Tag: H.Anjaneya

  • ಎಡ ಸಮುದಾಯಕ್ಕೆ 7% ಒಳಮೀಸಲಾತಿ ಕೊಡಬೇಕು – ಆಂಜನೇಯ

    ಎಡ ಸಮುದಾಯಕ್ಕೆ 7% ಒಳಮೀಸಲಾತಿ ಕೊಡಬೇಕು – ಆಂಜನೇಯ

    ಬೆಂಗಳೂರು: ಒಳಮೀಸಲಾತಿ (Internal Reservation) ಕೊಡುವ ಸಂಬಂಧ ನ್ಯಾ. ನಾಗಮೋಹನ್ ದಾಸ್ ಆಯೋಗ ಇವತ್ತು ವರದಿ ಕೊಡ್ತಿದ್ದು, ಮಾದಿಗರಿಗೆ ನ್ಯಾಯ ಸಿಗೋ ವಿಶ್ವಾಸ ಇದೆ. ಮಾದಿಗರಿಗೆ 7% ಆದರೂ ಒಳಮೀಸಲಾತಿ ಕೊಡಬೇಕು ಎಂದು ಮಾಜಿ ಸಚಿವ ಆಂಜನೇಯ (H Anjaneya) ಒತ್ತಾಯ ಮಾಡಿದ್ದಾರೆ.

    ವಿಧಾನಸೌಧದಲ್ಲಿ ಮಾತನಾಡಿದ ಅವರು, ಒಳಮೀಸಲಾತಿ ವರದಿ ಕೊಡುತ್ತಿರುವುದರಿಂದ ಆತಂಕ, ಕುತೂಹಲ, ಸಂತೋಷ ಎಲ್ಲಾ ಆಗುತ್ತಿದೆ. ಒಳಮೀಸಲಾತಿ ಬೇಕು ಅಂತ 35 ವರ್ಷಗಳ ಹೋರಾಟ ಮಾಡುತ್ತಿದ್ದೇವೆ. ಮಾದಿಗರಿಗೆ ಸರಿಯಾದ ಸವಲತ್ತು ಇದೂವರೆಗೂ ಸಿಕ್ಕಿಲ್ಲ. ಸುಪ್ರೀಂ ಕೋರ್ಟ್ ಒಳಮೀಸಲಾತಿ ಕೊಡಿ ಅಂತ ಆದೇಶ ಬಂದ ಮೇಲೆ ನಮಗೆ ಧೈರ್ಯ ಬಂತು. ಈವರೆಗೂ ನಮಗೆ ಸಿಗೋ ಸವಲತ್ತು ಸಿಕ್ಕಿಲ್ಲ. ಮಾದಿಗರು ಅವಕಾಶದಿಂದ ವಂಚನೆ ಆಗುತ್ತಿದ್ದಾರೆ. ಒಳಮೀಸಲಾತಿಯ ವರದಿ ಕೊಡುತ್ತಿದ್ದಾರೆ. ಒಳಮೀಸಲಾತಿ ವರದಿ ಕೊಡ್ತಿರೋದ್ರಿಂದ ಮಾದಿಗರು ಬದುಕಬಹುದು ಎಂಬ ನಂಬಿಕೆ ಬಂದಿದೆ ಎಂದರು. ಇದನ್ನೂ ಓದಿ: 1 ದಿನ ಸಾರಿಗೆ ಮುಷ್ಕರ ಮುಂದೂಡಿ: ಹೈಕೋರ್ಟ್‌ ಸೂಚನೆ

    ನಾವು ಅಸ್ಪೃಶ್ಯರು ಅಂತ ಸರಿಯಾಗಿ ಸರ್ಕಾರದ ಸವಲತ್ತು ಸಿಕ್ಕಿರಲಿಲ್ಲ. ಸಿದ್ದರಾಮಯ್ಯ (Siddaramaiah) ಸಾಮಾಜಿಕ ನ್ಯಾಯದ ಹರಿಕಾರ ಒಳಮೀಸಲಾತಿ ಜಾತಿಗೆ ಆಯೋಗ ರಚನೆ ಮಾಡಿದ್ರು. ಆಯೋಗ ರಾಜ್ಯಾದ್ಯಂತ ಸಮೀಕ್ಷೆ ಮಾಡಿದೆ. ವರದಿ ಚೆನ್ನಾಗಿ ಇದೆ ಅನ್ನೋ ವಿಶ್ವಾಸ ಇದೆ. ನಮಗೆ ಸಿಗಬೇಕಾದ ಸವಲತ್ತು ಸಿಗೋ ವಿಶ್ವಾಸ ಇದೆ ಎಂದು ತಿಳಿಸಿದರು. ಇದನ್ನೂ ಓದಿ: ಸಹಮತದಿಂದ ಒಳಮೀಸಲಾತಿ ಹಂಚಿಕೆ – ಪರಮೇಶ್ವರ್ ಹೇಳಿಕೆಗೆ ಗೋವಿಂದ ಕಾರಜೋಳ ಆಕ್ರೋಶ

    ಸದಾಶಿವ ಆಯೋಗ ಎಡ ಸಮುದಾಯಕ್ಕೆ 6% ಒಳಮೀಸಲಾತಿ ಕೊಟ್ಟಿದ್ದರು. ಮಾಧುಸ್ವಾಮಿ ಅವರು 6% ಕೊಡಬೇಕು ಅಂತ ಹೇಳಿದ್ರು. ಈಗ 7% ಮೀಸಲಾತಿಯಾದ್ರು ಮಾದಿಗರಿಗೆ ಸರ್ಕಾರ ಕೊಡಬೇಕು. 15% ಮೀಸಲಾತಿ ಇದ್ದಾಗ 6% ಶಿಫಾರಸು ಮಾಡಿದ್ರು. ಈಗ 17% ಮೀಸಲಾತಿ ಇದೆ. ಈಗ 7% ಆದ್ರು ಮೀಸಲಾತಿ ಎಡ ಸಮುದಾಯಕ್ಕೆ ಕೊಡಬೇಕು ಎಂದು ಒತ್ತಾಯ ಮಾಡಿದರು. ಇದನ್ನೂ ಓದಿ:  ಯೆಮೆನ್‌ನಲ್ಲಿ ವಲಸಿಗರಿದ್ದ ಬೋಟ್ ಮುಳುಗಡೆ – 76 ಮಂದಿ ಸಾವು

  • ಅಶ್ಲೀಲ ಪದ ಬಳಸಿ ದೌರ್ಜನ್ಯ ಆರೋಪ – ಡಿಸಿಎಂ ವಿಶೇಷ ಕರ್ತವ್ಯಾಧಿಕಾರಿ ವಿರುದ್ಧ ಮಹಿಳಾ ಆಯೋಗಕ್ಕೆ ದೂರು

    ಅಶ್ಲೀಲ ಪದ ಬಳಸಿ ದೌರ್ಜನ್ಯ ಆರೋಪ – ಡಿಸಿಎಂ ವಿಶೇಷ ಕರ್ತವ್ಯಾಧಿಕಾರಿ ವಿರುದ್ಧ ಮಹಿಳಾ ಆಯೋಗಕ್ಕೆ ದೂರು

    ನವದೆಹಲಿ: ದೆಹಲಿಯ ಕರ್ನಾಟಕ ಭವನದಲ್ಲಿ ಸಿಎಂ ಸಿದ್ದರಾಮಯ್ಯ (Siddaramaiah) ಅವರ ವಿಶೇಷ ಕರ್ತವ್ಯಾಧಿಕಾರಿ ಮೋಹನ್ ಕುಮಾರ್, ಡಿಸಿಎಂ ಡಿ.ಕೆ ಶಿವಕುಮಾರ್ (D K Shivakumar) ಅವರ ವಿಶೇಷ ಅಧಿಕಾರಿ ಹೆಚ್.ಆಂಜನೇಯ ನಡುವೆ ಜಗಳ ತಾರಕಕ್ಕೇರಿರುವ ಹೊತ್ತಲ್ಲೇ ಹೆಚ್.ಆಂಜನೇಯ (H Anjaneya) ವಿರುದ್ಧ ಮಹಿಳಾ ಆಯೋಗದಲ್ಲಿ ದೂರು ದಾಖಲಾಗಿದೆ.

    ಕರ್ನಾಟಕ ಭವನದಲ್ಲಿ ಉಪ ಸಮನ್ವಯಾಧಿಕಾರಿ ಮತ್ತು ಲೆಕ್ಕಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಕುಸುಮಾ ನಂದರಿಗಿ ಸಿಎಂ ಸಿದ್ದರಾಮಯ್ಯ ಹಾಗೂ ರಾಜ್ಯ ಮಹಿಳಾ ಆಯೋಗಕ್ಕೆ (Karanataka State Commission for Womens) ದೂರು ನೀಡಿದ್ದಾರೆ. ಡಿಸಿಎಂ ಡಿ.ಕೆ ಶಿವಕುಮಾರ್ ಅವರ ವಿಶೇಷ ಕರ್ತವ್ಯಾಧಿಕಾರಿ ಹೆಚ್.ಆಂಜನೇಯ ಕರ್ನಾಟಕ ಭವನದ ಮಹಿಳೆಯರ ಮೇಲೆ ದೌರ್ಜನ್ಯ ನಡೆಸುತ್ತಿದ್ದು, ಅಸಭ್ಯ ವರ್ತನೆಯ ಮೂಲಕ ಕಿರುಕುಳ ನೀಡುತ್ತಿದ್ದಾರೆ ಎಂದು ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ಸೋನ್‌ಪ್ರಯಾಗ್ ಬಳಿ ಭೂಕುಸಿತ – ಕೇದಾರನಾಥ ಯಾತ್ರೆ ತಾತ್ಕಾಲಿಕ ಸ್ಥಗಿತ

    ಹೆಚ್.ಆಂಜನೇಯ ಅವರು ಪ್ರಸ್ತುತ ಕರ್ನಾಟಕ ಭವನದಲ್ಲಿ ಕಛೇರಿ ಅಧೀಕ್ಷಕ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕಚೇರಿಯ ವಿಚಾರದಲ್ಲಿ ಲೆಕ್ಕ ಶಾಖೆಯ ಸಿಬ್ಬಂದಿಯನ್ನು ಕರೆದು ಬಾಯಿಗೆ ಬಂದ ಹಾಗೆ ಮಾತನಾಡುವುದಲ್ಲದೇ `ಲೆಕ್ಕಾಧಿಕಾರಿ ಏನು ಕತ್ತೆ ಕಾಯುತ್ತಿದ್ದಾಳಾ’ ಎಂದು ಆಗೌರವದಿಂದ ಮಾತನಾಡಿದ್ದಾರೆ. ನಿಮ್ಮನ್ನು ಅಮಾನತು ಮಾಡಿಸುತ್ತೇನೆ. ವಜಾ ಮಾಡಿಸುತ್ತೇವೆ ಎಂದು ಬೆದರಿಕೆ ಹಾಕುತ್ತಿದ್ದಾರೆ. ಇದನ್ನೂ ಓದಿ: ಮೈಸೂರಿಗೆ ನಾಲ್ವಡಿಗಿಂತಲೂ ಸಿದ್ದರಾಮಯ್ಯ ಕೊಡುಗೆ ಜಾಸ್ತಿ: ಯತೀಂದ್ರ ಹೇಳಿಕೆಗೆ ವಿಪಕ್ಷ ನಾಯಕರು ಕೆಂಡ

    ಅಶ್ಲೀಲ ಅಸಭ್ಯ ಪದಗಳನ್ನು ಬಳಸಿ ಬೈಯುತ್ತಾ ಅಧಿಕಾರ ದರ್ಪ ತೋರುತ್ತಿದ್ದಾರೆ. ಅಲ್ಲದೇ ಮಹಿಳಾ ನೌಕರರ ಜೊತೆಗೆ ಅನುಚಿತವಾಗಿ ವರ್ತಿಸುತ್ತಿದ್ದಾರೆ. ಅಧಿಕಾರ ಬಳಸಿಕೊಂಡು ನನ್ನ ಭಡ್ತಿಯನ್ನು ತಡೆಯುತ್ತಿದ್ದಾರೆ ಎಂದು ಪತ್ರದಲ್ಲಿ ಆರೋಪಿಸಿದ್ದಾರೆ. ಇದನ್ನೂ ಓದಿ: ಗವಿ ಮಠದ ಆವರಣದಲ್ಲಿ ನಾಗದೇವರ ಮುಂದೆ ಧ್ಯಾನಕ್ಕೆ ಕುಳಿತ ಮುಸ್ಲಿಂ ಮಹಿಳೆ

    ಈ ಬಗ್ಗೆ ಸಿಎಂಗೆ ದೂರು ನೀಡಿದ್ದು, ಪರಿಶೀಲಿಸಿ ಕ್ರಮಕ್ಕೆ ಸೂಚನೆ ನೀಡಿದ್ದಾರೆ. ಇತ್ತ ಮಹಿಳಾ ಆಯೋಗದಿಂದ ಈವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಈ ಬೆಳವಣಿಗೆಗೂ ಮುನ್ನ ಮೋಹನ್ ಕುಮಾರ್ ಮತ್ತು ಹೆಚ್.ಆಂಜನೇಯ ನಡುವಿನ ಜಗಳ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿತ್ತು.

  • ಕೆಲವರು ಅಪಾರ್ಟ್ಮೆಂಟ್ ಒಳಗೂ ಬಿಟ್ಟುಕೊಳ್ಳದೇ ಜಾತಿ ಹೇಳಲು ಹಿಂದೇಟು: ಹೆಚ್.ಆಂಜನೇಯ

    ಕೆಲವರು ಅಪಾರ್ಟ್ಮೆಂಟ್ ಒಳಗೂ ಬಿಟ್ಟುಕೊಳ್ಳದೇ ಜಾತಿ ಹೇಳಲು ಹಿಂದೇಟು: ಹೆಚ್.ಆಂಜನೇಯ

    – ಸರ್ವೆ ದಿನಾಂಕ ವಿಸ್ತರಿಸದಂತೆ ಸಿಎಂಗೆ ಆಗ್ರಹ

    ಬೆಂಗಳೂರು: ಕೆಲವರು ಜಾತಿ ಹೆಸರು ಹೇಳಲು ಹಿಂದೇಟು ಹಾಕ್ತಿದ್ದಾರೆ. ಅಪಾರ್ಟ್ಮೆಂಟ್, ದೊಡ್ಡ ದೊಡ್ಡ ಕಟ್ಟಡಗಳಲ್ಲಿ ವಾಸ ಮಾಡೋರು ಒಳಗೆ ಬಿಟ್ಟುಕೊಳ್ಳಲ್ಲ ಎಂದು ಮಾಜಿ ಸಚಿವ ಹೆಚ್.ಆಂಜನೇಯ (H Anjaneya) ಹೇಳಿದ್ದಾರೆ.

    ಸರ್ವೆ ಮಾಡದೇ ಸ್ಟಿಕ್ಕರ್ ಅಂಟಿಸೋದು ಸರಿ ಅಲ್ಲ. ಸರ್ವೆ ಮಾಡಿದ್ಮೇಲೆ ಸ್ಟಿಕ್ಕರ್ ಹಾಕಬೇಕಿತ್ತು. ಸಾಮೂಹಿಕವಾಗಿ ಸ್ಟಿಕ್ಕರ್ ಹಾಕಬಾರದಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಒಳ ಮೀಸಲಾತಿ ಸರ್ವೆ ಗೊಂದಲದ ವಿಚಾರವಾಗಿ ಸಿಎಂ ಸಿದ್ದರಾಮಯ್ಯ (Siddaramaiah) ಅವರನ್ನು ಭೇಟಿ ಮಾಡಿ ಯಾವುದೇ ಕಾರಣಕ್ಕೂ ಸರ್ವೆ ದಿನಾಂಕ ವಿಸ್ತರಣೆ ಮಾಡಬಾರದು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಮಹಿಳೆಯರನ್ನು ನಿಂದಿಸುವುದೇ ಬಿಜೆಪಿಗರ ಕೆಲಸ: ಲಕ್ಷ್ಮೀ ಹೆಬ್ಬಾಳ್ಕರ್ ವಾಗ್ದಾಳಿ

    ಸಿಎಂ ಭೇಟಿ ಬಳಿಕ ಮಾತನಾಡಿದ ಅವರು, ಸಿಬ್ಬಂದಿ ಇಲ್ಲ ಅಂತೇಳಿ ಎಲ್ಲರ ಹತ್ರ ಸರ್ವೆ ಮಾಡಿಸ್ತಿದ್ದಾರೆ. ಬೆಂಗಳೂರಲ್ಲಿ 100% ಸರ್ವೆ ಸಾಧ್ಯವಿಲ್ಲ. ಬೆಂಗಳೂರಲ್ಲಿ 110 ಬಡಾವಣೆಗಳಲ್ಲಿ ಹೆಚ್ಚು ಎಸ್‌ಸಿ ಸಮುದಾಯವರು ಇದ್ದಾರೆ. ಅಲ್ಲಿ ಚೆನ್ನಾಗಿ ಸರ್ವೆ ಮಾಡಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ಅಮ್ಮ, ಸೋದರನಿಗೆ ಡ್ರಗ್ಸ್ ಚಟ | ಬಾಲಕನಿಗೆ ನಾಯಿಗಳೇ ಆಸರೆ – ಬೊಗಳುವ ಮೂಲಕ ಮಾತ್ರ ಸಂವಹನ!

    ಅಪಾರ್ಟ್ಮೆಂಟ್, ದೊಡ್ಡ ದೊಡ್ಡ ಕಟ್ಟಡಗಳಲ್ಲಿ ವಾಸ ಮಾಡೋರು ಒಳಗೆ ಬಿಟ್ಟುಕೊಳ್ಳಲ್ಲ. ಕೆಲವರು ಜಾತಿ ಹೆಸರು ಹೇಳಲು ಹಿಂದೇಟು ಹಾಕ್ತಿದ್ದಾರೆ. ನೀವು ಹಿಂದೇಟು ಹಾಕಬೇಡಿ, ಆನ್‌ಲೈನ್‌ನಲ್ಲಿ ಮಾಡ್ರಪ್ಪ. ಜುಲೈ 6ಕ್ಕೆ ಒಳಮೀಸಲಾತಿ ಸರ್ವೆ ಮುಕ್ತಾಯ ಆಗಬೇಕು. ಈ ತಿಂಗಳ ಒಳಗೆ ಒಳಮೀಸಲಾತಿ ಜಾರಿ ಆಗಬೇಕು ಅಂತಾ ಆಗ್ರಹಿಸಿದ್ದಾರೆ.

  • ಅಯೋಧ್ಯೆಯಲ್ಲಿರೋದು ಬಿಜೆಪಿ ರಾಮ, ನಮ್ಮ ರಾಮ ಸಿದ್ದರಾಮಯ್ಯ: ಹೆಚ್‌. ಆಂಜನೇಯ

    ಅಯೋಧ್ಯೆಯಲ್ಲಿರೋದು ಬಿಜೆಪಿ ರಾಮ, ನಮ್ಮ ರಾಮ ಸಿದ್ದರಾಮಯ್ಯ: ಹೆಚ್‌. ಆಂಜನೇಯ

    -ನಮ್ಮ ರಾಮ ನಮ್ಮ ಎದೆಯಲ್ಲಿದ್ದಾನೆ, ನಾನು ಆಂಜನೇಯ ಎಂದ ಮಾಜಿ ಸಚಿವ

    ಚಿತ್ರದುರ್ಗ: ಅಯೋಧ್ಯೆಯಲ್ಲಿರುವುದು (Ayodhya) ಬಿಜೆಪಿಯ ರಾಮ, ನಮ್ಮ ರಾಮ ಸಿದ್ದರಾಮಯ್ಯ (Siddaramaiah) ಎಂದು ಕಾಂಗ್ರೆಸ್ ಮಾಜಿ ಸಚಿವ ಹೆಚ್. ಆಂಜನೇಯ (H Anjaneya) ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಸಿಎಂ ಸಿದ್ದರಾಮಯ್ಯಗೆ ರಾಮಮಂದಿರ (Ram Mandir) ಉದ್ಘಾಟನೆಗೆ ಆಹ್ವಾನವಿಲ್ಲದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ರಾಮಮಂದಿರ ಉದ್ಘಾಟನೆಗೆ ಕರೆಯದೆ ಇದ್ದಿದ್ದೇ ಒಳ್ಳೆಯದಾಯಿತು. ಸ್ವತಃ ಸಿದ್ದರಾಮಯ್ಯ ಅವರೇ ರಾಮ, ಹೀಗಿರುವಾಗ ಆ ರಾಮನಿಗೇಕೆ ಹೋಗಿ ಅವರು ಪೂಜಿಸಬೇಕು ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಐಷಾರಾಮಿಯಷ್ಟೇ ದುಬಾರಿ ಅಯೋಧ್ಯಾ ಟೆಂಟ್‌ ಹೌಸ್ – ಒಂದು ದಿನಕ್ಕೆ ಎಷ್ಟು ಹಣ ಗೊತ್ತಾ?

    ಸಿದ್ದರಾಮಯ್ಯ ಅವರ ತವರು ಸಿದ್ಧರಾಮನಹುಂಡಿಯಲ್ಲೇ ಶ್ರೀರಾಮನ ದೇವಸ್ಥಾನ ಇದೆ, ಅವರು ಅಲ್ಲೇ ಪೂಜಿಸುತ್ತಾರೆ. ಅಯೋಧ್ಯೆಯಲ್ಲಿರುವುದು ಬಿಜೆಪಿ ರಾಮ ಹೀಗಾಗಿ ಬಿಜೆಪಿಯವರನ್ನ ಕರೆಸಿಕೊಂಡು ಅಲ್ಲಿ ಭಜನೆ ಮಾಡುತ್ತಾರೆ. ಆದ್ರೆ ನಮ್ಮ ರಾಮ ಎಲ್ಲಾ ಕಡೆ ಇದ್ದಾನೆ, ನಮ್ಮ ಎದೆಯಲ್ಲಿಯೂ ಇದ್ದಾನೆ. ನಾನು ಆಂಜನೇಯ, ಗೊತ್ತಲ್ವಾ ಆಂಜನೇಯ ಏನು ಮಾಡಿದ ಅಂತಾ? ಎಂದು ಕುಟುಕಿದ್ದಾರೆ. ಇದನ್ನೂ ಓದಿ: ಶ್ರೀರಾಮನ ಭಕ್ತರಿಗೆ ಮಾತ್ರ ಅಯೋಧ್ಯೆಗೆ ಆಹ್ವಾನ: ಉದ್ಧವ್ ಠಾಕ್ರೆಗೆ ಆಚಾರ್ಯ ಸತ್ಯೇಂದ್ರ ದಾಸ್ ತಿರುಗೇಟು

    ಅಲ್ಲದೇ ನಮ್ಮ ಸಮುದಾಯದವರು ರಾಮ ಹಾಗೂ ಆಂಜನೇಯ, ಹನುಮಂತ ಎಂಬ ಹೆಸರಿಟ್ಟುಕೊಳ್ಳುತ್ತಾರೆ. ರಾಮ, ಆಂಜನೇಯ ನಮ್ಮ ವರ್ಗಕ್ಕೆ ಸೇರಿದವರು. ಆದರೆ ಬಿಜೆಪಿ ಅವರದ್ದು ಧರ್ಮಗಳನ್ನು ಒಡೆದಾಳುವ ನೀತಿಯಾಗಿದೆ. ಒಂದು ಧರ್ಮದ ವಿರುದ್ಧ ಟೀಕಿಸಿ ಮತ ಬ್ಯಾಂಕ್ ಸೃಷ್ಟಿಸುವ ಭ್ರಮೆ ಬಿಜೆಪಿಯವರಿಗಿದೆ. ಅವರ ಆಡಳಿತದಲ್ಲಿ ಯಾರಿಗೆ ಅನುಕೂಲ ಆಗಿದೆ? ಹಿಂದೂ ಯುವಕರಿಗೆ ಬಿಜೆಪಿ ಆಡಳಿತದಿಂದ ಅನುಕೂಲ ಆಗಿದೆಯೆ? ನಾವೂ ಹಿಂದೂಗಳು, ಆದ್ರೆ ಹಿಂದೂಗಳನ್ನು ಮತ್ತು ಹಿಂದೂ ಧರ್ಮವನ್ನ ಬಿಜೆಪಿ ಕೊಂಡುಕೊಂಡಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: Ayodhya Ram Mandir – ಶ್ರೀರಾಮಲಲ್ಲಾ ಅಭಿಷೇಕಕ್ಕೆ ನೇಪಾಳದಿಂದ 16 ಪವಿತ್ರ ನದಿಗಳ ನೀರು

    ಬಿಜೆಪಿಯವರು ಮಂದಿ ನಿರ್ಮಾಣ ಮಾಡಿದ್ದು ಸಾಕು, ದೇಶದಲ್ಲಿ ಮನೆ-ಮನಗಳನ್ನು ಕಟ್ಟುವ ಕೆಲಸ ಆಗಬೇಕು. ದೇಶದಲ್ಲಿ ಕೆಲವರು ಈಗಲೂ ಪ್ರಾಣಿಗಳ ರೀತಿ, ಯೋಗ್ಯವಲ್ಲದ ಸ್ಥಳಗಳಲ್ಲಿ ವಾಸಿಸುತ್ತಿದ್ದಾರೆ. ಅಂತಹವರಿಗೆ ಸೂರು ಒದಗಿಸಿ ರಕ್ಷಣೆ ಕೊಡಬೇಕು. ದೇಶದಲ್ಲಿ ಮನೆ ಇಲ್ಲದವರಿಗೆ, ಮನೆ ಕಟ್ಟಿಸಿಕೊಟ್ಟು ಅದಕ್ಕೆ ರಾಮಮಂದಿರ ಅಂತ ಹೆಸರಿಟ್ಟರೆ, ಆಗ ನಿಜವಾದ ಶ್ರೀರಾಮ ಬಂದು ಎಲ್ಲರನ್ನು ಆಶೀರ್ವದಿಸುತ್ತಾನೆ. ಹಾಗಾಗಿ ಮತಕ್ಕಾಗಿ ಬಿಜೆಪಿ ರಾಮನನ್ನ ಮಾಡುವುದು ಬೇಡ ಹೆಚ್. ಆಂಜನೇಯ ಕಿಡಿ ಕಾರಿದ್ದಾರೆ.

  • ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಬಾಗಿಲು ಬಂದ್ ಎಂಬ ಸಂದೇಶ ರವಾನೆ: ಆಂಜನೇಯ

    ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಬಾಗಿಲು ಬಂದ್ ಎಂಬ ಸಂದೇಶ ರವಾನೆ: ಆಂಜನೇಯ

    ಚಿತ್ರದುರ್ಗ: ತೆಲಂಗಾಣ (Telangana) ರಾಜ್ಯದಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿರುವ ಹಿನ್ನೆಲೆಯಲ್ಲಿ ಚಿತ್ರದುರ್ಗದಲ್ಲಿ ಕಾಂಗ್ರೆಸ್ (Congress) ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದರು.

    ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಕಚೇರಿ ಬಳಿ ನೆರೆದಿದ್ದ ಕಾರ್ಯಕರ್ತರು ಮಾಜಿ ಸಚಿವ ಹೆಚ್. ಆಂಜನೇಯ (H.Anjaneya) ನೇತೃತ್ವದಲ್ಲಿ ಸಿಹಿಹಂಚಿ ಸಂಭ್ರಮಾಚರಣೆ ಮಾಡಿದರು. ಈ ವೇಳೆ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ನೃತ್ಯ ಮಾಡಿ ಸಂಭ್ರಮಿಸಿದ ದೃಶ್ಯ ಎಲ್ಲರ‌ ಕಣ್ಮನ ಸೆಳೆಯಿತು. ಬಳಿಕ ಮಾದ್ಯಮಗಳೊಂದಿಗೆ ಮಾಜಿ ಸಚಿವ ಆಂಜನೇಯ ಮಾತನಾಡಿದರು. ಇದನ್ನೂ ಓದಿ: RSS, ABVP ಕಾರ್ಯಕರ್ತ ರೇವಂತ್‌ ರೆಡ್ಡಿ ಈಗ ಕಾಂಗ್ರೆಸ್‌ ಸಿಎಂ ರೇಸ್‌ನಲ್ಲಿ – ತೆಲಂಗಾಣಕ್ಕೆ ಸಿಎಂ ಯಾರು?

    ಬಿಜೆಪಿಗೆ ದಕ್ಷಿಣ ಭಾರತದ ಬಾಗಿಲು ಬಂದ್ ಎಂದು ತೆಲಂಗಾಣದಲ್ಲಿ ಕಾಂಗ್ರೆಸ್ ಗೆದ್ದು ತೋರಿಸಿದೆ. ನಾವು ತೆಲಂಗಾಣ ರಾಜ್ಯ ನಿರ್ಮಾಣಕ್ಕೆ ಶ್ರಮಿಸಿದ ಹಿನ್ನೆಲೆಯಲ್ಲಿ ಈ ಬಾರಿ ನಮ್ ‘ಕೈ’ ಹಿಡಿದಿದ್ದಾರೆ. ಈ ಬಿಜೆಪಿಯವರು ಕಾಂಗ್ರೆಸ್ ಗ್ಯಾರಂಟಿಯನ್ನು ಬಿಟ್ಟಿ ಕಾರ್ಯಕ್ರಮ ಎಂದಿದ್ದರು. ಆದರೆ ಮದ್ಯಪ್ರದೇಶ ಹಾಗೂ ರಾಜಸ್ಥಾನದಲ್ಲಿ ಬಿಜೆಪಿ ಬಿಟ್ಟಿ ಕಾರ್ಯಕ್ರಮ ಕೊಟ್ಟಿದ್ದೇಕೆ ಎಂದು ಪ್ರಶ್ನಿಸಿದರು.

    ಅಲ್ಲದೇ ಬಿಜೆಪಿಯವರು ಕಾಂಗ್ರೆಸ್ ಗ್ಯಾರಂಟಿ ಯೋಜನೆಯನ್ನು ಅನುಸರಿಸಿದೆ. ನಾವು ಗ್ಯಾರಂಟಿ ಭಾಗ್ಯ ಘೋಷಿಸಿದಾಗ, ಉಚಿತ ಯೋಜನೆಯಿಂದ ರಾಜ್ಯ ದಿವಾಳಿ ಎಂದು ಬಿಜೆಪಿಗರು ಹೇಳಿದ್ದರು. ಆದರೆ ಈಗ ಉಚಿತ ಯೋಜನೆ ಘೋಷಿಸಿ ಬಿಜೆಪಿಯವರು ದ್ವಂದ್ವ ನೀತಿ ಅನುಸರಿಸಿದ್ದಾರೆ ಎಂದು ಕಾಲೆಳೆದರು. ಇದನ್ನೂ ಓದಿ: 51,000 ಮತಗಳ ಅಂತರದ ಜಯ – ಗೆಲುವನ್ನು ಮೋದಿಗೆ ಅರ್ಪಿಸಿದ ವಸುಂಧರಾ ರಾಜೆ

    ಕೇಂದ್ರ ಸರ್ಕಾರದಿಂದ ಎಲ್ಲಾ ರೀತಿ ವಾಮ ಮಾರ್ಗಗಳನ್ನು ಅನುಸರಿಸಿ, ಬಿಜೆಪಿಯು ವಾಮ ಮಾರ್ಗದಿಂದಲೇ ಮದ್ಯಪ್ರದೇಶ ಹಾಗೂ ರಾಜಸ್ಥಾನದಲ್ಲಿ ಗೆದ್ದಿದ್ದಾರೆಂದು ಆರೋಪಿಸಿದರು. ಈ ವೇಳೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ‌ ತಾಜ್ ಪೀರ್‌ ಇದ್ದರು.

  • ಮಾಜಿ ಸಚಿವ‌ ಹೆಚ್.ಆಂಜನೇಯ ಆಪ್ತನ ‘ದೊಡ್ಮನೆ’ ಮೇಲೆ ಐಟಿ ದಾಳಿ

    ಮಾಜಿ ಸಚಿವ‌ ಹೆಚ್.ಆಂಜನೇಯ ಆಪ್ತನ ‘ದೊಡ್ಮನೆ’ ಮೇಲೆ ಐಟಿ ದಾಳಿ

    ಚಿತ್ರದುರ್ಗ: ಕಾಂಗ್ರೆಸ್‌ ನಾಯಕ, ಮಾಜಿ ಸಚಿವ‌ ಹೆಚ್.ಆಂಜನೇಯ(H Anjaneya) ಆಪ್ತನ ದೊಡ್ಮನೆ ಮೇಲೆ ಆದಾಯ ತೆರಿಗೆ(Income Tax) ಇಲಾಖೆ ದಾಳಿ ನಡೆಸಿದೆ.

    ಹೊಳಲ್ಕೆರೆ ತಾಲೂಕಿನ ಪಾಡಿಗಟ್ಟೆ ಗ್ರಾಮದಲ್ಲಿರುವ ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಪಾಡಿಗಟ್ಟೆ ಸುರೇಶ್(Padigatte Suresh) ಮತ್ತು ಸುರೇಶ್‌ ಸಹೋದರ ಗುತ್ತಿಗೆದಾರ‌ ತಿಪ್ಪೇಸ್ವಾಮಿ‌ ಮನೆ ಮೇಲೆ ಹುಬ್ಬಳ್ಳಿಯಿಂದ ಆಗಮಿಸಿದ ಐಟಿ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಇದನ್ನೂ ಓದಿ: ನಾನು ಜನರ ಹಿತ ಕಾಯುವ ನಿಯತ್ತಿನ ನಾಯಿ – ಸಿಎಂ ಬೊಮ್ಮಾಯಿ

    ಮಾಜಿ ಸಮಾಜ ಕಲ್ಯಾಣ ಸಚಿವ ಹಾಗೂ ಸಿದ್ದರಾಮಯ್ಯ(Siddaramaiah) ಅವರ ಪರಮಾಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಹೆಚ್.ಆಂಜನೇಯ ಅವರ ಬೆಂಬಲಿಗ ಸುರೇಶ್ 15 ವರ್ಷಗಳ ಹಿಂದೆ ಕಡಿಮೆ ಪ್ರಮಾಣದ ಆಸ್ತಿ ಹೊಂದಿದ್ದರು. ಆದರೆ 2018ರಲ್ಲಿ ಕಾಂಗ್ರೆಸ್ ಸರ್ಕಾರದ ಅವಧಿ ಮುಕ್ತಾಯಗೊಳಿಸುವಷ್ಟರಲ್ಲಿ ಅಪಾರ ಪ್ರಮಾಣದ ಆಸ್ತಿ ಹಾಗೂ ಹಣಗಳಿಸಿರುವ ಆರೋಪ ಬಂದಿದೆ.

    ಕಳೆದ ವಿಧಾನಸಭಾ ಚುನಾವಣೆಯಲ್ಲಿ ಆಂಜನೇಯ ಪರ ಸುರೇಶ್ ಪ್ರಚಾರದ ಉಸ್ತುವಾರಿ ವಹಿಸಿದ್ದರು. ಈ ಬಾರಿ ಸಹ ಹೊಳಲ್ಕೆರೆ‌ ಕ್ಷೇತ್ರದಿಂದ ಸ್ಪರ್ಧಿಸಲು ಆಂಜನೇಯ ಮುಂದಾಗಿದ್ದು, ಸುರೇಶ್‌ ಪ್ರಚಾರದ ಮುಂದಾಳತ್ವ ವಹಿಸಿದ್ದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸಮಯ ಸಾಧಕ ಶಾಸಕರು ಕಾಂಗ್ರೆಸ್ ಬಾಗಿಲು ತಟ್ಟುತಿದ್ದಾರೆ: ಎಚ್.ಆಂಜನೇಯ

    ಸಮಯ ಸಾಧಕ ಶಾಸಕರು ಕಾಂಗ್ರೆಸ್ ಬಾಗಿಲು ತಟ್ಟುತಿದ್ದಾರೆ: ಎಚ್.ಆಂಜನೇಯ

    ಕೊಪ್ಪಳ: ಕಳೆದ ಬಾರಿ ಬಿಜೆಪಿಯವರು ಹಂದಿ, ಹಸು, ನಾಯಿ, ನರಿಗಳನ್ನು ಖರೀದಿಸುವಂತೆ ಶಾಸಕರನ್ನು ಖರೀದಿ ಮಾಡಿ ಸರ್ಕಾರ ರಚನೆ ಮಾಡಿದ್ದಾರೆ. ಈಗ ಆ ಶಾಸಕರೇ ಮತ್ತೆ ಕಾಂಗ್ರೆಸ್ ಬಾಗಿಲು ತಟ್ಟುತಿದ್ದಾರೆ. ಅವರನ್ನು ಪುನಃ ಕಾಂಗ್ರೆಸ್‍ಗೆ ಸೇರಿಸಿಕೊಳ್ಳುವ ಮಾತಿಲ್ಲ ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಬಣ್ಣ ನೋಡಿ ಓಡಿ ಹೋಗಿರುವವರನ್ನು ಯಾವುದೇ ಕಾರಣಕ್ಕೂ ಕಾಂಗ್ರೆಸ್‍ನಲ್ಲಿ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ. ಸಮಯ ಸಾಧಕರಿಗೆ ಪಕ್ಷದಲ್ಲಿ ಜಾಗವಿಲ್ಲ ಎಂದು ಹೇಳಿದರು.

    ರಾಜ್ಯದಲ್ಲಿ ಬಿಜೆಪಿ ದುರಾಡಳಿತದಿಂದ ಜನರು ರೋಸಿ ಹೋಗಿದ್ದಾರೆ. ಮುಂಬರುವ 2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 140 ಸ್ಥಾನಗಳನ್ನು ಗೆಲ್ಲಲಿದೆ. ಕಾಂಗ್ರೆಸ್ ಬಹುಮತ ಪಡೆಯೋದು ಖಚಿತವಾಗಿದೆ ಎಂದರು. ಇದನ್ನೂ ಓದಿ: ಹಿಜಬ್ ಪರಿಸ್ಥಿತಿ ಬಿಗಡಾಯಿಸಲು ಕಾಂಗ್ರೆಸ್ ನಾಯಕರು ಕಾರಣ: ಬಿಸಿ ನಾಗೇಶ್

    bjp - congress

    ಸಂವಿಧಾನಕ್ಕೆ ಅಪಮಾನ, ಬದಲಾವಣೆಗಳಂತಹ ಮಾತುಗಳು ಕೇಳಿಬರುತ್ತಿವೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಯಾರಾದರೂ ಸಂವಿಧಾನ ಬದಲಾವಣೆ ಮಾಡಿದರೆ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ರಕ್ತದೋಕುಳಿ ಹರಿಯುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಶಿಕ್ಷಣ ಸಂಸ್ಥೆಗಳ 200 ಮೀಟರ್ ವ್ಯಾಪ್ತಿಯಲ್ಲಿ ಪ್ರತಿಭಟನೆಗೆ ನಿಷೇಧ: ಕಮಲ್ ಪಂತ್

  • ರೇಣುಕಾಚಾರ್ಯ ಹೇಳಿಕೆಯಲ್ಲಿ ತಪ್ಪಿಲ್ಲ ಎಂದ ಹೆಚ್ ಆಂಜನೇಯ

    ರೇಣುಕಾಚಾರ್ಯ ಹೇಳಿಕೆಯಲ್ಲಿ ತಪ್ಪಿಲ್ಲ ಎಂದ ಹೆಚ್ ಆಂಜನೇಯ

    ಕೊಪ್ಪಳ: ಹೆಣ್ಣು ಮಕ್ಕಳ ಉಡುಪುಗಳೇ ಪ್ರಚೋದನೆಗೆ ಕಾರಣ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ನೀಡಿದ್ದ ವಿವಾದಾತ್ಮಕ ಹೇಳಿಕೆಗೆ ಮಾಜಿ ಸಚಿವ ಎಚ್ ಆಂಜನೇಯ ಪ್ರತಿಕ್ರಿಯೆ ನೀಡಿದ್ದಾರೆ.

    ಕಾಲೇಜು ಮುಂದೆ ಹೋಗಿ ನೋಡಿ ಮುಸ್ಲಿಂ ಹೆಣ್ಣು ಮಕ್ಕಳ ಉಡುಪು ಪ್ರಚೋದನೆ ಕೊಡುತ್ತೋ ಅಥವಾ ನಮ್ಮ ಮಕ್ಕಳ ಉಡುಪು ಪ್ರಚೋದನೆ ಕೊಡುತ್ತೋ ಎಂದು. ರೇಣುಕಾಚಾರ್ಯ ಬಹಳ ಒಳ್ಳೇ ಮಾತು ಹೇಳಿದ್ದಾರೆ ಎಂದು ಆಂಜನೇಯ ಪರೋಕ್ಷವಾಗಿ ಹಿಜಬ್‍ಗೆ ಬೆಂಬಲ ನೀಡಿದ್ದಾರೆ. ಇದನ್ನೂ ಓದಿ: ಮಹಿಳೆಯರ ಬಟ್ಟೆ ನೋಡಿ ಪುರುಷರು ಉದ್ವೇಗಕ್ಕೆ ಒಳಗಾಗುತ್ತಾರೆ: ರೇಣುಕಾಚಾರ್ಯ

    ಮುಸ್ಲಿಂ ಮಹಿಳೆಯರು ಹಿಜಬ್ ಧರಿಸುತ್ತಾರೆ ಹೀಗಾಗಿ ಅವರನ್ನು ಯಾರೂ ನೋಡಲ್ಲ. ಮೊದಲು ಚುನಾವಣೆಗೆ ಗಲಾಟೆ ನಡೆಯುತ್ತಿತ್ತು. ಇದೀಗ ಕಾಲೇಜು ಮಕ್ಕಳು ಬೀದಿಗಿಳಿದಿದ್ದಾರೆ. ಮಕ್ಕಳ ಕೈಯಲ್ಲಿ ಕಲ್ಲು, ಚಾಕು ಕೊಟ್ಟಿರುವುದು ಬಿಜೆಪಿಯವರು ಎಂದು ಹೇಳಿದರು.

    ನಾವು ಎತ್ತಿ ಕಟ್ಟೋ ಕೆಲಸ ಮಾಡಲ್ಲ. ಇದು ಬಿಜೆಪಿಯವರು ಮಾಡಿದ್ದು. ನಾವು ಅವರ ಹಿಂದಿದ್ದರೆ ಅವರಿಗೆ ಕಾಂಗ್ರೆಸ್ ಧ್ವಜ ಕೊಡುತ್ತಿದ್ದೆವು. ಹಿಜಬ್ ಗಲಾಟೆಗೆ ಬಿಜೆಪಿ ಕಾರಣ ಎಂದರು. ಇದನ್ನೂ ಓದಿ: ವಿವಾದಾತ್ಮಕ ಹೇಳಿಕೆಗೆ ಕ್ಷಮೆ ಕೋರಿದ ರೇಣುಕಾಚಾರ್ಯ

    ಮೊದಲು ಇದ್ದ ಪದ್ಧತಿಯೇ ಮುಂದೆಯೂ ಇರಲಿ. ಅವರು ನೂರಾರು ವರ್ಷಗಳಿಂದ ಹೇಗೆ ಇದ್ದರು ಹಾಗೇ ಇರಲಿ. ಬಟ್ಟೆ ಇದನ್ನೇ ಹಾಕಬೇಕು ಎನ್ನುವುದು ಯಾವ ನ್ಯಾಯ? ಬಿಜೆಪಿಯವರು ಶಾಲು, ಪೇಟಾ ವಿತರಣೆ ಮಾಡಿದ್ದಾರೆ ಎಂದು ಆಂಜನೇಯ ಆರೋಪಿಸಿದರು.

  • ಭಾರತಕ್ಕೆ ಸ್ವಾತಂತ್ರ್ಯ ತಂದ ಕಾಂಗ್ರೆಸ್ ಜನಮಾನಸದಲ್ಲಿ ಬೇರೂರಿದೆ: ಎಚ್.ಆಂಜನೇಯ

    ಭಾರತಕ್ಕೆ ಸ್ವಾತಂತ್ರ್ಯ ತಂದ ಕಾಂಗ್ರೆಸ್ ಜನಮಾನಸದಲ್ಲಿ ಬೇರೂರಿದೆ: ಎಚ್.ಆಂಜನೇಯ

    ಚಿತ್ರದುರ್ಗ: ಬ್ರಿಟಿಷರ ಕಪಿಮುಷ್ಠಿಯಿಂದ ಭಾರತವನ್ನು ಮುಕ್ತಿಗೊಳಿಸಿದ ಕಾಂಗ್ರೆಸ್ ಪಕ್ಷ ಜನಮಾನಸದಲ್ಲಿ ಗಟ್ಟಿಯಾಗಿ ಬೇರೂರಿದೆ ಎಂದು ಮಾಜಿ ಸಚಿವ ಹೆಚ್.ಆಂಜನೇಯ ಹೇಳಿದ್ದಾರೆ.

    ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಅಂದನೂರು, ಮುತ್ತಗದೂರು, ಬಿ.ದುರ್ಗ, ಗುಂಜಿಗನೂರು ಗ್ರಾಮಗಳಲ್ಲಿ ಇಂದು ನಡೆದ ಕಾಂಗ್ರೆಸ್ ಗ್ರಾಮ ಪಂಚಾಯತಿ ಸಮಿತಿ ರಚನಾ ಸಭೆಯಲ್ಲಿ (ಪ್ರಾಜೆಕ್ಟ್ ಪ್ರಜಾಪ್ರತಿನಿಧಿ) ಅವರು ಮಾತನಾಡಿದರು. ಕಾಂಗ್ರೆಸ್ ಪಕ್ಷಕ್ಕೆ ದೇಶದಲ್ಲಿ 70 ವರ್ಷ ಆಡಳಿತ ನಡೆಸಲು ಜನರು ಅವಕಾಶ ನೀಡಿದ್ದಾರೆ. ಈ ವೇಳೆ ಮಾಜಿ ಪ್ರಧಾನಿಗಳಾದ ಜವಾಹರ್ ಲಾಲ್ ನೆಹರು, ಇಂದಿರಾ ಗಾಂಧಿ, ಲಾಲ್ ಬಹದ್ದೂರ್ ಶಾಸ್ತ್ರಿ, ರಾಜೀವ್ ಗಾಂಧಿ, ಪಿ.ವಿ.ನರಸಿಂಹರಾವ್, ಡಾ.ಮನಮೋಹನ್ ಸಿಂಗ್ ಹೀಗೆ ಅನೇಕ ಮಹನೀಯರು ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಶ್ರಮಿಸಿದ್ದಾರೆ ಎಂದರು.

    ಕಾಂಗ್ರೆಸ್ ದೇಶಕ್ಕೆ ಹಿತ ಎಂಬ ಬಿರುದನ್ನು ಜನರಿಂದ ಪಡೆದ ಏಕೈಕ ಪಕ್ಷ, ಇದು ನಮ್ಮೆಲ್ಲರ ಹೆಗ್ಗಳಿಕೆ. ಪ್ರಸ್ತುತ ದೇಶ, ರಾಜ್ಯ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಇಂಧನ ಬೆಲೆ 100 ರೂಪಾಯಿ ದಾಟಿದ್ದು, ಸಿಲಿಂಡರ್ ಬೆಲೆ ಸಾವಿರ ರೂ. ದಾಟುವ ಸಮೀಪದಲ್ಲಿದೆ. ಈಗಾಗಲೇ ಅಡುಗೆ ಎಣ್ಣೆ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರಿವೆ. ಉದ್ಯೋಗ ಕಳೆದುಕೊಂಡ ಲಕ್ಷಾಂತರ ಜನ ಹಳ್ಳಿ ಸೇರಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ತಾಲಿಬಾನ್‍ನಲ್ಲಿ ಸರ್ಕಾರ ಘೋಷಣೆ – ಮೋಸ್ಟ್ ವಾಂಟೆಡ್ ಉಗ್ರ ಈಗ ಆಂತರಿಕ ಸಚಿವ

    ಕೋವಿಡ್ ನಿರ್ವಹಣೆ ಮಾಡುವಲ್ಲಿ ಸರ್ಕಾರ ಸಂಪೂರ್ಣ ವಿಫಲಗೊಂಡ ಹಿನ್ನೆಲೆಯಲ್ಲಿ ಲಕ್ಷಾಂತರ ಮಂದಿ ಜೀವ ಕಳೆದುಕೊಂಡಿದ್ದಾರೆ. ಇದರಿಂದಾಗಿ ಕುಟುಂಬಗಳು ಬೀದಿಗೆ ಬಿದ್ದಿವೆ. ಸಂಷ್ಟಕ್ಕೆ ಸಿಲುಕಿದ ಜನರ ಆಸರೆಗೆ ಬಂದಿರುವುದು ಕಾಂಗ್ರೆಸ್ ಸರ್ಕಾರ ಮಾತ್ರ. ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿದ್ದ ಉದ್ಯೋಗ ಖಾತ್ರಿ ಮತ್ತು ಅನ್ನಭಾಗ್ಯ ಯೋಜನೆ ಎಂಬುದು ಜಗಜ್ಜಾಹೀರು. ಆದರೂ ಜನ ತೀವ್ರ ಸಂಕಷ್ಟದಲ್ಲಿದ್ದಾರೆ. ಇವರ ಸಮಸ್ಯೆಗೆ ಸ್ಪಂದಿಸುವ ಹೊಣೆಗಾರಿಕೆ ಕಾಂಗ್ರೆಸ್ ಪಕ್ಷದ ಪ್ರತಿ ಕಾರ್ಯಕರ್ತನದ್ದಾಗಿದೆ. ಈ ಕಾರಣಕ್ಕೆ ಕೇಂದ್ರ, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ನಾವೆಲ್ಲರೂ ಬದ್ಧರಾಗಬೇಕಿದೆ ಎಂದು ಕರೆ ನೀಡಿದರು.

    ಪ್ರಸ್ತುತ ಸನ್ನಿವೇಶದಲ್ಲಿ ಪಕ್ಷದ ನಿಜವಾದ ಆಸ್ತಿ ಆಗಿರುವ ಕಾರ್ಯಕರ್ತರು, ಈ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಡಬೇಕಿದೆ. ಈ ಹಿನ್ನೆಲೆಯಲ್ಲಿ ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಗ್ರಾಮ ಪಂಚಾಯಿತಿ, ಸಮಿತಿ ರಚಿಸುವ ಮಹತ್ತರ ಕಾರ್ಯ ಕೈಗೊಳ್ಳಲಾಗಿದೆ. ನಿಷ್ಠಾವಂತ ಕಾರ್ಯಕರ್ತರ ರಾಜಕೀಯ ಬೆಳವಣಿಗೆಗೆ ಇದೊಂದು ಭದ್ರ ಬುನಾದಿ ಆಗಲಿದೆ. ಈ ಹಿನ್ನೆಲೆಯಲ್ಲಿ ಕಾರ್ಯಕರ್ತರೆಲ್ಲರೂ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಪದಾಧಿಕಾರಿಗಳಾಗಿ ಸೇವೆ ಸಲ್ಲಿಸಬೇಕೆಂದು ಮನವಿ ಮಾಡಿದರು.

    ಇದೇ ವೇಳೆ ಅಂದನೂರು, ಮುತ್ತಗದೂರು, ಬಿ.ದುರ್ಗ, ಗುಂಜಿಗನೂರು ಗ್ರಾಮಗಳಲ್ಲಿ ಕಾಂಗ್ರೆಸ್ ಗ್ರಾಮ ಪಂಚಾಯತಿ (ಪ್ರಾಜೆಕ್ಟ್ ಪ್ರಜಾಪ್ರತಿನಿಧಿ) ಅಧ್ಯಕ್ಷರು, ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿ ಹಾಗೂ ಸದಸ್ಯರನ್ನು ನೇಮಿಸಲಾಯಿತು. ಸಭೆಯಲ್ಲಿ ಹೊಳಲ್ಕೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಟಿ.ಹನುಮಂತಪ್ಪ, ಭರಮಸಾಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದುರುಗೇಶ್ ಪೂಜಾರಿ, ಜಿಪಂ ಮಾಜಿ ಸದಸ್ಯ ಲೋಹಿತ್ ಕುಮಾರ್, ಅಂದನೂರು ಗ್ರಾಮಪಂಚಾಯತಿ ಅಧ್ಯಕ್ಷೆ ಸಾಕಮ್ಮ, ಉಪಾಧ್ಯಕ್ಷ ಪ್ರಶಾಂತ್ ಕುಮಾರ್, ಮುಖಂಡರಾದ ರಂಗಸ್ವಾಮಿ, ಓಂಕಾರಸ್ವಾಮಿ, ರುದ್ರಣ್ಣ, ಲಿಂಗರಾಜು, ಬಸಣ್ಣ, ರಮೇಶ್, ಖಲಂಧರ್, ಮರಳುಸಿದ್ದಪ್ಪ, ಲೋಕೇಶ್, ತಿಪ್ಪೇಸ್ವಾಮಿ ಮೊದಲಾದವರು ಭಾಗವಹಿಸಿದ್ದರು.

  • ಚುನಾವಣೆ ಬಂದ್ರೆ ಸಾಕು ಪಾಕಿಸ್ತಾನದ ಮೇಲೆ ಬಾಂಬ್ ಹಾಕ್ತಾರೆ: ಶಾಮನೂರು ವ್ಯಂಗ್ಯ

    ಚುನಾವಣೆ ಬಂದ್ರೆ ಸಾಕು ಪಾಕಿಸ್ತಾನದ ಮೇಲೆ ಬಾಂಬ್ ಹಾಕ್ತಾರೆ: ಶಾಮನೂರು ವ್ಯಂಗ್ಯ

    ದಾವಣಗೆರೆ: ದೇಶದ ಆರ್ಥಿಕ ಪರಿಸ್ಥಿತಿ ದಿವಾಳಿಯಾಗುತ್ತಿದೆ. ಪ್ರಧಾನಿಯವರು ಇದನ್ನು ಸರಿಪಡಿಸಬೇಕು ಇಲ್ಲದಿದ್ದರೆ ಬಿಜೆಪಿ ಲೆಸ್ ಭಾರತವಾಗುತ್ತೆ ಎಂಬ ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಹೇಳಿಕೆ ಪುನರುಚ್ಚರಿಸುವ ಮೂಲಕ ಶಾಸಕ ಶಾಮನೂರು ಶಿವಶಂಕರಪ್ಪ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

    ಸಂವಿಧಾನ ಸಂರಕ್ಷಣೆ ಸಮಿತಿಯಿಂದ ದಾವಣಗೆರೆಯ ಹೈಸ್ಕೂಲ್ ಮೈದಾನದಲ್ಲಿ ಆಯೋಜಿಸಿದ್ದ, ಸಿಎಎ, ಎನ್.ಆರ್.ಸಿ ಮತ್ತು ಎನ್.ಪಿ.ಆರ್ ಖಂಡಿಸಿ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, ಚುನಾವಣೆ ಸಂದರ್ಭದಲ್ಲಿ ಮಾತ್ರ ಬಿಜೆಪಿ ಆಡಳಿತದಲ್ಲಿ ಪಾಕ್ ಮೇಲೆ ಬಾಂಬ್ ಹಾಕಿ ದಾಳಿ ಮಾಡುತ್ತಾರೆ. ಆಗ ಮಾತ್ರ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಲು ಸಾಧ್ಯ, ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಮಂತ್ರಿ ಅಮಿತ್ ಶಾ ಅವರಿಗೆ ಜಾರ್ಖಂಡ್ ಚುನಾವಣೆ ಒಳ್ಳೆ ಪಾಠ ಕಲಿಸಿದೆ. ಈಗಾಗಲೇ ಬಿಜೆಪಿ ಏಳು ರಾಜ್ಯ ಕಳೆದುಕೊಂಡಿದೆ. ಇಬ್ಬರ ಸರ್ವಾಧಿಕಾರಿ ಧೋರಣೆ ಹೆಚ್ಚು ದಿನ ನಡೆಯಲ್ಲ. ಈ ಕಾಯ್ದೆಯನ್ನ ವಾಪಸ್ ಪಡೆಯಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಇದೇ ವೇಳೆ ಮಾಜಿ ಸಚಿವ ಎಚ್. ಆಂಜನೇಯ ಮಾತನಾಡಿ, ಸ್ವಾತಂತ್ರ್ಯ ಚಳುವಳಿಯಲ್ಲಿ ಆರ್.ಎಸ್.ಎಸ್ ನವರು ಪಾಲ್ಗೊಂಡಿರಲಿಲ್ಲ, ಅವರೇ ದೇಶ ವಿರೋಧಿಗಳು. ಹೊರದೇಶಗಳಲ್ಲಿ ಹಲವು ಭಾರತೀಯರು ಕೆಲಸ ಮಾಡುತ್ತಿದ್ದಾರೆ. ಅಲ್ಲೂ ಸಹ ಇಂಥದೇ ಕಾಯ್ದೆ ಜಾರಿಗಳಿಸಿದರೆ ಅಲ್ಲಿಂದ ವಾಪಸ್ ಬರುವ ಜನರಿಗೆ ಪಕೋಡಾ ಮಾಡೋಕೆ ಹಂಚುತ್ತೀರಾ ಎಂದು ಪ್ರಧಾನಿ ಮೋದಿ ಅವರನ್ನು ಏಕವಚನದಲ್ಲಿ ಲೇವಡಿ ಮಾಡಿದರು.

    ದೇಶದ ನಿರುದ್ಯೋಗಿಗಳಿಗೆ ಮೋದಿ, ಉದ್ಯೋಗ ಕಲ್ಪಿಸಿಲ್ಲ. ಆದರೂ ಮೋದಿ ಮೋದಿ ಅಂತ ಬಡ್ಕೋತ್ತಾರೆ. ನಾಚಿಕೆ ಆಗಲ್ವಾ ನಿಮಗೆ ಮಾನ ಮರ್ಯಾದೆ ಇದೆಯಾ ಎಂದು ವಾಗ್ದಾಳಿ ಮಾಡಿದರು.