Tag: Gypsy

  • ಗಸ್ತು ತಿರುಗುತ್ತಿದ್ದ ಪೊಲೀಸ್ ಜೀಪ್‍ಗೆ ಟ್ರಕ್ ಡಿಕ್ಕಿ- ಮೂವರು ಸಾವು

    ಗಸ್ತು ತಿರುಗುತ್ತಿದ್ದ ಪೊಲೀಸ್ ಜೀಪ್‍ಗೆ ಟ್ರಕ್ ಡಿಕ್ಕಿ- ಮೂವರು ಸಾವು

    ಪಾಟ್ನಾ: ಗಸ್ತು ತಿರುಗುತ್ತಿದ್ದ ಪೊಲೀಸ್ ಜೀಪ್ ಮೇಲೆ ಟ್ರಕ್ ಉರುಳಿ ಬಿದ್ದು, ಮೂವರು ಪೊಲೀಸರು ದುರ್ಮರಣಕ್ಕೀಡಾದ ಘಟನೆ ಬಿಹಾರದಲ್ಲಿ ಇಂದು ಬೆಳಗ್ಗೆ ನಡೆದಿದೆ.

    ಮೃತರನ್ನು ಗರ್ದನಿಭಾಗ್ ಪೊಲೀಸ್ ಠಾಣೆಗೆ ಸೇರಿದ ಸಿಬ್ಬಂದಿ. ಅಗ್ನಿಶಾಮಕದಳ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ:   ಸೊಸೆಯನ್ನು ಕೊಡಲಿಯಿಂದ ಕೊಚ್ಚಿ ಕೊಂದು ಮಾವ ಎಸ್ಕೇಪ್

    ಮಂಗಳವಾರ ಮುಂಜಾನೆ 4:30ರ ಸುಮಾರಿಗೆ ಪೊಲೀಸರು ಜೀಪ್‍ನಲ್ಲಿ ಗಸ್ತು ತಿರುಗುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಟ್ರಕ್ ಚಾಲಕನ ನಿಯಂತ್ರಣ ತಪ್ಪಿ, ಪೊಲೀಸ್ ಜೀಪ್‍ನ ಮೇಲೆ ಉರುಳಿ ಬಿದ್ದಿದೆ. ಘಟನೆಯಲ್ಲಿ ಮೂರು ಮಂದಿ ಸಾವನ್ನಪ್ಪಿದ್ದಾರೆ. ಇಬ್ಬರು ಪೊಲೀಸರು ಗಾಯಗೊಂಡಿದ್ದು, ಅವರನ್ನು ಪಿಎಂಸಿಎಚ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಟ್ರೇನಿ ಡಿಎಸ್‍ಪಿ ಪ್ರಾಂಜಲ್ ತ್ರಿಪಾಠಿ ಈ ಘಟನೆಯ ಕುರಿತಾಗಿ ಮಾಹಿತಿ ನೀಡಿದ್ದಾರೆ.  ಇದನ್ನೂ ಓದಿ: ಇಂಟರ್​ನೆಟ್ ಇಲ್ಲದೆ ಆನ್‍ಲೈನ್‍ನಲ್ಲಿ ಹಣ ಕಳುಹಿಸಿ!

  • ಇನ್ನು ಮುಂದೆ ಜಿಪ್ಸಿ ಕಾರು ರಸ್ತೆಗೆ ಇಳಿಯಲ್ಲ!

    ಇನ್ನು ಮುಂದೆ ಜಿಪ್ಸಿ ಕಾರು ರಸ್ತೆಗೆ ಇಳಿಯಲ್ಲ!

    ನವದೆಹಲಿ: ಮಿಲಿಟರಿ, ಪೊಲೀಸ್ ಇಲಾಖೆ, ಮಣ್ಣಿನ ರೇಸ್ ಟ್ರ್ಯಾಕ್ ಗಳಲ್ಲಿ ಗುರುತಿಸಿಕೊಂಡಿದ್ದ ಜಿಪ್ಸಿ ಕಾರಿನ ಉತ್ಪಾದನೆಯನ್ನು ನಿಲ್ಲಿಸಲು ಮಾರುತಿ ಸುಜುಕಿ ಕಂಪನಿ ಮುಂದಾಗಿದೆ.

    ಪ್ರಸ್ತುತ ಜಿಪ್ಸಿ ಕಾರನ್ನು ಮುಂಗಡ ಬುಕ್ಕಿಂಗ್ ಆಧಾರದ ಮೇಲೆ ಗ್ರಾಹಕರಿಗೆ ವಿತರಣೆ ಮಾಡಲಾಗುತಿತ್ತು. ಈಗ ಮಾರುತಿ ಸುಜುಕಿ ಕಂಪನಿ ಶೋ ರೂಮ್ ಡೀಲರ್ ಗಳಿಗೆ ಮುಂಗಡ ಬುಕ್ಕಿಂಗ್ ಆರ್ಡರ್ ಸ್ವೀಕರಿಸಬೇಡಿ ಎಂದು ಸೂಚಿಸಿದೆ.

    ಅಪಘಾತಗಳಿಂದ ಪ್ರಾಣ ಹಾನಿಯಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಎಲ್ಲ ವಾಹನಗಳು ಕನಿಷ್ಠ ಸುರಕ್ಷತಾ ಮಾನದಂಡವನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕೆಂದು ಕಾರು ಉತ್ಪಾದಕಾ ಕಂಪನಿಗಳಿಗೆ ಸೂಚಿಸಿದೆ. ಏಪ್ರಿಲ್ 2019 ರಿಂದ ರಸ್ತೆಗೆ ಇಳಿಯಲಿರುವ ಕಾರುಗಳು ಈ ಮಾನದಂಡವನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕೆಂದು ಸರ್ಕಾರ ಆದೇಶಿಸಿದೆ. ಇದನ್ನೂ ಓದಿ: 2020ರಿಂದ ಮಾರುತಿ ಓಮ್ನಿ ಕಾರು ಉತ್ಪಾದನೆ ಸ್ಥಗಿತ

    ಕನಿಷ್ಠ ಸುರಕ್ಷತಾ ಮಾನದಂಡ ಕಡ್ಡಾಯಗೊಳಿಸಿದ ಹಿನ್ನೆಲೆಯಲ್ಲಿ ಜಿಪ್ಸಿ ಕಾರನ್ನು ಮಾರುತಿ ಕಂಪನಿ ಕೆಲವೊಂದು ಬದಲಾವಣೆ ಮಾಡಿ ರಸ್ತೆಗೆ ಇಳಿಸಲು ಪ್ರಯತ್ನ ನಡೆಸಿತ್ತು. ಆದರೆ ಹೊಸ ರಕ್ಷಣೆ ಮತ್ತು ಕ್ರ್ಯಾಶ್ ಟೆಸ್ಟ್ ತೇರ್ಗಡೆಯಾಗಲು ವಿಫಲವಾದ ಹಿನ್ನೆಲೆಯಲ್ಲಿ ಜಿಪ್ಸಿ ಕಾರಿನ ಉತ್ಪಾದನೆಯನ್ನೇ ನಿಲ್ಲಿಸಲು ಮುಂದಾಗಿದೆ.

    1985ರಲ್ಲಿ ಮೊದಲ ಜಿಪ್ಸಿ ಕಾರು ರಸ್ತೆಗೆ ಇಳಿದಿದ್ದು, ಅಲ್ಲಿಂದ ಇಲ್ಲಿಯವರೆಗೆ ಅದೇ ವಿನ್ಯಾಸದಲ್ಲೇ ಉತ್ಪಾದನೆಯಾಗುತಿತ್ತು. 1998ರಲ್ಲಿ ಮೂರನೇ ತಲೆಮಾರಿನ ಜಿಪ್ಸಿ ತಯಾರಾಗಿದ್ದರೆ ಕಳೆದ ವರ್ಷ ನಾಲ್ಕನೇ ತಲೆಮಾರಿನ ಕಾರನ್ನು ಮಾರುತಿ ಅಭಿವೃದ್ಧಿ ಪಡಿಸಿತ್ತು. ಇದನ್ನೂ ಓದಿ: ಬಿಎಸ್4 ಕಾರಿಗೆ ಬಿಎಸ್6 ಇಂಧನ ಹಾಕಿದ್ರೆ ಏನಾಗುತ್ತೆ?

    ಆಫ್ ರೋಡ್ ನಲ್ಲಿ 4*4 ಜಿಪ್ಸಿ ಕಾರು ಬಹಳ ಚೆನ್ನಾಗಿ ಕಾರ್ಯನಿರ್ವಹಿಸುತಿತ್ತು. ಹೀಗಾಗಿ ಮಿಲಿಟರಿ ಮತ್ತು ಗ್ರಾಮೀಣ ಭಾಗದಲ್ಲಿ ಜಿಪ್ಸಿ ಜನಪ್ರಿಯತೆಯನ್ನು ಪಡೆದುಕೊಂಡಿತ್ತು. ವಿದೇಶದಲ್ಲೂ ಜಿಪ್ಸಿ ಜನಪ್ರಿಯತೆಯನ್ನು ಪಡೆದುಕೊಂಡಿದೆ. ಭಾರತದಲ್ಲಿ ಜಿಪ್ಸಿ ಎಂದು ಕರೆಯುತ್ತಿದ್ದರೆ ವಿದೇಶದಲ್ಲಿ ಸಮರಾಯ್ ಅಥವಾ ಎಸ್‍ಜೆ410 ಹೆಸರಿನಲ್ಲಿ ಮಾರಾಟವಾಗುತಿತ್ತು. ಇದನ್ನೂ ಓದಿ:  ಏನಿದು ಕ್ರ್ಯಾಶ್ ಟೆಸ್ಟ್? ಹೇಗೆ ಅಂಕ ನೀಡಲಾಗುತ್ತದೆ?

    ಆರಂಭದಲ್ಲಿ 1.0 ಲೀಟರ್ ಎಂಜಿನ್ ನಲ್ಲಿ ಬಿಡುಗಡೆಯಾಗಿದ್ದ ಜಿಪ್ಸಿ ನಂತರ 1.3 ಲೀಟರ್ ಎಂಜಿನ್, 5 ಗೇರ್ ಗಳಲ್ಲಿ ಬಿಡುಗಡೆಯಾಗುತಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv