲ್ಲ ಯಾವುದೇ ದೇವಸ್ಥಾನಕ್ಕೆ ಬಂದು ಪ್ರಮಾಣ ಮಾಡಿ ಎಂದು ಹೇಳಿದರು.

  • ‘ಹೇ ಅಯೋಗ್ಯ’, ನನ್ನ ಬಗ್ಗೆ ಮಾತನಾಡೋ ಮುನ್ನ ಎಚ್ಚರಿಕೆ ಇರಲಿ: ಹೆಚ್. ವಿಶ್ವನಾಥ್

    ‘ಹೇ ಅಯೋಗ್ಯ’, ನನ್ನ ಬಗ್ಗೆ ಮಾತನಾಡೋ ಮುನ್ನ ಎಚ್ಚರಿಕೆ ಇರಲಿ: ಹೆಚ್. ವಿಶ್ವನಾಥ್

    – ಏನೂ ಆಗಲ್ಲ, ಧೈರ್ಯವಾಗಿರಿ ಎಂದಿದ್ದಾರೆ ಸಿಎಂ

    ಮೈಸೂರು: ‘ಹೇ ಅಯೋಗ್ಯ’, ನನ್ನ ಬಗ್ಗೆ ಮಾತನಾಡುವ ಮುನ್ನ ಎಚ್ಚರಿಕೆ ಇರಲಿ ಎಂದು ಅನರ್ಹ ಶಾಸಕ ಹೆಚ್ ವಿಶ್ವನಾಥ್ ಅವರು ಮಾಜಿ ಸಚಿವ ಸಾರಾ ಮಹೇಶ್ ವಿರುದ್ಧ ಗುಡುಗಿದ್ದಾರೆ.

    ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬ್ಲೂ ಫಿಲಂ ಮಾಡಲು ಹೋಗಿ ಸಿಕ್ಕಿ ಹಾಕಿಕೊಂಡವನಲ್ಲ. ಯಾರದ್ದೋ ಮನೆಯ ಲೋಟ ತೊಳೆದಿಲ್ಲ. ರಾಮದಾಸ್ ಮನೆ ಚಡ್ಡಿ ತೊಳೆದಿಲ್ಲ. ನಮ್ಮ ತಂದೆ ಆ ಕಾಲದಿಂದಲೂ ಜಮೀನ್ದಾರರು. ಆ ಕಾಲದಲ್ಲೇ ಕುರುಬ ಸಮಾಜಕ್ಕೆ ಜಮೀನು ಕೊಟ್ಟ ವಂಶ ನಮ್ಮದು ಎಂದು ಸಾರಾ ಮಹೇಶ್ ವಿರುದ್ಧ ವಾಗ್ದಾಳಿ ಮಾಡಿದರು.

    ನಾನು ದಿನದ ಖರ್ಚಿಗಾಗಿ ಯಾರನ್ನೂ ಕೇಳುವುದಿಲ್ಲ. ‘ಹೇ ಅಯೋಗ್ಯ’, ನನ್ನ ಬಗ್ಗೆ ಮಾತನಾಡುವ ಮುನ್ನ ಎಚ್ಚರಿಕೆ ಇರಲಿ. ನಾವು ಐದು ತಲೆಮಾರಿನಿಂದ ಜಮೀನ್ದಾರರು. ಬಾಯಿಗೆ ಬಂದಂತೆ ಮಾತಾಡಬೇಡ. ನಾನು ಆಸ್ತಿ ಮಾರಿಕೊಂಡ ದಾಖಲೆ ಇದ್ದರೆ ತೆಗೆದುಕೊಂಡು ಪತ್ರಕರ್ತರ ಭವನಕ್ಕೆ ಬಾ. ಸಂವಿಧಾನದ ಮೇಲೆ ಆಣೆ ಇಟ್ಟು ಚರ್ಚೆ ಮಾಡೋಣ. ಅದನ್ನು ಬಿಟ್ಟು ಆ ದೇವಸ್ಥಾನಕ್ಕೆ ಬಾ ಈ ದೇವಸ್ಥಾನಕ್ಕೆ ಬಾ ಎಂದು ಮೆರೆಯಾಗಬೇಡ ಎಂದು ಸಾರಾ ಮಹೇಶ್‍ಗೆ ಅವಾಜ್ ಹಾಕಿದರು. ಇದನ್ನು ಓದಿ: ಯಾರ ಸಾಧನೆ ಎಷ್ಟು? ಭಾನುವಾರ ಜನರಿಗೆ ಗೊತ್ತಾಗುತ್ತೆ: ವಿಶ್ವನಾಥ್‍ಗೆ ಸಾ.ರಾ.ಮಹೇಶ್ ಸವಾಲ್

    ನಾನು ಯಾರ ಕುಟುಂಬಕ್ಕೂ ವಿಷ ಹಿಂಡಿಲ್ಲ. ನೀವು ಹಿಂಡಿದ ವಿಷದಿಂದ ಆ ಕುಟುಂಬದಲ್ಲಿ ಕಣ್ಣೀರು ಹಾಕುತ್ತಿದ್ದಾರೆ. ಹೆಚ್‍ಡಿಕೆ ಅವರ ಸುತ್ತ ಇದ್ದ ಎಚ್. ವಿಶ್ವನಾಥ್ ಎಲ್ಲಿ ಹೋದರು? ಕುಮಾರಪರ್ವ ಮಾಡಿದ ಜಿಟಿಡಿ ಎಲ್ಲಿ. ಡಾ. ರಂಗಪ್ಪ, ಎಲ್.ಆರ್. ಶಿಮರಾಮೇಗೌಡ ಮತ್ತು ಪುಟ್ಟರಾಜು ಎಲ್ಲಿ ಹೋದರು. ಕುಮಾರಸ್ವಾಮಿ ಸುತ್ತ ಇದ್ದ ಈ ನಾಯಕರೆಲ್ಲ ಯಾಕೆ ಅವರಿಂದ ದೂರವಾದರು. ಹೆಚ್‍ಡಿಕೆ ಅವರ ನಾಯಕತ್ವ ಬಲಹೀನವಾಗಬಾರದು. ಯಾರೋ ಒಬ್ಬ ಶಾಸಕನ ಮಾತು ಕೇಳಿಕೊಂಡು ನಾಯಕತ್ವ ಹಾಳು ಮಾಡಿಕೊಳ್ಳಬೇಡಿ ಎಂದು ಕಿವಿಮಾತು ಹೇಳಿದರು.

    ನಮ್ಮ ಪದತ್ಯಾಗ ಪದವಿಗಾಗಿ ಅಲ್ಲ. ರಾಜ್ಯದಲ್ಲಿ ನಡೆಯುತ್ತಿದ್ದ ರಾಕ್ಷಸ ರಾಜಕಾರಣ ವಿರೋಧಿಸಿ ರಾಜೀನಾಮೆ ಕೊಟ್ಟಿದ್ದು. ದುಡ್ಡಿಗಾಗಿ ಇಲ್ಲಿ ಯಾರು ಯಾರನ್ನೂ ಮಾರಿಕೊಂಡಿಲ್ಲ. ಕಳೆದು ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರಿಗೆ ಎಂ.ಟಿ.ಬಿ. ನಾಗರಾಜ್ ಅವರ ಗುಂಪು 80 ಕೋಟಿ ರೂಪಾಯಿ ಕೊಟ್ಟಿದೆ. ಸಿದ್ದರಾಮಯ್ಯ ಅವರು ಸಿಎಂ ಆಗಬೇಕೆಂದು ಈ ಹಣ ಕೊಟ್ಟರು. ಈಗ ಅವರೇ ಇವರು ದುಡ್ಡಿಗಾಗಿ ಮಾರಿಕೊಂಡರು ಎಂದು ಹೇಳುತ್ತಿದ್ದಾರೆ ಎಂದು ಸಿದ್ದು ವಿರುದ್ಧವೂ ಕಿಡಿಕಾರಿದರು.

    ಏನೂ ಆಗಲ್ಲ, ಧೈರ್ಯವಾಗಿರಿ. ಖುದ್ದಾಗಿ ನಾನೇ ವಕೀಲರನ್ನು ಭೇಟಿಯಾಗಿ ಮಾತನಾಡುತ್ತೇನೆ ಎಂದು ಸಿಎಂ ಹೇಳಿದ್ದಾರೆ. ನಿನ್ನೆ ಕೆಲ ಅನರ್ಹ ಶಾಸಕರು ಸಿಎಂ ಭೇಟಿ ಮಾಡಿದ್ದಾರೆ ಇದು ಸಾಮಾನ್ಯ ಭೇಟಿ ಅಷ್ಟೇ. ವಿಶೇಷ ಅರ್ಥ ಇಲ್ಲ ಎಂದು ಅನರ್ಹ ಶಾಸಕ ಹೆಚ್. ವಿಶ್ವನಾಥ್ ಹೇಳಿದ್ದಾರೆ.

    ಚುನಾವಣಾ ಆಯೋಗದ ನಿರ್ಧಾರವನ್ನು ಸ್ವಾಗತಿಸುತ್ತೇನೆ. ನಮ್ಮ ಕೇಸ್ ಸುಪ್ರೀಂ ಕೋರ್ಟಿನಲ್ಲಿದೆ. ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಸರಿಯಾದ ಮಾದರಿಯಲ್ಲಿ ರಾಜೀನಾಮೆ ಕೊಟ್ಟಿದ್ದೇವೆ. ರಾಜೀನಾಮೆಯ ಎಲ್ಲಾ ಬೆಳವಣಿಗೆಗಳು ಸುಪ್ರೀಂ ಕೋರ್ಟ್ ಗಮನದಲ್ಲಿದೆ. ಸುಪ್ರೀಂ ಕೋರ್ಟ್ ನಮ್ಮ ಅರ್ಹತೆಯನ್ನು ಎತ್ತಿಹಿಡಿಯಬೇಕು. ಇಲ್ಲವೇ ಅದನ್ನು ರದ್ದು ಮಾಡಬೇಕು ಅಥವಾ ಈ ಚುನಾವಣೆಗೆ ತಡೆಯಾಜ್ಞೆ ನೀಡಬೇಕು. ನಾಳೆ ಈ ಬಗ್ಗೆ ಸುಪ್ರೀಂ ಕೋರ್ಟ್ ಒಂದು ನಿರ್ಧಾರ ಪ್ರಕಟಿಸಲಿದೆ. ನಮ್ಮ ರಕ್ಷಣೆಗೆ ನ್ಯಾಯಾಲಯ ಬರಬೇಕಿದೆ ಎಂದು ವಿಶ್ವನಾಥ್ ತಿಳಿಸಿದರು.

  • ಯಾರ ಸಾಧನೆ ಎಷ್ಟು? ಭಾನುವಾರ ಜನರಿಗೆ ಗೊತ್ತಾಗುತ್ತೆ: ವಿಶ್ವನಾಥ್‍ಗೆ ಸಾ.ರಾ.ಮಹೇಶ್ ಸವಾಲ್

    ಯಾರ ಸಾಧನೆ ಎಷ್ಟು? ಭಾನುವಾರ ಜನರಿಗೆ ಗೊತ್ತಾಗುತ್ತೆ: ವಿಶ್ವನಾಥ್‍ಗೆ ಸಾ.ರಾ.ಮಹೇಶ್ ಸವಾಲ್

    ಮೈಸೂರು: ನಾನಾ ಅವರಾ ಅನ್ನೋದನ್ನ ಭಾನುವಾರ ಜನರ ಮುಂದೆ ನಿರೂಪಿಸುತ್ತೇನೆ ಎಂದು ಅನರ್ಹ ಶಾಸಕ ಹೆಚ್. ವಿಶ್ವನಾಥ್ ಅವರಿಗೆ ಮಾಜಿ ಸಚಿವ ಸಾ.ರಾ ಮಹೇಶ್ ಬಹಿರಂಗ ಸವಾಲು ಹಾಕಿದ್ದಾರೆ.

    ಕೆ.ಆರ್.ನಗರ ಅಭಿವೃದ್ಧಿ ಮಾಡುವುದರಲ್ಲಿ ಸಾ.ರಾ.ಮಹೇಶ್ ವಿಫಲರಾಗಿದ್ದಾರೆ. ಅವರಿಗಿಂತ ನಾನೇ ಹೆಚ್ಚು ಅಭಿವೃದ್ಧಿ ಮಾಡಿದ್ದೇನೆ ಎಂದು ವಿಶ್ವನಾಥ್ ಹೇಳಿದ್ದರು. ಈ ಹೇಳಿಕೆಗೆ ಸಾ.ರಾ ಮಹೇಶ್ ತಿರುಗೇಟು ನೀಡಿದ್ದಾರೆ. ನಗರದಲ್ಲಿ ಯಾವ ಯಾವ ಕೆಲಸ ಮಂಜೂರಾಗಿದೆ ಎಂದು ಅವರಿಗೆ ಗೊತ್ತಿಲ್ಲ. ಅವರು ದಿನ ಬೆಳಗ್ಗೆ ಎದ್ದರೆ ಯಾರಿಗೆ ವಿಷ ಹಾಕಬೇಕು? ಯಾವಾಗ ಸರ್ಕಾರ ಬೀಳಿಸಬೇಕು? ಯಾರ ಹತ್ತಿರ ದುಡ್ಡು ತಗೊಂಡು ಲೈಫ್ ಸೆಟಲ್ ಮಾಡ್ಕೋಬೇಕು ಎನ್ನುವ ಬಗ್ಗೆ ಯೋಚನೆಯಲ್ಲಿದ್ದರು. ಹೀಗಾಗಿ ಕೆ.ಆರ್.ನಗರಕ್ಕೆ ಯಾವ ಯಾವ ಕೆಲಸ ಮಂಜೂರಾಗಿದೆ ಅನ್ನೋದು ಅವರಿಗೆ ಗೊತ್ತಿಲ್ಲ ಎಂದು ಸಾ.ರಾ ಮಹೇಶ್ ಟಾಂಗ್ ಕೊಟ್ಟರು.

    ಈ ಹೇಳಿಕೆಗೆ ಭಾನುವಾರ ಸುದ್ದಿಗೋಷ್ಠಿ ಕರೆದು ದಾಖಲೆ ಸಮೇತ ಉತ್ತರ ಕೊಡುತ್ತೇನೆ. ನಾನು ಅಭಿವೃದ್ಧಿ ಮಾಡಿದ್ದೀನಾ? ಇಲ್ಲಾ ಅವರು ಅಭಿವೃದ್ಧಿ ಮಾಡಿದ್ದಾರಾ ಅನ್ನೋದನ್ನ ಜಿಲ್ಲೆಯ ಹಾಗೂ ತಾಲೂಕಿನ ಜನರಿಗೆ ಹೇಳುತ್ತೇನೆ. ಅವರು ಇನ್ನೊಂದು ಪದ ಹೇಳಿದ್ದಾರೆ ಸುದ್ದಿಗೋಷ್ಠಿ ನಡೆದ ಮೇಲೆ ಅದು ನಾನಾ ಅಥವಾ ಅವರಾ ಎಂದು ಜನ ನಿರ್ಧಾರ ಮಾಡುತ್ತಾರೆ ಎಂದು ವಿಶ್ವನಾಥ್ ಅವರಿಗೆ ಸವಾಲ್ ಹಾಕಿದರು.

    ವಿಶ್ವನಾಥ್ ಹೇಳಿದ್ದೇನು?
    ಇವತ್ತು ದೇವೇಗೌಡರ ಮನೆಯವರು ಕಣ್ಣೀರಲ್ಲಿ ಕೈತೊಳೆಯುತ್ತಿದ್ದರೆ ಎಂದರೆ ಅದಕ್ಕೆ ಸಾರಾ ಮಹೇಶ್ ಮತ್ತು ಆತನ ಕೆಲ ಸ್ನೇಹಿತರು ಕಾರಣ. ದೇವೇಗೌಡರ ಮನೆಗೆ ಇವತ್ತು ಅನ್ಯಾಯವಾಗಿದ್ದರೆ ಅದಕ್ಕೂ ಸಾರಾ ಮಹೇಶ್ ಕಾರಣ. ದೇವೇಗೌಡರ ಕಣ್ಣೀರಿಗೂ ಅವರೇ ಕಾರಣ ಎಂದು ಕಿಡಿಕಾರಿದ್ದರು.

    ಸಾರಾ ಮಹೇಶ್ ದುರಹಂಕಾರದಿಂದ ಒಕ್ಕಲಿಗ ಶಾಸಕರೇ ಜೆಡಿಎಸ್‍ನಿಂದ ದೂರವಾದರು. ಇವತ್ತಿನ ದೇವೇಗೌಡರ ಈ ಸ್ಥಿತಿಗೆ ನಾವಲ್ಲ ಕಾರಣ ನೀವು. ಮಹೇಶ್ ಕ್ಷೇತ್ರದಲ್ಲಿ ಕೆಲವರಿಗೆ 500 ರೂಪಾಯಿ, 1 ಸಾವಿರ ರೂಪಾಯಿ ಕೊಟ್ಟುಕೊಂಡು ರಾಜಕಾರಣ ಮಾಡುತ್ತಿದ್ದಾರೆ. ಆದರೆ ನನ್ನದ್ದು ಅಭಿವೃದ್ಧಿ ರಾಜಕಾರಣ. ಮೊದಲು ಸುಳ್ಳು ಹೇಳುವುದನ್ನು ನಿಲ್ಲಿಸಿ. ಕೆ.ಆರ್. ನಗರದ ಅಭಿವೃದ್ಧಿಗೆ ನಾನು ಮಾಡಿದಷ್ಟು ಕೆಲಸ ನೀವು ಮಾಡಿಲ್ಲ ಎಂದು ವಾಗ್ದಾಳಿ ನಡೆಸಿದ್ದರು.

  • ಅನರ್ಹ ಶಾಸಕ ಎಚ್.ವಿಶ್ವನಾಥ್‍ರನ್ನ ಭೇಟಿ ಮಾಡಿದ ಮಾಜಿ ಸಚಿವ ಎ.ಮಂಜು

    ಅನರ್ಹ ಶಾಸಕ ಎಚ್.ವಿಶ್ವನಾಥ್‍ರನ್ನ ಭೇಟಿ ಮಾಡಿದ ಮಾಜಿ ಸಚಿವ ಎ.ಮಂಜು

    ಮೈಸೂರು: ಮಾಜಿ ಸಚಿವ ಎ. ಮಂಜು ಅವರು ಇಂದು ಮೈಸೂರಿನಲ್ಲಿ ಅನರ್ಹ ಶಾಸಕ ಎಚ್.ವಿಶ್ವನಾಥ್ ರನ್ನ ಭೇಟಿ ಮಾಡಿದ್ದು, ಇಬ್ಬರ ನಾಯಕರ ಭೇಟಿ ತೀವ್ರ ಕುತೂಹಲ ಮೂಡಿಸಿದೆ.

    ಮೈಸೂರಿನ ಜಲದರ್ಶಿನಿ ಅಥಿತಿ ಗೃಹದಲ್ಲಿ ಭೇಟಿಯಾದ ಉಭಯ ನಾಯಕರು ಕೆಲ ಸಮಯ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಮೈಮುಲ್‍ಗೆ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಮಾವಿನಹಳ್ಳಿ ಸಿದ್ದೇಗೌಡ ಅವರು ಕೂಡ ಭೇಟಿ ನೀಡಿ ವಿಶ್ವನಾಥ್ ಅವರಿಗೆ ವಂದನೆ ಸಲ್ಲಿಸಿದರು. ಮಾಜಿ ಸಚಿವ ಜಿಟಿಡಿ ಪರಮಾಪ್ತ ಮಾವಿನಹಳ್ಳಿ ಸಿದ್ದೇಗೌಡ ಅವರು ಇತ್ತೀಚೆಗಷ್ಟೇ ಮೈಸೂರು ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ (ಮೈಮುಲ್) ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದರು.

    ಈ ಸಂದರ್ಭದಲ್ಲಿ ಎ. ಮಂಜು ಅವರ ಭೇಟಿ ಕುರಿತು ಪ್ರತಿಕ್ರಿಯೆ ನೀಡಿದ ವಿಶ್ವನಾಥ್, ಅವರು ಕೂಡ ನಮ್ಮ ಪಕ್ಷದ ಲೀಡರ್ ಅಲ್ವಾ ಎಂದು ನಕ್ಕರು. ಇದಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ವಿಶ್ವನಾಥ್ ಅವರು, ಫೋನ್ ಕದ್ದಾಲಿಕೆಯನ್ನು ಸಿಎಂ ಅವರ ಗಮನಕ್ಕೆ ತರದಂತೆ ಮಾಡಲು ಸಾಧ್ಯವಿಲ್ಲ. ಏಕೆಂದರೆ ಸಿಎಂ ಅವರ ಅಡಿಯಲ್ಲೇ ಗುಪ್ತಚರ ಇಲಾಖೆ ಬರುತ್ತದೆ. ಗೃಹ ಸಚಿವರ ಕೈಯಲ್ಲಿ ಮಾತ್ರ ಪೊಲೀಸ್ ಇಲಾಖೆ ಇರುತ್ತದೆ. ಆದ್ದರಿಂದ ಈ ಬಗ್ಗೆ ತನಿಖೆ ನಡೆಯಬೇಕು ಎಂದು ಆಗ್ರಹಿಸಿದರು.

  • ಎಚ್‍ಡಿಡಿ ಒತ್ತಾಯದ ಮೇರೆಗೆ ರಾಜೀನಾಮೆ ನಿರ್ಧಾರ ವಾಪಸ್: ಎಚ್.ವಿಶ್ವನಾಥ್

    ಎಚ್‍ಡಿಡಿ ಒತ್ತಾಯದ ಮೇರೆಗೆ ರಾಜೀನಾಮೆ ನಿರ್ಧಾರ ವಾಪಸ್: ಎಚ್.ವಿಶ್ವನಾಥ್

    ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಸೋಲಿನ ಹಿನ್ನೆಲೆಯಲ್ಲಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದೆ. ಆದರೆ ವರಿಷ್ಠರಾದ ಎಚ್‍ಡಿ ದೇವೇಗೌಡರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಇಂತಹ ಸಂದರ್ಭದಲ್ಲಿ ರಾಜೀನಾಮೆ ನೀಡುವುದು ಸರಿಯಲ್ಲ ಎಂದು ಹೇಳಿದ್ದಾರೆ. ಪರಿಣಾಮ ರಾಜೀನಾಮೆ ನಿರ್ಧಾರ ವಾಪಸ್ ಪಡೆದಿದ್ದೇನೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷರಾದ ಎಚ್. ವಿಶ್ವನಾಥ್ ತಿಳಿಸಿದ್ದಾರೆ.

    ಲೋಕ ಫಲಿತಾಂಶದ ಬಳಿಕ ಮೊದಲ ಬಾರಿಗೆ ಜೆಡಿಎಸ್ ಶಾಸಕಾಂಗ ಸಭೆಯನ್ನ ಇಂದು ನಡೆಸಲಾಯಿತು. ಸತತ ಮೂರು ಗಂಟೆಗಳ ಕಾಲ ನಡೆದ ಸಭೆ ಬಳಿಕ ಎಚ್ ವಿಶ್ವನಾಥ್ ಅವರು ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಚುನಾವಣೆ ಸೋಲಿಗೆ ನಾನು ನೈತಿಕತೆ ಹೊತ್ತು ರಾಜೀನಾಮೆಗೆ ನಿರ್ಧಾರ ಮಾಡಿದ್ದೆ. ದೇವೇಗೌಡರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಪಕ್ಷ ಕಟ್ಟುವ ಅವಶ್ಯಕತೆ ಇರುವುದರಿಂದ ರಾಜೀನಾಮೆ ಬೇಡ ಎಂದು ಮನವರಿಕೆ ಮಾಡಿದ್ದಾರೆ. ಸಭೆಯಲ್ಲಿ ಯಾವುದೇ ಅಪಪ್ರಚಾರಕ್ಕೆ ತಲೆಕಡೆಸಿಕೊಳ್ಳದೆ, ಎಲ್ಲರೂ ಒಗ್ಗಟ್ಟಾಗಿ ನಡೆಯುವ ನಿರ್ಧಾರ ಮಾಡಿದ್ದು, ಬಿಜೆಪಿಯ ಆಮಿಷಕ್ಕೆ ಬಲಿಯಾಗಬಾರದು ಹಾಗೂ ಕುಮಾರಸ್ವಾಮಿ ಅವರಿಗೆ ಸಂಪೂರ್ಣ ಬೆಂಬಲ ನೀಡಲು ತೀರ್ಮಾನ ಮಾಡಲಾಗಿದೆ ಎಂದರು.

    ಸಿಎಂ ರಾಜೀನಾಮೆ?
    ಇದೇ ವೇಳೆ ಸೋಲಿನ ಹೊಣೆ ಹೊತ್ತು ಸಿಎಂ ಕುಮಾರಸ್ವಾಮಿ ಅವರು ರಾಜೀನಾಮೆ ನೀಡುತ್ತರಾ ಎಂಬ ಮಾಧ್ಯಮ ಪ್ರಶ್ನೆಗೆ ಉತ್ತರಿಸಿದ ಅವರು, ಸಿಎಂ ರಾಜೀನಾಮೆ ಬಗ್ಗೆ ಇವತ್ತಿನ ಸಭೆಯಲ್ಲಿ ಯಾವುದೇ ಚರ್ಚೆ ಆಗಿಲ್ಲ. ಅಂತಹ ಯಾವುದೇ ಚರ್ಚೆಯ ಅವಶ್ಯಕತೆ ಇಲ್ಲ. ಅಲ್ಲದೇ ಪ್ರಜ್ವಲ್ ರೇವಣ್ಣ ರಾಜೀನಾಮೆ ಬಗ್ಗೆಯೂ ನಡೆದಿಲ್ಲ. ಸದ್ಯ ಯಾರು ರಾಜೀನಾಮೆ ನೀಡುವ ಪ್ರಶ್ನೆ ಉದ್ಭವಿಸಿಲ್ಲ ಎಂದರು.

    ಮಾಧ್ಯಮಗಳಿಂದ ಜೆಡಿಎಸ್ ದೂರ?
    ಮಾಧ್ಯಮಗಳಲ್ಲಿ ನಡೆಯುವ ಚರ್ಚೆಗೆ ಜೆಡಿಎಸ್ ನಾಯಕರು ಬರುವುದಿಲ್ಲ. ಈ ಬಗ್ಗೆ ನಮ್ಮ ನಾಯಕರು ಮಾಹಿತಿ ನೀಡಿದ್ದಾರೆ. ಮಾಧ್ಯಮದಲ್ಲಿ ಚರ್ಚೆಗೆ ಹೋಗುವ ಮುಖಂಡರ ಬಗ್ಗೆ ಪಕ್ಷದ ವಕ್ತಾರರೇ ಪಟ್ಟಿ ಸಿದ್ಧ ಪಡಿಸುತ್ತಾರೆ. ಅಲ್ಲಿವರೆಗೆ ಜೆಡಿಎಸ್ ನಿಂದ ಯಾವ ಮುಖಂಡರು ಮಾಧ್ಯಮಗಳ ಚರ್ಚೆಗಳಲ್ಲಿ ಭಾಗವಹಿಸುವುದಿಲ್ಲ. ಪಟ್ಟಿ ಸಿದ್ಧವಾದ ಬಳಿಕ ಮಾಧ್ಯಮಕ್ಕೆ ನೀಡುತ್ತೇವೆ. ಅಲ್ಲದೇ ಎರಡೂ ಪಕ್ಷದ ಅಧ್ಯಕ್ಷರು ಸಮನ್ವಯ ಸಮಿತಿಯಲ್ಲಿ ಇರಬೇಕು. ಈಗಲೂ ನನ್ನ ಒತ್ತಾಯ ಇದೆ ಎಂದು ವಿಶ್ವನಾಥ್ ಸ್ಪಷ್ಟಪಡಿಸಿದರು.

    ಬಳಿಕ ಮಾತನಾಡಿದ ಬಸವರಾಜ್ ಹೊರಟ್ಟಿ ಅವರು, ಸೋಲಿನ ಬಗ್ಗೆ ಸದ್ಯ ಏನು ಮಾತನಾಡುವುದಿಲ್ಲ. ಅದೆಲ್ಲ ಮರೆತು ಮುಂದಿನ ಕೆಲಸದ ಬಗ್ಗೆ ಚಿಂತನೆ ಮಾಡುತ್ತೇವೆ. ಈ ಸಂದರ್ಭದಲ್ಲಿ ಸೋಲಿನ ಬಗ್ಗೆ ಚರ್ಚೆ ಅನಗತ್ಯ. ಬಿಜೆಪಿ ಪರ ಜೆಡಿಎಸ್ ನವರು ಮತ ಹಾಕಿದ್ದಾರೆ ಎಂಬ ಜೆಡಿಎಸ್ ಸಚಿವರ ಹೇಳಿಕೆ ವಿಚಾರವೂ ಇಂದಿಗೆ ಮುಕ್ತಾಯವಾಗಿದ್ದು, ಈ ಬಗ್ಗೆ ಯಾವುದೇ ಚರ್ಚೆ, ಕ್ರಮ ಇಲ್ಲ ಎಂದರು. ಸಿಎಂ ಕುಮಾರಸ್ವಾಮಿ, ಜೆಡಿಎಸ್ ವರಿಷ್ಠರಾದ ದೇವೇಗೌಡರ ನೇತ್ರತ್ವದಲ್ಲಿ ಸಭೆಯಲ್ಲಿ ಜೆಡಿಎಸ್ ಸಚಿವರು, ಶಾಸಕರು, ಪರಿಷತ್ ಸದಸ್ಯರು, ಪ್ರಮುಖ ಮುಖಂಡರು ಸಭೆಯಲ್ಲಿ ಭಾಗಿಯಾಗಿದ್ದರು.

  • ಮತ್ತೆ ಎಲೆಕ್ಷನ್: ಬಸವರಾಜ್ ಹೊರಟ್ಟಿ ಹೇಳಿಕೆಗೆ ವಿಶ್ವನಾಥ್ ಪ್ರತಿಕ್ರಿಯೆ

    ಮತ್ತೆ ಎಲೆಕ್ಷನ್: ಬಸವರಾಜ್ ಹೊರಟ್ಟಿ ಹೇಳಿಕೆಗೆ ವಿಶ್ವನಾಥ್ ಪ್ರತಿಕ್ರಿಯೆ

    – ಸಿದ್ದರಾಮಯ್ಯ ವಿರುದ್ಧ ನೇರ ಆರೋಪ

    ಬೆಂಗಳೂರು: ಗೊಂದಲಗಳ ಮಧ್ಯೆ ಹೋಗುವುದಕ್ಕಿಂತ ಸರ್ಕಾರ ವಿಸರ್ಜನೆ ಮಾಡಬೇಕು ಎಂಬ ಬಸವರಾಜ ಹೊರಟ್ಟಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಅವರು, ಹೊರಟ್ಟಿ ಅವರ ಹೇಳಿಕೆ ವೈಯಕ್ತಿಕವಾಗಿದ್ದು. ಸರ್ಕಾರ ವಿಸರ್ಜನೆ ಎಂಬುವುದು ಅನ್ನೋದು ಬಹಳ ದೊಡ್ಡ ಮಾತು. ಇದನ್ನು ತೀರ್ಮಾನ ತೆಗೆದುಕೊಳ್ಳೋಕೆ ದೊಡ್ಡವರು ಇದ್ದಾರೆ ಎಂದು ಹೇಳಿದ್ದಾರೆ.

    ಎಚ್‍ಡಿಡಿ ನಿವಾಸಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಕರ್ನಾಟಕ ಸರ್ಕಾರ ಯಾವ ದಿಕ್ಕಿನಲ್ಲಿ ಹೋಗಬೇಕು. ಸರ್ಕಾರದ ನಡವಳಿಕೆಗಳು ಏನು? ಯಾವ ದಿಕ್ಕಿನಲ್ಲಿ ಸಾಗಬೇಕು ಎಂಬುವುದರ ಬಗ್ಗೆ ಸಮನ್ವಯ ಸಮಿತಿ ಅಧ್ಯಕ್ಷರಾಗಿ ಸಿದ್ದರಾಮಯ್ಯನವರು ಯಾವುದೇ ಕ್ರಮಕೈಗೊಂಡಿಲ್ಲ. ಆದ್ದರಿಂದ ಸಮನ್ವಯ ಸುಧಾರಿಸುವಲ್ಲಿ ಅವರ ಸಾಧನೆ ಏನಿದೆ ಎಂದರು. ಅಲ್ಲದೇ ಕಾಂಗ್ರೆಸ್ ಪಕ್ಷದ ನಾಯಕರೇ ಶೇ. 70 ರಷ್ಟು ಇದ್ದು, ಈಗ ಸಮಾಧಾನ ಏಕೆ ಉಂಟಾಗುತ್ತದೆ ಎಂದು ಪ್ರಶ್ನಿಸಿದರು. ಜೆಡಿಎಸ್ ನಾಯಕರದಲ್ಲಿ ಯಾವುದೇ ಅಸಮಾಧಾನ ಇಲ್ಲ. ಸರ್ಕಾರ ವಿಸರ್ಜನೆ ಮಾಡುವ ಹಂತಕ್ಕೆ ಕರ್ನಾಟಕದಲ್ಲಿ ಪರಿಸ್ಥಿತಿ ನಿರ್ಮಾಣ ಆಗಿಲ್ಲ ಎಂದರು.

    ಹೊರಟ್ಟಿ ಅವರು ವಿಧಾನಸಭೆಗೆ ಚುನಾವಣೆ ಎದುರಿಸಿ ಬಂದಿಲ್ಲ. ವಿಧಾನ ಪರಿಷತ್ ನಿಂದ ಆಯ್ಕೆಯಾಗಿ ಬಂದಿದ್ದಾರೆ. ಆದರೆ ಅವರಿಗೆ ನಮ್ಮ ಸಂಕಷ್ಟವೂ ಗೊತ್ತಿದೆ. ಮತ್ತೆ ಚುನಾವಣೆಗೆ ಹೋಗೋದು ಅಷ್ಟು ಸುಲಭ ಕಾರ್ಯವಲ್ಲ. ಮೈತ್ರಿ ಸರ್ಕಾರದಲ್ಲಿ ಗೊಂದಲ ಇರುವುದು ನಿಜ. ಅದನ್ನು ಕುಮಾರಸ್ವಾಮಿ ಎಲ್ಲಾ ಗೊಂದಲ ಪರಿಹರಿಸಿಕೊಂಡು ಸರ್ಕಾರ ನಡೆಸಿಕೊಂಡು ಹೋಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಸಮನ್ವಯ ಸಮಿತಿಗೆ ನನ್ನ ಸೇರ್ಪಡೆ ಹಾಗೂ ದಿನೇಶ್ ಗುಂಡೂರಾವ್ ಸೇರ್ಪಡೆಗೂ ವಿರೋಧ ಮಾಡುತ್ತಿದ್ದಾರೆ. ಆದರೆ ಕಾಮನ್ ಮಿನಿಮಮ್ ಕಾರ್ಯಕ್ರಮ ರಚನೆ ಮಾಡುತ್ತಿಲ್ಲ. ಏಕೆ ಈ ರೀತಿ ಅಡ್ಡಿ ಮಾಡುತ್ತಿದ್ದಾರೆ ಎಂದು ಅವರಿಗೆ ಕೇಳಬೇಕು. ಸದ್ಯ ಮೇ 23 ರ ನಂತರ ಸಮತಿಗೆ ಸೇರ್ಪಡೆ ಸಂಬಂಧ ಏನಾಗುತ್ತದೆ ಎಂದು ಕಾದು ನೋಡುತ್ತೇವೆ ಎಂದು ಸ್ಪಷ್ಟನೆ ನೀಡಿದರು. ಅಲ್ಲದೇ ಈ ಹಿಂದೆ ಸಿದ್ದರಾಮಯ್ಯ ಅವರ ಸಾಧನೆ ಏನು ಎಂದು ಪ್ರಶ್ನೆ ಮಾಡಿದ್ದ ತಮ್ಮ ಹೇಳಿಕೆ ಉಲ್ಟಾ ಹೊಡೆದ ಅವರು, ನಾನು ಸಿದ್ದರಾಮಯ್ಯ ಅವರು ಏನು ಸಾಧನೆ ಮಾಡಿದ್ದಾರೆ ಎಂದು ಕೇಳಲಿಲ್ಲ. ಸಿದ್ದರಾಮಯ್ಯ ಅವರು ಇತರೆ ಸಿಎಂಗಳಿಗಿಂತ ಹೆಚ್ಚು ಕೆಲಸ ಮಾಡಿದೀನಿ ಎಂದಿರುವ ಬಗ್ಗೆ ಪ್ರಶ್ನೆ ಮಾಡಿ, 79 ಸೀಟ್ ಮಾತ್ರ ಗೆದ್ದಿದ್ದು ಏಕೆ ಎಂದು ಮಾತ್ರ ಪ್ರಶ್ನಿಸಿದ್ದಾಗಿ ಸ್ಪಷ್ಟನೆ ನೀಡಿದರು.

  • ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ವಿಶ್ವನಾಥ್ ರಾಜೀನಾಮೆ? ಹೆಚ್ಚಿನ ಅಧಿಕಾರ ಕೋಡೋಣ ಅಂದ್ರು ಎಚ್‍ಡಿಕೆ

    ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ವಿಶ್ವನಾಥ್ ರಾಜೀನಾಮೆ? ಹೆಚ್ಚಿನ ಅಧಿಕಾರ ಕೋಡೋಣ ಅಂದ್ರು ಎಚ್‍ಡಿಕೆ

    ಬೆಂಗಳೂರು: ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ವಿಶ್ವನಾಥ್ ಅವರು, ಆರೋಗ್ಯ ಸರಿಯಿಲ್ಲದ ಕಾರಣ ಅಧ್ಯಕ್ಷ ಸ್ಥಾನದಿಂದ ರಿಲೀವ್ ಮಾಡುವಂತೆ ಪಕ್ಷದ ವರಿಷ್ಠರಲ್ಲಿ ಮನವಿ ಮಾಡಿದ್ದಾಗಿ ಎನ್ನಲಾಗಿದೆ.

    ಈ ಕುರಿತು ದೆಹಲಿಯಲ್ಲಿ ಪ್ರತಿಕ್ರಿಯಿಸಿದ ಸಿಎಂ ಕುಮಾರಸ್ವಾಮಿ, ಆರೋಗ್ಯ ಸರಿ ಇಲ್ಲದ ಕಾರಣ ಹೀಗೆ ಹೇಳಿರಬಹುದೇ ಹೊರತು ಅಧಿಕಾರಕ್ಕಾಗಿ ಅಲ್ಲ. ಅಧಿಕಾರಕ್ಕೆ ಅವರ ಬೇಡಿಕೆ ಇದ್ದಲ್ಲಿ ಹೆಚ್ಚಿನ ಅಧಿಕಾರ ನೀಡೋಣ ಅಂದಿದ್ದಾರೆ.

    ಕೇಂದ್ರ ಸಚಿವರ ಭೇಟಿ ಬಳಿಕ ಮಾತನಾಡಿದ ಸಿಎಂ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಆಗಲು ನಾನು ಸಮಯ ಕೇಳಿಲ್ಲ. ರಾಜ್ಯದ ಕೆಲಸಗಳ ಬಗ್ಗೆ ಕೇಂದ್ರ ಚರ್ಚಿಸಲು ಬಂದಿದ್ದೆ. ಇದೇ ವೇಳೆ ಸಮ್ಮಿಶ್ರ ಸರ್ಕಾರ ಖಾತೆ ಹಂಚಿಕೆ ತಡವಾಗುತ್ತಿರುವ ಬಗ್ಗೆ ಕಾಂಗ್ರೆಸ್ ಮುಖಂಡರಿಗೆ ಕೇಳಿ. ಜೆಡಿಎಸ್ ಪಾಲಿನ ಎರಡು ಸ್ಥಾನಗಳನ್ನು ಸೂಕ್ತ ಸಮಯದಲ್ಲಿ ಭರ್ತಿ ಮಾಡುತ್ತೇವೆ. ಆದರೆ ಲೋಕಸಭೆ ಸ್ಥಾನಗಳ ಹಂಚಿಕೆ ಬಗ್ಗೆ ಇನ್ನು ಯಾವುದೇ ಮಾತುಕತೆ ನಡೆದಿಲ್ಲ. ಈ ಕುರಿತು ಕಾಂಗ್ರೆಸ್ ನಾಯಕರ ಜೊತೆ ಚರ್ಚೆ ನಡೆದಿಲ್ಲ ಎಂದು ಸ್ಪಷ್ಟನೆ ನೀಡಿದರು.

    ಇತ್ತ ರಾಜ್ಯ ಕಾಂಗ್ರೆಸ್‍ನಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ದೂರಗಳ ಪಟ್ಟಿ ಹೊತ್ತು ದೆಹಲಿಗೆ ತೆರಳಿದ್ದ ಸಿಎಂ ಕುಮಾರಸ್ವಾಮಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಭೇಟಿಯಾಗದೆ ವಾಪಾಸ್ ಆಗಿದ್ದು, ಬಿಕ್ಕಟ್ಟಿನ ವೇಳೆ ರಾಹುಲ್ ಭೇಟಿ ಸರಿಯಲ್ಲ ಎಂದು ಹಿಂದಿರುಗಿದ್ದಾರೆ ಎನ್ನಲಾಗಿದೆ. ಅಲ್ಲದೇ ಮೂರು ರಾಜ್ಯಗಳ ಸಂಪುಟ ರಚನೆ ಹಾಗೂ ಸಂಸತ್ ಅಧಿವೇಶನದಲ್ಲಿ ಕಾರ್ಯದಲ್ಲಿ ನಿರತರಾಗಿರುವ ರಾಹುಲ್ ಗಾಂಧಿ ಕೂಡ ಕುಮಾರಸ್ವಾಮಿ ಭೇಟಿಯನ್ನ ನಿರ್ಲಕ್ಷ್ಯ ಮಾಡಿದ್ದಾರೆ ಎನ್ನಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಮೋದಿ ಅಪ್ಪಿದ ರಾಹುಲ್ ನಡೆ ಮಕ್ಕಳಾಟ – ಎಚ್.ವಿಶ್ವನಾಥ್

    ಮೋದಿ ಅಪ್ಪಿದ ರಾಹುಲ್ ನಡೆ ಮಕ್ಕಳಾಟ – ಎಚ್.ವಿಶ್ವನಾಥ್

    ಬೆಂಗಳೂರು: ಲೋಕಸಭೆ ಸದನದ ವೇಳೆ ಪ್ರಧಾನಿ ನರೇಂದ್ರ ಮೋದಿಯನ್ನು ಅಪ್ಪಿಕೊಂಡ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವರ್ತನೆಯನ್ನು ಮಿತ್ರ ಪಕ್ಷ ಜೆಡಿಎಸ್‍ನ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ವ್ಯಂಗ್ಯವಾಡಿದ್ದಾರೆ.

    ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ವಿಶ್ವನಾಥ್ ಅವರು, ರಾಹುಲ್ ಅವರ ವರ್ತನೆ ಹುಡುಗಾಟ, ಮಕ್ಕಳಾಟ ರೀತಿ ಇದೆ ಎಂದು ಹೇಳಿದ್ದಾರೆ. ಇತ್ತ ವಿಶ್ವನಾಥ್ ಹೇಳಿಕೆಯನ್ನೇ ಉಲ್ಲೇಖಿಸಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಮಹಾಮೈತ್ರಿ ಕೂಟದ ಬಗ್ಗೆ ವ್ಯಂಗ್ಯವಾಡಿದ್ದಾರೆ. ತಮ್ಮ ಪ್ರಧಾನಿ ಅಭ್ಯರ್ಥಿ ಬಗ್ಗೆ ಮಹಾಮೈತ್ರಿಕೂಟ ಯೋಚನೆ ಮಾಡುತ್ತಿರುವುದು ಇದನ್ನೇ. `ರಾಹುಲ್ ಗಾಂಧಿ ಬಗ್ಗೆ ಮಹಾಮೈತ್ರಿ ಕೂಟದ ಪಕ್ಷವೊಂದು ಅರ್ಥ ಮಾಡ್ಕೊಂಡಿದ್ದು, ಅವರು ಸರ್ಕಾರ ರಚನೆ ಮಾಡೋದು ಬರೀ ಕನಸಷ್ಟೇ ಎಂದು ಬಿಎಸ್‍ವೈ ಕಾಲೆಳೆದಿದ್ದಾರೆ.

    ಇದಕ್ಕೂ ಮುನ್ನ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಅಧಿಕೃತವಾಗಿ ಪಕ್ಷದ ಕಚೇರಿಯಲ್ಲಿ ಕೆಲಸ ಪ್ರಾರಂಭ ಮಾಡಿದ ಬಳಿಕ ಮಾತನಾಡಿದ ವಿಶ್ವನಾಥ್ ಅವರು, ಹಿಂದೆ ಜನತ ಪರಿವಾರದಲ್ಲಿದ್ದ ಎಲ್ಲಾ ನಾಯಕರನ್ನು ಮತ್ತೆ ಪಕ್ಷಕ್ಕೆ ಕರೆತಲು ಯತ್ನಿಸುತ್ತೇನೆ. ಯಾವುದೇ ಕಾರಣದಿಂದ ಅವರು ಪಕ್ಷ ಬಿಟ್ಟು ಹೊರ ನಡೆದಿದ್ದರು. ಆದರೆ ಇಂದು ಪರಿಸ್ಥಿತಿ ಬದಲಾಗಿದೆ. ಅದ್ದರಿಂದ ಮತ್ತೆ ಪಕ್ಷಕ್ಕೆ ಬಂದು ಜನತಾ ಪರಿವಾರವನ್ನು ಮತ್ತಷ್ಟು ಗಟ್ಟಿಗೊಳಿಸಬೇಕಿದೆ. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಹೊಂದಾಣಿಕೆಯಿಲ್ಲ. ಜಿಲ್ಲೆಯ ಸಮಿತಿಗಳು ಪಕ್ಷದ ಪರವಾಗಿ ಕೆಲಸ ಮಾಡಿ ಹೆಚ್ಚು ಸ್ಥಾನ ಗೆಲ್ಲಿಸಬೇಕು. ಸದ್ಯ ಇರುವ ರಾಜ್ಯ ಸಮಿತಿಯನ್ನ ವಿಸರ್ಜನೆ ಮಾಡಲಿದ್ದು, ಹೊಸ ಸಮಿತಿಯನ್ನ ಆದಷ್ಟು ಬೇಗ ರಚನೆ ಮಾಡುತ್ತೇವೆ. ಹಿರಿಯರು, ಯುವಕರು, ಮಹಿಳೆಯರು ಈ ಸಮಿತಿಯಲ್ಲಿ ಇರುತ್ತಾರೆ. ಜಿಲ್ಲಾ ಸಮಿತಿಗಳು ಸ್ಥಳೀಯ ಚುನಾವಣೆಯವರೆಗೂ ಹಾಗೇ ಮುಂದುವರೆಯುತ್ತದೆ. ನನ್ನ ಮೊದಲ ಪ್ರವಾಸ ಉತ್ತರ ಕರ್ನಾಟಕದಿಂದಲೇ ಪ್ರಾರಂಭ ಮಾಡಲಿದ್ದು, ಉತ್ತರ ಕರ್ನಾಟಕಕ್ಕೆ ಜೆಡಿಎಸ್ ಕೊಡುಗೆ ಏನು ಎಂಬುವುದನ್ನು ಜನತೆಗೆ ತಿಳಿಸುತ್ತೇವೆ ಎಂದು ಹೇಳಿದರು.

    ಬಳಿಕ ಜೆಪಿ ಭವನದಲ್ಲಿ ಮಾತನಾಡಿದ ಅವರಯ ಸಿಎಂ ದುರ್ಬಲರಾಗಿದ್ದು, ರೇವಣ್ಣ ಸೂಪರ್ ಸಿಂಗ್ ಎಂಬ ಬಿಜೆಪಿ ಮುಖಂಡರ ಆರೋಪಕ್ಕೆ ತಿರುಗೇಟು ಕೊಟ್ಟರು. ಜವಾಬ್ದಾರಿಯುತ ರಾಷ್ಟ್ರೀಯ ಪಕ್ಷದ ನಾಯಕರು ಈ ರೀತಿ ಮಾತನಾಡುವುದು ಸರಿಯಲ್ಲ. ನಮ್ಮ ದೇಶದಲ್ಲಿ ವಾಕ್ ಸ್ವಾತಂತ್ರ್ಯ ಇರುವುದರಿಂದ ಯಾರು ಬೇಕಾದರು ಮಾತನಾಡಬಹುದು. ದೇವೇಗೌಡರು ದೇಶಕ್ಕೆ ಪ್ರಧಾನಿ ಆದವರು. ಅವರ ರಾಜಕೀಯ ಅನುಭವದಲ್ಲಿ ಸಲಹೆ ಪಡೆಯೋದು ತಪ್ಪಲ್ಲ. ಸಿಎಂ ಇದನ್ನೆ ಮಾಡುತ್ತಿದ್ದಾರೆ ಅಷ್ಟೇ. ದೇವೇಡಗೌಡರು ಸರ್ಕಾರದ ಫೈಲ್ ನೋಡುತ್ತಿಲ್ಲ. ಬಿಜೆಪಿ ಅವರು ಬಾಲಿಶವಾಗಿ ನಡೆದುಕೊಳ್ಳಬಾರದು ಎಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಸಚಿವ ಸ್ಥಾನ ವಂಚಿತ ಕೈ, ತೆನೆ ಘಟಾನುಘಟಿ ನಾಯಕರ ಪಟ್ಟಿ ಇಲ್ಲಿದೆ

    ಸಚಿವ ಸ್ಥಾನ ವಂಚಿತ ಕೈ, ತೆನೆ ಘಟಾನುಘಟಿ ನಾಯಕರ ಪಟ್ಟಿ ಇಲ್ಲಿದೆ

    ಬೆಂಗಳೂರು: ಕಾಂಗ್ರೆಸ್ ಜೆಡಿಎಸ್ ಸಚಿವ ಸಂಪುಟ ವಿಸ್ತರಣೆಯಾಗಿದ್ದರೂ, ಘಟಾನುಘಟಿ ನಾಯಕರು ಸಚಿವ ಸ್ಥಾನದಿಂದ ವಂಚಿತರಾಗಿದ್ದಾರೆ.

    ಕಳೆದ ಸಂಪುಟದಲ್ಲಿದ್ದ ಬಹುತೇಕ ಶಾಸಕರು ಸಚಿವ ಸ್ಥಾನ ಕಳೆದುಕೊಂಡಿದ್ದಾರೆ. ಸಚಿವ ಸ್ಥಾನ ಕೈತಪ್ಪಿರೋದಕ್ಕೆ ಎಂ.ಬಿ. ಪಾಟೀಲ್ ಅವರನ್ನ ವೇಣುಗೋಪಾಲ್, ಡಿ.ಕೆ ಶಿವಕುಮಾರ್, ದಿನೇಶ್ ಗುಂಡೂರಾವ್, ಜಾರ್ಜ್, ಪ್ರಿಯಾಂಕ್ ಖರ್ಗೆ, ಕೃಷ್ಣ ಭೈರೇಗೌಡ ಸೇರಿದಂತೆ ಹಲವರು ಸಮಾಧಾನ ಪಡಿಸಿದರು. ಆದರೆ ಎಂಬಿ ಪಾಟೀಲ್ ಅಭಿಮಾನಿಗಳು ಕೈ ನಾಯಕರಿಗೆ ಘೇರಾವ್ ಹಾಕಿದರು.  ಇದನ್ನು ಓದಿ: ಜೆಡಿಎಸ್- ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಯಾರಿಗೆ ಯಾವ ಖಾತೆ?

    ಸಚಿವ ಸ್ಥಾನ ವಂಚಿತ ಕಾಂಗ್ರೆಸಿಗರು :
    ರಾಮಲಿಂಗಾರೆಡ್ಡಿ, ಬಿಟಿಎಂ ಲೇಔಟ್
    ರೋಷನ್ ಬೇಗ್, ಶಿವಾಜಿನಗರ
    ಎಂ.ಬಿ. ಪಾಟೀಲ್, ಬಬಲೇಶ್ವರ
    ಎಚ್.ಕೆ. ಪಾಟೀಲ್, ಗದಗ

    ದಿನೇಶ್ ಗುಂಡೂರಾವ್, ಗಾಂಧಿನಗರ
    ಶಾಮನೂರು ಶಿವಶಂಕರಪ್ಪ, ದಾವಣಗೆರೆ ದಕ್ಷಿಣ
    ಸತೀಶ್ ಜಾರಕಿಹೊಳಿ, ಯಮಕನಮರಡಿ

    ಡಾ. ಸುಧಾಕರ್, ಚಿಕ್ಕಬಳ್ಳಾಪುರ
    ಬಿ.ಸಿ. ಪಾಟೀಲ್, ಹಿರೇಕೆರೂರು
    ಈಶ್ವರ ಖಂಡ್ರೆ, ಭಾಲ್ಕಿ

    ತನ್ವೀರ್ ಸೇಠ್, ನರಸಿಂಹರಾಜ
    ಎಂಟಿಬಿ ನಾಗರಾಜ್, ಹೊಸಕೋಟೆ
    ಎಸ್.ಆರ್. ಪಾಟೀಲ್, ಮೇಲ್ಮನೆ ಸದಸ್ಯ
    ಎಚ್.ಎಂ. ರೇವಣ್ಣ, ಮೇಲ್ಮನೆ ಸದಸ್ಯ

    ಜೆಡಿಎಸ್‍ನಲ್ಲಿ ಸಚಿವ ಸ್ಥಾನ ವಂಚಿತರು :
    ಎಚ್. ವಿಶ್ವನಾಥ್, ಹುಣಸೂರು
    ಬಸವರಾಜ ಹೊರಟ್ಟಿ, ಮೇಲ್ಮನೆ ಸದಸ್ಯ
    ಸತ್ಯನಾರಾಯಣ, ಶಿರಾ
    ಎಚ್.ಕೆ. ಕುಮಾರಸ್ವಾಮಿ, ಸಕಲೇಶಪುರ

      

    https://www.youtube.com/watch?v=YCVYC56FfQE