– ಎ ಖಾತಾ, ಬಿ ಖಾತಾ ಅಂತ ಸರ್ಕಾರ ಹಗಲು ದರೋಡೆ ಮಾಡ್ತಿದೆ ಅಂತ ಆರೋಪ
ಬೆಂಗಳೂರು: ಬೆಂಗಳೂರಿಗರಿಗೆ ದೀಪಾವಳಿ ಉಡುಗೊರೆ ಅಂತ ಜನರಿಗೆ ಬಿ ಖಾತೆ, ಎ ಖಾತೆ ಅಂತ ಸರ್ಕಾರ ಹಗಲು ದರೋಡೆ ಮಾಡ್ತಿದೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy), ಸರ್ಕಾರದ ವಿರುದ್ಧ ವಾಗ್ದಾಳಿ ನಡೆದಿದ್ದಾರೆ.
ಬಿ ಖಾತೆಯಿಂದ ಎ ಖಾತೆ ಮಾಡಿಕೊಡುವ ಸರ್ಕಾರದ ಸ್ಕೀಂ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಅವರು, ಇದು ಲೂಟಿ ಹೊಡೆಯುವ ಯೋಜನೆ ಅಂತ ವಾಗ್ದಾಳಿ ನಡೆಸಿದರು. ಬಿ ಖಾತೆಯಿಂದ ಎ ಖಾತಾ ಮಾಡಿಸೋದು ಜನರಿಗೆ ಟೋಪಿ ಹಾಕೋ ಕೆಲಸ. ಇದರಲ್ಲಿ ದುಡ್ಡು ಮಾಡೋ ಪ್ಲ್ಯಾನ್ ಇದೆ. 2007 ರಲ್ಲಿ ನಮ್ಮ ಸರ್ಕಾರ ಇದ್ದಾಗ ಖಾತಾ ಬದಲಾವಣೆಗೆ ಆದೇಶ ಆಗಿತ್ತು. ಅನೇಕ ಕೋರ್ಟ್‌ಗಳು ಇದರ ಬಗ್ಗೆ ಆದೇಶ ಮಾಡಿವೆ. ಈಗ ಈ ಸರ್ಕಾರದವರು ಲೂಟಿ ಮಾಡಲು ಬಿ ಖಾತೆ, ಎ ಖಾತೆ ಅಂತ ಶುರು ಮಾಡಿದ್ದಾರೆ ಎಂದು ಆರೋಪಿಸಿದರು. ಇದನ್ನೂ ಓದಿ: ಬಿ ಖಾತಾದಿಂದ ಎ ಖಾತಾ ಪರಿವರ್ತನೆಗೆ ಅರ್ಜಿ ಆಹ್ವಾನ – ಬೆಂಗಳೂರಿನಲ್ಲಿ 500ಕ್ಕೂ ಹೆಚ್ಚು ಮಂದಿಯಿಂದ ಅರ್ಜಿ
1997 ರಲ್ಲಿ 30×40 ಸೈಟ್ ಖಾತೆ ಮಾಡಿಸಿಕೊಳ್ಳಲು 12,263 ರೂ. ಇತ್ತು. ಈಗ ಅದರಲ್ಲೇ ಲಕ್ಷಾಂತರ ರೂಪಾಯಿ ಲೂಟಿ ಮಾಡೋಕೆ ಸರ್ಕಾರ ಮುಂದಾಗಿದೆ. 2007 ರಲ್ಲಿ ನನ್ನ ಸರ್ಕಾರ ಇದ್ದಾಗಲೇ ಖಾತೆ ಮಾಡಿಕೊಡುವ ನಿರ್ಧಾರ ಆಗಿದೆ. ಆಗಲೇ ಹಣವನ್ನ ಬಿಬಿಎಂಪಿ ಖಾತೆ ಮಾಡಿಕೊಡಲು ಹಣ ಪಡೆದಿದೆ ಎಂದು ತಿಳಿಸಿದರು.
ಜನರನ್ನ ಹಗಲು ದರೋಡೆ ಮಾಡಲು ಈ ಸರ್ಕಾರ ಮುಂದಾಗಿದೆ. ಎ ಖಾತಾ ಬಿ ಖಾತಾ ಅಂತ ಎಲ್ಲೂ ಇಲ್ಲ. ಈಗ ಓಸಿ, ಸಿಸಿ ಅಂತ ಮತ್ತೊಂದು ಸ್ಕೀಂ ಮಾಡೋಕೆ ಹೊರಟಿದ್ದಾರೆ. ಇವರ ಪ್ರಾರಂಭ 30×40 ಸೈಟ್‌ಗೆ ಖಾತೆ ಮಾಡಿಸಲು ಲಕ್ಷಾಂತರ ರೂಪಾಯಿ ಖರ್ಚು ಮಾಡಬೇಕು. ಬಡವರ ಎಲ್ಲಿ ಇದನ್ನ ಕಟ್ಟೋಕೆ ಆಗುತ್ತದೆ. ಈ ಸರ್ಕಾರದ ಖಜಾನೆಯಲ್ಲಿ ದುಡ್ಡಿಲ್ಲ. ಲೂಟಿ ಮಾಡೋಕೆ ಬಿ ಖಾತಾ, ಎ ಖಾತಾ ಸ್ಕೀಂ ತಂದಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ದೀಪಾವಳಿ ಕೊಡುಗೆ ನೆಪದಲ್ಲಿ ಜನಕ್ಕೆ ದೋಖಾ, ಎ-ಖಾತಾ ಸೋಗಿನಲ್ಲಿ 15,000 ಕೋಟಿ ಸುಲಿಗೆ: ಹೆಚ್‌ಡಿಕೆ ಬಾಂಬ್
ಬೆಂಗಳೂರು ಮತ್ತು ನಾಡಿನ ಜನರು ಎರಡು ವರ್ಷ ತಡೆಯಿರಿ. ಯಾರು ಹಣ ಕೊಟ್ಟು ಖಾತೆ ಮಾಡಿಸಿಕೊಳ್ಳಬೇಕು ಅಂತಿದ್ದೀರೋ, ಎರಡು ವರ್ಷ ಆದ ಮೇಲೆ ನಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಆಗ ಹಿಂದೆ ಇದ್ದ ಸಿಸ್ಟಮ್‌ನಲ್ಲಿ ಸರಳವಾಗಿ ಖಾತೆ ಮಾಡಿಸಿ ಕೊಡುವ ಕೆಲಸ ಮಾಡ್ತೀವಿ. ಕಡಿಮೆ ದರದಲ್ಲಿ ಖಾತೆ ಮಾಡಿಸಿ ಕೊಡುವ ಕೆಲಸ ಮಾಡ್ತೀವಿ. ಎರಡು ವರ್ಷ ಯಾರು ಇವರ ಮಾತಿಗೆ ಮರುಳಾಗಬೇಡಿ. ನಿಮ್ಮನ್ನ ಉಳಿಸುವ ಕೆಲಸ ಮಾಡ್ತೀವಿ ಎಂದು ಜನತೆಗೆ ಕರೆ ಕೊಟ್ಟರು.
ಸರ್ಕಾರದಿಂದ ಸಂಘದ ಚಟುವಟಿಕೆಗಳಿಗೆ ನಿರ್ಬಂಧ ಪ್ರಯತ್ನಗಳು ನಡೆಯುತ್ತಿವೆ. ಈ ಸರ್ಕಾರ ಹಲವು ಸಮಸ್ಯೆ ಇದ್ರೂ ಬಗೆಹರಿಸ್ತಿಲ್ಲ. ಆರ್‌ಎಸ್‌ಎಸ್ ಬಗ್ಗೆ ಚರ್ಚೆ ಮಾಡ್ತಿದೆ. ಇದರಿಂದ ಜನತೆಗೇನು ಉಪಯೋಗ? ಆರ್‌ಎಸ್‌ಎಸ್ ಪಥಸಂಚಲನದಿಂದ ರಾಜ್ಯದಲ್ಲಿ ಎಲ್ಲೂ ಸಮಸ್ಯೆ ಆಗಿಲ್ಲ, ಅಶಾಂತಿ ಮೂಡಿಲ್ಲ. ಅವರು ಮೊದಲಿಂದಲೂ ಪಥಸಂಚಲನ ಮಾಡ್ಕೊಂಡು ಬರ್ತಿದ್ದಾರೆ. ಇವರು ಈಗ ಅದಕ್ಕೆ ಮಹತ್ವ ಕೊಡ್ತಿದ್ದಾರೆ. ಆಕಾಶದಲ್ಲಿ ಹಾರಾಡ್ಕೊಂಡಿದ್ರೆ ಜನತೆ ಕಷ್ಟ ಕಾಣ್ಸಲ್ಲ, ನೆಲಕ್ಕೆ ಇಳೀರಿ ಜನರ ಕಷ್ಟ ಗೊತ್ತಾಗುತ್ತೆ ಅಂತ ಕಿಡಿಕಾರಿದರು.
ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಪತ್ನಿ ಜೊತೆ ದೆಹಲಿಯಲ್ಲಿ ಕಾಂತಾರ ಚಾಪ್ಟರ್ 1 ಸಿನಿಮಾ ವೀಕ್ಷಿಸಿದ್ದಾರೆ.
ಬಿಡುಗಡೆಯಾದ ಎಲ್ಲಾ ಕಡೆ ಕಾಂತಾರ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಇದೀಗ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರು ಪತ್ನಿ ಅನಿತಾ ಕುಮಾರಸ್ವಾಮಿ ಅವರ ಜೊತೆಗೆ ಸಿನಿಮಾ ವೀಕ್ಷಿಸಿದ್ದಾರೆ. ಚಿತ್ರ ವೀಕ್ಷಣೆ ನಂತರ ‘ಕಾಂತಾರ’ ಚಿತ್ರವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
‘ಕನ್ನಡ ಅಸ್ಮಿತೆಯ ಸಮೃದ್ಧ ವೈಭವೀಕರಣ. ಮನ ಮಿಡಿಯುವ ಅಂತಃಕರಣದ ನಿಜ ಹೂರಣ. ತುಳುನಾಡ ಸಾಂಸ್ಕೃತಿಕ ಮತ್ತು ದೈವತ್ವದ ಪರಂಪರೆಯ ವಿರಾಟ್ ಅನಾವರಣ. ಈ ಚಿತ್ರ ಪದಗಳಿಗೂ ಮೀರಿದ ಸೃಜನಶೀಲ ಸೃಷ್ಟಿ. ನಿರ್ಮಾಪಕ ವಿಜಯ್ ಕಿರಗಂದೂರ್, ನಿರ್ದೇಶಕ & ನಟ ರಿಷಬ್ ಶೆಟ್ಟಿ ಹಾಗೂ ಮತ್ತವರ ತಂಡದ ಪ್ರಯತ್ನಕ್ಕೆ ಹೃದಯಪೂರ್ವಕ ಅಭಿನಂದನೆಗಳು. ನಿಮ್ಮಿಂದ ಇನ್ನಷ್ಟು ಅತ್ಯುತ್ತಮ ಚಿತ್ರಗಳು ಮೂಡಿಬರಲಿ ಎಂದು ಹೆಚ್.ಡಿ ಕುಮಾರಸ್ವಾಮಿ ಅವರು ಕಾಂತಾರ ಚಿತ್ರವನ್ನ ಹೊಗಳಿದ್ದಾರೆ.
– ವ್ಯವಸ್ಥೆಯಲ್ಲಿ ನೀವು ಮಾಡಿದ ಕರ್ಮ ತೊಳೆಯಲು ಸಾಧ್ಯವಿಲ್ಲ: ಸರ್ಕಾರದ ವಿರುದ್ಧ ಗುಡುಗು – ಕೇಂದ್ರ ಸರ್ಕಾರದ ಜೊತೆಗೆ ಘರ್ಷಣೆಗೆ ಹೋಗಬೇಡಿ: ಸಿಎಂ ಸಿದ್ದರಾಮಯ್ಯಗೆ ಸಲಹೆ
ಬೆಂಗಳೂರು: ಉತ್ತರ ಕರ್ನಾಟಕದಲ್ಲಿ ಪ್ರವಾಹ ಪರಿಸ್ಥಿತಿಗೆ ರಾಜ್ಯ ಸರ್ಕಾರ ಸರಿಯಾಗಿ ಸ್ಪಂದಿಸಬೇಕು ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ಆಗ್ರಹಿಸಿದ್ದಾರೆ. ಸಿಎಂ ಮನೆಯಲ್ಲಿ ಕೂತು ಡಿಸಿಗಳಿಗೆ ಹೇಳಿದ್ರೆ ಕೆಲಸ ಮಾಡ್ತಾರಾ ಎಂದು ಸಿದ್ದರಾಮಯ್ಯ (Siddaramaiah) ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಹೆಚ್‌ಡಿಕೆ ಮಾತನಾಡಿ, ರಾಜ್ಯ ಸರ್ಕಾರದ ಆಡಳಿತ ಲೋಪಗಳ ಬಗ್ಗೆ ಚರ್ಚೆ ಮಾಡಲು ಸುದ್ದಿಗೋಷ್ಠಿ ಕರೆದಿದ್ದೇನೆ. ಉತ್ತರ ಭಾರತದಲ್ಲಿ ಪ್ರವಾಹ ಪರಿಸ್ಥಿತಿ ನೋಡಿದ್ದೀರಿ. ಈ ವರ್ಷ ರಾಜ್ಯದಲ್ಲಿ ಉತ್ತಮ ಮಳೆ ಪ್ರಾರಂಭವಾಯ್ತು. ಹಲವಾರು ಜಲಾಶಯಗಳು ನಿರೀಕ್ಷೆಗೂ ಮೀರಿ ತುಂಬಿವೆ. ರೈತರು ಸೇರಿ ಎಲ್ಲರೂ ಸಂತೋಷದಲ್ಲಿದ್ದರು. ಕೃಷಿ ಚಟುವಟಿಕೆಗಳು ಆರಂಭವಾಗಿದ್ದವು, ಉತ್ತಮ ಬೆಳೆ ನಿರೀಕ್ಷೆ ಇತ್ತು. ಈಗ ರಾಜ್ಯದ ವಿವಿಧ ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಉಡುಪಿ, ಕಾರವಾರ, ಚಿಕ್ಕಮಗಳೂರು ಕಡೆ ಮೊದಲು ಪ್ರವಾಹ ಆಯ್ತು. ಈಗ ಹೈದ್ರಾಬಾದ್, ಮುಂಬೈ ಕರ್ನಾಟಕದಲ್ಲಿ ನಿರೀಕ್ಷೆ ಮೀರಿ ಮಳೆಯಾಗುತ್ತಿದೆ. ಹಲವಾರು ಹಳ್ಳಿಗಳು ಜಲಾವೃತವಾಗಿವೆ. ಆರು ಜಿಲ್ಲೆಗಳ ಅಧಿಕಾರಿಗಳ ಜೊತೆಗೆ ಪರಿಸ್ಥಿತಿ ಚರ್ಚೆ ಮಾಡಿದ್ದೇನೆ. ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆದಿದ್ದೇನೆ. ಪ್ರತಿ ಜಿಲ್ಲೆಯಲ್ಲಿ ಒಂದು ಲಕ್ಷಕ್ಕೂ ಅಧಿಕ ಹೆಕ್ಟೇರ್ ಬೆಳೆ ನಾಶವಾಗಿದೆ. ಭತ್ತ, ಹತ್ತಿ, ತೊಗರಿ ಬೆಳೆ ನಾಶವಾಗಿದೆ. ರೈತ ಚೇತರಿಸಿಕೊಳ್ಳಲು ಆಗುವುದಿಲ್ಲ. ಕಲ್ಯಾಣ ಕರ್ನಾಟಕದ ರೈತರು ನೋವಿನಲ್ಲಿದ್ದಾರೆ. ಮನೆಗಳಿಗೂ ಸಾಕಷ್ಟು ಹಾನಿಯಾಗಿದೆ, 12 ಗೋ ಶಾಲೆಗಳು ಮುಳುಗಿ ಹೋಗಿವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ನಿಲ್ಲದ ವರುಣಾರ್ಭಟ – ನಿರಂತರ ಮಳೆಗೆ ಕಲ್ಯಾಣ ಕರ್ನಾಟಕ ತತ್ತರ
ಮಂತ್ರಿಗಳು ಕಾಟಾಚಾರಕ್ಕೆ ಹೋಗಿದ್ದಾರೋ ಬಿಟ್ಟಿದ್ದಾರೋ ನಾನು ಅದನ್ನು ಮಾತನಾಡುವುದಿಲ್ಲ. 36 ಜನರು ಮಂತ್ರಿಗಳಿದ್ದಾರೆ, ಎಲ್ಲೆಲ್ಲಿ ಭೇಟಿ ಕೊಟ್ಟಿದ್ದಾರೆ. ಸಿಎಂ ಬೆಂಗಳೂರಿನಲ್ಲಿ ಕೂತು ಡಿಸಿಗಳಿಗೆ ನಿರ್ದೇಶನ ನೀಡಿದ್ರೆ ಅವರು ಕೆಲಸ ಮಾಡ್ತಾರ? ಚಿಕ್ಕಮಗಳೂರು ಭಾಗದಲ್ಲಿ ಅಡಿಕೆ ನಾಶ ಆಯ್ತು, ಮನೆ ಕುಸಿದವು. ಪ್ರಾಣ ಹೋದ ವ್ಯಕ್ತಿಗೆ ಪರಿಹಾರ ಕೊಟ್ಟಿದ್ದು ಬಿಟ್ಟು ಉಳಿದವರಿಗೆ ಸರ್ಕಾರ ಏನು ನೆರವು ನೀಡಿದೆ ಎಂದು ಪ್ರಶ್ನಿಸಿದ್ದಾರೆ.
ಯುದ್ದೋಪಾದಿಯಲ್ಲಿ ಪರಿಹಾರ ಕಾರ್ಯಕ್ರಮ ಆಗಬೇಕಿತ್ತು. ಸಮೀಕ್ಷೆ ಪೂರ್ಣಗೊಂಡಿಲ್ಲ, ರೈತರಿಗೆ ಬೆಳೆ ನಾಶದ ಮಾಹಿತಿ ಕೇಳುತ್ತಿದ್ದಾರಂತೆ. ಕೆಲವು ರೈತರು ನನಗೆ ದೂರವಾಣಿ ಮೂಲಕ ಹೇಳುತ್ತಿದ್ದಾರೆ. ನನಗೆ ಆರೋಗ್ಯದ ಸಮಸ್ಯೆ ಇಲ್ಲದಿದ್ದರೆ ಅಲ್ಲೇ ಒಂದು ವಾರ ಕ್ಯಾಂಪ್ ಮಾಡುವೆ. ನಾನು ಆಕಸ್ಮಿಕವಾಗಿ ಮುಖ್ಯಮಂತ್ರಿಯಾಗಿದ್ದಾಗ ಇಂತಹ ಸನ್ನಿವೇಶದಲ್ಲ ಹೇಗೆ ನಿರ್ವಹಿಸಬೇಕು ಕಲಿತಿದ್ದೇನೆ. ಹಿಂದೆ ಸಿಎಂ ಆಗಿದ್ದಾಗ ಪರಿಹಾರ ಕೊಟ್ಟು, ಮನೆಗೆ ಕಟ್ಟಿಸಿಕೊಟ್ಟೆ, ಮನೆ ಕಟ್ಟುವವರೆಗೂ ಬಾಡಿಗೆ ನೀಡಿದೆ. ನಾವು ಈಗ ಮಾತನಾಡಿದರೆ ನೀವು ಏನ್ ಮಾಡಿದ್ರಿ ಅಂತಾ ಕೇಳ್ತಾರೆ. ನೀವು ಪದೇ ಪದೇ ಕೇಂದ್ರ ಸರ್ಕಾರದ ಜೊತೆಗೆ ಘರ್ಷಣೆಗೆ ಹೊಗಬೇಡಿ. ನರೇಂದ್ರ ಮೋದಿ ಅವರ ಮೇಲೆ ವಿಶ್ವಾಸ ನಂಬಿಕೆ ಇದೆ. ಸರಿಯಾದ ರೀತಿಯಲ್ಲಿ ಸೌಜನ್ಯಯುತವಾಗಿ ಬಂದು ನೆರವು ಕೇಳಬೇಕು. ಅಲ್ಲಿ ಬೆಂಗಳೂರಿನಲ್ಲಿ ಕೂತು ಅನ್ಯಾಯ ಆಗಿದೆ ಅಂದರೆ. ನಾನು ಸಿಎಂ ಆಗಿದ್ದಾಗ ಮನಮೋಹನ್ ಸಿಂಗ್ ಸರ್ಕಾರ ಇತ್ತು. ನಾನು ಕೇಂದ್ರ ಸರ್ಕಾರದ ಜೊತೆಗೆ ಘರ್ಷಣೆ ಮಾಡಲಿಲ್ಲ. ಕೊಡಗಿನಲ್ಲಿ ಅನಾಹುತ ಆದಾಗ ಮೋದಿ ಕರೆ ಮಾಡಿದ್ದರು. ಈ ಬಾಂಧವ್ಯ ರಾಜ್ಯ ಸರ್ಕಾರ ಉಳಿಸಿಕೊಂಡು ಹೋಗಬೇಕು. ಈಗಲೂ ಒರಟು ಮಾತುಗಳನ್ನು ಬಿಡಬೇಕು. ರಾಜ್ಯದ ಒಬ್ಬ ಮಂತ್ರಿ ಈ ಸಂಬಂಧ ಕೇಂದ್ರದ ಮಂತ್ರಿಗಳನ್ನು ಭೇಟಿ ಮಾಡಿದ್ದಾರಾ, ಯಾವುದಾದರೂ ನಿಯೋಗ ಬಂದಿದ್ಯಾ? ಅದ್ಯಾವೋದು ಜಾತಿ ಗಣತಿ ಅಂತೆ ಎಂದು ಲೇವಡಿ ಮಾಡಿದ್ದಾರೆ. ಇದನ್ನೂ ಓದಿ: ಪ್ರವಾಹ ಪೀಡಿತ ಪ್ರದೇಶಗಳ ವೀಕ್ಷಣೆಗೆ ತೆರಳುತ್ತಿದ್ದ ಅಧಿಕಾರಿಗಳು ಮಧ್ಯದಲ್ಲೇ ಲಾಕ್
ಬೇಕಾದಷ್ಟು ಸಮಸ್ಯೆ ಇದಾವೆ, ಈಗ ಹೊಸ ಸಮಸ್ಯೆ ಹುಟ್ಟು ಹಾಕುತ್ತಿದ್ದಾರೆ. ಎರಡು ವರ್ಷ ಸಿಎಂ ಗಾದಿ ಬಗ್ಗೆ ಚರ್ಚೆ ನಡೆಯಿತು. ಎರಡು ಸಾವಿರ ಕೊಟ್ಟ ತಕ್ಷಣ ಆ ಕುಟುಂಬಗಳು ನೆಮ್ಮದಿಯಿಂದ ಬದುಕಲು ಸಾಧ್ಯವಾ? ನಿನ್ನೆ ರಸ್ತೆ ಗುಂಡಿ ತಪ್ಪಿಸಲು ಹೋಗಿ ಯುವತಿ ಮೃತಪಟ್ಟಳು. ನಿನ್ಮೆ ಸಿಎಂ ಬೆಂಗಳೂರು ಉಸ್ತುವಾರಿ ಬಿಟ್ಟು ನಗರ ಪ್ರದರ್ಕ್ಷಣೆ ಹಾಕಿದರು. ಸಿಎಂ ಪರಿಶೀಲನೆ ಬೆನ್ನಲೆ ರಸ್ತೆ ಕಿತ್ತು ಬಂದ ಉದಾಹರಣೆ ಇದೆ. ಇದು ಆಡಳಿತವಾ, ಅಧಿಕಾರಿಗಳಿಗೆ ಭಯ ಇದಿಯಾ ಎಂದು ಕೇಳಿದ್ದಾರೆ.
ಉತ್ತರ ಕರ್ನಾಟಕದಲ್ಲಿ ಗಂಜಿ ಕೇಂದ್ರ ತೆಗೆದು ಎರಡು ಊಟ ಹಾಕಿದ್ರಾ ಸಾಕಾ? ಖಾಲಿ ಕೈಯಲ್ಲಿ ಮನೆಯಲ್ಲಿ ಹೋಗಿ ಅವರು ಏನ್ ಮಾಡಬೇಕು. ಪರಿಹಾರ ಏನ್ ಕೊಡಬೇಕು ಅಂದುಕೊಂಡಿದ್ದೀರಿ. ಪಕ್ಕದ ಆಂಧ್ರದಲ್ಲಿ ಈರುಳ್ಳಿ ಬೆಳೆ ನಾಶ ಬೆನ್ನಲೆ ಪರಿಹಾರ ನೀಡಲಾಯಿತು. ಅಧಿಕಾರಿಗಳಿಗೆ ವಿಶೇಷ ಅಧಿಕಾರ ನೀಡಿ ಪರಿಹಾರ ಕೊಡಿಸಲಾಯಿತು. ಗ್ಯಾರಂಟಿ ಕೊಟ್ಟು ಖಜಾನೆ ಖಾಲಿಯಾಗಿದೆ ಎಂದು ನಾನು ಹೇಳಲ್ಲ. ಈಗ ಮೈಸೂರ್‌ಗೆ ಬಸ್ ಪ್ರಯಾಣದ ದರ ಏರಿಕೆ ಮಾಡಿದ್ದೀರಿ. ಬೆಲೆ ಏರಿಕೆಯಲ್ಲಿ ಖಾಸಗಿ ಬಸ್‌ಗಳಗೆ ಪೈಪೊಟಿ ನಡೆಸಿದೆ ಸರ್ಕಾರ. ಯಾವ ಸಚಿವರು ಪ್ರವಾಹ ಪೀಡಿತ ಸ್ಥಳಕ್ಕೆ ಹೋಗಿಲ್ಲ, ಇದ್ಯಾವ ರೀತಿಯ ಸರ್ಕಾರ ಸಿದ್ದರಾಮಯ್ಯ ಅವರೇ ಜನರು ಹೈದ್ರಾಬಾದ್ ಕರ್ನಾಟಕ ಪರಿಸ್ಥಿತಿಯಲ್ಲಿ ಕೆಟ್ಟ ಪರಿಸ್ಥಿತಿ ಇದೆ. ಬೆಂಗಳೂರು ಮೈಸೂರು ರೀತಿ ಕಲಬುರಗಿ ಆದರೆ ಸಾಕು ಎಂದು ಖರ್ಗೆ ಹೇಳ್ತಾರೆ. ಅವರ ಮಂತ್ರಿ ಇದ್ದರು, ಮಗ ಮಂತ್ರಿ ಇದಾರೆ ಏನ್ ಮಾಡಿದರು ಎಂದು ಕೇಳಿದ್ದಾರೆ.
ನಾನು ಭತ್ತ ಬೆಳೆಯಲು ಪ್ರೊತ್ಸಾಹ ಧನ ನೀಡುತ್ತಿದ್ದೆ, ಆ ಯೋಜನೆ ನಿಲ್ಲಿಸಿದ್ದೀರಿ. ಹತ್ತು ಲಕ್ಷ ಸಾಲ ನೀಡುವ ಭರವಸೆ ನೀಡಿದ್ದೀರಿ, ಎಲ್ಲಿ ಸಾಲ ಕೊಟ್ಟಿದ್ದೀರಿ? ಎಷ್ಟು ಪರ್ಸೆಂಟ್ ರೈತರಿಗೆ ಸಾಲ ನೀಡಿದ್ದೀರಿ? 37% ಇದ್ದಿದ್ದು 17% ಗೆ ಸಾಲ ನೀಡುವುದು ಇಳಿಕೆಯಾಗಿದೆ. ಪ್ರವಾಹ ಪೀಡಿತ ಪ್ರದೇಶಗಳಿಗೆ ಎರಡು ದಿನದ ಹಿಂದೆ ನಾನೇ ಹೋಗಬೇಕು ಎಂದು ಮನಸ್ಸು ಮಾಡಿದೆ. ಇನ್ನು ಮಳೆ ಇದೆ, ಬರಬೇಡಿ ಎಂದು ಡಿಸಿ ಹೇಳಿದರು. ಮನಸ್ಸು ತಡೆಯದೇ ಫೋನ್ ಮಾಡಿದ್ದೆ. ಡಿಸಿಗಳು ಬೇಡ ಅಂದ್ರು ಅದಕ್ಕೆ ಹೋಗಲಿಲ್ಲ. ಏರಿಯಲ್ ಸರ್ವೆ ಮಾಡಿ, ಜಾತಿ ಸಮೀಕ್ಷೆ ಬಗ್ಗೆ ಮಾತನಾಡಿದ್ರೆ ರೈತರ ಕಥೆ ಏನು? ಜಾತಿ ಸಮೀಕ್ಷೆ ಮಾತನಾಡ್ತಾ ಓಡಾಡುತ್ತಿದ್ದಾರೆ. ಸೋಮಾರಿತನ ಬಿಟ್ಟು ಕೂಡಲೇ ಸಿಎಂ ಪರಿಹಾರ ನೀಡುವುದು ಆರಂಭಿಸಬೇಕು. ಗಂಜಿ ಕೇಂದ್ರದಲ್ಲಿ ಸರಿಯಾಗಿ ಊಟನೂ ಹಾಕ್ತಿಲ್ಲ, ಹೊದಿಕೆ ಕೊಡ್ತಿಲ್ಲ. ಐದಾರು ಜಿಲ್ಲೆಗಳಿಗೆ ತಲಾ ಇಬ್ಬರು ಮಂತ್ರಿಗಳನ್ನು ಹಾಕಿ. ಎಸಿ ರೂಂ ಬಿಟ್ಟು, ಅಲ್ಲಿ ಹೋಗಿ ಕ್ಯಾಂಪ್ ಮಾಡ್ಲಿ ಎಂದು ಸವಾಲು ಹಾಕಿದರು.
ಮಹಾರಾಷ್ಟ್ರದಿಂದ ಹೆಚ್ಚು ನೀರು ಬಿಡುತ್ತಿರುವ ಹಿನ್ನೆಲೆ ರಾಜ್ಯದಲ್ಲಿ ಸಾಕಷ್ಟು ಹಾನಿಯಾಗುತ್ತಿದೆ. ಸುಮಾರು 8.5 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ಹಾನಿಯಾಗದೆ. ನಾನು ಸಿಎಂ ಆಗಿದ್ದಾಗ ಈ ವಿಷಯ ಗೊತ್ತಿರಲಿಲ್ಲ. ನಾನು ನೀರಾವರಿ ಮಂತ್ರಿಯೂ ಆಗಿರಲಿಲ್ಲ. ನಮ್ಮ ದಮ್ ಆಮೇಲೆ ನೋಡೊಣ. ದಮ್ಮು ತಾಕತ್ತಿನ ಬಗ್ಗೆ ಮಾತನಾಡುವವರಿಗೆ ಏನಾಗಿದೆ. ದಿನ ಬೆಳಗ್ಗೆ ಕೇಂದ್ರ ಸರ್ಕಾರ ಬೈದಾಡಿಕೊಂಡು ಓಡಾದ್ರಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಅವರು ದಿನಾ ಕೇಂದ್ರ ಸರ್ಕಾರ ಬೈದರೆ ನಾವು ಇಲ್ಲಿ ಮಾತನಾಡುವುದು ಹೇಗೆ? ಮೇಕೆದಾಟು ಬಗ್ಗೆ ಅವರು ಏನ್ ಮಾಡಿದ್ರು. ಎತ್ತಿನಹೊಳೆ ಯೋಜನೆಗೆ ಭೂಮಿ ಪೂಜೆ ಮಾಡಿದ್ದು ಯಾರು? ಸಿದ್ದರಾಮಯ್ಯ ಮೂರು ವರ್ಷದಲ್ಲಿ ನೀರು ಕೊಡ್ತೀನಿ ಅಂದ್ರು. ಎತ್ತಿನಹೊಳೆಯಲ್ಲಿ ಯಾರು ಹಿಡ್ಕೊಂಡ್ರು. ಕೇಂದ್ರ ಸರ್ಕಾರದ ಜೊತೆಗೆ ಉತ್ತಮ ಸಂಬಂಧ ಇಟ್ಟುಕೊಂಡು ಕೆಲಸ ಮಾಡಿದೆ. ನಮ್ಮ ದಮ್ಮು ತಾಕತ್ತು ತೋರಿಸಲು ಬಂದಿಲ್ಲ. ನನ್ನ ಇಲಾಖೆ ಮೂಲಕ ವಿಶ್ವೇಶ್ವರಯ್ಯ ಉಕ್ಕಿನ ಕಾರ್ಖಾನೆ, ಹೆಚ್.ಎಂಟಿಗೂ ಹೊಸ ಕಾಯಕಲ್ಪ ಕೊಡುವ ಬಗ್ಗೆ ಪ್ರಯತ್ನ ಮಾಡುತ್ತಿದ್ದೇನೆ. ರಸ್ತೆಯಲ್ಲಿ ನಿಂತು ಏನ್ ಮಾಡ್ತಿದ್ದೀರಿ ಅಂದ್ರೆ ಎಂದು ಸಿಎಂಗೆ ಟಾಂಗ್ ಕೊಟ್ಟಿದ್ದಾರೆ.
ಬಿಡದಿ ಟೌನ್ ಶಿಫ್ ಸಣ್ಣ ಪುಟ್ಟವರು ಮಾತನಾಡಿದ್ದಕ್ಕೆ ಉತ್ತರ ಕೊಡುವ ಅಗತ್ಯ ಇಲ್ಲ. 2006 ರಲ್ಲಿ ಐದು ಟೌನ್ ಶಿಫ್ ಮಾಡಲು ನಿರ್ಧರಿಸಿದ್ದೆ. ಮೊದಲ ಯೋಜನೆ ಬಿಡದಿಯಲ್ಲಿ ಮಾಡುವ ಉದ್ದೇಶ ಹೊಂದಿದ್ದೆ. ನಾಲ್ಕೈದು ಸಭೆ ಮಾಡಿದ್ದೆ, ರೈತರ ಜೊತೆಗೆ ಮಾತನಾಡಿದ್ದೇನೆ. ಡಿಕೆ ಶಿವಕುಮಾರ್ ಅವರಿಗೆ ಕೇಳಲು ಬಯಸುತ್ತೇನೆ. ಹೆಚ್.ಕೆ ಪಾಟೀಲ್ ನೇತೃತ್ವದಲ್ಲಿ ಸತ್ಯಶೋಧನ ಸಮಿತಿ ಮಾಡಿದ್ರಲ್ಲ ಅದನ್ನು ತೆಗೆದು ನೋಡಿ. ನಾನು ಬೆಂಗಳೂರು ಭೂಮಿ ಹೊಡೆಯಲು ಪ್ರಯತ್ನ ಮಾಡಿದರು ಅಂದ್ರು. ಈಗ ನನ್ನ ಕನಸಿನ ಯೋಜನೆ ಜಾರಿ ಮಾಡಲು ಹೊರಟಿದ್ದಾರೆ. ನೀವು ಭೂಮಿ ಹೊಡೆಯಲು ಯೋಜನೆ ರೂಪಿಸುತ್ತಿದ್ದೀರಾ. ಎರಡು ವರ್ಷದಲ್ಲಿ ಇದು ಸಾಧ್ಯವಾ? ಭೂಸ್ವಾಧೀನ ಪ್ರಕ್ರಿಯೆ ನಾನು ಮಾಡಿರಲಿಲ್ಲ. ರೈತರನ್ನು ಆರ್ಥಿಕವಾಗಿ ಉಳಿಸಿಕೊಳ್ಳಲು ಸ್ವಾಧೀನ ಮಾಡಿರಲಿಲ್ಲ. ನೀವು 2000-3000 ಎಕರೆ ಏನ್ ಮಾಡಿದ್ದೀರಿ ಗೊತ್ತಿದೆ. ವ್ಯವಸ್ಥೆಯಲ್ಲಿ ನೀವು ಮಾಡಿದ ಕರ್ಮ ತೊಳೆಯಲು ಸಾಧ್ಯವಿಲ್ಲ. ಜನರು ಐದು ವರ್ಷ ಸಮಯ ಕೊಟ್ಟರೆ, ಕರ್ನಾಟಕ ಲೂಟಿ ಮಾಡಿದವರ ವಿರುದ್ಧ ಕ್ರಮ ತೆಗೆದುಕೊಳ್ಳಬಹುದು. ಹೆಚ್‌ಡಿಡಿ, ಹೆಚ್‌ಡಿಕೆ ಮುಗಿಸಲು ಈ ಸರ್ಕಾರ ಯಾವ ಪ್ರಯತ್ನ ಮಾಡ್ತಿದ್ದಾರೆ ಗೊತ್ತಿದೆ. ದೇವಸ್ಥಾನಕ್ಕೆ ಓಡಾಡಿ ಪೂಜೆ ಮಾಡ್ತರಲ್ಲ ಎದೆ ಮುಟ್ಟಿಕೊಂಡು ಹೇಳಲಿ. ಶಾಂತಿನಗರ ಸೊಸೈಟಿ ದಲಿತರಿಗೆ ಸೈಟ್ ಕೊಡಲು ಮಾಡಿದ್ದರು. ಬೇರೆ ಬೇರೆ ನಗರಗಳಲ್ಲಿ ಸೊಸೈಟಿಗಳ ಭೂಮಿ ಏನಾಗಿದೆ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ರೌದ್ರರೂಪ ತಾಳಿದ ಭೀಮಾ ನದಿ – ಪ್ರವಾಹದಲ್ಲಿ ಸಿಲುಕಿದ್ದ 8 ಜನರ ರಕ್ಷಣೆ
ದುಡ್ಡಿಗೆ ಸರ್ಕಾರ ಸಾಲ ಮಾಡಬೇಕಿಲ್ಲ. ಬೆಂಗಳೂರಿನಲ್ಲೇ ಸಾಕಷ್ಟು ಸಂಪತ್ತು ಇದೆ. ಇಡೀ ರಾಜ್ಯ ಅಭಿವೃದ್ಧಿ ಮಾಡುವ ಶಕ್ತಿ ಬೆಂಗಳೂರಿಗೆ ಇದೆ. ಆದರೆ, ಇದನ್ನು ಕೆಲವೇ ಕೆಲವು ವ್ಯಕ್ತಿಗಳು ಲೂಟಿ ಮಾಡುತ್ತಿದ್ದಾರೆ. ಈಗ ಸುರಂಗ ಮಾಡುತ್ತೇನೆ ಅನ್ನುತ್ತಾರೆ. ನಾನು ಸಾಕಷ್ಟು ಕೆಲಸ ಮಾಡಿದೆ, ಪ್ರಚಾರ ಪಡೆಯಲಿಲ್ಲ. ವೈಮಾನಿಕ ಸಮೀಕ್ಷೆ ಮಾಡಿ ಕೇಂದ್ರದ ಕಡೆ ಬೊಟ್ಟು ಮಾಡಬೇಡಿ, ನಿಮ್ಮ ಜವಾಬ್ದಾರಿ ಏನು? ಲೋಕಸಭೆಯಲ್ಲಿ ಐದು ಸ್ಥಾನ ಕೊಟ್ಟಿದ್ದಾರೆ ಖುಣ ತೀರಿಸಿ. ಬಡವರ ಉದ್ಧಾರಕ್ಕೆ ಜಾತಿ ಜನಗಣತಿಯೇ ಬೇಕಾ ಎಂದು ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ರಾಜಕೀಯ ತೆವಲಿಗೆ ಜಾತಿಗಣತಿ ಮಾಡಿ, ಜಾತಿ ಜಾತಿಗಳ ನಡುಗೆ ಸಂಘರ್ಷ ಏರ್ಪಡಿಸುತ್ತಿದ್ದಾರೆ. ತಕ್ಷಣ ಪರಿಹಾರ ನೀಡಬೇಕು. ಕುಣಿಗಲ್ ಅಲ್ಲ ಮಂಗಳೂರನ್ನು ಬೆಂಗಳೂರಿಗೆ ಸೇರಿಸ್ತಾರೆ. ಮಾಡೊ ಕೆಲಸ ಬಿಟ್ಟು ಅದನ್ನು ಸೇರಿಸ್ತೀನಿ, ತೆಗಿತೀನಿ ಅಂತಾ ಹೊರಟ್ಟಿದ್ದಾರೆ. ಅಲ್ಲಿ ಸಂಬಂಧಿ ಇದಾರಲ್ಲ ಅವರು ಒತ್ತಾಯ ಮಾಡಿರಬೇಕು. ನಾನು ನಿಮ್ಮ ಜೊತೆಗೆ ಲೂಟಿ ಹೊಡೆಯುತ್ತೇನೆ ಅಂದಿರಬೇಕು. ಬೆಂಗಳೂರು ಸೇರಿದರೆ ಭೂಮಿ ಬೆಲೆ ಬರುತ್ತಂತಲ್ಲ. ಅದಕ್ಕೆ ಬೆಂಗಳೂರಿಗೆ ಸೇರಿಸಲು ಹೊರಟಿರಬೇಕು ಎಂದು ಟಾಂಗ್ ಕೊಟ್ಟಿದ್ದಾರೆ.
ಬೆಂಗಳೂರು: ಖ್ಯಾತ ಕಾದಂಬರಿಕಾರ ಎಸ್.ಎಲ್.ಭೈರಪ್ಪ (S.L.Bhyrappa) ಅವರ ನಿಧನಕ್ಕೆ ಸಿಎಂ ಸಿದ್ದರಾಮಯ್ಯ, ಮಾಜಿ ಸಿಎಂಗಳಾದ ಬಿ.ಎಸ್.ಯಡಿಯೂರಪ್ಪ, ಹೆಚ್.ಡಿ.ಕುಮಾರಸ್ವಾಮಿ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಕನ್ನಡ ಸಾರಸ್ವತ ಲೋಕದ ಹಿರಿಯ ಬರಹಗಾರರಾದ ಎಸ್.ಎಲ್.ಭೈರಪ್ಪನವರ ನಿಧನವಾರ್ತೆ ನೋವು ತಂದಿದೆ.
ಭೈರಪ್ಪನವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ.
ತಮ್ಮ ಆಪ್ತವೆನಿಸುವ ಬರಹ ಶೈಲಿಯಿಂದಾಗಿ ಅಪಾರ ಓದುಗರನ್ನು ಹೊಂದಿದ್ದ ಭೈರಪ್ಪನವರ ನಿಧನದಿಂದ ಸಾಹಿತ್ಯಲೋಕ ಬಡವಾಗಿದೆ.
ಅವರ ಕುಟುಂಬವರ್ಗ ಮತ್ತು ಓದುಗ ಬಳಗಕ್ಕೆ ನನ್ನ ಸಂತಾಪಗಳು. pic.twitter.com/D3y4Ep2H8J
ಕನ್ನಡ ಸಾರಸ್ವತ ಲೋಕದ ಹಿರಿಯ ಬರಹಗಾರರಾದ ಎಸ್.ಎಲ್.ಭೈರಪ್ಪನವರ ನಿಧನವಾರ್ತೆ ನೋವು ತಂದಿದೆ. ಭೈರಪ್ಪನವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ತಮ್ಮ ಆಪ್ತವೆನಿಸುವ ಬರಹ ಶೈಲಿಯಿಂದಾಗಿ ಅಪಾರ ಓದುಗರನ್ನು ಹೊಂದಿದ್ದ ಭೈರಪ್ಪನವರ ನಿಧನದಿಂದ ಸಾಹಿತ್ಯಲೋಕ ಬಡವಾಗಿದೆ. ಅವರ ಕುಟುಂಬವರ್ಗ ಮತ್ತು ಓದುಗ ಬಳಗಕ್ಕೆ ನನ್ನ ಸಂತಾಪಗಳು ಎಂದು ಸಿಎಂ ಸಿದ್ದರಾಮಯ್ಯ ಅವರು ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಕನ್ನಡ ಸಾಹಿತ್ಯ ಲೋಕದ ಅಕ್ಷರ ಮಾಂತ್ರಿಕ ಎಸ್‌ಎಲ್ ಭೈರಪ್ಪ ಇನ್ನಿಲ್ಲ
ನಾಡಿನ ಸಾಕ್ಷಿ ಪ್ರಜ್ಞೆಯಂತಿದ್ದ ಅದ್ವಿತೀಯ ಸಾಹಿತಿ, ಕನ್ನಡ ಸಾರಸ್ವತ ಲೋಕಕ್ಕೆ ‘ಸರಸ್ವತಿ ಸಮ್ಮಾನ್’ ಗೌರವವನ್ನು ತಂದುಕೊಟ್ಟ, ಪದ್ಮಭೂಷಣ ಡಾ|| ಎಸ್.ಎಲ್.ಭೈರಪ್ಪನವರು ವಿಧಿವಶರಾದ ಸುದ್ದಿ ತಿಳಿದು ಅತ್ಯಂತ ಆಘಾತವಾಗಿದೆ. ಕನ್ನಡ ಸಾಹಿತ್ಯವನ್ನು ರಾಷ್ಟ್ರೀಯ ಮಟ್ಟದಲ್ಲಿ ಮೆರೆಸಿದ, ದೇಶ ವಿದೇಶಗಳ ಸಾಹಿತ್ಯಾಸಕ್ತರ ನೆಚ್ಚಿನ ಸಾಹಿತಿಗಳಾಗಿದ್ದ,… pic.twitter.com/hJyC2MisxQ
ನಾಡಿನ ಸಾಕ್ಷಿ ಪ್ರಜ್ಞೆಯಂತಿದ್ದ ಅದ್ವಿತೀಯ ಸಾಹಿತಿ, ಕನ್ನಡ ಸಾರಸ್ವತ ಲೋಕಕ್ಕೆ ‘ಸರಸ್ವತಿ ಸಮ್ಮಾನ್’ ಗೌರವವನ್ನು ತಂದುಕೊಟ್ಟ, ಪದ್ಮಭೂಷಣ ಡಾ|| ಎಸ್.ಎಲ್.ಭೈರಪ್ಪನವರು ವಿಧಿವಶರಾದ ಸುದ್ದಿ ತಿಳಿದು ಅತ್ಯಂತ ಆಘಾತವಾಗಿದೆ. ಕನ್ನಡ ಸಾಹಿತ್ಯವನ್ನು ರಾಷ್ಟ್ರೀಯ ಮಟ್ಟದಲ್ಲಿ ಮೆರೆಸಿದ, ದೇಶ ವಿದೇಶಗಳ ಸಾಹಿತ್ಯಾಸಕ್ತರ ನೆಚ್ಚಿನ ಸಾಹಿತಿಗಳಾಗಿದ್ದ, ಆ ಹಿರಿಯ ಸಾಹಿತಿಯನ್ನು ಕಳೆದುಕೊಂಡು ಕನ್ನಡ ನಾಡು, ನುಡಿ ಅನಾಥವಾದಂತಾಗಿದೆ, ಒಬ್ಬ ದಿಗ್ಗಜ ಸಾಹಿತಿಯನ್ನು, ಸಾಧಕ ಶ್ರೇಷ್ಠರನ್ನು ನಾವು ಕಳೆದುಕೊಂಡಿದ್ದೇವೆ. ಆ ದಿವ್ಯ, ಸಾರಸ್ವತ ಚೇತನಕ್ಕೆ ದೇವರು ಸದ್ಗತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ. ಡಾ.ಭೈರಪ್ಪನವರು ತಮ್ಮ ಅಗಾಧ ಪಾಂಡಿತ್ಯಪೂರ್ಣ ಕಾದಂಬರಿಗಳ ಮೂಲಕ ಭಾರತೀಯ ಸಂಸ್ಕೃತಿ, ಇತಿಹಾಸ, ತತ್ವಶಾಸ್ತ್ರ ಮತ್ತು ಮಾನವ ಸಂಬಂಧಗಳನ್ನು ಅತ್ಯಂತ ಆಳವಾಗಿ ವಿಶ್ಲೇಷಿಸುವ ಅಪೂರ್ವ ಕೃತಿಗಳನ್ನು ರಚಿಸಿ, ನಾಡಿನ ಸಾರಸ್ವತ ಪ್ರಪಂಚವನ್ನು ಶ್ರೀಮಂತಗೊಳಿಸಿದ್ದಾರೆ. ಅವರ ವಂಶವೃಕ್ಷ, ಪರ್ವ, ಸಾರ್ಥ, ಆವರಣದಂತಹ ಕೃತಿಗಳು ಕನ್ನಡ ಸಾಹಿತ್ಯಕ್ಕೆ ಒಂದು ಹೊಸ ದಿಕ್ಕನ್ನೇ ನೀಡಿವೆ. ಅಗಲಿದ ಮಹಾನ್ ಚೇತನಕ್ಕೆ ಅಶ್ರುಪೂರ್ಣ ಶ್ರದ್ಧಾಂಜಲಿಗಳನ್ನು ಸಲ್ಲಿಸುತ್ತಾ, ಅವರ ಕುಟುಂಬದವರಿಗೆ, ಅಪಾರ ಅಭಿಮಾನಿಗಳಿಗೆ ಆ ಮೇರು ವ್ಯಕ್ತಿತ್ವದ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಕೋರುತ್ತೇನೆ. ಓಂ ಶಾಂತಿ ಎಂದು ಮಾಜಿ ಸಿಎಂ ಯಡಿಯೂರಪ್ಪ ಸಂತಾಪ ಸೂಚಿಸಿದ್ದಾರೆ.
ಕನ್ನಡದ ಸುಪ್ರಸಿದ್ಧ ಕಾದಂಬರಿಕಾರರು, ಪದ್ಮವಿಭೂಷಣ ಪುರಸ್ಕೃತ, ಸರಸ್ವತಿ ಸಮ್ಮಾನ್ ಡಾ. ಎಸ್.ಎಲ್ ಭೈರಪ್ಪ (94) ಅವರು ಧೈವಾಧೀನರಾದರು ಎಂಬ ಸುದ್ದಿ ತಿಳಿದು ಮನಸ್ಸು ಭಾರವಾಗಿದೆ. ಶ್ರೀಯುತರು ತಮ್ಮ ಕೊನೆಯ ದಿನಗಳವರೆಗೂ ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡಿದ್ದರು. ಅವರು ಬರೆದ ವಂಶವೃಕ್ಷ, ಗೃಹಭಂಗ, ಆವರಣ, ನಾಯಿ ನೆರಳು, ಸಾಕ್ಷಿ, ಅನ್ವೇಷಣೆ ಸೇರಿದಂತೆ ಹತ್ತಾರು ಕಾದಂಬರಿಗಳು ಈಗಲೂ ಜನಪ್ರಿಯವಾಗಿದ್ದು ಯುವ ಸಮುದಾಯದಲ್ಲಿ ರಾಷ್ಟ್ರೀಯ ಪ್ರಜ್ಞೆಯನ್ನು ಜಾಗೃತಿಗೊಳಿಸುತ್ತಿವೆ. 2019ರಲ್ಲಿ ನಾನು ಮೈಸೂರು ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದ ವೇಳೆ ಮೈಸೂರು ದಸರಾವನ್ನು ಶ್ರೀಯುತರಿಂದ ಉದ್ಘಾಟಿಸುವ ಸೌಭಾಗ್ಯ ನನ್ನದಾಗಿತ್ತು. ಇವರ ನಿಧನದೊಂದಿಗೆ ಕನ್ನಡ ಸಾರಸ್ವತ ಲೋಕ ಅಪೂರ್ವ ಸಾಹಿತಿಯನ್ನು ಕಳೆದುಕೊಂಡಂತಾಗಿದೆ. ಭಗವಂತ ಶ್ರೀಯುತರ ಆತ್ಮಕ್ಕೆ ಸದ್ಗತಿ ಕರುಣಿಸಲಿ, ಅವರ ಕುಟುಂಬವರ್ಗ, ಶಿಷ್ಯವರ್ಗ ಹಾಗೂ ಅಪಾರ ಓದುಗ ಬಂಧುಗಳಲ್ಲಿ ದುಃಖ ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.
‘ಪರ್ವ’ ಮತ್ತು ‘ಉತ್ತರಕಾಂಡ’ ಕಾದಂಬರಿಗಳ ಮೂಲಕ ಮಹಾಭಾರತ ಹಾಗೂ ರಾಮಾಯಣವನ್ನು ನೋಡುವ ಮತ್ತು ಓದುವ ಕ್ರಮವನ್ನೇ ಬದಲಿಸಿದ ಅಭಿಜಾತ ಕಾದಂಬರಿಕಾರ ಪದ್ಮಭೂಷಣ ಎಸ್.ಎಲ್. ಭೈರಪ್ಪನವರು ನಿಧನರಾದರೆಂಬ ಸುದ್ದಿ ಕೇಳಿ ತೀವ್ರ ಆಘಾತ ಉಂಟಾಯಿತು. ಶ್ರೀ ಭೈರಪ್ಪನವರ ಕಾದಂಬರಿಗಳನ್ನು ನಾನು ನಿಕಟವಾಗಿ ಓದಿದ್ದೇನೆ. ಅವರ ಕಥನ ಶೈಲಿ, ಪಾತ್ರ ಸೃಷ್ಟಿಯ ಪ್ರತಿಭೆಗೆ ಮಾರು ಹೋಗಿದ್ದೇನೆ. ಅವರು ಕನ್ನಡ ನೆಲದಲ್ಲಿ ಹುಟ್ಟಿ ಕನ್ನಡದಲ್ಲೇ ಬರೆದ ಅಪ್ಪಟ ಭಾರತೀಯ ಕಾದಂಬರಿಕಾರರು. ಮೇಲಾಗಿ ಹಾಸನ ಜಿಲ್ಲೆಯಲ್ಲಿ ಹುಟ್ಟಿದ್ದ ‘ಅಮರ ಪ್ರತಿಭೆ’ ಎಂಬ ಹೆಮ್ಮೆ ನನ್ನದು. ಶ್ರೀಯುತರ ನಿಧನ ವೈಯಕ್ತಿಕವಾಗಿ ನನಗೆ ಬಹಳ ದುಃಖ ಉಂಟು ಮಾಡಿದೆ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಅವರ ಕುಟುಂಬಸ್ಥರು, ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇಹದ “ಯಾನ” ಅಂತ್ಯ.. ಕನ್ನಡದ ಶ್ರೇಷ್ಠ ಕಾದಂಬರಿಕಾರ, ಪದ್ಮಭೂಷಣ ಪುರಸ್ಕೃತ, ಕನ್ನಡ ಸಾರಸ್ವತ ಲೋಕಕ್ಕೆ ಮೊದಲ ಸರಸ್ವತಿ ಸಮ್ಮಾನ್ ಪ್ರಶಸ್ತಿಯ ಗೌರವವನ್ನು ತಂದುಕೊಟ್ಟ ಡಾ. ಎಸ್.ಎಲ್. ಭೈರಪ್ಪನವರು ಇಂದು ವಿಧಿವಶರಾಗಿದ್ದು ಬಹಳ ನೋವು ತಂದಿದೆ. ಸಾಹಿತ್ಯಾಭಿಮಾನಿಗಳು ಹಾಗೂ ಅವರ ಕುಟುಂಬಸ್ಥರಿಗೆ ಈ ದುಃಖವನ್ನು ಭರಿಸುವ ಶಕ್ತಿ ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ವಿಷಾದ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು: ಜಾತಿಗಣತಿ ಗೊಂದಲ ಸಂಬಂಧ ಶನಿವಾರ ನಡೆದ ಒಕ್ಕಲಿಗ ಸಮುದಾಯದ ಸಭೆಯಲ್ಲಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ (D.K.Shivakumar) ಮುಖಾಮುಖಿಯಾಗಿದ್ದಾರೆ.
ಆದಿಚುಂಚಗಿರಿ ಶ್ರೀಗಳಾದ ನಿರ್ಮಲಾನಂದ ಸ್ವಾಮೀಜಿಗಳ ನೇತೃತ್ವದಲ್ಲಿ ಸಭೆ ನಡೆಯಿತು. ಸಭೆಯಲ್ಲಿ ಡಿಕೆಶಿ ಮತ್ತು ಹೆಚ್‌ಡಿಕೆ ಇಬ್ಬರೂ ಮುಖಾಮುಖಿಯಾದರು. ಈ ವೇಳೆ ಕುರ್ಚಿಯಲ್ಲಿ ಕುಳಿತಿದ್ದ ಡಿಕೆಶಿಗೆ ಕೈಮುಗಿದು ಹೆಚ್‌ಡಿಕೆ ನಮಸ್ಕರಿಸಿದರು. ಡಿಸಿಎಂ ಕೂಡ ಪ್ರತಿಯಾಗಿ ನಮಸ್ಕರಿಸಿದರು. ಬಳಿಕ ಸ್ವಾಮೀಜಿ ಪಕ್ಕದಲ್ಲಿ ಹೆಚ್‌ಡಿಕೆ ಕೂರುವುದಕ್ಕೆ ಜಾಗ ಮಾಡಿಕೊಟ್ಟರು. ಇಬ್ಬರೂ ನಾಯಕರು ಸ್ವಾಮೀಜಿ ಮುಂದೆ ಮಾತನಾಡಿದರು.
ಜಾತಿಗಣತಿ ಸಂಬಂಧ ಒಕ್ಕಲಿಗರ ಸಭೆಯಲ್ಲಿ ಹಲವಾರು ನಿರ್ಣಯಗಳನ್ನು ಕೈಗೊಳ್ಳಲಾಗಿದೆ. 60 ದಿನ ಜಾತಿಗಣತಿ ಮುಂದೂಡಿ, 15 ದಿನ ಕಾಲಮಿತಿಯನ್ನು ಹೆಚ್ಚು ಮಾಡಿ ಅಂತಾ ಸರ್ಕಾರಕ್ಕೆ ಒತ್ತಾಯಿಸಿ ನಿರ್ಣಯ ಮಾಡಲಾಗಿದೆ.
ಗಣತಿ ವೇಳೆ ತಮ್ಮ ಸಮುದಾಯದವರು ಒಕ್ಕಲಿಗ ಎಂದೇ ಬರೆಸುವಂತೆ ಸಭೆಯಲ್ಲಿ ಸಲಹೆ ನೀಡಲಾಗಿದೆ. ಕುಂಚಟಿಗ ಒಕ್ಕಲಿಗ ಪ್ರತ್ಯೇಕ ಗುರುತಿಸಿಕೊಳ್ಳದಂತೆ ತೀರ್ಮಾನಿಸಲಾಗಿದೆ. ಯಾರೇ ಆಗಲಿ ಒಕ್ಕಲಿಗ ಸಮುದಾಯದಲ್ಲಿ ಒಗ್ಗಟ್ಟು ಇರಲಿ ಎಂದು ತಿಳಿಸಲಾಗಿದೆ. ಸರ್ವೆ ಮುಂದೂಡಿದರೆ ಒಳ್ಳೆಯದು ಎಂದು ಸಭೆ ಮೂಲಕ ಸರ್ಕಾರಕ್ಕೆ ಒತ್ತಾಯಿಸಲಾಗಿದೆ.
– ಚುನಾವಣಾ ಗ್ಯಾರಂಟಿಗಳಿಗೆ ರಾಜ್ಯದ ಅಭಿವೃದ್ಧಿ ಬಲಿಯಾಗಿ ಗ್ರೇಟರ್ ಬೆಂಗಳೂರು ಗಬ್ಬೆದ್ದು ನಾರುತ್ತಿದೆ: ಕೇಂದ್ರ ಸಚಿವ
ಬೆಂಗಳೂರು: ಗ್ರೇಟರ್ ಬೆಂಗಳೂರು ಗುಂಡಿಮಯ ಆಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಾಕಿರುವ ಹೆಚ್‌ಡಿಕೆ, ನಾಡಪ್ರಭು ಕೆಂಪೇಗೌಡರು ಕಟ್ಟಿದ ಹೆಮ್ಮೆಯ ಬೆಂಗಳೂರು ನಗರದ ಪ್ರತಿಷ್ಠೆಗೆ ಘೋರ ಪೆಟ್ಟು ಬಿದ್ದಿದೆ. ಬೆಂಗಳೂರು ಈಗ ಗುಂಡಿಯೂರು ಆಗಿ ಕುಖ್ಯಾತಿ ಆಗುತ್ತಿರುವುದು ದುರ್ದೈವ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಲ್ಲಿ ಧಾರಾಕಾರ ಮಳೆ; ಹಲವೆಡೆ ಅವಾಂತರ – ರಸ್ತೆಗೆ ಉರುಳಿದ ಮರ, ವಿದ್ಯುತ್ ಕಂಬ
ನಾಡಪ್ರಭು ಕೆಂಪೇಗೌಡರು ಕಟ್ಟಿದ ಹೆಮ್ಮೆಯ ಬೆಂಗಳೂರು ನಗರದ ಪ್ರತಿಷ್ಠೆಗೆ ಘೋರ ಪೆಟ್ಟು ಬಿದ್ದಿದೆ. ಬೆಂಗಳೂರು ಈಗ ಗುಂಡಿಯೂರು ಆಗಿ ಕುಖ್ಯಾತಿ ಆಗುತ್ತಿರುವುದು ದುರ್ದೈವ.
ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಇಬ್ಬರು ಈ ಅಪಮಾನಕ್ಕೆ ಹೊಣೆಗಾರರು. ಬೆಂಗಳೂರು ಮತ್ತು ಕರ್ನಾಟಕ ಇವತ್ತು ಅದಕ್ಷರು, ಭ್ರಷ್ಟರ ಕೈಯ್ಯಲ್ಲಿ ಸಿಕ್ಕಿ ನರಳುತ್ತಿವೆ.…
— ಹೆಚ್.ಡಿ.ಕುಮಾರಸ್ವಾಮಿ | HD Kumaraswamy (@hd_kumaraswamy) September 18, 2025
ಪೋಸ್ಟ್‌ನಲ್ಲಿ ಏನಿದೆ?
ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಇಬ್ಬರು ಈ ಅಪಮಾನಕ್ಕೆ ಹೊಣೆಗಾರರು. ಬೆಂಗಳೂರು ಮತ್ತು ಕರ್ನಾಟಕ ಇವತ್ತು ಅದಕ್ಷರು, ಭ್ರಷ್ಟರ ಕೈಯ್ಯಲ್ಲಿ ಸಿಕ್ಕಿ ನರಳುತ್ತಿವೆ. ಹೆಜ್ಜೆ ಹೆಜ್ಜೆಗೂ ಸಾವಿನ ಗುಂಡಿ. ಕಂಡೆಲ್ಲೆಲ್ಲ ಕಸದ ರಾಶಿ. ಗ್ರೇಟರ್ ಬೆಂಗಳೂರು ಎಂದರೆ ಇದೇನಾ? ಜಿಬಿಎ ಏನು ಮಾಡುತ್ತಿದೆ? ಜನರ ತೆರಿಗೆ ದುಡ್ಡು ನುಂಗಿ ಗೊರಕೆ ಹೊಡೆಯುತ್ತಿದೆಯಾ?
ಬೆಂಗಳೂರಿನಲ್ಲಿ ಆಡಳಿತದ ಘೋರ ವೈಫಲ್ಯವಾಗಿದೆ ಎಂದು ಉದ್ಯಮಿಗಳು ದೂರಿರುವುದು ಸರಿ ಇದೆ. ಅಂಗೈ ಹುಣ್ಣಿಗೆ ಕನ್ನಡಿ ಬೇಕಿಲ್ಲ. ಉದ್ಯಮಿಗಳು ಸರ್ಕಾರದ ವೈಫಲ್ಯವನ್ನು ಇಷ್ಟು ಕಠಿಣವಾಗಿ ಎತ್ತಿ ತೋರಿಸಿರುವುದು ಇತಿಹಾಸದಲ್ಲಿ ಇದೇ ಮೊದಲು. ಈ ಸರ್ಕಾರಕ್ಕೆ ಎಳ್ಳಷ್ಟೂ ಸಂಕೋಚ, ಆತ್ಮಾಭಿಮಾನವಿಲ್ಲ. ಕನ್ನಡಿಗರ ಸ್ವಾಭಿಮಾನವನ್ನು ಗುಂಡಿಪಾಲು ಮಾಡಿದೆ. ಇದನ್ನೂ ಓದಿ: ಕೆಟ್ಟ ರಸ್ತೆಯಿಂದ ಬೆಂಗಳೂರು ತೊರೆಯಲು ಮುಂದಾದ 10,900 ಕೋಟಿ ಮೌಲ್ಯದ BlackBuck ಕಂಪನಿ
ತೆರಿಗೆ ಹಾಕುವುದರಲ್ಲಿ ಸರ್ಕಾರದ್ದು ರಾಕೆಟ್ ವೇಗ. ಗುಂಡಿ ಮುಚ್ಚುವುದರಲ್ಲಿ ಕೊನೇಪಕ್ಷ ಆಮೆ ವೇಗವೂ ಇಲ್ಲ. ಕೊಳ್ಳೆ ಹೊಡೆಯುವುದರಲ್ಲಿ ಇರುವ ಉನ್ಮಾದ, ಅಭಿವೃದ್ಧಿಯತ್ತ ವಿಪರೀತ ಉಪೇಕ್ಷೆ. ಚುನಾವಣಾ ಗ್ಯಾರಂಟಿಗಳಿಗೆ ರಾಜ್ಯದ ಅಭಿವೃದ್ಧಿ ಬಲಿಯಾಗಿ ಗ್ರೇಟರ್ ಬೆಂಗಳೂರು ಗಬ್ಬೆದ್ದು ನಾರುತ್ತಿದೆ! ಗುಂಡಿ ಮುಚ್ಚುವುದಕ್ಕೆ ಬಿಡಿಗಾಸಿಲ್ಲದ ಸರ್ಕಾರ ಜನರಿಂದ ಕಿತ್ತುಕೊಳ್ಳುತ್ತಿರುವ ತೆರಿಗೆ ಹಣ ಏನು ಮಾಡುತ್ತಿದೆ? ಅದು ಯಾರ ಕಿಸೆ ಸೇರುತ್ತಿದೆ? ಇದಕ್ಕೆ ಉತ್ತರ ಬೇಕು.
ಕಂಪನಿಗಳು ರಾಜ್ಯ ಸರ್ಕಾರದ ಮೇಲೆ ಭರವಸೆ ಕಳೆದುಕೊಂಡು ನೆರೆರಾಜ್ಯಗಳತ್ತ ವಲಸೆ ಹೋಗುತ್ತಿವೆ. ಆ ರಾಜ್ಯಗಳು ಇಂಥ ಸಮಯಕ್ಕೇ ಕಾಯುತ್ತಾ ರಿಯಾಯ್ತಿ ಮೇಲೆ ರಿಯಾಯ್ತಿಗಳನ್ನು ನೀಡುತ್ತಿವೆ. ಭಂಡ ಸರ್ಕಾರಕ್ಕೆ ಅರ್ಥವಾಗುತ್ತಿಲ್ಲ. ಈ ಸರ್ಕಾರದ ಪಂಚೇಂದ್ರಿಯಗಳು ನಿಷ್ಕ್ರಿಯವಾಗಿವೆ. ಇದನ್ನೂ ಓದಿ: ಬೆಂಗಳೂರಲ್ಲಿ ರಸ್ತೆ ಗುಂಡಿಗಳನ್ನ ಮುಚ್ಚಲು ಡೆಡ್‌ಲೈನ್ ಫಿಕ್ಸ್ ಮಾಡಿದ ಡಿಸಿಎಂ ಡಿಕೆಶಿ
ಕಂಪನಿಗಳಿಗೆ ನನ್ನ ಮನವಿ ಇಷ್ಟೇ;
ನೀವು ಬೆಂಗಳೂರು ಬಿಡುವುದು ಬೇಡ. ಈ ನಗರಕ್ಕೆ ಮಹಾನ್ ಪರಂಪರೆ, ಹಿನ್ನೆಲೆ ಇದೆ. ಈ ಎಮ್ಮೆ ಚರ್ಮದ ಸರ್ಕಾರಕ್ಕೆ ಪಾಠ ಕಲಿಸುತ್ತೇವೆ. ನಿಮ್ಮ ಜತೆ ನಾವು, ಇಡೀ ಕರ್ನಾಟಕದ ಜನತೆ ಇದ್ದೇವೆ. ಹೋಗುತ್ತೇವೆ ಎನ್ನುವ ಮಾತನ್ನು ಮನಸ್ಸಿನಿಂದ ತೆಗೆದುಬಿಡಿ. ನಾವೆಲ್ಲರೂ ಸೇರಿ ಬೆಂಗಳೂರು ನಗರವನ್ನು ಬದಲಿಸೋಣ. We will Make Bengaluru Great Again ಎಂದು ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ಬೆಂಗಳೂರು: ಬಿಡದಿಯ ಕೇತಗಾನಹಳ್ಳಿ ಬಳಿ ಸರ್ಕಾರಿ ಜಮೀನು ಒತ್ತುವರಿ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿಗೆ (H.D.Kumaraswamy) ಹೈಕೋರ್ಟ್ ಶಾಕ್ ಕೊಟ್ಟಿದೆ.
ಎಸ್‌ಐಟಿ ರಚನೆಗೆ ಏಕಸದಸ್ಯ ಪೀಠ ತಡೆಯಾಜ್ಞೆ ನೀಡಿತ್ತು. ಈ ಆದೇಶಕ್ಕೆ ಸಿಜೆ ವಿಭು ಬಖ್ರು, ನ್ಯಾ.ಸಿ.ಎಂ.ಜೋಷಿ ಅವರಿದ್ದ ಪೀಠ ಮಧ್ಯಂತರ ತಡೆ ನೀಡಿದೆ. ನವೆಂಬರ್ 26 ರವರೆಗೆ ಏಕಸದಸ್ಯ ಪೀಠದ ಆದೇಶಕ್ಕೆ ಮಧ್ಯಂತರ ತಡೆ ನೀಡಿದೆ. ಇದನ್ನೂ ಓದಿ: ಕೇತಗಾನಹಳ್ಳಿ ಭೂ ಒತ್ತುವರಿ ಪ್ರಕರಣ – ಹೆಚ್‌ಡಿಕೆಗೆ ಬಿಗ್ ರಿಲೀಫ್
ಜಮೀನು ಒತ್ತುವರಿ ಆರೋಪ ಪ್ರಕರಣ ಸಂಬಂಧ ಎಸ್ಐಟಿ ರಚನೆಗೆ ಏಕಸದಸ್ಯ ಪೀಠ ತಡೆಯಾಜ್ಞೆ ನೀಡಿತ್ತು. ಪೀಠದ ಆದೇಶ ಪ್ರಶ್ನಿಸಿ ಹೈಕೋರ್ಟ್ ವಿಭಾಗೀಯ ಪೀಠಕ್ಕೆ ಸರ್ಕಾರ ಮೇಲ್ಮನವಿ ಸಲ್ಲಿಸಿತ್ತು.
6 ಎಕರೆ ಒತ್ತುವರಿ ತೆರವಿಗೆ ಸರ್ಕಾರ ಕ್ರಮ ಕೈಗೊಂಡಿದೆ. ದಾಖಲೆಗಳನ್ನು ಹಾಜರುಪಡಿಸುವಂತೆ ಎಸ್ಐಟಿ ನೋಟಿಸ್ ಜಾರಿಗೊಳಿಸಿದೆ. ಆದರೆ, ಎಸ್ಐಟಿ ರಚನೆಗೆ ಏಕಸದಸ್ಯ ಪೀಠ ತಡೆ ನೀಡಿದೆ. ಹೀಗಾಗಿ, ತಡೆಯಾಜ್ಞೆ ತೆರವಿಗೆ ಎಜಿ ಶಶಿಕಿರಣ್ ಶೆಟ್ಟಿ ಮನವಿ ಮಾಡಿದರು.
ನವದೆಹಲಿ: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಕೆಟ್ಟ ಆಡಳಿತ, ನಡವಳಿಕೆಯಿಂದಲೇ ಮದ್ದೂರಿನಲ್ಲಿ (Maddur Stone Pelting) ಗಣಪತಿ ಮೆರವಣಿಗೆ ಮೇಲೆ ಕಲ್ಲು ಎಸೆಯುವಂಥ ಪರಿಸ್ಥಿತಿ ಸೃಷ್ಟಿಯಾಗಿದೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ (H.D.Kumaraswamy) ಆರೋಪಿಸಿದರು.
ಘಟನೆಯ ವಿಷಯ ತಿಳಿಯುತ್ತಿದ್ದಂತೆಯೇ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳ ಜತೆ ಮಾತನಾಡಿ ಮಾಹಿತಿ ಪಡೆದುಕೊಂಡ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮಂಡ್ಯ ಜಿಲ್ಲೆಯಲ್ಲಿ ಇಷ್ಟು ದೊಡ್ಡಮಟ್ಟದಲ್ಲಿ ಇಂಥ ಕೆಟ್ಟ ಘಟನೆಗಳು ನಡೆಯಲು ಕಾಂಗ್ರೆಸ್ ಸರ್ಕಾರವೇ ಕಾರಣ ಎಂದು ದೂರಿದರು.
ಶಾಂತಿ ನೆಮ್ಮದಿಗೆ ಹೆಸರಾಗಿದ್ದ ಮಂಡ್ಯ ಜಿಲ್ಲೆಗೆ ಬೆಂಕಿ ಹಚ್ಚುವ ಕೆಲಸವಾಗುತ್ತಿದೆ. ಹಿಂದೆಂದೂ ಈ ಜಿಲ್ಲೆಯಲ್ಲಿ ಇಂಥ ಘಟನೆಗಳು ಆಗಿಲ್ಲ. ನಾಗಮಂಗಲದಲ್ಲಿ ಕೆಲ ದುಷ್ಟಶಕ್ತಿಗಳು ಬೆಂಕಿ ಹಾಕುವ ಕೆಲಸ ಮಾಡಿದವು. ಈಗ ಮದ್ದೂರಿನಲ್ಲಿಯೂ ಅಂತಹ ಶಕ್ತಿಗಳೇ ಜನರ ನೆಮ್ಮದಿ ಕೆಡಿಸುವ ಹುನ್ನಾರ ನಡೆಸಿವೆ ಎಂದು ಆಪಾದಿಸಿದರು. ಇದನ್ನೂ ಓದಿ: ನಾಳೆ ಮದ್ದೂರು ಸ್ವಯಂ ಪ್ರೇರಿತ ಬಂದ್‌ಗೆ ಕರೆ – ಹಿಂದೂ ಮುಖಂಡರ ತೀರ್ಮಾನ
ಮಂಡ್ಯ ಜಿಲ್ಲೆ ಯಾವಾಗಲೂ ಶಾಂತಿ ಸೌಹಾರ್ದತೆಗೆ ಹೆಸರಾಗಿದೆ. ಜನರು ಕಷ್ಟಪಟ್ಟು ಕೆಲಸ ಮಾಡುತ್ತಾ ನೆಮ್ಮದಿ ಜೀವನ ಮಾಡುತ್ತಿದ್ದಾರೆ. ಕುವೆಂಪು ಅವರ ಆಶಯದ ಸರ್ವ ಜನಾಂಗದ ಶಾಂತಿಯ ತೋಟವಾಗಿದೆ. ಆದರೆ ಕೆಲ ಶಕ್ತಿಗಳು ವ್ಯವಸ್ಥಿತವಾಗಿ ಜನರ ನೆಮ್ಮದಿ ಹಾಳು ಮಾಡುವ ಕೆಲಸ ಮಾಡುತ್ತಿವೆ. ಕಾಂಗ್ರೆಸ್ ಪಕ್ಷದ ಓಲೈಕೆ ರಾಜಕಾರಣದಿಂದ ಇಂಥ ಕೆಟ್ಟ ಪರಿಸ್ಥಿತಿ ರಾಜ್ಯದ ಉದ್ದಗಲಕ್ಕೂ ಸೃಷ್ಟಿಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಶಾಂತಿ ನೆಲೆಸುವುದಕ್ಕೆ ಎಲ್ಲರೂ ಸಹಕಾರ ನೀಡಬೇಕು. ನಾನು ಈಗಾಗಲೇ ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳ ಜೊತೆ ಮಾತನಾಡಿ ಕಿಡಿಗೇಡಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದ್ದೇನೆ ಎಂದು ಕೇಂದ್ರ ಸಚಿವರು ಹೇಳಿದರು. ಇದನ್ನೂ ಓದಿ: ಗಣೇಶ ವಿಸರ್ಜನೆ ವೇಳೆ ಅನ್ಯಕೋಮಿನ ಯುವಕರಿಂದ ಕಲ್ಲು ತೂರಾಟ – ಮದ್ದೂರು ಉದ್ವಿಗ್ನ
ಸರ್ವ ಜನಾಂಗದ ಶಾಂತಿಯ ತೋಟವಾದ ರಾಜ್ಯಕ್ಕೆ ಬೆಂಕಿ ಹಚ್ಚುವ ಕೆಲಸ ಆಗುತ್ತಿದೆ. ಕಾಂಗ್ರೆಸ್ ನಡವಳಿಕೆ, ಅವರ ಆಡಳಿತವೇ ಈ ಘಟನೆಗೆ ಕಾರಣ. ಹಿಂದೂಗಳು ಅಸಮಾಧಾನವಾಗುವ ರೀತಿಯಲ್ಲಿ ಕಾಂಗ್ರೆಸ್ ಕೆಲಸ ಮಾಡುತ್ತಿದೆ. ಇದನ್ನು ನಾನು ರಾಜಕೀಯ ಉದ್ದೇಶದಿಂದ ಹೇಳುತ್ತಿಲ್ಲ. ರಾಜ್ಯದ ಹಲವೆಡೆ ಗಲಾಟೆಗಳು ನಡೆಯಲು ಕಾಂಗ್ರೆಸ್ ಪಕ್ಷವೇ ಕಾರಣ. ಈ ಮೂಲಕ ಕಾಂಗ್ರೆಸ್ ಪಕ್ಷವು ತನ್ನ ಅವನತಿಯನ್ನು ತಾನೇ ತಂದುಕೊಳ್ಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಹಿಂದೆ ಇಂಥ ಘಟನೆಗಳು ಒಂದೆರಡು ಜಿಲ್ಲೆಗಳಲ್ಲಿ ಅಲ್ಲೊಂದು ಇಲ್ಲೊಂದು ನಡೆಯುತ್ತಿದ್ದವು. ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಎಲ್ಲಾ ಜಿಲ್ಲೆಗಳಲ್ಲಿ ಪ್ರತಿ ಭಾಗದಲ್ಲಿಯೂ ಅವ್ಯಾಹತವಾಗಿ ನಡೆಯುತ್ತಿವೆ. ಆ ಕೆಟ್ಟ ಪರಿಸ್ಥಿತಿ ಕಾಂಗ್ರೆಸ್ ಆಡಳಿತದಲ್ಲಿ ಇಡೀ ರಾಜ್ಯಕ್ಕೆ ವ್ಯಾಪಿಸಿದೆ. ಕೇವಲ ಓಲೈಕೆ ರಾಜಕಾರಣದಿಂದ ಇಷ್ಟೆಲ್ಲಾ ನಡೆಯುತ್ತಿದೆ ಎಂದು ದೂರಿದರು.
ಇಂಥ ಗಲಭೆಗಳನ್ನು ನೋಡಿದರೆ ಕಾಂಗ್ರೆಸ್ ಪಕ್ಷದ ಅವನತಿ ಆರಂಭವಾಗಿದೆ ಎಂದು ಅರ್ಥವಾಗುತ್ತದೆ. ಇದೆಲ್ಲವನ್ನೂ ಕಾಂಗ್ರೆಸ್ ಅರ್ಥ ಮಾಡಿಕೊಳ್ಳದಿದ್ದರೆ ಇದು ಸೆಲ್ಪ್ ಸೂಸೈಡ್ (ಆತ್ಮಹತ್ಯೆ) ಆಗಲಿದೆ. ಸಾರ್ವಜನಿಕ ಆಸ್ತಿ-ಪಾಸ್ತಿ ಹಾನಿ ಆಗಬಾರದು. ಕಟ್ಟುನಿಟ್ಟಿನ ಕ್ರಮಕೈಗೊಂಡು ಕಿಡಿಗೇಡಿಗಳ ಹೆಡೆಮುರಿ ಕಟ್ಟುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದೇನೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರ ಕೊಟ್ಟರು.
ನವದೆಹಲಿ: ಬಿಡದಿ ಬಳಿಯ ಕೇತಗಾನಹಳ್ಳಿಯಲ್ಲಿ ಒತ್ತುವರಿ ವಿಚಾರವಾಗಿ (Kethaganahalli Land Grab Case) ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ (H.D Kumaraswamy) ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣದ ವಿಚಾರಣೆಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದೆ.
ಕರ್ನಾಟಕ ಹೈಕೋರ್ಟ್ ಆದೇಶ ಪ್ರಶ್ನಿಸಿ ಅವರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಂಕಜ್ ಮಿತ್ತಲ್ ಹಾಗೂ ಪ್ರಸನ್ನ ಬಿ. ವರಾಳೆ ಅವರಿದ್ದ ಪೀಠವು ಮುಂದಿನ ಆದೇಶದವರೆಗೂ ಪ್ರಕರಣದ ವಿಚಾರಣೆಗೆ ತಡೆ ನೀಡಿದೆ. ಇದನ್ನೂ ಓದಿ: ʻಕೈʼ ಶಾಸಕ ನಂಜೇಗೌಡಗೆ ಬಿಗ್ ಶಾಕ್ – ಇ.ಡಿಯಿಂದ ಆಸ್ತಿ ಮುಟ್ಟುಗೋಲು
ಪೀಠವು ಸಮಾಜ ಪರಿವರ್ತನ ಸಮುದಾಯ ಸಂಸ್ಥೆಗೆ ನೋಟಿಸ್ ಜಾರಿ ಮಾಡಿದೆ. ಲೋಕಾಯುಕ್ತ ತನಿಖೆ ಮುಕ್ತಾಯಗೊಂಡಿರುವ ಹಿನ್ನೆಲೆಯಲ್ಲಿ, ನ್ಯಾಯಾಂಗ ನಿಂದನೆ ವಿಚಾರಣೆ ಮುಂದುವರಿಸುವುದರ ಹಿಂದಿನ ತಾರ್ಕಿಕತೆಯನ್ನು ನ್ಯಾಯಪೀಠ ಮೌಖಿಕವಾಗಿ ಪ್ರಶ್ನಿಸಿದೆ. ಹೆಚ್‍ಡಿಕೆ ಮತ್ತು ಅವರ ಸಂಬಂಧಿಗಳು ಕೇತಗಾನಹಳ್ಳಿಯ ಸರ್ವೇ ನಂಬರ್ 8, 9, 10, 16, 17 ಮತ್ತು 79ರಲ್ಲಿ 14 ಎಕರೆ ಸರ್ಕಾರಿ ಜಮೀನು ಒತ್ತುವರಿ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ವರದಿಯ ಅನುಸಾರ ಕ್ರಮ ಕೈಗೊಳ್ಳಬೇಕು ಎಂದು 2020ರಲ್ಲಿ ಹೈಕೋರ್ಟ್ ಆದೇಶಿಸಿತ್ತು. ಇದನ್ನು ಜಾರಿಗೊಳಿಸಿಲ್ಲ ಎಂದು ಸಮಾಜ ಪರಿವರ್ತನಾ ಸಮುದಾಯ, ರಾಜ್ಯ ಸರ್ಕಾರದ ವಿರುದ್ಧ ಹೈಕೋರ್ಟ್‍ನಲ್ಲಿ ಸಿವಿಲ್ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿತ್ತು. ಈ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಲಯ, ಅರ್ಜಿ ವಿಚಾರಣೆಯಲ್ಲಿ ಭಾಗಿಯಾಗಲು ಕುಮಾರಸ್ವಾಮಿಐವರಿಗೆ ಅನುಮತಿ ನೀಡಿತ್ತು.
ಇದೇ ವೇಳೆ, ಹೈಕೋರ್ಟ್ ನ್ಯಾಯಾಂಗ ನಿಂದನೆ ಪ್ರಕರಣದ ವಿಚಾರಣೆ ಆದೇಶ ಪ್ರಶ್ನಿಸಿ, ಸುಪ್ರೀಂ ಕೋರ್ಟ್‍ಗೆ ಮನವಿ ಮಾಡಿದ್ದರು. ನ್ಯಾಯಾಂಗ ನಿಂದನೆ ಪ್ರಶ್ನಿಸಿ ಸುಪ್ರೀಂ ಕೋರ್ಟ್‍ನಲ್ಲಿ ಸಲ್ಲಿಸಿರುವ ಅರ್ಜಿ ವಿಚಾರಣೆ ಬಾಕಿ ಇರುವುದರಿಂದ ತಮ್ಮ ವಿರುದ್ಧದ ಕಾನೂನು ಪ್ರಕ್ರಿಯೆಗೆ ತಡೆ ನೀಡುವಂತೆ ಅವರು ಹೈಕೋರ್ಟ್‍ಗೆ ಮನವಿ ಮಾಡಿದ್ದರು. ಮಾ.27ರವರೆಗೂ ಅರ್ಜಿದಾರರ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ಹೈಕೋರ್ಟ್ ಆದೇಶಿಸಿತ್ತು.