Tag: H D Kumarasway

  • ಆ ಜಮೀನು ಸಿದ್ದರಾಮಯ್ಯ ಪಿತ್ರಾರ್ಜಿತ ಆಸ್ತಿನಾ? – ಸಿಎಂ ವಿರುದ್ಧ ಹೆಚ್‌ಡಿಕೆ ವಾಗ್ದಾಳಿ

    ಆ ಜಮೀನು ಸಿದ್ದರಾಮಯ್ಯ ಪಿತ್ರಾರ್ಜಿತ ಆಸ್ತಿನಾ? – ಸಿಎಂ ವಿರುದ್ಧ ಹೆಚ್‌ಡಿಕೆ ವಾಗ್ದಾಳಿ

    ಬೆಂಗಳೂರು: ಸಿಎಂ ಸಿದ್ದರಾಮಯ್ಯ (Siddaramaiah) 14 ಮುಡಾ ಸೈಟ್‌ಗಳನ್ನ ಜಲದರ್ಶಿನಿ ಗೆಸ್ಟ್ ಹೌಸ್‌ನಲ್ಲಿ ಸಬ್ ರಿಜಿಸ್ಟರ್ ಕರೆದುಕೊಂಡು ಬಂದು ಒಂದೇ ದಿನದಲ್ಲಿ ಸಿದ್ದರಾಮಯ್ಯ ಪತ್ನಿ ಹೆಸರಿಗೆ ರಿಜಿಸ್ಟರ್ ಮಾಡಿಸಿದ್ದಾರೆ ಎಂದು ಕೇಂದ್ರ ಸಚಿವ‌ ಹೆಚ್‌.ಡಿ.ಕುಮಾರಸ್ವಾಮಿ (H.D.Kumaraswamy) ಆರೋಪ ಮಾಡಿದರು.

    ಜೆಪಿ‌ ಭವನದಲ್ಲಿ ಸುದ್ದಿಗೋಷ್ಠಿ ‌ನಡೆಸಿದ ಕುಮಾರಸ್ವಾಮಿ, ಮುಡಾ ಕೇಸ್‌ನಲ್ಲಿ ಸಿಎಂಗೆ 62 ಕೋಟಿ ಕೊಡಬೇಕಂತೆ. ಯಾರಪ್ಪನ ಆಸ್ತಿ ಅಂತಾ ಕೊಡಬೇಕು ಸಿಎಂ ಅವರೇ? ಆ ಜಮೀನು ಸಿದ್ದರಾಮಯ್ಯ ಪಿತ್ರಾರ್ಜಿತ ಆಸ್ತಿನಾ, ಸಿದ್ದರಾಮಯ್ಯ ಹೆಂಡತಿ ತಮ್ಮನ ಪಿತ್ರಾರ್ಜಿತ ಆಸ್ತಿನಾ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ದೇವೇಗೌಡರ ಕುಟುಂಬದಲ್ಲಿ ಉಳಿದವನು ನಿಖಿಲ್ ಅಂತಾ ಅರೆಸ್ಟ್ ಮಾಡೋಕೆ ಪ್ಲ್ಯಾನ್‌ ಮಾಡಿದ್ರು: ಹೆಚ್‌ಡಿಕೆ‌ ಕಿಡಿ

    ಮುಡಾ ಅಕ್ರಮದ ಕುರಿತು ದಾಖಲಾತಿ ತೋರಿಸಿ ಅಕ್ರಮದ ಬಗ್ಗೆ ಕಿಡಿಕಾರಿದರು. ಮುಡಾ ಪ್ಲ್ಯಾನ್ ಆಗಿದ್ದು ಯಾವಾಗ? ಭೂಮಿ ಖರೀದಿ ಮಾಡಿದ್ದು ಯಾವಾಗ? ಯಾವ ಯಾವ ವರ್ಷದಲ್ಲಿ ಏನೆಲ್ಲ ಆಯ್ತು ಅಂತಾ ದಾಖಲಾತಿ ಸಮೇತ ಬಿಚ್ಚಿಟ್ಟರು.

    ಸಿದ್ದರಾಮಯ್ಯ ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು ಈ ಅಕ್ರಮ‌ ಎಸಗಿದ್ದಾರೆ. ಈಗ ತಮ್ಮ ಮೇಲೆ ಆರೋಪ ಬಂದಿರೋದಕ್ಕೆ ನಾನು ಹಿಂದುಳಿದ ವರ್ಗದವನು ನಾನು ಸಿಎಂ ಆಗಿದ್ದು ವಿಪಕ್ಷಗಳಿಗೆ ತಡೆಯೋಕೆ ಆಗದೇ ಆರೋಪ ಮಾಡ್ತಿದ್ದಾರೆ ಅಂತ ಹೇಳ್ತಾರೆ. ಹಿಂದುಳಿದವರಿಗೆ ಇವರು ಏನು ಮಾಡಿಲ್ಲ ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ‌ನಡೆಸಿದರು. ಇದನ್ನೂ ಓದಿ: ಮಾಜಿ ಸಚಿವ ನಾಗೇಂದ್ರ 6 ದಿನ ಇ.ಡಿ ಕಸ್ಟಡಿಗೆ

    ಇದು ಸಿಎಂ ಕುಟುಂಬದಲ್ಲಿ ನಡೆದಿರೋ ಹಗರಣ, ಇದರಲ್ಲಿ ಸಿದ್ದರಾಮಯ್ಯ ತಮ್ಮ ಅಧಿಕಾರ ದುರ್ಬಳಕೆ ಮಾಡಿದ್ದಾರೆ. ಈಗ ಕೇಸ್ ಮುಚ್ಚಿ ಹಾಕೋ ಪ್ರಯತ್ನ ಮಾಡ್ತಿದ್ದಾರೆ ಅಂತ ಆರೋಪ ಮಾಡಿದ್ರು. ಎಷ್ಟೇ ದಾಖಲಾತಿ ಬಿಡುಗಡೆ ಮಾಡಿದ್ರು ಇವರು ಏನು ಮಾಡೊಲ್ಲ. ಹೀಗಾಗಿ ರಾಜ್ಯದ ಗೌರವಾನ್ವಿತ ಯಾರಾದರೂ ವಕೀಲರು ರಾಜ್ಯಪಾಲರಿಂದ ಸಿಎಂ ವಿರುದ್ಧ ತನಿಖೆಗೆ ಅನುಮತಿ ಪಡೆದು ಈ ಹಗರಣವನ್ನ ಕೋರ್ಟ್ ಮೂಲಕವೇ ಬಯಲಿಗೆ ಎಳೆಯಬೇಕು ಎಂದು ಮನವಿ ಮಾಡಿದರು.

  • ತಮಿಳುನಾಡು ಮಾತು ಕೇಳಿ ಮೇಕೆದಾಟು ಯೋಜನೆಗೆ ಅನುಮತಿ ವಿಳಂಬ ಮಾಡಲಾಗುತ್ತಿದೆಯೇ?- ಕೇಂದ್ರಕ್ಕೆ ಹೆಚ್‍ಡಿಕೆ ಪ್ರಶ್ನೆ

    ತಮಿಳುನಾಡು ಮಾತು ಕೇಳಿ ಮೇಕೆದಾಟು ಯೋಜನೆಗೆ ಅನುಮತಿ ವಿಳಂಬ ಮಾಡಲಾಗುತ್ತಿದೆಯೇ?- ಕೇಂದ್ರಕ್ಕೆ ಹೆಚ್‍ಡಿಕೆ ಪ್ರಶ್ನೆ

    ಬೆಂಗಳೂರು: ಮೇಕೆದಾಟು ಯೋಜನೆಗೆ ಅನುಮತಿ ಕೊಡಲು ವಿಳಂಬ ನೀತಿ ಅನುಸರಿಸುತ್ತಿರೋ ಕೇಂದ್ರ ಸರ್ಕಾರದ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ಆಕ್ರೋಶ ಹೊರ ಹಾಕಿದ್ದಾರೆ. ಸರಣಿ ಟ್ವೀಟ್ ಮಾಡಿ ಕೇಂದ್ರದ ವಿರುದ್ದ ಆಕ್ರೋಶ ಹೊರ ಹಾಕಿರುವ ಅವರು, ತಮಿಳುನಾಡು ಮಾತು ಕೇಳಿ ಅನುಮತಿ ವಿಳಂಬ ಮಾಡಲಾಗುತ್ತಿದೆಯೇ? ಎಂದು ಪ್ರಶ್ನೆ ಮಾಡಿದ್ದಾರೆ.

    ಮೇಕೆದಾಟು ಡ್ಯಾಂಗೆ ಅನುಮತಿ ನೀಡಬಾರದೆಂದು ಕೇಂದ್ರ ಸರ್ಕಾರವನ್ನು ಆಗ್ರಹಿಸಿರುವ ತಮಿಳುನಾಡು ಮಾಜಿ ಸಿಎಂ ಪಳನಿಸ್ವಾಮಿ ಯೋಜನೆ ತಡೆಯಲು ಪ್ರಧಾನಿ ಮೇಲೆ ಒತ್ತಡ ಹೇರುತ್ತಾ ಬಂದಿದ್ದಾಗಿ ಹೇಳಿದ್ದಾರೆ. ಕೇಂದ್ರವು ತಮಿಳುನಾಡಿನ ಒತ್ತಡಕ್ಕೆ ಮಣಿದು ಅನುಮತಿ ಮುಂದೂಡತ್ತಾ ಬಂದಿದ್ದೇ ಆದರೆ ಅದು ಕನ್ನಡಿಗರಿಗೆ ಬಗೆದ ದ್ರೋಹ. ಮೇಕೆದಾಟು ಯೋಜನೆ ಜಾರಿಗೆ ತಂದು ನನ್ನ ಸರ್ಕಾರ ಧೈರ್ಯ ಪ್ರದರ್ಶಿಸಿತ್ತು. ಪರಿಸರ ಅನುಮತಿ ಕೋರಿ ಕೇಂದ್ರಕ್ಕೆ ಮನವಿ ಸಲ್ಲಿಸಲಾಗಿತ್ತು. ಆದರೆ, ಈ ವರೆಗೆ ಅನುಮತಿ ಸಿಕ್ಕಿಲ್ಲ. ಇತ್ತ ಯೋಜನೆ ವಿರುದ್ಧ ಅರ್ಜಿಗಳು ಸಲ್ಲಿಕೆಯಾಗುತ್ತಾ ಬಂದವು. ಇದೆಲ್ಲ ಗಮನಿಸಿದರೆ ಯೋಜನೆ ತಡೆಯಲು ತಮಿಳುನಾಡು-ಕೇಂದ್ರ ಷಡ್ಯಂತ್ರ ಹೆಣೆದ ಅನುಮಾನ ಮೂಡುತ್ತಿದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

    ಮೇಕೆದಾಟು ಯೋಜನೆ ವಿರುದ್ಧ ತಮಿಳುನಾಡು ಒತ್ತಡ ಹೇರಿತ್ತೇ? ಅದರ ಮಾತು ಕೇಳಿ ಅನುಮತಿ ವಿಳಂಬ ಮಾಡಲಾಯಿತೇ? ಈ ಬಗ್ಗೆ ಪ್ರಧಾನಿ ಸ್ಪಷ್ಟನೆ ನೀಡಬೇಕು. ಇಲ್ಲವೇ ರಾಜ್ಯದಿಂದ ಆಯ್ಕೆಯಾಗಿ ಹೋಗಿರುವ ‘ಭಾಷಾ ದುರಭಿಮಾನಿ ಬಿಜೆಪಿ ಸಂಸದರು’ ಪ್ರಶ್ನೆ ಮಾಡಿ ಉತ್ತರ ಪಡೆದುಕೊಂಡು ಬರಬೇಕು. ಇಲ್ಲವೇ ಬಾಕಿ ಇರುವ ಪರಿಸರ ಅನುಮತಿಯನ್ನು ಶೀಘ್ರ ನೀಡಬೇಕು ಎಂದು ಕುಮಾರಸ್ವಾಮಿ ಆಗ್ರಹಿಸಿದ್ದಾರೆ.