Tag: H.C Balakrishna

  • ನಾಗಮಂಗಲದ ಘಟನೆ ಕಿಡಿಗೇಡಿಗಳ ಕೆಲಸ, ಹೆಚ್‌ಡಿಕೆ ಕಡ್ಡಿ ಗೀರುವುದು ಬೇಡ: ಬಾಲಕೃಷ್ಣ

    ನಾಗಮಂಗಲದ ಘಟನೆ ಕಿಡಿಗೇಡಿಗಳ ಕೆಲಸ, ಹೆಚ್‌ಡಿಕೆ ಕಡ್ಡಿ ಗೀರುವುದು ಬೇಡ: ಬಾಲಕೃಷ್ಣ

    ಬೆಂಗಳೂರು: ಎಲ್ಲಾ ಧರ್ಮದಲ್ಲೂ ಕಿಡಿಗೇಡಿಗಳು ಇದ್ದಾರೆ. ನಾಗಮಂಗಲದ ಘಟನೆಗೆ (Nagamangala Violence) ಅಂತಹ ಕಿಡಿಗೇಡಿಗಳೇ ಕಾರಣ ಎಂದು ಮಾಗಡಿ ಶಾಸಕ ಬಾಲಕೃಷ್ಣ (H.C Balakrishna) ಹೇಳಿದ್ದಾರೆ.

    ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಗಮಂಗಲದ್ದು ಒಳ್ಳೆಯ ಬೆಳವಣಿಗೆ ಅಲ್ಲ. ಒಂದು ಧರ್ಮದ ಕೆಲಸ ಆಗುವಾಗ ಇನ್ನೊಂದು ಧರ್ಮದವರು ಅಡ್ಡಿಪಡಿಸುವುದು ಸರಿಯಲ್ಲ. ಕಿಡಿಗೇಡಿಗಳಿಂದ ಧರ್ಮ ಧರ್ಮದ ನಡುವೆ ಗದ್ದಲ ಆಗುತ್ತದೆ. ದ್ವೇಷ ಭಾವನೆ ಬಿತ್ತದ ರೀತಿ ನಾವೆಲ್ಲ ಇರಬೇಕು. ತಪ್ಪು ಯಾರೇ ಮಾಡಿದರೂ ಕೂಡ ಶಿಕ್ಷೆ ಆಗುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ದುರುಳರು ಯಾವುದೇ ಧರ್ಮದವರಾಗಿರಲಿ ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ: ಸಿಎಂ

    ಯಾವ ಧರ್ಮದವರು ತಪ್ಪು ಮಾಡಿದರೂ ಕೂಡ ತಪ್ಪೇ. ಇಂಥಹ ಘಟನೆ ಆಗಬಾರದಿತ್ತು, ಆಗಿದ್ದು ವಿಷಾದಕರ, ನಾವ್ಯಾರು ಇಂಥಹ ಘಟನೆ ನಿರೀಕ್ಷೆ ಮಾಡಿರಲಿಲ್ಲ ಎಂದು ಹೇಳಿದ್ದಾರೆ.

    ಕುಮಾರಸ್ವಾಮಿ (H.D Kumaraswamy)ಬಿಜೆಪಿ ಜೊತೆಗೆ ಸೇರಿಕೊಂಡಿದ್ದಾರೆ. ಈಗ ಅವರು ಬೆಂಕಿ ಹೊತ್ತಿಕೊಂಡ ಶೆಡ್‌ನಲ್ಲಿ ಕಡ್ಡಿ ಗೀರುವುದು ಬೇಡ. ಹಿಂದೆ ಇದೇ ಕುಮಾರಸ್ವಾಮಿ ಮುಸ್ಲೀಮರನ್ನು ಓಲೈಸಿರಲಿಲ್ವಾ? ಅವರು ಮಾಜಿ ಸಿಎಂ ಆದವರು ಗೌರವಯುತ ಹೇಳಿಕೆ ಕೊಡಲಿ. ಇಂಥಹ ಸಂದರ್ಭದಲ್ಲಿ ಪ್ರಚೋದನಾತ್ಮಕ ಹೇಳಿಕೆ ಕೊಡುವುದು ಒಳ್ಳೆಯದಲ್ಲ. ಗೌರವಯುತವಾಗಿ ಮಾತನಾಡಲಿ. ಇಲ್ಲಿ ಬೇಳೆ ಬೆಯಿಸಿಕೊಳ್ಳೋದು ಬೇಡ ಎಂದು ಕುಟುಕಿದ್ದಾರೆ.

    ಬಿಜೆಪಿಯವರು ಇಂಥಹ ಘಟನೆ ಆಗಲಿ ಎಂದು ಕಾಯ್ತಾ ಇದ್ದಾರೆ. ಎಲ್ಲದಕ್ಕೂ ಸರ್ಕಾರವೇ ಕಾರಣ ಎನ್ನುತ್ತಾರೆ. ಸರ್ಕಾರದ ಒಳ್ಳೆಯ ಕೆಲಸಗಳು ಅವರಿಗೆ ಕಾಣೋದಿಲ್ಲ. ಎಲ್ಲದಕ್ಕೂ ಸರ್ಕಾರವೇ ಹೊಣೆ ಹೊರುತ್ತದೆ ಎಂದಿದ್ದಾರೆ. ಇದನ್ನೂ ಓದಿ: ನಮಾಜ್ ವೇಳೆ ಎಲ್ಲಾ ಮಂದಿರಗಳ ಮೈಕ್ ಬಂದ್ ಆಗ್ಬೇಕು – ಬಾಂಗ್ಲಾ ಸರ್ಕಾರ ಆದೇಶ

  • ಈಗ ನಡೆಯುವುದು ಗ್ಯಾರಂಟಿ ಬೇಕಾ? ಬೇಡವಾ? ಎನ್ನುವ ಚುನಾವಣೆ: ಹೆಚ್.ಸಿ.ಬಾಲಕೃಷ್ಣ

    ಈಗ ನಡೆಯುವುದು ಗ್ಯಾರಂಟಿ ಬೇಕಾ? ಬೇಡವಾ? ಎನ್ನುವ ಚುನಾವಣೆ: ಹೆಚ್.ಸಿ.ಬಾಲಕೃಷ್ಣ

    ರಾಮನಗರ: ನಮ್ಮ ಸರ್ಕಾರದ 2,000 ರೂ. ಗ್ಯಾರಂಟಿ ದುಡ್ಡು ಬರ್ತಿದೆ ತಾನೆ. ಮೋದಿ ನಿಮ್ಮ ಖಾತೆಗೆ ಹಣ ಹಾಕ್ತೀನಿ ಎಂದಿದ್ರಲ್ಲ ಬರ್ತಿದಿಯಾ? 15 ಲಕ್ಷ ರೂ. ಹಣ ಕೊಡ್ತೀನಿ ಎಂದ್ರಲ್ಲಾ 15 ರೂ. ಕೊಟ್ರಾ ಎಂದು ಮಾಗಡಿ ಶಾಸಕ ಹೆಚ್.ಸಿ.ಬಾಲಕೃಷ್ಣ (H.C Balakrishna) ಅವರು ಬಿಜೆಪಿ (BJP) ವಿರುದ್ಧ ಕಿಡಿಕಾರಿದ್ದಾರೆ.

    ಬಿಡದಿಯ ಅವರಗೆರೆಯಲ್ಲಿ ಗೃಹಲಕ್ಷ್ಮೀ ಸಮಾವೇಶದಲ್ಲಿ ಮಾತನಾಡಿದ ಅವರು, ಈಗ ನಡೆಯಲಿರುವ ಚುನಾವಣೆ (Lok Sabha Election 2024) ಗ್ಯಾರಂಟಿ ಬೇಕಾ? ಬೇಡವಾ? ಎನ್ನುವ ಚುನಾವಣೆ. ಹೆಚ್.ಡಿ.ಕುಮಾರಸ್ವಾಮಿ (H.D Kumaraswamy), ಅಮಿತ್ ಶಾ ಅವರ ಬಳಿ ಹೋಗಿ ನಾವು ಹೆಚ್ಚು ಸ್ಥಾನ ಗೆದ್ದು ಗ್ಯಾರಂಟಿ ನಿಲ್ಲಿಸದಿದ್ದರೆ ಮುಂದಿನ 9 ವರ್ಷ ಕಾಂಗ್ರೆಸ್ ಸರ್ಕಾರ ಅಲುಗಾಡಿಸಲು ಆಗಲ್ಲ ಎಂದಿದ್ದಾರೆ. ಅವರಿಗೆ ಗ್ಯಾರಂಟಿ ಮೇಲೆ ಎಷ್ಟು ಭಯ ಇದೆ ನೋಡಿ. ಇದು ಶ್ರೀಮಂತರ ಸರ್ಕಾರ ಅಲ್ಲ ಬಡವರ ಸರ್ಕಾರ. ಅದಕ್ಕಾಗಿ ನಿಮಗೆ ಗ್ಯಾರಂಟಿ ಕೊಡ್ತಿರೋದು. ಗ್ಯಾರಂಟಿ ಮುಂದುವರಿಸಿ ಅನ್ನೋದಾದ್ರೆ ಲೋಕಸಭೆಯಲ್ಲೂ ನಮಗೆ ಆಶೀರ್ವಾದ ಮಾಡಬೇಕು ಎಂದಿದ್ದಾರೆ. ಇದನ್ನೂ ಓದಿ: ರಾಜ್ಯಕ್ಕೆ ಆದ ಅನ್ಯಾಯ ಕೇಳಿದ್ರೆ ಗುಂಡಿಕ್ಕಿ ಅಂತಾರೆ, ನಾಡಿಗೋಸ್ಕರ ನನ್ನ ದೇಹ ಕೊಡಲು ಸಿದ್ಧ: ಡಿ.ಕೆ.ಸುರೇಶ್

    ಗ್ಯಾರಂಟಿ ಕೊಡ್ತೀರಾ ನಿಮ್ಮ ಕೈಯಲ್ಲಿ ಆಗುತ್ತಾ? ಎಂದು ಬಿಜೆಪಿ-ಜೆಡಿಎಸ್‍ನವರು ಕೇಳಿದ್ದರು. ಆಗ ಸಿದ್ದರಾಮಯ್ಯ ಹಾಗೂ ಡಿಕೆಶಿ ತಮ್ಮ ಸಹಿ ಮಾಡಿದ ಗ್ಯಾರಂಟಿ ಕಾರ್ಡ್ ಹಂಚಿದ್ದರು. ಅದರಂತೆ ನಾವು ಗ್ಯಾರಂಟಿ ಅನುಷ್ಠಾನಕ್ಕೆ ತಂದಿದ್ದೇವೆ. ಕೇಂದ್ರದವರನ್ನ ಅಕ್ಕಿ ಕೊಡಿ ಎಂದರೆ ಕೊಡಲಿಲ್ಲ. ಬಿಜೆಪಿಯವರು ಹಾಗೂ ಕುಮಾರಸ್ವಾಮಿ ಹೋಗಿ ಅಕ್ಕಿ ಕೊಡಬೇಡಿ ಎಂದಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

    ಡಿ.ಕೆ ಸುರೇಶ್ ಕ್ರಿಯಾಶೀಲ ಸಂಸದರು, ಈ ಬಾರಿ ಎಲ್ಲರೂ ಡಿ.ಕೆ.ಸುರೇಶ್ ಅವರಿಗೆ ಆಶೀರ್ವಾದ ಮಾಡಬೇಕು. ನೀವು ಆಶೀರ್ವಾದ ಮಾಡಿದ್ರೆ ಲೋಕಸಭೆಯಲ್ಲೂ ನಾವೇ ಗೆಲ್ತೀವಿ. ಗ್ಯಾರಂಟಿ ಮುಂದುವರೆಸ್ತೀವಿ. ಬಿಜೆಪಿ-ಜೆಡಿಎಸ್‍ನವರಿಗೆ ತಾಕತ್ತಿದ್ರೆ ನಿಮ್ಮ ಕಾರ್ಯಕರ್ತರಿಗೆ ಗ್ಯಾರಂಟಿ ತಿರಸ್ಕಾರ ಮಾಡಿ ಎಂದು ಹೇಳುವಂತೆ ಸವಾಲ್ ಹಾಕಿದ್ದಾರೆ. ಇದನ್ನೂ ಓದಿ: ಬಾಗಲಕೋಟೆಯ ಜನಪದ ಕಲಾವಿದ ವೆಂಕಪ್ಪ ಅಂಬಾಜಿಯವರನ್ನು ಶ್ಲಾಘಿಸಿದ ಪ್ರಧಾನಿ ಮೋದಿ

  • ಗಂಡಸರು ಎಂದು ಹೇಳಿಕೊಳ್ಳೋ ಬಿಜೆಪಿಯವ್ರು ಭದ್ರಾ ಮೇಲ್ದಂಡೆ ಯೋಜನೆಗೆ ಹಣ ಬಿಡುಗಡೆ ಮಾಡಿಸಿ: ಹೆಚ್.ಸಿ ಬಾಲಕೃಷ್ಣ

    ಗಂಡಸರು ಎಂದು ಹೇಳಿಕೊಳ್ಳೋ ಬಿಜೆಪಿಯವ್ರು ಭದ್ರಾ ಮೇಲ್ದಂಡೆ ಯೋಜನೆಗೆ ಹಣ ಬಿಡುಗಡೆ ಮಾಡಿಸಿ: ಹೆಚ್.ಸಿ ಬಾಲಕೃಷ್ಣ

    ರಾಮನಗರ: ಮಾತೆತ್ತಿದರೆ ನಾವು ಗಂಡಸರು ಎಂದು ಹೇಳಿಕೊಳ್ಳುವ ಬಿಜೆಪಿಯವರು (BJP) ಭದ್ರಾ ಮೇಲ್ದಂಡೆ ಯೋಜನೆಗೆ ನಿರ್ಮಲಾ ಸೀತಾರಾಮನ್ ಬಳಿ ಹಣ ಬಿಡುಗಡೆ ಮಾಡಿಸಿಕೊಂಡು ಬನ್ನಿ ಎಂದು ಬಿಜೆಪಿಗರಿಗೆ ಶಾಸಕ ಹೆಚ್.ಸಿ ಬಾಲಕೃಷ್ಣ (H.C Balakrishna) ಸವಾಲು ಹಾಕಿದ್ದಾರೆ.

    ಮಾಗಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಲೆಗಳಲ್ಲಿ ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬಾ ಎಂಬ ಬರಹ ಬದಲಾಯಿಸುವ ವಿಚಾರ ಕುರಿತು ಮಾತನಾಡಿದರು. ಧೈರ್ಯವಾಗಿ ಪ್ರಶ್ನಿಸಿ ಎಂದು ಬರೆದಿರೋದ್ರಲ್ಲಿ ಏನು ತಪ್ಪಿದೆ? ವಿಚಾರ ಮಾಡೋಕೆ ಬೇಕಾದಷ್ಟಿದೆ. ಅದು ಬಿಟ್ಟು ಬಿಜೆಪಿಯವರು ಇದನ್ನ ಹಿಡಿದುಕೊಂಡು ಅಳ್ಳಾಡಿಸುತ್ತಿದ್ದಾರೆ. ಈ ವಿಚಾರದಲ್ಲಿ ಯಾರಿಗೂ ಅವಮಾನ ಮಾಡಬೇಕು ಎನ್ನುವ ಉದ್ದೇಶ ಇಲ್ಲ ಎಂದಿದ್ದಾರೆ. ಇದನ್ನೂ ಓದಿ: ಬಿಜೆಪಿ-ಜೆಡಿಎಸ್ ಮೈತ್ರಿಯನ್ನು ಮತದಾರ ಒಪ್ಪಿಲ್ಲ: ಸಿದ್ದರಾಮಯ್ಯ

    ಶಾಲೆಗಳಲ್ಲಿ ಬರಹದ ವಿಚಾರ ಸರ್ಕಾರದ ಆದೇಶ ಕೂಡಾ ಅಲ್ಲ. ಸ್ಥಳೀಯವಾಗಿ ಏನೋ ಮಾಡಿಕೊಂಡಿದ್ದಾರೆ ಅಷ್ಟೇ. ಇದರಲ್ಲೂ ರಾಜಕೀಯ ಮಾಡುತ್ತಿದ್ದಾರೆ. ಈ ವಿಚಾರದಲ್ಲಿ ತಪ್ಪಾಗಿದ್ರೆ ಸರ್ಕಾರ ಕ್ರಮ ತೆಗೆದುಕೊಳ್ಳಲಿದೆ. ಮಂತ್ರಿಗಳೇನು ಆದೇಶ ಮಾಡಿಲ್ಲ. ಅಸಲಿಗೆ ಇದು ವಿಚಾರವೇ ಅಲ್ಲ. ಬಿಜೆಪಿಯವರಿಗೆ ಮಾಡಲು ಕೆಲಸ ಇಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಹಿರಿಯ ಐಪಿಎಸ್ ಅಧಿಕಾರಿ ಪ್ರತಾಪ್ ರೆಡ್ಡಿ ಸ್ವಯಂ ನಿವೃತ್ತಿ ಘೋಷಣೆ

  • ಪಕ್ಷದ ಚಿಹ್ನೆಯ ಕಾರ್ಡ್ ಕೊಟ್ಟಿದ್ದೇವೆ, ಗಿಫ್ಟ್ ಕೊಡ್ತೀವಿ ಎಂದಿಲ್ಲ: ಹೆಚ್.ಸಿ.ಬಾಲಕೃಷ್ಣ

    ಪಕ್ಷದ ಚಿಹ್ನೆಯ ಕಾರ್ಡ್ ಕೊಟ್ಟಿದ್ದೇವೆ, ಗಿಫ್ಟ್ ಕೊಡ್ತೀವಿ ಎಂದಿಲ್ಲ: ಹೆಚ್.ಸಿ.ಬಾಲಕೃಷ್ಣ

    ರಾಮನಗರ: ಮಾಗಡಿಯಲ್ಲಿ ಹಾಲಿ-ಮಾಜಿ ಶಾಸಕರ ಜಟಾಪಟಿ ಮುಂದುವರಿದಿದ್ದು, ಕಾಂಗ್ರೆಸ್ ಗಿಫ್ಟ್ ಕಾರ್ಡ್ ಪಾಲಿಟಿಕ್ಸ್‍ಗೆ ಕೌಂಟರ್ ಕೊಟ್ಟಿದ್ದ ಬಿಜೆಪಿ-ಜೆಡಿಎಸ್ (JDS, BJP) ನಾಯಕರಿಗೆ ಮಾಗಡಿ ಶಾಸಕ ಹೆಚ್.ಸಿ ಬಾಲಕೃಷ್ಣ (H.C Balakrishna) ತಿರುಗೇಟು ಕೊಟ್ಟಿದ್ದಾರೆ.

    ಮಾಗಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಕಾರ್ಡ್‍ಗಳನ್ನು ಕೊಟ್ಟಿರೋದು ಮತ ಹಾಕಲು ಕ್ರಮ ಸಂಖ್ಯೆ ನೋಡಿಕೊಳ್ಳುವುದಕ್ಕೆ. ಮತ ಹಾಕುವ ವೇಳೆ ಪಾಂಪ್ಲೆಟ್ ಇಟ್ಟುಕೊಂಡು ಹೋಗಲು ಆಗುವುದಿಲ್ಲ. ಹೀಗಾಗಿ ನಮ್ಮ ಕ್ರಮ ಸಂಖ್ಯೆಗೆ ಮತ ಹಾಕಲು ಕಾರ್ಡ್ ನೀಡಿದ್ದೆವು ಎಂದಿದ್ದಾರೆ. ಅಲ್ಲದೇ ಈ ವೇಳೆ ಮಾಜಿ ಶಾಸಕ ಎ.ಮಂಜುನಾಥ್‍ರನ್ನು (A.Manjunath) ಮಾಮ ಎಂದು ವ್ಯಂಗ್ಯ ಮಾಡಿದ್ದಾರೆ. ಇದನ್ನೂ ಓದಿ: ಎಸ್ಸಿ, ಎಸ್ಟಿಗಳಿಗೆ ಅವಕಾಶ ಸೃಷ್ಟಿಸದ ಕಾಂಗ್ರೆಸ್ ದಲಿತ ದ್ರೋಹಿ ಪಕ್ಷ: ಜೋಶಿ ವಾಗ್ದಾಳಿ

    ನಾನು ಪಕ್ಷ ಬದಲಾವಣೆ ಮಾಡಿದಾಗ ಜನರಿಗೆ ಚಿಹ್ನೆಯ ಗೊಂದಲ ಆಗುತ್ತದೆ, ಅದಕ್ಕಾಗಿ ನಾವು ನಮ್ಮ ಪಕ್ಷದ ಚಿಹ್ನೆಯ ಕಾರ್ಡ್ ಕೊಟ್ಟಿದ್ದೇವೆ. ನಾವು ಗಿಫ್ಟ್ ಕೊಡ್ತೀವಿ ಎಂದು ಎಲ್ಲೂ ಹೇಳಿಲ್ಲ. ಮಾಜಿ ಶಾಸಕ ಮಂಜುನಾಥ್ ಮೊದಲು ಜನರ ಬಳಿ ಪಡೆದಿರೋ ಹಣ ವಾಪಸ್ ಕೊಡಲಿ. ಆ ಮೇಲೆ ಗಿಫ್ಟ್ ಕೊಡಲು ಹೇಳಿ. ಒಬ್ಬ ಹೆಣ್ಣು ಮಗಳು ದಿನ ಮಂಜು ಮನೆ ಮುಂದೆ ಹೋಗಿ ಕಣ್ಣೀರು ಹಾಕುತ್ತಾಳೆ. ಮಂಜು ಮೊದಲು ಅವರ ನಡವಳಿಕೆ ಸರಿ ಮಾಡಿಕೊಳ್ಳಲಿ. ಜನರನ್ನ ಮುಂಡಾಯಿಸುವುದನ್ನ ಬಿಡಲಿ ಎಂದು ತಿರುಗೇಟು ಕೊಟ್ಟಿದ್ದಾರೆ.

    ಮತ್ತೊಬ್ಬ ಬಿಜೆಪಿ ಮುಖಂಡ ಜನರಿಗೆ ಸೈಟ್ ಕೊಡ್ತೀನಿ ಎಂದು ಯಾಮಾರಿಸಿದ್ದಾನೆ. ಸೈಟ್ ಕೊಡ್ತೀವಿ ಅಂತ ಬೋಗಸ್ ಮಾಡಿದ್ದಾನೆ. ಆತ ನಮ್ಮ ಬಗ್ಗೆ ಮಾತನಾಡ್ತಿದ್ದಾನೆ ಎಂದು ಬಿಜೆಪಿ-ಜೆಡಿಎಸ್ ನಾಯಕರಿಗೆ ಟಾಂಗ್ ನೀಡಿದ್ದಾರೆ. ಇದನ್ನೂ ಓದಿ: ಪಶ್ವಿಮ ಬಂಗಾಳದಲ್ಲಿ ಬಿಜೆಪಿ V/S ಪೊಲೀಸ್ ಸಂಘರ್ಷ- ರಾಜ್ಯಾಧ್ಯಕ್ಷ ಸುಕಾಂತ್ ಅಸ್ವಸ್ಥ

  • ಗ್ಯಾರಂಟಿ ರದ್ದು ಹೇಳಿಕೆ; ‘ಕೈ’ ಶಾಸಕನ ವಿರುದ್ಧ ಚುನಾವಣಾ ಆಯೋಗಕ್ಕೆ ಜೆಡಿಎಸ್‌ ದೂರು

    ಗ್ಯಾರಂಟಿ ರದ್ದು ಹೇಳಿಕೆ; ‘ಕೈ’ ಶಾಸಕನ ವಿರುದ್ಧ ಚುನಾವಣಾ ಆಯೋಗಕ್ಕೆ ಜೆಡಿಎಸ್‌ ದೂರು

    ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋತರೆ ಗ್ಯಾರಂಟಿ ಯೋಜನೆ ರದ್ದು ಆಗುತ್ತೆ ಎಂಬ ಶಾಸಕ ಬಾಲಕೃಷ್ಣ (Balakrishna) ಹೇಳಿಕೆ ವಿರುದ್ಧ ಚುನಾವಣೆ ಆಯೋಗಕ್ಕೆ ಜೆಡಿಎಸ್ ದೂರು ನೀಡಿದೆ.

    ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ನೇತೃತ್ವದಲ್ಲಿ ಶಾಸಕರಾದ ಸ್ವರೂಪ್, ಸುರೇಶ್ ಬಾಬು, ಕರೆಮ್ಮ ನಾಯಕ್ ಒಳಗೊಂಡ ನಿಯೋಗ ಮುಖ್ಯ ಚುನಾವಣೆ ಆಯುಕ್ತರಿಗೆ ದೂರು ನೀಡಿದ್ದಾರೆ. ದೂರಿನ ಬಳಿಕ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ಚುನಾವಣೆ ಮುಂಚೆ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ 5 ಗ್ಯಾರಂಟಿ ಘೋಷಣೆ ಮಾಡಿತ್ತು. ಗ್ಯಾರಂಟಿ ಹಿನ್ನಲೆ ಜನ ಕಾಂಗ್ರೆಸ್ ಅವರನ್ನ ಆಯ್ಕೆ ಮಾಡಿದ್ರು. ಇತ್ತೀಚೆಗೆ ಶಾಸಕ ಬಾಲಕೃಷ್ಣ ಹೇಳಿಕೆ ಬಹಿರಂಗವಾಗಿ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲದೇ ಹೋದರೆ ಗ್ಯಾರಂಟಿ ರದ್ದು ಮಾಡೋ ಬಗ್ಗೆ ಮಾತಾಡಿದ್ದಾರೆ. ಲೋಕಸಭೆ ಚುನಾವಣೆ ದೃಷ್ಟಿಯಿಂದ ಹಲವಾರು ಸಮಯದಲ್ಲಿ ಗ್ಯಾರಂಟಿ ಮುಂದಿಟ್ಟುಕೊAಡು ಬ್ಲ್ಯಾಕ್‌ಮೇಲ್ ಸಂಸ್ಕೃತಿ ಪ್ರಾರಂಭ ಮಾಡಿದ್ದಾರೆ. ಇದು ಖಂಡನೀಯ. ಹೀಗಾಗಿ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದೇವೆ. ಕೂಡಲೇ ಶಾಸಕರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿದ್ದೇವೆ ಎಂದರು. ಇದನ್ನೂ ಓದಿ: ಲೋಕಸಭಾ ಚುನಾವಣೆ ಬಳಿಕ ಗ್ಯಾರಂಟಿ ರದ್ದತಿಗೆ ಕಾಂಗ್ರೆಸ್‍ನಲ್ಲಿ ಚರ್ಚೆ, ಬಾಲಕೃಷ್ಣರಿಂದ ಬಯಲು: ಹೆಚ್‍ಡಿಕೆ

    ದೇಶ ವಿಭಜನೆ ಕುರಿತ ಸಂಸದ ಡಿ.ಕೆ.ಸುರೇಶ್ ಹೇಳಿಕೆ ಬಗ್ಗೆ ಮಾತನಾಡಿ, ಡಿ.ಕೆ.ಸುರೇಶ್ ಅವರದ್ದು ಅಸೂಕ್ಷ್ಮ ಹೇಳಿಕೆ. ಜವಾಬ್ದಾರಿಯುತ ಸ್ಥಾನದಲ್ಲಿ ಇರೋರು ಹೀಗೆ ಮಾತಾಡೋದು ಸರಿಯಲ್ಲ. ಸಂಸದರ ಇಂತಹ ಬಾಲಿಶ ಹೇಳಿಕೆ ಖಂಡನೀಯ. ಭಾರತವನ್ನು ಎರಡು ಭಾಗ ಮಾಡೋ ಹೇಳಿಕೆ ಕೊಟ್ಟರೆ ಇದಕ್ಕೆ ಏನ್ ಹೇಳಬೇಕು ಎಂದು ಕಿಡಿಕಾರಿದರು.

    ಯಾರೇ ಜನಪ್ರತಿನಿಧಿಗಳಾದರೂ ಮುಂದೆ ಹೀಗೆ ಮಾತಾಡಬಾರದು. ಕೇಂದ್ರದಿಂದ ಅನುದಾನ ಬರುವಲ್ಲಿ ಅನ್ಯಾಯವಾಗಿದ್ರೆ ಕಾಂಗ್ರೆಸ್ ನಾಯಕರು ಮೋದಿ ಅವರ ಸಮಯ ಪಡೆದು ಅವರ ಬಳಿ ವಿಷಯ ಪ್ರಸ್ತಾಪ ಮಾಡಿ ಮನವರಿಕೆ ಮಾಡಿಕೊಡಲಿ. ಕೇಂದ್ರ ಸರ್ಕಾರದಿಂದ ಅನುದಾನ ಹಂಚಿಕೆ ಆಗೋದು ಹಣಕಾಸು ಆಯೋಗದ ನಿರ್ಣಯದ ಮೇಲೆ. ಹಣಕಾಸು ಆಯೋಗದ ರಿಪೋರ್ಟ್ ಮೇಲೆ ಕೇಂದ್ರ ಸರ್ಕಾರ ಅನುದಾನ ನಿರ್ಧಾರ ಮಾಡುತ್ತೆ. ಯುಪಿಎ ಅವಧಿಯಲ್ಲಿ ಮನಮೋಹನ್ ಸಿಂಗ್ ಕೊಟ್ಟಿರುವ ಅನುದಾನ ಎಷ್ಟು ಅಂತ ಕಾಂಗ್ರೆಸ್ ಅವರು ತೆಗೆಯಲಿ. ಮನಮೋಹನ್ ಸಿಂಗ್ ಸರ್ಕಾರಕ್ಕಿಂತ ಮೋದಿ ಸರ್ಕಾರದಲ್ಲಿ ರಾಜ್ಯಕ್ಕೆ ಜಾಸ್ತಿ ಅನುದಾನ ಕೊಟ್ಟಿದೆ. ಮೋದಿ ಸಮಯ ಪಡೆದು ಅವರ ಬಳಿ ಹೋಗಿ ಮಾತಾಡಿ. ಅದು ಬಿಟ್ಟು ಹೀಗೆ ದೇಶ ವಿಭಜನೆ ಮಾತಾಡೋದು ಸರಿಯಲ್ಲ ಎಂದು ಟೀಕಿಸಿದರು. ಇದನ್ನೂ ಓದಿ: ಕೆಲಸ ಮಾಡ್ಬೇಕು ಅಂದ್ರೆ ವೋಟ್ ಹಾಕ್ಬೇಕು ಅನ್ನೋದರಲ್ಲಿ ತಪ್ಪೇನಿದೆ?: ಬಾಲಕೃಷ್ಣ ಸಮರ್ಥನೆ

    ಮಂಡ್ಯಕ್ಕೆ ಕುಮಾರಸ್ವಾಮಿ ಕೊಡುಗೆ ಏನು ಎಂಬ ಸಚಿವ ಚಲುವರಾಯಸ್ವಾಮಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ಅದಕ್ಕೆ ಮಂಡ್ಯದ ಜನರೇ ಉತ್ತರ ಕೊಡ್ತಾರೆ. ಇವರ ಹೇಳಿಕೆಗಳಿಗೆ ಜನರು ಉತ್ತರ ಕೊಡೋ ಸಮಯ ದೂರ ಇಲ್ಲ. ಮಂಡ್ಯದಲ್ಲಿ ಲೋಕಸಭೆ ಚುನಾವಣೆ ಎದುರಿಸುತ್ತೇವೆ. ಈ ಬಾರಿ ಮಂಡ್ಯದಲ್ಲಿ ಜನರು ಜೆಡಿಎಸ್ ಕೈ ಹಿಡಿಯುತ್ತಾರೆ. ಚಲುವಣ್ಣನ ಬಗ್ಗೆ ನಾನು ಮಾತಾಡೊಲ್ಲ ಎಂದು ಕೌಂಟರ್ ಕೊಟ್ಟರು.

  • ಕಾಂಗ್ರೆಸ್‌ ಶಾಸಕ ಹೆಚ್‌.ಸಿ ಬಾಲಕೃಷ್ಣ ನೀಡಿದ ಕುಕ್ಕರ್‌ ಸ್ಫೋಟ, ಬಾಲಕಿ ಮುಖಕ್ಕೆ ಗಂಭೀರ ಗಾಯ

    ಕಾಂಗ್ರೆಸ್‌ ಶಾಸಕ ಹೆಚ್‌.ಸಿ ಬಾಲಕೃಷ್ಣ ನೀಡಿದ ಕುಕ್ಕರ್‌ ಸ್ಫೋಟ, ಬಾಲಕಿ ಮುಖಕ್ಕೆ ಗಂಭೀರ ಗಾಯ

    – ರಾಮನಗರ ಕೂನಮುದ್ದನಹಳ್ಳಿ ಗ್ರಾಮಸ್ಥರ ಆರೋಪ

    ರಾಮನಗರ: ಅಡುಗೆ ಮಾಡುವಾಗ ಕುಕ್ಕರ್ ಸ್ಫೋಟಗೊಂಡು (Cooker Blast) ಬಾಲಕಿಗೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ರಾಮನಗರ (Ramanagara) ತಾಲೂಕಿನ ಕೂನಮುದ್ದನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಚುನಾವಣಾ ಸಮಯದಲ್ಲಿ ಕಾಂಗ್ರೆಸ್ (Congress) ಶಾಸಕ ಹೆಚ್.ಸಿ ಬಾಲಕೃಷ್ಣ (H C Balakrishna) ಈ ಕುಕ್ಕರ್ ಗಳನ್ನ ನೀಡಿದ್ದರು ಎನ್ನಲಾಗಿದೆ. ಶುಕ್ರವಾರ ಬೆಳಗ್ಗೆ ಅಡುಗೆ ಮಾಡುವಾಗ ಕುಕ್ಕರ್ ಸ್ಫೋಟಗೊಂಡು ಮಹಾಲಕ್ಷ್ಮಿ (17) ಎಂಬ ಬಾಲಕಿಗೆ ಮುಖದ ಮೇಲೆ ಸುಟ್ಟಗಾಯಗಳಾವೆ. ಕೂಡಲೇ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಇದನ್ನೂ ಓದಿ: ಶಿಕ್ಷಕಿಯರಿಬ್ಬರ ಜಡೆ ಜಗಳ- ಮೂಕಪ್ರೇಕ್ಷರಾದ ಶಾಲಾ ಮಕ್ಕಳು

    ಇನ್ನೂ ಶಾಸಕ ಹೆಚ್.ಸಿ ಬಾಲಕೃಷ್ಣ ಈ ಕುಕ್ಕರ್ ನೀಡಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ರಾಮದ ಮಹಿಳೆಯರು ಕುಕ್ಕರ್ ಗಳನ್ನ ತಂದು ರಸ್ತೆಗೆ ಎಸೆದು ಶಾಸಕರ ವಿರುದ್ಧ ಕಿಡಿಕಾರಿದ್ದಾರೆ. ನಿಮ್ಮ ಕುಕ್ಕರ್ ಗಳನ್ನ ನೀವೆ ತೆಗೆದುಕೊಂಡು ನಿಮ್ಮ ಹೆಂಡತಿಯರಿಗೆ ಕೊಡಿ, ಮತಪಡೆಯಲು ಬಡವರಿಗೆ ನೀಡಿ ಅವರ ಪ್ರಾಣಕ್ಕೆ ಕುತ್ತು ತರಬೇಡಿ ಎಂದು ಕುಕ್ಕರ್ ಗಳನ್ನ ಬೀದಿಗೆ ತಂದು ಎಸೆದಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಗ್ಯಾರೆಂಟಿ ಎಫೆಕ್ಟ್ – 6 ದಿನಗಳಲ್ಲಿ ಬರೋಬ್ಬರಿ 78 ಸಾವಿರ ಬಿಪಿಎಲ್ ಅರ್ಜಿ ಸಲ್ಲಿಕೆ

  • ಕರ್ತವ್ಯ ಲೋಪ ಎಸಗಿದ್ರೆ ವರ್ಗಾವಣೆ ಇಲ್ಲ ನೇರವಾಗಿ ಸಸ್ಪೆಂಡ್- ಅಧಿಕಾರಿಗಳಿಗೆ ವಾರ್ನಿಂಗ್

    ಕರ್ತವ್ಯ ಲೋಪ ಎಸಗಿದ್ರೆ ವರ್ಗಾವಣೆ ಇಲ್ಲ ನೇರವಾಗಿ ಸಸ್ಪೆಂಡ್- ಅಧಿಕಾರಿಗಳಿಗೆ ವಾರ್ನಿಂಗ್

    ರಾಮನಗರ: ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಸ್ವಕ್ಷೇತ್ರಕ್ಕೆ ಮಾಗಡಿ ಶಾಸಕ ಹೆಚ್.ಸಿ ಬಾಲಕೃಷ್ಣ (H.C Balakrishna) ಇಂದು (ಗುರುವಾರ) ಕೆಡಿಪಿ ಸಭೆ ನಡೆಸಿದ್ರು.

    ಮೊದಲ ಕೆಡಿಪಿ ಸಭೆ (KDP Meeting) ಯಲ್ಲೇ ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್ ನೀಡಿದ ಶಾಸಕರು, ಜನಸ್ನೇಹಿ ಆಡಳಿತ ನೀಡುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದ್ರು. ಈ ಹಿಂದೆ ಹೇಗೆ ಕೆಲಸ ಮಾಡ್ತಿದ್ರೋ ಗೊತ್ತಿಲ್ಲ. ಮುಂದೆ ಸಾರ್ವಜನಿಕರ ಕೆಲಸ ಕಾರ್ಯ ಸರಾಗವಾಗಿ ಆಗಬೇಕು. ಪ್ರತೀ ಇಲಾಖೆಯಲ್ಲೂ ಮೂಮೆಂಟ್ ರಿಜಿಸ್ಟ್ರಾರ್ ಪಾಲನೆ ಕಡ್ಡಾಯ ಮಾಡಿ ಎಂದಿದ್ದಾರೆ.

    ತಾಲೂಕುಮಟ್ಟದ ಅಧಿಕಾರಿಗಳು ಪ್ರತಿ ದಿನ ಫೀಲ್ಡ್ ವರ್ಕ್ ಮಾಡಿ ಜನರ ಸಮಸ್ಯೆ ಬಗೆಹರಿಸಿ. ಒಂದುವೇಳೆ ಕರ್ತವ್ಯ ಲೋಪ ಕಂಡು ಬಂದ್ರೆ ಕೇವಲ ವರ್ಗಾವಣೆ ಅಲ್ಲ ಸಸ್ಪೆಂಡ್‍ಗೆ ರೆಕ್ಮೆಂಡ್ ಮಾಡ್ತೇನೆ ಎಂದು ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ರು. ಇದನ್ನೂ ಓದಿ: ದೇಗುಲದ ಗರ್ಭಗುಡಿಯವರೆಗೂ ಹರಿದ ರಕ್ತ- ಕಿಡಿಗೇಡಿಗಳ ಕೃತ್ಯದಿಂದ ಗ್ರಾಮಸ್ಥರಲ್ಲಿ ಆತಂಕ

    ಸಭೆಗೂ ಮುನ್ನ ಮಾಗಡಿಯಲ್ಲಿ ರಂಗನಾಥಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ರು. ಪತ್ನಿ ಜೊತೆ ಶ್ರೀನಿವಾಸ ಕಲ್ಯಾಣ ಪೂಜೆ ನೆರವೇರಿಸಿ ಸಚಿವ ಸ್ಥಾನಕ್ಕಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ರು. ಈ ವೇಳೆ ಹಲವು ಮುಖಂಡರು ಹಾಗೂ ಕಾರ್ಯಕರ್ತರು ಶಾಸಕರಿಗೆ ಸಾಥ್ ನೀಡಿದ್ರು.

  • ಶಾಸಕ ಎ.ಮಂಜುನಾಥ್ ಬಿಜೆಪಿ ಸೇರಲು ಸಿ.ಪಿ.ಯೊಗೇಶ್ವರ್ ಜೊತೆ ಸುತ್ತುತ್ತಿದ್ರು: ಬಾಲಕೃಷ್ಣ ಬಾಂಬ್‌

    ಶಾಸಕ ಎ.ಮಂಜುನಾಥ್ ಬಿಜೆಪಿ ಸೇರಲು ಸಿ.ಪಿ.ಯೊಗೇಶ್ವರ್ ಜೊತೆ ಸುತ್ತುತ್ತಿದ್ರು: ಬಾಲಕೃಷ್ಣ ಬಾಂಬ್‌

    ರಾಮನಗರ: ಸಾರ್ವತ್ರಿಕ ಚುನಾವಣೆ ಹತ್ತಿರವಾಗುತ್ತಿದ್ದಂತೆ ಮಾಗಡಿಯ (Magadi) ಮಾಜಿ ಹಾಗೂ ಹಾಲಿ ಶಾಸಕರ ನಡುವೆ ಟಾಕ್ ವಾರ್ ಶುರುವಾಗಿದೆ. ಶಾಸಕ ಎ.ಮಂಜುನಾಥ್ (A.Manjunath) ಬಿಜೆಪಿ (BJP) ಸೇರ್ಪಡೆಗೆ ಮುಂದಾಗಿದ್ರು ಎಂಬ ಮಾಜಿ ಶಾಸಕ ಬಾಲಕೃಷ್ಣ (H.C Balakrishna) ಆರೋಪಕ್ಕೆ ಎ.ಮಂಜುನಾಥ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಜೊತೆಗೆ ಕ್ಷೇತ್ರದಲ್ಲಿ ಆಣೆ ಪ್ರಮಾಣದ ಪಾಲಿಟಿಕ್ಸ್ ಕೂಡಾ ಶುರುವಾಗಿದ್ದು ದಿನೇ ದಿನೇ ರಾಜಕೀಯ ಚಟುವಟಿಕೆ ರಂಗೇರುತ್ತಿದೆ.

    ಮಾಗಡಿ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆ ಕಣ ರಂಗೇರುತ್ತಿದೆ. ಹಾಲಿ ಹಾಗೂ ಮಾಜಿ ಶಾಸಕರ ನಡುವೆ ವಾಕ್ ಸಮರವೇ ಏರ್ಪಟ್ಟಿದೆ. ಶಾಸಕ ಎ.ಮಂಜುನಾಥ್ ಬಿಜೆಪಿ ಸೇರ್ಪಡೆಗೆ ಸಿಪಿ.ಯೋಗೇಶ್ವರ್ (C. P Yogeshwara) ಜೊತೆ ವಿಧಾನಸೌಧ ಸುತ್ತುತ್ತಿದ್ರು ಎಂದು ಮಾಜಿ ಶಾಸಕ ಬಾಲಕೃಷ್ಣ ಹೊಸ ಬಾಂಬ್ ಸಿಡಿಸಿದ್ದಾರೆ. ಇದು ನಿಜವೋ ಸುಳ್ಳೊ ಎಂಬುದನ್ನು ಶಾಸಕರೇ ಬಹಿರಂಗ ಪಡಿಸಲಿ ಎಂದು ಸವಾಲು ಹಾಕಿದ್ದಾರೆ. ಇದನ್ನೂ ಓದಿ: ಕೋಲಾರದಿಂದಲೇ ಸ್ಪರ್ಧೆ – ಸಿದ್ದರಾಮಯ್ಯ ಅಧಿಕೃತ ಘೋಷಣೆ

    ಮಾಗಡಿ ಶಾಸಕ ಎ.ಮಂಜುನಾಥ್ ಬಿಜೆಪಿ ಸೇರಲು ಸಿ.ಪಿ.ಯೊಗೇಶ್ವರ್ ಅವರೊಂದಿಗೆ ಮಾತುಕತೆ ನಡೆಸಿದ್ದರು. ಮಂಜುನಾಥ್ ಶಾಸಕರಾಗಿ ಆಯ್ಕೆಯಾದಾಗ ಯೋಗೇಶ್ವರ್ ಬಳಿ ಮಾತನಾಡಿದ್ದರು. ಬಾಲಕೃಷ್ಣರನ್ನು ಬಿಜೆಪಿಗೆ ಕರೆಸಿ, ನಾನೂ ಬಿಜೆಪಿಗೆ ಬರುತ್ತೇನೆ ಎಂದಿದ್ದಾರಂತೆ. ಬಾಲಕೃಷ್ಣ ಲೋಕಸಭಾ ಚುನಾವಣೆಗೆ ನಿಲ್ಲಲಿ, ನಾನು ಜೆಡಿಎಸ್‍ಗೆ ರಾಜೀನಾಮೆ ನೀಡಿ ಬಿಜೆಪಿಯಿಂದ ವಿಧಾನಸಭೆಗೆ ಸ್ಪರ್ಧಿಸುತ್ತೇನೆ ಎಂದಿದ್ದಾರೆ. ಈ ಬಗ್ಗೆ ಸಿಪಿ ಯೋಗೇಶ್ವರ್ ನನ್ನ ಬಳಿ ಚರ್ಚಿಸಿದ್ದಾರೆ ಎಂದು ಮಾಜಿ ಶಾಸಕ ಬಾಲಕೃಷ್ಣ ಆರೋಪಿಸಿದ್ದಾರೆ. ಅಲ್ಲದೇ ಎ.ಮಂಜುನಾಥ್ ಭಯದಿಂದ ಜೆಡಿಎಸ್‍ನಲ್ಲಿದ್ದಾರೆಯೇ ಹೊರತು ಜೆಡಿಎಸ್ ಮೇಲಿನ ಗೌರವದಿಂದಲ್ಲ ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: ಸಿದ್ದು ನಿಜಕನಸುಗಳು ಪುಸ್ತಕ ಬಿಡುಗಡೆಗೆ ತಡೆಯಾಜ್ಞೆ

    ಬಾಲಕೃಷ್ಣ ಆರೋಪಕ್ಕೆ ಶಾಸಕ ಎ.ಮಂಜುನಾಥ್ ತಿರುಗೇಟು ನೀಡಿದ್ದಾರೆ. ಹೌದು ನನಗೆ ಬಿಜೆಪಿಯಿಂದ ಆಫರ್ ಬಂದಿದ್ದು ನಿಜ ಆದರೆ ಬಾಲಕೃಷ್ಣ ರೀತಿ ಮಣ್ಣು ತಿನ್ನುವ ಕೆಲಸ ನಾನು ಮಾಡಲಿಲ್ಲ. ಅವರ ಹಾಗೆ 10 ಕೋಟಿಗೆ ತಲೆಮಾರಿಕೊಳ್ಳುವ ಕೆಲಸ ಮಾಡಲಿಲ್ಲ. ಮೈತ್ರಿ ಸರ್ಕಾರ ತೆಗೆಯುವ ಸಂದರ್ಭದಲ್ಲಿ ಯೋಗೇಶ್ವರ್ ಅವರೇ ನನ್ನನ್ನು ಭೇಟಿ ಆಗಿದ್ದರು. ಪಕ್ಷಕ್ಕೆ ಆಹ್ವಾನಿಸಿದ್ರು, ಆಗ ನಾನು ಅದನ್ನು ರಿಜೆಕ್ಟ್ ಮಾಡಿದ್ದೆ. ನಾನು ಮಾಜಿ ಶಾಸಕರ ರೀತಿ ಸೇಲ್ ಆಗೋ ಗಿರಾಕಿ ಅಲ್ಲ. ಬೇಕಿದ್ರೆ ಮಾಗಡಿ ರಂಗನಾಥ ಸ್ವಾಮಿ ದೇವಾಲಯದಲ್ಲಿ ಪ್ರಮಾಣ ಮಾಡುತ್ತೇನೆ. ಅವರೂ ಬಂದು ಪ್ರಮಾಣ ಮಾಡಲಿ ಎಂದು ಬಾಲಕೃಷ್ಣಗೆ ಸವಾಲು ಹಾಕಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕುಮಾರಸ್ವಾಮಿ ಸ್ಲೋ ಪಾಯಿಸನ್: ಬಾಲಕೃಷ್ಣ ಕಿಡಿ

    ಕುಮಾರಸ್ವಾಮಿ ಸ್ಲೋ ಪಾಯಿಸನ್: ಬಾಲಕೃಷ್ಣ ಕಿಡಿ

    ರಾಮನಗರ: ಪಕ್ಷದ ಮುಖಂಡರ ಏಳಿಗೆಯನ್ನು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಸಹಿಸುವುದಿಲ್ಲ. ಪಕ್ಕದಲ್ಲಿ ಇರುವವರಿಗೆ ಮೊದಲು ಕುಮಾರಸ್ವಾಮಿ ಚುಚ್ಚುತ್ತಾರೆ. ಅವರು ಒಂದು ರೀತಿಯ ಸ್ಲೋ ಪಾಯಿಸನ್ ಇದ್ದ ಹಾಗೆ ಎಂದು ಮಾಗಡಿ ಮಾಜಿ ಶಾಸಕ ಹೆಚ್.ಸಿ.ಬಾಲಕೃಷ್ಣ ಕಿಡಿಕಾರಿದ್ದಾರೆ.

    ಬಿಡದಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಪಕ್ಷಕ್ಕೆ ನೆಲೆ ಇಲ್ಲ. ಈಗಾಗಲೇ ಹಲವು ಶಾಸಕರು ಜೆಡಿಎಸ್ ಬಿಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಶಾಸಕರು ಕಾಂಗ್ರೆಸ್ ಸೇರಲಿದ್ದಾರೆ. ಶಾಸಕರಾದ ಪುಟ್ಟರಾಜು, ಶಿವಲಿಂಗೇಗೌಡ ಸೇರಿದಂತೆ ಹಲವು ಶಾಸಕರು ಪಕ್ಷ ಬಿಡುತ್ತಾರೆ. ಪಕ್ಷದ ಮುಖಂಡರ ಏಳಿಗೆಯನ್ನು ಕುಮಾರಸ್ವಾಮಿ ಸಹಿಸುವುದಿಲ್ಲ. ಪಕ್ಕದಲ್ಲಿ ಇರುವವರಿಗೆ ಮೊದಲು ಕುಮಾರಸ್ವಾಮಿ ಚುಚ್ಚುತ್ತಾರೆ. ನಾನೂ ಕೂಡ ಅವರಿಂದ ಚುಚ್ಚಿಸಿಕೊಂಡಿದ್ದೇನೆ. ಕುಮಾರಸ್ವಾಮಿ ಸ್ಲೋ ಪಾಯಿಸನ್ ಇದ್ದ ಹಾಗೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: 50 ಕೋಟಿ ಕೊಟ್ಟರೆ ನಾನು ಇವತ್ತೇ ಜೈಲಿಗೆ ಹೋಗ್ತೀನಿ: ಎ.ಮಂಜು ತಿರುಗೇಟು

    ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ನನ್ನ ತಮ್ಮನನ್ನು ಚುನಾವಣೆಗೆ ನಿಲ್ಲಿಸಿ ಸೋಲಿಸಿದ್ದರು. ಇವರ ರಾಜಕಾರಣ ನೋಡಿ ನನಗೆ ಬೇಸರವಾಗಿದೆ. ನನಗೆ ಕುಮಾರಸ್ವಾಮಿ ಬಗ್ಗೆ ಬೇಸರ ಇಲ್ಲ. ಅವರ ನಡವಳಿಕೆ ಬಗ್ಗೆ ಬೇಸರ. ಕುಮಾರಸ್ವಾಮಿ ಸರಿಯಾಗಿ ಈ ರಾಜ್ಯದಲ್ಲಿ ಇದ್ದಿದ್ದರೆ ಅವರಂತ ನಾಯಕರೇ ಕರ್ನಾಟಕದಲ್ಲಿ ಇರುತ್ತಿರಲಿಲ್ಲ. ಅವರು ನಾಯಕತ್ವವನ್ನು ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಟೀಕಿಸಿದ್ದಾರೆ.

    ಈ ಬಗ್ಗೆ ರಾಮನಗರದಲ್ಲಿ ತಿರುಗೇಟು ನೀಡಿದ ಕುಮಾರಸ್ವಾಮಿ, ಹೆಚ್.ಸಿ.ಬಾಲಕೃಷ್ಣ ಅವರು ಮೊದಲು ತಮ್ಮ ನೆಲೆ ಬಗ್ಗೆ ಚಿಂತೆ ಮಾಡಲಿ. ಪಾಪ ಅವರಿಗೆ ನಮ್ಮ ಪಕ್ಷದ ಚಿಂತೆ ಯಾಕೆ ಈಗಾಗಲೇ ಜನ ತಿರಸ್ಕಾರ ಮಾಡಿದ್ದಾರೆ. ಜೆಡಿಎಸ್ ಮುಗಿಸುತ್ತೇವೆ ಎಂದು ಟೋಪಿ ಹಾಕಿ ಹೋಗಿದ್ದ ಅವರಿಗೆ ಜನರ ಕೊಟ್ಟಿರುವ ತೀರ್ಪನ್ನು ಅರಗಿಸಿಕೊಳ್ಳಲಿ. ಜೆಡಿಎಸ್ ಮುಳಗುತ್ತೋ, ಏಳತ್ತೋ ಜನ ತೀರ್ಮಾನ ಮಾಡುತ್ತಾರೆ ಎಂದು ಟಾಂಗ್ ಕೊಟ್ಟರು. ಇದನ್ನೂ ಓದಿ: ಜಾತ್ರೆ ಮಾಡೋಕೆ ಅಧಿವೇಶನ ಮಾಡುವುದು ಬೇಡ: ಯತ್ನಾಳ್