Tag: H.D.Deve Gowda

  • ರಾಜ್ಯಸಭೆ ಚುನಾವಣೆ ಫೈಟ್: ಗುರು, ಶಿಷ್ಯರ ಕಾಳಗದಲ್ಲಿ ಗೆದ್ದು ಬೀಗಿದ ಸಿದ್ದರಾಮಯ್ಯ – ಹೆಚ್‍ಡಿಡಿಗೆ ಹಿನ್ನಡೆ

    ರಾಜ್ಯಸಭೆ ಚುನಾವಣೆ ಫೈಟ್: ಗುರು, ಶಿಷ್ಯರ ಕಾಳಗದಲ್ಲಿ ಗೆದ್ದು ಬೀಗಿದ ಸಿದ್ದರಾಮಯ್ಯ – ಹೆಚ್‍ಡಿಡಿಗೆ ಹಿನ್ನಡೆ

    ನವದೆಹಲಿ: ರಾಜ್ಯದಲ್ಲಿ ರಾಜ್ಯಸಭೆ ಚುನಾವಣೆ ಕಾವು ಜೋರಾಗುತ್ತಿದ್ದು, ಕಾಂಗ್ರೆಸ್‍ನ ಎರಡನೇ ಅಭ್ಯರ್ಥಿ ಹಿಂದೆ ಸರಿಸುವ ಪ್ರಯತ್ನದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರಿಗೆ ಹಿನ್ನಡೆಯಾಗಿದೆ. ಎರಡನೇ ಅಭ್ಯರ್ಥಿಯನ್ನು ಹಿಂದೆ ಸರಿಸುವ ವಿಚಾರದಲ್ಲಿ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಹೈಕಮಾಂಡ್ ಹೇಳಿದೆ.

    ರಾಜ್ಯಸಭೆಯ ನಾಲ್ಕನೇ ಸ್ಥಾನಕ್ಕಾಗಿ ಮೂರು ಪಕ್ಷಗಳ ನಡುವೆ ಬಾರಿ ಪೈಪೋಟಿ ಏರ್ಪಟ್ಟಿದೆ. ಬಿಜೆಪಿ ಮೂರು ಅಭ್ಯರ್ಥಿಗಳನ್ನು ಕಣಕ್ಕಿಳಿಸದರೆ, ಜೆಡಿಎಸ್‍ನ ಇಕ್ಕಟ್ಟಿಗೆ ಸಿಲುಕಿಸಲು ಕಾಂಗ್ರೆಸ್ ಎರಡನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತಡದ ಮೇರೆಗೆ ಹೈಕಮಾಂಡ್ ಎರಡನೇ ಅಭ್ಯರ್ಥಿಯಾಗಿ ಮನ್ಸೂರ್ ಅಲಿ ಖಾನ್ ಅವರನ್ನು ಕಣಕ್ಕಿಳಿಸಿತ್ತು. ಇದನ್ನೂ ಓದಿ:  ಉಪಚುನಾವಣೆ: ಉತ್ತರಾಖಂಡ್ ಸಿಎಂಗೆ ಧಾಮಿಗೆ ಭರ್ಜರಿ ಗೆಲುವು

    SIDDARAMAIAH

    ಮನ್ಸೂರ್ ಅಲಿ ಖಾನ್ ಸ್ಪರ್ಧೆಯಿಂದ ತನ್ನ ಪಾಲಿಗೆ ಬರಬಹುದಾದ ಒಂದು ಸ್ಥಾನವನ್ನು ಕಳೆದುಕೊಳ್ಳುವ ಭೀತಿಯಲ್ಲಿ ಜೆಡಿಎಸ್ ಇದ್ದು, ಈ ಹಿನ್ನೆಲೆ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಜೊತೆಗೆ ಹೆಚ್.ಡಿ ದೇವೇಗೌಡ ದೂರವಾಣಿಯಲ್ಲಿ ಮಾತುಕತೆ ನಡೆಸಿದ್ದರು. ಇತ್ತ ದೆಹಲಿಯಲ್ಲಿ ಜೆಡಿಎಸ್ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಮೂಲಕ ಸೋನಿಯಾಗಾಂಧಿ ಅವರನ್ನು ಭೇಟಿ ಮಾಡಿ ಬೆಂಬಲಕ್ಕೆ ಮನವಿ ಮಾಡಿದರು.

    ಇದಕ್ಕೆ ಉತ್ತರಿಸಿರುವ ಸೋನಿಯಾಗಾಂಧಿ ರಾಜ್ಯಸಭೆ ಚುನಾವಣೆ ವಿಚಾರದಲ್ಲಿ ಮಧ್ಯಪ್ರವೇಶ ಮಾಡುವುದಿಲ್ಲ, ಸ್ಥಳೀಯ ನಾಯಕರು ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ. ಏನೇ ಮಾತುಕತೆ ಇದ್ದರೂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹಾಗೂ ಉಸ್ತುವಾರಿ ರಣದೀಪ್ ಸುರ್ಜೆವಾಲ ಜೊತೆಗೆ ನಡೆಸಿ ಎಂದು ಸೋನಿಯಾಗಾಂಧಿ ಹೇಳಿದ್ದಾರೆ ಎಂದು ಮೂಲಗಳು ಹೇಳಿವೆ. ಇದನ್ನೂ ಓದಿ:  ಸೋನಿಯಾ ಗಾಂಧಿ ಬಳಿಕ ಪ್ರಿಯಾಂಕಾ ಗಾಂಧಿಗೂ ಕೊರೊನಾ

    ಎರಡನೇ ಅಭ್ಯರ್ಥಿಯನ್ನು ಹಿಂದೆ ಪಡೆಯುವ ಪ್ರಶ್ನೆ ಇಲ್ಲ, ಜೆಡಿಎಸ್ ಜೊತೆಗೆ ಹೊಂದಾಣಿಕೆಯ ಮಾತೇ ಇಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟವಾಗಿ ಹೇಳಿದ್ದರು. ಇದಕ್ಕೆ ತಿರುಗೇಟು ನೀಡಿದ್ದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕಾಂಗ್ರೆಸ್ ಜೊತೆಗೆ ಮೈತ್ರಿ ಇಲ್ಲ ಎಂದಿದ್ದರು. ಆದರೆ ಹೆಚ್.ಡಿ ದೇವೇಗೌಡರು ಹೈಕಮಾಂಡ್ ಮಟ್ಟದಲ್ಲಿ ಮಾತುಕತೆ ನಡೆಸುವ ಪ್ರಯತ್ನ ನಡೆಸಿದ್ದರು.

    KUMARASWAMY

    ಹೈಕಮಾಂಡ್‍ನ ಈ ನಿರ್ಧಾರದಿಂದ ಹೆಚ್.ಡಿ ದೇವೇಗೌಡರಿಗೆ ಭಾರೀ ಮುಖಭಂಗವಾಗಿದ್ದು, ಮಾಜಿ ಗುರು – ಶಿಷ್ಯರ ರಾಜಕೀಯ ಯುದ್ಧದಲ್ಲಿ ಶಿಷ್ಯ ಸಿದ್ದರಾಮಯ್ಯ ಗೆದ್ದು ಬೀಗುವಂತಾಗಿದೆ. ಜೂನ್ 10 ರಂದು ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು ಇಂದು ನಾಮಪತ್ರ ವಾಪಸ್ ಪಡೆಯಲು ಕಡೆಯ ದಿನವಾಗಿದೆ.

  • ಹೆಚ್‍ಡಿಕೆ ಮನೆಯಲ್ಲಿನ ದೇವಸ್ಥಾನ ಪುಡಿ ಮಾಡಿದ್ರೆ ಸುಮ್ಮನಿರುತ್ತಿದ್ದರಾ?- ಈಶ್ವರಪ್ಪ

    ಹೆಚ್‍ಡಿಕೆ ಮನೆಯಲ್ಲಿನ ದೇವಸ್ಥಾನ ಪುಡಿ ಮಾಡಿದ್ರೆ ಸುಮ್ಮನಿರುತ್ತಿದ್ದರಾ?- ಈಶ್ವರಪ್ಪ

    ಬಾಗಲಕೋಟೆ: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರ ಮನೆಯಲ್ಲಿನ ದೇವಸ್ಥಾನ ಪುಡಿ ಮಾಡಿದರೆ ಸುಮ್ಮನಿರುತ್ತಿದ್ದರಾ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಪ್ರಶ್ನಿಸುವ ಮೂಲಕ ಟಾಂಗ್ ಕೊಟ್ಟರು.

    ತಾಂಬೂಲ ಪ್ರಶ್ನೆ ವಿಚಾರವಾಗಿ ರಾಜ್ಯದ ಜನರ ಮೇಲೆ ಮೂಢನಂಬಿಕೆ ಹೇರುತ್ತಿದ್ದಾರೆಂಬ ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ದೇವೇಗೌಡರ ವಂಶ ನನಗೂ ಒಂದು ಆದರ್ಶ. ದೇವರು, ಧರ್ಮದ ಬಗ್ಗೆ ಆ ವಂಶ ಇಟ್ಟುಕೊಂಡ ನಂಬಿಕೆಯನ್ನು ಎಲ್ಲಾ ಕುಟುಂಬದವರು ಇಟ್ಟುಕೊಳ್ಳಬೇಕು. ರಾಜಕಾರಣಕ್ಕಾಗಿ ಕುಮಾರಸ್ವಾಮಿ ಏನೋ ಒಂದು ಹೇಳಿದರೆ ನಾನು ಟೀಕೆ ಮಾಡಲ್ಲ. ಮಸೀದಿ ರಿಪೇರಿ ಮಾಡೋವಾಗ ದೇವರುಗಳು ಸಿಕ್ಕಿವೆ. ಅದೇ ಚರ್ಚೆ ನಡೆಯುತ್ತಿದೆ ಎಂದರು.

    ಕುಮಾರಸ್ವಾಮಿ ತಂದೆ ದೇವೇಗೌಡರು ಒಳ್ಳೆಯ ಕೆಲಸ ಮಾಡಿದ್ದಾರೆ. ದೇವೇಗೌಡರ ಬಗ್ಗೆ ಹೆಚ್ಚು ಟೀಕೆ ಮಾಡೋಕೆ ಹೋಗಲ್ಲ. ದೇವೇಗೌಡರು ಮತ್ತು ಯಡಿಯೂರಪ್ಪ ಅವರು ರಾಜ್ಯದಲ್ಲಿ ಅತಿ ಹೆಚ್ಚು ಪ್ರವಾಸ ಮಾಡಿ ಅಭಿವೃದ್ಧಿ ಮಾಡಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಇಂದು ರಾಜ್ಯಕ್ಕೆ ಕೇಂದ್ರ ಸಚಿವ ರಾಜನಾಥ್ ಸಿಂಗ್ ಭೇಟಿ

    ಕಾಶಿ, ಮಥುರಾ ಬಗ್ಗೆ ಮೊದಲು ಸರಿಯಾಗಿ ತಿಳಿದುಕೊಳ್ಳಲಿ. ರಾಮಮಂದಿರ ಬಗ್ಗೆ ಟೀಕೆ ಮಾಡಿದರು. ಇವತ್ತಲ್ಲ ನಾಳೆ ಭವ್ಯ ರಾಮಮಂದಿರ ನಿಮಾ9ಣವಾಗುತ್ತೆ. ಅದೇ ಕುಮಾರಸ್ವಾಮಿ, ಡಿಕೆ ಶಿವಕುಮಾರ್, ಸಿದ್ದರಾಮಯ್ಯ, ದೇವೇಗೌಡರು ರಾಮಮಂದಿರಕ್ಕೆ ಹೋಗಿ ದರ್ಶನ ಮಾಡೋ ಕಾಲ ದೂರವಿಲ್ಲ ಎಂದರು. ಇದನ್ನೂ ಓದಿ: ಬಿಜೆಪಿ ಮುಖಂಡ ಆತ್ಮಹತ್ಯೆ ಪ್ರಕರಣ – ಅನಂತರಾಜು ಜೊತೆಗಿನ ಖಾಸಗಿ ವೀಡಿಯೋ ಇದೆ ಎಂಬ ಗೆಳತಿ ಚಾಟಿಂಗ್ ವೈರಲ್

    ಮೊನ್ನೆ ಡಿಕೆ ಶಿವಕುಮಾರ್ ದಂಪತಿ ಸಮೇತ ಕೇದಾರನಾಥ ದೇಗುಲಕ್ಕೆ ಹೋಗಿದ್ದರು ಸಂತೋಷ. ಮುಸ್ಲಿಂ ವೋಟು ಬೇಕು ಟೀಕೆ ಮಾಡಲಿ. ಆದರೆ ತಾನೊಬ್ಬ ಹಿಂದೂ ಅನ್ನೋ ಮನೋಭಾವನೆ ಇದೆಯಲ್ಲಾ. ಕುಮಾರಸ್ವಾಮಿ, ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಅವರಲ್ಲಿ ಒಳಗಡೆ ದೈವಭಕ್ತಿ ಇದೆ. ಮುಸ್ಲಿಮರ ವೋಟಿಗಾಗಿ ನಾಟಕ ಮಾಡ್ತಿದ್ದಾರೆ ಮಾಡಲಿ ಎಂದರು.

  • ಕೋಮು ಗಲಭೆಗೆ ಕಾಂಗ್ರೆಸ್, ಬಿಜೆಪಿನೇ ನೇರ ಕಾರಣ: ಹೆಚ್.ಡಿ. ದೇವೇಗೌಡ

    ಕೋಮು ಗಲಭೆಗೆ ಕಾಂಗ್ರೆಸ್, ಬಿಜೆಪಿನೇ ನೇರ ಕಾರಣ: ಹೆಚ್.ಡಿ. ದೇವೇಗೌಡ

    ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಕೋಮು ಗಲಭೆಗೆ ಕಾಂಗ್ರೆಸ್ ಹಾಗೂ ಬಿಜೆಪಿ ನೇರ ಕಾರಣ ಎಂದು ಮಾಜಿ ಪ್ರಧಾನ ಮಂತ್ರಿ ಹೆಚ್.ಡಿ. ದೇವೇಗೌಡ ಹೇಳಿದರು.

    ಚಿಕ್ಕಬಳ್ಳಾಪುರ ತಾಲೂಕು ಪೆರೇಸಂದ್ರ ಗ್ರಾಮದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಸಿಎಂ ಆಗಿದ್ದಾಗ ಒಂದೇ ಒಂದು ಕೋಮುಗಲಭೆ ಆಗಿರಲಿಲ್ಲ. ಕಾಂಗ್ರೆಸ್ ಹಾಗೂ ಬಿಜೆಪಿ ಅವರು ದೊಡ್ಡವರು, ಇಬ್ಬರದ್ದು ದೊಡ್ಡ, ದೊಡ್ಡ ಪಕ್ಷಗಳು, ಜನ ಮೆಚ್ಚಿಕೊಂಡು ಅವರಿಗೆ ವೋಟು ಕೊಡುತ್ತಾರೋ, ಇವರಿಗೆ ಕೊಡುತ್ತಾರೋ ನಂಗೆ ಗೊತ್ತಿಲ್ಲ. ಆದರೆ ಈ ವಿಚಾರದಲ್ಲಿ ಕೇಂದ್ರ ಸರ್ಕಾರ ಏನು ಮಾಡುತ್ತಿದೆ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಮಠಕ್ಕೆ ಅನುದಾನ ಬೇಕಿದ್ರೆ ಶೇ.30 ಕಮಿಷನ್ ಕೊಡಿ ಅಂತಾರೆ ಅಧಿಕಾರಿಗಳು: ದಿಂಗಾಲೇಶ್ವರ ಸ್ವಾಮೀಜಿ

    ಗಲಭೆಗೆ ಬಿಜೆಪಿ ಕಾರಣ ಆದರೆ ಬಿಜೆಪಿ ಮೇಲೆ, ಕಾಂಗ್ರೆಸ್ ಕಾರಣ ಆದರೆ ಕಾಂಗ್ರೆಸ್ ಮೇಲೆ ಕ್ರಮ ತೆಗೆದುಕೊಳ್ಳಬೇಕು. ಕೇಂದ್ರ ಸರ್ಕಾರ ಯಾಕೆ ಮುಗ್ಧರಾಗಿ ನೋಡುತ್ತಿದೆ. ಇದು ಇದ್ದರೇನೆ ಅವರಿಗೆ ವೋಟು ಬರುವುದು ಅಂತ ಸುಮ್ಮನಿದ್ದಾರೆ. ಅವರು ಆಳಿರುವುದನ್ನು ನಾನು ನೋಡಿದ್ದೇನೆ. ಕಾಂಗ್ರೆಸ್ ಪಕ್ಷದ ಬಗ್ಗೆಯೂ ನನಗೆ ಗೊತ್ತಿದೆ. ಇದರ ಬಗ್ಗೆ ಯಾರಾದರೂ ಮಾತನಾಡುತ್ತಿದ್ದೀರಾ? ಅವರ ಹೈಕಮಾಂಡ್ ಇದ್ಯಾ? ನಾನು ಸಿದ್ದರಾಮಯ್ಯ ಬಗ್ಗೆ ಮಾತನಾಡಲು ಆಗುತ್ತಾ? ನನ್ನ ಮಾತು ಸಿದ್ದರಾಮಯ್ಯ ಕೇಳುತ್ತಾರಾ ಎಂದರು. ಇದನ್ನೂ ಓದಿ: ಇಬ್ಬರು, ಮೂವರು ಸಚಿವರನ್ನು ಬಿಟ್ಟು ಎಲ್ರೂ 40% ಕಮಿಷನ್ ಪಡೆಯುತ್ತಿದ್ದಾರೆ: ಎಂ.ಬಿ ಪಾಟೀಲ್

  • ಹಿಜಬ್ ಪ್ರಕರಣ ದೊಡ್ಡದಾಗಲು ಸರ್ಕಾರವೇ ಕಾರಣವಾಗಿದೆ: ಎಚ್‍.ಡಿ ದೇವೇಗೌಡ

    ಹಿಜಬ್ ಪ್ರಕರಣ ದೊಡ್ಡದಾಗಲು ಸರ್ಕಾರವೇ ಕಾರಣವಾಗಿದೆ: ಎಚ್‍.ಡಿ ದೇವೇಗೌಡ

    ನವದೆಹಲಿ: ಪ್ರಾರಂಭದಲ್ಲಿ ಒಂದು ಸಣ್ಣ ಕಿಡಿ ಕರಾವಳಿಯಲ್ಲಿ ಶುರುವಾಯಿತು. ಈ ಬಗ್ಗೆ ಎರಡೂ ರಾಷ್ಟ್ರೀಯ ಪಕ್ಷಗಳು ಉಗ್ರವಾಗಿ ಹೋರಾಟ ಮಾಡಿವೆ. ಹಿಜಬ್ ಪ್ರಕರಣ ಸಣ್ಣದಾಗಿದ್ದಾಗಲೇ ಚಿವುಟಿ ಹಾಕಬಹುದಿತ್ತು. ಹಿಜಬ್ ಪ್ರಕರಣ ದೊಡ್ಡದಾಗಲು ಸರ್ಕಾರವೇ ಕಾರಣವಾಗಿದೆ ಎಂದು ಮಾಜಿ ಪ್ರಧಾನಿ ಎಚ್‍.ಡಿ ದೇವೇಗೌಡ ಹೇಳಿಕೆ

    ದೆಹಲಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹೈಕೋರ್ಟ್ ತೀರ್ಪು ಒಪ್ಪ ಬೇಕೆಂಬುದು ನಮ್ಮ ಪಕ್ಷದ ನಿಲುವು ಇದೇ ಆಗಿತ್ತು. ಈ ವಿಷಯದಲ್ಲಿ ರಾಜಕೀಯ ಲಾಭ-ನಷ್ಟದ ಬಗ್ಗೆ ಇಲ್ಲ. ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅಡೆತಡೆ ಇರಬಾರದು. ಮೊದಲಿನಿಂದಲೂ ನನ್ನದು ಇದೇ ನಿಲುವಾಗಿದೆ. ಸುಪ್ರೀಂ ಕೋರ್ಟ್‍ಗೆ ಹೋಗುವವರನ್ನು ಯಾರು ತಡೆಯಲು ಸಾಧ್ಯ? ಹೈಕೋರ್ಟ್ ತೀರ್ಪನ್ನು ಎಲ್ಲರೂ ಒಪ್ಪಿ ಶಾಂತಯುತವಾಗಿರಬೇಕು. ರಾಜ್ಯದಲ್ಲಿ ಶಾಂತಿ ನೆಲಸಲು ವಿದ್ಯಾರ್ಥಿಗಳು, ಪೋಷಕರಿಗೆ ಮನವಿ ಮಾಡುತ್ತೇನೆ. ಸುಪ್ರೋ ಕೋರ್ಟಿನಲ್ಲಿ ಅರ್ಜಿ ಹಾಕುವವರು, ಪೋಷಕರು ಹೈಕೋರ್ಟ್ ತೀರ್ಪನ್ನು ಒಪ್ಪಿಕೊಂಡು ಮುನ್ನಡೆಯುವುದು ಒಳ್ಳೆಯದು ಎಂದಿದ್ದಾರೆ. ಇದನ್ನೂ ಓದಿ: ರಾಜ್ಯ ಸರ್ಕಾರದ ಒತ್ತಡದಿಂದ ಬಂದಿರುವ ತೀರ್ಪು: ಉಡುಪಿ ವಿದ್ಯಾರ್ಥಿನಿಯರು

    ಪ್ರಾರಂಭದಲ್ಲಿ ಒಂದು ಸಣ್ಣ ಕಿಡಿ ಕರಾವಳಿಯಲ್ಲಿ ಶುರುವಾಯಿತು. ಈ ಬಗ್ಗೆ ಎರಡೂ ರಾಷ್ಟ್ರೀಯ ಪಕ್ಷಗಳು ಉಗ್ರವಾಗಿ ಹೋರಾಟ ಮಾಡಿವೆ. ಸಿಎಂ ಬಸವರಾಜ ಬೊಮ್ಮಾಯಿ ತಕ್ಷಣವೇ ಎಲ್ಲಾ ಪಕ್ಷದವರ ಜೊತೆ ಚರ್ಚಿಸಿ ಹತ್ತಿಕ್ಕಬಹುದಿತ್ತು. ಹಿಜಬ್ ಪ್ರಕರಣ ದೊಡ್ಡದಾಗಲು ಸರ್ಕಾರವೇ ಕಾರಣವಾಗಿದೆ. ರಾಜ್ಯ ಸರ್ಕಾರ ಹಿಜಾಬ್ ಪ್ರಕರಣ ನಿಭಾಯಿಸಲು ವಿಫಲವಾಯಿತು. ಈಗ ಸುಪ್ರೀಂ ಕೋರ್ಟಿಗೆ ಹೋಗುತ್ತಿರುವುದರಿಂದ ಇನ್ನೂ ಕೆಟ್ಟ ವಾತಾವರಣ ನಿರ್ಮಾಣವಾಗುತ್ತದೆ. ಹಿಂದಿನ ಹಲವಾರು ಘಟನೆಗಳಿಂದಲೇ ರಾಜಕೀಯ ಲಾಭ ಮಾಡಿಕೊಳ್ಳುತ್ತಿದೆ ಎಂದು ಬಿಜೆಪಿ ಪಕ್ಷದ ವಿರುದ್ಧವಾಗಿ ಕಿಡಿಕಾರಿದ್ದಾರೆ.

    ಎರಡೂ ರಾಜಕೀಯ ಪಕ್ಷಗಳು ಉಪಯೋಗ ಪಡೆಯಲು ಪ್ರಯತ್ನಿಸಿವೆ. ಯಾರು ಈ ಪ್ರಕರಣದ ಹಿಂದೆ ಇದ್ದಾರೆ ಎಂಬ ಮಾಹಿತಿ ರಾಜ್ಯ ಸರ್ಕಾರಕ್ಕೆ ಇರುತ್ತದೆ. ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬಹುದಿತ್ತು. ಈ ಪ್ರಕರಣವನ್ನು ಬೆಳೆಯಲು ಬಿಡಬಾರದಿತ್ತು. ಹಿಜಬ್ ಪ್ರಕರಣ ಸಣ್ಣದಾಗಿದ್ದಾಗಲೇ ಚಿವುಟಿಹಾಕಬಹುದಿತ್ತು. ಎಸ್‍ಡಿಪಿಐ, ಪಿಎಫ್‍ಐ ಮಾಡುವುದು ಸುಲಭ ಅಲ್ಲ. ಆರ್‍ಎಸ್‍ಎಸ್ ಹೇಗೋ, ಹಾಗೆಯ ಎಸ್‍ಡಿಪಿಐ, ಪಿಎಫ್‍ಐ ರಾಷ್ಟ್ರ ಮಟ್ಟದಲ್ಲಿ ಇದೆ. ಆದುದರಿಂದ ಎಸ್‍ಡಿಪಿಐ, ಪಿಎಫ್‍ಐ ಬ್ಯಾನ್ ಮಾಡುವುದು ಕಷ್ಟ ಎಂಬುದು ನನ್ನ ಭಾವನೆ ಎಂದಿದ್ದಾರೆ.

  • ಹಿಜಬ್ ವಿಚಾರದಲ್ಲಿ ಕೋರ್ಟ್ ಏನೇ ತೀರ್ಪು ಕೊಟ್ಟರೂ ಎಲ್ಲರೂ ಕಟ್ಟುನಿಟ್ಟಾಗಿ ಪಾಲಿಸಬೇಕು: ಹೆಚ್.ಡಿ ದೇವೇಗೌಡ

    ಹಿಜಬ್ ವಿಚಾರದಲ್ಲಿ ಕೋರ್ಟ್ ಏನೇ ತೀರ್ಪು ಕೊಟ್ಟರೂ ಎಲ್ಲರೂ ಕಟ್ಟುನಿಟ್ಟಾಗಿ ಪಾಲಿಸಬೇಕು: ಹೆಚ್.ಡಿ ದೇವೇಗೌಡ

    ಹಾಸನ: ಹಿಜಬ್ ವಿಚಾರದಲ್ಲಿ ಕೋರ್ಟ್ ಏನೇ ತೀರ್ಪು ಕೊಟ್ಟರು ಎಲ್ಲರೂ ಕಟ್ಟುನಿಟ್ಟಾಗಿ ಪಾಲಿಸಬೇಕು, ಇದಕ್ಕೆ ಸರ್ಕಾರ ಎಲ್ಲಾ ರೀತಿ ಸಿದ್ದತೆ ಮಾಡಿಕೊಳ್ಳಬೇಕು ಎಂದು ಮಾಜಿ ಪ್ರಧಾನಿ ಹೆಚ್‍ಡಿ.ದೇವೇಗೌಡ ಕಿವಿಮಾತು ಹೇಳಿದ್ದಾರೆ.

    ಹಾಸನದಲ್ಲಿ ಹಿಜಬ್, ಕೇಸರಿ ಶಾಲು ವಿವಾದದ ಬಗ್ಗೆ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು, ಈ ಒಂದು ಸಮಸ್ಯೆ ಸಣ್ಣದಾಗಿ ಆರಂಭವಾಯಿತು. ಈ ಸಮಸ್ಯೆಯನ್ನು ಸದುಪಯೋಗಪಡಿಸಿಕೊಂಡು ತಮ್ಮ ಪಕ್ಷಕ್ಕೆ ಹೆಚ್ಚು ಶಕ್ತಿಯನ್ನು ತುಂಬಿಕೊಳ್ಳುವ ಕೆಲಸವನ್ನು ಎರಡು ರಾಷ್ಟ್ರೀಯ ಪಕ್ಷಗಳು ಮಾಡಿದವು  ಎಂದು ಹೇಳಿದ್ದಾರೆ. ಇದನ್ನೂ ಓದಿ: ಪ್ರಧಾನಿಗೆ ಭದ್ರತೆ ನೀಡಲು ಸಾಧ್ಯವಾಗದ ಚನ್ನಿ ಪಂಜಾಬ್‍ನ್ನು ಹೇಗೆ ಕಾಪಾಡಿಕೊಳ್ಳುವರು: ಅಮಿತ್ ಶಾ

    ಹಿಜಬ್ ವಿವಾದ ಹೈಕೋರ್ಟ್ ಮೆಟ್ಟಿಲೇರಿದೆ, ಅಲ್ಲಿಯವರೆಗೂ ಹೋಗಬೇಕಿರಲಿಲ್ಲ. ಆರಂಭದಲ್ಲೇ ಬಿಜೆಪಿ, ಕಾಂಗ್ರೆಸ್ ಮುಖಂಡರು ಕುಳಿತು ಮಾತನಾಡಿ ಸಮಸ್ಯೆ ಬಗೆಹರಿಸಬೇಕಿತ್ತು. ಮೊದಲು ಮಂಗಳೂರು ಕೋಸ್ಟಲ್ ಬೆಲ್ಟ್‍ನಲ್ಲಿ ಇದು ಪ್ರಾರಂಭವಾಯಿತು. ಆದರೆ ಸರ್ಕಾರ ಆರಂಭದಲ್ಲೇ ಸಮಸ್ಯೆ ಬಗೆಹರಿಸುವ ಕೆಲಸ ಮಾಡಲಿಲ್ಲ. ಒಬ್ಬರಿಗೆ ಇನ್ನೊಬ್ಬರ ಮೇಲೆ ದ್ವೇಷ, ಅದರಿಂದ ಏನೇನಾಯ್ತು. ನಾಳೆ ಹೈಕೋರ್ಟ್‍ನಲ್ಲಿ ವಿಚಾರಣೆ ಇದೆ. ನಾಳೆ ತೀರ್ಪು ಬರುತ್ತೋ, ಮುಂದೆ ಹೋಗುತ್ತೋ ನೋಡಬೇಕು.

    ಹೊರ ರಾಷ್ಟ್ರದ ಟಿವಿ ಚಾನೆಲ್‍ಗಳಲ್ಲಿ ಈ ವಿಚಾರ ಪ್ರಚಾರವಾಗಿದೆ. ಇದನ್ನು ಬಳಕೆ ಮಾಡಿಕೊಳ್ಳುತ್ತಾರೆ. ನಾಳೆ ಹೈಕೋರ್ಟ್ ಏನೇ ತೀರ್ಪು ಕೊಟ್ಟರು ಎರಡು ಗುಂಪು ಒಪ್ಪಿಕೊಳ್ಳಬೇಕು. ನಿರ್ದಾಕ್ಷಿಣ್ಯವಾಗಿ ಹೇಳುತ್ತೇನೆ ನಾಳೆ ತೀರ್ಪು ಮೂರು ಬೆಂಚಿನ ಆಜ್ಞೆ. ಎಲ್ಲರೂ ಕಟ್ಟುನಿಟ್ಟಾಗಿ ಪಾಲಿಸಬೇಕು, ಇದಕ್ಕೆ ಸರ್ಕಾರ ಎಲ್ಲಾ ರೀತಿ ಸಿದ್ದತೆ ಮಾಡಿಕೊಳ್ಳಬೇಕು ಎಂದು ಮಾಜಿ ಪ್ರಧಾನಿ ದೇವೇಗೌಡರು ಹೇಳಿದ್ದಾರೆ.

  • ಬಿಜೆಪಿಯನ್ನ ಬಿಜೆಪಿಯಂತನೋ, ಮೋದಿ ಪಕ್ಷ ಅಂತಾ ಕರೀಬೇಕಾ ಗೊತ್ತಿಲ್ಲ: ಹೆಚ್‍ಡಿಡಿ

    ಬಿಜೆಪಿಯನ್ನ ಬಿಜೆಪಿಯಂತನೋ, ಮೋದಿ ಪಕ್ಷ ಅಂತಾ ಕರೀಬೇಕಾ ಗೊತ್ತಿಲ್ಲ: ಹೆಚ್‍ಡಿಡಿ

    ಕಲಬುರಗಿ: ಬಿಜೆಪಿಯನ್ನ ಬಿಜೆಪಿ ಅಂತಾ ಕರೆಯಬೇಕಾ ಅಥವಾ ಮೋದಿ ಪಕ್ಷ ಅಂತಾ ಕರೆಯಬೇಕಾ ಗೊತ್ತಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಹೇಳಿದರು.

    ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲಬುರಗಿಯಲ್ಲಿ ಜೆಡಿಎಸ್ ಪಕ್ಷಕ್ಕೆ ಇನ್ನೂ ಶಕ್ತಿ ತುಂಬಬೇಕು. 2023 ಕ್ಕೆ ಬಿಜೆಪಿ ಹಾಗೂ ಕಾಂಗ್ರೆಸ್‍ನವರು ಜೆಡಿಎಸ್ ಪಕ್ಷವನ್ನ ಸಂಪೂರ್ಣ ನಾಶ ಮಾಡುತ್ತೇವೆ ಅಂತಾ ಹೇಳುತ್ತಿದ್ದಾರೆ. ಎರಡು ರಾಷ್ಟ್ರೀಯ ಪಕ್ಷಗಳಲ್ಲಿ ಒಂದಕ್ಕೆ ಶಕ್ತಿ ಕಡಿಮೆ ಇದೆ. ಕಾಂಗ್ರೆಸ್ ಎರಡು ರಾಜ್ಯದಲ್ಲಿ ಮಾತ್ರ ಅಧಿಕಾರದಲ್ಲಿ ಇದೆ. 5 ರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಎಷ್ಟು ಬೆಳೆಯುತ್ತೆ ಅನ್ನೋದು ಹೇಳೋಕೆ ಆಗುವುದಿಲ್ಲ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ರಾಷ್ಟ್ರೀಯ ಪಕ್ಷ ಕಾಂಗ್ರೆಸ್, ಈಗ ಯಾವ ರಾಜ್ಯದಲ್ಲಿಯೂ ಇಲ್ಲ. ಇದಕ್ಕೆ ಕಾರಣ ಯಾರು ಅಂತಾ ಅವರೇ ಹುಡುಕಬೇಕು ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ಹುಟ್ಟೂರಿಗೆ ನೆರವಾದ ಸೋನು ಸೂದ್-1,000 ವಿದ್ಯಾರ್ಥಿನಿಯರಿಗೆ ಸೈಕಲ್ ವಿತರಣೆ

    ಇವತ್ತು ಬಿಜೆಪಿಯನ್ನ ಬಿಜೆಪಿ ಅಂತಾ ಕರೆಯಬೇಕಾ ಅಥವಾ ಮೋದಿ ಪಕ್ಷ ಅಂತಾ ಕರೆಯಬೇಕಾ ಗೊತ್ತಿಲ್ಲ. ಯಾಕೆಂದರೆ ಬಿಜೆಪಿ ಪಕ್ಷದಲ್ಲಿದ್ದವರು ಮೋದಿ ಹೆಸರಿನಲ್ಲೇ ಚುನಾವಣೆ ಮಾಡುತ್ತಿದ್ದಾರೆ. ಅದಕ್ಕಾಗಿ ನಾನು ಮೋದಿ ಪಾರ್ಟಿ ಅಂತಾ ಕರೆಯುತ್ತೇನೆ. ಒಬ್ಬ ವ್ಯಕ್ತಿಯ ಸಕ್ಸಸ್ ನಲ್ಲಿ ಪಾರ್ಟಿ ನಡೆಯುತ್ತಿದೆ. ಆದರೆ ಮುಂದೇನು ಆಗುತ್ತೋ ಅದು ನನಗೆ ಗೊತ್ತಿಲ್ಲ ಎಂದು ಟಾಂಗ್ ನೀಡಿದರು.

    ಜೆಡಿಎಸ್‍ನ ಪಂಚರತ್ನ ಕಾರ್ಯಕ್ರಮ ಎಲ್ಲರ ಒಳ್ಳೆಯದಕ್ಕಾಗಿ ರೂಪಿಸಿದ್ದಾರೆ. ಆದರೆ ಮಾಜಿ ಸಿಎಂ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಅವರು ಮಾಡಿರುವ ಭಾಗ್ಯ ಯೋಜನೆಗಳಿಗೆ ಟಚ್ ಮಾಡಬಾರದು ಅಂತಾ ಹೇಳಿದ್ದರು. ಈ ಯೋಜನೆಗಳಿಗೂ ಹಣ ಒದಗಿಸಿ ಸಾಲಮನ್ನಾ ಮಾಡಿದ್ದರು ಎಂದರು.

    ರಾಮನಗರದಲ್ಲಿ ಬಿಜೆಪಿ ಸಚಿವ ಹಾಗೂ ಕಾಂಗ್ರೆಸ್ ಸಂಸದರ ಜಟಾಪಟಿ ಹಿನ್ನೆಲೆ ಪ್ರತಿಕ್ರಿಯೆ ನೀಡಿದ ಅವರು, ಈ ರೀತಿಯ ಘಟನೆ ಆಗಬಾರದಿತ್ತು. ಎರಡು ರಾಷ್ಟ್ರೀಯ ಪಕ್ಷಗಳು ಈ ಮಟ್ಟಕ್ಕೆ ಇಳಿಯಬಾರದಿತ್ತು ಎಂದು ಹೇಳಿದರು.

    ಮೇಕೆದಾಟು ಕಾಂಗ್ರೆಸ್ ಪಾದಯಾತ್ರೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸುಪ್ರಿಂಕೋರ್ಟ್ ನಲ್ಲಿ ಈ ಕುರಿತು ದಿನಾಂಕ ನಿಗದಿ ಮಾಡಿದ್ದಾರೆ ಅಂತಾ ಕೇಳಿದ್ದೀನಿ. ಕುಮಾರಸ್ವಾಮಿ ಸಿಎಂ ಆಗಿದ್ದಾಗ ಸಾರಿಗೆ ಮತ್ತು ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿ ಪ್ರಾವಿಜನಲ್ ಕ್ಲಿಯರೆನ್ಸ್ ಮಾಡಿದ್ದರು. ಅದಾದ ಮೇಲೆ ತಮಿಳುನಾಡಿನವರು ಖ್ಯಾತೆ ತೆಗೆದಿದ್ದರು. ನಾಲ್ಕು ರಾಜ್ಯಗಳ ನೀಲುವು ತೆಗೆದುಕೊಂಡು ಅಂತಿಮ ಜಡ್ಜ್‍ಮೆಂಟ್ ಬರಲಿ. ಅದು ಏನು ಬರುತ್ತೆ ಅನ್ನೋದು ಗೊತ್ತಿಲ್ಲ ಎಂದು ನುಡಿದರು.

    ಕೊರೊನಾ ಸಂದರ್ಭದಲ್ಲಿ ಕಾಂಗ್ರೆಸ್‍ನ ಪಾದಯಾತ್ರೆ ಹೋರಾಟ ಎಷ್ಟು ಯಶಸ್ವಿಯಾಗುತ್ತೋ ಗೊತ್ತಿಲ್ಲ. ಈ ಹೋರಾಟದಲ್ಲಿ ಬಿಜೆಪಿಯವರು ಕಾಂಗ್ರೆಸ್ ಮುಗಿಸಬೇಕು ಅಂತಾ ನಿಂತಿದ್ದಾರೆ. ಕಾಂಗ್ರೆಸ್ ಕಳೆದು ಹೋಗಿರುವ ವರ್ಚಸ್ಸು ಬೆಳೆಸಬೇಕು ಅಂತಾ ನಿಂತಿದ್ದಾರೆ ಎಂದು ಹೇಳಿದರು.

    ಸಿದ್ದರಾಮಯ್ಯ 5 ವರ್ಷ ಸಿಎಂ ಆಗಿದ್ದಾಗ ಏನ್ ಆಯ್ತು? ನಾವು ಬಿಜೆಪಿಯ ಬಿ ಟೀಮ್ ಅಂತಾ ಆರು ತಿಂಗಳ ಕಾಲ ಹೇಳಿದ್ದರು. 130 ಕ್ಕಿದ್ದ ಕಾಂಗ್ರೆಸ್ ಈಗ 78 ಕ್ಕೆ ಬಂತು ನಿಂತಿದೆ. ಇವರ ಹೋರಾಟದಿಂದ ಫಲ ಸಿಗುತ್ತದೆ ಅಂದರೆ ಅದಷ್ಟು ಸುಲಭವಲ್ಲ. ಜೆಡಿಎಸ್‍ಗೂ 20% ಮತಗಳು ಇವೆ. 2024 ರಲ್ಲಿ ಲೋಕಸಭೆಯಲ್ಲಿ ತೃತೀಯ ರಂಗ ಅಧಿಕಾರಕ್ಕೆ ಬರುವುದು ಕಷ್ಟ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಹಳ ಸ್ಟ್ರಾಂಗ್ ಲೀಡರ್ ಇದ್ದು, ಮೈನಸ್ ಕಾಂಗ್ರೆಸ್ ನಾವು ಮಾಡಬೇಕು ಅಂತಾ ಹೇಳುತ್ತಾರೆ ಎಂದು ನುಡಿದರು. ಇದನ್ನೂ ಓದಿ:  ಓಮಿಕ್ರಾನ್ ಶ್ವಾಸಕೋಶಕ್ಕೆ ಹೋಗಲ್ಲ, ಗಂಟಲಲ್ಲಿ ಮಾತ್ರ ಇರುತ್ತೆ: ಸುಧಾಕರ್

    ಮಲ್ಲಿಕಾರ್ಜುನ ಖರ್ಗೆಯವರು ಮೊದಲ ಬಾರಿಗೆ ಲೋಕಸಭೆಯಲ್ಲಿ ಗೆಲ್ಲಲಿಲ್ಲ. ಹಾಗಾಗಿ ಕಾಂಗ್ರೆಸ್ ಸ್ಥಿತಿಗತಿ ಏನಿದೆ ಅಂತಾ ಯೋಚನೆ ಮಾಡಲಿ ಎಂದರು.

  • ಪ್ರಜ್ವಲ್ ರೇವಣ್ಣಗಿನ್ನೂ ಮದ್ವೆನೇ ಆಗಿಲ್ಲ, ತಾತನಿಂದ ಒಳ್ಳೇದನ್ನ ತಿಳ್ಕೋಬೇಕು: ಸೋಮಣ್ಣ ವ್ಯಂಗ್ಯ

    ಪ್ರಜ್ವಲ್ ರೇವಣ್ಣಗಿನ್ನೂ ಮದ್ವೆನೇ ಆಗಿಲ್ಲ, ತಾತನಿಂದ ಒಳ್ಳೇದನ್ನ ತಿಳ್ಕೋಬೇಕು: ಸೋಮಣ್ಣ ವ್ಯಂಗ್ಯ

    ವಿಜಯಪುರ: ಪಾಪ ಸಂಸದ ಪ್ರಜ್ವಲ್ ರೇವಣ್ಣನಿಗೆ ಇನ್ನೂ ಮದುವೆನೇ ಆಗಿಲ್ಲ. ತಾತನಿಂದ ಪ್ರಜ್ವಲ್ ರೇವಣ್ಣ ಒಳ್ಳೆಯದನ್ನು ತಿಳಿದುಕೊಳ್ಳಬೇಕು ಎಂದು ವಸತಿ ಸಚಿವ ವಿ. ಸೋಮಣ್ಣ ವ್ಯಂಗ್ಯವಾಡಿದ್ದಾರೆ.

    ಸಿಂದಗಿ ಉಪಚುನಾವಣಾ ಪ್ರಚಾರದ ವೇಳೆ ಮಾತನಾಡುತ್ತಾ ಹೆಚ್.ಡಿ ಕುಮಾರಸ್ವಾಮಿ ದ್ವಿಪತ್ನಿತ್ವದ ಬಗ್ಗೆ ಬಿಜೆಪಿ ಟ್ವೀಟ್‍ಗೆ ಪ್ರತಿಕ್ರಿಯಿಸಿದ್ದ ಪ್ರಜ್ವಲ್ ರೇವಣ್ಣ, ಭಾರತೀಯ ಜನತಾ ಪಕ್ಷದವರು ಯಾರು ಯಾರ ಜೊತೆಗಿದ್ದರು. ಯಾರ ಜೊತೆಯಿದ್ದು ಎದ್ದು ಬಂದ್ರು ಅನ್ನೋದನ್ನು ಹೇಳ ಹೊರಟರೇ ಬಹಳ ಸಮಯ ಬೇಕಾಗುತ್ತದೆ. ಹೀಗಾಗಿ ವೈಯಕ್ತಿಕ ಟೀಕೆ ಬಿಟ್ಟು ಅಭಿವೃದ್ಧಿ ಕೆಲಸದ ಮೇಲೆ ಬಿಜೆಪಿ ಮತ ಕೇಳಲಿ ಎಂದು ವಾಗ್ದಾಳಿ ನಡೆಸಿದ್ದರು. ಇದನ್ನೂ ಓದಿ: ಬಿಜೆಪಿಯವರ ಬ್ರಹ್ಮಾಂಡಗಳನ್ನು ಹೇಳ ಹೊರಟರೆ ಸಮಯ ಹಿಡಿಯುತ್ತೆ: ಪ್ರಜ್ವಲ್ ರೇವಣ್ಣ

    ಈ ವಿಚಾರವಾಗಿ ವಿಜಯಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸೋಮಣ್ಣ ಅವರು, ಪಾಪ ಅವನ ಹತ್ತಿರ ಏನು ಮಾಹಿತಿ ಇದೆಯೋ ಗೊತ್ತಿಲ್ಲ. ಪ್ರಜ್ವಲ್ ರೇವಣ್ಣ ದೊಡ್ಡ ಕುಟುಂಬದಿಂದ ಬಂದವರು. ಪ್ರಜ್ವಲ್ ರೇವಣ್ಣ ಬೆಳೆಯುತ್ತಿರುವ ನಾಯಕ. ಚುನಾವಣೆ ಗೆಲ್ಲುವುದು ದೊಡ್ಡದಲ್ಲ. ಚುನಾವಣೆಯಲ್ಲಿ ಗೆದ್ದ ನಂತರ ನಡೆದುಕೊಳ್ಳುವುದು ಬಹಳ ಮುಖ್ಯ. ಅದಕ್ಕಾಗಿ ತಂದೆ, ತಾತನಿಂದ ಒಳ್ಳೆಯದನ್ನು ತಿಳಿದುಕೊಳ್ಳಬೇಕು ಎಂದು ಟಾಂಗ್ ನೀಡಿದ್ದಾರೆ.

  • ಪ್ಯಾರಾಲಂಪಿಕ್ಸ್​ನಲ್ಲಿ ಸುಹಾಸ್‌ಗೆ ಬೆಳ್ಳಿ ಪದಕ – ಹೆಚ್​ಡಿಡಿ, ಗೋಪಾಲಯ್ಯ ಅಭಿನಂದನೆ

    ಪ್ಯಾರಾಲಂಪಿಕ್ಸ್​ನಲ್ಲಿ ಸುಹಾಸ್‌ಗೆ ಬೆಳ್ಳಿ ಪದಕ – ಹೆಚ್​ಡಿಡಿ, ಗೋಪಾಲಯ್ಯ ಅಭಿನಂದನೆ

    ಹಾಸನ: ಜಿಲ್ಲೆಯ ಅರಸೀಕೆರೆ ತಾಲೂಕಿನ ಲಾಳನಕೆರೆ ಗ್ರಾಮದ ಹಾಗೂ ಉತ್ತರ ಪ್ರದೇಶದಲ್ಲಿ ಐಎಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಸುಹಾಸ್ ಟೋಕಿಯೋದಲ್ಲಿ ನಡೆದ ಪ್ಯಾರಾಲಂಪಿಕ್ಸ್ ಕೂಟದಲ್ಲಿ ಬ್ಯಾಡ್ಮಿಂಟನ್ ನಲ್ಲಿ ಬೆಳ್ಳಿ ಪದಕ ಪಡೆದಿದ್ದಾರೆ. ಈ ಮೂಲಕ ಅವರು ಅಂತರಾಷ್ಟ್ರೀಯ ಮಟ್ಟದಲ್ಲಿ ದೇಶದ ಹಿರಿಮೆಯನ್ನು ಹೆಚ್ಚಿಸುವುದರ ಮೂಲಕ ಹಾಸನ ಜಿಲ್ಲೆಯ ಘನತೆಯನ್ನು ಹೆಚ್ಚಿಸಿದ್ದಾರೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಹರ್ಷ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಬೆಂಬಲಿಸಿದ ಕರ್ನಾಟಕದ ಜನತೆಗೆ ಧನ್ಯವಾದ: ಸುಹಾಸ್

    ಸಚಿವ ಗೋಪಾಲಯ್ಯನವರು, ಜಪಾನ್ ರಾಜಧಾನಿ ಟೋಕಿಯೋದಲ್ಲಿ ವಿಶೇಷ ಚೇತನ ಕ್ರೀಡಾಪಟುಗಳಿಗಾಗಿ ನಡೆಯುತ್ತಿರುವ ಪ್ಯಾರಾಲಂಪಿಕ್ಸ್​ನಲ್ಲಿ ಉತ್ತರ ಪ್ರದೇಶದ ಜಿಲ್ಲಾಧಿಕಾರಿಯಾಗಿರುವ ಹಾಸನ ಮೂಲದ ಐಎಎಸ್ ಅಧಿಕಾರಿ ಸುಹಾಸ್ ಎಲ್.ಯತಿರಾಜ್‍ರವರು ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಜಯಿಸಿದ್ದಾರೆ. ಪ್ಯಾರಾಲಂಪಿಕ್ಸ್​ನಲ್ಲಿ ಪದಕ ಜಯಿಸಿದ ಭಾರತದ ಮೊದಲ ಐಎಎಸ್ ಅಧಿಕಾರಿ ಎಂಬ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಸುಹಾಸ್ ಒಬ್ಬ ಕನ್ನಡಿಗ ಎಂಬುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ ಎಂದಿದ್ದಾರೆ. ಇದನ್ನೂ ಓದಿ:ಬೆಳ್ಳಿ ಹುಡುಗ ಸುಹಾಸ್‍ಗೆ ಕುಟುಂಬಸ್ಥರ ಅಭಿನಂದನೆ

    ಸುಹಾಸ್ ಹಾಸನದ ಲಾಳನಕೆರೆಯಲ್ಲಿ ಜನಿಸಿ, ಶಿವಮೊಗ್ಗದಲ್ಲಿ ಬೆಳೆದು, ದಕ್ಷಿಣ ಕನ್ನಡದ ಸುರತ್ಕಲ್‍ನಲ್ಲಿ ಎನ್‍ಐಟಿಯಲ್ಲಿ ಕಂಪ್ಯೂಟರ್ ಎಂಜಿನಿಯರಿಂಗ್ ಕಲಿತು, ಉತ್ತರ ಪ್ರದೇಶದ ಐಎಎಸ್ ಅಧಿಕಾರಿಯಾಗಿ, ಮಥುರಾದ ಮುಖ್ಯ ಅಭಿವೃದ್ಧಿ ಅಧಿಕಾರಿಯಾಗಿದ್ದ ಇವರು, ಆರು ಜಿಲ್ಲೆಗಳ ಡಿಎಂ ಆಗಿ ಸೇವೆ ಸಲ್ಲಿಸಿದ ನಂತರ, ಈಗ ಗೌತಮ್ ಬುದ್ಧ ನಗರದ ಜಿಲ್ಲೆಯ ದಂಡಾಧಿಕಾರಿಯಾದ್ದಾರೆ. ಇವರು ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆದ ಹಲವು ಕ್ರೀಡಾಕೂಟದಲ್ಲಿ ಭಾಗವಹಿಸಿ ನಾಲ್ಕು ಚಿನ್ನದ ಪದಕ, ಐದು ಬೆಳ್ಳಿ, ಎಂಟು ಕಂಚಿನ ಪದಕ ಗಳಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸುಹಾಸ್ ನಮ್ಮ ಕನ್ನಡಿಗ ಎಂದು ಹೇಳಲು ನಮಗೆ ಹೆಮ್ಮೆಯ ವಿಷಯವಾಗಿದೆ. ಸುಹಾಸ್ ಎಲ್.ಯತಿರಾಜ್ ರವರಿಗೆ ನಮ್ಮ ಹೃದಯ ಪೂರ್ವಕ ಅಭಿನಂದನೆಗಳು ಎಂದು ಹೇಳಿದ್ದಾರೆ.

  • ಈಗ ಸಿಸೇರಿಯನ್ ಆಗಿದೆ, ಈಗಲೇ ಕುಲಾವಿ ಹಾಕಿಕೊಳ್ಳಬೇಡಿ: ಶಿವರಾಮೇಗೌಡ

    ಈಗ ಸಿಸೇರಿಯನ್ ಆಗಿದೆ, ಈಗಲೇ ಕುಲಾವಿ ಹಾಕಿಕೊಳ್ಳಬೇಡಿ: ಶಿವರಾಮೇಗೌಡ

    – ಸಚಿವ ಸ್ಥಾನಕ್ಕೆ ಪೈಪೋಟಿ ನಡೆಸುತ್ತಿರುವ ಶಾಸಕರಿಗೆ ಲೇವಡಿ

    ಮಂಡ್ಯ: ಸಿಸೇರಿಯನ್ ಆಗಿ ಇನ್ನೂ ಹೊಲಿಗೆನೇ ಹಾಕಿಲ್ಲ. ಆಗಲೇ ಕುಲಾವಿ ಹಾಕಿಕೊಂಡು ತಿರುಗಿದರೆ ಹೆಂಗೆ ಎನ್ನುವ ಮೂಲಕ ಮಂತ್ರಿ ಸ್ಥಾನಕ್ಕೆ ಓಡಾಡುತ್ತಿರುವ ಬಿಜೆಪಿ ಶಾಸಕರಿಗೆ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಲೇವಡಿ ಮಾಡಿದ್ದಾರೆ.

    ನಾಗಮಂಗಲದಲ್ಲಿ ಮಾತನಾಡಿದ ಅವರು, ಈಗ ತಾನೇ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆಗಿ ಅಧಿಕಾರ ಸ್ವೀಕಾರ ಮಾಡಿದ್ದಾರೆ. ಈಗಲೇ ಸಚಿವ ಸ್ಥಾನಕ್ಕೆ ಪೈಪೋಟಿ ನಡೆಸಿ, ಅಸಮಾಧಾನವನ್ನು ಹೊರಹಾಕುವುದು ಸರಿಯಲ್ಲ. ಇದು ಒಂಥರ ಸಿಸೇರಿಯನ್ ಆಗಿ ಇನ್ನೂ ಹೊಲಿಗೇನೆ ಹಾಕಿಲ್ಲ ಆಗಲೇ ಕುಲಾವಿ ಹಾಕಿಕೊಂಡು ಓಡಾಡಿದ ಹಾಗೇ ಆಗುತ್ತದೆ ಎಂದು ಸಚಿವ ಸ್ಥಾನಕ್ಕೆ ಪೈಪೋಟಿ ಮಾಡುತ್ತಿರುವ ಶಾಸಕರುಗಳ ಬಗ್ಗೆ ವ್ಯಂಗ್ಯವಾಡಿದ್ದಾರೆ.

    ಸಿಎಂ ಬಸವರಾಜ ಬೊಮ್ಮಾಯಿ ಅವರು ಮಾಜಿ ಪ್ರಧಾನಿ ದೇವೇಗೌಡರ ಭೇಟಿಯ ಕುರಿತು ಮಾತನಾಡಿದ ಅವರು, ದೇವೇಗೌಡರು ನಿಮ್ಮ ಸರ್ಕಾರದ ಜೊತೆ ನಾವಿದ್ದೀವಿ ಎಂದು ಹೇಳಿರುವುದು ರಾಜ್ಯದ ಜನರ ಒಳಿತಿಗಾಗಿ. ಕೊರೊನಾ, ಪ್ರವಾಹದಂತಹ ಸಂಕಷ್ಟದಲ್ಲಿ ರಾಜ್ಯದಲ್ಲಿ ಒಂದು ಸರ್ಕಾರ ಸ್ಥಿರವಾಗಿ ಇರಬೇಕು ಎನ್ನುವ ಕಾರಣಕ್ಕೆ ಗೌಡರು ನಾವಿದ್ದೇವೆ ಎನ್ನುವ ಭರವಸೆ ನೀಡಿದ್ದಾರೆ. ರಾಜ್ಯದ ಜನತೆ ಹಿತದೃಷ್ಟಿಯಿಂದ ದೇವೇಗೌಡರು ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಯಾರು ಕೂಡ ಇದಕ್ಕೆ ಬೇರೆ ಅರ್ಥ ಕಲ್ಪಿಸುವುದು ಸೂಕ್ತ ಅಲ್ಲ ಎಂದಿದ್ದಾರೆ.

    ಮಂಡ್ಯ ಜಿಲ್ಲೆ ಅಭಿವೃದ್ಧಿಯಾಗಬೇಕು ಎಂದರೆ ಮಂಡ್ಯದವರೇ ಉಸ್ತುವಾರಿ ಸಚಿವರಾಗಬೇಕು. ಸದ್ಯ ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿಯ ಏಕೈಕ ಶಾಸಕ ಎಂದರೆ ಅದು ನಾರಾಯಣಗೌಡ ಮಾತ್ರ. ನಾರಾಯಣಗೌಡರಿಗೆ ಮಂತ್ರಿ ಸ್ಥಾನ ನೀಡಿ ಮಂಡ್ಯ ಜಿಲ್ಲೆಯ ಉಸ್ತುವಾರಿಯನ್ನು ನೀಡಬೇಕು. ಆಗ ಮಂಡ್ಯ ಜಿಲ್ಲೆ ಅಭಿವೃದ್ಧಿಯಾಗಲು ಸಾಧ್ಯ ಎನ್ನುವ ಮೂಲಕ ಪರೋಕ್ಷವಾಗಿ ನಾರಾಯಣಗೌಡ ಅವರಿಗೆ ಮಂತ್ರಿ ಸ್ಥಾನ ನೀಡಿ ಎಂದು ಶಿವರಾಮೇಗೌಡ ನಾರಾಯಣಗೌಡ ಪರ ಬ್ಯಾಟ್ ಬೀಸಿದ್ದಾರೆ. ಇದನ್ನೂ ಓದಿ: ಕೋವಿಡ್ ಬರೋಕೆ ಯಾರು ಸರ್ಕಾರ ನಡೆಸುತ್ತಾರೋ ಅವರೇ ಕಾರಣ: ಸಿದ್ದರಾಮಯ್ಯ

  • ಬಿಎಸ್‍ವೈ ಸೂಕ್ತ ಸ್ಥಾನಮಾನ ಕಲ್ಪಿಸಿಕೊಡುವ ಬಗ್ಗೆ ಹೇಳಿದ್ದಾರೆ: ಬಿ.ಸಿ ಪಾಟೀಲ್

    ಬಿಎಸ್‍ವೈ ಸೂಕ್ತ ಸ್ಥಾನಮಾನ ಕಲ್ಪಿಸಿಕೊಡುವ ಬಗ್ಗೆ ಹೇಳಿದ್ದಾರೆ: ಬಿ.ಸಿ ಪಾಟೀಲ್

    ಹಾವೇರಿ: ಯಡಿಯೂರಪ್ಪನವರು ಸೂಕ್ತ ಸ್ಥಾನಮಾನ ಕಲ್ಪಿಸಿ ಕೊಡುವ ಬಗ್ಗೆ ಹೇಳಿದ್ದಾರೆ. ಪಕ್ಷ ಇದುವರೆಗೆ ನನ್ನನ್ನು ಚೆನ್ನಾಗಿ ನಡೆಸಿಕೊಂಡು ಬಂದಿದೆ. ಈಗಲೂ ಚೆನ್ನಾಗಿ ನಡೆಸಿಕೊಳ್ಳುತ್ತಾರೆ ಎನ್ನುವ ವಿಶ್ವಾಸವಿದೆ ಎಂದು ಹಿರೇಕೆರೂರಿನ ಶಾಸಕ ಬಿ.ಸಿ.ಪಾಟೀಲ್ ಹೇಳಿದ್ದಾರೆ.

    ಹಾವೇರಿ ಜಿಲ್ಲೆಯ ಹಿರೇಕೆರೂರು ಪಟ್ಟಣದ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಿರಿಯರ ಬಗ್ಗೆ ಮಾತನಾಡುವುದಿಲ್ಲ. ಕೆಲವರಿಗೆ ಕೆಲವು ಕಡೆ ಅಸಮಾಧಾನ ಸಹಜ. ಹಿರಿಯರು ಅದನ್ನು ಸರಿಪಡಿಸಿಕೊಳ್ಳುತ್ತಾರೆ. ಏನು ಬರುತ್ತೆ, ಬಂದಾಗ ನೋಡೋಣ ಎಂದಿದ್ದಾರೆ.

    ಮನುಷ್ಯ ಆಶಾದಾಯಕ ಆಗಿರಬೇಕು. ಊಹೆ ಮೇಲೆ ಮಾತಾಡುವುದು ಬೇಡ. ಸರ್ಕಾರ ಬಂದು ಈಗಾಗಲೇ ಒಂದು ವಾರ ಆಗಿದೆ. ಕೋವಿಡ್ ಮತ್ತು ನೆರೆ ಇರುವ ಸಂದರ್ಭದಲ್ಲಿ ಕೂಡಲೇ ಮಂತ್ರಿ ರಚನೆ ಮಾಡಬೇಕು ಎಂದು ಎಲ್ಲರ ಒತ್ತಾಯವಿದೆ. ರಾಜ್ಯದ ಭವಿಷ್ಯ ನುಡಿಯಬೇಕಾದವರು ಪ್ರಜೆಗಳೇ ಹೊರತು ಸ್ವಾಮಿಗಳು, ಧರ್ಮದರ್ಶಿಗಳಲ್ಲ. ನನಗೆ ದೊಡ್ಡ ಗುರುಗಳು ರಾಜಕೀಯ ಬರಬೇಡಿ ಅಂದಿದ್ದರು. ಕೊರೊನಾ ಬಗ್ಗೆ ಭವಿಷ್ಯ ಹೇಳಲಿ ಎಂದು ವ್ಯಂಗ್ಯವಾಡಿದ್ದಾರೆ.

    ಮಾಜಿ ಪ್ರಧಾನಿ ದೇವೇಗೌಡ ಅವರು ವಯಸ್ಸಿನಲ್ಲಿ ಹಿರಿಯರು, ಬಹಳ ಅನುಭವಿಗಳು. ಹಿರಿಯರು ಎನ್ನುವ ಗೌರವಕ್ಕೆ ಹೋಗಿ ಭೇಟಿ ಆಗಿದ್ದಾರೆ. ನಾನಿನ್ನೂ ಯಾವುದೇ ನಿರೀಕ್ಷೆ ಮಾಡಿಲ್ಲ. ಯಾವ ಖಾತೆ ಕೊಟ್ಟರೂ ನಿಭಾಯಿಸುವ ಶಕ್ತಿ ಇದೆ. ಅಧಿಕಾರಿಯಾಗಿ ಕೆಲಸ ಮಾಡಿದ್ದೇನೆ. ಯಾವ ಖಾತೆ ಕೊಟ್ಟರೂ ನಿಭಾಯಿಸುತ್ತೇನೆ. ನಮ್ಮ ಜಿಲ್ಲೆಯವರು ಸಿಎಂ ಆಗಿರುವುದರ ಬಗ್ಗೆ ಬಹಳ ಹೆಮ್ಮೆ ಇದೆ. ಹಾವೇರಿ ಮಾತ್ರವಲ್ಲ ಸಮಗ್ರ ಕರ್ನಾಟಕದ ಅಭಿವೃದ್ಧಿ ಆಗುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ:ನಾಳೆ ಅಥವಾ ಬುಧವಾರ ಸಚಿವ ಸಂಪುಟ ವಿಸ್ತರಣೆ ಸಾಧ್ಯತೆ: ಕೆ.ಎಸ್.ಈಶ್ವರಪ್ಪ