Tag: H.M Revanna

  • 3 ತಿಂಗಳಿಗೊಮ್ಮೆ ಗೃಹಲಕ್ಷ್ಮಿ ಹಣ ಕೊಡ್ತಿದ್ದೇವೆ, ಪ್ರತಿ ತಿಂಗಳು ಹಣ ಕೊಡೋಕೆ ತೊಡಕುಗಳಿವೆ: ಹೆಚ್.ಎಂ ರೇವಣ್ಣ

    3 ತಿಂಗಳಿಗೊಮ್ಮೆ ಗೃಹಲಕ್ಷ್ಮಿ ಹಣ ಕೊಡ್ತಿದ್ದೇವೆ, ಪ್ರತಿ ತಿಂಗಳು ಹಣ ಕೊಡೋಕೆ ತೊಡಕುಗಳಿವೆ: ಹೆಚ್.ಎಂ ರೇವಣ್ಣ

    ಮೈಸೂರು: ಪ್ರತಿ ತಿಂಗಳು ಹಣ ಕೊಡೋದಕ್ಕೆ ಕೆಲವು ತೊಡಕುಗಳಿವೆ. ಸದ್ಯ 3 ತಿಂಗಳಿಗೊಮ್ಮೆ ಗೃಹಲಕ್ಷ್ಮಿ ಹಣ ಕೊಡ್ತಿದ್ದೇವೆ ಗ್ಯಾರಂಟಿ ಯೋಜನೆ ಅಧ್ಯಕ್ಷ ಹೆಚ್.ಎಂ ರೇವಣ್ಣ (H M Revanna) ಹೇಳಿದ್ದಾರೆ.

    ಮೈಸೂರಿನಲ್ಲಿ (Mysuru) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೂರು ತಿಂಗಳಿಗೊಮ್ಮೆ ಗೃಹಲಕ್ಷ್ಮಿ (Gruhalakshmi) ಹಣ ಕೊಡುತ್ತಿದ್ದೇವೆ. ಜಿಎಸ್‌ಟಿ ವಿಚಾರದಲ್ಲಿ 1 ಲಕ್ಷ 20 ಸಾವಿರ ಜನರಿಗೆ ಹಣ ಹೋಗಿರಲಿಲ್ಲ. ಅದರಲ್ಲಿ ಈಗ 58 ಸಾವಿರ ಜನರ ಸಮಸ್ಯೆಯನ್ನ ಬಗೆಹರಿಸಿದ್ದೇವೆ. ಉಳಿದ ಜನರ ಸಮಸ್ಯೆ ಬಗೆ ಹರಿಸುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ಉಗ್ರರಿಗೆ ನೆರವು ನೀಡಿದ್ದ ಕೇಸ್‌ – ಎಎಸ್‌ಐ ಚಾಂದ್ ಪಾಷಾ ವಿರುದ್ಧ ಇಲಾಖೆ ಹಂತದ ತನಿಖೆಗೆ ಆದೇಶ

    ನಾವು ಅಧಿಕಾರಕ್ಕೆ ಬಂದಾಗಿನಿಂದ ಗೃಹಲಕ್ಷ್ಮಿ ಹಣ ನಿಲ್ಲಿಸಿಲ್ಲ. ಪ್ರತಿ ತಿಂಗಳು ಹಣ ಕೊಡೋದಕ್ಕೆ ಕೆಲವು ತೊಡಕುಗಳಿವೆ. ಹೀಗಾಗಿ ಕೊಡಲು ಆಗುತ್ತಿಲ್ಲ ಎನ್ನುವ ಮೂಲಕ ಪ್ರತಿ ತಿಂಗಳ ಗೃಹಲಕ್ಷ್ಮಿ ಹಣ ಕೊಡಲು ಆಗಲ್ಲ ಎಂದು ಪರೋಕ್ಷವಾಗಿ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಅನಾಮಧೇಯ ಭಕ್ತನಿಂದ ಶಿರಡಿ ಸನ್ನಿಧಿಗೆ 59 ಲಕ್ಷದ ಚಿನ್ನದ ಕಿರೀಟ ಸೇರಿ 65 ಲಕ್ಷ ಮೌಲ್ಯದ ಆಭರಣ ದಾನ

    ಸಿಎಂ ಬದಲಾವಣೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸಿಎಂ ಬದಲಾವಣೆ ವಿಚಾರ ಹೈಕಮಾಂಡ್ ಮಟ್ಟದಲ್ಲಿ ಈ ಚರ್ಚೆ ನಡೆದಿಲ್ಲ. ಕೆಲವೊಂದಿಷ್ಟು ಗೊಂದಲಗಳು ಇತ್ತು. ಗೊಂದಲಗಳನ್ನು ಹೈಕಮಾಂಡ್ ಬಗೆಹರಿಸಿದೆ. ಸಿಎಂ ಕುರ್ಚಿಯ ವಿಚಾರದಲ್ಲಿ ನಾವು ಮಾಧ್ಯಮಗಳ ಮುಂದೆ ಮಾತನಾಡದಂತೆ ಸೂಚನೆ ನೀಡಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಸರ್ಕಾರಿ ಶಾಲಾ ಮಕ್ಕಳಿಗೆ ಬಸ್‌ ಫ್ರೀ – ರಾಜ್ಯ ಸರ್ಕಾರದಿಂದ ಮಹತ್ವದ ಘೋಷಣೆ

    ಡಿಕೆಶಿ, ಸಿದ್ದರಾಮಯ್ಯ ಪಕ್ಷದ ಜೋಡೆತ್ತುಗಳು
    ಸಭೆಗಳಲ್ಲಿ ಒಂದಿಬ್ಬರು ಶಾಸಕರ ಹೇಳಿಕೆಯ ಬಗ್ಗೆ ಚರ್ಚೆಯಾಗಿದೆ. ಯಾವ ಶಾಸಕರ ಬೆಂಬಲ ಯಾರಿಗೆ ಇದೆ ಎಂಬ ಪ್ರಶ್ನೆ ಈಗ ಯಾಕೆ ಬಂತು ಗೊತ್ತಿಲ್ಲ. ಡಿ.ಕೆ.ಶಿವಕುಮಾರ್ (D K Shivakumar), ಸಿದ್ದರಾಮಯ್ಯ (Siddaramaiah) ಅವರು ಜೋಡೆತ್ತಿನ ರೀತಿ ಪಕ್ಷ ಕಟ್ಟಿ ಪಕ್ಷವನ್ನ ಅಧಿಕಾರಕ್ಕೆ ತಂದಿದ್ದಾರೆ. ರಾಜಕಾರಣದಲ್ಲಿ ಎಲ್ಲರಿಗೂ ಆಸೆ ಇರುತ್ತದೆ. ಅಂತಿಮ ತೀರ್ಮಾನಗಳು ಹೈಕಮಾಂಡ್‌ಗೆ ಬಿಟ್ಟದ್ದು ಎಂದಿದ್ದಾರೆ.

  • ಕಾಂಗ್ರೆಸ್‌ ನಾಯಕ ಹೆಚ್‌.ಎಂ ರೇವಣ್ಣ ಪತ್ನಿ ನಿಧನ

    ಕಾಂಗ್ರೆಸ್‌ ನಾಯಕ ಹೆಚ್‌.ಎಂ ರೇವಣ್ಣ ಪತ್ನಿ ನಿಧನ

    ಬೆಂಗಳೂರು: ಕಾಂಗ್ರೆಸ್‌ (Congress) ನಾಯಕ ಹೆಚ್‌.ಎಂ ರೇವಣ್ಣ (HM Revanna) ಅವರ ಪತ್ನಿ ವತ್ಸಲಾ (70) ಅವರು ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

    ಇತೀಚೆಗೆ ಅವರು ಉತ್ತರ ಭಾರತ ಪ್ರವಾಸಕ್ಕೆ ತೆರಳಿದ್ದಾಗ ಅವರ ಕೈಗೆ ಏಟಾಗಿತ್ತು. ಇದಕ್ಕೆ ಚಿಕಿತ್ಸೆಗಾಗಿ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಅವರ ಆರೋಗ್ಯ ಸುಧಾರಿಸಿರಲಿಲ್ಲ. ಇಂದು (ಗುರುವಾರ) ನಿಧನರಾಗಿದ್ದಾರೆ.

    ಅವರು ಪುತ್ರರಾದ ಶಶಾಂಕ್‌ ಹಾಗೂ ಅನೂಪ್‌ ಅವರನ್ನು ಅಗಲಿದ್ದಾರೆ.

  • ಸಿಎಂ ಪಾಕ್ ಜೊತೆ ಯುದ್ಧ ಬೇಡ ಅಂದಿಲ್ಲ: ಹೆಚ್.ಎಂ.ರೇವಣ್ಣ ಸಮರ್ಥನೆ

    ಸಿಎಂ ಪಾಕ್ ಜೊತೆ ಯುದ್ಧ ಬೇಡ ಅಂದಿಲ್ಲ: ಹೆಚ್.ಎಂ.ರೇವಣ್ಣ ಸಮರ್ಥನೆ

    ಕಲಬುರಗಿ: ಪೆಹಲ್ಗಾಮ್ ಘಟನೆಯ ಬಳಿಕ ಸಿಎಂ ಸಿದ್ದರಾಮಯ್ಯ (Siddaramaiah) ಅವರು ಪಾಕಿಸ್ತಾನದ (Pakistan) ಜೊತೆ ಯುದ್ಧ ಬೇಡ ಎಂದು ಹೇಳಿಯೇ ಇಲ್ಲ. ಏನಿದ್ದರೂ ಮೊದಲು ಭದ್ರತೆ ಖಚಿತಪಡಿಸಿಕೊಂಡು ನಂತರ ಯುದ್ಧ ಮಾಡಿ ಎಂದು ಸಲಹೆ ನೀಡಿದ್ದಾರೆ ಎಂದು ಮಾಜಿ ಸಚಿವ ಹೆಚ್.ಎಂ.ರೇವಣ್ಣ (H M Revanna) ಹೇಳಿದರು.

    ಕಲಬುರಗಿಯಲ್ಲಿ (Kalaburagi) ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂ ಯುದ್ಧ ಬೇಡ ಎಂದಿಲ್ಲ. ದೇಶದ ಅಖಂಡತೆ ಮತ್ತು ಸಾರ್ಮಭೌಮತ್ವಕ್ಕೆ ಧಕ್ಕೆ ಬಂದಲ್ಲಿ ಹಾಗೂ ಅನಿವಾರ್ಯತೆ ಎನಿಸಿದರೆ ಯುದ್ಧ ಮಾಡಿ ಎಂದಿದ್ದಾರೆ. ಮೇಲಾಗಿ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಪಕ್ಷ ಕೇಂದ್ರ ಸರ್ಕಾರದೊಂದಿಗೆ ನಿಲ್ಲುತ್ತದೆ ಎಂದು ಸ್ವತಃ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರೇ ಸ್ಪಷ್ಪಪಡಿಸಿದ್ದಾರೆ ಎಂದರು. ಇದನ್ನೂ ಓದಿ: ಹಾಸನ | ತಾಲೂಕು ಕಚೇರಿ ಸಿಬ್ಬಂದಿ ಅನುಮಾನಾಸ್ಪದ ಸಾವು – ಪತ್ನಿ, ಕುಟುಂಬಸ್ಥರ ವಿರುದ್ಧವೇ ಕೊಲೆ ಆರೋಪ

    ಕೇಂದ್ರ ಸರ್ಕಾರ ಯಾವುದೇ ರೀತಿಯ ನಿರ್ಧಾರ ತೆಗೆದುಕೊಂಡರೂ ತಮ್ಮ ಪಕ್ಷದ ಬೆಂಬಲ ಇರುತ್ತದೆ ಎಂದು ಹೇಳಿದ ಮೇಲೆ ಇನ್ನೇನಿದೆ. ಇಷ್ಟು ದಿನ ತೂಕಡಿಸುತ್ತಾ, ಈಗ ಅಲ್ಲಿ ಯುದ್ಧ ಇಲ್ಲಿ ಯುದ್ಧ ಅಂತಿದ್ದೀರಿ. ಹಿಂದೆ ಇಂದಿರಾಗಾಂಧಿ ಪಾಕಿಸ್ತಾನದ ಮೇಲೆ ಯುದ್ಧ ಮಾಡಿ 80 ಸಾವಿರ ಪಾಕಿಸ್ತಾನ ಸೈನಿಕರನ್ನು ಹೊಡೆದುರುಳಿಸಿದ್ದರು. ನಾವು ಮಾಡಿರುವುದರನ್ನು ನೋಡಿದರೆ ಇವರು ಏನೇನೂ ಅಲುಗಾಡಿಸುವುದಕ್ಕೆ ಆಗುವುದಿಲ್ಲ. ಬಿಜೆಪಿಯವರು ಬರೀ ಚಾಡಿ ಸುಳ್ಳು ಹೇಳಿಕೊಂಡು ತಿರುಗಾಡುತ್ತಾರೆ. ಸುಳ್ಳು ಅವರ ಮನೆಯ ದೇವರು ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ವಕೀಲರ ನೇಮಿಸಿಕೊಳ್ಳದ ಪ್ರಜ್ವಲ್‌ಗೆ ಉಚಿತ ಕಾನೂನು ಸೇವೆ – ಕೋರ್ಟ್‌ನಿಂದಲೇ ವಕೀಲರ ನೇಮಕ

    ಬಿಜೆಪಿ (BJP) ಮತ್ತು ಜೆಡಿಎಸ್ (JDS) ನಾಯಕರು ಕೇವಲ ಜನರ ಭಾವನೆಗಳ ಜೊತೆ ಆಟವಾಡುತ್ತಿದ್ದಾರೆ. ಆದರೆ ನಾವು ಜನರ ಬದುಕಿನ ಜೊತೆಗೆ ಇರುತ್ತೇವೆ. ಜನರಿಗೆ ಅನುಕೂಲ ಆಗಲಿ ಎಂದು ಐದು ಗ್ಯಾರಂಟಿ ಯೋಜನೆ ತಂದಿದ್ದೇವೆ. ಬಿಜೆಪಿಯವರು ಹೋರಾಟ ಮಾಡುವುದಕ್ಕೆ ನಮ್ಮದೇನೂ ಅಭ್ಯಂತರವಿಲ್ಲ. ಅದನ್ನು ಬಿಟ್ಟು ಸಭೆ ಕೆಡಿಸುವಂತಹ ನೀಚ ಕೆಲಸವನ್ನು ಬಿಜೆಪಿ ಮತ್ತು ಆರ್‌ಎಸ್‌ಎಸ್ ಮಾಡಬಾರದು ಎಂದು ಕಿಡಕಾರಿದರು. ಇದನ್ನೂ ಓದಿ: 4 ದಿನದ ಮೊದಲೇ ಪಹಲ್ಗಾಮ್‌ನಿಂದ 7 ಕಿ.ಮೀ ದೂರದ ಜಾಗಕ್ಕೆ ಬಂದಿದ್ದ ಉಗ್ರರು

    ಪೊಲೀಸ್ ಅಧಿಕಾರಿಯೊಬ್ಬರ ಮೇಲೆ ಸಿಎಂ ಅವರು ಕೈ ಮಾಡಲು ಯತ್ನಿಸಿದ ಕುರಿತು ಪ್ರತಿಕ್ರಿಯಿಸಿದ ಅವರು, ಆ ಬಗ್ಗೆ ನನಗೇನೂ ಗೊತ್ತಿಲ್ಲ. ಹಾಗಾಗಿದ್ದರೆ ಅದು ಸರಿಯಲ್ಲ. ಆದರೂ ಆಡಳಿತದಿಂದ ಬೇಸರ ಆಗಿರಬಹುದು. ಹಾಗಾಗಿ, ಹೀಗೆ ವರ್ತಿಸಿರಬಹುದು ಎಂದು ಹೇಳಿದರು.

  • ಸ್ವ ಇಚ್ಛೆಯಿಂದ ಗ್ಯಾರಂಟಿ ಬಿಟ್ಟುಕೊಡುವ ಜನರಿಗಾಗಿ ವ್ಯವಸ್ಥೆ ಮಾಡುವ ಬಗ್ಗೆ ಚಿಂತನೆ: ಹೆಚ್.ಎಂ.ರೇವಣ್ಣ

    ಸ್ವ ಇಚ್ಛೆಯಿಂದ ಗ್ಯಾರಂಟಿ ಬಿಟ್ಟುಕೊಡುವ ಜನರಿಗಾಗಿ ವ್ಯವಸ್ಥೆ ಮಾಡುವ ಬಗ್ಗೆ ಚಿಂತನೆ: ಹೆಚ್.ಎಂ.ರೇವಣ್ಣ

    – ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷರು ಹೇಳಿದ್ದೇನು?

    ನವದೆಹಲಿ: ಇತ್ತೀಚೆಗೆ ಕಾರವಾರದಲ್ಲಿ ಕೆಲವು ಮಹಿಳೆಯರು ನಮಗೆ ಗ್ಯಾರಂಟಿ ಯೋಜನೆಗಳು ಬೇಡ, ಅದು ಬಡವರಿಗೆ ತಲುಪಲಿ ಎಂದು ಹೇಳಿದರು. ಇದೇ ರೀತಿ ಸ್ವ ಇಚ್ಛೆಯಿಂದ ಗ್ಯಾರಂಟಿ ಬಿಟ್ಟುಕೊಡುವ ಜನರಿಗಾಗಿ ವ್ಯವಸ್ಥೆ ಮಾಡುವ ಬಗ್ಗೆ ಚಿಂತನೆ ನಡೆಸಿದ್ದೇವೆ ಎಂದು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಹೆಚ್.ಎಂ.ರೇವಣ್ಣ ಹೇಳಿದ್ದಾರೆ‌.

    ನವದೆಹಲಿಯಲ್ಲಿ ಮಾತನಾಡಿದ ಅವರು, ಗ್ಯಾರಂಟಿ ಅನುಷ್ಠಾನದ ಬಗ್ಗೆ ಕಾಂಗ್ರೆಸ್ ನಾಯಕರಾದ ಕೆ.ಸಿ.ವೇಣುಗೋಪಾಲ್, ಉಸ್ತುವಾರಿ ರಣದೀಪ್ ಸುರ್ಜೆವಾಲ ಅವರಿಗೆ ಮಾಹಿತಿ ನೀಡಿದ್ದೇನೆ ಎಂದಿದ್ದಾರೆ.

    ಚುನಾವಣಾ ಪೂರ್ವದಲ್ಲಿ ನಾವು ಜನರಿಗೆ ಗ್ಯಾರಂಟಿ ಜಾರಿ ಮಾಡುವ ಭರವಸೆ ನೀಡಿದ್ದೆವು. ಸರ್ಕಾರ ರಚನೆಯಾದ ಬೆನ್ನಲ್ಲೇ ಮೊದಲ ಸಂಪುಟದಲ್ಲೇ ನಾವು ಗ್ಯಾರಂಟಿ ಜಾರಿ ಮಾಡಿದ್ದೇವೆ. ಎಲ್ಲ ಯೋಜನೆಗಳು ಸರಿಯಾಗಿ ಅನುಷ್ಠಾನಕ್ಕೆ ಬಂದಿವೆ. ಗೃಹಲಕ್ಷ್ಮಿ ಯೋಜನೆ ಅಡಿ ಮೂರು ತಿಂಗಳು ಹಣ ಪಾವತಿ ಆಗಿರಲಿಲ್ಲ. ಈಗ ಅದಕ್ಕೂ ವ್ಯವಸ್ಥೆ ಮಾಡಿದೆ ಎಂದು ತಿಳಿಸಿದ್ದಾರೆ.

    ಗ್ಯಾರಂಟಿ ಯೋಜನೆಗಳ ವಿರುದ್ಧ ಮಾತನಾಡುವವರು, ಉಳ್ಳವರು ಮತ್ತು ಬಿಜೆಪಿ ನಾಯಕರು, ಬಡವರಿಗೆ ಬಾಯಿ ಇಲ್ಲ. ಹೀಗಾಗಿ, ಮಾತನಾಡಲ್ಲ. ನಾವು ಗ್ಯಾರಂಟಿಗಳನ್ನು ನಿಲ್ಲಿಸುವುದಿಲ್ಲ. ಗ್ಯಾರಂಟಿ ಯೋಜನೆಗಳು ಜನರ ಆರ್ಥಿಕ ಸ್ಥಿತಿ ಹೆಚ್ಚಿಸಿದೆ ಎಂದು ಆರ್ಥಿಕ ತಜ್ಞರು ಹೇಳಿದ್ದಾರೆ. ಮೊದಲು ಗುಜರಾತ್ ಮಾದರಿ ಅಂತಾ ಇದ್ದರು. ಈಗ ಕರ್ನಾಟಕ ಮಾದರಿ ಆಗುತ್ತಿದೆ. ಬ್ಲಡ್ ಮತ್ತು ದುಡ್ಡು ಎರಡೂ ಚಲಾವಣೆಯಲ್ಲಿ ಇದ್ದರೆ ಮಾತ್ರ ಆರೋಗ್ಯಕ್ಕೆ ಒಳ್ಳೆಯದು ಎಂದಿದ್ದಾರೆ.

    ವೀರಪ್ಪ ಮೊಯ್ಲಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಇದರ ಬಗ್ಗೆ ನಮ್ಮ ಹೈಕಮಾಂಡ್ ನೋಡಿಕೊಳ್ಳುತ್ತೆ. ಖರ್ಗೆ ಅವರು ಯಾರೂ ಮಾತಾಡಬೇಡಿ ಎಂದಿದ್ದಾರೆ. ಹಾಗಾಗಿ ಮಾತಾಡಲ್ಲ. ಸದ್ಯ ಎರಡು ಕುರ್ಚಿಗಳು ಭರ್ತಿ ಇವೆ ಎಂದು ತಿಳಿಸಿದ್ದಾರೆ.

  • ಈಶ್ವರಪ್ಪ ಜೀವನದಲ್ಲಿ ಈವರೆಗೆ ಯಾವ ಕೆಲಸವನ್ನೂ ಸರಿಯಾಗಿ ಮಾಡಿಲ್ಲ: ಎಚ್.ಎಂ. ರೇವಣ್ಣ

    ಈಶ್ವರಪ್ಪ ಜೀವನದಲ್ಲಿ ಈವರೆಗೆ ಯಾವ ಕೆಲಸವನ್ನೂ ಸರಿಯಾಗಿ ಮಾಡಿಲ್ಲ: ಎಚ್.ಎಂ. ರೇವಣ್ಣ

    -ಜಾತಿ,ಆರ್ಥಿಕ ಗಣತಿಗೆ ಸರ್ಕಾರ ಸಬೂಬು ಹೇಳುತ್ತ ಮುಂದೂಡುತ್ತಿದೆ

    ರಾಯಚೂರು: ಕೆ.ಎಸ್.ಈಶ್ವರಪ್ಪ ಜೀವನದಲ್ಲಿ ಈವರೆಗೆ ಯಾವ ಕೆಲಸವನ್ನೂ ಸರಿಯಾಗಿ ಮಾಡಿಲ್ಲ. ರಾಯಣ್ಣ ಬ್ರಿಗೇಡ್ ಅರ್ಧಕ್ಕೆ ಬಿಟ್ಟು ಹೋದರು, ಕನಕಗೋಪುರ ವಿಚಾರನೂ ಅಷ್ಟೇ. ಜಾತಿ ಗಣತಿ ವರದಿ ತರಬೇಕು ಅಂತ ನಾನು, ಸಿದ್ದರಾಮಯ್ಯ, ಈಶ್ವರಪ್ಪ ಸೇರಿ ಎಲ್ಲಾ ಪಕ್ಷದ ಮುಖಂಡರು ಸಭೆ ಮಾಡಿದ್ದೇವು. ಈಗ ಈಶ್ವರಪ್ಪನವರು ಮಾತು ಬದಲಿಸಿದ್ದಾರೆ ಎಂದು ಮಾಜಿ ಸಚಿವ ಎಚ್.ಎಂ.ರೇವಣ್ಣ ಆರೋಪಿಸಿದರು.

    eshwarappa

    ರಾಯಚೂರಿನಲ್ಲಿ ಕುರುಬರ ಸಂಸ್ಕೃತಿ ದರ್ಶನ ಮಾಲಿಕೆಯ ಹದಿಮೂರು ಗ್ರಂಥಗಳ ಅನಾವರಣ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹಿಂದುಳಿದ ಸಮುದಾಯಗಳ ಜಾತಿ ಮತ್ತು ಆರ್ಥಿಕ ಗಣತಿ ವಿಳಂಬಕ್ಕೆ ಸರ್ಕಾರ ಕೇವಲ ಸಬೂಬು ನೀಡುತ್ತಿದೆ. ಪ್ರಥಮವಾಗಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡಿದವರು ಮೈಸೂರು ಅರಸರು. ಸಿದ್ದರಾಮಯ್ಯ ಸಿಎಂ ಇದ್ದಾಗ 172 ಕೋಟಿ ರೂ. ನೀಡಿ ಆರುವರೆ ಕೋಟಿ ಜನರ ಸಮೀಕ್ಷೆ ಮಾಡಿಸಿದ್ದರು ಎಂದರು. ಇದನ್ನೂ ಓದಿ: ದೇವೆಗೌಡ್ರು ಹುಟ್ಟುವ ಮೊದಲೇ RSS ಅಸ್ತಿತ್ವದಲ್ಲಿತ್ತು: ಕೆ.ಎಸ್ ಈಶ್ವರಪ್ಪ

    ಸರ್ಕಾರ ಬದಲಾದ ನಂತರ ಸಿಎಂ ಕುಮಾರಸ್ವಾಮಿ ಜೊತೆ ಜಾರಿ ಮಾಡುವಂತೆ ಕೇಳಿದಾಗ ಒಪ್ಪಲಿಲ್ಲ. ಇದೀಗ ಇರುವ ಸರ್ಕಾರ ಕೂಡ ಸಬೂಬು ಹೇಳುತ್ತಿದೆ, ಎಲ್ಲರೂ ಡ್ರಾಫ್ಟ್ ಗೆ ಸಹಿ ಹಾಕಿದ್ದಾರೆ. ಅಕ್ಟೋಬರ್ 30ರ ನಂತರ ಬೆಂಗಳೂರು ಚಲೋ ಚಳುವಳಿ ಮಾಡುವ ಚಿಂತನೆಯಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನಾನು ಎಲ್ಲರಿಗಿಂತ ಸೀನಿಯರ್, ಅರ್ಧ ಬೆಂಗಳೂರು ಉಸ್ತುವಾರಿ ಕೊಡಲಿ: ಸೋಮಣ್ಣ

  • ಸಚಿವೆಯಾದರೂ ಹೆಣ್ಣು ಹೆಣ್ಣೇ ಅಲ್ವಾ? ಅವರ ಮನೆಯಲ್ಲೇ ಹಾಗಾದ್ರೆ?: ಹೆಚ್.ಎಂ.ರೇವಣ್ಣ

    ಸಚಿವೆಯಾದರೂ ಹೆಣ್ಣು ಹೆಣ್ಣೇ ಅಲ್ವಾ? ಅವರ ಮನೆಯಲ್ಲೇ ಹಾಗಾದ್ರೆ?: ಹೆಚ್.ಎಂ.ರೇವಣ್ಣ

    ಬೆಂಗಳೂರು: ಆ ಹೆಣ್ಣು ಮಗಳು ಶೋಭಾ ಕರಂದ್ಲಾಜೆ ನಾನು ಕೇಂದ್ರ ಸಚಿವೆ ಮೈಸೂರು ಅತ್ಯಾಚಾರ ಪ್ರಕರಣದ ಬಗ್ಗೆ ಮಾತನಾಡಲ್ಲ ಅಂತಾರೆ. ಸಚಿವೆ ಆದರೂ ಹೆಣ್ಣು ಹೆಣ್ಣೇ ಅಲ್ವಾ? ಅವರ ಮನೆಯಲ್ಲೇ ಆದರೆ ನಮ್ಮ ಮನೆಯಲ್ಲಿ ಆದರೆ ಹೀಗೆ ಮಾತಾಡೋದ? ಎಂದು ಮಾಜಿ ಸಚಿವ ಹೆಚ್.ಎಂ. ರೇವಣ್ಣ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ ಹರಿಹಾಯ್ದಿದ್ದಾರೆ.  ಇದನ್ನೂ ಓದಿ: ಬಿಯರ್ ಬಾಟ್ಲಿ, ಬಸ್ ಟಿಕೆಟ್ ಆಧರಿಸಿ ಅತ್ಯಾಚಾರಿಗಳ ಬಂಧನ

    Union minister Shobha karandlaje

    ಮೈಸೂರು ಅತ್ಯಾಚಾರ ಪ್ರಕರಣದ ಕಾಂಗ್ರೆಸ್ ಸತ್ಯ ಶೋಧನಾ ಸಮಿತಿ ಸದಸ್ಯರು ಆಗಿರುವ ರೇವಣ್ಣ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಿವಾಸದ ಬಳಿ ಮಾತನಾಡಿದರು. ವೈದ್ಯರು ಅತ್ಯಾಚಾರ ನಡೆದಿದೆ ಅಂತಾರೆ. ಪೊಲೀಸರು ದರೋಡೆ ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ. ಘಟನೆ 7-30 ರಿಂದ 9 ಗಂಟೆ ನಡುವೆ ನಡೆದಿದೆ. 10 ಗಂಟೆಗೆ ಆಸ್ಪತ್ರೆಗೆ ಹೋಗಿದ್ದಾರೆ. 10-45 ಕ್ಕೆ ಪೊಲೀಸರ ಗಮನಕ್ಕೆ ಬಂದರೂ ಕೇಸ್ ದಾಖಲಿಸಲು ತಡ ಮಾಡಿದ್ದಾರೆ. ಪೊಲೀಸರ ಮೇಲೆ ಸರ್ಕಾರ ಒತ್ತಡ ತಂದಿದೆ. ಮೈಸೂರಿನಂತ ನಗರದಲ್ಲಿ ಅತ್ಯಾಚಾರ ಆಗಿದೆ. ನಮ್ಮ ಸರ್ಕಾರದ ಅವಧಿಯಲ್ಲಿ ಆಯ್ತು ಅಂತ ಕೆಟ್ಟ ಹೆಸರು ಬರಬಾರದು ಅಂತ ಸರ್ಕಾರ ಪೊಲೀಸರ ಮೇಲೆ ಒತ್ತಡ ತಂದು ಕೇಸು ದಾಖಲಿಸಲು ತಡ ಮಾಡಿದೆ ಎಂದು ಆರೋಪಿಸಿದರು. ಇದನ್ನೂ ಓದಿ: ಗ್ಯಾಂಗ್‍ರೇಪ್ ಪ್ರಕರಣ- ಆರೋಪಿಗಳನ್ನು ಬಂಧಿಸಿದ ಪೊಲೀಸರ ತಂಡಕ್ಕೆ 5 ಲಕ್ಷ ರೂ. ಬಹುಮಾನ

    ಅತ್ಯಾಚಾರ ನಡೆದಿದ್ದು, ರಕ್ತಸ್ರಾವ ಆಗಿದೆ. ಮೈಮೇಲೆ ಸಾಕಷ್ಟು ಗಾಯ ಆಗಿದೆ. ಮಹಿಳಾ ವೈದ್ಯತೇ ಬಂದು ಅತ್ಯಾಚಾರ ಆಗಿದೆ ಅಂತ ಹೇಳಿದ್ರೂ ಪೊಲೀಸರ ಮೇಲೆ ಒತ್ತಡ ತಂದು ದರೋಡೆ ಪ್ರಕರಣ ದಾಖಲಿಸಲು ಮುಂದಾಗಿದ್ದರು. ಕಾಂಗ್ರೆಸ್ ಸತ್ಯಶೋಧನಾ ಸಮಿತಿ ಮೈಸೂರು ಭೇಟಿ ಸಂದರ್ಭದಲ್ಲಿ ಇದು ನಮಗೆ ಗೊತ್ತಾಗಿದೆ. ಇಡೀ ಪ್ರಕರಣದಲ್ಲಿ ಪೊಲೀಸರ ವೈಫಲ್ಯ ಇದೆ. ಗೃಹ ಸಚಿವರು ರಾಜೀನಾಮೆ ಕೊಡಬೇಕು ಎಂದು ಹೆಚ್.ಎಂ.ರೇವಣ್ಣ ಆಗ್ರಹಿಸಿದರು. ಇದನ್ನೂ ಓದಿ: ಮಹಿಳೆಯರ ವಿರುದ್ಧದ ಅಪರಾಧಗಳತ್ತ ಕಣ್ಣು ಮುಚ್ಚಬೇಡಿ, ಮಾತನಾಡಿ: ರಮ್ಯಾ

  • ಎಚ್.ಎಂ.ರೇವಣ್ಣ ಸಾಂಸ್ಕೃತಿಕ ಪ್ರತಿಷ್ಠಾನ – ಅಭಿನಂದನೆ, ಗೃಂಥಗಳ ಬಿಡುಗಡೆ ಸಮಾರಂಭ

    ಎಚ್.ಎಂ.ರೇವಣ್ಣ ಸಾಂಸ್ಕೃತಿಕ ಪ್ರತಿಷ್ಠಾನ – ಅಭಿನಂದನೆ, ಗೃಂಥಗಳ ಬಿಡುಗಡೆ ಸಮಾರಂಭ

    ಬೆಂಗಳೂರು : ಐದು ದಶಕಗಳಿಂದ ಸಾರ್ವಜನಿಕ ಜೀವನದಲ್ಲಿದ್ದು ಸಮಾಜದ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿರುವ ಹಿರಿಯ ಜನನಾಯಕ ಎಚ್.ಎಂ.ರೇವಣ್ಣ ಅವರ ಜೀವನ ಮತ್ತು ಸಾಧನೆಗಳ ವಿವರಗಳುಳ್ಳ ಪರಿಚಯ ಗ್ರಂಥ, ಅವರ ಜೀವನದ ಪ್ರಮುಖ ಘಟಕಗಳ ದಾಖಲೆ ಹೊಂದಿರುವ ಚಿತ್ರಕೋಶ ಮತ್ತು ಅವರ ವ್ಯಕ್ತಿತ್ವವನ್ನು ಮುಂದಿನ ಪೀಳಿಗೆಗೆ ಪರಿಚಯಿಸಲು ನಿರ್ಮಿಸಿದ ಸಾಕ್ಷ್ಯಚಿತ್ರವನ್ನು ಮಾರ್ಚ್ 21 ರಂದು ಬೆಳಗ್ಗೆ 10.30ಕ್ಕೆ ಬೆಂಗಳೂರಿನ ಮೈಸೂರು ರಸ್ತೆಯ ಪೂರ್ಣಿಮಾ ಪ್ಯಾಲೇಸ್ ಕನ್ ವೆನ್ಷನ್ ಸೆಂಟರ್ ನಲ್ಲಿ ಬಿಡುಗಡೆ ಮಾಡಲಾಗುತ್ತದೆ. ಇದೇ ಸಂದರ್ಭದಲ್ಲಿ ರೇವಣ್ಣ ಅವರ ಐದು ದಶಕಗಳ ಸೇವೆಯನ್ನು ಸಾರ್ವಜನಿಕ ವಾಗಿ ಅಭಿನಂದಿಸಲಾಗುತ್ತದೆ.

    ಮಾಜಿ ಮುಖ್ಯಮಂತ್ರಿ ಮತ್ತು ವಿಧಾನ ಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸಮಾರಂಭವನ್ನು ಉದ್ಘಾಟಿಸಲಿದ್ದಾರೆ. ಮಾಜಿ ಮುಖ್ಯಮಂತ್ರಿ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಡಾ.ಎಂ.ವೀರಪ್ಪ ಮೊಯಿಲಿ ಅವರು ಅಧ್ಯಕ್ಷತೆ ವಹಿಸುವರು.

    ‘ಸಂಗತ’ ಗ್ರಂಥವನ್ನು ಮಾಜಿ ರಾಜ್ಯಪಾಲರು ಮತ್ತು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಬಿಡುಗಡೆ ಮಾಡಲಿದ್ದಾರೆ. ‘ದೃಶ್ಯಯಾನ’ ಚಿತ್ರಗುಚ್ಛವನ್ನು ರಾಜ್ಯಸಭೆಯ ವಿರೋಧ ಪಕ್ಷದ ನಾಯಕರು ಮತ್ತು ಮಾಜಿ ಕೇಂದ್ರ ಸಚಿವರಾದ ಎಂ.ಮಲ್ಲಿಕಾರ್ಜುನ ಖರ್ಗೆ ಅವರು ಲೋಕಾರ್ಪಣೆ ಮಾಡುವರು. ‘ಇಟ್ಟ ಹೆಜ್ಜೆ ದಿಟ್ಟ ನಿಲುವು’ ಕಿರುಚಿತ್ರವನ್ನು ಕರ್ನಾಟಕ ವಿಧಾನ ಪರಿಷತ್ ನ ಸಭಾಪತಿ ಬಸವರಾಜ್ ಹೊರಟ್ಟಿ ಬಿಡುಗಡೆಗೊಳಿಸುವರು. ಕೆಪಿಸಿಸಿ ಕಾರ್ಯಾಧ್ಯಕ್ಷ ಮತ್ತು ಶಾಸಕ ಶ್ರೀರಾಮಲಿಂಗಾರೆಡ್ಡಿ ಅವರು ವಿಶೇಷ ಅತಿಥಿಗಳಾಗಿ ಪಾಲ್ಗೊಳ್ಳಲ್ಲಿದ್ದಾರೆ.

    ಕಮ್ಯುನಿಟಿ ಸೆಂಟರ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಕೆ.ಎಂ.ನಾಗರಾಜ್ ಹಾಗೂ ಹಿರಿಯ ಕವಿ ಹಾಗೂ ವಿಧಾನ ಪರಿಷತ್ ನ ಮಾಜಿ ಸದಸ್ಯ ಡಾ.ಸಿದ್ದಲಿಂಗಯ್ಯ ಅವರು ಅಭಿನಂದನಾ ನುಡಿಗಳನ್ನು ಆಡುವರು. ಮಾಜಿ ಸಚಿವೆ ಮತ್ತು ಹಿರಿಯ ಸಾಹಿತಿ ಡಾ.ಬಿ.ಟಿ.ಲಲಿತಾ ನಾಯಕ್ ಅವರು ಗ್ರಂಥ ಪರಿಚಯ ಮಾಡಿಕೊಡಲಿದ್ದಾರೆ. ಸಮಾರಂಭದಲ್ಲಿ ಗ್ರಂಥ ಸಂಪಾದಕರುಗಳಾದ ಕಾ.ತ.ಚಿಕ್ಕಣ್ಣ ಮತ್ತು ಲಕ್ಷ್ಮಣ ಕೊಡಸೆ, ಕಿರುಚಿತ್ರ ನಿರ್ದೇಶಕ ಹುಲಿ ಚಂದ್ರಶೇಖರ ಉಪಸ್ಥಿತ ಇರಲಿದ್ದಾರೆ.

  • ಹೆಚ್‍ಡಿಕೆ ಸರ್ಕಾರ ಪತನಕ್ಕೆ ಕಾಂಗ್ರೆಸ್ ಕಾರಣವಲ್ಲ- ಹೆಚ್.ಎಂ ರೇವಣ್ಣ

    ಹೆಚ್‍ಡಿಕೆ ಸರ್ಕಾರ ಪತನಕ್ಕೆ ಕಾಂಗ್ರೆಸ್ ಕಾರಣವಲ್ಲ- ಹೆಚ್.ಎಂ ರೇವಣ್ಣ

    – ಸಿದ್ದು, ಹೆಚ್‍ಡಿಕೆ ಇಬ್ಬರೂ ಕಾರಣ ಅಂದ್ರು ವಿಶ್ವನಾಥ್

    ನವದೆಹಲಿ: ಅಣ್ಣ ಅಣ್ಣ ಅಂತ ಹೇಳಿ ನೀವು ಮಾಡಿದ್ದೇನು..? ತಮ್ಮ ತಪ್ಪನ್ನು ಸಿದ್ದರಾಮಯ್ಯ ಮೇಲೆ ಹಾಕಿದ್ದೆಷ್ಟು ಸರಿ? ಹೆಚ್‍ಡಿಕೆ ಸರಿಯಾಗಿ ನಡೆದುಕೊಂಡಿದ್ರೆ ಏನೂ ಆಗ್ತಿರಲಿಲ್ಲ. ಇದನ್ನು ಜನತಾದಳದ ಪ್ರಮುಖ ನಾಯಕರೇ ಹೇಳ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ಮಾಜಿ ಸಚಿವ ಹೆಚ್.ಎಂ ರೇವಣ್ಣ ವಾಗ್ದಾಳಿ ನಡೆಸಿದ್ದಾರೆ.

    ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಸರ್ಕಾರ ಪತನಕ್ಕೆ ಕಾಂಗ್ರೆಸ್ ಕಾರಣವಲ್ಲ. ಚುನಾಯಿತ ಪ್ರತಿನಿಧಿಗಳನ್ನು ಕುಮಾರಸ್ವಾಮಿ ಸರಿಯಾಗಿ ನಡೆಸಿಕೊಂಡಿಲ್ಲ. ಸಿದ್ದರಾಮಯ್ಯ ಮೇಲೆ ಆರೋಪ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ನಾನೇ ಏನಾದ್ರೂ ಕೇಳಿದ್ರೆ ಕೆಲಸ ಆಗ್ತಾ ಇರಲಿಲ್ಲ. ನಿಮ್ಮ ಪಕ್ಷದ ಶಾಸಕರನ್ನೇ ಇಟ್ಟುಕೊಳ್ಳಲು ಆಗಲಿಲ್ಲ ಎಂದು ಹೆಚ್‍ಡಿಕೆ ವಿರುದ್ಧ ಕಿಡಿಕಾರಿದರು. ಇದನ್ನೂ ಓದಿ: ಸಿದ್ದರಾಮಯ್ಯ ಸಾಕಿರೋ ಗಿಣಿ ಅಲ್ಲ, ನನ್ನ ಬೆಳೆಸಿದ್ದು ರಾಮನಗರ ಜನ- ಸಿದ್ದುಗೆ ಹೆಚ್‍ಡಿಕೆ ತಿರುಗೇಟು

    ಇದೇ ವೇಳೆ ಹೆಚ್ ವಿಶ್ವನಾಥ್ ಮಾತನಾಡಿ, ಸಮ್ಮಿಶ್ರ ಸರ್ಕಾರ ಪತನಕ್ಕೆ ಇಬ್ಬರೂ ಕಾರಣ. ಸಿದ್ದರಾಮಯ್ಯ, ಹೆಚ್.ಡಿ ಕುಮಾರಸ್ವಾಮಿ ಇಬ್ಬರೂ ಸಮಬಲರು. ಕಾಂಗ್ರೆಸ್ ಶಾಸಕರನ್ನು ಸಿದ್ದರಾಮಯ್ಯ ಕೇಳಲಿಲ್ಲ. ಜೆಡಿಎಸ್ ಶಾಸಕರನ್ನು ಕುಮಾರಸ್ವಾಮಿ ಕೇಳಲಿಲ್ಲ. ಯಾರನ್ನೂ ಹೇಳದೆ ಕೇಳದೆ ಸರ್ಕಾರ ಮಾಡಿದ್ದೀರಿ. ಪಕ್ಷ ರಾಜಕಾರಣ ಇಲ್ಲದೆ ಇರುವುದರಿಂದ ಪಕ್ಷಾಂತರ ಕ್ಕೆ ಕಾರಣವಾಗುತ್ತದೆ. ಪಕ್ಷ ಕುಟುಂಬ, ವ್ಯಕ್ತಿ, ಒಂದು ಗುಂಪಿಗೆ ಸೀಮಿತವಾದರೆ ಪಕ್ಷಾಂತರ ಆಗುತ್ತದೆ ಎಂದು ತಿಳಿಸಿದ್ದಾರೆ.

    ಕಳೆದ ಗುರುವಾರದಿಂದ ಸಮ್ಮಿಶ್ರ ಸರ್ಕಾರ ಪತನಕ್ಕೆ ಯಾರು ಕಾರಣ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ನಡುವೆ ಟ್ವಿಟ್ಟರ್ ವಾರ್ ನಡೆದಿತ್ತು.

  • ಅನಾರೋಗ್ಯದ ನಡುವೆಯೂ ಬಂದು ಮತ ಹಾಕಿದ ಮಾಜಿ ಸಚಿವ

    ಅನಾರೋಗ್ಯದ ನಡುವೆಯೂ ಬಂದು ಮತ ಹಾಕಿದ ಮಾಜಿ ಸಚಿವ

    ಬೆಂಗಳೂರು: ಮಾಜಿ ಸಚಿವ ಎಚ್. ಎಂ ರೇವಣ್ಣ ಅವರು ಅನಾರೋಗ್ಯದ ನಡುವೆಯೂ ಬಂದು ಮತದಾನ ಮಾಡಿದ್ದಾರೆ.

    ಬೆನ್ನು ನೋವಿಗೆ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಸಚಿವ ಎಚ್. ಎಂ ರೇವಣ್ಣ ವಿಕ್ರಮ್ ಆಸ್ಪತ್ರೆಯಿಂದ ನೇರವಾಗಿ ಮತದಾನ ಕೇಂದ್ರಕ್ಕೆ ಆಗಮಿಸಿದ್ದಾರೆ. ರೇವಣ್ಣ ಅವರು ಮಹಾಲಕ್ಷ್ಮಿ ಲೇಔಟ್‍ನ 141 ಮತಗಟ್ಟೆ ಕೇಂದ್ರಕ್ಕೆ ಆಗಮಿಸಿ ಮತ ಚಲಾಯಿಸಿದ್ದಾರೆ.

    ಈ ವೇಳೆ ಮಾತನಾಡಿದ ಎಚ್. ಎಂ ರೇವಣ್ಣ, “ನಂಗೆ ಸ್ಪೈನಲ್ ಕಾರ್ಡ್ ತೊಂದರೆ ಇದೆ. ಎರಡು ತಿಂಗಳಿನಿಂದ ಚಿಕಿತ್ಸೆ ಪಡೆಯುತ್ತಿದ್ದೇನೆ. ಮತದಾನ ತಪ್ಪಿಸಿಕೊಳ್ಳಬಾರದು ಎನ್ನುವ ಕಾರಣಕ್ಕೆ ಚಿಕಿತ್ಸೆ ನಡುವೆ ಮತದಾನಕ್ಕೆ ಬಂದೆ. ಯಾರು ಕೂಡ ಮತದಾನ ಮಾಡೋದನ್ನು ತಪ್ಪಿಸಿಕೊಳ್ಳಬಾರದು. ನಾನು ಒಬ್ಬ ರಾಜಕೀಯ ವ್ಯಕ್ತಿಯಾಗಿ ವೋಟ್ ಮಾಡದೇ ಇದ್ದರೆ ತಪ್ಪಾಗುತ್ತೆ” ಎಂದರು.

    ನಗರದ ಜನಕ್ಕಿಂತ ಹಳ್ಳಿ ಜನರು ಹೆಚ್ಚಾಗಿ ವೋಟ್ ಮಾಡುತ್ತಿದ್ದಾರೆ. ನಗರದ ಜನರು ಹೆಚ್ಚು ವೋಟ್ ಮಾಡಿ ದೇಶದ ಅಭಿವೃದ್ಧಿಯಲ್ಲಿ ಭಾಗಿಯಾಗುವಂತೆ ಮಾಜಿ ಸಚಿವ ಎಚ್. ಎಂ ರೇವಣ್ಣ ಅವರು ಮತದಾರರಲ್ಲಿ ಮನವಿ ಮಾಡಿಕೊಂಡರು.