Tag: H.Anjaneya

  • ಕೆಎಎಸ್ ಅಧಿಕಾರಿ ಬಸವರಾಜೇಂದ್ರ ಮೇಲೆ ಬಿಜೆಪಿಯವರೇ ಒತ್ತಡ ಹಾಕಿರಬಹುದು: ಎಚ್.ಆಂಜನೇಯ

    ಕೆಎಎಸ್ ಅಧಿಕಾರಿ ಬಸವರಾಜೇಂದ್ರ ಮೇಲೆ ಬಿಜೆಪಿಯವರೇ ಒತ್ತಡ ಹಾಕಿರಬಹುದು: ಎಚ್.ಆಂಜನೇಯ

    ಚಿತ್ರದುರ್ಗ: ಕೆಎಎಸ್ ಅಧಿಕಾರಿ ಬಸವರಾಜೇಂದ್ರ ಮೇಲೆ ಬಿಜೆಪಿಯವರೇ ಒತ್ತಡ ಹಾಕಿರಬಹುದು ಎನ್ನುವ ಸಂಶಯವಿದೆ ಎಂದು ಸಚಿವ ಎಚ್.ಆಂಜನೇಯ ಹೇಳಿದ್ದಾರೆ.

    ಜಿಲ್ಲೆಯ ಪಂಚಾಯತ್‍ರಾಜ್ ರಜತ ಮಹೋತ್ಸವದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಿದ್ದರಾಮಯ್ಯ ನೇತೃತ್ವದಲ್ಲಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಅಭಿಪ್ರಾಯ ಸಂಗ್ರಹಿಸಿ ಸಿಎಂ ಆಯ್ಕೆಯಾಗಲಿದೆ. ಈಗಾಗಲೇ ಸಿ ಫೋರ್ ಸಮೀಕ್ಷೆ ಬಂದಿದೆ. ನಮ್ಮ ಪಕ್ಷದ ಸಮೀಕ್ಷೆಯಲ್ಲಿ ನಾವು 150 ಸ್ಥಾನ ಗೆಲ್ಲುತ್ತೇವೆ ಎನ್ನುವ ಫಲಿತಾಂಶ ಬಂದಿದೆ ಎಂದು ತಿಳಿಸಿದರು.

    ಇದನ್ನೂ ಓದಿ: ಡಿನೋಟಿಫೈ ಪ್ರಕರಣಕ್ಕೆ ಹೊಸ ಟ್ವಿಸ್ಟ್: ಬಿಎಸ್‍ವೈ ವಿರುದ್ಧ ಸುಳ್ಳು ಹೇಳಲು ಭೂಸ್ವಾಧೀನಾಧಿಕಾರಿಗೆ ಒತ್ತಡ?

    ಬಿಜೆಪಿಯವರು ಮಿಷನ್ 150 ಎನ್ನುತ್ತಿದ್ದಾರೆ. ಅದ್ಯಾವ ಮಿಷನ್ ನಾವು ನೋಡುತ್ತೇವೆ. ಮುಂದಿನ ಸರ್ಕಾರ ಬಿಜೆಪಿ ರಚಿಸಲು ಮತ ಹಾಕೋದು ಜನ. ಅವರೇ ಹಾಕಿಸಿಕೊಳ್ಳಲು ಬರಲ್ಲ. ನಾವು ನಾಲ್ಕು ವರ್ಷಗಳ ಕಾಲ ಬಡವರಿಗೆ ಸಾಕಷ್ಟು ಕೆಲಸ ಮಾಡಿದ್ದೇವೆ. ಜನ ನಮ್ಮ ಕೈ ಹಿಡಿಯುತ್ತಾರೆ. ಐಟಿ ರೇಡ್ ಆದ ತಕ್ಷಣ ಅಪರಾಧಿ ಆಗಲ್ಲ. ಬಿಜೆಪಿಯವರು ಜೈಲಿಗೆ ಹೋಗಿದ್ದಾರೆ. ದ್ವೇಷ ರಾಜಕಾರಣ ನಾವು ಮಾಡಲ್ಲ. ಅಭಿವೃದ್ಧಿ ಮಾಡುವುದೇ ನಮ್ಮ ಗುರಿ ಎಂದು ಹೇಳಿದರು.

    ಇದನ್ನೂ ಓದಿ: ರಾಜ್ಯ ಸರ್ಕಾರದಿಂದ ಎಸಿಬಿ ದುರುಪಯೋಗ: ಸಿಎಂ ವಿರುದ್ಧ ಬಿಜೆಪಿಯಿಂದ ಭಾರೀ ಪ್ರತಿಭಟನೆ 

  • ಅಮಿತ್ ಶಾ, ಮೋದಿಯ ಮೋಡಿ ಫಲಿಸಲ್ಲ: ಹೆಚ್.ಆಂಜನೇಯ

    ಅಮಿತ್ ಶಾ, ಮೋದಿಯ ಮೋಡಿ ಫಲಿಸಲ್ಲ: ಹೆಚ್.ಆಂಜನೇಯ

    ಚಿತ್ರದುರ್ಗ: ನಾವು ಜನಪರವಾದ ಆಡಳಿತ ಮಾಡುತ್ತಿರುವುದರಿಂದ ರಾಜ್ಯದಲ್ಲಿ ಅಮಿತ್ ಶಾ ತಂತ್ರಗಾರಿಕೆಯಾಗಲೀ, ಮೋದಿಯ ಮೋಡಿಯಾಗಲೀ ಎಲ್ಲಿಯೂ ನಡೆಯುವುದಿಲ್ಲ ಎಂದು ಸಮಾಜ ಕಲ್ಯಾಣ ಸಚಿವ ಹೆಚ್.ಆಂಜನೇಯ ಹೇಳಿದ್ದಾರೆ.

    ಚಿತ್ರದುರ್ಗ ತಾಲೂಕಿನ ಸಿರಿಗೆರೆ ಗ್ರಾಮದಲ್ಲಿ ಇಂದು ಗ್ರಾಮ ವಿಕಾಸ ಯೋಜನೆಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರಸ್ ಸರ್ಕಾರ ಇಡೀ ದೇಶದಲ್ಲೇ ಮಾದರಿ ಎಂಬಂತಹ ಆಡಳಿತ ನೀಡಿದ್ದು, ಪ್ರಣಾಳಿಕೆಯಲ್ಲಿ ಹೇಳಿದ್ದ ಮಾತುಗಳನ್ನು ನಾವು ಈಡೇರಿಸಿದ್ದೇವೆ. ಬಿಜೆಪಿಯವರಿಂದ ಕರ್ನಾಟಕವನ್ನು ಕಾಂಗ್ರೆಸ್ ಮುಕ್ತ ಮಾಡಲು ಸಾಧ್ಯವಿಲ್ಲ ಎಂದರು.

    ಸಿಎಂ ಸ್ಥಾನವನ್ನು ದಲಿತರಿಗೆ ಅಥವಾ ಡಿಕೆಶಿಗೆ ಬಿಟ್ಟುಕೊಡಬೇಕು ಎಂಬ ಜನಾರ್ದನ ಪೂಜಾರಿ ಹೇಳಿಕೆಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಚಿವರು, ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಡಿಕೆಶಿ ಎಂಬ ಮಾತನ್ನು ಸಾರಾಸಗಟಾಗಿ ತಳ್ಳಿಹಾಕಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲೇ ಚುನಾವಣೆ ಎದುರಿಸಲಿದ್ದೇವೆ ಎಂದು ಹೇಳಿದರು.

  • ಡಿಕೆಶಿ ಸೂಚನೆಯಂತೆ ಹಣ ಸಾಗಿಸಿದ್ದೇನೆ ಎಂದ ಆಪ್ತ ಆಂಜನೇಯ!

    ಡಿಕೆಶಿ ಸೂಚನೆಯಂತೆ ಹಣ ಸಾಗಿಸಿದ್ದೇನೆ ಎಂದ ಆಪ್ತ ಆಂಜನೇಯ!

    ನವದೆಹಲಿ: ಇಂಧನ ಸಚಿವ ಡಿ.ಕೆ.ಶಿವಕುಮಾರ್ ನಿರ್ದೇಶನನದಲ್ಲಿ ನಾನು 5 ಕೋಟಿ ರೂ. ಹಣವನ್ನು ಸಾಗಿಸಿದ್ದೇನೆ ಎಂದು ಎಚ್.ಆಂಜನೇಯ ಅವರು ಆದಾಯ ತೆರಿಗೆ ಇಲಾಖೆ ಅಧಿಕಾರ ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾರೆ.

    ರಾಷ್ಟ್ರೀಯ ಸುದ್ದಿ ವಾಹಿನಿ ‘ಟೈಮ್ಸ್ ನೌ’ಗೆ ನಿನ್ನೆ ದೆಹಲಿಯ ಡಿಕೆಶಿ ನಿವಾಸದ ಮೇಲೆ ಮಾಡಿದ ದಾಳಿಯ ವೇಳೆ ಐಟಿ ಅಧಿಕಾರಿಗಳ ಮುಂದೆ ನೀಡಿರುವ ಹೇಳಿಕೆಯ ಪ್ರತಿ ಸಿಕ್ಕಿದ್ದು ಇದರಲ್ಲಿ ಆಂಜನೇಯ ಹಣದ ಮೂಲದ ಬಗ್ಗೆ ಬಾಯಿ ಬಿಟ್ಟಿದ್ದಾನೆ ಎಂದು ಸುದ್ದಿ ಪ್ರಸಾರ ಮಾಡಿದೆ.

    ಹೇಳಿಕೆಯಲ್ಲೇನಿದೆ?: ಶೈಲೇಂದರ್ 1 ಕೋಟಿ ರೂ., 2.5 ಕೋಟಿ ರೂ., 1.5 ಕೋಟಿ ರೂ. ಸೇರಿ ಒಟ್ಟು 5 ಕೋಟಿ ರೂ. ಹಣವನ್ನು ತಂದಿದ್ದರು. ಕಳೆದ ವಾರ 1.60 ಕೋಟಿ ರೂ. ಹಣವನ್ನು ನಾನೇ ಸಾಗಿಸಿದೆ. ಸಚಿವ ಡಿಕೆ ಶಿವಕುಮಾರ್ ಅವರ ಸೂಚನೆಯಂತೆ ನಾನು ಹಣವನ್ನು ಬಿ2/107 ಮನೆಯಿಂದ ಬಹ/201 ಮನೆಗೆ ಸಾಗಿಸಿದ್ದೇನೆ. ಆದರೆ ಈ ಹಣವನ್ನು ನನ್ನ ಮೂಲಕವೇ ಯಾಕೆ ಸಾಗಿಸಿದ್ದಾರೆ ಗೊತ್ತಿಲ್ಲ ಎಂದು ಹೇಳಿಕೆ ನೀಡಿರುವ ಪ್ರಶ್ನಾವಳಿಗೆ ಆಂಜನೇಯ ಸಹಿ ಹಾಕಿದ್ದಾರೆ ಎಂದು ಸುದ್ದಿ ವಾಹಿನಿ ವರದಿ ಮಾಡಿದೆ.

    ಡಿಕೆಶಿ ದೆಹಲಿಗೆ ಹೋಗಿದ್ದು ಯಾಕೆ?: ಇಂಧನ ಸಚಿವ ಡಿಕೆ ಶಿವಕುಮಾರ್ ಆಗಸ್ಟ್ 1ರಂದು ದೆಹಲಿಗೆ ಆಗಮಿಸಿದ್ದರು. ಜೆಟ್ ಏರ್ ವೇಸ್ ವಿಮಾನದಲ್ಲಿ ಆಗಮಿಸಿದ್ದ ಶಿವಕುಮಾರ್ ದೆಹಲಿಯ ಏರೋಸಿಟಿಯಲ್ಲಿರುವ ಜೆಡಬ್ಲ್ಯೂ ಮ್ಯಾರಿಯಟ್ ಹೋಟೆಲ್ ನಲ್ಲಿ ಉಳಿದುಕೊಂಡಿದ್ದರು. ಈ ಸಂದರ್ಭದಲ್ಲಿ ಹಣ ಸಂದಾಯವಾಗಿದೆಯಾ ಎಂಬ ಬಗ್ಗೆಯೂ ತನಿಖೆ ಮುಂದುವರಿದಿದೆಯಂತೆ. ಐಟಿ ದಾಳಿ ವೇಳೆ ದೆಹಲಿಯಲ್ಲಿರುವ ಡಿಕೆ ಶಿವಕುಮಾರ್ ನಿವಾಸದಿಂದ 7.5 ಕೋಟಿ ರೂ. ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವರದಿಯಾಗಿದೆ. ಆದರೆ ಇದ್ಯಾವುದನ್ನೂ ಐಟಿ ಅಧಿಕಾರಿಗಳು ಇನ್ನೂ ಖಚಿತ ಪಡಿಸಿಲ್ಲ.

     

  • ಉತ್ತರದಲ್ಲಿ ಬಿಜೆಪಿ ಗೆದ್ದಿದ್ದು ಮೋದಿಯಿಂದಲ್ಲ, ಯಾದವಿ ತಂದೆ ಮಕ್ಕಳ ಕಲಹದಿಂದ: ಸಚಿವ ಆಂಜನೇಯ

    ಉತ್ತರದಲ್ಲಿ ಬಿಜೆಪಿ ಗೆದ್ದಿದ್ದು ಮೋದಿಯಿಂದಲ್ಲ, ಯಾದವಿ ತಂದೆ ಮಕ್ಕಳ ಕಲಹದಿಂದ: ಸಚಿವ ಆಂಜನೇಯ

    ಬಾಗಲಕೋಟೆ: ಉತ್ತರ ಪ್ರದೇಶದಲ್ಲಿ ಬಿಜೆಪಿ ಜಯಗಳಿಸಿರೋದು ಮೋದಿ ಪ್ರಭಾವದಿಂದಲ್ಲ, ಯಾದವಿ ತಂದೆ-ಮಕ್ಕಳ ಕಲಹದಿಂದ ಗೆಲವು ಸಾಧಿಸಿದ್ದಾರೆ. ಮೋದಿಯವರು ವಾಮಮಾರ್ಗದಿಂದ ಅಧಿಕಾರ ಹಿಡಿದಿದ್ದಾರೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಆಂಜನೇಯ ಹೇಳಿಕೆ ನೀಡಿದ್ದಾರೆ.

    ಇಂದು ಬಾಗಲಕೋಟೆಯಲ್ಲಿ ಮಾತನಾಡಿದ ಅವರು, ಉಪಚುನಾವಣೆಯಲ್ಲಿ ಎರಡು ಕ್ಷೇತ್ರದಲ್ಲೂ ಕಾಂಗ್ರೆಸ್ ಗೆಲ್ಲುತ್ತೆ. ಎರಡು ಉಪ ಚುನಾವನೆಯಲ್ಲಿ ಮೋದಿಯವರ ಪ್ರಭಾವ ನೆಡೆಯಲ್ಲ ಅಂದ್ರು. ಎಸ್.ಎಂ ಕೃಷ್ಣರಿಗೆ ಕಾಂಗ್ರೆಸ್ ಪಕ್ಷ ಎಲ್ಲ ತರಹದ ಹುದ್ದೆಯನ್ನೂ ನೀಡಿತ್ತು. ಆದ್ರೆ ಅವರು ಬಿಜೆಪಿಗೆ ಹೊರಟಿರೋದು ಸರಿಯಲ್ಲ. ಕೃಷ್ಣಾ ಅವರಿಗೆ ಈ ವಯಸ್ಸಿನಲ್ಲಿ ಇದು ಬೇಕಿತ್ತಾ ಎಂದು ಆಂಜನೇಯ ಮಾರ್ಮಿಕವಾಗಿ ಪ್ರಶ್ನಿಸಿದರು.

    ಕಪ್ಪದ ಡೈರಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಡೈರಿಯನ್ನ ಬಿಜೆಪಿಯವರೇ ಬರೆದುಕೊಂಡಿದ್ದಾರೆ. ಗೋವಿಂದರಾಜ್ ಅವರ ಡೈರಿ ಬಿಜೆಪಿಯವರ ಬಳಿ ಹೇಗೆ ಬಂತು? ಅದು ಡೂಪ್ಲಿಕೇಟ್ ಡೈರಿ. ಸದನದಲ್ಲಿ ಬರಗಾಲದ ಬಗ್ಗೆ ಚಿಂತಿಸದ ವಿಪಕ್ಷದವರು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡ್ತಿದ್ದಾರೆ ಅಂದ್ರು.