Tag: H.S doreswamy

  • ದೊರೆಸ್ವಾಮಿ ಅವರಿಗೂ ವಿಜಯಪುರಕ್ಕೂ ಇತ್ತು ನಂಟು

    ದೊರೆಸ್ವಾಮಿ ಅವರಿಗೂ ವಿಜಯಪುರಕ್ಕೂ ಇತ್ತು ನಂಟು

    ವಿಜಯಪುರ: ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಅವರಿಗೂ ವಿಜಯಪುರಕ್ಕೂ ನಂಟು ಇತ್ತು. ಈ ಹಿಂದೆ 2010ರಲ್ಲಿ ಅಂದು ರಾಜ್ಯವಷ್ಟೇ ಅಲ್ಲ ದೇಶಾದ್ಯಂತ ಹೋರಾಟದ ಮೂಲಕ ಸದ್ದು ಮಾಡಿದ್ದ ಭೀಮಾ ನದಿ ನೀರು ರೈತವರ್ಗ ಸಮಿತಿ ದಶಮಾನೋತ್ಸವ ಕಾರ್ಯಕ್ರಮಕ್ಕೆ ಹೆಚ್. ಎಸ್. ದೊರೆಸ್ವಾಮಿ ವಿಜಯಪುರ ಜಿಲ್ಲೆಗೆ ಆಗಮಿಸಿದ್ದರು.

    ಮಹಾರಾಷ್ಟ್ರ ಕರ್ನಾಟಕದ ಪಾಲಿನ ನೀರು ಬಿಡುಗಡೆ ಮಾಡುತ್ತಿಲ್ಲ ಎಂದು ಭೀಮಾ ನದಿ ನೀರು ರೈತವರ್ಗ ಸಮಿತಿ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು. 2000ರಲ್ಲಿ ರಚನೆಯಾಗಿದ್ದ ಈ ಸಮಿತಿ ತನ್ನ ಹೋರಾಟದ ಮೂಲಕ ಅಂದು ಬೇಸಿಗೆಯಲ್ಲಿ ಪ್ರತಿದಿನ 400 ಕ್ಯೂಸೆಕ್ ನೀರು ಬಿಡುಗಡೆ ಮಾಡುವಂತೆ ಮಹಾರಾಷ್ಟ್ರಕ್ಕೆ ಮಧ್ಯಂತರ ಆದೇಶ ನೀಡಿತ್ತು.

    ಈ ಸಮಿತಿಯ ದಶಮಾನೋತ್ಸವ ಕಾರ್ಯಕ್ರಮ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಮರಗೂರು ಗ್ರಾಮದ ಬಳಿ ಭೀಮಾ ಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ಹತ್ತಿರ ಜನವರಿ 8 ರಿಂದ 10ರ ವರೆಗೆ ಮೂರು ದಿನ ನಡೆದಿತ್ತು. ಸಮಿತಿ ಅಧ್ಯಕ್ಷ ಮತ್ತು ಭೀಮಾ ಹೋರಾಟಗಾರ ಈ ಕಾರ್ಯಕ್ರಮ ಆಯೋಜಿಸಿದ್ದರು.

    ಈ ಹೋರಾಟಕ್ಕೆ ಉದ್ಘಾಟಕರಾಗಿ ಆಗಮಿಸಿದ್ದ ದೊರೆಸ್ವಾಮಿ, ಕಾರ್ಯಕ್ರಮದ ಅಚ್ಚುಕಟ್ಟುತನದಿಂದ ಪ್ರಭಾವಿತರಾಗಿ ಮೂರೂ ದಿನ ಕಾರ್ಯಕ್ರಮ ಮುಗಿಯುವವರೆಗೆ ಅಲ್ಲಿಯೇ ಇದ್ದು ಹೋರಾಟಗಾರರನ್ನು ಹುರಿದುಂಬಿಸಿದ್ದರು.

  • ನನಗೆ 104 ವಯಸ್ಸು, ಹಾಸಿಗೆ ವೇಸ್ಟ್ ಮಾಡ್ಬೇಡಿ, ಯುವಕರಿಗೆ ನೀಡಿ ಅಂತಿದ್ರು- ದೊರೆಸ್ವಾಮಿ ಬಗ್ಗೆ ಡಾ.ಮಂಜುನಾಥ್ ಮಾತು

    ನನಗೆ 104 ವಯಸ್ಸು, ಹಾಸಿಗೆ ವೇಸ್ಟ್ ಮಾಡ್ಬೇಡಿ, ಯುವಕರಿಗೆ ನೀಡಿ ಅಂತಿದ್ರು- ದೊರೆಸ್ವಾಮಿ ಬಗ್ಗೆ ಡಾ.ಮಂಜುನಾಥ್ ಮಾತು

    ಬೆಂಗಳೂರು: ನನಗೆ 104 ವರ್ಷ ವಯಸ್ಸು ಸುಮ್ಮನೇ ಹಾಸಿಗೆ ವೇಸ್ಟ್ ಮಾಡಬೇಡಿ, ಬೇರೆ ಯುವಕರಿಗೆ ನೀಡಿ ಎಂದು ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಹೇಳಿದರು ಎಂದು ಜಯದೇವ ಆಸ್ಪತ್ರೆ ನಿರ್ದೇಶಕ ಡಾ.ಮಂಜುನಾಥ್ ನೆನಪಿಸಿಕೊಂಡರು.

    ಈ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನಿನ್ನೆ ಸಂಜೆ ಕರೆ ಮಾಡಿದಾಗ ಬೇರೆ ರೀತಿಯೇ ಮಾತನಾಡಿದರು. ಮಂಜುನಾಥ್ ಅವರೇ ನನಗೆ 104 ವರ್ಷ ಆಗಿದೆ. ಈ ಹಾಸಿಗೆಯನ್ನು ಬೇರೆ ಯುವಕರಿಗೆ ನೀಡಿ, ಚಿಕ್ಕ ವಯಸ್ಸಿನವರಿಗೆ ಈ ಬೆಡ್‍ನಲ್ಲಿ ಚಿಕಿತ್ಸೆ ನೀಡಿ, ನನ್ನನ್ನು ಯಾಕೆ ಇಲ್ಲಿ ಮಲಗಿಸಿ ಹಾಸಿಗೆ ವೇಸ್ಟ್ ಮಾಡುತ್ತಿದ್ದೀರಿ ಎಂದು ದೊರೆಸ್ವಾಮಿ ಅವರು ಹೇಳಿರುವ ಬಗ್ಗೆ ನೆನೆದರು.

    ಅಯ್ಯೋ ಆ ರೀತಿ ಇಲ್ಲ, ಜಯದೇವ ಆಸ್ಪತ್ರೆಯಲ್ಲಿ ಹಾಸಿಗೆ ಕೊರತೆ ಇಲ್ಲ, ಎಲ್ಲರಿಗೂ ಹಾಸಿಗೆ ಇದೆ ಎಂದು ಹೇಳಿದೆ. ಕೊರೊನಾದಿಂದ ಗುಣಮುಖರಾದ ಬಳಿಕ ಮೇ 12 ರಂದು ಡಿಸ್ಚಾರ್ಜ್ ಮಾಡಿದ್ದೆವು. ಎರಡ್ಮೂರು ದಿನ ಕಳೆದ ಬಳಿಕ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದರು. ಇಂದು ವಿಧಿವಶರಾದರು, ಈ ಬಾರಿ ಅವರಿಗೆ ಆತ್ಮಸ್ಥೈರ್ಯ ಕಡಿಮೆಯಾಗಿತ್ತು. ಇತ್ತೀಚೆಗೆ ಅವರ ಪತ್ನಿ ಸಹ ತೀರಿಕೊಂಡರು ಎಂದರು.

    ಹಾರ್ಟ್ ಫೇಲ್ಯೂರ್ ಇಂದಾನೆ ಅವರು ಸಾವನ್ನಪ್ಪಿದ್ದಾರೆ. ಕೊರೊನಾ ಸಹ ಸ್ವಲ್ಪ ಘಾಸಿ ಮಾಡಿತು. ಇನ್ನೂ ಆಶ್ಚರ್ಯಕರ ಸಂಗತಿ ಎಂದರೆ ಅವರಿಗೆ ಆಕ್ಸಿಜನ್ ಕೊಟ್ಟೇ ಇರಲಿಲ್ಲ. ಯಾವಾಗಲೂ 97-98 ಆಕ್ಸಿಜನ್ ಇರುತ್ತಿತ್ತು. ಆದರೆ ಇಂದು ಮಾತ್ರ ಕೊನೇ ಘಳಿಗೆಯಲ್ಲಿ ಆಕ್ಸಿಜನ್ ನೀಡಿದೆವು ಮತ್ತೆ ಎಂದೂ ಆಕ್ಸಿಜನ್ ನೀಡಿರಲಿಲ್ಲ ಎಂದು ಡಾ.ಮಂಜುನಾಥ್ ಅವರು ಹೇಳಿದರು.

    ಸುಮಾರು 10-12 ವರ್ಷದಿಂದ ಅವರಿಗೆ ಹೃದಯ ಸಂಬಂಧಿ ಸಮಸ್ಯೆ ಇತ್ತು. ಹೃದಯದಲ್ಲಿನ ಎಡ ಭಾಗದ ಕವಚದಲ್ಲಿ ಸೋರಿಕೆ ಇತ್ತು. ಅಲ್ಲದೆ ಲಂಗ್ ಡಿಸೀಸ್ ಕೂಡ ಇತ್ತು. ಹೀಗಾಗಿ ಕಳೆದ 10 ವರ್ಷಗಳಲ್ಲಿ 10-12 ಬಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಪ್ರತಿ ಬಾರಿಯೂ ನಾವು ಚಿಕಿತ್ಸೆ ಮಾಡಿ ಕಳುಹಿಸುತ್ತಿದ್ದೆವು. ಬಳಿಕ ಮನೆಗೆ ಹೋಗಿ ರೆಸ್ಟ್ ಮಾಡಿ ಎಂದರೆ ಪ್ರತಿಭಟನೆಗೆ ತೆರಳುತ್ತಿದ್ದರು. 11 ಗಂಟೆಗೆ ಡಿಸ್ಚಾರ್ಜ್ ಮಾಡಿದರೆ, ಬಳಿಕ ಟಿವಿಯಲ್ಲಿ ನೋಡಿದಾಗ ಅವರು ಪ್ರತಿಭಟನೆಯಲ್ಲಿ ಭಾಗವಹಿಸಿರುತ್ತಿದ್ದರು ಎಂದು ಹಳೆ ನೆನಪುಗಳನ್ನು ಮೆಲುಕು ಹಾಕಿದರು.

  • ನಾಗರಿಕ ಹಕ್ಕುಗಳನ್ನ ರಕ್ಷಿಸುವಲ್ಲಿ ರಾಜಕೀಯ ಪಕ್ಷಗಳು ವಿಫಲ: ಹೆಚ್.ಎಸ್ ದೊರೆಸ್ವಾಮಿ ಕಳವಳ

    ನಾಗರಿಕ ಹಕ್ಕುಗಳನ್ನ ರಕ್ಷಿಸುವಲ್ಲಿ ರಾಜಕೀಯ ಪಕ್ಷಗಳು ವಿಫಲ: ಹೆಚ್.ಎಸ್ ದೊರೆಸ್ವಾಮಿ ಕಳವಳ

    ಬೆಂಗಳೂರು: ನಾಗರಿಕ ಹಕ್ಕುಗಳನ್ನ ರಕ್ಷಿಸುವಲ್ಲಿ ರಾಜಕೀಯ ಪಕ್ಷಗಳು ವಿಫಲ ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹೆಚ್. ಎಸ್ ದೊರೆಸ್ವಾಮಿ ಕಳವಳ ಹೊರಹಾಕಿದ್ದಾರೆ.

    ನಗರದ ಫ್ರೀಡಂಪಾರ್ಕ್ ಬಳಿ ಮಾತನಾಡಿದ ಅವರು, ದೇಶದಲ್ಲಿ ಆರ್ಥಿಕ ಸ್ಥಿತಿ ಅದಃಪತನದತ್ತ ಸಾಗುತ್ತಿದೆ. ನೋಟ್ ಬ್ಯಾನ್, ಜಿಎಸ್‍ಟಿ ಸಂಕಟದಿಂದ ದೇಶದ ಜನತೆ ಅನಗತ್ಯವಾಗಿ ತೊಂದರೆಗೆ ಸಿಲುಕಿದ್ದಾರೆ. ರಾಜಕೀಯ ಪಕ್ಷಗಳು ನಾಗರಿಕ ಹಕ್ಕುಗಳನ್ನು ರಕ್ಷಣೆ ಮಾಡುವಲ್ಲಿ ವಿಫಲವಾಗಿವೆ. ನಮ್ಮ ಹಕ್ಕುಗಳನ್ನು ನಾವೇ ರಕ್ಷಿಸಿಕೊಳ್ಳುವ ಅನಿವಾರ್ಯತೆ ಬಂದಿದೆ ಎಂದು ಹೆಚ್. ಎಸ್ ದೊರೆಸ್ವಾಮಿ ಹಾಗೂ ಇತಿಹಾಸಕಾರ ರಾಮಚಂದ್ರ ಗುಹಾ ನಗರದ ಫ್ರೀಡಂಪಾರ್ಕ್ ಬಳಿ ಪ್ರತಿಭಟನೆ ನಡೆಸಿದರು.

    ಪ್ರಜಾಧಿಕಾರ ಹೋರಾಟ ಸಮಿತಿಯ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗಿಯಾಗಿ ಕೇಂದ್ರ ಸರ್ಕಾರದ ವಿರುದ್ಧ ಗುಡುಗಿದರು. ದೇಶದ ಜ್ಯಾತತೀತ ಸ್ವರೂಪವನ್ನ ನಾಶ ಮಾಡಲು ಮುಸ್ಲಿಂರನ್ನ ಹೊರತುಪಡಿಸುವ ಸಿಎಎ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಸ್ವಾತಂತ್ರ್ಯ ಸಂಸ್ಥೆಗಳಾದ ಇಡಿ, ಐಟಿ, ಸಿಬಿಐ, ಆರ್‍ಬಿಐಯನ್ನು ತನ್ನ ಹಿಡಿತದಲ್ಲಿ ಇಟ್ಟುಕೊಂಡಿದೆ. ಕೇಂದ್ರ ಸರ್ಕಾರ ರೈತರ ಬಗ್ಗೆ ನಿರ್ಲಕ್ಷ್ಯ ಧೋರಣೆ ತಾಳುತ್ತಿದೆ. ದೇಶದ ಆರ್ಥಿಕ ಸ್ಥಿತಿ ಚಿಂತಾಜನಕವಾಗಿದೆ. ಕೇಂದ್ರ ಸರ್ಕಾರ ಜನ ವಿರೋಧಿ ಯೋಜನೆಗಳನ್ನು ಜಾರಿಗೆ ತರುತ್ತಿದೆ ಎಂದು ಪ್ರತಿಭಟನೆಯಲ್ಲಿ ಆಕ್ರೋಶವನ್ನು ಹೊರಹಾಕಿದರು.