Tag: h d kumarswamy

  • ತೇಲಲೀಯದು ಗುಂಡು, ಮುಳುಗಲೀಯದು ಬೆಂಡು: ಅನರ್ಹರ ಕಾಲೆಳೆದ ಎಚ್‍ಡಿಕೆ

    ತೇಲಲೀಯದು ಗುಂಡು, ಮುಳುಗಲೀಯದು ಬೆಂಡು: ಅನರ್ಹರ ಕಾಲೆಳೆದ ಎಚ್‍ಡಿಕೆ

    ಬೆಂಗಳೂರು: ಮಾಜಿ ಸಿಎಂ ಕುಮಾರಸ್ವಾಮಿ ಅವರು ಬಸವಣ್ಣನವರ ವಚನದ ಮೂಲಕ ಅನರ್ಹ ಶಾಸಕರ ಪರಿಸ್ಥಿತಿಯ ಕುರಿತು ಲೇವಡಿ ಮಾಡಿದ್ದಾರೆ.

    ಟ್ವೀಟ್ ಮಾಡಿರುವ ಮಾಜಿ ಸಿಎಂ, ಕಾಲಲಿ ಕಟ್ಟಿದ ಗುಂಡು… ಕೊರಳಲಿ ಕಟ್ಟಿದ ಬೆಂಡು… ತೇಲಲೀಯದು ಗುಂಡು.. ಮುಳುಗಲೀಯದು ಬೆಂಡು… ಇಂತಪ್ಪ ಸಂಸಾರಶರಧಿಯ ದಾಂಟಿಸಿ ಕಾಲಾಂತಕನೆ ಕಾಯೋ ಕೂಡಲಸಂಗಮ. ಅರ್ಹತೆ ಕಳೆದುಕೊಂಡ ಶಾಸಕರ ಪಾಡು ನೋಡಿ ಹೇಳಬೇಕೆನಿಸಿದ್ದು ಎಂದು ವ್ಯಂಗ್ಯವಾಡಿದ್ದಾರೆ.

    ಸಂಸಾರದಲ್ಲಿ ವ್ಯಕ್ತಿಯ ಕರುಣಾಜನಕ ಸ್ಥಿತಿಯನ್ನು ವಿಶ್ವಗುರು ಬಸವಣ್ಣನವರು ತಮ್ಮ ವಚನದ ಮೂಲಕ ತಿಳಿಸಿದ್ದಾರೆ. ಈ ವಚವನ್ನು ಎಚ್.ಡಿ.ಕುಮಾರಸ್ವಾಮಿ ಅವರು ಅನರ್ಹ ಶಾಸಕರಿಗೆ ಹೋಲಿಕೆ ಮಾಡಿದ್ದಾರೆ. ಅನರ್ಹರ ಪರಿಸ್ಥಿತಿ ಹೇಗಾಗಿದೆ ಎಂದರೆ ಅತ್ತಲೂ ಇಲ್ಲ, ಇತ್ತಲೂ ಎಂದು ಗೇಲಿ ಮಾಡಿದ್ದಾರೆ.

    ಇದಕ್ಕೂ ಮುನ್ನ ನಗರದ ಜೆ.ಪಿ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ಮಾಜಿ ಸಿಎಂ, ಉಪ ಚುನಾವಣೆಗೆ ಸುಪ್ರೀಂಕೋರ್ಟ್ ತಡೆ ನೀಡಿರುವುದಕ್ಕೆ ಕೇಂದ್ರ ಸರ್ಕಾರ, ಬಿಜೆಪಿ ಹಾಗೂ ಚುನಾವಣಾ ಆಯೋಗದ ವಿರುದ್ಧ ಕಿಡಿಕಾರಿದ್ದರು. ಇತಿಹಾಸದಲ್ಲಿ ಮೊದಲ ಬಾರಿಗೆ ಚುನಾವಣೆ ಆಯೋಗ ಕೋರ್ಟ್ ಮುಂದೆ ಚುನಾವಣೆ ಮುಂದೂಡಬಹುದು ಎಂದು ಸ್ವಯಂಕೃತವಾಗಿ ಹೇಳಿದೆ. ಸಾಂವಿಧಾನಿಕ ಸಂಸ್ಥೆಯ ಈ ನಡವಳಿಕೆ ಸರಿಯಲ್ಲ. ಚುನಾವಣೆ ಆಯೋಗದ ಮೇಲೆ ಪ್ರಭಾವ ಬೀರಿದ್ದು ಯಾರು ಅನ್ನುವುದು ಯಕ್ಷ ಪ್ರಶ್ನೆಯಾಗಿದೆ. ಆದರೆ ಕೇಂದ್ರ ಸರ್ಕಾರ ಸಾಂವಿಧಾನಿಕ ಮತ್ತು ಸ್ವತಂತ್ರ ಸಂಸ್ಥೆಗಳನ್ನು ಕೈ ಗೊಂಬೆ ಮಾಡಿಕೊಂಡಿದೆ ಎಂದು ಹೇಳಿದ್ದರು.

    ನೆರೆ ಪರಿಹಾರ ತರಲು ಕೇಂದ್ರ ನಾಯಕರನ್ನು ಭೇಟಿ ಮಾಡಲು ಯಡಿಯೂರಪ್ಪನವರಿಗೆ ಸಮಯ ಇಲ್ಲ. ಆದರೆ ಚುನಾವಣೆ ಘೋಷಣೆಯಾದ ಕೂಡಲೇ ತರಾತುರಿಯಲ್ಲಿ ಯಡಿಯೂರಪ್ಪ ದೆಹಲಿಗೆ ಹೋದರು. ಅಲ್ಲಿ ಏನು ಚರ್ಚೆ ಆಗಿದೆ. ನೆರೆ ಪರಿಹಾರದ ಬಗ್ಗೆ ಚರ್ಚೆ ಆಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

  • ನಾಲಾಯಕ್ ಎಂದ ಸಚಿವ ಅನಂತ್ ಕುಮಾರ್ ಹೆಗ್ಡೆಗೆ ಹೆಚ್‍ಡಿಕೆ ತಿರುಗೇಟು

    ನಾಲಾಯಕ್ ಎಂದ ಸಚಿವ ಅನಂತ್ ಕುಮಾರ್ ಹೆಗ್ಡೆಗೆ ಹೆಚ್‍ಡಿಕೆ ತಿರುಗೇಟು

    ಕಲಬುರಗಿ: ನೀವು ಐದರಿಂದ ಆರು ಬಾರಿ ಸಂಸದರಾಗಿ ಆಯ್ಕೆಯಾಗಿದ್ದೀರಿ. ನಿಮ್ಮ ಕ್ಷೇತ್ರದಲ್ಲಿ ಏನು ಅಭಿವೃದ್ಧಿ ಮಾಡಿದ್ದೀರಿ ಅಂತ ಕೌಶಲ್ಯಾಭಿವೃದ್ಧಿ ಸಚಿವ ಅನಂತ್ ಕುಮಾರ್ ಹೆಗ್ಡೆಯವರನ್ನು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್‍ಡಿ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

    ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾಲಾಯಕ್ ಎಂಬ ಪದ ಬಳಸಿದ ಅನಂತ್ ಕುಮಾರ್ ಹೆಗಡೆಯವರೇ ನಿಮ್ಮ ಕ್ಷೇತ್ರದಲ್ಲಿ ಇರುವ ಕಾರ್ಖಾನೆ ಬಂದ್ ಆಗುತ್ತಿವೆ. ಹಾಗಾದ್ರೆ ನಿಮ್ಮನ್ನು ನೀವೇ ನಾಲಾಯಕ್ ಅಂತ ಹೇಳಿಕೊಂಡತ್ತಾಗುತ್ತೆ ಅಂತ ತಿರುಗೇಟು ನೀಡಿದ್ರು. ಅಲ್ಲದೇ ವಾಮಮಾರ್ಗದಿಂದ ಅನಂತಕುಮಾರ್ ಹೆಗ್ಡೆ ಪ್ರಚಾರ ಪಡೆಯುತ್ತಿದ್ದಾರೆ ಅಂದ್ರು.

    ರಾಯಚೂರಿನ ಇಬ್ಬರು ಜೆಡಿಎಸ್ ಶಾಸಕರ ರಾಜೀನಾಮೆ ವಿಚಾರ ಸಂಬಂಧ ಮಾತನಾಡಿದ ಅವರು, ಆ ಇಬ್ಬರು ಶಾಸಕರು ಎರಡು ದೋಣಿಯಲ್ಲಿ ಕಾಲಿಟ್ಟು ಎರಡು ವರ್ಷಗಳಾಗಿವೆ. ಅವರಿಬ್ಬರಿಂದಾಗಿ ಬಿಜೆಪಿಗೆ ಇದೀಗ ಆನೆ ಬಲ ಬಂದಿದೆ ಅಂತಾ ಬಿಎಸ್‍ವೈ ಹೇಳಿದ್ದಾರೆ. ಹಾಗಾದ್ರೆ ಇಷ್ಟು ದಿನ ಬಿಜೆಪಿಗೆ ಶಕ್ತಿಯಿರಲಿಲ್ಲ. ಆ ಇಬ್ಬರು ನಾಯಕರು ಶಾಸಕರಾದ ಬಳಿಕ ಪಕ್ಷದ ಜೊತೆಗಿಲ್ಲ. ಅವರು ಪಕ್ಷ ಬಿಟ್ಟರೂ ಜೆಡಿಎಸ್ ಗೆ ತೊಂದರೆಯಾಗಲ್ಲ. ಆ ಇಬ್ಬರು ನಾಯಕರಿಗಿಂತ ಸಮರ್ಥ ಅಭ್ಯರ್ಥಿಗಳು ನಮ್ಮಲ್ಲಿದ್ದಾರೆ. ಮಿಷನ್ 150 ಕನಸು ಕಾಣುವ ಬಿಜೆಪಿ ಬೇರೆ ಪಕ್ಷದ ಶಾಸಕರನ್ನು ಸೆಳೆಯುತ್ತಿದೆ ಅಂತ ಹೇಳಿದ್ರು. ಇದನ್ನೂ ಓದಿ: ಚುನಾವಣೆಗೂ ಮೊದಲೇ ಆಪರೇಷನ್ ಕಮಲ- ಜೆಡಿಎಸ್‍ಗೆ ಇಬ್ಬರು ಶಾಸಕರು ಗುಡ್ ಬೈ

    ಇದೇ ವೇಳೆ ಸಿಎಂ ಸಿದ್ದರಾಮಯ್ಯ ವಿರುದ್ಧ ಮಾತನಾಡಿದ ಹೆಚ್‍ಡಿಕೆ, ಬಿಎಸ್‍ವೈ ಚೆಕ್ ಮುಖಾಂತರ ಹಣ ಪಡೆದು ಫಜೀತಿಗೆ ಬಿದ್ದಿದ್ದಾರೆ. ಹೀಗಾಗಿ ಸಿಎಂ ಸಿದ್ದರಾಮಯ್ಯ ಚೆಕ್ ಮುಖಾಂತರ ಹಣ ಪಡೆಯಲ್ಲ. ರಾಮನ ಲೆಕ್ಕ-ಕೃಷ್ಣನ ಲೆಕ್ಕದಲ್ಲಿ ಹಣ ಪಡೆಯುತ್ತಾರೆ. ಅದಕ್ಕಾಗಿ ವಿಶೇಷ ವಿಮಾನ ಇಟ್ಟಿದ್ದಾರೆ. ಅದಕ್ಕಾಗಿ ಮೂರು ನಾಲ್ಕು ಸಚಿವರನ್ನು ಇಟ್ಟಿದ್ದಾರೆ. ಇದಕ್ಕೆ ನೀರಾವರಿ ಸಚಿವ ಎಂ.ಬಿ.ಪಾಟೀಲ್ ಅವರೇ ಉದಾಹರಣೆ. ನಾನು ಹಿಟ್ & ರನ್ ಮಾಡಲ್ಲ ಅಂತ ಹೇಳಿದ್ರು.

    ಇತ್ತೀಚೆಗೆ ಲಿಂಗಸುಗೂರು ಕ್ಷೇತ್ರದ ಮಾನಪ್ಪ ವಜ್ಜಲ್ ಹಾಗೂ ರಾಯಚೂರು ನಗರ ಕ್ಷೇತ್ರದ ಡಾ. ಶಿವರಾಜ್ ಪಾಟೀಲ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಪಕ್ಷ ಸೇರಿದ್ದರು.

  • ನಾಡಿನ ಜನರನ್ನ ಸಾಲಗಾರರನ್ನಾಗಿ ಮಾಡಿದ್ದೇ ಸಿಎಂ ಸಾಧನೆ: ಹೆಚ್‍ಡಿಕೆ

    ನಾಡಿನ ಜನರನ್ನ ಸಾಲಗಾರರನ್ನಾಗಿ ಮಾಡಿದ್ದೇ ಸಿಎಂ ಸಾಧನೆ: ಹೆಚ್‍ಡಿಕೆ

    ಚಿಕ್ಕಮಗಳೂರು: ಪ್ರತಿಕುಟುಂಬದ ಮೇಲೆ 50 ಸಾವಿರ ಹೊರೆ ನೀಡಿರೋದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯಕ್ಕೆ ನೀಡಿದ ಮಹಾನ್ ಕೊಡುಗೆಯಾಗಿದೆ ಅಂತ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

    ಚಿಕ್ಕಮಗಳೂರಿನ ಮುಗುಳವಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ನೀರಾವರಿ, ರಸ್ತೆ, ಹಣ ದೋಚಿದೆ. ಅಲ್ಲದೇ ನಾಡಿನ ಜನರನ್ನ ಸಾಲಗಾರನ್ನಾಗಿ ಮಾಡಿದೆ. ಒಟ್ಟಿನಲ್ಲಿ ಜಾಹಿರಾತು ಮೂಲಕ ನಡೆಯುತ್ತಿರುವ ಸರ್ಕಾರ ಅಂದ್ರೆ ಸಿದ್ದರಾಮಯ್ಯನವರ ಸರ್ಕಾರ ಅಂತ ಅವರು ಹೇಳಿದ್ದಾರೆ.

     

    ರಾಜ್ಯದಲ್ಲಿ ಅತೀ ಹೆಚ್ಚು ಹಾಲು ಉತ್ಪಾದನೆ ಅಗಲು ಹೆಚ್.ಡಿ.ರೇವಣ್ಣ ಕಾರಣ. ಸಿಎಂ ಸಾಲಮನ್ನಾ ಘೋಷಣೆ ಮಾಡಿ 4 ತಿಂಗಳ ಅಗಿದೆ ಎಷ್ಟು ಜನರಿಗೆ ಸಾಲಮನ್ನ ಮಾಡಲು ಹಣ ನೀಡಿದ್ದಾರೆ. ಸಿದ್ದರಾಮಯ್ಯ ಅವರ ಫೋಟೋ ಹಾಕಿ ಸಾಲ ಮನ್ನಾ ಮಾಡಿದ್ದೇವೆ ಎಂದು ಕರಪತ್ರ ಹಂಚುತ್ತಿದ್ದಾರೆ ಅಂತ ಅಂದ್ರು.

    ಇದನ್ನೂ ಓದಿ: ಗ್ರಾಮ ವಾಸ್ತವ್ಯಕ್ಕೆ ಹೊಸ ಟಚ್ ಕೊಟ್ಟ ಜೆಡಿಎಸ್

    ಗ್ರಾಮ ವಾಸ್ತವ್ಯದ ಮೂಲಕ ಜನರ ಸಮಸ್ಯೆಯನ್ನ ಆಲಿಸಿ ಪ್ರಣಾಳಿಕೆಯಲ್ಲಿ ನೀಡುವ ಉದ್ದೇಶದಿಂದ ನೀಡಲಾಗುತ್ತಿದೆ. ಜೆಡಿಎಸ್ ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ. ಹಾಲಿ ಶಾಸಕರಿಗೆ ಟಿಕೆಟ್ ನೀಡಲಾಗುವುದು ಅಂತ ಹೇಳಿದ್ರು.

    ಇದನ್ನೂ ಓದಿ: ಹೆಚ್‍ಡಿಕೆ ಚುನಾವಣಾ ಪ್ರಚಾರಕ್ಕೆ 1 ಕೋಟಿ ರೂ. ವೆಚ್ಚದಲ್ಲಿ ಹೈಟೆಕ್ ಬಸ್: ಒಳಗಡೆ ಏನೆಲ್ಲಾ ಇದೆ ಗೊತ್ತಾ!

    ಎರಡು ರಾಷ್ಟ್ರೀಯ ಪಕ್ಷಗಳು ದ್ವೇಷದ ರಾಜಕಾರಣ ಮಾಡುತ್ತಿದ್ದು, ಲೂಟಿಕಾರರ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ. ಜಯಂತಿಗಳನ್ನ ನಡೆಸಿ ಸಮುದಾಯದ ಜನರನ್ನ ತೃಪ್ತಿಪಡಿಸಲು ಮುಂದಾಗಿವೆ. ಇದನ್ನ ಬಿಟ್ಟು ಸಮುದಾಯದ ಅಭಿವೃದ್ಧಿಗೆ ಪ್ರಾಮಾಣಿಕ ಕೆಲಸ ಮಾಡಲಿ ಎಂದು ಹೆಚ್‍ಡಿಕೆ ಸಲಹೆ ನೀಡಿದರು.

    ಇದನ್ನೂ ಓದಿ: ನಾಳೆ ಕರ್ನಾಟಕ ವಿಕಾಸ ವಾಹಿನಿ ಯಾತ್ರೆಗೆ ಚಾಲನೆ- ಮತ್ತೆ ಗ್ರಾಮ ವಾಸ್ತವ್ಯ ಮಾಡಲಿದ್ದಾರೆ ಹೆಚ್‍ಡಿಕೆ