Tag: h vishwanatah

  • ಮುರುಘಾ ಶ್ರೀ ಪೀಠ ತ್ಯಾಗ ಮಾಡಲಿ: ಎಚ್. ವಿಶ್ವನಾಥ್ ಆಗ್ರಹ

    ಮುರುಘಾ ಶ್ರೀ ಪೀಠ ತ್ಯಾಗ ಮಾಡಲಿ: ಎಚ್. ವಿಶ್ವನಾಥ್ ಆಗ್ರಹ

    ಮೈಸೂರು: ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವ ಆರೋಪ ಎದುರಿಸುತ್ತಿರುವ ಮುರುಘಾ ಶ್ರೀಗಳನ್ನು ಬಂಧಿಸಿ. ಮುರುಘಾ ಶ್ರೀಗಳು ಪೀಠ ತ್ಯಾಗ ಮಾಡಲಿ ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಆಗ್ರಹಿಸಿದರು.

    ಶ್ರೀಗಳ ಮೇಲಿನ ಪ್ರಕರಣ ಕುರಿತಂತೆ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಪೋಕ್ಸೋ ಕಾಯ್ದೆ ಮಾಡಿ ಮುರುಘಾ ಶ್ರೀಗಳ ಮೇಲೆ ಕೇಸ್ ಆಗಿರೋ ಕಾರಣ ಅವರನ್ನು ಬಂಧಿಸಬೇಕು. ಅವರು ಆರೋಪಿ ಅಲ್ಲ. ಅಪರಾಧಿ. ಮುರುಘಾ ಶ್ರೀಗಳು ತಮ್ಮ ಮೇಲಿನ ಕೇಸ್ ನಿಂದ ಮುಕ್ತವಾಗುವವರೆಗೂ ತಾತ್ಕಾಲಿಕವಾಗಿ ಪೀಠ ತ್ಯಾಗ ಮಾಡಲಿ. ಈ ಕೇಸ್ ನಲ್ಲಿ ತನಿಖೆ ಸರಿಯಾಗಿ ನಡೆಯುತ್ತಿಲ್ಲ. ಚಿತ್ರದುರ್ಗದ ಎಸ್‍ಪಿಯನ್ನು ಮೊದಲು ಅಮಾನತು ಮಾಡಿ ಎಂದು ಆಗ್ರಹಿಸಿದರು.

    ನೆಲದ ಕಾನೂನಿನ ಪ್ರಕಾರ ಬಲವಾದ ಕೇಸ್ ಶ್ರೀಗಳ ವಿರುದ್ಧ ದಾಖಲಾಗಿದೆ. ಇದರಲ್ಲಿ ಬೇರೆ ಯಾರೂ ತಲೆ ಹಾಕಬಾರದು. ಮಾಜಿ ಸಿಎಂ, ಗೃಹ ಸಚಿವರು ಯಾರು ಈ ಕೇಸ್ ಬಗ್ಗೆ ಏನೇನೋ ಹೇಳಬಾರದು. ಪೋಕ್ಸೋ ಕಾಯ್ದೆ ಅಡಿ ಕೇಸ್ ದಾಖಲಾದ ಕೂಡಲೇ ಆತ ಆರೋಪಿ ಆಗಲ್ಲ. ಅಪರಾಧಿ ಆಗುತ್ತಾನೆ. ಕೇಸ್ ದಾಖಲಾದ 24 ಗಂಟೆಯೊಳಗೆ ಅಪರಾಧಿ ಬಂಧನವಾಗಬೇಕಿತ್ತು. ಸಂಧಾನ – ಅನು ಸಂಧಾನದ ಪ್ರಶ್ನೆ ಇಲ್ಲಿ ಬರಲ್ಲ ಎಂದರು.

    ಜಾತಿ, ಧರ್ಮ ಯಾವುದು ಇಲ್ಲಿ ಮಧ್ಯ ಪ್ರವೇಶಿಸಬಾರದು. ಸ್ವಾಮೀಜಿ ಎಲ್ಲೋ ಹೋಗ್ತಿದ್ದರೆ ಅವರನ್ನು ಪೊಲೀಸರು ಗೌರವದಿಂದ ವಾಪಾಸ್ ಕರೆದುಕೊಂಡು ಬಂದಿದ್ದು ಸರಿನಾ? ನಾವು ಸ್ವಾಮೀಜಿ ಗಳ ಪರ ಇದ್ದೇವೆ ಎಂದು ಅವರ ಅಭಿಮಾನಿಗಳು ಮಠದಲ್ಲಿ ಘೋಷಣೆ ಕೂಗುತ್ತಾರೆ? ಹಾಗಾದರೆ ತಪ್ಪು ಮಾಡಿದವರ ಪರ ನೀವು ಇದ್ದೀರಾ? ಎಸ್‍ಪಿ ಏನ್ಮಾಡ್ತಿದ್ದಾರೆ? ಎಸ್‍ಪಿಯನ್ನು ಮೊದಲು ಅಮಾನತು ಮಾಡಿ ಎಂದು ಕಿಡಿಕಾರಿದರು. ಇದನ್ನೂ ಓದಿ: ಬಾಬರಿ ಮಸೀದಿ ಧ್ವಂಸ ಪ್ರಕರಣ; ನ್ಯಾಯಂಗ ನಿಂದನೆ ಪ್ರಕರಣ ಕೈಬಿಟ್ಟ ಸುಪ್ರೀಂ – BJP ನಾಯಕರಿಗೆ ಬಿಗ್ ರಿಲೀಫ್

    H VISHWANATH 1

    ಆ ಬಾಲಕಿಯರಿಗೆ ನ್ಯಾಯ ಸಿಗಬೇಕು. ಇದು ಅಪ್ರಾಪ್ತ ಬಾಲಕಿಯರು ವಿಚಾರ ಇದು. ಅವರು ಅಮಾಯಕ ಬಾಲಕಿಯರು. ಕರ್ನಾಟಕದಲ್ಲಿ ಬಹಳ ದೊಡ್ಡ ಗುರು ಪರಂಪರೆ ಇದೆ. ತಾತ್ಕಾಲಿಕವಾಗಿ ಮುರುಘಾ ಶ್ರೀಗಳು ಪೀಠ ತ್ಯಜಿಸಬೇಕು. ನಿಮ್ಮ ಮೇಲೆ ಬಂದ ಅಪವಾದ ಸುಳ್ಳಾದ ಮೇಲೆ ಮತ್ತೆ ಪೀಠ ಅಲಂಕರಿಸಿ. ಪೀಠ ತ್ಯಜಿಸಿ ಮುರುಘಾ ಮಠದ ಪೀಠದ ಗೌರವ ಉಳಿಸಿ. ಸಿಎಂ ಯಾವ ಮುಲಾಜಿಗೆ ಒಳಗಾಗ ಬಾರದು. ಸರಕಾರ ಈ ವಿಚಾರದಲ್ಲಿ ಲೋಪ ಮಾಡಿದ್ರೆ ಕ್ಷಮಿಸಲ್ಲ ನಿಮ್ಮನ್ನು ಕ್ಷಮಿಸಲ್ಲ ಎಂದರು.

    ವಿಪಕ್ಷ ನಾಯಕ ಸಿದ್ದರಾಮಯ್ಯ ಯಾಕೆ ಮಾತಾಡ್ತಿಲ್ಲ. ಈ ನಾಡಿನ ಮಕ್ಕಳ ಪ್ರಶ್ನೆ ಇದು. ಪ್ರಧಾನ ಮಂತ್ರಿಗಳಿಗೆ ನಾನು ಈ ಬಗ್ಗೆ ವಿಸ್ತೃತವಾಗಿ ಪತ್ರ ಬರೆಯುತ್ತಿದ್ದೇನೆ. ಪತ್ರ ಯಾರ ವಿರುದ್ಧವೂ ಅಲ್ಲ. ಬದಲಾಗಿ ನಡೆದಿರುವ ಎಲ್ಲಾ ವಿಚಾರಗಳನ್ನು ಪತ್ರದಲ್ಲಿ ವಿವರಿಸುತ್ತೇನೆ ಎಂದು ವಿಶ್ವನಾಥ್ ಎಚ್ಚರಿಕೆ ನೀಡಿದರು.

    Live Tv
    [brid partner=56869869 player=32851 video=960834 autoplay=true]

  • ಇಂತಹ ಸರ್ಕಾರ ತಂದಿದ್ದಕ್ಕೆ ವ್ಯಥೆಯಾಗ್ತಿದೆ – ಸರ್ಕಾರದ ವಿರುದ್ಧ ಹಳ್ಳಿಹಕ್ಕಿ ಅಸಮಾಧಾನ

    ಇಂತಹ ಸರ್ಕಾರ ತಂದಿದ್ದಕ್ಕೆ ವ್ಯಥೆಯಾಗ್ತಿದೆ – ಸರ್ಕಾರದ ವಿರುದ್ಧ ಹಳ್ಳಿಹಕ್ಕಿ ಅಸಮಾಧಾನ

    ಮೈಸೂರು: ರಾಜ್ಯದಲ್ಲಿ ಜೂನ್ 7ರ ನಂತರವೂ ಲಾಕ್‍ಡೌನ್ ಮುಂದುವರಿಕೆ ಬಗ್ಗೆ ಕೆಲ ಸಚಿವರು ನೀಡುತ್ತಿರುವ ಹೇಳಿಕೆಗೆ ವಿಧಾನ ಪರಿಷತ್ ಸದಸ್ಯ ಎಚ್ ವಿಶ್ವನಾಥ್ ಮೈಸೂರಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಲಾಕ್ ಡೌನ್ ಮುಂದುವರಿಸುವುದು ಸರಿಯಲ್ಲ. ಸರಿಯಾದ ಪ್ಯಾಕೇಜ್ ಸಹ ಕೊಟ್ಟಿಲ್ಲ. ಈಗ ಜನ ಕೊರೊನಾದಿಂದ ಸಾಯುತ್ತಿದ್ದಾರೆ ಆಮೇಲೆ ಸಮಸ್ಯೆಯಿಂದ ಜನ ಸಾಯುತ್ತಾರೆ. ನಾಯಕತ್ವದ ಬದಲಾವಣೆ ಹೈಕಮಾಂಡ್‍ಗೆ ಬಿಟ್ಟ ವಿಚಾರ. ಈ ವಿಚಾರದ ಗೊಂದಲ ಮುಂದುವರಿಸಲು ಲಾಕ್ ಡೌನ್ ಅನ್ನು ರಕ್ಷಣೆಯಾಗಿ ಪಡೆಯೋದು ಬೇಡ ಎಂದರು.

    ರಾಜ್ಯದಲ್ಲಿ ಹೆಚ್ಚು ಸಾವು ಸಂಭವಿಸುತ್ತಿದೆ. ಆರೋಗ್ಯ ಇಲಾಖೆಯನ್ನು 5 ಭಾಗ ಮಾಡಿದಿರಿ. ಇಬ್ಬರನ್ನು ಹಾಸಿಗೆ ಮಂತ್ರಿ ಮಾಡಿದ್ದೀರಿ. ಒಬ್ಬ ಆಕ್ಸಿಜನ್ ಮಂತ್ರಿ ಮಾಡಿದ್ರಿ ಅದು ಸರಿಯಾಗಿ ಸಿಗುತ್ತಿಲ್ಲ. ಹೆಣದ ಮೇಲೆ ಹಣ ಎತ್ತಬೇಡಿ ಎಂದು ಸರ್ಕಾರಕ್ಕೆ ಮತ್ತೆ ಚಾಟಿ ಬೀಸಿದರು.

    ತಜ್ಞರ ಮಾತನ್ನು ಸರ್ಕಾರ ಎಂದು ಕೇಳಿಲ್ಲ. ಸಚಿವ ಸಂಪುಟದಲ್ಲಿ ನಿಮ್ಮ ಇಷ್ಟ ಬಂದ ರೀತಿ ತೀರ್ಮಾನ ಮಾಡಿದ್ದೀರಿ. ಈಗ ತಜ್ಞರ ಸಲಹೆ ಎಂದು ಹೇಳಿ ಲಾಕ್ ಡೌನ್ ಮುಂದುವರಿಸಬೇಡಿ. ಮತ್ತೆ ಲಾಕ್‍ಡೌನ್ ಮಾಡುವುದಾದರೆ ಪ್ರತಿಯೊಬ್ಬರಿಗೂ 10 ಸಾವಿರ ಕೊಟ್ಟು ನಂತರ ಮಾಡಿ. ನಿಮ್ಮ ತೆವಲಿಗಾಗಿ ಅಧಿಕಾರ ಉಳಿಸಿಕೊಳ್ಳಲು ಜನರನ್ನು ಬಲಿ ಕೊಡಬೇಡಿ ಎಂದು ವಿಶ್ವನಾಥ್ ಹೇಳಿದ್ದಾರೆ.

    ಜಿಂದಾಲ್ ಕಂಪನಿಗೆ ಭೂಮಿ ನೀಡುವ ವಿಚಾರದ ಬಗ್ಗೆಯೂ ಸರ್ಕಾರಕ್ಕೆ ಚಾಟಿ ಬೀಸಿದ ವಿಶ್ವನಾಥ್, ನಾಳೆ ಸಚಿವ ಸಂಪುಟ ಸಭೆ ಇದೆ. ಭೂಮಿ ಪರಭಾರೆ ತೀರ್ಮಾನ ಧೃಡಿಕರಣಕ್ಕೆ ಬರುತ್ತದೆ. ಅದನ್ನು ಧೃಡಿಕರಣ ಮಾಡಬಾರದು. ಯಡಿಯೂರಪ್ಪ ಇದೇ ವಿಚಾರದಲ್ಲಿ ಅಹೋರಾತ್ರಿ ಹೋರಾಟ ಮಾಡಿದ್ದರು. ಈಗ ಇವರೇ ಭೂಮಿ ಕೊಡಲು ಹೊರಟ್ಟಿದ್ದಾರೆ. ಇಂತಹ ಸರ್ಕಾರ ತಂದಿದ್ದಕ್ಕೆ ವ್ಯಥೆಯಾಗುತ್ತಿದೆ ಎಂದರು.