Tag: H.D.Deve Gowda

  • ರಾಜ್ಯದಲ್ಲಿ 28 ಸ್ಥಾನ ಗೆಲ್ಲಿಸಿಕೊಟ್ರೆ ಮೇಕೆದಾಟು ಯೋಜನೆಗೆ ಮೋದಿ ಕೈಹಿಡಿದು ಸಹಿ ಹಾಕಿಸ್ತೇನೆ: ಹೆಚ್‌ಡಿಡಿ

    ರಾಜ್ಯದಲ್ಲಿ 28 ಸ್ಥಾನ ಗೆಲ್ಲಿಸಿಕೊಟ್ರೆ ಮೇಕೆದಾಟು ಯೋಜನೆಗೆ ಮೋದಿ ಕೈಹಿಡಿದು ಸಹಿ ಹಾಕಿಸ್ತೇನೆ: ಹೆಚ್‌ಡಿಡಿ

    ರಾಮನಗರ: ರಾಜ್ಯದಲ್ಲಿ ಮೈತ್ರಿಗೆ 28 ಸ್ಥಾನ ಗೆಲ್ಲಿಸಿಕೊಟ್ಟರೆ ಮೇಕೆದಾಟು ಯೋಜನೆಗೆ ಮೋದಿ ಕೈಹಿಡಿದು ಸಹಿ ಹಾಕಿಸುತ್ತೇನೆ ಎಂದು ಮಾಜಿ ಪ್ರಧಾನಿ ಹೆಚ್‌.ಡಿ.ದೇವೇಗೌಡ ಜನತೆಗೆ ಭರವಸೆ ನೀಡಿದರು.

    ಹಾರೋಹಳ್ಳಿಯಲ್ಲಿ ಅಳಿಯ, ಮೈತ್ರಿ ಅಭ್ಯರ್ಥಿ ಡಾ.ಮಂಜುನಾಥ್ ಪರ ಪ್ರಚಾರ ಮಾಡಿದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅಬ್ಬರದ ಭಾಷಣ‌ ಮಾಡಿದರು. ನನಗೆ ಕನಕಪುರ ಹೊಸದಲ್ಲ. ಹಿಂದೆ ನನ್ನ ವಿರುದ್ಧ ತೇಜಸ್ವಿನಿ ಎಂಬ ಹೆಣ್ಣುಮಗಳನ್ನ ನಿಲ್ಲಿಸಿ ಸೋಲಿಸಿದ್ದರು. ಮತ್ತೆ ಅದೇ ಲೋಕಸಭಾ ಕ್ಷೇತ್ರದಲ್ಲಿ ಗೆದ್ದು ಪ್ರಧಾನಿ ಆಗಿದ್ದೆ. ನನ್ನನ್ನ ಪ್ರಧಾನಿ ಮಾಡಿದ್ದು ಇದೇ ಕ್ಷೇತ್ರದ ಮಹಾಜನತೆ ಎಂದು ನೆನಪಿಸಿಕೊಂಡರು.

    ದೇಶದಲ್ಲಿ ದೇವೇಗೌಡರು ಅಳಿಯನನ್ನ ಬಿಜೆಪಿಯಿಂದ ನಿಲ್ಸಿದ್ರು ಅಂತ ಮಾತಾಡಿದ್ದಾರೆ. ಡಾ.ಮಂಜುನಾಥ್ ನನ್ನ ಅಳಿಯ ಅನ್ನುವುದಕ್ಕಿಂತ ಜಯದೇವ ಆಸ್ಪತ್ರೆಯಲ್ಲಿ ಅಪಾರ ಸೇವೆ ಮಾಡಿದವರು. ಇವರ ಆರೋಗ್ಯ ಸೇವೆ ದೇಶದ ಗಮನ ಸೆಳೆದಿದೆ. ಅದಕ್ಕಾಗಿ ಮೋದಿ, ಅಮಿತ್ ಶಾ ಇವರ ಸೇವೆ ದೇಶಕ್ಕೆ ಬೇಕು ಅಂತ ಆಹ್ವಾನಿಸಿದರು. ಅವರನ್ನ ಬಿಜೆಪಿಯಿಂದ ನಿಲ್ಲಿಸಿದರು. ಈಗ ಮಂಜುನಾಥ್ ಎನ್ನುವ ಹೆಸರಿನ ಮೂರು ಜನರನ್ನ ನಿಲ್ಲಿಸಿದ್ದಾರೆ. ಮಹಾನುಭಾವರು ಎಂತಹ ಬುದ್ದಿ ಬಳಕೆ‌ ಮಾಡಿದ್ದಾರೆ. ಆದರೆ ಡಾ.ಮಂಜುನಾಥ್ ನಂಬರ್ 1 ಡಾಕ್ಟರ್. ಅವರ ಕ್ರಮ ಸಂಖ್ಯೆ ಕೂಡಾ ನಂಬರ್ ಓನ್. ನರೇಂದ್ರ ಮೋದಿ, ಅಮಿತ್ ಆಯ್ಕೆ ಮಾಡಿರೋ ವ್ಯಕ್ತಿ ಡಾ.ಮಂಜುನಾಥ್. ದೇಶದಲ್ಲಿ ಸೇವೆ ಮಾಡುವ ಅವಕಾಶವನ್ನ ಅವರಿಗೆ ನೀಡಿ ಎಂದು ಮನವಿ ಮಾಡಿದರು.

    ಅಲ್ಲದೇ ಕಾವೇರಿ ನದಿ ನೀರಿನ ಸಮಸ್ಯೆ ಬಗೆಹರಿಸುವುದಾಗಿ ಮೋದಿ ಭರವಸೆ ಕೊಟ್ಟಿದ್ದಾರೆ. ಮೊನ್ನೆ ಚಿಕ್ಕಬಳ್ಳಾಪುರದಲ್ಲಿ ನನಗೆ ಭರವಸೆ ನೀಡಿದ್ದಾರೆ. ನಾನೂ ಅವರಿಗೆ ಒಂದು ಮಾತು ಕೊಟ್ಟಿದ್ದೇನೆ. ರಾಜ್ಯದಲ್ಲಿ 28 ಸ್ಥಾನ ಗೆದ್ದು ಕೊಡುವ ಮಾತು ಕೊಟ್ಟಿದ್ದೇನೆ. ಅದಕ್ಕಾಗಿ ಈ ವಯಸ್ಸಿನಲ್ಲೂ ರಾಜ್ಯಾದ್ಯಂತ ಪ್ರವಾಸ ಮಾಡ್ತಿದ್ದೇನೆ. ನೀವು 28 ಸ್ಥಾನಗಳನ್ನ ನೀಡಿದ್ರೆ ಮೋದಿ ಕೈಹಿಡಿದು ಮೇಕೆದಾಟಿಗೆ ಸಹಿ ಹಾಕಿಸ್ತೇನೆ ಎಂದು ಭರವಸೆ ನೀಡಿದರು.

    ನೀತಿವಂತ, ಗುಣವಂತ ಡಾ.ಮಂಜುನಾಥ್ ಅವರನ್ನ ಗೆಲ್ಲಿಸಿ. ಕುಮಾರಸ್ವಾಮಿ ಹೃದಯ ಚಿಕಿತ್ಸೆ ಆದರೂ ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದಾರೆ. ಪ್ರಧಾನಿ ಮೋದಿ 10 ವರ್ಷದಲ್ಲಿ ದೇಶ ಅಭಿವೃದ್ಧಿ ಮಾಡಿದ್ದಾರೆ. ಅಂತಹವರಿಗೆ ಖಾಲಿ ಚೊಂಬು ತೋರಿಸ್ತಾರೆ. ನೀವು ಯಾರಿಗೆ ತೋರಿಸ್ತಿದ್ದೀರಿ, ಹುಡುಗಾಟಿಕೆ, ತಮಾಷೆನಾ? ನೀವು ನೀಡಿದ್ದ ಖಾಲಿ ಚೊಂಬನ್ನ ಅವರು ಅಕ್ಷಯ ಪಾತ್ರೆ ಮಾಡಿದ್ದಾರೆ. ರಾಜ್ಯದಲ್ಲಿ ಇರುವ ಭ್ರಷ್ಟ ಸರ್ಕಾರವನ್ನ ತೆಗೆಯುವವರೆಗೂ ನಾನು ಕೂರುವುದಿಲ್ಲ. ನೀವೆಲ್ಲ ಕೈ ಎತ್ತಿ ಡಾ.ಮಂಜುನಾಥ್ ಗೆಲ್ಲಿಸುತ್ತೇನೆ ಎಂದು ಶಕ್ತಿ ನೀಡಿ. ಡಾ.ಮಂಜುನಾಥ್ ಅತ್ಯಂತ ಅಧಿಕ ಮತಗಳಿಂದ ಗೆಲ್ಲಲು ಆಶೀರ್ವಾದ ಮಾಡಿ ಎಂದು ಅಳಿಯನ ಪರ ಮಾಜಿ ಪ್ರಧಾನಿ ಮತಯಾಚನೆ ಮಾಡಿದರು.

  • ದೇವೇಗೌಡರ ಕುಟುಂಬ ಹಿಂದಿನಿಂದಲೂ ಡಿಕೆಶಿ ಮೇಲೆ ಹಗೆತನ ಸಾಧಿಸುತ್ತಿದೆ: ಡಿ.ಕೆ.ಸುರೇಶ್‌

    ದೇವೇಗೌಡರ ಕುಟುಂಬ ಹಿಂದಿನಿಂದಲೂ ಡಿಕೆಶಿ ಮೇಲೆ ಹಗೆತನ ಸಾಧಿಸುತ್ತಿದೆ: ಡಿ.ಕೆ.ಸುರೇಶ್‌

    ರಾಮನಗರ: ದೇವೇಗೌಡರ (H.D.Deve Gowda) ಕುಟುಂಬ ಹಿಂದಿನಿಂದಲೂ ಡಿ.ಕೆ.ಶಿವಕುಮಾರ್‌ (D.K.Shivakumar) ಮೇಲೆ ಹಗೆತನ ಸಾಧಿಸುತ್ತಿದೆ. ನಮಗೆ ಆ ಭಾವನೆ ಇಲ್ಲ ಎಂದು ಕಾಂಗ್ರೆಸ್‌ ಅಭ್ಯರ್ಥಿ ಡಿ.ಕೆ.ಸುರೇಶ್‌ (D.K.Suresh) ಆರೋಪಿಸಿದ್ದಾರೆ.

    ಒಕ್ಕಲಿಗ ನಾಯಕರ ಜೊತೆ ಚುಂಚನಗಿರಿ ಶ್ರೀಗಳನ್ನು ಕುಮಾರಸ್ವಾಮಿ ಭೇಟಿ ಮಾಡಿದ ವಿಚಾರ ಕುರಿತು ರಾಮನಗರದಲ್ಲಿ ಕಾಂಗ್ರೆಸ್ (Congress) ಅಭ್ಯರ್ಥಿ ಡಿ‌.ಕೆಎ.ಸುರೇಶ್ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ರಾಮೇಶ್ವರಂ ಕೆಫೆ ಬಾಂಬರ್‌ ಬಂಧನ- NIA, ಪೊಲೀಸರಿಗೆ ಪರಮೇಶ್ವರ್‌ ಅಭಿನಂದನೆ

    ಹಿಂದೆ ಸರ್ಕಾರ ತೆಗೆಯುವ ಸಂದರ್ಭದಲ್ಲಿ ಯಾರು ನಾಯಕತ್ವ ವಹಸಿಕೊಂಡಿದ್ರು. ಅವ್ರ ಜೊತೆ ಸ್ವಾಮೀಜಿಗಳನ್ನ ಭೇಟಿ ಮಾಡಿರುವುದನ್ನು ಡಿಕೆ ಶಿವಕುಮಾರ್ ಪ್ರಸ್ತಾಪ ಮಾಡಿದ್ದಾರೆ. ಒಕ್ಕಲಿಗ ಸಮುದಾಯ ಸ್ವಾಭಿಮಾನಿಗಳು. ಯಾರನ್ನ ಯಾವ ಸಂದರ್ಭದಲ್ಲಿ ಏನು ಮಾಡಬೇಕು ಎಂಬುದು ಸಮುದಾಯಕ್ಕೆ ಗೊತ್ತಿದೆ ಎಂದು ಜೆಡಿಎಸ್‌ಗೆ ಟಾಂಗ್‌ ಕೊಟ್ಟಿದ್ದಾರೆ.

    ಡಿ.ಕೆ.ಶಿವಕುಮಾರ್ ಒಂದು ಪಕ್ಷದ ರಾಜ್ಯಾಧ್ಯಕ್ಷರಾಗಿದ್ದಾರೆ. ಎಲ್ಲಾ ಸಮುದಾಯವನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಜವಾಬ್ದಾರಿ ಇದೆ. ಸಮುದಾಯದ ಬೆಂಬಲ ಕೂಡ ಇದೆ. ಕುಮಾರಸ್ವಾಮಿ ರಾಜಕೀಯವಾಗಿ ಏನೇನೊ ಹೇಳ್ತಾ ಇರ್ತಾರೆ‌. ಅವರು ಹೇಳೋದು ಎಲ್ಲಾ ಸತ್ಯಾ ಇದ್ಯಾ? ದೇವೇಗೌಡರ ಕುಟುಂಬ ಹಿಂದಿನಿಂದಲೂ ಕೂಡ ಡಿ.ಕೆ.ಶಿವಕುಮಾರ್ ಮೇಲೆ ಹಗೆತನ ತೋರಿಸುತ್ತಿದೆ. ನಮಗೆ ಆ ಭಾವನೆ ಇಲ್ಲ ಎಂದು ಟಾಂಗ್‌ ಕೊಟ್ಟಿದ್ದಾರೆ. ಇದನ್ನೂ ಓದಿ: ರಾಮನಗರಲ್ಲಿ 30 ಕೆಜಿಗೂ ಅಧಿಕ ಪ್ರಮಾಣದ ಚಿನ್ನ; ದಾವಣಗೆರೆಯಲ್ಲಿ 12.50 ಕೋಟಿ ರೂ. ಮೌಲ್ಯದ ಚಿನ್ನಾಭರಣ, ವಜ್ರ ಜಪ್ತಿ!

    ಸಮಾಜದ ಅಭಿವೃದ್ಧಿ ದೃಷ್ಟಿಯಿಂದ ನಾವು ಸಹಕಾರ ನೀಡುತ್ತಾ ಬಂದಿದ್ದೇವೆ. ಅವರು ಬೇರೆ ಬೇರೆ ವ್ಯಾಖ್ಯಾನ ಮಾಡುತ್ತಾದ್ದಾರೆ ಎಂದರೆ ಅದೆಲ್ಲದಕ್ಕೂ ನಾನು ಉತ್ತರ ಕೊಡಲ್ಲ ಎಂದರು. ಡಿಕೆಶಿ ಕೊತ್ವಾಲ್ ರಾಮಚಂದ್ರನ ಶಿಷ್ಯ ಎಂಬ ಹೆಚ್‌ಡಿಕೆ ಹೇಳಿಕೆ ಬಗ್ಗೆ ಮಾತನಾಡಿ, ಇದು ಚುನಾವಣೆ ಸಂದರ್ಭ. ಈ ಎಲ್ಲಾ ಹೇಳಿಕೆಗಳಿಗೂ ಆಮೇಲೆ ಸಭೆ ಕರೆಯಲಿ ಉತ್ತರ ಕೊಡುತ್ತೇನೆ. ಈಗ ಅದರ ವಿಚಾರ ಬೇಡ ಎಂದಿದ್ದಾರೆ.

  • ಕಾಂಗ್ರೆಸ್‌ ಕೇಂದ್ರದಲ್ಲಿ ಅಧಿಕಾರ ಹಿಡಿಯುವುದು ಅಸಾಧ್ಯ: ಹೆಚ್‌.ಡಿ.ದೇವೇಗೌಡ

    ಕಾಂಗ್ರೆಸ್‌ ಕೇಂದ್ರದಲ್ಲಿ ಅಧಿಕಾರ ಹಿಡಿಯುವುದು ಅಸಾಧ್ಯ: ಹೆಚ್‌.ಡಿ.ದೇವೇಗೌಡ

    ಹಾಸನ: ದೇಶದ ಮೂರು ರಾಜ್ಯಗಳಲ್ಲಷ್ಟೇ ಅಧಿಕಾರದಲ್ಲಿರುವ ಕಾಂಗ್ರೆಸ್, ಕೇಂದ್ರದಲ್ಲಿ ಅಧಿಕಾರ ಹಿಡಿಯುವುದು ಅಸಾಧ್ಯ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ (H.D.Deve Gowda) ಭವಿಷ್ಯ ನುಡಿದರು.

    ಹಾಸನದ ನಾಗರಹಳ್ಳಿ ಗ್ರಾಮದಲ್ಲಿ ಜೆಡಿಎಸ್ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ನಿನ್ನೆ ಕಾಂಗ್ರೆಸ್‌ನವರು ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ. 28 ಗ್ಯಾರೆಂಟಿಗಳನ್ನು ದೇಶದಲ್ಲಿ ಜಾರಿಗೆ ತರ್ತೀವಿ ಅಂತ ಹೇಳಿದ್ದಾರೆ. ಮೂವತ್ತು ಲಕ್ಷ ಜನಕ್ಕೆ ಕೆಲಸ ಕೊಡ್ತೀವಿ ಎಂದಿದ್ದಾರೆ. ಆದರೆ ದೇಶದಲ್ಲಿ ಕರ್ನಾಟಕ, ತೆಲಂಗಾಣ, ಹಿಮಾಚಲ ಪ್ರದೇಶದಲ್ಲಿ ಮಾತ್ರ ಅವರ ಅಧಿಕಾರ ಇದೆ. ಇಂಥವರು ಕೇಂದ್ರದಲ್ಲಿ ಅಧಿಕಾರಕ್ಕೆ ಬರಲು ಸಾಧ್ಯವೇ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ರಾಜ್ಯದ ಮಾದರಿಯಲ್ಲೇ ಕೇಂದ್ರದಲ್ಲೂ ಗ್ಯಾರಂಟಿಗಳನ್ನು ತಂದಿದ್ದೇವೆ: ಡಿಕೆಶಿ

    ಎಲ್ಲಾ ರೀತಿಯ ಸಾಲಮನ್ನಾ ಮಾಡ್ತೀವಿ ಎಂದಿದ್ದಾರೆ. ಮೋದಿ ಅವರಿಂದ ಹೆಣ್ಣುಮಕ್ಕಳಿಗೆ 33 ಪರ್ಸೆಂಟ್ ಮೀಸಲಾತಿ ಮಸೂದೆ ಪಾಸ್ ಆಯ್ತು. ಇದನ್ನು ನಾನು ಮಾಡಿದ್ದು. ಅದನ್ನು ಪಾಸ್ ಮಾಡಿದ್ದಾರೆ. ಕಾಂಗ್ರೆಸ್‌ನವರು ಸುಳ್ಳು ಹೇಳಿ ಜನರಿಗೆ ಮೋಸ ಮಾಡಲು ಸಾಧ್ಯನಾ? ಎಲ್ಲಾ ಸಾಲ ಮನ್ನಾ ಮಾಡಲು ಎಲ್ಲಿದೆ ಬಜೆಟ್? ಕೇಂದ್ರದ ಬಜೆಟ್‌ನ ನಾಲ್ಕು ಪಟ್ಟು ಭರವಸೆ ಪ್ರಣಾಳಿಕೆಯಲ್ಲಿದ್ದು, ಈಡೇರಿಸಲು ಅಷ್ಟು ಹಣ ಕೂಡಿಸುವುದು ಹೇಗೆ ಎಂದು ಕೇಳಿದರು.

    ಎಂಟು ಸಾವಿರ ಕೋಟಿ ಮನೆ ಕಟ್ಟಿಸುತ್ತೇವೆ ಎಂದು ಖರ್ಗೆ ಹೇಳಿದ್ದಾರೆ. ಅಧಿಕಾರದಲ್ಲಿದ್ದಾಗ ಏನೇನು ಮಾಡಿದ್ದೀರಾ? ಮನಮೋಹನ್‌ ಸಿಂಗ್ ಪಿಎಂ ಆದಾಗ ಎಷ್ಟು ಹಗರಣ ಆಯ್ತು ಎಂದು ಪ್ರಶ್ನಿಸಿದರು. ಇದೇ ವೇಳೆ ಕಾಂಗ್ರೆಸ್ ಪ್ರಣಾಳಿಕೆ ಕುರಿತು ಮಾತನಾಡಿ, ಇದು ಸತ್ಯಕ್ಕೆ ದೂರವಾದ ಪ್ರಣಾಳಿಕೆ. ಇದರಿಂದ ನಿಮಗೆ ಏನೇನು ಆಗಲ್ಲ. ಇದರಿಂದ ನೀವು ಯಾವ ಯಶಸ್ಸು ಸಾಧಿಸಲು ಸಾಧ್ಯವಿಲ್ಲ. ಈ ಪ್ರಣಾಳಿಕೆಯನ್ನು ಜನ ಓದ್ತಾರೆ. ಆದರೆ ನಂಬಲ್ಲ ಎಂದು ‘ಕೈ’ ನಾಯಕರಿಗೆ ತಿರುಗೇಟು ನೀಡಿದರು. ಇದನ್ನೂ ಓದಿ: ಗುಂಡೂರಾವ್ ಮನೆಯಲ್ಲಿ ಅರ್ಧ ಪಾಕಿಸ್ತಾನವಿದೆ ಹೇಳಿಕೆ – ಕಾಂಗ್ರೆಸ್‌ನಿಂದ ಯತ್ನಾಳ್ ವಿರುದ್ಧ ದೂರು

    ಮೊನ್ನೆ ಮೋದಿಯವರ ಬಳಿ ಕೊಬ್ಬರಿ ಬೆಲೆ ಬಿದ್ದು ಹೋಯ್ತು ಅಂದೆ. ಅವರು ನನ್ನನ್ನು ತಬ್ಬಿಕೊಂಡು ಕೂರಿಸಿದರು. ಕೂಡಲೇ ಕೊಬ್ಬರಿ ಖರೀದಿಗೆ ಆದೇಶ ನೀಡಿದರು. ನಮಗೆ ರೈತರ ಬಗ್ಗೆ ಆಸಕ್ತಿ ಇಲ್ವಾ ಎಂದು ಶಿವಲಿಂಗೇಗೌಡ ವಿರುದ್ಧ ಗರಂ ಆದರು.

    ಅರಸೀಕೆರೆಗೆ ಪೈಪ್‌ಲೈನ್ ಹಾಕಿ ನೀರು ಕೊಟ್ಟವನು ನಿಮ್ಮ ಮುಂದೆ ಕೂತಿದ್ದೇನೆ, ಸತ್ತಿಲ್ಲ. ಈಗ ಎತ್ತಿನಹೊಳೆ ಮಾಡಲು ಹೋಗಿದ್ದಾರೆ. ಅದನ್ನು ಮೊದಲು ಮಾಡಿದವರು ಜಗದೀಶ್ ಶೆಟ್ಟರ್, ಬಿಜೆಪಿಯವರು. ಸುಳ್ಳಿನ ಸರಮಾಲೆಯಿಂದ ಜನರಿಗೆ ಮೋಸ ಮಾಡಬೇಡಿ. ಮುಷ್ಠಿಯಿಂದ ಜನರು ಇವರಿಗೆ ಬುದ್ಧಿ ಕಲಿಸುತ್ತಾರೆ ಶಿವಲಿಂಗೇಗೌಡರ ಹೆಸರು ಹೇಳದೆಯೇ ಟಾಂಗ್‌ ಕೊಟ್ಟರು.

  • ಸಿದ್ದರಾಮಯ್ಯಗೆ ಅಧಿಕಾರದ ಮದ ಏರಿದೆ.. ಅವರ ಗರ್ವಭಂಗ ಆಗಬೇಕು: ಹೆಚ್‌ಡಿಡಿ

    ಸಿದ್ದರಾಮಯ್ಯಗೆ ಅಧಿಕಾರದ ಮದ ಏರಿದೆ.. ಅವರ ಗರ್ವಭಂಗ ಆಗಬೇಕು: ಹೆಚ್‌ಡಿಡಿ

    – ದೇಶದಲ್ಲಿ ಮೋದಿ ಅವರಂತಹ ನಾಯಕ ಮತ್ತೊಬ್ಬರಿಲ್ಲ

    ಬೆಂಗಳೂರು: ಸಿದ್ದರಾಮಯ್ಯ (Siddaramaiah) ಅವರ ಗರ್ವಭಂಗ ಆಗಬೇಕು. ಮೈಸೂರು, ಚಾಮರಾಜನಗರ ಕ್ಷೇತ್ರಗಳಲ್ಲಿ ಕಾಂಗ್ರೆಸ್ (Congress) ಸೋಲಿಸಿ ಎಂದು ಮೈತ್ರಿ ನಾಯಕರಿಗೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ (H.D.Deve Gowda) ಸೂಚನೆ ನೀಡಿದರು.

    ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಬಿಜೆಪಿ-ಜೆಡಿಎಸ್ ಸಮನ್ವಯ ಸಭೆಯಲ್ಲಿ ಮಾತನಾಡಿದ ಅವರು, ಮೈಸೂರು-ಚಾಮರಾಜನಗರ ಕ್ಷೇತ್ರ ಗೆಲ್ಲುವ ಶಕ್ತಿ ನಿಮಗೆ ಇದೆ ಜಿ.ಟಿ.ದೇವೇಗೌಡರೇ. ಸಿದ್ದರಾಮಯ್ಯನವರ ಗರ್ವಭಂಗ ಆಗಬೇಕು. ಗರ್ವಭಂಗ ಆಗಬೇಕಾದರೆ ನಾವೆಲ್ಲರೂ ಛಲದಿಂದ ಒಟ್ಟಾಗಿ ಹೋಗಬೇಕು ಎಂದು ವೇದಿಕೆಯಲ್ಲೇ ಜಿ.ಟಿ.ದೇವೇಗೌಡರಿಗೆ ಕರೆ ಕೊಟ್ಟರು. ಅದಕ್ಕೆ ಜಿಟಿಡಿ, ಆಯ್ತು ಅಲ್ಲಿಂದಲೇ ಗೆಲುವು ಶುರು ಮಾಡೋಣ ಎಂದು ಪ್ರತಿಕ್ರಿಯಿಸಿದರು. ಇದನ್ನೂ ಓದಿ: ಕೋಲಾರದಲ್ಲಿ ನಾನು ಹೇಳಿದ ಅಭ್ಯರ್ಥಿಗೆ ಟಿಕೆಟ್ ಕೊಟ್ಟರೆ ಗೆಲ್ಲಿಸುತ್ತೇನೆ: ಸಚಿವ ಮುನಿಯಪ್ಪ

    ಕೋರ್ಟ್ಗೆ ಕೇಂದ್ರದ ವಿರುದ್ಧ ಅರ್ಜಿ ಹಾಕಿದ್ದಾರೆ ಸ್ಟ್ರಾಂಗೆಸ್ಟ್‌ ಸಿಎಂ. ಇಂಥ ಮಹಾನುಭಾವ ಸಿಎಂ ನಮ್ಮ ರಾಜ್ಯದಲ್ಲಿ ಇದ್ದಾರೆ, ನಮೋ ನಮಃ. ಜೆಡಿಎಸ್ ಎಲ್ಲಿದೆ ಅಂತ ಸಿದ್ದರಾಮಯ್ಯ ಕೇಳ್ತಾರೆ. ಅವರಿಗೆ ಅಧಿಕಾರದ ಮದ ಏರಿದೆ. ಜೆಡಿಎಸ್ ಇದೆ. ಎಲ್ಲಿದೆ ಅಂತ ತೋರಿಸುವ ಸಾಮರ್ಥ್ಯ 91 ವರ್ಷದ ಈ ದೇವೇಗೌಡಗೆ ಇದೆ. ನಾನು ಯಾರಿಗೂ ಅಂಜಲ್ಲ, ಯಾರ ಭಯವೂ ಇಲ್ಲ ಎಂದು ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು.

    ಪರಸ್ಪರ ಸಹಕಾರ, ಒಗ್ಗಟ್ಟಿಗೆ ಯಡಿಯೂರಪ್ಪ ಪಾತ್ರ ಮುಖ್ಯವಾಗಿದೆ. ಹಿಂದೆ ಆಗಿದ್ದೆಲ್ಲ ಮರೆತುಬಿಡಿ, ಕಾಲ ಕ್ಷಣಿಕ. ನಮ್ಮ ವಿರೋಧಿಗಳು ಪ್ರಬಲರಾಗಿದ್ದಾರೆ. ಕಾಂಗ್ರೆಸ್‌ನ ಸೋಲಿಸೋದು ಅಷ್ಟು ಸುಲಭ ಅಲ್ಲ. ಹಿಂದೆ ಆಗಿರುವ ಲೋಪಗಳನ್ನು ಸರಿಪಡಿಸಿಕೊಂಡು ಮುಂದುವರೆಯೋಣ. ಮೋದಿಯವರ ಜತೆ ಕೈಜೋಡಿಸಲು ಹಲವು ಕಾರಣಗಳಿವೆ. ಅರವತ್ತು ವರ್ಷ ಸಾರ್ವಜನಿಕ ಜೀವನದಲ್ಲಿ ಹೋರಾಟ ಮಾಡಿದ್ದೇನೆ. ನನಗೆ ಎಲ್ಲದರ ಅರಿವು ಇದೆ. ಮೋದಿ ಹೆಸರು ಮಾತ್ರವೇ ಈ ಚುನಾವಣೆಯಲ್ಲಿ ಟ್ರಂಪ್ ಕಾರ್ಡ್ ಆಗಿದೆ. ಚುನಾವಣೆಯಲ್ಲಿ ಮೋದಿಯವರ ಹೆಸರಿನ ಬಲ ಮುಖ್ಯವಾಗಲಿದೆ. ನಮ್ಮ ಕಾರ್ಯಕರ್ತರು ಹಳೆಯ ಘಟನೆಗಳನ್ನು ಮರೆತು ಒಟ್ಟಾಗಿ ಕೆಲಸ ಮಾಡಿ. ದೇಶದಲ್ಲಿ ಮೋದಿಯವರಂಥ ನಾಯಕ ಮತ್ತೊಬ್ಬರು ಇಲ್ಲ ಎಂದು ಬಣ್ಣಿಸಿದರು. ಇದನ್ನೂ ಓದಿ: ಬಿಹಾರದಲ್ಲಿ INDIA ಒಕ್ಕೂಟದ ಸೀಟು ಹಂಚಿಕೆ ಫೈನಲ್‌ – ಯಾವ ಪಕ್ಷಕ್ಕೆ ಎಷ್ಟು ಕ್ಷೇತ್ರ?

    ಹಲವು ಕ್ಷೇತ್ರಗಳಲ್ಲಿ ನಮ್ಮ ಪರ ವಾತಾವರಣ ಇದೆ. ಸಮಯ ಕಡಿಮೆ ಇದೆ, ಕೆಲಸ ಮಾಡಿ ಎಲ್ಲ ಕ್ಷೇತ್ರ ಗೆಲ್ಲಿಸಿ. ಕಳೆದ ಅರವತ್ತು ವರ್ಷದ ಹಿಂದೆ ಬೆಂಗಳೂರಿನಲ್ಲಿ ಭೂಮಿ ಬೆಲೆ ಎಷ್ಟಿತ್ತು? ಈಗ ಎಷ್ಟಿದೆ? ಕಾಂಗ್ರೆಸ್ ಬಳಿ ಸಂಪನ್ಮೂಲ ಹೆಚ್ಚಾಗಿದೆ. ಅವರು ಎಷ್ಟು ಹಣ ಚುನಾವಣೆಯಲ್ಲಿ ಸುರೀತಿದ್ದಾರೆ? ಅವರು ಸಂಪನ್ಮೂಲ ಸಂಗ್ರಹ ಮಾಡಿದ್ದೇ ಅಕ್ರಮ ಮಾರ್ಗದಲ್ಲಿ. ಅವರು ಬೇರೆ ರಾಜ್ಯಗಳಿಗೂ ಹಣ ಸಾಗಿಸಿದರು. ಆದರೂ ಸೋಕಾಲ್ಡ್ ಕಾಂಗ್ರೆಸ್ ನಾಲ್ಕು ರಾಜ್ಯಗಳಲ್ಲಿ ಚುನಾವಣೆ ಸೋಲ್ತು. ಅವರು ಈ ಚುನಾವಣೆಯಲ್ಲಿ ಹಣದ ಹೊಳೆಯೇ ಹರಿಸಬಹುದು. ಹಣ ಸುರಿಯುವ ಕಾಂಗ್ರೆಸ್ ಸೋಲಿಸೋದು ಸುಲಭವಲ್ಲ. ಆದರೆ ಜನ ನಮ್ಮ ಪರ ಇದ್ದಾರೆ. ಈ ಹೊಸ ಮೈತ್ರಿಗೆ ತನ್ನದೇ ಆದ ಸಾಮರ್ಥ್ಯ ಇದೆ. ಪ್ರತೀ ಕ್ಷೇತ್ರಗಳಲ್ಲೂ ಮೈತ್ರಿಗೆ ಸ್ವಂತ ಬಲ ಇದೆ ಎಂದು ಆಶಯ ವ್ಯಕ್ತಪಡಿಸಿದರು.

    ನನ್ನನ್ನ ತುಮಕೂರಿನಲ್ಲಿ ಸೋಲಿಸಿದ್ದು ಕಾಂಗ್ರೆಸ್. ಯಾವ ಸಂದರ್ಭದಲ್ಲಿ ಏನಾಗಿದೆ ಅಂತಾ ಹೇಳ್ತೇನೆ ಯಡಿಯೂರಪ್ಪನವರೇ. ನನ್ನನ್ನೇ ತುಮಕೂರಿನಲ್ಲಿ ಸೋಲಿಸ್ತಾರೆ. ಯಾವ ಸಮಾಜಕ್ಕೆ ನಾನು ಏನು ಮಾಡಿದ್ದೇನೆ ಅಂತಾ ಇಲ್ಲಲ್ಲ ಬೇರೆ ಮಾತಾಡ್ತೀನಿ ಯಡಿಯೂರಪ್ಪನವರೇ. ನಾನು ಯಾವ ಕ್ಷೇತ್ರಕ್ಕಾದ್ರೂ ಹೋಗ್ತೀನಿ. ನನಗೆ ನನ್ನ ಮಂಡಿ ನೋವು ಇದ್ದರೂ ಪರವಾಗಿಲ್ಲ. ನನ್ನ ತಲೆ ಎನ್‌ಸೈಕ್ಲೋಪೀಡಿಯಾ, ಎಲ್ಲವೂ ನೆನಪಿದೆ. ಆದರೆ ಮಂಡಿಗಳೆರಡೂ ಸಹಕರಿಸಲ್ಲ ಎಂದು ತಮ್ಮ ಅನಾರೋಗ್ಯದ ಕುರಿತು ಮಾತನಾಡಿದರು. ಇದನ್ನೂ ಓದಿ: ಗ್ಯಾಂಗ್‌ಸ್ಟರ್‌ ಅನ್ಸಾರಿ ಸಾವು – ಸುಪ್ರೀಂ ಕೋರ್ಟ್‌ ತನಿಖೆಗೆ ಆಗ್ರಹಿಸಿದ ಅಖಿಲೇಶ್‌ ಯಾದವ್‌

  • ಬಿಎಸ್‌ಪಿಯಿಂದ ಅಮಾನತಾಗಿದ್ದ ಡ್ಯಾನಿಶ್‌ ಅಲಿ ಕಾಂಗ್ರೆಸ್‌ ಸೇರ್ಪಡೆ

    ಬಿಎಸ್‌ಪಿಯಿಂದ ಅಮಾನತಾಗಿದ್ದ ಡ್ಯಾನಿಶ್‌ ಅಲಿ ಕಾಂಗ್ರೆಸ್‌ ಸೇರ್ಪಡೆ

    ನವದೆಹಲಿ: ಬಹುಜನ ಸಮಾಜ ಪಕ್ಷದಿಂದ (BSP) ಅಮಾನತುಗೊಂಡಿದ್ದ ಸಂಸದ ಡ್ಯಾನಿಶ್ ಅಲಿ ಅವರು ಲೋಕಸಭಾ ಚುನಾವಣೆಗೆ (Lok Sabha Elections 2024) ಮುನ್ನ ಬುಧವಾರ ಕಾಂಗ್ರೆಸ್ (Congress) ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.

    ಕಳೆದ ವಾರ ಅವರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ (Sonia Gandhi) ಅವರನ್ನು ಭೇಟಿ ಮಾಡಿದ್ದರು. ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿದ್ದ ಫೋಟೋವನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಮುಂಬರುವ ಚುನಾವಣೆಯಲ್ಲಿ ಅಮ್ರೋಹಾ ಕ್ಷೇತ್ರದಿಂದ ಸ್ಪರ್ಧಿಸುವ ಬಗ್ಗೆ ಸುಳಿವು ನೀಡಿದ್ದರು. ಇದನ್ನೂ ಓದಿ: ಸದಾನಂದಗೌಡರು ಬಿಜೆಪಿ ಪಕ್ಷ ಬಿಡ್ತಾರೆ ಅನ್ನೋದು ಸುಳ್ಳು: ಶೋಭಾ ಕರಂದ್ಲಾಜೆ

    ಪಕ್ಷ ವಿರೋಧಿ ಚಟುವಟಿಕೆಗಳ ಕಾರಣಕ್ಕೆ ಡ್ಯಾನಿಶ್‌ ಅಲಿ (Danish Ali) ಅವರನ್ನು ಕಳೆದ ವರ್ಷ ಬಿಎಸ್‌ಪಿ ಅಮಾನತುಗೊಳಿಸಿತ್ತು. ಅಮ್ರೋಹಾ ಸಂಸದ ಪಕ್ಷದ ಆರೋಪವನ್ನು ನಿರಾಕರಿಸಿದ್ದರು. ಅವರು ಬಿಜೆಪಿ ನೇತೃತ್ವದ ಸರ್ಕಾರದ ‘ಜನವಿರೋಧಿ’ ನೀತಿಗಳ ವಿರುದ್ಧ ಮಾತ್ರ ಧ್ವನಿ ಎತ್ತಿದ್ದೆ ಎಂದು ಪ್ರತಿಪಾದಿಸಿದ್ದರು.

    ಮಾಯಾವತಿ ಅವರು ನನ್ನನ್ನು ಬಿಎಸ್‌ಪಿ ಸಂಸದೀಯ ಪಕ್ಷದ ನಾಯಕ ಸ್ಥಾನವನ್ನೂ ನೀಡಿದ್ದರು. ನಾನು ಯಾವಾಗಲೂ ಅವರ ಅಪಾರ ಪ್ರೀತಿ ಮತ್ತು ಬೆಂಬಲವನ್ನು ಪಡೆಯುತ್ತಿದ್ದೆ. ಆವರ ಇಂದಿನ ನಿರ್ಧಾರ ದುರದೃಷ್ಟಕರ. ನಾನು ಎಲ್ಲಾ ಕಠಿಣ ಕೆಲಸಗಳನ್ನು ಮಾಡಿದ್ದೇನೆ. ಬಿಎಸ್‌ಪಿಯನ್ನು ಬಲಪಡಿಸಲು ಶ್ರದ್ಧೆಯಿಂದ ಕೆಲಸ ಮಾಡಿದ್ದೇನೆ. ಯಾವುದೇ ರೀತಿಯ ಪಕ್ಷ ವಿರೋಧಿ ಚಟುವಟಿಕೆಗಳನ್ನು ಎಂದಿಗೂ ಮಾಡಿಲ್ಲ ಎಂದು ತಿಳಿಸಿದ್ದರು. ಇದನ್ನೂ ಓದಿ: ಸ್ಟ್ರಾಂಗ್ ಯಾರು ಅನ್ನೋದು ಜಗತ್ತಿಗೆ ಗೊತ್ತಿದೆ- ಸಿಎಂ ವಿರುದ್ಧ ಸಿ.ಟಿ ರವಿ ಕಿಡಿ

    ಹೆಚ್.ಡಿ.ದೇವೇಗೌಡ ಅವರ ಶಿಫಾರಸಿನ ಮೇರೆಗೆ ಟಿಕೆಟ್ ದಕ್ಕಿಸಿಕೊಂಡಿದ್ದರು. ಇದಕ್ಕೂ ಮೊದಲು ಅವರು ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಈಗ ಬಿಎಸ್ಪಿಯಿಂದ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.

  • ಸಿದ್ದರಾಮಯ್ಯನಿಂದ ನನಗೂ, ಹೆಗಡೆಗೂ ಗಲಾಟೆಯಾಗಿತ್ತು: ಹೆಚ್‍ಡಿಡಿ

    ಸಿದ್ದರಾಮಯ್ಯನಿಂದ ನನಗೂ, ಹೆಗಡೆಗೂ ಗಲಾಟೆಯಾಗಿತ್ತು: ಹೆಚ್‍ಡಿಡಿ

    -ಮೋದಿ ದೇಶದ ಸರ್ವೋಚ್ಚ ನಾಯಕ

    ಚಿಕ್ಕಮಗಳೂರು: ಸಿದ್ದರಾಮಯ್ಯ (Siddaramaiah) ಯಾರನ್ನ ಮಂತ್ರಿ ಮಾಡಿದ್ದ? ನನ್ನ ಅಭಿಮಾನಿ ಕೆ.ಎಂ ಕೃಷ್ಣಮೂರ್ತಿಯನ್ನೂ ಮಂತ್ರಿ ಮಾಡಲಿಲ್ಲ. ಸ್ವಜಾತಿಯವರನ್ನೇ ಬೆಳೆಯಲು ಬಿಡಲಿಲ್ಲ ಎಂದು ಸಿಎಂ ವಿರುದ್ಧ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು (H. D Deve Gowda) ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.

    ಕಡೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಒಡನಾಡಿಗಳನ್ನು ಸಿದ್ದರಾಮಯ್ಯ ಮಂತ್ರಿ ಮಾಡಲಿಲ್ಲ. ಈ ಮಾತನ್ನು, ಇವತ್ತು ಹೇಳುತ್ತೇನೆ ನಾಳೆಯೂ ಹೇಳುತ್ತೇನೆ. ಸಿದ್ದರಾಮಯ್ಯನನ್ನೇ ಕೇಳಿ ಎಂದು ಅವರು ಕಿಡಿಕಾರಿದ್ದಾರೆ. ಇದನ್ನೂ ಓದಿ: ಲೋಕಸಭೆ ಚುನಾವಣೆಗೆ ಮೋದಿ ರಣಕಹಳೆ – ಇಂದು ಖರ್ಗೆ ಕೋಟೆಗೆ ನಮೋ ಎಂಟ್ರಿ

    ಸಿದ್ದರಾಮಯ್ಯ ಮೋಸ ಮಾಡುತ್ತಾರೆ. ಮಂತ್ರಿ ಮಾಡಬೇಡ ಎಂದು ಹೆಗಡೆಯವರು ಹೇಳಿದ್ದರು. ಈ ವಿಚಾರಕ್ಕೆ ಹೆಗಡೆ ಮತ್ತು ನನಗೂ ಹೋರಾಟ ಆಯಿತು. ವಾಲ್ಮೀಕಿ ಸಮುದಾಯದ ತಿಪ್ಪೇಸ್ವಾಮಿ ಅವರನ್ನು ಮಂತ್ರಿ ಮಾಡುವಂತೆ ಮನೆಯ ಒಳಗೆ ಕೂರಿಸಿಕೊಂಡು ನನಗೆ ಹೇಳಿದ್ದರು. ಹಿಂದುಳಿದ ವರ್ಗದವರನ್ನೇ ಮಾಡುವುದಾದರೆ ತಿಪ್ಪೇಸ್ವಾಮಿ ಮಾಡು, ಸಿದ್ದರಾಮಯ್ಯನ ಮಾಡಬೇಡ ಎಂದಿದ್ದರು. ನಾನು ಸುಳ್ಳನ್ನು ಹೇಳಿ ಪಾಪದ ಕೆಲಸ ಮಾಡುವುದಿಲ್ಲ. ನನಗೆ ಮಂಡಿ ನೋವಿದೆ. ಆದರೆ ಜ್ಞಾಪಕ ಶಕ್ತಿ ಹಾಗೆ ಉಳಿದಿದೆ ಎಂದಿದ್ದಾರೆ.

    ಮೋದಿ (Narendra Modi) ದೇಶದ ಸರ್ವೋಚ್ಚ ನಾಯಕ. ಅವರ ಸಮಾನವಾಗಿ ಯಾವ ನಾಯಕರು ದೇಶದಲ್ಲಿ ಇಲ್ಲ. ಎನ್‍ಡಿಎ ಕೂಟದಲ್ಲಿ ಮೋದಿ ಸಮಕ್ಕೆ ಯಾರು ಇಲ್ಲ. ಒಂದೊಂದು ಚಾನೆಲ್‍ನಲ್ಲಿ ಒಂದೊಂದು ಸಮೀಕ್ಷೆ ಬರುತ್ತಿದೆ. ಇದಕ್ಕೆಲ್ಲ ಯಾರು ತಲೆಕೆಡಿಸಿಕೊಳ್ಳಬೇಕಿಲ್ಲ. ಮೋದಿ ಮತ್ತೆ ಈ ದೇಶದ ಪ್ರಧಾನಿಯಾಗುತ್ತಾರೆ. ರಾಹುಲ್ ಗಾಂಧಿ ಅಧಿಕಾರಕ್ಕೆ ಬಂದರೆ ಸಾಲ ಮನ್ನಾ ಮಾಡುತ್ತೇನೆ ಎಂದಿದ್ದಾರೆ. ಹಿಂದೆಯೇ ಕುಮಾರಸ್ವಾಮಿ (HD Kumaraswamy) ಸಾಲ ಮನ್ನಾ ಮಾಡಿದ್ದರು. 26 ಸಾವಿರ ಕೋಟಿ ರೂ. ರೈತರ ಸಾಲ ಮನ್ನಾ ಮಾಡಿದ್ದು ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ. ಹಾಸನ ಕ್ಷೇತ್ರದ ಜನರು ನನ್ನ ಗೆಲ್ಲಿಸಿದ್ದಾರೆ ಅವರ ಋಣ ತೀರಿಸಬೇಕು ಎಂದಿದ್ದಾರೆ.

    ಇದೇ ವೇಳೆ, ಸಿಎಂ ಸಿದ್ದರಾಮಯ್ಯ ಆಪ್ತ ಶಾಸಕ ಜಿ.ಹೆಚ್ ಶ್ರೀನಿವಾಸ್ ಅಳಿಯ ಚೇತನ್ ಕೆಂಪರಾಜು ಜೆಡಿಎಸ್‍ಗೆ ಸೇರ್ಪಡೆಗೊಂಡಿದ್ದಾರೆ. ಈ ವೇಳೆ ಮಾತನಾಡಿದ ಅವರು, ನಮ್ಮ ಕುಟುಂಬ ಜೆಡಿಎಸ್ ಹಾಗೂ ಕಾಂಗ್ರೆಸ್ಸಿನ ಜೊತೆ ಗುರುತಿಸಿಕೊಂಡಿತ್ತು. ನಮ್ಮ ದೊಡ್ಡಪ್ಪ ದಿವಂಗತ ಮಾಜಿ ಶಾಸಕ ಕೆ.ಎಂ ಕೃಷ್ಣಮೂರ್ತಿ, ನಮ್ಮ ಅಪ್ಪ ಕೆ.ಎಂ. ಕೆಂಪರಾಜು ಸಿದ್ದರಾಮಯ್ಯ ಒಟ್ಟಿಗಿದ್ದರು. ದೊಡ್ಡಪ್ಪ, ನಮ್ಮಪ್ಪ ನಿಧನವಾದ ನಂತರ ನಮಗೆ ರಾಜಕೀಯ ನೆಲೆ ಇಲ್ಲದಂತಾಗಿತ್ತು. ನಮ್ಮನ್ನು ಗುರುತಿಸಿದ ಪ್ರಜ್ವಲ್ ರೇವಣ್ಣ ರಾಜಕೀಯ ಸ್ಥಾನಮಾನ ಕೊಡುವ ಭರವಸೆ ಕೊಟ್ಟಿದ್ದಾರೆ. ರಾಜಕೀಯ ಹಿತೈಷಿಗಳು, ಕಡೂರಿನ ಜನರ ಸಲಹೆಯಂತೆ ಕಾಂಗ್ರೆಸ್ ಬಿಟ್ಟು ಜೆಡಿಎಸ್ ಸೇರಿಕೊಂಡು ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಬೆಂಬಲಿಸಿದ್ದೇನೆ. ನಾನು ಶಾಸಕ ಶ್ರೀನಿವಾಸ ಅವರ ಅಳಿಯ ಎನ್ನುವುದಕ್ಕಿಂತ ಕಡೂರು ಕ್ಷೇತ್ರದ ಮಗ ಎಂದಿದ್ದಾರೆ.

    ಹಾಸನ ಲೋಕಸಭಾ ಕ್ಷೇತ್ರದ ಗೆಲುವಿಗೆ ದೇವೇಗೌಡರು ರಣತಂತ್ರ ಹೆಣೆಯಲು ಆರಂಭಿಸಿದ್ದಾರೆ. ಬಿಜೆಪಿ ಮಾಜಿ ಶಾಸಕ ಬೆಳ್ಳಿ ಪ್ರಕಾಶ್ ನಿವಾಸಕ್ಕೆ ಪುತ್ರ ಹೆಚ್.ಡಿ.ರೇವಣ್ಣ, ಮೊಮ್ಮಗ ಪ್ರಜ್ವಲ್ ರೇವಣ್ಣ, ಮಾಜಿ ಶಾಸಕ ವೈ.ಎಸ್.ವಿ ದತ್ತರೊಂದಿಗೆ ಭೇಟಿ ನೀಡಿ ಚರ್ಚೆ ನಡೆಸಿದರು. ಕಡೂರಿನಲ್ಲಿ ಮೊದಲು ಜೆಡಿಎಸ್ ಕಾರ್ಯಕರ್ತರು ಸಭೆ ನಡೆಸಿ ಸಂಸದ ಪ್ರಜ್ವಲ್ ರೇವಣ್ಣ ಪರ ಮತಯಾಚನೆ ನಡೆಸಿದರು. ಬಳಿಕ ಕಡೂರಿನ ಬಿಜೆಪಿ ಪಕ್ಷದ ಮಾಜಿ ಶಾಸಕ ಬೆಳ್ಳಿ ಪ್ರಕಾಶ್ ನಿವಾಸಕ್ಕೆ ತೆರಳಿದರು. ಅಲ್ಲಿ ನೂರಾರು ಬಿಜೆಪಿ ಕಾರ್ಯಕರ್ತರು ಕೇಸರಿ ಶಾಲ್ ಧರಿಸಿ ದೊಡ್ಡಗೌಡರನ್ನು ಸ್ವಾಗತಿಸಿದರು. ಇದನ್ನೂ ಓದಿ: ಬಾಂಡ್‌ ಬರುವ ಮೊದಲು ಚುನಾವಣೆಗೆ ಫಂಡಿಂಗ್‌ ಹೇಗೆ ನಡೆಯುತ್ತಿತ್ತು – ದೇಶದ ಜನತೆಗೆ ಅಮಿತ್‌ ಶಾ ಪ್ರಶ್ನೆ

  • ವಿಶ್ವವೇ ಒಪ್ಪಿದ ಮೋದಿ ವಿರುದ್ಧ ಮಾತಾಡೋಕೆ ಸಿದ್ದರಾಮಯ್ಯ ಯಾರು?: ದೇವೇಗೌಡ್ರು

    ವಿಶ್ವವೇ ಒಪ್ಪಿದ ಮೋದಿ ವಿರುದ್ಧ ಮಾತಾಡೋಕೆ ಸಿದ್ದರಾಮಯ್ಯ ಯಾರು?: ದೇವೇಗೌಡ್ರು

    ಬೆಂಗಳೂರು: ಬರ ಪರಿಹಾರ ಕೊಡಲಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿಯವರ (Narendra Modi) ವಿರುದ್ಧ ಮಾತನಾಡಿದ್ದ ಸಿಎಂ ಸಿದ್ದರಾಮಯ್ಯ (Siddaramaiah) ವಿರುದ್ಧ ಮಾಜಿ ಪ್ರಧಾನಿ ದೇವೇಗೌಡರು (H. D. Deve Gowda) ವಾಗ್ದಾಳಿ ನಡೆಸಿದ್ದಾರೆ.

    ನಗರದಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಕೇಂದ್ರದಿಂದ ನಮಗೆ ಹಣ ಬಂದಿಲ್ಲ ಎಂದು ಸಿದ್ದರಾಮಯ್ಯ ಹೇಳ್ತಾರೆ. ನಾನು ಸಿಎಂ ಆಗಿದ್ದಾಗ ರಾಜ್ಯದ ರೈತರ ಸಾಲಮನ್ನಾ ಮಾಡ್ತೀನಿ ಎಂದು ಅಂದಿನ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದೆ. ಅದಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ಕೊಡಲಿಲ್ಲ. ಆಗ ಸಿದ್ದರಾಮಯ್ಯ ಹಣಕಾಸು ಮಂತ್ರಿ ಆಗಿದ್ದರು. ನಿಮಗೆ ಪ್ರಾಮಾಣಿಕತೆ ಇದ್ದರೆ ಅವತ್ತು ಏನು ನಡೀತು ಎಂದು ಹೇಳಿ. ಈಗ ಯಾಕೆ ಮೋದಿ ಬಗ್ಗೆ ಮಾತಾಡ್ತೀರಾ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಜೆಡಿಎಸ್ ಪಕ್ಷ ಯಾವುದೇ ಕಾರಣಕ್ಕೂ ವಿಲೀನ ಇಲ್ಲ: ಸಿದ್ದರಾಮಯ್ಯಗೆ ದೇವೇಗೌಡ ತಿರುಗೇಟು

    ಬೆಳಗ್ಗೆ ಎದ್ದರೆ ಮೋದಿ ಹಣ ಕೊಟ್ಟಿಲ್ಲ ಎನ್ನುತ್ತಾರೆ. ಯಾಕೆ ಕೊಡಬೇಕು? ಮನಮೋಹನ್ ಸಿಂಗ್ ಏನು ಕೊಟ್ಟಿದ್ದಾರೆ? ವಾಜಪೇಯಿ ಏನು ಕೊಟ್ಡಿದ್ದಾರೆ ಎಂದು ಹೇಳಿ. ಸಿದ್ದರಾಮಯ್ಯನವರೇ ಸತ್ಯ ಹೇಳಿ. ಬೆಳಗ್ಗೆಯಿಂದ ಸಂಜೆಯವರೆಗೂ ಮೋದಿ ಮೋದಿ ಎನ್ನುತ್ತೀರಿ, ಮೋದಿ ಈ ದೇಶದ ಸಮರ್ಥ ನಾಯಕ ಎಂಬುದನ್ನು ಇಲ್ಲ ಎನ್ನಲು ಇವರು ಯಾರು ಎಂದು ಪ್ರಶ್ನಿಸಿದ್ದಾರೆ.

    Who is he? ಮೋದಿಯನ್ನ ಇಡೀ ವಿಶ್ವ ಒಪ್ಪಿದೆ. ಮಾತಾಡೋಕು ಇತಿಮಿತಿ ಇರಬೇಕು ಎಂದು ಸಿದ್ದರಾಮಯ್ಯ ವಿರುದ್ಧ ಅವರು ಗುಡುಗಿದ್ದಾರೆ. ಇದನ್ನೂ ಓದಿ: ಮಮತಾ ಸವಾಲು ಸ್ವೀಕಾರ – ಕೋಲ್ಕತ್ತಾ ಹೈಕೋರ್ಟ್ ಜಡ್ಜ್ ರಾಜೀನಾಮೆ, ಮಾ.7 ರಂದು ಬಿಜೆಪಿ ಸೇರ್ಪಡೆ

  • ಜೆಡಿಎಸ್ ಪಕ್ಷ ಯಾವುದೇ ಕಾರಣಕ್ಕೂ ವಿಲೀನ ಇಲ್ಲ: ಸಿದ್ದರಾಮಯ್ಯಗೆ ದೇವೇಗೌಡ ತಿರುಗೇಟು

    ಜೆಡಿಎಸ್ ಪಕ್ಷ ಯಾವುದೇ ಕಾರಣಕ್ಕೂ ವಿಲೀನ ಇಲ್ಲ: ಸಿದ್ದರಾಮಯ್ಯಗೆ ದೇವೇಗೌಡ ತಿರುಗೇಟು

    ಬೆಂಗಳೂರು: ಯಾವುದೇ ಕಾರಣಕ್ಕೂ ಜೆಡಿಎಸ್ (JDS) ಪಕ್ಷವನ್ನ ಬಿಜೆಪಿ ಜೊತೆ ವಿಲೀನ ಮಾಡೊಲ್ಲ ಎಂದು ಮಾಜಿ ಪ್ರಧಾನಿ ದೇವೇಗೌಡ (H.D.Deve Gowda), ಸಿಎಂ ಸಿದ್ದರಾಮಯ್ಯ (Siddaramaiah) ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

    ಮಂಡ್ಯ, ಹಾಸನ ಸಮಾವೇಶದಲ್ಲಿ ಬಿಜೆಪಿ ಜೊತೆ ಮೈತ್ರಿಗೆ ವಿರೋಧ ಮಾಡಿ, ಜೆಡಿಎಸ್‌ನ ಜಾತ್ಯತೀತ ನಿಲುವಿನ ಬಗ್ಗೆ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ರು. ಶೂನ್ಯ ಸಾಧನೆ ಭಯಕ್ಕೆ ಬಿಜೆಪಿ ಜೊತೆ ಮೈತ್ರಿ ಆಗಿದ್ದರು ಅಂತ ಸಿದ್ದರಾಮಯ್ಯ ಭಾಷಣ ಮಾಡಿದ್ರು. ಇದಕ್ಕೆ ತಿರುಗೇಟು ಕೊಟ್ಟ ದೇವೇಗೌಡರು ಸುದ್ದಿಗೋಷ್ಠಿ ನಡೆಸಿ ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ರಾಜ್ಯ ಉಗ್ರಾಣ ನಿಗಮ ಅಧ್ಯಕ್ಷ ಸ್ಥಾನ ನೇಮಕ ಆದೇಶ – ಸಿಎಂ ಸಹಿಯನ್ನೇ ನಕಲು ಮಾಡಿದ ಕಿರಾತಕರು

    ಜೆಡಿಎಸ್ ಪಕ್ಷ ನಡೆಸಲು ಸಮರ್ಥ ನಾಯಕ ಕುಮಾರಸ್ವಾಮಿ ಇದ್ದಾರೆ. ಲೋಕಸಭೆಯಲ್ಲಿ ಕುಮಾರಸ್ವಾಮಿ ಸೀಟು ಹಂಚಿಕೆ ಮಾಡಿಕೊಳ್ತಾರೆ. ಆದರೆ ಪಕ್ಷ ವಿಲೀನ ಮಾಡೊಲ್ಲ. ಮರ್ಜ್ ಮಾಡ್ತಾರೆ ಅನ್ನೋದು ನಿಮ್ಮ ಕಲ್ಪನೆ. ನಿಮಗೆ ತಾಳ್ಮೆ ಇರಲಿ. ಅ ದಿನಗಳನ್ನ ನಿಮ್ಮ ಕಣ್ಣಿಂದ ನೋಡ್ತೀರಾ. ಆಗ ನಾನು ಇರುತ್ತೇನೆ‌ ಎಂದು ಸಿದ್ದರಾಮಯ್ಯಗೆ ತಿರುಗೇಟು ಕೊಟ್ಟರು.

    ಕಾಂಗ್ರೆಸ್ ಪಕ್ಷ ಜೆಡಿಎಸ್ ಮುಗಿಸಬೇಕು ಅಂತ ನಿನ್ನೆಯಿಂದ ಮಾಡ್ತಿಲ್ಲ. ನನ್ನ ಸರ್ಕಾರ ಯಾವ ತಪ್ಪಿಗೆ ತೆಗೆದರು? ಕುಮಾರಸ್ವಾಮಿ ಅವರ ಸರ್ಕಾರ ಯಾಕೆ ತೆಗೆದರು? ಕುಮಾರಸ್ವಾಮಿ ಅವರೇ ಸಿಎಂ ಆಗಬೇಕು ಅಂದವರು ಕಾಂಗ್ರೆಸ್‌ನವರು. ಅವರೇ ಯಾಕೆ ಸರ್ಕಾರ ತೆಗೆದರು? ಮಮತಾ ಬ್ಯಾನರ್ಜಿ ಬಿಜೆಪಿ ಜೊತೆ ಇರಲಿಲ್ಲವಾ? ಈಗ ರಾಹುಲ್ ಗಾಂಧಿ ಜೊತೆ ಇಲ್ಲವಾ? ಇದು ಜಾತ್ಯತೀತನಾ? ಸಿದ್ದರಾಮಯ್ಯ ಅವರೇ ನಿಮ್ಮ ಜಾತ್ಯತೀತ ಕಲ್ಪನೆ ನೀವೇ ಇಟ್ಟುಕೊಳ್ಳಿ ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ನಾಸೀರ್ ಹುಸೇನ್‍ರನ್ನು ಆರೋಪಿ ನಂ.4 ಎಂದು ಪರಿಗಣಿಸಿ ಕ್ರಮ ಕೈಗೊಳ್ಳಿ: ವಿಜಯೇಂದ್ರ

    ಇದೇ ವೇಳೆ ಸೀಟು ಹಂಚಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಕುಮಾರಸ್ವಾಮಿ ಅವರು, ಅಮಿತ್ ಶಾ, ನಡ್ಡಾ, ಮೋದಿ ಅವರ ಜೊತೆ ಅಂತಿಮ ತೀರ್ಮಾನ ಮಾಡ್ತಾರೆ. ಇನ್ನೊಂದು ವಾರದಲ್ಲಿ ಸೀಟು ಹಂಚಿಕೆ ಆಗಬಹುದು ಎಂದರು.

  • ಮಂಡ್ಯದಲ್ಲಿ ಜೆಡಿಎಸ್ ಸಮಾವೇಶ, ಸುಮ್ಮನೆ ಕೂರೋದಕ್ಕಾಗುತ್ತಾ?: ವಿರೋಧಿಗಳಿಗೆ ದೊಡ್ಡಗೌಡ್ರು ಟಾಂಗ್

    ಮಂಡ್ಯದಲ್ಲಿ ಜೆಡಿಎಸ್ ಸಮಾವೇಶ, ಸುಮ್ಮನೆ ಕೂರೋದಕ್ಕಾಗುತ್ತಾ?: ವಿರೋಧಿಗಳಿಗೆ ದೊಡ್ಡಗೌಡ್ರು ಟಾಂಗ್

    ಬೆಂಗಳೂರು: ಮಂಡ್ಯದಲ್ಲಿ (Mandya) ಜೆಡಿಎಸ್ (JDS) ಸಮಾವೇಶ ನಡೆಯಲಿದ್ದು, ಸುಮ್ಮನೆ ಕೂರುವುದಕ್ಕೆ ಆಗುತ್ತಾ ಎಂದು ಸಂಸದೆ ಸುಮಲತಾ (Sumalatha) ಅವರಿಗೆ ಮಾಜಿ ಪ್ರಧಾನಿ ದೇವೇಗೌಡರು (H.D. Deve Gowda) ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ.

    ಜೆಪಿ ಭವನದಲ್ಲಿ ಮಾತನಾಡಿದ ಅವರು, ದಿನಾ ಬೆಳಗ್ಗೆ ಎದ್ದರೆ ಮಾಧ್ಯಮಗಳಲ್ಲಿ ಮಂಡ್ಯದ ಅನಾವಶ್ಯಕ ಚರ್ಚೆ ಆಗುತ್ತಿದೆ. ಅವರು ಸುಮ್ಮನೆ ದಿನಾ ಹೇಳಿಕೆ ಕೊಡುತ್ತಿದ್ದಾರೆ. ಅವರು ಹೇಳಿಕೆ ಕೊಡಲು ಸ್ವತಂತ್ರರು. ಯಾರ ಬಗ್ಗೆಯೂ ದೂಷಿಸಲು ಹೋಗುವುದಿಲ್ಲ. ಸೀಟು ಹಂಚಿಕೆ ಬಗ್ಗೆ ಅಮಿತ್ ಶಾ ತೀರ್ಮಾನ ಮಾಡಲಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ರಾಜಕೀಯ ಪ್ರವೇಶಕ್ಕೆ ಮಂಜುನಾಥ್ ಸಮ್ಮತಿ ಸೂಚಿಸಲ್ಲ: ಹೆಚ್‌ಡಿಡಿ ಅಚ್ಚರಿಯ ಹೇಳಿಕೆ

    ಮಾ.14 ಅಥವಾ 15 ರಂದು ಕೋಲಾರದಲ್ಲಿ ಬೃಹತ್ ಸಮಾವೇಶ ನಡೆಯಲಿದೆ. ಆ ಸಮಾವೇಶದಲ್ಲಿ ಬಿಜೆಪಿ (BJP) ಜೊತೆ ಮೈತ್ರಿ ಸಂದೇಶ ರಾಜ್ಯಕ್ಕೆ ಹೋಗಬೇಕು. ಕೋಲಾರದಲ್ಲಿ ನಮ್ಮ ಶಕ್ತಿ ಇದೆ ಎಂಬುದರಲ್ಲಿ ಯಾವ ಸಂಶಯವೂ ಇಲ್ಲ. ಕುಮಾರಸ್ವಾಮಿ (H.D Kumaraswamy) ಹಾಗೂ ಅಮಿತ್ ಶಾ ಯಾವ ತೀರ್ಮಾನ ಮಾಡ್ತಾರೆ ಮಾಡಲಿ. ನಮ್ಮ ಶಕ್ತಿ ಏನಿದೆ ಅನ್ನೋದನ್ನ ತೋರಿಸದೇ ಸುಮ್ಮನೆ ಕೂರುವುದಕ್ಕೆ ಆಗುತ್ತಾ? ಬಿಜೆಪಿ ಜೊತೆ ಮೈತ್ರಿ ಸಂಬಂಧ ಚೆನ್ನಾಗಿ ಉಳಿಸಿಕೊಳ್ಳುತ್ತೇವೆ ಎಂದು ವಿರೋಧಿಗಳಿಗೆ ಟಾಂಗ್ ಕೊಟ್ಟಿದ್ದಾರೆ.

    ಮೈತ್ರಿ ಸೀಟು ಹಂಚಿಕೆ ಇನ್ನೂ ಅಂತಿಮ ಆಗಿಲ್ಲ. ಬಿಜೆಪಿ ಟಿಕೆಟ್ ವಿಚಾರವಾಗಿ ಕೆಲವು ಕ್ಷೇತ್ರಗಳ ಅಭಿಪ್ರಾಯ ಕೇಳಬಹುದು, ಆಗ ಅಭಿಪ್ರಾಯವನ್ನು ಹೇಳ್ತೀವಿ. ಚುನಾವಣೆ ಅಧಿಸೂಚನೆ ಆದ ಬಳಿಕ ಪ್ರವಾಸದ ಬಗ್ಗೆ ತೀರ್ಮಾನ ಮಾಡ್ತೀವಿ. ಮೋದಿ ಅವರ ಪ್ರವಾಸದ ಪ್ಲ್ಯಾನ್ ಬಹಳ ಸ್ಪೀಡ್ ಇದೆ, 10 ದಿನಗಳಲ್ಲಿ ಹಲವು ಟೂರ್ ಮಾಡ್ತಿದ್ದಾರೆ. ಈಗ ಯಾರನ್ನೂ ಅವರು ಕಟ್ಟಿಕೊಳ್ತಿಲ್ಲ. ಮುಂದೆ ಕರ್ನಾಟಕದಲ್ಲಿ ಜಿಲ್ಲೆಗಳ ಪ್ರವಾಸಕ್ಕೆ ಕರೆದಾಗ ನಾವು ಹೋಗ್ತೀವಿ. ಕುಮಾರಸ್ವಾಮಿ ಸೇರಿದಂತೆ ಜೆಡಿಎಸ್ ನಾಯಕರು ಪ್ರವಾಸದಲ್ಲಿ ಭಾಗವಹಿಸುತ್ತಾರೆ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಬಾಂಬ್ ಸ್ಫೋಟವಾಗಲು ಎರಡೂ ರಾಷ್ಟ್ರೀಯ ಪಕ್ಷದವರು ಕಾರಣ: ಪ್ರಮೋದ್ ಮುತಾಲಿಕ್

  • ಆರೋಗ್ಯ ಸುಧಾರಣೆ – ಮಾವಿನಕೆರೆ ರಂಗನಾಥಸ್ವಾಮಿಗೆ ಹರಕೆ ತೀರಿಸಿದ ದೊಡ್ಡಗೌಡ್ರು

    ಆರೋಗ್ಯ ಸುಧಾರಣೆ – ಮಾವಿನಕೆರೆ ರಂಗನಾಥಸ್ವಾಮಿಗೆ ಹರಕೆ ತೀರಿಸಿದ ದೊಡ್ಡಗೌಡ್ರು

    – ನಾನು, ರೇವಣ್ಣ ಪೂಜೆ ಮಾಡಿದ್ರೆ ಅಪಾರ್ಥ ಕಲ್ಪಿಸ್ತಾರೆ, ಇದಕ್ಕೆ ರಾಜಕೀಯ ಬೆರೆಸಬೇಡಿ

    ಹಾಸನ: ಮಾಜಿ ಪ್ರಧಾನಿ ದೇವೇಗೌಡರು (H.D Deve Gowda) ಮಾವಿನಕೆರೆ ರಂಗನಾಥಸ್ವಾಮಿ ಸಮ್ಮುಖದಲ್ಲಿ 1001 ಕಳಸ ಪೂಜೆ ನೆರವೇರಿಸಿದ್ದಾರೆ.

    ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಆರೋಗ್ಯ ಸಮಸ್ಯೆ ಪರಿಹಾರವಾದರೆ ಪೂಜಾ ಕೈಂಕರ್ಯ ಮಾಡುವುದಾಗಿ ಮಾವಿನಕೆರೆ ರಂಗನಾಥಸ್ವಾಮಿಗೆ ಹರಕೆ ಕಟ್ಟಿಕೊಂಡಿದ್ದೆ. ಅದನ್ನಿಂದು ತೀರಿಸಿದ್ದೇನೆ. ಇದರಲ್ಲಿ ರಾಜಕೀಯ ಬೆರೆಸಬೇಡಿ ಎಂದು ಅವರು ಹೇಳಿದ್ದಾರೆ.

    ನಾವು ದೇವರನ್ನು ನಂಬಿದ್ದೇವೆ. ನಮ್ಮ ತಂದೆ ಇಲ್ಲಿನ ಹಳೆಯ ದಾರಿಯಲ್ಲಿ ನನ್ನನ್ನು ಕರೆದುಕೊಂಡು ಬರುತ್ತಿದ್ದರು. ಈ ಪೂಜಾ ಕಾರ್ಯಕ್ರಮದ ವ್ಯವಸ್ಥೆಯನ್ನು ನಾನು, ರೇವಣ್ಣ (H.D Revanna) ಮಾಡಿದ್ರೆ ಅಪಾರ್ಥ ಕಲ್ಪಿಸುತ್ತಾರೆ. ಅದಕ್ಕೇ ನನ್ನ ಮಿತ್ರರಿಗೆ ಹೇಳಿದ್ದೆ. ಅವರೇ ಖುದ್ದು ನಿಂತು ಎಲ್ಲಾ ಮಾಡಿದ್ದಾರೆ ಎಂದಿದ್ದಾರೆ.

    ನನ್ನ ಆರೋಗ್ಯ ಸರಿ ಇರಲಿಲ್ಲ. ಎರಡು ವರ್ಷ ಭಗವಂತನ ಅನುಗ್ರಹದಿಂದ ಬದುಕಿದ್ದೇನೆ. ನನ್ನ ಅಳಿಯ ಡಾ.ಮಂಜುನಾಥ್ ಹಾಗೂ ಮಣಿಪಾಲ್ ಆಸ್ಪತ್ರೆ ಮುಖ್ಯಸ್ಥರಾದ ಡಾ.ಸುದರ್ಶನ್ ಬಲ್ಲಾಳ್ ಮತ್ತು ಅವರ ತಂಡ ಎರಡು ವರ್ಷದಿಂದ ನನ್ನನ್ನು ನೋಡಿಕೊಳ್ಳುತ್ತಿದ್ದಾರೆ. ಶುಕ್ರವಾರ ಸಂಜೆ 6 ಗಂಟೆಯಿಂದ ರಂಗನಾಥಸ್ವಾಮಿ ದೇವಾಲಯದಲ್ಲಿ ಶಾಸ್ತ್ರೋಕ್ತವಾಗಿ, ನಮ್ಮ ಸಂಪ್ರದಾಯದಂತೆ ಪೂಜಾ ಕಾರ್ಯ ಮಾಡುತ್ತಿದ್ದೇವೆ. ತುಂಬಾ ಜನ ಪುರೋಹಿತರಿದ್ದಾರೆ, ಹೊರಗಡೆಯಿಂದಲೂ ಬಂದಿದ್ದಾರೆ. ಭಾನುವಾರ 4 ಗಂಟೆಗೆ ಪೂಜೆ ಮುಗಿಯಬಹುದು. ಇದರಲ್ಲಿ ಯಾವುದೇ ರಾಜಕೀಯ ಇಲ್ಲ ಎಂದು ಅವರು ಹೇಳಿದ್ದಾರೆ.

    ರಂಗನಾಥನ ಆಶೀರ್ವಾದದಿಂದ ರಾಜಕೀಯದಲ್ಲಿ ನಾನು ಬೆಳೆದಿದ್ದೇನೆ. ನನಗೆ ಎಂಟು ವರ್ಷವಿದ್ದಾಗ ( 80 ವರ್ಷಗಳ ಹಿಂದೆ) ಈ ಕಾರ್ಯಕ್ರಮ ನಡೆದಿತ್ತು. ನಾಳೆ (ಭಾನುವಾರ) ಬಹಳ ಭಕ್ತಾಧಿಗಳು ಬರ್ತಾರೆ. ಅಂತಿಮವಾಗಿ ಕಳಸ ಪ್ರತಿಷ್ಠಾಪನೆ ಮಾಡ್ತಾರೆ. ಈ ಅವಕಾಶ ಮಾಡಿಕೊಟ್ಟ ದೇವರಿಗೆ ನಾನು ತುಂಬಾ ಅಬಾರಿಯಾಗಿದ್ದೇನೆ ಎಂದಿದ್ದಾರೆ.

    ನನಗೆ ಕಿಡ್ನಿ ಫೇಲಾಗಿ ತೊಂದರೆ ಆಯ್ತು, ಈಗ ಎಲ್ಲಾ ಸರಿ ಹೋಗಿದೆ. ನಾನು ಆರೋಗ್ಯವಾಗಿರಲು ಡಾಕ್ಟರ್‌ಗಳ ಪ್ರಾಮಾಣಿಕ ಪ್ರಯತ್ನ ಕಾರಣ. ಭಗವಂತನ ಅನುಗ್ರಹ, ನನ್ನ ಅಳಿಯ, ಸುದರ್ಶನ್ ಬಲ್ಲಾಳ್ ಮತ್ತು ಅವರ ತಂಡದ ಪ್ರಯತ್ನದ ಫಲವಾಗಿ ಸುಧಾರಿಸಿದ್ದೇನೆ. ವಯಸ್ಸಿನ ಕಾರಣದಿಂದ ನನಗೆ ಮಂಡಿ ನೋವಿದೆ, ಆದರೆ ಜ್ಞಾಪಕ ಶಕ್ತಿ ಚೆನ್ನಾಗಿದೆ. ಹಿಂದೆ ಕಾಂಗ್ರೆಸ್‍ನಿಂದ ಟಿಕೆಟ್ ತಪ್ಪಿತು, ಹತ್ತು ರೂ ಬಾಡಿಗೆ ಮನೆಯಲ್ಲಿದ್ದೆ. ಆಗ ನನ್ನ ಪತ್ನಿ ಹೇಳಿದ್ದರು, ಆ ರಂಗನಾಥ ಇದ್ದಾನೆ ಚುನಾವಣೆಗೆ ನಿಂತುಕೊಳ್ಳಿ ಎಂದು, ಜನರೇ ದುಡ್ಡು ಹಾಕಿ ಚುನಾವಣೆ ಮಾಡಿದ್ದರು. ಆಗ ಗೆದ್ದೆ ಎಂದು ನೆನಪು ಮಾಡಿಕೊಂಡಿದ್ದಾರೆ.

    ಬಳಿಕ ಅಲ್ಲಿಂದ ಪ್ರಧಾನಮಂತ್ರಿ ಆದೆ. ನಾನು ರಾಜಕಾರಣ ಆರಂಭಿಸುವಾಗಲೂ ರಂಗನಾಥನ ಆಶೀರ್ವಾದ ಪಡೆದಿದ್ದೇನೆ. ನನಗೆ ಮೂರು ವರ್ಷ ಇದ್ದಾಗಿನಿಂದಲೂ ಈ ದೇವರ ಆಶೀರ್ವಾದ ಪಡೆದಿದ್ದೇನೆ. ಆ ಭಗವಂತನ ಅನುಗ್ರಹದಿಂದ ಬದುಕಿದ್ದೇನೆ ಎಂದಿದ್ದಾರೆ.

    ಬೆಂಗಳೂರಿನ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ಪ್ರಕರಣದ ಬಗ್ಗೆ ನನಗೆ ಸಂಪೂರ್ಣ ವಿವರ ಗೊತ್ತಿಲ್ಲ. ನನ್ನ ಮಗ ಹರದನಹಳ್ಳಿಯಲ್ಲಿ ಟಿವಿ ಹಾಕ್ಸಿಲ್ಲ, ಪೇಪರ್ ಕೂಡ ನೋಡಿಲ್ಲ. ನಾನು, ನನ್ನ ಮನಸ್ಸು ರಂಗನಾಥಸ್ವಾಮಿ ಅಷ್ಟೇ. ಹಾಗಂದ ಮಾತ್ರಕ್ಕೆ ರಾಜಕೀಯದಿಂದ ದೂರ ಹೋಗಲ್ಲ ಎಂದಿದ್ದಾರೆ.