Tag: h d kumaraswami

  • ಬಿಜೆಪಿಯವರ ಮೇಲೆಯೂ ಕೇಸ್ ಹಾಕಲಿ ಬೇಡ ಅನ್ನಲ್ಲ: ಕೆ.ಎಸ್ ಈಶ್ವರಪ್ಪ

    ಬಿಜೆಪಿಯವರ ಮೇಲೆಯೂ ಕೇಸ್ ಹಾಕಲಿ ಬೇಡ ಅನ್ನಲ್ಲ: ಕೆ.ಎಸ್ ಈಶ್ವರಪ್ಪ

    ಶಿವಮೊಗ್ಗ: ಬಿಜೆಪಿಯವರ ಮೇಲೆಯೂ ಕೇಸ್ ಹಾಕಲಿ ಬೇಡ ಅನ್ನುವುದಿಲ್ಲ. ಮೇಕೆದಾಟು ಯೋಜನೆ ಪಾದಯಾತ್ರೆಯಿಂದಲೇ ಕೋವಿಡ್ ಆರಂಭವಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದರು.

    ವಿದ್ಯಾರ್ಥಿಗಳಲ್ಲಿ ಕೋವಿಡ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆ ಶಾಲೆಗಳಿಗೆ 20 ದಿನ ರಜೆ ನೀಡುವಂತೆ ಮಾಜಿ ಸಿಎಂ ಹೆಚ್‍ಡಿ ಕುಮಾರಸ್ವಾಮಿ ಆಗ್ರಹಿಸಿದ್ದರು. ಈ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿಯವರೇ ಒಂದೇ ಸರಿ 20 ದಿನ ರಜೆ ತೆಗೆದುಕೊಂಡು ಏನು ಮಾಡುತ್ತೀರಿ. ನಿಮಗೆ ಗೊತ್ತಾ ಮಕ್ಕಳಿಗೆ ಎಷ್ಟರಮಟ್ಟಿಗೆ ತೊಂದರೆ ಆಗುತ್ತದೆ. ನಾನು ಶಾಲಾ ಮಕ್ಕಳನ್ನೇ ಈ ಬಗ್ಗೆ ವಿಚಾರಿಸಿದ್ದೇನೆ. ಅವರು ಶಾಲೆಯಲ್ಲಿ ಹಾಜರಾತಿ ಕಡಿಮೆ ಆಗುತ್ತಿದ್ದು, ಓದಿಗೆ ತೊಂದರೆ ಆಗುತ್ತದೆ. ಶಾಲೆ ಬೇಕು ಎನ್ನುವ ಮಾತನ್ನು ಮಕ್ಕಳೇ ಹೇಳುತ್ತಿದ್ದಾರೆ. ಎಲ್ಲಿ ಕೊರೊನಾ ಜಾಸ್ತಿ ಇದೆಯೋ ಅಲ್ಲಿ ರಜೆ ಕೊಟ್ಟಿದ್ದೇವೆ. ನಗರದ ವ್ಯಾಪ್ತಿಯಲ್ಲಿ ಜಾಸ್ತಿ ಇರುವ ಕಾರಣ 3 ದಿನ ರಜೆ ನೀಡಿದ್ದೇವೆ ಎಂದರು. ಇದನ್ನೂ ಓದಿ: ಹಿಂದೂ ಮಹಿಳೆ, ಮುಸ್ಲಿಂ ವ್ಯಕ್ತಿ ರೈಲಿನಲ್ಲಿ ಪ್ರಯಾಣ – ಲವ್ ಜಿಹಾದ್ ಅಂತ ಠಾಣೆಗೆ ಎಳೆದೊಯ್ದ ಭಜರಂಗದಳ ಸದಸ್ಯರು

    ಕೊರೊನಾ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಅಂತಾ ಹುಡುಕಿಕೊಂಡು ಬರುವುದಿಲ್ಲ. ಯಾರೂ ಯಾರೂ ದೊಡ್ಡ ಸಂಖ್ಯೆಯಲ್ಲಿ ಸೇರುತ್ತಾರೋ ಅಲ್ಲಿ ಒಬ್ಬರಿಂದ ಒಬ್ಬರಿಗೆ ಹರಡುತ್ತಿದೆ. ಯಾರಿಗೆ ಕೇಸ್ ಹಾಕಬೇಕು, ಬಿಡಬೇಕು ಎಂಬುದನ್ನು ಸಂಬಂಧಪಟ್ಟ ಇಲಾಖೆಯವರು ನೋಡಿಕೊಳ್ಳುತ್ತಾರೆ. ಬಿಜೆಪಿಯವರ ಮೇಲೆಯೂ ಕೇಸ್ ಹಾಕಲಿ ಬೇಡ ಅನ್ನುವುದಿಲ್ಲ. ಮೇಕೆದಾಟು ಯೋಜನೆ ಪಾದಯಾತ್ರೆಯಿಂದಲೇ ಕೋವಿಡ್ ಆರಂಭವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ತಜ್ಞರು ಗ್ರೀನ್ ಸಿಗ್ನಲ್ ಕೊಟ್ರೆ ಬೆಂಗಳೂರಿನಲ್ಲಿ ಮರು ದಿನವೇ ಶಾಲೆ ಪ್ರಾರಂಭ: ಬಿಸಿ ನಾಗೇಶ್

    ಸಾವಿರಾರು ಜನ ಒಟ್ಟಿಗೆ ಸೇರಿ ಪಾದಯಾತ್ರೆ ನಡೆಸಿದ್ದರಿಂದ ಸಮಸ್ಯೆ ಆಗಿದೆ. ಕೈ ನಾಯಕರು ಯಾರೂ ಮಾಸ್ಕ್ ಹಾಕಿಲ್ಲ, ಅವರೆಲ್ಲರ ಮೇಲೆ ಕೇಸ್ ಹಾಕಿ ಜನರಿಗೆ ತೊಂದರೆ ಆಗದಿರುವಂತಹ ದಿಕ್ಕಿನಲ್ಲಿ ಗಮನಿಸಲಿ. ನಾವು ತಪ್ಪು ಮಾಡಿದರೇ ನಮ್ಮ ಮೇಲೆಯೂ ಕೇಸ್ ಹಾಕಲಿ ಯಾರೂ ಬೇಡ ಅಂತಾರೆ. ಇವತ್ತು ಎಲ್ಲಾ ಮಕ್ಕಳಿಗೂ ಕೋವಿಡ್ ಹರಡುತ್ತಿದೆ. ಕಾಂಗ್ರೆಸ್, ಬಿಜೆಪಿ ಮೇಲೆ ಬಿಜೆಪಿ, ಕಾಂಗ್ರೆಸ್ ಮೇಲೆ ಆಪಾದನೆ ಮಾಡಲು ಮೊದಲು ಎಲ್ಲರೂ ಜಾಗೃತರಾಗಿರಬೇಕು ಎಂದು ಸಿಡಿದರು.

  • ಅತಿ ಮುಗ್ಧರಾಗಿ ಬಿಟ್ಟಿರಾ? ಹೆಚ್‍ಡಿಕೆಗೆ ಕಾಂಗ್ರೆಸ್ ತಿರುಗೇಟು

    ಅತಿ ಮುಗ್ಧರಾಗಿ ಬಿಟ್ಟಿರಾ? ಹೆಚ್‍ಡಿಕೆಗೆ ಕಾಂಗ್ರೆಸ್ ತಿರುಗೇಟು

    ಬೆಂಗಳೂರು: ಕೈ ನಾಯಕರು ನಡೆಸುತ್ತಿರುವ ಪ್ರಜಾಪ್ರಭುತ್ವ ಉಳಿಸಿ ಹೋರಾಟವನ್ನು ವ್ಯಂಗ್ಯ ಮಾಡಿದ್ದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಅತಿ ಮುಗ್ದರಾಗಿ ಬಿಟ್ಟರಾ ಎಂದು ಪ್ರಶ್ನಿಸುವ ಮೂಲಕ ತಿರುಗೇಟು ನೀಡಿದೆ.

    ಕರ್ನಾಟಕ ಕಾಂಗ್ರೆಸ್ ತನ್ನ ಟ್ವಿಟ್ಟರ್ ಮೂಲಕ ಹೆಚ್.ಡಿ.ಕುಮಾರಸ್ವಾಮಿ ಅವರನ್ನ ಪ್ರಶ್ನೆ ಮಾಡಿದೆ. ಕುಮಾರಸ್ವಾಮಿ ಅವರೇ ಆಡಳಿತ ಪಕ್ಷಕ್ಕೆ ಬೇರೆ ಪಕ್ಷದ ಶಾಸಕರು ಸ್ವಯಂ ಸೇರುವುದಕ್ಕೂ ಸಂವಿಧಾನ ಸಂಸ್ಥೆಗಳ ದುರ್ಬಳಕೆ ಮಾಡಿಕೊಂಡು ಆಪರೇಷನ್ ಕಮಲದ ಮೂಲಕ ಚುನಾಯಿತ ಸರ್ಕಾರವನ್ನು ಕೆಡವುದಕ್ಕೂ ಇರುವ ವ್ಯತ್ಯಾಸ ಗೊತ್ತಿಲ್ಲದಷ್ಟು ಅತಿಮುಗ್ದರಾಗಿ ಬಿಟ್ಟಿರಾ ಎಂದು ಪ್ರಶ್ನಿಸಿದೆ.

    ಕಾಂಗ್ರೆಸ್ ಪಕ್ಷದ ಜತೆ ಮೈತ್ರಿ ಮಾಡಿಕೊಂಡು ಮುಖ್ಯಮಂತ್ರಿ ಕುರ್ಚಿ ಮೇಲೆ ಕೂತು ಅಧಿಕಾರ ನಡೆಸುವಾಗ ನಿಮಗೆ ಕಾಂಗ್ರೆಸ್ ಪಕ್ಷದ ನೈತಿಕತೆ ಚೆನ್ನಾಗಿತ್ತು. ಅಧಿಕಾರ ಇಲ್ಲದಿದ್ದಾಗ ನೈತಿಕತೆ ಪ್ರಶ್ನೆ ಬರುತ್ತದೆಯೇ? ರಾಜ್ಯ ಸಂಕಷ್ಟದಲ್ಲಿರುವಾಗ ಅದೃಶ್ಯರು ಅಪ್ರಸ್ತುತರು ಆಗಿರುವ ನಿಮ್ಮ ಪಕ್ಷದ ನೈತಿಕತೆ ಏನು ಎಂದು ಕಾಂಗ್ರೆಸ್ ಕೇಳಿದೆ. ಇದನ್ನೂ ಓದಿ: ಪ್ರಜಾಪ್ರಭುತ್ವ ಉಳಿಸಿ ಹೋರಾಟ ನಡೆಸ್ತಿರೋ ಕಾಂಗ್ರೆಸ್‍ಗೆ ನೈತಿಕತೆ ಇದೆಯಾ?- ಹೆಚ್‍ಡಿಕೆ

  • ಎಚ್‍ಡಿಕೆಯನ್ನ ಅಧಿಕಾರದಿಂದ ಕೆಳಗಿಳಿಸಲು ‘ಕೈ’ ನಾಯಕರಿಂದ್ಲೇ ಹೊಂಚು- ಬಿ.ವೈ ವಿಜಯೇಂದ್ರ

    ಎಚ್‍ಡಿಕೆಯನ್ನ ಅಧಿಕಾರದಿಂದ ಕೆಳಗಿಳಿಸಲು ‘ಕೈ’ ನಾಯಕರಿಂದ್ಲೇ ಹೊಂಚು- ಬಿ.ವೈ ವಿಜಯೇಂದ್ರ

    – ಕಾಂಗ್ರೆಸ್‍ನ ಮೂವರಿಂದ ಈ ಕುತಂತ್ರ
    – ಆಪರೇಷನ್ ಕಮಲದ ನೆಪ ಹೇಳಿ ಜೆಡಿಎಸ್‍ಗೆ ಬೆದರಿಕೆ

    ತುಮಕೂರು: ಆಪರೇಷನ್ ಕಮಲ ಎಂಬ ಬೆದರುಬೊಂಬೆ ಇಟ್ಕೊಂಡು ಕಾಂಗ್ರೆಸ್ ನಾಯಕರು ಕುಮಾರಸ್ವಾಮಿ ಅವರನ್ನ ಅಧಿಕಾರದಿಂದ ಕೆಳಗಿಳಿಸಲು ಹೊಂಚು ಹಾಕಿದ್ದಾರೆ ಎಂದು ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ.ವೈ ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.

    ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸ್ಥಾನದಿಂದ ಎಚ್.ಡಿ ಕುಮಾರಸ್ವಾಮಿಯನ್ನು ಕೆಳಗಿಳಿಸಲು ಕೆಲ ಕಾಂಗ್ರೆಸ್ ನಾಯಕರು ಕುತಂತ್ರ ಮಾಡುತ್ತಿದ್ದಾರೆ. ಅದಕ್ಕೆ ಆಪರೇಷನ್ ಕಮಲ ಎಂಬ ಬೆದರು ಬೊಂಬೆ ಇಟ್ಕೊಂಡು ಕಾಂಗ್ರೆಸ್‍ನ ಮೂವರು ಹಿರಿಯ ಮುಖಂಡರು ಸಿಎಂ ಕುಮಾರಸ್ವಾಮಿ ವಿರುದ್ಧ ಹೊಂಚು ಹಾಕುತ್ತಿದ್ದಾರೆ. ಮೈತ್ರಿ ಸರ್ಕಾರದಲ್ಲಿ ಸ್ಥಾನಮಾನ ಪಡೆಯಲು ಕೈ ಪಡೆಯವರೇ ತೆರೆಮರೆಯ ಕಸರತ್ತು ನಡೆಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

    ಒಬ್ಬರು ಸಚಿವರಾದರೆ ಇನ್ನಿಬ್ಬರು ಸಚಿವ ಸ್ಥಾನ ಸಿಗದೇ ಇದ್ದವರು ಈ ರೀತಿ ಹೊಂಚು ಹಾಕಿ ಬಿಜೆಪಿ ಹೆಸರನ್ನು ಹಾಳು ಮಾಡುತ್ತಿದ್ದಾರೆ. ಕುಮಾರಸ್ವಾಮಿ ಅವರು ಅಧಿಕಾರದಿಂದ ಕೆಳಗಿಳಿಯುವುದನ್ನೇ ಕಾಯ್ತಾ ಇದ್ದಾರೆ. ಆದರೆ ಬಿಜೆಪಿ ಪಕ್ಷ ಸರ್ಕಾರವನ್ನ ಅಸ್ಥಿರಗೊಳಿಸುವ ಯಾವ ಪ್ರಯತ್ನವೂ ಮಾಡುತ್ತಿಲ್ಲ. ತಮ್ಮ ಬೇಳೆ ಬೇಯಿಸಿಕೊಳ್ಳಲು ಆಪರೇಷನ್ ಕಮಲ ಎಂಬ ಭೂತ ಇಟ್ಟುಕೊಂಡು ಜೆಡಿಎಸ್ ನಾಯಕರನ್ನು ಬೆದರಿಸುತ್ತಿದ್ದಾರೆ. ಹೀಗೆ ಕುತಂತ್ರ ಮಾಡುತ್ತಿರುವ ಆ ಮೂವರು ಯಾರು ಅಂತಾ ಮುಂದಿನ ದಿನದಲ್ಲಿ ಗೊತ್ತಾಗಲಿದೆ ಎಂದು ಗುಡುಗಿದ್ದಾರೆ.

    ಅಷ್ಟೇ ಅಲ್ಲದೆ ಸರ್ಕಾರದ ಆಡಳಿತ ಕೇವಲ ರಾಮನಗರ, ಹಾಸನ ಹಾಗೂ ಮಂಡ್ಯ ಕ್ಷೇತ್ರಕ್ಕೆ ಮಾತ್ರ ಸೀಮಿತವಾದಂತಿದೆ. ಕರ್ನಾಟಕದಲ್ಲಿ ತುಘಲಕ್ ದರ್ಬಾರ್ ನಡೀತಿದೆ. ರಾಜ್ಯದ ಆಡಳಿತ ಕುಮಾರಸ್ವಾಮಿ ಹಾಗೂ ರೇವಣ್ಣ ಕುಟುಂಬಕ್ಕೆ ಸೀಮಿತವಾಗಿಬಿಟ್ಟಿದೆ. ಬೆಳಗಾವಿ ಅಧಿವೇಶನದಲ್ಲಿ ಸರ್ಕಾರದ ವೈಫಲ್ಯದ ವಿರುದ್ಧ ಹೋರಾಟ ಮಾಡ್ತೀವಿ ಎಂದು ವಿಜಯೇಂದ್ರ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಾಜಿ ಶಾಸಕ ಎಚ್.ಎಸ್ ಪ್ರಕಾಶ್ ಅಂತಿಮ ದರ್ಶನ ಪಡೆದ ಸಿಎಂ ಕುಮಾರಸ್ವಾಮಿ

    ಮಾಜಿ ಶಾಸಕ ಎಚ್.ಎಸ್ ಪ್ರಕಾಶ್ ಅಂತಿಮ ದರ್ಶನ ಪಡೆದ ಸಿಎಂ ಕುಮಾರಸ್ವಾಮಿ

    ಹಾಸನ: ಮಂಗಳವಾರದಂದು ನಿಧನರಾದ ಮಾಜಿ ಶಾಸಕ ಎಚ್.ಎಸ್ ಪ್ರಕಾಶ್ ಅವರ ಪ್ರಾರ್ಥಿವ ಶರೀರದ ಅಂತಿಮ ದರ್ಶನವನ್ನು ಸಿಎಂ ಕುಮಾರಸ್ವಾಮಿ ಅವರು ಪಡೆದಿದ್ದಾರೆ.

    ಬೆಳಗ್ಗೆ ಬೆಂಗಳೂರಿನಿಂದ ಹೆಲಿಕಾಪ್ಟರ್ ಮೂಲಕ ಹಾಸನಕ್ಕೆ ಆಗಮಿಸಿದ ಸಿಎಂ, ಅಗಲಿದ ಹಿರಿಯ ನಾಯಕನಿಗೆ ಕೊನೆಯ ನಮನ ಸಲ್ಲಿಸಿದ್ದಾರೆ. ಈ ವೇಳೆ ಸಿಎಂ ಅವರೊಂದಿಗೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು, ಸಚಿವ ಹೆಚ್.ಡಿ.ರೇವಣ್ಣ ಭಾಗಿಯಾಗಿದ್ದರು.

    ಎಚ್.ಎಸ್ ಪ್ರಕಾಶ್ ಅವರು ಒಟ್ಟು 6 ಬಾರಿ ಹಾಸನ ಕ್ಷೇತ್ರದಿಂದ ವಿಧಾನಸಭೆಗೆ ಸ್ಪರ್ಧಿಸಿದ್ದರು. ಅದರಲ್ಲಿ 4 ಬಾರಿ ಗೆಲುವನ್ನು ಸಾಧಿಸಿದ್ದರು. ಮೊದಲ ಬಾರಿಗೆ 1994ರಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದರು. ನಂತರ 2004 ರಿಂದ 2018 ರ ವರೆಗೆ ಚುನಾವಣೆಯಲ್ಲಿ ಮೂರು ಬಾರಿ ಗೆದ್ದು ಹ್ಯಾಟ್ರಿಕ್ ಸಾಧನೆ ಮಾಡಿದ್ದರು. ಸೌಮ್ಯ ಸ್ವಭಾವದ ರಾಜಕಾರಣಿಯಾಗಿದ್ದ ಪ್ರಕಾಶ್, ಜನತಾ ದಳ ಪರಿವಾರದ ನಾಯಕರಾದ ದೇವೇಗೌಡರು, ಸಿದ್ದರಾಮಯ್ಯ ಅವರೊಂದಿಗೆ ಆತ್ಮೀಯ ಒಡನಾಟ ಇಟ್ಟುಕೊಂಡಿದ್ದರು. ಈಗ ಎಚ್.ಎಸ್ ಪ್ರಕಾಶ್ ಅವರ ನಿಧನದಿಂದ ಜೆಡಿಎಸ್ ಪಕ್ಷ ಓರ್ವ ಉತ್ತಮ ರಾಜಕಾರಣಿಯನ್ನು ಕಳೆದುಕೊಂಡಿದೆ.

    ಮಾಜಿ ಶಾಸಕ ಎಚ್.ಎಸ್ ಪ್ರಕಾಶ್ ಅವರ ಅಂತ್ಯಕ್ರಿಯೆಯು ಇಂದು ಮಧ್ಯಾಹ್ನದ ನಂತರ, ಶಾಂತಿ ಗ್ರಾಮ ಹೋಬಳಿ ಕೆ. ಆಲದಹಳ್ಳಿಯ ಅವರ ಜಮೀನಿನಲ್ಲಿ ನೆರವೇರಲಿದೆ. ಇದಕ್ಕೂ ಮುನ್ನ ನಗರದ ಪ್ರಮುಖ ರಸ್ತೆಗಳಲ್ಲಿ ಪಾರ್ಥಿವ ಶರೀರದ ಮೆರವಣಿಗೆ ನಡೆಯಲಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಬಿಗಿ ಪೊಲೀಸ್‌ ಬಂದೋಬಸ್ತ್ ಏರ್ಪಡಿಸಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಎಚ್‍ಡಿಕೆಗೆ ಕಪ್ಪ ಪಡೆಯುವುದಷ್ಟೇ ಗೊತ್ತು, ಕೊಡುವುದು ಗೊತ್ತಿಲ್ಲ- ಆಯನೂರು ಮಂಜುನಾಥ್

    ಎಚ್‍ಡಿಕೆಗೆ ಕಪ್ಪ ಪಡೆಯುವುದಷ್ಟೇ ಗೊತ್ತು, ಕೊಡುವುದು ಗೊತ್ತಿಲ್ಲ- ಆಯನೂರು ಮಂಜುನಾಥ್

    ಶಿವಮೊಗ್ಗ: ಜೆಡಿಎಸ್ ರಾಜ್ಯಾಧ್ಯಕ್ಷ ಎಚ್‍ಡಿ ಕುಮಾರಸ್ವಾಮಿಗೆ ಕಪ್ಪ ಪಡೆಯುವುದಷ್ಟೇ ಗೊತ್ತು, ಕೊಡುವುದು ಗೊತ್ತಿಲ್ಲ. ಕಾರಣ ಅವರ ಪಕ್ಷಕ್ಕೆ ಅವರೇ ಹೈಕಮಾಂಡ್ ಅಂತಾ ರಾಜ್ಯಸಭೆ ಮಾಜಿ ಸದಸ್ಯ ಆಯನೂರ್ ಮಂಜುನಾಥ್ ಹೇಳಿದ್ದಾರೆ.

    ಪಕ್ಷದ ಮಿಡಲ್ ಕಮಾಂಡ್ ಹಾಗೂ ಲೋ ಕಮಾಂಡ್ ಎಲ್ಲಾ ಎಚ್‍ಡಿಕೆ ನೇ ಆಗಿದ್ದಾರೆ. ಅವರ ತಂದೆ ಹೆಚ್‍ಡಿ ದೇವೇಗೌಡ ಅವರೇ ಖಜಾಂಚಿಯೂ ಆಗಿದ್ದಾರೆ. ಕುಮಾರಸ್ವಾಮಿ ಒಬ್ಬ ಬ್ಲಾಕ್ ಮೇಲ್ ರಾಜಕಾರಣಿ ಅಂತಾ ಹೇಳಿದ್ರು.

    ಡೈರಿ ಹೊರಬಂದಾಕ್ಷಣ ಮುಖ್ಯಮಂತ್ರಿ ನಾಪತ್ತೆಯಾಗಿದ್ದಾರೆ ಎಂದು ಹೇಳುವುದಿಲ್ಲ. ಅವರಿಗೆ ನಿದ್ರೆ ಖಾಯಿಲೆ ಇರುವುದರಿಂದ ಎಲ್ಲೋ ಮಲಗಿರಬೇಕು. ಎಚ್ಚರಾದ ಮೇಲೆ ಎದ್ದು ಬರುತ್ತಾರೆ. ಕಾಂಗ್ರೆಸ್ ನಾಯಕರು ಹೈಕಮಾಂಡ್ ಗೆ ಕಪ್ಪ ಕೊಟ್ಟಿದ್ದು ನಿಜ. ಹೀಗಾಗಿ ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ಮುಖ್ಯಮಂತ್ರಿ ಮೂಗಿನ ಕೆಳಗೆ ಅವರಿಗೆ ಗೊತ್ತಿರುವಂತೆಯೇ ಈ ಪ್ರಕರಣ ನಡೆದಿರುವುದರಿಂದ ತನಿಖೆ ಮುಗಿಯುವವರೆಗೂ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲಿ ಅಂತಾ ಆಯನೂರು ಮಂಜುನಾಥ್ ಗುಡುಗಿದ್ರು.