Tag: H Viswanath

  • ಶ್ರಮಿಕ ವರ್ಗದವರಿಗೆ ತಲಾ 5 ಸಾವಿರ ಕೊಟ್ಟು ಇನ್ನೂ 15 ದಿನ ಲಾಕ್‍ಡೌನ್ ಮಾಡಿ: ವಿಶ್ವನಾಥ್

    ಶ್ರಮಿಕ ವರ್ಗದವರಿಗೆ ತಲಾ 5 ಸಾವಿರ ಕೊಟ್ಟು ಇನ್ನೂ 15 ದಿನ ಲಾಕ್‍ಡೌನ್ ಮಾಡಿ: ವಿಶ್ವನಾಥ್

    ಮೈಸೂರು: ಶ್ರಮಿಕ ವರ್ಗದವರಿಗೆ ತಲಾ 5 ಸಾವಿರ ರೂ. ಕೊಟ್ಟು ಇನ್ನೂ 15 ದಿನ ಲಾಕ್‍ಡೌನ್ ಮಾಡಿ ಎಂದು ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಿಎಂ ಅವರೇ ಜಿಲ್ಲಾಧಿಕಾರಿಗಳಿಗೆ ಹೆಚ್ಚಿನ ಜವಾಬ್ದಾರಿ ನೀಡಿದ್ದಾರೆ. ಪ್ರತಿ ಜಿಲ್ಲೆಗೂ ಹಿರಿಯರು ಐಎಎಸ್ ಅಧಿಕಾರಿಯನ್ನು ಮಾನಿಟರ್ ಮಾಡಲು ನಿಯೋಜಿಸಿ. ಪ್ರತಿ ಜಿಲ್ಲೆಗೂ 100 ಕೋಟಿ ರೂಪಾಯಿ ನೀಡಿ. ಅವರೇ ಆಕ್ಸಿಜನ್ ವ್ಯವಸ್ಥೆ, ಬೆಡ್ ವ್ಯವಸ್ಥೆ ಎಲ್ಲವನ್ನೂ ಅವರಿಗೆ ಮಾಡಲು ನಿರ್ದೇಶಿಸಿ. ಜಿಲ್ಲೆಯನ್ನು ಕೊರೊನಾ ಮುಕ್ತ ಮಾಡಿ, ಯಾವ ಸಾವು ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ನೀಡಿ. ಹಣಕಾಸು ವ್ಯವಹಾರವನ್ನು ಕೇಂದ್ರೀಕೃತ ಮಾಡಿಕೊಂಡು ಕೆಲಸ ಮಾಡಿ ಅಂದರೆ ಜಿಲ್ಲಾಧಿಕಾರಿಗಳು ಏನೂ ಮಾಡುತ್ತಾರೆ. ಜಿಲ್ಲಾಧಿಕಾರಿಗಳಿಗೆ ಹಣ ನೀಡಿ ಬಳಕೆಯ ಸ್ವತಂತ್ರ ನೀಡಿ ಎಂದರು.

    ಮೈಸೂರಿನಲ್ಲಿ ಒಂದು ದಿನವೂ ಡಿಸಿ ಹಳ್ಳಿಗಳ ಕಡೆ ಹೋಗಿಲ್ಲ. ಟಾಸ್ಕ್ ಪೋರ್ಸ್ ನವರೂ ಹಳ್ಳಿಗಳಿಗೆ ಹೋಗುತ್ತಿಲ್ಲ. ಯಾವ ಜಿಲ್ಲಾಧಿಕಾರಿ ಹಳ್ಳಿಗಳ ಕಡೆ ಹೋಗಿದ್ದಾರೆ ಹೇಳಿ? ಹಳ್ಳಿಯ ಸಾಯುತ್ತಿರುವವರು ಶ್ರಮಿಕರು, ಅಹಿಂದ ವರ್ಗದವರೇ ಶ್ರಮಿಕರು ಹೆಚ್ಚು. ಸಿದ್ದರಾಮಯ್ಯ ಇದರ ಬಗ್ಗೆ ಮಾತನಾಡಿ. ಮಾಂಸದ ಅಂಗಡಿಗಳನ್ನು ಮುಚ್ಚಿ. ಮಾಂಸದ ಅಂಗಡಿ ಮುಂದೆ ದಿನವೂ ಜನಜಾತ್ರೆ ಇರುತ್ತದೆ ಎಂದು ಆಗ್ರಹಿಸಿದ್ದಾರೆ.

    ಒಂದು ತಿಂಗಳು ಮಾಂಸ ತಿನ್ನದೇ ಇದ್ದರೆ ಸತ್ತು ಹೋಗುತ್ತಾರಾ? ಜನರು ಮೊದಲಿನ ರೀತಿಯ ಜೀವನ ಶೈಲಿ ಬದುಕಲು ಆಗಲ್ಲ. ದಿನವೂ ದಿನಸಿ, ತರಕಾರಿ ತರಬೇಕಾ? ವಾರಕ್ಕೆ ಒಂದು ದಿನ ತೆಗೆಯಿರಿ? ಸಂತೆಯಲ್ಲಿ ವಾರಕ್ಕೆ ಒಂದು ದಿನ ದಿನಸಿ, ತರಕಾರಿ ತಂದುಕೊಳ್ಳುತ್ತಾರೆ. ಎಲ್ಲರೂ ಹೀಗೆ ಮಾಡಲಿ ಎಂದರು.

    ಪ್ರತಿ ಹಣದ ಬಿಲ್ ಕೂಡ ವಿಜಯೇಂದ್ರನ ಕಡೆಯಿಂದ ಕ್ಲಿಯರ್ ಆಗಬೇಕು. ಹಣದ ಬಿಡುಗಡೆಯ ಕೇಂದ್ರೀಕರಣ ಮೊದಲು ತಪ್ಪಬೇಕು. ಡಿಸಿಗಳಿಗೆ ಹಣ ಖರ್ಚು ಮಾಡುವ ಅಧಿಕಾರ ನೀಡಬೇಕು. ಸರಕಾರ ನಡೆಸುವವರು ಹೆಣದ ಮೇಲೆ ಹಣ ಮಾಡಲು ಹೋಗಬೇಡಿ ಎಂದು ವಿಶ್ವನಾಥ್ ಹೇಳಿದ್ದಾರೆ.

  • ವಲಸಿಗ ಸಚಿವರಿಂದ ಸಚಿವ ಸ್ಥಾನ ಕಿತ್ತುಕೊಳ್ತಾರೆ: ಎಂ. ಲಕ್ಷ್ಮಣ್

    ವಲಸಿಗ ಸಚಿವರಿಂದ ಸಚಿವ ಸ್ಥಾನ ಕಿತ್ತುಕೊಳ್ತಾರೆ: ಎಂ. ಲಕ್ಷ್ಮಣ್

    ಮೈಸೂರು: ಬಿಜೆಪಿಯವರು ವಲಸಿಗ ಸಚಿವರಿಂದ ಸಚಿವ ಸ್ಥಾನ ಕಿತ್ತುಕೊಳ್ಳುತ್ತಾರೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಮೈಸೂರಿನಲ್ಲಿ ಹೇಳಿದ್ದಾರೆ.

    ಇನ್ನು 6 ತಿಂಗಳಲ್ಲಿ ಸಚಿವ ಸುಧಾಕರ್, ನಾರಾಯಣ್ ಗೌಡ, ಬಿ ಗೋಪಾಲಯ್ಯ, ಆರ್ ಶಂಕರ್ ಬಿ.ಸಿ ಪಾಟೀಲ್ ಸೇರಿ ಹಲವರಿಂದ ಸಚಿವ ಸ್ಥಾನ ಕಿತ್ತುಕೊಳ್ಳುತ್ತಾರೆ. ಅವರಿಗೆ ಈಗ ವಲಸಿಗರ ಅವಶ್ಯಕತೆ ಇಲ್ಲ ಸರ್ಕಾರ ಗಟ್ಟಿಯಾಗಿದೆ. ಇದು ವಲಸೆ ಹೋದವರ ಗತಿ ಎಂದರು.

    ಸಿದ್ದರಾಮಯ್ಯ ಅವರನ್ನು ಸಮಾಜದಿಂದ ಬಹಿಷ್ಕರಿಸುತ್ತೇವೆ ಎಂಬ ಎಂಎಲ್‍ಸಿ ಎಚ್ ವಿಶ್ವನಾಥ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಬಹಿಷ್ಕಾರ ಎಂಬುದು ಅಸಂವಿಧಾನಿಕ ಪದ. ಸಿದ್ದರಾಮಯ್ಯ ಅವರ ವರ್ಚಸ್ಸಿಗೆ ಕುಂದು ತರಲು ಆರ್ ಎಸ್ ಎಸ್ ಹಾಗೂ ಎಚ್ ವಿಶ್ವನಾಥ್ ಅವರಿಂದ ಪ್ರಯತ್ನ ನಡೆಯುತ್ತಿದೆ. ಸಿದ್ದರಾಮಯ್ಯ ಅವರು ಒಂದು ಜಾತಿ ವರ್ಗಕ್ಕೆ ಸೇರಿದವರಲ್ಲ. ವಿಶ್ವನಾಥ್ ಬಹಿಷ್ಕಾರ ಪದ ಹೇಗೆ ಬಳಸಿದರು. ಅವರಿಗೆ ಈ ಬಗ್ಗೆ ನಾಚಿಕೆಯಾಗಬೇಕು ಎಂದು ಹೇಳಿದರು.

    ಇದು ಅಕ್ಷಮ್ಯ ಅಪರಾಧ ಇದಕ್ಕೆ ನಮ್ಮ ವಿರೋಧವಿದೆ. ನೀವು ಒಬ್ಬ ಲಾಯರ್ ಆಗಿದ್ದೀರಾ ನಿಮಗೂ ಅದು ಗೊತ್ತಿದೆ ಆ ಹೇಳಿಕೆಯನ್ನು ವಿಶ್ವನಾಥ್ ವಾಪಸ್ಸು ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

  • ಲವ್ ಜಿಹಾದ್ ಸಂಬಂಧ ಕಾನೂನು ತರುವ ಆಲೋಚನೆಯೇ ಇಲ್ಲ: ಮಾಧುಸ್ವಾಮಿ

    ಲವ್ ಜಿಹಾದ್ ಸಂಬಂಧ ಕಾನೂನು ತರುವ ಆಲೋಚನೆಯೇ ಇಲ್ಲ: ಮಾಧುಸ್ವಾಮಿ

    – ಎಲ್ಲರೂ ಮಿಕ್ಸ್ ಆಗಿರುವುದೇ ಭಾರತ ದೇಶ

    ಚಿಕ್ಕಮಗಳೂರು: ಲವ್ ಜಿಹಾದ್ ಸಂಬಂಧ ಕಾನೂನು ತರುವ ಆಲೋಚನೆಯೇ ಇಲ್ಲ ಎಂದು ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿಯವರು ಹೇಳಿದ್ದಾರೆ.

    ಇಂದು ಚಿಕ್ಕಮಗಳೂರು ಜಿಲ್ಲೆ ಕೊಪ್ಪ ಪಟ್ಟಣದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವರ ತಲೆಕೆಟ್ಟ ಹೇಳಿಕೆಗಳಿಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಲವ್ ಜಿಹಾದ್ ಸಂಬಂಧ ಕಾನೂನು ತರುವ ಆಲೋಚನೆಯೇ ನಮ್ಮ ಮುಂದೆ ಇಲ್ಲ. ಸಿದ್ದರಾಮಯ್ಯ ಒಂದು ಸಮುದಾಯವನ್ನು ಓಲೈಸಲು ಈ ರೀತಿಯ ಹೇಳಿಕೆ ಕೊಡುವುದು ಸರಿಯಲ್ಲ ಎಂದು ಕಿಡಿಕಾರಿದರು. ಇದನ್ನು ಓದಿ: ಹಿಂದೂ, ಮುಸ್ಲಿಂ ಕ್ರಾಸ್ ಆಗಿ ಹುಟ್ಟಿದವರು ಬಹಳ ಜನ ಇದ್ದಾರೆ: ಸಿದ್ದರಾಮಯ್ಯ

    ಹಿಂದೂ-ಮುಸ್ಲಿಂ ಕ್ರಾಸ್ ಆಗಿ ಹುಟ್ಟಿರುವವರು ಇದ್ದಾರೆ ಎಂಬ ಹೇಳಿಕೆ ಉತ್ತರಿಸಿದ ಸಚಿವರು, ಎಲ್ಲರೂ ಮಿಕ್ಸ್ ಆಗಿರುವುದೇ ಭಾರತ ದೇಶ. ಈ ದೇಶದಲ್ಲಿರುವ ಶೇಕಡ 60 ರಿಂದ 70ರಷ್ಟು ಮುಸ್ಲಿಂ-ಕ್ರಿಶ್ಚಿಯನ್‍ಗಳು ಒಂದು ಕಾಲದಲ್ಲಿ ಮೂಲ ಹಿಂದುಗಳೆ. ಹೀಗಾಗಿ ಈ ರೀತಿ ಹೇಳಿಕೆ ನೀಡಿ ಜನರನ್ನು ಪ್ರಚೋದನೆ ಮಾಡುವುದು ಸರಿಯಲ್ಲ ಎಂದು ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾಧುಸ್ವಾಮಿಯವರು ಪ್ರತಿಕ್ರಿಯೆ ನೀಡಿದ್ದಾರೆ.

    ಇದೇ ವೇಳೆ ಹೆಚ್. ವಿಶ್ವನಾಥ್ ಬಗ್ಗೆ ಮಾತನಾಡಿ, ನಾವು ವಿಶ್ವನಾಥ್ ಪರ ಇದ್ದೇವೆ. ನಮ್ಮ ಜೊತೆ ಬಂದ ಯಾರಿಗೂ ಬೆನ್ನಿಗೆ ಚೂರಿ ಹಾಕುವುದಿಲ್ಲ. ಅವರು ಚುನಾವಣೆಯಲ್ಲಿ ಸೋತರು ಎಂ.ಎಲ್.ಸಿ ಆಗಿದ್ದಾರೆ. ಸೋತವರಿಗೆ ಬೇರೆ ಯಾವ ಪಕ್ಷದಲ್ಲಿಯೂ ಈ ಮನ್ನಣೆ ಸಿಗುತ್ತಿರಲಿಲ್ಲ. ಅಡ್ವೋಕೇಟ್ ಜರ್ನಲ್ ಹಾಗೂ ನಾವು ಏನು ಮಾಡಬೇಕು ಅದನ್ನು ಮಾಡಿದ್ದೀವಿ. ಅದನ್ನು ಮೀರಿ ಕೋರ್ಟಿನ ತೀರ್ಮಾನಕ್ಕೆ ಯಾರನ್ನೂ ದೂಷಿಸುವಂತಿಲ್ಲ. ನಾವು ಅಪೀಲ್ ಹೋಗುತ್ತೇವೆ ಮತ್ತೊಂದು ಪ್ರಯತ್ನ ಮಾಡುತ್ತೇವೆ. ಅವರಿಗೆ ಮೋಸ ಆಗಲು ಬಿಡುವುದಿಲ್ಲ ಎಂದರು.

  • ಭಾರತ್ ಮಾತಾಕಿ ಜೈ ಅಂದ್ರೆ ಕಾಂಗ್ರೆಸ್ಸಿನವರಿಗೆ ಆಗಲ್ಲ : ಸಿ.ಟಿ.ರವಿ

    ಭಾರತ್ ಮಾತಾಕಿ ಜೈ ಅಂದ್ರೆ ಕಾಂಗ್ರೆಸ್ಸಿನವರಿಗೆ ಆಗಲ್ಲ : ಸಿ.ಟಿ.ರವಿ

    ಚಿಕ್ಕಮಗಳೂರು: ದೇಶಕ್ಕೆ ಜೈಕಾರ ಕೂಗೋದು ಬಿಜೆಪಿಯವರು ಮಾತ್ರ ಎಂದು ಅಂದುಕೊಂಡಿದ್ದರಿಂದ ಇಂದು ಕಾಂಗ್ರೆಸ್ ಹೀನಾಯ ಸ್ಥಿತಿಗೆ ತಲುಪಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕೈ ಪಕ್ಷದ ವಿರುದ್ಧ ವ್ಯಂಗ್ಯವಾಡಿದ್ದಾರೆ.

    ಜಿಲ್ಲೆಯ ಕಡೂರು ತಾಲೂಕಿನ ಬೀರೂರಿನಲ್ಲಿ ಗ್ರಾಮ ಸ್ವರಾಜ್ಯ ಕಾರ್ಯಕ್ರಮಕ್ಕೂ ಮುನ್ನ ಮಾತಾನಾಡಿದ ಅವರು, ಕಾಂಗ್ರೆಸ್ಸಿಗರು ಸಿದ್ಧಾಂತದ ಬದ್ಧತೆಗೆ ಕೆಲಸ ಮಾಡಲ್ಲ. ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಭಾರತ್ ಮಾತಾ ಕೀ ಜೈ ಎಂದು ಕೂಗಬೇಡಿ. ನೀವು ಬಿಜೆಪಿಯವರ ಯಾಕೆ ಹಾಗೇ ಕೂಗುತ್ತೀರಾ ಎಂದು ಕಾರ್ಯಕರ್ತರಿಗೆ ಗದರಿಸುತ್ತಾರೆ ಎಂದರು.

    ದೇಶಕ್ಕೆ ಜೈಕಾರ ಹಾಕೋದು ಅವರ ದೃಷ್ಟಿಯಲ್ಲಿ ಬಿಜೆಪಿಯವರು ಮಾತ್ರ ಎಂದುಕೊಂಡರಿಂದ ಇಂದು ಕಾಂಗ್ರೆಸ್ ಹೀನಾಯ ಸ್ಥಿತಿಗೆ ತಲುಪಿದೆ. ಕಾಂಗ್ರೆಸ್ಸಿನವರು ಸೋತ ಕೂಡಲೇ ಇವಿಎಂ ಮೇಲೆ ಆರೋಪಿಸುತ್ತಾರೆ. ಆದರೆ ನಾವು ಜನರೊಂದಿಗೆ ನಿರಂತರ ಸಂಪರ್ಕ ಇಟ್ಟುಕೊಳ್ಳುತ್ತೇವೆ. ಪಕ್ಷದ ಚಟುವಟಿಕೆಯಲ್ಲಿ ನಿರಂತರವಾಗಿ ಭಾಗಿಯಾಗುತ್ತೇವೆ. ನಾವು ಸಂಘಟನೆ ಕಟ್ಟಿ, ಪಕ್ಷ ಬೆಳೆಸುವ ಕೆಲಸ ಮಾಡುತ್ತೇವೆ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.

    ಇದೇ ವೇಳೆ ಎಚ್. ವಿಶ್ವನಾಥ್‍ಗೆ ಸಚಿವ ಸ್ಥಾನ ನೀಡುವಂತಿಲ್ಲ ಎಂದು ಕೋರ್ಟ್ ತೀರ್ಪು ನೀಡಿರುವ ವಿಚಾರವಾಗಿ ಮಾತಾನಾಡಿದ ಅವರು, ನಾನು ತೀರ್ಪನ್ನು ಅಧ್ಯಯನ ಮಾಡಿಲ್ಲ. ಯಾವ ಹಿನ್ನೆಲೆ ತೀರ್ಪು ಬಂದಿದೆ ಎಂಬುದನ್ನು ನೋಡಿಲ್ಲ. ಕೋರ್ಟ್ ತೀರ್ಪಿನ ಅಧ್ಯಯನ ಬಳಿಕ ಪ್ರತಿಕ್ರಿಯೆ ನೀಡುವುದು ಸೂಕ್ತ. ಹೀಗಾಗಿ ತೀರ್ಪನ್ನು ಅಧ್ಯಯನ ಮಾಡದೆ ಪ್ರತಿಕ್ರಿಯೆ ನೀಡಲು ಬಯಸುವುದಿಲ್ಲ ಎಂದು ತಿಳಿಸಿದರು.

  • ಡ್ರಗ್ಸ್ ಜಾಲ ಬೆಳೆಸಿಕೊಂಡು ಬಂದಿರುವುದು ನಾವೇ: ಎಚ್.ವಿಶ್ವನಾಥ್

    ಡ್ರಗ್ಸ್ ಜಾಲ ಬೆಳೆಸಿಕೊಂಡು ಬಂದಿರುವುದು ನಾವೇ: ಎಚ್.ವಿಶ್ವನಾಥ್

    – ಹ್ಯಾರಿಸ್ ಮಗನ ಮೇಲೆ ವಿಶ್ವನಾಥ್ ಗುಮಾನಿ
    – ಪೊಲೀಸರಿಗೆ ಎಲ್ಲಾ ಗೊತ್ತಿದ್ದರೂ ಹೇಳುವ ಸ್ಥಿತಿಯಲಿಲ್ಲ

    ಮೈಸೂರು: ಡ್ರಗ್ಸ್ ಮಾಫಿಯಾಗೆ ಪೊಲೀಸ್, ಚಿತ್ರರಂಗ, ರಾಜಕಾರಣ ಥಳಕು ಹಾಕಿಕೊಂಡಿರೋದು ಎಲ್ಲರಿಗೂ ಗೊತ್ತಿರುವ ವಿಚಾರ. ದೊಡ್ಡ ದೊಡ್ಡ ರಾಜಕಾರಣಿಗಳ ಮಕ್ಕಳ ಡ್ರಗ್ಸ್ ನಂಟಿನ ಬಗ್ಗೆ ಮಾಜಿ ಸಚಿವ ಎಚ್ ವಿಶ್ವನಾಥ್ ಮಾತನಾಡಿ, ಶಾಸಕ ಹ್ಯಾರಿಸ್ ಹಾಗೂ ಕಳಕಪ್ಪಬಂಡಿ ಪುತ್ರರ ಹೆಸರನ್ನು ಉದಾಹರಣೆಯಾಗಿ ನೀಡಿದ್ದಾರೆ.

    ಈ ಕುರಿತು ಮೈಸೂರಲ್ಲಿ ಮಾತನಾಡಿದ ಎಚ್.ವಿಶ್ವನಾಥ್, ಡ್ರಗ್ಸ್ ಜಾಲ ಬೆಳೆಸಿಕೊಂಡು ಬಂದಿರುವುದು ನಾವೇ. ರಾಜಕಾರಣಿಗಳ ಶ್ರೀಮಂತಿಕೆ, ಅಧಿಕಾರಿಗಳ ಶ್ರೀಮಂತಿಕೆ, ಚಿತ್ರರಂಗದ ಶ್ರೀಮಂತಿಕೆಯಿಂದ ಇದು ಹೆಚ್ಚಾಗಿದೆ. ಶಾಸಕ ಹ್ಯಾರೀಸ್ ಪುತ್ರ, ಶಾಸಕ ಕಳಕಪ್ಪ ಬಂಡಿ ಪುತ್ರರ ಹೆಸರು ಈ ವಿಚಾರದಲ್ಲಿ ಬಹಿರಂಗಗೊಂಡಿದೆ ಎಂದು ಹೇಳಿದರು.

    ಡ್ರಗ್ಸ್ ದಂಧೆ ಮಾಡುವವರು ಪ್ರಭಾವಿಯಾಗಿಲ್ಲ. ಅದಕ್ಕೆ ರಕ್ಷಣೆ ಕೊಡುವವರು ಪ್ರಭಾವಿಯಾಗಿದ್ದಾರೆ. ಇದು ಸರಿಯಲ್ಲ ಅದು ಯಾರೇ ಆಗಿದ್ದರೂ ದಂಡನೆ ಆಗಲೇಬೇಕು. ನಮ್ಮ ಮನೆಯ ಮಕ್ಕಳಾಗಿದ್ದರೂ ಸರಿಯೇ ಬಹಿರಂಗವಾಗಲೇಬೇಕು ಎಂದು ಆಗ್ರಹಿಸಿದ್ದರು.

    ಡ್ರಗ್ಸ್ ಜಾಲ ವ್ಯವಸ್ಥಿತವಾಗಿ ಬಹಳ ವರ್ಷದಿಂದ ನಡೆದು ಬರುತ್ತಿದೆ. ಯಾವುದೇ ಸರ್ಕಾರವನ್ನು ನಾವು ಬೊಟ್ಟು ಮಾಡಬಾರದು. ಇದು ನಿನ್ನೆ ಮೊನ್ನೆ ಪ್ರಕರಣ ಅಲ್ಲ, ನಮಗೆ ಅರಿವು ಇಲ್ಲದೆ ನಾವೇ ಬೆಳೆಸುಕೊಂಡು ಬಂದಿದ್ದೇವೆ. ಸೆಲೆಬ್ರಿಟಿಗಳ ಒಳಗೆ ಹರಡಿರೋ ದಂಧೆಯನ್ನು ಒಬ್ಬ ಸೆಲೆಬ್ರಿಟಿಯೇ ಬಹಿರಂಗ ಮಾಡಿದ್ದು ವಿಶೇಷ ಹಾಗೂ ಸೋಜಿಗ. ಪೊಲೀಸ್ ಇಲಾಖೆ ಮಾಡಬೇಕಿದ್ದ ಕೆಲಸವನ್ನು ಆ ಸೆಲೆಬ್ರಿಟಿ ಮಾಡಿದ್ದಾನೆ. ಪೊಲೀಸರು ಈಗ ತಲೆಬಾಗಿ ಸಮಾಜದ ಮುಂದೆ ನಿಲ್ಲುವ ಪರಿಸ್ಥಿತಿಗೆ ಬಂದಿದ್ದಾರೆ. ಆದರೆ ಇಂತಹ ಗಂಭೀರ ಸಮಸ್ಯೆಯನ್ನು ನಾವು ಎಂಜಾಯ್ ಮಾಡುತ್ತಿದ್ದೇವೆ. ಇಂತಹ ದಂಧೆಗಳ ಬಗ್ಗೆ ಪೊಲೀಸರಿಗೆ ಗೊತ್ತಿದ್ದರೂ ಸಹ ಅವರು ಹೇಳುವ ಸ್ಥಿತಿಯಲ್ಲಿ ಇಲ್ಲ. ಏಕೆಂದರೆ ಸ್ಥಳದ ರಾಜಕಾರಣ ಆ ರೀತಿ ಇದೆ ಎಂದು ಬೇಸರ ವ್ಯಕ್ತಪಡಿಸಿದರು.

    ಇದೇ ವೇಳೆ ಸೆಪ್ಟೆಂಬರ್ 8 ರಂದು ದಸರಾ ಉನ್ನತ ಮಟ್ಟದ ಮೊದಲ ಸಭೆ ನಡೆಯಲಿದೆ. ಬೆಂಗಳೂರಿನಲ್ಲಿ ಸಿಎಂ ಅಧ್ಯಕ್ಷತೆಯಲ್ಲಿ ಮೈಸೂರಿನ ಜನಪ್ರತಿನಿಧಿಗಳು, ಅಧಿಕಾರಿಗಳ ಸಭೆ ನಡೆಯಲಿದ್ದು, ಸಭೆಯಲ್ಲಿ ಈ ಬಾರಿಯ ದಸರಾ ಹೇಗೆ ನಡೆಸಬೇಕು ಹಾಗೂ ಜಂಬೂಸವಾರಿ ನಡೆಸಬೇಕೋ ಬೇಡವೋ ಎಂಬುದರ ಕುರಿತು ತೀರ್ಮಾನ ಮಾಡಲಾಗುತ್ತದೆ ಎಂದು ತಿಳಿಸಿದರು.

    ಆರ್‍ಎಸ್‍ಎಸ್ ಕಚೇರಿಗೆ ಭೇಟಿ: ಇಂದು ಮೊದಲ ಬಾರಿಗೆ ಮೈಸೂರಿನ ಆರ್‍ಎಸ್‍ಎಸ್ ಕಚೇರಿಗೆ ಹಳ್ಳಿಹಕ್ಕಿ ವಿಶ್ವನಾಥ್ ಭೇಟಿ ನೀಡಿ ಕುತೂಹಲ ಮೂಡಿಸಿದರು. ನಗರದ ಬಲ್ಲಾಳ್ ವೃತ್ತದ ಬಳಿ ಇರುವ ಮಾಧವ ಕೃಪ ಕಚೇರಿಯಲ್ಲಿ ಆರ್‍ಎಸ್‍ಎಸ್ ಹಿರಿಯರ ಜೊತೆ ಮಾತುಕತೆ ಪ್ರಸಕ್ತ ವಿದ್ಯಾಮಾನಗಳ ಬಗ್ಗೆ ಗಂಭೀರ ಚರ್ಚೆ ನಡೆಸಿದರು.

  • ಮಾಜಿ ಸಿಎಂ ಸಿದ್ದುರನ್ನು ಕುಟುಕಿದ ವಿಶ್ವನಾಥ್

    ಮಾಜಿ ಸಿಎಂ ಸಿದ್ದುರನ್ನು ಕುಟುಕಿದ ವಿಶ್ವನಾಥ್

    ಮೈಸೂರು: ಮಂತ್ರಿಗಳನ್ನು ಅನರ್ಹರು ಎಂದ ಮಾಜಿ ಸಿಎಂ ಸಿದ್ದುಗೆ ಹಳ್ಳಿಹಕ್ಕಿ ವಿಶ್ವನಾಥ್ ಕುಟುಕಿದ್ದಾರೆ.

    ಮೈಸೂರಿನಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯರಿಂದ ಸಂವಿಧಾನಕ್ಕೆ ಅಪಚಾರ ಆಗಿದೆ. ಸಿದ್ದರಾಮಯ್ಯ ಸಂವಿಧಾನಕ್ಕೆ ಗೌರವ ಕೊಡುತ್ತಿದ್ದಾರೋ ಅಥವಾ ಅಗೌರವ ಕೊಡುತ್ತಿದ್ದಾರೋ ಎಂದು ವಿಶ್ವನಾಥ್ ಪ್ರಶ್ನೆ ಹಾಕಿದ್ದಾರೆ.

    ಜನತಾ ನ್ಯಾಯಾಲಯದಲ್ಲಿ ಗೆದ್ದು ಬಂದವರನ್ನು ನೀವು ಹೇಗೆ ಗೆದ್ರಿ, ನನಗೆ ಗೊತ್ತಿದೆ ಎಂದರೆ ಏನರ್ಥ? ಹಾಗಾದರೆ ಇವರು ಹೇಗೆ ಗೆದ್ದರು? ಎಲ್ಲ ಎಲೆಕ್ಷನ್‍ಗಳು ದುಡ್ಡಿನಿಂದಲೇ ಆಗುತ್ತಾ? ಸಂವಿಧಾನ ಡೇಂಜರ್ ಎಂದು ಭಾಷಣ ಮಾಡುವ ಸಿದ್ದರಾಮಯ್ಯ ಅವರೇ ಸಂವಿಧಾನಕ್ಕೆ ಅಗೌರವ ಕೊಡುತ್ತಿದ್ದಾರೆ. ಹಾಗಾದರೆ ಸುಪ್ರೀಂಕೋರ್ಟ್ ತೀರ್ಪಿಗೆ ಸಿದ್ದರಾಮಯ್ಯ ಗೌರವ ಕೊಡುತ್ತಿಲ್ಲ ಎಂದು ಅರ್ಥ ಎಂದು ವಿಶ್ವನಾಥ್ ಗರಂ ಆದರು. ಸಿದ್ದರಾಮಯ್ಯ ಅವರ ಹೇಳಿಕೆಯನ್ನು ನಾನು ಖಂಡಿಸುತ್ತೇನೆ ಎಂದು ಹೇಳಿದರು.

    ಪಕ್ಷಾಂತರಿಗಳು 17 ಜನ ಒಟ್ಟಾಗಿ ಇಲ್ಲವೆಂಬ ಚರ್ಚೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಯಾವಾಗಲು ಅವರನ್ನು ತಬ್ಬಿಕೊಂಡು ಇರಲು ಆಗುತ್ತಾ. ಗಂಡ- ಹೆಂಡತಿಯೇ ಜೊತೆಯಾಗಿ ಇರೋದಿಲ್ಲ. ನಾವು ಯಾವಾಗಲು ಜೊತೆಯಾಗಿ ಇರಲು ಆಗುತ್ತಾ ಎಂದು ಹೇಳಿದರು. ಅಲ್ಲದೆ ಗುರುವಾರ ಕಾರ್ಯಕ್ರಮಕ್ಕೆ ಹೋಗಿದ್ದೆ. ಗುರುವಾರ ಕಾರ್ಯಕ್ರಮ ಚೆನ್ನಾಗಿ ಆಯಿತು. ನನ್ನ ಅನುಭವ ಬಳಸಿಕೊಳ್ಳಿ ಎಂದು ಕೂಗಿ ಹೇಳೋಕೆ ಆಗೋಲ್ಲ. ಮಂತ್ರಿಯಾಗಿರಲಿ ಆಗಿಲ್ಲದೆ ಇರಲಿ ಅನುಭವಸ್ಥರ ಅನುಭವ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

  • ಎಚ್‍ಡಿಕೆ ಮಾತಿಗೆ ಬೆಲೆ ಕೊಟ್ಟು ಜನ ಬಿಜೆಪಿ ಸರ್ಕಾರವನ್ನು ಉಳಿಸಿದ್ದಾರೆ: ಜಿಟಿಡಿ

    ಎಚ್‍ಡಿಕೆ ಮಾತಿಗೆ ಬೆಲೆ ಕೊಟ್ಟು ಜನ ಬಿಜೆಪಿ ಸರ್ಕಾರವನ್ನು ಉಳಿಸಿದ್ದಾರೆ: ಜಿಟಿಡಿ

    – ಕುಮಾರಸ್ವಾಮಿ ನಡೆಯೇ ಬೇರೆ, ನುಡಿಯೇ ಬೇರೆ
    – ವಿಶ್ವನಾಥ್ ಸೋಲಿಗೆ ಯೋಗೀಶ್ವರ್ ಕಾರಣ

    ಮೈಸೂರು: ಮಾಜಿ ಸಿಎಂ ಎಚ್‍ಡಿಕೆ ಮತ್ತು ಅನರ್ಹ ಶಾಸಕ ಹಳ್ಳಿಹಕ್ಕಿ ವಿಶ್ವನಾಥ್ ವಿರುದ್ಧ ಮಾಜಿ ಸಚಿವ ಜಿ.ಟಿ ದೇವೇಗೌಡ ಕಿಡಿಕಾರಿದ್ದಾರೆ.

    ಉಪ ಚುನಾವಣೆಯಲ್ಲಿ ಜೆಡಿಎಸ್ ಗೆ ಶೂನ್ಯ ಸಾಧನೆ ವಿಚಾರ ಹಾಗೂ ಹುಣಸೂರು ಉಪ ಚುನಾವಣೆಯಲ್ಲಿ ತಮ್ಮ ಸೋಲಿಗೆ ಜಿ.ಟಿ. ದೇವೇಗೌಡ ಕಾರಣ ಎಂಬ ಎಚ್. ವಿಶ್ವನಾಥ್ ಹೇಳಿಕೆ ಬಗ್ಗೆ ಮೈಸೂರಿನಲ್ಲಿ ಮಾಜಿ ಸಚಿವ ಜಿ.ಟಿ. ದೇವೇಗೌಡ ಮಾಧ್ಯಮದವರ ಮಾತಾಡಿದ್ದಾರೆ. ಉಪ ಚುನಾವಣೆ ಘೋಷಣೆ ಮುನ್ನವೆ ಎಚ್‍ಡಿಕೆ ಕುಮಾರಸ್ವಾಮಿ ಬಿಜೆಪಿ ಸರಕಾರ ಉಳಿಸುತ್ತೇನೆ ಎಂದು ಹೇಳಿದ್ರು ಹೀಗಾಗಿ ಜನ ಜೆಡಿಎಸ್ ಅನ್ನು ಶೂನ್ಯ ಮಾಡಿ ಸರಕಾರ ಭದ್ರ ಮಾಡಿದ್ದಾರೆ ಇದರಲ್ಲಿ ತಪ್ಪೇನಿದೆ. ಜನ ಎಚ್‍ಡಿಕೆ ಮಾತಿನಂತೆ ನಡೆದು ಕೊಂಡಿದ್ದಾರೆ ಎಂದು ಹೇಳುವ ಮೂಲಕ ಜೆಡಿಎಸ್ ಶೂನ್ಯ ಸಾಧನೆ ವಿಚಾರದಲ್ಲಿ ಎಚ್ಡಿಕೆ ಕಾಲನ್ನು ಜಿಟಿಡಿ ಎಳೆದರು.

    ಕುಮಾರಣ್ಣ ಮುತ್ತಿನಂತ ಮಾತು ಆಡುತ್ತಾರೆ ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ ಇತ್ತೀಚೆಗೆ ಅವರು ಆಡುತ್ತಿರುವ ಮಾತುಗಳು ಅಭಿಮಾನಿಗಳನ್ನೇ ಕೆರಳಿಸಿದೆ. ಕುಮಾರಸ್ವಾಮಿ ಅವರ ನಡೆಯೇ ಬೇರೆ, ನುಡಿಯೇ ಬೇರೆ ಆಗಿದೆ. ಇನ್ನಾದರೂ ಅವರು ಬದಲಾಗಬೇಕು. ಆಡುವ ಮಾತಿನ ಮೇಲೆ ಹಿಡಿತ ಇಟ್ಟುಕೊಳ್ಳಲಿ ಎಂದು ಎಚ್‍ಡಿಕೆಗೆ ಸಲಹೆ ನೀಡಿದರು.

    ಹುಣಸೂರು ಉಪ ಚುನಾವಣೆಯಲ್ಲಿ ಎಚ್. ವಿಶ್ವನಾಥ್ ಸೋಲಿಗೆ ಸಿ.ಪಿ. ಯೋಗೀಶ್ವರ್ ಕಾರಣ. ಯೋಗೀಶ್ವರ್ ಸಮುದಾಯದ ನಾಯಕರನ್ನು ಟೀಕಿಸಿದ್ದರಿಂದ ಒಕ್ಕಲಿಗರು ವಿಶ್ವನಾಥ್ ವಿರುದ್ಧ ತಿರುಗಿ ಬಿದ್ದರು. ಅವನ್ಯಾರು ದೇವೇಗೌಡ, ಕುಮಾರಸ್ವಾಮಿ, ಜಿ.ಟಿ.ದೇವೇಗೌಡ ಅಂತೆಲ್ಲ ಮಾತನಾಡಿದರು. ದುಡ್ಡು, ಸೀರೆ, ಕುಕ್ಕರ್ ಹಂಚಿ ಗೆಲ್ಲುತ್ತೇವೆ ಎಂಬ ಹುಂಬತನ ಅವರಲ್ಲಿ ಇತ್ತು. ಹೀಗಾಗಿ 5 ಕೋಟಿ ಆಮಿಷ ತೋರಿ ಒಕ್ಕಲಿಗರನ್ನು ಓಲೈಸುವ ಪ್ರಯತ್ನ ಮಾಡಿದ್ದರು ಎಂದು ಆರೋಪಿಸಿದರು.

    ಜಿಟಿಡಿ ಪಕ್ಷದ್ರೋಹಿ ಎಂಬ ವಿಶ್ವನಾಥ್ ಹೇಳಿಕೆಗೂ ಜಿ.ಟಿ.ದೇವೇಗೌಡ ತಿರುಗೇಟು ನೀಡಿ, ಹುಣಸೂರಿನಲ್ಲಿ ನಾನು ವಿಶ್ವನಾಥ್ ಬೆಂಬಲಿಸುತ್ತೇನೆ ಎಂದು ಎಲ್ಲಿಯೂ ಹೇಳಿರಲಿಲ್ಲ. ಇಡೀ ಚುನಾವಣೆಯಲ್ಲಿ ನಾನು ಭಾಗವಹಿಸಲ್ಲ ಅಂತ ಮೊದಲೇ ಹೇಳಿದ್ದೆ. ಅಂದ ಮೇಲೆ ಪಕ್ಷದ್ರೋಹಿ ಹೇಗಾಗುತ್ತೆ? ನಾನು ಈಗಲೂ ತಟಸ್ಥನಾಗಿಯೇ ಇದ್ದೇನೆ. ನನ್ನ ಮಗ ಸ್ವತಂತ್ರನಿದ್ದಾನೆ. ಅವನು ಸ್ವತಂತ್ರ ನಿರ್ಧಾರ ಕೈಗೊಂಡಿದ್ದಾನೆ ಎಂದು ಸ್ಪಷ್ಟಪಡಿಸಿದರು.

    ಯೋಗೀಶ್ವರ್ ಟೀಕೆ ನಂತರ ನನ್ನ ಮಗ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟು ಸ್ವಂತ ನಿರ್ಧಾರ ಕೈಗೊಂಡಿದ್ದಾನೆ ಎಂದು ಹೇಳುವ ಮೂಲಕ ಕಾಂಗ್ರೆಸ್ ಬೆಂಬಲ ವಿಚಾರದಲ್ಲಿ ತಮ್ಮ ಮಗನನ್ನು ಜಿಟಿಡಿ ಸಮರ್ಥಿಸಿಕೊಂಡರು. ವಿಶ್ವನಾಥ್ ಹುಣಸೂರು ಕ್ಷೇತ್ರ ಅರ್ಥ ಮಾಡಿಕೊಳ್ಳುವಲ್ಲಿ ವಿಫಲರಾದರು. ಅವರು ಎಲ್ಲಿಂದಲೋ ಬಂದವರು. ಕಳೆದ ಬಾರಿ ಎಚ್‍ಡಿ ದೇವೇಗೌಡರು, ನಾನು ಒಟ್ಟಿಗೆ ಸೇರಿ ಗೆಲ್ಲಿಸಿಕೊಂಡಿದ್ದೆವು. ಆದರೆ ಅದನ್ನು ಉಳಿಸಿಕೊಳ್ಳಲು ವಿಶ್ವನಾಥ್ ಕೈಯಲ್ಲಿ ಆಗಲಿಲ್ಲ. ಹಳ್ಳಿ ಹಳ್ಳಿಯಲ್ಲಿ ಜನ ಆಕ್ರೋಶ ಹೊರಹಾಕಿದ್ರು. ಗ್ರಾಮಗಳ ಒಳಗೆ ಬಿಟ್ಟು ಕೊಳ್ಳಲಿಲ್ಲ. ಅದು ಅವರ ಸೋಲಿಗೆ ಕಾರಣ ಎಂದರು.

  • ಜೋಡೆತ್ತುಗಳು ಕಿತ್ತುಕೊಂಡು ಹೋಗಿ ತಿಂಗಳಾಗಿವೆ: ಪರಮೇಶ್ವರ್​ಗೆ ವಿಶ್ವನಾಥ್ ಟಾಂಗ್

    ಜೋಡೆತ್ತುಗಳು ಕಿತ್ತುಕೊಂಡು ಹೋಗಿ ತಿಂಗಳಾಗಿವೆ: ಪರಮೇಶ್ವರ್​ಗೆ ವಿಶ್ವನಾಥ್ ಟಾಂಗ್

    – ಹೆಚ್‍ಡಿಕೆ ಸೆಕೆಂಡ್ ಇನ್ನಿಂಗ್ಸ್ ಚೆನ್ನಾಗಿರಲಿಲ್ಲ

    ಮೈಸೂರು: ಜೋಡೆತ್ತುಗಳು ಕಿತ್ತುಕೊಂಡು ಹೋಗಿ ತಿಂಗಳಾಗಿವೆ ಎಂದು ಹೇಳುವ ಮೂಲಕ ಮಾಜಿ ಡಿಸಿಎಂ ಪರಮೇಶ್ವರ್ ಗೆ ಹುಣಸೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹೆಚ್ ವಿಶ್ವನಾಥ್ ಟಾಂಗ್ ನೀಡಿದ್ದಾರೆ.

    ಇಂದು ಹುಣಸೂರಿನಲ್ಲಿ ಮಾತನಾಡಿದ ಅವರು, ನಾನು ಸಿದ್ದರಾಮಯ್ಯ ಜೋಡೆತ್ತಿನ ರೀತಿ ಕೆಲಸ ಮಾಡಿದ್ದೇವೆ ಎಂಬ ಪರಮೇಶ್ವರ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಜೋಡೆತ್ತುಗಳು ಕಿತ್ತುಕೊಂಡು ಹೋಗಿ ತಿಂಗಳಾಗಿವೆ. ಒಂದು ಏರಿಗೆ ಎಳೆದರೆ ಮತ್ತೊಂದು ನೀರಿಗೆ ಎಳೆಯುತ್ತಿದೆ ಎಂದು ಲೇವಡಿ ಮಾಡಿದರು.

    ಪರಮೇಶ್ವರ್ ಗೆ ಕಾಂಗ್ರೆಸ್ ಮಾಡಿದ ಅಪಮಾನಕ್ಕೆ ಅವರು ಚುನಾವಣಾ ಪ್ರಚಾರಕ್ಕೆ ಬರಬಾರದು. ಅವರ ಕಪಾಳಕ್ಕೆ ಹೊಡೆದಂತೆ ಗೃಹ ಖಾತೆ ಕಿತ್ತುಕೊಳ್ಳಲಾಗಿತ್ತು. ಇಷ್ಟಾದರೂ ಯಾವ ಮುಖ ಇಟ್ಟುಕೊಂಡು ಪ್ರಚಾರಕ್ಕೆ ಬಂದಿದ್ದಾರೋ ಗೊತ್ತಿಲ್ಲ ಎಂದು ಪರಮೇಶ್ವರ್ ವಿರುದ್ಧ ಕಿಡಿಕಾರಿದರು.

    ವಿಶ್ವನಾಥ್‍ಗೆ ಮಾನಸಿಕ ಗೊಂದಲ ಖಾಯಿಲೆ ಇದೆ ಎಂದು ಹೇಳಿದ್ದ ಮಾಜಿ ಸಚಿವ ಮಹದೇವಪ್ಪ ಅವರಿಗೆ ತಿರುಗೇಟು ನೀಡಿದ ವಿಶ್ವನಾಥ್, ಗೊಂದಲದ ಖಾಯಿಲೆ ನನಗಲ್ಲ ಮಹದೇವಪ್ಪಗೆ. ನಾನು ಆರಾಮಾಗಿ ಜನರ ಜೊತೆ ಇದ್ದೇನೆ. ಮಹದೇವಪ್ಪ ಸಚಿವನಾಗಿದ್ದಾಗ ಒಳ್ಳೆ ಕೆಲಸ ಮಾಡಿದ್ದರೆ ಅವರನ್ನು ಹೊಗಳುತ್ತಿದ್ದೆ. ನಾನು ಸುಖಾಸುಮ್ಮನೆ ಯಾರನ್ನು ಹೊಗಳುವುದಿಲ್ಲ ಎಂದು ತಿಳಿಸಿದ್ದಾರೆ.

    ಇದೇ ವೇಳೆ ಮತ್ತೆ ದಳಪತಿಗಳ ಗುಣಗಾನ ಮಾಡಿದ ವಿಶ್ವನಾಥ್, 2006ರಲ್ಲಿ ಕುಮಾರಸ್ವಾಮಿ ಬೆಸ್ಟ್ ಸಿಎಂ. ಈಗಲೂ ನಾನು ಕುಮಾರಸ್ವಾಮಿ ಜೊತೆ ಚೆನ್ನಾಗಿದ್ದೇನೆ. ದೇವೇಗೌಡರ ಜೊತೆ ದೂರವಾಣಿಯಲ್ಲಿ ಮಾತನಾಡುತ್ತೇನೆ. ಕುಮಾರಸ್ವಾಮಿ ಮೊದಲ ಬಾರಿ ಸಿಎಂ ಆದಾಗ ಈಗಲೂ ನೆನಪಿಸಿಕೊಳ್ಳುವ ಕೆಲಸ ಮಾಡಿದ್ದಾರೆ. ಕುಮಾರಸ್ವಾಮಿ 2ನೇ ಇನ್ನಿಂಗ್ಸ್ ಚೆನ್ನಾಗಿರಲಿಲ್ಲ. ಅವರು ಒಳ್ಳೆಯ ಆಡಳಿತ ನೀಡಲು ಸಮ್ಮಿಶ್ರ ಸರ್ಕಾರ ಬಿಡಲಿಲ್ಲ ಎಂದು ದೂರಿದರು.

  • ಎಚ್.ವಿಶ್ವನಾಥ್ ನನ್ನ ಗುರು, ಸಿದ್ದರಾಮಯ್ಯ ನಮ್ಮ ಜೂನಿಯರ್: ರಮೇಶ್ ಜಾರಕಿಹೊಳಿ

    ಎಚ್.ವಿಶ್ವನಾಥ್ ನನ್ನ ಗುರು, ಸಿದ್ದರಾಮಯ್ಯ ನಮ್ಮ ಜೂನಿಯರ್: ರಮೇಶ್ ಜಾರಕಿಹೊಳಿ

    ಬೆಳಗಾವಿ: ಎಚ್.ವಿಶ್ವನಾಥ್ ನನ್ನ ಗುರು, ಕಾಂಗ್ರೆಸ್‍ನಲ್ಲಿ ಸಿದ್ದರಾಮಯ್ಯ ನಮ್ಮ ಜೂನಿಯರ್ ಎಂದು ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.

    ಇಂದು ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಖನ್ ಜಾರಕಿಹೊಳಿ ಇಂದಿನಿಂದ ನನ್ನ ತಮ್ಮ ಅಲ್ಲ. ಆತ ನನ್ನ ವಿರೋಧಿ. ಡಿಸೆಂಬರ್ 5ರವರೆಗೂ ಅವನು ನನ್ನ ತಮ್ಮ ಅಲ್ಲ 5 ರ ನಂತರ ತಮ್ಮ. ಲಖನ್‍ಗೆ ದೇವರು ಒಳ್ಳೆಯ ಬುದ್ಧಿ ಕೊಡಲಿ ಎಂದು ಹೇಳಿದರು.

    ಇದೇ ವೇಳೆ ರಮೇಶ್ ಜಾರಕಿಹೊಳಿ ನನ್ನ ಶಿಷ್ಯ ಅಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಸಿದ್ದರಾಮಯ್ಯ ಹೇಳಿರುವುದು ಸತ್ಯವಿದೆ. ಎಚ್.ವಿಶ್ವನಾಥ್ ನನ್ನ ಗುರು, ಕಾಂಗ್ರೆಸ್‍ನಲ್ಲಿ ಸಿದ್ದರಾಮಯ್ಯ ನಮ್ಮ ಜೂನಿಯರ್. ಬ್ರಿಟಿಷ್ ಅವರು ಕುತಂತ್ರ ಮಾಡಿದ ಹಾಗೆ ಕಾಂಗ್ರೆಸ್‍ನವರು ಮಾಡಿದ್ದಾರೆ. ಸತೀಶ್ ಕುತಂತ್ರ ಮಾಡಿದ ಲಖನ್ ನನ್ನ ಬೆನ್ನಿಗೆ ಚೂರಿ ಹಾಕಿದ ಎಂದು ಇಬ್ಬರು ಸಹೋದರರ ವಿರುದ್ಧ ಮತ್ತೆ ವಾಗ್ದಾಳಿ ಮಾಡಿದರು.

    ಒಂದೇ ವಿಮಾನದಲ್ಲಿ ಬಂದರೂ ಸಹೋದರರಿಬ್ಬರು ಯಾಕೆ ಮಾತನಾಡಲಿಲ್ಲ ಎಂದು ಕೇಳಿದಾಗ, ಇಬ್ಬರು ವಿಮಾನದಲ್ಲಿ ಬಂದಿರುವುದು ಸಹಜ. ಆದರೆ ಸತೀಶ್ ಜೊತೆಗೆ ನಾನು ಮಾತನಾಡಿಲ್ಲ. ಆತನ ಜೊತೆ ನಾನು ನಲವತ್ತು ವರ್ಷದಿಂದ ಮಾತಾಡಿಲ್ಲ ಮುಂದೆಯೂ ಮಾತನಾಡುವುದಿಲ್ಲ. ಲಖನ್ ಜಾರಕಿಹೊಳಿ ನನಗೆ ಬೆನ್ನಿಗೆ ಚೂರಿ ಹಾಕಿದ್ದಾನೆ. ಸತೀಶ್ ಜಾರಕಿಹೊಳಿ ಬೆನ್ನಿಗೆ ಚೂರಿ ಹಾಕಿಲ್ಲ ಎಂದು ಹೇಳಿದರು.

  • ಐಟಿ ದಾಳಿ ರಾಜಕೀಯ ಪ್ರೇರಿತ ಅನ್ನೋದು ಅಂಬೇಡ್ಕರ್‌ಗೆ ಮಾಡಿದ ಅಪಮಾನ: ವಿಶ್ವನಾಥ್

    ಐಟಿ ದಾಳಿ ರಾಜಕೀಯ ಪ್ರೇರಿತ ಅನ್ನೋದು ಅಂಬೇಡ್ಕರ್‌ಗೆ ಮಾಡಿದ ಅಪಮಾನ: ವಿಶ್ವನಾಥ್

    -ವಿರೋಧ ಪಕ್ಷದ ನಾಯಕನೆಂದು ಎಲ್ಲವನ್ನೂ ವಿರೋಧಿಸಲ್ಲ

    ಮೈಸೂರು: ಮಾಜಿ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಮನೆ ಮೇಲೆ ಐಟಿ ದಾಳಿ ವಿಚಾರವಾಗಿ ಪ್ರತಿಕ್ರಿಯಿಸಿ, ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳ ದಾಳಿ ರಾಜಕೀಯ ಪ್ರೇರಿತ ಅನ್ನೋದು ದಾದಾ ಸಾಹೇಬ್ ಅಂಬೇಡ್ಕರ್ ಅವರಿಗೆ ಮಾಡಿದ ಅಪಮಾನ ಎಂದು ಅನರ್ಹ ಶಾಸಕ ಹೆಚ್.ವಿಶ್ವನಾಥ್ ಕಿಡಿಕಾರಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸ್ವತಃ ಮಾಜಿ ಡಿಸಿಎಂ ಪರಮೇಶ್ವರ್ ಅವರೇ ನಮ್ಮ ಮೇಲೆ ನಡೆದಿರುವ ಐಟಿ ದಾಳಿ ರಾಜಕೀಯದಿಂದ ಆಗಿರುವ ದಾಳಿ ಅಲ್ಲ ಎಂದಿದ್ದಾರೆ. ಆದರೆ ಕೆಲವರು ಇದು ರಾಜಕೀಯ ಪ್ರೇರಿತ ಎನ್ನುತ್ತಿದ್ದಾರೆ. ಎಲ್ಲದಕ್ಕೂ ರಾಜಕೀಯವನ್ನು ಬೆರೆಸುವುದು ತಪ್ಪು. ಮಾಜಿ ಸಿಎಂ ಸಿದ್ಧರಾಮಯ್ಯ ಅವರು ವಿರೋಧ ಪಕ್ಷದ ನಾಯಕ ಎಂದು ಎಲ್ಲವನ್ನೂ ವಿರೋಧಿಸಬಾರದು. ನೀವು ಈ ಹಿಂದೆಯೂ ವಿರೋಧ ಪಕ್ಷದ ನಾಯಕರಾಗಿ, ಮಾಜಿ ಸಿಎಂ ಆಗಿ ಕೆಲಸ ಮಾಡಿದ್ದೀರಿ. ನಿಮಗೆ ಒಳ್ಳೆಯ ಅನುಭವವಿದೆ. ಆದರೆ ಎಲ್ಲವನ್ನು ವಿರೋಧಿಸಿಕೊಂಡು ಬಂದರೆ ನಿಮ್ಮ ದೊಡ್ಡ ವ್ಯಕ್ತಿತ್ವ ಏರಲ್ಲ, ಕುಗ್ಗತ್ತೆ ಎಂದು ಟಾಂಗ್ ಕೊಟ್ಟರು. ಇದನ್ನೂ ಓದಿ:ಮೈಸೂರು ವಿಭಜನೆ ಆಗಬೇಕು- ಹೆಚ್ ವಿಶ್ವನಾಥ್

    ಐಟಿ ದಾಳಿಗಳನ್ನು ಸುಖಾ ಸುಮ್ಮನೆ ರಾಜಕೀಯ ಪ್ರೇರಿತ ಅನ್ನೋದು ತಪ್ಪಾಗುತ್ತದೆ. ಕಾನೂನು ರೂಪಿಸುವ ರಾಜಕಾರಣಿಗಳೇ ಕಾನೂನಿಗೆ ಬೆಲೆ ಕೊಡದೆ ಇದ್ದರೆ ಹೇಗೆ? ತಪ್ಪು ಮಾಡಿಲ್ಲವೆಂದಾದರೆ ಕಾನೂನಿನಲ್ಲಿ ಯಾರಿಗೂ ಶಿಕ್ಷೆಯಾಗಲ್ಲ. ಹೀಗಾಗಿ ಐಟಿ ದಾಳಿಗಳನ್ನ ರಾಜಕೀಯಕ್ಕೆ ಮಿಶ್ರಣ ಮಾಡೋದು ಸರಿಯಲ್ಲ ಎಂದು ಹೇಳಿದರು.