Tag: H.R Srinath

  • ನಮ್ಮ ರಕ್ತದಲ್ಲಿ ಕಾಂಗ್ರೆಸ್‌ ಇದೆ: JDS ತೊರೆದು ಕಾಂಗ್ರೆಸ್‌ ಸೇರಿದ ಹೆಚ್‌.ಆರ್.ಶ್ರೀನಾಥ್‌

    ನಮ್ಮ ರಕ್ತದಲ್ಲಿ ಕಾಂಗ್ರೆಸ್‌ ಇದೆ: JDS ತೊರೆದು ಕಾಂಗ್ರೆಸ್‌ ಸೇರಿದ ಹೆಚ್‌.ಆರ್.ಶ್ರೀನಾಥ್‌

    ಬೆಂಗಳೂರು: ಜೆಡಿಎಸ್‌ ತೊರೆದಿದ್ದ ವಿಧಾನ ಪರಿಷತ್‌ ಮಾಜಿ ಸದಸ್ಯ ಹೆಚ್‌.ಆರ್.ಶ್ರೀನಾಥ್‌ ಅವರು ಇಂದು ಕಾಂಗ್ರೆಸ್‌ ಸೇರ್ಪಡೆಯಾದರು. ಈ ವೇಳೆ ಕೊಪ್ಪಳ ಮುಖಂಡರು ಸಹ ಕಾಂಗ್ರೆಸ್‌ ಸೇರಿದರು.

    ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಶ್ರೀನಾಥ್‌ ಸೇರಿದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಈ ವೇಳೆ ಉಪಸ್ಥಿತರಿದ್ದರು. ಇದನ್ನೂ ಓದಿ: ಸಿದ್ದರಾಮೋತ್ಸವ ನಡೆಸುವುದು ತಪ್ಪಲ್ಲ: ಜಿ. ಪರಮೇಶ್ವರ್

    ಈ ವೇಳೆ ಮಾತನಾಡಿದ ಶ್ರೀನಾಥ್‌, ಕಳೆದ ಕೆಲವು ವರ್ಷಗಳಿಂದ ನಾನು ವನವಾಸದಲ್ಲಿ ಇದ್ದೆ. ನಮ್ಮ ರಕ್ತದಲ್ಲಿ ಕಾಂಗ್ರೆಸ್ ಇದೆ. ಇಂದಿರಾ ಗಾಂಧಿಯವರು ನಮ್ಮ ತಂದೆಯವರ ಮೇಲೆ ಮಗನಿಗಿಂತ ಹೆಚ್ಚು ವಿಶ್ವಾಸ ಇಟ್ಟುಕೊಂಡಿದ್ದರು ಎಂದು ನೆನಪಿಸಿಕೊಂಡರು.

    ಬಿಜೆಪಿಯಿಂದಲೂ ನಮಗೆ ಪಕ್ಷ ಸೇರುವಂತೆ ಆಹ್ವಾನ ಇತ್ತು. ಆದರೆ ನಾವು ಎಲ್ಲಾ ಸಮಾಜದಲ್ಲಿ ವಿಶ್ವಾಸ ಹೊಂದಿರುವುದರಿಂದ, ಜಾತ್ಯತೀತ ತತ್ವದಲ್ಲಿ ನಂಬಿಕೆ ಇಟ್ಟಿರುವುದರಿಂದ ಕಾಂಗ್ರೆಸ್ ಪಕ್ಷ ಸೇರಿದ್ದೇನೆ. ಯಾವುದೇ ಷರತ್ತು ಇಲ್ಲದೆ ಕಾಂಗ್ರೆಸ್ ಪಕ್ಷ ಸೇರಿದ್ದೇನೆ ಎಂದು ತಿಳಿಸಿದರು. ಇದನ್ನೂ ಓದಿ: ಸಿದ್ದರಾಮಯ್ಯಗೆ ನಾಯಕತ್ವ ಘೋಷಣೆ ವದಂತಿ – ಅಖಾಡಕ್ಕೆ ಇಳಿದ ಡಿಕೆಶಿ

    Live Tv

  • ಶೌಚಾಲಯವಿಲ್ಲದೇ 8,360 ವಿದ್ಯಾರ್ಥಿಗಳು ಪರದಾಟ

    ಶೌಚಾಲಯವಿಲ್ಲದೇ 8,360 ವಿದ್ಯಾರ್ಥಿಗಳು ಪರದಾಟ

    – ಸಹಾಯಕ್ಕೆ ಧಾವಿಸಿದ ಮಾಜಿ ಎಂಎಲ್‍ಸಿ

    ಕೊಪ್ಪಳ: ಜಿಲ್ಲೆಯಲ್ಲಿ ಪೊಲೀಸ್ ನೇಮಕಾತಿ ಪರೀಕ್ಷೆಯಲ್ಲಿ ಎಡವಟ್ಟು ನಡೆದಿದ್ದು, ಶೌಚಾಲಯ ಇಲ್ಲದೆ ವಿದ್ಯಾರ್ಥಿಗಳ ಪರದಾಡುವಂಹ ಪರಿಸ್ಥಿತಿ ನಿರ್ಮಾಣವಾಗಿದೆ.

    ಕೆ.ಎಸ್.ಆರ್.ಪಿ ಪರೀಕ್ಷೆ ಹಿನ್ನೆಲೆಯಲ್ಲಿ ಗಂಗಾವತಿಗೆ 8,360 ವಿದ್ಯಾರ್ಥಿಗಳು ಆಗಮಿಸಿದ್ದರು. ಗಂಗಾವತಿ ತಾಲೂಕಿನಾದ್ಯಾಂತ ಸುಮಾರು 21 ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಆದ್ದರಿಂದ ಶನಿವಾರ ರಾತ್ರಿನೇ ಗಂಗಾವತಿಗೆ ಸಾವಿರಾರು ವಿದ್ಯಾರ್ಥಿಗಳು ಬಂದಿಳಿದಿದ್ದಾರೆ. ಆದರೆ ಬಂದಿರುವ ವಿದ್ಯಾರ್ಥಿಗಳಿಗೆ ತಂಗಲು ವ್ಯವಸ್ಥೆ ಇಲ್ಲದೆ ಪರದಾಡಿದ್ದಾರೆ.

    ನಗರದಲ್ಲಿ ಮೂಲಭೂತ ಸೌಕರ್ಯ ಇಲ್ಲದೆ ವಿದ್ಯಾರ್ಥಿಗಳು ಪರದಾಡಿದ್ದು, ಒಂದೇ ಒಂದು ಶೌಚಾಲಯಕ್ಕೆ ಸಾಗರೋಪಾದಿಯಲ್ಲಿ ವಿದ್ಯಾರ್ಥಿಗಳು ಕ್ಯೂ ನಿಂತಿದ್ದರು. ಕೊನೆಗೆ ಕೆ.ಎಸ್.ಆರ್.ಪಿ ಪರೀಕ್ಷೆ ಬರೆಯಲು ಬಂದಿದ್ದ ವಿದ್ಯಾರ್ಥಿಗಳ ಕಷ್ಟಕ್ಕೆ ಮಾಜಿ ಎಂಎಲ್ ಸಿ ಎಚ್.ಆರ್. ಶ್ರೀನಾಥ್ ನೇರವಾಗಿದ್ದಾರೆ. ತಕ್ಷಣ ಅವರು ಸರೋಜಮ್ಮ ಕಲ್ಯಾಣ ಮಂಟಪದಲ್ಲಿ ವಿದ್ಯಾರ್ಥಿಗಳಿಗೆ ತಂಗಲು ಅವಕಾಶ ಮಾಡಿಕೊಟ್ಟಿದ್ದಾರೆ.

    ಕಲ್ಯಾಣ ಮಂಟಪದಲ್ಲಿ ತಂಗಲು ವ್ಯವಸ್ಥೆ ಮಾಡಿದ್ದರೂ ಇನ್ನುಳಿದ ವಿದ್ಯಾರ್ಥಿಗಳು ಬಸ್ ನಿಲ್ದಾಣದಲ್ಲೇ ಮಲಗಿಕೊಂಡಿದ್ದು, ಕೊರೆಯುವ ಚಳಿಯಲ್ಲಿ ಬಸ್ ನಿಲ್ದಾಣದಲ್ಲೇ ಕಾಲ ಕಳೆದಿದ್ದಾರೆ. ತಾತ್ಕಾಲಿಕ ಶೌಚಾಲಯ ಕಲ್ಪಿಸುವ ವ್ಯವಸ್ಥೆಯನ್ನು ಇಲ್ಲಿನ ನಗರಸಭೆ ಮಾಡಲಿಲ್ಲ ಎಂದು ಇಲ್ಲದ ನಗರಸಭೆ ವಿರುದ್ಧ ವಿದ್ಯಾರ್ಥಿಗಳ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಈ ಬಗ್ಗೆ ಮಾಜಿ ಎಂಎಲ್‍ಸಿ ಎಚ್.ಆರ್. ಶ್ರೀನಾಥ್ ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದು, ಈ ರೀತಿ ಪೊಲೀಸ್ ನೇಮಕಾತಿಯ ಪರೀಕ್ಷೆ ಬರೆಯಲು ಬರುವ ವಿದ್ಯಾರ್ಥಿಗಳ ಬಗ್ಗೆ ಪೊಲೀಸರು ಮುಂಚಿತವಾಗಿ ತಿಳಿಸಬೇಕಿತ್ತು. ಆದರೆ ಕೊನೆ ಕ್ಷಣದಲ್ಲಿ ಅವರು ನಮಗೆ ತಿಳಿಸಿದ್ದರು. ಆದ್ದರಿಂದ ತಕ್ಷಣ ಕಲ್ಯಾಣ ಮಂಟಪದಲ್ಲಿ ವ್ಯವಸ್ಥೆ ಮಾಡಲಾಗಿದೆ. ಆದರೆ ಅಧಿಕ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಬಂದಿರುವುದರಿಂದ ಶೌಚಾಲಯಗಳ ತೊಂದರೆಯಾಗಿದೆ. ನಾವು ಗಂಗಾವತಿಯವರು ಎಲ್ಲರೂ ಒಟ್ಟಾಗಿ ಸೇರಿ ಸಹಾಯ ಮಾಡುತ್ತಿದ್ದೇವೆ. ಆದರೆ ಶನಿವಾರ ಸಂಜೆ 6ಗಂಟೆಗೆ ಈ ಬಗ್ಗೆ ತಿಳಿಸಿದ್ದಾರೆ. ಮುಂಚಿತವಾಗಿ ಹೇಳಿದ್ದರೆ, ರಾತ್ರಿ ಊಟ, ಬೆಳಗ್ಗೆ ತಿಂಡಿ ವ್ಯವಸ್ಥೆಯನ್ನು ಮಾಡಬಹುದಿತ್ತು. ಆದರೆ ಅದು ಸಾಧ್ಯವಾಗಿಲ್ಲ. ಸದ್ಯಕ್ಕೆ ವಿದ್ಯಾರ್ಥಿಗಳಿಗೆ ಎಲ್ಲ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.

    ಮುಂಜಾಗ್ರತೆಗಾಗಿ ಇಬ್ಬರು ಎಸ್‍ಪಿ, 11 ಡಿವೈಎಸ್ಪಿ ಸೇರಿದಂತೆ ಸಾಕಷ್ಟು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ರಾಜ್ಯಾದ್ಯಾಂತ ಕೇವಲ 517 ಹುದ್ದೆಗಳಿಗೆ ಬರೋಬ್ಬರಿ 4 ಲಕ್ಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ಇದರಲ್ಲಿ ಅತೀ ಹೆಚ್ಚು ಅಭ್ಯರ್ಥಿ ಕೊಪ್ಪಳದ ಗಂಗಾವತಿಯಲ್ಲಿ ಪರೀಕ್ಷೆ ಬರೆಯುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv