Tag: Gym trainer

  • ಇಂದು `ಜಂಗ್ಲಿ’ಯ ಜಾಮೀನು ಭವಿಷ್ಯ- ಇತ್ತ ಕೀರ್ತಿಗೆ ಭದ್ರತೆ ನೀಡುವಂತೆ ವಿಜಿ ಪತ್ರ

    ಇಂದು `ಜಂಗ್ಲಿ’ಯ ಜಾಮೀನು ಭವಿಷ್ಯ- ಇತ್ತ ಕೀರ್ತಿಗೆ ಭದ್ರತೆ ನೀಡುವಂತೆ ವಿಜಿ ಪತ್ರ

    ಬೆಂಗಳೂರು: ಕಳೆದೊಂದು ವಾರದಿಂದ ಪರಪ್ಪನ ಅಗ್ರಹಾರದಲ್ಲಿರುವ ದುನಿಯಾ ವಿಜಿ, ಜೈಲಿನಿಂದ ಹೊರ ಬರ್ತಾರೋ ಇಲ್ವೋ ಅನ್ನೋದು ಇಂದು ನಿರ್ಧಾರವಾಗಲಿದೆ. ಇಂದು 8ನೇ ಎಸಿಎಂಎಂ ಕೋರ್ಟ್ ಜಂಗ್ಲಿಯ ಜಾಮೀನು ಅರ್ಜಿ ತೀರ್ಪು ನೀಡಲಿದೆ. ಈ ನಡುವೆ ಎರಡನೇ ಪತ್ನಿಗೆ ಭದ್ರತೆ ನೀಡುವಂತೆ ವಿಜಿ ಪೊಲೀಸರಿಗೆ ಪತ್ರ ಬರೆದಿದ್ದಾರೆ.

    ಜಿಮ್ ಟ್ರೈನರ್ ಮಾರುತಿ ಗೌಡನನ್ನು ಕಿಡ್ನಾಪ್ ಮಾಡಿ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ಜಾಮೀನು ಅರ್ಜಿ ವಿಚಾರಣೆ ನಡೆಸಿದ 8ನೇ ಎಸಿಎಂಎಂ ಕೋರ್ಟ್ ಇಂದಿಗೆ ತೀರ್ಪು ಮುಂದೂಡಿತ್ತು. ಇಂದು ಮಧ್ಯಾಹ್ನ 3 ಗಂಟೆಗೆ 8ನೇ ಎಸಿಎಂಎಂ ಕೋರ್ಟ್ ಜಾಮೀನು ಅರ್ಜಿಯ ತೀರ್ಪು ಪ್ರಕಟಿಸಲಿದೆ.

    ಇನ್ನು ಹಲ್ಲೆಗೊಳಗಾದ ಮಾರುತಿ ಗೌಡ ಈಗಾಗಲೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಹಾಗಾಗಿ ದುನಿಯಾ ವಿಜಿ ಜಾಮೀನು ಸಿಗೋ ನಿರೀಕ್ಷೆಯಲ್ಲಿದ್ದಾರೆ. ಇತ್ತ ಸೆಲೆಬ್ರಿಟಿ ಎಂಬ ಕಾರಣಕ್ಕೆ ಈ ಪ್ರಕರಣವನ್ನು ದೊಡ್ಡದು ಮಾಡಿದ್ದಾರೆ. ಇವರೇನು ರೌಡಿ ಅಲ್ಲ ಆಕಸ್ಮಿಕವಾಗಿ ಆದ ಜಗಳ ಅಂತಾ ದುನಿಯಾ ವಿಜಿ ಪರ ವಕೀಲರು ವಾದಿಸಿದ್ದರು.

    ಇದೆಲ್ಲದರ ನಡುವೆ ದೊಡ್ಡೆಂಡ್ತಿ-ಚಿಕ್ಕೆಂಡ್ತಿ ಗಲಾಟೆಯಿಂದ ಜೈಲಲ್ಲೂ ಕಂಗಾಲಾಗಿರೋ ದುನಿಯಾ ವಿಜಯ್ ಇದೀಗ, ಕೀರ್ತಿಗೆ ಹೆಚ್ಚುಕಮ್ಮಿಯಾದ್ರೆ ನಾಗರತ್ನರವರೇ ನೇರ ಹೊಣೆ ಅಂತ ಸೆಂಟ್ರಲ್ ಜೈಲ್‍ನಿಂದಲೇ ಗಿರಿನಗರ ಪೊಲೀಸರಿಗೆ ವಿಜಯ್ ಪತ್ರ ಬರೆದಿದ್ದಾರೆ.

    ಪತ್ರದಲ್ಲೇನಿದೆ?:
    ಇಂದ
    ಬಿ.ಆರ್.ವಿಜಯ್ ಕುಮಾರ್ ಸನ್ ಆಫ್ ಸಿ.ರುದ್ರಪ್ಪ
    ಕೇಂದ್ರ ಕಾರಾಗೃಹ, ಬೆಂಗಳೂರು

    ಮಾನ್ಯರೇ,
    ವಿಷಯ: ನನ್ನ ಪತ್ನಿ ಕೀರ್ತಿ ಇವರಿಗೆ ಸೂಕ್ತ ಭದ್ರತೆ ಒದಗಿಸುವ ಕೋರಿ

    ನನ್ನ ಪತ್ನಿ ಕೀರ್ತಿ ಕಳೆದ ಸೋಮವಾರ ನನ್ನನ್ನು ಭೇಟಿ ಮಾಡಲು ಕೇಂದ್ರ ಕಾರಾಗೃಹಕ್ಕೆ ಬಂದಿದ್ದು, ದಿನಾಂಕ 23/09/18ರಂದು ನಾಗರತ್ನರವರು ನನ್ನ ಪತ್ನಿ ಕೀರ್ತಿಯವರ ಮೇಲೆ ಹಲ್ಲೆ ನಡೆಸಿದ್ದಾರಂತೆ. ಇದರಿಂದ ನನ್ನ ಪತ್ನಿ ಕೀರ್ತಿಯವರು ತೀವ್ರ ಭಯಭೀತರಾಗಿರುತ್ತಾರೆ. ಹಾಗೂ ನನ್ನನ್ನು ಭೇಟಿ ಮಾಡಲು ಬರುವ ಸಮಯದಲ್ಲಿ ಕಾರ್ ಡ್ರೈವರ್ ಮಹಮ್ಮದ್‍ರವರಿಗೆ ಕರೆ ಮಾಡಿ ನಿನ್ನನ್ನು ಅಂದರೆ ಕೀರ್ತಿಯವರನ್ನು ಸುಮ್ಮನೆ ಬಿಡುವುದಿಲ್ಲ. ನೀನು ಮತ್ತೆ ಮನೆಗೆ ಬಂದರೆ ನಿನಗೆ ಒಂದು ಗತಿ ಕಾಣಿಸುತ್ತೇನೆ ಎಂದು ಧಮ್ಕಿ ಹಾಕಿರುತ್ತಾರೆ ಹಾಗೂ ಕೊಲೆ ಬೆದರಿಕೆಯೊಡ್ಡಿರುತ್ತಾರೆ. ಸುಮ್ಮನೆ ನನ್ನ ಪತ್ನಿ ಮೇಲೆ ಆರೋಪ ಮಾಡಿ ಪ್ರಕರಣ ದಾಖಲು ಮಾಡುತ್ತಿದ್ದು, ದಯಮಾಡಿ ನನ್ನ ಹೆಂಡತಿ ಕೀರ್ತಿಗೆ ಸೂಕ್ತ ಭದ್ರತಾ ವ್ಯವಸ್ಥೆ ನೀಡಬೇಕೆಂದು ತಮ್ಮಲ್ಲಿ ಕಳಕಳಿಯಿಂದ ಪ್ರಾರ್ಥಿಸುತ್ತಿದ್ದೇನೆ. ಹಾಗೂ ನನ್ನ ಪತ್ನಿ ಕೀರ್ತಿಯವರಿಗೆ ಪ್ರಾಣ ಬೆದರಿಕೆ ಇದ್ದು, ಸೂಕ್ತ ಭದ್ರತೆ ಒದಗಿಸಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತಿದ್ದೇನೆ. ನನ್ನ ಪತ್ನಿ ಕೀರ್ತಿಯವರು ಮಾನಸಿಕ ಕಿರುಕುಳದಿಂದ ನೊಂದಿದ್ದು, ಮತ್ತೆ ಈ ರೀತಿಯ ಘಟನೆ ಜರುಗಿದಲ್ಲಿ ನಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಿಳಿಸಿರುತ್ತಾರೆ. ನನ್ನ ಪತ್ನಿ ಕೀರ್ತಿಯವರಿಗೆ ಏನಾದರೂ ತೊಂದರೆಯಾದಲ್ಲಿ ನಾಗರತ್ನರವರೇ ನೇರ ಹೊಣೆಗಾರರಾಗಿರುತ್ತಾರೆ.

    ವಂದನೆಗಳೊಂದಿಗೆ

    ಇಂತಿ ತಮ್ಮ ವಿಶ್ವಾಸಿ
    ಬಿ.ಆರ್.ವಿಜಯ್ ಕುಮಾರ್

    ಒಟ್ಟಿನಲ್ಲಿ ಇಂದು ದುನಿಯಾ ವಿಜಿಗೆ ಜಾಮೀನು ಸಿಕ್ಕರೆ ಬಿಗ್ ರಿಲೀಫ್ ಸಿಕ್ಕಂತಾಗಲಿದ್ದು, ಇಲ್ಲದೆ ಹೋದ್ರೆ ಇನ್ನಷ್ಟು ದಿನ ಜೈಲೂಟ ಗ್ಯಾರಂಟಿಯಾಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ವಿಜಿ ಮಗನನ್ನ ಕಾಡಿಸಿಲ್ಲ, ಅವರೇ ಕಿಟ್ಟಿ ಎಲ್ಲಿದ್ದಾನೆ ಅಂತಾ ಹಲ್ಲೆ ಮಾಡಿದ್ರು: ಮಾರುತಿ ಗೌಡ

    ವಿಜಿ ಮಗನನ್ನ ಕಾಡಿಸಿಲ್ಲ, ಅವರೇ ಕಿಟ್ಟಿ ಎಲ್ಲಿದ್ದಾನೆ ಅಂತಾ ಹಲ್ಲೆ ಮಾಡಿದ್ರು: ಮಾರುತಿ ಗೌಡ

    ಬೆಂಗಳೂರು: ದುನಿಯಾ ವಿಜಯ್ ಹಲ್ಲೆ ಪ್ರಕರಣದ ಜಾಮೀನು ಅರ್ಜಿ ವಿಚಾರಣೆಯನ್ನು ಕೋರ್ಟ್ ಸೋಮವಾರಕ್ಕೆ ಮುಂದೂಡಿದೆ. ಆದರೆ ಹಲ್ಲೆಗಳೊಗಾದ ಮಾರುತಿ ಗೌಡ ಅವರ ಆರೋಗ್ಯದಲ್ಲಿ ಸುಧಾರಣೆ ಕಂಡಿದ್ದು, ಹಲ್ಲೆಯ ಕುರಿತು ಮಾರುತಿಗೌಡ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.

    ದುನಿಯಾ ವಿಜಯ್ ಅವರ ಮಗನಿಗೆ ನಾನು ಕಿಚಾಯಿಸಿಲ್ಲ. ಆದರೆ ಅವರೇ ಕಿಟ್ಟಿ ಎಲ್ಲಿದ್ದಾನೆ ಅಂತಾ ರೇಗಿಸಿ ಹೊಡೆದರು ಎಂದು ಹಲ್ಲೆಗೊಳಗಾದ ಮಾರುತಿ ಗೌಡ ಆರೋಪಿಸಿದ್ದಾರೆ.

    ನನ್ನನ್ನು ಕಾರಿನಲ್ಲಿ ಕೂರಿಸಿಕೊಂಡು ಚಾಲನೆ ಮಾಡುತ್ತಲೇ ಸುಮಾರು 11 ಜನರು ಜಾಕ್‍ರಾಡ್‍ನಿಂದ ಹಲ್ಲೆ ಮಾಡಿದ್ದಾರೆ. ಬಳಿಕ ನನಗೆ ದುನಿಯಾ ವಿಜಯ್ ಫ್ಯಾನ್ಸ್ ಹೊಡೆದ್ರು ಅಂತ ಹೇಳಬೇಕೆಂದು ಎಚ್ಚರಿಕೆ ನೀಡಿದ್ದರು. ಅಷ್ಟೇ ಅಲ್ಲದೆ ಅಭಿಮಾನಿಗಳು ಹೊಡೆಯುವ ರೀತಿ ವಿಡಿಯೋ ಮಾಡಿಸಿದರು ಎಂದರು.

    ನನ್ನ ಭೇಟಿಗೆ ದುನಿಯಾ ವಿಜಯ್ ಮೊದಲ ಪತ್ನಿ ನಾಗರತ್ನ ಅವರು ಬಂದಿದ್ದರು, ಆರೋಗ್ಯ ವಿಚಾರಿಸಿದ್ದಾರೆ. ಆದರೆ ಯಾವುದೇ ರಾಜಿ ಸಂಧಾನ ಮಾಡಿಕೊಂಡಿಲ್ಲ. ಕಾನೂನು ಹೋರಾಟ ಕೈಬಿಡುವುದಿಲ್ಲ ಎಂದು ಮಾರುತಿ ಗೌಡ ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ದುನಿಯಾ ವಿಜಿಗೆ ಇನ್ನೂ 2 ದಿನ ಜೈಲು!

    ದುನಿಯಾ ವಿಜಿಗೆ ಇನ್ನೂ 2 ದಿನ ಜೈಲು!

    ಬೆಂಗಳೂರು: ಜಿಮ್ ಟ್ರೈನರ್ ಮಾರುತಿ ಗೌಡ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿರುವ ದುನಿಯಾ ವಿಜಯ್ ಅವರು ಇನ್ನೂ 2 ದಿನಗಳ ಕಾಲ ಜೈಲಿನಲ್ಲೇ ಇರಲಿದ್ದಾರೆ.

    ಜೈಲಿನಲ್ಲಿರುವ ವಿಜಯ್ ಅವರ ಜಾಮೀನು ಅರ್ಜಿಯನ್ನು ಈ ಹಿಂದೆ ಮ್ಯಾಜಿಸ್ಟ್ರೇಟ್ ಕೋರ್ಟ್ ವಜಾಗೊಳಿಸಿತ್ತು. ಹೀಗಾಗಿ ಜಾಮೀನಿಗಾಗಿ ವಿಜಿ ಸೆಷನ್ಸ್ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಇಂದು ಸೆಷನ್ಸ್ ಕೋರ್ಟ್ ನಲ್ಲಿ ಅರ್ಜಿ ವಿಚಾರಣೆ ನಡೆದಿದ್ದು, ಅಕ್ಟೋಬರ್ 1ಕ್ಕೆ ಕೋರ್ಟ್ ಆದೇಶವನ್ನು ಕಾಯ್ದಿರಿಸಿದೆ.

    ವಿಜಿ ಪರ ವಕೀಲರ ವಾದವೇನು?:
    ಐಪಿಸಿ ಸೆಕ್ಷನ್ ಕಲಂ 326 ಹೊರತುಪಡಿಸಿ ಉಳಿದ ಪ್ರಕರಣಗಳು ಜಾಮೀನಿಗೆ ಅರ್ಹವಾದದ್ದಾಗಿದೆ. ಇಲ್ಲಿ ಉದ್ದೇಶಪೂರ್ವಕವಾಗಿ ಐಪಿಸಿ ಸೆಕ್ಷನ್ 326 ಸೆಕ್ಷನ್ ಸೇರಿಸಲಾಗಿದೆ. ಆದ್ರೆ ದೂರಿನಲ್ಲಾಗಲಿ, ಎಫ್‍ಐಆರ್ ನಲ್ಲಾಗಲಿ ಮಾರಕಾಸ್ತ್ರದ ಬಗ್ಗೆ ಪ್ರಸ್ತಾಪವಿಲ್ಲ. ಕೈನಿಂದ ಹಲ್ಲೆ ಎಂದು ಮಾತ್ರ ಆರೋಪಿಸಲಾಗಿತ್ತು. ಈ ಬಗ್ಗೆ ನೀಡಿದ ಮೊದಲ ಹೇಳಿಕೆಯಲ್ಲೂ ಇದರ ಪ್ರಸ್ತಾಪವಿಲ್ಲ. ನಾಲ್ಕು ಗಂಟೆಗಳ ಅವಧಿಯಲ್ಲಿ 2 ನೇ ಹೇಳಿಕೆ ಪಡೆದು ಸೆಕ್ಷನ್ 326 ದಾಖಲಿಸಿದ್ದಾರೆ. ಹಲ್ಲೆಗೊಳಗಾದ ಮಾರುತಿ ಗೌಡ ಆರೋಗ್ಯ ಸುಧಾರಿಸಿದೆ. ನಿನ್ನೆ ಆಸ್ಪತ್ರೆಯಿಂದ ಅವರು ಡಿಸ್ಚಾರ್ಜ್ ಆಗಿದ್ದಾರೆ. ಇದೊಂದು ಸಾಮಾನ್ಯ ಪ್ರಕರಣವಾಗಿದೆ. ಹೀಗಾಗಿ ವಿಜಿಗೆ ಜಾಮೀನು ನೀಡಿ ಅಂತ ದುನಿಯಾ ವಿಜಿ ಪರ ವಕೀಲ ಆರ್. ಶ್ರೀನಿವಾಸ್ ವಾದ ಮಾಡಿದ್ದಾರೆ.


    ಸರ್ಕಾರಿ ವಕೀಲರ ವಾದವೇನು?:
    ದುನಿಯಾ ವಿಜಿ ಮನುಷ್ಯನೇ ಅಲ್ಲ. ಈತ ಸುಧಾರಿಸುವ ಲಕ್ಷಣಗಳು ಕಾಣಿಸುತ್ತಿಲ್ಲ. ಹೀಗಾಗಿ ಯಾವುದೇ ಕಾರಣಕ್ಕೂ ವಿಜಿಗೆ ಜಾಮೀನು ನೀಡಬೇಡಿ ಅಂತ ಸರ್ಕಾರಿ ಪರ ವಕೀಲರು ಪ್ರತಿವಾದ ಮಾಡಿದ್ದಾರೆ.

    ಹೀಗಾಗಿ ಎರಡೂ ತಂಡಗಳ ವಾದ-ಪ್ರತಿವಾದಗಳನ್ನು ಆಲಿಸಿದ ಕೋರ್ಟ್ ಅದೇಶವನ್ನು ಅಕ್ಟೋಬರ್ 1ಕ್ಕೆ ಕಾಯ್ದಿರಿಸಿದೆ. ಈ ಹಿನ್ನೆಲೆಯಲ್ಲಿ ದುನಿಯಾ ವಿಜಿ ಅವರು ಇನ್ನೂ 2 ದಿನಗಳ ಕಾಲ ಜೈಲಿನಲ್ಲಿರಲಿದ್ದಾರೆ.

    ಜಾಮೀನು ನೀಡದಂತೆ ಹೈಗ್ರೌಂಡ್ಸ್ ಪೊಲೀಸರು ಕೂಡ ಆಕ್ಷೇಪಣೆ ಸಲ್ಲಿಸಿದ್ದರು. ಈ ಆಕ್ಷೇಪಣೆಗಳೇನು?:
    * ಆರೋಪಿಗಳು ಗಾಂಜಾ ಸೇವಿಸಿದ್ದಾರೆ ಎಂಬ ಮಾಹಿತಿ ಇದೆ
    * ರಕ್ತ ಮಾದರಿ ಕೊಡಲಾಗ್ತಾ ಇದೆ, ಈಗಲೇ ಜಾಮೀನು ಮಂಜೂರು ಮಾಡಬೇಡಿ.
    * ಆರೋಪಿ ಪದೇ ಪದೇ ಇದೇ ರೀತಿಯ ಗಲಾಟೆ ಮಾಡ್ತಾನೆ
    * ಇದೇ ರೀತಿಯ ಗಲಾಟೆಯನ್ನು ಮಾಡಿ ಮೂರು ಬಾರಿ ಸ್ಟೇಷನ್ ಬೇಲ್ ಪಡೆದಿದ್ದಾರೆ
    * ಈ ಬಾರಿಯೂ ಜಾಮೀನು ಸಿಕ್ಕಿದ್ದರೆ ಕಾನೂನು ಮೇಲಿನ ಭಯ ಹೋಗುತ್ತೆ
    * ಪ್ರಭಾವಿ ವ್ಯಕ್ತಿ ಆಗಿರೋದ್ರಿಂದ ಸಾಕ್ಷಿ ನಾಶ ಮಾಡ್ತಾನೆ
    * ಪೊಲೀಸ್ ಠಾಣೆಯ ಮುಂದೆಯೇ ದೊಡ್ಡ ಗಲಾಟೆ ಮಾಡಿದ್ದಾನೆ.

    ಮಾರುತಿ ಗೌಡ ಡಿಸ್ಚಾರ್ಜ್:
    ದುನಿಯಾ ವಿಜಿಗೆ ಜಾಮೀನು ಸಿಗುವ ಸಾಧ್ಯತೆಗಳಿವೆ. ಯಾಕಂದ್ರೆ ಹಲ್ಲೆಗಳೊಳಗಾಗಿದ್ದ ಮಾರುತಿ ಗೌಡ ಶುಕ್ರವಾರ ರಾತ್ರಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ನಟ ದುನಿಯಾ ವಿಜಿ ಹಲ್ಲೆಯಿಂದ ವಿಕ್ರಮ್ ಆಸ್ಪತ್ರೆಯಲ್ಲಿ ಮಾರುತಿ ಗೌಡ ದಾಖಲಾಗಿದ್ದರು. ಆರು ದಿನಗಳ ಬಳಿಕ ನಿನ್ನೆ ರಾತ್ರಿ ಡಿಸ್ಚಾರ್ಜ್ ಆಗಿದ್ದಾರೆ. ಮಾರುತಿ ಗೌಡ ತುಟಿಗೆ ಗಾಯವಾಗಿ, ಕಣ್ಣು ಮತ್ತು ಮುಖ ಊತ ಬಂದಿತ್ತು. ಹೀಗಾಗಿ ಆರು ದಿನಗಳ ಕಾಲ ಚಿಕಿತ್ಸೆ ನೀಡಿ ತುಟಿಗೆ ಹದಿನೈದು ಹೊಲಿಗೆ ಹಾಕಲಾಗಿತ್ತು. ಸದ್ಯಕ್ಕೆ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದ ಹಿನ್ನೆಲೆ ಡಿಸ್ಚಾರ್ಜ್ ಆಗಿ ಮನೆಗೆ ತೆರಳಿದ್ದಾರೆ.

    ಏನಿದು ಪ್ರಕರಣ?:
    ಕಳೆದ ಶನಿವಾರ ವಸಂತನಗರದ ಅಂಬೇಡ್ಕರ್ ಭವನದಲ್ಲಿ ಮಿಸ್ಟರ್ ಬೆಂಗಳೂರು ಬಾಡಿ ಬಿಲ್ಡಿಂಗ್ ಸ್ಪರ್ಧೆ ನಡೆಯುತಿತ್ತು. ಈ ಸ್ಪರ್ಧೆ ನೋಡಲು ದುನಿಯಾ ವಿಜಿ ತಮ್ಮ ತಂಡದೊಂದಿಗೆ ಬಂದಿದ್ದರು. ಈ ವೇಳೆ ಪಾನಿಪೂರಿ ಕಿಟ್ಟಿ ಅಣ್ಣನ ಮಗ ಮಾರುತಿಗೌಡ ಮತ್ತು ದುನಿಯಾ ವಿಜಿ ನಡುವೆ ಮಾತಿನ ಚಕಮಕಿ ನಡೆದಿತ್ತು. ಆದರೆ ಗಲಾಟೆ ವಿಕೋಪಕ್ಕೆ ತಿರುಗಿ ದುನಿಯಾ ವಿಜಯ್ ಗ್ಯಾಂಗ್, ಮಾರುತಿ ಗೌಡರ ಮೇಲೆ ಹಲ್ಲೆ ನಡೆಸಿ ಕಾರಿನಲ್ಲಿ ಹಾಕಿಕೊಂಡು ಕಿಡ್ನಾಪ್ ಮಾಡಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=YjxBslBdbNU

  • ಡಿಸ್ಚಾರ್ಜ್ ಆದ ಮಾರುತಿ ಗೌಡಾಗೆ ಮಾತಾಡಕ್ಕೂ ಆಗ್ತಿಲ್ಲ, ನಡೆಯೋಕೂ ಆಗ್ತಿಲ್ಲ!

    ಡಿಸ್ಚಾರ್ಜ್ ಆದ ಮಾರುತಿ ಗೌಡಾಗೆ ಮಾತಾಡಕ್ಕೂ ಆಗ್ತಿಲ್ಲ, ನಡೆಯೋಕೂ ಆಗ್ತಿಲ್ಲ!

    – ಕಿಟ್ಟಿಯಿಂದ ರಾಜಿ ಸಂಧಾನದ ಸುಳಿವು

    ಬೆಂಗಳೂರು: ನಟ ದುನಿಯಾ ವಿಜಿಯಿಂದ ಹಲ್ಲೆಗೊಳಗಾದ ಜಿಮ್ ಟ್ರೈನರ್ ಮಾರುತಿ ಗೌಡ ಅವರು ವಿಕ್ರಮ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಆದ್ರೆ ಮಾತೋಡ್ತಾನೂ ಇಲ್ಲ. ನಡೆಯೋದಕ್ಕೂ ಆಗ್ತಿಲ್ಲ. ಈ ಮಧ್ಯೆ ಪಾನಿಪುರಿ ಕಿಟ್ಟಿ ರಾಜಿ ಸಂಧಾನದ ಸುಳಿವು ಕೊಟ್ಟಿದ್ದಾರೆ.

    ಇಂದು ದುನಿಯಾ ವಿಜಯ್ ಅವರ ಜಾಮೀನು ಅರ್ಜಿ ವಿಚಾರಣೆ ಬೆನ್ನಲ್ಲೇ ಡಿಸ್ಚಾರ್ಜ್ ಮಾಡಿದ್ದು, ಇದೀಗ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ದುನಿಯಾ ವಿಜಿಯಿಂದ ಹಲ್ಲೆಗೊಳಗಾದ ಮಾರುತಿ ಗೌಡ ಒಂದು ವಾರಗಳ ಬಳಿಕ ವಿಕ್ರಮ್ ಆಸ್ಪತ್ರೆಯಿಂದ ಶುಕ್ರವಾರ ರಾತ್ರಿ ಡಿಸ್ಚಾರ್ಜ್ ಆಗಿದ್ದಾರೆ. ಮಾರುತಿ ಗೌಡ ಅವರಿಗೆ ಹಲ್ಲೆ ವೇಳೆ ತುಟಿಗೆ ಮತ್ತು ಕಣ್ಣಿನ ಭಾಗಕ್ಕೆ ಹೊಡೆತ ಬಿದ್ದು ಊತ ಬಂದಿತ್ತು. ಈ ಹಿನ್ನೆಲೆ 15 ಹೊಲಿಗೆ ಬಿದ್ದಿದ್ದು, ಸದ್ಯ ಆರೋಗ್ಯದಲ್ಲಿ ಸುಧಾರಿಸಿದೆ. ಇದನ್ನೂ ಓದಿ:  ನಟ ದುನಿಯಾ ವಿಜಯ್ ಗೆ ಜಾಮೀನು?

    ಮಾರುತಿ ಗೌಡನಿಗೆ 15 ಹೊಲಿಗೆ ಬಿದ್ದಿರೋ ಕಾರಣದಿಂದಾಗಿ ಮಾತನಾಡಲು ಸಾಧ್ಯಾವಾಗದೇ ಓಡಾಡಲು ವೀಲ್ ಚೇರ್ ಬಳಸಿ ಮನೆ ತಲುಪಿದ್ದು, ಎರಡು ದಿನಕ್ಕೊಮ್ಮೆ ಆಸ್ಪತ್ರೆಯ ಭೇಟಿ ನೀಡಿ ಆರೋಗ್ಯ ಪರಿಶೀಲನೆ ಮಾಡಿಕೊಳ್ಳುವಂತೆ ವೈದ್ಯರು ಸಲಹೆ ನೀಡಿದ್ದಾರೆ ಅಂತ ಚಿಕ್ಕಪ್ಪ ಪಾನಿಪುರಿ ಕಿಟ್ಟಿ ತಿಳಿಸಿದ್ದಾರೆ.

    ಮಾರುತಿ ಗೌಡ ಆಸ್ಪತ್ರೆಯಲ್ಲಿದ್ದಾಗಲೇ ಸಂಧಾನಕ್ಕಾಗಿ ದುನಿಯಾ ವಿಜಿಯ ಮೊದಲನೇ ಹೆಂಡತಿ ನಾಗರತ್ನ ಆಸ್ಪತ್ರೆಗೆ ಭೇಟಿ ನೀಡಿದ್ದರು. ಈ ಬಗ್ಗೆ ಪಾನಿಪುರಿ ಕಿಟ್ಟಿಯನ್ನ ಪ್ರಶ್ನೆ ಮಾಡಿದ್ರೆ, ನಾಗರತ್ನ ಅವರು ನನ್ನ ಹತ್ತಿರ ಮಾತಾಡಿಲ್ಲ. ರಾಜಿ ಸಂಧಾನದ ಬಗ್ಗೆನೂ ನನಗೆ ಗೊತ್ತಿಲ್ಲ. ಸಂಧಾನ ಮಾಡಿಕೊಳ್ಳಲ್ಲ ಕಾನೂನು ಹೋರಾಟ ಮಾಡ್ತೇನೆ. ದುನಿಯಾ ವಿಜಿ ಮತ್ತು ಪತ್ನಿ ಸಂಧಾನಕ್ಕೆ ಬಂದರೆ ನನ್ನ ಮಗ ಗುಣವಾದ ಮೇಲೆ ಸಂಧಾನದ ಬಗ್ಗೆ ಮಾತಾಡೋಣ ಅಂತ ಹೇಳಿದ್ದರು. ಇದನ್ನೂ ಓದಿ: ದುನಿಯಾ ವಿಜಿಯಿಂದ ಹಲ್ಲೆಗೊಳಗಾಗಿದ್ದ ಮಾರುತಿ ಗೌಡ ಆಸ್ಪತ್ರೆಯಿಂದ ಡಿಸ್ಚಾರ್ಜ್

    ಒಟ್ಟಿನಲ್ಲಿ ವಿಕ್ರಮ್ ಆಸ್ಪತ್ರೆಯಿಂದ ಮಾರುತಿಗೌಡ ಡಿಸ್ಚಾರ್ಜ್ ಆಗಿದ್ದಾರೆ. ಸದ್ಯಕ್ಕೆ ಮಾರುತಿಗೌಡಗೆ ವೈದ್ಯರು ವಿಶ್ರಾಂತಿ ತೆಗೆದುಕೊಳ್ಳಲು ಸೂಚಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ನಟ ದುನಿಯಾ ವಿಜಯ್ ಗೆ ಜಾಮೀನು?

    ನಟ ದುನಿಯಾ ವಿಜಯ್ ಗೆ ಜಾಮೀನು?

    ಬೆಂಗಳೂರು: ಜಿಮ್ ಟ್ರೈನರ್ ಮಾರುತಿಗೌಡ ಕಿಡ್ನಾಪ್, ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಯಾಂಡಲ್ ವುಡ್ ನಟ ದುನಿಯಾ ವಿಜಯ್ ಅವರಿಗೆ ಇಂದು ಸೆಷನ್ಸ್ ಕೋರ್ಟ್ ನಲ್ಲಿ ಜಾಮೀನು ಸಿಗುವ ಸಾಧ್ಯತೆಗಳಿವೆ.

    ಪ್ರಕರಣ ಸಂಬಂಧ ಜೈಲಿನಲ್ಲಿರುವ ವಿಜಯ್ ಅವರ ಜಾಮೀನು ಅರ್ಜಿಯನ್ನು ಮ್ಯಾಜಿಸ್ಟ್ರೇಟ್ ಕೋರ್ಟ್ ವಜಾಗೊಳಿಸಿತ್ತು. ಹೀಗಾಗಿ ಜಾಮೀನಿಗಾಗಿ ವಿಜಿ ಸೆಷನ್ಸ್ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಇಂದು ಸೆಷನ್ಸ್ ಕೋರ್ಟ್ ನಲ್ಲಿ ಅರ್ಜಿ ವಿಚಾರಣೆ ನಡೆಯಲಿದ್ದು, ದುನಿಯಾ ವಿಜಿಗೆ ಜಾಮೀನು ಸಿಗುವ ಸಾಧ್ಯತೆಗಳಿವೆ. ಯಾಕಂದ್ರೆ ಹಲ್ಲೆಗಳೊಳಗಾಗಿದ್ದ ಮಾರುತಿ ಗೌಡ ಶುಕ್ರವಾರ ರಾತ್ರಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

    ನಟ ದುನಿಯಾ ವಿಜಿ ಹಲ್ಲೆಯಿಂದ ವಿಕ್ರಮ್ ಆಸ್ಪತ್ರೆಯಲ್ಲಿ ಮಾರುತಿಗೌಡ ದಾಖಲಾಗಿದ್ದರು. ಆರು ದಿನಗಳ ಬಳಿಕ ನಿನ್ನೆ ರಾತ್ರಿ ಡಿಸ್ಚಾರ್ಜ್ ಆಗಿದ್ದಾರೆ. ಮಾರುತಿಗೌಡ ತುಟಿಗೆ ಗಾಯವಾಗಿ, ಕಣ್ಣು ಮತ್ತು ಮುಖ ಊತ ಬಂದಿತ್ತು. ಹೀಗಾಗಿ ಆರು ದಿನಗಳ ಕಾಲ ಚಿಕಿತ್ಸೆ ನೀಡಿ ತುಟಿಗೆ ಹದಿನೈದು ಹೊಲಿಗೆ ಹಾಕಲಾಗಿತ್ತು. ಸದ್ಯಕ್ಕೆ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದ ಹಿನ್ನೆಲೆ ಡಿಸ್ಚಾರ್ಜ್ ಆಗಿ ಮನೆಗೆ ತೆರಳಿದ್ದಾರೆ. ಇದನ್ನೂ ಓದಿ: ಹಲ್ಲೆ ಮಾಡಿದ್ದನ್ನು ಪೊಲೀಸ್ರಿಗೆ ಹೇಳ್ಬೇಡ: ಮಾರುತಿ ಗೌಡಗೆ ವಿಜಿ ವಾರ್ನಿಂಗ್

    ಕಳೆದ ಶನಿವಾರ ವಸಂತನಗರದ ಅಂಬೇಡ್ಕರ್ ಭವನದಲ್ಲಿ ಮಿಸ್ಟರ್ ಬೆಂಗಳೂರು ಬಾಡಿ ಬಿಲ್ಡಿಂಗ್ ಸ್ಪರ್ಧೆ ನಡೆಯುತಿತ್ತು. ಈ ಸ್ಪರ್ಧೆ ನೋಡಲು ದುನಿಯಾ ವಿಜಿ ತಮ್ಮ ತಂಡದೊಂದಿಗೆ ಬಂದಿದ್ದರು. ಈ ವೇಳೆ ಪಾನಿಪೂರಿ ಕಿಟ್ಟಿ ಅಣ್ಣನ ಮಗ ಮಾರುತಿಗೌಡ ಮತ್ತು ದುನಿಯಾ ವಿಜಿ ನಡುವೆ ಮಾತಿನ ಚಕಮಕಿ ನಡೆದಿತ್ತು. ಆದರೆ ಗಲಾಟೆ ವಿಕೋಪಕ್ಕೆ ತಿರುಗಿ ದುನಿಯಾ ವಿಜಯ್ ಗ್ಯಾಂಗ್, ಮಾರುತಿಗೌಡರ ಮೇಲೆ ಹಲ್ಲೆ ನಡೆಸಿ ಕಾರಿನಲ್ಲಿ ಹಾಕಿಕೊಂಡು ಕಿಡ್ನಾಪ್ ಮಾಡಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv