Tag: H.D.Deve Gowda

  • ಮುಸ್ಲಿಮರಿಗೆ ಮೀಸಲಾತಿ ಕೊಟ್ಟಿದ್ದು ಹೆಚ್.ಡಿ.ದೇವೇಗೌಡರಲ್ಲ: ಜಮೀರ್ ಅಹ್ಮದ್

    ಮುಸ್ಲಿಮರಿಗೆ ಮೀಸಲಾತಿ ಕೊಟ್ಟಿದ್ದು ಹೆಚ್.ಡಿ.ದೇವೇಗೌಡರಲ್ಲ: ಜಮೀರ್ ಅಹ್ಮದ್

    – ಯಾವ ಮುಖ ಇಟ್ಕೊಂಡು ಮುಸಲ್ಮಾನರ ವೋಟ್ ಕೇಳ್ತಾರೆ: ಜೆಡಿಎಸ್‌ಗೆ ಟಾಂಗ್

    ರಾಮನಗರ: ಮುಸ್ಲಿಮರಿಗೆ ಮೀಸಲಾತಿ ಕೊಟ್ಟಿದ್ದು ಹೆಚ್.ಡಿ.ದೇವೇಗೌಡರಲ್ಲ. ಅವರು ಜನರನ್ನು ದಾರಿ ತಪ್ಪಿಸುವುದು ಬೇಡ ಎಂದು ಸಚಿವ ಜಮೀರ್ ಅಹ್ಮದ್ ವಾಗ್ದಾಳಿ ನಡೆಸಿದ್ದಾರೆ.

    ಶನಿವಾರ ಚನ್ನಪಟ್ಟಣ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಪರ ಪ್ರಚಾರ ನಡೆಸಿದ ಜಮೀರ್, ಮೀಸಲಾತಿ ಕೊಟ್ಟಿದ್ದು ದೇವೇಗೌಡರಲ್ಲ. ಅದನ್ನ ವೀರಪ್ಪ ಮೊಯ್ಲಿ ಕೊಟ್ಟಿದ್ದು. ದೇವೇಗೌಡರಿಗೆ ಮನವಿ ಮಾಡ್ತೇನೆ. ಜನರನ್ನು ದಾರಿತಪ್ಪಿಸೋದು ಬೇಡ. 1994 ರಲ್ಲಿ ವೀರಪ್ಪ ಮೊಯ್ಲಿ ಕೊಟ್ಟಿದ್ದು. ಹಿಂದುಳಿದ ವರ್ಗಗಳ ಆಯೋಗಕ್ಕೆ ಮೀಸಲಾತಿ ಕುರಿತು ವರದಿ ಕಳುಹಿಸಿದ್ರು. ಆಗ ಸರ್ಕಾರ ಹೋಯ್ತು. ಸರ್ಕಾರ ಹೋದ ಮೇಲೆ ದೇವೇಗೌಡರು ಬಂದ್ರು. ವೀರಪ್ಪ ಮೊಯ್ಲಿ 6% ಗೆ ರೆಕ್ಮೆಂಡ್ ಮಾಡಿದ್ದರು. ಆದ್ರೆ ದೇವೇಗೌಡರು ಕೊಟ್ಟಿದ್ದು ಕೇವಲ ೪%. ನಮಗೆ ದೇವೇಗೌಡರು ಮೋಸ ಮಾಡಿದ್ದಾರೆ. 6% ಮೀಸಲಾತಿ ಕೊಟ್ಟಿದ್ದು ಕಾಂಗ್ರೆಸ್ ಪಕ್ಷ ತಿಳಿಸಿದ್ದಾರೆ.

    ಜನರ ಜೋಶ್ ನೋಡಿದ್ದೇನೆ. ನಾನು ಕೂಡ ಇದನ್ನ ನಿರೀಕ್ಷೆ ಇಟ್ಟಿರಲಿಲ್ಲ. 25ರಿಂದ 30 ಸಾವಿರ ಮತಗಳ ಅಂತರದಿಂದ ನಮ್ಮ ಅಭ್ಯರ್ಥಿ ಗೆಲ್ತಾರೆ ಅನ್ನೊ ವಿಶ್ವಾಸ ಇದೆ. ನಿಖಿಲ್ ಎನ್‌ಡಿಎ ಅಭ್ಯರ್ಥಿ, ಕುಮಾರಸ್ವಾಮಿಗೆ ಮುಸ್ಲಿಂ ವೋಟ್ ಬೇಕಿಲ್ಲ. ಅಲ್ಪಸಂಖ್ಯಾತರ ವೋಟ್ ಬೇಕಿಲ್ಲ ಅಂತಾ ಅವರು ಮಾತಾಡಿರೋ ವೀಡಿಯೋ ಇದೆ. ಯಾವ ಮುಖ ಇಟ್ಕೊಂಡು ಮುಸಲ್ಮಾನರ ವೋಟ್ ಕೇಳ್ತಾರೆ? ಯತ್ನಾಳ್ ಹೇಳ್ತಾರೆ ಮುಸಲ್ಮಾನರು, ಗಡ್ಡ ಬಿಟ್ಟವರು, ಟೋಪಿ ಹಾಕಿದವ್ರು ನಮ್ಮ ಹತ್ತಿರ ಬರೋದು ಬೇಡ ಅಂತಾ. ಅವರನ್ನ ಒಪ್ಪಿಸೋಕೆ ಹೇಳಿ ಬಿಜೆಪಿ ಅವ್ರು ಮುಸಲ್ಮಾನರ ಪರವಾಗಿದ್ದೆವು ಅಂತಾ ಒಪ್ಪಿಸಲು ಹೇಳಿ. ಆಗ ಮುಸಲ್ಮಾನರು ಅವರ ಪಕ್ಷಕ್ಕೆ ವೋಟ್ ಹಾಕಲು ಚಿಂತನೆ ಮಾಡ್ತಾರೆ ಎಂದು ಟಾಂಗ್ ಕೊಟ್ಟಿದ್ದಾರೆ.

    ಯೋಗೇಶ್ವರ್ ಈ ತಾಲೂಕಿನಲ್ಲಿ ಕೆಲಸ ಮಾಡಿದ್ದಾರೆ. ಕೆರೆ ತುಂಬಿಸಿ ಬಹಳಷ್ಟು ಅಭಿವೃದ್ಧಿ ಕೆಲಸ ಮಾಡ್ತಾ ಇದ್ರು ಅಂತಾ ಜನ ಹೇಳ್ತಾ ಇದ್ದಾರೆ. ಭಾವನಾತ್ಮಕವಾಗಿ ಮತ ಕೇಳೋದು ಅವರಿಗೆ ಮೊದಲಿನಿಂದಲೂ ಬಂದಿರುವುದು ಎಂದು ವ್ಯಂಗ್ಯವಾಡಿದ್ದಾರೆ. ಪ್ರಚಾರದ ವೇಳೆ ಸಚಿವ ಜಮೀರ್‌ಗೆ ಸಚಿವ ರಹೀಂ ಖಾನ್, ಮಾಜಿ ಸಂಸದ ಡಿ.ಕೆ.ಸುರೇಶ್, ಕಾಂಗ್ರೆಸ್ ನಾಯಕ ಮೊಹಮ್ಮದ್ ನಲಪಾಡ್ ಸಾಥ್ ನೀಡಿದ್ದಾರೆ.

  • Photo Gallery | ಹೆಚ್‌.ಡಿ.ದೇವೇಗೌಡರ ಭೇಟಿಯಾದ ಉಪರಾಷ್ಟ್ರಪತಿ – ಪುತ್ರ ಹೆಚ್‌ಡಿಕೆ ಹೆಗಲ ಮೇಲೆ ಕೈಹಾಕಿ ಫೋಟೋಗೆ ದೊಡ್ಡಗೌಡ್ರು ಪೋಸ್‌

    Photo Gallery | ಹೆಚ್‌.ಡಿ.ದೇವೇಗೌಡರ ಭೇಟಿಯಾದ ಉಪರಾಷ್ಟ್ರಪತಿ – ಪುತ್ರ ಹೆಚ್‌ಡಿಕೆ ಹೆಗಲ ಮೇಲೆ ಕೈಹಾಕಿ ಫೋಟೋಗೆ ದೊಡ್ಡಗೌಡ್ರು ಪೋಸ್‌

    ಉಪರಾಷ್ಟ್ರಪತಿ ಜಗದೀಪ್ ಧನಕರ್ ಹಾಗೂ ಅವರ ಪತ್ನಿ ಸುದೇಶ್ ಧನಕರ್ ಅವರೊಂದಿಗೆ ಶನಿವಾರ ಬೆಳಗ್ಗೆ ಮಾಜಿ ಪ್ರಧಾನ ಮಂತ್ರಿ ಹೆಚ್.ಡಿ.ದೇವೆಗೌಡ ಅವರ ನಿವಾಸಕ್ಕೆ ಭೇಟಿ ನೀಡಿದರು. ಭೇಟಿ ಸಂದರ್ಭದ ಫೋಟೋಗಳು ಇಲ್ಲಿವೆ..

    ಬೆಂಗಳೂರಿನ ಪದ್ಮನಾಭನಗರಲ್ಲಿರುವ ಹೆಚ್‌ಡಿಡಿ ನಿವಾಸಕ್ಕೆ ಭೇಟಿ ನೀಡಿದ ಉಪರಾಷ್ಟ್ರಪತಿ ಜಗದೀಪ್‌ ಧನಕರ್‌ ಅವರನ್ನು ಹೆಚ್‌.ಡಿ.ಕುಮಾರಸ್ವಾಮಿ ಹೂಗುಚ್ಛ ನೀಡಿ ಸ್ವಾಗತಿಸಿದರು.

    ಉಪರಾಷ್ಟ್ರಪತಿಗಳನ್ನು ಸ್ವಾಗತಿಸಿದ ಹೆಚ್‌.ಡಿ.ದೇವೇಗೌಡ.

    ಮಾಜಿ ಪ್ರಧಾನಿಗಳ ಆರೋಗ್ಯ‌ ವಿಚಾರಿಸಿದ ಉಪರಾಷ್ಟ್ರಪತಿ

    ಜಗದೀಪ್‌ ಧನಕರ್‌ಗೆ ಪ್ರಶಸ್ತಿ ನೀಡಿ ಗೌರವಿಸಿದ ಹೆಚ್‌.ಡಿ.ದೇವೇಗೌಡ.

    ಮಾಜಿ ಪ್ರಧಾನಿ ಕುಲೋಪರಿ ವಿಚಾರಿಸಿದರು.

  • ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರನ್ನ ಭೇಟಿಯಾದ ಉಪರಾಷ್ಟ್ರಪತಿ

    ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರನ್ನ ಭೇಟಿಯಾದ ಉಪರಾಷ್ಟ್ರಪತಿ

    – ಚನ್ನಮ್ಮ ದೇವೇಗೌಡ ಅವರ ಆರೋಗ್ಯ ವಿಚಾರಿಸಿದ ಧನಕರ್ ದಂಪತಿ; ಜೊತೆಯಲ್ಲಿಯೇ ಉಪಹಾರ ಸೇವನೆ

    ಬೆಂಗಳೂರು: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ (H.D.Deve Gowda) ಅವರನ್ನು ಪದ್ಮನಾಭನಗರದ ನಿವಾಸದಲ್ಲಿ ಉಪರಾಷ್ಟ್ರಪತಿ ಜಗದೀಪ್ ಧನಕರ್ (Jagdeep Dhankhar) ಭೇಟಿಯಾದರು.

    ಬೆಳಗ್ಗೆ 9 ಗಂಟೆಗೆ ಮಾಜಿ ಪ್ರಧಾನಿಗಳ ನಿವಾಸಕ್ಕೆ ಆಗಮಿಸಿದ ಉಪರಾಷ್ಟ್ರಪತಿ, ಒಂದು ಗಂಟೆಗೂ ಹೆಚ್ಚು ಕಾಲ ಇದ್ದು, ಚನ್ನಮ್ಮ ದೇವೇಗೌಡರ ಆರೋಗ್ಯದ ಬಗ್ಗೆ ದೇವೇಗೌಡರಲ್ಲಿ ವಿಚಾರಿಸಿದರು.

    ಚನ್ನಮ್ಮ ಅವರು ಆದಷ್ಟು ಬೇಗ ಗುಣಮಖರಾಗಲಿ. ಆ ನಂತರ ಅವರನ್ನು ತಾವು ದೆಹಲಿಗೆ ಕರೆದುಕೊಂಡು ಬನ್ನಿ ಎಂದು ಮಾಜಿ ಪ್ರಧಾನಿಗಳಿಗೆ ತಿಳಿಸಿದರು. ಇದಕ್ಕೆ ಮಾಜಿ ಪ್ರಧಾನಿಗಳು ಸಮ್ಮತಿಸಿ, ನಮ್ಮ ಮೇಲೆ ತಾವು ಇರಿಸಿರುವ ಪ್ರೀತಿ ವಿಶ್ವಾಸ, ಅಭಿಮಾನಕ್ಕೆ ನನ್ನ ಹೃದಯ ತುಂಬಿ ಬಂದಿದೆ. ತಮ್ಮ ಆಗಮನ ನಮ್ಮ ಇಡೀ ಕುಟುಂಬಕ್ಕೆ ಬಹಳ ಸಂತೋಷ ಉಂಟು ಮಾಡಿದೆ ಎಂದು ಉಪರಾಷ್ಟ್ರಪತಿಗಳಿಗೆ ಕೃತಜ್ಞತೆ ಸಲ್ಲಿಸಿದರು. ಇದನ್ನೂ ಓದಿ: ತಮ್ಮ ಕುಟುಂಬದವರನ್ನ ಅಧಿಕಾರಕ್ಕೆ ತರಲು ದೇವೇಗೌಡರ ಕುಟುಂಬ ಒಂದೊಂದು ನರಬಲಿ ಪಡೆಯುತ್ತೆ: ಶಿವರಾಮೇಗೌಡ ವಾಗ್ದಾಳಿ

    ಜಗದೀಪ್‌ ಧನಕರ್ ಹಾಗೂ ಪತ್ನಿ ಸುದೇಶ್ ಧನಕರ್ ಅವರು, ಮಾಜಿ ಪ್ರಧಾನಿಗಳು, ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರ ಜೊತೆಯಲ್ಲಿಯೇ ಉಪಾಹಾರ ಸೇವಿಸಿದರು. ಈ ಸಂದರ್ಭದಲ್ಲಿ ಅವರೆಲ್ಲರೂ ರಾಷ್ಟ್ರದ ಅಭಿವೃದ್ಧಿಯ ಬಗ್ಗೆ ಚರ್ಚೆ ನಡೆಸಿದರು. ಬಳಿಕ ಕುಟುಂಬದ ಎಲ್ಲಾ ಸದಸ್ಯರ ಕುಶಲೋಪರಿ ವಿಚಾರಿಸಿದರು. ವಿಶೇಷವಾಗಿ ಪುಟ್ಟ ಮಕ್ಕಳ ಜೊತೆ ಉಪರಾಷ್ಟ್ರಪತಿಗಳು ಕೆಲ ಕಾಲ ಕಳೆದರು.

    ಮಾಜಿ ಪ್ರಧಾನಿಗಳ ನಿವಾಸಕ್ಕೆ ಆಗಮಿಸಿದ ಉಪರಾಷ್ಟ್ರಪತಿಗಳನ್ನು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಬರಮಾಡಿಕೊಂಡರು. ಬೀಳ್ಕೊಟ್ಟ ನಂತರ ಮಾಧ್ಯಮಗಳ ಜತೆ ಮಾತನಾಡಿದ ಹೆಚ್‌ಡಿಕೆ, ಉಪರಾಷ್ಟ್ರಪತಿಗಳು ಹಾಗೂ ಮಾಜಿ ಪ್ರಧಾನಿಗಳ ನಡುವೆ ಸ್ನೇಹಪೂರ್ವಕ ಬಾಂಧವ್ಯ ಇದೆ. ಇಬ್ಬರೂ ಪರಸ್ಪರ ಗೌರವಭಾವ ಇರಿಸಿಕೊಂಡಿದ್ದಾರೆ. ಇದನ್ನು ಆನೇಕ ಸಲ ಕಣ್ಣಾರೆ ಕಂಡಿದ್ದೇನೆ ಎಂದರು.

    ಇಬ್ಬರೂ ನಾಯಕರು ರೈತ ಕುಟುಂಬದ ಹಿನ್ನೆಲೆಯಿಂದ ಬಂದವರು. ಹೀಗಾಗಿ ಅವರಿಬ್ಬರ ಚರ್ಚೆ ಬಹುತೇಕ ಕೃಷಿ ಕೇಂದ್ರಿತವಾಗಿತ್ತು. ರೈತರ ಅಭಿವೃದ್ಧಿಯ ಬಗ್ಗೆ ಅವರು ಅನೇಕ ಮಹತ್ವದ ವಿಚಾರಗಳ ಬಗ್ಗೆ ಚರ್ಚೆ ನಡೆಸಿದರು ಎಂದು ಮಾಹಿತಿ ಹಂಚಿಕೊಂಡರು. ನಂತರ ಉಪರಾಷ್ಟ್ರಪತಿ ದಂಪತಿ ಜೊತೆಗೆ ದೇವೇಗೌಡರ ಕುಟುಂಬ ಸದಸ್ಯರೆಲ್ಲರೂ ಸೇರಿ ಫೋಟೋ ತೆಗೆಸಿಕೊಂಡರು.

    ಉಪರಾಷ್ಟ್ರಪತಿಗಳು ಅನೇಕ ಸಲ ಬೆಂಗಳೂರಿಗೆ ಬಂದಾಗ ದೇವೇಗೌಡರ ನಿವಾಸಕ್ಕೆ ಭೇಟಿ ನೀಡುವ ಇಂಗಿತ ವ್ಯಕ್ತಪಡಿಸಿದ್ದರು. ಅದರಂತೆ ಇವತ್ತು ಭೇಟಿ ನೀಡಿದ್ದಾರೆ. ಇನ್ನೂ ನಮ್ಮ ತಾಯಿ ಅವರು ಆಸ್ಪತ್ರೆಯಲ್ಲೇ ಇದ್ದಾರೆ. ವಿಶೇಷವಾಗಿ ಉಪರಾಷ್ಟ್ರಪತಿಗಳು ನಮ್ಮ ತಾಯಿಯವರ ಆರೋಗ್ಯ ವಿಚಾರಿಸಿ, ಆದಷ್ಟು ಬೇಗ ಗುಣಮುಖರಾಗಬೇಕು ಎಂದು ಹಾರೈಸಿದರು. ಅವರು ತೋರಿದ ಪ್ರೀತಿ, ವಿಶ್ವಾಸ ಅಭಿಮಾನಕ್ಕೆ ನಮ್ಮ ಕುಟುಂಬ ಚಿರಋಣಿ ಆಗಿರುತ್ತದೆ ಎಂದು ಕುಮಾರಸ್ವಾಮಿ ಹೇಳಿದರು. ಇದನ್ನೂ ಓದಿ: ಮುಡಾ ಕೇಸ್‌ನಲ್ಲಿ ಸಿಎಂ ಪತ್ನಿ ವಿಚಾರಣೆ; ಈಗ ಎ1 ಸಿದ್ದರಾಮಯ್ಯ ಸರದಿ – ಸದ್ಯದಲ್ಲೇ ಸಿಎಂಗೂ ನೋಟಿಸ್ ಸಾಧ್ಯತೆ

  • ಮಾಜಿ ಪ್ರಧಾನಿ ದೇವೇಗೌಡರ ನಿವಾಸದಲ್ಲಿ ಗಣೇಶ ಹಬ್ಬದ ಸಂಭ್ರಮ

    ಮಾಜಿ ಪ್ರಧಾನಿ ದೇವೇಗೌಡರ ನಿವಾಸದಲ್ಲಿ ಗಣೇಶ ಹಬ್ಬದ ಸಂಭ್ರಮ

    ಬೆಂಗಳೂರು: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ (H D Deve Gowda) ನಿವಾಸದಲ್ಲಿ ಗಣೇಶ ಹಬ್ಬ ಆಚರಿಸಲಾಯಿತು. ಪತ್ನಿ ಚೆನ್ನಮ್ಮ ಜೊತೆ ಸೇರಿ ದೇವೇಗೌಡರು, ಗಣೇಶನಿಗೆ ವಿಶೇಷ ಪೂಜೆ ಸಲ್ಲಿಕೆ ಮಾಡಿದರು.

    ದೇವೇಗೌಡರ ಪುತ್ರ ಹಾಗೂ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ (H D Kumaraswamy) ಅವರ ನಿವಾಸದಲ್ಲೂ ಗಣೇಶ ಚತುರ್ಥಿ ಆಚರಿಸಲಾಯಿತು. ಬಿಡದಿಯ ತೋಟದ ಮನೆಯಲ್ಲಿ ಗಣೇಶ ಹಬ್ಬವನ್ನು ಹೆಚ್‌ಡಿಕೆ ಆಚರಿಸಿದರು. ಗಣೇಶನಿಗೆ ವಿಶೇಷ ಪೂಜೆ ಸಲ್ಲಿಸಿದರು. ಇದನ್ನೂ ಓದಿ: ಬೆಳಗಾವಿಯಲ್ಲಿ ಗಣೇಶೋತ್ಸವದ ದಿನ ನಡೆಯಬೇಕಿದ್ದ ಈದ್ ಮಿಲಾದ್ ಮೆರವಣಿಗೆ ಮೂಂದೂಡಿಕೆ!

    ನಾಡಿನೆಲ್ಲೆಡೆ ಗಣೇಶ ಹಬ್ಬ ಸಂಭ್ರಮದ ವಾತಾವರಣ ಇದೆ. ಸಂಭ್ರಮ ಸಡಗರದಿಂದ ಹಬ್ಬವನ್ನು ಆಚರಿಸಲಾಗುತ್ತಿದೆ. ದೇವಾಲಯಗಳು ಜನರಿಂದ ತುಂಬಿ ತುಳುಕುತ್ತಿವೆ. ಗಣೇಶನನ್ನು ವಿವಿಧ ರೀತಿಯಲ್ಲಿ ಅಲಂಕೃತಗೊಳಿಸಿ ಪೂಜಿಸಲಾಗುತ್ತಿದೆ. ಅನೇಕ ರೀತಿಯ ಸಿಹಿತಿಂಡಿಗಳನ್ನು ಮಾಡಿ ದೇವರಿಗೆ ಭಕ್ತರು ಸಮರ್ಪಿಸುತ್ತಿದ್ದಾರೆ. ವಿಶೇಷ ಪೂಜೆ ಪುನಸ್ಕಾರಗಳನ್ನು ಸಲ್ಲಿಸುತ್ತಾರೆ. ಸಂಗೀತ, ನಾಟಕ ಸೇರಿದಂತೆ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಇದನ್ನೂ ಓದಿ: ಗಣೇಶ ಹಬ್ಬದ ಪ್ರಯುಕ್ತ ಮೈಸೂರಿನಲ್ಲಿ ದಸರಾ ಆನೆಗಳಿಗೆ ವಿಶೇಷ ಪೂಜೆ

    ಹಬ್ಬದ ಹಿನ್ನೆಲೆ ಹೂ, ಹಣ್ಣುಗಳ ದರ ಏರಿಕೆಯಾಗಿದೆ. ಈ ಬಾರಿ ಅನೇಕರು ಪರಿಸರ ಪ್ರೇಮಿಗಳು ಗಣೆಶನ ಮೊರೆ ಹೋಗಿದ್ದಾರೆ. ವಿಘ್ನನಿವಾರಕನನ್ನು ಪೂಜಿಸಿದರೆ ಎಲ್ಲ ವಿಘ್ನಗಳು ದೂರ ಆಗುತ್ತದೆ ಎಂಬುದು ಎಲ್ಲರ ನಂಬಿಕೆಯಾಗಿದೆ. ಇದನ್ನೂ ಓದಿ: ರಸ್ತೆ ವಿಚಾರಕ್ಕೆ ಅಕ್ಕ-ಪಕ್ಕದ ಮನೆಯವರ ಜಗಳ; ಮನನೊಂದು ಬಾಲಕ ಆತ್ಮಹತ್ಯೆ

  • ಮಳೆಯ ನಡುವೆ ಶ್ರೀ ಶಂಕರಾಚಾರ್ಯ ಬೆಟ್ಟದ ಮೆಟ್ಟಿಲು ಹತ್ತಿ ಶಿವನ ದರ್ಶನ ಪಡೆದ ಮಾಜಿ ಪ್ರಧಾನಿ

    ಮಳೆಯ ನಡುವೆ ಶ್ರೀ ಶಂಕರಾಚಾರ್ಯ ಬೆಟ್ಟದ ಮೆಟ್ಟಿಲು ಹತ್ತಿ ಶಿವನ ದರ್ಶನ ಪಡೆದ ಮಾಜಿ ಪ್ರಧಾನಿ

    – ಇತಿಹಾಸ ಪ್ರಸಿದ್ಧ ಶ್ರೀನಗರದ ಶ್ರೀ ಜ್ಯೇಷ್ಟೇಶ್ವರ ದೇಗುಲದಲ್ಲಿ ಪೂಜೆ ಸಲ್ಲಿಸಿದ ಹೆಚ್.ಡಿ.ದೇವೇಗೌಡ
    – ಆ ಶಿವನೇ ಇಲ್ಲಿಗೆ ಕರೆಸಿಕೊಂಡಿದ್ದಾನೆ ಎಂದು ಭಾವುಕ

    ಶ್ರೀನಗರ: ಎರಡು ದಿನಗಳಿಂದ ಕಾಶ್ಮೀರ (Jammu Kashmir) ಪ್ರವಾಸದಲ್ಲಿರುವ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ (H.D.Deve Gowda) ಅವರು, ಶುಕ್ರವಾರ ಇಲ್ಲಿನ ಶ್ರೀ ಶಂಕರಾಚಾರ್ಯ ಬೆಟ್ಟದಲ್ಲಿರುವ ಶ್ರೀ ಜ್ಯೇಷ್ಟೇಶ್ವರ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದರು.

    ಶಿವನ ದೇವಸ್ಥಾನವೆಂದೇ ಕರೆಯಲ್ಪಡುವ ಈ ಪವಿತ್ರ ಶಂಕರಾಚಾರ್ಯ ದೇವಸ್ಥಾನದಲ್ಲಿ ದೇವರ ದರ್ಶನ‌ ಪಡೆದು ಪ್ರಾಥನೆ ಸಲ್ಲಿಸಿದ ಮಾಜಿ ಪ್ರಧಾನಿ, ಈ ಕ್ಷಣ ನನ್ನ ಬದುಕಿನ ಅನನ್ಯ ಕ್ಷಣ. ಶಿವ ದರ್ಶನದಿಂದ ಧನ್ಯನಾಗಿದ್ದೇನೆ ಎಂದು ಭಾವುಕರಾದರು. ಇದನ್ನೂ ಓದಿ: ವಾಧ್ವಾನ್ ಪೋರ್ಟ್ ಪ್ರಾಜೆಕ್ಟ್ ಉದ್ಘಾಟನೆ, ಗ್ಲೋಬಲ್ ಫಿನ್‌ಟೆಕ್ ಫೆಸ್ಟ್‌ನಲ್ಲಿ ಭಾಗಿಯಾದ ಪ್ರಧಾನಿ ಮೋದಿ

    ನನ್ನನ್ನು ಇಲ್ಲಿಗೆ ಆ ಶಿವನೇ ಕರೆಸಿಕೊಂಡಿದ್ದಾನೆ ಎಂದು ಹೇಳಿದ ಮಾಜಿ ಪ್ರಧಾನಿಗಳು, ಬಹಳ ಹೊತ್ತು ದೇವಾಲಯದಲ್ಲಿಯೇ ಇದ್ದರು. ಮಳೆಯ ನಡುವೆಯೇ CRPF ಪೊಲೀಸರು ಹಾಗೂ ಕಾಶ್ಮೀರ ಪೊಲೀಸರ ಸಹಾಯದಿಂದ ಮೆಟ್ಟಿಲು ಹತ್ತಿದ ಹೆಚ್‌ಡಿಡಿ, ಶಿವನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.

    ಇಲ್ಲಿಗೆ ಭೇಟಿ ನೀಡಿ ಶಿವನ‌‌ ದರ್ಶನ ಪಡೆಯಬೇಕೆಂಬುದು ನನ್ನ ಜೀವಮಾನದ ಆಸೆಯಾಗಿತ್ತು. ಇವತ್ತು ನನ್ನ ಆಸೆ ನೆರವೇರಿದೆ. ನನ್ನನ್ನು ಇಲ್ಲಿಗೆ ಕರೆಸಿಕೊಂಡ ಆ ದೇವರಿಗೆ ಆಭಾರಿಯಾಗಿದ್ದೇನೆ ಎಂದು ಅವರು ಹೇಳಿದರು. ಇದನ್ನೂ ಓದಿ: ಅಸ್ಸಾಂ ವಿಧಾನಸಭೆಯ ಶುಕ್ರವಾರದ 2 ಗಂಟೆ ಅವಧಿಯ ನಮಾಜ್ ಬ್ರೇಕ್‌ಗೆ ತಡೆಯೊಡ್ಡಿದ ಸಿಎಂ ಶರ್ಮಾ

    ದೇಗುಲಕ್ಕೆ ತೆರಳಿದ ಸಂದರ್ಭದಲ್ಲಿ ಮಾಜಿ ಪ್ರಧಾನಿಗಳಿಗೆ CRPF ಪೊಲೀಸರು ಹಾಗೂ ಕಾಶ್ಮೀರ ಪೊಲೀಸರು ಭದ್ರತೆ ಒದಗಿಸಿದ್ದರು. ಗುರುವಾರ ಉರಿಯ ಜಲವಿದ್ಯುತ್ ಸ್ಥಾವರಕ್ಕೆ ಭೇಟಿ ನೀಡಿದ್ದ ದೇವೇಗೌಡರು, ಅಲ್ಲಿಗೆ ತೆರಳಲು ಶ್ರೀನಗರದಿಂದ ಬಾರಮುಲ್ಲಾವರೆಗೂ ರೈಲಿನಲ್ಲಿ ಪ್ರಯಾಣ ಮಾಡಿದ್ದರು.

    ಮಾಜಿ ಪ್ರಧಾನಿಗಳು ಇಲ್ಲಿನ ದಾಲ್ ಸರೋವರಕ್ಕೂ ಭೇಟಿ ನೀಡುವ ಕಾರ್ಯಕ್ರಮವಿತ್ತು. ಆದರೆ, ಮಳೆಯ ಕಾರಣ ಅಲ್ಲಿಗೆ ಭೇಟಿ ನೀಡಲಾಗಲಿಲ್ಲ. ಮುಂದಿನ ಮಾರ್ಚ್ ತಿಂಗಳಿನಲ್ಲಿ ಮತ್ತೆ ಇಲ್ಲಿಗೆ ಬರುವೆ ಎಂದು ತಿಳಿಸಿದರು. ಇದನ್ನೂ ಓದಿ: ಛತ್ರಪತಿ ಶಿವಾಜಿ ಪ್ರತಿಮೆ ಕುಸಿತ – ಕ್ಷಮೆಯಾಚಿಸಿದ ಪ್ರಧಾನಿ ಮೋದಿ

  • ಭಾರತದ ಕೊನೆಯ ಭಾಗಕ್ಕೆ ಭೇಟಿ ನೀಡಿದ ಮಾಜಿ ಪ್ರಧಾನಿ ಹೆಚ್‌.ಡಿ.ದೇವೇಗೌಡ

    ಭಾರತದ ಕೊನೆಯ ಭಾಗಕ್ಕೆ ಭೇಟಿ ನೀಡಿದ ಮಾಜಿ ಪ್ರಧಾನಿ ಹೆಚ್‌.ಡಿ.ದೇವೇಗೌಡ

    – ದಾಲ್ ಸರೋವರ, ಶ್ರೀ ಶಂಕರಾಚಾರ್ಯ ದೇಗುಲಕ್ಕೆ ಭೇಟಿ

    ಶ್ರೀನಗರ: ತಾವು ಪ್ರಧಾನಿಗಳಾದ 28 ವರ್ಷಗಳ ನಂತರ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು (H.D.Deve Gowda) ಕಣಿವೆ ರಾಜ್ಯ ಕಾಶ್ಮೀರಕ್ಕೆ ಭೇಟಿ ನೀಡಿ ದೇಶದ ಕೊನೆಯ ಭಾಗದಲ್ಲಿರುವ ಉರಿ ಜಲವಿದ್ಯುತ್ ಘಟಕವನ್ನು ಖುದ್ದು ವೀಕ್ಷಿಸಿದರು.

    ಬುಧವಾರವೇ ಶ್ರೀನಗರಕ್ಕೆ ಆಗಮಿಸಿದ್ದ ಮಾಜಿ ಪ್ರಧಾನಿಗಳು, 28 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಕಣಿವೆ ರಾಜ್ಯಕ್ಕೆ ಭೇಟಿ ನೀಡಿದ್ದಾರೆ. ಗುರುವಾರ ಬೆಳಗ್ಗೆಯೇ ಶ್ರೀನಗರದಿಂದ ಬಾರಮುಲ್ಲಾಕ್ಕೆ ರೈಲಿನಲ್ಲಿ ಪ್ರಯಾಣ ಮಾಡಿ, ತಾವು ಪ್ರಧಾನಿಗಳಾಗಿದ್ದ ಸಂದರ್ಭದಲ್ಲಿ ಈ ರೈಲ್ವೆ ಮಾರ್ಗಕ್ಕೆ ಮಂಜೂರಾತಿ ನೀಡಿದ್ದನ್ನು ನೆನಪು ಮಾಡಿಕೊಂಡರು. ಇದನ್ನೂ ಓದಿ: ರೇಪ್ ಹೇಗಾಗುತ್ತೆ ಎಂದು ಕಂಗನಾಗೆ ಕೇಳಿ, ಆಕೆಗೆ ರೇಪ್ ಅನುಭವ ಇದೆ: ಪಂಜಾಬ್ ಮಾಜಿ ಸಂಸದನ ವಿವಾದಿತ ಹೇಳಿಕೆ

    ಬಾರಾಮುಲ್ಲಾದಿಂದ ಉರಿಗೆ ತೆರಳಿದ ಅವರು, ಅಲ್ಲಿನ ರಾಷ್ಟ್ರೀಯ ಜಲವಿದ್ಯುತ್ ಉತ್ಪಾದನಾ ಘಟಕ (National Hydroelectric Power Corporation Private Limited- NHPC) ಕ್ಕೆ ಭೇಟಿ ಕೊಟ್ಟರು. 480 ಮೆಗಾವ್ಯಾಟ್ ಸಾಮರ್ಥ್ಯದ ಈ ವಿದ್ಯುತ್ ಘಟಕವೂ ದೇವೇಗೌಡರು ಪ್ರಧಾನಿಯಾಗಿದ್ದಾಗಲೇ ಉದ್ಘಾಟನೆ ಆಗಿತ್ತು. ಈ ವಿದ್ಯುತ್ ಉತ್ಪಾದನಾ ಘಟಕವೂ ಉರಿಯ ಝಿಲಂ ನದಿ ದಂಡೆಯಲ್ಲಿ, ಭಾರತ – ಪಾಕಿಸ್ತಾನದ ನಡುವಿನ ನಿಯಂತ್ರಣ ರೇಖೆಗೆ (LOC) ಅತಿ ಸಮೀಪದಲ್ಲಿದೆ.

    ವಿದ್ಯುತ್ ಸ್ಥಾವರದ ಉದ್ದಗಲಕ್ಕೂ ತೆರಳಿದ ಮಾಜಿ ಪ್ರಧಾನಿಗಳು, ತಾವು ಘಟಕಕ್ಕೆ ಭೇಟಿ ನೀಡಿದ್ದ ಸಂದರ್ಭವನ್ನು ಸ್ಮರಣೆ ಮಾಡಿಕೊಂಡರಲ್ಲದೆ, ಅಲ್ಲಿನ ಸಿಬ್ಬಂದಿ, ಅಧಿಕಾರಿಗಳ ಜತೆ ಅಂದಿನ ಸಂದರ್ಭವನ್ನು ಸೇನೆಯ ಎಚ್ಚರಿಕೆಯನ್ನು ಲೆಕ್ಕಿಸದೆ ಘಟಕದ ಸುರಂಗಕ್ಕೆ ಭೇಟಿ ಕೊಟ್ಟಿದ್ದನ್ನು ನೆನಪು ಮಾಡಿಕೊಂಡರು. ಇದನ್ನೂ ಓದಿ: ಬಿಜೆಪಿಯವರ ಷಡ್ಯಂತ್ರದ ವಿರುದ್ಧ ನನಗೆ ಜಯ ಸಿಕ್ಕಿದೆ: ಡಿಕೆಶಿ

    ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಪ್ರಧಾನಿಗಳು, ನಾನು ಪ್ರಧಾನಿ ಸ್ಥಾನದಿಂದ ಕೆಳಗಿಳಿದ 28 ವರ್ಷಗಳ ನಂತರ ನಾನು ಕಾಶ್ಮೀರಕ್ಕೆ ಭೇಟಿ ನೀಡಿದ್ದೇನೆ. ಅಂದಿನ ಕಾಶ್ಮೀರಕ್ಕೂ ಇಂದಿನ ಕಾಶ್ಮೀರಕ್ಕೂ ಬಹಳಷ್ಟು ವ್ಯತ್ಯಾಸ ಕಾಣುತ್ತಿದೆ. ನಾನು ಪ್ರಧಾನಿ ಆಗಿದ್ದಾಗ 13 ಫೆಬ್ರವರಿ 1997ರಂದು ಈ ಘಟಕವನ್ನು ದೇಶಕ್ಕೆ ಸಮರ್ಪಣೆ ಮಾಡಿದ್ದೆ. ನಿರ್ಮಾಣ ಹಂತದಲ್ಲಿದ್ದ ಈ ಘಟಕಕ್ಕೆ ಎರಡು ಬಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೆ. ಆ ಭೇಟಿಗಳು ನನ್ನ ಪಾಲಿಗೆ ರೋಚಕ ಅನುಭವ ಎಂದು ಹೇಳಬಹುದು. ಈ ವಿದ್ಯುತ್ ಘಟಕಕ್ಕೆ ಭೇಟಿ ನೀಡಿದ್ದು ಬಹಳ ಸಂತೋಷ ಉಂಟು ಮಾಡಿದೆ ಎಂದು ಹೇಳಿದರು.

    ಇದೇ ವೇಳೆ ಮಾಜಿ ಪ್ರಧಾನಿಗಳು ಈ ವಿದ್ಯುತ್ ಘಟಕದ ಉದ್ಘಾಟನಾ ಫಲಕದ ಮುಂದೆ ನಿಂತು ಬಹಳ ಸಂತೋಷದಿಂದ ಫೋಟೋ ತೆಗೆಸಿಕೊಂಡರು. ಅಂದಿನ ಕಾರ್ಯಕ್ರಮದ ಕ್ಷಣಗಳನ್ನು ಅಧಿಕಾರಿಗಳ ಜತೆ ಹಂಚಿಕೊಂಡರು. ಅಲ್ಲಿನ ಪ್ರಕೃತಿ ಸೌಂದರ್ಯಕ್ಕೆ ಮನಸೋತರು.

    ರೈಲು ಪ್ರಯಾಣದ ಬಗ್ಗೆ ಸಂತಸ:
    ಶ್ರೀನಗರ – ಬಾರಮುಲ್ಲಾ ನಡುವಿನ ರೈಲು ಪ್ರಯಾಣದ ಬಗ್ಗೆಯೂ ಸಂತಸ ವ್ಯಕ್ತಪಡಿಸಿದ ಮಾಜಿ ಪ್ರಧಾನಿಗಳು, ತಾವು ಪ್ರಧಾನಿಯಾಗಿದ್ದಾಗ ಕಣಿವೆ ರಾಜ್ಯಕ್ಕೆ ಭೇಟಿ ನೀಡಿದ ವೇಳೆ ಈ ರೈಲ್ವೆ ಮಾರ್ಗಕ್ಕೆ ಮಂಜೂರಾತಿ ನೀಡಿದ ಸಂದರ್ಭವನ್ನು ಮೆಲುಕು ಹಾಕಿದರು. ಇದನ್ನೂ ಓದಿ: Kolkata Horror | ಕಿರಿಯ ವೈದ್ಯರಿಗೆ ನಾನು ಎಂದಿಗೂ ಬೆದರಿಕೆ ಹಾಕಿಲ್ಲ: ಮಮತಾ ಬ್ಯಾನರ್ಜಿ

    1996, 1997ರ ಸಂದರ್ಭದಲ್ಲಿ ಕಾಶ್ಮೀರದ ಜನರು ಸಂಪರ್ಕ ಜಾಲದಿಂದ ವಂಚಿತರಾಗಿದ್ದರು. ಭಯೋತ್ಪಾದಕ ಚಟುವಟಿಕೆಗಳಿಂದ ಜರ್ಜರಿತರಾಗಿದ್ದರು. ಆ ಸಂದರ್ಭದಲ್ಲಿ ಬಾರಾಮುಲ್ಲಾ ಮತ್ತು ಶ್ರೀನಗರ ನಡುವೆ ರೈಲ್ವೆ ಮಾರ್ಗ ನಿರ್ಮಿಸುವ ಯೋಜನೆಗೆ ನಾನು ಮಂಜೂರಾತಿ ಕೊಟ್ಟೆ. ಇದನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಣೆ ಮಾಡಿದ್ದೆ. ಇವತ್ತು ಅದೇ ರೈಲು ಮಾರ್ಗದ ರೈಲಿನಲ್ಲಿ ಪ್ರಯಾಣ ಮಾಡಿದ್ದು ನನಗೆ ಮರೆಯಲಾಗದ ಅವಿಸ್ಮರಣೀಯ ಕ್ಷಣ ಎಂದು ಭಾವುಕರಾದರು.

    ಈ ಸಂದರ್ಭದಲ್ಲಿ ಮಾಜಿ ಪ್ರಧಾನಿಗಳನ್ನು ರೈಲ್ವೆ ಅಧಿಕಾರಿಗಳು ಆತ್ಮೀಯವಾಗಿ ಬರ ಮಾಡಿಕೊಂಡರು. ಈ ಸಂದರ್ಭದಲ್ಲಿ ರೈಲ್ವೆ ಮಾರ್ಗದ ಬಗ್ಗೆ, ಜತೆಗೆ ಆಗುತ್ತಿರುವ ಉಪಯೋಗದ ಬಗ್ಗೆ ಮಾಜಿ ಪ್ರಧಾನಿಗಳು ಮಾಹಿತಿ ಪಡೆದುಕೊಂಡರು. ಬೆಳಗ್ಗೆ 11:30ಕ್ಕೆ ಶ್ರೀನಗರದಲ್ಲಿ ರೈಲು ಹಿಡಿದ ಮಾಜಿ ಪ್ರಧಾನಿಗಳು, 12:30 ಗಂಟೆಗೆ ಬಾರಮುಲ್ಲಾ ತಲುಪಿದರು.

    ತಾವು ಪ್ರಧಾನಿಯಾಗಿದ್ದಾಗ ಕಾಶ್ಮೀರದ ರೈತರಿಗಾಗಿ ಒಟ್ಟು 200 ಕೋಟಿ ರೂ. ಸಾಲ ಮನ್ನಾ ಮಾಡಿದೆ. ಕಣಿವೆ ರಾಜ್ಯದ ಪ್ರತಿ ರೈತರ 50,000 ರೂ. ಸಾಲ ಮನ್ನಾ ಮಾಡಲಾಯಿತು. ಅಂದು ಪ್ರಧಾನಿಯಾಗಿ ರೈತರನ್ನು ಭೇಟಿಯಾಗಿ ಅವರ ಸಂಕಷ್ಟವನ್ನು ಆಲಿಸಿದ್ದೆ. ಅವರಿಗೆ ನೆರವಾಗುವ ಉದ್ದೇಶದಿಂದ ಸಾಲ ಮನ್ನಾ ಮಾಡಲಾಯಿತು ಎಂದು ಮಾಜಿ ಪ್ರಧಾನಿಗಳು ಸುದ್ದಿಗಾರರ ಜತೆ ಮಾತಾಡುತ್ತಾ ಹೇಳಿದರು. ಇಂದು ಮಾಜಿ ಪ್ರಧಾನಿಗಳು ಶ್ರೀನಗರದ ದಾಲ್ ಸರೋವರ ಹಾಗೂ ಶ್ರೀ ಶಂಕರಾಚಾರ್ಯ ದೇಗುಲಕ್ಕೆ ಭೇಟಿ ನೀಡಲಿದ್ದಾರೆ.

  • ದೇವೇಗೌಡರಿಗೆ ಅಪಮಾನ ಆಗಿರೋ ಬಗ್ಗೆ ಸ್ವಾಮೀಜಿ ಯಾಕೆ ಮಾತಾಡಲಿಲ್ಲ?: ಹೆಚ್.ಡಿ ರೇವಣ್ಣ

    ದೇವೇಗೌಡರಿಗೆ ಅಪಮಾನ ಆಗಿರೋ ಬಗ್ಗೆ ಸ್ವಾಮೀಜಿ ಯಾಕೆ ಮಾತಾಡಲಿಲ್ಲ?: ಹೆಚ್.ಡಿ ರೇವಣ್ಣ

    ಬೆಂಗಳೂರು: ಡಿ.ಕೆ ಶಿವಕುಮಾರ್ (D.K Shivakumar) ಸಿಎಂ ಆಗಲಿ ಎಂದು ಹೇಳಿದ ಚಂದ್ರಶೇಖರನಾಥ ಸ್ವಾಮೀಜಿ (Chandrashekaranatha Swamiji), ದೇವೇಗೌಡರಿಗೆ (H.D Deve Gowda) ಅಪಮಾನ ಆಗಿರುವ ಬಗ್ಗೆ ಯಾಕೆ ಮಾತಾಡಲಿಲ್ಲ? ಎಂದು ಮಾಜಿ ಸಚಿವ ಹೆಚ್.ಡಿ ರೇವಣ್ಣ (H.D Revanna) ಅಸಮಾಧಾನ ಹೊರ ಹಾಕಿದ್ದಾರೆ.

    ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅವರು ಡಿ.ಕೆ ಶಿವಕುಮಾರ್ ಅವರಿಗೆ ಸಿಎಂ ಸ್ಥಾನ ಬಿಟ್ಟುಕೊಡಬೇಕು ಎಂಬ ಸ್ವಾಮೀಜಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು. ಈ ವೇಳೆ, ಸ್ವಾಮೀಜಿ ಹಿಂದೆ ಯಾವ ರೀತಿ ಇದ್ದರು ಎಂಬುದನ್ನ ಮೊದಲು ಅವರು ಹೇಳಲಿ. ದೇವೇಗೌಡರ ಬಗ್ಗೆ ಒಂದು ತಿಂಗಳಿಂದ ಏನೇನು ನಡೆದಿದೆ? ಕೃತಜ್ಞತೆಗಾದರೂ ಸ್ವಾಮೀಜಿ ಮಾತಾಡಬಹುದಿತ್ತು. ನಮ್ಮ ನಾಯಕರು, ನಮ್ಮ ಸಮಾಜದ ಮುಖಂಡರು ವಿರುದ್ಧ ಕೆಲವರು ಯಾವ ರೀತಿ ನಡೆಸುತ್ತಿದ್ದಾರೆ ಎಂದು ನೋಡಿದ್ದೀರಾ ಎಂದು ಅವರು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಬೆವರು ಸುರಿಸದೇ ಜೀವನ ಮಾಡುವವರು ಸ್ವಾಮೀಜಿಗಳು: ರಾಜಣ್ಣ ಕಿಡಿ

    ಸಿಎಂ ಯಾರನ್ನು ಮಾಡಿಕೊಂಡರೆ ನಮಗೇನು? ಆ ವಿಚಾರ ಕಾಂಗ್ರೆಸ್ ಪಕ್ಷಕ್ಕೆ ಅದು ಸಂಬಂಧಪಟ್ಟಿದ್ದು. ನಮಗೇನು ಸಂಬಂಧವಿಲ್ಲ. ಚಂದ್ರಶೇಖರನಾಥ ಸ್ವಾಮೀಜಿ ಒಂದು ತಿಂಗಳಿಂದ ನಡೆಯುತ್ತಿರುವ ಘಟನೆಗಳ ಬಗ್ಗೆ ಸೌಜನ್ಯಕ್ಕಾದರೂ ಮಾತಾಡಬಹುದಿತ್ತು ಎಂದು ಅವರು ಕಿಡಿಕಾರಿದ್ದಾರೆ.

    ಮಠಕ್ಕೆ ದೇವೇಗೌಡರು ಎಷ್ಟು ಸಹಾಯ ಮಾಡಿದ್ದಾರೆ ಎಂಬುದು ನನಗೆ ಗೊತ್ತಿದೆ. ನನ್ನ ಬಗ್ಗೆ ಮಾತಾಡೋದು ಬೇಡ. ದೇವೇಗೌಡರ ಬಗ್ಗೆ ಒಂದು ತಿಂಗಳಿಂದ ಮಾಧ್ಯಮಗಳಲ್ಲಿ ಏನೇನು ಬಂತು. ಕೆಂಪೇಗೌಡರ ಕಾರ್ಯಕ್ರಮ ಅದು. ದೊಡ್ಡವರು ಮಠಕ್ಕೆ ಏನು ಮಾಡಿದ್ದರು ಎಂದು ಹೇಳಬಹುದಿತ್ತು. ಸ್ವಾಮೀಜಿ ನಮ್ಮ ಪರ ಮಾತಾಡಿ ಎಂದು ನಾನು ಹೇಳಿಲ್ಲ. ಒಂದು ಸಮಾಜದ ಮುಖಂಡರನ್ನ ಈ ರೀತಿ ಅವಹೇಳನಕಾರಿಯಾಗಿ ಒಂದು ತಿಂಗಳಿಂದ ನಡೆಸಿಕೊಂಡಿದ್ರು. ಅದನ್ನು ಖಂಡಿಸಬೇಕಾಗಿತ್ತು ಎಂದು ಸ್ವಾಮೀಜಿ ವಿರುದ್ಧ ಅವರು ಆಕ್ರೋಶ ಹೊರ ಹಾಕಿದ್ದಾರೆ. ಇದನ್ನೂ ಓದಿ: ನನ್ನ ಮಗ ತಪ್ಪುಮಾಡಿದ್ರೆ ಕ್ರಮ ಆಗಲಿ: ಹೆಚ್.ಡಿ.ರೇವಣ್ಣ

  • ಒಂದು ಕುಟುಂಬ ತಮ್ಮ ಶತ್ರುಗಳನ್ನ ನಾಶ ಮಾಡೋಕೆ ತಂತ್ರ, ಕುತಂತ್ರ, ಮಂತ್ರ ಮಾಡಿಕೊಂಡು ಬರ್ತಿದೆ: ಡಿಕೆ ಸುರೇಶ್

    ಒಂದು ಕುಟುಂಬ ತಮ್ಮ ಶತ್ರುಗಳನ್ನ ನಾಶ ಮಾಡೋಕೆ ತಂತ್ರ, ಕುತಂತ್ರ, ಮಂತ್ರ ಮಾಡಿಕೊಂಡು ಬರ್ತಿದೆ: ಡಿಕೆ ಸುರೇಶ್

    ಬೆಂಗಳೂರು: ತಮ್ಮ ರಾಜಕೀಯ ವಿರೋಧಿಗಳು ಬೆಳೆಯಬಾರದು ಅಂತಾ ಒಂದು ಕುಟುಂಬ ಮಂತ್ರ, ತಂತ್ರ ಎಲ್ಲಾ ಮಾಡಿಕೊಂಡು ಬರ್ತಿದೆ ಎಂದು ಪರೋಕ್ಷವಾಗಿ ದೇವೇಗೌಡರ (H.D.Deve Gowda) ಕುಟುಂಬದ ವಿರುದ್ದ ಸಂಸದ ಡಿ.ಕೆ.ಸುರೇಶ್ (D.K.Suresh) ಆರೋಪಿಸಿದರು‌.

    ನನ್ನ ಮತ್ತು ಸಿಎಂ ವಿರುದ್ಧ ಶತ್ರು ಭೈರವಿ ಯಾಗ ಮಾಡ್ತಿದ್ದಾರೆ ಎಂಬ ಡಿಸಿಎಂ ಡಿ.ಕೆ.ಶಿವಕುಮಾರ್ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಮೊದಲಿಂದಲೂ ರಾಜಕೀಯ ಕುಟುಂಬ, ಒಂದು ಪಕ್ಷ ಇಂತಹದ್ದಕ್ಕೆ ಹೆಸರುವಾಸಿ. ಯಾರು ಅಂತಾ ನನಗೆ ಗೊತ್ತಿಲ್ಲ. ಒಂದು ಕುಟುಂಬ ಯಾವಾಗಲೂ ಇಂತಹ ಮಂತ್ರ, ತಂತ್ರ, ಕುತಂತ್ರ ಮಾಡಿಕೊಂಡು ಬಂದಿದೆ. ಅದನ್ನ ಮುಂದುವರೆಸಿಕೊಂಡು ಬಂದಿರಬಹುದು ಎಂದು ಪರೋಕ್ಷವಾಗಿ ದೇವೇಗೌಡರ ಕುಟುಂಬದ ವಿರುದ್ಧ ಆರೋಪ ಮಾಡಿದರು. ಇದನ್ನೂ ಓದಿ: ಸರ್ಕಾರ ನಾಶ ಮಾಡೋದಕ್ಕೆ ನನ್ನ, ಸಿಎಂ ಮೇಲೆ ಶತ್ರು ಭೈರವಿ ಯಾಗ ಮಾಡಿಸ್ತಿದ್ದಾರೆ: ಡಿಕೆಶಿ ಬಾಂಬ್

    ಕೆಲವರಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಬಿಟ್ಟರೆ ಬೇರೆ ಅವರಿಗೆ ಯಾರು ಇಲ್ಲ. ಡಿಸಿಎಂ ಹೆಸರು ಹೇಳಿದ್ರೆ ಪಕ್ಷ ಸಂಘಟನೆ ಮಾಡಬಹುದು. ಕಾರ್ಯಕರ್ತರನ್ನ ಎತ್ತಿಕಟ್ಟಲು ಡಿ.ಕೆ.ಶಿವಕುಮಾರ್ ಹೆಸರು ಬಳಸ್ತಾರೆ. ನಾನು ಇದರ ಬಗ್ಗೆ ಜಾಸ್ತಿ ಮಾತಾಡೊಲ್ಲ. ದೇಶದ ಬೆಳವಣಿಗೆ ಜನ ಗಮನಿಸುತ್ತಿದ್ದಾರೆ. ಕರ್ನಾಟಕದ ಪೆನ್‌ಡ್ರೈವ್ ಪ್ರಕರಣ ವಿಶ್ವದ ಗಮನ ಸೆಳೆದಿದೆ. ಅದನ್ನ ಸಮರ್ಥನೆ ಮಾಡಿ ರಾಜಕಾರಣ ಮಾಡ್ತಿದ್ದಾರೆ. ಯಾವ ಮಟ್ಟದ ವ್ಯವಸ್ಥೆ ರೂಪಿಸಲು ಆ ಪಕ್ಷ ಹೋಗಿದೆ ಅಂದರೆ ಅರ್ಥ ಮಾಡಿಕೊಳ್ಳಿ ಎಂದು ಪರೋಕ್ಷವಾಗಿ ದೇವೇಗೌಡ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದರು.

    ಬೇರೆಯವರು ಯಾರೂ ಚೆನ್ನಾಗಿ ಇರಬಾರದು ಅಂತಾ ಆ ಕುಟುಂಬ ಮಾಡಿಕೊಂಡು ಬಂದಿದೆ. ಆ ಕುಟುಂಬ ಅವತ್ತಿಂದ ಅದನ್ನೇ ಮಾಡಿಕೊಂಡು ಬಂದಿದೆ. ಅದರಿಂದ ಫಲ ಸಿಗುತ್ತಾ ನನಗೆ ಗೊತ್ತಿಲ್ಲ. ಅವರು ಯಾಕೆ ಹೀಗೆ ಮಾಡ್ತಾರೆ ಗೊತ್ತಿಲ್ಲ. ಕುಮಾರಸ್ವಾಮಿ, ರೇವಣ್ಣ, ದೇವೇಗೌಡ ಏನ್ ಮಾಡ್ತಾರೋ ಗೊತ್ತಿಲ್ಲ. ಅವರು ಎಲ್ಲಿ ಏನ್ ಮಾಡ್ತಾರೋ ಗೊತ್ತಿಲ್ಲ ಎಂದು ಪ್ರತಿಕ್ರಿಯಿಸಿದರು. ಇದನ್ನೂ ಓದಿ: ಶತ್ರು ಮರ್ಧನಕ್ಕೆ ಶತ್ರು ಭೈರವಿ ಯಾಗ – ಏನಿದು ಯಾಗ? ಹೇಗೆ ಮಾಡಲಾಗುತ್ತದೆ?

  • ನಿಮ್ಮ ಮಗ ವಿದೇಶಕ್ಕೆ ಹೋಗುವಾಗ ನಿಮ್ಮ ಅನುಮತಿ ಪಡೆದಿದ್ದರೇ – ಸಿಎಂಗೆ ಹೆಚ್‍ಡಿಕೆ ಪ್ರಶ್ನೆ

    ನಿಮ್ಮ ಮಗ ವಿದೇಶಕ್ಕೆ ಹೋಗುವಾಗ ನಿಮ್ಮ ಅನುಮತಿ ಪಡೆದಿದ್ದರೇ – ಸಿಎಂಗೆ ಹೆಚ್‍ಡಿಕೆ ಪ್ರಶ್ನೆ

    ಬೆಂಗಳೂರು: ಪ್ರಜ್ವಲ್ ವಿದೇಶಕ್ಕೆ ಹೋಗುವುದಕ್ಕೆ ದೇವೇಗೌಡರೇ (H.D Deve Gowda) ಬಿಟ್ಟು ಈಗ ಪತ್ರ ಬರೆದರೆ ಏನು ಪ್ರಯೋಜನ ಎಂಬ ಸಿಎಂ ಸಿದ್ದರಾಮಯ್ಯ (CM Siddaramaiah) ವಿರುದ್ದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ (H.D Kumaraswamy) ವಾಗ್ದಾಳಿ ನಡೆಸಿದ್ದಾರೆ.

    ಬೆಂಗಳೂರಿನಲ್ಲಿ ಮಾತನಾಡಿದ ಅವರು, ಈ ಸರ್ಕಾರಕ್ಕೆ ಈ ಪ್ರಕರಣವನ್ನು ಜೀವಂತವಾಗಿ ಇಡಬೇಕು ಅನ್ನೋದು ಹೊರತುಪಡಿಸಿ ಇದರಲ್ಲಿ ಇರುವ ಸತ್ಯಾಂಶ, ವಾಸ್ತವಾಂಶ ಹೊರಗೆ ತರಬೇಕು ಎನ್ನುವುದು ಸಿಎಂ ಸೇರಿದಂತೆ ಯಾರಿಗೂ ಇಲ್ಲ. ದೇವೇಗೌಡರ ಬಗ್ಗೆ ಸಿಎಂ ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ನಾನು ಒಂದು ಪ್ರಶ್ನೆ ಮಾಡಿದ್ದೇನೆ. ನಿಮ್ಮ ಮಗ ವಿದೇಶಕ್ಕೆ ಹೋಗಿದ್ದಾಗ ದುರ್ಘಟನೆ ನಡೀತು. ಅವರು ಯಾವ ಕಾರ್ಯಕ್ರಮಕ್ಕೆ ಹೋಗಿದ್ರು? ಅವತ್ತು ನಿಮ್ಮ ಮಗ ವಿದೇಶಕ್ಕೆ ಹೋಗುವಾಗ ನಿಮ್ಮ ಅನುಮತಿ ತೆಗೆದುಕೊಂಡು ಹೋಗಿದ್ರಾ? ಇವರ ಮಗನ ಜೊತೆ ಯಾರ್ ಯಾರು ಹೋಗಿದ್ರು ಎಷ್ಟು ಜನ ಹೋಗಿದ್ರು? ಅಲ್ಲಿ ನಡೆದ ಘಟನೆ ಏನು ಎಂದು ಯಾಕೆ ತನಿಖೆ ಮಾಡಲಿಲ್ಲ? ತನಿಖೆ ಮಾಡದೇ ಆ ವಿಷಯ ಯಾಕೆ ಮುಚ್ಚಿಟ್ರಿ? ವಿದೇಶಕ್ಕೆ ಅವತ್ತು ನಿಮ್ಮ ಮಗನನ್ನ ನೀವೇ ಅನುಮತಿ ಕೊಟ್ಟು ಕಳಿಸಿದ್ರಾ ಎಂದು ಅವರು ಪ್ರಶ್ನೆ ಮಾಡಿದ್ದಾರೆ.

    ಬೆಳೆದ ಮಕ್ಕಳು ಪ್ರತಿ ಕುಟುಂಬದಲ್ಲಿ ಅವರ ತಂದೆ-ತಾಯಿ ಕೇಳಿ ಎಲ್ಲಾ ಮಾಡ್ತಾರಾ? ಇವತ್ತು ಬೆಳಗ್ಗೆ ಪೇಪರ್ ತೆಗೆದ್ರೆ ಬರಿ ಕೊಲೆ, ಅತ್ಯಾಚಾರ, ಇಂತಹ ಕೆಟ್ಟ ವಿಷಯವೇ ಇರುತ್ತದೆ. ಈ ಪ್ರಕರಣವನ್ನು (Prajwal Revanna Case) ದೊಡ್ಡದು ಮಾಡಿ ನಮ್ಮ ಕುಟುಂಬದ ರಾಜಕೀಯವನ್ನ ಸಂಪೂರ್ಣವಾಗಿ ಮುಗಿಸುವ ಹುನ್ನಾರ ಮಾಡ್ತಿದ್ದೀರಾ? ಅದು ಹೊರತುಪಡಿಸಿ ಏನು ಮಾಡ್ತಿಲ್ಲ. ಪೆನ್‍ಡ್ರೈವ್ ಸೂತ್ರಧಾರಿ, ಮಾರುಕಟ್ಟೆಗೆ ಬಿಟ್ಟವರನ್ನು ಯಾರನ್ನಾದರೂ ಅರೆಸ್ಟ್ ಮಾಡಿದ್ದೀರಾ? ಪ್ರಕರಣದಲ್ಲಿ ಯಾರೇ ಇದ್ದರು ಶಿಕ್ಷೆ ಆಗಬೇಕು ಎಂದು ಮೊದಲ ದಿನದಿಂದ ಹೇಳಿದ್ದೇನೆ. ಒಬ್ಬ ರಾಜ್ಯದ ಮುಖ್ಯಮಂತ್ರಿ ಹೇಳ್ತಾರೆ ಪೆನ್‍ಡ್ರೈವ್ ಹಂಚಿಕೆ ಮಾಡಿರೋದು ಅಪರಾಧ ಅಲ್ಲ. ಅದಕ್ಕಿಂತ ದೊಡ್ಡ ಅಪರಾಧ ವಿಡಿಯೋ ಅಂತಾರೆ. ಆ ಹೆಣ್ಣು ಮಕ್ಕಳ ಚಿತ್ರವನ್ನು ಮಸುಕು ಮಾಡದೇ ಬೀದಿಗೆ ಬಿಟ್ಟಿದ್ದಾರೆ. ಅವರಿಗೆ ಏನ್ ನ್ಯಾಯ ಕೊಡ್ತೀರಾ? ಯಾವ ರೀತಿ ಆ ಹೆಣ್ಣು ಮಕ್ಕಳಿಗೆ ಸಾಂತ್ವನ ಹೇಳ್ತೀರಾ? ಸರ್ಕಾರದಿಂದ ಏನ್ ಕೊಡೋಕೆ ಸಾಧ್ಯ. ಕುಟುಂಬದಲ್ಲಿ ಹೋಗಿರೋ ವಿಶ್ವಾಸದ ಕೊರತೆ, ಕುಟುಂಬದಲ್ಲಿ ಆಗಿರೋ ಅನಾಹುತ ಇದೆಲ್ಲ ನೀವು ಹೇಗೆ ಸರಿ ಮಾಡ್ತೀರಾ ಎಂದು ಅವರು ಪ್ರಶ್ನಿಸಿದ್ದಾರೆ.

    ನಾಲ್ಕು ಗೋಡೆ ಮಧ್ಯೆ ನಡೆದಿರೋದು ಬೇರೆ. ಅದನ್ನ ಬೀದಿಗೆ ತಂದವರು ನೀವು. ಆ ಘಟನೆ ನಡೆದಿರೋದಕ್ಕೆ ಏನ್ ಮಾಹಿತಿ ಸಿಕ್ಕಿತ್ತು, ತಕ್ಷಣ ಆ ಕುಟುಂಬಗಳಿಗೆ ಸಮಸ್ಯೆ ಆಗದಂತೆ, ಮಾಡಿರೋನಿಗೆ ಶಿಕ್ಷೆಗೆ ಒಳಪಡಿಸಬೇಕಿತ್ತು ಅಲ್ಲವೇ? ಅದ್ಯಾವುದೂ ಮಾಡದೇ ಮಾತೆತ್ತಿದರೆ ಬ್ರದರ್ ಸ್ವಾಮಿ ಅಂತ ಮಾತಾಡ್ತೀರಾ. ನಿಮ್ಮ ಯೋಗ್ಯತೆಗೆ ಮಾನ ಮರ್ಯಾದೆ ಇದ್ದರೆ ನೀವು ಯಾವ ರೀತಿ ನಡೆದುಕೊಂಡು ಬಂದಿದ್ದೀರಾ? ನಿಮ್ಮ ಪಕ್ಷದ ಅಧ್ಯಕ್ಷರು, ಕಾಂಗ್ರೆಸ್ ಕಾರ್ಯಕರ್ತರಿಗೆ ಹೇಳೋಕೆ ಬಯಸುತ್ತೇನೆ. ಮೊದಲು ನಿಮ್ಮ ಮನೆಯಲ್ಲಿ ಏನೇನಾಗಿದೆ ಮೊದಲು ಸರಿಪಡಿಸಿಕೊಳ್ಳಿ. ನಿಮ್ಮ ಪರಿಸ್ಥಿತಿ ಸರಿ ಮಾಡಿಕೊಳ್ಳಿ ಎಂದು ಡಿ.ಕೆ ಶಿವಕುಮಾರ್, ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

  • ಪ್ರಜ್ವಲ್‌ ಪೆನ್‌ಡ್ರೈವ್‌ ಕೇಸ್‌ ವಿಚಾರದಲ್ಲಿ ದೇವೇಗೌಡರು ಸಾಕಷ್ಟು ನೊಂದಿದ್ದಾರೆ: ನಿಖಿಲ್‌ ಕುಮಾರಸ್ವಾಮಿ

    ಪ್ರಜ್ವಲ್‌ ಪೆನ್‌ಡ್ರೈವ್‌ ಕೇಸ್‌ ವಿಚಾರದಲ್ಲಿ ದೇವೇಗೌಡರು ಸಾಕಷ್ಟು ನೊಂದಿದ್ದಾರೆ: ನಿಖಿಲ್‌ ಕುಮಾರಸ್ವಾಮಿ

    ನಾನು ಆ ವೀಡಿಯೋ ನೋಡೋ ಧೈರ್ಯ ಮಾಡಲಿಲ್ಲ
    – ತಪ್ಪು ಮಾಡಿದ್ರೆ ಕಾನೂನಿಗೆ ತಲೆ ಬಾಗಲೇಬೇಕು

    ಬೆಂಗಳೂರು: ಪ್ರಜ್ವಲ್ ರೇವಣ್ಣ (Prajwal Revanna) ಪೆನ್‌ಡ್ರೈವ್ ಕೇಸ್ ವಿಚಾರದಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಸಾಕಷ್ಟು ‌ನೊಂದಿದ್ದಾರೆ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ತಿಳಿಸಿದರು.

    ಹೆಚ್‌.ಡಿ.ದೇವೇಗೌಡರನ್ನ (H.D.Deve Gowda) ಪದ್ಮನಾಭನಗರ ನಿವಾಸದಲ್ಲಿ ಭೇಟಿಯಾಗಿ ನಿಖಿಲ್ ಆರೋಗ್ಯ ವಿಚಾರಿಸಿದರು‌. ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ದೇವೇಗೌಡ, ಕುಮಾರಸ್ವಾಮಿ ಅವರನ್ನು ಕಾಂಗ್ರೆಸ್ ಟಾರ್ಗೆಟ್ ಮಾಡ್ತಿರೋ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಈ ವಿಷಯವನ್ನು ರಾಜಕೀಯವಾಗಿ ಜನರಿಗೆ ತಪ್ಪು ಸಂದೇಶ ಕೊಡುವ ಕೆಲಸ ಆಗ್ತಿದೆ ಎಂದು ಬೇಸರ ಹೊರಹಾಕಿದರು. ಇದನ್ನೂ ಓದಿ: ಹೆಚ್.ಡಿ.ರೇವಣ್ಣ ನಿವಾಸಕ್ಕೆ ಎಸ್‍ಐಟಿ ತಂಡ – ಸಂತ್ರಸ್ತೆ ಸಮ್ಮುಖದಲ್ಲಿ ಸ್ಥಳ ಮಹಜರು

    ಕುಮಾರಸ್ವಾಮಿ, ದೇವೇಗೌಡರು ಹಲವಾರು ವರ್ಷಗಳಿಂದ ರಾಜಕೀಯದಲ್ಲಿ ಇದ್ದಾರೆ. ವಿಶೇಷವಾಗಿ ದೇವೇಗೌಡರ ವೈಯಕ್ತಿಕ ಬದುಕು ತೆರೆದ ಪುಸ್ತಕ. ಅದರಲ್ಲಿ ಮುಚ್ಚುಮರೆ ಇಲ್ಲ. ದೇವೇಗೌಡರಾಗಲಿ, ಅಜ್ಜಿ ಚೆನ್ನಮ್ಮ ಅವರಾಗಲಿ ನಮ್ಮಂತ ಯುವಕರಿಗೆ ಸ್ಫೂರ್ತಿ. ದಂಪತಿ ಯಾವ ರೀತಿ ಬಾಳಿ ಬದುಕಬೇಕು ಅನ್ನೋದಕ್ಕೆ ಅವರಿಗಿಂತ ಉದಾಹರಣೆ ಯಾರು ನನಗೆ ಕಾಣೋದಿಲ್ಲ ಎಂದರು.

    ಕೈ ಜೋಡಿಸಿ ಮನವಿ ಮಾಡ್ತೀನಿ. ದೇವೇಗೌಡರಿಗೆ 91, 92 ವರ್ಷ ಈಗ. ಸಹಜವಾಗಿ ಇಂತಹ ವಿಷಯ ಕೇಳಿದ ಮೇಲೆ ದೇವೇಗೌಡರ ಮೇಲೆ ಯಾವ ರೀತಿ ಪರಿಣಾಮ ಆಗಿರುತ್ತೆ, ಅಘಾತವಾಗಿರುತ್ತೆ ಅಂತ ಯಾರು ಊಹೆ ಮಾಡಲು ಸಾಧ್ಯವಿಲ್ಲ. ಇವತ್ತು ಕೂಡಾ ಬೆಳಗ್ಗೆ 5:30 ಕ್ಕೆ ದೇವಸ್ಥಾನ ಹೋಗಿ ಬಂದೆ. ಈಗ ವಿಶ್ರಾಂತಿ ಪಡೆಯುತ್ತಿದ್ದೇನೆ ಅಂತಾ ಹೇಳಿದರು. ದೇವೇಗೌಡರು ಸಾಕಷ್ಟು ನೊಂದಿದ್ದಾರೆ. ಇಡೀ ರಾಜ್ಯದ ಜನತೆಗೂ ಕೂಡಾ ದೇವೇಗೌಡ ಮನಸಿನ ಮೇಲೆ ಯಾವ ರೀತಿ ಪರಿಣಾಮ ಬೀರಿರಬೇಕು ಅಂತಾ ಎಲ್ಲರಿಗೂ ಗೊತ್ತಿರುವ ವಿಷಯ. ದೇವೇಗೌಡರು ಮತ್ತು ನಮ್ಮ ಅಜ್ಜಿ ಸಾಕಷ್ಟು ನೋವಿನಲ್ಲಿ ಇದ್ದಾರೆ ಎಂದರು. ಇದನ್ನೂ ಓದಿ: ಸಂತ್ರಸ್ತ ಮಹಿಳೆಯರಿಗೆ ಸಾಧ್ಯವಿರುವ ಎಲ್ಲ ನೆರವು ನೀಡಿ: ಸಿಎಂ ಸಿದ್ದರಾಮಯ್ಯಗೆ ರಾಹುಲ್‌ ಗಾಂಧಿ ಪತ್ರ

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೇವೇಗೌಡ, ಕುಮಾರಸ್ವಾಮಿಯವರನ್ನ ಎಳೆದು ತರೋದು ಸರಿಯಲ್ಲ. ಈಗಾಗಲೇ ಆರೋಪಿ ಸ್ಥಾನದಲ್ಲಿ ಇರೋರ ಬಗ್ಗೆ SIT ತನಿಖೆ ಆಗ್ತಿದೆ. ಕಾನೂನಿಗಿಂತ ಯಾರು ದೊಡ್ಡವರು ಇಲ್ಲ. ತಪ್ಪು ಮಾಡಿದ್ರೆ ತಲೆ ಬಾಗಲೇಬೇಕು. ತಪ್ಪಿಸಿಕೊಳ್ಳೋ ಪ್ರಶ್ನೆ ಇಲ್ಲ. SIT ರಚನೆ ಆಗಿದೆ. ತನಿಖೆ ಆಗ್ತಿದೆ. ಅಂತಿಮವಾಗಿ ತನಿಖಾ ವರದಿ ಬಂದ ಮೇಲೆ ಮುಂದಿನ ದಿನಗಳಲ್ಲಿ ಮಾತಾಡ್ತೀನಿ ಎಂದರು.

    ವೀಡಿಯೋ ಲೀಕ್ ಆಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ನನಗೆ ಬಹಳ ದುಃಖ ತಂದ ವಿಷಯ ವೀಡಿಯೋ ಬ್ಲರ್ ಮಾಡದೇ ಇರೋದು. ನಾನು ಆ ವೀಡಿಯೋ ನೋಡೋ ಧೈರ್ಯ ಮಾಡಲಿಲ್ಲ. ನಮ್ಮ ಸುತ್ತಮುತ್ತ ಇರುವವರು ಹೇಳಿದರು. ಇಂತಹ ವೀಡಿಯೋ ಇರೋ ಸಮಯದಲ್ಲಿ ಬ್ಲರ್ ಮಾಡ್ತಾರೆ. ಆದರೆ ಪಾಪ ಆ ಹೆಣ್ಣುಮಕ್ಕಳನ್ನ ಸೋಶಿಯಲ್ ಮೀಡಿಯಾದಲ್ಲಿ ಮುಖ ಕಾಣೋ ರೀತಿ ಅದನ್ನ ತೋರಿಸಿದ್ದಾರೆ. ವೀಡಿಯೋ ಬಿಡುಗಡೆ ಬಗ್ಗೆಯೂ ಹೆಚ್ಚಿನ ತನಿಖೆ ಆಗಬೇಕು ಎಂದು ಆಗ್ರಹಿಸಿದರು.