Tag: H.D.Deve Gowda

  • ಪ್ರಧಾನಿ ಮೋದಿಗೆ ಲೋಕಸಭೆ ಅಧಿವೇಶನದಲ್ಲೇ ಉತ್ತರ ಕೊಡ್ತೀನಿ: ಎಚ್‍ಡಿಡಿ

    ಪ್ರಧಾನಿ ಮೋದಿಗೆ ಲೋಕಸಭೆ ಅಧಿವೇಶನದಲ್ಲೇ ಉತ್ತರ ಕೊಡ್ತೀನಿ: ಎಚ್‍ಡಿಡಿ

    ಬೆಂಗಳೂರು: ಮಣ್ಣಿನ ಮಗ ಏನು ಮಾಡಿದ್ದಾರೆಂದು ಪ್ರಶ್ನಿಸಿರುವ ಪ್ರಧಾನಿ ಮೋದಿ ಅವರಿಗೆ ಲೋಕಸಭಾ ಅಧಿವೇಶನದಲ್ಲಿಯೇ ಉತ್ತರ ಕೊಡುತ್ತೇನೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದ್ದಾರೆ.

    ಪದ್ಮನಾಭನಗರದ ನಿವಾಸದ ಬಳಿ ಮಾತನಾಡಿದ ಅವರು, ನನ್ನ ಬಗ್ಗೆ ಪ್ರಧಾನಿ ಮೋದಿ ಲಘುವಾಗಿ ಮಾತಾಡಿದ್ದಾರೆ. ಇದಕ್ಕೆ ಉತ್ತರ ಕೊಡುವುದಕ್ಕಾಗಿಯೇ ನಾನು ದೆಹಲಿಗೆ ಹೋಗುತ್ತಿರುವೆ. ನಾನು 50 ವರ್ಷ ಏನ್ ಮಾಡಿದ್ದೇನೆ ಎನ್ನುವುದನ್ನು ಸಂಸತ್‍ನಲ್ಲಿ ವಿವರಿಸುತ್ತೇನೆ. ಅಧಿವೇಶನ ಮುಗಿದ ಮೇಲೆ ರಾಜ್ಯದಲ್ಲೇ ಇರುತ್ತೇನೆ ಅಂತ ತಿಳಿಸಿದರು.  ಇದನ್ನು ಓದಿ: ಲೋಕಸಭೆಯಲ್ಲಿ ಇದು ನನ್ನ ಕೊನೆ ಭಾಷಣವೂ ಆಗಬಹುದು: ಎಚ್.ಡಿ.ದೇವೇಗೌಡ

    ಆಡಿಯೋ ಬಗ್ಗೆ ತಪ್ಪು ಒಪ್ಪಿಕೊಂಡ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ಮಾಜಿ ಪ್ರಧಾನಿ ದೇವೇಗೌಡ ನಿರಾಕರಿಸಿದರು. ಆಡಿಯೋ ಬಗ್ಗೆ ನಾನು ಯಾವುದೇ ರಿಯಾಕ್ಷನ್ ಕೊಡುವುದಿಲ್ಲ. ಆಡಿಯೋ ಮಾಡಿರುವವರು ಯಾರು, ಅದಕ್ಕೆ ಯಾರು ಕಾರಣ ಇದೆಲ್ಲ ನನಗೆ ಸಂಬಂಧವಿಲ್ಲ. ನಾನು ಪ್ರತಿಕ್ರಿಯೆ ಕೊಡುವುದು ಯೋಗ್ಯವಲ್ಲ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಶಕ್ತಿ ಇದ್ರೆ ಅವಿಶ್ವಾಸ ಗೊತ್ತುವಳಿ ಮಂಡಿಸಲಿ: ಬಿಜೆಪಿಗೆ ದೇವೇಗೌಡ ಸವಾಲ್

    ಶಕ್ತಿ ಇದ್ರೆ ಅವಿಶ್ವಾಸ ಗೊತ್ತುವಳಿ ಮಂಡಿಸಲಿ: ಬಿಜೆಪಿಗೆ ದೇವೇಗೌಡ ಸವಾಲ್

    ನವದೆಹಲಿ: ಶಕ್ತಿ ಇದ್ದರೆ ಅವಿಶ್ವಾಸ ಗೊತ್ತುವಳಿ ಮಂಡಿಸಲಿ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಬಿಜೆಪಿ ನಾಯಕರಿಗೆ ಸವಾಲು ಹಾಕಿದ್ದಾರೆ.

    ನಗರದಲ್ಲಿ ಮಾತನಾಡಿದ ಅವರು, ಬಿಜೆಪಿ ನಡವಳಿಕೆ ಬಗ್ಗೆ ನಾನು ಏನನ್ನೂ ಮಾತನಾಡುವುದಿಲ್ಲ. ಸರ್ಕಾರ ಅಸ್ಥಿರಗೊಳಿಸಲು ಮುಂದಾದ ಅವರನ್ನು ಯಾರೂ ಹಿಡಿದಿಟ್ಟಿಲ್ಲ. ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದೆ. ಹೀಗಾಗಿ ಕರ್ನಾಟಕದಲ್ಲಿಯೂ ಅವರೇ ಅಧಿಕಾರಕ್ಕೆ ಬರಲು ಪ್ರಯತ್ನಿಸುತ್ತಿದ್ದಾರೆ ಎಂದು ಕಿಡಿಕಾರಿದರು.

    ಕಲಾಪಕ್ಕೆ ಕಾಂಗ್ರೆಸ್ ಶಾಸಕರು ಗೈರಾಗಿರುವ ಕುರಿತು ಪ್ರತಿಕ್ರಿಯೆ ನೀಡಿದ ದೇವೇಗೌಡರು, ಮದುವೆ, ಕಾರ್ಯಕ್ರಮ, ವೈಯಕ್ತಿಕ ಕೆಲಸದ ಒತ್ತಡದಿಂದಾಗಿ ಅವರು ಇಂದು ಸದನಕ್ಕೆ ಹಾಜರಾಗಿಲ್ಲ. ನಾಳೆಯಿಂದ ಎಲ್ಲರೂ ಬರುತ್ತಾರೆ. ಆಗ ಬಿಜೆಪಿಯವರಿಗೆ ಅಗತ್ಯವಿದ್ದಲ್ಲಿ ಅವಿಶ್ವಾಸ ಮಂಡಿಸಲಿ ಎಂದು ಕುಟುಕಿದರು.

    ಲೋಕಸಭೆಯಲ್ಲಿ ಕಾಂಗ್ರೆಸ್‍ನೊಂದಿಗೆ ಸೀಟು ಹಂಚಿಕೆ ಬಗ್ಗೆ ಯಾವುದೇ ಮಾತುಕತೆಯಾಗಿಲ್ಲ. ಬಜೆಟ್ ವಿಚಾರವಾಗಿ ಮಾತನಾಡಲು ದೆಹಲಿಗೆ ಬಂದಿರುವೆ. ಆದರೆ ಸಂಸತ್ ಕಲಾಪ ಮುಂದೂಡಿಕೆಯಾಗಿದೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿಲ್ಲ ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಾಂಗ್ರೆಸ್‍ನವರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ – ಸಿದ್ದರಾಮಯ್ಯ ವಿರುದ್ಧ ದೇವೇಗೌಡ ಕಿಡಿ

    ಕಾಂಗ್ರೆಸ್‍ನವರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ – ಸಿದ್ದರಾಮಯ್ಯ ವಿರುದ್ಧ ದೇವೇಗೌಡ ಕಿಡಿ

    – ಜೆಡಿಎಸ್‍ನಲ್ಲಿ ಇದ್ದಾಗಲೇ ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ರು
    – ಕುಮಾರಸ್ವಾಮಿ ಕಾರ್ಯಕ್ಕೆ ಕಾಂಗ್ರೆಸ್‍ನವರು ಮಸಿ ಬಳಿತಿದ್ದಾರೆ
    – ಕೈ ನಾಯಕರನ್ನು ನಿಯಂತ್ರಣಕ್ಕೆ ತನ್ನಿ ಎಂದು ಕೈ ಹೈಮಾಂಡ್‍ಗೆ ಕೈಮುಗಿದ ಎಚ್‍ಡಿಡಿ

    ಬೆಂಗಳೂರು: ಮೈತ್ರಿ ಸರ್ಕಾರಕ್ಕೆ ಅಧಿಕಾರಕ್ಕೆ ಬಂದು ಏಳು ತಿಂಗಳು ತುಂಬದಿದ್ದರೂ ಕಾಂಗ್ರೆಸ್‍ನವರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ನೇರವಾಗಿಯೇ ಅಸಮಾಧಾನವನ್ನು ಹೊರಹಾಕಿದ್ದಾರೆ.

    ಅರಮನೆ ಮೈದಾನದಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ಅವರು, 2004ರಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಸರ್ಕಾರಕ್ಕೆ ನಾವು ಬೆಂಬಲ ಕೊಟ್ಟಿದ್ವಿ. ಆದರೆ ಅವರೇ ನಮ್ಮ ಬೆಂಬಲ ವಾಪಸ್ ಕಳಿಸಿದರು. ಈಗ ರಾಜ್ಯದಲ್ಲಿ ಕಾಂಗ್ರೆಸ್‍ಗೆ ಬೆಂಬಲ ನೀಡಿ ಸರ್ಕಾರ ಮಾಡುತ್ತಿದ್ದೇವೆ. ಕಾಂಗ್ರೆಸ್ ನಾಯಕರ ಹೇಳಿಕೆಯಿಂದ ಕುಮಾರಸ್ವಾಮಿ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ ಅಂತ ಹೇಳುವ ಪರಿಸ್ಥಿತಿ ಎದುರಾಯಿತು ಎಂದು ಕಿಡಿಕಾರಿದರು.

    ನನ್ನ ಚಿಂತೆ ಇರುವುದು ಜೆಡಿಎಸ್ ಪಕ್ಷ ಹೇಗೆ ಉಳಿಸಬೇಕು ಅಂತ. ಪಕ್ಷ ಉಳಿಸುವುದು ಪಕ್ಷದ ಕಾರ್ಯಕರ್ತರ ಮೇಲಿದೆ. ನನ್ನ ರಾಜಕೀಯ ಏಳು-ಬೀಳಿನಲ್ಲಿ ಕೈ ಹಿಡಿದು ನಡೆಸಿದವರು ರಾಜ್ಯದ ಜನರು. ರೈತರು ನಮ್ಮ ಬೆನ್ನಿಗೆ ನಿಂತಿದ್ದಾರೆ. ಇದನ್ನ ನಾಟಕೀಯವಾಗಿ ನಾನು ಹೇಳುತ್ತಿಲ್ಲ ಎಂದು ದೇವೇಗೌಡರು ತಿಳಿಸಿದರು.

    ಸಮ್ಮಿಶ್ರ ಸರ್ಕಾರದ 7 ತಿಂಗಳ ಪ್ರಯಾಣದಲ್ಲಿ ಏನೇನೋ ಘಟನೆ ನಡೆದಿವೆ. ಇದರ ಬಗ್ಗೆ ನಾನು ಏನು ಮಾತನಾಡಿಲ್ಲ. ನಮ್ಮ ಪಕ್ಷದಿಂದ ಕಾಂಗ್ರೆಸ್‍ಗೆ ಸೇರಿದ ಸಿದ್ದರಾಮಯ್ಯ ಮುಖ್ಯಮಂತ್ರಿಯಾದರು. ಅವರು 5 ವರ್ಷ ಅಧಿಕಾರ ಪೂರ್ಣಗೊಳಿಸಿದರು. ಇದನ್ನು ಬಹಳ ನೋವಿನಿಂದ ಹೇಳುತ್ತಿದ್ದೇನೆ. ನಾನು ಏಕಾಂಗಿ ಆಗಿದ್ದಾಗ ನಾಡಿನ ರೈತರು ನನ್ನ ಬೆಂಬಲಕ್ಕೆ ನಿಂತರು ಎಂದು ಪರೋಕ್ಷವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಗುಡುಗಿದರು.

    ಕುಮಾರಸ್ವಾಮಿ ಸಿಎಂ ಹುದ್ದೆ ಬೇಡ ಅಂದರೂ ಕಾಂಗ್ರೆಸ್‍ನವರು ಕೊಟ್ಟರು. ಸಿದ್ದರಾಮಯ್ಯ ಅವರು ಜೆಡಿಎಸ್ ಅಧ್ಯಕ್ಷರಾಗಿ ಏನೂ ಕೆಲಸ ಮಾಡಲಿಲ್ಲ. ಆಗ ನನಗಾಗಿರುವ ನೋವು ದೇವರಿಗೆ ಮಾತ್ರ ಗೊತ್ತು. ಈ ಹಿಂದೆ ಕಾಂಗ್ರೆಸ್ ಜೊತೆಗೆ ಮೈತ್ರಿ ಸರ್ಕಾರ ರಚಿಸಿದಾಗ, ಸೋನಿಯಾ ಗಾಂಧಿ ಅವರ ಮೇಲೆ ಒತ್ತಡ ಹಾಕಿದರೆ ನಾನು ಮುಖ್ಯಮಂತ್ರಿ ಆಗುತ್ತಿದೆ ಅಂತ ಸಿದ್ದರಾಮಯ್ಯ ಹೇಳಿದ್ದರು. ನಾನು ದೆಹಲಿಗೆ ಹೋಗುವಾಗಲೂ ನನ್ನ ಸಿಎಂ ಮಾಡಬಹುದಿತ್ತು ಅಂತ ಸಿದ್ದರಾಮಯ್ಯ ಹೇಳಿದ್ದರು. ಇಲ್ಲಿಯವರೆಗೂ ನಾನು ಅದರ ಬಗ್ಗೆ ಏನು ಮಾತನಾಡಿಲ್ಲ ಎಂದು ವ್ಯಂಗ್ಯವಾಡಿದರು.

    ಕುಮಾರಸ್ವಾಮಿ ಬಡವರು, ಏಡ್ಸ್ ಪೀಡಿತರು ಬಂದರೆ ಎತ್ತಿ ಮುದ್ದಾಡುತ್ತಾರೆ. ಆದರೆ ಕಾಂಗ್ರೆಸ್ ಶಾಸಕರಿಗೆ ಸಮಯ ಕೊಡುವುದಿಲ್ಲ ಅಂತ ಆರೋಪ ಮಾಡುತ್ತಾರೆ. ಮಾಲಿನ್ಯ ನಿಯಂತ್ರಣ ಮಂಡಳಿ ಬಿಟ್ಟು ಉಳಿದೆಲ್ಲ ನಿಗಮ-ಮಂಡಳಿಯನ್ನು ಕುಮಾರಸ್ವಾಮಿ ಕ್ಲಿಯರ್ ಮಾಡಿದ್ದಾರೆ. ಹೀಗಿದ್ದರೂ ಎಲ್ಲರೂ ಮಾತನಾಡುತ್ತಿದ್ದಾರೆ. ಹೀಗೆ ಮಾಡಿದರೆ ಸರ್ಕಾರ ನಡೆಸುವುದಕ್ಕೆ ಹೇಗೆ ಸಾಧ್ಯ? ಕಾಂಗ್ರೆಸ್ ಶಾಸಕರು ಒಬ್ಬೊಬ್ಬರು ನಿತ್ಯ ಒಂದೊಂದು ಮಾತು ಆಡುತ್ತಾರೆ ಎಂದು ಕುಟುಕಿದರು.

    ಇದೆಲ್ಲವನ್ನೂ ನಿಯಂತ್ರಣಕ್ಕೆ ತರಬೇಕು ಅಂತ ಕಾಂಗ್ರೆಸ್ ಹೈಕಮಾಂಡ್‍ಗೆ ಕೈ ಮುಗಿದು ಕೇಳಿಕೊಳುತ್ತೇನೆ. ಕುಮಾರಸ್ವಾಮಿ ಪ್ರಮಾಣವಚನ ಕಾರ್ಯಕ್ರಮಕ್ಕೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಬಂದಿದ್ದರು. ಈ ಹೊಂದಾಣಿಕೆ ದೇಶದ ಒಳಿತಿಗಾಗಿ. ಇದನ್ನು ರಾಜ್ಯದ ಕಾಂಗ್ರೆಸ್ ಶಾಸಕರು ಹಾಗೂ ನಾಯಕರು ಅರ್ಥ ಮಾಡಿಕೊಳ್ಳಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಕೇವಲ 37 ಸ್ಥಾನ ಹೊಂದಿರುವ ಕುಮಾರಸ್ವಾಮಿ ಅವರು ಚುನಾವಣಾ ಪ್ರಚಾರದಲ್ಲಿ ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತೇನೆ ಅಂತ ಹೇಳಿದರು. ಜೊತೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಯೋಜನೆಗಳನ್ನು ಮುಂದುವರಿಸುತ್ತೇನೆ ಅಂತ ಭರವಸೆ ನೀಡಿದ್ದಾರೆ. ರೈತರಿಗೆ, ವೃದ್ಧರಿಗೆ, ಗರ್ಭಿಣಿಯರಿಗೆ ಹಣ ನೀಡುವ ಕೆಲಸ ಮಾಡುತ್ತಿದ್ದಾರೆ. ಇಷ್ಟೆಲ್ಲ ಮಾಡುತ್ತಿದ್ದರೂ ಸಿಎಂ ವಿರುದ್ಧ ನಿತ್ಯ ಒಬ್ಬೊಬ್ಬರು ಒಂದೊಂದು ರೀತಿ ಮಾತನಾಡುತ್ತಿದ್ದಾರೆ ಎಂದು ಗುಡುಗಿದರು.

    ಸಿಎಂ ಕುಮಾರಸ್ವಾಮಿ ಮಾಡುತ್ತಿರುವ ಕಾರ್ಯಕ್ಕೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ. ನೀವು ಐದು ವರ್ಷ ಸಿಎಂ ಆಗಿದ್ದೀರಿ. ನೀವು ಮಾಡಿದ ಕೆಲಸದ ಬಗ್ಗೆ ನಾನು ಒಂದು ಶಬ್ದ ಮಾತನಾಡಲಿಲ್ಲ. ಅಕ್ರಮವೋ ಸಕ್ರಮವೋ ಏನೂ ಮಾತಾಡಿಲ್ಲ ಎಂದು ಸಿದ್ದರಾಮಯ್ಯ ವಿರುದ್ಧ ಎಚ್‍ಡಿಡಿ ಕೆಂಡಾಮಂಡಲವಾದರು.

    ಕುಮಾರಸ್ವಾಮಿ ಅವರು ಎಲ್ಲೆ ಮೀರಿ ಯಾವತ್ತೂ ಮಾತನಾಡಿಲ್ಲ. ಇದು ಮೈತ್ರಿ ಸರ್ಕಾರ ನೀವೇ ಸಹಿಸಿಕೊಂಡು ಹೋಗಿ ಅಂತ ನಮ್ಮ ಶಾಸಕರಿಗೆ ಹೇಳಿದ್ದಾರೆ. ಕಾಂಗ್ರೆಸ್ ನಾಯಕರ ಹೇಳಿಕೆಗೆ ನಾನು ಇದೂವರೆಗೂ ಯಾವುದೇ ಪ್ರತಿಕ್ರಿಯೆ ಕೊಟ್ಟಿಲ್ಲ. ಅವರು ಖಾಸಗಿ ವಾಹಿನಿಯಲ್ಲಿ ಮಾತನಾಡಿದ್ದನ್ನು ನೋಡಿದ ಮೇಲೆ ನನಗೂ ಬೇಸರವಾಗಿದೆ ಎಂದರು.

    ಜೆಡಿಎಸ್ ಕುಟುಂಬದ ಪಕ್ಷವಲ್ಲ. ಸಿದ್ದರಾಮಯ್ಯ ಅವರನ್ನು ಅಧ್ಯಕ್ಷರನ್ನಾಗಿ ಮಾಡಿದ್ದೇವೆ. ಇಬ್ರಾಹಿಂ ಅಧ್ಯಕ್ಷ ಸ್ಥಾನದಲ್ಲಿದ್ದರು. ಹೀಗಿದ್ದರೂ ಕುಟುಂಬ ಪಕ್ಷ ಎನ್ನುವುದು ಸರಿಯೇ ಎಂದು ಪ್ರಶ್ನಿಸಿ ಕಾಂಗ್ರೆಸ್ ನಾಯಕರು, ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು.

    ರಾಯಚೂರಿನಲ್ಲಿ ಪರಿಶಿಷ್ಟ ಜಾತಿ, ಪಂಗಡ ಸಮಾವೇಶವನ್ನು ಫೆಬ್ರವರಿ 10 ರಂದು ನಡೆಸಲಾಗುತ್ತದೆ. ಜೊತೆಗೆ ಹುಬ್ಬಳ್ಳಿಯಲ್ಲಿ ರೈತರ ಸಮಾವೇಶ ಮಾಡುತ್ತೇನೆ ಎಂದು ದೇವೇಗೌಡ ಅವರು ಹೇಳಿದರು.

    ರಾಷ್ಟ್ರದಲ್ಲಿ ಮೂರು ಸಮ್ಮಿಶ್ರ ಸರ್ಕಾರಗಳು ಆಡಳಿತ ಮಾಡಿವೆ. ನಾನು ಕಾಂಗ್ರೆಸ್ ಪಕ್ಷದ ಬೆಂಬಲದಿಂದ ಪ್ರಧಾನಿಯಾಗಿದ್ದೆ. ಇತ್ತ ಮಾಜಿ ಮುಖ್ಯಮಂತ್ರಿ ಧರ್ಮ ಸಿಂಗ್ ಸರ್ಕಾರದಲ್ಲಿ ಷರತ್ತು ಇರಲಿಲ್ಲ. ಅವರ ಸರ್ಕಾರ ಬೀಳುವುದಕ್ಕೆ ನಾನಾಗಲೀ ಕುಮಾರಸ್ವಾಮಿ ಆಗಲಿ ಕಾರಣವಲ್ಲ. ಇವತ್ತು ಅದೇ ಕಾಂಗ್ರೆಸ್ ಬೆಂಬಲದಿಂದ ಕುಮಾರಸ್ವಾಮಿ ಸಿಎಂ ಆಗಿದ್ದಾರೆ ಎಂದರು.

    ಕಾಂಗ್ರೆಸ್ ಸರ್ಕಾರವಿದ್ದಾಗ ದೊಡ್ಡಳ್ಳಿ ಗೋಲಿಬಾರ್ ನಡೆಯಿತು. ನಾನು ಯಾವ ಸಮುದಾಯವೆಂದು ನೋಡಲಿಲ್ಲ. ಆದರೆ ಇವತ್ತು ಹೇಳಬೇಕಾಗಿದೆ. ಗೋಲೀಬಾರ್‍ನಲ್ಲಿ ಸತ್ತವನು ಕುರುಬ ಸಮುದಾಯಕ್ಕೆ ಸೇರಿದವನು. ಮೃತನ ಕುಟುಂಬಸ್ಥರಿಗೆ ಸಹಾಯ ಮಾಡಿದೆ. ಪ್ರತಿ ಬಾರಿಯೂ ನಾನು ಕುರುಬ ಸಮುದಾಯಕ್ಕೆ ಏನೂ ಮಾಡಲಿಲ್ಲ ಅಂತಾ ಮಾತನಾಡುವವರಿಗೆ ಇದು ತಿಳಿಯಬೇಕು ಎಂದು ಸಿದ್ದರಾಮಯ್ಯ ಅವರಿಗೆ ಮತ್ತೆ ಟಾಂಗ್ ಕೊಟ್ಟರು.

    https://www.youtube.com/watch?v=ITR67bRRNNE

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಏ ರೇವಣ್ಣ ನಿಮ್ಮ ವಿಷಯ ಇದ್ರೆ ಆಚೆ ಹೋಗಿ ಮಾತಾಡು, ಇಲ್ಲಿ ಮಾಧ್ಯಮದವರಿದ್ದಾರೆ – ಪುತ್ರನಿಗೆ ಗದರಿದ ಗೌಡ್ರು

    ಏ ರೇವಣ್ಣ ನಿಮ್ಮ ವಿಷಯ ಇದ್ರೆ ಆಚೆ ಹೋಗಿ ಮಾತಾಡು, ಇಲ್ಲಿ ಮಾಧ್ಯಮದವರಿದ್ದಾರೆ – ಪುತ್ರನಿಗೆ ಗದರಿದ ಗೌಡ್ರು

    ಹಾಸನ: ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ(ದಿಶಾ) ಸಭೆಯಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು ಲೋಕೋಪಯೋಗಿ ಸಚಿವ ಹೆಚ್. ರೇವಣ್ಣರಿಗೆ ಎಲ್ಲರ ಮುಂದೆ ಕ್ಲಾಸ್ ತೆಗೆದುಕೊಂಡು ಸಭಾಂಗಣದ ಹೊರಗೆ ಹೋಗಿ ಮಾತನಾಡು ಎಂದು ಗದರಿದ್ದಾರೆ.

    ಸಭಾಂಗಣದ ಒಳಗಡೆ ಉಸ್ತುವಾರಿ ಸಚಿವ ರೇವಣ್ಣ ಅಧ್ಯಕ್ಷತೆಯಲ್ಲಿ ತ್ರೈಮಾಸಿಕ ಪ್ರಗತಿ ಪರಿಶೀಲನೆ ಸಭೆ ನಡೆಯುತ್ತಿತ್ತು. ಸಭೆಯಲ್ಲಿ ದೇವೇಗೌಡರು ಮಾತನಾಡುತ್ತಿದ್ದಾಗ, ಸಭಾಂಗಣದ ಬಾಗಿಲ ಬಳಿ ನಿಂತು ಅಧಿಕಾರಿಗಳೊಂದಿಗೆ ರೇವಣ್ಣ ಚರ್ಚೆ ಮಾಡುತ್ತಿದ್ದರು.

    ಇದನ್ನು ನೋಡಿ ದೇವೇಗೌಡರು ಗರಂ ಆಗಿ “ಏ ರೇವಣ್ಣ ನಿಮ್ಮ ವಿಷಯ ಇದ್ದರೆ ಅಚೆ ಹೋಗಿ ಮಾತನಾಡು, ಇಲ್ಲಿ ಮಾಧ್ಯಮದವರಿದ್ದಾರೆ” ಎಂದು ಗದರಿದ್ದಾರೆ. ತಂದೆ ಎಚ್‍ಡಿಡಿ ಗದರಿದ ತಕ್ಷಣ ತರಾತುರಿಯಲ್ಲಿ ಹಾಲ್ ಬಿಟ್ಟು ಸಚಿವ ರೇವಣ್ಣ ಹೊರ ನಡೆದಿದ್ದಾರೆ.

    ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಎಚ್‍ಡಿಡಿ, ಕೇಂದ್ರ ಸರ್ಕಾರದ ಜನಪ್ರಿಯತೆ ಕುಸಿಯುತ್ತಿದೆ. ಈ ಕಾರಣಕ್ಕೆ ಮೇಲ್ವರ್ಗದವರಿಗೆ ಮೀಸಲಾತಿ ಅಸ್ತ್ರವನ್ನು ಬಳಸಿದ್ದಾರೆ. ಚುನಾವಣಾ ದೃಷ್ಟಿಯಿಂದ ಹೀಗೆ ಮಾಡಿದ್ದಾರೆ. ಇದೇ ಕಾರಣಕ್ಕೆ ಮರುಮಾತನಾಡದೇ ಎಲ್ಲ ಪಕ್ಷದವರು ಬೆಂಬಲಿಸಿದ್ದಾರೆ. ನಮ್ಮ ಪಕ್ಷದ ವತಿಯಿಂದ ಬ್ರಾಹ್ಮಣ ಸಮುದಾಯಕ್ಕೆ ಏನು ನೀಡಬೇಕು ಅದನ್ನು ನೀಡಿದ್ದೇವೆ. ಸದ್ಯ ಈ ವಿಚಾರ ಸುಪ್ರಿಂ ಕೋರ್ಟ್ ನಲ್ಲಿದೆ ಏನಾಗುತ್ತೆ ನೋಡೋಣ ಎಂದು ಪ್ರತಿಕ್ರಿಯಿಸಿದರು.

    ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಸಿನೊಂದಿಗಿನ ಮೈತ್ರಿಯನ್ನು ಸ್ಪಷ್ಟಪಡಿಸಿದ ಗೌಡರು, ನಮ್ಮ ಪಕ್ಷಕ್ಕೆ ಎಷ್ಟು ಸೀಟು ಕೊಡುತ್ತಾರೆ ಗೊತ್ತಿಲ್ಲ. ಈ ಬಗ್ಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ವೇಣುಗೋಪಾಲ್ ಮತ್ತು ಸಿದ್ದರಾಮಯ್ಯ ಜೊತೆ ಚರ್ಚೆ ನಡೆಸಲಾಗುವುದು. ಮುಂದಿನ ಲೋಕಸಭಾ ಚುನಾವಣೆಯಲ್ಲಿ ತಮ್ಮ ಸ್ಪರ್ಧೆ ಕುರಿತು ಇನ್ನೂ ಯಾವುದೇ ತೀರ್ಮಾನ ಮಾಡಿಲ್ಲ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತೀರಿ ಎಂದಿದ್ದಕ್ಕೆ ಮಾಜಿ ಪ್ರಧಾನಿ ಗರಂ

    ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತೀರಿ ಎಂದಿದ್ದಕ್ಕೆ ಮಾಜಿ ಪ್ರಧಾನಿ ಗರಂ

    – ನಾನು 29 ವರ್ಷ ಪಾರ್ಲಿಮೆಂಟ್ ನೋಡಿದ್ದೇನೆ
    – ಶೀಘ್ರವೇ ಸೀಟ್ ಹೊಂದಾಣಿಕೆ ಮಾತುಕತೆ

    ಬೆಂಗಳೂರು: ನಾನು ಇಪ್ಪತ್ತೊಂಬತ್ತು ವರ್ಷ ಪಾರ್ಲಿಮೆಂಟ್ ನೋಡಿದ್ದೇನೆ. ಮೊದಲು ಪಕ್ಷ ಕಟ್ಟುವುದು ನನ್ನ ಜವಾಬ್ದಾರಿ. ಆಮೇಲೆ ಸ್ಪರ್ಧೆಯ ಮಾತು ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಗುಡುಗಿದ್ದಾರೆ.

    ನಗರದ ಜಿಪಿ ಭವನದಲ್ಲಿ ಪಕ್ಷದ ಸಭೆ ನಡೆಸಿ ಬಳಿಕ ಮಾಧ್ಯಮಗಳ ಜೊತೆಗೆ ದೇವೇಗೌಡ ಅವರು ಮಾತನಾಡಿದರು. ಈ ವೇಳೆ ಲೋಕಸಭಾ ಚುನಾವಣೆಗೆ ನೀವು ಯಾವ ಕ್ಷೇತ್ರದಿಂದ ಸ್ಪರ್ಧೆಗೆ ಇಳಿಯುತ್ತೀರಿ ಎಂದು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಮಾಜಿ ಪ್ರಧಾನಿ ಗರಂ ಆಗಿ ಪ್ರತಿಕ್ರಿಯಿಸಿದರು.

    ಮೈತ್ರಿ ಸರ್ಕಾರದ ಕುರಿತು ಮಾತನಾಡಿದ ಎಚ್‍ಡಿಡಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರು, ಸಚಿವರು ಸಮ್ಮಿಶ್ರ ಸರ್ಕಾರದ ವರ್ಚಸ್ಸಿಗೆ ಧಕ್ಕೆ ತರುವ ರೀತಿ ಹೇಳಿಕೆ ಕೊಡಬಾರದು. ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಎರಡೂ ಪಕ್ಷಗಳ ನೇತೃತ್ವ ವಹಿಸಿಕೊಂಡಿದ್ದು, ಜವಾಬ್ದಾರಿ ಹೊರಲು ಅವರಿಗೆ ಕಷ್ಟ ಆಗಬಹುದು. ಹೀಗಾಗಿ ಶಾಸಕರು ಅವರ ಕ್ಷೇತ್ರಗಳ ಸಮಸ್ಯೆಗಳ ಬಗ್ಗೆ ಗಮನ ಹರಿಸಬೇಕು ಎಂದು ಪುತ್ರ ಹಾಗೂ ಸಿಎಂ ಕುಮಾರಸ್ವಾಮಿ ಬಗ್ಗೆ ಕಾಳಜಿ ವ್ಯಕ್ತಪಡಿಸಿದ್ದಾರೆ.

    ಪಕ್ಷದಲ್ಲಿ ಯಾವುದೇ ಜವಾಬ್ದಾರಿ ಹೊರಲು ಆಸಕ್ತಿ ಇರುವ ಶಾಸಕರು ಮುಂದೆ ಬರಲಿ. ಅವರಿಗೆ ಬೆಂಬಲ ನೀಡುತ್ತೇವೆ. ಆದರೆ ಪ್ರಮುಖ ತೀರ್ಮಾನಗಳನ್ನು ನಾವು ನೋಡಿಕೊಳ್ಳುತ್ತೇವೆ ಎಂದ ಅವರು, ಕಾಂಗ್ರೆಸ್‍ಗೆ 130 ವರ್ಷಗಳ ಇತಿಹಾಸವಿದೆ. ಆದರೆ ಇಂದು ದೇಶದ ಕೆಲವೇ ಕೆಲವು ರಾಜ್ಯಗಳಲ್ಲಿ ಆಡಳಿತದಲ್ಲಿದೆ ಎಂದರು.

    ಬಿಜೆಪಿ ಮತ್ತು ಕಾಂಗ್ರೆಸ್‍ಗೆ ಪರ್ಯಾಯವಾಗಿ ಕಳೆದ ಎರಡು ದಶಕಗಳಿಂದ ಹೋರಾಟ ಮಾಡುತ್ತಾ ಬಂದಿದ್ದೇವೆ. ಪ್ರಾದೇಶಿಕ ಪಕ್ಷದ ಅನಿವಾರ್ಯತೆ ಕುರಿತು ಯುವಕರಿಗೆ ತಿಳಿಸಬೇಕು. ರಾಜ್ಯದಲ್ಲಿ ಪಕ್ಷದ ಸಂಘಟನೆ ಚುರುಕಾಗಿದ್ದು, ಲೋಕಸಭಾ ಚುನಾವಣೆಗೆ ಸಿದ್ಧತೆ ನಡೆಸಿದ್ದೇವೆ ಎಂದು ಅವರು, ಲೋಕಸಭಾ ಚುನಾವಣಾ ಕ್ಷೇತ್ರಗಳ ಹೊಂದಾಣಿಕೆ ಬಗ್ಗೆ ಕಾಂಗ್ರೆಸ್ ನಾಯಕರ ಜೊತೆ ಮಾತನಾಡಿಲ್ಲ. ಮುಂದಿನ ಎರಡು ಮೂರು ದಿನಗಳಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಾನು ಅಡಿಗಲ್ಲು ಹಾಕಿದ ಸೇತುವೆ ಉದ್ಘಾಟನೆಗೆ ಆಹ್ವಾನವಿಲ್ಲ – ಎಚ್‍ಡಿಡಿ ಅಸಮಾಧಾನ

    ನಾನು ಅಡಿಗಲ್ಲು ಹಾಕಿದ ಸೇತುವೆ ಉದ್ಘಾಟನೆಗೆ ಆಹ್ವಾನವಿಲ್ಲ – ಎಚ್‍ಡಿಡಿ ಅಸಮಾಧಾನ

    ಬೆಂಗಳೂರು: ನಾನು ಅಡಿಗಲ್ಲು ಹಾಕಿದ್ದ ಸೇತುವೆ ಉದ್ಘಾಟನೆಗೆ ನನಗೆ ಆಹ್ವಾನ ನೀಡಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಅಸಮಾಧಾನ ಹೊರ ಹಾಕಿದ್ದಾರೆ.

    ಜೆಪಿ ಭವನದಲ್ಲಿ ಮಾತನಾಡಿದ ಅವರು ಬೋಗಿಬೀಲ್ ಸೇತುವೆ ಉದ್ಘಾಟನೆ ಕುರಿತು ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು. ಯಾರೊಬ್ಬರೂ ಅಸ್ಸಾಂನಲ್ಲಿ ನಡೆಯುತ್ತಿರುವ ಬೋಗಿಬೀಲ್ ಸೇತುವೆ ಉದ್ಘಾಟನೆಗೆ ಆಹ್ವಾನಿಸಿಲ್ಲ. ನಾವು ಮಾಡಿದ ಕೆಲಸವನ್ನು ಯಾರು ನೆನಪು ಇಟ್ಟುಕೊಳ್ಳುತ್ತಾರೆ ಎಂದು ಪ್ರಶ್ನಿಸಿದ ಅವರು ಅದು ದೊಡ್ಡ ವಿಷಯವಲ್ಲ ಬಿಡಿ ಎಂದು ಕಿಡಿಕಾರಿದರು. ಇದನ್ನು ಓದಿ: ಬೋಗಿಬೀಲ್ ಸೇತುವೆ ವಿಶೇಷತೆ ಏನು?

    ಕಾಶ್ಮೀರ ರೈಲ್ವೇ, ದೆಹಲಿ ಮೆಟ್ರೋ ಯೋಜನೆಗಳನ್ನು ನಾನೇ ಮಂಜೂರು ಮಾಡಿದ್ದೆ. ನನ್ನ ಕಾಲದಲ್ಲಿಯೇ ಅದಕ್ಕೆ ಹಣ ಬಿಡುಗಡೆ ಮಾಡಿ, ಅಡಿಗಲ್ಲು ಹಾಕಿಸಿದ್ದೆ. ಈಗ ಅದೆಲ್ಲವನ್ನೂ ಮರೆತಿದ್ದಾರೆ ಎಂದು ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.

    1997ರಲ್ಲಿ ಶಂಕುಸ್ಥಾಪನೆ ಮಾಡಿ ಸೇತುವೆ ನಿರ್ಮಾಣ ತಡವಾಗಿದ್ದು ಏಕೆ ಎನ್ನುವ ಮಾಧ್ಯಮಗಳ ಪ್ರಶ್ನೆಗೆ ಅದೆಲ್ಲ ಡಿಫರೆಂಟ್ ವಿಷಯ ಎಂದು ಉತ್ತರಿಸಿ, ನಾನು ಹಾಸನ-ಮೈಸೂರು ಯೋಜನೆಯನ್ನು 13 ತಿಂಗಳು ಮುಗಿಸಿದೆ. ನಿಗದಿತ ಸಮಯದಲ್ಲಿ ಅನೇಕ ಸೇತುವೆ ಕಾಮಗಾರಿಯನ್ನು ಪೂರ್ಣಗೊಳಿಸಿದ್ದೇನೆ. ಅವುಗಳಲ್ಲಿ ಅನಗವಾಡಿ ಸೇತುವೆ ಕೂಡ ಒಂದು. ಪ್ರಧಾನಿ ನರೇಂದ್ರ ಮೋದಿ ಅವರು ಹೋಗಿ ಅನಗವಾಡಿ ಸೇತುವೆ ನೋಡಿಕೊಂಡು ಬರಲಿ ಎಂದು ವ್ಯಂಗ್ಯವಾಡಿದರು.

    ದೇವೇಗೌಡ ಮುಂಬೈ ಕರ್ನಾಟಕಕ್ಕೆ ಏನು ಮಾಡಿಲ್ಲ ಅಂತ ಅನೇಕರು ಮಾತನಾಡುತ್ತಾರೆ. ಅಂತವರು ಕೂಡ ಅನಗವಾಡಿ ಸೇತುವೆ ನೋಡಿಕೊಂಡು ಬರಲಿ. ಆಗ ನಾನು ಏನು ಮಾಡಿದ್ದೇನೆ ಅಂತ ಅವರಿಗೆ ಅರ್ಥವಾಗುತ್ತದೆ. ಅನಗವಾಡಿ ಸೇತುವೆ ಅಷ್ಟೇ ಅಲ್ಲದೆ ನನ್ನ ಆಡಳಿತದ ಅವಧಿಯಲ್ಲಿ ಮುಂಬೈ ಕರ್ನಾಟಕಕ್ಕೆ ಅನೇಕ ಕೊಡುಗೆ ಕೊಟ್ಟಿದ್ದೇನೆ. ಆದರೂ ನಾನು ಕೆಲಸ ಮಾಡಿಲ್ಲ, ಮಾಡಿಲ್ಲ ಅಂತ ಆರೋಪಿಸುತ್ತಾರೆ ಎಂದು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪಾಲಿಕೆ ಮೇಯರ್ ಗಿರಿಗಾಗಿ ರಾಷ್ಟ್ರಮಟ್ಟದಲ್ಲಿ ನನ್ನ ಮರ್ಯಾದೆ ತೆಗಿಬೇಡಿ: ಎಚ್‍ಡಿಡಿ ಎಚ್ಚರಿಕೆ

    ಪಾಲಿಕೆ ಮೇಯರ್ ಗಿರಿಗಾಗಿ ರಾಷ್ಟ್ರಮಟ್ಟದಲ್ಲಿ ನನ್ನ ಮರ್ಯಾದೆ ತೆಗಿಬೇಡಿ: ಎಚ್‍ಡಿಡಿ ಎಚ್ಚರಿಕೆ

    ಮೈಸೂರು: ಪಾಲಿಕೆ ಮೇಯರ್ ಗಿರಿಗಾಗಿ ರಾಷ್ಟ್ರಮಟ್ಟದಲ್ಲಿ ನನ್ನ ಮರ್ಯಾದೆ ತೆಗೆಯಬೇಡಿ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಖಡಕ್ ಎಚ್ಚರಿಕೆ ನೀಡಿದ್ದಾರೆ.

    ಮೈಸೂರು ಮಹಾನಗರ ಪಾಲಿಕೆ ಮೇಯರ್ ಸ್ಥಾನ ವಿಚಾರವಾಗಿ ಬಿಜೆಪಿ ಜೊತೆಗೆ ಜೆಡಿಎಸ್ ಮೈತ್ರಿ ಮುಂದಾಗಿದೆ ಎನ್ನುವ ಮಾಹಿತಿ ಸಿಕ್ಕಿದೆ. ಇದರಿಂದಾಗಿ ಪಕ್ಷದ ಸಚಿವರಿಗೆ ಹಾಗೂ ಸ್ಥಳೀಯ ಮುಖಂಡರಿಗೆ ದೇವೇಗೌಡ ಅವರು ಸಂದೇಶ ರವಾನೆ ಮಾಡಿದ್ದಾರೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ. ಇದನ್ನು ಓದಿ: ಮೈಸೂರಿನಲ್ಲಿ ಬಿಜೆಪಿ, ಜೆಡಿಎಸ್ ಮೈತ್ರಿ – ಸುಳಿವು ಬಿಟ್ಟುಕೊಟ್ಟ ಸಚಿವ ಸಾರಾ ಮಹೇಶ್

    ಬಿಜೆಪಿ ಜೊತೆಗೆ ಹೋಗುತ್ತೇವೆ ಅಂತಾ ಪರೋಕ್ಷವಾಗಿ ಯಾವತ್ತೂ ಹೇಳಕೂಡದು. ದೇಶದಲ್ಲಿ ತೃತೀಯ ರಂಗದ ರಾಜಕಾರಣ ಬಲವಾಗುತ್ತಿದೆ. ಈ ವೇಳೆ ಮೈತ್ರಿ ಧರ್ಮ ಮುರಿದರೆ ನನಗೆ ಕೆಟ್ಟ ಹೆಸರು ಬರುತ್ತದೆ. ಹೀಗಾಗಿ ಪಾಲಿಕೆ ಮೇಯರ್ ಗಿರಿಗಾಗಿ ರಾಷ್ಟ್ರಮಟ್ಟದಲ್ಲಿ ನನ್ನ ಮರ್ಯಾದೆ ಕಳೆಯಬೇಡಿ ಎಂದು ಸೂಚನೆ ನೀಡಿದ್ದಾರಂತೆ. ಇದನ್ನು ಓದಿ:  ಮೈಸೂರು ಮಹಾನಗರ ಪಾಲಿಕೆ ಅಧ್ಯಕ್ಷರ ಆಯ್ಕೆ – ಹಿಂದೆ ಸರಿದ್ರಾ ಸಿದ್ದರಾಮಯ್ಯ?

    ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತಿಗೆ ನಾನು ಒಪ್ಪಿದ್ದೇನೆ. ಕಾಂಗ್ರೆಸ್‍ಗೆ ಮೇಯರ್ ಸ್ಥಾನ ಬಿಟ್ಟು ಕೊಡಿ. ಈ ವಿಚಾರದಲ್ಲಿ ಯಾವುದೇ ಗೊಂದಲ ಉಂಟಾದರೂ ನಾನು ಸಹಿಸುವುದಿಲ್ಲ ಎಂದು ಎಚ್.ಡಿ.ದೇವೇಗೌಡ ಅವರು, ಮೈಸೂರಿನ ಇಬ್ಬರು ಸಚಿವರಾದ ಸಾರಾ ಮಹೇಶ್ ಹಾಗೂ ಜಿ.ಟಿ.ದೇವೇಗೌಡ ಅವರಿಗೆ ಖಡಕ್ ಸೂಚನೆ ರವಾನಿಸಿದ್ದಾರೆ ಎನ್ನಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ನಾನು ನನ್ನ ತಾಯಿ ಮಗ, ನೀನ್ಯಾರ ಮಗ: ಶ್ರೀನಿವಾಸ್ ವಿರುದ್ಧ ರೇಣುಕಾಚಾರ್ಯ ಕಿಡಿ

    ನಾನು ನನ್ನ ತಾಯಿ ಮಗ, ನೀನ್ಯಾರ ಮಗ: ಶ್ರೀನಿವಾಸ್ ವಿರುದ್ಧ ರೇಣುಕಾಚಾರ್ಯ ಕಿಡಿ

    -ಮಾಟಮಂತ್ರ ಮಾಡೋ ಎಚ್‍ಡಿಡಿ ಆಂಡ್ ಸನ್ಸ್ ಗೆ ಡಾಕ್ಟರೇಟ್ ಕೊಡ್ಬೇಕು

    ದಾವಣಗೆರೆ: ನಾನು ನನ್ನ ತಾಯಿ ಮಗ. ನೀನು ಯಾರ ಮಗ, ಮೇಲಿಂದ ಇಳಿದು ಬಂದಿದ್ದಿಯಾ ಅಥವಾ ನೀನು ದೇವರ ಮಗನಾ ಎಂದು ಏಕವಚದಲ್ಲಿಯೇ ಪ್ರಶ್ನಿಸಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಅವರು, ಜಿಲ್ಲಾ ಉಸ್ತುವರಿ ಸಚಿವ ಎಸ್.ಆರ್.ಶ್ರೀನಿವಾಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಚಿವರು, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ರೇಣುಕಾಚಾರ್ಯ ಮೇಲಿಂದ ಇಳಿದು ಬಂದಿಲ್ಲ ಅಂತಾ ಹೇಳುತ್ತೀರಿ. ನೀವು ಇಂತಹ ಪೌರುಷ ಹೇಳಿಕೆ ನೀಡುವುದನ್ನು ಬಿಡಬೇಕು ಎಂದು ತಿರುಗೇಟು ಕೊಟ್ಟ ಅವರು, ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಯ ಅಭಿವೃದ್ಧಿಗೆ ಇದ್ದೀರಾ? ಅಥವಾ ಮಜಾ ಮಾಡುವುದಕ್ಕೆ ಜಿಲ್ಲೆಗೆ ಬರುತ್ತೀರಾ ಎಂದು ಪ್ರಶ್ನಿಸಿ ಕಿಡಿಕಾರಿದರು.

    ನೀನು ಎಷ್ಟು ದಿನಾ ಜಿಲ್ಲಾ ಮಂತ್ರಿಯಾಗಿರುತ್ತಿಯಾ? ನಿಮ್ಮ ಸರ್ಕಾರ ಎಷ್ಟು ದಿನ ಅಧಿಕಾರದಲ್ಲಿ ಇರುತ್ತದೆ ಅಂತಾ ನಾನು ನೋಡುತ್ತೇನೆ. ಎಲ್ಲಾ ಜಿಲ್ಲಾ ಉಸ್ತುವಾರಿ ಸಚಿವರು ಯಾವ ಕ್ಷೇತ್ರದಲ್ಲಿ ಪರಿಶೀಲನಾ ಸಭೆ ಮಾಡಿದ್ದಿರಾ ತಿಳಿಸಿ ಎಂದು ಸವಾಲ್ ಹಾಕಿದ್ದಾರೆ.

    ಮರಳಿಗಾಗಿ ಪ್ರತಿಭಟನೆ:
    ತುಂಗಭದ್ರಾ ನದಿಯಲ್ಲಿ ನಾನೇ ಮುಂದೆ ನಿಂತು ಮರಳನ್ನು ಜನರಿಗೆ ನಾಳೆ ವಿತರಿಸುತ್ತೇನೆ. ಅನಿವಾರ್ಯವಾಗಿ ಜನರಿಗೋಸ್ಕರ ಕಾನೂನು ಉಲ್ಲಂಘನೆ ಮಾಡುತ್ತಿದ್ದೇನೆ. ಮರಳು ನ್ಯಾಯಯುತವಾಗಿ ಸಿಗುವರೆಗೂ ಹೊಳೆಯಲ್ಲಿ ಮಲಗುತ್ತೇನೆ. ತಾಕತ್ತಿದ್ದರೆ ನನ್ನನ್ನು ತಡೆಯಿರಿ, ನಾನು ಜೈಲಿಗೆ ಹೋಗಲು ಸಹ ಸಿದ್ಧ ಎಂದು ಕಿಡಿಕಾರಿದರು.

    ಇದೇ ವೇಳೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೆಗೌಡ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅವರು ವಿರುದ್ಧ ಕಿಡಿಕಾರಿದ ರೇಣುಕಾಚಾರ್ಯ ಅವರು, ದೇವಸ್ಥಾನಗಳಿಗೆ ಭೇಟಿ ನೀಡುವುದು, ಜೋತಿಷ್ಯ, ನಿಂಬೆಹಣ್ಣು, ಮಾಟಮಂತ್ರ ಮಾಡುವ ದೇವೆಗೌಡ ಆಂಡ್ ಸನ್ಸ್ ಗೆ ಡಾಕ್ಟರೇಟ್ ಕೊಡಬೇಕು ಎಂದು ವ್ಯಂಗ್ಯವಾಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಟಿಪ್ಪು ಜಯಂತಿ ಮಾಡಬೇಕಂತಾ ಹೇಳಿ ಎಚ್‍ಡಿಕೆ ಓಡಿಹೋದ್ರು: ಗೋ.ಮಧುಸೂಧನ್ ವ್ಯಂಗ್ಯ

    ಟಿಪ್ಪು ಜಯಂತಿ ಮಾಡಬೇಕಂತಾ ಹೇಳಿ ಎಚ್‍ಡಿಕೆ ಓಡಿಹೋದ್ರು: ಗೋ.ಮಧುಸೂಧನ್ ವ್ಯಂಗ್ಯ

    ಮೈಸೂರು: ಟಿಪ್ಪು ಜಯಂತಿ ಮಾಡಬೇಕು ಅಂತಾ ಹೇಳಿದವರು ನೀವೇ. ಈಗ ಓಡಿಹೋಗಿರುವವರು ನೀವೇ. ನಿಮ್ಮ ಎರಡು ನಾಲಿಗೆ ಬುದ್ಧಿಯನ್ನು ಜನ ನಂಬಬೇಕಾ ಕುಮಾರಸ್ವಾಮಿ ಅವರೇ ಎಂದು ಗೋ.ಮಧುಸೂಧನ್ ಪ್ರಶ್ನಿಸಿ ಕಿಡಿಕಾರಿದ್ದಾರೆ.

    ಮೈಸೂರಿನಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರಿಗೆ ಟಿಪ್ಪು ಜಯಂತಿ ಬೇಕಿಲ್ಲ. ಹೀಗಾಗಿ ಟಿಪ್ಪು ಜಯಂತಿ ಕಾರ್ಯಕ್ರಮದಿಂದ ಹಿಂದೆ ಸರಿದಿದ್ದಾರೆ. ಕಾಂಗ್ರೆಸ್‍ನವರ ಜೊತೆಗೆ ಜೆಡಿಎಸ್ ಆಡಳಿತ ನಡೆಸುತ್ತಿದೆ. ಹೀಗಾಗಿ ಕೈ ನಾಯಕರ ನಿಲುವಿಗೆ ವಿರೋಧ ವ್ಯಕ್ತಪಡಿಸಲು ಎಚ್.ಡಿ.ಕುಮಾರಸ್ವಾಮಿ ಅವರಿಗೆ ಆಗುತ್ತಿಲ್ಲ. ಇದು ಜೆಡಿಎಸ್ ಕರ್ಮ. ಹೀಗಾಗಿ ಜೆಡಿಎಸ್ ಯಾವಾಗಲೂ ಡಬಲ್ ಸ್ಟ್ಯಾಂಡ್ ಕಾಯ್ದುಕೊಳ್ಳುತ್ತದೆ ಎಂದು ಆರೋಪಿಸಿದರು.

    ಹೆತ್ತವರಿಗೆ ಹೆಗ್ಗಣ್ಣ ಮುದ್ದು ಎನ್ನುವಂತೆ ಜೆಡಿಎಸ್‍ಗೆ ಈಗ ಕಾಂಗ್ರೆಸ್ ಮುದ್ದಾಗಿದೆ ಅಷ್ಟೇ. ದೇಶ ಮುಸ್ಲಿಂ ಗುಲಾಮಗಿರಿಯಿಂದ ಹೊರಬರುತ್ತಿದೆ. ಆದರೆ ಕರ್ನಾಟಕದಲ್ಲಿ ಮಾತ್ರ ಹಿಂದೂ ವಿರೋಧಿ ಟಿಪ್ಪು ಜಯಂತಿ ಮಾಡಲಾಗುತ್ತಿದೆ. ಟಿಪ್ಪು ಒಬ್ಬ ಮತಾಂಧ ಹಾಗೂ ಇಂತವನ ಜಯಂತಿಗೆ ಹೋದರೆ ನನಗೂ ಏನೋ ಕಾದಿದೆ ಅಂತಾ ಕುಮಾರಸ್ವಾಮಿ ಅವರಿಗೆ ಗೊತ್ತು. ಅದೇ ಕಾರಣಕ್ಕೆ ಜಯಂತಿಗೆ ಹೋಗಿಲ್ಲ ಎಂದು ಕುಟುಕಿದರು.

    ಮೈಸೂರಿನಲ್ಲಿನ ನಜ್ಹರ್ ಬಾದ್ ಹೆಸರನ್ನು ಬದಲಾಯಿಸಬೇಕು. ಇದು ಟಿಪ್ಪು ಇಟ್ಟ ಹೆಸರಾಗಿದ್ದು, ಮೂಲ ಹೆಸರನ್ನು ಇಡಬೇಕು ಎಂದು ಒತ್ತಾಯಿಸಿದ ಅವರು, ಟಿಪ್ಪು ಸುಲ್ತಾನ್ ಅಲ್ಲ. ಆತ ಸುಲ್ತಾನ್ ಆಗಬೇಕು ಅಂತಾ ಆಸೆ ಪಟ್ಟಿದ್ದ ಅಷ್ಟೇ. ಅದು ಆಗಲಿಲ್ಲ. ಆತ ಬರೀ ಟಿಪ್ಪು, ಮೈಸೂರು ಹುಲಿಯೂ ಅಲ್ಲ. ಇಲಿಯೂ ಅಲ್ಲ ಎಂದು ವಾಗ್ದಾಳಿ ನಡೆಸಿದರು.

    ಇದೇ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ ಅವರು, ಟಿಪ್ಪು ಜಯಂತಿ ಜಾರಿಗೆ ತಂದಿದ್ದಕ್ಕೆ ಸಿದ್ದರಾಮಯ್ಯ ಚಾಮುಂಡೇಶ್ವರಿಯಲ್ಲಿ ಸೋತರು. ಮಾಡಬಾರದ್ದು ಮಾಡಿದರೆ ಆಗಬಾರದ್ದು ಆಗುತ್ತೆ ಎನ್ನುವುದಕ್ಕೆ ಮಾಜಿ ಸಿಎಂ ಉದಾಹರಣೆ. ಅವರು ಸಿದ್ದರಾಮಯ್ಯ ಅಲ್ಲ. ಸಿದ್ದುಖಾನ್ ಎಂದು ವ್ಯಂಗ್ಯವಾಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ದೇವೆಗೌಡ್ರು ಮಣ್ಣಿನ ಮಗನಾದ್ರೆ ನೀವೆಲ್ಲಾ ಕಲ್ಲಿನ ಮಕ್ಕಳೇ: ರೈತರಿಗೆ ಈಶ್ವರಪ್ಪ ಪ್ರಶ್ನೆ

    ದೇವೆಗೌಡ್ರು ಮಣ್ಣಿನ ಮಗನಾದ್ರೆ ನೀವೆಲ್ಲಾ ಕಲ್ಲಿನ ಮಕ್ಕಳೇ: ರೈತರಿಗೆ ಈಶ್ವರಪ್ಪ ಪ್ರಶ್ನೆ

    ಬಾಗಲಕೋಟೆ: ಜೆಡಿಎಸ್ ವರಿಷ್ಠ ದೇವೆಗೌಡ ಅವರು ಮಣ್ಣಿನ ಮಗ ಅಂತ ಹೇಳುತ್ತಾರೆ. ಹಾಗಾದರೆ ನೀವೆಲ್ಲಾ ಕಲ್ಲಿನ ಮಕ್ಕಳಾ ಎಂದು ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಅವರು ಗ್ರಾಮಸ್ಥರನ್ನು ಪ್ರಶ್ನಿಸಿದ್ದಾರೆ.

    ಜಮಖಂಡಿ ಉಪಚುನಾವಣೆ ಹಿನ್ನೆಲೆಯಲ್ಲಿ ಕೊಣ್ಣೂರು ಗ್ರಾಮದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಯಾರು ಮಣ್ಣಿನ ಮಗನೋ? ಏನೋ ಆ ಭಗವಂತನಿಗೆ ಗೊತ್ತು ಎಂದು ಲೇವಡಿ ಮಾಡಿದರು. ಸಿದ್ದರಾಮಯ್ಯ ಅವರಂತ ಕೆಟ್ಟ ಮುಖ್ಯಮಂತ್ರಿಯನ್ನು ನಾನು ನೋಡಿಲ್ಲ ಅಂತಾ ದೇವೇಗೌಡರು ವ್ಯಂಗ್ಯವಾಡಿದ್ದರು. ಆದರೆ ಈಗ ಸಿದ್ದರಾಮಯ್ಯ ಮತ್ತು ದೇವೇಗೌಡರು ಒಂದಾಗಿದ್ದಾರೆ ಎಂದರು.

    ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಬೆಂಬಲ ನೀಡಿ, ಸಮಾಜ ಒಡೆಯುವ ಕೆಲಸವನ್ನು ಕಾಂಗ್ರೆಸ್ ಮಾಡಿತ್ತು. ಹೀಗಾಗಿ ಅದರ ಪರಿಣಾಮವನ್ನು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅನುನಭವಿಸಿದರು ಎಂದು ಆರೋಪಿಸಿದರು.

    ಮೋದಿ ಮತ್ತೆ ಪ್ರಧಾನಿ:
    ಸೂರ್ಯ ಚಂದ್ರ ಇರುವುದು ಎಷ್ಟು ಸತ್ಯವೋ, ನರೇಂದ್ರ ಮೋದಿ ಅವರು ಪುನಃ ಪ್ರಧಾನಿಯಾಗುವುದು ಅಷ್ಟೇ ಸತ್ಯ. ದೈವ ಭಕ್ತಿ, ಹೆಣ್ಣು ಮಕ್ಕಳ ಕಾಳಜಿ, ಗೋವುಗಳ ಪ್ರೀತಿಯನ್ನು ನರೇಂದ್ರ ಮೋದಿ ಹೊಂದಿದ್ದಾರೆ. ಪ್ರಧಾನಿ ಬಗ್ಗೆ ಲೋಕಸಭೆಯ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಕಾಂಗ್ರೆಸ್‍ನಲ್ಲಿ ಹೆಸರಿಗೆ ಮಾತ್ರ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸ್ಥಾನಮಾನ ಸಿಕ್ಕಿದೆ ಎಂದು ತಿರುಗೇಟು ಕೊಟ್ಟರು.

    ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಮೌನ, ಮೌನಿಬಾಬಾ ಅಂತ ದೇಶದ ಜನರು ಕರೆಯುತ್ತಿದ್ದರು. ಪಾಕಿಸ್ತಾನ ಯೋಧರು ನಮ್ಮ ಯೋಧರ ಜೀವ ತೆಗೆದರೂ ಅವರು ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಆದರೆ ನರೇಂದ್ರ ಮೋದಿ ಪ್ರಧಾನಿ ಆಗುತ್ತಿದ್ದಂತೆ, ಯೋಧರ ಬಗ್ಗೆ ಹೆಚ್ಚು ಕಾಳಜಿ ವಹಿಸಿ ಪಾಕಿಸ್ತಾನ ಯೋಧರಿಗೆ ಬಿಸಿ ಮುಟ್ಟಿಸಿದರು ಎಂದರು.

    ಬಿ.ಎಸ್.ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಹಾಗೂ ಸದಾನಂದಗೌಡ ಅವರು ಮುಖ್ಯಮಂತ್ರಿಯಾಗಿದ್ದಾಗ ಕಾಗಿಲೆನೆಯ ನಾಲ್ಕು ಪೀಠದ ಶ್ರೀಗಳ ನೇತೃತ್ವದಲ್ಲಿ ಸಭೆ ನಡೆಸಲಾಗಿತ್ತು. ಆಗ ಪ್ರತಿ ಮಠಕ್ಕೂ 4 ಕೋಟಿ ರೂ. ಹಣ ನೀಡಲು ನಿರ್ಧಾರ ಮಾಡಲಾಗಿತ್ತು. ಆದರೆ ಕಾಂಗ್ರೆಸ್‍ನವರು ಹಣವನ್ನು ನೀಡಲೇ ಇಲ್ಲ. ಕನಕದಾಸ ಜಯಂತಿಗೆ ಸರ್ಕಾರಿ ರಜೆ ಘೋಷಿಸಿದ್ದು ಬಿ.ಎಸ್.ಯಡಿಯೂರಪ್ಪನವರು. ಕುರುಬರು ನಮಗೆ ವೋಟ್ ಹಾಕುತ್ತಾರೆ ಅಂತಾ ಕಾಂಗ್ರೆಸ್‍ನವರು ಹೇಳಿಕೊಳ್ಳುತ್ತಿದ್ದಾರೆ. ಆದರೆ ನೀವು ಸೇರಿದ ಸಂಖ್ಯೆ ನೋಡಿದರೆ ಅದೆಲ್ಲ ಸುಳ್ಳು ಅಂತಾ ಅನಿಸುತ್ತದೆ ಎಂದು ಸಭೆಯಲ್ಲಿ ಸೇರಿದ್ದ ಜನರನ್ನು ಮೆಚ್ಚಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv