Tag: H Vishwanth

  • ಕೆಂಪಣ್ಣ ವರದಿ ಬಿಡುಗಡೆಯಾದ್ರೆ ಸಿಎಂ ಪಂಚೆ, ಶರ್ಟು ಎಲ್ಲಾ ಮಸಿ ಆಗೋದು ಗ್ಯಾರಂಟಿ: ಹೆಚ್.ವಿಶ್ವನಾಥ್

    ಕೆಂಪಣ್ಣ ವರದಿ ಬಿಡುಗಡೆಯಾದ್ರೆ ಸಿಎಂ ಪಂಚೆ, ಶರ್ಟು ಎಲ್ಲಾ ಮಸಿ ಆಗೋದು ಗ್ಯಾರಂಟಿ: ಹೆಚ್.ವಿಶ್ವನಾಥ್

    ಮೈಸೂರು: ಕೆಂಪಣ್ಣ ವರದಿ ಬಿಡುಗಡೆಯಾದ್ರೆ ಸಿಎಂ(Siddaramaiah) ಪಂಚೆ ಶರ್ಟು ಎಲ್ಲಾ ಮಸಿ ಆಗೋದು ಗ್ಯಾರಂಟಿ ಎಂದು ವಿಧಾನ ಪರಿಷತ್ ಸದಸ್ಯ ಅಡಗೂರು ಹೆಚ್.ವಿಶ್ವನಾಥ್ (H Vishwanath) ಟಾಂಗ್ ಕೊಟ್ಟಿದ್ದಾರೆ.

    ಸುದ್ದಿಗೋಷ್ಠಿಯಲ್ಲಿ ಮುಡಾ ಹಗರಣದ (MUDA Scam) ಕುರಿತು ಮಾತನಾಡಿದ ಅವರು, ಸುರೇಶ್ ಮಿನಿಸ್ಟರ್ ಫೈಲ್ ಎಲ್ಲವನ್ನೂ ಹೆಲಿಕಾಪ್ಟರ್‌ನಲ್ಲಿ ಬಂದು ತಗೆದುಕೊಂಡು ಹೋಗಿದ್ದಾರೆ. ಮುಡಾಗೆ ಇಷ್ಟೊಂದು ಸೆಕ್ಯುರಿಟಿ ಯಾಕೆ? ಮುಡಾಗೆ ಪ್ರತಿ ತಿಂಗಳು 5 ಕೋಟಿ ಸಂಬಳ ಖರ್ಚು ವೆಚ್ಚಕ್ಕೆ ಬೇಕು. ಎರಡು ತಿಂಗಳಿಂದ 10 ಕೋಟಿ ಖರ್ಚಾಗಿದೆ. ಕೆಲಸ ಏನೂ ಮುಡಾದಿಂದ ನಡೆಯುತ್ತಿಲ್ಲ. ಮುಡಾ ಹಗರಣಕ್ಕಾಗಿ ಒನ್ ಮ್ಯಾನ್ ಕಮಿಷನ್ ಮಾಡಿದ್ದೀರಿ. ಒನ್ ಮ್ಯಾನ್ ಕಮಿಷನ್ ಕುಮಾರಕೃಪದಿಂದ ಆಪರೇಟ್ ಆಗ್ತಾ ಇದೆ. ಒನ್ ಮ್ಯಾನ್ ಕಮಿಷನ್‌ಗಾಗಿಯೇ ಮೇಜು, ಕುರ್ಚಿ ಅಂತಾ 1.5 ಕೋಟಿ ಖರ್ಚು ಆಗಿದೆ. ರೀಡು ವಿಚಾರದಲ್ಲಿ ಕೆಂಪಣ್ಣ ಆಯೋಗದ ವರದಿ ಬಿಡುಗಡೆ ಮಾಡಿ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ:  Tamil Nadu | ಪ್ರೀತಿಗೆ ಪೋಷಕರ ವಿರೋಧ – ನೇಣಿಗೆ ಶರಣಾದ ಪ್ರೇಮಿಗಳು

    3,667 ಎಕರೆ ಗಣಿ ಭೂಮಿಯನ್ನ ಎಕರೆಗೆ 1.15 ಲಕ್ಷ ಮಾರಾಟ ಮಾಡಿದ್ದಾರೆ. ಆ ಭೂಮಿಯಲ್ಲಿ ಬೆಲೆ ಬಾಳುವ ಐರನ್, ಮಿನರಲ್ಸ್, ಕಂಟೆಂಟ್ ಇದೆ. ಬೆಸ್ಟ್ ಓರಲ್ಸ್ ಸಿಗುವ 62% ಈಲ್ಡ್ ಬರುವ ಭೂಮಿಯನ್ನ ಜಿಂದಾಲ್ (Naveen Jindal) ಅವರಿಗೆ ಏಕಪಕ್ಷೀಯವಾಗಿ ಮಾರಾಟ ಮಾಡಿದ್ದಾರೆ. ಈ ಭೂಮಿಗೆ ಯಾವುದೇ ಬೆಲೆ ಕಟ್ಟೋದಕ್ಕೆ ಆಗುವುದಿಲ್ಲ. 2017ರಲ್ಲಿ ಲಾ ಡಿಪಾರ್ಟ್ಮೆಂಟ್ ಭೂಮಿಯ ಬೆಲೆ, ಒಳಗೆ ಇರುವ ಅದಿರು ಪ್ರಮಾಣ ನೋಡಿ ಮಾರಾಟ ಮಾಡಬೇಕು ಎಂದು ವರದಿ ನೀಡಿತ್ತು. ಅನುಕೂಲಕ್ಕೆ ತಕ್ಕಂತೆ ಸರ್ಕಾರದ ಭೂಮಿಯನ್ನು ಪರಭಾರೆ ಮಾಡಿದ್ದಾರೆ. ಇದೊಂದು ಜನವಿರೋಧಿ ನೀತಿ ಈ ಬಗ್ಗೆ ಸಿಎಂ ಮಾತನಾಡಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: Exclusive Video | ಸೆಂಟ್ರಲ್‌ ಜೈಲಲ್ಲಿ ಕೊಲೆ ಆರೋಪಿ ದರ್ಶನ್‌ ಬಿಂದಾಸ್‌?

    ಇದರಿಂದ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ನಷ್ಟ ಆಗುತ್ತದೆ. ಒಟ್ಟಾರೆ ಭೂಮಿಯ ಬೆಲೆ 52 ಕೋಟಿಗಳಿಗೆ ಮಾರಾಟ ಮಾಡಿದ್ದಾರೆ. ಇವರು ತಮ್ಮ 14 ಸೈಟ್‌ಗೆ 62 ಕೋಟಿ ಕೇಳುತ್ತಾರೆ. ಈ ಭೂಮಿಯನ್ನು ಒಟ್ಟಾರೆ 52 ಕೋಟಿಗೆ ಮಾರಾಟ ಮಾಡಿದ್ದಾರೆ. ಇದ್ಯಾವ ನ್ಯಾಯ ಎಂದು ಪ್ರಶ್ನಿಸಿದರು. ಇದು ಹಲವಾರು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ. ಇದನ್ನ ಕ್ಯಾಬಿನೆಟ್ ಜಾಯಿಂಟ್ ಸೆಲೆಕ್ಟ್ ಕಮಿಟಿಗೆ ಮುಂದಿಡಲು ನಾನು ಹೇಳಿದ್ದೇನೆ. ಈ ವಿಚಾರದಲ್ಲಿ ತರಾತುರಿ ಬೇಡ. ಸರ್ಕಾರದ, ಜನರ ಆಸ್ತಿ, ಇದನ್ನು ಜಾಯಿಂಟ್ ಸೆಲೆಕ್ಟ್ ಕಮಿಟಿ ಮುಂದಿಟ್ಟು ತೀರ್ಮಾನ ತೆಗೆದುಕೊಳ್ಳಬೇಕು ಎಂದು ಹೇಳಿಕೆ ನೀಡಿದರು. ಇದನ್ನೂ ಓದಿ: ದೋಸ್ತಿಗಳಿಂದ ರಾಜಭವನ ದುರುಪಯೋಗ ಹೈಕಮಾಂಡ್‍ಗೆ ಅರ್ಥವಾಗಿದೆ: ಹೆಚ್.ಸಿ.ಮಹಾದೇವಪ್ಪ

  • ಕಾಶಿ ಉಳಿಸಿದ್ದ ಅಹಲ್ಯ ಬಾಯಿಯನ್ನು ಮರೆತಿದ್ದು ಸರಿಯೇ?: ಎಚ್. ವಿಶ್ವನಾಥ್

    ಕಾಶಿ ಉಳಿಸಿದ್ದ ಅಹಲ್ಯ ಬಾಯಿಯನ್ನು ಮರೆತಿದ್ದು ಸರಿಯೇ?: ಎಚ್. ವಿಶ್ವನಾಥ್

    ಮೈಸೂರು: ವಾರಣಾಸಿಯಲ್ಲಿ ವಿಶ್ವನಾಥ ಕಾರಿಡಾರ್ ನಿರ್ಮಾಣ ಸ್ವಾಗತಾರ್ಹ. ಆದರೆ ಕಾರ್ಯಕ್ರಮದಲ್ಲಿ ಒಂದು ಸಣ್ಣ ಲೋಪವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಹೇಳಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಾರಣಾಸಿಯನ್ನು ಬೇರೆ ಬೇರೆ ಧರ್ಮದವರು ನಾಶ ಮಾಡಿದ್ದರು. 16ನೇ ಶತಮಾನದಲ್ಲಿ ಉಳಿಸಿದ್ದು ಅಹಲ್ಯಬಾಯಿ. ಅವರೇ ಕಾಶಿ ವಿಶ್ವನಾಥ ದೇವಸ್ಥಾನ ಉಳಿಸಿದ್ದರು. ಯುದ್ಧದ ಬದಲು ಯುಕ್ತಿಯಿಂದ ಉಳಿಸಿದ್ದರು. ಶಿವನ ಹೆಸರಲ್ಲೇ ಅವರು ಆಡಳಿತ ಮಾಡಿದ್ದರು. ಇಂತಹ ಯುಕ್ತಿ ಪ್ರದರ್ಶಿಸಿದ ಅಹಲ್ಯಬಾಯಿ ಅವರನ್ನು ಎಲ್ಲರೂ ಮರೆತಿದ್ದಾರೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಪ್ರಧಾನಿ ನರೇಂದ್ರ ಮೋದಿ ಸಹ ಮರೆತಿದ್ದಾರೆ ಎಂದು ಆರೋಪಿಸಿದರು.

    ಸ್ತ್ರೀಯನ್ನು ಮರೆತರೆ ಚರಿತ್ರೆಯನ್ನು ಮರೆತಂತೆ. ಇದು ಬಹಳ ವೇದನೆಯ ವಿಚಾರವಾಗಿದೆ. ವಾರಣಾಸಿಯಲ್ಲಿ ಅಹಲ್ಯಬಾಯಿ ಪ್ರತಿಮೆ ಮಾಡಿಸಿ ಹಾಗೂ ಅಲ್ಲಿನ ವಿಮಾನ ನಿಲ್ದಾಣಕ್ಕೆ ಅವರ ಹೆಸರು ಇಡಿ ಎಂದು ಪ್ರಧಾನಿ ಮೋದಿ ಅವರಲ್ಲಿ ವಿನಂತಿಸಿದರು. ಇದನ್ನೂ ಓದಿ: ಪರಿಷತ್ ಚುನಾವಣೆಯಲ್ಲಿ ಬಿಜೆಪಿಗೆ 15 ಸೀಟ್ ಗೆಲುವು- ಬಿಎಸ್‌ವೈ ವಿಶ್ವಾಸ

    ಉತ್ತರ ಪ್ರದೇಶದಲ್ಲಿ ಒಂದೂವರೆ ಕೋಟಿ ಜನ ಕುರುಬರು ಇದ್ದಾರೆ. ಕುರುಬ ಜನಾಂಗಕ್ಕೆ ಸೇರಿದ ಅಹಲ್ಯಬಾಯಿ ಅವರನ್ನು ಮರೆತಿರುವುದು ಪ್ರಮಾದವಾಗಿದೆ. ನಮ್ಮದು ಸಹ ದೊಡ್ಡ ಮಠವಾಗಿದೆ. ಹಾವೇರಿ, ಕಲಬುರಗಿ, ರಾಯಚೂರು ಸೇರಿ ನಾಲ್ಕು ಕಡೆ ಇದೆ. ನಮ್ಮ ಕಾಗಿನೆಲೆ ಪಕ್ಕಾ ಹಿಂದೂಗಳ ಮಠವಾಗಿದೆ. ನಮ್ಮ ಜನಾಂಗ ಹಿಂದೂ ಧರ್ಮದ ಪ್ರತಿಪಾದಕರಾಗಿದ್ದವರು. ಹಾಗಾದರೆ ಕುರುಬರು ಬೇಡವಾ ನಿಮಗೆ ಎಂದು ಪ್ರಶ್ನಿಸಿದರು.

  • ವಿಶ್ವನಾಥ್ ಅರೆ ಹುಚ್ಚ, ತಿಕ್ಕಲು ಬುದ್ಧಿ – ಎಸ್.ಆರ್.ವಿಶ್ವನಾಥ್

    ವಿಶ್ವನಾಥ್ ಅರೆ ಹುಚ್ಚ, ತಿಕ್ಕಲು ಬುದ್ಧಿ – ಎಸ್.ಆರ್.ವಿಶ್ವನಾಥ್

    ಬೆಂಗಳೂರು: ಎಚ್ ವಿಶ್ವನಾಥ್ ಅವರಿಗೆ ಅರೆ ಹುಚ್ಚು ಹಿಡಿದಿದೆ. ಅವರು ರೋಡಲ್ಲಿ ಓಡಾಡುವ ಮಾತನಾಡುವ ಅರೆ ಹುಚ್ಚ ಆಗಿದ್ದಾರೆ ಎಂದು ಶಾಸಕ ಎಸ್.ಆರ್.ವಿಶ್ವನಾಥ್ ವಾಗ್ದಾಳಿ ನಡೆಸಿದ್ದಾರೆ.

    ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿ ಬಳಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಹೆಚ್.ವಿಶ್ವನಾಥ್ ಹೇಳಿಕೆ ಅಶಿಸ್ತನ್ನು ತೋರಿಸುತ್ತದೆ. ತಿಂದ ಮನೆಗೆ ದ್ರೋಹ ಬಗೆಯುವುದು ಅವರ ಹುಟ್ಟು ಗುಣ ಎಂದು ಕಿಡಿಕಾರಿದರು.

    ಸಾರಾ ಮಹೇಶ್ ಅವರನ್ನು ಒಮ್ಮೆ ಹೊಗಳುತ್ತಾರೆ ಮತ್ತೆ ವಿರೋಧ ಮಾಡುತ್ತಾರೆ. ಕೊರೊನಾಗಿಂತಲೂ ಕೆಲವರು ಭಯಂಕರವಾಗಿ ಮಾತನಾಡುತ್ತಿದ್ದಾರೆ. ಇದಕ್ಕೆ ಯಾವುದೇ ಮದ್ದಿಲ್ಲ. ಯಡಿಯೂರಪ್ಪನವರೇ ಮುಂದಿನ 2 ವರ್ಷ ಮುಂದುವರಿಯಬೇಕು. ಮುಂದಿನ ಚುನಾವಣಾ ನೇತೃತ್ವವನ್ನು ಅವರೇ ವಹಿಸಬೇಕು ಎಂದು ಅವರು ಒತ್ತಾಯ ಮಾಡಿದರು.  ಇದನ್ನೂ ಓದಿ : ಯಡಿಯೂರಪ್ಪಗೆ ವಯಸ್ಸಾಗಿದೆ, ಸ್ಪಿರಿಟ್ ಇಲ್ಲ: ಹೆಚ್. ವಿಶ್ವನಾಥ್

    ವಿಶ್ವನಾಥ್ ಅವರಿಗೆ ಇಷ್ಟೊಂದು ತಿಕ್ಕಲು ಬುದ್ಧಿ ಇದೆ ಎನ್ನುವುದು ಗೊತ್ತಿರಲಿಲ್ಲ. ಇದು ಅವರ ರಾಜಕೀಯ ಜೀವನದ ಕಟ್ಟ ಕಡೆಯ ಅವಕಾಶ. ಇನ್ನು ಮುಂದೆ ಅವರನ್ನು ಯಾರೂ ಸೇರಿಸುವುದಿಲ್ಲ. ವಿಶ್ವನಾಥ್ ಅವರನ್ನು ಕರೆದುಕೊಂಡು ತಪ್ಪು ಮಾಡಿದ್ದೇವೆ ಅನ್ನಿಸುತ್ತಿದೆ ಎಂದು ಹೇಳಿದರು.

    42 ವರ್ಷಗಳಿಂದ ಒಬ್ಬ ವಿಶ್ವನಾಥ್ ಬಿಜೆಪಿಯಲ್ಲಿ ಇದ್ದ. ಕೆಲ ರಾಜಕೀಯ ವಿಚಾರವಾಗಿ ಅವರನ್ನು ಕರೆದುಕೊಂಡು ಬಂದೆವು. ವಿಶ್ವನಾಥ್ ಅವರಿಗೆ ಇದು ಕಟ್ಟೆ ಕಡೆಯ ಅವಕಾಶ. ಮತ್ತೆ ಇನ್ಯಾರು ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಬಾರದು ಎಂದರು. ಇದನ್ನೂ ಓದಿ: ಸಿಎಂ ವಿರುದ್ಧ ಸಿಪಿವೈ, ಬೆಲ್ಲದ್, ಯತ್ನಾಳ್ ಚಾರ್ಜ್‍ಶೀಟ್ ಏನು?

  • ಸಿಎಂ ವಿರುದ್ಧ ಸಿಪಿವೈ, ಬೆಲ್ಲದ್, ಯತ್ನಾಳ್ ಚಾರ್ಜ್‍ಶೀಟ್ ಏನು?

    ಸಿಎಂ ವಿರುದ್ಧ ಸಿಪಿವೈ, ಬೆಲ್ಲದ್, ಯತ್ನಾಳ್ ಚಾರ್ಜ್‍ಶೀಟ್ ಏನು?

    ಬೆಂಗಳೂರು: ಸಿಎಂ ಬಿಎಸ್‍ವೈ ವಿರುದ್ಧ 4 ಶಾಸಕರು ತಿರುಗಿ ಬಿದ್ದಿದ್ದಾರೆ. ಈ ಶಾಸಕರು ಇಂದು ಉಸ್ತುವಾರಿ ಅರುಣ್ ಸಿಂಗ್‍ಗೆ ದೂರು ನೀಡುವ ಸಾಧ್ಯತೆಯಿದೆ.

    ರಾಮನಗರದ ಸಿ.ಪಿ.ಯೋಗೇಶ್ವರ್, ಧಾರವಾಡ ಪಶ್ಚಿಮ ಕ್ಷೇತ್ರದ ಅರವಿಂದ ಬೆಲ್ಲದ್, ಮೈಸೂರಿನ ವಿಶ್ವನಾಥ್, ವಿಜಯಪುರದ ಶಾಸನ ಬಸನಗೌಡ ಪಾಟೀಲ್ ಯತ್ನಾಳ್ ಸಿಎಂ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಲಿದ್ದಾರೆ.

    ಯೋಗೇಶ್ವರ್ ಚಾರ್ಜ್‍ಶೀಟ್ ಏನು?
    ಸರ್ಕಾರ ಅಧಿಕಾರಕ್ಕೆ ತರುವಲ್ಲಿ ನನ್ನ ಪಾತ್ರ ದೊಡ್ಡದಾಗಿದ್ದರೂ ಬಹಳ ಸತಾಯಿಸಿ ಎಂಎಲ್‍ಸಿ ಮತ್ತು ಸಚಿವ ಸ್ಥಾನ ನೀಡಿದ್ದಾರೆ. ಆದರೆ ಈವರೆಗೂ ರಾಮನಗರ ಜಿಲ್ಲಾ ಉಸ್ತುವಾರಿ ಕೊಟ್ಟಿಲ್ಲ. ರಾಮನಗರದಲ್ಲಿ ಡಿಕೆಶಿ, ಚನ್ನಪಟ್ಟಣದಲ್ಲಿ ಎಚ್ಡಿಕೆಗೆ ಬಿಎಸ್‍ವೈ ಹೊಂದಾಣಿಕೆಯಿದೆ. ಡಿಕೆಶಿ, ಎಚ್‍ಡಿಕೆ ಕೇಳುವ ಅಧಿಕಾರಿಗಳನ್ನು ಸಿಎಂ ವರ್ಗ ಮಾಡ್ತಾರೆ. ನಾನು ಹೆಸರಿಗೆ ಮಾತ್ರ ಮಿನಿಸ್ಟರ್. ಜಿಲ್ಲೆಯಲ್ಲಿ ಡಿಕೆಶಿ, ಎಚ್ಡಿಕೆಯದ್ದೇ ಹವಾ. ಡಿಕೆಶಿ, ಎಚ್‍ಡಿಕೆ ಜಿಲ್ಲೆಯಲ್ಲಿ ಪಕ್ಷ ಸಂಘಟನೆಗೆ ದೊಡ್ಡ ಅಡ್ಡಿಯಾಗಿದ್ದಾರೆ. ಸರ್ಕಾರದಲ್ಲಿ ವಿಜಯೇಂದ್ರ ಹಸ್ತಕ್ಷೇಪ ಹೆಚ್ಚಾಗಿದ್ದು ಪ್ರತಿಯೊಂದಕ್ಕೂ ಯಡಿಯೂರಪ್ಪ ಬದಲು ವಿಜಯೇಂದ್ರ ಬಳಿ ಹೋಗುವ ಪರಿಸ್ಥಿತಿ ಇದೆ.

    ಯತ್ನಾಳ್ ಚಾರ್ಜ್‍ಶೀಟ್ ಏನು?
    ಬಿಎಸ್‍ವೈ ಸರ್ಕಾರದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದ್ದು ಸರ್ಕಾರ, ಸಚಿವರ ಇಲಾಖೆಗಳಲ್ಲಿ ವಿಜಯೇಂದ್ರ ಹಸ್ತಕ್ಷೇಪ ಜಾಸ್ತಿಯಿದೆ. ಯಡಿಯೂರಪ್ಪ ಏಕಪಕ್ಷೀಯ ನಿರ್ಧಾರಗಳು ಪಕ್ಷದ ಇಮೇಜ್‍ಗೆ ಧಕ್ಕೆಯಾಗಿದ್ದು, ಬಿಎಸ್‍ವೈಗೆ ಆರೋಗ್ಯ, ವಯಸ್ಸು ಸಪೋರ್ಟ್ ಮಾಡ್ತಿಲ್ಲ. ಯಡಿಯೂರಪ್ಪ ಬದಲಿಗೆ ಸಿಎಂ ಸ್ಥಾನ ಬೇರೆಯವರಿಗೆ ಕೊಡಿ.

    ಅರವಿಂದ ಬೆಲ್ಲದ್ ಚಾರ್ಜ್‍ಶೀಟ್ ಏನು?
    ಯಡಿಯೂರಪ್ಪ ನಾಯಕತ್ವ ಮೊದಲಿನಂತಿಲ್ಲ. ಎಲ್ಲಕ್ಕೂ ಮಗನ ಮೇಲೆ ಅವಲಂಬಿತರಾಗಿದ್ದಾರೆ. ಪಕ್ಷ ನಿಷ್ಟರನ್ನು ದೂರ ಇಟ್ಟು, ವಲಸಿಗರಿಗೆ ಹೆಚ್ಚು ಆದ್ಯತೆ ನೀಡಲಾಗುತ್ತಿದೆ. ಕೋವಿಡ್‍ನಿಂದಾಗಿ ಸಿಎಂ ಜನಪ್ರಿಯತೆ ಕಮ್ಮಿಯಾಗಿದ್ದು ಬಿಎಸ್‍ವೈ ನೇತೃತ್ವದಲ್ಲಿ ಚುನಾವಣೆ ಎದುರಿಸಿದರೆ ಅಧಿಕಾರ ಕೈತಪ್ಪುತ್ತೆ, ಸ್ಥಾನಗಳೂ ಕಡಿಮೆ ಬರಬಹುದು. ಪಕ್ಷದ ಹಿತಕ್ಕಾಗಿ ಈಗಲೇ ಪರ್ಯಾಯ ಪರಿಹಾರ ಕಂಡುಕೊಳ್ಳಬೇಕು. ನಾನು ಸಿಎಂ ಸ್ಥಾನಕ್ಕೆ ಯೋಗ್ಯನಾಗಿದ್ದು ನನಗೂ ಸಮುದಾಯದ ಬಲ, ಶಾಸಕರ ಬೆಂಬಲವೂ ಇದೆ.

    ವಿಶ್ವನಾಥ್ ಚಾರ್ಜ್‍ಶೀಟ್ ಏನು?
    ಸಿಎಂ ಯಡಿಯೂರಪ್ಪನವರಿಗೆ ವಯಸ್ಸಾಗಿದ್ದು ಬದಲಾವಣೆ ಮಾಡಬೇಕು. ಅವರ ಕೆಲಸಗಳಿಗೆ ವಯಸ್ಸು ಅಡ್ಡಿ ಆಗುತ್ತಿದೆ. ಹೀಗಾಗಿ ಬದಲಾವಣೆ ಮಾಡಿ ಬೇರೆಯವರಿಗೆ ಸಿಎಂ ಸ್ಥಾನ ನೀಡಬೇಕು. ಇದನ್ನೂ ಓದಿ: ಬಿಜೆಪಿಯಲ್ಲಿ ಬಿಕ್ಕಟ್ಟು – ಬಿಎಸ್‍ವೈ ಪರ, ವಿರೋಧ ಯಾರು? ತಟಸ್ಥ ಬಣದಲ್ಲಿ ಯಾರಿದ್ದಾರೆ?

  • ವಿಶ್ವನಾಥ್‌ಗೆ ಹೈಕೋರ್ಟ್‌ ಶಾಕ್‌ – ಎಂಟಿಬಿ, ಶಂಕರ್‌ಗೆ ಬಿಗ್‌ ರಿಲೀಫ್‌

    ವಿಶ್ವನಾಥ್‌ಗೆ ಹೈಕೋರ್ಟ್‌ ಶಾಕ್‌ – ಎಂಟಿಬಿ, ಶಂಕರ್‌ಗೆ ಬಿಗ್‌ ರಿಲೀಫ್‌

    ಬೆಂಗಳೂರು: ಬಿಎಸ್ ಯಡಿಯೂರಪ್ಪ ಸಂಪುಟದಲ್ಲಿ ಮಂತ್ರಿಯಾಗಲು ತುದಿಗಾಲಿನಲ್ಲಿ ನಿಂತಿದ್ದ ಎಚ್.ವಿಶ್ವನಾಥ್ ಅವರಿಗೆ ಹೈಕೋರ್ಟ್ ಬಿಗ್‌ ಶಾಕ್ ನೀಡಿದೆ.

    ವಿಧಾನ ಪರಿಷತ್‍ನ ಮೂವರು ಶಾಸಕರಿಗೆ ಸಚಿವ ಸ್ಥಾನ ನೀಡದಂತೆ ಕೋರಿ ವಕೀಲ ಎ.ಎಸ್. ಹರೀಶ್ ಸಾರ್ವಜನಿಕಾ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ಪೂರ್ಣಗೊಳಿಸಿದ್ದ ಹೈಕೋರ್ಟ್ ವಿಭಾಗೀಯ ಪೀಠ ಇಂದು ಮಧ್ಯಂತರ ಆದೇಶ ಪ್ರಕಟಿಸಿತು.

    ಸಂವಿಧಾನದ 164 (1ಬಿ), 361 ಬಿ ಅಡಿ ಹೆಚ್.ವಿಶ್ವನಾಥ್ ಅವರು ಶಾಸಕ ಸ್ಥಾನದಿಂದ ಅನರ್ಹರಾಗಿದ್ದಾರೆ. ಹೀಗಾಗಿ ಹಾಲಿ ಪರಿಷತ್‌ ಅವಧಿ ಮುಗಿಯುವವರೆಗೆ ಅನರ್ಹರಾಗಿರುತ್ತಾರೆ ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕಾ, ಎಸ್.ವಿಶ್ವಜಿತ್ ಶೆಟ್ಟಿ ನೇತೃತ್ವದ ವಿಭಾಗೀಯ ಪೀಠ ಮಧ್ಯಂತರ ಆದೇಶ ನೀಡಿದೆ. ಈ ಆದೇಶದ ಅನ್ವಯ 2021ರವರೆಗೆ ವಿಶ್ವನಾಥ್‌ ಮಂತ್ರಿಯಾಗಲು ಸಾಧ್ಯವಿಲ್ಲ

    ತನ್ನ ಆದೇಶದಲ್ಲಿ ವಿಶ್ವನಾಥ್ ಅವರಿಗೆ ಮಂತ್ರಿಯಾಗಲು ಸಾಧ್ಯವಿಲ್ಲ ಎಂದಿರುವ ಕೋರ್ಟ್, ಎಂಟಿಬಿ ನಾಗರಾಜ್, ಆರ್.ಶಂಕರ್ ಮಂತ್ರಿಯಾಗಬಹುದು ಎಂದು ಹೇಳಿದೆ. ಈ ಆದೇಶಕ್ಕೆ ಆಕ್ಷೇಪಣೆ ಸಲ್ಲಿಸಲು ಸರ್ಕಾರ, ಸಿಎಂಗೆ ಹೈಕೋರ್ಟ್ ಸೂಚನೆ ನೀಡಿದೆ.

    ಅನರ್ಹರಾದವರು ಮರು ಆಯ್ಕೆಯಾಗಲು ಮಾತ್ರ ಅವಕಾಶವಿದೆ. ಆದರೆ ಎ.ಹೆಚ್‍ವಿಶ್ವನಾಥ್ ನಾಮನಿರ್ದೇಶಿತ ಶಾಸಕರಾಗಿದ್ದಾರೆ. ಎಂ.ಟಿ.ಬಿ.ನಾಗರಾಜ್, ಆರ್.ಶಂಕರ್ ವಿಧಾನಸಭೆಯಿಂದ ಪರಿಷತ್‍ಗೆ ಆಯ್ಕೆಯಾಗಿದ್ದಾರೆ. ಹಿಂಬಾಗಿಲಿನಿಂದ ಪರಿಷತ್‍ಗೆ ಆಯ್ಕೆ ಆಗುವುದನ್ನು ನಿರ್ಬಂಧಿಸಿ ಎಂದು ಅರ್ಜಿದಾರರು ಮನವಿ ಮಾಡಿದ್ದರು. ಅರ್ಜಿದಾರರ ಪರವಾಗಿ ಖ್ಯಾತ ವಕೀಲ ಪ್ರಶಾಂತ್ ಭೂಷಣ್ ವಾದ ಮಾಡಿದ್ದರು.

    ಎಚ್‌ ವಿಶ್ವನಾಥ್‌, ಎಂ.ಟಿ.ಬಿ. ನಾಗರಾಜ್‌, ಆರ್‌ ಶಂಕರ್‌ ಚುನಾವಣೆಯಲ್ಲಿ ಜನರಿಂದ ನೇರವಾಗಿ ಆಯ್ಕೆಯಾಗಿಲ್ಲ. ಸುಪ್ರೀಂ ಕೋರ್ಟ್‌ನ ಆದೇಶದಂತೆ ಈ ಮೂವರೂ ಜನರಿಂದ ಆಯ್ಕೆಯಾಗದೇ ಚುನಾಯಿತ ಶಾಸಕರಿಂದ ಆಯ್ಕೆಯಾಗಿ ಹಿಂಬಾಗಿಲ ಮೂಲಕ ಅಧಿಕಾರ ಹಿಡಿಯಲು ಮುಂದಾಗಿದ್ದಾರೆ. ಹಾಗಾಗಿ, ಅವರನ್ನು ಸಚಿವರನ್ನಾಗಿ ನೇಮಿಸಬಾರದು ಎಂದು ಪ್ರಶಾಂತ್‌ ಭೂಷಣ್‌ ವಾದಿಸಿದ್ದರು.

    ಯಾಕಿಲ್ಲ ಮಂತ್ರಿ ಸ್ಥಾನ?
    ವಿಶ್ವನಾಥ್ ಅವರನ್ನು ಸಾಹಿತ್ಯ ಕ್ಷೇತ್ರದಿಂದ ನಾಮನಿರ್ದೇಶನ ಮಾಡಲಾಗಿದ್ದರೆ, ವಿಧಾನಸಭೆಯಿಂದ ವಿಧಾನಪರಿಷತ್‍ಗೆ ಎಂಟಿಬಿ, ಶಂಕರ್ ಆಯ್ಕೆ ಆಗಿದ್ದರು. ವಿಶ್ವನಾಥ್ ಯಾವುದೇ ಚುನಾವಣೆ ನಡೆಯದೇ ಅವಿರೋಧವಾಗಿ ಪರಿಷತ್ ಮೆಟ್ಟಿಲು ಹತ್ತಿದ ಕಾರಣ ಮಂತ್ರಿ ಸ್ಥಾನ ಮಾಡಲು ಬರುವುದಿಲ್ಲ ಎಂದು ಕೋರ್ಟ್ ಹೇಳಿದೆ.

    ಏನಿದು ಪ್ರಕರಣ?
    ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಹಾಲಿ ವಿಧಾನಸಭೆ ಮುಗಿಯುವರೆಗೆ 17 ಶಾಸಕರನ್ನು ಅನರ್ಹಗೊಳಿಸಿ ಆದೇಶ ಪ್ರಕಟಿಸಿದ್ದರು. ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ ಅನರ್ಹತೆ ಆದೇಶವನ್ನು ಎತ್ತಿ ಹಿಡಿದಿತ್ತು. ಆದರೆ ವಿಧಾನಸಭೆ ಮುಗಿಯುವರೆಗೂ ಅನರ್ಹತೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿ ಚುನಾವಣೆಗೆ ಸ್ಪರ್ಧಿಸಿ ಶಾಸಕರಾಗಬಹುದು ಎಂದು ಮಹತ್ವದ ಆದೇಶವನ್ನು ಪ್ರಕಟಿಸಿತ್ತು.

    ಈ ಕಾರಣಕ್ಕೆ ವಿಶ್ವನಾಥ್‌ ಮತ್ತು ಎಂಟಿಬಿ ನಾಗರಾಜ್‌ ಹುಣಸೂರು ಮತ್ತು ಹೊಸಕೋಟೆ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದರು. ಸೋತ ಹಿನ್ನೆಲೆಯಲ್ಲಿಇಬ್ಬರನ್ನು ಬಿಜೆಪಿ ಪರಿಷತ್‌ಗೆ ಆಯ್ಕೆ ಮಾಡಿ ಮಂತ್ರಿ ಮಾಡಲು ಮುಂದಾಗಿತ್ತು. ಈ ನಡುವೆ ಹೈಕೋರ್ಟ್‌ನಲ್ಲಿ ಅನರ್ಹರಾದವರಿಗೆ ಪರಿಷತ್‌ ಮೂಲಕ ಮಂತ್ರಿಯಾಗಲು ನಿರ್ಬಂಧಿಸಿ ಕೋರಿ ಪಿಐಎಲ್‌ ಸಲ್ಲಿಕೆಯಾಗಿತ್ತು. ಈಗ ಹೈಕೋರ್ಟ್‌ ನೀಡಿದ ಮಧ್ಯಂತರ ಆದೇಶದಿಂದ ವಿಶ್ವನಾಥ್‌ಗೆ ಮಂತ್ರಿ ಸ್ಥಾನ ಕೈ ತಪ್ಪಿದರೆ ಎಂಟಿಬಿಗೆ ಮಂತ್ರಿಯಾಗುವ ಅವಕಾಶ ಸಿಕ್ಕಿದೆ.

  • ಸಿಎಂ ಭೇಟಿ ಮಾಡಿದ ವಿಶ್ವನಾಥ್ – ಸುಪ್ರೀಂಕೋರ್ಟ್ ಆದೇಶದ ಪರಾಮರ್ಶೆಗೆ ಮನವಿ

    ಸಿಎಂ ಭೇಟಿ ಮಾಡಿದ ವಿಶ್ವನಾಥ್ – ಸುಪ್ರೀಂಕೋರ್ಟ್ ಆದೇಶದ ಪರಾಮರ್ಶೆಗೆ ಮನವಿ

    ಬೆಂಗಳೂರು: ಉಪಚುನಾವಣೆಯಲ್ಲಿ ಸೋತವರಿಗೆ ಸಚಿವ ಸ್ಥಾನ ಕೊಡುವುದು ಬೇಡ ಎಂಬ ನಿರ್ಧಾರ ಈಗಾಗಲೇ ಆಗಿದೆ. ನಿನ್ನೆ ಬೆಂಗಳೂರಿನಲ್ಲಿ ಸಿಎಂ ಯಡಿಯೂರಪ್ಪ ಸಹ ಇದನ್ನು ಅಧಿಕೃತವಾಗಿ ಹೇಳಿದ್ದಾರೆ. ಸಿಎಂ ಹೇಳಿಕೆ ಬೆನ್ನಲ್ಲೇ ಎಚ್ ವಿಶ್ವನಾಥ್ ಮತ್ತು ಎಂಟಿಬಿ ನಾಗಾಜ್ ತೀವ್ರವಾಗಿ ಅಸಮಧಾನ ವ್ಯಕ್ತಪಡಿಸಿದ್ದರು. ನಿನ್ನೆ ಸಂಜೆಯೇ ಎಂಟಿಬಿ ನಾಗರಾಜ್ ಸಿಎಂ ಭೇಟಿ ಮಾಡಿ ಚರ್ಚಿಸಿ ಹೋಗಿದ್ದರು. ಈ ಬೆನ್ನಲ್ಲೇ ಇವತ್ತು ಎಚ್ ವಿಶ್ವನಾಥ್ ಸಹ ಮೈಸೂರಿನಿಂದ ಆಗಮಿಸಿ ಸಿಎಂ ಯಡಿಯೂರಪ್ಪ ಭೇಟಿ ಮಾಡಿ ಮಾತುಕತೆ ನಡೆಸಿರುವುದು ಸಾಕಷ್ಟು ಕುತೂಹಲ ಕೆರಳಿಸಿದೆ.

    ಇವತ್ತು ಬೆಳಗ್ಗೆ ಧವಳಗಿರಿ ನಿವಾಸಕ್ಕೆ ಆಗಮಿಸಿದ ಎಚ್ ವಿಶ್ವನಾಥ್ ಸುಮಾರು ಅರ್ಧ ಗಂಟೆ ಕಾಲ ಸಿಎಂ ಜೊತೆ ಚರ್ಚೆ ನಡೆಸಿದರು. ಸುಪ್ರೀಂಕೋರ್ಟ್ ನೀಡಿದ ಆದೇಶ ಕುರಿತು ಸಿಎಂ ಬಿಎಸ್‍ವೈ ಜೊತೆ ವಿಶ್ವನಾಥ್ ಚರ್ಚೆ ನಡೆಸಿದರು ಎನ್ನಲಾಗಿದೆ. ಸುಪ್ರೀಂಕೋರ್ಟ್ ಆದೇಶದ ಬಗ್ಗೆ ತಪ್ಪಾಗಿ ಅರ್ಥೈಸಲಾಗುತ್ತಿದೆ. ಸೋತವರಿಗೆ ಸಚಿವ ಸ್ಥಾನ ಕೊಡಬಾರದು ಎಂಬ ಆದೇಶ ಆಗಿಲ್ಲ ಎಂದು ವಿಶ್ವನಾಥ್ ಸಮಜಾಯಿಷಿ ನೀಡಿದ್ದಾರೆ ಎಂದು ಹೇಳಲಾಗಿದೆ.

    ಕಾನೂನು ತಜ್ಞರ ಜೊತೆ ಮತ್ತೊಮ್ಮೆ ಸುಪ್ರೀಂಕೋರ್ಟ್ ಆದೇಶದ ಪರಾಮರ್ಶೆ ನಡೆಸಬೇಕೆಂದು ಇದೇವೇಳೆ ವಿಶ್ವನಾಥ್ ಸಿಎಂಗೆ ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಸಚಿವ ಸ್ಥಾನ ಕೈತಪ್ಪಿದ್ದರಿಂದ ಈಗಾಗಲೇ ಬೇಸರದಲ್ಲಿರುವ ವಿಶ್ವನಾಥ್ ಸಂಪುಟ ಸೇರ್ಪಡೆ ಸಂಬಂಧ ಹೆಚ್ಚು ಚರ್ಚೆ ನಡೆಸಿಲ್ಲ ಎನ್ನಲಾಗಿದೆ.

    ಸಿಎಂ ಭೇಟಿ ಬಳಿಕ ಮಾಧ್ಯಮಗಳ ಮುಂದೆ ಮಾತನಾಡಿದ ವಿಶ್ವನಾಥ್, ಮಂತ್ರಿ ಸ್ಥಾನ ನೀಡುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮುಂದೆ ನಾನು ಪ್ರಸ್ತಾಪ ಮಾಡಿಲ್ಲ. ಮುಂದೆಯೂ ಈ ಪ್ರಸ್ತಾಪ ಮಾಡುವುದಿಲ್ಲ. ಹುಣಸೂರು ನಗರಸಭಾ ಚುನಾವಣೆ ಇದೇ 9 ರಂದು ಇದೆ. ಅದರ ವಿಚಾರ ಸಂಬಂಧ ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಡೆಸಿದ್ದೇನೆ. ಜೊತೆಗೆ ಜಿಲ್ಲಾ ವಿಚಾರಕ್ಕೆ ಸಂಬಂಧಪಟ್ಟಂತೆ ಜಿಲ್ಲಾ ಮಂತ್ರಿ ಸೋಮಣ್ಣ ಸಮ್ಮುಖದಲ್ಲಿ ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಡೆಸಿದ್ದೇವೆ ಎಂದರು.

    ಸುಪ್ರೀಂ ಕೋರ್ಟ್ ತೀರ್ಪು, ಕಾನೂನು ತೊಡಕು ವಿಚಾರದ ಬಗ್ಗೆ ಈಗಾಗಲೇ ಸಿಎಂ ಹೇಳಿಕೆ ನೀಡಿದ್ದಾರೆ. ನಾನು ಕೂಡ ಅದರ ಬಗ್ಗೆ ಹೇಳಿಯಾಗಿದೆ. ಮತ್ತೆ ಆ ವಿಷಯದ ಪ್ರಸ್ತಾಪ ಅಗತ್ಯವಿಲ್ಲ. ಜೊತೆಗೆ ಈಗ ಮಂತ್ರಿಮಂಡಲ ವಿಸ್ತರಣೆ ಹಾಗೂ ನಾನು ಮಂತ್ರಿಯಾಗುವ ವಿಚಾರವನ್ನು ಈಗ ಪ್ರಸ್ತಾಪ ಮಾಡಿಲ್ಲ. ಏನು ಮಾಡಬೇಕು ಎಂದು ಅವರಿಗೆ ಗೊತ್ತು ಎಂದು ಇದೇ ವೇಳೆ ಪರೋಕ್ಷವಾಗಿ ವಿಶ್ವನಾಥ್ ಅಸಮಧಾನ ಹೊರಹಾಕಿದರು. ಮುಂದಿನ ದಿನಗಳಲ್ಲಿ ಸಚಿವ ಸಂಪುಟಕ್ಕೆ ಸೇರ್ಪಡೆಯಾಗ್ತೀರಾ ಅನ್ನೋ ಪ್ರಶ್ನೆಗೆ ಉತ್ತರಿಸದ ವಿಶ್ವನಾಥ್, ಅದನ್ನು ಸಿಎಂ ಹತ್ತಿರವೇ ಕೇಳಿ. ಅದನ್ನು ನಾನು ಹೇಗೆ ಹೇಳೋದು ಎಂದು ಹೇಳಿ ಹೋದರು.